Sunday, August 2, 2026
Sunday, August 2, 2026

Pradhan Mantri Fisheries Scheme ಪ್ರಧಾನ ಮಂತ್ರಿ ಮತ್ಸ್ಯಸಂಪದ ಯೋಜನೆಗೆ ಅರ್ಜಿ ಆಹ್ವಾನ

Date:

Pradhan Mantri Fisheries Scheme ಪ್ರಧಾನ ಮಂತ್ರಿ ಮತ್ಸ್ಯಸಂಪದ ಮತ್ತು ನೀಲಿಕ್ರಾಂತಿ ಯೋಜನೆಯಡಿ 2022-23 ರಿಂದ 2024-25 ನೇ ಸಾಲಿನವರೆಗೆ ವಿವಿಧ ಘಟಕಗಳಿಗೆ ಸಹಾಯಧನ ನೀಡಲು ಮೀನುಗಾರಿಕಾ ಇಲಾಖೆ ವತಿಯಿಂದ ಅರ್ಜಿ ಆಹ್ವಾನಿಸಲಾಗಿದೆ.

ಸಹಾಯಧನ ಘಟಕಗಳ ಉಪಯೋಜನೆಗಳನ್ನು ಪಡೆಯಲು ಸಾಮಾನ್ಯ ವರ್ಗದ ಫಲಾನುಭವಿಗಳಿಗೆ ಶೇ.40 ಹಾಗೂ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಮಹಿಳಾ ಫಲಾನುಭವಿಗಳಿಗೆ ಶೇ.60 ರಷ್ಟು ಸಹಾಯಧನ ನೀಡಲಾಗುತ್ತದೆ.

ಮೀನು ಕೃಷಿಕೊಳಗಳ ನಿರ್ಮಾಣ ಒಟ್ಟು 4.90 ಹೆಕ್ಟೇರ್‌ಗೆ ಸಾಮಾನ್ಯ 3.10 ಹೆಕ್ಟೇರ್ ಮತ್ತು ಪರಿಶಿಷ್ಟ ಜಾತಿಗೆ 1.80 ಹೆಕ್ಟೇರ್ ನೀಡಲಿದ್ದು, ಮೀನುಕೃಷಿ ಕೊಳ ನಿರ್ಮಾಣ ಮಾಡಿ ಮೀನು ಕೃಷಿ ಕೈಗೊಂಡವರಿಗೆ ಹೂಡಿಕೆಗಳ ವೆಚ್ಚದ ಮೇಲೆ ಒಟ್ಟು 8.60 ಹೆಕ್ಟೇರ್‌ಗೆ ಸಾಮಾನ್ಯ 4.80 ಹೆಕ್ಟೇರ್, ಸಾಮಾನ್ಯ ಮಹಿಳೆ 1.80 ಹೆಕ್ಟೇರ್, ಪರಿಶಿಷ್ಟ ಜಾತಿ 1.00 ಹೆಕ್ಟೇರ್ ಮತ್ತು ಪರಿಶಿಷ್ಟ ಪಂಗಡ 1.00 ಹೆಕ್ಟೇರ್, ಯಾಂತ್ರೀಕೃತ ದೋಣಿ ಹಾಗೂ ಸಾಂಪ್ರದಾಯಿಕ ಮೀನುಗಾರರಿಗೆ-ಎಫ್‌ಆರ್‌ಪಿ ಬದಲಿ ದೋಣಿ ನಿರ್ಮಾಣದ 1 ಘಟಕಕ್ಕೆ ಸಾಮಾನ್ಯ-01, ಜೊತೆಗೆ ಮೀನುಮರಿ ಪಾಲನಾ ಘಟಕ ನಿರ್ಮಾಣದ ಸಹಾಯಕ್ಕೆ ಒಟ್ಟು 6.02 ಹೆಕ್ಟೇರ್ ಅದರಲ್ಲಿ ಸಾಮಾನ್ಯ 2.08 ಹೆಕ್ಟೇರ್, ಮಹಿಳೆ 1.84 ಹೆಕ್ಟೇರ್ ಮತ್ತು ಪರಿಶಿಷ್ಟ ಪಂಗಡ 2.10 ಹೆಕ್ಟೇರ್ ನೀಡಲಾಗುತ್ತದೆ.

Pradhan Mantri Fisheries Scheme ಸೈಕಲ್ ವಿತ್ ಐಸ್ ಬಾಕ್ಸ್ ಸಾಮಾನ್ಯ ವರ್ಗಕ್ಕೆ 1 ಗುರಿ, ಮಧ್ಯಮ ವರ್ಗದ ಅಲಂಕಾರಿಕ ಸಾಕಾಣಿಕಾ ಘಟಕದ ಪರಿಶಿಷ್ಟ ಜಾತಿ 1 ಗುರಿ ಇದೆ. ಹೊಸತಾದ ಮೀನು ಮಾರಾಟದ ಕಿಯೋಸ್ಕ್ ನಿಮಾಣಕ್ಕಾಗಿ ಅಲಂಕಾರಿಕಾ ಮೀನುಮಾರಾಟ ಮಳಿಗೆ ಸೇರಿದಂತೆ ಪರಿಶಿಷ್ಟ ಜಾತಿ 01 ಘಟಕ.

ಆಸಕ್ತರು ಜ. 15 ರ ಸಂಜೆ 5.30 ಗಂಟೆಯೊಳಗೆ ಆಯಾ ತಾಲ್ಲೂಕಿನ ಮೀನುಗಾರಿಕೆ ಸಹಾಯಕ ನಿರ್ದೇಶಕರ ಕಚೇರಿಯಿಂದ ಅರ್ಜಿಗಳನ್ನು ಪಡೆದು ಸಂಬಂಧಪಟ್ಟ ತಾಲ್ಲೂಕಿನ ಮೀನುಗಾರಿಕೆ ಸಹಾಯಕ ನಿರ್ದೇಶಕರ ಕಚೇರಿಗೆ ಪೂರ್ಣ ದಾಖಲೆಗಳೊಂದಿಗೆ ಸಲ್ಲಿಸಬೇಕು ಎಂದು ಮೀನುಗಾರಿಕೆ ಉಪನಿದೇರ್ಶಕರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Breaking News ತೀರ್ಥಹಳ್ಳಿಯಲ್ಲಿ ಮಳೆಗೆ ಶೆಡ್ ಕುಸಿತ: ಮೂವರ ಸಾವು.ಡಿಸಿಎಂ. ಡಾ.ಜಿ.ಪರಮೇಶ್ವರ ಸಂತಾಪ.

Breaking News ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿಯ ಇಂದಿರಾನಗರದಲ್ಲಿ ಭಾರೀ ಮಳೆಗೆ ಗುಡ್ಡ...

D.K.Shivakumar ರಾಜಕೀಯಕ್ಕಿಂತ ರಾಜ್ಯದ ರೈತರ ಮತ್ತುಜನರ ಹಿತವೇ ಮುಖ್ಯ,- ಡಿ.ಕೆ.ಶಿವಕುಮಾರ್

D.K.Shivakumar ಕಾವೇರಿ ವಿವಾದ ನಮಗೂ ಹೊಸದಲ್ಲ, ನಿಮಗೂ ಹೊಸದಲ್ಲ. ಈ...

S.N. Channabasappa ಇಂದು ಪ್ರತಿಭಟನೆ ಎನ್ನುವುದು ಜಗತ್ತಿನ ವರ್ತಮಾನವಾಗಿದೆ- ಎಸ್.ಎನ್.ಚನ್ನಬಸಪ್ಪ

S.N. Channabasappa ಇಂಗ್ಲಿಷ್ ಪ್ರಾಧ್ಯಾಪಕ ಡಾ.ಸಿ. ಚನ್ನಪ್ಪ ವಾಲೆಮನೆ ಅವರ ‘ವಾಯ್ಸ್...