Wednesday, March 18, 2026
Wednesday, March 18, 2026
Home Blog Page 444

Shankara Eye Hospital ಕಣ್ಣಿನ ಕ್ಷೇಮದ ಬಗ್ಗೆ ಜನಜಾಗೃತಿ ಮೂಡಿಸಿದ ಶಂಕರ್ ಕಣ್ಣಿನ ಆಸ್ಪತ್ರೆಯ”ದೃಷ್ಟಿರಥಯಾತ್ರೆ”

0

Shankara Eye Hospital “ದೃಷ್ಟಿ ರಥ ಯಾತ್ರೆ” ಯನ್ನು ಶಂಕರ ಕಣ್ಣಿನ ಆಸ್ಪತ್ರೆ ಮತ್ತು ACOIN (ಅಸೋಸಿಯೇಶನ್‌ ಆಫ್‌ ಕಮ್ಯೂನಿಟಿ ಆಪ್ತಲ್‌ ಮೋಲೋಜಿಸ್ಟ್ಸ್‌ ಆಫ್‌ ಇಂಡಿಯಾ) ನ ಸಹಯೋಗದೊಂದಿಗೆ ಕೈಗೊಂಡಿದ್ದು, ಡಾ.ಸ್ವಪನ್ ಕುಮಾರ್‌ ಸಮಂತ ರವರು ದೇಶಾದ್ಯಂತ ನೇತ್ರ ಜಾಗೃತಿ ಜಾಥಾವನ್ನು ಭಾರತದಾದ್ಯಂತ ಕೈಗೊಂಡು, ಪ್ರತಿ ಜಿಲ್ಲೆಯಲ್ಲಿ ನೇತ್ರ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ನಮ್ಮ ಶಿವಮೊಗ್ಗದಲ್ಲಿ 101 ನೇ ಜಾಥಾವನ್ನು ಆಯೋಜಿಸಿತ್ತು.
ಈ ಕಾರ್ಯಕ್ರಮದಲ್ಲಿ ಮೊದಲನೇಯದಾಗಿ ಶಂಕರ ಕಣ್ಣಿನ ಆಸ್ಪತ್ರೆಯಲ್ಲಿ ACOIN ಸಂಸ್ಥೆಯ ಕಾರ್ಯ ವೈಕರಿಯನ್ನು ಹಾಗೂ ಇಂದಿನ ಕಾರ್ಯಯೋಜನೆಯನ್ನು ರೂಪಿಸಲಾಯಿತು. ಶ್ರೀಯುತರು ತಮ್ಮ ಕಾರ್ಯವಿಧಾನವನ್ನು ಹಾಗೂ ಗುರಿಗಳನ್ನು ಸಂಸ್ಥೆಯೊಂದಿಗೆ ಹಂಚಿಕೊಂಡರು.
Shankara Eye Hospital ಡಾ.ಸ್ವಪನ್ ಕುಮಾರ್‌ ಸಮಂತ, ಡಾ|| ಮಲ್ಲಿಕಾರ್ಜುನ್‌ ಹಾಗೂ ಡಾ|| ಮಹೇಶ್‌ ಅವರು ಜಾಥಾಗೆ ಚಾಲನೆ ನೀಡಿದರು, ಜಾಥಾ ಶಂಕರ ಕಣ್ಣಿನ ಆಸ್ಪತ್ರೆಯಿಂದ ಆರಂಭವಾಗಿ ನಗರದ ಖಾಸಗಿ ಬಸ್‌ ನಿಲ್ದಾಣ ಹಾಗೂ ನಗರದ ಪ್ರಮುಖ ರಸ್ತೆಗಳಲ್ಲಿ ನೇತ್ರ ಜಾಗೃತಿಯ ಅರಿವನ್ನು ಧ್ವನಿವರ್ಧಕಗಳ ಮೂಲಕ ಸಂದೇಶವನ್ನು ಶ್ರೀಯುತರು ತಿಳಿಸುತ್ತಾ ಸಾಗಿದರು. ನಂತರ ಸಂಸ್ಕೃತ ಹಳ್ಳಿ ಮತ್ತೂರಿಗೆ ತಲುಪಿ ಶಾರದಾ ವಿಲಾಸ ಸರ್ಕಾರಿ ಶಾಲೆಯಲ್ಲಿ ಮಕ್ಕಳಿಗೆ ಕಣ್ಣಿನ ಆರೈಕೆಯ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ನೇತ್ರದಾನದ ಮಹತ್ವ, ಮಕ್ಕಳ ಕಣ್ಣಿನ ಆರೈಕೆ, ಉತ್ತಮ ಆಹಾರ ಪದ್ದತಿ, ಸಕ್ಕರೆ ಕಾಯಿಲೆಯಿಂದಾಗುವ ತೊಂದರೆಗಳು, ಕಣ್ಣಿನ ಪೊರೆ ಹಾಗೂ ನರ ಪರೀಕ್ಷೆ ಮಹತ್ವ, ಸುರಕ್ಷಿತ ಕಣ್ಣಿನ ಆರೈಕೆಯ ಸೂತ್ರಗಳು, ದೃಷ್ಟಿ ದೋಷ ಪರಿಹಾರ ಮುಂತಾದ ಮಹತ್ವದ ವಿಷಯಗಳ ಬಗ್ಗೆ ಡಾ.ಸ್ವಪನ್ ಕುಮಾರ್‌ ಸಮಂತರವರು ತಿಳಿಸಿದರು.
ಕಾರ್ಯಕ್ರಮದಲ್ಲಿ ACOIN ಸಂಸ್ಥೆಯ ಮುಖ್ಯಸ್ಥರಾದ ಡಾ.ಸ್ವಪನ್ ಕುಮಾರ್‌ ಸಮಂತ, ಶಂಕರ ಕಣ್ಣಿನ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿಗಳಾದ ಡಾ||ಮಹೇಶ್‌ ಎಸ್‌, ಹಿರಿಯ ವೈದ್ಯರಾದ ಡಾ||ಮಲ್ಲಿಕಾರ್ಜುನ, ಡಾ||ರವಿಶಂಕರ್‌, ಡಾ||ಕವಿತಾ ಹಾಗೂ ಮುಖ್ಯ ಆಡಳಿತಾಧಿಕಾರಿಗಳಾದ ಶ್ರೀಮತಿ ಗಾಯತ್ರಿ ಶಾಂತರಾಂ & ಶ್ರೀಮತಿ ಅನಿತಾ ಹಾಗೂ ವೈದ್ಯರು ಮತ್ತು ಸಿಬ್ಬಂದಿಗಳು ಹಾಗೂ ಶಾಲೆಯ ಶಿಕ್ಷಕ ವೃಂದದವರು ಉಪಸ್ಥಿತರಿದ್ದರು.

Youth Hostel Association ಒತ್ತಡ ಜೀವನದಿಂದ ವಿಶ್ರಾಂತಿ ಪಡೆಯಲು ಚಾರಣ ಪ್ರವಾಸ ಸಹಕಾರಿ- ಎನ್.ಗೋಪಿನಾಥ್

0

Youth Hostel Association ಚಾರಣದಲ್ಲಿ ಪಾಲ್ಗೊಳ್ಳುವುದರಿಂದ ಆತ್ಮವಿಶ್ವಾಸ ವೃದ್ಧಿಸುವ ಜತೆಯಲ್ಲಿ ಮಾನಸಿಕ ಸಾಮಾರ್ಥ್ಯ ಹೆಚ್ಚಾಗುತ್ತದೆ ಎಂದು ಯೂತ್ ಹಾಸ್ಟೆಲ್ ತರುಣೋದಯ ಘಟಕದ ಅಧ್ಯಕ್ಷ ಎನ್.ಗೋಪಿನಾಥ್ ಹೇಳಿದರು.

ಶಿವಮೊಗ್ಗ ನಗರದಲ್ಲಿ ಯೂತ್ ಹಾಸ್ಟೆಲ್‌ನಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾರತಿ ಡಾ. ಗುರುಪಾದಪ್ಪ ದಂಪತಿಯನ್ನು ಸನ್ಮಾನಿಸಿ ಮಾತನಾಡಿ, ಒತ್ತಡದ ಜೀವನಶೈಲಿಯಲ್ಲಿ ಎಲ್ಲರೂ ಕೆಲಸ ಮಾಡುತ್ತಿದ್ದು, ವಿಶ್ರಾಂತಿ ಪಡೆಯಲು ಚಾರಣ ಪ್ರವಾಸ ತುಂಬಾ ಸಹಕಾರಿಯಾಗುತ್ತದೆ ಎಂದು ತಿಳಿಸಿದರು.

ವಾಗೇಶ್ ಅವರು ಚೇರ್ಮನ್ ಆಗಿ ಅಧಿಕಾರ ವಹಿಸಿಕೊಂಡ ನಂತರ ನಮ್ಮ ತರುಣೋದಯ ಘಟಕ ಸದಸ್ಯತ್ವದಲ್ಲಿ ರಾಜ್ಯದಲ್ಲೇ ಎರಡನೇ ಸ್ಥಾನದಲ್ಲಿದೆ. ರಾಷ್ಟ್ರಮಟ್ಟದ ಚಾರಣಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಕಳಿಸಲು ಸಾಧ್ಯವಾಗಿರುವುದು ಈ ರೀತಿಯ ಚಲನಶೀಲ ಸದಸ್ಯರು ಕಾರಣ. ಇದೇ ರೀತಿ ಇನ್ನು ಹೆಚ್ಚಿನ ಸದಸ್ಯರು ತಮ್ಮೊಂದಿಗೆ ಇತರರನ್ನು ಕರೆದುಕೊಂಡು ಬಂದು ರಾಜ್ಯದಲ್ಲೇ ನಮ್ಮ ಘಟಕ ಪ್ರಥಮ ಸ್ಥಾನ ಗಳಿಸಬೇಕು ಎಂದರು.
ಯೂತ್ ಹಾಸ್ಟೆಲ್ಸ್ ರಾಜ್ಯ ಮಾಜಿ ಉಪಾಧ್ಯಕ್ಷ ವಿಜಯಕುಮಾರ್ ಮಾತನಾಡಿ, ಉತ್ತಮ ಆರೋಗ್ಯಕ್ಕೆ ಚಾರಣ ಅತ್ಯುತ್ತಮ ಎಂದು ವೈದ್ಯರೂ ಸಹ ಭಾಗವಹಿಸುತ್ತಿದ್ದಾರೆ. ಇವರ ಸಮಾಜಮುಖಿ ಕಾರ್ಯ ನಿವೃತಿ ನಂತರವು ಮುಂದುವರಿಯಲಿ ಎಂದು ಆಶಿಸಿದರು.

ಸನ್ಮಾನ ಸ್ವೀಕರಿಸಿದ ಡಾ. ಗುರುಪಾದಪ್ಪ ಮಾತನಾಡಿ, ಕಾರ್ಯ ನಿಮಿತ ಶಿವಮೊಗ್ಗಕ್ಕೆ ಬಂದಾಗ, ಚಾರಣದ ಆಸಕ್ತಿಯಿದ್ದ ನಮಗೆ ತರುಣೋದಯ ಘಟಕದ ಪರಿಚಯವಾಗಿ, ಸದಸ್ಯತ್ವ ಪಡೆದು ಇವರು ಆಯೋಜಿಸುವ ಕಾರ್ಯಕ್ರಮ ಹಾಗೂ ಇವರು ತೆಗೆದುಕೊಳ್ಳುವ ಜವಾಬ್ದಾರಿ ಉತ್ತಮ ಆಹಾರ, ಸ್ನೇಹ ಬಾಂಧವ್ಯಗಳನ್ನು ಕಂಡು ಮನಸೋತು, ಸ್ನೇಹಿತರಿಗೆ, ಸಹೋದ್ಯೋಗಿಗಳಿಗೆ ತಿಳಿಸಿದಾಗ ಅವರು ಸಹ ಸದಸ್ಯತ್ವ ಪಡೆದಿದ್ದಾರೆ. ನಾವು ಮಾತ್ರ ಸಂತೋಷ ಪಡುವುದರ ಬದಲು, ನಮ್ಮ ಪರಿಚಿತರೊಂದಿಗೆ, ಹೊಸಬರನ್ನು ಪರಿಚಯ ಮಾಡಿಕೊಂಡು, ಅವರೊಂದಿಗೆ ಚಾರಣ ಮಾಡುವ ಅನುಭವ ಅನನ್ಯ. ಎಲ್ಲರೂ ಆರೋಗ್ಯ ದೃಢತೆಗೆ, ಮನಃ ಸಂತೋಷಕ್ಕೆ ತಪ್ಪದೆ ಚಾರಣದಲ್ಲಿ ಭಾಗವಹಿಸಬೇಕು ಎಂದರು.

Youth Hostel Association ಭಾರತಿ ಡಾ. ಗುರುಪಾದಪ್ಪ ದಂಪತಿ ಚಾರಣದಲ್ಲಿ ತಾವು ಪಾಲ್ಗೊಳ್ಳುವ ಜತೆಯಲ್ಲಿ ಸಂಬಂಧಿ, ಸ್ನೇಹಿತರು, ಸಹೋದ್ಯೋಗಿಗಳಿಗೂ ಭಾಗವಹಿಸುವಂತೆ ಪ್ರೊತ್ಸಾಹಿಸುವ ಕೆಲಸ ಮಾಡುತ್ತಿದ್ದು, ಸ್ಥಳೀಯ, ರಾಜ್ಯ, ರಾಷ್ಟ್ರೀಯ ಚಾರಣಗಳಿಗೆ ಕರೆದುಕೊಂಡು ಹೋಗುತ್ತಾರೆ. ವಯೋನಿವೃತಿ ಸಂದರ್ಭದಲ್ಲಿ ಯೂತ್ ಹಾಸ್ಟೆಲ್‌ನಿಂದ ವಿಶೇಷವಾಗಿ ಸನ್ಮಾನಿಸಲಾಯಿತು.
ಮಮತಾ ಪ್ರಾರ್ಥಿಸಿದರು.

ಚೇರ್ಮನ್ ಎಸ್.ಎಸ್.ವಾಗೇಶ್ ಸ್ವಾಗತಿಸಿದರು. ಕಾರ್ಯದರ್ಶಿ ಸುರೇಶ್ ಕುಮಾರ್ ನಿರೂಪಿಸಿದರು. ಮಲ್ಲಿಕಾರ್ಜುನ್ ಕಾನೂರು ವಂದಿಸಿದರು. ರವಿಕುಮಾರ್, ನಾಗಲಾಂಭಿಕ, ಬಿಂದು ವಿಜಯಕುಮಾರ್, ವಿಜಯೇಂದ್ರ ಇತರರಿದ್ದರು.

National Health Campaign ಜಿಲ್ಲಾ ಸರ್ವೇಕ್ಷಣಾಧಿಕಾರಿಗಳ ಅಧೀನದ ವಿವಿಧ ಕಾರ್ಯಕ್ರಮದಡಿಯಲ್ಲಿ ಖಾಲಿಯಿರುವ ಹುದ್ದೆಗಳಿಗೆ ನೇರ ಸಂದರ್ಶನ, ಪ್ರಕಟಣೆ

0

National Health Campaign ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ಜಿಲ್ಲಾ ಸರ್ವೇಕ್ಷೇಣಾಧಿಕಾರಿಗಳ ಅಧೀನದಲ್ಲಿ ಬರುವ ವಿವಿಧ ಕಾರ್ಯಕ್ರಮದಡಿಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಗುತ್ತಿಗೆ ಆಧಾರದ ಮೇಲೆ ನೇರ ನೇಮಕಾತಿ ಮಾಡಿಕೊಳ್ಳು ನೇರ ಸಂದರ್ಶನ ಏರ್ಪಡಿಸಲಾಗಿದೆ.

ಎನ್‌ಪಿಹೆಚ್‌ಸಿಇ ಕಾರ್ಯಕ್ರಮದಡಿ ತಜ್ಞವೈದ್ಯರು(ಎಂ.ಡಿ. ಇಂಟರ್ನಲ್ ಮೆಡಿಸಿನ್/ಜಿಎಂ) ಹುದ್ದೆ 01, ವಿದ್ಯಾರ್ಹತೆ ಎಂಬಿಬಿಎಸ್, ಎಂ.ಡಿ, ಸ್ಪೆಷಲಿಸ್ಟ್ ಹುದ್ದೆಯಲ್ಲಿ 2 ವರ್ಷ ಕಾರ್ಯ ನಿರ್ವಹಿಸಿರಬೇಕು.
ಸಿಪಿಹೆಚ್‌ಸಿ-ಯುಹೆಚ್‌ಸಿ ಕಾರ್ಯಕ್ರಮದಡಿ ಜಿಲ್ಲಾ ಆರೋಗ್ಯ ಮತ್ತು ಕ್ಷೇಮ ಕೇಂದ್ರ ಸಂಯೋಜಕರ ಹುದ್ದೆ 01, ವಿದ್ಯಾರ್ಹತೆ ಬಿಡಿಎಸ್/ಬಿಎಎಂಎಸ್/ಬಿಯುಎಂಎಸ್/ಬಿಹೆಚ್‌ಎಂಎಸ್/ಬಿವೈಎನ್‌ಎಸ್/ಎಂಎಸ್‌ಸಿ ನರ್ಸಿಂಗ್/ಎಂಎಸ್‌ಸಿ ಲೈಫ್ ಸೈನ್ಸ್/ಬಿಎಸ್‌ಸಿ ನರ್ಸಿಂಗ್ ಎಲ್ಲ ಪದವಿಯೊಂದಿಗೆ ಎಂಪಿಹೆಚ್ ಅಥವಾ ಎಂಬಿಎ ಕಡ್ಡಾಯವಾಗಿ ಪೂರ್ಣಗೊಂಡಿರಬೇಕು.

ಐಡಿಎಸ್‌ಪಿ ಕಾರ್ಯಕ್ರಮದಡಿ ಜಿಲ್ಲಾ ಎಪಿಡೆಮಿಯಾಲಜಿಸ್ಟ್ ಹುದ್ದೆ 01, ವಿದ್ಯಾರ್ಹತೆ ಮೆಡಿಕಲ್ ಗ್ರಾಜುಯೇಟ್, ಎಂಬಿಬಿಎಸ್ ಜೊತೆಗೆ ಪೋಸ್ಟ್ ಗ್ರಾಜುಯೇಟ್ ಪದವಿ/ಡಿಪ್ಲೊಮ ಇನ್ ಪ್ರಿವೆಂಟಿವ್ ಅಂಡ್ ಸೋಷಿಯಲ್ ಮೆಡಿಸಿನ್/ಪಬ್ಲಿಕ್ ಹೆಲ್ತ್ ಅಥವಾ ಎಪಿಡೆಮಿಯಾಲಜಿ(ಎಂ.ಡಿ, ಎಂಪಿಹೆಚ್, ಡಿಪಿಹೆಚ್, ಎಂಎಇ ಇತ್ಯಾದಿ) ಅಥವಾ ಯಾವುದೇ ಮೆಡಿಕಲ್ ಗ್ರಾಜುಯೇಟ್(ಎಂಬಿಬಿಎಸ್ ಹೊರತುಪಡಿಸಿ) ಜೊತೆಗೆ ಎಂಪಿಹೆಚ್ ಜೊತೆಗೆ ಕನಿಷ್ಟ ಒಂದು ವರ್ಷದ ಅನುಭವ ಪಬ್ಲಿಕ್ ಹೆಲ್ತ್ನಲ್ಲಿ ಅನುಭವ ಉಳ್ಳವರಿಗೆ ಆದ್ಯತೆ ನೀಡಲಾಗುವುದು ಅಥವಾ ಎಂಎಸ್‌ಸಿ ಇನ್ ಲೈಫ್ ಸೈನ್ಸ್ ಜೊತೆಗೆ 2 ವರ್ಷದ ಅನುಭವ ಉಳ್ಳವರಿಗೆ ಆದ್ಯತೆ ನೀಡಲಾಗುವುದು.

ಜಿಲ್ಲಾ ಸರ್ವೇಕ್ಷಣಾಧಿಕಾರಿಗಳ ಕಚೇರಿ, ಜಿಲ್ಲಾ ಎನ್‌ಸಿಡಿ ಘಟಕ, ಮೆಗ್ಗಾನ್ ಆಸ್ಪತ್ರೆ ಆವರಣ, ತುಂಗಾ ವಿದ್ಯಾರ್ಥಿನಿಯರ ವಸತಿ ನಿಲಯದ ಎದುರು, ಶಿವಮೊಗ್ಗ ಇಲ್ಲಿ ದಿ: 15-01-2025 ರಂದು ನೇರ ಸಂದರ್ಶನ ಏರ್ಪಡಿಸಲಾಗಿದೆ.

ಆಸಕ್ತಿಯುಳ್ಳ ಅಭ್ಯರ್ಥಿಗಳು ಬೆಳಿಗ್ಗೆ 10.30 ರಿಂದ ಸಂಜೆ 4 ಗಂಟೆವರೆಗೆ ಮೂಲಪ್ರತಿ ಮತ್ತು ಛಾಯಾಪ್ರತಿಗಳೊಂದಿಗೆ ನೇರಸಂದರ್ಶನಕ್ಕೆ ಹಾಜರಾಗಬಹುದು.

National Health Campaign ಈ ನೇಮಕಾತಿಯು ಎನ್‌ಹೆಚ್‌ಎಂ ನಿಯಮಾವಳಿ, ಷರತ್ತು ಮತ್ತು ನಿಬಂಧನೆಗಳಿಗೆ ಮತ್ತು ಆಯ್ಕೆ ಸಮಿತಿಯ ತೀರ್ಮಾನಕ್ಕೆ ಒಳಪಟ್ಟಿರುತ್ತದೆ. ಎನ್‌ಸಿಡಿ ಕ್ಲಿನಿಕ್ ವೈದ್ಯಾಧಿಕಾರಿಗಳ ಹುದ್ದೆ ಖಾಲಿ ಇದ್ದಲ್ಲಿ ಪ್ರತಿ ತಿಂಗಳ 3ನೇ ಸೋಮವಾರದಂದು ವೈದ್ಯರ ಮತ್ತು ತಜ್ಞ ವೈದ್ಯರ ಹುದ್ದೆಗೆ ನೇರ ಸಂದರ್ಶನ ಮೂಲಕ ಆಯ್ಕೆ ಮಾಡಿಕೊಳ್ಳಲಾಗುವುದು. ಹೆಚ್ಚಿನ ಮಾಹಿತಿಯನ್ನು ಜಿಲ್ಲಾ ಸರ್ವೇಕ್ಷಣಾಧಿಕರಿಗಳ ಕಚೇರಿಯಿಂದ ಪಡೆಯಬಹುದು ಎಂದು ಜಿಲ್ಲಾ ಸರ್ವೇಕ್ಷಣಾಧಿಕಾರಿಗಳು ತಿಳಿಸಿದ್ದಾರೆ.

MESCOM ಜನವರಿ 10 . ಎನ್ ಟಿ ರಸ್ತೆ ಕಾಮಗರಿ ಪ್ರಯುಕ್ತ ಹರಕೆರೆ & ವಿವಿಧೆಡೆ ವಿದ್ಯುತ್ ಸರಬರಾಜು ವ್ಯತ್ಯಯ

0

MESCOM ಶಿವಮೊಗ್ಗ ನಗರದ ಉಪ ವಿಭಾಗ-2 ಘಟಕ-6 ರ ವ್ಯಾಪ್ತಿಯ ಎನ್ ಟಿ ರಸ್ತೆಯ ನ್ಯಾಷನಲ್ ಹೈವೆ ಕಾಮಗಾರಿ ಪ್ರಯುಕ್ತ 11 ಕೆವಿ ವಿದ್ಯುತ್ ಮಾರ್ಗ ಸ್ಥಳಾಂತರಿಸಲು ಜ.10 ರ ಬೆಳಗ್ಗೆ 10 ರಿಂದ ಸಂಜೆ 6 ರವರೆಗೆ ಕೆಳಕಂಡ ಸ್ಥಳಗಳಲ್ಲಿ ವ್ಯತ್ಯಯವಾಗಲಿದೆ.

MESCOM ಹರಕೆರೆ, ಮಂಜುನಾಥ್ ರೈಸ್ ಮಿಲ್, ಬೆನಕೇಶ್ವರ ರೈಸ್ ಮಿಲ್, ಶಂಕರ್ ಕಣ್ಣಿನ ಆಸ್ಪತ್ರೆ, ಎನ್ ಹೆಚ್ ಆಸ್ಪತ್ರೆ, ಅನ್ನಪೂರ್ಣೇಶ್ವರಿ ಬಡಾವಣೆ, ಹೊಸಹಳ್ಳಿ, ಲಕ್ಷ್ಮೀಪುರ, ರಾಮಿನಕೊಪ್ಪ, ಅನುಪಿನಕಟ್ಟೆ, ಹೊಸೂರು, ಐಹೊಳೆ, ಭಾರತಿ ನಗರ, ಶಾರದಾ ನಗರ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯವಾಲಿದ್ದು, ಸಾರ್ವಜನಿಕರು ಸಹಕರಿಸಬೇಕೆಂದು ಮೆಸ್ಕಾಂ ನಗರ ಉಪ ವಿಭಾಗ-2 ಸಹಾಯಕ ಕಾರ್ಯನಿರ್ವಾಹಕ ಇಂಜನಿಯರ್ ಕೋರಿದ್ದಾರೆ.

SC ST ಸಾಂಸ್ಕೃತಿಕ ಕಾರ್ಯಕ್ರಮಗಳು/ವಿಚಾರ ಸಂಕಿರಣ ಮೂಲಕ ಪಜಾ/ಪಪಂ, ದೌರ್ಜನ್ಯ ತಡೆ ಕಾಯ್ದೆಗಳ ಅರಿವು ಮೂಡಿಸಲು ಸಂಘಸಂಸ್ಥೆಗಳಿಂದ ಅರ್ಜಿ ಆಹ್ವಾನ

0

SC/ ST ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ದೌರ್ಜನ್ಯ ತಡೆ ಅಧಿನಿಯಮ ಮತ್ತು ಪಿಸಿಆರ್ ಕಾಯ್ದೆಯ ಬಗ್ಗೆ ಪರಿಶಿಷ್ಟ ಜಾತಿ ಮತ್ತು ವರ್ಗದ ಸಂಘ-ಸಂಸ್ಥೆಗಳು ಸೇರಿದಂತೆ ವಿವಿಧ ಸ್ವಯಂ ಸೇವಾ ಸಂಘ/ಸಂಸ್ಥೆಗಳ ಸಹಯೋಗದೊಂದಿಗೆ ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಜಾಗೃತಿ/ಅರಿವು ಮೂಡಿಸಲು ವಿಚಾರಗೋಷ್ಟಿ ಮತ್ತು ಕಾರ್ಯಾಗಾರಗಳನ್ನು ನಡೆಸಲು ಸಂಘ ಸಂಸ್ಥೆಗಳನ್ನು ಆಯ್ಕೆ ಮಾಡಲು ಅರ್ಜಿ ಆಹ್ವಾನಿಸಲಾಗಿದೆ.

ಆಸಕ್ತಿ ಇರುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಸ್ವಯಂ ಸೇವಾ ಸಂಘ/ಸಂಸ್ಥೆಗಳು ಹಾಗೂ ವಿವಿಧ ಸ್ವಯಂ ಸೇವಾ ಸಂಘ/ಸಂಸ್ಥೆಗಳವರು ದಿ: 16-01-2025 ರ ಒಳಗಾಗಿ ಪೂರಕ ದಾಖಲೆಗಳೊಂದಿಗೆ ಸಮಾಜ ಕಲ್ಯಾಣ ಇಲಾಖೆ, ಉಪ ನಿರ್ದೇಶಕರ ಕಚೇರಿ, ಪೃಥ್ವಿ ಮ್ಯಾನ್ಶನ್, 100 ಅಡಿ ರಸ್ತೆ, ವಿನೋಬನಗರ ಶಿವಮೊಗ್ಗ ಈ ಕಚೆರಿಗೆ ಪ್ರಸ್ತಾವನೆಯನ್ನು ಸಲ್ಲಿಸಬಹುದು.

SC/ ST ಸಂಘ/ಸಂಸ್ಥೆಯ ನೋಂದಣಿ ಪ್ರಮಾಣ ಪತ್ರ, ನವೀಕರಣ ಪ್ರಮಾಣ ಪತ್ರ, ಕಳೆದ 3 ವರ್ಷದ ಆಡಿಟ್ ರಿಪೋರ್ಟ್(2021-22 ರಿಂದ 23-24 ರರೆಗೆ), ಸಂಘ ಸಂಸ್ಥೆಯು ಪರಿಶಿಷ್ಟ ಜಾತಿ/ವರ್ಗದ ಅಭಿವೃದ್ದಿಗಾಗಿ ಕನಿಷ್ಟ 5 ವರ್ಷ ಸೇವೆ ಸಲ್ಲಿಸಿರುವ ಬಗ್ಗೆ ದೃಢೀಕೃತ ದಾಖಲೆ, ಈ ಹಿಂದೆ ಸಂಘ/ಸಂಸ್ಥೆಯು ಅರಿವು ಮೂಡಿಸುವ ಕಾರ್ಯಕ್ರಮ ಆಯೋಜಿಸಿರುವ ಬಗ್ಗೆ ದಾಖಲೆಗಳು, ಛಾಯಾಚಿತ್ರ, ಪತ್ರಿಕಾ ವರದಿ, ಸಂಸ್ಥೆಯು ದೌರ್ಜನ್ಯ ಪ್ರತಿಬಂಧ ಅಧಿನಿಯಮ-1989 ರ ಅನುಷ್ಟಾನದ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಿರುವ ಬಗ್ಗೆ ದಾಖಲೆಗಳು, ಪ್ರಕಟಣೆಗಳು, ಕರಪತ್ರ, ಭಿತ್ತಿಪತ್ರ ಇತ್ಯಾದಿಗಳನ್ನು ಲಗತ್ತಿಸಿ ಪ್ರಸ್ತಾವನೆಯೊಂದಿಗೆ ಸಲ್ಲಿಸಬೇಕು ಎಂದು ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕರು ತಿಳಿಸಿದ್ದಾರೆ.

Shivamogga Rotary Club ಇತ್ತೀಚಿನ ಜೀವನ ಶೈಲಿ,ಆರೋಗ್ಯ ಕ್ರಮ & ಆನುವಂಶೀಯತೆಯಿಂದ ಕಣ್ಣಿನ ಸಮಸ್ಯೆ ಉದ್ಭವ- ಡಾ.ಎಂ.ಜೆ.ದೀಪಾ

0


Shivamogga Rotary Club ಕಣ್ಣುಗಳು ಮನುಷ್ಯನಾ ದೇಹದ ಪ್ರಮುಖ ಅಂಗ ಕಣ್ಣುಗಳನ್ನು ಸಕಾಲದಲ್ಲಿ ಪರೀಕ್ಷೆ ಮಾಡಿಸಿಕೊಳ್ಳುವುದು ತುಂಬಾ ಅಗತ್ಯ ನಮ್ಮ ಒತ್ತಡದ ಜೀವನದಲ್ಲಿ ಕಣ್ಣುಗಳನ್ನು ನಾವು ಸಕಾಲದಲ್ಲಿ ಪರೀಕ್ಷೆ ಮಾಡಿಸಿಕೊಳ್ಳುವುದಿಲ್ಲ ಅದರಲ್ಲೂ ಮಧುಮೇಹ ಇರುವವರು ಕನಿಷ್ಠ ಆರು ತಿಂಗಳಿಗೊಮ್ಮೆ ಆದರೂ ಕಣ್ಣುಗಳನ್ನು ಪರೀಕ್ಷಿಸಿಕೊಳ್ಳುವುದು ಉತ್ತಮ ಇತ್ತೀಚಿನ ಜೀವನ ಶೈಲಿ ಆರೋಗ್ಯ ಕ್ರಮ ಹಾಗೂ ಅಣುವಂಶಿಯತೆಯಿಂದ ಕಣ್ಣಿನ ಸಮಸ್ಯೆ ಹೆಚ್ಚಾಗಿ ಕಾಡುತ್ತಿದೆ. ಆದ್ದರಿಂದ ನಾವುಗಳು ಕಣ್ಣುಗಳನ್ನ ಸರಿಯಾಗಿ ಕಾಪಾಡಿಕೊಳ್ಳಬೇಕು ಎಂದು ಆದರ್ಶ ಸೂಪರ್ ಸ್ಪೆಶಾಲಿಟಿ ಕಣ್ಣಿನ ಆಸ್ಪತ್ರೆಯ ಪ್ರಖ್ಯಾತ ಕಣ್ಣಿನ ವೈದ್ಯರಾದ ಡಾಕ್ಟರ್ ದೀಪ ಎಂಜೆ ಅಭಿಮತ ವ್ಯಕ್ತಪಡಿಸಿದರು.

ಶಿವಮೊಗ್ಗ ರೋಟರಿ ಕ್ಲಬ್ ಹಿರಿಯ ನಾಗರೀಕರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಎಲ್ ಬಿ ಎಸ್ ನಗರದಲ್ಲಿರುವ ಶಿವಮೊಗ್ಗ ರೋಟರಿ ಕ್ಲಬ್ ಸಭಾಂಗಣದಲ್ಲಿ ಸಾರ್ವಜನಿಕರಿಗೆ ಸದಸ್ಯರಿಗೆ ಆಯೋಜಿಸಲಾಗಿದ್ದ ಉಚಿತ ಕಣ್ಣಿನ ತಪಾಸಣೆ ಹಾಗೂ ಕಣ್ಣಿನ ಆರೋಗ್ಯದ ಜಾಗೃತಿ ಕಾರ್ಯಕ್ರಮದ ಬಗ್ಗೆ ಮಾತನಾಡಿದರು ನಾವು ಬಾಲ್ಯದಲ್ಲೇ ಮಕ್ಕಳಿಗೂ ಸಹ ಕಣ್ಣಿನ ತಪಾಸಣೆ ಮಾಡುವುದರಿಂದ ಮುಂದೆ ಆಗುವ ತೊಂದರೆಗಳನ್ನು ತಪ್ಪಿಸಬಹುದು ಎಂದ ಅವರು ಗ್ಲುಕೋಮಾದಂತ ಕಾಯಿಲೆಗಳನ್ನ ಬಾರದಂತೆ ನೋಡಿಕೊಳ್ಳಲು ಕಣ್ಣಿನ ಸಂರಕ್ಷಣೆ ಅಗತ್ಯ ಎಂದು ನುಡಿದರು.

Shivamogga Rotary Club ಇದೇ ಸಂದರ್ಭದಲ್ಲಿ ವಿಶ್ರಾಂತ ನೌಕರರ ಸಂಘದ ಅಧ್ಯಕ್ಷರಾದ ರವಿಕುಮಾರ್ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಸಮಾರಂಭದ ಅಧ್ಯಕ್ಷತೆಯನ್ನು ರೋಟರಿ ಕ್ಲಬ್ ಶಿವಮೊಗ್ಗದ ಅಧ್ಯಕ್ಷರಾದ ಕೆ ಸೂರ್ಯನಾರಾಯಣ ಉಡುಪ ಅವರು ವಹಿಸಿ ಮಾತನಾಡುತ್ತಾ ನಮ್ಮ ದೇಹದಲ್ಲಿ ಕಣ್ಣು ತುಂಬಾ ಪ್ರಧಾನವಾದದ್ದು ಕಣ್ಣು ಇಲ್ಲದಿದ್ದರೆ ಪ್ರಪಂಚವೇ ಶೂನ್ಯ ಈ ನಿಟ್ಟಿನಲ್ಲಿ ನಾವುಗಳು ಅದರಲ್ಲೂ ಹಿರಿಯ ನಾಗರಿಕರುಗಳು ಸಕಾಲದಲ್ಲಿ ಆರೋಗ್ಯ ತಪಾಸಣೆಯ ಜೊತೆಗೆ ಕಣ್ಣಿನ ತಪಾಸಣೆಯು ಕೂಡ ಅಗತ್ಯವಾಗಿ ಮಾಡಿಸಿಕೊಳ್ಳಲೇಬೇಕು ಎಂದು ನುಡಿದರು.

ಇದೇ ಸಂದರ್ಭದಲ್ಲಿ ನೂರಕ್ಕೂ ಹೆಚ್ಚು ಜನ ಸದಸ್ಯರಿಗೂ ಹಾಗೂ ಸಾರ್ವಜನಿಕರಿಗೆ ಡಾ. ದೀಪ ಎಮ್ ಜೆ ಅವರು ಕಣ್ಣಿನ ತಪಾಸಣೆ ನಡೆಸಿ. ಮಾಹಿತಿ ನೀಡಿದರು ಕಾರ್ಯಕ್ರಮದಲ್ಲಿ ಕಾರ್ಯದರ್ಶಿ ಉಷಾ ಏನ್ ಜಿ. ಪದಾಧಿಕಾರಿಗಳಾದ ಎನ್ ವಿ
ಭಟ್ ಹಾಗೂ ಮುಖ್ಯ ಅತಿಥಿಗಳಾದ ನೌಕರರ ಸಂಘದ ಅಧ್ಯಕ್ಷರಾದ ಚಂದ್ರಪ್ಪ.ಕಾರ್ಯದರ್ಶಿ ಶ್ರೀಕಾಂತ್. ಕಿಶೋರ್ ಶಿರ್ನಾಲಿ.ವಿಜಿ ಹೆಗಡೆ. ಗಾಯಿತ್ರಿ. ಸುಮತಿಂದ್ರ. ಹಾಗೂ ರೋಟರಿ ಸದಸ್ಯರು ಸಾರ್ವಜನಿಕರು ಉಪಸ್ಥಿತರಿದ್ದರು.

Sri Balagangadharanatha ಭಕ್ತಿಶ್ರದ್ಧೆಗಳಿಂದ ಅದ್ದೂರಿಯಾಗಿ ಡಾ.ಬಾಲಗಂಗಾಧರ ನಾಥಶ್ರೀಗಳ 12 ನೇ ಸಂಸ್ಮರಣ ಮಹೋತ್ಸವ ಆಯೋಜನೆ

0

Sri Balagangadharanatha ಜ. 12 ರಿಂದ 18 ರ ವರಗೆ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದಲ್ಲಿ ಭಕ್ತಿ, ಜ್ಞಾನ, ರಾಜ್ಯ ಮಟ್ಟದ ಮಕ್ಜಳ ಕನ್ನಡ ಸಾಹಿತ್ಯ ಸಮ್ಮೇಳನ ,ಧಾರ್ಮಿಕ ವಿಚಾರ ಗೋಷ್ಠಿಗಳ ಆಯೋಜನೆ.

ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ 71ನೇ ಪೀಠಾಧ್ಯಕ್ಷರಾಗಿ ಸಿದ್ಧ ಸಿಂಹಾಸನಾರೋಹಣ ಮಾಡಿದಂತಹ ಪರಮಪೂಜ್ಯ ಯುಗ ಯೋಗಿ ಜಗದ್ಗುರು ಪದ್ಮಭೂಷಣ ಶ್ರೀ ಶ್ರೀ ಶ್ರೀ ಡಾ.ಬಾಲಗಂಗಾಧರನಾಥ ಮಹಾ ಸ್ವಾಮಿಗಳವರು ಜನಸಾಮಾನ್ಯರ ಉದ್ಧಾರಕ್ಕಾಗಿ ಅನ್ನ, ಅಕ್ಷರ, ಆರೋಗ್ಯ, ಆಶ್ರಯ, ಆಕಳು, ಪರಿಸರ ಮುಂತಾದ ಕ್ಷೇತ್ರಗಳಲ್ಲಿ ಆಂದೋಲನವನ್ನೇ ಮಾಡಿದರು. ಶೈಕ್ಷಣಿಕ, ಧಾರ್ಮಿಕ ಹಾಗೂ ಸಮಾಜ ಕ್ಷೇತ್ರದಲ್ಲಿ ಅಪಾರ ಸೇವೆಯನ್ನು ಸಲ್ಲಿಸಿದ್ದಾರೆ.
ಪರಮ ಪೂಜ್ಯರ ಅವಿಶ್ರಾಂತ ಕಾಯಕದ ಫಲವಾಗಿ ಶ್ರೀ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟಿನ ಅಡಿಯಲ್ಲಿ 475 ಕ್ಕೂ ಹೆಚ್ಚಿನ ವಿದ್ಯಾಸಂಸ್ಥೆಗಳು ಸ್ಥಾಪನೆಗೊಂಡಿದ್ದು, ಶಿಕ್ಜ್ಹಣ ಸಂಸ್ಥೆಗಳಲ್ಲಿ ಒಂದು ಲಕ್ಷದ ಅರವತ್ತು ಸಾವಿರಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಪೂರ್ವ ಪ್ರಾಥಮಿಕ ಶಾಲೆಯಿಂದ ಸಂಸ್ಕೃತ ವೇದಾಗಮ ಹಾಗೂ ತಾಂತ್ರಿಕ, ವೈದ್ಯಕೀಯ ವಿಜ್ಞಾನದ ವರಗೆ ಯಾವುದೇ ಜಾತಿ, ಮತ, ಲಿಂಗ ಭೇದ ವಿಲ್ಲದೆ ವ್ಯಾಸಂಗ ಮಾಡುತ್ತಿದ್ದಾರೆ.
ಶ್ರೀ ಮಠದ ವತಿಯಿಂದ ವಿವಿಧ ಕಾರ್ಯಕ್ರಮಗಳು:

Sri Balagangadharanatha ಜನವರಿ 12 ರಿಂದ 18ರ ವರೆಗೆ 12ನೇ ಸಂಸ್ಮರಣಾ ಮಹೋತ್ಸವ ನಡೆಯಲಿದ್ದು, ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಪರಮಪೂಜ್ಯ ಜಗದ್ಗುರು ಶ್ರೀಶ್ರೀಶ್ರೀ ಡಾ. ನಿರ್ಮಲಾನಂದನಾಥ ಮಹಾಸ್ವಾಮೀಜಿ ವಹಿಸಲಿದ್ದು, 12.1.2025 ರಂದು ಕೃಷಿ ಮೇಳ ಮತ್ತು ರೈತ ಸಂಗಮ, 13.1.2025 ಹೋಮ, ಹವನಾದಿ ಧಾರ್ಮಿಕ ಕಾರ್ಯಕ್ರಮಗಳ ಜೊತೆಗೆ ಕೃಷಿ ಮೇಳ ಮತ್ತು ರೈತ ಸಂಗಮ 14.1.2025 ರ ಮಂಗಳವಾರ ರಂದು ಹಿರಿಯ ವಿದ್ಯಾರ್ಥಿಗಳ ಸಂಗಮ 15.1.2025,ಬುಧವಾರದಂದು ಎಸ್. ಎಸ್. ಎಲ್. ಸಿ ವಿದ್ಯಾರ್ಥಿಗಳ ಕಾರ್ಯಗಾರ, 16.1.2025,ಗುರುವಾರ ರಾಜ್ಯ ಮಟ್ಟದ ಮಕ್ಜಳ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸಲಾಗುವುದು. 17.1.2025, ಶುಕ್ರವಾರ ಚುಂಚಾದ್ರಿ ಮಾತೃ ಸಂಗಮ, 18.1.2025,ರಂದು ಶನಿವಾರ ಜಯಂತ್ಯುತ್ಸವ ಹಾಗೂ ಸಂತ ಭಕ್ತ – ಸಂಗಮ ನಡೆಯಲಿದೆ, ಈ ಎಲ್ಲಾ ಕಾರ್ಯಕ್ರಮ ಜೊತೆಗೆ ಪ್ರತಿದಿನ ಗೀತಗಾಯನ ಹಮ್ಮಿಕೊಳ್ಳಲಾಗಿದೆ, ವಿಶಿಷ್ಟ ವಿನೂತನ ಕಾರ್ಯಕ್ರಮಗಳು ಅತ್ಯಂತ ಶ್ರದ್ಧಾ ಭಕ್ತಿಯಿಂದ ನೆರವೇರಿಸಲಾಗುವುದು. ಅಂದು ನಾಡಿನ ಸಾಧು ಸಂತರು, ಗಣ್ಯ ವ್ಯಕ್ತಿಗಳು, ಶ್ರೀಮಠದ ಸದ್ಭಕ್ತರು, ಪರಮ ಪೂಜ್ಯರ ಶಿಷ್ಯ ವೃಂದದವರು ಕಾರ್ಯಕ್ರಮದಲ್ಲಿ ಭಾಗವಹಿಸುವರು
ಎಂದು ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪ್ರಧಾನ ಕಾರ್ಯದರ್ಶಿಗಳಾದ ಪೂಜ್ಯ ಶ್ರೀಶ್ರೀ ಪ್ರಸನ್ನನಾಥ ಸ್ವಾಮೀಜಿಯವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Davangere University ಶಾಸ್ತ್ರೀಯ ನೃತ್ಯ ,ಸಂಗೀತ ಚಿತ್ರಕಲೆ ಆಸಕ್ತಿಯು ಸುಸಂಸ್ಕೃತಿಯ ಲಕ್ಷಣ – ಪ್ರೊ.ಬಿ. ಕುಂಬಾರ

0

Davangere University ಶೈಕ್ಷಣಿಕ ರಂಗದಲ್ಲಿ ಗುರುತಿಸಿಕೊಂಡಿರುವ ದಾವಣಗೆರೆ ಮಹಾನಗರದಲ್ಲಿ ಶಾಸ್ತ್ರೀಯ ನೃತ್ಯ ಸಂಗೀತಾದಿಗಳ ಪೂರ್ಣ ಪ್ರಮಾಣದ ಶಿಕ್ಷಣ ನೀಡುವ ಮಹಾವಿದ್ಯಾಲಯ ಒಂದರ ಸ್ಥಾಪನೆಯ ಅಗತ್ಯವಿದೆ ಎಂದು ದಾವಣಗೆರೆ ವಿಶ್ವವಿದ್ಯಾನಿಲಯದ ಕುಲಪತಿಗಳಾದ ಪ್ರೊ. ಬಿ ಡಿ ಕುಂಬಾರ ಅಭಿಪ್ರಾಯ ಪಟ್ಟರು.

ದಾವಣಗೆರೆ ನಗರದ ಗುಂಡಿ ಮಹಾದೇವಪ್ಪ ಕಲ್ಯಾಣ ಮಂಟಪದಲ್ಲಿ ಏರ್ಪಾಡಾಗಿದ್ದ ನಾಟ್ಯ ಭಾರತಿ ಶಾಸ್ತ್ರೀಯ ನೃತ್ಯ ಮತ್ತು ಸಂಗೀತ ಕಲಾ ಕೇಂದ್ರದ 65ನೇ ವಾರ್ಷಿಕ ಮಹೋತ್ಸವ ಉದ್ಘಾಟಿಸಿ ಮಾತನಾಡುತ್ತಾ ಶಾಸ್ತ್ರೀಯ ನೃತ್ಯ ಸಂಗೀತ ಚಿತ್ರಕಲೆ ಇವುಗಳಲ್ಲಿನ ಆಸಕ್ತಿ ಸುಸಂಸ್ಕೃತಿಯ ಲಕ್ಷಣವಾಗಿದ್ದು ಶಿಕ್ಷಣದ ಜೊತೆ ಜೊತೆಗೆ ಕಲೆಗಳಲ್ಲೂ ಆಸಕ್ತಿಯನ್ನು ಮುಂದುವರಿಸಲು ಪೋಷಕರು ಮಕ್ಕಳಿಗೆ ಪ್ರೋತ್ಸಾಹಿಸಬೇಕು. ನೃತ್ಯ ಸಂಗೀತಾದಿಗಳಲ್ಲಿ ಸಾಧನೆ ಮಾಡಿದವರಿಗೆ ಉದ್ಯೋಗಗಳಲ್ಲೂ ಮೀಸಲಾತಿ ಇದೆ ಎಂದರು. ತಮ್ಮ ವಿಶ್ವವಿದ್ಯಾನಿಲಯದಲ್ಲಿ ಈ ವಿಭಾಗದಲ್ಲಿ ಸ್ನಾತಕೋತ್ತರ ಪದವಿ ಮಾಡಲು ಎರಡು ಸ್ಥಾನಗಳ ಅವಕಾಶವಿದೆ ಎಂದು ಸಹಾ ಹೇಳಿದರು. ನಾಟ್ಯ ಭಾರತಿಯು 65 ವರ್ಷಗಳಿಂದ ನಿರಂತರ ಶಾಸ್ತ್ರೀಯ ನೃತ್ಯ ಸಂಗೀತಗಳ ಶಿಕ್ಷಣವನ್ನು ಮುಂದುವರಿಸಿದೆ ಎಂದರೆ ಇದಕ್ಕೆ ಕಲಾ ಪೋಷಕರೇ ಕಾರಣ ಎಂದರು.

ಮುಖ್ಯ ಅತಿಥಿಗಳಾಗಿ ಮಾತನಾಡಿದ ನಾಟ್ಯ ಭಾರತಿಯ ಗೌರವಾಧ್ಯಕ್ಷರು ಹಿರಿಯ ಪತ್ರಕರ್ತರೂ ಆದ ಡಾ. ಎಚ್ ಬಿ ಮಂಜುನಾಥ ಸಂಪತ್ತಿನಿಂದ ಸಂತೋಷ ಪಡೆಯಬಹುದು. ಆದರೆ ಆನಂದ ಪಡೆಯಬೇಕೆಂದರೆ ಅದು ಲಲಿತ ಕಲೆಗಳಾದ ಶಾಸ್ತ್ರೀಯ ನೃತ್ಯ ಸಂಗೀತಗಳಿಂದ ಸಾಧ್ಯ ಏಕೆಂದರೆ ಭಾರತೀಯ ಶಾಸ್ತ್ರೀಯ ನೃತ್ಯ ಸಂಗೀತಗಳು ಮಾನವ ಸೃಷ್ಟಿ ಆಗಿರದೆ ದೈವ ಸೃಷ್ಟಿಯಾಗಿದೆ, ಆತ್ಮ ನಿವೇದನೆಗೂ ಪರಮಾತ್ಮನ ಸಾಕ್ಷಾತ್ಕಾರಕ್ಕೂ ಇವು ಸಾಧನ ಎಂಬ ಭಾವನೆ ನಮ್ಮ ದೇಶದಲ್ಲಿದೆ, ಆದ್ದರಿಂದಲೇ ನಮ್ಮ ಶಾಸ್ತ್ರೀಯ ನೃತ್ಯ ಸಂಗೀತಗಳನ್ನು ವಿಶ್ವಾದ್ಯಂತ ಎಲ್ಲರೂ ಪೂಜ್ಯ ಭಾವನೆಯಿಂದ ಸ್ವೀಕರಿಸುತ್ತಾರೆ ಎಂದರಲ್ಲದೆ ಪ್ರಪಂಚದ ಬೇರೆ ಬೇರೆ ದೇಶಗಳಲ್ಲಿ ನೃತ್ಯ ಮತ್ತು ಸಂಗೀತಗಳ ಕುರಿತಾಗಿ ಗ್ರಂಥಗಳು 150 ರಿಂದ 200 ವರ್ಷಗಳ ಕೆಳಗೆ ರಚನೆಯಾದರೆ ಭಾರತ ದೇಶದಲ್ಲಿ ಮೂರುವರೆ ಸಾವಿರ ವರ್ಷಗಳ ಹಿಂದೆಯೇ ಭರತಮುನಿ ನಂದಿಕೇಶ್ವರ ಶಿಲಾಲಿ ಸಾರಂಗದೇವ ಮುಂತಾದ ಋಷಿಗಳು ನೃತ್ಯ ಸಂಗೀತಗಳ ಬಗ್ಗೆ ಮಹಾ ಗ್ರಂಥಗಳನ್ನೇ ರಚಿಸಿದ್ದಾರೆ ಎಂದರು.

ಮತ್ತೋರ್ವ ಮುಖ್ಯ ಅತಿಥಿಗಳಾಗಿ ದಾವಣಗೆರೆ ಜಿಲ್ಲಾ ವರದಿಗಾರರ ಕೂಟದ ಅಧ್ಯಕ್ಷ ನಾಗರಾಜ ಬಡದಾಳ್ ಮಾತನಾಡುತ್ತಾ ಮಕ್ಕಳು ತಂದೆ ತಾಯಿಯನ್ನು ಅನುಕರಿಸುತ್ತಾರೆ, ಪೋಷಕರು ಸದಭಿರುಚಿಯ ಕಲೆಗಳಲ್ಲಿ ಆಸಕ್ತಿಯನ್ನು ಬೆಳೆಸಿಕೊಂಡರೆ ಮಕ್ಕಳು ಅದನ್ನು ಮುಂದುವರಿಸುತ್ತಾರೆ, ಅನೇಕ ಪೋಷಕರಿಗೆ ತಮ್ಮ ಬಾಲ್ಯದಲ್ಲಿ ನೃತ್ಯ ಸಂಗೀತಗಳ ಕಲಿಕೆಗೆ ಅವಕಾಶವಿಲ್ಲದಿದ್ದರೂ ಈಗ ತಮ್ಮ ಮಕ್ಕಳನ್ನು ನೃತ್ಯ ಸಂಗೀತಗಳ ಕಲಿಕೆಗೆ ಕಳಿಸುತ್ತಿರುವುದು ಶ್ಲಾಘನೀಯ ಎಂದರು. ನಾಟ್ಯ ಭಾರತಿಯು ಬಡ ಮತ್ತು ಮಧ್ಯಮ ವರ್ಗದ ಮಕ್ಕಳಿಗೂ ಕೈಗೆಟಕುವ ಶುಲ್ಕದಲ್ಲಿ ದಶಕಗಳಿಂದ ಶಾಸ್ತ್ರೀಯ ನೃತ್ಯ ಸಂಗೀತ ಶಿಕ್ಷಣ ನೀಡುತ್ತಿರುವುದು ಸ್ವಾಗತಾರ್ಹ ಎಂದರು.

ಸಂಸ್ಥೆಯ ಅಧ್ಯಕ್ಷೆ ವಿದುಷಿ ರಜನಿ ರಘುನಾಥ ಕುಲಕರ್ಣಿ ಅಧ್ಯಕ್ಷೀಯ ನುಡಿಗಳನ್ನಾಡಿದರು.

Davangere University ಶ್ರೀನಿಧಿ ಆರ್ ಕುಲಕರ್ಣಿಯವರ ನಟುವಾಂಗ ವಿದುಷಿ ರಜನಿ ರಘುನಾಥ ಕುಲಕರ್ಣಿಯವರ ಹಾಡುಗಾರಿಕೆ ವಿದ್ವಾನ್ ಬಿ ಶ್ರೀನಾಥ ಭಟ್ ಹೊಸಪೇಟೆ ಇವರ ಮೃದಂಗ ಹಾಗೂ ವಿದ್ವಾನ್ ಜಿ ಸಿ ಕುಲಕರ್ಣಿ ತುಮಕೂರು ಇವರ ಹಾರ್ಮೋನಿಯಂ ಹಿಮ್ಮೇಳದಲ್ಲಿ ಸಂಸ್ಥೆಯ ಹಿರಿಕಿರಿಯ ವಿದ್ಯಾರ್ಥಿನಿಯರು ಸುಮಾರು 19 ವಿಶೇಷ ಶಾಸ್ತ್ರೀಯ ಹಾಗೂ ಲಘು ಶಾಸ್ತ್ರಿಯ ವೈವಿಧ್ಯಮಯ ನೃತ್ಯಗಳನ್ನು ಹಾಗೂ ಗಂಗಾವತರಣ ಎಂಬ ನೃತ್ಯ ರೂಪಕವನ್ನು ಪ್ರಸ್ತುತಪಡಿಸಿದರು. ವಿಶೇಷವಾಗಿ ಜರ್ಮನಿಯಿಂದ ಬಂದ ಶ್ರೀಕಾಂತ ಆರ್ ಕುಲಕರ್ಣಿಯವರ ನವಿಲು ನೃತ್ಯ ಹಾಗೂ ಉಡುಪಿಯ ವಿಶ್ವನಾಥರಾವ್ ಮತ್ತು ವರ್ಣಿಕಾ ಅವರ ‘ವರವ ಕೊಡು’ ಎಂಬ ಕನಕದಾಸರ ಕೀರ್ತನೆ ನೃತ್ಯ ಆಕರ್ಷಕವಾಗಿತ್ತು.

ನಾಟ್ಯ ಭಾರತಿಯ ನಿರ್ದೇಶಕ ರಾಜಶೇಖರ್, ವಿಜಯಕುಮಾರ್ ಕಲಮದಾನಿ, ಕುಬೇರ, ವಿಶ್ವನಾಥ್ ಕೆ ಎಸ್, ಸಾಗರ್ ತೌಡೂರು, ಬಿ ಶಿವಶಂಕರ್, ಶರತ್ ರಾಜ್ ಕಾರ್ಯಕ್ರಮಕ್ಕೆ ಸಹಕಾರ ನೀಡಿದರು. ಧಾರವಾಡದ ಸಂತೋಷ್ ಮಹಾಲೆ ದಂಪತಿಗಳು ಕಲಾತ್ಮಕ ಮೇಕಪ್ ವ್ಯವಸ್ಥೆ ನಿರ್ವಹಿಸಿದರು.

Sainik School Kodagu ಕೊಡಗು ಸೈನಿಕಶಾಲೆಗೆ ಪ್ರವೇಶಾತಿ ಅರ್ಜಿ ಆಹ್ವಾನ

0

Sainik School Kodagu ಕೊಡಗು ಸೈನಿಕ ಶಾಲೆಯಲ್ಲಿ 6ನೇ ತರಗತಿ(ಹುಡುಗ ಮತ್ತು ಹುಡುಗಿಯರು) ಹಾಗೂ 9 ನೇ ತರಗತಿ(ಹುಡುಗರು ಮಾತ್ರ)ಯ ಪ್ರವೇಶಕ್ಕಾಗಿ ಅರ್ಜಿ ಕರೆಯಲಾಗಿದ್ದು ಜ.13 ಅರ್ಜಿ ಸಲ್ಲಿಸಲು ಕಡೆಯ ದಿನವಾಗಿದೆ.
ಅರ್ಜಿಯನ್ನು https://exams.nta.ac.in/AISSEE ಜಾಲತಾಣದಲ್ಲಿ ಮಾತ್ರ ಸಲ್ಲಿಸಬಹುದು. ಹಾಗೂ ಲಿಖಿತ ಪರೀಕ್ಷೆಯ ದಿನಾಂಕವನ್ನು ಎನ್‌ಟಿಎ ಜಾಲತಾಣದಲ್ಲಿ ನಂತರ ಪ್ರಕಟಿಸಲಾಗುವುದು.
ಹೆಚ್ಚಿನ ಮಾಹಿತಿಗಾಗಿ www.sainikschoolkodagu.edu.in ಎಂಬ ಜಾಲತಾಣವನ್ನು ಸಂಪರ್ಕಿಸಬಹುದು ಎಂದು ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಉಪನಿರ್ದೇಶಕರಾದ(ಪ್ರ) ಡಾ.ಸಿ.ಎ.ಹಿರೇಮಠ ತಿಳಿಸಿದ್ದಾರೆ.

District Health and Family Welfare Department ಜಿಲ್ಲೆಯಲ್ಲಿನ ಸಮುದಾಯ ಆರೋಗ್ಯ ಕೇಂದ್ರಗ & ಅಸ್ಪತ್ರೆಗಳಲ್ಲಿ ತಜ್ಞವೈದ್ಯರ ನೇರ ಸಂದರ್ಶನ

0

District Health and Family Welfare Department ಶಿವಮೊಗ್ಗ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಚೇರಿ ಶಿವಮೊಗ್ಗ ಇವರ ಅಧೀನದ ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಮತ್ತು ಸಾರ್ವಜನಿಕ ಆಸ್ಪತ್ರೆಗಳಲ್ಲಿ ಖಾಲಿ ಇರುವ ತಜ್ಞ ವೈದ್ಯರ ಹುದ್ದೆಗಳಿಗೆ ತಾತ್ಕಾಲಿಕವಾಗಿ ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಲು ನೇರ ಸಂದರ್ಶನ ಏರ್ಪಡಿಸಲಾಗಿದೆ.

ಫಿಜಿಷಿಯನ್-02, ಶಸ್ತ್ರ ಚಿಕಿತ್ಸೆ ತಜ್ಞರು-01, ಸ್ತ್ರೀ ರೋಗ ತಜ್ಞ-03, ಅರಿವಳಿಕೆ-09, ಇಎನ್‌ಟಿ-02, ನೇತ್ರ ತಜ್ಞರು-02, ಮಕ್ಕಳ ತಜ್ಞರು-2, ಕೀಲು ಮತ್ತು ಮೂಳೆ ತಜ್ಞರು-01, ರೇಡಿಯಾಲಜಿಸ್ಟ್ -01, ನೆಫ್ರೊಲಜಿಸ್ಟ್-01 ಒಟ್ಟು 24 ತಜ್ಞ ವೈದ್ಯಾಧಿಕಾರಿಗಳ ಹುದ್ದೆಗಳಿಗೆ ಒಂದು ವರ್ಷ ಅವಧಿಗೆ ರೋಸ್ಟರ್ ಮತ್ತು ಮೆರಿಟ್ ಆಧಾರದಲ್ಲಿ ತಾತ್ಕಾಲಿಕವಾಗಿ ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಲಾಗುವುದು .

District Health and Family Welfare Department ಆಸಕ್ತ ಅಭ್ಯರ್ಥಿಗಳು ದಿ: 15-01-2025 ರಂದು ಬೆಳಿಗ್ಗೆ 11 ರಿಂದ ಮಧ್ಯಾಹ್ನ 1 ಗಂಟೆವರೆಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಚೇರಿ, ಬಿ.ಹೆಚ್.ರಸ್ತೆ, ಶಿವಮೊಗ್ಗ ಇಲ್ಲಿ ತಮ್ಮ ವಿದ್ಯಾರ್ಹತೆ, ಹುಟ್ಟಿದ ದಿನಾಂಕ ಮತ್ತು ಮೀಸಲಾತಿಗೆ ಸಂಬಂಧಿಸಿದ ಎಲ್ಲಾ ದಾಖಲಾತಿಗಳ ಒಂದು ಸೆಟ್ ನಕಲು ಮತ್ತು ಮೂಲ ಪ್ರತಿಗಳು ಹಾಗೂ ಇತ್ತೀಚಿನ ಎರಡು ಭಾವಚಿತ್ರಗಳೊಂದಿಗೆ ಹಾಜರಾಗಬೇಕು. ಹೆಚ್ಚಿನ ಮಾಹಿತಿಗೆ ದೂ.ಸಂ: 08182 222382 ನ್ನು ಸಂಪರ್ಕಿಸಬಹುದೆಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು ತಿಳಿಸಿದ್ದಾರೆ.