Saturday, April 26, 2025
Saturday, April 26, 2025

Sahyadri Narayana Multispeciality Hospital ಶಿವಮೊಗ್ಗ ಸಹ್ಯಾದ್ರಿ ನಾರಾಯಣ ಹೃದಯಾಲಯ ವೈದ್ಯರ ಸಾಧನೆ. ಮೊಣಕಾಲು ಶಸ್ತ್ರಚಿಕಿತ್ಸೆ ಯಶಸ್ವಿ

Date:

Sahyadri Narayana Multispeciality Hospital ಶಿವಮೊಗ್ಗದ ಸಹ್ಯಾದ್ರಿ ನಾರಾಯಣ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ವೈದ್ಯರು ಒಂದೇ ದಿನದಲ್ಲಿ ಐದು ಮೊಬೈಲ್ ಬೇರಿಂಗ್ ಪಾರಶಿಯಲ್‌ ನೀ ರಿಪ್ಲೇಸ್‌ಮೆಂಟ್‌ ಸರ್ಜರಿ ( ಒಳ ಭಾಗದ ಅರ್ಧ ಮೊಣಕಾಲು ಬದಲಾವಣೆ ಶಸ್ತ್ರಚಿಕಿತ್ಸೆ) ಯಶಸ್ವಿಯಾಗಿ ನೆರವೇರಿಸಿ ವಿಶೇಷ ಸಾಧನೆ ಮಾಡಿದ್ದಾರೆ.

ಈ ಶಸ್ತ್ರಚಿಕಿತ್ಸೆಗಳನ್ನುಎಲಬು, ಕೀಲು ಶಸ್ತ್ರಚಿಕಿತ್ಸಕ ಡಾ. ಅಭಿಷೇಕ್ ಎಂ.ಬಿ ನೇತೃತ್ವದ ತಜ್ಞರ ತಂಡ, ಮತ್ತು ಅನಸ್ಥೇಶಿಯಾ ತಜ್ಞರಾದ ಡಾ. ಅಜಿತ್ ಶೆಟ್ಟಿ ಹಾಗೂ ಡಾ. ಚಕ್ರವರ್ತಿ ಸೊಂಡೂರು ಅವರ ಸಹಯೋಗದಲ್ಲಿ ಯಶಸ್ವಿಯಾಗಿ ನೆರವೇರಿಸಲಾಗಿದೆ.

ಈ ಮಹತ್ವದ ಸಾಧನೆ ಮತ್ತು ವಿಶಿಷ್ಟ ಶಸ್ತ್ರಚಿಕಿತ್ಸಾ ಪ್ರಯತ್ನವು ಕರ್ನಾಟಕದಲ್ಲಿ ಖಾಸಗಿ ಆಸ್ಪತ್ರೆ ವಲಯದಲ್ಲಿ ಮೊಟ್ಟಮೊದಲ ಬಾರಿಗೆ ನಡೆದದ್ದುವಿಶೇಷ.

50 ರಿಂದ 75 ವರ್ಷ ವಯೋಮಿತಿಯಲ್ಲಿರುವ ಐದು ರೋಗಿಗಳು ಈ ಶಸ್ತ್ರಚಿಕಿತ್ಸೆಗೊಳಗಾಗಿದ್ದು, ಶಸ್ತ್ರಚಿಕಿತ್ಸೆಯ ನಂತರ ಯಾವುದೇ ನೋವು ಇಲ್ಲದೆ ದೈನಂದಿನ ಚಟುವಟಿಕೆಗಳನ್ನು ಪುನಃ ಪ್ರಾರಂಭಿಸಿದ್ದಾರೆ.

ಡಾ. ಅಭಿಷೇಕ್ ಎಂ.ಬಿ ಈ ಶಸ್ತ್ರಚಿಕಿತ್ಸೆಯ ಬಗ್ಗೆ ಮಾತನಾಡುತ್ತಾ, “ ಈ ಶಸ್ತ್ರ ಚಿಕಿತ್ಸೆ ಕಡಿಮೆ ಆಕ್ರಮಣಕಾರಿಯಾಗಿದೆ ಅಂದರೆ ಇಲ್ಲಿ ದೇಹದಲ್ಲಿ ಯಾವುದೇ ದೊಡ್ಡ ಛೇಧನ ವಿಲ್ಲದೆ ನೇರವೇರಿಸ ಬಹುದಾದ ಶಸ್ತ್ರ ಚಿಕಿತ್ಸೆಯಾಗಿದೆ. ಇದು ಮೊಣಕಾಲಿನ ಒಳಭಾಗದ (ಮೀಡಿಯಲ್ ಕಾಂಪಾರ್ಟ್‌ಮೆಂಟ್) ಅಸ್ಥಿ ಸಂಧಿವಾತದಿಂದ ಬಳಲುವವರಿಗೆ ಉಪಯುಕ್ತವಾಗಿದೆ. ಕ್ರಿಯಾಶೀಲ ಜೀವನಶೈಲಿ ನಡೆಸಲು, ಕ್ರೀಡೆಗಳಲ್ಲಿ ಭಾಗವಹಿಸಲು ಅಥವಾ ಸಾಹಸಮಯ ಕ್ರೀಡೆಯಲ್ಲಿ ಪಾಲ್ಗೊಳ್ಳುವ ಹಿರಿಯ ವಯಸ್ಸಿನವರಿಗೆ ಇದು ಸೂಕ್ತವಾಗಿದೆ,” ಎಂದು ಹೇಳಿದರು.

Sahyadri Narayana Multispeciality Hospital ಈ ಎಲ್ಲಾ ರೋಗಿಗಳು ಒಂದೇ ಕಾಲಿನಲ್ಲಿ ಸಂಧಿವಾತದ ಸಮಸ್ಯೆ ಯಿಂದ ಬಳಲುತ್ತಿದ್ದರು ಎಂದು ಹೇಳಿದ ಡಾ. ಅಭಿಷೇಕ್‌. ” ಈ ಚಿಕಿತ್ಸೆಯಲ್ಲಿ, ಸ್ಥಿರ ಪ್ಲಾಸ್ಟಿಕ್ ಬೇರಿಂಗ್ ಮತ್ತು ಮೊಬೈಲ್ ಪ್ಲಾಸ್ಟಿಕ್ ಬೇರಿಂಗ್ ಎಂಬ ಎರಡು ಪ್ರಕಾರಗಳಿವೆ. ಮೊಬೈಲ್ ಬೇರಿಂಗ್ ಪ್ರಕಾರ ದೀರ್ಘಕಾಲದ ಬಾಳಿಕೆ ಹೊಂದಿದೆ, ಈ ಚಿಕಿತ್ಸೆಗೆ ಒಳಪಟ್ಟ ರೋಗಿಯು ಶೀಘ್ರ ಗುಣಮುಖನಾಗುವದಲ್ಲದೆ, ರೋಗಿಯು ಯಾವುದೇ ತೊಂದರೆ ಇಲ್ಲದೆ ತನ್ನ ದೈನಂದಿನ ಕಾರ್ಯಗಳನ್ನು ಮಾಡಬಹುದಾಗಿದೆ, ಎಂದರು.

“ನಾವು ಸಹ್ಯಾದ್ರಿ ನಾರಾಯಣ ಆಸ್ಪತ್ರೆಯಲ್ಲಿ ಕಳೆದ ವರ್ಷದಿಂದ ಮೊಬೈಲ್ ಬೇರಿಂಗ್ ಒಳ ಭಾಗದ ಅರ್ಧ ಮೊಣಕಾಲು ಬದಲಾವಣೆ ಶಸ್ತ್ರಚಿಕಿತ್ಸೆ ಗಳನ್ನು ಮಾಡುತ್ತಿದ್ದು, ರೋಗಿಗಳು ಯಾವುದೇ ನೋವಿಲ್ಲದೆ ಹಾಗೂ ಚಲನಾ ಸಾಮರ್ಥ್ಯ ಕುಂದದೆ ಅತ್ಯಂತ ಚೇತರಿಕೆಯಿಂದ ತಮ್ಮ ದೈನಂದಿನ ಕಾರ್ಯಗಳನ್ನು ಮಾಡುತ್ತಿದ್ದಾರೆ ಎಂದು ಡಾ.ಅಭಿಷೇಕ ತಿಳಿಸಿದರು.

ಈ ಸಾಧನೆ ಸಂಪೂರ್ಣ ಯೋಚನೆ ಮತ್ತು ಅಚ್ಚುಕಟ್ಟಾದ ಅನುಷ್ಠಾನದ ಫಲಿತಾಂಶವಾಗಿದೆ. ಈ ಶಸ್ತ್ರಚಿಕಿತ್ಸೆ ಮಿನಿಮಲಿ ಇನವೇಸಿವ್‌ ಆಗಿರುವದರಿಂದ ಹಾಗೂ ಕಡಿಮೆ ಸಮಯ ತೆಗೆದುಕೊಳ್ಳುವದರಿಂದ ಒಂದೇ ದಿನದಲ್ಲಿ ನಿರಂತರ ಐದು ಶಸ್ತ್ರಚಿಕಿತ್ಸೆಗಳನ್ನು ನಿರ್ವಹಿಸಲು ನೆರವಾಯಿತು, ಎಂದು ವೈದ್ಯರು ಹೇಳಿದರು.

ಈ ಸಾಧನೆ ನಾರಾಯಣ ಆಸ್ಪತ್ರೆ ಸಮೂಹದ ಹೃದಯ ಸಂಬಂಧಿತ ಆರೋಗ್ಯ ಸೇವೆಗಳಲ್ಲಿನ ಪ್ರಸಿದ್ಧಿಯ ಹೊರತಾಗಿಯೂ, ಇನ್ನಿತರ ವೈದ್ಯಕೀಯ ತಜ್ಞತೆಯಲ್ಲಿ ಮಹತ್ವದ ಸಾಧನೆಯನ್ನುಎತ್ತಿ ಹಿಡಿದಿದ್ದು. ನಾರಾಯಣ ಆಸ್ಪತ್ರೆ ಕೇವಲ ಹೃದಯರೋಗದ ಆರೋಗ್ಯ ಸೇವೆಗಳಲ್ಲದೆ, ಇನ್ನಿತರು ವೈದ್ಯಕೀಯ ತಜ್ಞತೆಯಲ್ಲೂ ಅತ್ಯಾಧುನಿಕ ಚಿಕಿತ್ಸೆ ನೀಡುವಲ್ಲಿ ಮುಂದಿದೆ ಎನ್ನುವುದನ್ನು ಈ ಸಾಧನೆ ಸಾರಿ ಹೇಳಿದೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

CM siddharamaih ಪಹಲ್ಗಾಮ್ ದುರ್ಘಟನೆ‌ ಗುಪ್ತಚರ ವ್ಯವಸ್ಥೆಯ ವೈಫಲ್ಯ- ಮುಖ್ಯಮಂತ್ರಿ ಸಿದ್ಧರಾಮಯ್ಯ

CM siddharamaih ಕರ್ನಾಟಕದಲ್ಲಿ ಅವಧಿ ಮೀರಿ ನೆಲೆಸಿರುವ ವಿದೇಶಿಗರ ಬಗ್ಗೆ...

Dr. Rajkumar ಡಾ.ರಾಜ್ ಅವರಿಗಿದ್ದಷ್ಟು ಅಭಿಮಾನಿಗಳು ಬೇರೆ ಯಾವ ನಟರಿಗೂ ಇಲ್ಲ: ವಿ.ಮೂರ್ತಿ

Dr. Rajkumar ವರನಟ ನಟಸಾರ್ವಭೌಮ ಕನ್ನಡದ ಮೇರು ನಟ ಡಾಕ್ಟರ್ ರಾಜಕುಮಾರ್...

Acharya Tulsi National College of Commerce ರಕ್ತದಾನಿಗಳು ಸಮಾಜದ ನೈಜ ಹೀರೋಗಳು- ಡಾ.ಪಿ.ನಾರಾಯಣ್

Acharya Tulsi National College of Commerce ಎಲ್ಲಾ ದಾನಗಳಿಗಿಂತ ರಕ್ತದಾನ...