Thursday, March 19, 2026
Thursday, March 19, 2026
Home Blog Page 454

Sahyadri Narayana Multispeciality Hospital ಶಿವಮೊಗ್ಗ ಸಹ್ಯಾದ್ರಿ ನಾರಾಯಣ ಹೃದಯಾಲಯ ವೈದ್ಯರ ಸಾಧನೆ. ಮೊಣಕಾಲು ಶಸ್ತ್ರಚಿಕಿತ್ಸೆ ಯಶಸ್ವಿ

0

Sahyadri Narayana Multispeciality Hospital ಶಿವಮೊಗ್ಗದ ಸಹ್ಯಾದ್ರಿ ನಾರಾಯಣ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ವೈದ್ಯರು ಒಂದೇ ದಿನದಲ್ಲಿ ಐದು ಮೊಬೈಲ್ ಬೇರಿಂಗ್ ಪಾರಶಿಯಲ್‌ ನೀ ರಿಪ್ಲೇಸ್‌ಮೆಂಟ್‌ ಸರ್ಜರಿ ( ಒಳ ಭಾಗದ ಅರ್ಧ ಮೊಣಕಾಲು ಬದಲಾವಣೆ ಶಸ್ತ್ರಚಿಕಿತ್ಸೆ) ಯಶಸ್ವಿಯಾಗಿ ನೆರವೇರಿಸಿ ವಿಶೇಷ ಸಾಧನೆ ಮಾಡಿದ್ದಾರೆ.

ಈ ಶಸ್ತ್ರಚಿಕಿತ್ಸೆಗಳನ್ನುಎಲಬು, ಕೀಲು ಶಸ್ತ್ರಚಿಕಿತ್ಸಕ ಡಾ. ಅಭಿಷೇಕ್ ಎಂ.ಬಿ ನೇತೃತ್ವದ ತಜ್ಞರ ತಂಡ, ಮತ್ತು ಅನಸ್ಥೇಶಿಯಾ ತಜ್ಞರಾದ ಡಾ. ಅಜಿತ್ ಶೆಟ್ಟಿ ಹಾಗೂ ಡಾ. ಚಕ್ರವರ್ತಿ ಸೊಂಡೂರು ಅವರ ಸಹಯೋಗದಲ್ಲಿ ಯಶಸ್ವಿಯಾಗಿ ನೆರವೇರಿಸಲಾಗಿದೆ.

ಈ ಮಹತ್ವದ ಸಾಧನೆ ಮತ್ತು ವಿಶಿಷ್ಟ ಶಸ್ತ್ರಚಿಕಿತ್ಸಾ ಪ್ರಯತ್ನವು ಕರ್ನಾಟಕದಲ್ಲಿ ಖಾಸಗಿ ಆಸ್ಪತ್ರೆ ವಲಯದಲ್ಲಿ ಮೊಟ್ಟಮೊದಲ ಬಾರಿಗೆ ನಡೆದದ್ದುವಿಶೇಷ.

50 ರಿಂದ 75 ವರ್ಷ ವಯೋಮಿತಿಯಲ್ಲಿರುವ ಐದು ರೋಗಿಗಳು ಈ ಶಸ್ತ್ರಚಿಕಿತ್ಸೆಗೊಳಗಾಗಿದ್ದು, ಶಸ್ತ್ರಚಿಕಿತ್ಸೆಯ ನಂತರ ಯಾವುದೇ ನೋವು ಇಲ್ಲದೆ ದೈನಂದಿನ ಚಟುವಟಿಕೆಗಳನ್ನು ಪುನಃ ಪ್ರಾರಂಭಿಸಿದ್ದಾರೆ.

ಡಾ. ಅಭಿಷೇಕ್ ಎಂ.ಬಿ ಈ ಶಸ್ತ್ರಚಿಕಿತ್ಸೆಯ ಬಗ್ಗೆ ಮಾತನಾಡುತ್ತಾ, “ ಈ ಶಸ್ತ್ರ ಚಿಕಿತ್ಸೆ ಕಡಿಮೆ ಆಕ್ರಮಣಕಾರಿಯಾಗಿದೆ ಅಂದರೆ ಇಲ್ಲಿ ದೇಹದಲ್ಲಿ ಯಾವುದೇ ದೊಡ್ಡ ಛೇಧನ ವಿಲ್ಲದೆ ನೇರವೇರಿಸ ಬಹುದಾದ ಶಸ್ತ್ರ ಚಿಕಿತ್ಸೆಯಾಗಿದೆ. ಇದು ಮೊಣಕಾಲಿನ ಒಳಭಾಗದ (ಮೀಡಿಯಲ್ ಕಾಂಪಾರ್ಟ್‌ಮೆಂಟ್) ಅಸ್ಥಿ ಸಂಧಿವಾತದಿಂದ ಬಳಲುವವರಿಗೆ ಉಪಯುಕ್ತವಾಗಿದೆ. ಕ್ರಿಯಾಶೀಲ ಜೀವನಶೈಲಿ ನಡೆಸಲು, ಕ್ರೀಡೆಗಳಲ್ಲಿ ಭಾಗವಹಿಸಲು ಅಥವಾ ಸಾಹಸಮಯ ಕ್ರೀಡೆಯಲ್ಲಿ ಪಾಲ್ಗೊಳ್ಳುವ ಹಿರಿಯ ವಯಸ್ಸಿನವರಿಗೆ ಇದು ಸೂಕ್ತವಾಗಿದೆ,” ಎಂದು ಹೇಳಿದರು.

Sahyadri Narayana Multispeciality Hospital ಈ ಎಲ್ಲಾ ರೋಗಿಗಳು ಒಂದೇ ಕಾಲಿನಲ್ಲಿ ಸಂಧಿವಾತದ ಸಮಸ್ಯೆ ಯಿಂದ ಬಳಲುತ್ತಿದ್ದರು ಎಂದು ಹೇಳಿದ ಡಾ. ಅಭಿಷೇಕ್‌. ” ಈ ಚಿಕಿತ್ಸೆಯಲ್ಲಿ, ಸ್ಥಿರ ಪ್ಲಾಸ್ಟಿಕ್ ಬೇರಿಂಗ್ ಮತ್ತು ಮೊಬೈಲ್ ಪ್ಲಾಸ್ಟಿಕ್ ಬೇರಿಂಗ್ ಎಂಬ ಎರಡು ಪ್ರಕಾರಗಳಿವೆ. ಮೊಬೈಲ್ ಬೇರಿಂಗ್ ಪ್ರಕಾರ ದೀರ್ಘಕಾಲದ ಬಾಳಿಕೆ ಹೊಂದಿದೆ, ಈ ಚಿಕಿತ್ಸೆಗೆ ಒಳಪಟ್ಟ ರೋಗಿಯು ಶೀಘ್ರ ಗುಣಮುಖನಾಗುವದಲ್ಲದೆ, ರೋಗಿಯು ಯಾವುದೇ ತೊಂದರೆ ಇಲ್ಲದೆ ತನ್ನ ದೈನಂದಿನ ಕಾರ್ಯಗಳನ್ನು ಮಾಡಬಹುದಾಗಿದೆ, ಎಂದರು.

“ನಾವು ಸಹ್ಯಾದ್ರಿ ನಾರಾಯಣ ಆಸ್ಪತ್ರೆಯಲ್ಲಿ ಕಳೆದ ವರ್ಷದಿಂದ ಮೊಬೈಲ್ ಬೇರಿಂಗ್ ಒಳ ಭಾಗದ ಅರ್ಧ ಮೊಣಕಾಲು ಬದಲಾವಣೆ ಶಸ್ತ್ರಚಿಕಿತ್ಸೆ ಗಳನ್ನು ಮಾಡುತ್ತಿದ್ದು, ರೋಗಿಗಳು ಯಾವುದೇ ನೋವಿಲ್ಲದೆ ಹಾಗೂ ಚಲನಾ ಸಾಮರ್ಥ್ಯ ಕುಂದದೆ ಅತ್ಯಂತ ಚೇತರಿಕೆಯಿಂದ ತಮ್ಮ ದೈನಂದಿನ ಕಾರ್ಯಗಳನ್ನು ಮಾಡುತ್ತಿದ್ದಾರೆ ಎಂದು ಡಾ.ಅಭಿಷೇಕ ತಿಳಿಸಿದರು.

ಈ ಸಾಧನೆ ಸಂಪೂರ್ಣ ಯೋಚನೆ ಮತ್ತು ಅಚ್ಚುಕಟ್ಟಾದ ಅನುಷ್ಠಾನದ ಫಲಿತಾಂಶವಾಗಿದೆ. ಈ ಶಸ್ತ್ರಚಿಕಿತ್ಸೆ ಮಿನಿಮಲಿ ಇನವೇಸಿವ್‌ ಆಗಿರುವದರಿಂದ ಹಾಗೂ ಕಡಿಮೆ ಸಮಯ ತೆಗೆದುಕೊಳ್ಳುವದರಿಂದ ಒಂದೇ ದಿನದಲ್ಲಿ ನಿರಂತರ ಐದು ಶಸ್ತ್ರಚಿಕಿತ್ಸೆಗಳನ್ನು ನಿರ್ವಹಿಸಲು ನೆರವಾಯಿತು, ಎಂದು ವೈದ್ಯರು ಹೇಳಿದರು.

ಈ ಸಾಧನೆ ನಾರಾಯಣ ಆಸ್ಪತ್ರೆ ಸಮೂಹದ ಹೃದಯ ಸಂಬಂಧಿತ ಆರೋಗ್ಯ ಸೇವೆಗಳಲ್ಲಿನ ಪ್ರಸಿದ್ಧಿಯ ಹೊರತಾಗಿಯೂ, ಇನ್ನಿತರ ವೈದ್ಯಕೀಯ ತಜ್ಞತೆಯಲ್ಲಿ ಮಹತ್ವದ ಸಾಧನೆಯನ್ನುಎತ್ತಿ ಹಿಡಿದಿದ್ದು. ನಾರಾಯಣ ಆಸ್ಪತ್ರೆ ಕೇವಲ ಹೃದಯರೋಗದ ಆರೋಗ್ಯ ಸೇವೆಗಳಲ್ಲದೆ, ಇನ್ನಿತರು ವೈದ್ಯಕೀಯ ತಜ್ಞತೆಯಲ್ಲೂ ಅತ್ಯಾಧುನಿಕ ಚಿಕಿತ್ಸೆ ನೀಡುವಲ್ಲಿ ಮುಂದಿದೆ ಎನ್ನುವುದನ್ನು ಈ ಸಾಧನೆ ಸಾರಿ ಹೇಳಿದೆ.

DC shivamogga ಇಪಿ ರೇಷ್ಯೂ ತಗ್ಗಿಸಲು & ಯುವ ಮತದಾರರ ನೋಂದಣಿ ಹೆಚ್ಚಿಸಲು ಕ್ರಮಕೈಗೊಳ್ಳಿ- ಡಾ.ಕೆ.ವಿ. ತ್ರಿಲೋಕ ಚಂದ್ರ

0

DC shivamogga ಮತದಾರರ ಪಟ್ಟಿಯ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ 2025 ಕ್ಕೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ ಅಂತಿಮ ಮತದಾರರ ಪಟ್ಟಿ ಪ್ರಕಟಿಸಲು ಅಗತ್ಯವಾದ ಸಿದ್ದತೆಗಳನ್ನು ಮಾಡಿಕೊಳ್ಳುವಂತೆ ಶಿವಮೊಗ್ಗ ಜಿಲ್ಲೆಯ ಮತದಾರರ ಪಟ್ಟಿಯ ವೀಕ್ಷಕರಾದ ಡಾ.ಕೆ.ವಿ.ತ್ರಿಲೋಕ್ ಚಂದ್ರ ಚುನಾವಣಾ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಮತದಾರರ ಪಟ್ಟಿಯ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ 2025 ಕ್ಕೆ ಕುರಿತಾದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ಚುನಾವಣಾ ಜನಸಂಖ್ಯೆ ಅನುಪಾತ (ಇಪಿ ರೇಷಿಯೋ)ವನ್ನು ತಗ್ಗಿಸಲು ಹಾಗೂ ಯುವ ಮತದಾರರ ನೋಂದಣಿ ಹೆಚ್ಚಿಸಲು ಪಾರ್ಟ್ ವಾರು ಅಗತ್ಯವಾದ ಕ್ರಮ ಕೈಗೊಳ್ಳಬೇಕು ಎಂದರು.

ಇಪಿ ರೇಷಿಯೋ ಜಿಲ್ಲೆಯಲ್ಲಿ 78.84 ಇದೆ. ಇದು ರಾಜ್ಯ ಸರಾಸರಿಗಿಂತ ಹೆಚ್ಚಿದೆ‌ ಆದ್ದರಿಂದ ಎಲ್ಲ ಕ್ಷೇತ್ರವಾರು ಮತ್ತು ಪಾರ್ಟ್ವಾರು ಅಗತ್ಯವಾದ ವಿಶ್ಲೇಷಣೆ ನಡೆಸಿ ಹಾಗೂ ಇ-ಜನ್ಮ ಪೋರ್ಟಲ್‌ನಿಂದ ಮಾಹಿತಿ ಪಡೆದು ಕಡಿಮೆ ಮಾಡಬೇಕು.
ಇದೇ ರೀತಿ ಪಾರ್ಟ್ ವಾರು ವಿಶ್ಲೇಷಣೆ ಮಾಡಿ ಯುವ ಮತದಾರರ ನೋಂದಣಿಯನ್ನು ಹೆಚ್ಚಿಸಬೇಕು. ಕೆಲವೆಡೆ 20 ವರ್ಷ ತುಂಬಿದವರು ಇನ್ನೂ ನೋಂದಣಿಯಾಗಿಲ್ಲ. ಈ ಬಗ್ಗೆ ಕ್ರಮ ವಹಿಸಬೇಕೆಂದರು.

ಗೈರು ಮತದಾರರು, ಮರಣ ಹೊಂದಿದ ಮತ್ತು ಇತರೆಡೆ ವರ್ಗಾವಣೆಯಾದ ಮತದಾರರನ್ನು ಪಟ್ಟಿಯಿಂದ ತೆಗೆದುಹಾಕಬೇಕು. ಫಾರಂ ಸಂಖ್ಯೆ 7 ಅಪ್‌ಡೇಟ್ ಆಗಬೇಕು.

ಮರಣ ಹೊಂದಿದವರ ಮಾಹಿತಿಯನ್ನು‌ ಪ್ರತಿ ತಾಲ್ಲೂಕಿನಲ್ಲಿ ವಿಎ ಮತ್ತು ಪಿಡಿಒ ಗಳಿಂದ ಪಡೆದು ಮತದಾರರ ಪಟ್ಟಿಯಿಂದ ಹೆಸರು ತೆಗೆದು ಹಾಕಬೇಕು ಎಂದ ಅವರು ಅಂತಿಮ ಮತದಾರರ ಪಟ್ಟಿ ಪ್ರಕಟಿಸಲು ಅಗತ್ಯವಾದ ಕ್ರಮ‌ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆಗಳನ್ನು ನೀಡಿದರು.

DC shivamogga ಪ್ರಭಾರ ಜಿಲ್ಲಾಧಿಕಾರಿ ಹಾಗೂ ಜಿ.ಪಂ ಸಿಇಓ ಆದ ಎನ್.ಹೇಮಂತ್ ಮಾತನಾಡಿ, ದಿ. 27-12-2024 ಕ್ಕೆ ಜಿಲ್ಲೆಯಲ್ಲಿ 1032 ಲಿಂಗಾನುಪಾತ ಇದೆ.
ಜಿಲ್ಲೆಯಲ್ಲಿ ಮಹಿಳೆ 746679, ಪುರುಷ 770827 ಮತ್ತು ಲಿಂಗತ್ವ ಅಲ್ಪಸಂಖ್ಯಾತ 37 ಸೇರಿ 1517543 ಮತದಾರರಿದ್ದಾರೆ. 21224 ಯುವ ಮತದಾರರು ನೋಂದಣಿಯಾಗಿದ್ದಾರೆ.

ದಿ.01-01-2025 ಕ್ಕೆ ಮತದಾರರ ಅಂತಿಮ ಪಟ್ಟಿ ಪ್ರಕಟಕ್ಕೆ ಕ್ರಮ ವಹಿಸಲಾಗುವುದು. ದಿ;06-01-2025 ಕ್ಕೆ ಅಂತಿಮ ಪಟ್ಟಿ ಪ್ರಕಟಿಸಲಾಗುವುದು ಎಂದು ಮಾಹಿತಿ‌ ನೀಡಿದರು.
ಪಾಲಿಕೆ ಆಯುಕ್ತರಾದ ಡಾ.ಕವಿತಾ ಯೋಗಪ್ಪನವರ್, ಅಪರ ಜಿಲ್ಲಾಧಿಕಾರಿ ಸಿದ್ದಲಿಂಗ ರೆಡ್ಡಿ, ಚುನಾವಣಾ ತಹಶೀಲ್ದಾರ್ ಪ್ರದೀಪ್, ತಾಲ್ಲೂಕುಗಳ ತಹಶೀಲ್ದಾರರು, ತಾ.ಪಂ ಗಳ ಇಓ ಗಳು ಮತ್ತು ಚುನಾವಣೆಗೆ ಸಂಬಂಧಿಸಿದ ಇತರೆ ಅಧಿಕಾರಿಗಳು ಪಾಲ್ಗೊಂಡಿದ್ದರು.

Rovers Club ಕೃಷಿಕ, ಸಮಾಜ‌ ಸೇವಕ ಸೋಗಾನೆ ಅನಂತಮೂರ್ತಿ ನಿಧನ

0

Rovers Club ಶಿವಮೊಗ್ಗ ನಗರದ ರೋವರ್ಸ್ ಕ್ಲಬ್ ನ ಸದಸ್ಯ ಕೃಷಿಕ ಹಾಗೂ ಹಲವಾರು ಸಂಘಟನೆಗಳಲ್ಲಿ ತೊಡಗಿಸಿಕೊಂಡಿರುವ ಸೋಗಾನೆ ಅನಂತಮೂರ್ತಿ (60) ನಿನ್ನೆ ರಾತ್ರಿ ಸೋಗನೆಯ ಅವರ ನಿವಾಸ ದಲ್ಲಿ ನಿಧನರಾಗಿದ್ದಾರೆ.

Rovers Club ಸರಳ ವ್ಯಕ್ತಿತ್ವದ ಜನಾನುರಾಗಿ ಅನಂತ ಅವರಿಗೆ ಪತ್ನಿ ಒಬ್ಬ ಗಂಡು ಮಗ ಇದ್ದು ಇವರ ಅಂತ್ಯಕ್ರಿಯೆಯನ್ನು ಇಂದು ಮಧ್ಯಾಹ್ನ ಸೋಗಾನೆಯ ಚಿತಗಾರದಲ್ಲಿ ನೆರವೇರಿಸಲಾಗುವುದು ಇವರ ಆತ್ಮಕ್ಕೆ ಚಿರಶಾಂತಿಯನ್ನು ಕೋರುತ್ತ ರೋವರ್ಸ್ ಕ್ಲಬಿನ ಅಧ್ಯಕ್ಷರಾದ ಸುರೇಶ್ ಉಪಾಧ್ಯಕ್ಷರಾದ ಕೃಷ್ಣಮೂರ್ತಿ . ಕಾರ್ಯದರ್ಶಿ ಅಮಾಪ್ರಕಾಶ್. ಖಜಾಂಚಿ ಸೀದು ಸೋಮಶೇಖರ್. ಸಹಕಾರ್ಯದರ್ಶಿ ನಾಗರಾಜ್ ಪಾಟ್ಕರ್. . ಗನ್ನಿ ಶಂಕರ್ ಜಿ ವಿಜಯಕುಮಾರ್. ಚುಡ ಮಣಿ ಈ ಪವಾರ್. ಹಾಗೂ ಸ್ನೇಹಿತರು ಬಂಧು ಮಿತ್ರರು ಮತ್ತು ರೋವರ್ಸ್ ಕ್ಲಬ್ಬಿನ ಎಲ್ಲಾ ಪದಾಧಿಕಾರಿಗಳು ಸದಸ್ಯರು ತೀರ್ವ ಸಂತಾಪ ಸೂಚಿಸಿದ್ದಾರೆ.

State Government Employees’ Association ಸಿ.ಎಸ್.ಷಡಾಕ್ಷರಿ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾಗಿ ಮರು ಆಯ್ಕೆ

0

State Government Employees’ Association ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘಕ್ಕೆ ಶುಕ್ರವಾರ ನಡೆದ ಚುನಾವಣೆಯಲ್ಲಿ ಹಾಲಿ ಅಧ್ಯಕ್ಷ ಸಿ.ಎಸ್‌. ಷಡಾಕ್ಷರಿ ಅವರು ಪುನರಾಯ್ಕೆಯಾಗಿದ್ದಾರೆ.

ಷಡಾಕ್ಷರಿ ಅವರು 507 ಮತಗಳು ಹಾಗೂ ಬಿ.ಪಿ. ಕೃಷ್ಣೇಗೌಡ ಅವರು 442 ಮತಗಳನ್ನು ಪಡೆದರು. ಷಡಾಕ್ಷರಿ ಅವರು 65 ಮತಗಳ ಅಂತರದಿಂದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಎ. ಹನುಮನರಸಯ್ಯ ಘೋಷಿಸಿದರು

State Government Employees’ Association ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾಗಿ ಸಿ.ಎಸ್.ಷಡಾಕ್ಷರಿ ಪುನರಾಯ್ಕೆ ಆಗಿದ್ದಾರೆ.
ಈಗಾಗಲೇ ತಮ್ಮ ಕೌಶಲ,ಚಾಕಚಕ್ಯತೆಗಳ ಮೂಲಕ ಸರ್ಕಾರಿ ನೌಕರರ ಸಮಸ್ಯೆಗಳ ಬಗ್ಗೆ ಸರ್ಕಾರದೊಂದಿಗೆ ಮಧ್ಯಸ್ಥಿಕೆ ನಡೆಸಿ ನೌಕರರ ಹಿತ ರಕ್ಷಿಸುವಲ್ಲಿ ಸಾಕಷ್ಟು ಸೇವೆಮಾಡಿದ ಕೀರ್ತಿ ಅವರದ್ದಾಗಿದೆ.
ಷಡಾಕ್ಷರಿ ಅವರು 507 ಮತಗಳು ಪಡೆದರು. ಎದುರಾಳಿ ಬಿ.ಪಿ. ಕೃಷ್ಣೇಗೌಡ ಅವರು 442 ಮತಗಳಿಗೆ ತೃಪ್ತಿ ಪಡಬೇಕಾಯಿತು. 65 ಮತಗಳ ಅಂತರದಿಂದ ಷಡಕ್ಷರಿ ಅವರು ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಎ. ಹನುಮನರಸಯ್ಯ ಘೋಷಿಸಿದ್ದಾರೆ.

Siddivinayaka Temple Karanagiri ಕಾರಣಗಿರಿ ಶ್ರೀಸಿದ್ಧಿ ವಿನಾಯಕ ದರ್ಶನ ಪಡೆದ ಲೋ.ನ್ಯಾ. ಬಿಎಸ್.ಪಾಟೀಲ್

0

Siddivinayaka Temple Karanagiri ಲೋಕಾಯುಕ್ತ ನ್ಯಾ.ಬಿ.ಎಸ್.ಪಾಟೀಲ್ ಅವರು ಪುರಾಣ ಪ್ರಸಿದ್ಧ ಕಾರಣಗಿರಿ ಶ್ರೀವಿನಾಯಕ ದೇವಸ್ಥಾನಕ್ಕೆ ಭೇಡಮಟಿ ನೀಡಿದರು.
ವೇ.ಹನಿಯ ರವಿ ಅವರು ಪಾಟೀಲ್ ದಂಪತಿಗಳಿಗೆ ಸ್ವಾಗತ ಕೋರಿದರು.
ನಂತರ ಶ್ರೀಸಿದ್ಧಿ ವಿನಾಯಕ ಸ್ವಾಮಿಗೆ ವಿಶೇಷ ಅರ್ಚನೆ ,ಆರತಿ ನೆರವೇರಿಸಲಾಯಿತು.

Shivamogga Police ರಕ್ತದಾನಿಗಳು ನಮ್ಮ ನಡುವಿನ ನಿಜವಾದ ಸಮಾಜ ಸೇವಕರು- ಚಂದ್ರಕಲಾ

0

Shivamogga Police ನಮ್ಮ ವೃತ್ತಿಯ ಜೊತೆಗೆ ಸಮಾಜ ಸೇವೆಯು ಅತಿ ಮುಖ್ಯ ಇಂದು ನಮ್ಮ ಪೊಲೀಸ್ ಸಿಬ್ಬಂದಿ ವರ್ಗದವರು ಸದಾ ಒತ್ತಡದಲ್ಲಿ ಕಾರ್ಯ ನಿರ್ವಹಿಸುತ್ತಾ ಇರುತ್ತಾರೆ . ಇವರುಗಳು ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುವುದರ ಜೊತೆಗೆ ರಕ್ತದಾನ ಮಾಡುವುದರ ಮುಖಾಂತರ ಪವಿತ್ರವಾದ ದಾನಿಗಳಾಗಬೇಕೆಂದು ವಿನೋಬನಗರ ಪೊಲೀಸ್ ಠಾಣೆ ಪಿಎಸ್ಐ ಚಂದ್ರಕಲಾ ಅವರು ನುಡಿದರು.

ಅವರು ವಿನೊಬನಗರದ ಪೊಲೀಸ್ ಠಾಣೆಯಲ್ಲಿ ಪೊಲೀಸ್ ಸಿಬ್ಬಂದಿ ವರ್ಗದವರು ಹಾಗೂ ಸಾರ್ವಜನಿಕರಿಗಾಗಿ ಹಮ್ಮಿಕೊಳ್ಳಲಾದ ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು. ರಕ್ತದಾನಿಗಳು ಸಮಾಜದಲ್ಲಿ ನಿಜವಾದ ಸಮಾಜ ಸೇವಕರು ಇಂದು ರಕ್ತದ ಕೊರತೆ ತುಂಬಾ ಇದೆ ನಾವು ಪ್ರತಿನಿತ್ಯ ಗಮನಿಸುತ್ತಾ ಇರುತ್ತೇವೆ ರಕ್ತ ಸಿಗದೆ ಅನೇಕ ಜನರು ತಮ್ಮ ಪ್ರಾಣವನ್ನು ಕಳೆದುಕೊಳ್ಳುತ್ತಿದ್ದಾರೆ ರಕ್ತದ ಬೆಲೆ ಅದು ಬೇಕಾದಾಗ ಮಾತ್ರ ಗೊತ್ತಾಗುತ್ತದೆ ಈ ನಿಟ್ಟಿನಲ್ಲಿ ಎಲ್ಲರೂ ವೈದ್ಯರ ಸಲಹೆ ಮೇರೆಗೆ ಮೂರು ತಿಂಗಳಿಗೊಂದು ಬಾರಿ ರಕ್ತದಾನ ಮಾಡುವುದರ ಮುಖಾಂತರ ತಮ್ಮ ಆರೋಗ್ಯದ ಸ್ವಾಸ್ಥ್ಯವನ್ನು ಕಾಪಾಡಿಕೊಳ್ಳಬೇಕು ಎಂದು ನುಡಿದರು.

ಇದೇ ಸಂದರ್ಭದಲ್ಲಿ 48 ಬಾರಿ ರಕ್ತದಾನ ಮಾಡಿದ ಹೆಡ್ ಕಾನ್ಸ್ಟೇಬಲ್ ಹಾಲೇಶಪ್ಪನವರು ಮಾತನಾಡುತ್ತಾ ಇಂದು ಪೊಲೀಸ್ ಠಾಣೆಗಳಲ್ಲಿ ರಕ್ತದಾನ ಶಿಬಿರಗಳನ್ನು ಹಮ್ಮಿಕೊಳ್ಳುವುದು ಒಂದು ಸಮಾಜಮುಖಿ ಕಾರ್ಯ ಈ ನಿಟ್ಟಿನಲ್ಲಿ ನಾವು ಜಿಲ್ಲಾಧ್ಯಂತ ಪೋಲಿಸ್ ಅಧೀಕ್ಷಕರ ಅನುಮತಿ ಮೇರೆಗೆ ರಕ್ತದಾನ ಶಿಬಿರಗಳನ್ನು ಹಮ್ಮಿಕೊಳ್ಳುತ್ತಾ ಬಂದಿದ್ದೇವೆ ರಕ್ತದಾನದಿಂದ ನಮ್ಮ ಆಯಸ್ಸು ವೃದ್ಧಿಯಾಗುತ್ತದೆ ಹಾಗೂ ನಮ್ಮ ದೇಹದಲ್ಲಿ ಇರುವ ಯಾವುದಾದರೂ ಆರೋಗ್ಯ ಸಮಸ್ಯೆ ಕೂಡಲೇ ತಿಳಿಯುತ್ತದೆ ಆದ್ದರಿಂದ ಪ್ರತಿಯೊಬ್ಬರೂ ರಕ್ತದಾನ ಮಾಡುವುದರ ಮುಖಾಂತರ ರಕ್ತದ ಕೊರತೆಯನ್ನು ನೀಗಿಸಬೇಕು ಎಂದು ನುಡಿದರು.

Shivamogga Police ಸ್ವಯಂ ಪ್ರೇರಿತ ರಕ್ತದಾನಿಗಳ ಸೇವಾ ಸಂಸ್ಥೆಯ ಮಾಜಿ ಅಧ್ಯಕ್ಷ ಜಿ. ವಿಜಯಕುಮಾರ್ ಅವರು ಮಾತನಾಡುತ್ತಾ ರಕ್ತದಾನದಿಂದ ನಮಗೆ ಏಕಾಗ್ರತೆ ಹೆಚ್ಚುವುದರ ಜೊತೆಗೆ ಸದಾ ಸಂತೋಷದಿಂದ ಉಲ್ಲಾಸದಿಂದ ಇರುತ್ತೇವೆ ದಾನ ಮಾಡುವುದರಿಂದ ದೇಹದಲ್ಲಿ ಕೊಬ್ಬಿನ ಅಂಶ ಕಡಿಮೆಯಾಗುತ್ತದೆ ಅಸಾರು ರಕ್ತ ಉತ್ಪತ್ತಿಯಾಗಿ ಸದಾ ಲವಲವಿಕೆಯಿಂದ ಇರುತ್ತೇವೆ ಮೂಢನಂಬಿಕೆಯಿಂದ ಹೊರ ಬಂದ ರಕ್ತದಾನ ಮಾಡಿ ಸದೃಢವಾದ ಸಮಾಜವನ್ನು ನಿರ್ಮಾಣ ಮಾಡೋಣ ಎಂದು ನುಡಿದರು.

ಶಿಬಿರದಲ್ಲಿ 60 ಬಾರಿ ಸಂಪೂರ್ಣ ರಕ್ತದಾನ ಮಾಡಿ ಇನ್ನೂರ ಎಪ್ಪತ್ತು ಬಾರಿ ಪ್ಲೇಟ್ಲೆಟ್ಸ್ ಗಳನ್ನ ದಾನ ಮಾಡಿದ ಚಂದ್ರಕಾಂತ ಆಚಾರ್ಯ ಅವರು 116 ಬಾರಿ ರಕ್ತದಾನ ಮಾಡಿದ ಧರಣೇಂದ್ರ ದಿನಕರ್ ,ರೆಡ್ ಕ್ರಾಸ್ ನಾರಿ ನಿರ್ದೇಶಕ ಮಂಜು ಅಪ್ಪಾಜಿ ರೆಡ್ ಕ್ರಾಸ್ ಸಂಜೀವಿನಿ ರಕ್ತ ಕೇಂದ್ರದ ಸಾರ್ವಜನಿಕ ಸಂಪರ್ಕ ಅಧಿಕಾರಿ ಶೃತಿ ವಿನೋಬಾ ನಗರ ಪೊಲೀಸ್ ಠಾಣೆಯ ಪೊಲೀಸ್ ಅಧಿಕಾರಿಗಳು ಸಿಬ್ಬಂದಿ ವರ್ಗದವರು ರಕ್ತದಾನ ಮಾಡುವುದರ ಮುಖಾಂತರ ಪವಿತ್ರ ದಾನಿಗಳಾದರು.

CM Siddharamaiah ನಾಗರೀಕ‌ ಕುಂದು ಕೊರತೆಗೆ ಪರಿಹಾರ ನೀಡಿದ ಸೀಎಂ ಕಚೇರಿಯ ಮಾಧ್ಯಮ ವಿಭಾಗ

0

CM Siddharamaiah ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಸಾಣಿಕೆರೆ ಗ್ರಾಮದಲ್ಲಿ ಸಾರಿಗೆ ಬಸ್‌ ನಿಲುಗಡೆಗೆ ಅನುಮತಿ ಇದ್ದರೂ ಬಸ್‌ ನಿಲ್ಲಿಸುತ್ತಿಲ್ಲ. ಇದರಿಂದ ಸರ್ವಿಸ್‌ ರಸ್ತೆ ಮೂಲಕ ಗ್ರಾಮಕ್ಕೆ ಬಸ್‌ ಬಾರದಿರುವುದರಿಂದ ವಿದ್ಯಾರ್ಥಿಗಳಿಗೆ ಕಾಲೇಜುಗಳಿಗೆ ಹೋಗಲು ತೊಂದರೆಯಾಗುತ್ತಿದೆ ಎಂಬುದಾಗಿ ಮಾಧ್ಯಮಗಳಲ್ಲಿ ವರದಿಯಾಗಿತ್ತು.

ಇದನ್ನು ಗಮನಿಸಿದ ಮುಖ್ಯಮಂತ್ರಿಗಳ ಕಚೇರಿಯ ಕುಂದುಕೊರತೆ ವಿಭಾಗದ ವಿಶೇಷ ಕರ್ತವ್ಯಾಧಿಕಾರಿಗಳು ಅಗತ್ಯ ಕ್ರಮ ಕೈಗೊಳ್ಳುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದ್ದರು.

ಈಗಾಗಲೇ ಚಳ್ಳಕೆರೆ ಘಟಕದಿಂದ ಕಾರ್ಯಾಚರಣೆಯಾಗುವ ಎಲ್ಲಾ ವೇಗದೂತ ಸಾರಿಗೆಗಳು ಸಾಣಿಕೆರೆ ಗ್ರಾಮದಲ್ಲಿ ಸಂಚರಿಸುತ್ತಿದ್ದು, ಇದರಿಂದ ವಿದ್ಯಾರ್ಥಿಗಳಿಗೆ, ಸಾರ್ವಜನಿಕರಿಗೆ ಅನುಕೂಲವಾಗುತ್ತಿದೆ.

CM Siddharamaiah ಇತರೆ ನಿಗಮದ ಎಲ್ಲಾ ವೇಗದೂತ ಸಾರಿಗೆಗಳನ್ನು ಸದರಿ ಗ್ರಾಮದ ಸೇವಾ ರಸ್ತೆಯಲ್ಲಿ ಕಾರ್ಯಾಚರಣೆ ಮಾಡುವಂತೆ ಚಾಲನಾ ಸಿಬ್ಬಂದಿಗಳಿಗೆ ನಿರ್ದೇಶನ ನೀಡಲಾಗಿದೆ ಎಂದು ಚಿತ್ರದುರ್ಗದ ಹಿರಿಯ ವಿಭಾಗೀಯ ನಿಯಂತ್ರಣಾಧಿಕಾರಿಗಳು ತಿಳಿಸಿದ್ದಾರೆ.

ನೀವು ಸ್ಥಳೀಯವಾಗಿ ಎದುರಿಸುತ್ತಿರುವ ಸಮಸ್ಯೆಗಳನ್ನು ನಮ್ಮ ಗಮನಕ್ಕೆ ತರಲು ಮುಖ್ಯಮಂತ್ರಿಗಳ ವಿಶೇಷ ಕರ್ತವ್ಯಾಧಿಕಾರಿಗಳ @osd_cmkarnataka ‘ಎಕ್ಸ್‌ʼ ಖಾತೆಗೆ ಟ್ಯಾಗ್‌ ಮಾಡಬಹುದು.

Vagdevi Trust ವಾಗ್ದೇವಿ ಟ್ರಸ್ಟ್ ನಿಂದ ವಿದ್ಯಾಧಾರ & ವರ್ಷಾಧಾರ ಸಹಾಯಧನ ವಿತರಣಾ ಸಮಾರಂಭ

0

Vagdevi Trust ಇತ್ತಿಚೆಗೆ ತೀರ್ಥಹಳ್ಳಿಯಲ್ಲಿ ವಾಗ್ದೇವಿ ಚಾರಿಟಬಲ್ ಟ್ರಸ್ಟ್ ‌ನ ವಾರ್ಷಿಕ ಕೊಡುಗೆ ‌ಸಮಾರಂಭ ನಡೆಯಿತು. ಸಮಾಜದಲ್ಲಿನ ದುರ್ಬಲ ಮಹಿಳೆಯರಿಗೆ, ವಿಶೇಷ ಚೇತನರಿಗೆ, ಪಾಳು ಮನೆಯಲ್ಲಿ ಜೀವನಸಾಗಿಸುವ ಆರ್ಥಿಕವಾಗಿ ಹಿಂದುಳಿದವರಿಗೆ ವಾಗ್ದೇವಿ ಟ್ರಸ್ಟ್ ಕೈಲಾದಷ್ಟು ನೆರವನ್ನು ನೀಡುತ್ತಾ ಅಳಿಲು‌ಸೇವೆ ಮಾಡುತ್ತಿದೆ.ತೀರ್ಥಹಳ್ಳಿಯಲ್ಲಿ 2024-25 ಸಾಲಿನ ವಿದ್ಯಾಧಾರ ಮತ್ತು ವರ್ಷಾಧಾರ ಯೋಜನೆಯಡಿ ಸಹಾಯಧನ ವಿತರಿಸುವ ಕಾರ್ಯಕ್ರಮ ವ್ಯವಸ್ಥೆಗೊಳಿಸಲಾಗಿತ್ತು. ಸಮಾರಂಭದಲ್ಲಿ ಸಹ್ಯಾದ್ರಿ ಟ್ರಸ್ಟಿನ ಕಾರ್ಯದರ್ಶಿ ಅನಿತಾ ನಾಗರಾಜ್ ಮಾತನಾಡಿದರು.
ಮುಖ್ಯ ಅತಿಥಿಗಳಾಗಿ ಭಾರ್ಗವಿ ಪರಮೇಶ್ವರ್ ಮಾತನಾಡಿದರು.

ಟ್ರಸ್ಟಿನ ಅಧ್ಯಕ್ಷ ರವಿರಾಜ್ ವೈದ್ಯ ಅವರು ವಾಗ್ದೇವಿ ಸಂಸ್ಥೆಯ ಸಮಾಜ ಸೇವಾ ಚಟುವಟಿಕೆ ಪರಿಚಯಿಸಿದರು. ದಾನಿಗಳೂ ಕೂಡ ಟ್ರಸ್ಟಿನ ಸೇವಾಕಾರ್ಯಕ್ಕೆ ಕೈಜೋಡಿಸಿದ್ದಾರೆ. ದಾನಿ ಕೂಳೂರು ಸತ್ಯನಾರಾಯಣರಸವ್, ಡಾ .ಮುರಳೀಧರ್ ಅವರೂ ತಮ್ಮ ಮೆಚ್ವುಗೆ ವ್ಯಕ್ತಪಡಿಸಿ ಮಾತನಾಡಿದರು. ವಿದ್ಯಾರ್ಥಿನಿ ಅಶ್ವಿತಾ ತನಗೆ ಟ್ರಸ್ಡಿನಿಂದ ಆದ ನೆರವಿನ ಬಗ್ಗೆ ಮಾತನಾಡಿದಳು.

Vagdevi Trust ವರ್ಷಾದಾರ ಯೋಜನೆಯಲ್ಲಿ 15 ಅಸಹಾಯಕರಿಗೆ ಆರ್ಥಿಕ ಸಹಾಯ ನೀಡಲಾಯಿತು. ವಿದ್ಯಾಧಾರ ಯೋಜನೆಯಲ್ಲಿ 18 ವಿದ್ಯಾರ್ಥಿಗಳಿಗೆ ಧನ ಸಹಾಯ ಮಾಡಲಾಯಿತು. ಕಮ್ಮರಡಿಯ ವಿಶ್ವತೀರ್ಥ ಪ್ರೌಢ ಶಾಲೆಯಲ್ಲಿ ಓದುತ್ತಿರುವ ಇಬ್ಬರು ವಿದ್ಯಾರ್ಥಿನಿಯರ ಪರವಾಗಿ ಶುಲ್ಕಾ ಪಾವತಿ ಮಾಡಲಾಯಿತು (25000/-) ಬಸವನಿಯ ಸಾವಿತ್ರಮ್ಮ ರಾಮ ಶರ್ಮ ಅಭಲಾಶ್ರಮಕ್ಕೆ ಧನ ಸಹಾಯ ಮಾಡಲಾಯಿತು. ಒಬ್ಬ ಎಂಜಿನಿಯರಿಂಗ್ ವಿದ್ಯಾರ್ಥಿಗೆ ಸುಮಾರು ಒಂದು ಲಕ್ಷ ಮೌಲ್ಯದ ಲ್ಯಾಪ್ ಟಾಪ್
ನೀಡಲಾಗಿದೆ. ಬಡ ವಿದ್ಯಾರ್ಥಿನಿ ಒಬ್ಬಳಿಗೆ ಸಂಗೀತ ಕಲಿಯುವ ಆಸಕ್ತಿ ಇರುವುದರಿಂದ ಮ್ಯೂಸಿಕ್ ಸಿಸ್ಟಮ್ ನೀಡಲಾಗಿದೆ.
ಅಂಧ ವೃದ್ಧ ಬಡ ಮಹಿಳೆಯೊಬ್ಬರಿಗೆ ಕಾಟ್ ಮತ್ತು ಬೆಡ್ ನೀಡಲಾಗಿದೆ. ಪ್ರತಿ ತಿಂಗಳು 5 ಜನರಿಗೆ ವೈದ್ಯಕೀಯ ಸಹಾಯಧನ ನೀಡಲಾಗುತ್ತಿದೆ. ವೃದ್ಧಾಶ್ರಮ ಒಂದರಲ್ಲಿ ಇರುವ ಒಬ್ಬ ಬಡವರಿಗೆ ಮಾಸಿಕ ಖರ್ಚು ವೆಚ್ಚಗಳನ್ನು ಭರಿಸಲಾಗುತ್ತಿದೆ
ಆರು ಬಡ ಕುಟುಂಬಗಳಿಗೆ ಪ್ರತಿ ತಿಂಗಳು ದಿನಸಿ ಸಾಮಾನು ಉಚಿತವಾಗಿ ಪೂರೈಸಲಾಗುತ್ತಿದೆ.

Narendra Modi ಮಾಜಿ ಪ್ರಧಾನಿ ಮನ್ ಮೋಹನ್ ಸಿಂಗ್ ಅವರ ಕೊಡುಗೆ ಅವಿಸ್ಮರಣೀಯ- ಪ್ರಧಾನಿ ನರೇಂದ್ರ ಮೋದಿ

0

Narendra Modi ಭಾರತದ ಮಾಜಿ ಪ್ರಧಾನಿ, ಆರ್ಥಿಕ ತಜ್ಞ ಡಾ.ಮನ್ ಮೋಹನ್ ಸಿಂಗ್ ನಿಧನರಾಗಿದ್ದಾರೆ. ಸುದ್ದಿ ತಿಳಿದ ಪ್ರಧಾನಿ ನರೇಂದ್ರ ಮೋದಿ ಅವರು ದಿವಂಗತರ ನಿವಾಸಕ್ಕೆ ತೆರಳಿ ಅಂತಿಮ ನಮನ ಸಲ್ಲಿಸಿದರು.
ದೇಶಕ್ಕೆ ದಿವಂಗತ ಮನ್ ಮೋಹನ್ ಸಿಂಗ್ ಅವರು ನೀಡಿದ ಕೊಡುಗೆ ಅವಿಸ್ಮರಣೀಯ ಎಂದು ಪ್ರಧಾನಿ ಮೋದಿ ದಿವಂಗತರ ಗುಣಗಾನ ಮಾಡಿದ್ದಾರೆ

Narendra Modi ಭಾರತವು ತನ್ನ ಅತ್ಯಂತ ಪ್ರತಿಷ್ಠಿತ ನಾಯಕರಲ್ಲಿ ಒಬ್ಬರಾದ ಡಾ. ಮನಮೋಹನ್ ಸಿಂಗ್ ಜಿ ಅವರನ್ನು ಕಳೆದುಕೊಂಡು ದುಃಖಿಸುತ್ತದೆ.
ವಿನಮ್ರ ಮೂಲದಿಂದ ಏರಿದ ಅವರು ಗೌರವಾನ್ವಿತ ಅರ್ಥಶಾಸ್ತ್ರಜ್ಞರಾಗಿ ಔನ್ನತ್ಯಸಾಧಿಸಿದ್ದರು . ಅವರು ಹಣಕಾಸು ಸಚಿವರಾಗಿ ಸೇರಿದಂತೆ ವಿವಿಧ ಸರ್ಕಾರಿ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದರು, ವರ್ಷಗಳಲ್ಲಿ ನಮ್ಮ ಆರ್ಥಿಕ ನೀತಿಯ ಮೇಲೆ ಬಲವಾದ ಮುದ್ರೆ ಹಾಕಿದರು. ಸಂಸತ್ತಿನಲ್ಲಿ ವ್ಯಕ್ತವಾದ ಅವರ ಅಭಿಪ್ರಾಯಗಳು ಉನ್ನತ ಒಳನೋಟವುಳ್ಳವುಗಳಾಗಿವೆ. ನಮ್ಮ ಪ್ರಧಾನಿಯಾಗಿ, ಅವರು ಜನರ ಜೀವನವನ್ನು ಸುಧಾರಿಸಲು ವ್ಯಾಪಕ ಪ್ರಯತ್ನಗಳನ್ನು ಮಾಡಿದರು ಎಂದು ಪ್ರಧಾನಿ ಮೋದಿ ತಮ್ಮ ಸಂದೇಶದಲ್ಲಿ ತಿಳಿಸಿದ್ದಾರೆ.

Manmohan Singh ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ನಿಧನ.ರಾಜ್ಯ ಸರ್ಕಾರದಿಂದ ಏಳು ದಿನಗಳ ಶೋಕಾಚರಣೆ

0

Manmohan Singhಭಾರತದ ಮಾಜಿ ಪ್ರಧಾನ ಮಂತ್ರಿಗಳಾದ ಡಾ. ಮನಮೋಹನ್ ಸಿಂಗ್ ಇವರ ನಿಧನಕ್ಕೆ ರಾಜ್ಯ ಸರ್ಕಾರವು ತೀವು ಸಂತಾಪ ವ್ಯಕ್ತಪಡಿಸಿದೆ.
ದಿವಂಗತರ ಗೌರವಾರ್ಥವಾಗಿ ದಿನಾಂಕ:27.12.2024 ರಂದು ಶುಕ್ರವಾರ ರಾಜ್ಯದಾದ್ಯಂತ ಸಾರ್ವಜನಿಕ ಸರ್ಕಾರಿ ಕಚೇರಿಗಳಿಗೆ ಮತ್ತು ಎಲ್ಲಾ ಶಾಲಾ ಕಾಲೇಜುಗಳಿಗೆ ಹಾಗೂ ಸರ್ಕಾರಿ ಸ್ವಾಮ್ಯದ ಅಂಗ ಸಂಸ್ಥೆಗಳು ಒಳಗೊಂಡಂತೆ ಸಾರ್ವಜನಿಕ ರಜೆ ಘೋಷಿಸಿದೆ. ದಿನಾಂಕ:26.12.2024 ರಿಂದ ದಿನಾಂಕ:01.01.2025 ರವರೆಗೆ (ಎರಡು ದಿನಗಳು ಸೇರಿದಂತೆ) ಏಳು ದಿನಗಳು ರಾಜ್ಯಾದ್ಯಂತ ಶೋಕವನ್ನು ಆಚರಿಸಲಾಗುವುದು. Manmohan Singh ಈ ಅವಧಿಯಲ್ಲಿ ಯಾವುದೇ ಸಾರ್ವಜನಿಕ ಮನೋರಂಜನಾ ಕಾರ್ಯಕ್ರಮಗಳನ್ನು ನಿಷೇಧಿಸಲಾಗಿದೆ. ನಿಯತವಾಗಿ ಹಾರಿಸಲ್ಪಡುವ ಕಟ್ಟಡಗಳ ಮೇಲೆ ರಾಷ್ಟ್ರಧ್ವಜವನ್ನು ಅರ್ಧ ಮಟ್ಟದಲ್ಲಿ ಹಾರಿಸಲಾಗುವುದು.
ಸದರಿ ಆದೇಶವು ನೆಗೋಷಿಯಬಲ್ ಇನ್ಸುಮೆಂಟ್ ಆಕ್ಟ್ 1881 ರ ಪ್ರಕಾರವು ಕೂಡಾ ಸಾರ್ವಜನಿಕ ರಜೆಯೆಂದು ಘೋಷಿಸಲಾಗಿದೆ.