Monday, March 9, 2026
Monday, March 9, 2026
Home Blog Page 379

Chandragutti Renukamba Temple ಚಂದ್ರಗುತ್ತಿ‌ ಜಾತ್ರೆಯಲ್ಲಿ‌ ದೇವಿಗೆ ಪೊಲೀಸ್ ಸಿಬ್ಬಂದಿಯಿಂದ ಬೃಹತ್ ಪುಷ್ಪಹಾರ ಅರ್ಪಣೆ

0

Chandragutti Renukamba Temple ಸೊರಬ ತಾಲೂಕಿನ ಪುರಾಣ ಹಾಗೂ ಐತಿಹಾಸಿಕ ಪ್ರಸಿದ್ಧ ಚಂದ್ರಗುತ್ತಿಯ ಶ್ರೀ ರೇಣುಕಾಂಬ ದೇವಿ ಮಹಾರಥೋತ್ಸವದಲ್ಲಿ ಪೊಲೀಸ್ ಇಲಾಖೆ ವತಿಯಿಂದ ಶ್ರೀ ದೇವಿಗೆ ಬೃಹತ್ ಹಾರವನ್ನು ಸಮರ್ಪಿಸಿ, ನಾಡಿನ ಜನತೆಯ ಸುಭೀಕ್ಷತೆಗೆ ಪ್ರಾರ್ಥಿಸಲಾಯಿತು.

ಈ ಸಂದರ್ಭದಲ್ಲಿ ಡಿವೈಎಸ್‌ಪಿ ಇ. ಕೇಶವ್, ಸಿಪಿಐ ಎಲ್. ರಾಜಶೇಖರ್, ಪಿಎಸ್‌ಐಗಳಾದ ಎಚ್.ಎನ್. ನಾಗರಾಜ್, ಚಂದನ್, ರಾಜುರೆಡ್ಡಿ, ಎಎಸ್‌ಐಗಳಾದ ಲಿಂಗರಾಜ್, ಶಿವಮೂರ್ತಿ, ಸಿಬ್ಬಂದಿ ನಾಗೇಶ್, ನಾಗರಾಜ್, ರಾಘವೇಂದ್ರ, ಲೋಕೇಶ್, ವಿನಯ್, ಪ್ರದೀಪ್, ಸಂದೀಪ್, ಮಂಜುನಾಥ ದೈವಜ್ಞ, ಉಷಾ, ಹೇಮಲತಾ ಸೇರಿದಂತೆ ಇಲಾಖಾ ಸಿಬ್ಬಂದಿ ಮತ್ತು ಸ್ಥಳೀಯ ಮುಖಂಡರು ಇದ್ದರು.

CM Siddharamaih ಸಾಮಾಜಿಕ ಕಳಕಳಿ ಹೊಂದಿರುವ‌‌ ಬಜೆಟ್- ಎ.ಎಚ್.ಸುನೀಲ್

0

CM Siddharamaih ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿರುವ ಬಜೆಟ್‌ನಲ್ಲಿ ಎಲ್ಲ ವರ್ಗದ ಸಮುದಾಯಗಳಿಗೂ ಆದ್ಯತೆ ನೀಡಲಾಗಿದೆ ಎಂದು ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎ.ಎಚ್.ಸುನೀಲ್ ಹೇಳಿಕೆ ನೀಡಿದ್ದಾರೆ.
ಸರ್ವಜನಾಂಗದ ಅಭಿವೃದ್ಧಿಯ ಬಜೆಟ್ ಇದಾಗಿದೆ. ಬಜೆಟ್‌ನಲ್ಲಿ ಎಲ್ಲ ಸಮುದಾಯಗಳಿಗೂ ಆದ್ಯತೆ ನೀಡಲಾಗಿದೆ. ಸಾಮಾಜಿಕ ಕಳಕಳಿ ಹೊಂದಿರುವ ಕಲ್ಯಾಣ ಕಾರ್ಯಕ್ರಮಗಳನ್ನು ಜಾರಿಗೊಳಿಸಲಾಗಿದೆ. ಕೈಗಾರಿಕಾ ಬೆಳವಣಿಗೆಗೆ ಹೆಚ್ಚಿನ ಪ್ರಾತಿನಿಧ್ಯ ನೀಡಲಾಗಿದೆ. ರಾಜ್ಯದ ಭವಿಷ್ಯದ ದೃಷ್ಟಿಯಿಂದ ದಿಕ್ಸೂಚಿಯಾಗಿ ಹೊರಹೊಮ್ಮಲಿದೆ. ಎಲ್ಲ ವರ್ಗದವರಿಗೂ ಯೋಜನೆಗಳು ತಲುಪಲಿವೆ ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಸಿದ್ದರಾಮಯ್ಯ ಪರಿಪೂರ್ಣ ಬಜೆಟ್ ಮಂಡಿಸಿದ್ದು, ಕೃಷಿ, ನೀರಾವರಿ, ಮೂಲ ಸೌಕರ್ಯ, ಕೈಗಾರಿಕಾ, ವಾಣಿಜ್ಯ ಕ್ಷೇತ್ರಗಳಿಗೆ ಆದ್ಯತೆ ನೀಡಲಾಗಿದೆ. ಗ್ಯಾರಂಟಿ ಯೋಜನೆ ನಾಡಿನ ಲಕ್ಷಾಂತರ ಕುಟುಂಬಗಳಿಗೆ ಹಾಗೂ ಎಲ್ಲ ವರ್ಗದ ಜನರಿಗೂ ತಲುಪುತ್ತಿವೆ ಎಂದು ತಿಳಿಸಿದ್ದಾರೆ.
CM Siddharamaih ಎಲ್ಲ ಭರವಸೆಗಳನ್ನು ಈಡೇರಿಸುವ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ನುಡಿದಂತೆ ನಡೆದಿದೆ. ಗ್ಯಾರಂಟಿಗಳಿಗೆ ಅನುದಾನ ಮುಂದುವರೆಸುವ ಜತೆಯಲ್ಲಿ ಕರ್ನಾಟಕದ ರಾಜ್ಯದ ಸಮಗ್ರ ಅಭಿವೃದ್ಧಿಗೆ ಪ್ರಾಮುಖ್ಯತೆ ನೀಡಲಾಗಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Information & Broadcasting ಚಿತ್ರರಂಗದ ಉಳಿವಿಗೆ ಪೈರಸಿ ಹಾವಳಿ ತಡೆಯಬೇಕು- ಸಚಿವ ಸಂತೋಷ್ ಲಾಡ್

0

Information & Broadcasting ಚಲನಚಿತ್ರ ಸಶಕ್ತ ಮಾಧ್ಯಮವಾಗಿದ್ದು, ಏಕಪರದೆಯ ಚಿತ್ರಮಂದಿರಗಳ ಸಂಖ್ಯೆ ಇಳಿಮುಖವಾಗುತ್ತಿರುವುದು ಕಳವಳದ ಸಂಗತಿಯಾಗಿದೆ, ಜಗತ್ತಿನ ಇತರೆ ರಾಷ್ಟ್ರಗಳಲ್ಲಿ ಚಿತ್ರಮಂದಿರಗಳ ಸಂಖ್ಯೆ ಹೆಚ್ಚಾಗುತ್ತಿರುವದನ್ನು ತುಲನಾತ್ಮಕವಾಗಿ ಅಧ್ಯಯನ ಮಾಡಿ, ಚಿತ್ರರಂಗದ ಉಳಿವು ಮತ್ತು ಬೆಳವಣಿಗೆಗೆ ಎಲ್ಲರೂ ಪಣತೊಡಬೇಕು.ಪೈರಸಿ ಹಾವಳಿ ತಡೆಯಬೇಕು ಎಂದು ಕಾರ್ಮಿಕ ಸಚಿವರಾದ ಸಂತೋಷ್ ಲಾಡ್ ಹೇಳಿದರು.

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಕರ್ನಾಟಕ ಚಲನಚಿತ್ರ ಅಕಾಡೆಮಿ ಸಹಯೋಗದಲ್ಲಿಂದು ವಾರ್ತಾಸೌಧದ ಸುಲೋಚನ ಸಭಾಂಗಣದಲ್ಲಿಂದು ಸಂಜೆ ಆಯೋಜಿಸಿದ್ದ 16 ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಪ್ರಶಸ್ತಿ ಪ್ರದಾನ ಹಾಗೂ ಸಮಾರೋಪ ಸಮಾರಂಭ ಉದ್ದೇಶಿಸಿ ಅವರು ಮಾತನಾಡಿದರು,

ಮಾಹಿತಿ,ಉದ್ಯೋಗ ಮತ್ತು ಆದಾಯ ತರುವ ಸಿನಿಮಾ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುವವರಿಗೆ ಸಾಮಾಜಿಕ ಭದ್ರತೆ ಒದಗಿಸಲು ಸಿನಿ ಮಸೂದೆ ಜಾರಿಗೊಳಿಸುವ ಅಗತ್ಯವಿದೆ.
ಇದಕ್ಕೆ ಸಿನೆಮಾ ರಂಗದ ಎಲ್ಲರ ಸಹಕಾರ ಬೇಕು.
ಸಣ್ಣ ಬಜೆಟ್ ಚಲನಚಿತ್ರಗಳಿಗೆ ಮುಖ್ಯ ವೇದಿಕೆ ಒದಗಿಸಬೇಕು ಎಂದರು.

ದೇಶದ ಅಭಿವೃದ್ಧಿಯನ್ನು ಮಹಿಳೆಯರ ಸಾಧನೆಗಳ ಮೂಲಕ ಅಳೆಯಬೇಕು ಎಂಬ ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರ ನುಡಿಗಳನ್ನು ಸ್ಮರಿಸಿದ ಅವರು, ಮಹಿಳೆಗೆ ಆಸ್ತಿಯಲ್ಲಿ ಸಮಾನ ಹಕ್ಕು, ಸ್ವಾತಂತ್ರ್ಯ ಕಲ್ಪಿಸಲು,ಮಾತೃತ್ವ ರಜೆ, ವಿಚ್ಛೇದನ ಹಕ್ಕುಗಳನ್ನು ಸಂವಿಧಾನ ಮೂಲಕ ನೀಡಿದ ಶ್ರೇಯಸ್ಸು ಅಂಬೇಡ್ಕರ್ ಅವರಿಗೆ ಸಲ್ಲುತ್ತದೆ. ಎಲ್ಲ ಮಹಿಳೆಯರು ಅವರನ್ನು ಸ್ಮರಿಸಬೇಕು.ಹಿಂದೂ ಕೋಡ್ ಬಿಲ್ ಜಾರಿಗೆ ಆಗ್ರಹಿಸಿ ಕೇಂದ್ರದ ಮಂತ್ರಿಸ್ಥಾನಕ್ಕೆ ಅಂಬೇಡ್ಕರ್ ಅವರು ರಾಜೀನಾಮೆ ನೀಡಿದ್ದರು,ಅವರು ಕೇವಲ ಎಸ್ ಸಿ ಹಾಗೂ ಎಸ್ ಟಿ ಗಳಿಗೆ ಸೀಮಿತವಲ್ಲ ಎಂದು ಸಚಿವ ಸಂತೋಷ ಲಾಡ್ ಅಭಿಪ್ರಾಯ ಪಟ್ಟರು.

16ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ರಾಯಭಾರಿ ನಟ ಕಿಶೋರ್‌ಕುಮಾರ್ ಜಿ ಮಾತನಾಡಿ ,ನಮಗೆಲ್ಲ ಇತಿಹಾಸ ಮತ್ತು ಐತಿಹಾಸಿಕ ಪುರುಷರ ಬಗ್ಗೆ ಹೆಮ್ಮೆಯಿದೆ, ಅವರ ಸಂದೇಶಗಳು ಮುಖ್ಯ ಎಂಬ ಹೇಳುವ ಧಾವಂತದಲ್ಲಿಯೇ ಅವರ ಆದರ್ಶಗಳ ಪಾಲನೆಯನ್ನು ಮರೆತು ಬಿಡುತ್ತೇವೆ.ಕನ್ನಡದ ಮೊದಲ ವಾಕ್ಚಿತ್ರ ಸತಿ ಸುಲೋಚನದ ಮೂಲಕ ಬೆಳ್ಳಾವೆ ನರಹರಿಶಾಸ್ತ್ರಿಗಳು ಯುದ್ಧ ಬೇಡ ಶಾಂತಿ ಬೇಕು ಎಂಬ ಮಹಾನ್ ಮಾನವತೆಯ ಸಂದೇಶ ಸಾರಿದ ಹಿನ್ನೆಲೆ ಕನ್ನಡ ಚಿತ್ರರಂಗಕ್ಕಿದೆ, ಬೇಡರ ಕಣ್ಣಪ್ಪ,ಸನಾದಿ ಅಪ್ಪಣ್ಣ ಮೊದಲಾದ ಚಿತ್ರಗಳ ಮೂಲಕ ಜಾತಿ ಪದ್ಧತಿ ವಿರುದ್ಧ ಸಮಾನತೆಯ ಧ್ವನಿ ಸಾರಿದ ಡಾ.ರಾಜ್‌ಕುಮಾರ್ ಅವರು, ಕಣ್ಣಪ್ಪನ ಮೂಲಕ ಧರ್ಮದ ಸರಿ ತಪ್ಪುಗಳನ್ನು ಒರೆಗೆ ಹಚ್ಚಿದ್ದರು ಎಂದರು. ಸತ್ಯವನ್ನು ಧೈರ್ಯವಾಗಿ ಹೇಳುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಂತಹ ನಾಯಕರು ಇಂದು ಬೇಕಾಗಿದ್ದಾರೆ.ಸವರ್ಣೀಯರೆಲ್ಲರೂ ಶೋಷಕರಲ್ಲ ಅಂತಹವರನ್ನು ಒಳಗೊಳ್ಳುವಿಕೆ ಆಗಬೇಕಿದೆ, ಪುರಾಣವನ್ನು ಪುರಾಣವಾಗಿ,ಇತಿಹಾಸವನ್ನು ಇತಿಹಾಸವಾಗಿ ನೋಡುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದರು.

ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಡಾ.ಸಾಧು ಕೋಕಿಲ ಮಾತನಾಡಿ , ಚಲನಚಿತ್ರೋತ್ಸವದ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯಮಂತ್ರಿಯವರಿಗೆ ಮಾಡಿದ ಮನವಿಗೆ ಸರ್ಕಾರವು ಸ್ಪಂದಿಸಿದ್ದು ,2025-26 ನೇ ಸಾಲಿನ ಅಯವ್ಯಯದಲ್ಲಿ ಚಲನಚಿತ್ರ ಅಕಾಡೆಮಿಯ ಆವರಣದಲ್ಲಿ ಸಿನೆಮಾ ಸಂಕೀರ್ಣ ಹಾಗೂ ಚಲನಚಿತ್ರ ಭಂಡಾರ ಸ್ಥಾಪನೆಯ ಘೋಷಣೆ ಮಾಡಿದ್ದಾರೆ, ಕನ್ನಡ ಚಿತ್ರಪ್ರದರ್ಶನಕ್ಕೆ ಗರಿಷ್ಠ ಟಿಕೆಟ್ ದರ 200 ರೂ ನಿಗದಿಗೆ ಕ್ರಮವಹಿಸಿರುವುದು ಹಾಗೂ ಚಲನಚಿತ್ರರಂಗವನ್ನು ಉದ್ಯಮವೆಂದು ಪರಿಗಣಿಸಿ ಹಲವು ಸೌಲಭ್ಯ ಒದಗಿಸಲು ಮುಂದಾಗಿರುವುದನ್ನು ಸ್ವಾಗತಿಸಿದರು.ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಕಳೆದ ವರ್ಷಕ್ಕೆ ಹೋಲಿಸಿದರೆ ಪ್ರಸಕ್ತ ವರ್ಷ ಶೇ. 30 ರಿಂದ 40 ರಷ್ಟು ಪ್ರೇಕ್ಷಕರ ಹೆಚ್ಚಳ ಕಂಡುಬಂದಿದೆ, 52 ಸಾವಿರಕ್ಕೂ ಜನರು ಸಿನೆಮಾ ವೀಕ್ಷಿಸಿದ್ದಾರೆ‌. 4217 ಜನ ಸಿನೆಮಾಸಕ್ತರು ನೋಂದಣಿಯಾಗಿದ್ದರು ಎಂದರು

ಚಿತ್ರೋತ್ಸವದ ಕಲಾತ್ಮಕ ನಿರ್ದೇಶಕ ಎನ್. ವಿದ್ಯಾಶಂಕರ್ ಮಾತನಾಡಿ, ಚಿತ್ರೋತ್ಸವವು ಬೆಂಗಳೂರಿನಲ್ಲಿ ಜಗತ್ತನ್ನು ಬಿಂಬಿಸಿದೆ. ಸಾವಿರದ ಐನೂರು ವರ್ಷಗಳಷ್ಟು ಹಳೆಯದಾದ ಕನ್ನಡ ಸಂಸ್ಕೃತಿಯನ್ನು ಜಾಗತಿಕವಾಗಿ ಪಸರಿಸಲು ಚಿತ್ರೋತ್ಸವ ವೇದಿಕೆಯಾಗಿ ಬೆಳೆಯುತ್ತಿದೆ ಎಂದರು.

16 ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಅಂಗವಾಗಿ ಜೀವಮಾನ ಸಾಧನೆ ಪ್ರಶಸ್ತಿಗೆ ಆಯ್ಕೆಯಾದ ಹೆಸರಾಂತ ನಟಿ ಶಬಾನಾ ಅಜ್ಮೀ ಪರವಾಗಿ ಅವರ ಬಾಲ್ಯದ ಗೆಳತಿ ಪ್ರತಿಭಾನ್ವಿತ ಕಲಾವಿದೆ ಅರುಂಧತಿ ನಾಗ್ ಪ್ರಶಸ್ತಿ ಸ್ವೀಕರಿಸಿದರು.ಪ್ರಶಸ್ತಿಯು ಹತ್ತು ಲಕ್ಷ ರೂ.ನಗದು ಹಾಗೂ ಸ್ಮರಣಿಕೆ ಒಳಗೊಂಡಿದೆ.

ಅರುಂಧತಿ ನಾಗ್ ಮಾತನಾಡಿ, ಶಬಾನಾ ಆಜ್ಮೀ ಭಾರತೀಯ ಚಿತ್ರರಂಗದ ಮೇರುನಟಿ, ಅಕೆ ಕೇವಲ ಸಿನೆಮಾ ನಟಿ ಮಾತ್ರವಲ್ಲ ತುಳಿತಕ್ಕೊಳಗಾದವರ ಪರ ಧ್ವನಿ ಎತ್ತುವ,ಸತ್ಯವನ್ನು ನಿಷ್ಠುರವಾಗಿ ಹೇಳುವ ಮಹಾನ್ ವ್ಯಕ್ತಿತ್ವವಾಗಿದ್ದಾರೆ, ಅವರ ಅನುಪಸ್ಥಿತಿಯಲ್ಲಿ ಪ್ರಶಸ್ತಿ ಸ್ವೀಕರಿಸಿರುವುದು ಸಂತಸ ತಂದಿದೆ ಎಂದರು.

ಕನ್ನಡ ಸ್ಪರ್ಧಾ ವಿಭಾಗ,ಭಾರತೀಯ ಸ್ಪರ್ಧಾ ವಿಭಾಗ,ಏಷಿಯನ್ ಸ್ಪರ್ಧಾ ವಿಭಾಗಗಳ ತೀರ್ಪುಗಾರರನ್ನು ಸನ್ಮಾನಿಸಿ,ಗೌರವಿಸಲಾಯಿತು.
ತೀರ್ಪುಗಾರರ ವಿಶೇಷ ಮೆಚ್ಚುಗೆ ಚಿತ್ರ,ಏಷಿಯನ್ ಸ್ಪರ್ಧೆ,ಇಂಡಿಯನ್ – ಚಿತ್ರಭಾರತಿ ಸ್ಪರ್ಧೆ,ಕನ್ನಡ ಸ್ಪರ್ಧೆ ವಿಭಾಗದಲ್ಲಿ ಪ್ರಶಸ್ತಿಗಳನ್ನು ಪಡೆದ ಚಲನಚಿತ್ರಗಳ ನಿರ್ದೆಶಕರು ಹಾಗೂ ನಿರ್ಮಾಪಕರಿಗೆ ಪ್ರಶಸ್ತಿ ನೀಡಿ,ಗೌರವಿಸಲಾಯಿತು.

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ನರಸಿಂಹಲು, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸರ್ಕಾರದ ಕಾರ್ಯದರ್ಶಿ ಬಿ.ಬಿ.ಕಾವೇರಿ,ಅಕಾಡೆಮಿಯ ರಿಜಿಸ್ಟ್ರಾರ್ ಹಿಮಂತ್‌ರಾಜು ವೇದಿಕೆಯಲ್ಲಿದ್ದರು.

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಆಯುಕ್ತ ಹೇಮಂತ್ ಎಂ ನಿಂಬಾಳ್ಕರ್ ಸ್ವಾಗತಿಸಿದರು, ಜಂಟಿ ನಿರ್ದೇಶಕ ಮಂಜುನಾಥ ಡೊಳ್ಳಿನ ವಂದಿಸಿದರು.ಉಷಾ ಕೋಕಿಲ ಮತ್ತು ತಂಡದಿಂದ ಸಂಗೀತ ಕಾರ್ಯಕ್ರಮ ಜರುಗಿತು.

Rotary Shivamogga ರಾಮಾಯಣ, ಮಹಾಭಾರತ ಕಥೆಗಳನ್ನ ಮನೆಯಲ್ಲಿಯೇ ಮಕ್ಕಳಿಗೆ ಹೇಳಬೇಕು- ಉಷಾ ನಟೇಶ್ ಕಾಸರವಳ್ಳಿ

0

Rotary Shivamogga ಪ್ರಸ್ತುತ ಮನೆಗಳಲ್ಲಿ ಕಥೆಗಳನ್ನು ಹೇಳುವವರ ಸಂಖ್ಯೆ ಕ್ಷೀಣಿಸುತ್ತಿದ್ದು, ಮೊಬೈಲ್ ಹಾವಳಿಯಿಂದ ಮಕ್ಕಳ ಮನಸ್ಸು ಸಂಕುಚಿತವಾಗುತ್ತದೆ. ಉತ್ತಮ ಕಥೆಗಳನ್ನು ಆಲಿಸುವುದರಿಂದ ಮಕ್ಕಳಲ್ಲಿ ಕ್ರೀಯಾತ್ಮಕ ಆಲೋಚನಾ ಶಕ್ತಿ ವೃದ್ಧಿಯಾಗುತ್ತದೆ ಎಂದು ಲೇಖಕಿ ಉಷಾ ನಟೇಶ್ ಕಾಸರವಳ್ಳಿ ಹೇಳಿದರು.

ರಾಜೇಂದ್ರ ನಗರದ ರೋಟರಿ ಸಭಾಂಗಣದಲ್ಲಿ ರೋಟರಿ ಶಿವಮೊಗ್ಗ ಪೂರ್ವ ಸಂಸ್ಥೆಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿ, ರಾಮಾಯಣ, ಮಹಾಭಾರತ ಕುರಿತಾದ ಕಥನಗಳನ್ನು ಮಕ್ಕಳಿಗೆ ಬಾಲ್ಯದಲ್ಲಿಯೇ ಹೇಳುವ ಕೆಲಸ ಮನೆಗಳಲ್ಲಿ ಆಗಬೇಕು. ಕಿರುತೆರೆ, ಬೆಳ್ಳಿತೆರೆಗಳನ್ನು ಕಥನಗಳನ್ನು ಪ್ರಸ್ತುತಪಡಿಸಲಾಗುತ್ತಿದೆ ಎಂದು ತಿಳಿಸಿದರು.

ಪೊನ್ನಜ್ಜಿ ಕಥೆಗಳು ಬದುಕನ್ನು ಬದಲಾಯಿಸುವ ಜತೆಯಲ್ಲಿ ಮಾನಸಿಕ ಸಾಮಾರ್ಥ್ಯ ವೃದ್ಧಿಸುತ್ತದೆ. ಕಥೆಗಳು ನಮ್ಮ ಬಾಲ್ಯದ ಬದುಕನ್ನು ಉತ್ತಮಗೊಳಿಸುವ ಜತೆಯಲ್ಲಿ ಜೀವನ ಮೌಲ್ಯಗಳನ್ನು ಕಲಿಸುತ್ತವೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ರೋಟರಿ ಶಿವಮೊಗ್ಗ ಪೂರ್ವ ಅಧ್ಯಕ್ಷ ಅರುಣ್ ದೀಕ್ಷಿತ್ ಮಾತನಾಡಿ, ಯಶಸ್ಸಿನ ಕಥೆಗಳು ಎಲ್ಲರ ಬದುಕಿಗೂ ಸ್ಪೂರ್ತಿಯಾಗುತ್ತದೆ. ಸಾಧನೆಯ ಹಾದಿಯಲ್ಲಿ ಮುನ್ನಡೆಯಲು ಪ್ರೇರಕ ಶಕ್ತಿಯಾಗುತ್ತವೆ. ಬಾಲ್ಯದಲ್ಲಿ ಮಕ್ಕಳಿಗೆ ಜೀವನಮೌಲ್ಯ ತಿಳಿಸುವ ನೀತಿ ಕಥೆಗಳನ್ನು ಕಲಿಸಬೇಕು ಎಂದು ಹೇಳಿದರು.

Rotary Shivamogga ಆಕಾಶವಾಣಿ ಕಲಾವಿದರಾದ ಉಷಾ ನಟೇಶ್ ಕಾಸರವಳ್ಳಿ ಅವರನ್ನು ಸನ್ಮಾನಿಸಲಾಯಿತು. ನಂತರ ಸದಸ್ಯರೊಂದಿಗೆ ಸಂವಾದ ನಡೆಸಲಾಯಿತು. ಮಾಜಿ ಸಹಾಯಕ ಗವರ್ನರ್ ಜಿ.ವಿಜಯಕುಮಾರ್, ರೋಟರಿ ಶಿವಮೊಗ್ಗ ಪೂರ್ವ ಕಾರ್ಯದರ್ಶಿ ಶಶಿಕಾಂತ್ ನಾಡಿಗ್, ಡಾ. ಪರಮೇಶ್ವರ ಶಿಗ್ಗಾವ್, ನಟೇಶ್ ಕಾಸರವಳ್ಳಿ, ಎಚ್.ಬಿ.ಆದಿಮೂರ್ತಿ, ಡಾ. ಅರುಣ್, ಡಾ. ಧನಂಜಯ, ಎನ್.ಎಚ್.ಶ್ರೀಕಾಂತ್, ಕಿಶೋರ್‌ಕುಮಾರ್, ಗಣೇಶ್, ಶ್ರೀನಿವಾಸ್, ಕೃಷ್ಣಮೂರ್ತಿ, ರೋಟರಿ ಶಿವಮೊಗ್ಗ ಪೂರ್ವ, ಇನ್ನರ್‌ವ್ಹೀಲ್ ಶಿವಮೊಗ್ಗ ಸದಸ್ಯೆಯರು ಹಾಜರಿದ್ದರು.

Inner Wheel Club of Shimoga ಸಾಕಷ್ಟು ಹಿಂದುಳಿದ ಮಹಿಳೆಯರು ಸಮಾಜದಲ್ಲಿದ್ದಾರೆ. ಅವರಿಗೆ ಸಹಕಾರ ನೀಡಬೇಕು- ವಾಗ್ದೇವಿ ಬಸವರಾಜ್

0

Inner Wheel Club of Shimoga ಯಾವುದೇ ದಿನಾಚರಣೆಗಳು ಹಾಗೂ ಹುಟ್ಟು ಹಬ್ಬಗಳು ಮತ್ತು ವಿವಾಹ ವಾರ್ಷಿಕೋತ್ಸವಗಳು ಸಮಾಜಮುಖಿಯಾಗಿರಬೇಕು ಹಾಗೂ ಅರ್ಥಪೂರ್ಣವಾಗಿರಬೇಕು. ಸಡಗರ ಸಂಭ್ರಮದ ಜೊತೆಗೆ ಮನುಕುಲದ ಸೇವೆಯು ಸಹ ಮುಖ್ಯ ಎಂದು ಇನ್ನರ್ವಿಲ್ ಶಿವಮೊಗ್ಗ ಪೂರ್ವ ಸಂಸ್ಥೆಯ ಅಧ್ಯಕ್ಷರಾದ ವಾಗ್ದೇವಿ ಬಸವರಾಜ್ ಅಭಿಮತ ವ್ಯಕ್ತಪಡಿಸಿದರು.

ಆಕಾಶ್ ಹೋಟೆಲ್ ನಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಇಂದು ಸಮಾಜದಲ್ಲಿ ಸಾಕಷ್ಟು ಆರ್ಥಿಕವಾಗಿ ಹಿಂದುಳಿದ ಮಹಿಳೆಯರು ಇದ್ದಾರೆ. ಅವರಿಗೆ ಸಲಹೆ ಸಹಕಾರ ನೀಡುವುದರಿಂದ ಅವರ ಬದುಕು ಹಸನವಾಗುತ್ತದೆ. ಹಾಗೂ ನಮ್ಮ ಸಂಸ್ಥೆಯ ಗೌರವವು ಹೆಚ್ಚಾಗುತ್ತೆ ಎಂದು ನುಡಿದರು.

ಇದೇ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಪ್ರಖ್ಯಾತ ಮೂಳೆ ತಜ್ಞ ಡಾ. ಆಕಾಶ್ ಮಾತನಾಡಿ, ಮಹಿಳೆಯರಲ್ಲಿ ಸಾಮಾನ್ಯವಾಗಿ ಕೀಲು ಮೂಳೆಗಳ ಸಮಸ್ಯೆ ಜಾಸ್ತಿ ಇರುತ್ತದೆ. ಆದ್ದರಿಂದ ಅವರು ದೈಹಿಕ ಚಟುವಟಿಕೆ ಹಾಗೂ ನಿತ್ಯ ಯೋಗ ಪ್ರಾಣಾಯಾಮ ಧ್ಯಾನ ಆಹಾರ ಪದಾರ್ಥಗಳನ್ನು ಸೇವನೆ ಮಾಡಬೇಕು. ದೇಹದ ತೂಕವನ್ನು ಸರಿಯಾದ ಪ್ರಮಾಣದಲ್ಲಿ ಇಟ್ಟುಕೊಳ್ಳಬೇಕು ಒತ್ತಡದಿಂದ ದೂರವಿರಬೇಕು ಎಂದು ಅನೇಕ ಸಲಹೆಗಳನ್ನು ನೀಡಿದರು.

ಕಾರ್ಯಕ್ರಮದಲ್ಲಿ ಇನ್ನರ್ವಿಲ್ ಸಂಸ್ಥೆ ವತಿಯಿಂದ ಆರ್ಥಿಕವಾಗಿ ಹಿಂದುಳಿದ ಮೂರು ಜನ ಮಹಿಳೆಯರಾದ ಅಂಕಿತ, ಕಾಮಾಕ್ಷಿ ಹಾಗೂ ಭಾಗ್ಯ ಇವರಿಗೆ ಹೊಲಿಗೆ ಯಂತ್ರಗಳನ್ನ ವಿತರಿಸಲಾಯಿತು.

ಇದೇ ಸಂದರ್ಭದಲ್ಲಿ ಮಾಜಿ ಇನ್ನರ್ ವೀಲ್ ಅಧ್ಯಕ್ಷರಾದ ಬಿಂದು ವಿಜಯ ಕುಮಾರ್, ನಿಯೋಜಿತ ಜಿಲ್ಲಾ ಚೇರ್ಮನ್ ಶಬರಿ ಕಡಿದಾಳ್,
ಕಾರ್ಯದರ್ಶಿ ಲತಾ ಸೋಮಣ್ಣ, ನಮಿತಾ ಸೂರ್ಯನಾರಾಯಣ ರಾವ್, ವಿಜಯ ರಾಯ್ಕರ್, ವೀಣಾ ಸುರೇಶ್, ವೇದಾ ನಾಗರಾಜ್, ಶಿಲ್ಪಾ ಗೋಪಿನಾಥ್ ಹಾಗೂ ಇನ್ನರ್ವಿಲ್ ಸದಸ್ಯರು ಉಪಸ್ಥಿತರಿದ್ದರು.

JCI Shivamogga ಜೆಸಿಐ ನಲ್ಲಿ ತೊಡಗಿಸಿಕೊಂಡರೆ ಪರಿಪೂರ್ಣ ವ್ಯಕ್ತಿತ್ವ ಬೆಳವಣಿಗೆ- ಸೂರ್ಯ ನಾರಾಯಣ ವರ್ಮ

0

JCI Shivamogga ಸಮಾಜಮುಖಿ ಚಟುವಟಿಕೆಗಳ ಜತೆಯಲ್ಲಿ ಸದೃಢ ಸಮಾಜ ನಿರ್ಮಾಣ ಮಾಡುವಲ್ಲಿ ಜೆಸಿಐ ಮಹತ್ತರ ಪಾತ್ರ ವಹಿಸಿದೆ. ಯುವಜನರಿಗೆ ವ್ಯಕ್ತಿತ್ವ ವಿಕಸನ ಮಾರ್ಗದರ್ಶನ ನೀಡುತ್ತಿದೆ ಎಂದು ಜೆಸಿಐ ರಾಷ್ಟ್ರೀಯ ಉಪಾಧ್ಯಕ್ಷ ಸೂರ್ಯನಾರಾಯಣ ವರ್ಮ ಹೇಳಿದರು.

ಶಿವಮೊಗ್ಗ ನಗರದ ಸರ್ಕಾರಿ ನೌಕರರ ಭವನದಲ್ಲಿ ಶಿವಮೊಗ್ಗ ನಗರದ 19 ಜೆಸಿಐ ಸಂಸ್ಥೆಗಳಿಂದ ಆಯೋಜಿಸಿದ್ದ ಅಧಿಕೃತ ಭೇಟಿ ಸಮಾರಂಭದಲ್ಲಿ ಮಾತನಾಡಿ, ಜೆಸಿಐ ಫೌಂಡೇಶನ್ ವತಿಯಿಂದ ಈಗಾಗಲೇ ಸಾಕಷ್ಟು ಆರ್ಥಿಕವಾಗಿ ಹಿಂದುಳಿದ ಬಡ ಮಕ್ಕಳಿಗೆ ವಿದ್ಯಾಭ್ಯಾಸ ಕೊಡುವುದರ ಮುಖಾಂತರ ಶಿಕ್ಷಣದಲ್ಲಿ ಕ್ರಾಂತಿ ಮಾಡಿದೆ. ಯುವಜನರಿಗೆ ಶಾಲಾ ಕಾಲೇಜುಗಳಲ್ಲಿ ವ್ಯಕ್ತಿತ್ವ ವಿಕಸನದ ತರಬೇತಿ ನೀಡಿದೆ. ಇದರಿಂದ ಉತ್ತಮ ಸದೃಢ ಸಮಾಜ ನಿರ್ಮಾಣವಾಗುವುದರ ಜತೆಗೆ ದೇಶದ ಆಸ್ತಿಯಾಗುತ್ತಾರೆ ಎಂದು ತಿಳಿಸಿದರು.

ಈಗಾಗಲೇ ಶಿವಮೊಗ್ಗದಲ್ಲಿ ಅತಿ ಹೆಚ್ಚು ಜೆಸಿ ಘಟಕಗಳಿದ್ದು, ಇದರ ಮುಖಾಂತರ ಸಾಕಷ್ಟು ಸೇವಾ ಚಟುವಟಿಕೆಗಳನ್ನು ಮಾಡುತ್ತಿದ್ದು, ಜನಮಾನಸವನ್ನು ತಲುಪಿ ಒಳ್ಳೆಯ ಪ್ರಶಂಸೆಗೆ ಪಾತ್ರವಾಗಿದೆ. ಜೆಸಿಐ ಸಂಸ್ಥೆಯಲ್ಲಿ ತೊಡಗಿಸಿಕೊಂಡವರು ರಾಷ್ಟ್ರದ ಮುನ್ನಡೆಯಲ್ಲಿ ಪಾತ್ರ ವಹಿಸದ್ದಾರೆ. ಬಾಲ್ಯದಲ್ಲಿ ಜೆಸಿಐ ಸಂಸ್ಥೆಯಲ್ಲಿ ತೊಡಗಿಸಿಕೊಳ್ಳುವುದರಿಂದ ಪರಿಪೂರ್ಣ ವ್ಯಕ್ತಿಗಳಾಗಿ ನಿರ್ಮಾಣಗೊಳ್ಳುತ್ತಾರೆ. ಸಂಸ್ಕಾರದ ಜೊತೆಗೆ ಮಾನವೀಯ ಮೌಲ್ಯಗಳು ಹಾಗೂ ಜೀವನ ಕೌಶಲ್ಯಗಳು ವೃದ್ಧಿಯಾಗುತ್ತವೆ ಎಂದರು.

ಇದೇ ಸಂದರ್ಭದಲ್ಲಿ ವಲಯ ಅಧ್ಯಕ್ಷ ಗೌರೀಶ್ ಭಾರ್ಗವ್ ಮಾತನಾಡಿ, ಶಿವಮೊಗ್ಗ ಜಿಲ್ಲೆಗೆ ನಮ್ಮ ಜೆಸಿಐ ಸಂಸ್ಥೆಗಳು ಅನೇಕ ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಾ ತನ್ನದೇ ಆದ ಛಾಪು ಮೂಡಿಸಿವೆ. ಇದರಿಂದ ಜೆಸಿಐ ಸಂಸ್ಥೆ ವಿಶ್ವದಲ್ಲಿ ವಿಶೇಷ ಸ್ಥಾನಮಾನ ಹೊಂದಿದೆ. ಇದರಿಂದ ಹೆಚ್ಚು ಹೆಚ್ಚು ಸದಸ್ಯರು ಸಂಸ್ಥೆಗೆ ಸೇರ್ಪಡೆಗೊಳ್ಳುತ್ತಿದ್ದಾರೆ ಎಂದು ತಿಳಿಸಿದರು.

JCI Shivamogga ಇದೇ ಸಂದರ್ಭದಲ್ಲಿ ಸೂರ್ಯನಾರಾಯಣ ವರ್ಮ ಅವರಿಗೆ ಸನ್ಮಾನಿಸಿ ಗೌರವಿಸಲಾಯಿತು. ವಲಯ ಉಪಾಧ್ಯಕ್ಷ ಮಧುಸೂದನ್ ನಾವಡ, ಅನುಷ್ ಗೌಡ, ರೇಖಾ ರಂಗನಾಥ್, ತಾಯಿಮನೆ ಸುದರ್ಶನ್, ವಿನುತ್ ಶಿಕಾರಿಪುರ, ಜೆಸಿಐ ಸಹ್ಯಾದ್ರಿ ಘಟಕದ ಅಧ್ಯಕ್ಷ ಗಣೇಶ.ಜಿ ಹಾಗೂ ಜೆಸಿಐನ 19 ಜನ ಅಧ್ಯಕ್ಷರು, ಕಾರ್ಯದರ್ಶಿ, ಪದಾಧಿಕಾರಿಗಳು, ಸದಸ್ಯರು ಇದ್ದರು.

International Women’s Day ಮಹಿಳೆಯರು ಎಲ್ಲಾ ಕ್ಷೇತ್ರಗಳಲ್ಲೂ ಛಾಪು ಮೂಡಿಸಬೇಕು- ಶಾರದಾ ಪೂರ್ಯಾನಾಯಕ್

0

International Women’s Day ಮಹಿಳೆಯರು ಎಲ್ಲಾ ಕ್ಷೇತ್ರದಲ್ಲು ತಮ್ಮ ಛಾಪನ್ನು ಮೂಡಿಸುವ ಮೂಲಕ ತಮ್ಮ ಅಸ್ತಿತ್ವವನ್ನು ಉಳಿಸಿಕೊಂಡು ಸಾಧನೆ ಶಿಖರವನ್ನು ಏರಬೇಕು ಎಂದು ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದ ಶಾಸಕರಾದ ಶಾರದಾ ಪೂರ್ಯನಾಯ್ಕ್‌ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಮಹಿಳಾ ಸಬಲೀಕರಣ ಘಟಕ ಹಾಗೂ ಬೇಟಿ ಬಚಾವೋ ಬೇಟಿ ಪಡಾವೋ ಯೋಜನೆಯ ಸಂಯುಕ್ತಾಶ್ರಯದಲ್ಲಿ ಶಿವಮೊಗ್ಗ ನಗರದ ಕುವೆಂಪು ರಂಗಮಂದಿರದಲ್ಲಿ ಆಯೋಜಿಸಿದ್ದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮಹಿಳೆಯರಿಗೆ ಇತಿಹಾಸದಲ್ಲಿ ಮಹತ್ವವಾದ ಸ್ಥಾನ ಇದೆ. ಶತಮಾನಗಳಿಂದ ಸಾಕಷ್ಟು ಸಮಸ್ಯೆಗಳ ವಿರುದ್ದ ಸಂಘಟನೆ ಕಟ್ಟಿಕೊಂಡು ಹೋರಾಡುತ್ತಾ ಬಂದಿದ್ದಾರೆ. ಅದರಿಂದ ಬಹಳಷ್ಟು ಸವಾಲುಗಳನ್ನು ಎದುರಿಸಿದ್ದಾರೆ. ಅದರ ಜೊತೆ ಜೊತೆಗೆ ಕುಟುಂಬದ ನಿರ್ವಹಣೆಯನ್ನು ಕೂಡ ಮಾಡುತ್ತಾ ಬಂದಿರುವ ಅವರು ತಮ್ಮ ಅಸ್ತಿತ್ವವನ್ನು ಕಂಡುಕೊಳ್ಳಬೇಕು ಎಂದರು.
ಸಾವಿತ್ರ ಬಾಫುಲೆ , ಅಂಬೇಡ್ಕರ್‌ ಅವರುಗಳನ್ನು ನಾವೆಲ್ಲ ಈ ಕ್ಷಣದಲ್ಲಿ ನೆನೆಯಬೇಕು. ಮಹಿಳೆಯರಿಗೆ ಶಿಕ್ಷಣವನ್ನೆ ನೀಡದ ಸಂದರ್ಭದಲ್ಲಿ ಫುಲೆ ಅವರು ಇಂತಹ ಎಲ್ಲ ಕಟ್ಟಳೆಗಳನ್ನು ಮೀರಿ ಶಿಕ್ಷಣವನ್ನು ಪಡೆದರು. ಅಂಬೇಡ್ಕರ್‌ ರವರು ಮಹಿಳೆಯರಿಗೆ ಶಿಕ್ಷಣ, ಮತದಾನ ಹಕ್ಕನ್ನು ಕೊಡಿಸುವ ಮೂಲಕ ಸಾಮಾಜಿಕವಾಗಿ, ಆರ್ಥಿಕವಾಗಿ, ರಾಜಕೀಯವಾಗಿ ಸಬಲರನ್ನಾಗಿ ಮಾಡಿದರು. ನಾವೆಲ್ಲ ಅವರ ದಾರಿಯಲ್ಲಿ ಸಾಗಬೇಕು ಎಂದರು.
ವಿಧಾನ ಪರಿಷತ್‌ ಶಾಸಕರಾದ ಬಲ್ಕೀಶ್ ಬಾನು ಮಾತನಾಡಿ, ನಾವೆಲ್ಲ ನಮ್ಮ ಹಕ್ಕು, ನಮ್ಮ ತನ ಹಾಗೂ ಮಹಿಳೆಯ ಮೇಲೆ ನಡೆಯುತ್ತಿರುವ ಶೋಷಣೆ, ಅತ್ಯಾಚಾರ, ದೌರ್ಜನ್ಯಗಳಂತಹ ಕೃತ್ಯಗಳ ಬಗ್ಗೆ ಚಿಂತನೆ ಮಾಡಬೇಕಿದೆ. ನಾವು ಹೆಣ್ಣು ನಮ್ಮಿಂದ ಏನನ್ನು ಮಾಡಲು ಆಗುವುದಿಲ್ಲ ಎಂಬ ಆಲೋಚನೆ ಬಿಡಬೇಕು. ನಮಗೆ ನಾವೇ ಆತ್ಮಸ್ಥೈರ್ಯ ತುಂಬಿಕೊಳ್ಳಬೇಕು. ನಮಗೆ ಎಲ್ಲಿಯವರೆಗೆ ನಮ್ಮ ಮೇಲೆ ನಂಬಿಕೆ ಬರುವುದಿಲ್ಲವೋ ಅಲ್ಲಿಯವರೆಗೂ ನಮ್ಮನ್ನು ನಾವು ಕಾಪಾಡಿಕೊಳ್ಳಲು ಆಗುವುದಿಲ್ಲ ಎಂದರು.
ಕೇವಲ ಸಂಸ್ಕಾರ, ಸಂಸಾರ ನಡೆಸುವುದು ಮಾತ್ರ ಹೆಣ್ಣಿನ ಜವಾಬ್ದಾರಿಯಲ್ಲ. ಈ ಸಮಾಜಕ್ಕೆ ಹೆಣ್ಣಿನ ಅವಶ್ಯಕತೆ ಇದೆ. ಆಕೆ ಎಲ್ಲ ಕ್ಷೇತ್ರದಲ್ಲೂ ಮುಂದೆ ಬರಬೇಕು, ಸಾಧನೆ ಮಾಡಬೇಕು. ನಾನಿಲ್ಲದಿದ್ದರೆ ಈ ಸಮಾಜವಿಲ್ಲ ಎಂಬ ತೀರ್ಮಾನ ಮಾಡಬೇಕು. ಹಾಗಾಗಿ ಈಗಿನ ಸರ್ಕಾರ ಮಹಿಳೆಯ ಸಬಲೀಕರಣದ ದೃಷ್ಟಿಯಿಂದಲೆ ಗ್ಯಾರಂಟಿ ಯೋಜನೆ ಕೊಟ್ಟಿರೋದು ಹೊರತು ಯಾವುದೇ ರಾಜಕೀಯವಾಗಿ ಅಲ್ಲ. ಹೆಣ್ಣು ಸಾಮಾಜಿಕವಾಗಿ ಹೂಡಿಕೆ ಮಾಡಿದರೆ ಮಾತ್ರ ಸಮಾಜದ ಮುಖ್ಯಭೂಮಿಕೆಗೆ ಬರಲು ಸಾಧ್ಯ ಎಂದರು.
ಶಾಸಕರಾದ ಎಸ್‌.ಎನ್‌.ಚನ್ನಬಸಪ್ಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಒಂದು ಕುಟುಂಬ ಚೆನ್ನಾಗಿ ಇರಬೇಕೆಂದರೆ ಮಹಿಳೆ ಚೆನ್ನಾಗಿ ಇರಬೇಕು. ಕೋವಿಡ್ ಸಂದರ್ಭದಲ್ಲಿ ತಮ್ಮ ಜೀವವನ್ನು ಲೆಕ್ಕಿಸದೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಂಗನನಾಡಿ ಕಾರ್ಯಕರ್ತರು ಮಾಡಿದ ಕೆಲಸ ಅವಿಸ್ಮರಣೀಯ. ಇಂತಹ ಒಳ್ಳೆಯ ಕಾರ್ಯವನ್ನು ಗುರುತಿಸುವುದು ನಮ್ಮ ಸಮಾಜದ ಕರ್ತವ್ಯವಾಗಿದ್ದು ಈ ಮೂಲಕ ಅವರೆಲ್ಲರಿಗೂ ಅಭಿನಂದನೆ ತಿಳಿಸುತ್ತೇನೆ ಎಂದರು.
ಹೆಣ್ಣು ಪ್ರಕೃತಿ. ಅವಳನ್ನು ಆರಾಧಿಸಬೇಕು. ಭಾರತ ದೇಶ ಮಾತ್ರ ಹೆಣ್ಣಿಗೆ ಆರಾಧನೆ ಸ್ಥಾನ ನೀಡಿರುವುದು. ತಾಯಿ ತಮ್ಮ ಮಕ್ಕಳು ಎಷ್ಟೇ ಕೆಟ್ಟವರಾಗಿದ್ದರು ಅವರನ್ನು ತಿದ್ದಿ ಸರಿಯಾದ ದಾರಿಗೆ ತಂದು ಸಮಾಜಕ್ಕೆ ಒಬ್ಬ ಒಳ್ಳೆಯ ಮಾದರಿ ಮಕ್ಕಳನ್ನಾಗಿ ಮಾಡುತ್ತಾರೆ. ಮಕ್ಕಳಲ್ಲಿ ಯಾವುದೇ ಸ್ವಾರ್ಥಭಾವವನ್ನು ತುಂಬದೆ ಸದಾ ದೇಶ, ಸಮಾಜ ಸೇವೆಯಲ್ಲಿ‌ ತೊಡಗಿಕೊಳ್ಳಲು ಬೆಂಬಲಿಸುತ್ತಾರೆ. ಹೀಗೆ ಇಡೀ ತಾಯಿಯಂದಿರ ಸಮೂಹವು ನಮಗೆ ಶಕ್ತಿ ಕೊಡುವಂತಹ ಕೆಲಸ ಮಾಡಿದ್ದಾರೆ ಎಂದರು.
ಹೆಣ್ಣಿನ ಶಕ್ತಿ ಅಪರಿಮಿತವಾದದ್ದು, ಅದು ಒಳ್ಳೆಯದಕ್ಕೆ ಉಪಯೋಗ ಆಗಬೇಕು. ಮಸುದೈವ ಕುಟುಂಬಕಂ ಎಂಬ ಪರಿಲ್ಪನೆ ಬಂದಿದೆ . ಹೆಣ್ಣಿನ ಸಹನೆ, ತ್ಯಾಗದಿಂದ. ಆಕೆ ಯಾವತ್ತೂ ತನ್ನ ಹಕ್ಕನ್ನು ಚಲಾಯಿಸಲಿಲ್ಲ. ಕುಟುಂಬಕ್ಕಾಗಿ ಅನೇಕ ತ್ಯಾಗಗಳನ್ನು ಮಾಡುತ್ತಾ ಕರ್ತವ್ಯ ನಿರ್ವಹಿಸುವಳು. ಪ್ರೀತಿಯೇ ಇಲ್ಲದೆ ಹೋದರೆ ಹಠ ಗೆಲ್ಲಲ್ಲು ಆಗದು ಎಂದು ಅರಿತಿರುವ ಹೆಣ್ಣು ಪ್ರೀತಿಯ ಮೂಲಕವೇ ಎಲ್ಲವನ್ನೂ ಪಡೆಯುತ್ತಿದ್ದಾಳೆ ಎಂದರು.
ಕರ್ನಾಟಕ ರಾಜ್ಯ ಎಸ್‌ಸಿ, ಎಸ್‌ಟಿ, ಅಲೆಮಾರಿಗಳ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಜಿ.ಪಲ್ಲವಿ ಮಾತನಾಡಿ, ಮಹಿಳೆಯರಿಗೆ ಈ ಸಮಾಜದಲ್ಲಿ ಸಾಧನೆ ಮೆಟ್ಟಿಲು ಏರಲು ಅಷ್ಟು ಸುಲಭವಿಲ್ಲ. ಯಾಕೆಂದರೆ ಯಾವುದೇ ಕ್ಷೇತ್ರಕ್ಕೂ ಹೋದರೂ ಹೆಣ್ಣನ್ನು ನಿಂದಿಸುವ , ಆಕೆಯನ್ನು ತುಳಿಯುವ ಪ್ರಯತ್ನ ನಡೆಯುತ್ತಲೆ ಇರುತ್ತದೆ. ಅದು ಹೆಣ್ಣಿಗೆ ಕಬ್ಬಿಣದ ಕಡಲೆಯಂತಾಗಿದೆ. ಆದರೆ ನಮ್ಮೊಳಗಿನ ಕಿಚ್ಚನ್ನು ನಾವು ಬಿಡಬಾರದು. ಅದು ಸದಾ ಉರಿಯುತ್ತಲೇ ಇರಬೇಕು. ಅದರಿಂದ ಈ ಸಮಾಜವನ್ನು ಸರಿಪಡಿಸುವಲ್ಲಿ ಮುಂದಾಗಬೇಕು ಎಂದರು.
ನಾವು ಹೆಣ್ಣು ಮಕ್ಕಳನ್ನು ಅಬಲೆಯಂತೆ ಮಾಡುತ್ತಿದ್ದೇವೆ. ಅವಳಿಗೆ ೧೮ ವರ್ಷ ದಾಟಿದ ಕೂಡಲೆ ಸಂಪ್ರದಾಯಕ ಕಟ್ಟುಪಾಡುಗಳಿಗೆ ನೂಕಿ ಮದುವೆ ಮುಂದಾಗುತ್ತಿದ್ದೇವೆ. ಆ ಮೂಲಕ ಶಿಕ್ಷಣ, ಉದ್ಯೋಗ, ಆಕೆಯ ಆಸೆ-ಆಕಾಂಕ್ಷೆಗಳಿಂದ ದೂರ ಮಾಡುತ್ತಿದ್ದೇವೆ. ಹೆಣ್ಣು ಮಕ್ಕಳಿಗೆಂದೆ ಆಕೆ ಸಬಲರಾಗಬೇಕೆಂದು ಬಾಬಾ ಸಾಹೇಬ್‌ ಅಂಬೇಡ್ಕರ್‌ ಸಂವಿಧಾನದ ಮೂಲಕ ಶಿಕ್ಷಣ, ಮತದಾನದ ಹಕ್ಕನ್ನು ಕೊಟ್ಟಿದ್ದಾರೆ. ಇದಕ್ಕೆಂದೆ ಅಂಬೇಡ್ಕರ್‌ ತಮ್ಮ ಕೇಂದ್ರ ಕಾನೂನು ಮಂತ್ರಿ ಪದವಿಗೆ ರಾಜೀನಾಮೆ ನೀಡಿದರು. ಇಂತಹ ಮಹನೀಯರ ಹೋರಾಟ ಹಾಗೂ ತ್ಯಾಗವನ್ನು ಮರೆಯಬಾರದು. ಇಡೀ ಮಹಿಳೆ ಸಮುದಾಯವೇ ಅಂಬೇಡ್ಕರನ್ನು ದೇವರಂತೆ ಪೂಜೆ ಮಾಡಬೇಕು. ಮಹಿಳೆಯರಿಗೆ ತಮ್ಮ ಹಕ್ಕನ್ನು ಪಡೆಯಲು ನಾವೆಲ್ಲ ಅವಕಾಶ ಮಾಡಿಕೊಡಬೇಕು ಎಂದರು.
ಪ್ರಸ್ತುತದಲ್ಲಿ ಮಹಿಳೆಯರಲ್ಲಿ ಕಾನೂನು ಅರಿವು ಮೂಡಿಸುವುದು ಅವಶ್ಯಕ. ಯಾಕೆಂದರೆ ಸಮಾಜದಲ್ಲಿ ಅತ್ಯಾಚಾರ, ಶೋಷಣೆ, ಲೈಂಗಿಕ ದೌರ್ಜನ್ಯಗಳು ಮಹಿಳೆಯ ಮೇಲೆ ನಿರಂತರವಾಗಿ ನಡೆಯುತ್ತಲೆ ಇವೆ. ಎಲ್ಲಿಯವರೆಗೆ ಕಾನೂನು ಕ್ರಮ ಇರುತ್ತದೆಯೋ ಅಲ್ಲಿಯವರೆಗೆ ಇಂತಹ ಕೃತ್ಯ ನಡೆಯುವುದಿಲ್ಲ. ಆ ನಿಟ್ಟಿನಲ್ಲಿ ಎಲ್ಲರೂ ಪ್ರಗತಿಪರರಾಗಿ ಯೋಚಿಸೊಣ. ಒಂದಾಗಿ ಸಮಾಜವನ್ನು ಕಟ್ಟುವಲ್ಲಿ ಶ್ರಮಿಸೊಣ ಎಂದರು.
International Women’s Day ಕುವೆಂಪು ವಿವಿಯ ಎನ್‌ಎಸ್‌ಎಸ್‌ ನ ಕಾರ್ಯಕ್ರಮ ಸಂಯೋಜನಾಧಿಕಾರಿ ಶುಭಾ ಮರವಂತೆ ಉಪನ್ಯಾಸ ನೀಡಿ, ಮಹಿಳೆಯರು ಎಂದ ಕೂಡಲೆ ನಮ್ಮ ಮನಸ್ಸಿನಲ್ಲಿ ಮೂಡುವ ಭಾವನೆ ದೇವಿಯ ಚಿತ್ರಣ. ನಮ್ಮ ಭಾರತವೇ ಹೆಣ್ಣನ್ನು ಗೌರವಿಸುವ ಸಂಸ್ಕೃತಿಯ ಹೊಂದಿದ್ದು, ಹೆಣ್ಣು ಇಲ್ಲದಿದ್ದರೆ ಸಮಾಜವೇ ಮುಂದುವರೆಯಲು ಆಗದು. ಹೆಣ್ಣಿನ ದನಿಯು ಪ್ರತಿ ವಲಯದಲ್ಲೂ ದಾಖಲಿಸಬೇಕು. ಮಹಿಳೆಯರು ತಮ್ಮ ಮಾತುಗಳಿಂದ ಅವರ ಅಸ್ಮಿತೆಯನ್ನು ಕಳೆದುಕೊಳ್ಳದೆ ಎಚ್ಚರವಹಿಸಬೇಕು ಎಂದರು.
ಶತಮಾನದಿಂದ ಈ ಸಮಾಜ ನಮ್ಮನ್ನು ಶೋಷಣೆಯಿಂದ ಅವಕಾಶ ವಂಚಿತರನ್ನಾಗಿ ಮಾಡಿದೆ. ಈ ಉದ್ಧೇಶದಿಂದ ಯುರೋಪಿನಲ್ಲಿ ಮಹಿಳಾ ಚಳುವಳಿ ಹುಟ್ಟಿಕೊಂಡಿತು. ತನ್ನ ಕೆಲಸಕ್ಕೆ ತಕ್ಕಂತಹ ಕೂಲಿ ನೀಡಬೇಕೆಂದು ಮಹಿಳೆಯರು ಹೋರಾಟ ಮಾಡಿದರು. ಅದರ ಫಲವಾಗಿ ಯಶಸ್ಸು ಪಡೆದು. ನಂತರ ಕಾಲದ ಬದಲಾದಂತೆ ಹೆಣ್ಣು ಸಬಲೀಕರಣಗೊಂಡಳು ಈಗ ಇಡೀ ದೇಶವೇ ಹೆಣ್ಣಿನ ಪರವಾಗಿ ನಿಂತಿದೆ. ಗ್ರಾಮೀಣ ಭಾಗದಲ್ಲಿ ಆರ್ಥಿಕವಾಗಿ ಸಬಲೀಕರಣಗೊಂಡು ಕುಟುಂಬದ ನಿರ್ವಹಣೆ ಮಾಡುತ್ತಿದ್ದಾರೆ ಎಂದರು.
ಪ್ರಸ್ತುತದ ಸಮಾಜದಲ್ಲಿ ಹೆಣ್ಣು ಮಕ್ಕಳಿಗೆ ರಕ್ಷಣೆಯಿಲ್ಲದೆ ಉದ್ಯೋಗ ಸ್ಥಳ, ಶಾಲಾ-ಕಾಲೇಜು ಒಳಗೊಂಡಂತೆ ಎಲ್ಲ ಹಂತದಲ್ಲು ದೌರ್ಜನ್ಯ ನಡೆಯುತ್ತಿದೆ. ನಾವೆಲ್ಲರೂ ಇದರ ಬಗ್ಗೆ ಎಚ್ಚರಿಕೆ ವಹಿಸಬೇಕು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಂಗನಾಡಿ ಕಾರ್ಯಕರ್ತರು ಇಂತಹ ಕೃತ್ಯದ ಬಗ್ಗೆ ಮನೆ ಮನೆಗೆ ತಿಳಿಸಿ ಜಾಗೃತಿ ಮೂಡಿಸಬೇಕು. ಆ ಮೂಲಕ ಹೆಣ್ಣು ತನ್ನ ಸ್ವಸಾಮರ್ಥ್ಯದ ಬಗ್ಗೆ ಆಲೋಚನೆ ಮಾಡಬೇಕು ಎಂದರು ಕಿವಿ ಮಾತು ಹೇಳಿದರು.
ಹೆಣ್ಣು ನಾನು ಕುಟುಂಬಕ್ಕೆ ಮಾತ್ರಕ್ಕೆ ಸಿಮೀತವಲ್ಲದೆ ಸಮಾಜಕ್ಕೆ ನನ್ನ ಅವಶಕ್ಯತೆ ಇದೆ ಎಂದು ಅರಿಯಬೇಕು. ಅಂಜಿಕೆ, ಆತಂಕ ಪಡದೆ ಸಮಾಜದಲ್ಲಿ ಮುನ್ನೆಲೆಗೆ ಬರಬೇಕು ಆ ಮೂಲಕ ಗಂಡು ಹೆಣ್ಣು ಸಮಾನವಾಗಿ ಜೊತೆ ಜೊತೆ ಸಾಗುವಂತಹ ವಾತಾವರಣ ನಿರ್ಮಾಣ ಆಗಬೇಕು ಎಂದರು.
ಕಾರ್ಯಕ್ರಮದಲ್ಲಿ ಸೂಡಾ ಅಧ್ಯಕ್ಷರಾದ ಹೆಚ್ ಎಸ್ ಸುಂದರೇಶ್, ಜಿಲ್ಲಾ ನಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಟಾನ ಪ್ರಾಧಿಕಾರದ ಅಧ್ಯಕ್ಷರಾದ ಚಂದ್ರಭೂಪಾಲ್, ಡಿಹೆಚ್‌ಓ ಡಾ.ನಟರಾಜ್‌, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ಬಿ.ಹೆಚ್‌.ಕೃಷ್ಣಪ್ಪ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿ ಶಶಿರೇಖಾ, ಜಿಲ್ಲಾ ನಿರೂಪಣಾಧಿಕಾರಿ ಡಾ. ಹೆಚ್‌. ಸಂತೋಷ್ ಕುಮಾರ್, ಬಾಲನ್ಯಾಯ ಮಂಡಳಿಯ ರೇಖಾ ಹಾಗೂ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಹಾಜರಿದ್ದರು.

Shivamogga Police ಎರಡು ಪ್ರತ್ಯೇಕ ರಸ್ತೆ ಅಪಘಾತ- ಇಬ್ಬರ ಸಾವು

0

Shivamogga Police ಶಿವಮೊಗ್ಗದ ಸಾಗರ ರಸ್ತೆ ವಾಜಪೇಯಿ ಬಡಾವಣೆ ಬಳಿ ಮರಕ್ಕೆ ಬೈಕ್ ಡಿಕ್ಕಿ ಹೊಡೆದು ನಂತರ ಬೈಕ್ ಸಹಿತ ಚರಂಡಿಗೆ ಬಿದ್ದು ರಾಜು ಎಂಬುವವರು ಸಾವನ್ನಪ್ಪಿದ್ದಾರೆ.

ಕೂಲಿ ಕೆಲಸ ಮಾಡಿಕೊಂಡಿದ್ದ ಸಿದ್ದರಹಳ್ಳಿ ರಾಜು ಅವರ ಸಾವಿಗೆ ಕುಟುಂಬಸ್ಥರು ಅನುಮಾನ ವ್ಯಕ್ತಪಡಿಸಿದ್ದಾರೆ. ಇದು ಅಪಘಾತವಲ್ಲ ಬದಲಿಗೆ ಕೊಲೆ ಎಂದು ಆರೋಪಿಸುತ್ತಿದ್ದಾರೆ. ಮೃತ ರಾಜುವಿನ ಕಣ್ಣುಗುಡ್ಡೆಗಳು ಹೊರಕ್ಕೆ ಬಿದ್ದಿದ್ದು ಅಪಘಾತ ಸಂಭವಿಸಿದ್ದರೆ ಕಣ್ಣುಗುಂಡಿಗಳು ಹೊರಗೆ ಯಾಕೆ ಬರುತ್ತವೆ ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ. ಇದಲ್ಲದೆ ರಾಜವಿನ ಮೊಬೈಲ್ ಹೊರಗೆ ಕಟ್ಟೆ ಮೇಲೆ ಕಾಣಿಸಿಕೊಂಡಿದೆ. ಪತಿ ಮೃತನಾದರೂ ಪತ್ನಿ ಸಾವಿಗೆ ಬಂದಿಲ್ಲದಿರುವುದು ಹಲವು ಅನುಮಾನಕ್ಕೆ ಕಾರಣ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.

Shivamogga Police ಮತ್ತೊಂದು ಪ್ರಕರಣದಲ್ಲಿ ಸುರೇಶ್ ಎಂಬಾತ ಸುಬ್ಬಯ್ಯ ಮೆಡಿಕಲ್ ಆಸ್ಪತ್ರೆಯ ರಸ್ತೆಯಲ್ಲಿ ಮೃತಪಟ್ಟಿದ್ದು ತುಂಗಾ ನಗರ ಹಾಗೂ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಯುವಕನೋರ್ವ ವಿಷ ಸೇವಿಸಿ ಆತ್ಮಹತ್ಯೆ

0

ಯುವಕನೋರ್ವ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದು, ಯುವಕನ ಆತ್ಮಹತ್ಯೆಯ ಹಿಂದೆ ಪ್ರೇಮ್ ಕಹಾನಿ ಪತ್ತೆಯಾಗಿದೆ.
ಶಿವಮೊಗ್ಗ ತಾಲೂಕಿನ ಕುಂಚೇನಹಳ್ಳಿಯ ಕಲ್ಲಾಪುರದ ನಿವಾಸಿ ಸಂಜು ಇಲಿ ಪಾಷಣ ಸೇವಿಸಿ ಆತ್ಮಹತ್ಯೆಯಾಗಿದ್ದಾನೆ.
ಇಲಿ ಪಾಶಣ ಸೇವಿಸಿ 10 ದಿನಗಳಾಗಿದ್ದು ನಿನ್ನೆ ಮೆಗ್ಗಾನ್ ನಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಾವು ಕಂಡಿದ್ದಾನೆ.
ಇಲಿ ಪಾಶಣ ಸೇವಿಸಿದ ಎರಡು ದಿನದ ವರೆಗೆ ಸಂಜು ಆರಾಮಾಗಿದ್ದರು. ನಂತರ ಆರೋಗ್ಯ ಉಲ್ಬಣಗೊಂಡಿದೆ. ಉಲ್ಬಣಗೊಂಡ ನಂತರ ಯುವಕನನ್ನ ಆಸ್ಪತ್ರೆಗೆ ದಾಖಲಿಸಲಾಗಿದೆ.
ಆತನ ಆತ್ಮಹತ್ಯೆಗೆ ಪ್ರೀತಿ ಕಾರಣ ಎಂದು ಹೇಳಲಾಗುತ್ತಿದೆ. ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಆತನ ಇತ್ತೀಚಿನ ರೀಲ್ಸ್ ಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.

Department of Science and Technology ಹೊಳಲೂರು ಏತ ನೀರಾವರಿ ಯೋಜನಾ ಪ್ರದೇಶದ ವ್ಯಾಪ್ತಿಗೊಳಪಟ್ಟ ವಿವಿಧ ಸ್ಥಳಗಳಿಗೆ ಅಧಿಕಾರಿಗಳ ಭೇಟಿ

0

Department of Science and Technology ಶಿವಮೊಗ್ಗ ಸಮೀಪದ ಹೊಳಲೂರು ಏತ ನೀರಾವರಿ ಉಳಿದ ಕಾಮಗಾರಿಯನ್ನು ಮುಂದಿನ ಮೂರು ತಿಂಗಳ ಅವಧಿಯಲ್ಲಿ ನೀರಾವರಿ ತಜ್ಞರ ಸಲಹೆಯ ಜೊತೆಗೆ ಸ್ಥಳೀಯ ಜನಪ್ರತಿನಿಧಿಗಳು ಹಾಗೂ ರೈತಮುಖಂಡರೊಂದಿಗೆ ಸಮಾಲೋಚನೆ ನಡೆಸಿ, ಶೀಘ್ರ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು ಎಂದು ರಾಜ್ಯ ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಸಚಿವ ಎನ್.ಎಸ್.ಬೋಸರಾಜು ಅವರು ಹೇಳಿದರು.

ಶಿವಮೊಗ್ಗ ತಾಲೂಕಿನ ಹೊಳಲೂರು ಏತ ನೀರಾವರಿ ಯೋಜನಾ ಪ್ರದೇಶದ ವ್ಯಾಪ್ತಿಗೊಳಪಟ್ಟ ವಿವಿಧ ಸ್ಥಳಗಳಿಗೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳೊಂದಿಗೆ ಖುದ್ದು ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು.

ಈ ಕಾಮಗಾರಿ ಕೈಗೆತ್ತಿಕೊಳ್ಳುವ ಸಂಬಂಧ ಶೀಘ್ರದಲ್ಲಿ ಬೆಂಗಳೂರಿನಲ್ಲಿ ಸಂಬಂಧಿಸಿದ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸುವುದಾಗಿ ಅವರು ತಿಳಿಸಿದರು.
ಈಗಾಗಲೇ ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದ ಶಾಸಕಿ ಶ್ರೀಮತಿ ಶಾರದಾಪೂರ್ಯನಾಯ್ಕ್‌ ಹಾಗೂ ಸ್ಥಳೀಯ ಮುಖಂಡರು ಅಪೂರ್ಣಗೊಂಡಿರುವ ಹಾಗೂ ಹಲವು ದಶಕಗಳಿಂದ ನೆನೆಗುದಿಗೆ ಬಿದ್ದಿರುವ ಈ ಏತ ನೀರಾವರಿ ಯೋಜನೆಯ ಪ್ರಾಥಮಿಕ ಮಾಹಿತಿಯನ್ನು ಅಧಿಕಾರಿಗಳಿಂದ ಪಡೆದುಕೊಂಡಿದ್ದು, 2008ರಲ್ಲಿ ಈ ಯೋಜನೆಯ ಅನುಷ್ಠಾನಕ್ಕೆ ಅಂದಿನ ಸರ್ಕಾರ ಸುಮಾರು 21ಕೋಟಿ ರೂ.ಗಳಿಗೆ ಅಧಿಕ ಮೊತ್ತ ವ್ಯಯ ಮಾಡಿರುವ ಬಗ್ಗೆ ಮಾಹಿತಿ ಇದೆ. ಈಗಿರುವ ಯಂತ್ರಗಳು ಹಾಗೂ ಅವುಗಳ ಸಾಮರ್ಥ್ಯದ ಬಗ್ಗೆಯೂ ಮಾಹಿತಿ ಪಡೆಯುವ ಅಗತ್ಯವಿದೆ ಎಂದ ಅವರು ಇಲ್ಲಿನ ಕಾಮಗಾರಿಯ ಕುರಿತು ಜನರಲ್ಲಿ ಸಾಕಷ್ಟು ದೂರುಗಳಿದ್ದು, ಅವುಗಳನ್ನು ಮುಂದಿನ ದಿನಗಳಲ್ಲಿ ಮಾಹಿತಿ ಪಡೆದು, ತಪ್ಪಿತಸ್ಥರ ವಿರುದ್ಧ ನಿಯಮಾನುಸಾರ ಕ್ರಮ ಕೈಗೊಳ್ಳಲಾಗುವುದು. ಅದಕ್ಕೂ ಮುನ್ನ ಸ್ಥಗಿತಗೊಂಡ ಕಾಮಗಾರಿಯನ್ನು ವ್ಯವಸ್ಥಿತವಾಗಿ ಪೂರ್ಣಗೊಳಿಸಿ, ಲೋಕಾರ್ಪಣೆಗೊಳಿಸಲು ಅಗತ್ಯವಿರುವ ಎಲ್ಲಾ ಸಾಧ್ಯತೆಗಳನ್ನು ಪರಿಶೀಲಿಸಲಾಗುವುದು.

ಈಗಾಗಲೇ ಜಿಲ್ಲೆಗೆ ಹಿಂದಿನ ಭೇಟಿ ಸಂದರ್ಭದಲ್ಲಿ ಸೊರಬ ತಾಲೂಕಿನಲ್ಲಿ ಆರು ಏತ ನೀರಾವರಿ ಯೋಜನೆಗಳಿಗೆ ಚಾಲನೆ ನೀಡಿರುವುದಾಗಿ ಅವರು ತಿಳಿಸಿದರು.
ಹೊಳಲೂರಿನ ಪಂಪ್‌ಹೌಸ್‌ನಲ್ಲಿ ಮೂರು ಮೋಟಾರುಗಳು ಸಕ್ರಿಯವಾಗಿದ್ದು ಅದರಲ್ಲಿ ಎರಡು ಮೋಟಾರುಗಳು ಕಾರ್ಯನಿರ್ವಹಿಸುತ್ತಿವೆ. ಒಂದನ್ನು ಹೆಚ್ಚುವರಿಯಾಗಿ ಉಳಿಸಿಕೊಳ್ಳಲಾಗಿದೆ. ಮಳೆಗಾಲದಲ್ಲಿ ಮಳೆಯ ನೀರು ಊರೊಳಗೆ ಹಾಗೂ ಚಾನಲ್‌ನ ಸಮೀಪದಲ್ಲಿರುವ ಶಾಲೆಗೆ ನುಗ್ಗಿ ತೀವ್ರ ತರಹದ ಅಡಚಣೆ ಉಂಟು ಮಾಡುತ್ತಿದೆ. ಪ್ರಸ್ತುತ ಸಂದರ್ಭದಲ್ಲಿ ಪಂಪ್‌ಹೌಸ್‌ನಿಂದ ಮೇಲೆತ್ತುವ ನೀರು ನಿರೀಕ್ಷೆಯಂತೆ ಸಣ್ಣ ಕೆರೆಗಳಿಗೆ ತಲುಪದಿರುವ ಬಗ್ಗೆ ಸಾರ್ವಜನಿಕರು ಗಮನಕ್ಕೆ ತಂದಿದ್ದಾರೆ. ಮೊದಲು ಇಲ್ಲಿನ ಒ೦ದು ಸಣ್ಣ ಕೆರೆಗೆ ನೀರನ್ನು ಭರ್ತಿಗೊಳಿಸಿ, ನಂತರ ಅಗತ್ಯತೆಗಳಿಗೆ ಬಳಸಬೇಕು ಎಂಬ ಅವರ ಅಭಿಪ್ರಾಯವನ್ನು ತಿಳಿಸಿದ್ದಾರೆ.

Department of Science and Technology ಅವರ ಈ ಅಭಿಪ್ರಾಯವನ್ನು ಸಹ ಸಕಾಲದಲ್ಲಿ ಪರಿಶೀಲಿಸಿ ಸೂಕ್ತ ಕ್ರಮವಹಿಸಲಾಗುವುದು ಎಂದರು.
ಆಡಳಿತಾರೂಢ ಸರ್ಕಾರದ ಮಾನ್ಯ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಮಂಡಿಸಿದ 16ನೇ ಜನಪ್ರಿಯ ಬಜೆಟ್‌ಇದಾಗಿದ್ದು, ರಾಜ್ಯದ ಜನಸಾಮಾನ್ಯರ ನೋವು-ನಲಿವುಗಳನ್ನು ತಿಳಿದು, ಎಲ್ಲ ವರ್ಗದ ಜನರ ಹಿತಕಾಪಾಡುವ ನಿಟ್ಟಿನಲ್ಲಿ ಜನಸ್ನೇಹಿಯಾಗಿದೆ. ಅನ್ನಭಾಗ್ಯ ಯೋಜನೆಯ ವ್ಯವಸ್ಥಿತ ಅನುಷ್ಠಾನಕ್ಕೆ ಅಗತ್ಯವಿರುವಷ್ಟು ಹಣಕಾಸನ್ನು ಕಾಯ್ದಿರಿಸಲಾಗಿದೆ. ಅಲ್ಲದೇ ಗ್ಯಾರೆಂಟಿ ಯೋಜನೆಯ ಲಾಭವನ್ನು ರಾಜ್ಯದ ಜನರು ಯಾವುದೇ ಮದ್ಯವರ್ತಿಗಳ ಪ್ರವೇಶವಿಲ್ಲದೇ ನೇರವಾಗಿ ಪಡೆದುಕೊಳ್ಳುತ್ತಿದ್ದಾರೆ ಎಂದರು. ಈ ಭೇಟಿಯ ಸಂದರ್ಭದಲ್ಲಿ ಶಾಸಕಿ ಶ್ರೀಮತಿ ಶಾರದಾ ಪೂರ್ಯಾನಾಯ್ಕ್‌, ವಿಧಾನಪರಿಷತ್‌ಸದಸ್ಯೆ ಶ್ರೀಮತಿ ಬಲ್ಕಿಶ್‌ಬಾನು, ಮುಖಂಡ ಆಯನೂರು ಮಂಜುನಾಥ್‌ಸೇರಿದಂತೆ ಅಧಿಕಾರಿಗಳು, ಹೊಳಲೂರಿನ ಅನೇಕ ಮುಖಂಡರು, ಸಾರ್ವಜನಿಕರು ಉಪಸ್ಥಿತರಿದ್ದರು.