Wednesday, March 18, 2026
Wednesday, March 18, 2026
Home Blog Page 448

Karnataka Media Academy ಪತ್ರಿಕೋದ್ಯಮ ಇಂಟರ್ನ್ ಷಿಪ್ ಗೆ ಅರ್ಜಿ ಸಲ್ಲಿಸಲು ಜನವರಿ 20 ಅಂತಿಮ ದಿನಾಂಕ

0

Karnataka Media Academy ಕರ್ನಾಟಕ ಮಾಧ್ಯಮ ಅಕಾಡೆಮಿಯು ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಮಹಿಳಾ ಅಭ್ಯರ್ಥಿಗಳಿಂದ ವಿವಿಧ ಪತ್ರಿಕಾಲಯಗಳಲ್ಲಿ ತರಬೇತಿ ಪಡೆಯಲು ಅರ್ಜಿ ಆಹ್ವಾನಿಸಿದೆ.

ಒಟ್ಟು ಐವರು ಮಹಿಳಾ ಅಭ್ಯರ್ಥಿಗಳಿಗೆ ಅವಕಾಶವಿದ್ದು, ಆಯ್ಕೆಯಾದ ಅಭ್ಯರ್ಥಿಗಳಿಗೆ ಎರಡು ತಿಂಗಳ ಅವಧಿಗೆ ವಿವಿಧ ಪತ್ರಿಕಾ ಕಚೇರಿಗಳಲ್ಲಿ ತರಬೇತಿ ಪಡೆಯಲು ಅವಕಾಶ ಕಲ್ಪಿಸಲಾಗುವುದು. ತರಬೇತಿ ಅವಧಿಯಲ್ಲಿ ಮಾಸಿಕ 20,000 ರೂ. ಶಿಷ್ಯವೇತನ ನೀಡಲಾಗುವುದು.

Karnataka Media Academy ಅಭ್ಯರ್ಥಿಗಳು ರಾಜ್ಯದ ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ ಪಡೆದಿರಬೇಕು. ವಯಸ್ಸು 28 ವರ್ಷ ಮೀರಿರಬಾರದು. ಅರ್ಹತಾ ಪರೀಕ್ಷೆಯ ಮೂಲಕ ಅರ್ಹ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು. ಈ ಬಗ್ಗೆಖ ಹೆಚ್ಚಿನ ಮಾಹಿತಿಯನ್ನು ಮುಂದಿನ ದಿನಗಳಲ್ಲಿ ತಿಳಿಸಲಾಗುವುದು.

ಆಸಕ್ತ ಅಭ್ಯರ್ಥಿಗಳು ಜನವರಿ 20 ರ ಒಳಗಾಗಿ ತಮ್ಮ ಸ್ವವಿವರ, ದೂರವಾಣಿ ಸಂಖ್ಯೆ, ಇ-ಮೇಲ್‌ ವಿಳಾಸ, ಆರ್ಥಿಕ ಸ್ಥಿತಿ, ಅಂಕಪಟ್ಟಿಗಳ ಮಾಹಿತಿಯನ್ನು ಸ್ಕ್ಯಾನ್‌ ಮಾಡಿ karnatakamediaacademy@gmail.com ಗೆ ಇ-ಮೇಲ್‌ ಮೂಲಕ ಕಳುಹಿಸಬಹುದಾಗಿದೆ ಎಂದು ಕರ್ನಾಟಕ ಮಾಧ್ಯಮ ಅಕಾಡೆಮಿಯ ಪ್ರಕಟಣೆ ತಿಳಿಸಿದೆ.

Co-operative Societies and Friendly Co-operatives ಸಹಕಾರ & ಸೌಹಾರ್ದ ಸಂಘಗಳಿಗೆ ಲೆಕ್ಕಪರಿಶೋಧನೆ ಪೂರೈಸಲು ಸೂಚನೆ

0

Co-operative Societies and Friendly Co-operatives ಶಿವಮೊಗ್ಗ ಜಿಲ್ಲಾ ಕಾರ್ಯವ್ಯಾಪ್ತಿಯಲ್ಲಿ ಬರುವ ಎಲ್ಲಾ ಸಹಕಾರ ಸಂಘಗಳು ಹಾಗೂ ಸೌಹಾರ್ದ ಸಹಕಾರಿಗಳು 2024-25 ನೇ ಸಾಲಿನ ಲೆಕ್ಕ ಪರಿಶೋಧನೆಯನ್ನು ಸಹಕಾರ ಸಂಘಗಳ ಕಾಯ್ದೆ ಕಲಂ 63(1) ರ ಮೇರೆಗೆ ಸೆಪ್ಟೆಂಬರ್-1 ರೊಳಗೆ ಪೂರೈಸಿಕೊಳ್ಳಬೇಕಾಗಿರುತ್ತದೆ. ಆದ್ದರಿಂದ ಇಲಾಖೆಯವರು http://www.sahakaradarpana.kar.nic ವೆಬ್‌ಸೈಟ್‌ನಲ್ಲಿ ಪ್ರಕಟಿಸಿರುವ ಅರ್ಹ ಲೆಕ್ಕಪರಿಶೋಧಕರ ಪೈಕಿ ಒಬ್ಬರನ್ನು ಸಂಘದ 2023-24 ನೇ ಸಾಲಿನ ಮಹಾಸಭೆಯಲ್ಲಿ ಆಯ್ಕೆ ಮಾಡಿಕೊಂಡಿರುವ ಬಗ್ಗೆ ಮಾಹಿತಿಯನ್ನು ಸಹಕಾರ ಸಂಘಗಳ ಲೆಕ್ಕಪರಿಶೋಧನಾ ಉಪನಿರ್ದೇಶಕರ ಕಚೇರಿಗೆ ಉಪನಿರ್ದೇಶಕರ ಕಚೇರಿಗೆ ಸಲ್ಲಿಸದೇ ಇರುವವರು ಸಹಕಾರ ಸಂಘಗಳ ಲೆಕ್ಕಪರಿಶೋಧನಾ Co-operative Societies and Friendly Co-operatives ಉಪನಿರ್ದೇಶಕರ ಕಚೇರಿ, ಸಹಕಾರ ಸಂಘಗಳ ಲೆಕ್ಕಪರಿಶೋಧನಾ ಇಲಾಖೆ, ಜ್ಯುವೆಲ್ ರಾಕ್ ಹೋಟೆಲ್ ರಸ್ತೆ, ಜಗನ್ನಾಥ ನರ್ಸಿಂಗ್ ಹೋಂ ಪಕ್ಕ, ಪಿಜಿಎಸ್ ಟವರ್, 2ನೇ ಮಹಡಿ, ಶಿವಮೊಗ್ಗ ರವರ ಕಚೇರಿಗೆ ಸಲ್ಲಿಸುವಂತೆ ಹಾಗೂ ಸಕಾಲದಲ್ಲಿ ಲೆಕ್ಕಪರಿಶೋಧನೆ ನಿರ್ವಹಿಸಿಕೊಂಡು ವರದಿಯ ಪ್ರತಿಯನ್ನು ಕಡ್ಡಾಯವಾಗಿ ದಿ; 01-09-2024 ರೊಳಗೆ ಸಹಕಾರ ಸಂಘಗಳ ಲೆಕ್ಕಪರಿಶೋಧನಾ ಉಪ ನಿರ್ದೇಶಕರ ಕಚೇರಿ ಶಿವಮೊಗ್ಗ ಜಿಲ್ಲೆ ಈ ಕಚೇರಿಗೆ ಸಲ್ಲಿಸುವಂತೆ ಸಹಕಾರ ಸಂಘಗಳ ಲೆಕ್ಕಪರಿಶೋಧನಾ ಇಲಾಖೆಯ ಉಪನಿರ್ದೇಶಕರು ತಿಳಿಸಿದ್ದಾರೆ.

Pradhan Mantri Fisheries Scheme ಪ್ರಧಾನ ಮಂತ್ರಿ ಮತ್ಸ್ಯಸಂಪದ ಯೋಜನೆಗೆ ಅರ್ಜಿ ಆಹ್ವಾನ

0

Pradhan Mantri Fisheries Scheme ಪ್ರಧಾನ ಮಂತ್ರಿ ಮತ್ಸ್ಯಸಂಪದ ಮತ್ತು ನೀಲಿಕ್ರಾಂತಿ ಯೋಜನೆಯಡಿ 2022-23 ರಿಂದ 2024-25 ನೇ ಸಾಲಿನವರೆಗೆ ವಿವಿಧ ಘಟಕಗಳಿಗೆ ಸಹಾಯಧನ ನೀಡಲು ಮೀನುಗಾರಿಕಾ ಇಲಾಖೆ ವತಿಯಿಂದ ಅರ್ಜಿ ಆಹ್ವಾನಿಸಲಾಗಿದೆ.

ಸಹಾಯಧನ ಘಟಕಗಳ ಉಪಯೋಜನೆಗಳನ್ನು ಪಡೆಯಲು ಸಾಮಾನ್ಯ ವರ್ಗದ ಫಲಾನುಭವಿಗಳಿಗೆ ಶೇ.40 ಹಾಗೂ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಮಹಿಳಾ ಫಲಾನುಭವಿಗಳಿಗೆ ಶೇ.60 ರಷ್ಟು ಸಹಾಯಧನ ನೀಡಲಾಗುತ್ತದೆ.

ಮೀನು ಕೃಷಿಕೊಳಗಳ ನಿರ್ಮಾಣ ಒಟ್ಟು 4.90 ಹೆಕ್ಟೇರ್‌ಗೆ ಸಾಮಾನ್ಯ 3.10 ಹೆಕ್ಟೇರ್ ಮತ್ತು ಪರಿಶಿಷ್ಟ ಜಾತಿಗೆ 1.80 ಹೆಕ್ಟೇರ್ ನೀಡಲಿದ್ದು, ಮೀನುಕೃಷಿ ಕೊಳ ನಿರ್ಮಾಣ ಮಾಡಿ ಮೀನು ಕೃಷಿ ಕೈಗೊಂಡವರಿಗೆ ಹೂಡಿಕೆಗಳ ವೆಚ್ಚದ ಮೇಲೆ ಒಟ್ಟು 8.60 ಹೆಕ್ಟೇರ್‌ಗೆ ಸಾಮಾನ್ಯ 4.80 ಹೆಕ್ಟೇರ್, ಸಾಮಾನ್ಯ ಮಹಿಳೆ 1.80 ಹೆಕ್ಟೇರ್, ಪರಿಶಿಷ್ಟ ಜಾತಿ 1.00 ಹೆಕ್ಟೇರ್ ಮತ್ತು ಪರಿಶಿಷ್ಟ ಪಂಗಡ 1.00 ಹೆಕ್ಟೇರ್, ಯಾಂತ್ರೀಕೃತ ದೋಣಿ ಹಾಗೂ ಸಾಂಪ್ರದಾಯಿಕ ಮೀನುಗಾರರಿಗೆ-ಎಫ್‌ಆರ್‌ಪಿ ಬದಲಿ ದೋಣಿ ನಿರ್ಮಾಣದ 1 ಘಟಕಕ್ಕೆ ಸಾಮಾನ್ಯ-01, ಜೊತೆಗೆ ಮೀನುಮರಿ ಪಾಲನಾ ಘಟಕ ನಿರ್ಮಾಣದ ಸಹಾಯಕ್ಕೆ ಒಟ್ಟು 6.02 ಹೆಕ್ಟೇರ್ ಅದರಲ್ಲಿ ಸಾಮಾನ್ಯ 2.08 ಹೆಕ್ಟೇರ್, ಮಹಿಳೆ 1.84 ಹೆಕ್ಟೇರ್ ಮತ್ತು ಪರಿಶಿಷ್ಟ ಪಂಗಡ 2.10 ಹೆಕ್ಟೇರ್ ನೀಡಲಾಗುತ್ತದೆ.

Pradhan Mantri Fisheries Scheme ಸೈಕಲ್ ವಿತ್ ಐಸ್ ಬಾಕ್ಸ್ ಸಾಮಾನ್ಯ ವರ್ಗಕ್ಕೆ 1 ಗುರಿ, ಮಧ್ಯಮ ವರ್ಗದ ಅಲಂಕಾರಿಕ ಸಾಕಾಣಿಕಾ ಘಟಕದ ಪರಿಶಿಷ್ಟ ಜಾತಿ 1 ಗುರಿ ಇದೆ. ಹೊಸತಾದ ಮೀನು ಮಾರಾಟದ ಕಿಯೋಸ್ಕ್ ನಿಮಾಣಕ್ಕಾಗಿ ಅಲಂಕಾರಿಕಾ ಮೀನುಮಾರಾಟ ಮಳಿಗೆ ಸೇರಿದಂತೆ ಪರಿಶಿಷ್ಟ ಜಾತಿ 01 ಘಟಕ.

ಆಸಕ್ತರು ಜ. 15 ರ ಸಂಜೆ 5.30 ಗಂಟೆಯೊಳಗೆ ಆಯಾ ತಾಲ್ಲೂಕಿನ ಮೀನುಗಾರಿಕೆ ಸಹಾಯಕ ನಿರ್ದೇಶಕರ ಕಚೇರಿಯಿಂದ ಅರ್ಜಿಗಳನ್ನು ಪಡೆದು ಸಂಬಂಧಪಟ್ಟ ತಾಲ್ಲೂಕಿನ ಮೀನುಗಾರಿಕೆ ಸಹಾಯಕ ನಿರ್ದೇಶಕರ ಕಚೇರಿಗೆ ಪೂರ್ಣ ದಾಖಲೆಗಳೊಂದಿಗೆ ಸಲ್ಲಿಸಬೇಕು ಎಂದು ಮೀನುಗಾರಿಕೆ ಉಪನಿದೇರ್ಶಕರು ತಿಳಿಸಿದ್ದಾರೆ.

Diksuchi Adventures ಮಲ್ಲಂದೂರ್ ನರಸಿಂಹ ಪರ್ವತಕ್ಕೆಚಾರಣ ಮಾಡುವ ಆಸಕ್ತರಿಗೆ ಮಾಹಿತಿ

0

Diksuchi Adventures ಶಿವಮೊಗ್ಗ ನಗರದ ದಿಕ್ಸೂಚಿ ಅಡ್ವೆಂಚರ್ಸ್‌ ವತಿಯಿಂದ ಜನವರಿ 19-1-25ರ ಭಾನುವಾರ ಮಲಂದೂರ್ ಬಳಿ ಇರುವ ಬಳಿ ನರಸಿಂಹ ಪರ್ವತಕ್ಕೆ ಒಂದು ದಿನದ ಚಾರಣ ಹಮ್ಮಿಕೊಳ್ಳಲಾಗಿದೆ ಕೊಳ್ಳಲಾಗಿದೆ.
ಶಿವಮೊಗ್ಗದಿಂದ ಜನವರಿ 19ರಂದು ಭಾನುವಾರ ಬೆಳಗ್ಗೆ 4.30 ಕ್ಕೆ ಚಾರಣ ಆರಂಭಗೊಳ್ಳಲಿದ್ದು, ಬೆಳಗ್ಗೆ7.00ಗಂಟೆ ಗೆ ಮಲಂದೂರ್ ಚೆಕ್ ಪೋಸ್ಟ್ ಬಳಿ ಇರುವ ಬೇಸ್ ಕ್ಯಾಂಪ್ ತಲುಪಿ ಬೆಳಗಿನ ಉಪಾಹಾರ ಸೇವಿಸಿದ ನಂತರ ಅಲ್ಲಿಂದ ಬರ್ಕಣ ಫಾಲ್ಸ್. ನರಸಿಂಹ ಪರ್ವತ ಕ್ಕೆ ಚಾರಣ ಆರಂಭಗೊಳ್ಳಲಿದೆ. ನಂತರ ಕಿಗ್ಗ .ಹಾಗೂ ಶೃಂಗೇರಿ ದೇವಸ್ಥಾನ ವೀಕ್ಷಿಸಿವಾಪಸ್ ಶಿವಮೊಗ್ಗಕ್ಕೆ ರಾತ್ರಿ ಬರುವುದು ಒಟ್ಟು ಹೋಗಿ ಬರುವುದು ಚಾರಣದ ದೂರ 19 ಕಿಲೋಮೀಟರ್
Diksuchi Adventures ಚಾರಣದಲ್ಲಿ ಉಪಾಹಾರ, ಊಟ, ಬಸ್ ಸೌಲಭ್ಯ, ಅರಣ್ಯ ಪ್ರವೇಶದ ಅನುಮತಿ ವ್ಯವಸ್ಥೆ ಮಾಡಲಾಗುತ್ತದೆ. ಚಾರಣದಲ್ಲಿ ಭಾಗಿಯಾಗಲು ಆಸಕ್ತ ಇರುವವರು ಹೆಚ್ಚಿನ ಮಾಹಿತಿಗೆ ಮೊಬೈಲ್ ಸಂಖ್ಯೆ 8277314779 ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

BJP Shivamogga ರಾಜ್ಯದಲ್ಲಿ ಬಾಣಂತಿಯರ ಸರಣಿ ಸಾವು ಬಿಜೆಪಿ ಉಗ್ರ ಪ್ರತಿಭಟನೆ

0

BJP Shivamogga ರಾಜ್ಯದಲ್ಲಿ ಬಾಣಂತಿಯರು ಮತ್ತು ಹಸುಗೂಸುಗಳ ಸರಣಿ ಸಾವಿನ ಹಿನ್ನೆಲೆಯಲ್ಲಿ ಶಿವಮೊಗ್ಗ ಬಿಜೆಪಿ ಜಿಲ್ಲಾ ಮಹಿಳಾ ಮೋರ್ಚಾದ ವತಿಯಿಂದ ಆರೋಗ್ಯ ಸಚಿವರಾದ ದಿನೇಶ್ ಗುಂಡೂರಾವ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವರಾದ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಈ ಕೂಡಲೇ ರಾಜೀನಾಮೆ ನೀಡಿ ತನಿಖೆ ಎದುರಿಸಬೇಕು ಎಂದು ಆಗ್ರಹಿಸಿ ನಡೆದ ಪ್ರತಿಭಟನೆಯಲ್ಲಿ ಶಿವಮೊಗ್ಗ ನಗರ ಶಾಸಕರಾದ ಎಸ್.ಎನ್ ಚನ್ನಬಸಪ್ಪ ಅವರು ಅವರು ಭಾಗವಹಿಸಿದ್ದರು.

BJP Shivamogga ಈ ಸಂದರ್ಭದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷರು ಹಾಗೂ ಶಿಕಾರಿಪುರದ ವಿಧಾನಸಭಾ ಕ್ಷೇತ್ರದ ಶಾಸಕರಾದ ವಿಜಯೇಂದ್ರ ಯಡಿಯೂರಪ್ಪ, ರಾಜ್ಯ ಪ್ರಕೋಷ್ಟಗಳ ಸಂಯೋಜಕರಾದ ಎಸ್.ದತ್ತಾತ್ರಿ, ಬಿಜೆಪಿ ಜಿಲ್ಲಾಧ್ಯಕ್ಷರಾದ ಟಿ.ಡಿ ಮೇಘರಾಜ್, ಬಿಜೆಪಿ ನಗರಾಧ್ಯಕ್ಷರಾದ ಮೋಹನ್ ರೆಡ್ಡಿ, ವಿಧಾನ ಪರಿಷತ್ ಸದಸ್ಯರಾದ ಡಾ. ಧನಂಜಯ್ ಸರ್ಜಿ ಮತ್ತು ಭಾರತಿ ಶೆಟ್ಟಿ, ಮಹಿಳಾ ಮೋರ್ಚಾದ ಜಿಲ್ಲಾ ಹಾಗೂ ನಗರದ ಪದಾಧಿಕಾರಿಗಳು, ಬಿಜೆಪಿ ಮುಖಂಡರುಗಳು, ಕಾರ್ಯಕರ್ತರು ಹಾಗೂ ಮತ್ತಿತರರು ಉಪಸ್ಥಿತರಿದ್ದರು.

Rotary East English School ಮಕ್ಕಳ ಪ್ರತಿಭಾ ವೈವಿಧ್ಯ ಪ್ರದರ್ಶನಕ್ಕೆ ರೋಟರಿ ಶಾಲೆಯಲ್ಲಿ ವಿನೂತನ ಕಾರ್ಯಕ್ರಮ

0

Rotary East English School ರೋಟರಿ ಪೂರ್ವ ಆಂಗ್ಲ ಶಾಲೆಯ ಎಲ್.ಕೆ.ಜಿ. & ಯು.ಕೆ.ಜಿ. ಮಕ್ಕಳ ಪ್ರತಿಭೆಯನ್ನು ಅವರ ಪೋಷಕರ ಹಾಗೂ ಆಡಳಿತ ಮಂಡಳಿಯವರ ಮುಂದೆ ಪ್ರದರ್ಶಿಸುವ ವಿನೂತನ ಕಾರ್ಯಕ್ರಮವನ್ನು ಶಾಲಾ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದು, ಈ ಸಂದರ್ಭದಲ್ಲಿ ಮಕ್ಕಳಿಂದ ನಮ್ಮ ಸಮಾಜಕ್ಕೆ ಸಹಾಯ ಮಾಡುವ ವ್ಯಕ್ತಿಗಳ ಪಾತ್ರಗಳ ನಿರ್ವಹಣೆ, ವಿವಿಧ ಬಣ್ಣಗಳ ಗುರುತಿಸುವಿಕೆ, ಆಕಾರಗಳನ್ನು ಗುರುತಿಸುವುದು, ಪದಗಳ ಅರ್ಥವನ್ನು ಅಭಿನಯದ ಮೂಲಕ ತೋರಿಸುವುದು, ಅಭಿನಯ ಪೂರ್ವಕ ಕಥೆಗಳನ್ನು ಹೇಳುವುದು, ಅಭಿನಯ ಪೂರ್ವಕ ಗೀತೆಗಳನ್ನು ಹೇಳುವುದು, ಪದ್ಯಗಳ ಕಂಠಪಾಠ ಒಪ್ಪಿಸುವುದು, ರೈಮಿಂಗ್ ವರ್ಡ್ಸ್ ಹೇಳುವುದು, ತಮ್ಮ ಸ್ವಾ-ಪರಿಚಯವನ್ನು ಇಂಗ್ಲೀಷ್‌ನಲ್ಲಿ ಮಾಡುವುದು, ಇಂಗ್ಲೀಷ್ ಪದಗಳನ್ನು ರಚಿಸುವುದು, ಇತ್ಯಾದಿ ಚಟುವಟಿಕೆಗಳನ್ನು ಪ್ರದರ್ಶಿಸುವುದರ ಮೂಲಕ ಮಕ್ಕಳ ಕಲಿಕೆಯ ಮಟ್ಟದ ಹಾಗೂ ಗಳಿಸಿರುವ ಪ್ರತಿಭೆಯ ಅನಾವರಣವನ್ನು ಮಾಡಲಾಯಿತು. ಈ ಕಾರ್ಯಕ್ರಮದಲ್ಲಿ ಸುಮಾರು ೨೦ಕ್ಕೂ ಹೆಚ್ಚು ತಾಯಂದಿರು, ಆಡಳಿತ ಮಂಡಳಿ ಪದಾಧಿಕಾರಿಗಳಾದ ಉಪಾಧ್ಯಕ್ಷರು ರೊ. ಡಾ|| ಪರಮೇಶ್ವರ್ ಡಿ. ಶಿಗ್ಗಾಂವ್, ಕಾರ್ಯದರ್ಶಿ ರೊ. ರಾಮಚಂದ್ರ ಎಸ್.ಸಿ., ಖಜಾಂಚಿ ರೊ. ವಿಜಯ್ ಕುಮಾರ್ ಜಿ., ಸಹ ಕಾರ್ಯದರ್ಶಿ ರೊ. ನಾಗವೇಣಿ ಎಸ್.ಆರ್., ಶಾಲೆಯ ಪ್ರಾಂಶುಪಾಲರಾದ ಶ್ರೀ ಸೂರ್ಯನಾರಾಯಣ್ ಆರ್., ಇವರುಗಳು ಹಾಜರಿದ್ದು, ಪಾಲ್ಗೊಂಡ ಎಲ್ಲಾ ಮಕ್ಕಳಿಗೆ ಆಡಳಿತ ಮಂಡಳಿ ವತಿಯಿಂದ ಬಹುಮಾನ ವಿತರಿಸಿದರು.

Rotary East English School ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಮ್ಯಾನೇಜಿಂಗ್ ಟ್ರಸ್ಟಿ ಹಾಗೂ ನಿವೃತ್ತ ಡಿ.ಪಿ.ಐ. ರೊ. ಚಂದ್ರಶೇಖರಯ್ಯ ಎಂ., ಇವರು ಮಾತನಾಡುತ್ತಾ, 3 ರಿಂದ 8 ವರ್ಷದ ಅವಧಿಯ ಮಕ್ಕಳಿಗೆ ಪೌಷ್ಠಿಕವಾದ ಆಹಾರ ಮಾತ್ರ ನೀಡುವುದಲ್ಲದೆ ಪ್ರೀ.ಎಲ್.ಕೆ.ಜಿ., ಎಲ್.ಕೆ.ಜಿ., ಯು.ಕೆ.ಜಿ. ಹಾಗೂ 1 ಮತ್ತು 2ನೇ ತರಗತಿ ಮಕ್ಕಳಿಗೆ ಚಟುವಟಿಕೆ, ಸೃಜನಶೀಲತೆ ಹಾಗೂ ಆಟಗಳ ಆಧಾರಿತ ಶಿಕ್ಷಣವನ್ನು ಕೊಡುವುದರ ಮೂಲಕ, ಅವರ ಜ್ಞಾನೇಂದ್ರೀಯಗಳಿಗೆ ಸೂಕ್ತ ಪ್ರಚೋದನೆ ಒದಗಿಸಿ ಅವರ ಮೆದುಳಿನ ಬೆಳವಣಿಗೆಯನ್ನು ಉಂಟು ಮಾಡಬಹುದಾಗಿದ್ದು, ಈ ರೀತಿ ಪೋಷಕರ ಮುಂದೆ ಎಲ್.ಕೆ.ಜಿ., ಯು.ಕೆ.ಜಿ. ತರಗತಿಗಳಲ್ಲಿ ಇಂತಹ ಚಟುವಟಿಕೆಗಳ ಹಾಗೂ ಪ್ರತಿಭೆಗಳ ಪ್ರದರ್ಶನ ಮಾಡುವುದರಿಂದ ಮಕ್ಕಳಿಗೆ ಪ್ರೋತ್ಸಾಹ ನೀಡಿದಂತಾಗುತ್ತದೆ ಎಂದರು. ತಮ್ಮ ಮಾತನ್ನು ಮುಂದುವರೆಸುತ್ತಾ, ಈ ಪ್ರತಿಭಾ ಪ್ರದರ್ಶನದ ಹಿಂದೆ ಶ್ರಮ ವಹಿಸಿದ ಪೂರ್ವ ಪ್ರಾಥಮಿಕ ಶಿಕ್ಷಕಿಯರಾದ ಶ್ರೀಮತಿ ರೂಪ ರಾವ್ ಮತ್ತು ಶ್ರೀಮತಿ ಸುಜಾತ ಅವರ ಸೇವೆಯನ್ನು ಪ್ರಶಂಶಿಸಿದರು. ಈ ಕಾರ್ಯಕ್ರಮದಲ್ಲಿ ಸ್ವಾಗತ, ವಂದನಾರ್ಪಣೆ ಹಾಗೂ ನಿರೂಪಣೆಯನ್ನು ಎಲ್.ಕೆ.ಜಿ., ಯು.ಕೆ.ಜಿ. ಮಕ್ಕಳೆ ನಿರ್ವಹಿಸಿದ್ದು, ವಿಶೇಷವಾಗಿತ್ತು.

Karnataka Urban Water Supply and Drainage Board ಮಹಾನಗರ ಪಾಲಿಕೆ ನೀರಿನ ಕಂದಾಯ ಸ್ವೀಕೃತಿ ಕೌಂಟರ್ ಜನವರಿ 5 ರ ಭಾನುವಾರವೂ ತೆರೆದಿರುತ್ತದೆ

0

Karnataka Urban Water Supply and Drainage Board 2024-25ನೇ ಸಾಲಿನ ನೀರಿನ ಕಂದಾಯ ಮತ್ತು ಬಾಕಿ ಕರವಸೂಲಾತಿ ಮಾಡಲು ನಗರದ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ನಿರ್ವಹಣಾ ವಿಭಾಗ ಮತ್ತು ಉಪವಿಭಾಗದ ವತಿಯಿಂದ ಜ.5 ರ ಭಾನುವಾರದಂದು ವಿಶೇಷ ವಸೂಲಾತಿ ಕೌಂಟರ್‌ಗಳನ್ನು ತರೆಯಲಾಗಿದೆ.

Karnataka Urban Water Supply and Drainage Board ನೀರಿನ ಕಂದಾಯ ಮತ್ತು ಬಾಕಿ ಕರ ವಸೂಲಾತಿಗಾಗಿ ನಗರದ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯು ಗುಂಡಪ್ಪಶೆಡ್ ಪಾರ್ಕ್ ಹತ್ತಿರ, ಆರ್‌ಎಂಎಲ್ ನಗರ, ಭಾರತೀಯ ಸಭಾಭವನ, ವಿನೋಬನಗರ ಪೊಲೀಸ್ ಠಾಣೆ ಎದುರು ಪೊಲೀಸ್ ಚೌಕಿ, ಗಾಂಧಿನಗರ ಪಾರ್ಕ್ ಹತ್ತಿರ, ನೇತಾಜಿ ಸರ್ಕಲ್ ಆಟೋ ಸ್ಟ್ಯಾಂಡ್ ಹತ್ತಿರ ವಿಶೇಷ ವಸೂಲಾತಿ ಕೌಂಟರ್ ತೆರೆದಿದ್ದು, ನೀರಿನ ಖಾತೆದಾರರು ಬಾಕಿ ಉಳಿಸಿಕೊಂಡಿರುವ ನೀರಿನ ಕಂದಾಯವನ್ನು ಪಾವತಿಸದಿದ್ದಲ್ಲಿ ನೀರಿನ ಸಂಪರ್ಕವನ್ನು ಕಡಿತಗೊಳಿಸಲಾಗುವುದು ಎಂದು ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಸಹಾಯಕ ಕಾರ್ಯಪಾಲಕ ಅಭಿಯಂತರು ತಿಳಿಸಿದ್ದಾರೆ.

Yashasvini Yojana ಯಶಸ್ವಿನಿ ಯೋಜನೆಗೆ ನೋಂದಣಿ ಪ್ರಕ್ರಿಯೆ ಆರಂಭ

0

Yashasvini Yojana ಸಹಕಾರ ಇಲಾಖೆ ವತಿಯಿಂದ ರಾಜ್ಯದ ಯಶಸ್ವನಿ ನೆಟ್‌ವರ್ಕ್ ಆಸ್ಪತ್ರೆಗಳಲ್ಲಿ ಸಹಕಾರಿಗಳಿಗೆ ಯಶಸ್ವಿನಿ ಯೋಜನೆಯ ಚಿಕಿತ್ಸಾ ಸೌಲಭ್ಯಗಳನ್ನು ಒದಗಿಸಲಾಗುವುದು.

ದಿ: 1/1/2024 ರಿಂದ ಯಶಸ್ವಿನಿ ನೋಂದಣಿ ಆರಂಭಗೊಂಡಿದ್ದು, ದಿ: 01-04-2025 ರಿಂದ 31/3/2026 ರವರೆಗೆ ಚಿಕಿತ್ಸಾ ಅವಧಿ ಚಾಲ್ತಿಯಲ್ಲಿರುತ್ತದೆ.

ಸಹಕಾರ ಸಂಘದ ಸದಸ್ಯರು ಆದಷ್ಟು ಬೇಗ ಗ್ರಾಮಾಂತ ಸಹಕಾರ ಸಂಘಗಳ ಗರಿಷ್ಟ 4 ಸದಸ್ಯರ ಕುಟುಂಬಕ್ಕೆ ವಾರ್ಷಿಕ ರೂ.500, 4 ಕ್ಕಿಂತ ಹೆಚ್ಚಿನ ಸದಸ್ಯರಿದಲ್ಲಿ ತಲಾ ರೂ.100 ಹಾಗೂ ನಗರದ 4 ಸದಸ್ಯರ ಕುಟಂಬಕ್ಕೆ ವಾರ್ಷಿಕ ರೂ.1000 ನಿಗದಿ ಮಾಡಿದ್ದು, 4 ಕ್ಕಿಂತ ಹೆಚ್ಚಿನ ಸದಸ್ಯರಿದಲ್ಲಿ ತಲಾ ರೂ.200 ಗಳಂತೆ ಮೊತ್ತ ಪಾವತಿಸಿ ನೊಂದಣಿ ಮಾಡಿಕೊಳ್ಳಬೇಕು.

ಯಶಸ್ವಿನಿ ಯೋಜನೆಯಲ್ಲಿ ಮುಖ್ಯವಾಗಿ ಹೃದಯಕ್ಕೆ ಸಂಬಂಧಿಸಿದ ರೋಗಗಳು ಹಾಗೂ ಕಿವಿ, ಮೂಗು, ಗಂಟಲು ವ್ಯಾದಿಗಳು, ಕರುಳಿನ ಖಾಯಿಲೆಗಳು, ನರಗಳಿಗೆ ಸಂಬಂಧಿಸಿದ, ಕಣ್ಣಿನ, ಮೂಳೆ ರೋಗಗಳು, ಸ್ತ್ರೀಯರಿಗೆ ಸಂಬಂಧಿಸಿದ ಖಾಯಿಲೆಗಳಿಗೆ ಚಿಕಿತ್ಸಾ ಸೌಲಭ್ಯವಿರುತ್ತದೆ.

Yashasvini Yojana ಈ ಯೋಜನೆಯಡಿಯಲ್ಲಿ ಒಂದು ಫಲಾನುಭವಿ ಕುಟುಂಬಕ್ಕೆ ವಾರ್ಷಿಕ ವೈದ್ಯಕೀಯ ಚಿಕಿತ್ಸಾ ವೆಚ್ಚದ ಗರಿಷ್ಟ ಮಿತಿಯು ರೂ.5 ಲಕ್ಷಕ್ಕೆ ನಿಗದಿಪಡಿಸಿಲಾಗಿರುತ್ತದೆ. ಸಹಕಾರ ಸಂಘದ ಸದಸ್ಯರಿಗೆ ರಾಜ್ಯದ ಯಶಸ್ವಿನಿ ನೆಟ್‌ವರ್ಕ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಸೌಲಭ್ಯಗಳನ್ನು ನೀಡಲು ನಿರ್ಧರಿಸಿದ್ದು, ಫಲಾನುಭವಿಗಳು ಚಿಕಿತ್ಸೆ ಪಡೆಯಲು ಆಸ್ಪತ್ರೆಗೆ ದಾಖಲಾಗುವ ಸಂದರ್ಭದಲ್ಲಿ ನೆಟ್‌ವರ್ಕ್ ಆಸ್ಪತ್ರೆಗಳ ಮಾಹಿತಿಯನ್ನು ಮತ್ತು ಯೋಜನೆ ಅನ್ವಯವಾಗಿರುವುದನ್ನು ಆಸ್ಪತ್ರೆಗಳಲ್ಲಿ ಖಚಿತ ಪಡೆಸಿಕೊಂಡು ಚಿಕಿತ್ಸೆ ಪಡೆಯತಕ್ಕದಾಗಿದೆ.

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಸದಸ್ಯರು ಚಿಕಿತ್ಸೆ ಪಡೆಯುವಾಗ ಪ್ರತಿಯೊಬ್ಬರು ತಮ್ಮ ಜಾತಿ ಪ್ರಮಾಬದ ಆರ್‌ಡಿ ನಂಬರ್ ತರುವುದು ಕಡ್ಡಾಯವಾಗಿದೆ.
ಹೆಚ್ಚಿನ ಮಾಹಿತಿಗಾಗಿ ಹರೀಶ್, ಯಶಸ್ವಿನಿ ಯೋಜನೆಯ ಕೋ-ಆರ್ಡಿನೇಟರ್ ಮೊ;9739588777 ಗೆ ಸಂಪರ್ಕಿಸಬಹುದಾಗಿದ್ದು, ಫಲಾನುಭವಿಗಳು ಈ ಯೋಜನೆ ಸದುಪಯೋಗ ಪಡಿಸಿಕೊಳ್ಳುಬೇಕೆಂದು ಸಹಕಾರ ಸಂಘಟಗಳ ಉಪನಿಬಂಧಕರಾದ ನಾಗಭೂಷಣ್ ಚಂದ್ರಶೇಖರ್ ಕಲ್ಮನೆ ತಿಳಿಸಿದ್ದಾರೆ.

Santhosh S. Lad ಜನವರಿ 6. ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರಿಂದ ಜಿಲ್ಲಾಮಟ್ಟದ ಸಮಾಲೋಚನಾ ಸಭೆ

0

Santhosh S. Lad ಕಾರ್ಮಿಕ ಸಚಿವರು ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರಾದ ಸಂತೋಷ್ ಎಸ್.ಲಾಡ್ ಇವರ ಅಧ್ಯಕ್ಷತೆಯಲಿ ಜ.06 ರ ಬೆಳಿಗ್ಗೆ 9 ಗಂಟೆಗೆ ಜಿಲ್ಲಾ ಪಂಚಾಯ್ತಿಯ ಡಾ.ಅಬ್ದುಲ್ ನಜೀರ್ ಸಾಬ್ ಸಭಾಂಗಣದಲ್ಲಿ ಸಮಾಲೋಚನಾ ಸಭೆ, ಕಾರ್ಮಿಕ ಇಲಾಖೆಯ ಪ್ರಗತಿ ಪರಿಶೀಲನಾ ಸಭೆ, ಮಾಲೀಕ ವರ್ಗ ಮತ್ತು ಆಡಳಿತ ವರ್ಗದ ಸಭೆ ಹಾಗೂ ಕಾರ್ಮಿಕ ಸಂಘಟನೆಗಳ ಸಭೆಯನ್ನು ಆಯೋಜಿಸಲಾಗಿದೆ ಎಂದು ಕಾರ್ಮಿಕ ಅಧಿಕಾರಿ ವೇಣುಗೋಪಾಲ್ ಎಂ.ಪಿ ತಿಳಿಸಿದ್ದಾರೆ.

Khel Ratna Award ಕೇಂದ್ರ ಸರ್ಕಾರದಿಂದ ಖೇಲ್ ರತ್ನ ಪ್ರಶಸ್ತಿ ಪ್ರಕಟ

0

Khel Ratna Award ಪ್ರತಿ ವರ್ಷ ಕ್ರೀಡಾ ಕ್ಷೇತ್ರದಲ್ಲಿ ಅಮೋಘ ಸಾಧನೆ ಮಾಡಿದ ಕ್ರೀಡಾ ಪಟುಗಳಿಗೆ ಧ್ಯಾನ್ ಚಂದ ಖೇಲ್ ರತ್ನ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುತ್ತಿದೆ.

ಈ ಪಟ್ಟಿಯಲ್ಲಿ ಒಲಿಂಪಿಕ್ಸ್ ಕ್ರೀಡಾ ಕೂಟದಲ್ಲಿ ಪದಕ ಬಾಚಿಕೊಂಡ ಸಾಧಕರಿದ್ದಾರೆ. ಮನು ಭಾಕರ್ , ಹರ್ಮನ್ ಪ್ರೀತ್ ಸಿಂಗ್ , ಡಿ.ಗುಕೇಶ್, ಪ್ರವೀಣ್ ಕುಮಾರ್ ಅವರಿಗೆ ಮೇಜರ್ ಧ್ಯಾನಚಂದ್ ಖೇಲ್ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ.

ಪ್ಯಾರೀಸ್‌ನಲ್ಲಿ ಭಾರತದ ಕ್ರೀಡಾಭಿಮಾನಿಗಳಿಗೆ ಡಬಲ್‌ ಖುಷಿ ನೀಡಿದ ಮನು ಕೊರಳಿಗೆ ಖೇಲ್‌ ರತ್ನ ಗೌರವ ಸಂದಿದೆ. ಇವರು ಪ್ಯಾರಿಸ್‌ ಒಲಿಂಪಿಕ್ಸ್‌ನ ಮಹಿಳೆಯರ 10 ಮೀಟರ್‌ ಏರ್ ರೈಫಲ್‌ ಹಾಗೂ ಮಿಶ್ರ ತಂಡ ವಿಭಾಗದಲ್ಲೂ ಕಂಚಿನ ಸಾಧನೆ ಮಾಡಿದ್ದರು.

ಪ್ಯಾರಿಸ್‌ನಲ್ಲಿ ನಡೆದಿದ್ದ ಪ್ಯಾರಾಲಿಂಪಿಕ್ಸ್‌ ಕ್ರೀಡಾ ಕೂಟದಲ್ಲಿ ಸ್ಥಿರ ಪ್ರದರ್ಶ ನೀಡಿ ದೇಶಕ್ಕಿ ಕೀರ್ತಿ ತಂದ ಅಥ್ಲಿಟ್‌ಹಳ ಸಾಲಿನ ಕಾಣಿಸಕೊಳ್ಳುವ ಇನ್ನೊಂದು ಹೆಸರು ಪ್ರವೋಣ್ ಕುಮಾರ್. ಇವರು ಹೈಜಂಪ್‌ನ ಟಿ64 ನಲ್ಲಿ ಬಂಗಾರ ಸಾಧನೆ ಮಾಡಿ ದೇಶಕ್ಕೆ ಕೀರ್ತಿ ತಂದಿದ್ದಾರೆ. ಇವರಿಗೂ ಖೇಲ್ ರತ್ನ ಪ್ರಶಸ್ತಿ ಸಂದಿದೆ.

Khel Ratna Award ಇತ್ತೀಚಿಗೆ ಸಿಂಗಾಪುರದಲ್ಲಿ ನಡೆದ ವಿಶ್ವ ಚೆಸ್‌ ಚಾಂಪಿಯನ್‌ಶಿಪ್‌ ಪ್ರಶಸ್ತಿ ಮುಡಿಗೇರಿಸಿಕೊಂಡಿರುವ ಡಿ ಗುಕೇಶ್‌ ಅವರ ಮುಡಿಗೂ, ಖೇಲ್‌ ರತ್ನ ಪ್ರಶಸ್ತಿ ಸಂದಿದೆ. ಇವರು ಚೆಸ್‌ ಚಾಂಪಿಯನ್‌ ಪಟ್ಟವನ್ನು ಅಲಂಕರಿಸಿದ ಭಾರತದ ಎರಡನೇ ಚೆಸ್ ಆಟಗಾರ ಎಂಬ ಹಿರಿಮೆ ತಮ್ಮದಾಗಿಸಿಕೊಂಡಿದ್ದಾರೆ. ಇವರಿಗೂ ಮೊದಲು ವಿಶ್ವನಾಥನ್‌ ಆನಂದ್‌ ಈ ಸಾಧನೆ ಮಾಡಿದ್ದರು.

ಟೀಮ್ ಇಂಡಿಯಾ ಹಾಕಿ ತಂಡದ ನಾಯಕ ಹರ್ಮನ್ ಪ್ರೀತ್ ಸಿಂಗ್ ಅವರ ಅಮೋಘ ಕ್ರೀಡಾ ಜೀವನಕ್ಕಾಗಿ ಇವರಿಗೆ ಪ್ರತಿಷ್ಠಿತ ಖೇಲ್ ರತ್ನ ಪ್ರಶಸ್ತಿ ಸಂದಿದೆ. ಇವರ ಮುಂದಾಳತ್ವದಲ್ಲಿ ಟೀಮ್ ಇಂಡಿಯಾ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಅಮೋಘ ಪ್ರದರ್ಶನ ನೀಡಿತ್ತು. ಅಲ್ಲದೆ ಸತತ ಎರಡನೇ ಬಾರಿಗೆ ಕಂಚಿನ ಪದಕ ಗೆದ್ದು ಇತಿಹಾಸ ನಿರ್ಮಿಸಿತ್ತು. ಇವರ ಈ ಸಾಧನೆಗೆ ಕೇಂದ್ರ ಸರ್ಕಾರ ಗೌರವ ನೀಡಿದೆ.