Wednesday, March 11, 2026
Wednesday, March 11, 2026
Home Blog Page 401

B.Y. Raghavendra ದೇಶೀಯ ಆರ್ಥಿಕತೆಗೆ ಹಣಕಾಸು ಸಂಸ್ಥೆಗಳ ಪಾತ್ರ ಬಹಳ ಮುಖ್ಯ- ಬಿ.ವೈ.ರಾಘವೇಂದ್ರ

0

B.Y. Raghavendra ಜಾಗತಿಕವಾಗಿ ಆರ್ಥಿಕ ಶಕ್ತಿಯಾಗಿ ಭಾರತ 3ನೇ ಸ್ಥಾನಕ್ಕೆ ಬರಲು ಹಣಕಾಸು ಸಂಸ್ಥೆಗಳ ಪಾತ್ರ ಮಹತ್ವದ್ದಾಗಿದೆ ಎಂದು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಹೇಳಿದರು.

ಸಹ್ಯಾದ್ರಿ ಚಿಟ್ಸ್ ನ ನೂತನ ಕಚೇರಿ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿ, ಭಾರತವು ಮೂರನೇ ಆರ್ಥಿಕ ಶಕ್ತಿಯಾಗಿ ಬೆಳೆಯಲು ಪ್ರಧಾನ ಮಂತ್ರಿ ಮೋದಿಯವರು ಮಾಡುತ್ತಿರುವ ಪ್ರಯತ್ನಕ್ಕೆ ಚಿಕ್ಕ ಚಿಕ್ಕ ಹಣಕಾಸು ಸಂಸ್ಥೆಗಳು ಬಹು ಮುಖ್ಯಪಾತ್ರ ವಹಿಸುತ್ತವೆ ಎಂದು ತಿಳಿಸಿದರು.

ಜನಸಾಮಾನ್ಯರ ಅಗತ್ಯಕ್ಕೆ ಸ್ಪಂದಿಸುತ್ತಿರುವ ಚಿಟ್ ಫಂಡ್ ಕಂಪನಿಗಳು ಅತಿ ಮುಖ್ಯ. ಸಹ್ಯಾದ್ರಿ ಚಿಟ್ಸ್ ಸಂಸ್ಥೆಯು 27 ವರ್ಷಗಳಿಂದ ಶಿವಮೊಗ್ಗದಲ್ಲಿ ನೀಡುತ್ತಿರುವ ಸೇವೆ ಶ್ಲಾಘನೀಯ. 27 ವರ್ಷಗಳು ಸೇವೆ ನೀಡಲು ಜನರೊಂದಿಗೆ ಅವರ ಬಾಂಧವ್ಯ ಹಾಗೂ ಗಳಿಸಿರುವ ನಂಬಿಕೆಯು ಬಹಳ ಮುಖ್ಯವಾಗುತ್ತದೆ. ಈಗ ವಾರ್ಷಿಕ 80 ಕೋಟಿ ರೂ. ವಹಿವಾಟು ಹೊಂದಿರುವ ಸಂಸ್ಥೆಯು ಮುಂದೆ ನೂರಾರು ಜನಕ್ಕೆ ಉದ್ಯೋಗ ನೀಡಿ 500 ಕೋಟಿ ರೂ. ವಹಿವಾಟು ನಡೆಸಲಿ ಎಂದು ಆಶಿಸಿದರು.

ಸಿನಿಮಾ ನಟ ದಿಗಂತ ಮಾತನಾಡಿ, ನನಗೆ ಮಲೆನಾಡು ಪ್ರದೇಶ ತುಂಬಾ ಇಷ್ಟ. ಇಲ್ಲಿಗೆ ಬಂದಿರುವುದು ತುಂಬಾ ಸಂತೋಷವಾಗಿದೆ. ಸಹ್ಯಾದ್ರಿ ಸಂಸ್ಥೆಯು 27 ವರ್ಷಗಳಿಂದ ನೀಡುತ್ತಿರುವ ಸೇವೆಯು ನೂರಾರು ವರ್ಷ ಮುನ್ನಡೆಯಲಿ ಎಂದು ಶುಭಹಾರೈಸಿದರು. ಸಂಸ್ಥೆಯ. ಮ್ಯಾನೇಜಿಂಗ್ ಡೈರೆಕ್ಟರ್ ರಮೇಶ್ ಭಟ್ ಪ್ರಾಸ್ತಾವಿಕವಾಗಿ ಮಾತನಾಡಿ ಸಂಸ್ಥೆ ನಡೆದು ಬಂದ ದಾರಿಯ ಬಗ್ಗೆ ಸವಿಸ್ತಾರವಾಗಿ ವಿವರಿಸಿದರು.

ಶಾಸಕ ಎಸ್.ಎನ್.ಚನ್ನಬಸಪ್ಪ ಮಾತನಾಡಿ, ಸಂಸ್ಥೆಯ ಚಂದದಾರರಲ್ಲಿ ನಾನು ಕೂಡ ಒಬ್ಬ. ನನಗೂ ತುರ್ತು ಸಮಯದಲ್ಲಿ ಹಣ ದೊರೆತು ತುಂಬಾ ಅನುಕೂಲ ಆಗಿದೆ. ಇದೇ ರೀತಿ ಸಾಮಾನ್ಯ ಜನರೆಲ್ಲರೂ ಇದರ ಸದುಪಯೋಗ ಪಡೆದುಕೊಳ್ಳಬೇಕು, ನಂಬಿಕೆಗೆ ಅರ್ಹವಾಗಿರುವ ಇಂತಹ ಕಂಪನಿಗಳು ಇನ್ನಷ್ಟು ಬೆಳೆಯಬೇಕು ಎಂದು ಹಾರೈಸಿದರು.

B.Y. Raghavendra ನಟ ದಿಗಂತ್ ಅವರಿಂದ ನೂತನವಾಗಿ ಆರಂಭಗೊಂಡ ಒಂದು ಕೋಟಿ ರೂ. ಚೀಟಿಯ ಮೊದಲ ಅದೃಷ್ಟವಂತರ ಆಯ್ಕೆ ಮಾಡಲಾಯಿತು. ಸಂಸ್ಥೆಯ ಚೇರ್ಮನ್ ಬದ್ರಿನಾಥ್ ಅಧ್ಯಕ್ಷೀಯ ನುಡಿಗಳನ್ನಾಡಿ ಸಹಕರಿಸಿದ ಎಲ್ಲರಿಗೂ ಧನ್ಯವಾದಗಳನ್ನು ಅರ್ಪಿಸಿದರು.

ಸಂಸ್ಥೆ ನಿರ್ದೇಶಕ ಜಿ.ವಿಜಯಕುಮಾರ್ ಸ್ವಾಗತಿಸಿದರು. ರವೀಂದ್ರನಾಥ್ ಐತಾಳ್ ವಂದನಾರ್ಪಣೆ ನಡೆಸಿಕೊಟ್ಟರು. ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ ಬಿ.ಗೋಪಿನಾಥ್, ಕಾಂಗ್ರೆಸ್ ಮುಖಂಡ ಎಚ್.ಸಿ.ಯೋಗೀಶ್, ಉದ್ಯಮಿ ಅಶ್ವತ್ ನಾರಾಯಣ ಶೆಟ್ಟಿ, ಸಂಸ್ಥೆಯ ಮೂಲ ಸಂಸ್ಥಾಪಕ ಡಿ.ಎಲ್.ನಟರಾಜ್, ಮಾರ್ಕೆಟಿಂಗ್ ಡೈರೆಕ್ಟರ್ ಶಿವರಾಜ್ ಉಡುಗಣಿ, ಟಿ.ಎಸ್‌. ಬದರೀನಾಥ್‌, ರಮೇಶ್‌ ಎಂ.ಭಟ್‌, ಸಂಸ್ಥೆಯ ಎಲ್ಲಾ ನಿರ್ದೇಶಕರು ಸಿಬ್ಬಂದಿ ವರ್ಗ ಹಾಜರಿದ್ದರು.

klive Special Article ಆಲ್ ಟೈಮ್ ಫೇವರಿಟ್‌ ಹಾಡುಗಳ‌ನ್ನ ಗುನುಗುವಂತೆ ಮಾಡಿದ “ಬೆಳ್ಳಿಮೋಡದಂಚಿನ ಬಂಗಾರದ ಹಾಡು”

0

klive Special Article ಅಭಿರುಚಿಯ ರುಚಿಯೇ ಹಾಗೆ…. ವಿಭಿನ್ನವಾದ ಸಂಗತಿಗಳು, ಸಾಹಿತ್ಯ ಲೋಕದ ಅದ್ಭುತವಾದ ವಿಚಾರಗಳಲ್ಲಿ ಒಂದಾದ ಶ್ರೀ ಶ್ರೀಧರ ಭಗವಾನರ ದತ್ತರಾಜಸ್ತವವನ್ನು ನಮ್ಮೆದುರಿಗೆ ಮಹಾಮಹೋಪಾಧ್ಯಾಯ ಡಾ. ಎಸ್ ರಂಗನಾಥ್ ಅವರ ವಿದ್ವತ್ ಪೂರ್ಣ ನುಡಿಗಳಲ್ಲಿ ಕಳೆದ ಒಂದು ವಾರದಿಂದ ಕೇಳುವಂತೆ ಮಾಡಿದ್ದು ಒಂದೆಡೆಯಾದರೆ…ಮತ್ತೊಂದೆಡೆ ಸಂಗೀತ ಸುಧೆ ಹರಿಸಿ ಮನತಣಿಯುವಂತೆ ಮಾಡಿದುದು.
ನಿಜ…. ಮನಕ್ಕೆ ಮುದ ನೀಡುವ ವಿಷಯಗಳಲ್ಲಿ ಸಂಗೀತಕ್ಕೆ ಮೊದಲನೆಯ ಸ್ಥಾನ. ಅವು ಭಕ್ತಿ, ಭಾವ, ಚಿತ್ರ ಯಾವ ಗೀತೆಯಾದರೂ ಸರಿ ಎಲ್ಲವೂ ಅಮೃತದ ಸುಧೆ ಹರಿಸಿದಂತೆಯೇ…. ಇಷ್ಟೆಲ್ಲಾ ಬರೆಯಲು ಕಾರಣ ಏನೆಂದರೆ ಯಾವಾಗಲೂ ಕಾರ್ಯಕ್ರಮ ನೋಡಿದ ತಕ್ಷಣ ಕಲಾವಿದರನ್ನು ಮಾತಾಡಿಸಿ ಮನದ ಸಂತೋಷವನ್ನು ಅವರಲ್ಲಿಯೂ ವ್ಯಕ್ತಪಡಿಸಿ ಬರುತ್ತಿದ್ದ ನಾನು ಕಾರ್ಯದೊತ್ತಡದಿಂದ ನಿನ್ನೆ ರಂಗಮಂದಿರದಿಂದ ಹಾಗೇ ಬಂದುಬಿಟ್ಟೆ… ಆದರೆ ಮನಸು ಮಾತ್ರ ಕಾರ್ಯಕ್ರಮದ ಹಾಡುಗಳೇ ಗುನುಗುವಂತೆ ಮಾಡಿದ್ದವು. ನಿಜಕ್ಕೂ ಮನಸೊಂದು ಭಾವನಾ ಲೋಕದಲ್ಲಿ ವಿಹರಿಸುವಂತೆ ಮಾಡಿತ್ತು.
ಕಾರ್ಯಕ್ರಮಕ್ಕೆ ಕಳೆಗಟ್ಟುವಂತೆ ಮಾಡಿದ್ದು ನಿಜಕ್ಕೂ ಆಯೋಜಕರೇ. ಏಕೆಂದರೆ ಯಾವುದೇ ಸಭಾಕಾರ್ಯಕ್ರಮಗಳಿಲ್ಲದೇ ನೇರವಾಗಿ ಸಂಗೀತ ಸುಧೆ ಹರಿಯುವಂತೆ ಮಾಡಿದ್ದು ಒಂದು ಕಾರಣವಾದರೆ ಮತ್ತೊಂದು ಅವರು ಆಯ್ಕೆ ಮಾಡಿಕೊಂಡ ವಿಷಯ ” ಬೆಳ್ಳಿಮೋಡದ ಬಂಗಾರದ ಹಾಡು “. ಅವುಗಳೆಂದರೆ ಕಾದಂಬರಿ ಆಧಾರಿತ ಹಾಗೂ ಮಹಿಳಾ ಪ್ರಧಾನ ಚಿತ್ರಗಳನ್ನು ಮಾಡಿ ಚಿತ್ರಬ್ರಹ್ಮನೆಂದೇ ಖ್ಯಾತಿಯಾದ ಪುಟ್ಟಣ್ಣ ಕಣಗಾಲ್ ಹಿಟ್ಸ್. ಇದಕ್ಕೆ ಸಾರಥ್ಯ ಖ್ಯಾತ ಸಂಗೀತ ಕಲಾವಿದ ಹಾಗೂ ಶಿವಮೊಗ್ಗದ ಹೆಮ್ಮೆಯ ಪ್ರತಿಭೆ ಶ್ರೀ ದೀಪಕ್ ಜಯಶೀಲನ್ ಅವರದಾಗಿತ್ತು. ಇನ್ನೂ ಹಾಡುಗಾರರಂತೂ ಶ್ರೀಮತಿ ಸುರೇಖಾ ಹೆಗಡೆ, ಶ್ರೀಮತಿ ಶ್ರುತಿ ರಾಘವೇಂದ್ರನ್, ಶ್ರೀ ಮನೋಜವಂ ಆತ್ರೇಯ ಹಾಗೂ ಶ್ರೀ ಪಾರ್ಥ ಚಿರಂತನ್ ನಮಗೆಲ್ಲಾ ಜೇನಸುಧೆ ಹರಿಸಿದವರೇ ಆದರು. ಇವರೆಲ್ಲರ ಹಾಡಿಗೆ ನವಿರಾದಂತಹ ನಿರೂಪಣೆ ಮಾಡಿ ಆ ಹಾಡಿನ ಒಟ್ಟು ಜೀವಾಳವನ್ನು ಪರಿಚಯಿಸುವಂತೆ ಮಾಡಿದ್ದು ನಮ್ಮ ವಿನಯಣ್ಣ. ನಿರ್ದೇಶಕರ ಪರಿಚಯ ಮಾಡಿಸುತ್ತಲೇ, ಹಾಡಿನ ಸೂಕ್ಷ್ಮತೆ, ಗಮನಿಸಬೇಕಾದ ಅಂಶಗಳು, ಆಗಿನ ಹೆಮ್ಮೆ, ಯಾವ ಕಾರಣಕ್ಕಾಗಿ ಆ ಹಾಡು ಶ್ರೇಷ್ಠ, ಅದರ ಅಂತರಂಗ ಎಲ್ಲವನ್ನೂ ಸವಿಸ್ತಾರವಾಗಿ ತಮ್ಮ ಪ್ರೌಢ ಚಿಂತನೆಯ ಸಾಹಿತ್ಯದ ಪರಿಭಾಷೆಯಲ್ಲಿ ಹೆಚ್ಚು ಅಲ್ಲದ ಕಡಿಮೆಯೂ ಎನಿಸದ ರೀತಿಯಲ್ಲಿ ಹಾಡಿನ ಜೀವಾಳವನ್ನು ಅದ್ಭುತವಾಗಿ ನಮಗೆ ಕಟ್ಟಿಕೊಟ್ಟಿದ್ದು ವಿನಯಣ್ಣನ ಹೆಚ್ಚುಗಾರಿಕೆಯೇ ಸರಿ. ವಿನಯ್ ಶಿವಮೊಗ್ಗ, ನಿಜಕ್ಕೂ ಮನೋಜವಂ ಹೇಳಿದಂತೆ ಅವರು ದಾರದಂತೆ ಕೆಲಸ ಮಾಡಿದ್ದಾರೆ. ಹೂ ಪೋಣಿಸಿದ ದಾರ ಮೇಲ್ನೋಟಕ್ಕೆ ಕಾಣಿಸದೇ ಹೋದರೂ ಹಾರಕ್ಕೆ ದಾರವೆಂಬಂತೆ ಸರಿಯಾದ ಸೂತ್ರಧಾರರಾಗಿ ಎಲ್ಲರ ಮೆಚ್ಚುಗೆಗೆ ಪಾತ್ರರಾದರು.

klive Special Article ಹಾಡುಗಳಿಗೆ ಸರಿಯಾಗಿ ಸಾಥ್ ನೀಡಿದವರು ಒಂದೆಡೆಯಾದರೆ ಅದರ ಇಂಪನ್ನು ಸರಿಯಾಗಿ ಜನರಿಗೆ ಮುಟ್ಟಿಸುವಲ್ಲಿ ಸೌಂಡ್ ಸಿಸ್ಟಮ್ ಎಫೆಕ್ಟ್ ಬಹುಮುಖ್ಯ. ಆ ತಂತ್ರಜ್ಞಾನ ಚೆನ್ನಾಗಿ ಅರಿತು ಅಚ್ಚುಕಟ್ಟಾಗಿ ನಿರ್ವಹಿಸಿದ್ದು ಚಿನ್ನು ಸೌಂಡ್ ಸಿಸ್ಟಮ್ ನ ದರ್ಶನ್. ಏಕೆಂದರೆ ಇಂಪಾಗಿ ಹಾಡಿದ್ದನ್ನು ಆ ಸ್ವರಗಳ ಏರಿಳಿತ ಎಲ್ಲವೂ ಅಷ್ಟೇ ನಿಖರವಾಗಿ ಕೇಳುಗರ ಕಿವಿ ತಲುಪಿತು. ಇಲ್ಲಿ ಇನ್ನೊಂದು ಮಾತು ಹೇಳಲೇಬೇಕು. ಹಾಡು ಹೇಳುವಾಗ ಹಾಡಿನ ಕೊಂಚ ತುಣುಕು ತೋರಿಸಿ ಉಳಿದಂತೆ ಸಾಹಿತ್ಯ ರಚನಕಾರರು, ಸಂಗೀತ ನಿರ್ದೇಶಕರು, ಹಾಡಿದ ಹಿನ್ನಲೆ ಗಾಯಕರ ಫೋಟೋಗಳನ್ನ LED ವಾಲ್ ನಲ್ಲಿ ತೋರಿಸಿ ಅನೇಕರಿಗೆ ಕಣಗಾಲ್ ಪ್ರಭಾಕರ್ ಶಾಸ್ತ್ರಿಯಂತವರ ದರ್ಶನ ಮಾಡಿಸುವಲ್ಲಿ ಯಶಸ್ವಿಯಾದರು.

ಬರೆಯಲೇ ಬೇಕಾದ ಪ್ರಮುಖ ವಿಷಯವೆಂದರೆ ಆಯ್ಕೆ ಮಾಡಿಕೊಂಡ ಹಾಡುಗಳು. ನನ್ನ ಆಲ್ ಟೈಮ್ ಫೇವರಿಟ್ ಹಾಡಾದ ಗೆಳತೀ ಓ ಗೆಳತೀ.., ಕವಿ ಕಂಡ ಕಾವ್ಯಗಳಂತೆ ಇರುವ ವರಕವಿಯ ಮೂಡಲ ಮನೆಯ ಮುತ್ತಿನ ನೀರಿನ… ಗಗನವು ಎಲ್ಲೋ ಭೂಮಿಯು ಎಲ್ಲೋ, ಹದಿನಾಲ್ಕು ವರ್ಷ ವನವಾಸದಿಂದ…. ನಾಗರಹಾವಿನ ಹಾವಿನ ದ್ವೇಷ ಹನ್ನೆರಡು ವರುಷ, ಈ ಸಂಭಾಷಣೆ ನಮ್ಮ ಈ ಪ್ರೇಮ ಸಂಭಾಷಣೆ, ನೀನೇ ಸಾಕಿದಾ ಗಿಣಿ, ವಿರಹಿಗಳ ಧ್ಯೇಯಗೀತೆಯಾದ ಅಥವಾ ಮನದಾಳದ ಮಾತಿನಂತಾದ ವಿರಹ ನೋವು ನೂರು ತರಹ…. ಮನಸಿನ ಅಭಿರುಚಿಯನ್ನು ಉದ್ದೀಪನಗೊಳಿಸಿ ಪ್ರೇರೇಪಣೆ ಕೊಡುವ ಹಾಡಾದ ಪಂಚಮ ವೇದ ಪ್ರೇಮದ ನಾದವೇ ಮೊದಲಾದ ಹಾಡುಗಳು ಒಂದಾದ ಮೇಲೊಂದು ಸಂಗೀತ ರಸಿಕರನ್ನು ತಮ್ಮ ಕಳೆದ ಬಾಲ್ಯ, ಯೌವನದ ದಿನಗಳಿಗೆ ಕೊಂಡೋಯ್ದದ್ದಂತೂ ನಿಜ. ಈ ಸಂಗೀತ ಸುಧೆ ಹರಿಸಲು ಕಾರಣೀಭೂತರಾದ ಆಯೋಜಕ, ಪ್ರಾಯೋಜಕರೆಲ್ಲರಿಗೂ ಎಲ್ಲ ಸಂಗೀತಾಸಕ್ತ ರಸಿಕ ಮನಸುಗಳ ಪರವಾಗಿ ಅನಂತಾನಂತ ಧನ್ಯವಾದಗಳು.

ಡಾ. ಮೈತ್ರೇಯಿ ಆದಿತ್ಯ ಪ್ರಸಾದ್
ಉಪನ್ಯಾಸಕರು ಪೇಸ್ ಕಾಲೇಜ್
ಶಿವಮೊಗ್ಗ
ಚಿತ್ರಕೃಪೆ : ಆದಿತ್ಯಪ್ರಸಾದ್ ಎಂ.

Delhi Assembly Elections ಹತ್ತರಲ್ಲಿ ಹನ್ನೊಂದಾದ “ಆಮ್ ಆದ್ಮಿ”. ಬಿಜೆಪಿಗೆ ಜಯ‌ ಸುಗಮವಾಗಿಸಿದ ಕಾಂಗ್ರೆಸ್

0

Delhi Assembly Elections ರಾಷ್ಟ್ರ ರಾಜಧಾನಿ ದೆಹಲಿ ವಿಧಾನಸಭೆ ಚುನಾವಣೆ ಫಲಿತಾಂಶ ಬಂದಿದ್ದು, 27 ವರ್ಷಗಳ ನಂತರ ಬಿಜೆಪಿ ಭರ್ಜರಿ ಗೆಲುವು ಪಡೆದಿದೆ. ಸರ್ಕಾರ ರಚನೆಗೆ ಬೇಕಾದ ಸಿದ್ಧತೆಗಳು ಆರಂಭವಾಗಿವೆ ಎನ್ನಲಾಗುತ್ತಿದೆ.

ವಿಧಾನಸಭೆ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ (ಎಎಪಿ) ಹೀನಾಯ ಸೋಲನುಭವಿಸಿದ ಒಂದು ದಿನದ ನಂತರ ದೆಹಲಿ ಮುಖ್ಯಮಂತ್ರಿ ಅತಿಶಿ ಭಾನುವಾರ ಲೆಫ್ಟಿನೆಂಟ್ ಗವರ್ನರ್ ವಿಕೆ ಸಕ್ಸೇನಾ ಅವರಿಗೆ ರಾಜೀನಾಮೆ ನೀಡಿದ್ದಾರೆ.

ಬರೋಬ್ಬರಿ 26 ವರ್ಷಗಳ ನಂತರ ದೆಹಲಿಯಲ್ಲಿ ಬಿಜೆಪಿ ಅಧಿಕಾರಕ್ಕೆ ಮರಳಿದೆ. 70 ವಿಧಾನಸಭಾ ಕ್ಷೇತ್ರಗಳ ಪೈಕಿ 48 ಕ್ಷೇತ್ರಗಳಲ್ಲಿ ಬಿಜೆಪಿ ಅಭೂತಪೂರ್ವ ಗೆಲುವು ಸಾಧಿಸಿದೆ.

ಫೆಬ್ರುವರಿ 5 ರಂದು ನಡೆದ ಚುನಾವಣೆಯಲ್ಲಿ ಎಎಪಿ 22 ಸ್ಥಾನಗಳನ್ನು ಗೆದ್ದರೆ, ಕಾಂಗ್ರೆಸ್ ಶೂನ್ಯಕ್ಕೆ ತೃಪ್ತಿಪಟ್ಟುಕೊಂಡಿದೆ.

ವಿಧಾನಸಭಾ ಚುನಾವಣೆ ಫಲಿತಾಂಶದಲ್ಲಿ ಎಎಪಿ ಪರಿಷ್ಠ ಅರವಿಂದ ಕೇಜ್ರಿವಾಲ್ ಅವರಿಗೆ ಭಾರಿ ಮುಖಭಂಗವಾಗಿದೆ.
ಅರವಿಂದ ಕೇಜ್ರಿವಾಲ್ ಅವರಿಗೆ ನವದೆಹಲಿ ಕ್ಷೇತ್ರದಲ್ಲಿ ಬಿಜೆಪಿಯ ಪರ್ವೇಶ್ ವರ್ಮಾ ವಿರುದ್ಧ ಸೋಲಾಗಿದೆ.

Delhi Assembly Elections ಚುನಾವಣಾ ಆಯೋಗದ ವೆಬ್ಸೈಟ್ನಲ್ಲಿ ದೊರೆತ ಮಾಹಿತಿ ಪ್ರಕಾರ, ಬಿಜೆಪಿ ಅಭ್ಯರ್ಥಿ ಪರ್ವೇಶ್ ವರ್ಮಾ 30,088 ಮತಗಳನ್ನು ಪಡೆದರೆ, ಕೇಜ್ರಿವಾಲ್ ಪರ 25,999 ಮತಗಳು ಚಲಾವಣೆಯಾಗಿವೆ. ಕಾಂಗ್ರೆಸ್ ಅಭ್ಯರ್ಥಿ ಸಂದೀಪ್ ದೀಕ್ಷಿತ್ 4,568 ಮತಗಳನ್ನು ಪಡೆದಿದ್ದಾರೆ. ಕೇಜ್ರಿವಾಲ್ ಅವರಿಗೆ 4,089 ಮತಗಳ ಅಂತರದ ಸೋಲಾಗಿದೆ. ಅಣ್ಣ ಹಜಾರೆ ಅವರ ಗೈರು ಹಾಜರಿ ಕೂಡ ಆಪ್ ಗೆ ಸೋಲುಂಟಾಗಲು ಬಲವಾದ ಕಾರಣವಾಗಿದೆ. ಪ್ರಮುಖವಾಗಿ ಅಣ್ಣಾ ಹಜಾರೆ ಅವರು ಆರಂಭದಲ್ಲೇ ಕೇಜ್ರಿವಾಲ್ ಅವರಿಗೆ ಅಬಕಾರಿ ಮತ್ತು ಮುಂತಾದ ವಿಷಯಗಳ ಬಗ್ಗೆ ಕೈಗೆತ್ತಿಕೊಳ್ಳದಿರಲು ಎಚ್ಚರಿಕೆ ನೀಡಿದ್ದರು. ಆದರೆ ಅವರ ಮಾತನ್ನು ಲೆಕ್ಕಿಸದೆ ಕೇಜ್ರಿವಾಲ್ ಅವರು ತಾವೇ ಸೃಷ್ಟಿಸಿದ ಭ್ರಷ್ಟಾಚಾರದ ಬಲೆಯೊಳಗೆ ಸಿಕ್ಕು ಅಧಿಕಾರ ಕಳೆದುಕೊಂಡರು. ಕಾಂಗ್ರೆಸ್ ಕೇವಲ ಗ್ಯಾರಂಟಿಗಳ ಮೇಲೆಯೇ ಚುನಾವಣೆಯನ್ನು ಎದುರಿಸಿತು. ಆದರೆ ಅದು ಹಿಮಾಚಯ ಪ್ರದೇಶ ಮತ್ತು ಕರ್ನಾಟಕ ರಾಜ್ಯದಲ್ಲಿನ ಗ್ಯಾರೆಂಟಿ ಯೋಜನೆಗಳ ಕುಂಟುವಿಕೆ ಪ್ರಸ್ತುತ ದೆಹಲಿ ಪ್ರತಿಕೂಲವಾಗಿ ಪರಿಣಮಿಸಿತು.

JCI Shivamogga ಸಮಾಜಮುಖಿ ಚಟುವಟಿಕೆಗಳಲ್ಲಿ ಜೆಸಿಐ ಘಟಕಗಳು ಸಂಘಟನಾತ್ಮಕ ಪಾತ್ರ- ಜಿ.ಗಣೇಶ್

0

JCI Shivamogga ಸಮಾಜಮುಖಿ ಕಾರ್ಯಗಳಲ್ಲಿ ಜೆಸಿಐ ಘಟಕಗಳು ಸಂಘಟನಾತ್ಮಕವಾಗಿ ಕೆಲಸ ಮಾಡಲಿವೆ ಎಂದು ಜೆಸಿಐ ಶಿವಮೊಗ್ಗ ಸಹ್ಯಾದ್ರಿ ಘಟಕದ ಅಧ್ಯಕ್ಷ ಜಿ.ಗಣೇಶ್ ಹೇಳಿದರು.

ಶಿವಮೊಗ್ಗ ನಗರದ ಮಥುರಾ ಪ್ಯಾರಾಡೈಸ್ ಸಭಾಂಗಣದಲ್ಲಿ ಜೆಸಿಐ ಶಿವಮೊಗ್ಗ ಸಹ್ಯಾದ್ರಿ ಘಟಕದಿಂದ ಆಯೋಜಿಸಿದ್ದ ಜೆಸಿಐ ಶಿವಮೊಗ್ಗ ಶಕ್ತಿ ಘಟಕದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿ, ಸ್ವಾತಿ ಅವರು 24 ಗಂಟೆಯಲ್ಲಿ ಹೊಸ ಘಟಕ ಮಾಡಿರುವುದು ಶ್ಲಾಘನೀಯ. ಮುಂದಿನ ದಿನಗಳಲ್ಲಿ ಜೆಸಿಐನಿಂದ ಹೆಚ್ಚು ಸಮಾಜಮುಖಿ ಕಾರ್ಯ ನಡೆಸಲು ಒಟ್ಟಾಗಿ ಕಾರ್ಯ ನಿರ್ವಹಿಸೋಣ ಎಂದು ತಿಳಿಸಿದರು.

ಜೆಸಿಐ ವಲಯ-24 ಅಧ್ಯಕ್ಷ ಗೌರೀಶ್ ಭಾರ್ಗವ್ ಮಾತನಾಡಿ, 24 ಗಂಟೆಯಲ್ಲೇ ಹೊಸ ಘಟಕ ಸ್ಥಾಪಿಸಿದ ಸ್ವಾತಿ ಅವರು ಜೆಸಿಐ ಶಿವಮೊಗ್ಗ ಶಕ್ತಿ ಘಟಕಕ್ಕೆ ನಿಜವಾಗಿಯೂ ಶಕ್ತಿಯೇ ಆಗಿದ್ದಾರೆ.

ಶಕ್ತಿಯುತವಾದ ಘಟಕಕ್ಕೆ ಶಕ್ತಿಯುತ ವ್ಯಕ್ತಿ ಅಧ್ಯಕ್ಷರಾಗಿರುವುದು ಸಂತಸ ತಂದಿದೆ. ಅಧಿಕಾರ ವಹಿಸಿಕೊಂಡ ಕೆಲ ಸಮಯದಲ್ಲಿ ಶೇ. 100 ಸದಸ್ಯತ್ವ ಹೆಚ್ಚು ಮಾಡಿದ್ದು, ಶಕ್ತಿ ಬುಲೆಟಿನ್ ರಿಲೀಸ್ ಮಾಡಿರುವುದು, ಜತೆಗೆ ತರಬೇತಿ ಮತ್ತು ಸಾಮಾಜಿಕ ಜಾಗೃತಿ ವಿಚಾರದಲ್ಲಿ ಶಿವಮೊಗ್ಗ ಸಿಬಿಆರ್ ರಾಷ್ಟ್ರೀಯ ಕಾನೂನು ಕಾಲೇಜಿನವರೊಂದಿಗೆ ಎಂಎಯು ಕೂಡ ಮಾಡಿಕೊಳ್ಳುತ್ತಿರುವ ವಿಚಾರ ಅಭಿನಂದನೀಯ ಎಂದು ಅಭಿಪ್ರಾಯಪಟ್ಟರು.

JCI Shivamogga ಜೆಸಿಐ ಶಿವಮೊಗ್ಗ ಶಕ್ತಿ ಘಟಕದ ಅಧ್ಯಕ್ಷೆ ಸ್ವಾತಿ ಎಸ್.ಎಂ ಮಾತನಾಡಿ, ಜೆಸಿಐ ಶಿವಮೊಗ್ಗ ಶಕ್ತಿ ಘಟಕ ನಿರ್ಮಿಸಲು ಎಸ್.ವಿ.ಶಾಸ್ತ್ರಿ ಮತ್ತು ಶ್ಯಾಮಲಾ ಶಾಸ್ತ್ರಿ ಕಾರಣಕರ್ತರು. ಉತ್ತಮ ನಾಯಕನಾಗಿ ಒಂದು ವರ್ಷದ ಅವಧಿ ಜೆಸಿಐ ಶಿವಮೊಗ್ಗ ಶಕ್ತಿ ಘಟಕವನ್ನು ಮುನ್ನಡೆಸುತ್ತೇನೆ. ಎಲ್ಲರ ಸಹಕಾರ, ಮಾರ್ಗದರ್ಶನ ಅವಶ್ಯಕ. ಸಾಮಾಜಿಕ ಕಳಕಳಿಯೊಂದಿಗೆ ಜೆಸಿಐ ಶಿವಮೊಗ್ಗ ಶಕ್ತಿ ಘಟಕ ಕೆಲಸ ಮಾಡಲಿದೆ ಎಂದು ತಿಳಿಸಿದರು.

ಜೆಸಿಐ ಶಿವಮೊಗ್ಗ ಶಕ್ತಿ ಘಟಕ ಉದ್ಘಾಟನೆಗೆ ಡಾ. ಎಸ್.ವಿ.ಶಾಸ್ತ್ರಿ ಮತ್ತು ಶ್ಯಾಮಲಾ ಶಾಸ್ತ್ರಿ ಶುಭಕೋರಿದರು. ಜೆಸಿಐ ವಿವಿಧ ಘಟಕದ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು.

Karnataka Drama Academy ಫೆಬ್ರವರಿ 18. “ಉಡುತಡಿ” ನಾಟಕ.ಪುಸ್ತಕ ಬಿಡುಗಡೆ & ‌ಪ್ರದರ್ಶನ

0

Karnataka Drama Academy ಎರಡು ದಶಕಗಳಿಂದ ಶಿವಮೊಗ್ಗ ರಂಗಭೂಮಿಯಲ್ಲಿ ತಮ್ಮದೇ ಛಾಪು ಮೂಡಿಸಿರುವ, ಹಾಲಿ ಕರ್ನಾಟಕ ನಾಟಕ ಅಕಾಡೆಮಿ ಶಿವಮೊಗ್ಗ ಜಿಲ್ಲಾ ಸಂಚಾಲಕರೂ ಆಗಿರುವ ಡಾ. ಗಣೇಶ ಆರ್ ಕೆಂಚನಾಲ್ ಅವರ ರಚನೆಯ “ಉಡು-ತಡಿ” ನಾಟಕ ಪುಸ್ತಕ ರೂಪದಲ್ಲಿ ಇದೇ ಫೆಬ್ರವರಿ ತಿಂಗಳ 18 ರಂದು ಸಂಜೆ 6:30 ಕ್ಕೆ ಶಿವಮೊಗ್ಗದ ಕುವೆಂಪು ರಂಗಮಂದಿರದಲ್ಲಿ ಬಿಡುಗಡೆಗೊಳ್ಳಲಿದೆ.

ಈಗಾಗಲೆ 4 ಯಶಸ್ವೀ ಪ್ರದರ್ಶನಗೊಂಡು ಅಂದು 5ನೇ ಪ್ರದರ್ಶನ ಕೂಡ ಕಾಣಲಿದೆ. ಈ ನಾಟಕ ಕುರಿತು ಈ ಬಾರಿ ಮಂಡ್ಯದಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾದ ಹಿರಿಯ ಸಾಹಿತಿ ಗೊ.ರು.ಚನ್ನಬಸಪ್ಪನವರು, ಕುವೆಂಪು ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಡಾ. ಜಿ. ಪ್ರಶಾಂತ ನಾಯಕ, ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷರಾದ ನಾಗರಾಜಮೂರ್ತಿ, ವಿಶಾಂತ ಪ್ರಾಧ್ಯಾಪಕಿ ಡಾ. ವಿಜಯಾದೇವಿ ಅವರು ತಮ್ಮ ತಮ್ಮದೇ ಆದ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ಡಾ. ಮಲ್ಲಿಕಾರ್ಜುನ ಮುರುಘರಾಜೇಂದ್ರ ಮಹಾಸ್ವಾಮಿಗಳು. ಡಾ. ಬಸವ ಮರುಳಸಿದ್ದ ಸ್ವಾಮಿಗಳು, ಹಾಗೂ ಶಿವಮೊಗ್ಗ ಸಂಸದರಾದ ಬಿ.ವೈ ರಾಘವೇಂದ್ರರವರು ಶುಭ ಸಂದೇಶ ನೀಡಿರುತ್ತಾರೆ. ಈ ನಾಟಕ ಪ್ರದರ್ಶನ ಮತ್ತು ಪುಸ್ತಕ ಬಿಡುಗಡೆ ಸಮಾರಂಭಕ್ಕೆ ಹೆಚ್ಚು ರಂಗಾಸಕ್ತರು ಹಾಗೂ ಸಾಹಿತ್ಯ ಪ್ರೇಮಿಗಳು ಆಗಮಿಸಲು ಕೋರಿದೆ.

“ನಾಟಕಕ್ಕೊಂದು ಪುಸ್ತಕ” ನೀಡಲು ತೀರ್ಮಾನಿಸಿದ್ದು ಮಾಹಿತಿಗಾಗಿ ಸಂಪರ್ಕ ಸಂಖ್ಯೆ-9902356019-9481691337-9980182281

MESCOM ಫೆಬ್ರವರಿ 21. ಮದಾರಿಪಾಳ್ಯ ಸುತ್ತಮುತ್ತ ವಿದ್ಯುತ್ ಸರಬರಾಜು ವ್ಯತ್ಯಯ

0

MESCOM ಶಿವಮೊಗ್ಗ ನಗರದ ಮಂಡ್ಲಿ ವಿವಿ ವ್ಯಾಪ್ತಿಯಲ್ಲಿ ರಸ್ತೆ ಅಗಲೀಕರಣ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಫೆ.11 ರಂದು ಬೆಳಗ್ಗೆ 10.00 ರಿಂದ ಸಂಜೆ 5.00ರವರೆಗೆ ಮದರಿಪಾಳ್ಯ, ಊರುಗಡೂರು ಸರ್ಕಲ್, ಬೈಪಾಸ್ ರಸ್ತೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು, ಸಾರ್ವಜನಿಕರು ಸಹಕರಿಸುವಂತೆ ಮೆಸ್ಕಾಂ ಪ್ರಕಟಣೆ ತಿಳಿಸಿದೆ.

Ministry of Karnataka Legislature ಫೆಬ್ರವರಿ 27 ರ‌ ಪುಸ್ತಕ ಮೇಳದಲ್ಲಿ ಪ್ರಕಾಶಕರು/ ಮಾರಾಟಗಾರರಿಗೆ ಉಪಯುಕ್ತ ಪ್ರಕಟಣೆ

0

ಕರ್ನಾಟಕ ವಿಧಾನ ಸಭೆ ಸಚಿವಾಲಯವು ಪ್ರಥಮ ಬಾರಿಗೆ ನಾಡಿನ ಜನತೆಗೆ ಅತಿ ಅಮೂಲ್ಯವಾದ ಪುಸ್ತಕಗಳನ್ನು ವೀಕ್ಷಿಸುವ ಮತ್ತು ಖರೀದಿಸುವ ಸಲುವಾಗಿ ವಿಧಾನಸೌದದ ಆವರಣದಲ್ಲಿ ಫೆ. 27 ರಿಂದ ಮಾ. 03ರವರೆಗೆ ಪುಸ್ತಕ ಮೇಳವನ್ನು ಆಯೋಜಿಸಿದೆ.
ಈ ಪುಸ್ತಕ ಮೇಳದಲ್ಲಿ ಭಾಗವಹಿಸಲು ಇಚ್ಛಿಸುವ ನಾಡಿನ ಪ್ರಕಾಶಕರು/ ಮಾರಾಟಗಾರರು ನಿಗದಿತ ಅರ್ಜಿ ನಮೂನೆಯನ್ನು ಮುಖ್ಯ ಗ್ರಂಥಪಾಲಕರು, ಕರ್ನಾಟಕ ವಿಧಾನ ಸಭೆ ಸಚಿವಾಲಯ, ವಿಧಾನಸೌಧ, ಬೆಂಗಳೂರು ಅಥವಾ ವೆಬ್‌ಸೈಟ್ www.kla.kar.nic.in ರಿಂದ ಉಚಿತವಾಗಿ ಪಡೆದು, ಮಳಿಗೆಯೊಂದಕ್ಕೆ ಭದ್ರತಾ ಠೇವಣಿ ರೂ. 1000/-ಗಳ ಡಿಡಿಯನ್ನು ಲಗತ್ತಿಸಿ ಫೆ. 12 ರೊಳಗಾಗಿ ಕಾರ್ಯದರ್ಶಿಗಳು, ಕರ್ನಾಟಕ ವಿಧಾನ ಸಭೆ ಸಚಿವಾಲಯ, ವಿಧಾನಸೌದ, ಬೆಂಗಳೂರು ಇಲ್ಲಿಗೆ ಸಲ್ಲಿಸುವಂತೆ ಕಾರ್ಯದರ್ಶಿಗಳು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
Ministry of Karnataka Legislature ಭದ್ರತಾ ಠೇವಣಿ ಡಿಡಿಯನ್ನು ಕಾರ್ಯದರ್ಶಿಗಳು, ಕರ್ನಾಟಕ ವಿಧಾನ ಸಭೆ ಸಚಿವಾಲಯ, ವಿಧಾನಸೌದ, ಬೆಂಗಳೂರು ಇವರ ಹೆಸರಿಗೆ ತೆಗೆದುಕೊಳ್ಳುವುದು.

Madhu Bangarappa ವಾಯುದಳದ ಅಧಿಕಾರಿ ಮಂಜುನಾಥ್ ಸಾವಿಗೆ ಮಧು ಬಂಗಾರಪ್ಪ ‌ಸಂತಾಪ

0

Madhu Bangarappa ಉತ್ತರ ಪ್ರದೇಶದ ಆಗ್ರಾದಲ್ಲಿ ಶುಕ್ರವಾರ ತರಬೇತಿ ವೇಳೆ ವಿಮಾನದಿಂದ ಕೆಳಗೆ ಹಾರಿದಾಗ ಪ್ಯಾರಾಚೂಟ್‌ ತೆರೆದುಕೊಳ್ಳದೇ ವಾಯುಪಡೆಯ ವಾರೆಂಟ್‌ ಆಫಿಸರ್, ಶಿವಮೊಗ್ಗ ಜಿಲ್ಲೆ ಹೊಸನಗರ ತಾಲ್ಲೂಕಿನ ಸಂಕೂರು ಗ್ರಾಮದ ಕೃಷಿಕ ಸುರೇಶ್ ಹಾಗೂ ನಾಗರತ್ನ ದಂಪತಿ ಪುತ್ರ, 36 ವರ್ಷದ ಜಿ.ಎಸ್.ಮಂಜುನಾಥ್‌ ಮೃತಪಟ್ಟಿರುವುದು ಅತ್ಯಂತ ನೋವಿನ ಸಂಗತಿ ಎಂದು ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ಮತ್ತು ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವರಾದ ಮಧು ಎಸ್.ಬಂಗಾರಪ್ಪನವರು ಸಂತಾಪ ಸೂಚಿಸಿದ್ದಾರೆ.

ವಾಯು ಸೇನೆಯಲ್ಲಿ ಸ್ಮರಣೀಯ ಸೇವೆ ಸಲ್ಲಿಸುತ್ತಾ ಸಂಕೂರು ಹಾಗೂ ಸುತ್ತಲಿನ ಗ್ರಾಮಗಳ ಯುವ ಸಮೂಹಕ್ಕೆ ಸ್ಫೂರ್ತಿ ಆಗಿದ್ದ ಮಂಜುನಾಥ್ ಅವರ ಅಕಾಲಿಕ ಮರಣ ದುಖಃ ತಂದಿದೆ. ವಾಯುಸೇನೆಯ ಈ ಹೆಮ್ಮೆಯ ಅಧಿಕಾರಿ ಸದಾ ನಮ್ಮೆಲ್ಲರ ಸ್ಮರಣೆಯಲ್ಲಿರುತ್ತಾರೆ.
ಮಂಜುನಾಥ್ ಅವರ ಅಗಲಿಕೆಯ ನೋವು ಭರಿಸುವ ಶಕ್ತಿ ಭಗವಂತ ಅವರ ಕುಟುಂಬದವರಿಗೆ, ಸಂಬಂಧಿಗಳಿಗೆ, ಸಂಕೂರು ಗ್ರಾಮಸ್ಥರಿಗೆ ನೀಡಲಿ ಎಂದಿದ್ದಾರೆ.

Sri Vidhushekhara Bharati Mahaswamiji ಕಾಶಿಯಲ್ಲಿ ಶ್ರೀವಿಧುಶೇಖರ ಭಾರತಿ ಮಹಾಸ್ವಾಮಿಗಳ ಭವ್ಯ ವಿಶ್ವೇಶ್ವರಾರ್ಚನೆ

0

ವರದಿ : ಪ್ರಭಾಕರ ಕಾರಂತ

Sri Vidhushekhara Bharati Mahaswamiji ಕಾಶೀ ವಿಶ್ವನಾಥ ಸನ್ನಧಿಗೆ ಶೃಂಗೇರಿಯ ಜಗದ್ಗುರುಗಳ ಪ್ರವೇಶ ಎಂದಿನಂತೆ ಭವ್ಯವಾಗಿ ಆಗಿದೆ.ಮೂರು ದಶಕ ಆಗಿತ್ತು ಇಲ್ಲಿಗೆ ಶೃಂಗೇರಿಯ ಜಗದ್ಗುರುಗಳು ಬಂದು.ಜಗದ್ಗುರು ಶ್ರೀ ಭಾರತೀತೀರ್ಥರು ಆಗ ಕಾಶಿಗೆ ಆಗಮಿಸಿ ವಿಶ್ವನಾಥನನ್ನು ಪೂಜಿಸಿದ್ದರು. ಅದಕ್ಕೂ ಮೊದಲು 48 ವರ್ಷದ ಹಿಂದೆ ಜಗದ್ಗುರು ಶ್ರೀ ಅಭಿನವ ವಿದ್ಯಾತೀರ್ಥರು ತಮ್ಮ ಕರಕಮಲ ಸಂಜಾತ ಶ್ರೀ ಭಾರತೀತೀರ್ಥರೊಂದಿಗೆ ಪ್ರಯಾಗರಾಜ್ ಕುಂಬಮೇಳ ಮುಗಿಸಿ ಕಾಶಿಗೆ ಆಗಮಿಸಿದ್ದರು. ಆಗ ಅವರು ಕಾಶೀ ಶ್ರೀ ಅನ್ನಪೂರ್ಣೇಶ್ವರಿಯ ಮಂದಿರದ ಮೂರ್ತಿ ಪ್ರತಿಷ್ಠೆ ಕುಂಬಾಬಿಶೇಕ ನೆರವೇರಿಸಿದ್ದರು. ಈಗ ಶ್ರೀ ವಿಧುಶೇಖರ ಭಾರತಿ ಸನ್ನಿಧಾನಂಗಳು ಆಗಮಿಸಿ ಶ್ರೀ ಅನ್ನಪೂರ್ಣೇಶ್ವರಿಯ ನೂತನ ಮೂರ್ತಿ ಪ್ರತಿಷ್ಠೆ,ಸ್ವರ್ಣಕಲಸ ಸಮರ್ಪಣೆ ಕುಂಬಾಬಿಶೇಕ ನೆರವೇರಿಸಲಿದ್ದಾರೆ. ಜಗದ್ಗುರುಗಳನ್ನು ಕಾಶೀ ಮಹಾಪೌರ,ಕಾಶೀ ಮಹಾರಾಜ,ಕಾಶೀ ಅನ್ನಪೂರ್ಣ ದೇವಸ್ಥಾನದ ಶ್ರೀ ಶಂಕರ್ ಗುರೂಜಿ ಮಹಂತ್, ಕಾಶೀ ವಿದ್ವನ್ಮಂಡಲಿ,ಕಾಶೀ ವಿದ್ವತ್ ಪರಿಷತ್ ಮಂತಾದ ಪ್ರಮುಖರು ಸ್ವಾಗತಿಸಿದರು.ಕಾಶಿಯ ಜನ ಸ್ವಾಗತ ಸಭೆಯನ್ನು ನಡೆಸಿಕೊಟ್ಟರು. ಅಯೋಧ್ಯೆಯ ಪ್ರಭು ಶ್ರೀರಾಮಚಂದ್ರನ ಪ್ರಾಣ ಪ್ರತಿಷ್ಠೆಗೆ ಶುಭ ಮುಹೂರ್ತ ಇಟ್ಟುಕೊಟ್ಟ ಶ್ರೀ ಗಣೇಶ್ವರ ದ್ರಾವಿಡ್ ಸೇರಿದಂತೆ ಅನೇಕ ಗಣ್ಯರು ಶ್ರೀಗಳ ದರ್ಶನ ಪಡೆದರು. ಅಯೋಧ್ಯೆಯ ಮುಹೂರ್ತ ಸಮರ್ಪಕವಿಲ್ಲ ಎಂದು ಕೆಲವರು ವಿರೋಧ ವ್ಯಕ್ತಪಡಿಸಿದ್ದು,ಮಂದಿರ ನಿರ್ಮಾಣ ಮುಗಿಯದೇ ಪ್ರಾಣ ಪ್ರತಿಷ್ಠೆ ಸಲ್ಲದು ಎಂದೂ ವಿವಾದ ಸೃಷ್ಟಿಯಾದಾಗ ಶೃಂಗೇರಿಯ ಜಗದ್ಗುರುಗಳಿಂದ ಪ್ರಾಣ ಪ್ರತಿಷ್ಠೆಯ ಮುಹೂರ್ತ ಮತ್ತು ಗರ್ಭಗುಡಿಯು ಪೂರ್ಣವಾದಾಗ ಪ್ರತಿಷ್ಠೆ ಮಾಡಬುದೆಂಬ ಅಭಿಪ್ರಾಯ ವ್ಯಕ್ತವಾಗಿದ್ದು ಉಲ್ಲೇಖಾರ್ಹ.
ಇಂದು ಕಾಶೀ ವಿಶ್ವನಾಥ ಸ್ವಾಮಿಗೆ ಶ್ರೀಗಳು ವಿಶೇಷ ಪೂಜೆ ಸಮರ್ಪಿಸಿದರು. ನಂತರ ಆಯುತ ಮೋದಕ ಮಹಾಗಣಪತಿ ಹೋಮದ ಪೂರ್ಣಾಹುತಿಯಲ್ಲಿ ಪಾಲ್ಗೊಂಡರು.ಭಗವತಿ ಅನ್ನಪೂರ್ಣೇಶ್ವರಿಯ ಮಂದಿರದಲ್ಲಿ ಕೋಟಿ ಕುಂಕುಮಾರ್ಚನೆಯು ಗುರುಗಳ ಉಪಸ್ಥಿತಿಯಲ್ಲಿ ಶುಭಾರಂಬಗೊಂಡಿತು. ಕಾಶೀ ವಿಶಾಲಕ್ಷಿ ದರ್ಶನ, ಬಿಂದು ಮಾಧವನಲ್ಲಿ ಲಕ್ಷ ತುಳಸಿ ಅರ್ಚನೆ ಮತ್ತು ಮಂಗಳಾರತಿ ನಡೆಸಿ ಜಗದ್ಗುರುಗಳಿಂದ ಕಾಶೀ ಪಂಚಗಂಗಾ ಘಾಟ್ ನ ಶೃಂಗೇರಿಯ ಶಾಖಾ ಮಠದ ಬೇಟಿ ನಡೆಯಿತು. ನಾಳೆ ಸಹಸ್ರ ಚಂಡೀಯಾಗದ ಶುಭಾರಂಬ ಗುರುಗಳ ಉಪಸ್ಥಿತಿಯಲ್ಲಿ ಜರುಗಲಿದೆ. ಸಂಜೆ ಶ್ರೀಗಳ ಅನುಗ್ರಹ ಭಾಷಣವಿದೆ. ವಿವಿದ ದೇವಸ್ಥಾನಗಳ ಬೇಟಿ,ವೇದ ಪುರಾಣ ಪಾರಾಯಣ,ಶಾಸ್ತ್ರ ಸಭೆ,ಧಾರ್ಮಿಕ ಕಾರ್ಯಕ್ರಮ, ಅನುಗ್ರಹ ಭಾಷಣ,ಚಂದ್ರಮೌಳೇಶ್ವರ ಪೂಜೆ, ಭಕ್ತರಿಗೆ ದರ್ಶನ ಎಂದು ಜಗದ್ಗುರುಗಳ ಪ್ರತಿ ಕ್ಷಣವೂ ಸದ್ಬಳಕೆ ಆಗುತ್ತಿದೆ.
ಎಲ್ಲಿಯ ಧಕ್ಷಿಣದ ಶೃಂಗೇರಿ,ಎಲ್ಲಿಯ ಉತ್ತರದ ಪ್ರಪಂಚದ ಪ್ರಾಚೀನ ನಗರಿ ಕಾಶಿ.ಈ ಬೆಸುಗೆ ಬೆಸೆದಿದ್ದು ಶಂಕರ ಭಗವತ್ಪಾದರು.ಅವರು ಮೂರ್ತಿಯೊಂದು ಕಾಶಿ ವಿಶ್ವನಾಥ ಕಾರಿಡಾರ್ ನಲ್ಲೇ ಸ್ಥಾಪಿಸಲಾಗಿದೆ. ಕಾಶಿಯ ಪುನರುತ್ಥಾನ ಮಾಡಿದ ಅಹಲ್ಯಾಬಾಯ್ ಹೋಳ್ಕರ್ ಪ್ರತಿಮೆಯೂ ಅಲ್ಲಿದೆ. ಸನಾತನ ಧರ್ಮದ ಪುನರುತ್ಥಾನಕ್ಕೆ ಆದಿ ಶಂಕರಾಚಾರ್ಯರು ಅವತರಿಸದಿದ್ದರೆ ಇಂದು ಭಾರತ ಬೇರೆಯೇ ದೇಶವಾಗಿ ಬೇರೆಯೇ ಧರ್ಮ ಆಚರಿಸುವಂತಾಗುತ್ತಿತ್ತು. ಶೃಂಗೇರಿಯ ಜಗದ್ಗುರುಗಳನ್ನೇ ಶಂಕರ ಭಗವತ್ಪಾದರ ಪ್ರತಿ ರೂಪ ಎಂದು ಈ ಪುಣ್ಯ ಕ್ಷೇತ್ರ ಸೇರಿದಂತೆ ಉತ್ತರದ ಭಕ್ತರು ನಂಬುತ್ತಾರಾಗಿ ಜಗದ್ಗುರುಗಳ ಬೇಟಿಗೆ ಅಷ್ಟೊಂದು ಮಹತ್ವ ದೊರಕುತ್ತದೆ. ದಿನವೂ ಸಾವಿರ ಸಂತರು ಬಂದು ಹೋಗುವ ಪುಣ್ಯಭೂಮಿ ಅದು. ಹೀಗಿದ್ದೂ ಶೃಂಗೇರಿಯ ಜಗದ್ಗುರುಗಳ ಪಾದಸ್ಪರ್ಶಕ್ಕೆ ಈ ಪವಿತ್ರ ಕ್ಷೇತ್ರ ಎದುರುನೋಡುತ್ತದೆ. ಮೂವತ್ತು ವರ್ಷದ ನಂತರ ಇಲ್ಲಿಗೆ ಬಂದೆವು ಅಂದರೆ ಮತ್ತೆ ಬರಲು ಮೂವತ್ತು ವರ್ಷ ಆದೀತು ಎಂದಲ್ಲ. ನಾವು ಪುನಃ ಪುನಃ ಕಾಶಿ ದರ್ಶನ ಮಾಡುತ್ತೇವೆ ಎಂದು ಜಗದ್ಗುರುಗಳು ಹೇಳಿದಾಗ ಕಾಶೀ ಮಹಾಜನತೆ ಹರ್ಷೋಲ್ಲಾಸದಿಂದ ಸ್ವಾಗತಿಸಿದರು. 48 ವರ್ಷದ ಹಿಂದೆ ಕುಂಬಮೇಳದ ನಂತರ ನಮ್ಮ ಪರಮಗುರುಗಳು ನಮ್ಮ ಗುರುಗಳ ಜೊತೆ ಆಗಮಿಸಿ ಅನ್ನಪೂರ್ಣೇಶ್ವರಿಯ ಪುನರ್ ಪ್ರತಿಷ್ಠೆ ಕುಂಬಾಬಿಶೇಕ ನೆರವೇರಿಸಿದ್ದರು. ಈಗ ನಾವೊಬ್ಬರೇ ಬಂದಿಲ್ಲ. ನಮ್ಮ ಗುರುಗಳ ತಪಸ್ಸಿನ ಶಕ್ತಿ,ಅನುಗ್ರಹ ನಮ್ಮ ಜೊತೆಗೇ ಇದೆ.ನಮ್ಮ ಯಾತ್ರೆ ನಡೆಸುವವರು ಅವರು ಎಂದು ಕಾಶೀ ಪುರಪ್ರವೇಶ ಸಮಾರಂಭದಲ್ಲೇ ಸನ್ನಿಧಾನ ತಿಳಿಸುವ ಮೂಲಕ ಅಚಲ ಗುರುಭಕ್ತಿಯನ್ನು ಪ್ರಕಟಿಸಿದರು. ಇನ್ನು ಫೆಬ್ರುವರಿಯ ಒಂಬತ್ತರ ವರೆಗೆ ಕಾಶಿಯಲ್ಲಿ ಶೃಂಗೇರಿಯ ಜಗದ್ಗುರುಗಳಿಂದ ವಿವಿಧ ಧಾರ್ಮಿಕ ಕಾರ್ಯಕ್ರಮ ನಡೆಯಲಿದೆ. ನಂತರ ಅವರು ಅಯೋಧ್ಯೆಯ ಪ್ರಭು ರಾಮನ ದರ್ಶನ ಪಡೆಯಲಿದ್ದಾರೆ.ಅಯೋಧ್ಯೆಯ ಶ್ರೀ ರಾಮಮಂದಿರ ಟ್ರಸ್ಟ್ ಜಗದ್ಗುರುಗಳ ಬೇಟಿಗೆ ವಿಶೇಷ ಏರ್ಪಾಟು ಮಾಡಿದೆ. ಪ್ರಯಾಗ್ ರಾಜ್ ಸೇರಿದಂತೆ ಜಗದ್ಗುರುಗಳ ಬೇಟಿಯ
ಸಂಧರ್ಭ ರಾಷ್ಟ್ರೀಯ ಸ್ವಯಂಸೇವಕ ಸಂಘದವರು ವಿಶೇಷ ಏರ್ಪಾಟಿನಲ್ಲಿ ತೊಡಗಿಸಿಕೊಳ್ಳುತ್ತಾರೆ. ಕಾಶಿಯ ಸ್ವಾಗತ ಸಮಾರಂಭದಲ್ಲೂ ಅವರಿದ್ದರು.ವಿಶ್ವ ಹಿಂದೂ ಪರಿಷತ್ತಿನ ಮುಖ್ಯಸ್ಥರೇ ಪ್ರಯಾಗ್ ರಾಜ್ ನಲ್ಲಿ ಗುರುದರ್ಶನ ಮಾಡಿದ್ದರು. ಅವರಿಗೆ ಖುರ್ಚಿಯ ಮೇಲೆ ಕೂರುವ ಅವಕಾಶ ಇದ್ದಾಗಲೂ ಅವರು ನೆಲದ ಮೇಲೇ ಇತರ ಮುಖಂಡರ ಜೊತೆ ಕುಳಿತೇ ಗುರುಗಳೊಂದಿಗೆ ಮಾತುಕತೆ ನಡೆಸಿದರು.
ಧಕ್ಷಿಣ ಭಾರತದಲ್ಲಿ ಗುರುದರ್ಶನಕ್ಕೆ ಇರುವ ಪದ್ದತಿಗೂ ಉತ್ತರ ಭಾರತಕ್ಕೂ ವ್ಯತ್ಯಾಸವಿದೆ.ಉತ್ತರ ಪ್ರದೇಶದ ಮುಖ್ಯ ಮಂತ್ರಿ ಯೋಗಿ ಆದಿತ್ಯನಾಥರು ಶೃಂಗೇರಿಯ ಜಗದ್ಗುರುಗಳಿಗೆ ಕಾಷಾಯ ವಸ್ತ್ರ ಹೊದಿಸಿದರು. ಉತ್ತರ ಭಾರತದಲ್ಲಿ ಗುರುಗಳಿಗೆ ನಮಸ್ಕರಿಸುವ ರೀತಿಯೂ ಬೇರೆ.ಗಣ್ಯರು ಗುರುಗಳ ಎದುರು ಪೂರ್ತಿ ವಸ್ತ್ರ ತೊಟ್ಟೇ ಖುರ್ಚಿಯ ಮೇಲೆ ಕುಳಿತುಕೊಳ್ಳುತ್ತಾರೆ.
ಅಮಿತ್ ಶಾ ತಮಗೆ ಗುರುಗಳು ಅನುಗ್ರಹ ಪೂರ್ವಕವಾಗಿ ಹೊದಿಸಿದ ಶಾಲನ್ನು ತಕ್ಷಣ ತೆಗೆದರು. ನನಗೆ ಪಿ.ವಿ.ನರಸಿಂಹ ರಾವ್ ಪ್ರಧಾನಿ ಆದಾಗ ಶೃಂಗೇರಿಗೆ ಬಂದ ಒಂದು ಸಂಧರ್ಭ ನೆನಪಿಗೆ ಬಂದಿತು. ಶೃಂಗೇರಿಯ ಶಂಕರಾಚಾರ್ಯರ ಮೂರ್ತಿ ಸ್ಥಾಪನೆಯ ಶಂಕುಸ್ಥಾಪನಾ ಸಮಾರಂಭ ಅದು. ಶ್ರೀ ಭಾರತೀತೀರ್ಥರು ಪ್ರಧಾನಿಗೆ ಶಾಲು ಅನುಗ್ರಹಿಸಿದ ತಕ್ಷಣ ಅವರು ಅದನ್ನು ತೆಗೆಯ ಹೊರಟಾಗ ಸ್ವಲ್ಪಕಾಲ ಅದು ಇಟ್ಟುಕೊಳ್ಳಿ ಎಂದು ಗುರು ಅಪ್ಪಣೆ ಆಯಿತು. ವಿನೀತ ವಿದ್ಯಾರ್ಥಿಯಂತೆ ಪ್ರಧಾನಿ ಅದನ್ನು ಪಾಲಿಸಿದ್ದರು. ನಂತರ ಮುಖ್ಯ ಮಂತ್ರಿ ವೀರಪ್ಪ ಮೊಯ್ಲಿಯವರಿಗೆ ಹಾಗೆ ಹೇಳಬೇಕಾಗೂ ಬರಲಿಲ್ಲ. ಆಗಲೂ ವೇದಿಕೇಯಲ್ಲಿ ಗುರುಗಳು ಮಾತ್ರ.ಸಭಿಕರ ಪ್ರಥಮ ಸಾಲಿನಲ್ಲಿ ಪ್ರಧಾನಿ ಮತ್ತು ಮುಖ್ಯ ಮಂತ್ರಿಗಳು. ನನಗೂ ಶೀರ್ನಾಳಿ ಚಂದ್ರಶೇಖರ್ ಕೃಪಿಯಿಂದ ಈ ಸಮಾರಂಭದಲ್ಲಿ ಪಾಲ್ಗೊಳ್ಳುವ ಅವಕಾಶ ದೊರಕಿತ್ತು.
ಶೃಂಗೇರಿಯ ಗುರುಪರಂಪರೆಗೆ ಇರುವ ವಿಶೇಷ ಗೌರವ ಎಲ್ಲಾ ಕಾಲಕ್ಕೂ ಮುಂದುವರೆಯಲಿದೆ.

S. N. Channabasappa ಮೃತ ಸೈನಿಕ ಮಂಜುನಾಥ್ ಪಾರ್ಥಿವ ಶರೀರ‌ಕ್ಕೆ ಶಿವಮೊಗ್ಗದಲ್ಲಿ ಸಾದರ ನಮನ

0

S. N. Channabasappa ಭಾರತೀಯ ವಾಯುಪಡೆಯಲ್ಲಿ ಜೂನಿಯರ್ ವಾರಂಟ್ ಅಧಿಕಾರಿಯಾಗಿ ಕಳೆದ 18 ವರ್ಷಗಳಿಂದ ಜಮ್ಮು ಮತ್ತು ಕಾಶ್ಮೀರ, ಅಸ್ಸಾಂ ಮತ್ತು ದೆಹಲಿಯಲ್ಲಿ ಸೇವೆ ಸಲ್ಲಿಸಿ, ಪ್ರಸ್ತುತ ಉತ್ತರ ಪ್ರದೇಶದ ಆಗ್ರಾದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಸಂಕೂರು ಗ್ರಾಮದ 36 ವರ್ಷದ ಜಿ.ಎಸ್. ಮಂಜುನಾಥ್ ಅವರು ಪ್ಯಾರಾಟ್ರೂಪರ್ ತರಬೇತಿ ಶಾಲೆಯಲ್ಲಿ ತರಬೇತಿ ವ್ಯಾಯಾಮದ ಸಮಯದಲ್ಲಿ ಅವಘಡ ಸಂಭವಿಸಿ ಹುತಾತ್ಮರಾದ ಅತೀವ ನೋವುಂಟಾಗಿದೆ ಎಂದು ಶಿವಮೊಗ್ಗ ಶಾಸಕರಾದ ಎಸ್ ಎನ್ ಚನ್ನಬಸಪ್ಪ ಅವರು ಸೂಚಿಸಿದ್ದಾರೆ.

ದೇಶಸೇವೆಯ ಕರ್ತವ್ಯ ನಡೆಸುತ್ತಿದ್ದ ನಮ್ಮ ಹೆಮ್ಮೆಯ ಯೋಧ ಜಿ.ಎಸ್. ಮಂಜುನಾಥ್ ರವರ ಪಾರ್ಥಿವ ಶರೀರ ಇಂದು ಶಿವಮೊಗ್ಗ ನಗರಕ್ಕೆ ಆಗಮಿಸಿದ ಸಂದರ್ಭದಲ್ಲಿ ಅಂತಿಮ ನಮನ ಸಲ್ಲಿಸಿ, ಕುಟುಂಬಸ್ಥರಿಗೆ ಸಾಂತ್ವನಿಸಿ, ಯೋಧನ ಆತ್ಮಕ್ಕೆ ಮೋಕ್ಷ ಸಿಗಲಿ ಎಂದು ಪ್ರಾರ್ಥಿಸಲಾಯಿತು.