Thursday, June 18, 2026
Thursday, June 18, 2026

VISL Bhadravati ವಿಐಎಸ್‌ಎಲ್‌ ವತಿಯಿಂದ ಅರಕೆರೆ ಗ್ರಾಮದಲ್ಲಿ ಉಚಿತ ವೈದ್ಯಕೀಯ ಆರೋಗ್ಯ ಶಿಬಿರ

Date:

VISL Bhadravati ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳಾದ ಸಹ್ಯಾದ್ರಿ ನಾರಾಯಣ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ (ಶಿವಮೊಗ್ಗ), ಶಂಕರ ಕಣ್ಣಿನ ಆಸ್ಪತ್ರೆ (ಶಿವಮೊಗ್ಗ), ಭದ್ರಾವತಿ ತಾಲ್ಲೂಕು ಸರ್ಕಾರಿ ಆಸ್ಪತ್ರೆ ಮತ್ತು ವಿಐಎಸ್‌ಎಲ್ ಆಸ್ಪತ್ರೆಗಳ ಸಹಯೋಗದೊಂದಿಗೆ ಭದ್ರಾವತಿಯ ಅರಕೆರೆ ಗ್ರಾಮದಲ್ಲಿ ಸಮಗ್ರ ಉಚಿತ ವೈಧ್ಯಕೀಯ ಆರೋಗ್ಯ ತಪಾಸಣಾ ಕಾರ್ಯಕ್ರಮವನ್ನು ಯಶಸ್ವಿಯಾಗಿ ಆಯೋಜಿಸಿತು.

ಹೃದಯಶಾಸ್ತ್ರ, ಮೂಳೆ ಚಿಕಿತ್ಸೆ, ಸಾಮಾನ್ಯ ತಪಾಸಣೆ, ನೇತ್ರವಿಜ್ಞಾನ, ದಂತವೈದ್ಯಶಾಸ್ತ್ರ ಮತ್ತು ಸ್ತ್ರೀರೋಗ ಶಾಸ್ತ್ರದಂತಹ ಕ್ಷೇತ್ರಗಳಲ್ಲಿ ಅನುಭವಿ ತಜ್ಞವೈದ್ಯರು ಭಾಗವಹಿಸುವ ಮೂಲಕ ಆರೋಗ್ಯ ಸಮಾಲೋಚನೆ ಮತ್ತು ರೋಗನಿರ್ಣಯ ಸೇವೆಗಳನ್ನು ನೀಡಲಾಯಿತು. ಈ ಉಪಕ್ರಮದ ಭಾಗವಾಗಿ ರಕ್ತದೊತ್ತಡ (ಬಿಪಿ), ರಕ್ತದಲ್ಲಿನ ಸಕ್ಕರೆ ಪರೀಕ್ಷೆ, ಕಣ್ಣಿನ ಪರೀಕ್ಷೆ, ದಂತ ತಪಾಸಣೆ, ಎಲೆಕ್ಟ್ರಾಕಾರ್ಡಿಯೋಗ್ರಾಮ್ (ಇಸಿಜಿ), ೨ಡಿ ಎಕೋಕಾರ್ಡಿಯೋಗ್ರಫಿ (೨ಡಿ ಎಕೋ) ಮತ್ತು ಸ್ತ್ರೀ ಸಂಬಂಧಿತ ರೋಗಗಳ ತಪಾಸಣೆಗಳನ್ನು ಮಾಡಲಾಯಿತು.

VISL Bhadravati ಶ್ರೀ ಬಿ.ಎಲ್. ಚಾಂದವಾನಿ, ಕಾರ್ಯಪಾಲಕ ನಿರ್ದೇಶಕರು, ವಿಐಎಸ್‌ಎಲ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಇವರೊಂದಿಗೆ ವಿಐಎಸ್‌ಎಲ್‌ನ ಅಧಿಕಾರಿಗಳಾದ ಶ್ರೀ ಎಲ್. ಪ್ರವೀಣ್ ಕುಮಾರ್, ಶ್ರೀಮತಿ ಶೋಭಾ ಶಿವಶಂಕರನ್, ಡಾ|| ಕೆ.ಎಸ್. ಸುಜೀತ್ ಕುಮಾರ್, ಡಾ|| ಎಸ್.ಎನ್. ಸುರೇಶ್, ಶ್ರೀ ಎಮ್.ಎಲ್. ಯೋಗೀಶ್, ಶ್ರೀಮತಿ ಅಪರ್ಣ, ಅರಕೆರೆ ಗ್ರಾಮದಿಂದ ಶ್ರೀಮತಿ ರತ್ನಮ್ಮ ರುದ್ರೇಶ್, ಅಧ್ಯಕ್ಷರು ಅರಕೆರೆ ಗ್ರಾಮಪಂಚಾಯ್ತಿ, ಶ್ರೀ ಆರ್.ಶಿವಶಂಕರಮೂರ್ತಿ, ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ, ಅರಕೆರೆ ಗ್ರಾಮಪಂಚಾಯ್ತಿಯ ಸದಸ್ಯರಾದ ಶ್ರೀ ಎಸ್.ಎಲ್. ರವಿಕುಮಾರ್, ಶ್ರೀ ಟಿ.ಎಮ್.ಗುರುಮೂರ್ತಿ, ಶ್ರೀಮತಿ ಟಿ. ಗಾಯತ್ರಿ ಶಂಕರಪ್ಪ, ಶ್ರೀಮತಿ ಕಮಲಮ್ಮ, ಮುಖ್ಯೋಪಾಧ್ಯಾರು, ಸರ್ಕಾರಿ ಪ್ರೌಢಶಾಲೆ
ಅರಕೆರೆ, ಸಹ್ಯಾದ್ರಿ ನಾರಾಯಣ ಆಸ್ಪತ್ರೆಯ ಡಾ|| ಹರ್ಷಗೌಡ, ಡಾ|| ಚಂದನ್, ಡಾ|| ಬಸವರಾಜ್, ಶ್ರೀ ಗಣೇಶ್. ಶಂಕರ ಕಣ್ಣಿನ ಆಸ್ಪತ್ರೆಯ ಹರ್ಷ ಆರ್. ಗೌಡ. ಡಾ|| ಹರ್ಷಿತ, ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರ, ಮಾರಶೆಟ್ಟಿಹಳ್ಳಿ, ಭದ್ರಾವತಿ ತಾಲ್ಲೂಕು ಸರ್ಕಾರಿ ಆಸ್ಪತ್ರೆಯ ಶ್ರೀಮತಿ ಕೆ.ಎಮ್. ಮಂಜುಳ, ಶ್ರೀಮತಿ ನಾಗರತ್ನ, ಶ್ರೀಮತಿ ಲಲಿತ, ಮತ್ತು ಲಯನ್ಸ್ ಕ್ಲಬ್ ನ ಅಧ್ಯಕ್ಷರಾದ ಶ್ರೀ ಶ್ರೀನಿವಾಸ ಉಪಸ್ಥಿತರಿದ್ದರು. ೩೧೦ ಗ್ರಾಮಸ್ಥರು ಈ ಶಿಬಿರದ ಸದುಪಯೋಗಪಡಿಸಿಕೊಂಡರು.

ವಿಐಎಸ್‌ಎಲ್‌ ವತಿಯಿಂದ ಉಚಿತ ಔಷಧಿಗಳನ್ನು ವಿತರಿಸಲಾಯಿತು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

ಗುತ್ತಿಗೆ ಆಧಾರದ ಮೇಲೆ ಪಶುವೈದ್ಯರ ಒಂದು ಹುದ್ದೆಗೆ ನೇಮಕಾತಿ ಪ್ರಕ್ರಿಯೆ

ಶಿವಮೊಗ್ಗ ವನ್ಯಜೀವಿ ವಿಭಾಗ ವ್ಯಾಪ್ತಿಯಲ್ಲಿನ ಸಕ್ರೆಬೈಲು ಆನೆ ಬಿಡಾರದ ಇಲಾಖಾ ಆನೆಗಳಿಗೆ...

Klive Special Article ನಿರ್ಲಕ್ಷ್ಯ ಮಾಡದ ನಿಶ್ಶಬ್ದ ಕಾಯಿಲೆ, ಕಿಡ್ನಿ ಕ್ಯಾನ್ಸರ್- ಡಾ.ಯು‌.ಎಸ್.ಕಾರ್ತಿಕ್

Klive Special Article ಕಿಡ್ನಿ ಕ್ಯಾನ್ಸರ್ : ನೀವು ನಿರ್ಲಕ್ಷಿಸಬಾರದ ನಿಶ್ಯಬ್ದ...

K.S. Eshwarappa ಮನಸ್ಸು ಬಿಜೆಪಿ: ದೇಹ ಮಾತ್ರ ಹೊರಗೆ : ಕೆ.ಎಸ್.ಈಶ್ವರಪ್ಪ

K.S. Eshwarappa ಪಕ್ಷದ ಬೆಳವಣಿಗೆ ಮತ್ತು ಶುದ್ಧೀಕರಣಕ್ಕೆ ಆಗ್ರಹಿಸಿ ಬಿಜೆಪಿಯಿಂದ ಹೊರ...