Wednesday, March 11, 2026
Wednesday, March 11, 2026
Home Blog Page 400

Akhil Karnataka Cultural Council ಕನ್ನಡನಾಡು ನುಡಿಗಾಗಿ ಎಲ್ಲರೂ ‌ಒಟ್ಟಾಗಿ ಕೆಲಸ ಮಾಡಬೇಕು- ವೈ.ಎಸ್.ವಿ.ದತ್ತ

0

Akhil Karnataka Cultural Council ಶಿಕ್ಷಕರ ತಂಡ ಕಟ್ಟಿಕೊಂಡು ಕನ್ನಡ ಭಾಷೆ, ಸಂಸ್ಕೃತಿ ಬೆಳೆಸುವ ನಿಟ್ಟಿನಲ್ಲಿ ಕಾರ್ಯ ನಿಯೋಜಿತರಾಗಿರುವುದು ಬಹಳ ಸಂತೋಷ ಎಂದು ಮಾಜಿ ಶಾಸಕ ವೈಎಸ್‌ವಿ ದತ್ತ ಹೇಳಿದರು.

ಶಿವಮೊಗ್ಗ ನಗರದ ಮಥುರಾ ಪಾರಾಡೈಸ್ ಸಭಾಂಗಣದಲ್ಲಿ ಅಖಿಲ ಕರ್ನಾಟಕ ಸಾಂಸ್ಕೃತಿಕ ಪರಿಷತ್ ವತಿಯಿಂದ ಆಯೋಜಿಸಿದ್ದ ಶಿವಮೊಗ್ಗ ಜಿಲ್ಲಾ ಘಟಕದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳಿಗೆ ಸೇವಾ ದೀಕ್ಷೆ ನೀಡುವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕನ್ನಡ ನಾಡು ನುಡಿಗಾಗಿ ಎಲ್ಲರೂ ಒಟ್ಟಾಗಿ ಕೆಲಸ ಮಾಡಬೇಕು ಎಂದು ತಿಳಿಸಿದರು.

ಸಂಸ್ಥಾಪಕ ರಾಜ್ಯಾಧ್ಯಕ್ಷ ಮನೋಹರ್ ನಾಯಕ್ ಮಾತನಾಡಿ, ಕನ್ನಡ ನಾಡು ನುಡಿಗಾಗಿ ಪರಿಷತ್ ರಚನೆಯಾಗಿದೆ. ಶ್ರೀ ಸಿದ್ದೇಶ್ಚರ ಸ್ವಾಮಿಗಳ ಕೃಪಾಶೀರ್ವಾದಿಂದ ಕನ್ನಡ ನಾಡು ನುಡಿ ಕಟ್ಟುವ, ಸಾಂಸ್ಕೃತಿಕ ಪರಂಪರೆಯನ್ನು ಬೆಳೆಸುವ, ಸಮಾಜಮುಖಿ ಕೆಲಸ ಮಾಡಿ ಎಲೆಮರೆ ಕಾಯಿಯಂತಿರುವ ಪ್ರತಿಭೆಗಳನ್ನು ಗುರುತಿಸಿ ವೇದಿಕೆ ಕಲ್ಪಿಸುವ ಗುರಿ ಪರಿಷತ್ ಮಾಡಲಿದೆ ಎಂದು ತಿಳಿಸಿದರು.

ಜಿಲ್ಲಾಧ್ಯಕ್ಷೆ ಶಾಹಿನ್ ಬಾನು ಮಾತನಾಡಿ, ನಾಡು ನುಡಿಗಾಗಿ ಅಳಿಲು ಸೇವೆ ಮಾಡಲು ಜವಾಬ್ದಾರಿ ಪಡೆದಿದ್ದೇನೆ. ನನ್ನ ಕುಟುಂಬದ ಸಹಕಾರವಿದೆ. ನಾನು ಕನ್ನಡ ಮಣ್ಣಿಗೆ ಚಿರಋಣಿ ಎಂದರು.

ಸಾಂಸ್ಕೃತಿಕ ಪರಿಷತ್ ನುಡಿಸಿರಿ ಕೈಪಿಡಿ ಬಿಡುಗಡೆ ಮಾಡಲಾಯಿತು. ಮೇರಿ ಡಿಸೋಜಾ ಅವರು ವಿವಿಧ ದೇಶಗಳ ನಾಣ್ಯಗಳು, ನೋಟುಗಳು, ಸ್ಟಾö್ಯಂಪ್‌ಗಳ ಸಂಗ್ರಹಣೆಯನ್ನು ಪ್ರದರ್ಶಿಸಿದರು. ಆಶಾರಾಣಿ ಅವರು ಕನ್ನಡ ನಾಡು ನುಡಿಯನ್ನು ಪ್ರತಿಬಿಂಬಿಸುವ ಸಾಹಿತ್ಯ ಕ್ಯಾಲೆಂಡರ್ ಪ್ರದರ್ಶಿಸಿದರು.
ಹಸನ್ ಸಾಬ್ ಬೆಳ್ಳಿಗನೂಡು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಶಾಲೆಗಳಲ್ಲಿ ಮಕ್ಕಳಿಗೆ ಸ್ಪಷ್ಟವಾಗಿ ಕನ್ನಡ ಭಾಷೆ ಓದುವುದು, ಬರೆಯುವುದನ್ನು ಕಲಿಸಬೇಕು. ಕನ್ನಡ ಸಾಹಿತ್ಯ ಪರಂಪರೆಯ ಬಗ್ಗೆ ತಿಳಿಸಬೇಕು. ಕನ್ನಡ ಸರ್ಕಾರಿ ಶಾಲೆಗಳನ್ನು ಉಳಿಸುವ ನಿಟ್ಟಿನಲ್ಲಿ ನಾವೆಲ್ಲಾ ಪ್ರಯತ್ನಿಸಬೇಕು ಎಂದು ತಿಳಿಸಿದರು.

ಮಥುರಾ ನಾಗರಾಜ್, ಡಾ. ಪಂಚಯ್ಯ ಆರ್.ಹಿರೇಮಠ, ಸಾಜಿದ್ ಅಹಮದ್, ನಾಗಭೂಷಣ್, ನಾರಾಯಣ ನಾಯ್ಕ, ಗಿರೀಶ್ ವರ್ಮ, ವಿನ್ನಿ ಮ್ಯಾಥ್ಯೂ, ಶಶಿರೇಖಾ, ಮೇರಿ ಡಿಸೋಜ, ಸತೀಶ್, ಪ್ರಕಾಶ್ ಮರವಂಜಿ, ಬಸವನಗೌಡ, ವಾಗೀಶ್ ಆರಾಧ್ಯ, ಜರಿನಾ, ಪೂರ್ಣಿಮಾ ದಾದಾವಲ್ಲಿ, ಪ್ರಭಾಕರ್, ತ್ರಿವೇಣಿ, ಶಿಕ್ಷಕರ ತಂಡ ಉಪಸ್ಥಿತರಿದ್ದರು. ಜಿಲ್ಲಾ ಪದಾಧಿಕಾರಿಗಳಿಗೆ ಸೇವಾದೀಕ್ಷೆ ನೀಡಲಾಯಿತು. ಶೋಭಾ ಸತೀಶ್ ಸರ್ವರನ್ನು ಸ್ವಾಗತಿಸಿದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅನಿತಸೂರ್ಯ ನಿರೂಪಿಸಿದರು. ಪೂರ್ಣಿಮಾ ಎಲ್ಲರನ್ನು ವಂದಿಸಿದರು.

DC Shivamogga ಜಿಲ್ಲೆಯಲ್ಲಿನ ಕೆರೆಗಳ ವಾಸ್ತವ ಸ್ಥಿತಿಗತಿಗಳ ಬಗ್ಗೆ ಪೂರಕ ಮಾಹಿತಿ ಒದಗಿಸಿ- ಗುರುದತ್ತ ಹೆಗಡೆ

0

DC Shivamogga ಶಿವಮೊಗ್ಗ ಜಿಲ್ಲೆಯಲ್ಲಿ ಸಣ್ಣ ನೀರಾವರಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌, ನೀರಾವರಿ ನಿಗಮ, ನಗರ ಯೋಜನೆ ಪ್ರಾಧಿಕಾರ, ಸ್ಥಳೀಯ ಸಂಸ್ಥೆಗಳು ಹಾಗೂ ಅರಣ್ಯ ಇಲಾಖೆಗಳ ವ್ಯಾಪ್ತಿಗೊಳಪಡುವ ಹಾಗೂ ಕೃಷಿ, ಕುಡಿಯುವ ನೀರು ಮತ್ತು ಗ್ರಾಮೀಣ ಕೈಗಾರಿಕೆಗಳ ಮೂಲಗಳಾಗಿರುವ ಕೆರೆಗಳನ್ನು ಗುರುತಿಸಿ, ಅವುಗಳ ವಾಸ್ತವ ಸ್ಥಿತಿಗತಿ, ಒತ್ತುವರಿ, ಒತ್ತುವರಿ ತೆರವು ಮಾಡಿದ ಕೆರೆಗಳು, ಆಕಾರ, ಚೆಕ್ಕುಬಂದಿ, ಸರ್ವೇ ನಂಬರ್‌, ಪ್ರದೇಶದ ವಿಸ್ತಾರ ಮತ್ತಿತರ ಪೂರಕ ಹಾಗೂ ನಿಖರವಾದ ಮಾಹಿತಿಯನ್ನು ನಿಗಧಿತ ನಮೂನೆಯಲ್ಲಿ ಕೂಡಲೇ ಒದಗಿಸುವಂತೆ ಜಿಲ್ಲಾಧಿಕಾರಿ ಗುರುದತ್ತಹೆಗಡೆ ಅವರು ಸಂಬಂಧಿಸಿದ ಇಲಾಖಾಧಿಕಾರಿಗಳಿಗೆ ಸೂಚಿಸಿದರು.

ತಮ್ಮ ಕಚೇರಿ ಸಭಾಂಗಣದಲ್ಲಿ ಕೆರೆಗಳ ನಿರ್ವಹಣೆ, ರಕ್ಷಣೆ ಮತ್ತು ಅಭಿವೃದ್ಧಿ ಕಾರ್ಯಗಳ ಕುರಿತು ಏರ್ಪಡಿಸಲಾಗಿದ್ದ ಸಭೆಯ ಅ‍ಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ಈ ಸಂಬಂಧ ಈಗಾಗಲೇ ರಾಜ್ಯದ ಮುಖ್ಯಮಂತ್ರಿಗಳು ಹಾಗೂ ನೀರಾವರಿ ಸಚಿವರು ವಿಸ್ತೃತ ಮಾಹಿತಿಯನ್ನು ನೀಡುವಂತೆ ಕೋರಿದ್ದು, ಇಲಾಖಾಧಿಕಾರಿಗಳು ಕೂಡಲೇ ಮಾಹಿತಿಯನ್ನು ಒದಗಿಸುವಂತೆ ಅವರು ಸೂಚಿಸಿದರು.

ಕ್ಷೀಣಿಸುತ್ತಿರುವ ಅಂತರ್ಜಲವನ್ನು ಮರುಪೂರಣಗೊಳಿಸುವುದು, ಪರಿಸರಾತ್ಮಕ ಪ್ರಭಾವಗಳ ನಿರ್ಧರಣಾ ಅಧ್ಯಯನ ಸೇರಿದಂತೆ ಅವುಗಳ ವ್ಯವಸ್ಥಿತ ನಿರ್ವಹಣೆ ದೃಷ್ಟಿಯಿಂದ ಸಹಕಾರಿಯಾಗಲಿರುವ ಈ ಮಹತ್ವದ ಕಾರ್ಯಕ್ಕೆ ಸಂಬಂಧಿತ ಇಲಾಖಾಧಿಕಾರಿಗಳು ಕೆರೆಗಳ ಸಮಗ್ರ ಮಾಹಿತಿಯನ್ನು ನೀಡುವಂತೆ ಅವರು ಸೂಚಿಸಿದರು. ಸ್ಥಳೀಯ ಮತ್ತು ಇತರೆ ಪ್ರಾಧಿಕಾರಿಗಳ ನೆರವಿನೊಂದಿಗೆ ಸಮನ್ವಯತೆ ಸಾಧಿಸಿಕೊಳ್ಳುವ ಮೂಲಕ ಕೆರೆ-ಕಟ್ಟೆಗಳನ್ನು ಸಂರಕ್ಷಿಸುವುದು, ಜೀರ್ಣೋದ್ಧಾರಗೊಳಿಸುವುದು. ಪುನರ್‌ರೂಪಿಸುವುದು ಮತ್ತು ಮೂಲಸ್ಥಿತಿಗೆ ತರುವಲ್ಲಿ ಸಹಕರಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ ಅವರು, ಇರುವ ಭೌಗೋಳಿಕ ಮಾಹಿತಿಯೊಂದಿಗೆ ಕೆರೆಗಳು ಮತ್ತು ಸುತ್ತಮುತ್ತಲ ಪ್ರದೇಶಗಳ ಪರಿಸರಾತ್ಮಕ ಯೋಜನೆ ಮತ್ತು ನಕ್ಷೆಯ ರಚನೆಯಂತೆ ಕೆರೆಗಳ ಸಮಗ್ರ ಅಭಿವೃದ್ಧಿಗೆ ಕ್ರಿಯಾಯೋಜನೆ ಸಿದ್ಧಪಡಿಸಿ ಸಲ್ಲಿಸುವಂತೆಯೂ ಅವರು ಸೂಚಿಸಿದರು.

ಕೆರೆಗಳ ಗಡಿ ಗುರುತಿಸುವುದು, ಒತ್ತುವರಿ ತೆರವುಗೊಳಿಸುವುದು, ರಕ್ಷಣೆ ಮತ್ತು ಅಭಿವೃದ್ಧಿ ಮುಂತಾದ ಮಾಹಿತಿ ನೀಡುವ ಅಧಿಕಾರಿಗಳು ಸರಿಯಾದ ನಿಖರವಾದ ಮಾಹಿತಿಯನ್ನು ನೀಡಬೇಕು. ಈಗಾಗಲೇ ಒತ್ತುವರಿಯನ್ನು ಗುರುತಿಸಿರುವ ಕೆರೆಗಳ ಒತ್ತುವರಿಯನ್ನು ತೆರೆವುಗೊಳಿಸಬೇಕು. ಅಗತ್ಯವಿದ್ದಲ್ಲಿ ಪೊಲೀಸ್‌ಇಲಾಖೆಯ ಸಹಕಾರವನ್ನು ಪಡೆದುಕೊಳ್ಳಬೇಕು. ಅದಕ್ಕಾಗಿ ಕಾಲಮಿತಿಯನ್ನು ನಿಗಧಿಪಡಿಸಿಕೊಳ್ಳುವಂತೆಯೂ ಅವರು ಸೂಚಿಸಿದರು.

ತಹಶೀಲ್ದಾರರು, ನಗರ ಯೋಜನಾಧಿಕಾರಿಗಳು, ಸ್ಥಳೀಯ ಸಂಸ್ಥೆಗಳ ಕಾರ್ಯನಿರ್ವಾಹಕ ಅಧಿಕಾರಿಗಳು ತಮ್ಮ ಕಾರ್ಯಕ್ಷೇತ್ರದ ವ್ಯಾಪ್ತಿಯ ಕೆರೆಗಳನ್ನು ಗುರುತಿಸಬೇಕು. ಅವುಗಳ ಸರ್ವೇ ಕಾರ್ಯಕ್ಕೆ ಆದ್ಯತೆಯ ಮೇಲೆ ಕ್ರಮ ವಹಿಸಬೇಕು. ಒತ್ತುವರಿಯನ್ನು ಸ್ಥಳೀಯರ ಸಹಕಾರದೊಂದಿಗೆ ತೆರವುಗೊಳಿಸಬೇಕು. ಅದಕ್ಕಾಗಿ ಅಧಿಕಾರಿಗಳ ನಡುವೆ ಸಮನ್ವಯತೆ ಕಾಯ್ದುಕೊಳ್ಳುವಂತೆ ಸಲಹೆ ನೀಡಿದರು.

DC Shivamogga ಅದಕ್ಕೂ ಮುನ್ನ ಇಲಾಖೆಗಳಲ್ಲಿರುವ ಮಾಹಿತಿಯನ್ನು ಖಚಿತ ಪಡಿಸಿಕೊಂಡು ಸ್ಥಳ ಪರಿಶೀಲನೆ ನಡೆಸಬೇಕು. ಕೆರೆಗಳು ಅಥವಾ ಜಲಮೂಲಗಳ ಮೂಲ ಮಾಲಿಕತ್ವ ಯಾರಿಗೆ ಸೇರಿದ್ದಾಗಿದೆ ಎಂಬುದನ್ನು ನೋಡಿಕೊಂಡು ದಾಖಲೆಗಳನ್ನು ಸರಿಪಡಿಸಿಕೊಳ್ಳಬೇಕೆಂದ ಅವರು, ಸಂಬಂಧಿತ ಇಲಾಖಾಧಿಕಾರಿಗಳು ತಾಲೂಕು ಮಟ್ಟದಲ್ಲಿ ಸಭೆ ನಡೆಸಿ, ಸಮರ್ಪಕವಾದ ಮಾಹಿತಿಯನ್ನು ನೀಡುವಂತೆ ಅವರು ಸೂಚಿಸಿದರು.

ಒತ್ತುವರಿ ತೆರವುಗೊಳಿಸಿದ ಪ್ರದೇಶದಲ್ಲಿ ಪುನಃ ಒತ್ತುವರಿ ಕಾರ್ಯ ನಡೆಸದಂತೆ ನೋಡಿಕೊಳ್ಳಬೇಕಲ್ಲದೇ ಉದ್ಯೋಗ ಖಾತ್ರಿ ಯೋಜನೆಯಡಿ ಅರಣ್ಯ ಇಲಾಖೆಯ ಸಹಯೋಗದೊಂದಿಗೆ ಗಿಡನೆಡಲು ಪ್ರಸ್ತಾವನೆ ಸಲ್ಲಿಸುವಂತೆ ಸೂಚಿಸಿದ ಅವರು, ಜಿಲ್ಲೆಯ ಸೊರಬ, ಶಿಕಾರಿಪುರ ತಾಲೂಕುಗಳಲ್ಲಿ ಅತಿ ಹೆಚ್ಚಿನ ಸಂಖ್ಯೆಯ ಕೆರೆಗಳಿದ್ದು, ಅಲ್ಲಿನ ಕೆರೆಗಳ ಮಾಹಿತಿಯನ್ನು ಸಂಗ್ರಹಿಸಿ, ಕೂಡಲೇ ಸಲ್ಲಿಸುವಂತೆ ಅವರು ಸೂಚಿಸಿದರು.

ಅಲ್ಲದೇ ಅರಣ್ಯ ಇಲಾಖೆಯ ವ್ಯಾಪ್ತಿಗೊಳಪಡುವ ಕೆರೆಗಳ ಮಾಹಿತಿಯನ್ನು ಸಂಬಂಧಿಸಿದ ಅರಣ್ಯಾಧಿಕಾರಿಗಳಿಂದಲೇ ಪಡೆದುಕೊಳ್ಳಲಾಗುವುದು ಎಂದವರು ನುಡಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಸಿದ್ಧಲಿಂಗರೆಡ್ಡಿ, ಮಹಾನಗರಪಾಲಿಕೆ ಆಯುಕ್ತೆ ಶ್ರೀಮತಿ ಕವಿತಾ ಯೋಗಪ್ಪನವರ್‌ಸೇರಿದಂತೆ ಎಲ್ಲಾ ತಾಲೂಕುಗಳ ತಹಶೀಲ್ದಾರರು, ಸಣ್ಣ ನೀರಾವರಿ, ಸ್ಥಳೀಯ ಸಂಸ್ಥೆಗಳ ಅಭಿಯಂತರರು, ಅರಣ್ಯಾಧಿಕಾರಿಗಳು ಉಪಸ್ಥಿತರಿದ್ದರು.

United Nations ಮಹಿಳಾ ಕೇಂದ್ರಿತ ಗ್ಯಾರಂಟಿ ಯೋಜನೆಗಳ ಜಾರಿಗೆ ಫಿಲೆಮನ್ ಯಾಂಗ್ ಮೆಚ್ಚುಗೆ

0

United Nations ಮಹಿಳೆಯರನ್ನು ಪ್ರಮುಖ ಫಲಾನುಭವಿಗಳನ್ನಾಗಿ ಕೇಂದ್ರೀಕರಿಸಿ ರಾಜ್ಯದಲ್ಲಿ ಜಾರಿಗೊಳಿಸಿರುವ ಐದು ಗ್ಯಾರಂಟಿ ಯೋಜನೆಗಳ ಅನುಷ್ಠಾನದ ಮೂಲಕ ಕರ್ನಾಟಕ ಸಾಧಿಸಿರುವ ಲಿಂಗ ಸಮಾನತೆಯ ಉಪಕ್ರಮಗಳಿಗೆ ವಿಶ್ವಸಂಸ್ಥೆ ಸಾಮಾನ್ಯ ಸಭೆಯ ಅಧ್ಯಕ್ಷ ಕ್ಯಾಮರೂನ್‌ನ ಫಿಲೆಮನ್ ಯಾಂಗ್ ಮೆಚ್ಚುಗೆ ಸೂಚಿಸಿದ್ದಾರೆ.

ಬೆಂಗಳೂರಿಗೆ ಭೇಟಿ ನೀಡಿದ ಸಂದರ್ಭದಲ್ಲಿ ನಗರದ ಖಾಸಗಿ ಹೋಟೆಲ್ ತಾಜ್ ವೆಸ್ಟೆಂಡ್‌ನಲ್ಲಿ
ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್ ಅವರು ಸ್ವಸಹಾಯ ಗುಂಪಿನ ಮಹಿಳೆಯರು ರೇಷ್ಮೆ ಗೂಡುಗಳಿಂದ ತಯಾರಿಸಿದ ಪುಷ್ಪಗುಚ್ಛದೊಂದಿಗೆ ಸ್ವಾಗತಿಸಿದರು. ಒಂದು ಜಗತ್ತು ಹಲವು ಸಾಧ್ಯತೆಗಳನ್ನು ಬಿಂಬಿಸುವ ಕರ್ನಾಟಕ ಕುರಿತಾದ ಪುಸ್ತಕವನ್ನು ನೀಡಿದರು.

ಸುಸ್ಥಿರ ಅಭಿವೃದ್ಧಿ ಗುರಿಗಳ (SDG) ಸಾಧನೆಯಲ್ಲಿ ಕರ್ನಾಟಕವು ಉನ್ನತ ಸ್ಥಾನ ಪಡೆಯಲು ಸಾಧ್ಯವಾಗಿರುವ ಬಗ್ಗೆ ವಿಶ್ವಸಂಸ್ಥೆಯ ಅಧ್ಯಕ್ಷರು ಆಸಕ್ತಿಯಿಂದ ಹೆಚ್ಚು ಮಾಹಿತಿ ಹಾಗೂ ವಿವರಗಳನ್ನು ಬಯಸಿದರು.

ಗ್ಯಾರಂಟಿ ಯೋಜನೆಗಳಲ್ಲಿ ಮಹಿಳೆಯರ ಕೈಗೆ ನಗದು ಹಣ ನೀಡುವ ಗೃಹಲಕ್ಷ್ಮಿ, ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ ಅವಕಾಶ ನೀಡುವ ಶಕ್ತಿ, ಕಾರ್ಮಿಕ ಕ್ಷೇತ್ರದಲ್ಲಿ ಮಹಿಳೆಯರ ಭಾಗವಹಿಸುವಿಕೆಯ ದರವನ್ನು ಸುಧಾರಿಸಲು ಕೈಗೊಂಡಿರುವ ಕ್ರಮಗಳು , ಹಸಿವು ಮತ್ತು ಅಪೌಷ್ಟಿಕತೆಯನ್ನು ತಡೆಗಟ್ಟಲು ತಲಾವಾರು ಪೋಷಕಾಂಶ ನೀಡಿಕೆ , ಕೌಶಲ್ಯದ ಮೂಲಕ ಉದ್ಯೋಗ ಗಳಿಕೆ, ಅಡುಗೆ ಅನಿಲ ಪೂರೈಕೆ,ಉಚಿತ ವಿದ್ಯುತ್ ಪೂರೈಕೆ ಕುರಿತ ಕಾರ್ಯಕ್ರಮಗಳ ವಿವರಗಳನ್ನು ಮುಖ್ಯ ಕಾರ್ಯದರ್ಶಿಗಳು ನೀಡಿದರು.

ಮಹಿಳೆಯರು ಸ್ವಸಹಾಯ ಗುಂಪುಗಳನ್ನು (SHG) ಸಂಘಟಿಸಲು , ಕೃಷಿ ಮತ್ತು ತೋಟಗಾರಿಕಾ ಉತ್ಪನ್ನಗಳ ಮೌಲ್ಯವರ್ಧನೆಗೆ ಪ್ರೋತ್ಸಾಹ, ವಿಷಕಾರಿ ಮುಕ್ತ ವಾತಾವರಣಕ್ಕಾಗಿ ಸಮಗ್ರ ಮತ್ತು ಸಾವಯವ ಕೃಷಿಗೆ ಪ್ರೋತ್ಸಾಹ ಕ್ರಮಗಳು ಸಮಗ್ರ ಹವಾಮಾನ ಬದಲಾವಣೆ ಕ್ರಿಯಾ ಯೋಜನೆಯನ್ನು ಸಿದ್ಧಪಡಿಸಲು ಸಹಾಯ ಮಾಡುತ್ತದೆ ಎಂದು ಸಂತಸ ವ್ಯಕ್ತಪಡಿಸಿದರು.

United Nations ರಾಜ್ಯದಲ್ಲಿ ಸಾಮಾಜಿಕ-ಆರ್ಥಿಕ ಮತ್ತು ರಾಜಕೀಯ ಸಮಾನತೆಯನ್ನು ಉತ್ತೇಜಿಸಲು ಮಹಿಳಾ ಪರ ಕಾರ್ಯಕ್ರಮಗಳನ್ನು ಮುನ್ನಡೆಸುತ್ತಿರುವ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಕಾಳಜಿಯನ್ನು ವಿಶ್ವಸಂಸ್ಥೆಯ ಅಧ್ಯಕ್ಷರು ಶ್ಲಾಘಿಸಿದರು.ಮುಂಬರುವ ವಿಶ್ವಸಂಸ್ಥೆಯ ಕಾರ್ಯಾಗಾರಗಳಲ್ಲಿ ಕರ್ನಾಟಕದ ಯಶೋಗಾಥೆಗಳನ್ನು ಹಂಚಿಕೊಳ್ಳಬೇಕೆಂದು ಅವರು ಸಲಹೆ ನೀಡಿದರು, ಇದರಿಂದ ಇತರ ದೇಶಗಳು ಸಹ ಈ ಅತ್ಯುತ್ತಮ ಅಭ್ಯಾಸಗಳನ್ನು ಅಳವಡಿಸಿಕೊಳ್ಳಬಹುದು ಎಂದು ಅಭಿಪ್ರಾಯ ಪಟ್ಟರು.

ನವೀಕರಿಸಬಹುದಾದ ಇಂಧನ ಉತ್ಪಾದನೆ ರಾಜ್ಯಕ್ಕೆ ಅಗ್ರಸ್ಥಾನ

ಒಟ್ಟು ಇಂಧನ ಉತ್ಪಾದನೆಯಲ್ಲಿ ಶೇ. 40 ರಷ್ಟು ಪಾಲು ನವೀಕರಿಸಬಹುದಾದ ಮೂಲಗಳಿಂದ ಬರುತ್ತಿರುವುದರಿಂದ ಕರ್ನಾಟಕವು ಶುದ್ಧ ಮತ್ತು ನವೀಕರಿಸಬಹುದಾದ ಇಂಧನ ಉತ್ಪಾದನೆಯಲ್ಲಿ ದೇಶದಲ್ಲಿಯೇ ಅಗ್ರಸ್ಥಾನ ಪಡೆದಿರುವುದಕ್ಕೆ ವಿಶ್ವಸಂಸ್ಥೆಯ ಅಧ್ಯಕ್ಷರು ಸಂತೋಷ ವ್ಯಕ್ತಪಡಿಸಿದರು.
ಮಾಹಿತಿ ತಂತ್ರಜ್ಞಾನ, ತಂತ್ರಾಂಶ ಅಭಿವೃದ್ಧಿ, ಕೃತಕ ಬುದ್ಧಿ ಮತ್ತೆ (AI), ಸಂಶೋಧನೆ ಮತ್ತು ನಾವೀನ್ಯತೆಗಾಗಿ ಜಾಗತಿಕ ಸಾಮರ್ಥ್ಯ ಕೇಂದ್ರಗಳ ಸ್ಥಾಪನೆಯಲ್ಲಿ ಕರ್ನಾಟಕವು ಸಾಧಿಸಿರುವ ಪ್ರಗತಿಯನ್ನು ವಿಶ್ವಸಂಸ್ಥೆಯ ಮೆಚ್ಚಿದರು. ಇತರ ದೇಶಗಳಿಗೆ ಡಿಜಿಟಲ್ ರೂಪಾಂತರವನ್ನು ಉತ್ತೇಜಿಸುವ ಸಲುವಾಗಿ ಸಹಾಯದ ಅಗತ್ಯವಿದ್ದು, ರಾಜ್ಯದ ಬೆಂಬಲವನ್ನು ಕೋರಿದರು. ರಾಜ್ಯ, ಜಿಲ್ಲೆ ಮತ್ತು ಗ್ರಾಮ ಪಂಚಾಯತ್ ಮಟ್ಟದಲ್ಲಿ ಸುಸ್ಥಿರ ಅಭಿವೃದ್ಧಿ ಸೂಚಕಗಳ ಪ್ರಗತಿಯನ್ನು ಮೇಲ್ವಿಚಾರಣೆ ಮಾಡಲು ಕರ್ನಾಟಕ ರಚಿಸಿದ ಸುಸ್ಥಿರ ಅಭಿವೃದ್ದಿ ಗುರಿಗಳ (SDG) ಡ್ಯಾಶ್‌ಬೋರ್ಡ್ ವೀಕ್ಷಿಸಿ ಶ್ಲಾಘಿಸಿದರು.

ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಕಾರ್ಯದರ್ಶಿ ಜಿ.ಸತ್ಯವತಿ ಮತ್ತಿತರರು ಇದ್ದರು

Aryabhata Abacus ಗಣಿತದ ಕಲಿಕೆ ಕಷ್ಟಕರವೇ ಅಲ್ಲ- ಡಾ.ಎಚ್.ಬಿ.ಮಂಜುನಾಥ್

0

Aryabhata Abacus ದೇಹದ ಆಂತರಿಕ ಕ್ರಿಯೆಗಳಿಂದ ಮೊದಲ್ಗೊಂಡು ಹೊರಜಗತ್ತಿನ ಎಲ್ಲ ವ್ಯವಹಾರಗಳಲ್ಲೂ ಗಣಿತವು ಹಾಸು ಹೊಕ್ಕಾಗಿದ್ದು ಗಣಿತದ ಕಲಿಕೆ ಕಷ್ಟಕರ ವಿದ್ಯೆ ಅಲ್ಲ ಎಂದು ಹಿರಿಯಪತ್ರಕರ್ತ ಡಾ. ಹೆಚ್ ಬಿ ಮಂಜುನಾಥ ಅಭಿಪ್ರಾಯ ಪಟ್ಟರು.

ಆರ್ಯಭಟ ಅಬ್ಯಾಕಸ್ ಮತ್ತು ವೇದಿಕ್ ಮ್ಯಾಥ್ಸ್ ನ ನಾಲ್ಕನೇ ಅಂತರ ಕೇಂದ್ರ ಸ್ಪರ್ಧಾ ಉದ್ಘಾಟನಾ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಮಾತನಾಡುತ್ತಾ ಸಣ್ಣ ಸಣ್ಣ ಲೆಕ್ಕಗಳಿಗೂ ಕ್ಯಾಲ್ಕುಲೇಟರ್ ಹಾಗೂ ಮೊಬೈಲ್ ಗಳನ್ನು ಬಳಸುತ್ತಾ ಇಂದಿನ ಪೀಳಿಗೆ ಸ್ವಸಾಮರ್ಥ್ಯದ ಗಣಿತವನ್ನು ಮರೆಯುತ್ತಿದ್ದಾರೆ, ಉಪಕರಣಗಳಿಗಿಂತಲೂ ವೇಗವಾಗಿ ಸ್ವತಃ ಗಣಿತ ಮಾಡಬಹುದಾದ ಅಬ್ಯಾಕಸ್ ಹಾಗೂ ವೇದಿಕ್ ಗಣಿತಗಳ ಕಲಿಕೆ ಒಳ್ಳೆಯದು ಎಂದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಮಾಗನೂರು ಬಸಪ್ಪ ಪಬ್ಲಿಕ್ ಟ್ರಸ್ಟಿನ ಗೌರವ ಕಾರ್ಯದರ್ಶಿ ಸಂಗಮೇಶ್ವರ ಗೌಡ್ರು ಅಬಾಕಸ್ ಕಲಿಯುವುದರಿಂದ ಮಕ್ಕಳಲ್ಲಿ ಗಣಿತದ ಬುದ್ಧಿ ಚುರುಕಾಗುತ್ತದೆ, ಸಾಧನೆಗೆ ಇದು ಅನುಕೂಲ ಎಂದರು.

ಮತ್ತೋರ್ವ ಮುಖ್ಯ ಅತಿಥಿ ಡಾ ಹರ್ಷ ಬಾಬಾಜಿ ಮಾತನಾಡಿ ಮಕ್ಕಳ ಶಿಕ್ಷಣದಲ್ಲಿ ಶಿಕ್ಷಕರೊಂದಿಗೆ ಪೋಷಕರ ಪಾತ್ರವೂ ಮಹತ್ತರವಾಗಿದೆ ಎಂದರು. ಆರ್ಯಭಟ ಅಬ್ಯಾಕಸ್ಸಿನ ರಾಜೇಶ್ವರಿ ಚಿದಾನಂದರವರ ಅಧ್ಯಕ್ಷತೆಯಲ್ಲಿ ಕಾರ್ಯದರ್ಶಿ ನಾಗರತ್ನ ಚಂದ್ರಮೌಳಿಯವರ ಉಪಸ್ಥಿತಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕು.ಸ್ತುತಿ ಪ್ರಾರ್ಥನಾ ಗೀತೆ ಹಾಡಿದರೆ ಮಕ್ಕಳ ಅಬ್ಯಾಕಸ್ ಪ್ರತಿಭಾ ಪ್ರಾತ್ಯಕ್ಷಿಕೆಯನ್ನು ಜಯ ಶ್ರಾವಣಿ ನಿರ್ವಹಿಸಿದರು.

Aryabhata Abacus ನವ್ಯಾ ರವರು ನಿರೂಪಿಸಿದ ಕಾರ್ಯಕ್ರಮದಲ್ಲಿ ವಂದನೆಗಳನ್ನು ಕು. ಶುದ್ಧಿ ಸಮರ್ಪಿಸಿದರು. ಮಾಗನೂರು ಬಸಪ್ಪ ಪಬ್ಲಿಕ್ ಶಾಲೆಯ ಪ್ರಾಂಗಣದಲ್ಲಿ ಕಾರ್ಯಕ್ರಮ ನೆರವೇರಿತು. ವಿಜೇತರಿಗೆ ಬಹುಮಾನಗಳನ್ನೂ ವಿತರಿಸಲಾಯಿತು.

S.N. Chennabasappa ಸಮಾಜ ಸುಧಾರಣೆಯಲ್ಲಿ‌ ಕಾಯಕ ನಿಷ್ಠೆಯ ಮೂಲಕ ಪಾಲ್ಗೊಂಡವರು ಕಾಯಕ ಶರಣರು- ಶಾಸಕ ಚೆನ್ನಿ

0

S.N. Chennabasappa ಕಾಯಕ ಶರಣರು ನಡೆ-ನುಡಿಗೆ ಅಂತರವಿಲ್ಲದಂತೆ ಬದುಕಿದವರು. ತಮ್ಮ ವಿವಿಧ ಕಾಯಕಗಳ ಮೂಲಕ ಕಾಯಕ ನಿಷ್ಟೆಯಿಂದ ಸಮಾಜ ಸುಧಾರಣೆಯಲ್ಲಿ ಪಾಲ್ಗೊಂಡವರು ಇವರು ಎಂದು ಶಾಸಕರಾದ ಎಸ್.ಎನ್.ಚನ್ನಬಸಪ್ಪ ಹೇಳಿದರು.

ಜಿಲ್ಲಾಡಳಿತ, ಜಿ.ಪಂ, ಮಹಾನಗರ ಪಾಲಿಕೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಶಿವಮೊಗ್ಗ ಇವರ ಸಂಯುಕ್ತಾಶ್ರಯದಲ್ಲಿ ಸೋಮವಾರ ಕುವೆಂಪು ರಂಗ ಮಂದಿರದಲ್ಲಿ ಏರ್ಪಡಿಸಲಾಗಿದ್ದ ಕಾಯಕ ಶರಣರ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಕಾಯಕ ಶರಣರು ಕೇವಲ ತಮ್ಮ ಉದ್ಧಾರಕ್ಕಾಗಿ ಅಲ್ಲ. ಸಮಾಜದ ಉದ್ಧಾರಕ್ಕಾಗಿ ಶ್ರಮಿಸಿದವರು. ಕಾಯಕದ ಮೂಲತತ್ವ ಅರಿತು ಕಾರ್ಯವೆಸಗಿದವರು ಈ ಕಾಯಕ ಶರಣರು. 12 ನೇ ಶತಮಾನ ಸಮಾಜದಲ್ಲಿನ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸಿದ ಯುಗ. ಕಾಯಕ ಶರಣು ಸೇರಿದಂತೆ ಶರಣರು ತಮ್ಮ ವೃತ್ತಿ ಜೊತೆಗೆ ಸಮಾಜ ಸುಧಾರಕರಾಗಿ ಕೊಡುಗೆ ನೀಡಿದ್ದಾರೆ. ವಚನಗಳ ಮೂಲಕ ಸಮಾನತೆ ತತ್ವ ಸಾರಿದರು.

ಕಾಯಕ ಮಾಡ್ತಾ ಮಾಡ್ತಾ ಅದಕ್ಕೆ ಪೂರಕವಾಗಿ ವಚನ ಬರೆಯುತ್ತಾ. ಜನರಿಗೆ ತಿಳುಸುತ್ತಾ ಹೋದ ಸಾಧಕರು ಇವರು. ಇಂತಹ ವಚನಗಳನ್ನು, ಶರಣರ ತತ್ವಗಳನ್ನು ಮುಂದಿನ ಪೀಳಿಗೆಗೆ ತಲುಪಿಸುವ ವ್ಯವಸ್ಥೆಯನ್ನು ನಾವು ಮಾಡಬೇಕು.ತುಳಿತಕ್ಕೊಳಗಾದ ಸಮಾಜದ ಏಳ್ಗೆಗೆ ಶ್ರಮಿಸಿದವರು, ಸಮಾಜದಲ್ಲಿನ ಅಂಕು ಡೊಂಕು ತಿದ್ದಿದವರು, ಕಾಯಕವೇ ಶ್ರೇಷ್ಠ ಎಂದು ಸಾರಿದವರು ಕಾಯಕ ಶರಣರು. ಕಾಯಕದ ಮೂಲಕ ಸಮಾಜಕ್ಕೆ ಶಕ್ತಿ ತುಂಬಿದವರು. ಜಾತಿ, ಮತ ಮೀರಿ ಮುಂದೆ ಸಾಗಬೇಕೆಂದು ತಿಳಿಸಿದ ಐದು ಕಾಯಕ ಶರಣರ ಜಯಂತಿ ಅರ್ಥಪೂರ್ಣ ವಾಗಲಿ ಎಂದು ಹಾರೈಸಿದ ಅವರು ಮುಂದಿನ ದಿನಗಳಲ್ಲಿ ಜಯಂತಿಗೆ ಹೆಚ್ಚಿನ ಜನರು ಪಾಲ್ಗೊಳ್ಳುತ್ತಾರೆಂಬ ನಂಬಿಕೆ ಇದೆ ಎಂದರು.

ಶಿಕಾರಿಪುರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕರಾದ ಡಾ.ಸೋಮಶೇಖರ್ ಹೆಚ್.ಶಿಮೊಗ್ಗಿ ವಿಶೇಷ ಉಪನ್ಯಾಸ ನೀಡಿ ಮಾತನಾಡಿ, ಮಾದಾರ ಚೆನ್ನಯ್ಯ, ಮಾದಾರ ದೂಳಯ್ಯ, ಡೋಹರ ಕಕ್ಕಯ್ಯ, ಸಮಗಾರ ಹರಳಯ್ಯ, ಉರಿಲಿಂಗ ಪೆದ್ದಿ, ಗುಡ್ಡಯ್ಯ ಇನ್ನೂ ಮುಂತಾದ ಶರಣರು ತಳ ಸಮುದಾಯದ ಪ್ರತಿನಿಧಿಗಳು. ವಿವಿಧ ವರ್ಗಗಳಿಂದ ಬಂದ ಇವರು ವಿವಿಧ ಕಾಯಕದಲ್ಲಿ ನಿಷ್ಟರಾಗಿ ದುಡಿಯುತ್ತಾ, ಕಾಯಕದ ಮೂಲಕ, ತಮ್ಮ ವಚನಗಳ ಮೂಲಕ ಸಮಾಜದಲ್ಲಿನ ಅಸಮಾನತೆ ಹೋಗಲಾಡಿಸಲು ಪ್ರಯತ್ನಿಸಿದವರು.

12 ನೇ ಶತಮಾನ ಸಾಂಸ್ಕೃತಿಕ ಮತ್ತು ಸಾಹಿತ್ಯ ಕ್ಷೇತ್ರದಲ್ಲಿ ಬದಲಾವಣೆ ಮತ್ತು ಹೋರಾಟದ ಮಹತ್ವವನ್ನು ತೋರಿದ ಸಮಯವಾಗಿದೆ. ಅಸಮಾನತೆ ತೊಡೆಯುವ ಚಳವಳಿಯಾಗಿತ್ತು. ಇಂದಿನ ಯುವಜನತೆಗೆ ಚಳವಳಿ ಮತ್ತು ಹೋರಾಟ ಎಂದರೇನು ಎಂದು ಅರ್ಥವಾಗಬೇಕು. ತಿಳುವಳಿಕೆ ಮೂಡಬೇಕಿದೆ. ಬಹುತೇಕ ಎಲ್ಲ ವಚನಗಳಲ್ಲಿ ನಾವು ಬಹಳ ಮುಖ್ಯವಾಗಿ ಹಸಿವು, ಬಡತನ ಮತ್ತು ಆಧ್ಯಾತ್ಮಿಕ ಪರಿವರ್ತನೆಯನ್ನು ಕಾಣಬಹುದು. ಅನ್ನದ ಬಗ್ಗೆ ಅಂದಿನ ವಚನಗಳಾದಿಯಾಗಿ ಪ್ರಸುತದಲ್ಲಿ ಬೇಂದ್ರೆಯವರು ಅನ್ನ ದೇವರ ಬಗ್ಗೆ ಪ್ರಸ್ತಾಪ ಮಾಡಿದ್ದಾರೆ. ಅನ್ನ ಜಗತ್ತಿನ ಪ್ರಾಣ ಎಂದಿದ್ದಾರೆ.

S.N. Chennabasappa ವಚನ ಸಾಹಿತ್ಯ ನಮ್ಮ ಸಮಾಜಕ್ಕೆ ಒಂದು ವಿಶೇಷ ಕೊಡುಗೆಯಾಗಿದೆ. ಸ್ಥಾವರ ಸಂಸ್ಕೃತಿಯನ್ನು ಅಂದಿನ ಬಸವಾದಿ ಶರಣರು ವಿರೋಧಿಸಿದ್ದರು. ಅದನ್ನು ಇಂದು ವಿಜೃಂಭಿಸಲಾಗುತ್ತಿದೆ. ಅದರರ್ಥ ವಚನಗಳನ್ನು ಇನ್ನೂ ಅರ್ಥ ಮಾಡಿಕೊಂಡಿಲ್ಲವೆಂದು ತೋರುತ್ತದೆ. ಹಿಂದೆ ದಲಿತ ವಚನಕಾರರಗಿಂತ ಹಿಂದುಳಿದ ವಚನಕಾರರು ಮತ್ತು ದಲಿತ ವಚನಗಾರ್ತಿಯರು ಹೆಚ್ಚು ಪರಿಣಾಮಕಾರಿಯಾಗಿ ಸಮಾಜದ ಅಂಕುಡೊಂಕುಗಳನ್ನು ಪ್ರಶ್ನಿಸಿರುವುದು ಗೋಚರಿಸುತ್ತದೆ. ತಳ ಸಮುದಾಯದ ಕಾಳವ್ವೆ, ಸತ್ಯಕ್ಕ ಭಿನ್ನವಾದ ಸ್ವರ ಎತ್ತಿದವರು ಎಂದರು.

ದಲಿತ, ಹಿಂದುಳಿದ ಸಮುದಾಯದ ವಚನಕಾರರು ಎತ್ತಿದ ಪ್ರಶ್ನೆಗಳು ಚರ್ಚೆಗೆ ಒಳಪಡಬೇಕಿದೆ. ಜಾತಿಯ ಅಸಮಾನತೆಯನ್ನು ತೊಡೆದು ಹಾಕುವ ಕೆಲಸ ಮಾಡಿದ ವಚನ ಸಾಹಿತ್ಯ ಮತ್ತು ತಳ ಸಮುದಾಯದ ಶರಣರ ವಚನಗಳನ್ನು ಮರು ಓದಿಗೆ ಒಳಪಡಿಸಬೇಕಿದೆ ಎಂದರು.
ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಟಾನ ಪ್ರಾಧಿಕಾರದ ಅಧ್ಯಕ್ಷರಾದ ಚಂದ್ರಭೂಪಾಲ್ ಮಾತನಾಡಿ, ಕಾಯಕಕ್ಕೆ ಯಾವುದೇ, ಜಾತಿ ಧರ್ಮ ಇಲ್ಲ. ಮನಃಪೂರ್ತಿಯಾಗಿ, ಜೀವನದ ಅಭಿವೃದ್ಧಿಗಾಗಿ ಮಾಡುವುದೇ ಕಾಯಕ. ಕಾಯಕಕ್ಕೆ ನಿಷ್ಟರಾಗಿರಬೇಕು, ದುಡಿದು ತಿನ್ನಬೇಕೆಂದು ಸಾರಿದವರು ಕಾಯಕ ಶರಣರು. ಸಮಾಜದಲ್ಲಿ ಶ್ರಮಜೀವಿಗಳಿಗೆ ನ್ಯಾಯ ಒದಗಿಸುವ ಕೆಲಸ ಆಗಬೇಕು. ಶ್ರಮಜೀವಿಗಳ ಅಭಿವೃದ್ಧಿ ಯಿಂದ ದೇಶದ ಅಭಿವೃದ್ಧಿಯಾಗುತ್ತದೆ ಎಂದರು.

ಎಸಿ ಸತ್ಯನಾರಾಯಣ ಮಾತನಾಡಿ, ಕಾಯಕ ಶರಣರ ತತ್ವಾದರ್ಶಗಳನ್ನು ಅಳವಡಿಸಿಕೊಂಡು ಸಮಾಜದ ಏಳ್ಗೆಯಲ್ಲಿ ಪಾಲ್ಗೊಳ್ಳೋಣ ಎಂದರು.
ಸಮಗಾರ ಸಮಾಜದ ಕೆ.ಎನ್ ಅಶೋಕಕುಮಾರ್ ಹರಳಯ್ಯನವರ ಕುರಿತು ಮಾತನಾಡಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಹೆಚ್.ಉಮೇಶ್ ಸ್ವಾಗತಿಸಿದರು.

ಕಾರ್ಯಕ್ರಮದಲ್ಲಿ ವಿವಿಧ ಸಮಾಜದ ಮುಖಂಡರು, ಅಧಿಕಾರಿಗಳು ಪಾಲ್ಗೊಂಡಿದ್ದರು.

B.Y. Raghavendra ದೇಶೀಯ ಆರ್ಥಿಕತೆಗೆ ಹಣಕಾಸು ಸಂಸ್ಥೆಗಳ ಪಾತ್ರ ಬಹಳ ಮುಖ್ಯ- ಬಿ.ವೈ.ರಾಘವೇಂದ್ರ

0

B.Y. Raghavendra ಜಾಗತಿಕವಾಗಿ ಆರ್ಥಿಕ ಶಕ್ತಿಯಾಗಿ ಭಾರತ 3ನೇ ಸ್ಥಾನಕ್ಕೆ ಬರಲು ಹಣಕಾಸು ಸಂಸ್ಥೆಗಳ ಪಾತ್ರ ಮಹತ್ವದ್ದಾಗಿದೆ ಎಂದು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಹೇಳಿದರು.

ಸಹ್ಯಾದ್ರಿ ಚಿಟ್ಸ್ ನ ನೂತನ ಕಚೇರಿ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿ, ಭಾರತವು ಮೂರನೇ ಆರ್ಥಿಕ ಶಕ್ತಿಯಾಗಿ ಬೆಳೆಯಲು ಪ್ರಧಾನ ಮಂತ್ರಿ ಮೋದಿಯವರು ಮಾಡುತ್ತಿರುವ ಪ್ರಯತ್ನಕ್ಕೆ ಚಿಕ್ಕ ಚಿಕ್ಕ ಹಣಕಾಸು ಸಂಸ್ಥೆಗಳು ಬಹು ಮುಖ್ಯಪಾತ್ರ ವಹಿಸುತ್ತವೆ ಎಂದು ತಿಳಿಸಿದರು.

ಜನಸಾಮಾನ್ಯರ ಅಗತ್ಯಕ್ಕೆ ಸ್ಪಂದಿಸುತ್ತಿರುವ ಚಿಟ್ ಫಂಡ್ ಕಂಪನಿಗಳು ಅತಿ ಮುಖ್ಯ. ಸಹ್ಯಾದ್ರಿ ಚಿಟ್ಸ್ ಸಂಸ್ಥೆಯು 27 ವರ್ಷಗಳಿಂದ ಶಿವಮೊಗ್ಗದಲ್ಲಿ ನೀಡುತ್ತಿರುವ ಸೇವೆ ಶ್ಲಾಘನೀಯ. 27 ವರ್ಷಗಳು ಸೇವೆ ನೀಡಲು ಜನರೊಂದಿಗೆ ಅವರ ಬಾಂಧವ್ಯ ಹಾಗೂ ಗಳಿಸಿರುವ ನಂಬಿಕೆಯು ಬಹಳ ಮುಖ್ಯವಾಗುತ್ತದೆ. ಈಗ ವಾರ್ಷಿಕ 80 ಕೋಟಿ ರೂ. ವಹಿವಾಟು ಹೊಂದಿರುವ ಸಂಸ್ಥೆಯು ಮುಂದೆ ನೂರಾರು ಜನಕ್ಕೆ ಉದ್ಯೋಗ ನೀಡಿ 500 ಕೋಟಿ ರೂ. ವಹಿವಾಟು ನಡೆಸಲಿ ಎಂದು ಆಶಿಸಿದರು.

ಸಿನಿಮಾ ನಟ ದಿಗಂತ ಮಾತನಾಡಿ, ನನಗೆ ಮಲೆನಾಡು ಪ್ರದೇಶ ತುಂಬಾ ಇಷ್ಟ. ಇಲ್ಲಿಗೆ ಬಂದಿರುವುದು ತುಂಬಾ ಸಂತೋಷವಾಗಿದೆ. ಸಹ್ಯಾದ್ರಿ ಸಂಸ್ಥೆಯು 27 ವರ್ಷಗಳಿಂದ ನೀಡುತ್ತಿರುವ ಸೇವೆಯು ನೂರಾರು ವರ್ಷ ಮುನ್ನಡೆಯಲಿ ಎಂದು ಶುಭಹಾರೈಸಿದರು. ಸಂಸ್ಥೆಯ. ಮ್ಯಾನೇಜಿಂಗ್ ಡೈರೆಕ್ಟರ್ ರಮೇಶ್ ಭಟ್ ಪ್ರಾಸ್ತಾವಿಕವಾಗಿ ಮಾತನಾಡಿ ಸಂಸ್ಥೆ ನಡೆದು ಬಂದ ದಾರಿಯ ಬಗ್ಗೆ ಸವಿಸ್ತಾರವಾಗಿ ವಿವರಿಸಿದರು.

ಶಾಸಕ ಎಸ್.ಎನ್.ಚನ್ನಬಸಪ್ಪ ಮಾತನಾಡಿ, ಸಂಸ್ಥೆಯ ಚಂದದಾರರಲ್ಲಿ ನಾನು ಕೂಡ ಒಬ್ಬ. ನನಗೂ ತುರ್ತು ಸಮಯದಲ್ಲಿ ಹಣ ದೊರೆತು ತುಂಬಾ ಅನುಕೂಲ ಆಗಿದೆ. ಇದೇ ರೀತಿ ಸಾಮಾನ್ಯ ಜನರೆಲ್ಲರೂ ಇದರ ಸದುಪಯೋಗ ಪಡೆದುಕೊಳ್ಳಬೇಕು, ನಂಬಿಕೆಗೆ ಅರ್ಹವಾಗಿರುವ ಇಂತಹ ಕಂಪನಿಗಳು ಇನ್ನಷ್ಟು ಬೆಳೆಯಬೇಕು ಎಂದು ಹಾರೈಸಿದರು.

B.Y. Raghavendra ನಟ ದಿಗಂತ್ ಅವರಿಂದ ನೂತನವಾಗಿ ಆರಂಭಗೊಂಡ ಒಂದು ಕೋಟಿ ರೂ. ಚೀಟಿಯ ಮೊದಲ ಅದೃಷ್ಟವಂತರ ಆಯ್ಕೆ ಮಾಡಲಾಯಿತು. ಸಂಸ್ಥೆಯ ಚೇರ್ಮನ್ ಬದ್ರಿನಾಥ್ ಅಧ್ಯಕ್ಷೀಯ ನುಡಿಗಳನ್ನಾಡಿ ಸಹಕರಿಸಿದ ಎಲ್ಲರಿಗೂ ಧನ್ಯವಾದಗಳನ್ನು ಅರ್ಪಿಸಿದರು.

ಸಂಸ್ಥೆ ನಿರ್ದೇಶಕ ಜಿ.ವಿಜಯಕುಮಾರ್ ಸ್ವಾಗತಿಸಿದರು. ರವೀಂದ್ರನಾಥ್ ಐತಾಳ್ ವಂದನಾರ್ಪಣೆ ನಡೆಸಿಕೊಟ್ಟರು. ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ ಬಿ.ಗೋಪಿನಾಥ್, ಕಾಂಗ್ರೆಸ್ ಮುಖಂಡ ಎಚ್.ಸಿ.ಯೋಗೀಶ್, ಉದ್ಯಮಿ ಅಶ್ವತ್ ನಾರಾಯಣ ಶೆಟ್ಟಿ, ಸಂಸ್ಥೆಯ ಮೂಲ ಸಂಸ್ಥಾಪಕ ಡಿ.ಎಲ್.ನಟರಾಜ್, ಮಾರ್ಕೆಟಿಂಗ್ ಡೈರೆಕ್ಟರ್ ಶಿವರಾಜ್ ಉಡುಗಣಿ, ಟಿ.ಎಸ್‌. ಬದರೀನಾಥ್‌, ರಮೇಶ್‌ ಎಂ.ಭಟ್‌, ಸಂಸ್ಥೆಯ ಎಲ್ಲಾ ನಿರ್ದೇಶಕರು ಸಿಬ್ಬಂದಿ ವರ್ಗ ಹಾಜರಿದ್ದರು.

klive Special Article ಆಲ್ ಟೈಮ್ ಫೇವರಿಟ್‌ ಹಾಡುಗಳ‌ನ್ನ ಗುನುಗುವಂತೆ ಮಾಡಿದ “ಬೆಳ್ಳಿಮೋಡದಂಚಿನ ಬಂಗಾರದ ಹಾಡು”

0

klive Special Article ಅಭಿರುಚಿಯ ರುಚಿಯೇ ಹಾಗೆ…. ವಿಭಿನ್ನವಾದ ಸಂಗತಿಗಳು, ಸಾಹಿತ್ಯ ಲೋಕದ ಅದ್ಭುತವಾದ ವಿಚಾರಗಳಲ್ಲಿ ಒಂದಾದ ಶ್ರೀ ಶ್ರೀಧರ ಭಗವಾನರ ದತ್ತರಾಜಸ್ತವವನ್ನು ನಮ್ಮೆದುರಿಗೆ ಮಹಾಮಹೋಪಾಧ್ಯಾಯ ಡಾ. ಎಸ್ ರಂಗನಾಥ್ ಅವರ ವಿದ್ವತ್ ಪೂರ್ಣ ನುಡಿಗಳಲ್ಲಿ ಕಳೆದ ಒಂದು ವಾರದಿಂದ ಕೇಳುವಂತೆ ಮಾಡಿದ್ದು ಒಂದೆಡೆಯಾದರೆ…ಮತ್ತೊಂದೆಡೆ ಸಂಗೀತ ಸುಧೆ ಹರಿಸಿ ಮನತಣಿಯುವಂತೆ ಮಾಡಿದುದು.
ನಿಜ…. ಮನಕ್ಕೆ ಮುದ ನೀಡುವ ವಿಷಯಗಳಲ್ಲಿ ಸಂಗೀತಕ್ಕೆ ಮೊದಲನೆಯ ಸ್ಥಾನ. ಅವು ಭಕ್ತಿ, ಭಾವ, ಚಿತ್ರ ಯಾವ ಗೀತೆಯಾದರೂ ಸರಿ ಎಲ್ಲವೂ ಅಮೃತದ ಸುಧೆ ಹರಿಸಿದಂತೆಯೇ…. ಇಷ್ಟೆಲ್ಲಾ ಬರೆಯಲು ಕಾರಣ ಏನೆಂದರೆ ಯಾವಾಗಲೂ ಕಾರ್ಯಕ್ರಮ ನೋಡಿದ ತಕ್ಷಣ ಕಲಾವಿದರನ್ನು ಮಾತಾಡಿಸಿ ಮನದ ಸಂತೋಷವನ್ನು ಅವರಲ್ಲಿಯೂ ವ್ಯಕ್ತಪಡಿಸಿ ಬರುತ್ತಿದ್ದ ನಾನು ಕಾರ್ಯದೊತ್ತಡದಿಂದ ನಿನ್ನೆ ರಂಗಮಂದಿರದಿಂದ ಹಾಗೇ ಬಂದುಬಿಟ್ಟೆ… ಆದರೆ ಮನಸು ಮಾತ್ರ ಕಾರ್ಯಕ್ರಮದ ಹಾಡುಗಳೇ ಗುನುಗುವಂತೆ ಮಾಡಿದ್ದವು. ನಿಜಕ್ಕೂ ಮನಸೊಂದು ಭಾವನಾ ಲೋಕದಲ್ಲಿ ವಿಹರಿಸುವಂತೆ ಮಾಡಿತ್ತು.
ಕಾರ್ಯಕ್ರಮಕ್ಕೆ ಕಳೆಗಟ್ಟುವಂತೆ ಮಾಡಿದ್ದು ನಿಜಕ್ಕೂ ಆಯೋಜಕರೇ. ಏಕೆಂದರೆ ಯಾವುದೇ ಸಭಾಕಾರ್ಯಕ್ರಮಗಳಿಲ್ಲದೇ ನೇರವಾಗಿ ಸಂಗೀತ ಸುಧೆ ಹರಿಯುವಂತೆ ಮಾಡಿದ್ದು ಒಂದು ಕಾರಣವಾದರೆ ಮತ್ತೊಂದು ಅವರು ಆಯ್ಕೆ ಮಾಡಿಕೊಂಡ ವಿಷಯ ” ಬೆಳ್ಳಿಮೋಡದ ಬಂಗಾರದ ಹಾಡು “. ಅವುಗಳೆಂದರೆ ಕಾದಂಬರಿ ಆಧಾರಿತ ಹಾಗೂ ಮಹಿಳಾ ಪ್ರಧಾನ ಚಿತ್ರಗಳನ್ನು ಮಾಡಿ ಚಿತ್ರಬ್ರಹ್ಮನೆಂದೇ ಖ್ಯಾತಿಯಾದ ಪುಟ್ಟಣ್ಣ ಕಣಗಾಲ್ ಹಿಟ್ಸ್. ಇದಕ್ಕೆ ಸಾರಥ್ಯ ಖ್ಯಾತ ಸಂಗೀತ ಕಲಾವಿದ ಹಾಗೂ ಶಿವಮೊಗ್ಗದ ಹೆಮ್ಮೆಯ ಪ್ರತಿಭೆ ಶ್ರೀ ದೀಪಕ್ ಜಯಶೀಲನ್ ಅವರದಾಗಿತ್ತು. ಇನ್ನೂ ಹಾಡುಗಾರರಂತೂ ಶ್ರೀಮತಿ ಸುರೇಖಾ ಹೆಗಡೆ, ಶ್ರೀಮತಿ ಶ್ರುತಿ ರಾಘವೇಂದ್ರನ್, ಶ್ರೀ ಮನೋಜವಂ ಆತ್ರೇಯ ಹಾಗೂ ಶ್ರೀ ಪಾರ್ಥ ಚಿರಂತನ್ ನಮಗೆಲ್ಲಾ ಜೇನಸುಧೆ ಹರಿಸಿದವರೇ ಆದರು. ಇವರೆಲ್ಲರ ಹಾಡಿಗೆ ನವಿರಾದಂತಹ ನಿರೂಪಣೆ ಮಾಡಿ ಆ ಹಾಡಿನ ಒಟ್ಟು ಜೀವಾಳವನ್ನು ಪರಿಚಯಿಸುವಂತೆ ಮಾಡಿದ್ದು ನಮ್ಮ ವಿನಯಣ್ಣ. ನಿರ್ದೇಶಕರ ಪರಿಚಯ ಮಾಡಿಸುತ್ತಲೇ, ಹಾಡಿನ ಸೂಕ್ಷ್ಮತೆ, ಗಮನಿಸಬೇಕಾದ ಅಂಶಗಳು, ಆಗಿನ ಹೆಮ್ಮೆ, ಯಾವ ಕಾರಣಕ್ಕಾಗಿ ಆ ಹಾಡು ಶ್ರೇಷ್ಠ, ಅದರ ಅಂತರಂಗ ಎಲ್ಲವನ್ನೂ ಸವಿಸ್ತಾರವಾಗಿ ತಮ್ಮ ಪ್ರೌಢ ಚಿಂತನೆಯ ಸಾಹಿತ್ಯದ ಪರಿಭಾಷೆಯಲ್ಲಿ ಹೆಚ್ಚು ಅಲ್ಲದ ಕಡಿಮೆಯೂ ಎನಿಸದ ರೀತಿಯಲ್ಲಿ ಹಾಡಿನ ಜೀವಾಳವನ್ನು ಅದ್ಭುತವಾಗಿ ನಮಗೆ ಕಟ್ಟಿಕೊಟ್ಟಿದ್ದು ವಿನಯಣ್ಣನ ಹೆಚ್ಚುಗಾರಿಕೆಯೇ ಸರಿ. ವಿನಯ್ ಶಿವಮೊಗ್ಗ, ನಿಜಕ್ಕೂ ಮನೋಜವಂ ಹೇಳಿದಂತೆ ಅವರು ದಾರದಂತೆ ಕೆಲಸ ಮಾಡಿದ್ದಾರೆ. ಹೂ ಪೋಣಿಸಿದ ದಾರ ಮೇಲ್ನೋಟಕ್ಕೆ ಕಾಣಿಸದೇ ಹೋದರೂ ಹಾರಕ್ಕೆ ದಾರವೆಂಬಂತೆ ಸರಿಯಾದ ಸೂತ್ರಧಾರರಾಗಿ ಎಲ್ಲರ ಮೆಚ್ಚುಗೆಗೆ ಪಾತ್ರರಾದರು.

klive Special Article ಹಾಡುಗಳಿಗೆ ಸರಿಯಾಗಿ ಸಾಥ್ ನೀಡಿದವರು ಒಂದೆಡೆಯಾದರೆ ಅದರ ಇಂಪನ್ನು ಸರಿಯಾಗಿ ಜನರಿಗೆ ಮುಟ್ಟಿಸುವಲ್ಲಿ ಸೌಂಡ್ ಸಿಸ್ಟಮ್ ಎಫೆಕ್ಟ್ ಬಹುಮುಖ್ಯ. ಆ ತಂತ್ರಜ್ಞಾನ ಚೆನ್ನಾಗಿ ಅರಿತು ಅಚ್ಚುಕಟ್ಟಾಗಿ ನಿರ್ವಹಿಸಿದ್ದು ಚಿನ್ನು ಸೌಂಡ್ ಸಿಸ್ಟಮ್ ನ ದರ್ಶನ್. ಏಕೆಂದರೆ ಇಂಪಾಗಿ ಹಾಡಿದ್ದನ್ನು ಆ ಸ್ವರಗಳ ಏರಿಳಿತ ಎಲ್ಲವೂ ಅಷ್ಟೇ ನಿಖರವಾಗಿ ಕೇಳುಗರ ಕಿವಿ ತಲುಪಿತು. ಇಲ್ಲಿ ಇನ್ನೊಂದು ಮಾತು ಹೇಳಲೇಬೇಕು. ಹಾಡು ಹೇಳುವಾಗ ಹಾಡಿನ ಕೊಂಚ ತುಣುಕು ತೋರಿಸಿ ಉಳಿದಂತೆ ಸಾಹಿತ್ಯ ರಚನಕಾರರು, ಸಂಗೀತ ನಿರ್ದೇಶಕರು, ಹಾಡಿದ ಹಿನ್ನಲೆ ಗಾಯಕರ ಫೋಟೋಗಳನ್ನ LED ವಾಲ್ ನಲ್ಲಿ ತೋರಿಸಿ ಅನೇಕರಿಗೆ ಕಣಗಾಲ್ ಪ್ರಭಾಕರ್ ಶಾಸ್ತ್ರಿಯಂತವರ ದರ್ಶನ ಮಾಡಿಸುವಲ್ಲಿ ಯಶಸ್ವಿಯಾದರು.

ಬರೆಯಲೇ ಬೇಕಾದ ಪ್ರಮುಖ ವಿಷಯವೆಂದರೆ ಆಯ್ಕೆ ಮಾಡಿಕೊಂಡ ಹಾಡುಗಳು. ನನ್ನ ಆಲ್ ಟೈಮ್ ಫೇವರಿಟ್ ಹಾಡಾದ ಗೆಳತೀ ಓ ಗೆಳತೀ.., ಕವಿ ಕಂಡ ಕಾವ್ಯಗಳಂತೆ ಇರುವ ವರಕವಿಯ ಮೂಡಲ ಮನೆಯ ಮುತ್ತಿನ ನೀರಿನ… ಗಗನವು ಎಲ್ಲೋ ಭೂಮಿಯು ಎಲ್ಲೋ, ಹದಿನಾಲ್ಕು ವರ್ಷ ವನವಾಸದಿಂದ…. ನಾಗರಹಾವಿನ ಹಾವಿನ ದ್ವೇಷ ಹನ್ನೆರಡು ವರುಷ, ಈ ಸಂಭಾಷಣೆ ನಮ್ಮ ಈ ಪ್ರೇಮ ಸಂಭಾಷಣೆ, ನೀನೇ ಸಾಕಿದಾ ಗಿಣಿ, ವಿರಹಿಗಳ ಧ್ಯೇಯಗೀತೆಯಾದ ಅಥವಾ ಮನದಾಳದ ಮಾತಿನಂತಾದ ವಿರಹ ನೋವು ನೂರು ತರಹ…. ಮನಸಿನ ಅಭಿರುಚಿಯನ್ನು ಉದ್ದೀಪನಗೊಳಿಸಿ ಪ್ರೇರೇಪಣೆ ಕೊಡುವ ಹಾಡಾದ ಪಂಚಮ ವೇದ ಪ್ರೇಮದ ನಾದವೇ ಮೊದಲಾದ ಹಾಡುಗಳು ಒಂದಾದ ಮೇಲೊಂದು ಸಂಗೀತ ರಸಿಕರನ್ನು ತಮ್ಮ ಕಳೆದ ಬಾಲ್ಯ, ಯೌವನದ ದಿನಗಳಿಗೆ ಕೊಂಡೋಯ್ದದ್ದಂತೂ ನಿಜ. ಈ ಸಂಗೀತ ಸುಧೆ ಹರಿಸಲು ಕಾರಣೀಭೂತರಾದ ಆಯೋಜಕ, ಪ್ರಾಯೋಜಕರೆಲ್ಲರಿಗೂ ಎಲ್ಲ ಸಂಗೀತಾಸಕ್ತ ರಸಿಕ ಮನಸುಗಳ ಪರವಾಗಿ ಅನಂತಾನಂತ ಧನ್ಯವಾದಗಳು.

ಡಾ. ಮೈತ್ರೇಯಿ ಆದಿತ್ಯ ಪ್ರಸಾದ್
ಉಪನ್ಯಾಸಕರು ಪೇಸ್ ಕಾಲೇಜ್
ಶಿವಮೊಗ್ಗ
ಚಿತ್ರಕೃಪೆ : ಆದಿತ್ಯಪ್ರಸಾದ್ ಎಂ.

Delhi Assembly Elections ಹತ್ತರಲ್ಲಿ ಹನ್ನೊಂದಾದ “ಆಮ್ ಆದ್ಮಿ”. ಬಿಜೆಪಿಗೆ ಜಯ‌ ಸುಗಮವಾಗಿಸಿದ ಕಾಂಗ್ರೆಸ್

0

Delhi Assembly Elections ರಾಷ್ಟ್ರ ರಾಜಧಾನಿ ದೆಹಲಿ ವಿಧಾನಸಭೆ ಚುನಾವಣೆ ಫಲಿತಾಂಶ ಬಂದಿದ್ದು, 27 ವರ್ಷಗಳ ನಂತರ ಬಿಜೆಪಿ ಭರ್ಜರಿ ಗೆಲುವು ಪಡೆದಿದೆ. ಸರ್ಕಾರ ರಚನೆಗೆ ಬೇಕಾದ ಸಿದ್ಧತೆಗಳು ಆರಂಭವಾಗಿವೆ ಎನ್ನಲಾಗುತ್ತಿದೆ.

ವಿಧಾನಸಭೆ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ (ಎಎಪಿ) ಹೀನಾಯ ಸೋಲನುಭವಿಸಿದ ಒಂದು ದಿನದ ನಂತರ ದೆಹಲಿ ಮುಖ್ಯಮಂತ್ರಿ ಅತಿಶಿ ಭಾನುವಾರ ಲೆಫ್ಟಿನೆಂಟ್ ಗವರ್ನರ್ ವಿಕೆ ಸಕ್ಸೇನಾ ಅವರಿಗೆ ರಾಜೀನಾಮೆ ನೀಡಿದ್ದಾರೆ.

ಬರೋಬ್ಬರಿ 26 ವರ್ಷಗಳ ನಂತರ ದೆಹಲಿಯಲ್ಲಿ ಬಿಜೆಪಿ ಅಧಿಕಾರಕ್ಕೆ ಮರಳಿದೆ. 70 ವಿಧಾನಸಭಾ ಕ್ಷೇತ್ರಗಳ ಪೈಕಿ 48 ಕ್ಷೇತ್ರಗಳಲ್ಲಿ ಬಿಜೆಪಿ ಅಭೂತಪೂರ್ವ ಗೆಲುವು ಸಾಧಿಸಿದೆ.

ಫೆಬ್ರುವರಿ 5 ರಂದು ನಡೆದ ಚುನಾವಣೆಯಲ್ಲಿ ಎಎಪಿ 22 ಸ್ಥಾನಗಳನ್ನು ಗೆದ್ದರೆ, ಕಾಂಗ್ರೆಸ್ ಶೂನ್ಯಕ್ಕೆ ತೃಪ್ತಿಪಟ್ಟುಕೊಂಡಿದೆ.

ವಿಧಾನಸಭಾ ಚುನಾವಣೆ ಫಲಿತಾಂಶದಲ್ಲಿ ಎಎಪಿ ಪರಿಷ್ಠ ಅರವಿಂದ ಕೇಜ್ರಿವಾಲ್ ಅವರಿಗೆ ಭಾರಿ ಮುಖಭಂಗವಾಗಿದೆ.
ಅರವಿಂದ ಕೇಜ್ರಿವಾಲ್ ಅವರಿಗೆ ನವದೆಹಲಿ ಕ್ಷೇತ್ರದಲ್ಲಿ ಬಿಜೆಪಿಯ ಪರ್ವೇಶ್ ವರ್ಮಾ ವಿರುದ್ಧ ಸೋಲಾಗಿದೆ.

Delhi Assembly Elections ಚುನಾವಣಾ ಆಯೋಗದ ವೆಬ್ಸೈಟ್ನಲ್ಲಿ ದೊರೆತ ಮಾಹಿತಿ ಪ್ರಕಾರ, ಬಿಜೆಪಿ ಅಭ್ಯರ್ಥಿ ಪರ್ವೇಶ್ ವರ್ಮಾ 30,088 ಮತಗಳನ್ನು ಪಡೆದರೆ, ಕೇಜ್ರಿವಾಲ್ ಪರ 25,999 ಮತಗಳು ಚಲಾವಣೆಯಾಗಿವೆ. ಕಾಂಗ್ರೆಸ್ ಅಭ್ಯರ್ಥಿ ಸಂದೀಪ್ ದೀಕ್ಷಿತ್ 4,568 ಮತಗಳನ್ನು ಪಡೆದಿದ್ದಾರೆ. ಕೇಜ್ರಿವಾಲ್ ಅವರಿಗೆ 4,089 ಮತಗಳ ಅಂತರದ ಸೋಲಾಗಿದೆ. ಅಣ್ಣ ಹಜಾರೆ ಅವರ ಗೈರು ಹಾಜರಿ ಕೂಡ ಆಪ್ ಗೆ ಸೋಲುಂಟಾಗಲು ಬಲವಾದ ಕಾರಣವಾಗಿದೆ. ಪ್ರಮುಖವಾಗಿ ಅಣ್ಣಾ ಹಜಾರೆ ಅವರು ಆರಂಭದಲ್ಲೇ ಕೇಜ್ರಿವಾಲ್ ಅವರಿಗೆ ಅಬಕಾರಿ ಮತ್ತು ಮುಂತಾದ ವಿಷಯಗಳ ಬಗ್ಗೆ ಕೈಗೆತ್ತಿಕೊಳ್ಳದಿರಲು ಎಚ್ಚರಿಕೆ ನೀಡಿದ್ದರು. ಆದರೆ ಅವರ ಮಾತನ್ನು ಲೆಕ್ಕಿಸದೆ ಕೇಜ್ರಿವಾಲ್ ಅವರು ತಾವೇ ಸೃಷ್ಟಿಸಿದ ಭ್ರಷ್ಟಾಚಾರದ ಬಲೆಯೊಳಗೆ ಸಿಕ್ಕು ಅಧಿಕಾರ ಕಳೆದುಕೊಂಡರು. ಕಾಂಗ್ರೆಸ್ ಕೇವಲ ಗ್ಯಾರಂಟಿಗಳ ಮೇಲೆಯೇ ಚುನಾವಣೆಯನ್ನು ಎದುರಿಸಿತು. ಆದರೆ ಅದು ಹಿಮಾಚಯ ಪ್ರದೇಶ ಮತ್ತು ಕರ್ನಾಟಕ ರಾಜ್ಯದಲ್ಲಿನ ಗ್ಯಾರೆಂಟಿ ಯೋಜನೆಗಳ ಕುಂಟುವಿಕೆ ಪ್ರಸ್ತುತ ದೆಹಲಿ ಪ್ರತಿಕೂಲವಾಗಿ ಪರಿಣಮಿಸಿತು.

JCI Shivamogga ಸಮಾಜಮುಖಿ ಚಟುವಟಿಕೆಗಳಲ್ಲಿ ಜೆಸಿಐ ಘಟಕಗಳು ಸಂಘಟನಾತ್ಮಕ ಪಾತ್ರ- ಜಿ.ಗಣೇಶ್

0

JCI Shivamogga ಸಮಾಜಮುಖಿ ಕಾರ್ಯಗಳಲ್ಲಿ ಜೆಸಿಐ ಘಟಕಗಳು ಸಂಘಟನಾತ್ಮಕವಾಗಿ ಕೆಲಸ ಮಾಡಲಿವೆ ಎಂದು ಜೆಸಿಐ ಶಿವಮೊಗ್ಗ ಸಹ್ಯಾದ್ರಿ ಘಟಕದ ಅಧ್ಯಕ್ಷ ಜಿ.ಗಣೇಶ್ ಹೇಳಿದರು.

ಶಿವಮೊಗ್ಗ ನಗರದ ಮಥುರಾ ಪ್ಯಾರಾಡೈಸ್ ಸಭಾಂಗಣದಲ್ಲಿ ಜೆಸಿಐ ಶಿವಮೊಗ್ಗ ಸಹ್ಯಾದ್ರಿ ಘಟಕದಿಂದ ಆಯೋಜಿಸಿದ್ದ ಜೆಸಿಐ ಶಿವಮೊಗ್ಗ ಶಕ್ತಿ ಘಟಕದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿ, ಸ್ವಾತಿ ಅವರು 24 ಗಂಟೆಯಲ್ಲಿ ಹೊಸ ಘಟಕ ಮಾಡಿರುವುದು ಶ್ಲಾಘನೀಯ. ಮುಂದಿನ ದಿನಗಳಲ್ಲಿ ಜೆಸಿಐನಿಂದ ಹೆಚ್ಚು ಸಮಾಜಮುಖಿ ಕಾರ್ಯ ನಡೆಸಲು ಒಟ್ಟಾಗಿ ಕಾರ್ಯ ನಿರ್ವಹಿಸೋಣ ಎಂದು ತಿಳಿಸಿದರು.

ಜೆಸಿಐ ವಲಯ-24 ಅಧ್ಯಕ್ಷ ಗೌರೀಶ್ ಭಾರ್ಗವ್ ಮಾತನಾಡಿ, 24 ಗಂಟೆಯಲ್ಲೇ ಹೊಸ ಘಟಕ ಸ್ಥಾಪಿಸಿದ ಸ್ವಾತಿ ಅವರು ಜೆಸಿಐ ಶಿವಮೊಗ್ಗ ಶಕ್ತಿ ಘಟಕಕ್ಕೆ ನಿಜವಾಗಿಯೂ ಶಕ್ತಿಯೇ ಆಗಿದ್ದಾರೆ.

ಶಕ್ತಿಯುತವಾದ ಘಟಕಕ್ಕೆ ಶಕ್ತಿಯುತ ವ್ಯಕ್ತಿ ಅಧ್ಯಕ್ಷರಾಗಿರುವುದು ಸಂತಸ ತಂದಿದೆ. ಅಧಿಕಾರ ವಹಿಸಿಕೊಂಡ ಕೆಲ ಸಮಯದಲ್ಲಿ ಶೇ. 100 ಸದಸ್ಯತ್ವ ಹೆಚ್ಚು ಮಾಡಿದ್ದು, ಶಕ್ತಿ ಬುಲೆಟಿನ್ ರಿಲೀಸ್ ಮಾಡಿರುವುದು, ಜತೆಗೆ ತರಬೇತಿ ಮತ್ತು ಸಾಮಾಜಿಕ ಜಾಗೃತಿ ವಿಚಾರದಲ್ಲಿ ಶಿವಮೊಗ್ಗ ಸಿಬಿಆರ್ ರಾಷ್ಟ್ರೀಯ ಕಾನೂನು ಕಾಲೇಜಿನವರೊಂದಿಗೆ ಎಂಎಯು ಕೂಡ ಮಾಡಿಕೊಳ್ಳುತ್ತಿರುವ ವಿಚಾರ ಅಭಿನಂದನೀಯ ಎಂದು ಅಭಿಪ್ರಾಯಪಟ್ಟರು.

JCI Shivamogga ಜೆಸಿಐ ಶಿವಮೊಗ್ಗ ಶಕ್ತಿ ಘಟಕದ ಅಧ್ಯಕ್ಷೆ ಸ್ವಾತಿ ಎಸ್.ಎಂ ಮಾತನಾಡಿ, ಜೆಸಿಐ ಶಿವಮೊಗ್ಗ ಶಕ್ತಿ ಘಟಕ ನಿರ್ಮಿಸಲು ಎಸ್.ವಿ.ಶಾಸ್ತ್ರಿ ಮತ್ತು ಶ್ಯಾಮಲಾ ಶಾಸ್ತ್ರಿ ಕಾರಣಕರ್ತರು. ಉತ್ತಮ ನಾಯಕನಾಗಿ ಒಂದು ವರ್ಷದ ಅವಧಿ ಜೆಸಿಐ ಶಿವಮೊಗ್ಗ ಶಕ್ತಿ ಘಟಕವನ್ನು ಮುನ್ನಡೆಸುತ್ತೇನೆ. ಎಲ್ಲರ ಸಹಕಾರ, ಮಾರ್ಗದರ್ಶನ ಅವಶ್ಯಕ. ಸಾಮಾಜಿಕ ಕಳಕಳಿಯೊಂದಿಗೆ ಜೆಸಿಐ ಶಿವಮೊಗ್ಗ ಶಕ್ತಿ ಘಟಕ ಕೆಲಸ ಮಾಡಲಿದೆ ಎಂದು ತಿಳಿಸಿದರು.

ಜೆಸಿಐ ಶಿವಮೊಗ್ಗ ಶಕ್ತಿ ಘಟಕ ಉದ್ಘಾಟನೆಗೆ ಡಾ. ಎಸ್.ವಿ.ಶಾಸ್ತ್ರಿ ಮತ್ತು ಶ್ಯಾಮಲಾ ಶಾಸ್ತ್ರಿ ಶುಭಕೋರಿದರು. ಜೆಸಿಐ ವಿವಿಧ ಘಟಕದ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು.

Karnataka Drama Academy ಫೆಬ್ರವರಿ 18. “ಉಡುತಡಿ” ನಾಟಕ.ಪುಸ್ತಕ ಬಿಡುಗಡೆ & ‌ಪ್ರದರ್ಶನ

0

Karnataka Drama Academy ಎರಡು ದಶಕಗಳಿಂದ ಶಿವಮೊಗ್ಗ ರಂಗಭೂಮಿಯಲ್ಲಿ ತಮ್ಮದೇ ಛಾಪು ಮೂಡಿಸಿರುವ, ಹಾಲಿ ಕರ್ನಾಟಕ ನಾಟಕ ಅಕಾಡೆಮಿ ಶಿವಮೊಗ್ಗ ಜಿಲ್ಲಾ ಸಂಚಾಲಕರೂ ಆಗಿರುವ ಡಾ. ಗಣೇಶ ಆರ್ ಕೆಂಚನಾಲ್ ಅವರ ರಚನೆಯ “ಉಡು-ತಡಿ” ನಾಟಕ ಪುಸ್ತಕ ರೂಪದಲ್ಲಿ ಇದೇ ಫೆಬ್ರವರಿ ತಿಂಗಳ 18 ರಂದು ಸಂಜೆ 6:30 ಕ್ಕೆ ಶಿವಮೊಗ್ಗದ ಕುವೆಂಪು ರಂಗಮಂದಿರದಲ್ಲಿ ಬಿಡುಗಡೆಗೊಳ್ಳಲಿದೆ.

ಈಗಾಗಲೆ 4 ಯಶಸ್ವೀ ಪ್ರದರ್ಶನಗೊಂಡು ಅಂದು 5ನೇ ಪ್ರದರ್ಶನ ಕೂಡ ಕಾಣಲಿದೆ. ಈ ನಾಟಕ ಕುರಿತು ಈ ಬಾರಿ ಮಂಡ್ಯದಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾದ ಹಿರಿಯ ಸಾಹಿತಿ ಗೊ.ರು.ಚನ್ನಬಸಪ್ಪನವರು, ಕುವೆಂಪು ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಡಾ. ಜಿ. ಪ್ರಶಾಂತ ನಾಯಕ, ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷರಾದ ನಾಗರಾಜಮೂರ್ತಿ, ವಿಶಾಂತ ಪ್ರಾಧ್ಯಾಪಕಿ ಡಾ. ವಿಜಯಾದೇವಿ ಅವರು ತಮ್ಮ ತಮ್ಮದೇ ಆದ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ಡಾ. ಮಲ್ಲಿಕಾರ್ಜುನ ಮುರುಘರಾಜೇಂದ್ರ ಮಹಾಸ್ವಾಮಿಗಳು. ಡಾ. ಬಸವ ಮರುಳಸಿದ್ದ ಸ್ವಾಮಿಗಳು, ಹಾಗೂ ಶಿವಮೊಗ್ಗ ಸಂಸದರಾದ ಬಿ.ವೈ ರಾಘವೇಂದ್ರರವರು ಶುಭ ಸಂದೇಶ ನೀಡಿರುತ್ತಾರೆ. ಈ ನಾಟಕ ಪ್ರದರ್ಶನ ಮತ್ತು ಪುಸ್ತಕ ಬಿಡುಗಡೆ ಸಮಾರಂಭಕ್ಕೆ ಹೆಚ್ಚು ರಂಗಾಸಕ್ತರು ಹಾಗೂ ಸಾಹಿತ್ಯ ಪ್ರೇಮಿಗಳು ಆಗಮಿಸಲು ಕೋರಿದೆ.

“ನಾಟಕಕ್ಕೊಂದು ಪುಸ್ತಕ” ನೀಡಲು ತೀರ್ಮಾನಿಸಿದ್ದು ಮಾಹಿತಿಗಾಗಿ ಸಂಪರ್ಕ ಸಂಖ್ಯೆ-9902356019-9481691337-9980182281