Tuesday, March 10, 2026
Tuesday, March 10, 2026
Home Blog Page 388

CM Siddaramaiah ಡಾ.ರಾಜ್ ಕುಮಾರ್ ಅಭಿನಯದ ಸಿನಿಮಾಗಳ ಮೌಲ್ಯ,ಘನತೆ ಇಂದಿನ ಸಿನಿಮಾಗಳಲ್ಲಿ ಕಾಣುತ್ತಿಲ್ಲ- ಸಿದ್ಧರಾಮಯ್ಯ.

0

CM Siddaramaiah ವಿಶ್ವದರ್ಜೆಯ ಫಿಲ್ಮ್ ಸಿಟಿಯನ್ನು ಮೈಸೂರಿನಲ್ಲಿ ನಿರ್ಮಿಸುತ್ತೇವೆ. ಇದಕ್ಕಾಗಿ ಈಗಾಗಲೇ 150 ಎಕರೆ ಜಾಗವನ್ನು ನೀಡಲಾಗಿದೆ.
ಕರ್ನಾಟಕವೇ ಒಂದು ಜಗತ್ತು. ಇಲ್ಲಿ ಎಲ್ಲ ಅವಕಾಶಗಳನ್ನು ಸೃಷ್ಟಿಸಬಹುದು. ಇದಕ್ಕಾಗಿ ವಿಶ್ವ ದರ್ಜೆಯ ಅತ್ಯುನ್ನತ ಗುಣಮಟ್ಟದ ಫಿಲ್ಮ್ ಸಿಟಿಯನ್ನು ಮೈಸೂರಿನಲ್ಲಿ ನಿರ್ಮಿಸುತ್ತಿದ್ದೇವೆ. ತಂತ್ರಜ್ಞಾನದ ಜೊತೆಗೆ ಮಾನವೀಯ ಮೌಲ್ಯಗಳನ್ನು ಬೆಸೆಯುವ ಸಿನಿಮಾಗಳನ್ನು ವಿಶ್ವದರ್ಜೆಯ ಗುಣಮಟ್ಟದಲ್ಲಿ ಇಲ್ಲಿ ನಿರ್ಮಾಣ ಆಗಬೇಕು ಮುಖ್ಯಮಂತ್ರಿ ಸಿದ್ಧರಾಮಯ್ಯ ಕರೆಕೊಟ್ಟಿದ್ದಾರೆ.

ಮುಖ್ಯಮಂತ್ರಿ ಸಿದ್ಧರಾಮಯ್ಯನವರು ವಿಧಾನಸೌಧದ ಗ್ರಾಂಡ್ ಸ್ಟೆಪ್ಸ್‌ಗಳ‌ ಮೇಲೆ ಆಯೋಜಿಸಿದ್ದ ವರ್ಣರಂಜಿತ ಕಾರ್ಯಕ್ರಮದಲ್ಲಿ 16ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವವನ್ನು ಉದ್ಘಾಟಿಸಿ, ಮಾತನಾಡುತ್ತಿದ್ದರು.

ಅಂತಾರಾಷ್ಟ್ರೀಯ ಚಿತ್ರೋತ್ಸವ ವಿಶ್ವ ಸಮುದಾಯದ ಸಂಸ್ಕೃತಿಯ ಪ್ರತಿಬಿಂಬ. ಇದನ್ನು ನೋಡುಗರು ಸದುಪಯೋಗಪಡಿಸಿಕೊಳ್ಳಬೇಕು.
ನಮ್ಮಲ್ಲಿ ಅಸಹನೆ ಹೆಚ್ಚುತ್ತಿರುವುದರಿಂದ ಸಮಾಜದಲ್ಲಿ ಅಸಂತೋಷ ಹೆಚ್ಚುತ್ತಿದೆ. ಸಂಪತ್ತಿನ ಅಸಮಾನ ಹಂಚಿಕೆ ಈ ಅಸಂತೋಷಕ್ಕೆ ಕಾರಣ. ದೇಶದ 1% ಜನರ ಕೈಯಲ್ಲಿ ದೇಶದ 50% ಸಂಪತ್ತು ಸೇರಿಕೊಂಡಿದೆ. ಇದಕ್ಕೆ ಕಲಾ ಮಾಧ್ಯಮ ಆಗಿರುವ ಸಿನಿಮಾಗಳು ಪರಿಹಾರ ಹುಡುಕಬೇಕು. ಸಮಾಜವನ್ನು ಕಲಾ ಮಾಧ್ಯಮದ ಮೂಲಕ ಬೆಸೆಯಬೇಕು.

ಡಾ.ರಾಜ್ ಕುಮಾರ್ ಅವರ ಸಿನಿಮಾಗಳಲ್ಲಿದ್ದ ಮೌಲ್ಯಗಳು ಮತ್ತು ಘನತೆ ಈಗಿನ ಸಿನಿಮಾಗಳಲ್ಲಿ ಕಾಣುತ್ತಿಲ್ಲ. ರಾಜ್ ಕುಮಾರ್ ಸಿನಿಮಾಗಳಲ್ಲಿ ಸೌಹಾರ್ದ ಮತ್ತು ಮಾನವೀಯ ಮೌಲ್ಯಗಳು ತುಂಬಿರುತ್ತಿದ್ದವು. ಹೀಗಾಗಿ ಸರ್ವರಿಗೂ ಅವರ ಸಿನಿಮಾಗಳು ಇಷ್ಟ ಆಗುತ್ತಿದ್ದವು.

CM Siddaramaiah ಮೌಡ್ಯಗಳನ್ನು ಬಿತ್ತುವ, ಸಂವಿಧಾನದ ಮೌಲ್ಯಗಳಿಗೆ ವಿರುದ್ಧವಾದ ಸಿನಿಮಾಗಳು ಸಮಾಜಕ್ಕೆ ಒಳ್ಳೆಯದಲ್ಲ. ಬಸವಣ್ಣನವರು ಕರ್ಮ ಸಿದ್ಧಾಂತವನ್ನು ತಿರಸ್ಕರಿಸಿದ್ದರು. ಸಿನಿಮಾಗಳು ಮತ್ತೆ ಮೌಡ್ಯಗಳನ್ನು ಬಿತ್ತುವುದಕ್ಕೆ ಹೋಗಬಾರದು.
ಈಗ ತಂತ್ರಜ್ಞಾನ ಬೆಳೆದು ಕೃತಕ ಬುದ್ದಿಮತ್ತೆವರೆಗೂ ಬೆಳೆದು ಬಂದಿದೆ. ನಮ್ಮ ಬದುಕನ್ನು ಪ್ರತಿಬಿಂಬಿಸುವ, ನಮ್ಮ ತಳಮಳಗಳಿಗೆ ಪರಿಹಾರ ಹುಡುಕುವ ಸಿನಿಮಾಗಳು ಬಂದಾಗ ಅಂತಹ ಸಿನಿಮಾಗಳು ಶಾಶ್ವತವಾಗಿ ಸಮಾಜದಲ್ಲಿ ಉಳಿಯುತ್ತವೆ.

ಬೆಂಗಳೂರು, ಕರ್ನಾಟಕವೇ ಒಂದು ಜಗತ್ತು. ಇಲ್ಲಿ ಎಲ್ಲವೂ ಇದೆ. ತಂತ್ರಜ್ಞಾನದ ಅವಕಾಶಗಳನ್ನು ಬಳಸಿಕೊಂಡು ಉತ್ತಮ‌ ಸಿನಿಮಾಗಳನ್ನು ಮಾಡಿದರೆ ಸಮಾಜಕ್ಕೆ ಒಳ್ಳೆಯದಾಗುತ್ತದೆ. ಸಿನಿಮಾ ಕ್ಷೇತ್ರವೂ ಪ್ರಗತಿ ಕಾಣುತ್ತದೆ. ಈ ದಿಕ್ಕಿನಲ್ಲಿ ಸಿನಿಮಾ ಜಗತ್ತು ಮಾನವೀಯಗೊಳ್ಳಲಿ ಎಂದು ಮುಖ್ಯಮಂತ್ರಿಗಳು ತಿಳಿಸಿದರು.

State Health Departments ಮಾದಕ ಔಷಧ ದುರ್ಬಳಕೆ 3 ಮಳಿಗೆಗಳ ಪರವಾನಗಿ ರದ್ದು- ಸಚಿವ ದಿನೇಶ್ ಗುಂಡೂರಾವ್

0

State Health Departments ಮಾದಕ ಔಷಧಿಗಳ ದುರ್ಬಳಕೆ ತಡೆಯುವ ನಿಟ್ಟಿನಲ್ಲಿ ₹17 ಲಕ್ಷ ಮೌಲ್ಯದ ಕಳಪೆ ಗುಣಮಟ್ಟದ ಔಷಧಿಗಳನ್ನು ಮಾರುಕಟ್ಟೆಯಿಂದ ಹಿಂಪಡೆಯಲಾಗಿದೆ. ನಿಯಮ ಉಲ್ಲಂಘನೆ ಕಂಡು ಬಂದ 75 ಸಂಸ್ಥೆಗಳ ವಿರುದ್ಧ ಮೊಕದ್ದಮೆಗೆ ಸೂಚಿಸಲಾಗಿದೆ. 400 ಔಷಧ ಮಳಿಗೆಗಳಿಗೆ ಕಾರಣ ಕೇಳಿ ನೋಟಿಸ್‌ ಜಾರಿ ಮಾಡಲಾಗಿದೆ. 213 ಸಂಸ್ಥೆಗಳ ಪರವಾನಗಿ ಅಮಾನತು ಪಡಿಸಿ, 3 ಔಷಧ ಮಳಿಗೆಗಳ ಪರವಾನಗಿ ರದ್ದುಪಡಿಸಲಾಗಿದೆ ಎಂದು ರಾಜ್ಯ ಆರೋಗ್ಯ ಸಚಿವ ದಿನೇಶ್ ಗುಂಡುರಾವ್ ತಿಳಿಸಿದ್ದಾರೆ.

Bhadravathi Surveyor Lokayukta ಭದ್ರಾವತಿ ಭೂಮಾಪನಾ ಪರಿವೀಕ್ಷಕ ಲೋಕಾಯುಕ್ತ ಬಲೆಗೆ!

0

Bhadravathi Surveyor Lokayukta ಬಸವರಾಜಪ್ಪ.ಎಂ.ಹೆಚ್ ಬಿನ್ ಲೇಟ್ ಹನುಮಂತಪ್ಪ, ಮತ್ತಿಘಟ್ಟ ಗ್ರಾಮ. ಭದ್ರಾವತಿ ತಾಲ್ಲೂಕು ರವರ ಹೆಸರಿನಲ್ಲಿದ್ದ ಸ.ನಂ.56/10 ರಲ್ಲಿನ 1 ಎಕರೆ 20 ಗುಂಟೆ ಜಮೀನಿನ ಪಕ್ಕ ಪೋಡಿ ದುರಸ್ಥಿ ಮಾಡಿಕೊಡುವ ಬಗ್ಗೆ ಭದ್ರಾವತಿ ತಾಲ್ಲೂಕು ಎ.ಡಿ.ಎಲ್.ಆರ್ ಕಛೇರಿಯ ಭೂಮಾಪನಾ ಪರಿವೀಕ್ಷಕ ಟಿ.ಮಲ್ಲಿಕಾರ್ಜುನಯ್ಯ ಎಂಬುವವರು ಲಂಚದ ಹಣಕ್ಕೆ ಬೇಡಿಕೆ ಇಟ್ಟ ಬಗ್ಗೆ ಶಿವಮೊಗ್ಗ ಕರ್ನಾಟಕ ಲೋಕಾಯುಕ್ತ ಪೊಲೀಸ್ ಠಾಣೆಗೆ ದೂರು ನೀಡಿರುತ್ತಾರೆ.

ದಿನಾಂಕ:23/07/2013 ರಂದು ಸದರಿ ಅಪಾದಿತ ಅಧಿಕಾರಿ ಪಿರ್ಯಾದುದಾರರಿಂದ 15,000/- ರೂ ಲಂಚದ ಹಣವನ್ನು ಶಿವಮೊಗ್ಗ ನಗರ ವಿನೋಬನಗರ ಬಡಾವಣೆಯ ಕೆಂಚಪ್ಪ ಲೇಔಟ್ ನ ಆಪಾದಿತರ ವಾಸದ ಮನೆಯಲ್ಲಿ ಕೇಳಿ ಪಡೆದುಕೊಳ್ಳುವಾಗ ಟ್ರ‍್ಯಾಪ್ ಮಾಡಲಾಗಿರುತ್ತದೆ. ಕೆ.ಸಿ.ಪುರುಷೋತ್ತಮ, ಪೊಲೀಸ್ ಇನ್ಸ್ಪೆಕ್ಟರ್, ಕ.ಲೋ.ಶಿವಮೊಗ್ಗ ರವರು ಪ್ರಕರಣವನ್ನು ತನಿಖೆ ಕೈಗೊಂಡು ಆಪಾದಿತರ ವಿರುದ್ದ ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರವನ್ನು ಸಲ್ಲಿಸಿರುತ್ತಾರೆ.

ಈ ಪ್ರಕರಣವು ನ್ಯಾಯಾಲಯದಲ್ಲಿ ವಿಚಾರಣೆ ನಡೆದು ದಿನಾಂಕ:28/02/2025 ರಂದು ಶಿವಮೊಗ್ಗದ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ಹಾಗೂ ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾದ ಮರುಳಸಿದ್ದಾರಾದ್ಯ ಹೆಚ್.ಜೆ. ರವರು ಆರೋಪಿ ಟಿ.ಮಲ್ಲಿಕಾರ್ಜುನಯ್ಯ ಇವರಿಗೆ ಒಂದು ವರ್ಷ ಆರು ತಿಂಗಳು ಕಾರಾಗೃಹ ಶಿಕ್ಷೆ ಮತ್ತು 30,000/- ರೂ ದಂಡ ವಿಧಿಸಿ ಆದೇಶಿಸಿರುತ್ತಾರೆ.
ಸರ್ಕಾರದ ಪರವಾಗಿ ವಿಶೇಷ ಸಾರ್ವಜನಿಕ ಅಭಿಯೋಜಕರಾದ ಎಂ.ಡಿ.ಸುಂದರ್ ರಾಜ್ ರವರು ವಾದ ಮಂಡಿಸಿರುತ್ತಾರೆ.

Shivamogga Union Of Working Journalists Association ವಾರ್ಷಿಕ ದತ್ತಿ ಪುರಸ್ಕಾರ ಪುರಸ್ಕೃತ ಜಿಲ್ಲಾ ಪತ್ರಕರ್ತರಿಗೆ ಅಭಿನಂದನೆ

0

Shivamogga Union Of Working Journalists Association ಶಿವಮೊಗ್ಗ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ವಾರ್ಷಿಕ ದತ್ತಿ ಪ್ರಶಸ್ತಿಯ ಮಿಂಚು ಶ್ರೀನಿವಾಸ್ ಪ್ರಶಸ್ತಿ ಪುರಸ್ಕೃತರಾದ ಶಿವಮೊಗ್ಗೆಯ ಹಿರಿಯ ಪತ್ರಕರ್ತರು, ವಿಜಯವಾಣಿ ಪತ್ರಿಕೆಯ ಸ್ಥಾನಿಕ ಸಂಪಾದಕ ಚಂದ್ರಶೇಖರ್ ಶೃಂಗೇರಿಯವರಿಗೆ, ಎಸ್. ಹೆಚ್. ರಂಗಸ್ವಾಮಿ ಪ್ರಶಸ್ತಿ ಪುರಸ್ಕೃತರಾದ ಹಿರಿಯ ಪತ್ರಕರ್ತ ಗಿರೀಶ್ ಉಮ್ರಾಯ್ ಹಾಗೂ ಗಿರಿಜಮ್ಮ, ರುದ್ರಪ್ಪ ತಾಳಿಕೋಟಿ ಪ್ರಶಸ್ತಿ ಪುರಸ್ಕೃತರಾದ ಸಂಯುಕ್ತ ಕರ್ನಾಟಕ ಪತ್ರಿಕೆಯ ಹಿರಿಯ ವರದಿಗಾರ್ತಿ ಕವಿತಾರವರಿಗೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಶಿವಮೊಗ್ಗ ಜಿಲ್ಲಾ ಶಾಖೆ ಅಭಿನಂದಿಸಿದೆ.

ಈ ಸಂಬಂಧವಾಗಿ ಹೇಳಿಕೆ ನೀಡಿರುವ ಸಂಘದ ಜಿಲ್ಲಾ ಶಾಖೆಯ ಅಧ್ಯಕ್ಷ ಕೆ.ವಿ. ಶಿವಕುಮಾರ್, ರಾಜ್ಯ ಸಮಿತಿ ಸದಸ್ಯ ಎನ್. ರವಿಕುಮಾರ್, ಪ್ರಧಾನ ಕಾರ್ಯದರ್ಶಿ ವಿ. ಟಿ. ಅರುಣ್ ಹಾಗೂ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿ ಸದಸ್ಯರು ಪ್ರಶಸ್ತಿ ಪುರಸ್ಕೃತರನ್ನು ಅಭಿನಂದಿಸಿ ಶುಭ ಕೋರಿದ್ದಾರೆ.
ಅ. ರಾ. ಶ್ರೀನಿವಾಸ್‌ರಿಗೆ ಅಭಿನಂದನೆ

ಇದೇ ಸಂದರ್ಭದಲ್ಲಿ ಸಾಗರ ತಾಲೂಕು ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿರುವ ಹಿರಿಯ ಪತ್ರಕರ್ತ ಅ. ರಾ. ಶ್ರೀನಿವಾಸ್‌ರವರನ್ನು ಅಭಿನಂದಿಸಿರುವ ಅವರು, ಇದು ಪತ್ರಿಕಾ ಕ್ಷೇತ್ರಕ್ಕೆ ಸಂದ ಗೌರವ ಎಂದು ಶುಭ ಹಾರೈಸಿದ್ದಾರೆ. ಸುದೀರ್ಘ ಕಾಲದವರೆಗೆ ಪತ್ರಕರ್ತರಾಗಿ, ಕತೆ, ಕಾದಂಬರಿ, ರಂಗ ವಿಮರ್ಶಕರಾಗಿ ತಮ್ಮದೇ ಆದ ಛಾಪು ಮೂಡಿಸಿರುವ ಶ್ರೀನಿವಾಸ್‌ರವರ ಸರ್ವಾಧ್ಯಕ್ಷತೆಯಲ್ಲಿ ಸಮ್ಮೇಳನ ಯಶಸ್ವಿಯಾಗುವುದರ ಜೊತೆಗೆ ಮಾದರಿಯಾಗಿ ನಡೆಯಲಿ ಎಂದು ಆಶಿಸಿದ್ದಾರೆ.

World Wildlife Day ತ್ಯಾವರೆಕೊಪ್ಪದಲ್ಲಿ ವಿಶ್ವ ವನ್ಯಜೀವಿ‌ ದಿನಾಚರಣೆ

0

World Wildlife Day ಮಾ.3 ರ ಬೆಳಗ್ಗೆ 10 ಗಂಟೆಗೆ ತ್ಯಾವರೆಕೊಪ್ಪದ ಹುಲಿ-ಸಿಂಹಧಾಮದಲ್ಲಿ ‘ವೈಲ್ಡ್ಲೈಫ್ ಕನ್ಸರ್ವೇಷನ್ ಫೈನಾನ್ಸ್ : ಇನ್ವೆಸ್ಟಿಂಗ್ ಇನ್ ಪೀಪಲ್ & ಪ್ಲಾನೆಟ್’ ಎಂಬ ಶೀರ್ಷಿಕೆಯಡಿಯಲ್ಲಿ ವಿಶ್ವ ವನ್ಯಜೀವಿ ದಿನ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ.

ಇದೇ ದಿನದಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಇವರ ಸಹಭಾಗಿತ್ವದಲ್ಲಿ ‘ನಮ್ಮ ಕಾಡು ನಮ್ಮ ಕೆರೆ’ ಕಾರ್ಯಕ್ರಮದಡಿಯಲ್ಲಿ ಹುಲಿ-ಸಿಂಹಧಾಮದ ಆವರಣದೊಳಗಿರುವ 10 ಕೆರೆಗಳನ್ನು ಅಭಿವೃದ್ಧಿಪಡಿಸುತ್ತಿದ್ದು, ಇದರಿಂದ ಅರಣ್ಯ ಹಾಗೂ ಮೃಗಾಲಯದ ಪ್ರಾಣಿಗಳಿಗೆ ನೀರಿನ ಅನುಕೂಲಕರವಾಗಲಿದೆ. ಇದರ ಜೊತೆಗೆ Zoo Vista Project (3ಡಿ ವರ್ಚುವಲ್ ಝೂ) ದತ್ತು ಕಾರ್ಯಕ್ರಮವನ್ನು ಉತ್ತೇಜಿಸುವ ಯೋಜನೆಯ ಉದ್ಘಾಟನೆಯನ್ನೂ ಸಹ ಹಮ್ಮಿಕೊಳ್ಳಲಾಗಿದೆ ಎಂದು ಹುಲಿ-ಸಿಂಹಧಾಮದ ಉಪ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ಕಾರ್ಯ ನಿರ್ವಾಹಕ ನಿರ್ದೇಶಕರು ತಿಳಿಸಿದ್ದಾರೆ.

Bhadravati Police ಭದ್ರಾವತಿಯಿಂದ ನಾಪತ್ತೆಯಾಗಿರುವ ವ್ಯಕ್ತಿಯ ಬಗ್ಗೆ ಪೊಲೀಸ್ ಪ್ರಕಟಣೆ

0

Bhadravati Police ಭದ್ರಾವತಿ ಹಳೇನಗರ ಪೊಲೀಸ್ ಠಾಣೆ ವ್ಯಾಪ್ತಿಗೆ ಸೇರಿರುವ ಸುಮಾರು 40 ವರ್ಷ ವಯಸ್ಸಿನ ಸಿರಾಜ್ ಎಂಬ ವ್ಯಕ್ತಿಯು ಫೆ.15 ರ ಸಂಜೆ 5 ಗಂಟೆಯಿಂದ ಕಾಣೆಯಾಗಿದ್ದಾರೆ.

ಕಾಣೆಯಾದ ಸಿರಾಜ್ ಸಾಧಾರಣ ಮೈಕಟ್ಟು, ಕೋಲು ಮುಖ, ಕಪ್ಪು ಮೈಬಣ್ಣ, ಸುಮಾರು 5.6 ಅಡಿ ಎತ್ತರ ಇದ್ದು, ಪ್ಯಾಂಟು ಶರ್ಟ್ ಧರಿಸಿರುತ್ತಾರೆ. ಕುಡಿದ ಅಮಲಿನಲ್ಲಿ ಇದ್ದಂತೆ ನಡೆಯುತ್ತಿರುತ್ತಾರೆ.

Bhadravati Police ಈ ರೀತಿಯ ವ್ಯಕ್ತಿಯು ಪತ್ತೆಯಾದಲ್ಲಿ ಹತ್ತಿರದ ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕೆಂದು ಹಳೇನಗರ ಪೊಲೀಸ್ ಠಾಣೆಯ ಠಾಣಾಧಿಕಾರಿ ತಿಳಿಸಿದ್ದಾರೆ.

Department Of Science & Technology ರಾಜ್ಯದ ಎಲ್ಲಾ‌ ಜಿಲ್ಲಾ ಕೇಂದ್ರಗಳಲ್ಲಿ ವಿಜ್ಞಾನ ಕೇಂದ್ರ &/ತಾರಾಲಯ‌ ಸ್ಥಾಪನೆ- ಸಚಿವ ಎನ್.ಎಸ್.ಬೋಸರಾಜು

0

Department Of Science & Technology ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ವಿಜ್ಞಾನ ಕೇಂದ್ರ ಹಾಗೂ ತಾರಾಲಯವನ್ನು ನಿರ್ಮಿಸುವ ಯೋಜನೆ ಪ್ರಗತಿಯಲ್ಲಿದೆ. ಈ ಸಾಲಿನಲ್ಲಿ 4 ಜಿಲ್ಲೆಗಳಲ್ಲಿ ಸ್ಥಾಪಿಸುವ ಗುರಿ ಹೊಂದಿದ್ದೇವೆ. 800ಕ್ಕೂ ಅಧಿಕ ಶಾಲೆಗಳಿಗೆ ಟೆಲಿಸ್ಕೋಪ್‌ ಕೊಡುವ ಯೋಜನೆ ಇದೆ. ವಿಜ್ಞಾನ ನಗರ ಸ್ಥಾಪನೆಗೆ ಈಗಾಗಲೇ ಕೇಂದ್ರ ಸರ್ಕಾರದಿಂದ ಅನುಮೋದನೆ ಪಡೆದಿದ್ದು, ದೇವನಹಳ್ಳಿ ಬಳಿ 30 ಎಕರೆ ಜಾಗ ಗುರುತಿಸಲಾಗಿದೆ ಎಂದು ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾದ ಎನ್‌.ಎಸ್‌.ಭೋಸರಾಜು ತಿಳಿಸಿದ್ದಾರೆ

LOOKING FOR SEHRI ? in Bangalore

0

SEHRI in Bangalore: Where to Find Pre-Dawn Ramadan Food …

Welcome to BangaloreSehri.in, where we connect students, single working professionals, especially single women staying in PGs, hostels & accommodations, with Sehri providers across Bangalore during Ramadan.

Our mission is to facilitate access to nutritious Sehri meals from Masajids, madrasas, Jamaats, Khankhas, NGOs, and young volunteers. We aim to support individuals with diverse preferences and dietary needs, fostering community cohesion and pleasing Allah.

Join us in this journey of spiritual nourishment. Together, let’s make this Ramadan a time of reflection, gratitude, and shared blessings.

Disclaimer: We are updating the Sehri provider details as soon as they are confirmed throughout Ramadan 2025. For the most up-to-date information, please check our website frequently. Bangaloresehri.in efficiently connects users to nearby establishments that serve Sehri but does not directly provide the meals.

This initiative is non-profit.

Our efforts are purely altruistic and driven by a desire to support the community during Ramadan.

This initiative is brought to you by the Active Bengaluru Foundation.

Water Supply and Sewerage Board ನೀರಿನ ಕಂದಾಯ ಕಟ್ಟಲು ಭಾನುವಾರ ವಿಶೇಷ ಕೌಂಟರ್

0

Water Supply and Sewerage Board 2024-25ನೇ ಸಾಲಿನ ನೀರಿನ ಕಂದಾಯ ಮತ್ತು ಬಾಕಿ ಕರವಸೂಲಾತಿ ಮಾಡಲು ನಗರದ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ನಿರ್ವಹಣಾ ವಿಭಾಗ ಮತ್ತು ಉಪವಿಭಾಗದ ವತಿಯಿಂದ ಮಾ.02 ರ ಭಾನುವಾರದಂದು ವಿಶೇಷ ವಸೂಲಾತಿ ಕೌಂಟರ್‌ಗಳನ್ನು ತರೆಯಲಾಗಿದೆ. ನೀರಿನ ಕಂದಾಯ ಮತ್ತು ಬಾಕಿ ಕರ ವಸೂಲಾತಿಗಾಗಿ ನಗರದ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯು ವಿನೋಬನಗರ 100 ಅಡಿ ರಸ್ತೆ ಇಂದಿರಾನಗರ ಬಡಾವಣೆ ಐ.ಜಿ.ಸರ್ಕಲ್ ಹತ್ತಿರ, ಹೊಸಮನೆ ಚರ್ಚ್ ಮುಂಭಾಗ, ಜಯನಗರ ಸರ್ವೋದಯ ಶಾಲೆ, ಬಿ.ಹೆಚ್.ರಸ್ತೆ ಸಹ್ಯಾದ್ರಿ ಕಾಲೇಜಿನ ಗೇಟ್ ನಂ. 1ರ ಎದುರು, ಸ್ವಾಮಿ ವಿವೇಕಾನಂದ ಬಡಾವಣೆ ಗುಡ್‌ಲಕ್ ಸರ್ಕಲ್ ಹತ್ತಿರ ವಿಶೇಷ ವಸೂಲಾತಿ ಕೌಂಟರ್ ತೆರೆದಿದ್ದು, ನೀರಿನ ಖಾತೆದಾರರು ಬಾಕಿ ಉಳಿಸಿಕೊಂಡಿರುವ ನೀರಿನ ಕಂದಾಯವನ್ನು ಪಾವತಿಸದಿದ್ದಲ್ಲಿ ನೀರಿನ ಸಂಪರ್ಕವನ್ನು ಕಡಿತಗೊಳಿಸಲಾಗುವುದು ಎಂದು ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಸಹಾಯಕ ಕಾರ್ಯಪಾಲಕ ಅಭಿಯಂತರು ತಿಳಿಸಿದ್ದಾರೆ.

Bapuji Institute of Engineering & Technology ವೇದಾದಿ ಸನಾತನ ಸಾಹಿತ್ಯಗಳ ಅಧ್ಯಯನದಿಂದ “ಸಚ್ಚಿದಾನಂದ” ಲಭ್ಯ- ಡಾ.ಎಚ್.ಬಿ.ಮಂಜುನಾಥ್

0

Bapuji Institute of Engineering & Technology ಭಾರತ ಎಂಬುದು ಕೇವಲ ಒಂದು ದೇಶದ ಹೆಸರಲ್ಲ, ಇದು ಜ್ಞಾನವನ್ನು ಪ್ರೀತಿಸುವ, ಆರಾಧಿಸುವ ದ್ಯೋತಕವಾಗಿದೆ ಎಂದು ಹಿರಿಯ ಪತ್ರಕರ್ತ ಡಾ.ಎಚ್ ಬಿ ಮಂಜುನಾಥ ಹೇಳಿದರು. ದಾವಣಗೆರೆ ನಗರದ ಬಾಪೂಜಿ ತಾಂತ್ರಿಕ ಮಹಾವಿದ್ಯಾಲಯದ ಎಸ್ ಎಸ್ ಮಲ್ಲಿಕಾರ್ಜುನ ಸಾಂಸ್ಕೃತಿಕ ಕೇಂದ್ರದಲ್ಲಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯದ ನಿರ್ದೇಶನದ ಮೇರೆಗೆ ನೆರವೇರಿದ ಭಾರತೀಯ ಜ್ಞಾನವಿಧಾನದಲ್ಲಿ ವೇದಗಳ ಸಮಗ್ರತೆ ಎಂಬ ವಿಷಯವಾಗಿ ಮಾತನಾಡುತ್ತಾ ‘ಭ’ ಎಂದರೆ ‘ಬೆಳಕು’, ‘ರತಿ’ ಅಥವಾ ‘ರತ’ ಎಂದರೆ ಪ್ರೀತಿಸುವುದು, ‘ಭಾರತ’ ಎಂದರೆ ಜ್ಞಾನ ಪ್ರಕಾಶವನ್ನು ಗೌರವಿಸುವುದು ಎಂದು ಆಗುತ್ತದೆ. ವಿಶ್ವದ ಅತ್ಯಂತ ಪ್ರಾಚೀನ ವಾಜ್ಞಯವಾದ ವೇದ ವೇದಾಂತಗಳು ಜೀವ ಜಗತ್ತಿನ ಸ್ವಾಸ್ಥ್ಯದ ಕುರಿತಾಗಿ ಕರ್ಮಕಾಂಡದಲ್ಲಿಯೂ ಜೀವನ್ ಮುಕ್ತಿಯ ಬಗ್ಗೆ ಜ್ಞಾನ ಕಾಂಡದಲ್ಲಿಯೂ ಹೇಳಿದ್ದು ಮತ ಭೇದವಿಲ್ಲದೆ ಎಲ್ಲರಿಗೂ ಇದು ಅನ್ವಯ ಯೋಗ್ಯವಾಗಿದೆ ಎಂಬುದನ್ನು ಸ್ವಾರಸ್ಯಕರ ಉದಾಹರಣೆಗಳ ಮೂಲಕ ಪ್ರತಿಪಾದಿಸಿದರು. ಪರಿಪೂರ್ಣ ಅಸ್ತಿತ್ವವು ‘ಸತ್’ ಆದರೆ ಪರಿಪೂರ್ಣ ಅರಿವು ‘ಚಿತ್’ ಆಗುತ್ತದೆ, ಪರಿಪೂರ್ಣ ಅನುಭವವು ‘ಆನಂದ’ವಾಗುತ್ತದೆ, ಈ ಸತ್ ಚಿತ್ ಆನಂದವೇ ‘ಸಚ್ಚಿದಾನಂದ’, ಇದು ವೇದಾದಿ ಸನಾತನ ಸಾಹಿತ್ಯಗಳ ಅಧ್ಯಯನದಿಂದ ಸಾಧ್ಯ,ಸನಾತನ ಎಂದರೆ ಪ್ರಾಚೀನವಾದದ್ದು ಶಾಶ್ವತವಾದದ್ದು ಎಂದರ್ಥವೆಂದರು. ಕಾಲೇಜಿನ ನಿರ್ದೇಶಕ ಪ್ರೊ. ವೈ.ವೃಷಭೇಂದ್ರಪ್ಪನವರ ಉಪಸ್ಥಿತಿಯಲ್ಲಿ ನಡೆದ ಉಪನ್ಯಾಸ ಕಾರ್ಯಕ್ರಮದಲ್ಲಿ ಶ್ರೀನಿಧಿ ಕುಲಕರ್ಣಿ ಸ್ವಾಗತಿಸಿದರು. ಸಂಜನಾ ಪರಿಚಯ ನುಡಿಗಳ ನಾಡಿದರು. ಜವಳಿ ವಿಭಾಗದ ಪ್ರಾಧ್ಯಾಪಕ ಎಸ್.ಎಮ್. ಚಂದ್ರಶೇಖರ್ ಪ್ರಾಸ್ತಾವಿಕ ನುಡಿಗಳ ನಾಡಿದರು.