Dr. Dhananjaya Sarji ಕ್ರೀಡೆಯಿಂದ ದೈಹಿಕ ಮತ್ತು ಮಾನಸಿಕ ಆರೋಗ್ಯ ವೃದ್ಧಿ : ಡಾ.ಧನಂಜಯ ಸರ್ಜಿ
ಶಿವಮೊಗ್ಗ, ಸೆ .29 (ಕರ್ನಾಟಕ ವಾರ್ತೆ)
ಕ್ರೀಡೆಯಿಂದ ದೈಹಿಕ ಮತ್ತು ಮಾನಸಿಕ ಆರೋಗ್ಯ ವೃದ್ದಿಯಾಗುತ್ತದೆ. ಆದ್ದರಿಂದ ಯುವಜನತೆ ಸೇರಿತೆ ನಾವೆಲ್ಲ ಕ್ರೀಡೆಯನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು
ವಿಧಾನ ಪರಿಷತ್ ಶಾಸಕರಾದ ಡಾ.ಧನಂಜಯ ಸರ್ಜಿ ಕರೆ ನೀಡಿದರು.
ಜಿಲ್ಲಾಡಳಿತ ಜಿಲ್ಲಾ ಪಂಚಾಯತ್ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಯೋಗದಲ್ಲಿ ಸೆ.29 ರಂದು ನೆಹರು ಒಳಾಂಗಣ ಕ್ರೀಡಾಂಗಣದಲ್ಲಿ ಏರ್ಪಡಿಸಲಾಗಿದ್ದ 2024-25 ನೇ ಸಾಲಿನ ಬೆಂಗಳೂರು ಗ್ರಾಮಾಂತರ ವಿಭಾಗ ಮಟ್ಟದ ದಸರಾ ಕ್ರೀಡಾಕೂಟವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕ್ರೀಡೆಯಿಂದ ದೈಹಿಕ ಮತ್ತು ಮಾನಸಿಕ ಆರೋಗ್ಯ ವೃದ್ದಿಯಾಗುವುದಲ್ಲದೆ, ಪರಿಪೂರ್ಣ ವಿದ್ಯೆಯ ಹೊರತಾಗಿ ಅತ್ಯುನ್ನತ ಸಾಧನೆಗೊಂದು ಅವಕಾಶ ಲಭ್ಯವಿದೆ. ಹಾಗಾಗಿ ಯುವ ಜನತೆ ದೈನಂದಿನ ಜೀವನದ ಶೈಲಿಯಲ್ಲಿ ಕ್ರೀಡೆ ಅಳವಡಿಸಿಕೊಳ್ಳುವುದು ಅಗತ್ಯ ಎಂದು ಹೇಳಿದರು.
Dr. Dhananjaya Sarji ಶಿವಮೊಗ್ಗ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯು ಈ ವಿಭಾಗದಲ್ಲಿ ಬಾಡ್ಮಿಂಟನ್ ,ಈಜು, ಟೆನ್ನಿಸ್ , ಹಾಕಿ, ಜುಡೋ ಮತ್ತು ಯೋಗ ಸ್ಪರ್ಧೆಗಳನ್ನು ನಗರದ ಒಳಾಂಗಣ ಕ್ರೀಡಾಂಗಣ, ಕ್ರೀಡಾ ಸಂಕೀರ್ಣ ಮತ್ತು ವಾಜಪೇಯಿ ಬಡಾವಣೆಯಲ್ಲಿ ಆಯೋಜಿಸಲಾಗಿತ್ತು.
ಬೆಂಗಳೂರು ಗ್ರಾಮಾಂತರ, ಕೋಲಾರ, ರಾಮನಗರ, ಚಿತ್ರದುರ್ಗ, ತುಮಕೂರು, ರಾಮನಗರ, ಚಿಕ್ಕ ಬಳ್ಳಾಪುರ ಜಿಲ್ಲೆಯ ಸುಮಾರು 600 ಕ್ಕೂ ಹೆಚ್ಚು ಸ್ಪರ್ಧಾಳುಗಳು ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ಯವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ರೇಖ್ಯಾನಾಯ್ಕ, ಹಿರಿಯ ಯೋಗ ತರಬೇತುದಾರಾದ ವನಶ್ರಿ, ಮಂಜಪ್ಪ ,ಕ್ರೀಡಾಪಟುಗಳು, ಕ್ರೀಡಾಸಕ್ತರು ಹಾಜರಿದ್ದರು.
Dr. Dhananjaya Sarji ಕ್ರೀಡೆಯಿಂದ ದೈಹಿಕ,ಮಾನಸಿಕ ಆರೋಗ್ಯ ವೃದ್ಧಿ- ಡಾ.ಧನಂಜಯ ಸರ್ಜಿ
Bhadra Dam ಸೆ.30 ರಿಂದ ಭದ್ರಾ ನದಿ ಪಾವಿತ್ರ್ಯತೆ ರಕ್ಷಣೆ ಸಂದೇಶ ಪಾದಯಾತ್ರೆ ಆರಂಭ
Bhadra Dam ರಾಜ್ಯದ ೩೦ ನದಿಗಳ ಪೈಕಿ ೧೭ ನದಿಗಳು ಅತ್ಯಂತ ಕಲುಷಿತಗೊಂಡು ಅತೀ ಹೆಚ್ಚು ಮಾಲಿನ್ಯವಾಗಿರುವ ನದಿಗಳ ಪೈಕಿ ಭದ್ರಾ ನದಿಯೂ ಒಂದಾಗಿದೆ. ಆದ್ದರಿಂದ ಜಲಜಾಗೃತಿ ಮತ್ತು ಜನ ಜಾಗೃತಿ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ಪರಿಸರ ತಜ್ಞ ಪ್ರೊ. ಬಿ ಎಂ. ಕುಮಾರಸ್ವಾಮಿ ವಿಷಾದ ವ್ಯಕ್ತಪಡಿಸಿದರು.
ಅವರು ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿ, ಕಳೆದ ವರ್ಷ ನಿರ್ಮಲ ತುಂಗಾ ಅಭಿಯಾನ ಆರಂಭಿಸಿ ಗಾಜನೂರಿನಿಂದ ಪಾದಯಾತ್ರೆ ಮಾಡಿ ಜನರಲ್ಲಿ ಜಾಗೃತಿ ಮೂಡಿಸಿ ಸರಕಾರದ ಕಣ್ಣು ತೆರೆಸಿದ್ದೇವೆ. ತುಂಗಾ ನದಿಯ ತೀರದ ಬಹಳಷ್ಟು ಭಾಗದಲ್ಲಿ ಮಾಲಿನ್ಯ ತಡೆಯುವ ಅಭಿವೃದ್ದಿ ಯೋಜನೆಯ ಯಶಸ್ಸು ಕಂಡಿದ್ದೇವೆ. ಈವರ್ಷ ನಿರ್ಮಲ ಭದ್ರಾ ಅಭಿಯಾನವನ್ನು ಕೈಗೆತ್ತಿಕೊಂಡಿದ್ದೇವೆ.
ಕುಡಿಯಲು ಯೋಗ್ಯವಲ್ಲದ ನದಿಗಳು:
Bhadra Dam ಕೇಂದ್ರ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯು ೨೦೧೯ ರಿಂದ ೨೦೨೧ ರವರೆಗೆ ದೇಶದಲ್ಲಿ ೬೧೭ ನದಿಗಳ ಅಧ್ಯಯನ ಮಾಡಿದೆ. ರಾಜ್ಯದಲ್ಲಿ ೩೦ ನದಿಗಳ ಅಧ್ಯಯನ ನಡೆಸಿ ಅದರಲ್ಲಿ ೧೭ ನದಿಗಳು ಕಲುಷಿತವಾಗಿರುವ ಪೈಕಿ ತುಂಗಾ, ಭದ್ರಾ ಹಾಗೂ ತುಂಗಭದ್ರಾ ಮೂರು ನದಿಗಳು ಅತೀ ಹೆಚ್ಚು ಮಾಲಿನ್ಯ ಹೊಂದಿದ ನದಿಗಳೆಂದು ಹೇಳಿದೆ. ಅಂಕಿ ಅಂಶಗಳ ಪ್ರಕಾರ ನೀರಿನಲ್ಲಿ ಬಿಓಡಿ ೩ ಎಂಜಿ ಗಳಿದ್ದರೆ ಶುದ್ದ ಕುಡಿಯುವ ನೀರೆಂದು ಹೇಳಲಾಗುತ್ತದೆ. ಆದರೆ ಭದ್ರಾ ನದಿಯು ನಗರದ ಕಾರ್ಖಾನೆಗಳ ಮಾಲಿನ್ಯ ಸ್ಥಗಿತವಾಗಿದ್ದರೂ ನಗರ ಪ್ರದೇಶದ ಕೊಳಕಿನಿಂದಾಗಿ ಹೊಳೆಹೊನ್ನೂರು ವರೆಗೆ ಬಿಓಡಿ ೭ ಎಂಜಿ ಮಾಲಿನ್ಯವಾಗಿದೆ. ತುಂಗಾ ನದಿಯು ಶಿವಮೊಗ್ಗದ ವರೆಗೆ ಬಿಓಡಿ ೬ ಎಂಜಿ, ತುಂಗಭದ್ರಾ ನದಿಯು ಕೂಡ್ಲಿಯಿಂದ ಮೈಲಾರದ ವರೆಗೆ ಬಿಓಡಿ ೬.೨ ಎಂಜಿ ಗಳಾಗಿದೆ. ಈ ಕಲುಷಿತ ನೀರು ಸೇವಿಸಿದರೆ ಚರ್ಮ ರೋಗ ಕರಳು ರೋಗ, ಜಾಂಡಿಸ್ ಮುಂತಾದ ರೋಗಳಿಗೆ ತುತ್ತಾಗುತ್ತೇವೆ. ಇದರಿಂದಾಗಿ ಜನರಲ್ಲಿ ಜಾಗೃತಿ ಅರಿವು ಮೂಡಿಸಲು ಎಲ್ಲರ ಸಹಕಾರ ಬೇಕಾಗಿದೆ ಎಂದರು.
ನದಿಗಳಿಗೆ ನಗರ ಪ್ರದೇಶದ ತ್ಯಾಜ್ಯ ಹರಿಯ ಬಿಡಲಾಗುತ್ತಿದೆ:
ರಾಷ್ಟ್ರೀಯ ಮಾಲಿನ್ಯ ಮಂಡಳಿಯಡಿ ಸೇವೆ ಸಲ್ಲಿಸಿದ ತಜ್ಞರು ಹಾಗೂ ನಿವೃತ್ತ ಪಾಂಶುಪಾಲ ಶ್ರೀಪತಿ ಈಗಾಗಲೆ ಅಧ್ಯನ ಮಾಡಿ ಮಂಡಳಿಗೆ ವರದಿ ನೀಡಿದ್ದೇವೆ. ಕೈಗಾರಿಕೆಗಳಿಗಿಂತ ನಗರದ ಕೊಳಕಿನಿಂದಾಗಿ ನದಿ ಹಾಳಾಗಿದೆ. ನಗರ ವ್ಯಾಪ್ತಿಯ ಸೀಗೇಬಾಗಿ ಮತ್ತು ಜಟ್‌ಪಟ್ ನಗರದಲ್ಲಿ ಶುದ್ದೀಕರಣ ಎಸ್‌ಟಿಪಿ ಘಟಕಗಳು ಸ್ಥಗಿತಗೊಂಡಿದೆ. ಉಜ್ಜನಿಪುರದಲ್ಲಿ ಎಸ್ಪಿಆರ್ ಕೆಲಸ ನಡೆಯುತ್ತಿದೆಯಾದರೂ ಸಾಮರ್ಥ್ಯ ಕಡಿಮೆ. ಮುಖ್ಯ ಬಸ್ ನಿಲ್ದಾಣದ ಬಳಿಯ ವೆಟ್ ವೆಲ್ ಕಾರ್ಯಾರಂಭ ಮಾಡಿಲ್ಲ. ಇದರಿಂದಾಗಿ ನದಿಗಳಿಗೆ ತ್ಯಾಜ್ಯಗಳಿಂದ ಮಾಲಿನ್ಯ ಹೊಂದಿದೆ ಎಂದು ವಿವರಿಸಿದರು.
Garlic Price Hike ದಿಢೀರ್ ಬೆಳ್ಳುಳ್ಳಿ ಬೆಲೆ ಏರಿಕೆ ನಡುವೆ ಚೀನಾ ಬೆಳ್ಳುಳ್ಳಿ ಮಾರುಕಟ್ಟೆ ಪ್ರವೇಶ. ಅಧಿಕಾರಿಗಳ ದಾಳಿ
Garlic Price Hike ಬೆಳ್ಳುಳ್ಳಿ ಬೆಲೆ ಗಗನಕ್ಕೇರಿದೆ. ಈ ನಡುವೆ ಅಸಲಿ ಬೆಳ್ಳುಳ್ಳಿ ಜೊತೆ ಸಿಮೆಂಟ್ ನಿಂದ ತಯಾರಿಸಿದ ಬೆಳ್ಳುಳ್ಳಿ ಮಾರಾಟ ಮಾಡುತ್ತಿದ್ದ ವರದಿಗಳು ದೇಶದ ಹಲವೆಡೆ ಇತ್ತೀಚೆಗೆ ಕೇಳಿಬಂದಿತ್ತು. ಇದೀಗ, ಕೇಂದ್ರ ಸರ್ಕಾರದಿಂದ ನಿಷೇಧಿಸಲ್ಪಟ್ಟರುವ ಹಾಗೂ ಆರೋಗ್ಯದ ಮೇಲೆ ಪರಿಣಾಮ ಬೀರುವ, ಚೀನಾ ದೇಶದ ಬೆಳ್ಳುಳ್ಳಿ ಮಾರಾಟವಾಗುತ್ತಿರುವ ದೂರುಗಳು ಕೇಳಿಬರಲಾರಂಭಿಸಿವೆ.
ಈ ನಡುವೆ, ಶಿವಮೊಗ್ಗ ನಗರದ ವಿವಿಧೆಡೆಯೂ ನಿಷೇಧಿತ ಚೀನಾ ಬೆಳ್ಳುಳ್ಳಿ ಮಾರಾಟ, ಎಗ್ಗಿಲ್ಲದೆ ನಡೆಯುತ್ತಿರುವ ದೂರುಗಳು ಬಂದಿವೆ! ಈ ಹಿನ್ನೆಲೆಯಲ್ಲಿ, ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ ಅಂಕಿತ ಅಧಿಕಾರಿಗಳ ತಂಡವು ಸೆ. 28 ರ ಶನಿವಾರ ವಿವಿಧೆಡೆ ದಿಢೀರ್ ದಾಳಿ ನಡೆಸಿ ತಪಾಸಣೆ ನಡೆಸಿದೆ.
Garlic Price Hike ಶಿವಮೊಗ್ಗದ ಎಪಿಎಂಸಿ ತರಕಾರಿ ಮಾರುಕಟ್ಟೆ, ಗಾಂಧಿ ಬಜಾರ್, ಲಷ್ಕರ್ ಮೊಹಲ್ಲಾದ ಏಳೆಂಟು ಅಂಗಡಿಗಳ ಮೇಲೆ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ ಅಂಕಿತ ಅಧಿಕಾರಿಗಳ ತಂಡ ದಿಢೀರ್ ದಾಳಿ ನಡೆಸಿ ತಪಾಸಣೆ ನಡೆಸಿದೆ. ಶಂಕಿತ ಚೀನಾ ಬೆಳ್ಳುಳ್ಳಿ ವಶಕ್ಕೆ ಪಡೆದುಕೊಂಡಿದೆ.
‘ವಶಕ್ಕೆ ಪಡೆದ ಬೆಳ್ಳುಳ್ಳಿಯ ಸ್ಯಾಂಪಲ್ ಗಳನ್ನು ಬೆಂಗಳೂರಿನ ಪ್ರಯೋಗಾಲಯದ ಪರೀಕ್ಷೆಗೆ ರವಾನಿಸಲಾಗಿದೆ. ಅಲ್ಲಿಂದ ವರದಿ ಬಂದ ನಂತರ, ಚೀನಾ ಬೆಳ್ಳುಳ್ಳಿ ಹೌದೋ? ಅಲ್ಲವೋ? ಎಂಬುವುದರ ಹೆಚ್ಚಿನ ಮಾಹಿತಿಗಳು ಲಭ್ಯವಾಗಲಿದೆ. ಅಲ್ಲಿಯವರೆಗೂ ಶಂಕಿತ ಬೆಳ್ಳುಳ್ಳಿ ಮಾರಾಟ ಮಾಡದಂತೆ ವ್ಯಾಪಾರಿಗಳಿಗೆ ಸೂಚನೆ ನೀಡಲಾಗಿದೆ’ ಎಂದು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ ಅಂಕಿತ ಅಧಿಕಾರಿಗಳ ತಂಡದ ಮೂಲಗಳು ತಿಳಿಸಿವೆ.
HD Kumaraswamy ಸಚಿವ ಕುಮಾರಾಸ್ವಾಮಿ ಮಾತಿಗೆ ಎಡಿಜಿಪಿ ಚಂದ್ರಶೇಖರ್ ತಿರುಗೇಟು
HD Kumaraswamy ಹಂದಿಗಳ ಜೊತೆ ಜಗಳ ಮಾಡಿದರೆ ನಾವು ಕೊಳಕಾಗುತ್ತೇವೆ ಎಂದು ಹೇಳುವ ಮೂಲಕ ಎಸ್‌ಐಟಿ ಮುಖ್ಯಸ್ಥ ಎಡಿಜಿಪಿ ಚಂದ್ರಶೇಖರ್ ಅವರು ತಮ್ಮ ವಿರುದ್ಧ ಭ್ರಷ್ಟಚಾರದ ಆರೋಪ ಮಾಡಿರುವ ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿಗೆ ತಿರುಗೇಟು ನೀಡಿದ್ದಾರೆ.
ಬೆಂಗಳೂರಿನ ಜೆಪಿ ಭವನದಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಕುಮಾರಸ್ವಾಮಿ, ಎಡಿಜಿಪಿ ಚಂದ್ರಶೇಖರ್ ಮಾನ್ಯತಾ ಟೆಕ್ ಪಾರ್ಕ್ ಬಳಿ 38 ಫ್ಲೋರ್ ಮನೆ ಕಟ್ಟುತ್ತಿದ್ದಾರೆ. ಈ ಹಿಂದೆ ಚಂದ್ರಶೇಖರ್ ಮೇಲೆ ಎಫ್‌ಐಆರ್ ಆಗಿದೆ. ತನಿಖೆ ಮಾಡಬೇಕು ಈ ಸಂಬಂಧ ಕೇಂದ್ರದ ಗೃಹ ಕಾರ್ಯದರ್ಶಿಗೂ ದೂರು ನೀಡುವುದಾಗಿ ಎಚ್ಚರಿಕೆ ನೀಡಿದ್ದರು.
ಇದಕ್ಕೆ ಪತ್ರದ ಮೂಲಕ ತಮ್ಮ ಸಿಬ್ಬಂದಿಗಳಿಗೆ ಅಭಯ ನೀಡಿರುವ ಚಂದ್ರಶೇಖರ್, ಇಂದು ಕುಮಾರಸ್ವಾಮಿ ನನ್ನ ಮೇಲೆ ಸಾಕಷ್ಟು ಆರೋಪಗಳನ್ನು ಮಾಡಿದ್ದಾರೆ. ಆತ ಪ್ರಕರಣವೊಂದರ ಆರೋಪಿ ಅಷ್ಟೆ ಎಂದು ಖಾರವಾಗಿ ಬರೆದಿದ್ದಾರೆ. ಆರೋಪಿ ಹೆಚ್ ಡಿ ಕುಮಾರಸ್ವಾಮಿ ಜಾಮೀನಿನ ಮೇಲೆ ಹೊರಗಿದ್ದಾರೆ ಎಂದು ತೀವ್ರ ವಾಗ್ದಾಳಿ ನಡೆಸಿದರು.
ನನ್ನ ಮೇಲೆ ಕುಮಾರಸ್ವಾಮಿ ಸುಳ್ಳು ಆರೋಪ ಮಾಡುವ ಮೂಲಕ ಬೆದರಿಕೆ ಹಾಕಿದ್ದಾರೆ. ನಮ್ಮನ್ನು ಕುಗ್ಗಿಸುವ ಪ್ರಯತ್ನ ಮಾಡುತ್ತಿದ್ದಾರೆ. ಅವನು ಎಷ್ಟೇ ಎತ್ತರದ ಸ್ಥಾನದಲ್ಲಿದ್ದರೂ ಅವನ್ನು ಆರೋಪಿಯೇ. ನಮ್ಮ ಕರ್ತವ್ಯವನ್ನು ನಾವು ನಿರ್ವಹಿಸೋಣಾ. ಅದನ್ನು ಯಾರಿಂದಲೂ ತಡಿಯಲು ಸಾಧ್ಯವಿಲ್ಲ. ಎಲ್ಲಾ ಬಾಹ್ಯ ಪ್ರಭಾವದಿಂದ ನಿಮ್ಮನ್ನು ರಕ್ಷಿಸುತ್ತೇನೆ ಎಂದು ಎಸ್ ಐಟಿ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಅಭಯ ನೀಡಿದ್ದಾರೆ.
HD Kumaraswamy ರಾಜಭವನ ಸಿಬ್ಬಂದಿ ತನಿಖೆ ಅನುಮತಿ ಕೋರಿದ್ದ ಐಜಿಪಿ ವಿರುದ್ಧ ಎಚ್. ಡಿ. ಕುಮಾರಸ್ವಾಮಿ ವಾಗ್ದಾಳಿ
ಜಾರ್ಜ್ ಬರ್ನಾಡ್ ಶಾ ಅವರ ಪ್ರಸಿದ್ಧ ಇಂಗ್ಲಿಷ್ ಸಾಲನ್ನು ಬಳಸಿರುವ ಚಂದ್ರಶೇಖರ್, ಹಂದಿಗಳ ಜೊತೆ ಜಗಳಕ್ಕೆ ಇಳಿದರೆ ನಾವು ಕೊಳಕಾಗುತ್ತೇವೆ. ಯಾಕೆಂದರೆ ಹಂದಿಗಳು ಕೊಳಕನ್ನೇ ಇಷ್ಟಪಡುತ್ತವೆ. ಹೀಗಾಗಿ ನಾವು ಹಂದಿಗಳ ಜೊತೆ ಜಗಳ ಮಾಡಬಾರದು ಎಂದು ಹೇಳಿರುವ ಚಂದ್ರಶೇಖರ್ ಕೊನೆಯಲ್ಲಿ ಸತ್ಯಮೇವ ಜಯತೆ ಎಂದು ಪತ್ರದಲ್ಲಿ ಬರೆದಿದ್ದಾರೆ.
CM Siddaramaiah VS Kumaraswamy ಸಚಿವ ಕುಮಾರಸ್ವಾಮಿ ಬೈಲ್ ನಲ್ಲಿದ್ದಾರೆ.ಅವರು ಮೊದಲು ರಾಜಿನಾಮೆ ಕೊಡಬೇಕು- ಸಿದ್ಧರಾಮಯ್ಯ
CM Siddaramaiah VS Kumaraswamy ತಮ್ಮ ರಾಜೀನಾಮೆಗೆ ಆಗ್ರಹಿಸಿದ ಬಿಜೆಪಿ , ಜೆಡಿಎಸ್ ನಾಯಕರಿಗೆ ಸಿಎಂ ಸಿದ್ದರಾಮಯ್ಯ ತಿರುಗೇಟು ನೀಡಿದ್ದು, ಜಾಮೀನಿನ ಮೇಲೆ ಹೊರಗಿರುವ ಕುಮಾರಸ್ವಾಮಿ ರಾಜಿನಾಮೆ ನೀಡಲಿ ಎಂದು ಆಗ್ರಹಿಸಿದ್ದಾರೆ.
ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಎಂ ಅವರ ವಿರುದ್ಧ ಎಫ್ ಐ ಆರ್ ದಾಖಲಾಗಿರುವ ಬಗ್ಗೆ ಪ್ರತಿಕ್ರಿಯೆ ನೀಡಿ,17 ಎ ಪ್ರಕಾರ ಎಫ್ ಐ ಆರ್ ದಾಖಲು ಮಾಡಿ, ತನಿಖೆ ಮಾಡುತ್ತಾರೆ . ಜನಪ್ರತಿನಿಧಿಗಳ ನ್ಯಾಯಾಲಯದಲ್ಲಿ ಚುನಾವಣಾ ಬಾಂಡ್ ಸಂಬಂಧಿಸಿದಂತೆ, ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಅವರ ಮೇಲೆಯೂ ಎಫ್ ಐ ಆರ್ ದಾಖಲಿಸಿರುವುದಾಗಿ ತಿಳಿದುಬಂದಿದೆ. ಈ ಸಂದರ್ಭದಲ್ಲಿ ಅವರು ರಾಜಿನಾಮೆ ಕೊಡುತ್ತಾರೆಯೇ ? ಎಂದು ಪ್ರಶ್ನಿಸಿದರು.
CM Siddaramaiah VS Kumaraswamy ಬಿಜೆಪಿಯವರು, ಸಿಎಂ ರಾಜಿನಾಮೆ ಕೊಡುತ್ತಾರೆ ಎನ್ನುತ್ತಿದ್ದಾರೆ ಎಂಬುದಕ್ಕೆ ಪ್ರತಿಕ್ರಿಯೆ ನೀಡಿ, ಮೊದಲು ಕುಮಾರಸ್ವಾಮಿಯವರು ರಾಜಿನಾಮೆ ನೀಡಲಿ. ಚುನಾವಣಾ ಬಾಂಡ್ ಪ್ರಕರಣದಲ್ಲಿ ಪ್ರಧಾನಿ ಮೋದಿಯವರೂ ರಾಜಿನಾಮೆ ನೀಡಬೇಕಾಗುತ್ತದೆ ಎಂದರು.
Agumbe Ghat News ಆಗುಂಬೆ ಸುರಂಗ ಮಾರ್ಗ ! ಆಗಲಿದೆಯೆ? ಈ ಮಾಹಿತಿ ಓದಿ
Agumbe Ghat News ಮಲ್ಪೆ – ತೀರ್ಥಹಳ್ಳಿ ರಾಷ್ಟ್ರೀಯ ಹೆದ್ದಾರಿ-169 ಎ ಚತುಷ್ಪಥ ಯೋಜನೆಯಲ್ಲಿ, ಆಗುಂಬೆ ಘಾಟ್‌ನಲ್ಲಿ ಸುರಂಗ ಮಾರ್ಗ ನಿರ್ಮಾಣದ ಕಾರ್ಯ ಸಾಧ್ಯತೆಯ ಕುರಿತಂತೆ ವರದಿ ಸಲ್ಲಿಸಲು, ಕೇಂದ್ರ ಭೂ ಸಾರಿಗೆ ಸಚಿವಾಲಯದ ಡೈರೆಕ್ಟರ್ ಜನರಲ್ ಧರ್ಮೇಂದ್ರ ಸಾರಂಗಿ ಅವರು, ರಾಷ್ಟ್ರೀಯ ಹೆದ್ದಾರಿ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ ಎಂದು ಸಂಸದ ಬಿ.ವೈ.ರಾಘವೇಂದ್ರ ತಿಳಿಸಿದ್ದಾರೆ.
ಈ ಕುರಿತಂತೆ ಅವರು ಸೆ. 28 ರಂದು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದಾರೆ. ‘ಧರ್ಮೇಂದ್ರ ಸಾರಂಗಿ ಅವರು, ಸೆ. 27 ರಂದು ಶಿವಮೊಗ್ಗ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ ಯೋಜನೆಗಳ ಪರಿಶೀಲನೆಗೆ ಆಗಮಿಸಿದ್ದರು. ಈ ವೇಳೆ ಶಿವಮೊಗ್ಗದ ಪ್ರವಾಸಿ ಮಂದಿರದಲ್ಲಿ ಅವರನ್ನು ಭೇಟಿಯಾಗಿ ಚರ್ಚಿಸಲಾಯಿತು’ ಎಂದು ಸಂಸದರು ತಿಳಿಸಿದ್ದಾರೆ.
ಆಗುಂಬೆ ಘಾಟ್ ರಸ್ತೆಗೆ ಪರ್ಯಾಯವಾಗಿ, ಮೇಗರವಳ್ಳಿಯಿಂದ ಸೋಮೇಶ್ವರದವರೆಗೆ 4 ಪಥದ ಸುರಂಗ ಮಾರ್ಗದ ರಸ್ತೆ ನಿರ್ಮಾಣ ಮಾಡಲು ಡಿಪಿಆರ್ ಸಿದ್ದಪಡಿಸಲು ಅನುಮತಿ ನೀಡಲಾಗಿದೆ. ಈ ಸಂಬಂಧ ಯೋಜನೆ ಅನುಷ್ಠಾನದ ಸಾಧ್ಯಾಸಾಧ್ಯತೆಗಳ ವರದಿ ಸಲ್ಲಿಸುವಂತೆ ಸೂಚಿಸಲಾಗಿದೆ ಎಂದು ಸಂಸದರು ಹೇಳಿದ್ದಾರೆ.
ಚರ್ಚೆ :
Agumbe Ghat News ಸಿಗಂದೂರು ಸೇತುವೆ ಶಿವಮೊಗ್ಗ – ಚಿತ್ರದುರ್ಗ ರಾಷ್ಟ್ರೀಯ ಹೆದ್ದಾರಿ ಸಾಗರ ನಗರದಲ್ಲಿ ಚತುಷ್ಪಥ ರಸ್ತೆ ಕಾಮಗಾರಿಗಳನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸುವ ಕುರಿತಂತೆ ಚರ್ಚೆ ನಡೆಸಲಾಯಿತು.
ಹಾಗೆಯೇ ಈಗಾಗಲೇ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿರುವ, ಶಿವಮೊಗ್ಗ – ಆನಂದಪುರ ನಡುವೆ ನಾಲ್ಕು ಪಥದ ರಸ್ತೆ ನಿರ್ಮಾಣ, ನೆಲ್ಲಿಸರದಿಂದ ತೀರ್ಥಹಳ್ಳಿವರೆಗಿನ ಚತುಷ್ಪಥ ಮಾರ್ಗ, ಬೈಂದೂರು – ನಾಗೋಡಿವರೆಗಿನ ದ್ವಿಪಥ ಮಾರ್ಗ, ಹೊಸೂರು ಹಾಗೂ ತಾಳಗುಪ್ಪ ರೈಲ್ವೆ ಮೇಲ್ಸೇತುವೆ ಕಾಮಗಾರಿಗಳ ಬಗ್ಗೆ ಭೂ ಸಾರಿಗೆ ಇಲಾಖೆ ಅಧಿಕಾರಿಗಳ ಜೊತೆ ಚರ್ಚಿಸಲಾಯಿತು ಎಂದು ಸಂಸದರು ತಿಳಿಸಿದ್ಧಾರೆ.
Aayanur Manjunatha ನೈತಿಕತೆ ಇಲ್ಲದವರಿಂದ ರಾಜಿನಾಮೆಯ ಮಾತು: ಬಿಜೆಪಿ-ಜೆಡಿಎಸ್ ವಿರುದ್ದ ಹರಿಹಾಯ್ದ ಆಯನೂರು ಮಂಜುನಾಥ್
Aayanur Manjunatha ನೈತಿಕತೆ ಇಲ್ಲದ ಬಿಜೆಪಿ ಮತ್ತು ಜೆಡಿಎಸ್ ಮುಖಂಡರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ರಾಜೀನಾಮೆಯನ್ನು ಕೇಳುತ್ತಿದ್ದಾರೆ. ತನಿಖೆಗಷ್ಟೇ ಹೈಕೋರ್ಟ್ ಅನುಮೋದನೆ ನೀಡಿದೆ ಹೊರತು ಅಪರಾಧಿ ಎಂದು ಹೇಳಿಲ್ಲ. ಇದನ್ನು ಅರಿಯದೆ ಮಾತನಾಡುತ್ತಿದ್ದಾರೆ ಎಂದು ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ್ ಹೇಳಿದ್ದಾರೆ.
ಇಲ್ಲಿನ ಗಾಂಧಿ ಪಾರ್ಕಿನಲ್ಲಿ ಗುರುವಾರ ಮಹಾತ್ಮಾ ಗಾಂಧಿ ಪ್ರತಿಮೆ ಎದುರು ಜಿಲ್ಲಾ ಕಾಂಗ್ರೆಸ್ ಏರ್ಪಡಿಸಿದ್ದ ಸಿದ್ದರಾಮಯ್ಯ ಅವರಿಗೆ ಬೆಂಬಲ ಸಭೆಯಲ್ಲಿ ಮಾತನಾಡಿದ ಅವರು, ಬಿಜೆಪಿಯ ಮೂರು ಮುಖ್ಯಮಂತ್ರಿಗಳು ಅಪರಾಧಿಗಳಾಗಿ ಜಾಮೀನಿನ ಮೇಲೆ ಹೊರಗಡೆ ಇದ್ದಾರೆ. ಸಿದ್ದರಾಮಯ್ಯ ಅವರ ಮೇಲೆ ದೂರಿನ ಅನ್ವಯ ತನಿಖೆಗೆ ಅನುಮೋದನೆ ನೀಡಲಾಗಿದೆ ಹೊರತು ನೈತಿಕತೆಯ ಪಾಠ ಹೇಳುವ ಈ ನಾಯಕರಿಗೆ ಸಿಎಂಗೆ ನೋಟೀಸ್ ಸಹ ಬಂದಿಲ್ಲ ಎನ್ನುವುದು ಗೊತ್ತಿಲ್ಲ. ಯಾವ ಅಪರಾಧಕ್ಕಾಗಿ ಮುಖ್ಯಮಂತ್ರಿ ರಾಜೀನಾಮೆ ಕೊಡಬೇಕು ಎಂದು ಪ್ರಶ್ನಿಸಿದರು.
Aayanur Manjunatha ಈ ಹಿಂದೆ ಹೈಕೋರ್ಟಿನಿಂದ ತನಿಖೆಗೆ ಒಳಗಾದವರು ಬಂಧನ ತಪ್ಪಿಸಿಕೊಳ್ಳಲು ಆಸ್ಪತ್ರೆಗೆ ದಾಖಲಾಗಿದ್ದರು. ಎಚ್ ಡಿ ಕುಮಾರಸ್ವಾಮಿ ಮತ್ತು ಬಿ ಎಸ್ ಯಡಿಯೂರಪ್ಪ ಬೆಂಗಳೂರಿನಲ್ಲಿ ಭೂಮಿಯನ್ನು ಡಿ ನೋಟಿಫಿಕೇಷನ್ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೆ ತನಿಖೆ ಎದುರಿಸುತ್ತಿದ್ದಾರೆ. ಆದರೆ ಇಬ್ಬರೂ ರಾಜೀನಾಮೆ ಕೊಟ್ಟಿಲ್ಲ . ಇದು ಮೂಡಾ ಹಗರಣಕ್ಕಿಂತ ದೊಡ್ಡದು. ಇದನ್ನು ಅರಿಯದ ಬಿಜೆಪಿ ನಾಯಕರು ಸಿಎಂ ರಾಜಿನಾಮೆ ಕೇಳುತ್ತಿದ್ದಾರೆ. ಅನಗತ್ಯ ಆರೋಪ ಮಾಡುತ್ತಿದ್ದಾರೆ. ಇಂತಹ ಕೆಲಸಕ್ಕಿಂತ ನಿಮ್ಮ ನಾಯಕರ ರಾಜೀನಾಮೆಯನ್ನು ಮೊದಲು ಪಡೆಯಿರಿ ಎಂದು ಹೇಳಿದರು.
Shikaripura News ಅಹಿಂದ ಸಂಘಟನೆ ಕರೆ ನೀಡಿದ್ದ ಶಿಕಾರಿಪುರ ಬಂದ್ ಯಶಸ್ವಿ
Shikaripura News ನಾಡಿನ ಅಹಿಂದ ವರ್ಗಕ್ಕೆ ಸೇರಿದ ಜನರ ಹಿತ ಕಾಯುವ ನಾಯಕ ಮುಖ್ಯಮಂತ್ರಿ ಆಗಿರಬಾರದು ಎನ್ನುವ ಏಕೈಕ ಕಾರಣಕ್ಕೆ ಬಿಜೆಪಿ, ಜೆಡಿಎಸ್ ನಾಯಕರು ಸಿದ್ಧರಾಮಯ್ಯ ಅವರಿಗೆ ಕಿರುಕುಳ ನೀಡುತ್ತಿದ್ದಾರೆ ಎಂದು ಅಹಿಂದ ಯುವ ಘಟಕ ಅಧ್ಯಕ್ಷ ನಗರದ ಮಾಲತೇಶ್ ಹೇಳಿದರು.
ಪಟ್ಟಣದಲ್ಲಿ ಗುರುವಾರ ರಾಜ್ಯಪಾಲರ ಕಚೇರಿ ದುರ್ಬಳಕೆ ವಿರೋಧಿಸಿ, ಸಿದ್ಧರಾಮಯ್ಯಗೆ ವಿನಾಕಾರಣ ಕಿರುಕುಳ ನೀಡುತ್ತಿರುವುದು ವಿರೋಧಿಸಿ ಅಹಿಂದ ಸಂಘಟನೆ ಕರೆ ನೀಡಿದ್ದ ಶಿಕಾರಿಪುರ ಬಂದ್ ವೇಳೆ ನಡೆದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.
ಸಿದ್ಧರಾಮಯ್ಯ ವಿರುದ್ದ ಪ್ರಕರಣ ತನಿಖೆ ನಡೆಸುವುದಕ್ಕೆ ಕೋರ್ಟ್ ಸೂಚನೆ ನೀಡಿದೆ. ಆದರೆ ಕುಮಾರಸ್ವಾಮಿ, ಶಶಿಕಲಾ ಜೊಲ್ಲೆ ಸೇರಿ ಬಿಜೆಪಿ ಹಲವು ನಾಯಕರ ವಿರುದ್ಧ ಪ್ರಕರಣ ತನಿಖೆ ನಡೆದು ಆರೋಪಿತರು ಎಂದು ಚಾರ್ಜ್‌ಶೀಟ್ ಸಲ್ಲಿಕೆಯಾಗಿದ್ದರೂ ಅವರ ಬಂಧನಕ್ಕೆ, ವಿಚಾರಣೆ ಅನುಮತಿ ನೀಡುವುದಕ್ಕೆ ರಾಜ್ಯಪಾಲರು ಮಿನಾಮೇಷ ಎಣಿಸುತ್ತಿದ್ದಾರೆ ಎಂದರು.
Shikaripura News ಗ್ಯಾರಂಟಿ ಸಮಿತಿ ಅಧ್ಯಕ್ಷ ನಾಗರಾಜಗೌಡ ಮಾತನಾಡಿ, ಸಿದ್ಧರಾಮಯ್ಯ ಸರಕಾರಕ್ಕೆ ನಾಡಿನ ಜನತೆ ಸಂಪೂರ್ಣ ಬಹುಮತ ನೀಡಿದ್ದರೂ ರಾಜ್ಯಪಾಲರ ಕಚೇರಿ ಪಕ್ಷದ ಕಚೇರಿಯನ್ನಾಗಿಸಿಕೊಂಡು ಸಿಎಂ ಸ್ಥಾನದಿಂದ ಕೆಳಗಿಳಿಸುವ ಷಡ್ಯಂತ್ರ ನಡೆಯುತ್ತಿದೆ. ಬಿಜೆಪಿ ಅಧಿಕಾರ ಅವಧಿಯಲ್ಲಿ ಭ್ರಷ್ಟಾಚಾರ ನಡೆಸಿರುವ ಬಿ.ವೈ.ವಿಜಯೇಂದ್ರ ಹೇಗಾದರೂ ಮಾಡಿ ಮುಖ್ಯಮಂತ್ರಿ ಆಗಬೇಕು ಎನ್ನುವ ಕಾರಣಕ್ಕೆ ಕಾನೂನು, ಸಿಬಿಐ, ಇಡಿ ಸಂಸ್ಥೆಯನ್ನು ಬಿಜೆಪಿ ದುರುಪಯೋಗ ಮಾಡಿಕೊಳ್ಳುತ್ತಿದೆ ಈ ಕುರಿತು ಜನತೆ ಎಚ್ಚೆತ್ತುಕೊಳ್ಳಬೇಕು. ಬಿ.ಎಸ್.ಯಡಿಯೂರಪ್ಪ ಕುಟುಂಬ ಸಾವಿರಾರು ಕೋಟಿ ಆಸ್ತಿ ಅಕ್ರಮವಾಗಿ ಸಂಪಾದಿಸಿದ್ದು ಅದರ ಕುರಿತು ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.
ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ಪಟ್ಟಣದ ಬಹುತೇಕ ಅಂಗಡಿ ಬಂದ್ ಮಾಡಿ ಬಂದ್‌ಗೆ ಸಹಕರಿಸಿದರು.
New Delhi News ಅಪಹರಣಕ್ಕೊಳಗಾಗಿದ್ದ ಬಾಲಕನೇ ಇಂದು ವಕೀಲನಾಗಿ ಅದೇ ಕಿಡ್ನಾಪರ್ಸ್ ಗೆ ಶಿಕ್ಷೆ ಕೊಡಿಸಿದ
New Delhi News ಈ ಹಿಂದೆ 7 ವರ್ಷದವನಾಗಿದ್ದಾಗ ಅಪಹರಣಕ್ಕೊಳಗಾಗಿದ್ದ ಬಾಲಕ ಬೆಳೆದು ದೊಡ್ಡವನಾಗಿ ವಕೀಲನಾಗಿ ಇದೀಗ ತನ್ನನ್ನ ಕಿಡ್ನಾಪ್ ಮಾಡಿದ್ದ ಅಪಹರಣಕಾರರಿಗೆ ಶಿಕ್ಷೆ ಕೊಡಿಸಿದ್ದು ಈ ವಿಶೇಷ ಪ್ರಕರಣ ಉತ್ತರ ಪ್ರದೇಶದ ಆಗ್ರಾದಲ್ಲಿ ನಡೆದಿದೆ.
ಏಳು ವರ್ಷದ ಬಾಲಕ ಹರ್ಷ ಗರ್ಗ್ ನನ್ನು ಅಪಹರಿಸಿದ್ದ ಆರೋಪಿಗಳಿಗೆ ಆಗ್ರಾ ಕೋರ್ಟ್ ಜೀವಾವಧಿ ಶಿಕ್ಷೆ ವಿಧಿಸಿದೆ. ಯಾವ ಬಾಲಕ ಅಂದು ಅಪಹರಣಕ್ಕೊಳಗಾಗಿದ್ದಾನೋ ಅದೇ ಬಾಲಕ ಇಂದು ವಕೀಲರಾಗಿ ಆರೋಪಿಗಳಿಗೆ ಶಿಕ್ಷೆಯಾಗುವಂತೆ ವಾದಮಂಡಿಸಿದ್ದಾನೆ.
ಘಟನೆ ವಿವರ
ಆಗ್ರಾದ ಖೇರ್ ಗಢ್ ನಲ್ಲಿ ಮನೆಯ ಹೊರಗೆ ಆಟವಾಡುತ್ತಿದ್ದ ಮಗುವನ್ನು ಕೆಲ ದುಷ್ಕರ್ಮಿಗಳು ಅಪಹರಿಸಿದ್ದರು. ಈ ಪ್ರಕರಣ ನಡೆದು 17 ವರ್ಷಗಳೇ ಕಳೆದಿದೆ. ಪ್ರಕರಣದ ವಿಚಾರಣೆ ನಡೆಸಿದ ಅಡಿಷನಲ್ ಜಿಲ್ಲಾ ನ್ಯಾಯಾಧೀಶರಾದ ನೀರಜ್ ಕುಮಾರ್ ಬಕ್ಷಿ ಅವರು ಆರೋಪಿಗಳಿಗೆ ಶಿಕ್ಷೆ ವಿಧಿಸಿ ಆದೇಶ ನೀಡಿದ್ದರು.
ಅಂದು ಅಪಹರಿಸಲ್ಪಟ್ಟ ಹರ್ಷ ಗರ್ಗ್ ಎಂಬ ಬಾಲಕ ಈ 17 ವರ್ಷಗಳಲ್ಲಿ ಬಹಳಷ್ಟು ಬದಲಾವಣೆ ಕಂಡಿದ್ದು…ಈಗ ಆತ 24ರ ಹರೆಯದ ಯುವ ವಕೀಲರಾಗಿದ್ದಾರೆ. ತನ್ನ ಅಪಹರಣಕಾರ ಆರೋಪಿಗಳ ಬಗ್ಗೆ ಕೋರ್ಟ್ ನಲ್ಲಿ ಸಮರ್ಥವಾಗಿ ವಾದ ಮಂಡಿಸಿ ಶಿಕ್ಷೆ ವಿಧಿಸುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.
2007ರ ಫೆಬ್ರವರಿ 10ರಂದು ಮನೆಯ ಹೊರಗೆ ಆಟವಾಡುತ್ತಿದ್ದ ಗರ್ಗ್ ನನ್ನು ತಂಡವೊಂದು ಅಪಹರಿಸಿತ್ತು. ಈ ಸಂದರ್ಭದಲ್ಲಿ ಅಪಹರಣ ತಡೆಯಲು ಯತ್ನಿಸಿದ್ದ ಗರ್ಗ್ ತಂದೆ ರವಿ ಕುಮಾರ್ ಗರ್ಗ್ ಮೇಲೆ ಗುಂಡಿನ ದಾಳಿ ನಡೆಸಿ ಪರಾರಿಯಾಗಿದ್ದರು. ನಂತರ ಹರ್ಷ ಗರ್ಗ್ ಬಿಡುಗಡೆಗೆ 55 ಲಕ್ಷ ರೂಪಾಯಿ ಹಣ ನೀಡಬೇಕೆಂದು ಬೇಡಿಕೆ ಇಟ್ಟಿದ್ದರು. ಸುಮಾರು 26 ದಿನಗಳ ನಂತರ ಮಧ್ಯಪ್ರದೇಶದಲ್ಲಿ ಪೊಲೀಸರ ಕಾರ್ಯಾಚರಣೆಯಲ್ಲಿ ಗರ್ಗ್ ನನ್ನು ರಕ್ಷಿಸಲಾಗಿತ್ತು.
ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಗುಡ್ಡಾನ್ ಕಾಛಿ, ರಾಜೇಶ್ ಶರ್ಮಾ, ರಾಜ್ ಕುಮಾರ್, ಫತೇಹ್ ಸಿಂಗ್ ಅಲಿಯಾಸ್ ಛಿಗಾ, ಅಮರ್ ಸಿಂಗ್, ಬಲ್ವೀರ್, ರಾಮ್ ಪ್ರಕಾಶ್, ಭೀಮ್ ಅಲಿಯಾಸ್ ಭಿಖಾರಿ ಸೇರಿದಂತೆ ಎಂಟು ಆರೋಪಿಗಳನ್ನು ಬಂಧಿಸಿದ್ದರು. 17 ವರ್ಷಗಳ ಬಳಿಕ ಕೋರ್ಟ್ ಆರೋಪಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿ, ತಲಾ ಒಂದು ಲಕ್ಷ ರೂಪಾಯಿ ದಂಡ ವಿಧಿಸಿದೆ. ಪ್ರಕರಣದಲ್ಲಿ ಸೂಕ್ತ ಸಾಕ್ಷ್ಯಾಧಾರಗಳಿಲ್ಲದೇ ನಾಲ್ವರು ಆರೋಪಿಗಳು ಖುಲಾಸೆಗೊಂಡಿದ್ದರು.
New Delhi News ಈ ಪ್ರಕರಣದಲ್ಲಿ ಗರ್ಗ್ ಸಾಕ್ಷ್ಯ ಪ್ರಮುಖ ಪಾತ್ರ ವಹಿಸಿತ್ತು. 2022ರಲ್ಲಿ ಹರ್ಷ ಗರ್ಗ್ ಕಾನೂನು ಪದವಿ ಪಡೆದಿದ್ದು, ಬಳಿಕ ಗರ್ಗ್ ಈ ಪ್ರಕರಣದ ವಾದ, ಪ್ರತಿವಾದ ಪ್ರಕ್ರಿಯೆಯಲ್ಲಿ ನಿರಂತರವಾಗಿ ಪಾಲ್ಗೊಂಡಿದ್ದರು. 2024ರ ಸೆಪ್ಟೆಂಬರ್ 17ರಂದು ಕೋರ್ಟ್ ನಲ್ಲಿ ತನ್ನ ಅಪಹರಣ ಪ್ರಕರಣದ ಬಗ್ಗೆ ಅಂತಿಮ ವಾದ ಸಮರ್ಥವಾಗಿ ಮಂಡಿಸಿದ್ದರು.
Breaking News ಪೋಸ್ಟ್ ಮಾರ್ಟಮ್ ವೇಳೆ ಎದ್ದು ಕುಳಿತ ವ್ಯಕ್ತಿ !!!!
Breaking News ಬಿಹಾರ ಸಾವನ್ನಪ್ಪಿದ್ದಾನೆಂದು ತಿಳಿದು ಮರಣೋತ್ತರ ಪರೀಕ್ಷೆ ನಡೆಸಲು ಮುಂದಾದ ವೇಳೆಯೇ ಆ ವ್ಯಕ್ತಿ ನಾನು ಬದುಕಿದ್ದೇನೆಂದು ಹೇಳಿ ಎದ್ದು ಕುಳಿತ ಘಟನೆ ಬಿಹಾರದಲ್ಲಿ ನಡೆದಿದೆ .
ವ್ಯಕ್ತಿಯೊಬ್ಬ ಸಾವನ್ನಪ್ಪಿದ್ದು ಪೋಸ್ಟ್ಮಾರ್ಟಮ್ಗೆ ಕರೆದೊಯ್ಯುವಾಗ ವ್ಯಕ್ತಿ ಎಚ್ಚರಗೊಂಡು ಸ್ಟ್ರೆಚರ್ ಮೇಲೆ ಹತ್ತಿ ನಿಂತಿದ್ದ ಘಟನೆ ಬಿಹಾರದಲ್ಲಿ ನಡೆದಿದೆ.
ರಾಕೇಶ್ ಕುಮಾರ್ ಎನ್ನುವ ವ್ಯಕ್ತಿಯೊಬ್ಬರು ಆಸ್ಪತ್ರೆಗೆ ಬಂದಾಗ ನೆಲದ ಮೇಲೆ ಬಿದ್ದಿರುವುದು ಕಂಡಿತ್ತು, ದೇಹದ ಚಲನೆ ಇರಲಿಲ್ಲ. ಅವರಿಗೆ ಹೃದಯಾಘಾತವಾಗಿರಬಹುದು ಎಂದು ಅನುಮಾನ ವ್ಯಕ್ತಪಡಿಸಲಾಗಿತ್ತು ಎಂದು ನಗರ ಪೊಲೀಸ್ ಠಾಣೆಯ ಸಹಾಯಕ ಸಬ್ ಇನ್ಸ್ಪೆಕ್ಟರ್ ಬಯಾಸ್ ಪ್ರಸಾದ್ ಹೇಳಿದರು.
ಈ ಮಧ್ಯೆ ವೈದ್ಯರು ನಾಡಿ ಮಿಡಿತವನ್ನೂ ನೋಡದೆ ಆತ ಸತ್ತಿದ್ದಾನೆಂದು ಘೋಷಿಸಿ, ಮರಣೋತ್ತರ ಪರೀಕ್ಷೆಗೆ ಕಳುಹಿಸಿಕೊಟ್ಟಿದ್ದರು. ಆ ಸಮಯದಲ್ಲಿ ಆತ ಎಚ್ಚರಗೊಂಡಿದ್ದು ನಾನು ಬದುಕಿದ್ದೇನೆ ಎಂದು ತಿಳಿಸಿದ್ದಾನೆ. ಬಳಿಕ ಆ ವ್ಯಕ್ತಿಯನ್ನು ವಿಚಾರಣೆಗೆಂದು ಕರೆದೊಯ್ದಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.
Breaking News ಬಾತ್ ರೂಂ ಕ್ಲೀನ್ ಮಾಡಲು ಹೋದಾಗ ಈ ವ್ಯಕ್ತಿ ಕ್ಲೀನರ್ ಗೆ ಸಿಕ್ಕಿದ್ದರು, ನಾನು ಔಷಧಿ ಖರೀದಿಸಲು ಹೋಗಿದ್ದೆ, ಏನೂ ತಿಂದಿರಲಿಲ್ಲ ಹಾಗಾಗಿ ತಲೆತಿರುಗಿ ಬಿದ್ದಿದ್ದೆ ಎಂದು ರಾಕೇಶ್ ಹೇಳಿದ್ದಾರೆ.
ರಾಕೇಶ್ ಕುಮಾರ್ ಜೆರೋಯಿನ್ ಗ್ರಾಮದ ನಿವಾಸಿ. ಘಟನೆ ನಡೆದ ಬಳಿಕ ಕೆಲಕಾಲ ಗೊಂದಲದ ವಾತಾವರಣ ಉಂಟಾಯಿತು ಎಂದು ವೈದ್ಯರು ತಿಳಿಸಿದ್ದಾರೆ. ಸ್ಟ್ರೆಚರ್ನಲ್ಲಿ ಕುಳಿತು ನಾನು ಸತ್ತಿಲ್ಲಪ್ಪ ಬದುಕಿದ್ದೇನೆ ಎಂದು ಹೇಳಿದಾಗ ಎಲ್ಲರಿಗೂ ಅಚ್ಚರಿಯಾಗಿತ್ತು.
