Tuesday, March 10, 2026
Tuesday, March 10, 2026
Home Blog Page 389

Shubhamangal Kalyan Mandira ಸಮಾಜ ಸೇವಕ ವಿನಾಯಕ್ ಬಾಯರಿ ನಿಧನ

0

Shubhamangal Kalyan Mandira ಶಿವಮೊಗ್ಗದ ವಿನಾಯಕ್ ಬಾಯರಿ(47) ರವರು ಇಂದು ಅಗಲಿದ್ದಾರೆ. ಆಪ ರಾಮಭಟ್ಟರ ಶಿಷ್ಯರಾಗಿದ್ದ ಇವರು ದೇವಸ್ಥಾನ ಸಮಾಜಮುಖಿ ಕಾರ್ಯಗಳಲ್ಲಿ ಹೇಗೆ ತೊಡಗಿಸಿ ಕೊಳ್ಳಬೇಕೆಂದು ತೋರಿಸಿ ಕೊಟ್ಟಿದ್ದರು.
ಶ್ರೀಯುತರು ಶುಭಮಂಗಳ ಕಲ್ಯಾಣಮಂದಿರದ ಪಕ್ಕದಲ್ಲಿರುವ ಶನೀಶ್ವರ ದೇವಸ್ಥಾನದ ಪ್ರಧಾನ ಅರ್ಚಕರಾಗಿದ್ದರು.
ವೈದಿಕವೃತ್ತಿಯನ್ನು ಬಹಳಷ್ಟು ಶ್ರದ್ಧೆಯಿಂದ ನೆರವೇರಿಸುತ್ತಾ ಹಲವಾರು ಶಿಷ್ಯವೃಂದವನ್ನು ರಚಿಸಿಕೊಂಡಿದ್ದರು. ಸಮಾಜಮುಖಿ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತ ಯಜ್ಙ-ಯಾಗವನ್ನು ನೆರವೇರಿಸಿದ್ದರು. ವೇದಬ್ರಹ್ಮ ಎಂದು ಹೆಸರಾಂಕಿತರಾಗಿದ್ದರು. ಜನಮಾನಸದಲ್ಲಿ ಉಳಿಯುವಂತಹ ಹಲವಾರು ಕಾರ್ಯಕ್ರಮಗಳನ್ನು ಮಾಡಿ ಚಿರಂಜೀವಿಗಳಾಗಿದ್ದಾರೆ.
ಸಹಾಸ ಕ್ರೀಡೆಗಳ ಬಗ್ಗೆ ಒಲವಿದ್ದ ಇವರು ಬೈಕ್ ಕ್ಲಬ್ ಸದಸ್ಯರಾಗಿ ಹಲವಾರು ರಾಷ್ಟ್ರೀಯ ಅಂತರಾಷ್ಟ್ರೀಯ ಕಾರ್ಯಕ್ರಮ ದಲ್ಲಿ ಭಾಗವಹಿಸಿದ್ದರು. ನೇಪಾಳಕ್ಕೆ ಬೈಕ್ ನಲ್ಲಿ ಪ್ರವಾಸಕೈಗೊಂಡಿದ್ದರು. ಸೈಕಲ್ ಕ್ಲಬ್ ಸದಸ್ಯರಾಗಿ ಹಲವಾರು ಜಾತಗಳಲ್ಲಿ ಭಾಗವಹಿಸಿದ್ದರು.
Shubhamangal Kalyan Mandira ಇಂದು ಸಂಜೆ ರೋಟರಿ ಚಿತಾಗಾರದಲ್ಲಿ ಅಂತ್ಯಸಂಸ್ಕಾರ ನೆರವೇರಲಿದೆ. ಅರ್ಚಕವೃಂದ, ಬೈಕ್ ಕ್ಲಬ್, ಯೂತ್ ಹಾಸ್ಟೆಲ್ಸ್, ಸೈಕಲ್ ಕ್ಲಬ್ ಸದಸ್ಯರು, ಭಜನಾ ಮಂಡಳಿ ಸದಸ್ಯರು ಆ.ನಾ.ವಿಜಯೇಂದ್ರ, ಎನ್.ಗೋಪಿನಾಥ್, ವಿನಯ್, ಆದಿತ್ಯಪ್ರಸಾದ್, ಜಿ.ವಿಜಯಕುಮಾರ್, ವಾಗೇಶ್ ಇವರ ಆತ್ಮಕ್ಕೆ ಚಿರಶಾಂತಿ ಕೋರಿದ್ದಾರೆ.
ಹಾಗೂ ಹಲವಾರು ಭಕ್ತಾದಿಗಳನ್ನು, ಸ್ನೇಹಿತರನ್ನು, ಬಂಧು ಬಾದವರನ್ನು ಬಿಟ್ಟು ಅಗಲಿದ ಇವರಿಗೆ ಹೆಂಡತಿ, ಇಬ್ಬರು ಹೆಣ್ಣು ಮಕ್ಕಳಿದ್ದಾರೆ.

Ramesh Begar ಕೆರೆಮನೆ ಶಂಭು ಹೆಗಡೆ ರಾಷ್ಟ್ರೀಯ ನಾಟ್ಯೋತ್ಸವದಲ್ಲಿ ರಮೇಶ್ ಬೇಗಾರ್ ಗೆ ಸಾಧಕ ಸನ್ಮಾನ

0

Ramesh Begar ಮಲೆನಾಡ ಸಾಂಸ್ಕೃತಿಕ ಅಸ್ಮಿತೆ ಯಾದ ಪ್ರಸಿದ್ಧ ಮತ್ತು ಬಹು ಕ್ಷೇತ್ರಗಳ ನಿರಂತರ ಸಾಧಕ , ಶೃಂಗೇರಿಯ ರಮೇಶ್ ಬೇಗಾರ್ ಇವರು ಇತ್ತೀಚಿಗೆ ಹೊನ್ನಾವರ ದ ಗುಣವಂತೆಯಲ್ಲಿ ನಡೆದ ಕೆರೆಮನೆ ಶಂಭು ಹೆಗ್ಡೆ ರಾಷ್ಟ್ರೀಯ ನಾಟ್ಯ ಉತ್ಸವ ದಲ್ಲಿ, ಸಾಂಸ್ಕೃತಿಕ ಸಂಘಟನ ಕ್ಷೇತ್ರದಿಂದ ಸಾಧಕ ಸನ್ಮಾನ ದ ಗೌರವಕ್ಕೆ ಪಾತ್ರರಾಗಿದ್ದಾರೆ.
9 ದಿನಗಳ ಕಾಲ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಕಲಾವಿದರ ವಿವಿಧ ಕಲಾ ಪ್ರದರ್ಶನ ದ ಈ ಪ್ರತಿಷ್ಟಿತ ವೇದಿಕೆಯಲ್ಲಿ ಪ್ರತೀ ದಿನವೂ ಕಲಾ ಕ್ಷೇತ್ರ ದಲ್ಲಿ ದುಡಿದ ಮಹನೀಯರನ್ನು ಗೌರವ ಸನ್ಮಾನ ದ ಮೂಲಕ ಕೆರೆಮನೆ ಶಂಭು ಹೆಗ್ಡೆ ಸ್ಮಾರಕವಾಗಿ ಗೌರವಿಸಲಾಗಿತ್ತು.
Ramesh Begar ರಂಗಭೂಮಿ, ಯಕ್ಷಗಾನ, ಕಿರುತೆರೆ ಮತ್ತು ಚಲನಚಿತ್ರ ಕ್ಷೇತ್ರ ದಲ್ಲಿ ಕಳೆದ 38 ವರ್ಷಗಳಿಂದ ಅನನ್ಯವಾಗಿ ತೊಡಗಿಕೊಂಡಿರುವ ರಮೇಶ್ ಬೇಗಾರ್ ತಾನು ಕೈಯಾಡಿಸಿದ ಎಲ್ಲಾ ಪ್ರಕಾರಗಳಲ್ಲೂ ಮೈಲಿಗಲ್ಲು ನೆಟ್ಟ ಪ್ರತಿಭಾಶಾಲಿ ಆಗಿದ್ದಾರೆ ಮಾತ್ರವಲ್ಲದೆ ಆ ಎಲ್ಲಾ ಕ್ಷೇತ್ರದ ಸಾಧನೆಗಾಗಿ ರಾಜ್ಯ ಮತ್ತು ವಿದೇಶ ದಲ್ಲೂ ವಿವಿಧ ಗೌರವಕ್ಕೆ ಪಾತ್ರರಾಗಿದ್ದಾರೆ.
ಈ ವರ್ಷ ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿಯನ್ನೂ ಪಡೆದಿರುವ ಬೇಗಾರ್ ಯಕ್ಷಗಾನ ಅಕಾಡೆಮಿ ಗೆ 2 ಅವಧಿಯಲ್ಲಿ ಸದಸ್ಯರಾದ ಕೀರ್ತಿ ಹೊಂದಿದ್ದಾರೆ.
ಈ ಸಂದರ್ಭದಲ್ಲಿ ಪತ್ರಿಕೆಗೆ ಪ್ರತಿಕ್ರಿಯಿಸಿರುವ ರಮೇಶ್ ” ಯಕ್ಷಗಾನ ದ ಮೇರು ಸಾಧಕರಾದ ಮತ್ತು ಆ ಕಲೆಗೆ ಅಕಾಡೆಮಿಕ್ ಸ್ಪರ್ಶ ನೀಡಿದ ಪ್ರಯೋಗ ಶೀಲ ದಿಗ್ಗಜ ಶಂಭು ಹೆಗ್ಡೆ ಅವರ ಕರ್ಮ ಕ್ಷೇತ್ರ ದಲ್ಲೇ ಅವರ ಸ್ಮರಣೆಯ ಪ್ರಶಸ್ತಿ ಸ್ವೀಕರಿಸಿರುವುದು ಅಪಾರ ಹೆಮ್ಮೆ ತಂದಿದೆ ” ಎಂದಿದ್ದಾರೆ

Forest Department ರಸ್ತೆ ಅಗಲೀಕರಣ ಬಗ್ಗೆ ಮರಗಳ ಕಡಿತಲೆ, ಆಯನೂರು ಅರಣ್ಯ ಉಪವಿಭಾಗದಲ್ಲಿ ಸಾರ್ವಜನಿಕರ ಅಹವಾಲಿಗೆ ಅವಕಾಶ

0

Forest Department ಅರಣ್ಯ ಇಲಾಖೆ ಆಯನೂರು ಉಪವಿಭಾಗದ ವ್ಯಾಪ್ತಿಯಲ್ಲಿ ರಸ್ತೆ ಅಗಲೀಕರಣಕ್ಕೆ ಅಡಚಣೆಯಾಗಿರುವ ಮರಗಳನ್ನು ಗುರುತಿಸಿದ್ದು, ಅವುಗಳನ್ನು ಕಡಿಯಲು ಮಾ. 04 ರಂದು ಬೆಳಗ್ಗೆ 11.00ಕ್ಕೆ ಆಯನೂರು ಅರಣ್ಯ ವಲಯ ಕಚೇರಿಯಲ್ಲಿ ಸಾರ್ವಜನಿಕರ ಅಹವಾಲು ಸಭೆಯನ್ನು ಕರೆಯಲಾಗಿದೆ.
ಈ ಕುರಿತು ಸಾರ್ವಜನಿಕರಿಂದ ಆಕ್ಷೇಪಣೆಗಳಿದ್ದಲ್ಲಿ ಖುದ್ದಾಗಿ ಸಭೆಗೆ ಹಾಜರಾಗಿ ಸಲ್ಲಿಸುವುದು ಅಥವಾ ಅರಣ್ಯೇತರ ಪ್ರದೇಶದ ವ್ಯಾಪ್ತಿಯ ಕಡಿತಲೆಗೆ ಸಂಬಂಧಿಸಿದಂತೆ ಉಪ ಅರಣ್ಯ ಸಂರಕ್ಷಣಾದಿಕಾರಿಗಳು, ಶಿವಮೊಗ್ಗ ವಿಭಾಗ ಇಮೇಲ್ dcf.shivamogga@gmail.com, ಇವರಿಗೆ ಹಾಗೂ ಖಾಸಗಿ/ಹಿಡುವಳಿ ಪ್ರದೇಶದಲ್ಲಿ ಬರುವ ಮರಗಳ ಕಡಿತಲೆಗೆ ಸಂಬಂಧಿಸಿದಂತೆ ಆಯನೂರು ಉಪವಿಭಾಗ ಕಚೇರಿಯ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ಇಮೇಲ್ – acfayanur@gmail.com ಲಿಖಿತ ರೂಪದಲ್ಲಿ ಮಾ. 04 ರೊಳಗಾಗಿ ಸಲ್ಲಿಸುವಂತೆ ಅರಣ್ಯ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.

Annabhagya Yojana ಫೆಬ್ರವರಿ 2025 ರಿಂದ ಜಾರಿಗೆ ಬರುವಂತೆ ಮಾರ್ಚ್2025 ರ ಮಾಹೆಯ ಪಡಿತರದಲ್ಲಿ 5 ಕೆಜಿ ಅಕ್ಕಿ ಸೇರಿಸಿ ವಿತರಣೆ- ಗುರುದತ್ತ ಹೆಗಡೆ

0

Annabhagya Yojana ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಅನ್ನಭಾಗ್ಯ ಯೋಜನೆಯಡಿ ಅಂತ್ಯೋದಯ ಮತ್ತು ಆದ್ಯತಾ ಫಲಾನುಭವಿಗಳಿಗೆ ನೇರ ನಗದು ವರ್ಗಾವಣೆ ಮುಖಾಂತರ ಹಣ ವರ್ಗಾಯಿಸಲಾಗುತ್ತಿದ್ದು, ಫೆಬ್ರವರಿ-2025 ರಿಂದ ಜಾರಿಗೆ ಬರುವಂತೆ 5 ಕೆ.ಜಿ. ಅಕ್ಕಿಯನ್ನು ಮಾರ್ಚ್-2025ರ ಮಾಹೆಯ ಪಡಿತರ ವಿತರಣೆಯೊಂದಿಗೆ ಸೇರಿಸಿ ವಿತರಿಸಲು ಸರ್ಕಾರವು ಆದೇಶಿಸಿದೆ.

ಅಂತ್ಯೋದಯ ಪಡಿತರ ಚೀಟಿಗೆ ಕೇಂದ್ರದಿಂದ 3 ಸದಸ್ಯರವರೆಗಿನ ಪಡಿತರ ಚೀಟಿಗೆ 35 ಕೆ.ಜಿ. ಹಾಗೂ ರಾಜ್ಯದಿಂದ 4 ಸದಸ್ಯ ಮೇಲ್ಪಟ್ಟು ಒಬ್ಬರಿಗೆ 10 ಕೆ.ಜಿ.ಯಂತೆ ಹಾಗೂ ಆದ್ಯತಾ ಪಡಿತರ ಚೀಟಿಗೆ ಪ್ರತಿ ಸದಸ್ಯರಿಗೆ ಕೇಂದ್ರದಿಂದ ತಲಾ 5 ಕೆ.ಜಿ. ಹಾಗೂ ರಾಜ್ಯದಿಂದ ಪ್ರತಿ ಸದಸ್ಯರಿಗೆ ತಲಾ 10 ಕೆ.ಜಿ.ಯಂತೆ ಅಕ್ಕಿಯನ್ನು ಮಾರ್ಚ್-2025ರ ಮಾಹೆಗೆ ಮಾತ್ರ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ತಿಳಿಸಿದ್ದಾರೆ.

Karnataka State Co-op Credit Societies Federation ltd ಸಹಕಾರ ಸಂಘಗಳ ನಿಬಂಧನೆಗಳ ಅರಿವಿಲ್ಲದಿದ್ದರೆ ಸಂಘಗಳ ಅವನತಿ- ಎಸ್.ಕೆ.ಮರಿಯಪ್ಪ

0

Karnataka State Co-op Credit Societies Federation ltd ಶಿವಮೊಗ್ಗ ಸಹಕಾರ ಸಂಘಗಳಲ್ಲಿ ಸೇವೆ ಸಲ್ಲಿಸಬೇಕೆಂಬ ಆಸೆಯಿಂದ ಗೆದ್ದು ನಂತರ ಯಾವುದೇ ರೀತಿಯ ಸಭೆಗಳನ್ನು ಜರುಗಿಸದೆ ಸಹಕಾರ ಸಂಘಗಳ ಉಪವಿಧಿಯನ್ನು ತಿಳಿದುಕೊಳ್ಳದೆ ಮನಸ್ಸಿಗೆ ಬಂದಂತೆ ಸಹಕಾರಿಗಳು ವರ್ತಿಸಿದರೆ ಸಂಘಗಳು ಅವನತಿಯನ್ನು ಕಾಣಬೇಕಾಗುತ್ತದೆ.

ಅಲ್ಲದೆ ಕೆಲಸ ನಿರ್ವಹಿಸುತ್ತಿರುವ ಕಾರ್ಯದರ್ಶಿಗಳು ಕೂಡ ಕಾನೂನಾತ್ಮಕವಾಗಿ ಕಛೇರಿ ಟಿಪ್ಪಣಿಯನ್ನು ಸಲ್ಲಿಸಿ, ಮಾಸಿಕ ಸಭೆಗಳನ್ನು ಜರುಗಿಸಿ ಸಭೆಯು ತೆಗೆದುಕೊಂಡ ತೀರ್ಮಾನದಂತೆ ಜಂಟಿ ನಿಬಂಧಕರು, ಸಹಕಾರ ಸಂಘಗಳ ಉಪನಿಬಂಧಕರು, ಸಹಕಾರ ಸಂಘಗಳ ಸಹಾಯಕ ನಿಬಂಧಕರು ಇವರುಗಳ ಕಾನೂನು ಸಲಹೆ ಪಡೆದು ಕೆಲಸ ನಿರ್ವಹಿಸಿದರೆ ಮಾತ್ರ ಸಹಕಾರ ಸಂಘಗಳು ಬೆಳೆಯಲು ಮತ್ತು ಉಳಿಯಲು ಸಾಧ್ಯ ಎಂದು ಶಿವಮೊಗ್ಗ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನ ಉಪಾಧ್ಯಕ್ಷರು ಹಾಗೂ ಶಿವಮೊಗ್ಗ ಜಿಲ್ಲಾ ಸಹಕಾರ ಯೂನಿಯನ್ನಿನ ಮಾಜಿ ಅಧ್ಯಕ್ಷರು ಹಾಗೂ ಹಾಲಿ ನಿರ್ದೇಶಕರಾದ ಶ್ರೀ ಎಸ್.ಕೆ.ಮರಿಯಪ್ಪನವರು ಅಭಿಮತ ವ್ಯಕ್ತಪಡಿಸಿದರು.

ಕರ್ನಾಟಕ ರಾಜ್ಯ ಸಹಕಾರ ಮಹಾ ಮಂಡಳ ನಿ., ಬೆಂಗಳೂರು, ಜಿಲ್ಲಾ ಸಹಕಾರ ಯೂನಿಯನ್ ನಿ., ಶಿವಮೊಗ್ಗ, ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನಿ., ಶಿವಮೊಗ್ಗ ಹಾಗೂ ಸಹಕಾರ ಇಲಾಖೆ, ಶಿವಮೊಗ್ಗ ಇವರುಗಳ ಸಂಯುಕ್ತ ಆಶ್ರಯದಲ್ಲಿ ಶಿವಮೊಗ್ಗ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪತ್ತಿನ ಸಹಕಾರ ಸಂಘಗಳ ಮುಖ್ಯ ಕಾರ್ಯನಿರ್ವಾಹಕರುಗಳಿಗೆ ಉನ್ನತ ಮಟ್ಟದ ಒಂದು ದಿನದ ವಿಶೇಷ ತರಬೇತಿ ಶಿಬಿರವನ್ನು ದಿನಾಂಕ:28-02-2025ರಂದು ಶುಕ್ರವಾರ ಶಿವಮೊಗ್ಗ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನಿ., ಬಾಲರಾಜಅರಸ್ ರಸ್ತೆ, ಶಿವಮೊಗ್ಗ ಇದರ ಸಹ್ಯಾದ್ರಿ ಸಭಾಂಗಣದಲ್ಲಿ ಸದರಿ ತರಬೇತಿ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.

ರಾಜ್ಯದಲ್ಲಿರುವ ಡಿ.ಸಿ.ಸಿ.ಬ್ಯಾಂಕ್‌ಗಳು ಮತ್ತು ಅರ್ಬನ್ ಕೋ ಆಪರೇಟಿವ್ ಬ್ಯಾಂಕ್‌ಗಳು ಆರ್.ಬಿ.ಐ ನಿರ್ದೇಶನದಲ್ಲಿ ನಡೆಸಲಾಗುತ್ತಿದೆ ಆದರೆ ಸಹಕಾರ ಸಂಘಗಳು ಸಹಕಾರ ಇಲಾಖೆಯ ಅಡಿಯಲ್ಲಿ ನಡೆಯಬೇಕಾಗಿರುವುದರಿಂದ ಇಲಾಖಾ ಅಧಿಕಾರಿಗಳ ಮಾರ್ಗದರ್ಶನ ಮತ್ತು ಸಂಘದ ಆಡಳಿತ ಮಂಡಳಿ ವಿಶ್ವಾಸಕ್ಕೆ ತೆಗೆದುಕೊಂಡು ಸಂಘವನ್ನು ಹೆಚ್ಚಿನ ಲಾಭ ಮಾಡಿದರೆ ೬ನೇ ವೇತನ ಅಥವಾ 7ನೇ ವೇತನ ಶ್ರೇಣಿಯಂತೆ ಮಾಸಿಕ ಸಂಬಳವನ್ನು ಪಡೆಯಲು ಅರ್ಹರಾಗುತ್ತೀರಿ ಇಲ್ಲವಾದರೆ ಪ್ರತಿಯೊಂದು ತಪ್ಪಿಗೂ ಸಂಪೂರ್ಣ ಕಾರ್ಯದರ್ಶಿಗಳು ಹೊಣೆಗಾರರಾಗಬೇಕಾಗುತ್ತದೆ ಎಂದು ತಿಳಿಸಿದರು.

ಶಿವಮೊಗ್ಗ ಜಿಲ್ಲೆ ಸಹಕಾರ ಸಂಘಗಳ ಲೆಕ್ಕಪರಿಶೋಧನಾ ಉಪನಿರ್ದೇಶಕರಾದ ಶ್ರೀ ತೇಜೋಮೂರ್ತಿ ಆರ್. ಇವರು ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡುತ್ತ ಸಹಕಾರ ಸಂಘಗಳ ಕಾಯಿದೆಯು ಆಗಿಂದಾಗ್ಗೆ ಬದಲಾವಣೆಗೆ ಅವಕಾಶವಿದ್ದು ಅದರಂತೆ ಬದಲಾದ ಕಾಯಿದೆಯಂತೆ ತಮ್ಮ ಸಂಘಗಳ ಬೈಲಾವನ್ನು ತಿದ್ದುಪಡಿ ಮಾಡಿಕೊಳ್ಳಬೇಕಾಗುತ್ತದೆ 2024-2025ನೇ ಸಾಲಿನ ಲೆಕ್ಕಪರಿಶೋಧಕರನ್ನು ವಾರ್ಷಿಕ ಮಹಾಸಭೆಯಲ್ಲಿ ಆಯ್ಕೆ ಮಾಡಿಕೊಂಡು ವಾರ್ಷಿಕ ಮಹಾಸಭೆ ಮುಗಿದ 07 ದಿನಗಳ ಒಳಗಾಗಿ ಸಹಕಾರ ಸಂಘಗಳ ಲೆಕ್ಕಪರಿಶೋಧನಾ ಇಲಾಖೆಗೆ ಮಾಹಿತಿಯನ್ನು ಸಲ್ಲಿಸಬೇಕು ಮತ್ತು ಮಾರ್ಚ್ -30ಮುಗಿದ ನಂತರ ಆಗಸ್ಟ್ -31ರೊಳಗೆ ಲೆಕ್ಕಪರಿಶೋಧನೆ ಮಾಡಿಸಿಕೊಂಡು ಸೆಪ್ಟೆಂಬರ್ -25ರೊಳಗೆ ವಾರ್ಷಿಕ ಮಹಾಸಭೆ ಮುಗಿಸಿಕೊಳ್ಳಬೇಕು ಇದು ಕಡ್ಡಾಯವಾಗಿರುತ್ತದೆ ಎಂದು ತಿಳಿಸಿದರು ಇಂತಹ ತರಬೇತಿ ಪಡೆಯುವುದರ ಮೂಲಕ ತಮ್ಮ ತಮ್ಮ ಸಹಕಾರ ಸಂಘಗಳ ಶ್ರಯೋಭಿವೃದ್ಧಿಗೆ ಶ್ರಮಿಸುವಂತಾಗಬೇಕು ಎಂದು ಸಲಹೆ ನೀಡಿದರು.

ಉಧ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಿವಮೊಗ್ಗ ಜಿಲ್ಲಾ ಸಹಕಾರ ಯೂನಿಯನ್ನಿನ ಅಧ್ಯಕ್ಷರಾದ ಶ್ರೀ ವಾಟಗೋಡು ಸುರೇಶ್‌ವಹಿಸಿ ಮಾತನಾಡುತ್ತ ಯೂನಿಯನ್ ಮತ್ತು ಮಹಾ ಮಂಡಳದ ವತಿಯಿಂದ ಜರುಗುವ ತರಬೇತಿ ಕಾರ್ಯಕ್ರಮದಲ್ಲಿ ನೀಡುವ ತರಬೇತಿಯನ್ನು ಮತ್ತು ಉಪಯುಕ್ತತೆಯನ್ನು ಹೆಚ್ಚಿನ ಮಟ್ಟದಲ್ಲಿ ಪಡೆದುಕೊಳ್ಳಬೇಕು ತಾವು ನೀಡುವ ಸಹಕಾರ ಶಿಕ್ಷಣ ನಿಧಿ ಈ ರೀತಿಯ ತರಬೇತಿಗಳಿಗೆ ಉಪಯುಕ್ತತೆ ಆಗುತ್ತಿದ್ದು, ಇದರ ಉಪಯೋಗ ಸರ್ವರಿಗೂ ಮತ್ತು ಸರ್ವ ಸಹಕಾರಿಗಳಿಗೆ ಮನಮುಟ್ಟುವಂತೆ ಆಗಬೇಕು ಶಿಕಾರಿಪುರ ತಾಲ್ಲೂಕು ರಾಜ್ಯಕ್ಕೆ, ರಾಷ್ಟ್ರಕ್ಕೆ ಮಾದರಿಯಾಗುವಂತೆ ಕಾರ್ಯರ್ವಹಿಸುವಂತಾಗಲಿ ಎಂದು ತಿಳಿಸಿದರು.

ಕಾರ್ಯಕ್ರಮದ ಮೊದಲಿಗೆ ಶಿಕಾರಿಪುರ ಬಣಜಿಗಬಂಧು ಪತ್ತಿನ ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಾಹಕರಾದ ಶ್ರೀಮತಿ ಶ್ವೇತಾರವರು ಪ್ರಾರ್ಥನೆ ಸಲ್ಲಿಸಿದರು. ನಂತರ ಶಿವಮೊಗ್ಗ ಜಿಲ್ಲಾ ಸಹಕಾರ ಯೂನಿಯನ್ನಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀ ಯಶವಂತ ಕುಮಾರ್ ಹೆಚ್.ರವರು ಸರ್ವರನ್ನು ಸ್ವಾಗತಿಸಿದರು. ನಂತರ ಕೊನೆಯಲ್ಲಿ ಯೂನಿಯನ್ನಿನ ವ್ಯವಸ್ಥಾಪಕರಾದ ಶ್ರೀ ಕೆ.ಸಿ.ಹನುಮಂತಪ್ಪ ಇವರು ವಂದಿಸಿ ನಿರೂಪಿಸಿದರು.

ಉದ್ಘಾಟನಾ ಕಾರ್ಯಕ್ರಮದ ನಂತರ ಹಣಕಾಸು ನಿರ್ವಹಣೆ ಮತ್ತು ಕಾಯ್ದೆ ಪಾಲನೆ ವಿಷಯ ಕುರಿತು ಶ್ರೀ ಬಿ.ವಿ.ರವೀಂದ್ರನಾಥ್, ಸನ್ನದು ಲೆಕ್ಕಪರಿಶೋಧಕರು, ಸಾಗರ. ಮತ್ತು ಗುಣಾತ್ಮಕ ಸಾಲ ಮಂಜೂರಾತಿ ಕ್ರಮಗಳು ಮತ್ತು ಸಾಲ ವಸೂಲಾತಿ ನಿರ್ವಹಣೆ ವಿಷಯ ಕುರಿತು ಶ್ರೀ ಕೆ.ಸುಬ್ರಮಣ್ಯ, ನಿವೃತ್ತ ಪ್ರಧಾನ ವ್ಯವಸ್ಥಾಪಕರು, ಕರ್ನಾಟಕ ರಾಜ್ಯ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್, ಬೆಂಗಳೂರು ಇವರು ಉಪನ್ಯಾಸ ನೆರವೇರಿಸಿದರು.
ತರಬೇತಿ ಶಿಬಿರದಲ್ಲಿ 78ಕ್ಕೂ ಹೆಚ್ಚು ಶಿಬಿರಾರ್ಥಿಗಳು ಭಾಗವಹಿಸಿ ತರಬೇತಿ ಶಿಬಿರದ ಉಪಯೋಗ ಪಡೆದುಕೊಂಡಿರುತ್ತಾರೆ.

Dr. Gururaj Karajagi ಮಕ್ಕಳಲ್ಲಿನ ಸುಪ್ತ ಸೃಜನಾತ್ಮಕ ಲೇಖನಗಳನ್ನ ‘ಬುಗುರಿ’ ಹೊರತಂದಿದೆ – ಡಾ.ಗುರುರಾಜ ಕರಜಗಿ

0

Dr. Gururaj Karajagi ಮಕ್ಕಳು ರಜಾ ದಿನಗಳಲ್ಲಿ ಬರೆದ ಅನುಭವ ಸಂಗತಿಗಳನ್ನು ಹೊತ್ತಿಗೆ ರೂಪದಲ್ಲಿ ಹೊರತಂದಿರುವ ಅದ್ಭುತ ಕಾರ್ಯ ಎಂದು ಪ್ರಖ್ಯಾತ ವಾಗ್ಮಿ ಹಾಗೂ ಶಿಕ್ಷಣ ತಜ್ಞರಾದ ಡಾ. ಗುರುರಾಜ್ ಕರಜಗಿ ತಿಳಿಸಿದರು.

ಕುವೆಂಪು ರಂಗಮಂದಿರದಲ್ಲಿ ನಡೆದ “ಬುಗುರಿ ಪುಸ್ತಕದ ಲೋಕಾರ್ಪಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಇಂತಹ ಕಾರ್ಯಕ್ರಮ ಮುಂದಿನ ಶೈಕ್ಷಣಿಕ ಸಾಲಿನಲ್ಲಿ ಹೆಚ್ಚಿನ ವಿದ್ಯಾರ್ಥಿಗಳಿಗೆ ಸ್ಪೂರ್ತಿದಾಯಕವಾಗಿರಬೇಕು ಎಂದು ತಿಳಿಸಿದರು.

ರಜೆಯ ದಿನಗಳಲ್ಲಿ ನೀಡಿದ ಯೋಜನೆಯ ಕಾರ್ಯವನ್ನು ರಸವತ್ತಾಗಿ ಬರೆಯಬಹುದು, ಪುಸ್ತಕದ ಸಾಕಾರ ರೂಪವನ್ನು ತರಬಹುದು ಎಂದು ಮಕ್ಕಳು ಸಾಬೀತುಮಾಡಿದರು. ಮಕ್ಕಳಲ್ಲಿದ್ದ ಅಡಗಿದ್ದ ಸೃಜನಾತ್ಮಕ ಲೇಖಕವನ್ನು ಈ ಬುಗುರಿ ಪುಸ್ತಕದಿಂದ ಬಂದಿದೆ” ಎಂದು ತಿಳಿಸಿದರು.

ತಟ್ಟಂತ ಹೇಳಿ ಕಾರ್ಯಕ್ರಮದ ನಿರೂಪಕರಾದ ಡಾ. ನಾ.ಸೋಮೇಶ್ವರ ರವರು ಬುಗುರಿ ಪುಸ್ತಕಕ್ಕೆ ಮುನ್ನುಡಿ ಕುರಿತು ” ಮನುಷ್ಯನಲ್ಲಿ ಹಲವು ಮೆದುಳುಗಳು ಇವೆ ಅದು ಹೊಟ್ಟೆ, ಮನಸ್ಸುಗಳಲ್ಲಿರುತ್ತವೆ ಅದನ್ನು ಕಾರ್ಯರೂಪಕ್ಜೆ ತರಬೇಕು. ವಾಲ್ಮೀಕಿ ಮಹರ್ಷಿಗಳು ಶಾಪ ನೀಡಲು ಇರುವ ಭಾವಾನಾತ್ಮಕ ಮೆದುಳು ಇನ್ನೊಂದು ತಾರ್ಕಿಕ ಮೆದುಳು ಇದರ ಬಳಕೆಯಿಂದ ಮಕ್ಕಳು ಸವ್ಯಸಾಚಿಯಾಗಬೇಕು. ಮಕ್ಕಳ ಭಾವನೆ ಹೊರರೂಪಕ್ಕೆ ತರುವಲ್ಲಿ ಈ ಪುಸ್ತಕ ಕೆಲಸ ಮಾಡಿದೆ. ಮೆದುಳಿನ ಎರಡು ಅರೆಗೋಡಗಳ ಬಳಕೆಯಾಗಿದೆ. ಪುಸ್ತಕದಲ್ಲಿನ ಎರಡು ಲೇಖನಗಳನ್ನು ಉದಾಹರಣೆ ನೀಡಿದರು.

ಸಂಸ್ಕ್ರತ ಶಿಕ್ಷಕರಾದ ವಿದ್ವಾನ್ ಶ್ರೀಯುತ ಶ್ರೀಧರ್ ಭಟ್ ಮಾತನಾಡುತ್ತಾ “ಶಿಕ್ಷಕನಾಗಿ ಪಾಠಮಾಡುವುದಕ್ಕಿಂತ ಮಕ್ಕಳಿಂದ ಕಲಿತಿದ್ದೆ ಹೆಚ್ಚು, ರಜೆಯ ಅನುಭವ ಹಂಚಿಕೆ ಇದೊಂದು ಕಲಿಕೆ ಬಹುಮುಖತೆ. ಇದು ಶಾಶ್ವತವಾದ ಕಲಿಕೆ, ಮಕ್ಕಳಿಗೆ ಇದು ಮುಂದಿನ ದೊಡ್ಡ ಸಾಹಿತಿಯಾಗಲು ಪ್ರೇರಣೆ ನೀಡುತ್ತದೆ. ಬರವಣಿಗೆ ಇದು ನಿಲ್ಲದೆ ಮುಂದೆಯೂ ಸಾಗಬೇಕು ಎಂದರು. ಬುಗುರಿ ಪುಸ್ತಕವು ಮಕ್ಕಳಲ್ಲಿ ಇತಿಹಾಸದ ಬಗ್ಗೆ ಅಭಿರುಚಿ ಬೆಳಸಿದೆ ಹಾಗೂ ಇತಿಹಾಸವನ್ನು ಭವಿಷ್ಯತ್ ನೊಂದಿಗೆ ಸೇರಿಸುವುದು ಇದರ ವಿಶೇಷತೆಯಾಗಿದೆ. ಸಾಹಿತ್ಯವು ಪ್ರವಾಸಿ ತಾಣಗಳನ್ನು ಕಣ್ಣಮುಂದೆ ತರುವ ಶಕ್ತಿ ಪುಸ್ತಕಕಿದೆ” ಎಂದು ಹೇಳಿದರು.

ಶ್ರೀಮತಿ ಸವಿತಾ ಯಾಜಿ ಪ್ರಕಾಶಕರು ಬುಗುರಿ ಪುಸ್ತಕವು 114 ನೇ ಪ್ರಕಟಣೆಯಾಗಿದೆ. ಪ್ರತಿಯೊಂದು ಲೇಖನವು ಅದ್ಭುತವಾಗಿದ್ದವು. ಇದರಿಂದ ಪರೋಕ್ಷವಾಗಿ ಐತಿಹ್ಯ ಮಹತ್ವ ತಿಳಿಯುತ್ತದೆ.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲರಾದ ಸುಕೇಶ ಸೇರಿಗಾರ ಮಾತನಾಡಿ, ಪುಸ್ತಕಗಳು ಮಾತ್ರವಲ್ಲ ವ್ಯಕ್ತಿಗಳು ಕೂಡ ಜೀವನದಲ್ಲಿ ಸ್ಪೂರ್ತಿ ದಾಯಕರಾಗಿರುತ್ತಾರೆ. ಅಂತಹ ವ್ಯಕ್ತಿಗಳಲ್ಲಿ ಡಾ.ಗುರುರಾಜ್ ಕರಜಗಿ ಕೂಡ ಒಬ್ಬರು. ಪ್ರಖ್ಯಾತ ಲೇಖಕರಾದ ಚೇತನ ಭಗತ್ ರವರು ತಮ್ಮ ಶಾಲಾ ಜೀವನದಲ್ಲಿ ಬರೆದ ಒಂದು ಕಥೆ ಅವರ ಜೀವನ ಬದಲಾಯಿಸಿತು ಅದು ಬರೆವಣೆಗೆ ಇರುವ ಸಾಮ್ಯರ್ಥವಾಗಿದೆ. ಮುಂದಿನ ದಿನಗಳಲ್ಲಿ ಇಂತಹ ಹಲವಾರು ಪುಸ್ತಕಗಳನ್ನು ಬಿಡುಗಡೆ ಮಾಡಲು ಸದಾ ಆಸಕ್ತದಾಯಕರಾಗಿರುತ್ತೇನೆ ಎಂದು ತಿಳಿಸಿದರು.

Dr. Gururaj Karajagi ಈ ಕಾರ್ಯಕ್ರಮದಲ್ಲಿ ಖ್ಯಾತ ನಿರೂಪಕರಾದ ಶ್ರೀಯುತ ನಾ. ಸೋಮೇಶ್ವರ ವಿಶೇಷವಾಗಿತ್ತು. ಈ ಶೈಕ್ಷಣಿಕ ಕಾರ್ಯಕ್ರಮ ಕ್ಕೆ ಮೆರೆಗು ನೀಡುವಂತೆ ಶಾಲಾ ವಿದ್ಯಾರ್ಥಿಗಳು ಹಾಗೂ ಶಿಕ್ಷಕಿಯರು ಗೋವರ್ಧನ ಗಿರಿ ಮತ್ತು ಕಾಳಿಂಗ ಮರ್ಧನ ಯಕ್ಷಗಾನದ ಪ್ರಸಂಗಳಿಗೆ ಅಭನಯಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಸುಮಾರು 1000 ಪೋಷಕರು, ಸಾಹಿತ್ಯ ಆಸಕ್ತರು, ಶಿಕ್ಷಕರು ಭಾಗವಹಿಸಿದ್ದರು.
ಬುಗುರಿ ಪುಸ್ತಕಕ್ಕೆ ಲೇಖನ ಬರೆದ ಮಕ್ಕಳಿಗೆ ಹಾಗೂ ಬಿಡುಗಡೆ ಕಾರ್ಯಕ್ರಮಕ್ಕೆ ಸಹಕರಿಸಿದ ದಾನಿಗಳಿಗೆ ಗೌರವಿಸಿ ಸನ್ಮಾನಿಸಲಾಯಿತು.

ವೇದಿಕೆಯಲ್ಲಿ ಪೊದಾರ್ ಸಂಸ್ಥೆಯ ಕರ್ನಾಟಕ ವೃತ್ತದ ಪ್ರಬಂಧಕರಾದ ರವೀಂದ್ರ ವಂಕೇಲಾ, ಉಪ ಪ್ರಾಂಶುಪಾಲೆಯಾದ ಶ್ರೀಮತಿ ನೇತ್ರಾ .ಹೆಚ್, ಪ್ರಕಾಶಕರಾದ ಶ್ರೀಮತಿ ಸವಿತಾ ಯಾಜಿ ಉಪಸ್ಥಿತರಿದ್ದರು.

ಶ್ರೀಮತಿ ನೇತ್ರಾ ಸ್ವಾಗತಿಸಿದರು, ಶ್ರೀಮತಿ ರೂಪ.ಸಿ ವಂದನಾರ್ಪಣೆ ಶ್ರೀಪತಿ ಹಾಗೂ ಶ್ರೀಮತಿ ಶೃತಿ ನಿರೂಪಣೆಯನ್ನು ನೆರವೇರಿಸಿದರು.

Karnataka Sanga Shivamogga ಕರ್ನಾಟಕ‌ ಸಂಘದ ಪುಸ್ತಕ ಬಹುಮಾನ-2024 ಯೋಜನೆ. ಮಾಹಿತಿ

0

Karnataka Sanga Shivamogga ಪ್ರತಿ ವರ್ಷದಂತೆ ಶಿವಮೊಗ್ಗ ಕರ್ನಾಟಕ ಸಂಘವು 2024ನೇ ಸಾಲಿನಲ್ಲಿ ಮೊದಲ ಮುದ್ರಣವಾಗಿ ಪ್ರಕಟವಾದ ಕನ್ನಡ ಪುಸ್ತಕಗಳಿಗೆ ಬಹುಮಾನವನ್ನು ನೀಡಲು ಲೇಖಕರಿಂದ ಮತ್ತು ಪ್ರಕಾಶಕರಿಂದ ಕೆಳಕಂಡ ನಿಯಮಗಳಿಗೆ ಒಳಪಟ್ಟಂತೆ ಕೃತಿಗಳನ್ನು ಆಹ್ವಾನಿಸುತ್ತಿದೆ.

01.ಮರುಮುದ್ರಣಗೊಂಡ ಕೃತಿಗಳಿಗೆ, ಹಸ್ತ ಪ್ರತಿಗಳಿಗೆ ಮತ್ತು ಸಂಪಾದಿತ ಕೃತಿಗಳಿಗೆ ಅವಕಾಶವಿರುವುದಿಲ್ಲ.

2.ಈ ಹಿಂದೆ ಕರ್ನಾಟಕ ಸಂಘದ ಬಹುಮಾನ ಪಡೆದವರು ಅದೇ ವಿಭಾಗದಲ್ಲಿ ಸ್ಪರ್ಧಿಸುವಂತಿಲ್ಲ, ಇನ್ನಿತರೆ ಯಾವುದೇ ವಿಭಾಗಕ್ಕೆ ಸ್ಪರ್ಧಿಸಬಹುದು.

3.ಕರ್ನಾಟಕ ಸಂಘದ ಸದಸ್ಯರು ಭಾಗವಹಿಸುವಂತಿಲ್ಲ.

4.ಪುಸ್ತಕ ಬಹುಮಾನಕ್ಕೆ ಪುಸ್ತಕದ ಒಟ್ಟು ೦೪ಪ್ರತಿಗಳನ್ನು ಕಳುಹಿಸಬೇಕು/ ಬಹುಮಾನಕ್ಕೆ ಕಳುಹಿಸಿದ ಪುಸ್ತಕಗಳನ್ನು ಹಿಂದಿರುಗಿಸಲಾಗುವುದಿಲ್ಲ.

5.ಅಂಕಣ ಬರಹಗಳು ಪತ್ರಿಕೆಗಳಲ್ಲಿ ಪ್ರಕಟವಾಗಿರುವ ಬಗ್ಗೆ ಕಡ್ಡಾಯವಾಗಿ ದಾಖಲೆ ನೀಡಬೇಕು.

6.ಬರಹಗಾರರು/ ಪ್ರಕಾಶಕರು- ಪತ್ರದ ಮುಖೇನ ಸ್ವವಿವರ / ವಿಳಾಸ / ಮೊಬೈಲ್ ನಂ. ಮತ್ತು ಯಾವ ಪ್ರಕಾರಕ್ಕೆ ಸಲ್ಲಿಸುತ್ತಿರುವುದು ಎಂಬ ಬಗ್ಗೆ ಲಿಖಿತವಾಗಿ / ಮುದ್ರಿಸಿ ವಿವರವನ್ನು ಕಳುಹಿಸಬೇಕು.

7.ಒಂದು ಪ್ರಕಾರಕ್ಕೆ ಕನಿಷ್ಠ 05 ಕೃತಿಗಳು ಬರದಿದ್ದರೆ ಬಹುಮಾನಕ್ಕೆ ಪರಿಗಣಿಸಲಾಗುವುದಿಲ್ಲ.

8.ವಿವಿಧ ಪ್ರಕಾರಕ್ಕೆ ಪುಸ್ತಕ ಕಳಿಸಿದಲ್ಲಿ ಒಂದೊಂದು ಪ್ರಕಾರಕ್ಕೂ 04 ಪುಸ್ತಕಗಳು ಪ್ರತ್ಯೇಕವಾಗಿರಬೇಕು.

ಪ್ರಕಾರ

ಇವರ ಹೆಸರಿನ ಬಹುಮಾನ

1.ಕಾದಂಬರಿ -ಕುವೆಂಪು

2.ಅನುವಾದ – ಪ್ರೊ. ಎಸ್.ವಿ. ಪರಮೇಶ್ವರ ಭಟ್ಟ

3.ಮಹಿಳಾ ಸಾಹಿತ್ಯ – ಶ್ರೀಮತಿ ಎಂ.ಕೆ. ಇಂದಿರಾ

4.ಮುಸ್ಲಿಂ ಬರಹಗಾರರು -ಶ್ರೀ ಪಿ. ಲಂಕೇಶ್

5.ಕವನ ಸಂಕಲನ – ಡಾ. ಜಿ. ಎಸ್. ಶಿವರುದ್ರಪ್ಪ

6.ಅಂಕಣ ಬರಹಗಾರರು -ಡಾ. ಹಾ. ಮಾ. ನಾಯಕ

7.ಸಣ್ಣ ಕಥಾ ಸಂಕಲನ – ಡಾ. ಯು. ಆರ್. ಅನಂತಮೂರ್ತಿ

8.ನಾಟಕ – ಡಾ. ಕೆ. ವಿ. ಸುಬ್ಬಣ್ಣ

9.ಪ್ರವಾಸ ಸಾಹಿತ್ಯ – ಶ್ರೀ ಕುಕ್ಕೆ ಸುಬ್ರಹ್ಮಣ್ಯ ಶಾಸ್ತ್ರಿ

10.ವಿಜ್ಞಾನ ಸಾಹಿತ್ಯ – ಶ್ರೀ ಹಸೂಡಿ ವೆಂಕಟಶಾಸ್ತ್ರಿ

11.ಮಕ್ಕಳ ಸಾಹಿತ್ಯ – ಡಾ. ನಾ. ಡಿಸೋಜ

12.ವೈದ್ಯ ಸಾಹಿತ್ಯ – ಡಾ. ಹೆಚ್. ಡಿ. ಚಂದ್ರಪ್ಪಗೌಡ

Karnataka Sanga Shivamogga ಮೇಲ್ಕಂಡ ಪ್ರಕಾರಗಳ ಸಾಹಿತ್ಯ ಕೃತಿಗಳ 04 (ನಾಲ್ಕು) ಪ್ರತಿಗಳನ್ನು ಸಲ್ಲಿಸಲು ದಿನಾಂಕ 05-04-2025 ರವರೆಗೆ ಅವಧಿಯನ್ನು ವಿಸ್ತರಿಸಲಾಗಿದೆ., ನಂತರ ಬಂದ ಕೃತಿಗಳನ್ನು ಪರಿಗಣಿಸಲಾಗುವುದಿಲ್ಲ.

ಪುಸ್ತಕಗಳನ್ನು ಕಾರ್ಯದರ್ಶಿ, ಕರ್ನಾಟಕ ಸಂಘ, ಬಿ.ಹೆಚ್.ರಸ್ತೆ, ಶಿವಮೊಗ್ಗ-577201 ಇವರಿಗೆ ಅಂಚೆ/ಕೊರಿಯರ್ ಮೂಲಕ ಅಥವಾ ಖುದ್ದಾಗಿ ಸಲ್ಲಿಸಬೇಕು.

ಅತ್ಯುತ್ತಮವೆಂದು ಆಯ್ಕೆ ಆದ ಕೃತಿಗಳಿಗೆ ರೂ: ೧೦,೦೦೦/- (ಹತ್ತು ಸಾವಿರ) ನಗದು ಬಹುಮಾನ ಮತ್ತು ಫಲಕವನ್ನು ನೀಡಿ ಗೌರವಿಸಲಾಗುವುದು.ಹೆಚ್ಚಿನ ವಿವರಗಳಿಗೆ ಕರ್ನಾಟಕ ಸಂಘದ ಕಛೇರಿಯನ್ನು ಸಂಪರ್ಕಿಸಲು ಕೋರಲಾಗಿದೆ.

ಸಂಪರ್ಕ ಸಂಖ್ಯೆ :9980159696 / 8310876277

Bharat Scouts and Guides ಸ್ಕೌಟ್ಸ್ ಚಟುವಟಿಕೆಗಳಿಂದ ಮಕ್ಕಳ ಮನಸ್ಸು ಸದೃಢ-ಸಂತೋಷ್ ಬಾಗೋಜಿ

0

Bharat Scouts and Guides ವಿದ್ಯಾಭ್ಯಾಸದ ಜೊತೆಗೆ ಮಕ್ಕಳಲ್ಲಿ ದೇಶಪ್ರೇಮ ಸಂಸ್ಕಾರ ಹಾಗೂ ಶಿಸ್ತನ್ನು ಬೆಳೆಸಲು ಸ್ಕೌಟ್ ಅಂಡ್ ಗೈಡ್ಸ ಸಂಸ್ಥೆಗಳು ತುಂಬಾ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತೇವೆ ಎಂದು ಕೋಟೆ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಸಂತೋಷ್ ಬಾಗೋಜಿ ಅಭಿಮತ ವ್ಯಕ್ತಪಡಿಸಿದರು.

ಶಿವಮೊಗ್ಗ ಜಿಲ್ಲಾ ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್ ಜಿಲ್ಲಾ ಶಾಖೆ ಹಾಗೂ ಸ್ಥಳೀಯ ಸಂಸ್ಥೆಗಳ ವತಿಯಿಂದ ಆಯೋಜಿಸಲಾಗಿದ್ದ ಸಂಸ್ಥಾಪಕರ ದಿನಾಚರಣೆ ಅಂಗವಾಗಿ ಹಮ್ಮಿಕೊಳ್ಳಲಾದ ರ‍್ಯಾಲಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು ಸ್ಕೌಟ್ನಲ್ಲಿ ಭಾಗವಹಿಸುವುದರಿಂದ ಮಕ್ಕಳು ದೈಹಿಕವಾಗಿ ಹಾಗೂ ಮಾನಸಿಕವಾಗಿ ಸದೃಢನಾಗುತ್ತಾರೆ ಹಾಗೂ ಆತ್ಮವಿಶ್ವಾಸ ವೃದ್ಧಿಸುವುದರ ಜೊತೆಗೆ ಸಮಾಜದಲ್ಲಿ ಒಳ್ಳೆಯ ವ್ಯಕ್ತಿಗಳಾಗಿ ನಿರ್ಮಾಣವಾಗುತ್ತಾರೆ ಎಂದು ನುಡಿದರು.

ಇದೇ ಸಂದರ್ಭದಲ್ಲಿ ಬಿ ಇ ಓ ಕಚೇರಿಯ ಅಧಿಕಾರಿಗಳಾದ ಶ್ರೀಮತಿ ಶಶಿರೇಖಾ ಅವರು ಮಾತನಾಡುತ್ತ ಬಾಲ್ಯದಲ್ಲಿ ಮಕ್ಕಳಿಗೆ ಸ್ಕೌಟ್ಸ್ ಅಂಡ್ ಗೈಡ್ಸ್ ನಲ್ಲಿ ತೊಡಗಿಸಬೇಕು ಇದರಿಂದ ಪ್ರಾಪಂಚಿಕ ಜ್ಞಾನ ಹಾಗೂ ಸಮಾಜಮುಖಿ ಸೇವಾ ಕಾರ್ಯಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಲು ಹಾಗೂ ಪರಸ್ಪರರಲ್ಲಿ ಪ್ರೀತಿ ವಿಶ್ವಾಸ ವೃದ್ಧಿಸಲು ಅತ್ಯಂತ ಸಹಕಾರಿಯಾಗಿದೆ ಎಂದು ನುಡಿದರು.

Bharat Scouts and Guides ಈ ಜಾಗೃತಿ ಜಾಥಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗೈಡ್ ಕಮಿಷನರ್ ರಾದ ಶ್ರೀಮತಿ ಶಕುಂತಲಾ ಚಂದ್ರಶೇಖರ್ ಅವರ ವಹಿಸಿ ಮಾತನಾಡಿದರು.

ಈ ರ‍್ಯಾಲಿಯಲ್ಲಿ ಸ್ಕೌಟ್ ಕಮಿಷನರ್ ಆನಂದ್ ಎಸ್ ಜಿ. ರಾಜೇಶ್ ಅವಲಕ್ಕಿ ಕೇಂದ್ರ ಸ್ಥಾನಿಕ ಆಯುಕ್ತರಾದ ಜಿ ವಿಜಯಕುಮಾರ್. ಶಿವಶಂಕರ್ ಎಚ್. ಚೌಡಮಣಿ ಈ ಪವಾರ್. ಮಲ್ಲಿಕಾರ್ಜುನ್ ಖಾನೂರ್ ರಾಘವೇಂದ್ರ ಲಕ್ಷ್ಮಿ ರವಿ ವೀರೇಶಪ್ಪ ಗೀತಾ ಚಿಕ್ಕಮಠ ಒಂಟಿ ಮಾಳಿಗಪ್ಪ ಎಲ್ಲಾ ಕೌಟ್ಸ್ ಅಂಡ್ ಗೈಡ್ಸ್ ಶಿಕ್ಷಕರು ಪದಾಧಿಕಾರಿಗಳು ಕಬ್ಸ್ ಬುಲ್ ಬುಲ್. ಮಕ್ಕಳು ಉಪಸ್ಥಿತರಿದ್ದರು.

ರ್ಯಾಲಿಯೂ ಪೊಲೀಸನವರ ಸಹಕಾರದೊಂದಿಗೆ ಆಕರ್ಷಕ ಬ್ಯಾಂಡ್ ಸೆಟ್ ನೊಂದಿಗೆ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಅಂಬೇಡ್ಕರ್ ಭವನ ತಲುಪಿತು.

Bejjavalli Mescom ಮಾರ್ಚ್ 4. ಬೆಜ್ಜುವಳ್ಳಿ ಮೆಸ್ಕಾಂ ಉಪವಿಭಾಗೀಯ ಕಛೇರಿಯಲ್ಲಿ ಜನಸಂಪರ್ಕ ಸಭೆ

0

Bejjavalli Mescom ಬೆಜ್ಜುವಳ್ಳಿ ಮೆಸ್ಕಾಂ ಉಪವಿಭಾಗ ಕಛೇರಿಯಲ್ಲಿ ಮಾ. 04 ರಂದು ಬೆಳಿಗ್ಗೆ 11.00 ರಿಂದ 01.00 ರವರೆಗೆ ಜನಸಂಪರ್ಕ ಸಭೆ ನಡೆಯಲಿದೆ.

ಈ ಸಭೆಯಲ್ಲಿ ಮೆಸ್ಕಾಂನ ಅಧಿಕಾರಿಗಳು ಭಾಗವಹಿಸಲ್ಲಿದ್ದು, ಸಂಬಂಧಪಟ್ಟ ಪ್ರದೇಶದ ಗ್ರಾಹಕರ ಅಹವಾಲುಗಳನ್ನು ಸ್ವೀಕರಿಸುವುದರಿಂದ ಈಅವಕಾಶವನ್ನು ಗ್ರಾಹಕರು ಸದುಪಯೋಗ ಪಡಿಸಿಕೊಳ್ಳುವಂತೆ ಮೆಸ್ಕಾಂ ತಿಳಿಸಿದೆ.

ಸಂಪರ್ಕಿಸಬಹುದಾದ ದೂರವಾಣಿ ಸಂಖ್ಯೆ ; 8277882835.

National Science Day ವೈಜ್ಞಾನಿಕ ಚಿಂತನೆಯಿಂದ ಮೂಢ ನಂಬಿಕೆ ತೊಡೆದು ಹಾಕಿ-ಡಿಡಿಪಿಐ ಮಂಜುನಾಥ್

0

National Science Day ವಿದ್ಯಾರ್ಥಿಗಳು ವೈಜ್ಞಾನಿಕ ಮನೋಭಾವ ಬೆಳಿಸಿಕೊಂಡು, ವಿಜ್ಞಾನದ ಅಧ್ಯಯನದಲ್ಲಿ ತೊಡಗಿಕೊಳ್ಳಬೇಕು. ಹೊಸ ಅನ್ವೇಷಣೆಗಳನ್ನು ಮಾಡಬೇಕು ಎಂದು ಡಿಡಿಪಿಐ ಮಂಜುನಾಥ್ ಹೇಳಿದರು.
ಅಬ್ಬಲಗೆರೆ ಸರ್ಕಾರಿ ಪ್ರೌಢಶಾಲೆಯಲ್ಲಿ ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿ, ಭಾರತೀಯ ವಿಜ್ಞಾನ ಸಂಸ್ಥೆ ಆವರಣ ಬೆಂಗಳೂರು ಹಾಗೂ ಜಿಲ್ಲಾ ಪಂಚಾಯತ್ ಇವರ ಸಂಯುಕ್ತಾಶ್ರಯದಲ್ಲಿ ‘ವಿಕಸಿತ ಭಾರತಕ್ಕಾಗಿ ವಿಜ್ಞಾನ ಮತ್ತು ನಾವೀನ್ಯತೆಯಲ್ಲಿ ಜಾಗತಿಕ ನಾಯಕತ್ವಕ್ಕಾಗಿ ಭಾರತೀಯ ಯುವಕರ ಸಬಲೀಕರಣ. ಎಂದ ಶೀರ್ಷಿಕೆಯಡಿ ಏರ್ಪಡಿಸಲಾಗಿದ್ದ ರಾಷ್ಟ್ರೀಯ ವಿಜ್ಞಾನ ದಿನಾಚರಣೆ 2025 ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ವೈಜ್ಞಾನಿಕ ಮನೋಭಾವ, ಉತ್ತಮ ಕೌಶಲ್ಯ, ಹೊಸ ಕಲಿಕಾ ಅಭ್ಯಾಸ ಮತ್ತು ವಿಜ್ಞಾನದ ಬಗ್ಗೆ ಆಸಕ್ತಿ ಮೂಡಿಸುವ ನಿಟ್ಟಿನಲ್ಲಿ ಅನೇಕ ಚಟುವಟಿಕೆಗಳನ್ನು ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿ ಕೈಗೊಳ್ಳುತ್ತಿದೆ.
ವಿಜ್ಞಾನಿಯಾದ ಸಿ.ವಿ.ರಾಮನ್ ಅವರ ರಾಮನ್ ಪರಿಣಾಮದ ಸಂಸ್ಮರಾಣರ್ಥವಾಗಿ ದೇಶದೆಲ್ಲೆಡೆ ಇಂದು ರಾಷ್ಟ್ರೀಯ ವಿಜ್ಞಾನ ದಿನವನ್ನಾಗಿ ಆಚರಣೆ ಮಾಡಲಾಗುತ್ತಿದೆ. ವಿಜ್ಞಾನದ ವಿದ್ಯಾರ್ಥಿಗಳು ಅಂತಹ ಮಹಾನೀಯರ ಆಲೋಚನೆಗಳು, ಚಿಂತನೆಗಳನ್ನು ಬೆಳೆಸಿಕೊಳ್ಳಬೇಕು. ಅನಾದಿ ಕಾಲದಿಂದಲೂ ಈ ಸಮಾಜದಲ್ಲಿ ಮೂಡನಂಭಿಕೆ ಆಚರಣೆಯಲ್ಲಿದ್ದು, ಇಂದಿಗೂ ಅದು ಮುಂದುವರೆದಿದೆ. ಅಂತಹ ಮೂಡನಂಭಿಕೆಯನ್ನು ನಮ್ಮ ವೈಜ್ಞಾನಿಕ ಆಲೋಚನೆಗಳಿಂದ ತೊಡೆದು ಹಾಕಿ ದೇಶವನ್ನು ಇನ್ನಷ್ಟು ಉನ್ನತ ಮಟ್ಟಕ್ಕೆ ಕೊಂಡೊಯ್ಯಬೇಕು ಎಂದರು.
ವಿಜ್ಞಾನದ ವಿದ್ಯಾರ್ಥಿಗಳಿಗೆ ವೈಜ್ಞಾನಿಕ ಚಿಂತನೆ ಅತ್ಯವಶ್ಯಕ. ಇಂತಹ ಚಿಂತನೆಗಳಿಲ್ಲದೆ ವಿಜ್ಞಾನಿಯಾಗಲು ಸಾಧ್ಯವಿಲ್ಲ. ಪ್ರಶ್ನಿಸುವ ಮನೋಭಾವವನ್ನು ಬೆಳಸಿಕೊಳ್ಳಬೇಕು. ಈ ದಿಸೆಯಲ್ಲಿ ವಿದ್ಯಾರ್ಥಿಗಳು ವೈಜ್ಞಾನಿಕ ಚಿಂತನೆಯಲ್ಲಿ ಸಂಪೂರ್ಣ ತೊಡಗಿಸಿಕೊಂಡು ಈ ದೇಶಕ್ಕೆ ಕೊಡುಗೆ ನೀಡಬೇಕು ಎಂದರು.
National Science Day ಹೊಳೆಹೊನ್ನೂರಿನ ವಿವೇಕಾನಂದ ಪಿಯು ಕಾಲೇಜಿನ ಪ್ರಾಂಶುಪಾಲರಾದ ಎಸ್. ರಂಗನಾಥಯ್ಯ ಮಾತನಾಡಿ, ನಾವೆಲ್ಲಾ ಸರ್ಕಾರಿ ಶಾಲೆಯಲ್ಲಿ ಓದುತ್ತಿದ್ದೇವೆ ಎಂದು ಕೊರಗದೆ, ಹೆಮ್ಮೆ ಪಡೆಬೇಕು. ಸರ್ಕಾರ ಈ ವ್ಯವಸ್ಥೆಯೊಳಗೆ ಯರ‍್ಯಾರಿಗೆ ಏನು ಬೇಕೋ ಅದನ್ನು ವ್ಯವಸ್ಥಿತವಾಗಿ ತಲುಪಿಸುತ್ತಿದೆ. ವಿದ್ಯಾರ್ಥಿಗಳು ಯಾವುದೇ ಕೀಳರಿಮೆ ಬೆಳೆಸಿಕೊಳ್ಳದೇ, ಸಾಧನೆಯತ್ತ ಗಮನ ಹರಿಸಬೇಕು. ವೈಜ್ಞಾನಿಕ ಚಿಂತನೆಯನ್ನು ಒಬ್ಬರಿಗೊಬ್ಬರು ಹಂಚಿಕೊಳ್ಳಬೇಕು. ಅದರಿಂದ ನಿಮ್ಮ ಜ್ಞಾನವೂ ವಿಸ್ತಾರಗೊಳ್ಳುತ್ತದೆ. ಜೊತೆಗೆ ಇನ್ನೊಬ್ಬರನ್ನು ಚಿಂತನೆಗೆ ಒಳಪಡಿಸಿದಂತಾಗುತ್ತದೆ. ಈ ಸಮಾಜದಲ್ಲಿ ಮೇಲು-ಕೀಳು, ಜಾತಿ, ಧರ್ಮ ಎಂಬ ಅನೇಕ ಕಟ್ಟಳೆಗಳು ಇವೆ. ಆದರೆ ಪ್ರಕೃತಿಯು ಎಲ್ಲರನ್ನೂ ಸಮಾನತೆಯಿಂದ ನೋಡುತ್ತದೆ. ಸಮಾನ ಸವಲತ್ತುಗಳನ್ನು ಬಳಸಿಕೊಳ್ಳೋಣ. ಪ್ರಕೃತಿಯ ಹಾದಿಯಲ್ಲೆ ನಡೆಯೊಣ ಎಂದರು. ನಂತರದ ಅಧಿವೇಶನದಲ್ಲಿ ಇವರು ರಾಮನ್ ಪರಿಣಾಮದ ಕುರಿತು ವಿವರಣೆ ನೀಡಿದರು.
ರಾಮಕೃಷ್ಣ ಆಶ್ರಮದ ವಿನಯಾನಂದ ಸರಸ್ವತಿ ಸ್ವಾಮೀಜಿ ಮಾತನಾಡಿ, ಸ್ವಾಮಿ ವಿವೇಕಾನಂದರು ಚಿಕ್ಕ ವಯಸ್ಸಿನಲ್ಲೇ ಧೈರ್ಯವಂತ ಮತ್ತು ಎಲ್ಲವನ್ನು ಪ್ರಶ್ನಿಸುವ ಹುಡುಗನಾಗಿದ್ದರು.
ವಿಜ್ಞಾನಿಗಳು ಮತ್ತು ವಿದ್ಯಾರ್ಥಿಗಳ ಮೊದಲ ಲಕ್ಷಣ ಧೀರತನ ಮತ್ತು ಪ್ರಶ್ನೆ ಮಾಡುವ ಗುಣವಾಗಿದೆ. ನಾವೆಲ್ಲ ಸತ್ಯಕ್ಕಾಗಿ ಬದುಕಬೇಕು. ಮಾತು, ಕೃತಿ, ಆಲೋಚನೆ ಒಂದೇ ಆಗಿರಬೇಕು ಎಂದರು.
ಮುಗ್ದ ಮಕ್ಕಳೇ ನಿಜವಾದ ವಿಜ್ಞಾನಿಗಳು. ಮಕ್ಕಳು ಎಲ್ಲವನ್ನೂ ಪ್ರಶ್ನಿಸುತ್ತಾ ತಿಳಿದುಕೊಳ್ಳುತ್ತಾರೆ. ಹಾಗೆಯೇ ನಾವೂ ಕೂಡ ವ್ಯವಸ್ಥೆಯ ಬಗ್ಗೆ ಪ್ರಶ್ನಿಸಿ, ಇಲ್ಲಿರುವ ಸಮಸ್ಯೆಗಳನ್ನು ಪರಿಹರಿಸುವ ಪ್ರಯತ್ನ ಮಾಡಬೇಕು. ದೇಶದಲ್ಲಿ ಹಲವಾರು ಸಮಸ್ಯೆಗಳಿಗೆ,. ಇದಕ್ಕೆ ಮುಖ್ಯ ಕಾರಣ ವಿದ್ಯಾವಂತರೇ ಆಗಿದ್ದಾರೆ. ಯಾಕೆಂದರೆ ಇವರು ಪ್ರಶ್ನೆ ಮಾಡುವುದಿಲ್ಲ. ಪ್ರಶ್ನೆ ಮಾಡದೇ ಸಮಸ್ಯೆಗಳು ಹೆಚ್ಚಿವೆ. ಆದ್ದರಿಂದ ನಾವೆಲ್ಲ ಧೈರ್ಯವಾಗಿ ಪ್ರಶ್ನಿಸಿ, ಪರಿಹರಿಸುವ ಗುಣ ಬೆಳೆಸಿಕೊಳ್ಳಬೇಕೆಂದರು.
ನಿಜವಾದ ವಿಜ್ಞಾನದ ವಿದ್ಯಾರ್ಥಿಗಳು ಧೈರ್ಯವಾಗಿ ಪ್ರಶ್ನೆ ಮಾಡಬೇಕು ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದ ಅವರು ಲೌಕಿಕ ವಿದ್ಯೆ, ಅಲೌಕಿಕ ವಿದ್ಯೆ, ಆಧ್ಯಾತ್ಮಿಕ ವಿದ್ಯೆ ಬಗ್ಗೆ ತಿಳಿಸಿಕೊಟ್ಟರು. ವಿಜ್ಞಾನ ಕೊನೆಗೊಂಡಾಗ ಧರ್ಮ ಆರಂಭವಾಗುತ್ತದೆ. ತರ್ಕ ಕೊನೆಗೊಂಡಾಗ ನಂಬಿಕೆ ಹುಟ್ಟುತ್ತದೆ. ಅನಂತ ಶಕ್ತಿ, ಅನಂತ ಜ್ಞಾನ ಮತ್ತು ಅನಂತ ಸಾಧ್ಯತೆಗಳು ನಮ್ಮೊಳಗಿವೆ ಎಂದು ಸ್ವಾಮಿ ವಿವೇಕಾನಂದರು ಹೇಳಿದ್ದು ಈ ನಿಟ್ಟಿನಲ್ಲಿ ನಾವು ಸಾಗಬೇಕಿದೆ ಎಂದರು.
ಜಿ.ಪಂ ಮೌಲ್ಯಮಾಪನಾಧಿಕಾರಿ ಸೈಯದ್ ರೆಹಮತ್ ಪ್ಯಾರಿ ಮಾತನಾಡಿ, ಎಲ್ಲ ಮಕ್ಕಳಲ್ಲಿ ಒಂದೊAದು ವಿಶೇಷ ಪ್ರತಿಭೆ ಮತ್ತು ಕೌಶಲ್ಯ ಅಡಗಿದೆ. ಶಾಲೆಯಲ್ಲಿ ಇಂದು ಮಕ್ಕಳು ಏರ್ಪಡಿಸಿರುವ ವೈಜ್ಞಾನಿಕ ವಸ್ತುಪ್ರದರ್ಶನ ಅದ್ಭುತವಾಗಿದೆ. ಸರ್ಕಾರಿ ಶಾಲಾ ಮಕ್ಕಳಲ್ಲಿ ಇಷ್ಟೊಂದು ಪ್ರತಿಭೆ ಅಡಗಿರುವುದು ಸಂತಸದ ವಿಷಯ. ಈ ಮಕ್ಕಳಿಗೆ ಬೆನ್ನು ತಟ್ಟಿ ಪ್ರೋತ್ಸಾಹ ನೀಡಬೇಕು. ವಿದ್ಯಾರ್ಥಿಗಳು ವೈಜ್ಞಾನಿಕವಾಗಿ ಚಿಂತಿಸಿ, ಧೈರ್ಯ ಮತ್ತು ಸ್ಥೆöÊರ್ಯದಿಂದ ಮುಂದೆ ಬರಬೇಕು ಎಂದ ಅವರು ವಿದ್ಯಾರ್ಥಿಗಳು ವಿಜ್ಞಾನ ಕ್ಷೇತ್ರದಲ್ಲೂ ಉತ್ತಮ ಕೊಡುಗೆ ನೀಡಬೇಕೆಂದರು.
ಗ್ರಾ.ಪA. ಅಧ್ಯಕ್ಷೆ ಭಾಗ್ಯ ಬಿ. ಹೊಸಟ್ಟಿ ಮಾತನಾಡಿದರು. ಕಾರ್ಯಕ್ರಮದಲ್ಲಿ ರಾಷ್ಟ್ರೀಯ ವಿಜ್ಞಾನ ದಿನದ ಪ್ರತಿಜ್ಞಾ ವಿಧಿ ಬೋಧಿಸಲಾಯಿತು. ಶಾಲೆಯಲ್ಲಿ ವಿದ್ಯಾರ್ಥಿಗಳಿಂದ ವಿಜ್ಞಾನ ವಸ್ತು ಪ್ರದರ್ಶನ ಏರ್ಪಡಿಸಲಾಗಿತ್ತು. ಹಾಗೂ ಇದೇ ಸಂದರ್ಭದಲ್ಲಿ ಸಿ.ವಿ.ರಾಮನ್ ಕುರಿತು ಏರ್ಪಡಿಸಲಾಗಿದ್ದ ಭಾಷಣ ಸ್ಪರ್ಧೆ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಮಾಡಲಾಯಿತು.
ವಿಜ್ಞಾನ ವಿಷಯ ಪರಿವೀಕ್ಷಕ ಅಸುಂತ ಸಿಕ್ವೇರಾ, ಪಿಡಿಓ ರಾಜಪ್ಪ, ಮುಖ್ಯ ಶಿಕ್ಷಕರಾದ ಮುರಳೀಧರ್, ದೈಹಿಕ ಶಿಕ್ಷಣ ಅಧಿಕಾರಿ ಪ್ರಕಾಶ್, ಎನ್‌ಆರ್‌ಡಿಎಂಎಸ್ ಯೋಜನಾ ಸಂಯೋಜಕ ಶಂಕರ್, ಸಹ ಶಿಕ್ಷಕರು, ವಿದ್ಯಾರ್ಥಿಗಳು ಹಾಜರಿದ್ದರು.