Saturday, March 28, 2026
Saturday, March 28, 2026
Home Blog Page 546

Shivamogga Railway ರೈಲ್ವೆ ನಿಲ್ದಾಣದಲ್ಲಿ ಹೆಲ್ಪ್ ಡೆಸ್ಕ್ ಇತ್ಯಾದಿ ಸೇವೆ ಆರಂಭಿಸಲು ನಾಗರೀಕ ಸಂಘದ ಮನವಿ

0

Shivamogga Railway ರೈಲ್ವೆ ನಿಲ್ದಾಣದಲ್ಲಿ ಶಿವಮೊಗ್ಗ ಜಿಲ್ಲಾ ಪ್ರವಾಸಿ ತಾಣ, ಐತಿಹಾಸಿಕ ತಾಣಗಳ ಮಾಹಿತಿ ಕೇಂದ್ರ ತೆರೆಯುವ ಜತೆಯಲ್ಲಿ ಸಾರ್ವಜನಿಕ ಹೆಲ್ಪ್ ಡೆಸ್ಕ್ ಆರಂಭಿಸುವಂತೆ ಹಾಗೂ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಶಿವಮೊಗ್ಗದ ರೈಲ್ವೆ ಪ್ರಯಾಣಿಕ ನಾಗರಿಕರ ಸಂಘದಿಂದ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಅವರಿಗೆ ಮನವಿ ಸಲ್ಲಿಸಲಾಯಿತು.

ಶಿವಮೊಗ್ಗ ನಗರದ ರೈಲ್ವೆ ನಿಲ್ದಾಣದಲ್ಲಿ ಶಿವಮೊಗ್ಗದಿಂದ ಹೊರಡುವ ಮತ್ತು ಬರುವ ಎಲ್ಲ ರೈಲ್ವೆ ಕೋಚ್‌ಗಳಲ್ಲಿ ಶಿವಮೊಗ್ಗ ಜಿಲ್ಲಾ ಐತಿಹಾಸಿಕ ಸ್ಥಳಗಳು ಮತ್ತು ಪ್ರವಾಸಿ ಸ್ಥಳಗಳ ಸ್ತಬ್ಧಚಿತ್ರವನ್ನು ಬೋಗಿಗಳಲ್ಲಿ ಅಳವಡಿಸುವಂತೆ ಮನವಿ ಮಾಡಿದರು.

ಶಿವಮೊಗ್ಗ ಜಿಲ್ಲೆ ಇತ್ತೀಚಿನ ದಿನಗಳಲ್ಲಿ ಪ್ರವಾಸೋದ್ಯಮ ಕ್ಷೇತ್ರ, ಕೈಗಾರಿಕಾ ಕ್ಷೇತ್ರ ಮತ್ತು ಧಾರ್ಮಿಕ ಕ್ಷೇತ್ರಗಳಲ್ಲಿ ಪ್ರಗತಿ ಸಾಧಿಸುತ್ತಿದೆ. ಇನ್ನು ಪ್ರಗತಿ ಸಾಧಿಸಲು ಅಗತ್ಯ ರೈಲ್ವೆ ಸೌಕರ್ಯಗಳನ್ನು ಶಿವಮೊಗ್ಗ ಜಿಲ್ಲೆ ಮತ್ತು ನಗರಕ್ಕೆ ಒದಗಿಸಲು ಕ್ರಮ ವಹಿಸುವಂತೆ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಶಿವಮೊಗ್ಗ ನಗರದಿಂದ ಅರಸೀಕೆರೆ, ಹಾಸನ, ಸಕಲೇಶಪುರ, ಸುಬ್ರಹ್ಮಣ್ಯ ಮೂಲಕ ಮಂಗಳೂರಿಗೆ ಹೊಸ ರೈಲ್ವೆ ಇಂಟರ್ ಸಿಟಿ ರೈಲು ಬಿಡಬೇಕು. ಇದರಿಂದ ಕೇರಳ, ಕೊಚ್ಚಿನ್, ಗುರುವಾಯುರು, ಶಬರಿಮಲೆ ದೇವಸ್ಥಾನಕ್ಕೆ ಹೋಗಲು ಅನುಕೂಲವಾಗುತ್ತದೆ. ಶಿವಮೊಗ್ಗದಿಂದ ಮಂಗಳೂರು ನಗರಕ್ಕೆ ಸಂಪರ್ಕ ಸಿಗುತ್ತದೆ.

Shivamogga Railway ಶಿವಮೊಗ್ಗ ರೈಲ್ವೆ ಸ್ಟೇಷನ್‌ನಲ್ಲಿ 50 ಬೆಡ್‌ನ ರೈಲ್ವೆ ಯಾತ್ರಿನಿವಾಸ, ಲಗೇಜ್ ಲಾಕರ್ ಮತ್ತು ಸ್ತ್ರೀಯರಿಗೆ ಪ್ರತ್ಯೇಕ ರೆಸ್ಟ್ ರೂಮ್ ವಿತ್ ಸಿ.ಸಿ. ಟಿ.ವಿ ಕ್ಯಾಮೆರಾ ವ್ಯವಸ್ಥೆ ಕಲ್ಪಿಸಬೇಕು. 1, 2 ಮತ್ತು 3ನೇ ಫ್ಲಾಟ್ ಫಾರಂನಲ್ಲಿ ಮಹಿಳೆ ಫೀಡಿನ್ ಕ್ಯಾಬಿನ್ ಅಳವಡಿಸಬೇಕು. 2 ಮತ್ತು 3 ನೇ ಪ್ಲಾಟ್ ಫಾರಂಗೆ ಅನುಗುಣವಾಗಿ ಶೌಚಗೃಹ ಕಟ್ಟಿಸಬೇಕು. ದಿನಕ್ಕೆ 8,000 ಜನರು ರೈಲ್ವೆ ಪ್ರಯಾಣಿಕರು ಶಿವಮೊಗ್ಗದಿಂದ ಬೇರೆ ಬೇರೆ ಸ್ಥಳಗಳಿಗೆ ಪ್ರಯಾಣಿಸುತ್ತಾರೆ. ಅವರಿಗೆ ಅನುಕೂಲವಾಗುವಂತೆ 2 ಮತ್ತು 3ನೇ ಫ್ಲಾಟ್ ಫಾರಂಗೆ ಎಕ್ಸ್ಲೇಟರ್ ಅಳವಡಿಸಬೇಕು ಎಂದು ಮನವಿ ಮಾಡಿದರು.

ಶಿವಮೊಗ್ಗದಿಂದ ಬೆಂಗಳೂರಿಗೆ ಗರೀಬಿ ರಥ ರೈಲು ಆರಂಭಿಸಬೇಕು. ಶಿವಮೊಗ್ಗದಿಂದ ಮುಂಬೈಗೆ ನೇರ ಸಂಪರ್ಕ ರೈಲನ್ನು ಓಡಿಸಬೇಕು. ಶಿವಮೊಗ್ಗ, ಬೀರೂರು ಜಂಕ್ಷನ್, ಹುಬ್ಬಳ್ಳಿ ಮಾರ್ಗವಾಗಿ ಮುಂಬೈಗೆ ರೈಲು ಆರಂಭಿಸಬೇಕು. ಶಿವಮೊಗ್ಗದಿಂದ ಕಡಿಮೆ ದರದಲ್ಲಿ ಪ್ಯಾಸೆಂಜರ್ ರೈಲನ್ನು ದಿನದ ಅವಧಿಯಲ್ಲಿ ಶಿವಮೊಗ್ಗ, ಬೀರೂರು, ಚಿಕ್ಕಜಾಜೂರು, ಚಿತ್ರದುರ್ಗ, ಬಳ್ಳಾರಿ, ಮಂತ್ರಾಲಯ ಮೂಲಕ ರಾಯಚೂರಿಗೆ ಆರಂಭಿಸಬೇಕು.

ಶಿವಮೊಗ್ಗ ರೈಲ್ವೆ ನಿಲ್ದಾಣದಲ್ಲಿ ವಾಹನದ ನಿಲ್ದಾಣವನ್ನು ಸಮಪರ್ಕವಾಗಿ ಮಾಡಬೇಕು. ರಾತ್ರಿ ವೇಳೆ ಲೈಟ್ ವ್ಯವಸ್ಥೆ ಮಾಡಬೇಕು. ಸೀನಿಯರ್ ಸಿಟಿಜನ್ ಕೋಟಾ ಮತ್ತು ಸೀನಿಯರ್ ಸಿಟಿಜನ್‌ಗೆ ಶೇ. 50 ರಿಯಾಯಿತಿ ದರದ ಟಿಕೇಟ್‌ಅನ್ನು ಮರು ಸ್ಥಾಪಿಸಬೇಕು ಎಂದು ಶಿವಮೊಗ್ಗದ ರೈಲ್ವೆ ಪ್ರಯಾಣಿಕ ನಾಗರಿಕರ ಸಂಘದಿAದ ಮನವಿ ಮಾಡಲಾಯಿತು.

ಮನವಿ ಸಲ್ಲಿಸುವ ವೇಳೆ ಶಿವಮೊಗ್ಗದ ರೈಲ್ವೆ ಪ್ರಯಾಣಿಕ ನಾಗರಿಕರ ಸಂಘದ ಡಾ. ದಿನೇಶ್, ಎನ್.ಗೋಪಿನಾಥ್(ಮಥುರಾ), ಜಿ.ವಿಜಯ್ ಕುಮಾರ್, ಕೆ.ರಂಗನಾಥ್, ಜಗದೀಶ್, ಮಂಜುನಾಥ್, ಐಡಿಯಲ್ ಗೋಪಿ, ಮಂಜು, ನೂರ್ ಅಹಮದ್, ವಿನೋದ, ಜೋಸೆಫ್, ಡಾ. ಶಿಶಿರಾ, ಸುರೇಶ ಶೆಟ್ಟಿ, ಡಾ. ಶಿವಕುಮಾರ್, ವೆಂಕಟೇಶ್, ವಸಂತ ಹೋಬಳಿದಾರ್, ನಾಗರಾಜ್ ಕಂಕಾರಿ, ಪಾಲಾಕ್ಷಿ ಉಪಸ್ಥಿತರಿದ್ದರು.

University of Mysore ಅವಕಾಶ ವಂಚಿತರಿಗೆ ಸಮಾನ ಅವಕಾಶ ಸಿಕ್ಕಾಗ ಮಾತ್ರ ಸಮ ಸಮಾಜ ನಿರ್ಮಾಣ- ಸಿದ್ಧರಾಮಯ್ಯ

0

University of Mysore ಹೊಟ್ಟೆ ತುಂಬ ಹಿಟ್ಟು-ಬಾಯಿ ತುಂಬ ಅನ್ನ ಎಂದು ನನ್ನಮ್ಮ ಹೇಳುತ್ತಿದ್ದರು. ನಾನು ಅನ್ನ ಭಾಗ್ಯ ಜಾರಿಗೆ ತರಲು ಅನ್ನಕ್ಕಾಗಿ ಕಾದು ನಿಂತ ಪರಿಸ್ಥಿತಿಯೇ ಕಾರಣ ಎಂದು ಸಿಎಂ ಸಿದ್ದರಾಮಯ್ಯ ತಮ್ಮ ಬಾಲ್ಯದ ದಿನಗಳನ್ನು ಸ್ಮರಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೈಸೂರು ವಿಶ್ವವಿದ್ಯಾನಿಲಯ ಮಾನಸಗಂಗೋತ್ರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ “ಗ್ಯಾರಂಟಿ ಯೋಜನೆಗಳು: ಬಡವರ ಸುರಕ್ಷತೆ ಮತ್ತು ಕಲ್ಯಾಣ” ಕೃತಿ ಬಿಡುಗಡೆ ಮಾಡಿ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು.
University of Mysore 1949 ನವೆಂಬರ್ 25 ರಂದು ಸಂವಿಧಾನ ಜಾರಿ ಸಭೆಯಲ್ಲಿ ಮಾಡಿದ ಭಾಷಣ ನನ್ನ ಗ್ಯಾರಂಟಿಗಳಿಗೆ ಸ್ಫೂರ್ತಿ.‌ ಅವಕಾಶಗಳಿಂದ ವಂಚಿತರಾಗಿರುವವರಿಗೆ ಸಮಾನ ಅವಕಾಶಗಳು ಸಿಕ್ಕಾಗ ಸಮ ಸಮಾಜ ನಿರ್ಮಾಣ ಸಾಧ್ಯ. ಬಸವಾದಿ ಶರಣರು, ಬುದ್ದ ಕೂಡ ಸಮ ಸಮಾಜದ ಬಗ್ಗೆ ಹೇಳಿದ್ದಾರೆ. ಕೇವಲ ಭಾಷಣಳಿಂದ ಸಮ ಸಮಾಜದ ಆಶಯ ಈಡೇರಲ್ಲ. ಈ ಕಾರಣಕ್ಕೇ ಮೊದಲ ಬಾರಿ ಮುಖ್ಯಮಂತ್ರಿ ಆದಾಗಲೂ ಹಲವು ಭಾಗ್ಯಗಳನ್ನು ಜಾರಿ ಮಾಡಿದೆ ಎನ್ನುತ್ತಾ ತಮ್ಮ ಬಾಲ್ಯದ ಬಡತನದ ದಿನಗಳನ್ನು ಸ್ಮರಿಸಿದರು.
ಹಬ್ಬ ಬಂದಾಗ ಮಾತ್ರ ನಮ್ಮ ಮನೆಯಲ್ಲಿ ಅನ್ನ ಮಾಡುತ್ತಿದ್ದರು. ಅಕ್ಕ ಪಕ್ಕದವರ ಮನೆಯಲ್ಲಿ ಯಾರಿಗಾದ್ರೂ ಹುಷಾರು ತಪ್ಪಿದರೆ ಅವರಿಗೆ ಅನ್ನ ಮಾಡುತ್ತಿದ್ದರು. ಅವರ ಮನೆ ಬಾಗಿಲಲ್ಲಿ ಒಂದು ತುತ್ತು ಅನ್ನಕ್ಕಾಗಿ ಕಾದು ನಿಂತಿದ್ದ ದಿನಗಳು ಇದ್ದವು‌. ಹೀಗೆ ಅನ್ನಕ್ಕೆ ಯಾರೂ ಕಾದು ನಿಲ್ಲಬಾರದು ಎನ್ನುವ ಕಾರಣಕ್ಕೆ ಅನ್ನಭಾಗ್ಯ ಜಾರಿಗೆ ತಂದದ್ದನ್ನು ವಿವರಿಸಿದರು.
ಜಾತಿ ಕಾರಣಕ್ಕಾಗಿ ಸಮಾಜದಲ್ಲಿ ಆರ್ಥಿಕ‌ ಅಸಮಾನತೆ ಸೃಷ್ಟಿ ಆಯಿತು. ಆದ್ದರಿಂದ ಎಲ್ಲರಿಗೂ ಆರ್ಥಿಕ ಶಕ್ತಿ ಕೊಡುವ ಕಾರಣಕ್ಕೆ 2013-18 ರವರೆಗೆ ಹಲವು ಕಾರ್ಯಕ್ರಮಗಳನ್ನು ಜಾರಿ ಮಾಡಿದೆವು. ಹಾಗೆಯೇ ಎರಡನೇ ಬಾರಿ ಮುಖ್ಯಮಂತ್ರಿ ಆದಾಗಲೂ ಗ್ಯಾರಂಟಿಗಳ ಮೂಲಕ ಆರ್ಥಿಕ ಶಕ್ತಿ ನೀಡಿದೆವು ಎಂದರು.

Jan Suraj campaign ಅಕ್ಟೋಬರ್ 2 ರಂದು ಪ್ರಶಾಂತ್ ಕಿಶೋರ್ ಹೊಸ ಪಕ್ಷಕ್ಕೆ ಹೆಸರಿಡುವ ದಿನ

0

Jan Suraj campaign ಜನ್ ಸುರಾಜ್ ಅಭಿಯಾನದ ಮುಖ್ಯಸ್ಥ ಪ್ರಶಾಂತ್ ಕಿಶೋರ್ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಹೊಸ ರಾಜಕೀಯ ಪಕ್ಷದ ರಚನೆಯನ್ನು ಘೋಷಿಸಿದರು. ಅದರ ಹೆಸರು ಮತ್ತು ನಾಯಕತ್ವ ಸೇರಿದಂತೆ ವಿವರಗಳನ್ನು ಅಕ್ಟೋಬರ್ 2 ರಂದು ಅನಾವರಣಗೊಳಿಸಲಾಗುವುದು ಎಂದು ಹೇಳಿದ್ದಾರೆ.
“ನಾನು ಎಂದಿಗೂ ನಾಯಕನಾಗಿರಲಿಲ್ಲ, ನಾನು ಎಂದಿಗೂ ಒಬ್ಬನಾಗಲು ಬಯಸುವುದಿಲ್ಲ. ಜನರು ನಾಯಕತ್ವದ ಪಾತ್ರಗಳನ್ನು ತೆಗೆದುಕೊಳ್ಳುವ ಸಮಯ ಇದು” ಎಂದು ಅವರು ಹೇಳಿದರು.
ಅಕ್ಟೋಬರ್ 2, 2022 ರಂದು ಪ್ರಾರಂಭವಾದ ಅವರ “ಜನ್ ಸೂರಾಜ್” ಉಪಕ್ರಮದ ಮೊದಲ ಹಂತದ ಕಾರ್ಯಗಳನ್ನು ಗುರುತಿಸಲು ಪ್ರಶಾಂತ್ ಕಿಶೋರ್ ತಯಾರಿ ನಡೆಸುತ್ತಿರುವಾಗ ಈ ಪ್ರಕಟಣೆ ಬಂದಿದೆ. ಗಾಂಧಿ ಜಯಂತಿಯಂದು ಜನ್ ಸುರಾಜ್ ನಾಯಕತ್ವ ಮಂಡಳಿಯ ಸದಸ್ಯರು ಮತ್ತು ಪಕ್ಷದ ಹೆಸರನ್ನು ಅವರು ಬಹಿರಂಗಪಡಿಸಲಿದ್ದಾರೆ.
ಪ್ರಶಾಂತ್ ಕಿಶೋರ್ ಅವರು ತಮ್ಮ ಉಪಕ್ರಮದ ಹಿಂದೆ ಇದ್ದ ಮೂರು ಪ್ರಾಥಮಿಕ ಉದ್ದೇಶಗಳನ್ನು ವಿವರಿಸಿದರು. ಬಿಹಾರದ ಪ್ರತಿ ಹಳ್ಳಿಗೆ ಭೇಟಿ ನೀಡಿ, ಅಲ್ಲಿನ ನಿವಾಸಿಗಳಿಗೆ ಅವರ ಜೀವನಮಟ್ಟ ಮತ್ತು ಅವರ ಮಕ್ಕಳ ಜೀವನಮಟ್ಟವನ್ನು ಸುಧಾರಿಸಲು ಶಿಕ್ಷಣ ನೀಡುವುದು ಮೊದಲ ಉದ್ದೇಶವಾಗಿತ್ತು ಎಂದರು.
Jan Suraj campaign ಎರಡನೆಯದು, ದಾರಿತಪ್ಪಿದ ನಾಯಕರ ಒತ್ತಡಕ್ಕೆ ಮಣಿಯದಂತೆ ಜನರನ್ನು ಉತ್ತೇಜಿಸುವುದು ಮತ್ತು ಸಾರ್ವಜನಿಕ ಬೆಂಬಲದೊಂದಿಗೆ ಹೊಸ ಪಕ್ಷವನ್ನು ಸ್ಥಾಪಿಸಲು ಪ್ರತಿಪಾದಿಸುವುದು. ಮೂರನೆಯ ಉದ್ದೇಶ, ಬಿಹಾರದ ಪ್ರಗತಿಗೆ ಕೆಲಸ ಮಾಡುವುದು, ಅದನ್ನು ರಚಿಸುವ ಮೂಲಕ ಹತ್ತು ಅತ್ಯಂತ ಯಶಸ್ವಿ ರಾಜ್ಯಗಳಲ್ಲಿ ಸ್ಥಾನ ಪಡೆಯುವ ಗುರಿಯನ್ನು ಹೊಂದಿದೆ. ಶಿಕ್ಷಣ, ಕೃಷಿ ಮತ್ತು ಉದ್ಯೋಗದ ಮೇಲೆ ಕೇಂದ್ರೀಕರಿಸುವ 8,500 ಪಂಚಾಯತ್‌ಗಳ ಅಭಿವೃದ್ಧಿಗೆ ಕಾರ್ಯತಂತ್ರಗಳನ್ನು ರೂಪಿಸುವುದು ಉದ್ದೇಶವಾಗಿದೆ ಎಂದು ಹೇಳಿದ್ದಾರೆ.
“ಈ ಮೂರು ಉದ್ದೇಶಗಳೊಂದಿಗೆ ನಾವು ಅಕ್ಟೋಬರ್ 2, 2022 ರಂದು ಪಶ್ಚಿಮ ಚಂಪಾರಣ್‌ನ ಗಾಂಧಿ ಆಶ್ರಮದಿಂದ ನಮ್ಮ ಪ್ರಯಾಣವನ್ನು ಪ್ರಾರಂಭಿಸಿದ್ದೇವೆ. ಈ ಪ್ರಯಾಣಕ್ಕೆ ನಿಗದಿತ ಸಂಖ್ಯೆಯ ದಿನಗಳು ಅಥವಾ ಕಿಲೋಮೀಟರ್‌ಗಳಿಲ್ಲ. ಗುರಿ ಮಾತ್ರ ಅಂತಿಮವಾಗಿದೆ, ಅದು ಹಳ್ಳಿಗಳ ಮೂಲೆ ಮೂಲೆಗೆ ಹೋಗುವುದು” ಎಂದು ಅವರು ಹೇಳಿದರು.

Sahyadri Arts College ಭಾಷೆಗೆ ನಮ್ಮೆಲ್ಲರನ್ನೂ ಪೊರೆಯುವ ಶಕ್ತಿ ಇದೆ – ಸತೀಶ ಜವರೇಗೌಡ

0

Sahyadri Arts College ಕನ್ನಡ ಭಾಷೆಗೆ ಮನಸ್ಸುಗಳನ್ನು ಬೆಸೆಯುವ ಶಕ್ತಿಯಿದೆ ಎಂದು ಸಾಹಿತಿ ಹಾಗೂ ಸಂಸ್ಕೃತಿ ಚಿಂತಕ ಟಿ.ಸತೀಶ್ ಜವರೇಗೌಡ ಹೇಳಿದರು.
ಅವರು ಹಾಸನದ ಮಾಣಿಕ್ಯ ಪ್ರಕಾಶನದ ವತಿಯಿಂದ ಸಹ್ಯಾದ್ರಿ ಕಲಾ ಕಾಲೇಜಿನ ಜಯಚಾಮರಾಜೇಂದ್ರ ಒಡೆಯರ್ ಸಭಾಂಗಣದಲ್ಲಿ ಆಯೋಜಿಸಿದ್ದ ರಾಜ್ಯಮಟ್ಟದ 8ನೇ ಕವಿಕಾವ್ಯ ಸಂಭ್ರಮ ಹಾಗೂ ಜನ್ನಕಾವ್ಯ ಪರೀಕ್ಷೆ ಮತ್ತು ದತ್ತಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
Sahyadri Arts College ಭಾಷೆಗೆ ನಮ್ಮೆಲ್ಲರನ್ನು ಪೊರೆಯುವ ಶಕ್ತಿಯಿದೆ, ಅದೊಂದು ಜೀವತಂತು. ವರ್ತಮಾನದ ತಲ್ಲಣದ ಈ ಸಂದರ್ಭದಲ್ಲಿ ವಿಕೃತಗಳೇ ವಿಜೃಂಭಿಸಿರುವಾಗ ಸಾಹಿತ್ಯದ ಮೂಲಕ ಸಾಮರಸ್ಯವನ್ನು ಬೆಸೆಯಬೇಕಾಗಿದೆ. ಸಾಹಿತ್ಯಕ್ಕೆ ತನ್ನದೇ ಆದ ಶಕ್ತಿಯಿದೆ. ಹಲವು ಕ್ರಾಂತಿಗಳ ಹಿಂದೆ ಸಾಹಿತ್ಯದ ಪ್ರೇರಕ ಶಕ್ತಿ ಇರುತ್ತದೆ. ಭಾಷೆ ಭಾವೈಕ್ಯತೆಯನ್ನು ಮತ್ತಷ್ಟು ಹೆಚ್ಚಿಸುತ್ತದೆ ಎಂದರು.
ಸಾಹಿತ್ಯದ ವಿಕೇಂದ್ರಿಕರಣದ ಬದಲು ಜಾತಿಯತೆ, ಧರ್ಮಾಂಧತೆ ವಿಕೇಂದ್ರಿಕರಣವಾಗುತ್ತಿದೆ. ಇದನ್ನೆಲ್ಲ ದಮನ ಮಾಡಲು ಸಾಹಿತ್ಯವೇ ಮದ್ದಾಗುತ್ತದೆ ಕೂಡ, ಸಾಹಿತ್ಯದ ಜವಬ್ದಾರಿ ಕೂಡ ಹೆಚ್ಚಿದೆ. ಒಗ್ಗಟ್ಟನ್ನು ಬೆಸೆಯುವ ಸಾಮಾಜದ ಸಾಮರಸ್ಯವನ್ನು ಹೆಚ್ಚಿಸುವಂತೆ ಸಾಹಿತ್ಯವಿರಬೇಕು ಎಂದರು.

Shivamogga Karnataka Association ನೂತನ ಅವಧಿಗೆ ಕರ್ನಾಟಕ ಸಂಘದ ನಿರ್ದೇಶಕರ ಆಯ್ಕೆ

0

Shivamogga Karnataka Association ಶಿವಮೊಗ್ಗ ನಗರದ ಕರ್ನಾಟಕ ಸಂಘದ 2024-27ರ ಸಾಲಿನ (ಮೂರು ವರ್ಷಗಳ) ಅವಧಿಗೆ ನೂತನ ಪದಾಧಿಕಾರಿಗಳ ಆಯ್ಕೆಗೆ ಭಾನುವಾರ ನಡೆದ ಚುನಾವಣೆಯಲ್ಲಿ 15 ನಿರ್ದೇಶಕರನ್ನು ಆಯ್ಕೆ ಮಾಡಲಾಗಿದೆ.
ಆಯ್ಕೆಯಾದವರೆಂದರೆ- ಗೀತಾಂಜಲಿ ಪ್ರಸನ್ನಕುಮಾರ್, ಪ್ರೊ. ನಾಗಮಣಿ ಎನ್., ಹೆಚ್.ವಿ. ಮೋಹನ ಶಾಸ್ತ್ರಿ ಪ್ರೊ ಆಶಾಲತಾ ಎಂ., ಡಾ. ಗುರುದತ್ ಕೆ.ಎನ್., ಪ್ರೊ. ಹೆಚ್.ಆರ್, ಶಂಕರನಾರಾಯಣ ಶಾಸ್ತ್ರಿ, ಚೇತನ್ ಕೆ.ಎಸ್., ಶೃಂಗೇರಿ ಹೆಚ್.ಎಸ್. ನಾಗರಾಜ್, Shivamogga Karnataka Association ವಾಗೇಶ್ ಎನ್.ಎಸ್., ನಾಗರಾಜ ಎಸ್.ಎನ್., ಚಂದ್ರಶೇಖರ್ ಜಿ., ಬಸವರಾಜಪ್ಪ ಎಂ., ಪರಶುರಾಮಪ್ಪ ಎ. ಮತ್ತು ಹಾಲಸ್ವಾಮಿ ಆರ್.ಎಸ್.ಚುನಾವಣಾಧಿಕಾರಿಯಾಗಿ ಸಹಕಾರ ಸಂಘಗಳ ಸಹಾಯಕ ನಿಬಂಧಕ ಎಮ್. ಸಿ ಮಂಜುನಾಥ ಕಾರ್ಯನಿರ್ವಹಿಸಿದರು.

Dasara Festival ತೀರ್ಥಹಳ್ಳಿಯಲ್ಲಿ ದಸರಾ ಕವಿಗೋಷ್ಠಿಗೆ ಸ್ಪರ್ಧೆ‌. ಕವಿಗಳ ಕವಿತೆಗೆ ಆಹ್ವಾನ

0

Dasara Festival ರಾಮೇಶ್ವರ ದೇವರ ದಸರಾ ಉತ್ಸವದ ಅಂಗವಾಗಿ ದಸರಾ ಸಮಿತಿ ವಿಭಾಗದ ವತಿಯಿಂದ ಈ ವರ್ಷ ಕೂಡಾ ಅಕ್ಟೋಬರ್ 10 ನೇ ತಾರೀಕಿನಂದು ಶಿವಮೊಗ್ಗ, ಚಿಕ್ಕಮಗಳೂರು, ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳ ಮಟ್ಟದ ಕವಿಗೋಷ್ಠಿಯನ್ನು ಪಟ್ಟಣದ ಶಾಂತವೇರಿ ಗೋಪಾಲಗೌಡ ರಂಗಮಂದಿರದಲ್ಲಿ ಆಯೋಜಿಸಲಾಗಿದೆ. ದಸರಾ ಕವಿಗೋಷ್ಠಿ ಸಂಚಾಲಕರಾದ ಡಾನ್ ರಾಮಣ್ಣ ತಿಳಿಸಿದ್ದಾರೆ.
ಪ್ರಥಮ ಬಹುಮಾನ 5000 ರೂ, ದ್ವಿತೀಯ 3000 ರೂ, ತೃತೀಯ 2000 ಹಾಗೂ ಸಮಾಧಾನಕರ ೧೦೦೦ ರೂ ನಗದು ಬಹುಮಾನದೊಂದಿಗೆ ಸ್ಮರಣಿಕೆ ನೀಡಿ ಗೌರವಿಸಲಾಗುವುದು. ತಾಲೂಕಿನವರನ್ನು ಹೊರತು ಪಡಿಸಿ ಹೊರಗಿನಿಂದ ಬರುವವರಿಗೆ ಬಸ್ ಪ್ರಯಾಣ ವೆಚ್ಚವನ್ನೂ ನೀಡಲಾಗುವುದು.
Dasara Festival ಕವನವನ್ನು ಕಳುಹಿಸಲು ಕೊನೆಯ ದಿನ ಅ. 09. ಈ ಮೊದಲು ಬೇರೆಡೆ ಪ್ರಸ್ತುತಪಡಿಸದ ಸಾಮಾಜಿಕ ಕಳಕಳಿಯ ಕವನಗಳಿಗೆ ಸ್ವಾಗತ. ಒಂದು ಪುಟಕ್ಕೆ ಸೀಮಿತವಾಗಿದ್ದು ವಾಚನ ಸಮಯ ಮೂರು ನಿಮಿಷ ಮೀರದಂತಿರಬೇಕು.
ಕವನವನ್ನು ಕಳುಹಿಸುವವರು ಪೂರ್ಣ ವಿಳಾಸದೊಂದಿಗೆ ತಮ್ಮ ಪರಿಚಯವನ್ನು 9480924888, 9480924088ಕ್ಕೆ ಕಳುಹಿಸಲು ಕೋರಲಾಗಿದೆ.

Mallikarjun Kharge ಪ್ರಚಾರ ಸಭೆಯಲ್ಲಿ ಖರ್ಗೆ ಕೊಂಚ ಅಸ್ವಸ್ಥ ನಂತರ ಚೇತರಿಕೆ

0

Mallikarjun Kharge ಜಮ್ಮು ಮತ್ತು ಕಾಶ್ಮೀರದ ಕಥುವಾ ಜಿಲ್ಲೆಯಲ್ಲಿ ಚುನಾವಣಾ ಪ್ರಚಾರ ಸಭೆಯನ್ನುದ್ದೇಶಿಸಿ ಮಾತನಾಡುವಾಗ ಅಸ್ವಸ್ಥರಾದ ಕಾಂಗ್ರೆಸ್ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ, ಚೇತರಿಕೆ ಬಳಿಕ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು. “ಪ್ರಧಾನಿ ನರೇಂದ್ರ ಮೋದಿ ಅವರನ್ನು ಅಧಿಕಾರದಿಂದ ತೆಗೆದು ಹಾಕುವವರೆಗೂ ನಾನು ಸಾಯುವುದಿಲ್ಲ” ಎಂದು ಹೇಳಿದ್ದಾರೆ.
ವಿಧಾನಸಭಾ ಚುನಾವಣೆಯ ಮೂರನೇ ಮತ್ತು ಅಂತಿಮ ಹಂತದ ಪ್ರಚಾರದ ಕೊನೆಯ ದಿನದಂದು ಬೃಹತ್ ಸಭೆಯನ್ನು ಉದ್ದೇಶಿಸಿ ಮಾತನಾಡುವಾಗ ಖರ್ಗೆ ಅವರಿಗೆ ತಲೆ ಸುತ್ತುವ ಅನುಭವವಾಯಿತು. ಕೂಡಲೇ ಎಚ್ಚೆತ್ತುಕೊಂಡ ಅವರ ಭದ್ರತಾ ಸಿಬ್ಬಂದಿ ಮತ್ತು ಪಕ್ಷದ ಮುಖಂಡರು, ಖರ್ಗೆ ಅವರ ನೆರವಿಗೆ ಧಾವಿಸಿ ಅವರನ್ನು ಕುರ್ಚಿಗೆ ಕರೆದೊಯ್ದರು.
Mallikarjun Kharge ಕೆಲವು ನಿಮಿಷಗಳ ನಂತರ, ಜನರನ್ನು ಉದ್ದೇಶಿಸಿ ಮಾತನಾಡಿದ ಅವರು, “ಕಾಶ್ಮೀರದ ರಾಜ್ಯ ಸ್ಥಾನಮಾನ ಮರುಸ್ಥಾಪಿಸಲು ನಾವು ಹೋರಾಡುತ್ತೇವೆ. ನನಗೆ 83 ವರ್ಷ, ನಾನು ಇಷ್ಟು ಬೇಗ ಸಾಯುವುದಿಲ್ಲ. ಪ್ರಧಾನಿ ನರೇಂದ್ರ ಮೋದಿಯನ್ನು ಅಧಿಕಾರದಿಂದ ತೆಗೆದುಹಾಕುವವರೆಗೂ ನಾನು ಜೀವಂತವಾಗಿರುತ್ತೇನೆ” ಎಂದರು.
ಮೂಲಗಳ ಪ್ರಕಾರ ಅವರಿಗೆ ರಕ್ತದೊತ್ತಡ ಕಡಿಮೆಯಾಗಿದೆ. ಅವರು ಹೆಚ್ಚು ಉತ್ತಮವಾಗಿದ್ದರೂ, ವೈದ್ಯರು ವಿಶ್ರಾಂತಿ ತೆಗೆದುಕೊಳ್ಳುವಂತೆ ಸೂಚಿಸಿದ್ದಾರೆ

G.M. Siddeshwar ಅಧ್ಯಕ್ಷ ವಿಜಯೇಂದ್ರ ವಿರುದ್ಧ ರೂಪರೇಷೆ ರಚಿಸಲು ದಾವಣಗೆರೆಯಲ್ಲಿ ಗುಪ್ತ ಸಭೆ?

0

G.M. Siddeshwar ಬೆಣ್ಣೆ ನಗರಿ ದಾವಣಗೆರೆಯಲ್ಲಿ ಸೆ. 29ರಂದು ರಾಜಕೀಯ ಚಟುವಟಿಕೆಗಳು ಗರಿಗೆದರಿದ್ದವು. ಅಲ್ಲಿನ ಮಾಜಿ ಸಂಸದ ಜಿಎಂ ಸಿದ್ದೇಶ್ವರ ಅವರ ಗೆಸ್ಟ್ ಹೌಸ್ ನಲ್ಲಿ ಬಿಜೆಪಿ ಅತೃಪ್ತರ ಸಭೆಯನ್ನು ಆಯೋಜಿಸಲಾಗಿದ್ದು, ಅಲ್ಲಿಗೆ ಬೆಳಗ್ಗೆಯಿಂದಲೇ ಬಿಜೆಪಿಯ ಕೆಲವು ಪ್ರಮುಖ ನಾಯಕರು ಪದಾರ್ಪಣೆ ಮಾಡಿದ್ದಾರೆ. ಸಭೆ ಆರಂಭವಾಗಿದ್ದು, ಹಲವಾರು ವಿಚಾರಗಳ ಬಗ್ಗೆ ಚರ್ಚೆ ನಡೆಸಲಾಗುತ್ತಿದೆ.ಈ ಸಭೆಗೆ, ದಾವಣಗೆರೆಯ ಮಾಜಿ ಸಂಸದ ಜಿ.ಎಂ. ಸಿದ್ದೇಶ್ವರ, ಅವರ ಪತ್ನಿ ಗಾಯತ್ರಿ ಸಿದ್ದೇಶ್ವರ ಅವರ ನೇತೃತ್ವದಲ್ಲಿ ನಡೆಯುತ್ತಿರುವ ಈ ಸಭೆಯಲ್ಲಿ ಪಾಲ್ಗೊಳ್ಳಲು ಬೆಳಗ್ಗೆಯೇ ವಿಜಯಪುರದ ಶಾಸಕ ಯತ್ನಾಳ್ ಅವರು ದಾವಣಗೆರೆಗೆ ಆಗಮಿಸಿದ್ದಾರೆ.
G.M. Siddeshwar ಮೈಸೂರಿನ ಮಾಜಿ ಸಂಸದ ಪ್ರತಾಪ್ ಸಿಂಹ ಆಗಮಿಸಿದ್ದಾರೆ. ಹರಿಹರದ ಶಾಸಕ ಬಿ.ಪಿ. ಹರೀಶ್ ಅವರು ಆಗಮಿಸಿದ್ದಾರೆ. ಅತ್ತ, ಗೋಕಾಕ್ ನಿಂದ ಅಲ್ಲಿನ ಶಾಸಕ ರಮೇಶ್ ಜಾರಕಿಹೊಳಿಯವರು ಈ ಸಭೆಯಲ್ಲಿ ಭಾಗಿಯಾಗಿದ್ದಾರೆ. ಇತ್ತೀಚೆಗೆ ಗಣೇಶೋತ್ಸವ ಮೆರವಣಿಗೆ ನಡೆಯುವ ಸಂದರ್ಭಗಳಲ್ಲಿ ರಾಜ್ಯದ ಕೆಲವು ಕಡೆಗಳಲ್ಲಿ ಗಲಭೆಗಳಾಗಿರುವ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಸುತ್ತಿದ್ದೇವೆ. ಹಿಂದೂ ಧರ್ಮದ ಉಳಿವು ಹಾಗೂ ಏಳ್ಗೆಗಾಗಿ ಬಿಜೆಪಿಯಿಂದ ಕೈಗೊಳ್ಳಬೇಕಾದ ಕ್ರಮಗಳೇನು ಎಂಬುದರ ಬಗ್ಗೆ ಸಭೆಯಲ್ಲಿ ಚರ್ಚಿಸಲು ಈ ಸಭೆಯನ್ನು ಕರೆಯಲಾಗಿದೆ ಎಂದು ಹೇಳಲಾಗಿದೆ. ಆದರೆ, ಸಭೆಯ ಒಳ ಉದ್ದೇಶ ಬೇರೆಯದ್ದೇ ಇದೆ ಎಂದು ಹೇಳಲಾಗುತ್ತಿದೆ. ಸಭೆಯ ಅಸಲಿ ಉದ್ದೇಶವೇನು? ಸಭೆಯಲ್ಲಿ ಅಸಲಿ ಉದ್ದೇಶವೇ ಬಿಜೆಪಿ ನಾಯಕತ್ವವನ್ನು ಬದಲಾಯಿಸುವುದು ಎಂದು ಹೇಳಲಾಗಿದೆ. ಬರುವ ನವೆಂಬರ್ ನಲ್ಲಿ ವಿಜಯೇಂದ್ರ ಅವರು ಬಿಜೆಪಿ ಅಧ್ಯಕ್ಷರಾಗಿ ಒಂದು ವರ್ಷವಾಗುತ್ತದೆ. ಅದಕ್ಕೂ ಮುನ್ನವೇ ವಿಜಯೇಂದ್ರ ಅವರನ್ನು ಬಿಜೆಪಿ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಲು ಪ್ರಯತ್ನಿಸುವುದು, ಅದಕ್ಕೆ ಬೇಕಾದ ರೂಪುರೇಷೆಗಳನ್ನು ನಿರ್ಧರಿಸುವ ಬಗ್ಗೆ ಸಭೆಯಲ್ಲಿ ಪ್ರಾಥಮಿಕ ಹಂತದ ಚರ್ಚೆಗಳಾಗಿವೆ ಎಂದು ಹೇಳಲಾಗಿದೆ. ಇದರ ಜೊತೆಗೆ, ರಾಜ್ಯ ಬಿಜೆಪಿ ನಾಯಕತ್ವಕ್ಕೆ ಪರ್ಯಾಯವಾಗಿ ತಮ್ಮನ್ನು ಬೆಳೆಯಲು ಬಿಡದ ಬಗ್ಗೆಯೂ ಸಭೆಯಲ್ಲಿ ಚರ್ಚೆಗಳಾಗಿವೆ ಎನ್ನಲಾಗಿದೆ.
G.M. Siddeshwar ಇತ್ತೀಚೆಗೆ ವಿಜಯೇಂದ್ರ ಅವರ ನೇತೃತ್ವದಲ್ಲಿ ಕೈಗೊಳ್ಳಲಾಗಿದ್ದ ಬಿಜೆಪಿ – ಜೆಡಿಎಸ್ ಮೈತ್ರಿಯ ಮೈಸೂರು ಚಲೋ ಪಾದಯಾತ್ರೆಗೆ ಪರ್ಯಾಯವಾಗಿ ಬಳ್ಳಾರಿ ಪಾದಯಾತ್ರೆಯನ್ನು ಕೈಗೊಳ್ಳಲು ಯತ್ನಾಳ್ ಹಾಗೂ ರಮೇಶ್ ಜಾರಕಿಹೊಳಿ ನಿರ್ಧರಿಸಿದ್ದರು. ಆದರೆ, ಅದಕ್ಕೆ ಹೈಕಮಾಂಡ್ ಅನುಮತಿ ಕೊಡಲಿಲ್ಲ. ಈ ವಿಚಾರವೂ ಸಹ ಸಭೆಯಲ್ಲಿ ಚರ್ಚೆಯಾಗಿದೆ.
ನವಂಬರ್ ನಲ್ಲಿ ಬಿಜೆಪಿ ನಾಯಕತ್ವ ಬದಲಾವಣೆ? ಬಿಜೆಪಿ ನಾಯಕತ್ವ ಬದಲಾವಣೆಯ ಬಗ್ಗೆ ಬಿಜೆಪಿಯಲ್ಲಿ ತುರುಸಿನ ಚಟುವಟಿಕೆಗಳು ನಡೆಯುತ್ತಿರುವುದು ಇದೇ ಮೊದಲೇನಲ್ಲ. ಈಗಾಗಲೇ ಕೆಲವು ತಿಂಗಳುಗಳಿಂದಲೂ ಬಿಜೆಪಿಯಲ್ಲಿ ಯಡಿಯೂರಪ್ಪ ಹಾಗೂ ಅವರ ಮಕ್ಕಳ ಹಿಡಿತವೇ ಜೋರಾಗಿದೆ. ಅವರು ಹಾಗೂ ಅವರ ಬೆಂಬಲಿಗರು ಬಿಜೆಪಿಯ ಇತರ ನಾಯಕರನ್ನು ಕಡೆಗಣಿಸುತ್ತಿದ್ದಾರೆ ಎಂಬ ಕೂಗು ಕೇಳಿಬರುತ್ತಿದೆ. ಯತ್ನಾಳ್ ಹಾಗೂ ಜಾರಕಿಹೊಳಿಯವರು, ವಿಜಯೇಂದ್ರ ಅವರು ನಮ್ಮ ನಾಯಕರಲ್ಲ ಎಂದು ಬಹಿರಂಗವಾಗಿಯೇ ಹೇಳಿಕೆಗಳನ್ನು ನೀಡಿದ್ದಾರೆ. ಬಿಜೆಪಿಯಿಂದ ನಿರ್ದಿಷ್ಟ ಅಂತರ ಕಾಯ್ದುಕೊಳ್ಳುತ್ತಿರುವ ಈ ನಾಯಕರು, ಇತ್ತೀಚೆಗೆ ವಿಧಾನಸೌಧದ ಮುಂದೆ ನಡೆದ ಮುಡಾ ವಿಚಾರದ ಪ್ರತಿಭಟನೆಯಲ್ಲಿ ಕಾಣಿಸಿಕೊಂಡಿರಲಿಲ್ಲ. ಅದೇ ದಿನ, ಬೆಂಗಳೂರಿನಲ್ಲಿ ಯತ್ನಾಳ್, ರಮೇಶ್ ಜಾರಕಿಹೊಳಿ, ಕುಮಾರ್ ಬಂಗಾರಪ್ಪ ಅವರು ಸಭೆ ಸೇರಿದ್ದರು.
ಅದೇ ದಿನ ಎರಡು ಸಭೆಗಳು ನಡೆದಿವೆ. ಒಂದು ಸಭೆಯು ಈಶ್ವರಪ್ಪ ಮನೆಯಲ್ಲಿ ಒಂದು ಸಭೆ ನಡೆದರೆ, ಮತ್ತೊಂದು ಸಭೆಯ ಕುಮಾರ್ ಬಂಗಾರಪ್ಪನವರ ಮನೆಯಲ್ಲಿ ನಡೆದಿದೆ. ಅಲ್ಲಿಗೆ, ಈಗಾಗಲೇ ಪಕ್ಷದಿಂದ ಉಚ್ಛಾಟನೆಗೊಂಡಿರುವ ಈಶ್ವರಪ್ಪನವರ ಬೆಂಬಲ, ಈ ಬಿಜೆಪಿ ಭಿನ್ನಮತೀಯರಿಗೆ ಇದೆ ಎಂದು ಹೇಳಲಾಗಿದೆ. ಈಶ್ವರಪ್ಪನವರ ಬಾಹ್ಯ ಬೆಂಬಲ?ನಾಲ್ಕೈದು ದಶಕಗಳಿಂದಲೂ ಪಕ್ಷಕ್ಕೆ ನಿಷ್ಠೆಯಿಂದ ದುಡಿದಿದ್ದರೂ ತಮ್ಮನ್ನು ಪಕ್ಷದಿಂದ ಹೊರಹಾಕಿದ್ದಾರೆ ಎಂಬ ಮುನಿಸು ಬಿಜೆಪಿ ಹೈಕಮಾಂಡ್ ಮೇಲೆ ಮಾಜಿ ಸಚಿವ ಈಶ್ವರಪ್ಪನವರಿಗೆ ಇರುವುದು ಗೌಪ್ಯವಾಗೇನೂ ಉಳಿದಿಲ್ಲ. ಅತ್ತ ಅವರು, ಪ್ರತ್ಯೇಕವಾಗಿ ರಾಯಣ್ಣ ಚೆನ್ನಮ್ಮ ಬ್ರಿಗೇಡ್ ಕಟ್ಟಲು ತಯಾರಿ ನಡೆಸಿದ್ದಾರೆ. ಮತ್ತೊಂದು ಕಡೆ, ರಮೇಶ್ ಜಾರಕಿಹೊಳಿಯವರು ಸಹ ಅದಕ್ಕೆ ಬೆಂಬಲ ಸೂಚಿಸಿದ್ದಾರೆಂದು ಮಾಧ್ಯಮಗಳು ವರದಿ ಮಾಡಿವೆ.
ಇವರ ಜೊತೆಗೆ, ವಿಜಯೇಂದ್ರ ಅವರ ನಾಯಕತ್ವದ ವಿರುದ್ಧ ಸೆಟೆದು ನಿಂತಿರುವ ಹಲವಾರು ಬಿಜೆಪಿ ನಾಯಕರು ರಮೇಶ್ ಜಾರಕಿಹೊಳಿ, ಈಶ್ವರಪ್ಪನವರ ಜೊತೆಗೆ ಕೈ ಜೋಡಿಸಿದ್ದಾರೆನ್ನಲಾಗಿದೆ. ಯತ್ನಾಳ್ ಕೂಡ ಈ ತಂಡದಲ್ಲಿ ಪ್ರಮುಖ ಪಾತ್ರ ವಹಿಸಿರುವುದು ಗೌಪ್ಯವಾಗೇನೂ ಉಳಿದಿಲ್ಲ. ಆದರೆ ಇವರ ಜೊತೆಗೆಯಲ್ಲಿ ಪ್ರತಾಪ್ ಸಿಂಹ, ಬಿಪಿ ಹರೀಶ್, ರಾಜೂಗೌಡ ಮುಂತಾದವರು ಕಾಣಿಸಿಕೊಂಡಿರುವದು ಹಾಗೂ ಈ ತಂಡಕ್ಕೆ ಈಗ ಸಿದ್ದೇಶ್ವರ ಅವರು ಪದಾರ್ಪಣೆ ಮಾಡಿರುವುದು ಕೊಂಚ ಅಚ್ಚರಿಯನ್ನುಂಟುಮಾಡಿದೆ.

Dr. Dhananjaya Sarji ಕ್ರೀಡೆಯಿಂದ ದೈಹಿಕ,ಮಾನಸಿಕ ಆರೋಗ್ಯ ವೃದ್ಧಿ- ಡಾ.ಧನಂಜಯ ಸರ್ಜಿ

0

Dr. Dhananjaya Sarji ಕ್ರೀಡೆಯಿಂದ ದೈಹಿಕ ಮತ್ತು ಮಾನಸಿಕ ಆರೋಗ್ಯ ವೃದ್ಧಿ : ಡಾ.ಧನಂಜಯ ಸರ್ಜಿ
ಶಿವಮೊಗ್ಗ, ಸೆ .29 (ಕರ್ನಾಟಕ ವಾರ್ತೆ)
ಕ್ರೀಡೆಯಿಂದ ದೈಹಿಕ ಮತ್ತು ಮಾನಸಿಕ ಆರೋಗ್ಯ ವೃದ್ದಿಯಾಗುತ್ತದೆ. ಆದ್ದರಿಂದ ಯುವಜನತೆ ಸೇರಿತೆ ನಾವೆಲ್ಲ ಕ್ರೀಡೆಯನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು
ವಿಧಾನ ಪರಿಷತ್ ಶಾಸಕರಾದ ಡಾ.ಧನಂಜಯ ಸರ್ಜಿ ಕರೆ ನೀಡಿದರು.
ಜಿಲ್ಲಾಡಳಿತ ಜಿಲ್ಲಾ ಪಂಚಾಯತ್ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಯೋಗದಲ್ಲಿ ಸೆ.29 ರಂದು ನೆಹರು ಒಳಾಂಗಣ ಕ್ರೀಡಾಂಗಣದಲ್ಲಿ ಏರ್ಪಡಿಸಲಾಗಿದ್ದ 2024-25 ನೇ ಸಾಲಿನ ಬೆಂಗಳೂರು ಗ್ರಾಮಾಂತರ ವಿಭಾಗ ಮಟ್ಟದ ದಸರಾ ಕ್ರೀಡಾಕೂಟವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕ್ರೀಡೆಯಿಂದ ದೈಹಿಕ ಮತ್ತು ಮಾನಸಿಕ ಆರೋಗ್ಯ ವೃದ್ದಿಯಾಗುವುದಲ್ಲದೆ, ಪರಿಪೂರ್ಣ ವಿದ್ಯೆಯ ಹೊರತಾಗಿ ಅತ್ಯುನ್ನತ ಸಾಧನೆಗೊಂದು ಅವಕಾಶ ಲಭ್ಯವಿದೆ. ಹಾಗಾಗಿ ಯುವ ಜನತೆ ದೈನಂದಿನ ಜೀವನದ ಶೈಲಿಯಲ್ಲಿ ಕ್ರೀಡೆ ಅಳವಡಿಸಿಕೊಳ್ಳುವುದು ಅಗತ್ಯ ಎಂದು ಹೇಳಿದರು.
Dr. Dhananjaya Sarji ಶಿವಮೊಗ್ಗ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯು ಈ ವಿಭಾಗದಲ್ಲಿ ಬಾಡ್ಮಿಂಟನ್ ,ಈಜು, ಟೆನ್ನಿಸ್ , ಹಾಕಿ, ಜುಡೋ ಮತ್ತು ಯೋಗ ಸ್ಪರ್ಧೆಗಳನ್ನು ನಗರದ ಒಳಾಂಗಣ ಕ್ರೀಡಾಂಗಣ, ಕ್ರೀಡಾ ಸಂಕೀರ್ಣ ಮತ್ತು ವಾಜಪೇಯಿ ಬಡಾವಣೆಯಲ್ಲಿ ಆಯೋಜಿಸಲಾಗಿತ್ತು.
ಬೆಂಗಳೂರು ಗ್ರಾಮಾಂತರ, ಕೋಲಾರ, ರಾಮನಗರ, ಚಿತ್ರದುರ್ಗ, ತುಮಕೂರು, ರಾಮನಗರ, ಚಿಕ್ಕ ಬಳ್ಳಾಪುರ ಜಿಲ್ಲೆಯ ಸುಮಾರು 600 ಕ್ಕೂ ಹೆಚ್ಚು ಸ್ಪರ್ಧಾಳುಗಳು ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ಯವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ರೇಖ್ಯಾನಾಯ್ಕ, ಹಿರಿಯ ಯೋಗ ತರಬೇತುದಾರಾದ ವನಶ್ರಿ, ಮಂಜಪ್ಪ ,ಕ್ರೀಡಾಪಟುಗಳು, ಕ್ರೀಡಾಸಕ್ತರು ಹಾಜರಿದ್ದರು.

Bhadra Dam ಸೆ.30 ರಿಂದ ಭದ್ರಾ ನದಿ ಪಾವಿತ್ರ್ಯತೆ ರಕ್ಷಣೆ ಸಂದೇಶ ಪಾದಯಾತ್ರೆ ಆರಂಭ

0

Bhadra Dam ರಾಜ್ಯದ ೩೦ ನದಿಗಳ ಪೈಕಿ ೧೭ ನದಿಗಳು ಅತ್ಯಂತ ಕಲುಷಿತಗೊಂಡು ಅತೀ ಹೆಚ್ಚು ಮಾಲಿನ್ಯವಾಗಿರುವ ನದಿಗಳ ಪೈಕಿ ಭದ್ರಾ ನದಿಯೂ ಒಂದಾಗಿದೆ. ಆದ್ದರಿಂದ ಜಲಜಾಗೃತಿ ಮತ್ತು ಜನ ಜಾಗೃತಿ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ಪರಿಸರ ತಜ್ಞ ಪ್ರೊ. ಬಿ ಎಂ. ಕುಮಾರಸ್ವಾಮಿ ವಿಷಾದ ವ್ಯಕ್ತಪಡಿಸಿದರು.
ಅವರು ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿ, ಕಳೆದ ವರ್ಷ ನಿರ್ಮಲ ತುಂಗಾ ಅಭಿಯಾನ ಆರಂಭಿಸಿ ಗಾಜನೂರಿನಿಂದ ಪಾದಯಾತ್ರೆ ಮಾಡಿ ಜನರಲ್ಲಿ ಜಾಗೃತಿ ಮೂಡಿಸಿ ಸರಕಾರದ ಕಣ್ಣು ತೆರೆಸಿದ್ದೇವೆ. ತುಂಗಾ ನದಿಯ ತೀರದ ಬಹಳಷ್ಟು ಭಾಗದಲ್ಲಿ ಮಾಲಿನ್ಯ ತಡೆಯುವ ಅಭಿವೃದ್ದಿ ಯೋಜನೆಯ ಯಶಸ್ಸು ಕಂಡಿದ್ದೇವೆ. ಈವರ್ಷ ನಿರ್ಮಲ ಭದ್ರಾ ಅಭಿಯಾನವನ್ನು ಕೈಗೆತ್ತಿಕೊಂಡಿದ್ದೇವೆ.

ಕುಡಿಯಲು ಯೋಗ್ಯವಲ್ಲದ ನದಿಗಳು:

Bhadra Dam ಕೇಂದ್ರ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯು ೨೦೧೯ ರಿಂದ ೨೦೨೧ ರವರೆಗೆ ದೇಶದಲ್ಲಿ ೬೧೭ ನದಿಗಳ ಅಧ್ಯಯನ ಮಾಡಿದೆ. ರಾಜ್ಯದಲ್ಲಿ ೩೦ ನದಿಗಳ ಅಧ್ಯಯನ ನಡೆಸಿ ಅದರಲ್ಲಿ ೧೭ ನದಿಗಳು ಕಲುಷಿತವಾಗಿರುವ ಪೈಕಿ ತುಂಗಾ, ಭದ್ರಾ ಹಾಗೂ ತುಂಗಭದ್ರಾ ಮೂರು ನದಿಗಳು ಅತೀ ಹೆಚ್ಚು ಮಾಲಿನ್ಯ ಹೊಂದಿದ ನದಿಗಳೆಂದು ಹೇಳಿದೆ. ಅಂಕಿ ಅಂಶಗಳ ಪ್ರಕಾರ ನೀರಿನಲ್ಲಿ ಬಿಓಡಿ ೩ ಎಂಜಿ ಗಳಿದ್ದರೆ ಶುದ್ದ ಕುಡಿಯುವ ನೀರೆಂದು ಹೇಳಲಾಗುತ್ತದೆ. ಆದರೆ ಭದ್ರಾ ನದಿಯು ನಗರದ ಕಾರ್ಖಾನೆಗಳ ಮಾಲಿನ್ಯ ಸ್ಥಗಿತವಾಗಿದ್ದರೂ ನಗರ ಪ್ರದೇಶದ ಕೊಳಕಿನಿಂದಾಗಿ ಹೊಳೆಹೊನ್ನೂರು ವರೆಗೆ ಬಿಓಡಿ ೭ ಎಂಜಿ ಮಾಲಿನ್ಯವಾಗಿದೆ. ತುಂಗಾ ನದಿಯು ಶಿವಮೊಗ್ಗದ ವರೆಗೆ ಬಿಓಡಿ ೬ ಎಂಜಿ, ತುಂಗಭದ್ರಾ ನದಿಯು ಕೂಡ್ಲಿಯಿಂದ ಮೈಲಾರದ ವರೆಗೆ ಬಿಓಡಿ ೬.೨ ಎಂಜಿ ಗಳಾಗಿದೆ. ಈ ಕಲುಷಿತ ನೀರು ಸೇವಿಸಿದರೆ ಚರ್ಮ ರೋಗ ಕರಳು ರೋಗ, ಜಾಂಡಿಸ್ ಮುಂತಾದ ರೋಗಳಿಗೆ ತುತ್ತಾಗುತ್ತೇವೆ. ಇದರಿಂದಾಗಿ ಜನರಲ್ಲಿ ಜಾಗೃತಿ ಅರಿವು ಮೂಡಿಸಲು ಎಲ್ಲರ ಸಹಕಾರ ಬೇಕಾಗಿದೆ ಎಂದರು.
ನದಿಗಳಿಗೆ ನಗರ ಪ್ರದೇಶದ ತ್ಯಾಜ್ಯ ಹರಿಯ ಬಿಡಲಾಗುತ್ತಿದೆ:
ರಾಷ್ಟ್ರೀಯ ಮಾಲಿನ್ಯ ಮಂಡಳಿಯಡಿ ಸೇವೆ ಸಲ್ಲಿಸಿದ ತಜ್ಞರು ಹಾಗೂ ನಿವೃತ್ತ ಪಾಂಶುಪಾಲ ಶ್ರೀಪತಿ ಈಗಾಗಲೆ ಅಧ್ಯನ ಮಾಡಿ ಮಂಡಳಿಗೆ ವರದಿ ನೀಡಿದ್ದೇವೆ. ಕೈಗಾರಿಕೆಗಳಿಗಿಂತ ನಗರದ ಕೊಳಕಿನಿಂದಾಗಿ ನದಿ ಹಾಳಾಗಿದೆ. ನಗರ ವ್ಯಾಪ್ತಿಯ ಸೀಗೇಬಾಗಿ ಮತ್ತು ಜಟ್‌ಪಟ್ ನಗರದಲ್ಲಿ ಶುದ್ದೀಕರಣ ಎಸ್‌ಟಿಪಿ ಘಟಕಗಳು ಸ್ಥಗಿತಗೊಂಡಿದೆ. ಉಜ್ಜನಿಪುರದಲ್ಲಿ ಎಸ್ಪಿಆರ್ ಕೆಲಸ ನಡೆಯುತ್ತಿದೆಯಾದರೂ ಸಾಮರ್ಥ್ಯ ಕಡಿಮೆ. ಮುಖ್ಯ ಬಸ್ ನಿಲ್ದಾಣದ ಬಳಿಯ ವೆಟ್ ವೆಲ್ ಕಾರ್ಯಾರಂಭ ಮಾಡಿಲ್ಲ. ಇದರಿಂದಾಗಿ ನದಿಗಳಿಗೆ ತ್ಯಾಜ್ಯಗಳಿಂದ ಮಾಲಿನ್ಯ ಹೊಂದಿದೆ ಎಂದು ವಿವರಿಸಿದರು.