Kasturi Rangan Comittee Report ಜುಲೈನಲ್ಲಿ ಕೇಂದ್ರ ಸರ್ಕಾರ 6ನೇ ಕರಡು ಅಧಿಸೂಚನೆ ಹೊರಡಿಸಿತ್ತು
ಪಶ್ಚಿಮ ಘಟ್ಟದಲ್ಲಿ ಪರಿಸರ ಸೂಕ್ಷ್ಮ ಪ್ರದೇಶವನ್ನು ಘೋಷಿಸುವ ಬಗ್ಗೆ ಡಾ. ಕಸ್ತೂರಿ ರಂಗನ್ ವರದಿ ಆಧರಿಸಿದ ಕರಡು ಅಧಿಸೂಚನೆಯನ್ನು ತಿರಸ್ಕರಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ.
ಗುರುವಾರ (ಸೆ.26) ಸಚಿವ ಸಂಪುಟ ಸಭೆ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಕಾನೂನು ಸಚಿವ ಹೆಚ್.ಕೆ ಪಾಟೀಲ್ ಅವರು “ಈ ಹಿಂದಿನ ಬಿಜೆಪಿ ಸರ್ಕಾರ ವರದಿಯನ್ನು ತಿರಸ್ಕರಿಸಿ ಕೈಗೊಂಡಿದ್ದ ನಿರ್ಣಯವನ್ನು ಮುಂದುವರೆಸಲು ತೀರ್ಮಾನಿಸಲಾಗಿದೆ” ಎಂದಿದ್ದಾರೆ.
Kasturi Rangan Comittee Report ಪಶ್ಚಿಮ ಘಟ್ಟದಲ್ಲಿ ಪರಿಸರ ಸೂಕ್ಷ್ಮ ಪ್ರದೇಶವನ್ನು ಘೋಷಿಸಲು ಕೇಂದ್ರ ಸರ್ಕಾರ ಜುಲೈ 31, 2024ರಂದು ಆರನೇ ಕರಡು ಅಧಿಸೂಚನೆ ಹೊರಡಿಸಿತ್ತು. 60 ದಿನಗಳಲ್ಲಿ ಆಕ್ಷೇಪಣೆ ಮತ್ತು ಸಲಹೆಗಳನ್ನು ಸಲ್ಲಿಸಲು ರಾಜ್ಯಗಳಿಗೆ ಸೂಚಿಸಿತ್ತು.
ಕಸ್ತೂರಿ ರಂಗನ್ ವರದಿಯು ಕರ್ನಾಟಕದ 20,668 ಚದರ ಕಿ.ಮೀ ಪ್ರದೇಶವನ್ನು ಪರಿಸರ ಸೂಕ್ಷ್ಮ ಎಂದು ಗುರುತಿಸಿತ್ತು. ಇದರಲ್ಲಿ ಆಗಿದ್ದ ಕೆಲ ಲೋಪಗಳನ್ನು ತಿದ್ದುಪಡಿ ಮಾಡಿ, 19, 252.70 ಚದರ ಕಿ.ಮೀ ಪ್ರದೇಶವನ್ನು ಸೂಕ್ಷ್ಮ ಎಂದು ಪರಿಗಣಿಸಲಾಗಿತ್ತು. ರಾಜ್ಯದ ವಿವಿಧ ಅರಣ್ಯ ಕಾನೂನುಗಳ ಅಡಿಯಲ್ಲಿ ಈಗಾಗಲೇ 16,164 ಚದರ ಕಿ.ಮೀ ಅರಣ್ಯ ಪ್ರದೇಶವನ್ನು ಸಂರಕ್ಷಿಸಲಾಗುತ್ತಿದೆ. ಆದ್ದರಿಂದ ಕರಡು ಅಧಿಸೂಚನೆ ತಿರಸ್ಕರಿಸಲಾಗಿದೆ ಎಂದು ಹೆಚ್.ಕೆ ಪಾಟೀಲ್ ವಿವರಿಸಿದ್ದಾರೆ.
Kasturi Rangan Comittee Report ಕಸ್ತೂರಿ ರಂಗನ್ ವರದಿ ತಿರಸ್ಕಾರ: ಸಚಿವ ಸಂಪುಟ ಸಭೆಯಲ್ಲಿ ನಿರ್ಧಾರ
HS Sundaresh ಸೂಡಾದಿಂದ 16 ವರ್ಷಗಳ ಮಾಸ್ಟರ್ ಪ್ಲಾನ್, ಅಪಾರ್ಟ್ ಮೆಂಟ್ ನಿರ್ಮಾಣ
HS Sundaresh ಶಿವಮೊಗ್ಗ-ಭದ್ರಾವತಿಯ ಅಭಿವೃದ್ಧಿಗಾಗಿ ಮುಂದಿನ 16 ವರ್ಷಕ್ಕೆ ಶಿವಮೊಗ್ಗ ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರ ಇಜಿಎಸ್ ಸಂಸ್ಥೆಯ ಮೂಲಕ 2041 ರವರೆಗೆ ಅನ್ವಯವಾಗುವಂತೆ ಮಾಸ್ಟರ್ ಪ್ಲಾನ್ ತಯಾರಿಸುತ್ತಿದೆ.
ಈ ಕುರಿತು ಸುದ್ದಿಗೋಷ್ಠಿ ನಡೆಸಿದ ಸೂಡ ಅಧ್ಯಕ್ಷ ಹೆಚ್ ಎಸ್ ಸುಂದರೇಶ್, ಮುಂದಿನ 16 ವರ್ಷಕ್ಕೆ ಜನ ಸಂಖ್ಯೆ ಎಷ್ಟಾಗಲಿದೆ ಎಂದು ಅಂದಾಜಿಸಲಾಗಿದೆ. 10 ಲಕ್ಷ ಜನ ಹೆಚ್ಚಾಗಲಿದೆ ಎಂದು ನಿರೀಕ್ಷಿಸಲಾಗಿದ್ದು. 7½ ಶಿವಮೊಗ್ಗ 2½ ಲಕ್ಷ ಜನ ಭದ್ರಾವತಿ ನಗರದಲ್ಲಿ ಹೆಚ್ಚಾಗುವ ನಿರೀಕ್ಷೆ ಇದೆ. ಶಿಕ್ಷಣಕ್ಕೆ ಒತ್ತುಕೊಡುವ ನಿಟ್ಟಿನಲ್ಲಿ ಶಾಲಾ ಕಾಲೇಜುಗಳ ಅಭಿವೃದ್ಧಿಗೆ, ಆರೋಗ್ಯದಲ್ಲಿ ಆಸ್ಪತ್ರೆಗೆ ಒತ್ತು ನೀಡಲಾಗಿದೆ. ರಸ್ತೆಗಳಿಗೆ ಒತ್ತು ನೀಡಲಾಗಿದೆ. ಯಾವ ಯಾವ ಏರಿಯಾ ಒಳಪಡುವಂತಹದ್ದಲ್ಲಿ ದೊಡ್ಡರಸ್ತೆ ಯುಜಿಡಿ ರಚಿಸಲಾಗುತ್ತಿದೆ ಎಂದರು.
ರಿಂಗ್ ರಸ್ತೆ 12 ವರ್ಷ ಹಿಂದೆ ಆಗಿದೆ. ರೈಲ್ವೆ ಟ್ರಾಕ್ ನಲ್ಲಿ ವ್ಯವಸ್ಥೆ ಇರಲಿಲ್ಲ. ಈಗ ಸಮಗ್ರ ರಸ್ತೆ, ಒಳಚರಂಡಿ ಮತ್ತು ಮೂಲಭೂತ ಸೌಕರ್ಯಗಳನ್ನ ನಿರ್ಮಿಸಿಕೊಡಲಾಗುತ್ತಿದೆ. ವಾಜಪೇಯಿ ಲೇಔಟ್ ನಲ್ಲಿ 200 ಅಡಿ ರಸ್ತೆ ನಿರ್ಮಿಸಲಾಗುವುದು. ಮಾಸ್ಟರ್ ಪ್ಲಾನ್ ನಲ್ಲಿ ರಿಂಗ್ ರಸ್ತೆ, ಪ್ರವಾಸೋದ್ಯಮ, ದೇವಸ್ಥಾನ, ಜೋಗಕ್ಕೆ ಒತ್ತು ನೀಡಲಾಗುತ್ತಿದೆ ಎಂದರು.
ಉದ್ಯಾನವನದ ನಿರ್ಮಾಣವೂ ಇದರಲ್ಲಿ ಒಳಗೊಂಡಿದೆ. ಹೊಳೆ ಹನಸವಾಡಿ, ಜ್ಞಾನದೀಪ ಶಾಲೆಕಡೆ ಮಾಸ್ಟರ್ ಪ್ಲಾನ್ ಮಾಡಲಾಗುವುದು. ಊರಗಡೂರಿನಲ್ಲಿ ನಿರ್ಮಾಣಗೊಂಡಿರುವ ನಿವೇಶನಗಳಿಗೆ 7-8 ಸಾವಿರ ಅರ್ಜಿ ಬಂದಿದೆ. 437 ಸೈಟ್ ಇದೆ.. 60 ಎಕರೆಯಲ್ಲಿ ಸೈಟ್
HS Sundaresh ನಿರ್ಮಿಸಲಾಗಿದೆ. 179 ಸೈಟ್ ನಿವೇಶನಗಳಿಗೆ ನೀಡಿರುವ ರೈತರಿಗೆ ನೀಡಲಾಗುತ್ತಿದೆ ಎಂದರು.
ಊರುಗಡೂರಿನ ನಿವೇಶನದಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರಿ ನೌಕರಿಗೆ 9% ಜನರಲ್ ಗೆ 50% ಪತ್ರಕರ್ತರಿಗೆ ರಾಷ್ಟ್ರಪ್ರಶಸ್ತಿ ಪಡೆದವರಿಗೆ 5% ಅಂಗ ವಿಕಲರಿಗೆ 3% ಹಿರಿಯ ನಾಗರಿಕರಿಗೆ, ಎಸ್ ಸಿ, ಎಸ್ಟಿ ಸೇರಿದಂತೆ ಮೀಸಲಾತಿ ನೀಡಲಾಗುತ್ತಿದೆ. ಅಪಾರ್ಟ್ ಮೆಂಟ್ ಮಾಡಲಾಗುತ್ತಿದೆ. ಊರುಗಡೂರಿನಲ್ಲಿ 4 ಎಕರೆಯಲ್ಲಿ ಅಪಾರ್ಟ್ ಮೆಂಟ್ ಮಾಡಲಾಗುತ್ತಿದೆ. ಸೋಮಿನಕೊಪ್ಪದಲ್ಲಿ 1½ ಎಕರೆ ಯಲ್ಲಿ ನಿರ್ಮಿಸಲಾಗುತ್ತಿದೆ ಎಂದರು.
156 ಸರ್ವೆನಂಬರ್ ಸೋಗಾನೆಯಲ್ಲಿ 100 ಎಕರೆ ಜಮೀನು ನೋಡಲಾಗಿದೆ. ಇನ್ನು 14 ದಿನಗಳಲ್ಲಿ ಸಭೆ ಕರೆದು ನಿವೇಶನ ನಿರ್ಮಿಸಲಾಗುತ್ತಿದೆ. ನಿದಿಗೆ 3 ಎಕರೆ ಜಾಗದಲ್ಲಿ ಬಡಾವಣೆ ಮಾಡಲಾಗುವುದು. 30 ಪಾರ್ಕ್ ಗಳನ್ನು ಭದ್ರಾವತಿ ಶಿವಮೊಗ್ಗದಲ್ಲಿ ಅಭಿವೃದ್ಧಿ 15 ಕೆರೆ ಅಭಿವೃದ್ಧಿ ಪಡಿಸಲಾಗುವುದು.
ವಾಜಪೇಯಿ ಲೇಔಟ್ ನ ಅಕ್ರಮ ಹಂಚಿಕೆ ರದ್ದು ಮಾಡಿದ್ದು, ಶೀಘ್ರದಲ್ಲಿಯೇ ಮನೆಗಳು ನಿರ್ಮಾಣವಾಗಲಿವೆ. . ಮನೆ ಕಟ್ಟದವರಿಗೆ ನೊಟೀಸ್ ನೀಡಲಾಗಿದೆ. 2300 ನಿವೇಶನದಲ್ಲಿ ಮನೆಗಳನ್ನು ಕಟ್ಟಲು ಸೂಚಿಸಲಾಗಿದೆ ಮತ್ತು ಇವರಿಗೆ ಸಮಯ ನೀಡಲಾಗಿದೆ ಎಂದರು.
. ಶಿವಮೊಗ್ಗ ಭದ್ರಾವತಿಯಲ್ಲಿ ಸಸಿ ನೆಡುವ ಕಾರ್ಯಕ್ರಮಕ್ಕೆ ಹೆಚ್ಚು ಒತ್ತುನೀಡಾಗುತ್ತಿದೆ ವಾಜಪೇಯಿ ಲೇಔಟ್ ನಲ್ಲಿ 1500 ಗಿಡ ನೆಡಲಾಗಿದೆ ಎಂದರು.
ಭದ್ರಾವತಿಯಲ್ಲಿ 34 ಎಕರೆ ಜಾಗವಿದೆ. ಅಲ್ಲಿನವೇಶನ,ಗೋಪಿಶೆಟ್ಟಿಕೊಪ್ಪದಲ್ಲಿ ಜಾಗ ನಿಗದಿ ಪಡಿಸಲಾಗಿದ ಎಂದರು. ಸುದ್ದಿಗೋಷ್ಠಿಯಲ್ಲಿ ರವಿಕುಮಾರ್, ರೇಣುಕಮ್ಮ, ವಿಶ್ವನಾಥ್ ಮುದ್ದಜ್ಜಿ ಉಪಸ್ಥಿತರಿದ್ದರು.
Hosanagara News ಇಸ್ಪೀಟ್ ಅಡ್ಡೆಗೆ ಪೊಲೀಸರ ದಾಳಿ – 11 ಜನರ ಬಂಧನ 17,640 ರೂಪಾಯಿ ವಶ
Hosanagara News ಹೊಸನಗರ ತಾಲ್ಲೂಕು ಮಾರುತೀಪುರ ಗ್ರಾಮ ಪಂಚಾಯಿತಿಯ ಹಳೆಬಾಣಿಗ ರಸ್ತೆಯ ಪೊದೆಯೊಂದರ ಬಳಿ ಇಸ್ಪೀಟ್ ಆಟದಲ್ಲಿ ತೊಡಗಿದ್ದ ಬಗ್ಗೆ ಮಾಹಿತಿ ದೊರೆತ ಹೊಸನಗರ ಪೊಲೀಸ್ ಸರ್ಕಲ್ ಇನ್ಸ್‌ಪೆಕ್ಟರ್ ಗುರಣ್ಣ ಎಸ್. ಹೆಬ್ಬಾಳ್ ತಮ್ಮ ಸಿಬ್ಬಂದಿಗಳಾದ ಪಿಎಸ್ಐ ಎಸ್. ಜಿ. ಪಾಟೀಲ್, ಈರೇಶ್, ಮಾಯಪ್ಪ, ರಂಜಿತ್, ಸುನೀಲ್, ಮಹೇಶ್, ಗಂಗಪ್ಪ ಬಟೋಲಿರವರೊಂದಿಗೆ ದಾಳಿ ನಡೆಸಿ 11 ಜನರನ್ನು ಬಂಧಿಸಿದ್ದಾರೆ.
Hosanagara News ಇಸ್ಪೀಟ್ ಆಟದಲ್ಲಿ ತೊಡಗಿಸಿಕೊಂಡಿದ್ದ ಇಸ್ಪೀಟ್ ಎಲೆಗಳೊಂದಿಗೆ 17,640 ರೂಪಾಯಿ ನಗದು ಹಣವನ್ನು ವಶಕ್ಕೆ ಪಡೆದು, ಇಸ್ಪೀಟ್ ಆಟದಲ್ಲಿ ತೊಡಗಿದ್ದ ಗ್ರಾಮದ 11 ಜನರನ್ನು ಬಂಧಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.
Shikaripura News ಶಿಕಾರಿಪುರ ಪುರಸಭೆ ಮುಖ್ಯಾಧಿಕಾರಿ ವಜಾಕ್ಕೆ ಗೆಳೆಯರ ಬಳಗ ಆಗ್ರಹ
Shikaripura News ಶಿಕಾರಿಪುರ ಪುರಸಭೆಯ ಮೀಟಿಂಗ್ ಹಾಲ್ ನಲ್ಲಿ ನಾಗರಿಕ ಸೇವಾ ನಿಯಮಗಳನ್ನು ಉಲ್ಲಂಘಿಸಿ ಕರ್ತವ್ಯನಿರತ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಕೆಲಸದ ವೇಳೆ ಪೌರಕಾರ್ಮಿಕ ದಿನದ ನೆಪದಲ್ಲಿ ವಾದ್ಯಗೋಷ್ಠಿ ನಡೆಸಿ, ದಿನವಿಡೀ ಡಾನ್ಸ್ ಮಾಡಿ, ಕೂಗಾಡುತ್ತ್ತಾ ಮೋಜಿ, ಮಸ್ತಿ ಮಾಡಿದ್ದು, ಇವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂದು ರಾಜ್ಯ ಗೆಳೆಯರ ಬಳಗ ಆಗ್ರಹಿಸಿದೆ.
ಶುಕ್ರವಾರ ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಳದ ರಾಜ್ಯಾಧ್ಯಕ್ಷ ಅನಿಲ್ ಕುಂಚಿ, ಕರ್ತವ್ಯಲೋಪ ಎಸಗಿರುವ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಬೇಕು. ಪುರಸಭೆ ಮುಖ್ಯಾಧಿಕಾರಿ ಭರತ್ ಇದಕ್ಕೆಲ್ಲ ಕಾರಣರಾಗಿದ್ದು, ಅವರನ್ನು ವಜಾ ಮಾಡಬೇಕು. ವಾಣಿಜ್ಯ ಮಳಿಗೆ ಹಂಚಿಕೆಯಲ್ಲೂ ಭ್ರಷ್ಟಾಚಾರ ನಡೆದಿದ್ದು, ಸೂಕ್ತ ತನಿಖೆ ನಡೆಸಬೇಕೆಂದು ಆಗ್ರಹಿಸಿದರು.
ಈಗ ರಾಜ್ಯಾದ್ಯಂತ ಸಾಮಾಜಿಕ ಜಾಲತಾಣದಲ್ಲಿ, ಪುರಸಭೆಯ ಡಾನ್ಸ್ ಹರಿದಾಡುತ್ತಿದ್ದು, ಈ ವಿಡಿಯೋಗಳನ್ನು ವೀಕ್ಷಿಸಿದ ಸಾರ್ವಜನಿಕರು ಪುರಸಭೆಯ ಕಾರ್ಯವೈಖರಿ ನೋಡಿ ಛೀಮಾರಿ ಹಾಕಿದ್ದಾರೆ. ಕೆಲವು ದಿನಗಳ ಹಿಂದೆ, ಶಿಕಾಲಪುರ ಪುರಸಭೆಗೆ ಸೇರಿದ ವಾಣಿಜ್ಯ ಮಆರೆಗಳ ಹರಾಜು ಪ್ರಕ್ರಿಯೆಯಲ್ಲೂ ಭ್ರಷ್ಟಾಚಾರದ ವಿಷಯವನ್ನು ಎಲ್ಲಾ ಸುದ್ದಿ ಮಾಧ್ಯಮಗಳು, ಪತ್ರಿಕೆಗಳು, ಟಿವಿಗಳಲ್ಲಿ, ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿಯಾಗಿದೆ. ಇದಾದ ನಾಲ್ಕು ದಿನಗಳಲ್ಲಿಯೇ ಮತ್ತೊಂದು ಕರ್ಮಕಾಂಡ ನೋಡುವಂತೆ ಪರಿಸ್ಥಿತಿ ಶಿಕಾರಿಪುರ ಜನತೆಗೆ ಬಂದಿದೆ ಎಂದರು.
ಪುರಸಭೆಯಲ್ಲಿ ಇ ಸ್ವತ್ತಿಗೆ ಅರ್ಜಿ ಹಾಕುವ ನಗರದ ನಾಗರಿಕರಿಗೆ ತೊಂದರೆ ಕೊಡಲಾಗುತ್ತಿದೆ. ಎಲ್ಲಾ ದಾಖಲೆ ಸರಿ ಇದ್ದರೂ ಕೂಡ ವರ್ಷಗಟ್ಟಲೆ ಪುರಸಭೆಗೆ ಅಲೆದಾಡುವಂತಾಗಿದೆ. ಸಂಬಂಧಿಸಿದ ಎಲ್ಲಾ ಕೇಸ್ ವರ್ಕರ್ಸ್‌ಗಳಿಂದ ತೊಂದರೆ ಅನುಭವಿಸಿ ಅವರು ಕೇಳಿದಷ್ಟು ಹಣ ಕೊಡುವ ಪರಿಸ್ಥಿತಿ ಬಂದಿದೆ. ನೂರಾರು ಸಮಸ್ಯೆಗಳ ಆಗರವಾಗಿರುವ ಪುರಸಭೆ ಕಾರ್ಯಾಲಯಕ್ಕೆ ಬರುವ ನಾಗರಿಕರನ್ನು ಹೀನಾಯವಾಗಿ ಕಾಣಲಾಗುತ್ತಿದೆ ಎಂದು ದೂರಿದರು.
Shikaripura News ಶಿಕಾಲಪುರ ಪುರಸಭೆಯ ಸಮಸ್ಯೆಗಳನ್ನು ಮತ್ತು ಭ್ರಷ್ಟ ವ್ಯವಸ್ಥೆಯನ್ನು ಸರಿಪಡಿಸಿ ಬಡವರ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಬೇಕೆಂದು ಅವರು ಮನವಿ ಮಾಡಿದರು.
ಪತ್ರಿಕಾಗೋಷ್ಟಿಯಲ್ಲಿ ಬಳಗದ ರಾಜ್ಯ ಉಪಾಧ್ಯಕ್ಷೆ ಬಿ. ಬಿ. ಆಯಿಷಾ, ಜಿಲ್ಲಾ ಅಧ್ಯಕ್ಷ ಪರಮೇಶ್ವರಪ್ಪ, ಯುವರಾಜ, ಜಯಂತಿ, ಇಮ್ತಿಯಾಜ್, ಹಾಶೀಮ್ ಸಾಬ್, ರವಿ, ವಿಜಯಕುಮಾರ್, ಪುಷ್ಪಾ ಮೊದಲಾದವರಿದ್ದರು.
CM Siddaramaiah ಕೋರ್ಟ್ ಆದೇಶದಂತೆ ಸಿಎಂ ಸಿದ್ಧರಾಮಯ್ಯ ವಿರುದ್ಧ ಎಫ್ ಐ ಆರ್ ದಾಖಲು
CM Siddaramaiah ಮುಡಾ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ವಿರುದ್ಧ ಎಫ್ಐಆರ್ ದಾಖಲಿಸಿ, ತನಿಖೆ ನಡೆಸುವಂತೆ ಲೋಕಾಯುಕ್ತಕ್ಕೆ ಸೂಚಿಸಲಾಗಿತ್ತು. ಅದರಂತೆ ಈಗ ಸಿಎಂ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ.
ನಿನ್ನೆಯಿಂದ ಲೋಕಾಯುಕ್ತ ಹಿರಿಯ ಅಧಿಕಾರಿಗಳ ನೇತೃತ್ವದಲ್ಲಿ ಮುಡಾ ಕೇಸ್ ಸಂಬಂಧ ಕೋರ್ಟ್ ಆದೇಶ ಪಾಲನೆ ಕುರಿತಂತೆ ಮಹತ್ವದ ಸಭೆ ನಡೆಸಲಾಗಿತ್ತು. ಇಂದು ಕೂಡ ಸಿಎಂ ಸಿದ್ಧರಾಮಯ್ಯ ವಿರುದ್ಧ ಎಫ್ಐಆರ್ ದಾಖಲಿಸೋದು ಡೌಟ್ ಎನ್ನಲಾಗಿತ್ತು. ಇದರ ನಡುವೆ ಮುಡಾ ಹಗರಣದಲ್ಲಿ ಕೋರ್ಟ್ ಆದೇಶದಂತೆ ಸಿಎಂ ಸಿದ್ಧರಾಮಯ್ಯ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ.
CM Siddaramaiah ಸ್ನೇಹಮಯಿ ಕೃಷ್ಣ ದೂರಿನ ಮೇರೆಗೆ ಸಿಎಂ ಸಿದ್ದರಾಮಯ್ಯ ಎ1, ಸಿಎಂ ಸಿದ್ದರಾಮಯ್ಯ ಪತ್ನಿ ಪಾರ್ವತಿ ಎ2, ಪತ್ನಿ ಸಹೋದರ ಮಲ್ಲಿಕಾರ್ಜನ್ ಸ್ವಾಮಿ ಎ3, ಜಮೀನು ಮಾರಿದ ದೇವರಾಜು ಎ4 ಹಾಗೂ ಇತರರ ವಿರುದ್ಧ CRPC ಸೆಕ್ಷನ್ ಅಡಿ ದೂರು ದಾಖಲಾಗಿದೆ.
ಮೈಸೂರು ಜಿಲ್ಲಾ ಲೋಕಾಯುಕ್ತ ಎಸ್ಪಿ ಉದೇಶ್ ಹೈಕೋರ್ಟ್ ಮತ್ತು ಜನಪ್ರತಿನಿಧಿಗಳ ನ್ಯಾಯಾಲಯದ ಆದೇಶ ಪ್ರತಿಗಳನ್ನು ಅಧಿಕೃತವಾಗಿ ಪಡೆದುಕೊಂಡು ಲೋಕಾಯುಕ್ತ ಪ್ರಧಾನ ಕಚೇರಿಗೆ ಭೇಟಿ ನೀಡಿ ಹಿರಿಯ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ ಎಫ್ ಐಆರ್ ದಾಖಲಿಸಿದ್ದಾರೆ.
V Somanna ಶಿವಮೊಗ್ಗ- ಮಂಗಳೂರು ಇಂಟರ್‌ಸಿಟಿ ರೈಲಿಗೆ ಮನವಿ: ರೈಲ್ವೆ ಪ್ರಯಾಣಿಕ ನಾಗರಿಕರ ಸಂಘದಿಂದ ಸಚಿವ ಸೋಮಣ್ಣಗೆ ಒತ್ತಾಯ
V Somanna ಶಿವಮೊಗ್ಗ ನಗರದಿಂದ ಅರಸೀಕೆರೆ, ಹಾಸನ, ಸಕಲೇಶಪುರ, ಸುಬ್ರಹ್ಮಣ್ಯ ಮೂಲಕ ಮಂಗಳೂರಿಗೆ ಹೊಸ ರೈಲ್ವೆ ಇಂಟರ್ ಸಿಟಿ ರೈಲು ಬಿಡಬೇಕು. ಇದರಿಂದ ಕೇರಳ, ಕೊಚ್ಚಿನ್, ಗುರುವಾಯೂರು, ಶಬರಿಮಲೆ ದೇವಸ್ಥಾನಕ್ಕೆ ಹೋಗಲು ಅನುಕೂಲವಾಗುತ್ತದೆ. ಶಿವಮೊಗ್ಗದಿಂದ ಮಂಗಳೂರು ನಗರಕ್ಕೆ ಸಂಪರ್ಕ ಸಿಗುತ್ತದೆ ಎಂದು ಶಿವಮೊಗ್ಗದ ರೈಲ್ವೆ ಪ್ರಯಾಣಿಕ ನಾಗರಿಕರ ಸಂಘದಿಂದ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಅವರಿಗೆ ಮನವಿ ಸಲ್ಲಿಸಲಾಯಿತು.
ರೈಲ್ವೆ ನಿಲ್ದಾಣದಲ್ಲಿ ಶಿವಮೊಗ್ಗ ಜಿಲ್ಲಾ ಪ್ರವಾಸಿ ತಾಣ, ಐತಿಹಾಸಿಕ ತಾಣಗಳ ಮಾಹಿತಿ ಕೇಂದ್ರ ತೆರೆಯುವ ಜತೆಯಲ್ಲಿ ಸಾರ್ವಜನಿಕ ಹೆಲ್ಪ್ ಡೆಸ್ಕ್ ಆರಂಭಿಸಬೇಕು. ನಗರದ ರೈಲ್ವೆ ನಿಲ್ದಾಣದಲ್ಲಿ ಶಿವಮೊಗ್ಗದಿಂದ ಹೊರಡುವ ಮತ್ತು ಬರುವ ಎಲ್ಲ ರೈಲ್ವೆ ಕೋಚ್‌ಗಳಲ್ಲಿ ಶಿವಮೊಗ್ಗ ಜಿಲ್ಲಾ ಐತಿಹಾಸಿಕ ಸ್ಥಳಗಳು ಮತ್ತು ಪ್ರವಾಸಿ ಸ್ಥಳಗಳ ಸ್ತಬ್ಧಚಿತ್ರವನ್ನು ಬೋಗಿಗಳಲ್ಲಿ ಅಳವಡಿಸಬೇಕು. ಜಿಲ್ಲೆ ಇತ್ತೀಚಿನ ದಿನಗಳಲ್ಲಿ ಪ್ರವಾಸೋದ್ಯಮ ಕ್ಷೇತ್ರ, ಕೈಗಾರಿಕಾ ಕ್ಷೇತ್ರ ಮತ್ತು ಧಾರ್ಮಿಕ ಕ್ಷೇತ್ರಗಳಲ್ಲಿ ಪ್ರಗತಿ ಸಾಧಿಸುತ್ತಿದೆ. ಇನ್ನು ಪ್ರಗತಿ ಸಾಧಿಸಲು ಅಗತ್ಯ ರೈಲ್ವೆ ಸೌಕರ್ಯಗಳನ್ನು ಶಿವಮೊಗ್ಗ ಜಿಲ್ಲೆ ಮತ್ತು ನಗರಕ್ಕೆ ಒದಗಿಸಲು ಕ್ರಮ ವಹಿಸುವಂತೆ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಶಿವಮೊಗ್ಗ ರೈಲ್ವೆ ಸ್ಟೇ?ನ್‌ನಲ್ಲಿ ೫೦ ಬೆಡ್‌ನ ರೈಲ್ವೆ ಯಾತ್ರಿನಿವಾಸ, ಲಗೇಜ್ ಲಾಕರ್ ಮತ್ತು ಸ್ತ್ರೀಯರಿಗೆ ಪ್ರತ್ಯೇಕ ರೆಸ್ಟ್ ರೂಮ್ ವಿತ್ ಸಿ.ಸಿ. ಟಿ.ವಿ ಕ್ಯಾಮೆರಾ ವ್ಯವಸ್ಥೆ ಕಲ್ಪಿಸಬೇಕು. ೧, ೨ ಮತ್ತು ೩ನೇ ಫ್ಲಾಟ್ ಫಾರಂನಲ್ಲಿ ಮಹಿಳೆ ಫೀಡಿನ್ ಕ್ಯಾಬಿನ್ ಅಳವಡಿಸಬೇಕು. ೨ ಮತ್ತು ೩ ನೇ ಪ್ಲಾಟ್ ಫಾರಂಗೆ ಅನುಗುಣವಾಗಿ ಶೌಚಗೃಹ ಕಟ್ಟಿಸಬೇಕು. ದಿನಕ್ಕೆ ೮,೦೦೦ ಜನರು ರೈಲ್ವೆ ಪ್ರಯಾಣಿಕರು ಶಿವಮೊಗ್ಗದಿಂದ ಬೇರೆ ಬೇರೆ ಸ್ಥಳಗಳಿಗೆ ಪ್ರಯಾಣಿಸುತ್ತಾರೆ. ಅವರಿಗೆ ಅನುಕೂಲವಾಗುವಂತೆ ೨ ಮತ್ತು ೩ನೇ ಫ್ಲಾಟ್ ಫಾರಂಗೆ ಎಕ್ಸ್‌ಲೇಟರ್ ಅಳವಡಿಸಬೇಕು ಎಂದು ಮನವಿ ಮಾಡಿದರು.
Sri Adhichunchanagiri Mahasamsthana Math ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದಲ್ಲಿ ನವರಾತ್ರಿ ಸಂಭ್ರಮ
Sri Adhichunchanagiri Mahasamsthana Math ಶರನ್ನವರಾತ್ರಿ ಉತ್ಸವದ ಪ್ರಯುಕ್ತ ಪ್ರತಿ ವರ್ಷದಂತೆ ಈ ವರ್ಷವೂ ಸಹ ಅಕ್ಟೊಬರ್ 03- 10- 2024 ರಂದು ಶಿವಮೊಗ್ಗ ಶಾಖಾ ಮಠದಲ್ಲಿ ಶ್ರೀ ಕಾಲಭೈರವೇಶ್ವರ ಸ್ವಾಮಿ ಮತ್ತು ಶೀ ಕಾಳಿಕಾಂಬ ದೇವಿಯ ಅಮ್ಮನವರ ಸನ್ನಿಧಿಯಲ್ಲಿ ಶರನ್ನವರಾತ್ರಿ ಮಹೋತ್ಸವವು ಯುಗ ಯೋಗಿ ಪದ್ಮಭೂಷಣ ಪುರಸ್ಕೃತ ಪರಮಪೂಜ್ಯ ಜಗದ್ಗುರು ಶ್ರೀ ಶ್ರೀ ಶ್ರೀ ಡಾ. ಬಾಲಗಂಗಾಧರನಾಥ ಮಹಾಸ್ವಾಮೀಜಿಗಳವರ ದಿವ್ಯಾಶೀರ್ವಾದಗಳೊಂದಿಗೆ, ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪ್ರಧಾನ ಕಾರ್ಯದರ್ಶಿಗಳಾದ ಪೂಜ್ಯ ಶ್ರೀ ಶ್ರೀ ಪ್ರಸನ್ನನಾಥ ಸ್ವಾಮೀಜಿ ಅವರ ದಿವ್ಯ ಸಾನ್ನಿಧ್ಯದಲ್ಲಿ 03/10/2024 ರಿಂದ 12/10/2024 ರವರೆಗೆ ಕಾರ್ಯಕ್ರಮ ನಡೆಯಲಿದ್ದು, ಒಂಬತ್ತು ದಿನಗಳವರೆಗೆ ಶ್ರೀದೇವಿಗೆ ವಿವಿಧ ಅಲಂಕಾರಗಳಿಂದ ಪೂಜಾ ಕೈಂಕರ್ಯಗಳು ಜರುಗಲಿವೆ. ಸಂಜೆ ದುರ್ಗಾಹೋಮ ನಡೆಸಲಾಗುವುದು, ಪ್ರತಿದಿನ ಸಂಜೆ 6:15 ರಿಂದ 7:20 ರವರೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗುವವು.
Sri Adhichunchanagiri Mahasamsthana Math ಪೂಜ್ಯ ಶ್ರೀ ಶ್ರೀ ಪ್ರಸನ್ನನಾಥ ಸ್ವಾಮೀಜಿ ಅವರ ದಿವ್ಯಸಾನಿಧ್ಯದಲ್ಲಿ ಅ, 10/10/2024 ರಂದು ಬೆಳಿಗ್ಗೆ 7 ರಿಂದ ಚಂಡಿಕಾ ಹೋಮ, ಮಹಾಮಂಗಳಾರತಿ, ವಿಶೇಷ ಪೂಜಾ ಕಾರ್ಯಕ್ರಮಗಳು ಜರುಗಲಿವೆ. ನಂತರ ಪ್ರಸಾದ ವಿನಿಯೋಗ ವಿರುತ್ತದೆ. ಅ,12/10/2024 ರ ಸಂಜೆ 5 ಗಂಟೆಗೆ ಪಲ್ಲಕ್ಕಿ ಉತ್ಸವ ಹಾಗೂ ಬನ್ನಿ ಮುಡಿಯುವ ಕಾರ್ಯಕ್ರಮವಿದ್ದು, ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ. ಶ್ರೀ ಕಾಳಿಕಾಂಬ ದೇವಿಯ ಕೃಪೆಗೆ ಪಾತ್ರರಾಗಬೇಕಾಗಿ ಶಿಮೊಗ್ಗ ಶಾಖಾಮಠದ ವ್ಯವಸ್ಥಾಪಕರು ಪತ್ರಿಕಾ ಪ್ರಕಟಣೆಯಲ್ಲಿ ಕೋರಿದ್ದಾರೆ.
Department of Fisheries ಮತ್ಸ್ಯಸಂಪದ ಮತ್ತು ನೀಲಿಕ್ರಾಂತಿ ಯೋಜನೆಯಡಿ ಅರ್ಜಿ ಆಹ್ವಾನ
Department of Fisheries ಮೀನುಗಾರಿಕೆ ಇಲಾಖೆಯು 2022-23 ರಿಂದ 2024-25 ನೇ ಸಾಲಿಗೆ ಮರು ಹಂಚಿಕೆಯಾಗಿರುವ ಪ್ರಧಾನ ಮಂತ್ರಿ ಮತ್ಸ್ಯಸಂಪದ ಮತ್ತು ನೀಲಿಕ್ರಾಂತಿ ಯೋಜನೆಯಡಿ ವಿವಿಧ ಘಟಕಗಳಿಗೆ ಸಹಾಯಧನ ಸೌಲಭ್ಯ ನೀಡಲು ಆಸಕ್ತರಿಂದ ಅರ್ಜಿ ಆಹ್ವಾನಿಸಲಾಗಿದೆ.
ಮೀನು ಕೃಷಿ ಕೊಳಗಳ ನಿರ್ಮಾಣ ಒಟ್ಟು 5.33 ಹೆಕ್ಟೆರ‍್ಗಳು ಯಾಂತ್ರೀಕೃತ ದೋಣಿ ಖರೀದಿಗೆ ಸಹಾಯ ಸಾಂಪ್ರದಾಯಿಕ ಮೀನುಗಾರಿಕೆಗೆ ಎಫ್ರ‍್ಪಿ ಬದಲಿ ದೋಣಿ ನಿರ್ಮಾಣಕ್ಕಾಗಿ ಸಹಾಯ ಘಟಕಕ-01 (ಸಾಮಾನ್ಯ 01), ಮೀನು ಮರಿ ಪಾಲನಾ ಘಟಕ ನಿರ್ಮಾಣದ ಸಹಾಯ ಒಟ್ಟು 7.10 ಹೆಕ್ಟೇರ್ ಗುರಿ ಇದ್ದು ಸಾಮಾನ್ಯ 03, ಮಹಿಳೆ 02, ಮತ್ತು ಪರಿಶಿಷ್ಡ ಪಂಗಡ 2.10 ಹೆಕ್ಷೇರ್, ಸೈಕಲ್ ವಿತ್ ಐಸ್ ಬಾಕ್ಸ್ ಸಾಮಾನ್ಯ ವರ್ಗಕ್ಕೆ 01 ಗುರಿ ಹಾಗೂ ಹೊಸದಾದ ಮೀನುಮಾರಾಟ ಕಿಯೋಸ್ಕ್ ನಿರ್ಮಾಣಕ್ಕಾಗಿ ಅಲಂಕಾರಿಕ ಮೀನು ಮಾರಾಟ ಮಳಿಗೆ ಪರಿಶಿಷ್ಟ ಜಾತಿ 01 ಗುರಿ ನೀಡಲಾಗಿದೆ.
Department of Fisheries ಸಹಾಯಧನ ಘಟಕಗಳ ಉಪಯೋಜನೆಗಳನ್ನು ಪಡೆಯಲು ಸಾಮಾನ್ಯ ವರ್ಗದ ಫಲಾನುಭವಿಗಳಿಗೆ ಶೇ. 40 ರಷ್ಟು ಹಾಗೂ ಮತ್ತು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ, ಮಹಿಳಾ ಫಲಾನುಭವಿಗಳಿಗೆ ಶೇ. 60 ರಷ್ಟು ಸಹಾಯಧನ ನೀಡಲಾಗುವುದು.
ಆಸಕ್ತರು ನಿಗದಿತ ನಮೂನೆಯ ಅರ್ಜಿಯನ್ನು ಆಯಾ ತಾಲೂಕಿನ ಮೀನುಗಾರಿಕೆ ಸಹಾಯಕ ನಿರ್ದೇಶಕರ ಕಚೇರಿಯಿಂದ ಪಡೆದು, ಭರ್ತಿ ಮಾಡಿದ ಅರ್ಜಿಯನ್ನು ಅ.10 ರೊಳಗಾಗಿ ಸಂಬAಧಪಟ್ಟ ತಾಲ್ಲೂಕಿನ ಮೀನುಗಾರಿಕೆ ಸಹಾಯಕ ನಿರ್ದೇಶಕರ ಕಚೇರಿಗೆ ಪೂರ್ಣ ದಾಖಲೆಗಳೊಂದಿಗೆ ಸಲ್ಲಿಸುವಂತೆ ಮೀನುಗಾರಿಕೆ ಉಪನಿರ್ದೇಶಕರು ತಿಳಿಸಿದ್ದಾರೆ.
National Open Athletic Championship ಬಿಹಾರದ ಓಪನ್ ಅಥ್ಲೇಟಿಕ್‌ನಲ್ಲಿ ಶಿವಮೊಗ್ಗ ಜಿಲ್ಲೆಯ ಕ್ರೀಡಾಪಟು
National Open Athletic Championship ಬಿಹಾರದ ಪಾಟ್ನದಲ್ಲಿ ಸೆ. 28 ರಿಂದ 30 ರವರೆಗೆ ನಡೆಯುವ 23 ವಯೋಮಿತಿಯೊಳಗಿನ 4ನೇ ನ್ಯಾಷನಲ್ ಓಪನ್ ಅಥ್ಲೇಟಿಕ್ ಚಾಂಪಿಯನ್‌ಶಿಪ್ ಸ್ಪರ್ಧೆಯಲ್ಲಿ ಜಿಲ್ಲೆಯ ಸುದೀಪ್ ಎಂಬ ಕ್ರೀಡಾಪಟು ಎತ್ತರ ಜಿಗಿತ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ. ಇವರು ಅಥ್ಲೇಟಿಕ್ ತರಬೇತುದಾರ ಬಾಳಪ್ಪ ಮಾನೆ ತರಬೇತಿ ನೀಡುತ್ತಿದ್ದಾರೆ.
National Open Athletic Championship ಸುದೀಪ್‌ರವರಿಗೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ರೇಖ್ಯಾನಾಯ್ಕ್ ಮತ್ತು ಸಿಬ್ಬಂದಿವರ್ಗದವರು ಶುಭ ಹಾರೈಸಿದ್ದಾರೆ.
Bhadravati Police ಅನಾಮಧೇಯ ಗಂಡಸ್ಸಿನ ಶವ ಪತ್ತೆ
Bhadravati Police ಭದ್ರಾವತಿ ಶಿವಪುರ ಗ್ರಾಮದಲ್ಲಿ ಭದ್ರಾ ಬಲದಂಡೆ ನಾಲೆಯಲ್ಲಿ ಸುಮಾರು 35 ವರ್ಷ ವಯಸ್ಸಿನ ಗಂಡಸ್ಸಿನ ಶವ ತೇಲಿಕೊಂಡು ಬಂದು ಸೇತುವೆ ಬಳಿ ಸಿಕ್ಕಿದೆ. ಈತನ ಹೆಸರು, ವಿಳಾಸ, ವಾರಸ್ಸುದಾರರ ಬಗ್ಗೆ ಯಾವುದೇ ಸುಳಿವು ದೊರೆತಿರುವುದಿಲ್ಲ.
ಮೃತ ವ್ಯಕ್ತಿಯ ದೇಹವು ಕೊಳೆತ ಸ್ಥಿತಿಯಲ್ಲಿ ದೊರಕಿದ್ದು, ಮೈಮೇಲೆ ಕಪ್ಪು ಬಣ್ಣದ ಪ್ಯಾಂಟ್ ಹಾಗೂ ಬಿಳಿ ಬಣ್ಣದ ಡಿಸೈನ್ ಅಂಗಿ ಇರುತ್ತದೆ.
ಮೃತ ವ್ಯಕ್ತಿಯ ವಾರಸ್ಸುದಾರರು ಸಿಕ್ಕಲ್ಲಿ ಭದ್ರಾವತಿ ಹೊಸಮನೆ ಶಿವಾಜಿ ಸರ್ಕಲ್ ಪೊಲೀಸ್ ಠಾಣೆಗೆ ಮಾಹಿತಿ ನೀಡುವಂತೆ ಪೊಲೀಸ್ ತಿಳಿಸಿದೆ.
