Saturday, March 14, 2026
Saturday, March 14, 2026
Home Blog Page 416

Health and Family Welfare Development ಕುಷ್ಠರೋಗ ಅಂಟು ರೋಗವಲ್ಲ, ತಾರತಮ್ಯ ಬೇಡ : ಡಾ.ಕೆ.ಎಸ್.ನಟರಾಜ್

0

Health and Family Welfare Development ಕುಷ್ಠರೋಗ ಅಂಟು ರೋಗವಲ್ಲ. ಈ ರೋಗದ ಬಗ್ಗೆ ತಾರತಮ್ಯ, ಬೇಧ-ಭಾವ ಬೇಡ. ಆದರೆ ಕುಷ್ಠರೋಗ ಇರುವ ವ್ಯಕ್ತಿ ಕೆಮ್ಮುವಾಗ ಅಥವಾ ಸೀನಿದಾಗ ಇನ್ನೊಬ್ಬರಿಗೆ ಹರಡಬುದಾದ್ದರಿಂದ ಎಚ್ಚರಿಕೆಯಿಂದ ಇರಬೇಕು ಎಂದು .
ರಾಷ್ಟ್ರೀಯ ಆರೋಗ್ಯ ಅಭಿಯಾನ ಅಡಿಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಕುಷ್ಠರೋಗ ನಿವಾರಣ ಕಾರ್ಯಕ್ರಮ ಶಿವಮೊಗ್ಗ, ಭಾರತೀಯ ವೈದ್ಯಕೀಯ ಸಂಘ ಶಿವಮೊಗ್ಗ ಹಾಗೂ ಸುಬ್ಬಯ್ಯ ಮೆಡಿಕಲ್ ಕಾಲೇಜು ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ ಇವರುಗಳ ಸಹಯೋಗದೊಂದಿಗೆ ಹಮ್ಮಿಕೊಳ್ಳಲಾಗಿದ್ದ ರಾಷ್ಟ್ರೀಯ ಸ್ಪರ್ಶ್ ಕುಷ್ಠರೋಗ ಜಾಗೃತಿ ಆಂದೋಲನ ಕಾರ್ಯಕ್ರಮಕ್ಕೆ ಹಸಿರು ನಿಶಾನೆಯ ತೋರುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ಈಗಾಗಲೇ 53 ಕುಷ್ಠರೋಗ ಪ್ರಕರಣಗಳು ಇವೆ. ಇದಲ್ಲದೇ ಏಪ್ರಿಲ್ ನಿಂದ ಇಲ್ಲಿಯವರೆಗೂ 32 ಪ್ರಕರಣಗಳನ್ನು ಪತ್ತೆ ಹಚ್ಚಿದ್ದೇವೆ. ಅದರಲ್ಲಿ ಶಿಕಾರಿಪುರ ತಾಲ್ಲೂಕಿನಲ್ಲಿ ಹೆಚ್ಚಿನ ಪ್ರಕರಣಗಳು ದಾಖಲಾಗಿವೆ.
ನಮ್ಮ ದೇಶ ತುಂಬು ಕುಟುಂಬ ಹೊಂದಿರುವ ದೇಶವಾಗಿದೆ. ಇದರಿಂದ ಕುಷ್ಠರೋಗ ಹರಡುವ ಸಾಧ್ಯತೆಗಳು ಹೆಚ್ಚು. ಆದ್ದರಿಂದ ನಾವು ಕೆಮ್ಮುವಾಗ, ಸೀನುವಾಗ ಎಚ್ಚರಿಕೆ ವಹಿಸಬೇಕು. ಇದಲ್ಲದೇ ದೇಹದಲ್ಲಿ ಬಿಳಿ ಮಚ್ಚೆಗಳು ಕಂಡುಬಂದಲ್ಲಿ ನಿರ್ಲಕ್ಷ್ಯತನ ಮಾಡದೆ ಕೂಡಲೇ ವೈದ್ಯರನ್ನು ಸಂಪರ್ಕಿಸಿ ಸಲಹೆ ತೆಗೆದುಕೊಳ್ಳಬೇಕು ಎಂದು ಹೇಳಿದರು.
ಶಿಕಾರಿಪುರ ಅಲ್ಲದೆ ಜಿಲ್ಲೆಯ ಅನೇಕ ತಾಲ್ಲೂಕುಗಳಲ್ಲಿ ಕುಷ್ಠರೋಗ ಪ್ರಕರಣಗಳು ಕಂಡುಬಂದಿವೆ. ಆದರೆ ಪ್ರಮಾಣ ಕಡಿಮೆ ಇದೆ. ಜಿಲ್ಲೆಯ ಯಾವ ತಾಲ್ಲೂಕು ಕುಷ್ಠರೋಗದಿಂದ ಹೊರತಾಗಿಲ್ಲ. ಇದನ್ನು ತೊಡೆದು ಹಾಕಲು ಆರೋಗ್ಯ ಇಲಾಖೆ ಪಣತೊಟ್ಟಿದ್ದು, ಹಗಲು ರಾತ್ರಿ ಎನ್ನದೆ ಶ್ರಮಿಸುತ್ತಿದೆ ಎಂದರು.
ಮೆಗ್ಗನ್ ಬೋಧನಾ ಜಿಲ್ಲಾಸ್ಪತ್ರೆಯ ವೈದ್ಯಕೀಯ ಅಧೀಕ್ಷಕರಾದ ಡಾ.ಟಿ.ಡಿ.ತಿಮ್ಮಪ್ಪ ಮಾತನಾಡಿ, ನಾವು ಸಣ್ಣ ಮಕ್ಕಳಿದ್ದಾಗ ನಗರದ ಬಸ್’ಸ್ಟಾಂಡ್, ದೇವಸ್ಥಾನ ಒಳಗೊಂಡಂತೆ ಅನೇಕ ಕಡೆ ಕುಷ್ಠರೋಗಿಗಳನ್ನು ಕಾಣುತ್ತಿದ್ದೆವು. ಜನರು ಅವರನ್ನು ಮುಟ್ಟಿಸಿಕೊಳ್ಳಲು ಹಿಂಜರಿಯುತ್ತಿದ್ದರು. ಈ ಖಾಯಿಲೆಯಿಂದ ಅವರು ವೈವಾಹಿಕ ಜೀವನದಿಂದಲೇ ದೂರ ಉಳಿದಿದ್ದರು. ಇಡೀ ಸಮಾಜವೇ ಈ ರೋಗವನ್ನು ಅನಿಷ್ಠವೆಂಬಂತೆ ಕಾಣುತ್ತಿದ್ದರು ಎಂದು ತಮ್ಮ ಬಾಲ್ಯದ ನೆನಪನ್ನು ಹಂಚಿಕೊಂಡರು.
ಏಸುಕ್ರಿಸ್ತ, ಭಗವಾನ್ ಬುದ್ದ, ಮಹಾತ್ಮ ಗಾಂಧಿ, ಮದರ್ ತೆರೇಸಾ ಇವರೆಲ್ಲಾ ಕುಷ್ಠರೋಗವನ್ನು ಅನಿಷ್ಠವೆಂದು ಕಾಣದೆ ಸೇವೆಯನ್ನು ಮಾಡಿದವರು. ಕುಷ್ಠರೋಗವು ಸ್ವರ್ಶದಿಂದ ಬರುವುದಿಲ್ಲ ಎಂದು ಅರಿತಿದ್ದ ಈ ಮಹಾನೀಯರು ತಮ್ಮ ಬದುಕಿನುದ್ದಕ್ಕೂ ಈ ರೋಗಿಗಳ ಶುಶ್ರೂಷೆ ಮಾಡುತ್ತಾ ಜೀವನ ನಡೆಸಿದರು. ಕುಷ್ಠರೋಗವನ್ನು ಹೋಗಲಾಡಿಸಬೇಕೆಂದು ಶ್ರಮಿಸುತ್ತಿರುವ ನಾವೆಲ್ಲರು ಇವರ ಆದರ್ಶವನ್ನು ಪಾಲನೆ ಮಾಡಬೇಕು. ಆ ನಿಟ್ಟಿನಲ್ಲಿ ನಿಮ್ಮೆಲ್ಲರ ಸಹಕಾರ ಕೂಡ ಬೇಕು ಎಂದರು.
ಭಾರತೀಯ ವೈದ್ಯಕೀಯ ಸಂಘದ ಅಧ್ಯಕ್ಷ ಡಾ.ಶ್ರೀಧರ್ ಮಾತನಾಡಿ, ಸ್ಪರ್ಶ್ ಕುಷ್ಠರೋಗ ಜಾಗೃತಿ ಆಂದೋಲನ ಗಾಂಧೀಜಿಯವರ ಆಂದೋಲನ ನೆನೆಪಿಸುತ್ತಿದೆ. ಇತ್ತೀಚಿಗೆ ಕುಷ್ಠರೋಗದ ಬಗ್ಗೆ ಸಮಾಜದಲ್ಲಿ ತಪ್ಪು ಕಲ್ಪನೆ ಮೂಡಿದೆ. ಈ ರೋಗ ಪಾಪ, ಪುಣ್ಯದ ಪಿಡುಗು ಎಂದು ಭಾವಿಸಲಾಗುತ್ತಿದೆ. ಅಂತಹ ತಪ್ಪು ಕಲ್ಪನೆಯನ್ನು ಹೊಗಲಾಡಿಸೋಣ. ಅದಕ್ಕೆ ಇಂತಹ ಅಭಿಯಾನಗಳು ಮುಖ್ಯವಾಗಿದೆ ಎಂದರು.
Health and Family Welfare Development ಕುಷ್ಠರೋಗ ಸಮಾಜ ಮತ್ತು ಆರ್ಥಿಕತೆಯ ಮೇಲೆ ತುಂಬಾ ಸಮಸ್ಯೆ ಉಂಟು ಮಾಡುತ್ತಿದೆ. ಈ ರೋಗ ಇದೆ ಎಂದು ಹೇಳಲು ಕೂಡ ಮುಜುಗರ ಪಡುವಂತಹ ವಾತಾವರಣ ನಿರ್ಮಾಣವಾಗಿದೆ. ಇಂತಹ ಪಿಡುಗನ್ನು ತೊಡೆದು ಹಾಕಲು ರಾಷ್ಟ್ರೀಯ ಆರೋಗ್ಯ ಅಭಿಯಾನದಡಿಯಲ್ಲಿ ನಾವೆಲ್ಲಾ ಕೆಲಸ ಮಾಡಬೇಕು. ಹಳ್ಳಿ ಹಳ್ಳಿಗಳಿಗು ಹೋಗಿ ಇದರ ಬಗ್ಗೆ ಅರಿವು ಮೂಡಸಬೇಕು. ಭಾರತೀಯ ವೈದ್ಯಕೀಯ ಸಂಘದವರು ಈ ಪಿಡುಗನ್ನು ಹೋಗಲಾಡಿಸಲು ಸದಾ ಆರೋಗ್ಯ ಇಲಾಖೆಯ ಜೊತೆ ಕೈ ಜೋಡಿಸುತ್ತದೆ ಎಂದರು.
ಕಾರ್ಯಕ್ರದಲ್ಲಿ ಜಿಲ್ಲಾ ಕುಷ್ಠರೋಗ ನಿವಾರಣಾ ಕಾರ್ಯಕ್ರಮಧಿಕಾರಿ ಡಾ.ಎಸ್.ಕೆ. ಕಿರಣ್ ಮಾತನಾಡಿ, ಚರ್ಮದ ಮೇಲೆ ತಿಳಿಬಿಳಿ ಅಥವಾ ಕೆಂಪು ಇಲ್ಲವೇ ತಾಮ್ರ ವರ್ಣ ಸ್ಪರ್ಷಜ್ಞಾನವಿಲ್ಲದ ಮಚ್ಚೆಗಳು, ಚರ್ಮದ ಮೇಲೆ ಬೆಳವಣಿಗೆಗಳು(ಗಂಟು), ನೋವು ರಹಿತ ಹುಣ್ಣುಗಳು, ಹುಬ್ಬುಗಳು ಅಥವಾ ಕಣ್ರೆಪ್ಪೆಗಳ ನಷ್ಟ ಇವು ಕುಷ್ಠರೋಗದ ಲಕ್ಷಣಗಳಾಗಿವೆ. ಈ ರೋಗವನ್ನು ತಡೆಗಟ್ಟಲು ಮಚ್ಚೆಗಳನ್ನು ಗುಪ್ತವಾಗಿರಿಸದೇ ವೈದ್ಯರಿಗೆ ತೋರಿಸಬೇಕು. ಪ್ರಾರಂಭಿಕ ಹಂತದಲ್ಲಿ ಚಿಕಿತ್ಸೆ ಪಡೆದರೆ ಹರಡುವಿಕೆ ತಡೆಯಬಹುದು ಹಾಗೂ ಇದರಿಂದಾಗುವ ಅಂಗವೈಕಲ್ಯ ತಡೆಯಬಹುದು. ಕುಷ್ಠರೋಗದಿಂದ ಬಳಲುವವರಿಗೆ ಆರೋಗ್ಯ ಇಲಾಖೆಯಿಂದ ಶಸ್ತçಚಿಕಿತ್ಸೆ, ಉಚಿತ ಎಂಸಿಆರ್ ಚಪ್ಪಲಿ, ಸಹಾಯಕ ಔಷಧಿಗಳನ್ನು ನೀಡಲಾಗುತ್ತದೆ ಎಂದು ಮಾಹಿತಿ ನೀಡಿದರು.
ಜಿಲ್ಲಾಧಿಕಾರಿಗಳಾದ ಗುರುದತ್ತ ಹೆಗಡೆ ಇವರು ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ “ಸ್ಪರ್ಶ್ ಕುಷ್ಠರೋಗ ಜಾಗೃತಿ ಆಂದೋಲನ – 2025” ಕಾರ್ಯಕ್ರಮದ ಪೋಸ್ಟರ್ ಹಾಗೂ ಕುಷ್ಠರೋಗ ಮಾಹಿತಿ ಕರಪತ್ರಗಳನ್ನು ಬಿಡುಗಡೆ ಮಾಡಿ, ಮಾತನಾಡಿ ಈ ಪಾಕ್ಷಿಕÀದಲ್ಲಿ ಕುಷ್ಠರೋಗದ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವುದು, ಕುಷ್ಠರೋಗಿಗಳನ್ನು ಅತೀ ಶ್ರೀರ್ಘದಲ್ಲಿ ಗುರುತಿಸಿ ಚಿಕಿತ್ಸೆಗೆ ಒಳಪಡಿಸುವುದು ಮತ್ತು ಸಾರ್ವಜನಿಕರು ಹಾಗೂ ಸಂಘ ಸಂಸ್ಥೆಗಳನ್ನು ಈ ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಲು ಕರೆ ನೀಡಿದರು.
ಇದೇ ವೇಳೆ ಕುಷ್ಟರೊಗ ಜಾಗೃತಿ ಕುರಿತು ಸೈಕಲ್ ಜಾಥಾ ಕೈಗೊಳ್ಳಲಾಯಿತು. ಹಾಗೂ ಕುಷ್ಟರೋಗ ಜಾಗೃತಿ ಆಂದೋಲನದ ಕುರಿತು ಪ್ರತಿಜ್ಞಾ ವಿಧಿಯನ್ನು ಬೋಧಿಸಲಾಯಿತು.
ಆರೋಗ್ಯ ಇಲಾಖೆಯ ವಿವಿಧ ಕಾರ್ಯಕ್ರಮಗಳ ಅನುಷ್ಟಾನ ಅಧಿಕಾರಿಗಳು, ಚರ್ಮರೋಗ ತಜ್ಞರಾದ ಡಾ.ದಾದಾಪೀರ್ ಮತ್ತು ಸಿಬ್ಬಂದಿಗಳು, ಆಶಾ ಕಾರ್ಯಕರ್ತೆಯರು ಹಾಗೂ ಸುಬ್ಬಯ್ಯ ಮೆಡಿಕಲ್ ಕಾಲೇಜಿನ ನರ್ಸಿಂಗ್ ವಿದ್ಯಾರ್ಥಿಗಳುಶಿವಮೊಗ್ಗ ಸೈಕಲ್ ಕ್ಲಬ್ ಸದಸ್ಯರು ಹಾಜದರಿದ್ದರು.

MESCOM ಜ.31ರಂದು ಅಶೋಕ ರಸ್ತೆ ಸುತ್ತಮುತ್ತ ವಿದ್ಯುತ್ ವ್ಯತ್ಯಯ

0

MESCOM ಶಿವಮೊಗ್ಗ ನಗರದ ಅಶೋಕ ರಸ್ತೆ ಮತ್ತು ಶಿವಾಜಿ ರಸ್ತೆ ಬಳಿ ವಿದ್ಯುತ್ ಪರಿಕರಗಳ ನಿರ್ವಹಣೆ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಅಶೋಕರಸ್ತೆ, ಶಿವಾಜಿ ರಸ್ತೆ, ಎಸ್‌ಪಿಎಂ ರಸ್ತೆ, ವಿನಾಯಕ ರಸ್ತೆ, ಯಾಲಕಪ್ಪ ಕೇರಿ, ಬೇಡರ ಕೇರಿ, ಭೂಪಾಳಂ ಶಾಲೆ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಜ.31 ರಂದು ಬೆಳಗ್ಗೆ 09.00 ಘಂಟೆಯಿಂದ ಸಂಜೆ 6.00 ಘಂಟೆಯವರೆಗೆ ವಿದ್ಯುತ್‌ ವ್ಯತ್ಯಯವಾಗಲಿದ್ದು, ಸಾರ್ವಜನಿಕರು ಸಹಕರಿಸುವಂತೆ ಮೆಸ್ಕಾಂ ಕೋರಿದೆ.

Karnataka Rakshana Vedike ಕನ್ನಡಪರ ಹೋರಾಟಗಾರರ ಕೇಸ್ ವಾಪಸ್, ಮುಖ್ಯಮಂತ್ರಿಗೆ ಅಭಿನಂದನೆ

0

Karnataka Rakshana Vedike ಕನ್ನಡಪರ ಹೋರಾಟಗಾರರ ಮೇಲೆ ವಿವಿಧಡೆ ದಾಖಲಾಗಿರುವ ಎಲ್ಲಾ ಪ್ರಕರಣಗಳನ್ನು ವಾಪಸ್ ಪಡೆಯಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಘೋಷಿಸಿದ ಹಿನ್ನೆಲೆಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣದ ಶಿವಮೊಗ್ಗ ಜಿಲ್ಲಾ ಅಧ್ಯಕ್ಷ ಕಿರಣ್ ಕುಮಾರ್ ಎಚ್ಎಸ್ ಹರ್ಷ ವ್ಯಕ್ತಪಡಿಸಿದ್ದಾರೆ.

Karnataka Rakshana Vedike ಕನ್ನಡಪರ ಸಂಘಟನೆಗಳಲ್ಲಿ ಹಲವಾರು ಬಡ ಕೂಲಿ ಕಾರ್ಮಿಕರು ಆಟೋ ಚಾಲಕರು ರೈತರು ಸಾಹಿತಿಗಳು ಯುವ ಬರಹಗಾರರಿದ್ದು ನಾಡು ನುಡಿ ನೆಲ ಭಾಷೆಗಳ ಹೋರಾಟದಲ್ಲಿ ಭಾಗಿಯಾಗಿದ್ದರು ಅಂತ ಅವರ ಮೇಲಿನ ದುರುದ್ದೇಶದಿಂದ ಕೂಡಿದ ಹಾಕಲಾದ ಎಲ್ಲಾ ಕೇಸ್ ಗಳನ್ನು ಹಿಂತೆಗೆದುಕೊಂಡು ಅವರ ಹಿತ ಕಾಪಾಡಿದ್ದಕ್ಕೆ ಹಾಗೂ ಈ ನಿರ್ಧಾರ ತೆಗೆದುಕೊಂಡ ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರಿಗೆ ಕನ್ನಡಪರ ಹೋರಾಟಗಾರರ ಪರವಾಗಿ ಹಾಗೂ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣದ ಪರವಾಗಿ ಕೃತಜ್ಞತೆಗಳನ್ನು ಸಲ್ಲಿಸಿದ್ದಾರೆ.

Red Cross Shivamogga ಮನುಕುಲದ ಸೇವೆಯಲ್ಲಿ ರೆಡ್‌ಕ್ರಾಸ್ ಸಂಸ್ಥೆ ಸದಾ ಮುಂಚೂಣಿಯಲ್ಲಿದೆ : ಡಾ. ದಿನೇಶ್

0

Red Cross Shivamogga ಮನುಕುಲದ ಸೇವೆಯಲ್ಲಿ ರೆಡ್‌ಕ್ರಾಸ್ ಸಂಸ್ಥೆ ಸದಾ ಮುಂಚೂಣಿಯಲ್ಲಿದ್ದು, ತುರ್ತು ಆಘಾತ ಸಂದರ್ಭಗಳಲ್ಲಿ ತಕ್ಷಣ ಸ್ಪಂದಿಸುವ ಕೆಲಸ ಮಾಡುತ್ತಿದೆ. ಅಗತ್ಯ ವಸ್ತುಗಳನ್ನು ತಲುಪಿಸುವ ಕಾರ್ಯ ನಿರಂತರವಾಗಿ ನಡೆಸುತ್ತಿದೆ ಎಂದು ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಶಿವಮೊಗ್ಗ ಘಟಕದ ಗೌರವ ಕಾರ್ಯದರ್ಶಿ ಡಾ. ದಿನೇಶ್ ಹೇಳಿದರು.
ಶಿವಮೊಗ್ಗ ನಗರದ ಹೊಸಮನೆ ಆರನೇ ಕ್ರಾಸ್‌ನಲ್ಲಿ ರತ್ನಮ್ಮ ಅವರ ಮನೆ ವಿದ್ಯುತ್ ಶಾರ್ಟ್ ಸಕ್ಯೂಟ್‌ನಿಂದ ಇಡೀ ಮನೆಯಲ್ಲಿದ್ದ ವಸ್ತುಗಳು ಭಸ್ಮವಾಗಿದ್ದ ಹಿನ್ನೆಲೆಯಲ್ಲಿ ರೆಡ್‌ಕ್ರಾಸ್ ತಂಡ ಪರಿಶೀಲಿಸಿ ಸಾಂತ್ವಾನ ಹೇಳಿ ಧೈರ್ಯ ತುಂಬಿದ ಅವರು, ಮನೆಗೆ ತುರ್ತಾಗಿ ಅವಶ್ಯವಿರುವ ವಸ್ತುಗಳನ್ನು ವಿತರಿಸಿದರು.
ಪಾತ್ರೆಗಳು, ಕಿಚನ್ ಸೆಟ್, ಬೆಡ್‌ಶೀಟ್, ಜಮಕಾನ, ಆಹಾರ ಪದಾರ್ಥ, ಬಟ್ಟೆಗಳು, ಸೀರೆ, ಪಂಚೆ, ಅಗತ್ಯ ಸಾಮಾಗ್ರಿಗಳನ್ನು ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಶಿವಮೊಗ್ಗ ಘಟಕದಿಂದ ವಿತರಿಸಲಾಯಿತು.
Red Cross Shivamogga ಇದೇ ಸಂದರ್ಭದಲ್ಲಿ ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಶಿವಮೊಗ್ಗ ಘಟಕದ ಕಾರ್ಯದರ್ಶಿ ಎ.ಎಂ.ಸುರೇಶ್ ಮಾತನಾಡಿ, ರೆಡ್‌ಕ್ರಾಸ್ ಸಂಸ್ಥೆ ಕರೊನಾ, ಸುನಾಮಿ, ತುರ್ತು ಅವಘಡ ಸಂದರ್ಭಗಳಲ್ಲಿ ಮಾನವೀಯ ಸೇವಾ ಕಾರ್ಯಗಳನ್ನು ನಡೆಸಿದೆ. ತುರ್ತು ಪರಿಸ್ಥಿತಿಗಳಲ್ಲಿ ಅಗತ್ಯವಿರುವ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿದೆ ಎಂದು ತಿಳಿಸಿದರು.
ಶಿವಮೊಗ್ಗದ ಹೊಸಮನೆ ಬಡಾವಣೆಯಲ್ಲಿ ರತ್ನಮ್ಮ ಎಂಬುವವರ ಮನೆಯಲ್ಲಿ ವಿದ್ಯುತ್ ಶಾರ್ಟ್ ಸಕ್ಯೂಟ್‌ನಿಂದ ಬಹುತೇಕ ವಸ್ತುಗಳು ಸುಟ್ಟು ಹೋಗಿದ್ದು, ಸಂಸ್ಥೆ ವತಿಯಿಂದ ತುರ್ತಾಗಿ ಅವರಿಗೆ ಅವಶ್ಯವಿರುವ ವಸ್ತುಗಳನ್ನು ನೀಡಲಾಗುತ್ತಿದೆ ಎಂದು ಹೇಳಿದರು.
ಅಗತ್ಯ ಸಾಮಾಗ್ರಿಗಳನ್ನು ವಿತರಿಸುವ ಸಂದರ್ಭದಲ್ಲಿ ನಿರ್ದೇಶಕರಾದ ನವೀನ್, ಗಿರೀಶ್ ಶೇಟ್, ಜಗದೀಶ್, ಜಿ.ವಿಜಯಕುಮಾರ್, ಧರಣೇಂದ್ರ ದಿನಕರ್ ಮತ್ತಿತರರು ಉಪಸ್ಥಿತರಿದ್ದರು.

JCI Shivamogga ರಕ್ತದಾನದಿಂದ ದೈಹಿಕ, ಮಾನಸಿಕ ಆರೋಗ್ಯ ವೃದ್ಧಿ: ಶೇಷಗಿರಿ ಡಿ.ಕೆ

0

JCI Shivamogga ರಕ್ತದಾನ ಅತ್ಯಂತ ಶ್ರೇಷ್ಠದಾನ ಆಗಿದ್ದು, ರಕ್ತದಾನದಿಂದ ಆತ್ಮತೃಪ್ತಿಯ ಜತೆಗೆ ದೈಹಿಕ, ಮಾನಸಿಕ ಆರೋಗ್ಯ ವೃದ್ಧಿಯಾಗುತ್ತದೆ ಎಂದು ಜೆಸಿಎ.ವೈಸ್ ಚೇರ್ಮನ್ ಶೇಷಗಿರಿ ಡಿ.ಕೆ. ಹೇಳಿದರು.
ಶಿವಮೊಗ್ಗ ನಗರದ ಜೆಪಿಎನ್ ರಸ್ತೆಯಲ್ಲಿರುವ ರೆಡ್ ಕ್ರಾಸ್ ಸಂಜೀವಿನಿ ರಕ್ತನಿಧಿಯಲ್ಲಿ ಜೆಸಿಐ ಶಿವಮೊಗ್ಗ ಸಹ್ಯಾದ್ರಿ ಶಿವಮೊಗ್ಗ ವತಿಯಿಂದ ಆಯೋಜಿಸಿದ್ದ ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ರಕ್ತದಾನದಿಂದ ಜೀವ ಉಳಿಸಿದ ಪುಣ್ಯ ಲಭಿಸುತ್ತದೆ. ಪ್ರತಿಯೊಬ್ಬ ಆರೋಗ್ಯವಂತ ವ್ಯಕ್ತಿ ರಕ್ತದಾನ ಮಾಡಲು ಮುಂದಾಗಬೇಕು ಎಂದು ತಿಳಿಸಿದರು.
ಜೆಸಿಐ ರಾಷ್ಟ್ರೀಯ ಸಂಯೋಜಕ ಸತೀಶ್ ಚಂದ್ರ ಮಾತನಾಡಿ, ರಕ್ತದ ಕೊರತೆ ಇರುವುದರಿಂದ ಸಾಕಷ್ಟು ಜನರು ಜೀವ ಕಳೆದುಕೊಳ್ಳುತ್ತಾರೆ. ರಕ್ತದ ಲಭ್ಯತೆ ಇದ್ದಲ್ಲಿ ತುರ್ತು ಸಂದರ್ಭದಲ್ಲಿರುವವರಿಗೆ ರಕ್ತ ಸಿಗುವ ಜತೆಯಲ್ಲಿ ಅಮೂಲ ಜೀವ ಉಳಿಯುತ್ತದೆ. ಯುವಜನರು ರಕ್ತದಾನ ಮಾಡಬೇಕು ಎಂದು ಹೇಳಿದರು.
JCI Shivamogga ರಕ್ತದಾನ ಶಿಬಿರದ ಅಧ್ಯಕ್ಷತೆ ವಹಿಸಿದ್ದ ಜೆಸಿಐ ಶಿವಮೊಗ್ಗ ಸಹ್ಯಾದ್ರಿ ಅಧ್ಯಕ್ಷ ಜಿ.ಗಣೇಶ್ ಮಾತನಾಡಿ, ಅಧ್ಯಕ್ಷರಾಗಿ ಇತ್ತೀಚೆಗೆ ಅಧಿಕಾರ ವಹಿಸಿಕೊಂಡಿದ್ದು, ವರ್ಷಪೂರ್ತಿ ಸಮಾಜಮುಖಿ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಿದ್ದು, ಮೊದಲ ಕಾರ್ಯಕ್ರಮವಾಗಿ ರಕ್ತದಾನ ಶಿಬಿರ ಆಯೋಜಿಸಲಾಗಿದೆ. ರಕ್ತದಾನ ಮಾಡುವವುದರಿಂದ ಉತ್ತಮ ಆರೋಗ್ಯ ನಮ್ಮದಾಗುತ್ತದೆ. ಮುಂದಿನ ದಿನಗಳಲ್ಲಿ ಕಾಲೇಜುಗಳಲ್ಲಿ ರಕ್ತದ ಗುಂಪು ತಪಾಸಣೆ, ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.
ಪ್ರಥಮ ಬಾರಿಗೆ ರಕ್ತದಾನ ಮಾಡಿದ ಸುಮಂತ್ ನಾಯ್ಕ್, ಕುಮಾರ್, 25 ಬಾರಿ ರಕ್ತದಾನ ಮಾಡಿದ ಸುಮಂತ್ ಬಿ.ಟಿ., 56 ಬಾರಿ ರಕ್ತದಾನ ಮಾಡಿದ ಅಲ್ಲಬಕಾಸ್, 116 ಬಾರಿ ರಕ್ತದಾನ ಮಾಡಿದ ಧರಣೇಂದ್ರ ದಿನಕರ್ ಅವರನ್ನು ಅಭಿನಂದಿಸಲಾಯಿತು.
ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಉಪಾಧ್ಯಕ್ಷ ಜಿ.ವಿಜಯಕುಮಾರ್, ಇನ್ನರ್‌ವ್ಹೀಲ್ ಶಿವಮೊಗ್ಗ ಪೂರ್ವ ಮಾಜಿ ಅಧ್ಯಕ್ಷೆ ಬಿಂದು ವಿಜಯಕುಮಾರ್, ರೆಡ್‌ಕ್ರಾಸ್ ಸಂಸ್ಥೆ ನಿರ್ದೇಶಕ ನವೀನ್, ನವೀನ್ ಬಿಲ್ಗುಣಿ, ಡಾ. ರಮೇಶ್ ಉಪಸ್ಥಿತರಿದ್ದರು.

Directorate of Women And Child Development Department ಡಿ.ಎಸ್.ಗಾಯತ್ರಿ ಅವರಿಗೆ ಸಚಿವರಿಂದ ಸನ್ಮಾನ

0

Directorate of Women And Child Development Department ಶಿವಮೊಗ್ಗ ಮಕ್ಕಳ ರಕ್ಷಣಾಧಿಕಾರಿ ಸಾಂಸ್ಥಿಕ ಸೇವೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಕಚೇರಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಗಾಯತ್ರಿ ಡಿ.ಎಸ್. ಅವರ ಸೇವೆಯನ್ನು ಪರಿಗಣಿಸಿ ಮಹಿಳಾ ಮತ್ತು ಮಕ್ಕಳ ಕೇಂದ್ರ ಕಚೇರಿ ಕಳೆದ ಆಗಸ್ಟ್ 15 ,2024 ರಂದು ದೆಹಲಿಯಲ್ಲಿ ನಡೆದ ಸ್ವಾತಂತ್ರ್ಯ ದಿನಾಚರಣೆಯ ದಿನದಂದು ವಿಶೇಷ ಆಹ್ವಾನಿತರಾಗಿದ್ದರು.
ಶಿವಮೊಗ್ಗ ಜಿಲ್ಲಾಡಳಿತದ ವತಿಯಿಂದ ಇಲ್ಲಿನ 76ನೇ ಗಣರಾಜ್ಯೋತ್ಸವದ ಸಮಾರಂಭದಂದು ಜಿಲ್ಲಾ ಉಸ್ತುವಾರಿ ಸಚಿವ ಮಧುಬಂಗಾರಪ್ಪ ಅವರು ಅತ್ಯುತ್ತಮ ಸೇವಾ ಪ್ರಶಸ್ತಿಯನ್ನು
ಡಿ.ಎಸ್.ಗಾಯತ್ರಿ ಅವರಿಗೆ ನೀಡಿದರು.

Klive Special Article ಅಂತರಂಗ ಭಕ್ತಿಯ ಶೋಧಕ, ಶ್ರೀಪುರಂದರದಾಸರು

0

ಲೇ’: ಎನ್.ಜಯಭೀಮ ಜೊಯ್ಸ್.
ಶಿವಮೊಗ್ಗ

Klive Special Article ಶ್ರೀಪುರಂದರದಾಸರು ಕನ್ನಡನಾಡು ಕಂಡ ಹಾಡಿನ ಮೂಲಕ ಧರ್ಮಪ್ರಸಾರವನ್ನುಕೈಗೊಂಡಅಪ್ರತಿಮ ಹರಿದಾಸವರೇಣ್ಯರು.ಕನ್ನಡ ಭಾಷೆಗೆವಿಷಿಷ್ಟವಾದ ಮೆರುಗನ್ನು ತಮ್ಮ ಗೀತೆಗಳ ಮೂಲಕತಂದುಕೊಟ್ಟ ಮಹಾನುಭಾವರು.
ದಾಸರು ಪೂರ್ವ ಜೀವನದಲ್ಲಿ ಮಹಾ ಜಿಪುಣಾ
ಗ್ರೇಸರರೆಂದು ಪ್ರಸಿದ್ಧಿಪಡೆದ ಇವರು ನಂತರ ಸರ್ವಸ್ವವನ್ನೂ ದಾನಮಾಡಿ ದಾನಶೂರರೆನಿಸಿದ್ದು ವಿಶಿಷ್ಟದೈವಸಂಕಲ್ಪ.ನವಕೋಟಿಎನ್ನಿಸಿದಮಹಾ
ಲಕ್ಷ್ಮಿಯನ್ನು ತೊರೆದುಅವಳ ಪತಿಯಾದ ಶ್ರೀಮನ್ನಾರಾಯಣನನ್ನು ಆರಾಧಿಸಿದ್ದು ಇವರ ಜೀವನದಅಮೋಘಸಾಧನೆ.ಕೇವಲಮಹಾಲಕ್ಷ್ಮಿಯ ಉಪಾಸನೆ ಒಂದರಿಂದಲೇ ಜೀವನದಲ್ಲಿ ಸಾರ್ಥಕ್ಯ ಸಾಧ್ಯವಾಗುವುದಿಲ್ಲ.ಲಕ್ಷ್ಮೀರಮಣನಾದ ನಾರಾಯಣನ ಉಪಾಸನೆಯಿಂದ ಜೀವನ ಸಾರ್ಥಕ್ಯ ಪಡೆಯಬಹುದೆಂಬುದನ್ನು ಮಾನವ
ಕೋಟಿಗೆ ತೋರಿಸಿಕೊಟ್ಟ ಮಹಿಮರು.ಪೂರ್ವ ಜೀವನದಲ್ಲಿ ಚಿನಿವಾರವೃತ್ತಿಯಿಂದಬೆಳ್ಳಿಬಂಗಾರದ ವ್ಯಾಪಾರಿಗಳಾಗಿದ್ದರೆ ಅನಂತರದಲ್ಲಿ ತಮ್ಮ ಪದಗಳ ಗಾಯನದ ಮೂಲಕ ಸಂಗೀತದ ಸುವರ್ಣಸುಧೆಯನ್ನು ಹರಿಸಿದ ಗೀತಾಚಾರ್ಯರು.
ಇವರ ಈ ಮಹಾನ್ ಪರಿವರ್ತನೆಗೆ ಒಂದು ರೀತಿಯಲ್ಲಿ ಅವರ ಕೈಹಿಡಿದ ಧರ್ಮಪತ್ನಿ ಸರಸ್ವತೀ
ಬಾಯಿಯವರ ಧರ್ಮಶ್ರದ್ಧೆಯೇ ಪ್ರಮುಖವಾದ
ಕಾರಣವೆಂದು ಹೇಳಬಹುದು.ಪುರಂದರದಾಸರು ಎಷ್ಟು ಜಿಪುಣತನವನ್ನು ಹೊಂದಿದ್ದರೋ ಅಷ್ಟೇ ಹೆಚ್ಚಿನಧಾರಾಳತನವನ್ನುಹೊಂದಿದ್ದವರುಶ್ರೀಮತಿ
ಸರಸ್ವತೀಬಾಯಿಯವರು.ಇದರಸ್ಮರಣೆಗೆಂಬಂತೆ”ಹೆಂಡತಿಸಂತತಿಸಾವಿರವಾಗಲಿದಂಡಿಗೆಬೆತ್ತಹಿಡಿಸಿ
ದಳಯ್ಯ”ಎಂದುಪುರಂದರದಾಸರು ಹೆಂಡತಿಗೆ ಕೃತಜ್ಞತೆಯನ್ನು ಈ ಕೃತಿಯಲ್ಲಿ ಹೇಳಿದ್ದಾರೆ.
“ಹೆಂಡತಿ ಸಂತತಿ ಸಾವಿರವಾಗಲಿ
ದಂಡಿಗೆ ಬೆತ್ತ ಹಿಡಿಸಿದಳಯ್ಯಾ”//
ಪತಿಯು ಸನ್ಮಾರ್ಗವನ್ನು ಹಿಡಿಯಲು ಪತ್ನಿಯಾದವಳು ವಹಿಸಬೇಕಾದ ಎಚ್ಚರಿಕೆಯ
ತಿಳುವಳಿಕೆಯನ್ನು ಸರಸ್ವತೀಬಾಯಿಯವರಿಂದ
ತಿಳಿದುಕೊಳ್ಳಬಹುದಾಗಿದೆ.
Klive Special Article ಶ್ರೀವ್ಯಾಸರಾಯರಂತಹಶ್ರೇಷ್ಠಯತಿಗಳನ್ನುಗುರುಗಳಾಗಿಪಡೆದಮಹಾನುಭಾವರುಶ್ರೀಪುರಂದರ
ದಾಸರು. ಅಂದು ವಿಜಯನಗರವೆಂದು ಕರೆಸಿಕೊಂಡ ಇಂದಿನ ಹಂಪೆ ಇವರ ಹರಿದಾಸ ಜೀವನದ ಮುಖ್ಯಕಾರ್ಯಕ್ಷೇತ್ರವಾಗಿದ್ದು ಇವರನ್ನು ವಿಜಯನಗರದ ಹರಿದಾಸರೆಂದೇ ಗುರುತಿಸುವಂತೆ ಮಾಡಿದೆ.ಪುರಂದರದಾಸರ ದೇಶ ಸಂಚಾರ ಕೇವಲ ತೀರ್ಥಕ್ಷೇತ್ರ ದರ್ಶನ ಮಾತ್ರ ಆಗಿರದೇ,ತೀರ್ಥಕ್ಷೇತ್ರ ಮಹಿಮೆಯ ಪ್ರಸಾರ ಕಾರ್ಯವೂ ಆಗಿ ಜ್ಞಾನ
ಪ್ರಸಾರ ಕಾರ್ಯವೆನಿಸಿತು..
ಸಂಗೀತ ಪಿತಾಮಹರೆಂದು ಕರೆಸಿಕೊಂಡವರು ಶ್ರೀಪುರಂದರದಾಸರು.ಅವರತ್ಯಾಗಮಯಜೀವನ,ಅವರಲ್ಲಿದ್ದ ಅಪಾರವಾದ ತೇಜಸ್ಸು,ಅಪಾರವಾದ ಭಕ್ತಿ,ಸಂಗೀತಜ್ಞಾನ,ಎಲ್ಲಕ್ಕಿಂತಹೆಚ್ಚಾಗಿಪಾಮರರಿಗೆ,ಅಬಾಲವೃದ್ಧರಿಗೆ ಅರ್ಥವಾಗುವಂತೆ ಅವರು ರಚಿಸಿದ ಹಾಡುಗಳಲ್ಲಿ ಕಂಡ ಸರಳವಾದಭಾಷೆ.ಈ ಎಲ್ಲ ಗುಣಗಳೂಅವರನ್ನುಜನಪ್ರಿಯರನ್ನಾಗಿಸಿತು.
ಸಾಮಾನ್ಯ ಜನರು ಜೀವನದಲ್ಲಿ ಸಮಾಧಾನ ಬೇಕೆನಿಸಿದಾಗ,ಧೈರ್ಯಗುಂದಿದಾಗ,ಸ್ಫೂರ್ತಿಯ ಅವಶ್ಯಕತೆ ಬೇಕಾದಾಗ,ಉತ್ಸಾಹ ಉಕ್ಕಿ ಬಂದಾಗ ಪುರಂದರದಾಸರರಚಿಸಿದ ನುಡಿಮುತ್ತುಗಳನ್ನು ನೆನೆಸಿಕೊಂಡುಆನಂದವನ್ನು ಪಡೆದಿದ್ದಾರೆ.ಇವರು ರಚಿಸಿರುವ ಹಾಡುಗಳಲ್ಲಿಕಂಡುಬರುವಸರಳವಾದ ಶೈಲಿಎಲ್ಲರಅಂತರಂಗವನ್ನುಹೊಕ್ಕುನಾಡಿನಲ್ಲಿ
ಅಸಂಖ್ಯಾತ ಜನರಿಗೆ ಮಾರ್ಗದರ್ಶನ ಮಾಡಿವೆ ಮತ್ತುಉತ್ಸಾಹತುಂಬಿದೈವಭಕ್ತಿಯನ್ನುಪ್ರೇರೇಪಿ
ಸಿವೆ.ಕೀರ್ತನೆ ಸಾಹಿತ್ಯದಲ್ಲಿ ಪುರಂದರ ದಾಸರದ್ದು ಬಹುದೊಡ್ಡ ಕೊಡುಗೆ,ಅದರಲ್ಲೂ ಕರ್ನಾಟಕ ಸಂಗೀತಕ್ಕೆಸಲ್ಲಿಸಿರುವಕೊಡುಗೆಬಹಳಅಪಾರ
ವಾಗಿದೆ.ಅವರುಸಲ್ಲಿಸಿರುವಈಅಮೂಲ್ಯಸೇವೆಗಾಗಿಯೇಅವರನ್ನುಸಂಗೀತಪಿತಾಮಹಎಂದುಕರೆಯುತ್ತಾರೆ.”ದಾಸರೆಂದರೆಪುರಂದರದಾಸರಯ್ಯ”ಎಂದು ಶ್ರೀವ್ಯಾಸರಾಯರಿಂದಲೇ ಮೆಚ್ಚುಗೆ ಪಡೆದಂತಹದಾಸಶ್ರೇಷ್ಠರು ಶ್ರೀಪುರಂದರದಾಸರು.
ಇವರ ಕೀರ್ತನೆಗಳಲ್ಲಿ ಆಧ್ಯಾತ್ಮದ ಜೊತೆ ಸಾಮಾಜಿಕಕಳಕಳಿಯನ್ನೂಸಾರುವಂತಹಸಾಹಿತ್ಯವಿದೆ,ಶೈಲಿಇದೆ.ಇವರಕೀರ್ತನೆಗಳುಮನಸ್ಸಿಗೆಮುದವನ್ನುಕೊಡುತ್ತವೆ.ಶ್ರೀಪುರಂದರದಾಸರ ಕೃತಿಗಳು ಸಾರ್ವಕಾಲಿಕವಾಗಿಸತ್ಯವೂ,ಸುಲಲಿತವೂಮತ್ತುಸುಂದರವೂ ಆಗಿವೆ.ಕೀರ್ತನೆಗಳನ್ನುರಚಿಸಿ,ಹಾಡಿ ಜನಸಾಮಾನ್ಯರ ಮನಸ್ಸಿಗೆ ಮುಟ್ಟುವಂತೆ ಪ್ರಚಾರಮಾಡಿದ ರೀತಿ ಅನುಪಮವಾಗಿದೆ.
ನಾಲಿಗೆ ಒಳ್ಳೆಯದಾದರೆ ನಾಡೆಲ್ಲ ಒಳ್ಳೆಯದು ಎಂಬ ಮಾತನ್ನು ಪುರಂದರದಾಸರ ಕೀರ್ತನೆ
ಯಿಂದತಿಳಿಯಬಹುದು.”ಆಚಾರವಿಲ್ಲದನಾಲಿಗೆ, ನಿನ್ನ ನೀಚ ಬುದ್ಧಿಯ ಬಿಡು ನಾಲಿಗೆ”.
ಯಾವುದೇಕಾರಣವಿಲ್ಲದೆಬೇರೆಯವರನ್ನುದೂಷಿಸುವುದಕ್ಕೆಂದೇ ಚಾಚಿ ಕೊಂಡಿರುವಂಥ ನಾಲಿಗೆ ಎಂದು ತಿಳಿಸುವುದರಮೂಲಕ ಸಮಾಜವನ್ನು ತಿದ್ದುವ ಕಾರ್ಯಕ್ಕೂಮುಂದಾದ ದಾಸರ ಕೊಡುಗೆ ಅಮೂಲ್ಯವಾಗಿದೆ.
ಇವರು ಗೀತೆ ಗಳನ್ನು ರಚಿಸಿ ಜನ ಸಾಮಾನ್ಯರಿಗೂ ಕನ್ನಡ ಸಾಹಿತ್ಯಕ್ಕೂ ಚಿರವಾದ ಬೆಸುಗೆಯನ್ನು ಗಂಟು ಹಾಕಿದವರು ಶ್ರೀದಾಸರು.
ಶ್ರೀದಾಸರು ತಮ್ಮ ಹಾಡುಗಳ ಮೂಲಕ ಈ ಐಹಿಕ ಭೋಗ ಭಾಗ್ಯಗಳೆಲ್ಲ ಅಸ್ಥಿರ,ಭಗವಂತನ ಕರುಣೆಯೊಂದೇಸ್ಥಿರಎಂದುತಿಳಿಯಪಡಿಸಿದವರು.ಶ್ರೀಪುರಂದರವಿಠಲನ ಪರಮಾನುಗ್ರಹ ಪಾತ್ರರಾದ ಅವರು ಹೋದ ದಾರಿಯೇ ಹೆದ್ದಾರಿ,ನುಡಿದ ಮಾತೇ ದಿವ್ಯೋಪದೇಶ,ಅವರು ಮಾಡಿದ ಕಾರ್ಯವೇ ಲೋಕಕ್ಕೆ ಮಾದರಿ.ಮಿತಿಮೀರಿದ ಧನಲೋಭದಿಂದ ಕಿಲುಬು ಹಿಡಿದಿದ್ದ ಅವರ ಹೃದಯವು ಪುರಂದರ ವಿಠಲನಮೇಲಿನ ಭಕ್ತಿಯಿಂದ ಶುದ್ಧವಾದ ಸುಧಾ ಕಲಶವಾಯಿತು. ಜಿಪುಣಾಗ್ರೇಸರ ಚಕ್ರವರ್ತಿಯಾಗಿದ್ದ ಶ್ರೀನಿವಾಸ ನಾಯಕರು ಭಕ್ತಪುರಂದರದಾಸರಾದರು.
ಇಂತಹ ದಾಸ ಶ್ರೇಷ್ಠರು ಹರಿಪಾದವನ್ನು ಸೇರಿದ್ದು ಶಾಲಿವಾಹನಶಕ1486ರಪುಷ್ಯಮಾಸದಬಹುಳ
ಅಮಾವಾಸ್ಯೆಯಂದು ಹಂಪಿಯಲ್ಲಿ.
ಇವರು ನಾರದರ ಅಂಶಜರೆಂದು ಹೇಳುತ್ತಾರೆ.
ಇಂತಹಮಹಾಮಹಿಮರನ್ನು,ಪರಮಭಾಗವತ
ರನ್ನು,ಹರಿದಾಸ ಶ್ರೇಷ್ಠರನ್ನು ನೆನೆವ ದಿನವೇ ಸುದಿನ.ಪುಷ್ಯಮಾಸದ ಬಹುಳ ಅಮಾವಾಸ್ಯೆ
ಶ್ರೀಪುರಂದರದಾಸರಆರಾಧನೆಯದಿನನಾವೂ
ಅವರ ಸ್ಮರಣೆಮಾಡಿ ಭಕ್ತಿಯ ನಮನಗಳನ್ನು ಸಲ್ಲಿಸಿ ಅವರ ಅನುಗ್ರಹಕ್ಕೆ ಪಾತ್ರರಾಗೋಣ.
“ಗುರುಪುರಂದರದಾಸರೇ ನಿಮ್ಮ
ಚರಣ ಸರಸಿಜ ನಂಬಿದೆ/
ಗರುವ ರಹಿತನ ಮಾಡಿ ಎಮ್ಮನು
ಪೊರೆವ ಭಾರವು ನಿಮ್ಮದೆ”//


ಎನ್.ಜಯಭೀಮ್ ಜೊಯ್ಸ್
(9449242399)

Natanam Balanatya Kendra ಜನವರಿ 30 & 31 ನಟನಂ ನೃತ್ಯೋತ್ಸವ

0

Natanam Balanatya Kendra ರಾಷ್ಟ್ರಮಟ್ಟದ ಹಿರಿಮೆಗಳಿಸಿರುವ ಶಿವಮೊಗ್ಗ ರಾಜೇಂದ್ರನಗರದ ನಟನಂ ಬಾಲನಾಟ್ಯ ಕೇಂದ್ರದಿಂದ ಎರಡು ದಿನಗಳ ಕಾಲ 224 ವಿದ್ಯಾರ್ಥಿ ಕಲಾವಿದರ ಭರ್ಜರಿ ನೃತ್ಯೋತ್ಸವ ನೃತ್ಯ ಕಾರ್ಯಕ್ರಮ ನಡೆಯಲಿದೆ ಎಂದು ಕರ್ನಾಟಕ ಕಲಾಶ್ರೀ ಗುರು ವಿದ್ವಾನ್ ಡಾ. ಎಸ್ ಕೇಶವಕುಮಾರ್ ಪಿಳ್ಳೈ ಅವರು ತಿಳಿಸಿದ್ದಾರೆ.
ನಟನಂ ಬಾಲನಾಟ್ಯ ಕೇಂದ್ರದಿಂದ ಜನವರಿ 30ರ ನಾಳೆ ಹಾಗೂ 31ರಂದು ಶಿವಮೊಗ್ಗ ಕುವೆಂಪುರಂಗಮಂದಿರಲ್ಲಿ ಪ್ರತಿದಿನ ಸಂಜೆ 5:30ಕ್ಕೆ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ಇದರಲ್ಲಿ ಅತ್ಯಂತ ವಿಜೃಂಭಣೆಯಿಂದ ಭಾರತದ ಮುಖ್ಯ ಶಾಸ್ತ್ರೀಯ ನೃತ್ಯ ಪ್ರಕಾರಗಳಾದ ಭರತನಾಟ್ಯ ಹಾಗೂ ಕರ್ನಾಟಕ ಜಾನಪದ ನೃತ್ಯ, ಪಂಜಾಬಿನ ಭಾಂಗ್ಡಾ ನೃತ್ಯ, ರಾಜಸ್ಥಾನದ ಕಾಲ್ ಬೇಲಿಯಾ ಪ್ಯೂಜನ್ ಮತ್ತು ಫ್ಯೂಷನ್ ನೃತ್ಯಗಳಿಗೆ 224 ಕಲಾವಿದರು ಅಭಿನಯಿಸಲಿದ್ದಾರೆ.
Natanam Balanatya Kendra ಈ ಕಾರ್ಯಕ್ರಮವನ್ನು ಎಸ್.ಕೇಶವಕುಮಾರ್ ಪಿಳ್ಳೈ ಪ್ರಸ್ತುತಪಡಿಸಿದ್ದು, ಅವರೊಂದಿಗೆ ವಿದ್ವಾನ್ ಎಸ್‌ಸಿ ಚೇತನ್, ವಿದುಶ್ರೀ ನಾಟ್ಯಶ್ರೀ ಕೆ ಸೆಲ್ಬಂ, ನಟನಂ ಕೇಂದ್ರದ ನೃತ್ಯ ಶಿಕ್ಷಕರು ಭಾಗವಹಿಸಲಿದ್ದಾರೆ.
ಕಾರ್ಯಕ್ರಮಕ್ಕೆ ಸರ್ವರಿಗೂ ಆತ್ಮೀಯ ಸ್ವಾಗತವನ್ನು ಕೋರಲಾಗಿದ್ದು, ಕಲಾವಿದರ ನೃತ್ಯೋತ್ಸವದಲ್ಲಿ ಪಾಲ್ಗೊಳ್ಳುವ ಮೂಲಕ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಕೋರಲಾಗಿದೆ.

Youth Hostels Association of India ಕುಲುಕಣಿವೆಯ ರೌರಿಕೋಲಿ ಹಿಮಾಲಯ ಪರ್ವತಕ್ಕೆ ಚಾರಣ.ಆಸಕ್ತರಿಗೆ ಮಾಹಿತಿ

0

Youth Hostels Association of India ಯೂತ್ ಹಾಸ್ಟೆಲ್ಸ್ ಅಸೋಸಿಯೇಷನ್ ಆಫ್ ಇಂಡಿಯಾ ತರುಣೋದಯ ಘಟಕ ಹಾಗೂ ಸಾಹಸ ಮತ್ತು ಸಂಸ್ಕೃತಿ ಅಕಾಡೆಮಿ ಶಿವಮೊಗ್ಗ ಇವರ ಸಂಯುಕ್ತ ಆಶ್ರಯದಲ್ಲಿ ಮೇ 26 ರಿಂದ ಜೂನ್ 6 ರ ವರೆಗೆ ಹಿಮಾಚಲ ಪ್ರದೇಶದ ಕುಲು ಕಣಿವೆಯಲ್ಲಿರುವ ರೌರೀಕೋಲಿ ಹಿಮಾಲಯ ಪರ್ವತಕ್ಕೆ ಚಾರಣವನ್ನು ಹಮ್ಮಿಕೊಳ್ಳಲಾಗಿದೆ.

16 ವರ್ಷ ಮೇಲ್ಪಟ್ಟು 60 ವರ್ಷದೊಳಗಿನವರು ಭಾಗವಹಿಸಬಹುದು. 50 ಜನರಿಗೆ ಮಾತ್ರ ಅವಕಾಶ ಮೊದಲು ಹೆಸರು ನೊಂದಾಯಿಸಿದವರಿಗೆ ಆಧ್ಯತೆ ನೀಡಲಾಗುವುದು ಶುಲ್ಕ ಒಬ್ಬರಿಗೆ ರೂ.19000.00 ಹೆಸರು ನೊಂದಾಯಿಸಲು ಕಡೆಯ ದಿನಾಂಕ 10.02.2025.

Youth Hostels Association of India ಹೆಚ್ಚಿನ ಮಾಹಿತಿಗಾಗಿ ವಾಗೀಶ್ ಅಧ್ಯಕ್ಷರು ವೈ.ಹೆಚ್.ಏ.ಐ. ತರುಣೋದಯ ಘಟಕ ಶಿವಮೊಗ್ಗ ದೂರವಾಣಿ: 7892548920 ಇವರನ್ನು ಸಂಪರ್ಕಿಸಬಹುದು.

Akhila karnataka vokkaligara sangha ಮಹಿಳೆಯರು ಸಂಘಸಂಸ್ಥೆಗಳಲ್ಲಿ ತಮ್ಮನ್ನ ತೊಡಗಿಸಿಕೊಳ್ಳಬೇಕು- ಪವಿತ್ರಾ ರಾಮಯ್ಯ

0

ಪ್ರAkhila karnataka vokkaligara sangha ತಿಯೊಬ್ಬರೂ ಸಂಘ ಸಂಸ್ಥೆಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದು ಭದ್ರಾ ಕಾಡಾ ಮಾಜಿ ಅಧ್ಯಕ್ಷೆ ಪವಿತ್ರಾ ರಾಮಯ್ಯ ಹೇಳಿದರು.

ಅಂಭ್ರಣಿ ಸಾಂಸ್ಕೃತಿಕ ವೇದಿಕೆ ವತಿಯಿಂದ ಆಯೋಜಿಸಿದ್ದ ಚಿಂತನ ಮಂಥನ ಕಾರ್ಯಕ್ರಮದಲ್ಲಿ ಮಾತನಾಡಿ, ಮಹಿಳೆಯರು ಸಂಘ ಸಂಸ್ಥೆಗಳಲ್ಲಿ ತೊಡಗಿಸಿಕೊಂಡು ಸಮಾಜಮುಖಿ ಚಟುವಟಿಕೆಗಳಲ್ಲಿ ಭಾಗಿಯಾಗಬೇಕು ಎಂದು ತಿಳಿಸಿದರು.

ಅಂಭ್ರಣಿ ಸಾಂಸ್ಕೃತಿಕ ವೇದಿಕೆ ಗೌರವಾಧ್ಯಕ್ಷೆ, ಅಖಿಲ ಕರ್ನಾಟಕ ಒಕ್ಕಲಿಗರ ಸಂಘದ ಮಹಾ ಪೋಷಕಿ ಡಾ. ಆರ್.ಅನುರಾಧ ಪಟೇಲ್ ಮಾತನಾಡಿ, ಅಂಭ್ರಣಿ ಹೆಸರಿನ ಬಗ್ಗೆ ಅರ್ಥಪೂರ್ಣ ವಿವರಣೆ ನೀಡುವುದರ ಜತೆಗೆ ಎಲ್ಲ ಮಹಿಳೆಯರು ಚಿಂತನ ಮಂಥನ ವೇದಿಕೆ ಉಪಯೋಗಪಡಿಸಿಕೊಳ್ಳಬೇಕು ಎಂದರು.

ಅಖಿಲ ಕರ್ನಾಟಕ ಒಕ್ಕಲಿಗರ ಸಂಘ ರಾಜ್ಯಾಧ್ಯಕ್ಷ ಸಿ.ಜಿ.ಗಂಗಾಧರ್ ಮಾತನಾಡಿ, ಸಮಾಜದಲ್ಲಿ ಮಹಿಳೆಯರು ವಿವಿಧ ಸಂಘ, ಸಂಸ್ಥೆಗಳ ಮೂಲಕ ಮೂಲಕ ಆರೋಗ್ಯಪೂರ್ಣ ಸಮಾಜ ನಿರ್ಮಾಣಕ್ಕೆ ಕೈಜೋಡಿಸುತ್ತಿರುವುದು ತುಂಬಾ ಸಂತೋಷದ ವಿಷಯ ಎಂದು ಹೇಳಿದರು.

Akhila karnataka vokkaligara sangha ಅಂಭ್ರಣಿ ಸಾಂಸ್ಕೃತಿಕ ವೇದಿಕೆ ಅಧ್ಯಕ್ಷೆ ಟಿ.ಜಿ.ಗಾಯತ್ರಿ ಯಲ್ಲಪ್ಪಗೌಡ ಮಾತನಾಡಿ, ಸಮಾನ ಮನಸ್ಕರ ಮಹಿಳೆಯರು, ಚಿಂತಕರು ಒಂದು ಕಡೆ ಸೇರಿ ಪರಸ್ಪರ ಸಾಮರಸ್ಯದ ಬದುಕಿನ ಬಗ್ಗೆ ಚಿಂತನೆ, ಆಲೋಚನೆ, ಚರ್ಚಿಸುವ ಮೂಲಕ ಪರಸ್ಪರ ಒಳಿತಿಗಾಗಿ ಗಟ್ಟಿಯಾದ ಸಮಾಜ ಮುಖಿ ಸಂಘಟನೆ ರಚಿಸಿಕೊಂಡು ನಾವೆಲ್ಲರೂ ಪ್ರೀತಿ, ವಿಶ್ವಾಸ ಹಂಚಿಕೊಳ್ಳುವ ಸಲುವಾಗಿ ಅಂಭ್ರಣಿ ಸಾಂಸ್ಕೃತಿಕ ವೇದಿಕೆ ರಚಿಸಿ ಕೊಂಡಿರುತ್ತೇವೆ ಎಂದು ತಿಳಿಸಿದರು.

ಲೀಲಾ ಸಿ.ಜಿ.ಗಂಗಾಧರ್ ಮಾತನಾಡಿ ಅಂಭ್ರಣಿ ಸಾಂಸ್ಕೃತಿಕ ವೇದಿಕೆಗೆ ಶುಭಹಾರೈಸಿದರು. ಶಿವಮೊಗ್ಗ ಜಿಲ್ಲಾ ಒಕ್ಕಲಿಗರ ಮಹಿಳಾ ವೇದಿಕೆ ಅಧ್ಯಕ್ಷೆ ಅರ್ಚನಾ ಮಲ್ಲಿಕಾರ್ಜುನ, ಖಜಾಂಚಿ ಶೃತಿ ಗೌತಮ್, ಮಾಜಿ ಅಧ್ಯಕ್ಷೆ ಪ್ರಭಾ ಶ್ರೀನಾಥ್, ಶೈಲಾ ವಾಸುದೇವ, ವನಜಾಕ್ಷಿ, ಅನ್ನಪೂರ್ಣ ಮತ್ತು ಸದಸ್ಯರು, ಭದ್ರಾವತಿ ಚುಂಚಾದ್ರಿ ಮಹಿಳಾ ಸಂಘದ ಅಧ್ಯಕ್ಷೆ ಸುಧಾ ಮತ್ತು ಪದಾಧಿಕಾರಿಗಳು, ಶಾಶ್ವತಿ ಅಧ್ಯಕ್ಷ ನರಸಿಂಹಮೂರ್ತಿ ಮತ್ತು ಪದಾಧಿಕಾರಿಗಳು, ಅಖಿಲ ಕರ್ನಾಟಕ ಒಕ್ಕಲಿಗರ ಸಂಘ ಮಹಿಳಾ ಘಟಕದ ಕಾರ್ಯಾಧ್ಯಕ್ಷೆ ಕೃಷ್ಣವೇಣಿ ರಮೇಶ ಹಾಗೂ ಖಜಾಂಚಿ ಧರಣಿ ನಾಗೇಶ್, ಮತ್ತು ಕುಟುಂಬಸ್ಥರು ಉಪಸ್ಥಿತರಿದ್ದರು. ಸುಷ್ಮಾ ಸತೀಶ್ ನಿರೂಪಿಸಿದರು. ಆಕಾಶವಾಣಿ ಕಲಾವಿದೆ ಹೇಮಾ ಪ್ರಾರ್ಥಿಸಿದರು. ಧರಣಿ ನಾಗೇಶ್ ವಂದನಾರ್ಪಣೆ ನಡೆಸಿದರು.