Sunday, March 8, 2026
Sunday, March 8, 2026
Home Blog Page 372

Namma TV Shivamogga ಭೀಮ, ನನಗೆ ಜನಪ್ರಿಯತೆ ತಂದ ಸಿನಿಮಾ-ಚಿತ್ರ ನಟಿ ಪ್ರಿಯಾ

0

Namma TV Shivamogga ರಂಗಭೂಮಿ ತಾಯಿ ಇದ್ದ ಹಾಗೆ ಚಲನಚಿತ್ರ ತಂದೆ ಇದ್ದ ಹಾಗೆ. ನಮ್ಮ ಮಲೆನಾಡಿನ ಜನ ನನಗೆ ತುಂಬಾ ಪ್ರೀತಿ ತೋರಿಸಿದ್ದಾರೆ. ಅವರ ಪ್ರೀತಿ ಬಹಳ ದೊಡ್ಡದು ಎಂದು ‘ಭೀಮ’ ಚಿತ್ರದ ಮೂಲಕ ಮನೆ ಮಾತಾಗಿರುವ ಚಿತ್ರ ನಟಿ ಪ್ರಿಯಾ ಹೇಳಿದರು.

ನಮ್ಮ ಟಿವಿ ಶಿವಮೊಗ್ಗದ ಸ್ಟುಡಿಯೋದಲ್ಲಿ ಪ್ರಖ್ಯಾತ ಸಿನಿಮಾ ತಾರೆಯವರಾದ ಪ್ರಿಯಾ ಅವಿನಾಶ್ ಅವರಿಗೆ ಏರ್ಪಡಿಸಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ನಾನು 10 ಚಲನಚಿತ್ರ ಅದೆಷ್ಟೊ ಕಿರುತೆರೆಯಲ್ಲಿ ನಟಿಸಿದರೂ ಸಹ ನನಗೆ ಅತ್ಯಂತ ಹೆಸರು ತಂದು ಕೊಟ್ಟ ಭೀಮ ಚಲನ ಚಿತ್ರ ನನಗೆ ಹೆಸರು ತಂದುಕೊಟ್ಟಿತು. ನಿಜ ಜೀವನದಲ್ಲಿ ನಾನು ಪೋಲಿಸು ಅಧಿಕಾರಿಯಾಗಬೇಕೆಂದಿದ್ದೆ. ಆದರೆ ಚಲನ ಚಿತ್ರದಲ್ಲಿ ನಾನು ಪೋಲೀಸು ಅಧಿಕಾರಿ ಪಾತ್ರ ಮಾಡಿದೆ.

ನಾನು ಶಿವಮೊಗ್ಗದ ಸೊಸೆ ಎಂದು ಹೆಮ್ಮೆಯಿಂದ ಹೇಳಿಕೊಂಡರು. ಬರುವ ದಿನಗಳಲ್ಲಿ ರಂಗಭೂಮಿಯಲ್ಲಿ ಇನ್ನೂ ಅನೇಕ ಕಾರ್ಯ ಯೋಜನೆಗಳನ್ನು ಹಮ್ಮಿಕೊಂಡಿದ್ದೇವೆ ಹಾಗೂ ವಿಶೇಷವಾಗಿ ಹೊಸ ಹೊಸ ಕಲಾವಿದರನ್ನು ರಂಗಭೂಮಿಗೆ ಪರಿಚಯಿಸುವ ಕೆಲಸ ಮಾಡಲು ಇಚ್ಚಿಸಿದ್ದೇವೆ ಎಂದು ನುಡಿದರು.

ಈ ಸಂದರ್ಭದಲ್ಲಿ ಕನ್ನಡಕ್ಕಾಗಿ ಒಂದನ್ನು ಒತ್ತಿ ಚಿತ್ರದ ನಟ ಅವಿನಾಶ್ ಮಾತನಾಡಿ, ಶಿವಮೊಗ್ಗದಲ್ಲಿ ಓದಿ ಬೆಳೆದು ಇಲ್ಲಿಯೇ ರಂಗಭೂಮಿಯಲ್ಲಿ ಕೆಲಸ ಮಾಡಿ, ಕಿರುತೆರೆಗಳಲ್ಲಿ ಅಭಿನಯಿಸಿ, ನಂತರ ಈಗ ಚಲನಚಿತ್ರಗಳಲ್ಲಿ ಅಭಿನಯಿಸುತ್ತಿದ್ದೇನೆ. ಜೊತೆಗೆ ಒಂದು ಚಿತ್ರವನ್ನು ಸಹ ನಿರ್ಮಾಣ ಮಾಡಿದ್ದು, ಸದ್ಯದಲ್ಲೇ ಅದು ಸಹ ತೆರೆ ಕಾಣಲಿದೆ ಎಂದು ಹೇಳಿದರು.

Namma TV Shivamogga ಶಿವಮೊಗ್ಗದ ರಂಗಭೂಮಿಯಲ್ಲಿ ರೇಣುಕಪ್ಪ, ಗಿರೀಶ್, ಅಚಿ, ವೈದ್ಯ ಹಾಗೂ ಹಲವರು ಕಲಾವಿದನಾಗಿ ಅಭಿನಯಿಸಿದ ಅನುಭವಗಳನ್ನು ಹಂಚಿಕೊಂಡರು.

ಈ ಸಂದರ್ಭದಲ್ಲಿ ಇಬ್ಬರು ಚಲನಚಿತ್ರ ನಟ ನಟಿಯರಿಗೆ ನಮ್ಮ ಟಿವಿ ವತಿಯಿಂದ ಆತ್ಮೀಯವಾಗಿ ಸನ್ಮಾನಿಸಲಾಯಿತು. ನಮ್ಮ ಟಿವಿ ನಿರೂಪಕ ಜಿ.ವಿಜಯಕುಮಾರ್, ಶ್ರೀಕಾಂತ್, ತರುಣ್ ಮತ್ತು ಬಿಂದು ವಿಜಯ ಕುಮಾರ್ ಸಿಬ್ಬಂದಿ ವರ್ಗದವರು ಪಾಲ್ಗೊಂಡಿದ್ದರು. ಅವರ ಜೊತೆ ಎಂ.ಎನ್.ಸುಂದರ ರಾಜ್, ಶಿಕ್ಷಣ ತಜ್ಞೆ ರಮ್ಯಾ ಅನಿಲ್ ಭಾಗವಹಿಸಿದ್ದರು. ನಂತರ ಅವಿನಾಶ್ ಮತ್ತು ಪ್ರಿಯಾ ಅವರ ಸಂದರ್ಶನ ನಡೆಯಿತು.

Kumsi MESCOM ಕುಂಸಿ ಮೆಸ್ಕಾಂ ಕಛೇರಿಯಲ್ಲಿ ಮಾರ್ಚ್ 18. ಜನಸಂಪರ್ಕ ಸಭೆ

0

Kumsi MESCOM ಕುಂಸಿ ಮೆಸ್ಕಾಂ ಉಪವಿಭಾಗ ಕಛೇರಿಯಲ್ಲಿ ಮಾ.18 ರಂದು ಬೆಳಿಗ್ಗೆ 11.00 ರಿಂದ 01.00 ರವರೆಗೆ ಜನಸಂಪರ್ಕ ಸಭೆ ನಡೆಯಲಿದೆ.

ಈ ಸಭೆಯಲ್ಲಿ ಮೆಸ್ಕಾಂನ ಅಧಿಕಾರಿಗಳು ಭಾಗವಹಿಸಲ್ಲಿದ್ದು, ಸಂಬಂಧಪಟ್ಟ ಪ್ರದೇಶದ ಗ್ರಾಹಕರ ಅಹವಾಲುಗಳನ್ನು ಸ್ವೀಕರಿಸುವುದರಿಂದ ಈ ಅವಕಾಶವನ್ನು ಗ್ರಾಹಕರು ಸದುಪಯೋಗಪಡಿಸಿ ಕೊಳ್ಳುವಂತೆ ಮೆಸ್ಕಾಂ ತಿಳಿಸಿದೆ.

ಸಂಪರ್ಕಿಸಬಹುದಾದ ದೂರವಾಣಿ ಸಂಖ್ಯೆ; 9480841340.

Actor Puneeth Rajkumar ಮಾರ್ಚ್ 17 ನಟ ಪುನೀತ್ ರಾಜ್ ಕುಮಾರ್ ಜನ್ಮದಿನ, ವಿಶೇಷ ರಕ್ತದಾನ ಶಿಬಿರ

0

Actor Puneeth Rajkumar ನಟ ಪುನೀತ್ ರಾಜ್ ಕುಮಾರ್ ಜನ್ಮದಿನದ ಸ್ಮರಣಾರ್ಥ ನಗರದ ದೇಶೀಯ ವಿದ್ಯಾಶಾಲಾ ಸಮಿತಿಯ ಡಿವಿಎಸ್ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಕಾಲೇಜಿನ ಸಿಂಗಾರ ಸಭಾಂಗಣದಲ್ಲಿ ಯುವ ರೆಡ್ ಕ್ರಾಸ್ ಘಟಕದಿಂದ ಮಾ. 17ರಂದು ಬೆಳಗ್ಗೆ 10 ರಿಂದ 3ರ ವರೆಗೆ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಗಿದೆ.

ಡಿವಿಎಸ್ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಕಾಲೇಜಿನ ಐಕ್ಯೂಎಸಿ, ಮೆಗ್ಗಾನ್ ಬೋಧನಾ ಆಸ್ಪತ್ರೆಯ ರಕ್ತ ನಿಧಿ ಕೇಂದ್ರ, ರೆಡ್ ಕ್ರಾಸ್ ಸಂಜೀವಿನಿ ರಕ್ತನಿಧಿ ಕೇಂದ್ರದ ಸಹಯೋಗದಲ್ಲಿ “ರಕ್ತದಾನ ಮಾಡಿ ಪುನೀತರಾಗಿ” ಘೋಷವಾಕ್ಯದೊಂದಿಗೆ ಸ್ವಯಂಪ್ರೇರಿತ ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಗಿದೆ.

ಮಾ.17ರ ಬೆಳಗ್ಗೆ 10ಕ್ಕೆ ರಕ್ತದಾನ ಶಿಬಿರವನ್ನು ಕುವೆಂಪು ವಿಶ್ವವಿದ್ಯಾಲಯ ಕುಲಪತಿ ಪ್ರೊ‌‌. ಶರತ್ ಅನಂತಮೂರ್ತಿ ಉದ್ಘಾಟಿಸುವರು.

ದೇಶೀಯ ವಿದ್ಯಾಶಾಲಾ ಸಮಿತಿ ಅಧ್ಯಕ್ಷ ಕೆ.ಎನ್.ರುದ್ರಪ್ಪ ಕೊಳಲೆ ಅಧ್ಯಕ್ಷತೆ ವಹಿಸುವರು.

Actor Puneeth Rajkumar ಜಿಲ್ಲಾಧಿಕಾರಿ ಗುರುದತ್ತ ಹೆಗಡೆ, ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಗೌರವ ಕಾರ್ಯದರ್ಶಿ ಡಾ. ದಿನೇಶ್, ದೇಶೀಯ ವಿದ್ಯಾಶಾಲಾ ಸಮಿತಿಯ ಉಪಾಧ್ಯಕ್ಷ ಎಸ್.ಪಿ.ದಿನೇಶ್, ಕಾರ್ಯದರ್ಶಿ ಎಸ್.ರಾಜಶೇಖರ್, ಸಹ ಕಾರ್ಯದರ್ಶಿ ಡಾ. ಎ.ಸತೀಶ್ ಕುಮಾರ ಶೆಟ್ಟಿ, ಖಜಾಂಚಿ ಬಿ.ಗೋಪಿನಾಥ್, ಮೆಗ್ಗಾನ್ ಬೋಧನಾ ಆಸ್ಪತ್ರೆಯ ರಕ್ತ ನಿಧಿ ಕೇಂದ್ರ ವೈದ್ಯಾಧಿಕಾರಿ ಡಾ‌. ಗೀತಾಲಕ್ಷ್ಮೀ.ಯು, ರೆಡ್ ಕ್ರಾಸ್ ಸಂಜೀವಿನಿ ರಕ್ತನಿಧಿ ಕೇಂದ್ರದ ಕಾರ್ಯದರ್ಶಿ ಮಂಜುನಾಥ ಅಪ್ಪಾಜಿ, ಡಿವಿಎಸ್ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಕಾಲೇಜಿನ ಪ್ರಾಚಾರ್ಯ ಡಾ. ಎಂ.ವೆಂಕಟೇಶ್, ಐಕ್ಯೂಎಸಿ ಸಂಯೋಜಕ ಪ್ರೊ. ಎನ್.ಕುಮಾರಸ್ವಾಮಿ, ಯುವ ರೆಡ್ ಕ್ರಾಸ್ ಘಟಕ ಸಂಯೋಜಕ ಡಾ. ಶ್ರೀನಿವಾಸ್ ಲಮಾಣಿ ಉಪಸ್ಥಿತರಿರುವರು.

ಎ- ಖಾತಾ ಪಡೆಯಲು ಪ್ರಕ್ರಿಯೆ ಸರಳಗೊಳಿಸಲು ನಾಗರೀಕ‌ ಹಿತರಕ್ಷಣಾ ವೇದಿಕೆ ಮನವಿ

0

A-ಖಾತಾ ಪಡೆಯಲು ಪುರಸಭೆ ಆಡಳಿತ ನಿರ್ದೇಶಕರು ಹೆಚ್ಚುವರಿ ದಾಖಲೆಯನ್ನು “ಸಂಬಂಧಿತ ಅಧಿಕಾರಿಗಳಿಂದ ಅನುಮೋದಿತ ವಿನ್ಯಾಸ ಯೋಜನೆ ಮತ್ತು ಸೈಟ್‌ಗಳ ಬಿಡುಗಡೆ ಪತ್ರ” ಎಂದು ನಿರ್ದಿಷ್ಟಪಡಿಸಿದ್ದಾರೆ. ಆದರೆ ಸರ್ಕಾರವು ಸುದ್ದಿ ಪತ್ರಿಕೆಯ ಜಾಹೀರಾತಿನಲ್ಲಿ ಈ ದಾಖಲೆಗಳನ್ನು ನಿರ್ದಿಷ್ಟಪಡಿಸಿಲ್ಲ. ಅಸ್ತಿತ್ವದಲ್ಲಿರುವ ಆಸ್ತಿ ಹೊಂದಿರುವವರು ಇದು ಅನಗತ್ಯ. ಆದ್ದರಿಂದ ನಾವು DMA ಯನ್ನು ತಮ್ಮ ಸುತ್ತೋಲೆಯಲ್ಲಿ ಬದಲಾವಣೆಗಳನ್ನು ಮಾಡುವಂತೆ ನಾಗರೀಕ‌ ಹಿತರಕ್ಷಣಾ ವೇದಿಕೆ ವಿನಂತಿಸಲಾಯಿತು.

Shivamogga Rangayana ಮಾರ್ಚ್ 15 ರಿಂದ 17 ಶಿವಮೊಗ್ಗದಲ್ಲಿ ಕಾಲೇಜು ರಂಗೋತ್ಸವ

0

Shivamogga Rangayana ಶಿವಮೊಗ್ಗ ರಂಗಾಯಣವು ವಿಶೇಷವಾಗಿ ಯುವಜನತೆಯನ್ನು ರಂಗಭೂಮಿಯತ್ತ ಆಕರ್ಷಿಸುವ ಕಾರ್ಯಕ್ರಮಗಳ ಭಾಗವಾಗಿ, ಕರ್ನಾಟಕ ಸುವರ್ಣ ಸಂಭ್ರಮದ ಪ್ರಯುಕ್ತ ‘ಕಾಲೇಜು ರಂಗೋತ್ಸವ 2024-25’ ಮತ್ತು ಬಿ.ಇಡಿ. ಪ್ರಶಿಕ್ಷಣಾರ್ಥಿಗಳಿಗಾಗಿ ‘ಶಿಕ್ಷಣದಲ್ಲಿ ರಂಗಕಲೆ’ ಕಮ್ಮಟವನ್ನು ಆಯೋಜಿಸಿದೆ.
ಮೂರನೇ ಹಂತದ ಕಾಲೇಜು ರಂಗೋತ್ಸವಕ್ಕಾಗಿ ಕಳೆದ ಒಂದು ತಿಂಗಳಿAದ ಶಿವಮೊಗ್ಗ ರಂಗಾಯಣ ವ್ಯಾಪ್ತಿಯ ದಾವಣಗೆರೆ, ಕೋಲಾರ ಮತ್ತು ಬೆಂಗಳೂರು ಮೂರು ಜಿಲ್ಲೆಗಳ ಮೂರು ಕಾಲೇಜುಗಳನ್ನು ಗುರುತಿಸಿ, ಆ ಕಾಲೇಜುಗಳಲ್ಲಿ ರಂಗ ತರಬೇತಿ ಶಿಬಿರಗಳನ್ನು ನಡೆಸಿ, ಪ್ರತಿ ಕಾಲೇಜುಗಳಿಗೆ ನಾಟಕವನ್ನು ನಿರ್ದೇಶಿಸಿ, ಮಾ.15 ರಿಂದ 17 ರವರೆಗೆ ಪ್ರತಿದಿನ ಮಧ್ಯಾಹ್ನ 3.00 ಮತ್ತು ಸಂಜೆ 6.30ಕ್ಕೆ ರಂಗಾಯಣ, ಶಿವಮೊಗ್ಗದ ಸುವರ್ಣ ಸಂಸ್ಕೃತಿ ಭವನದಲ್ಲಿ ನಾಟಕ ಪ್ರದರ್ಶನಗಳನ್ನು ಹಮ್ಮಿಕೊಳ್ಳಲಾಗಿದೆ.
ಮಾ.15 ರಂದು ಶನಿವಾರ ದಾವಣಗೆರ ಜಿಲ್ಲೆ ಹೊನ್ನಾಳಿ ತಾಲೂಕಿನ ಹಿರೇಕಲ್ಮಠ ಎಸ್.ಜೆ.ವಿ.ಪಿ. ಶಿಕ್ಷಣ ಮಹಾವಿದ್ಯಾಲಯದ ವಿದ್ಯಾರ್ಥಿಗಳ ಅಭಿನಯದ ಡಾ.ಹೆಚ್.ಎಸ್.ವೆಂಕಟೇಶಮೂರ್ತಿ ರಚನೆಯ, ಮಹಾಂತೇಶ್ ಆದಿಮ ನಿರ್ದೇಶನದ “ಧರಣಿಮಂಡಲ”ನಾಟಕ ಏರ್ಪಡಿಸಲಾಗಿದೆ.
Shivamogga Rangayana ಮಾ.16 ರಂದು ಭಾನುವಾರ ಕೋಲಾರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿಗಳ ಅಭಿನಯದ ಡಾ.ಹೆಚ್.ಎಸ್. ವೆಂಕಟೇಶ್‌ಮೂರ್ತಿ ರಚನೆಯ ವಿದ್ಯಾರಾಣಿ ಎ.ಎನ್. ನಿರ್ದೇಶನದ ‘ಸುಣ್ಣದ ಸುತ್ತ’ ನಾಟಕ ಏರ್ಪಡಿಸಲಾಗಿದೆ.
ಮಾ.17 ರಂದು ಸೋಮವಾರ ಬೆಂಗಳೂರಿನ ಶ್ರೀ ದಕ್ಷ ಅಕಾಡೆಮಿ ವಿದ್ಯಾರ್ಥಿಗಳ ಅಭಿನಯದ ಶ್ರೀ ಮಹಾಂತೇಶ್ ರಾಮದುರ್ಗ ರಚನೆಯ ಶಿಲ್ಪಾಶೆಟ್ಟಿ ಉಡುಪಿ ನಿರ್ದೇಶನದ “ಸೋರುತಿಹುದು ಸಂಬಂಧ” ನಾಟಕ ಏರ್ಪಡಿಸಲಾಗಿದೆ.
ಮಾ.15 ರಿಂದ 17 ರವರೆಗೆ ಬೆಳಿಗ್ಗೆ 9.30 ರಿಂದ ಸಂಜೆ 5.00 ರವರೆಗೆ ನೋಂದಣಿಯಾಗಿರುವ ಬಿ.ಇಡಿ. ಪ್ರಶಿಕ್ಷಣಾರ್ಥಿಗಳಿಗಾಗಿ ನಡೆಯಲಿರುವ ‘ಶಿಕ್ಷಣದಲ್ಲಿ ರಂಗಕಲೆ’ ಕಮ್ಮಟದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಅಣ್ಣಪ್ಪ ಒಂಟಿಮಾಳಗಿ ಹಾಗೂ ಸತೀಶ್ ಕುಮಾರ್ ಕೆ. ಇವರು ಭಾಗವಹಿಸಲಿದ್ದಾರೆ. ಮಾ. 17 ರಂದು ಸಂಜೆ 6.00ಕ್ಕೆ ಸಮಾರೋಪ ಸಮಾರಂಭ ನಡೆಯಲಿದೆ.
ಟಿಕೆಟ್ ದರ ಒಬ್ಬರಿಗೆ ಒಂದು ಪ್ರದರ್ಶನಕ್ಕೆ ರೂ.30/- ಗಳನ್ನು ನಿಗದಿ ಮಾಡಲಾಗಿದೆ.
ರಂಗಾಸಕ್ತರು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ರಂಗಾಯಣದ ಆಡಳಿತಾಧಿಕಾರಿಗಳು ಕೋರಿದ್ದಾರೆ.

ನರೇಗಾ ಯೋಜನೆ ಬರಿಗಾಲು ತಂತ್ರಜ್ಞರ( ಬಿಎಫ್ ಟಿ) ಹುದ್ದೆಗೆ ಅರ್ಜಿ ಆಹ್ವಾನ

0

Narega Scheme ಮಹಾತ್ಮಾ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯಡಿ ಕೂಲಿಕಾರರನ್ನು ಸಂಘಟಿಸಿ, ಕಾಮಗಾರಿಗಳಲ್ಲಿ ತೊಡಗಿಸುವ ಮೂಲಕ ಹೆಚ್ಚು ಮಾನವ ದಿನಗಳನ್ನು ಸೃಜನೆ ಮಾಡಲು ಮತ್ತು ಅನುಷ್ಟಾನಗೊಳಿಸುವ ಕಾರ್ಯಸ್ಥಳದ ಮೇಲ್ವಿಚಾರಣೆ ಮಾಡಲು 05 ಬಿಎಫ್‌ಟಿ(ಬೇರ್ ಫುಟ್ ಟೆಕ್ನೀಷಿಯನ್) ಅಭ್ಯರ್ಥಿಗಳ ಆಯ್ಕೆಗಾಗಿ ಅರ್ಜಿ ಆಹ್ವಾನಿಸಲಾಗಿದೆ.
ಏಪ್ರಿಲ್ 03 ಅರ್ಜಿ ಸಲ್ಲಿಸಲು ಕಡೆಯ ದಿನವಾಗಿದ್ದು, ಅರ್ಜಿಯನ್ನು ಜಿಲ್ಲಾ ಪಂಚಾಯತ್ ಮಹಾತ್ಮಾ ಗಾಂಧಿ ನರೇಗಾ ಶಾಖೆಗೆ ಸಲ್ಲಿಸಬೇಕು. ಆಸಕ್ತ ಅಭ್ಯರ್ಥಿಗಳು ಈ ಯೋಜನೆಯಡಿ ಉದ್ಯೋಗ ಚೀಟಿ ಹೊಂದಿದ್ದು ಸಕ್ರಿಯ ಕೆಲಸಗಾರನಾಗಿರಬೇಕು. ಅಂದರೆ 2021 ರಿಂದ 2023 ರವರೆಗೆ 3 ವರ್ಷಗಳಲ್ಲಿ ಕನಿಷ್ಟ 2 ವರ್ಷಗಳಲ್ಲಿ 25 ದಿನಗಳಿಗೆ ಕಡಿಮೆ ಇಲ್ಲದಷ್ಟು ಯೋಜನೆಯಡಿ ಕೂಲಿಕಾರರಾಗಿ ಕೆಲಸ ಮಾಡಿರಬೇಕು.
ಕನಿಷ್ಟ 10 ನೇ ತರಗತಿ ಉತ್ತೀರ್ಣರಾಗಿರಬೇಕು. ಸ್ಥಳೀಯ ಅಭ್ಯರ್ಥಿಗೆ ಆದ್ಯತೆ ನೀಡಲಾಗುವುದು. ಮಹಿಳೆಯರಿಗೆ, ಪ.ಜಾ ಮತ್ತು ಪ.ಪಂ ಅಭ್ಯರ್ಥಿಗಳಿಗೆ ಸಾಕಷ್ಟು ಪ್ರಾಧ್ಯಾನ್ಯತೆ ನೀಡಲಾಗುವುದು. 45 ವರ್ಷಕ್ಕಿಂತ ಕಡಿಮೆ ವಯೋಮಿತಿ ಉಳ್ಳವರಾಗಿರಬೇಕು ಎಂದು ಜಿ.ಪಂ ಸಿಇಓ ಎನ್.ಹೇಮಂತ್ ತಿಳಿಸಿದ್ದಾರೆ.

Department of Kannada and Culture ಸಮಾಜ ಸುಧಾರಣೆಗೆ ತೊಡಗಿದ್ದ ಮಹಾಪುರುಷ , ಕೈವಾರ ತಾತಯ್ಯ- ಸಿ.ಎಸ್.ಚಂದ್ರಭೂಪಾಲ್

0

Department of Kannada and Culture ಬಳೆ ತೊಡೆಸುವುದು ಒಂದು ಸಂಸ್ಕೃತಿ. ಬಳೆ ಹೆಣ್ಣು ಮಕ್ಕಳ ದೊಡ್ಡ ಆಸ್ತಿ. ಬಳೆ ತೊಡೆಸುವ ಮಲಾರ ವೃತ್ತಿಯ ಜೊತೆ ಎಲ್ಲ ಹೆಣ್ಣು ಮಕ್ಕಳನ್ನು ತಾಯಂದಿರಂತೆ ಗೌರವಿಸಿದ, ಸಮಾಜ ಸುಧಾರಣೆಯಲ್ಲಿ ತೊಡಗಿದ್ದ ಮಹಾನ್ ಪುರಷ ಕೈವಾರ ತಾತಯ್ಯ ಎಂದು ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಟಾನ ಪ್ರಾಧಿಕಾರದ ಅಧ್ಯಕ್ಷರಾದ ಸಿ ಎಸ್ ಚಂದ್ರಭೂಪಾಲ ಬಣ್ಣಿಸಿದರು.
ಜಿಲ್ಲಾಡಳಿ, ಜಿಲ್ಲಾ ಪಂಚಾಯತ್, ಮಹಾನಗರಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಜಿಲ್ಲಾ ಬಲಿಜ ಸೇವಾ ಸಂಘದ ಸಂಯುಕ್ತಾಶ್ರಯದಲ್ಲಿ ಶುಕ್ರವಾರ ನಗರದ ಕುವೆಂಪು ರಂಗಮಂದಿರದಲ್ಲಿ ಆಯೋಜಿಸಲಾಗಿದ್ದ ಶ್ರೀ ಯೋಗಿನಾರೇಯಣ ಯತೀಂದ್ರ(ಕೈವಾರ ತಾತಯ್ಯ) ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕೈವಾರ ತಾತಯ್ಯ ನವರು ಅತ್ಯಂತ ಶ್ರೇಷ್ಠರು. ಅವರೊಬ್ಬ ಆದರ್ಶ ಪುರುಷ. ಮಹಾನ್ ವ್ಯಕ್ತಿ. ಅವರ ವೃತ್ತಿ ಬಳೆ ವ್ಯಾಪಾರ. ಕಷ್ಟದಿಂದಲೇ ಬದುಕಿದವರು. ಮನೆ ಮನೆಗೆ ಹೋಗಿ ಬಳೆ ತೊಡಿಸುವುದರೊಂದಿಗೆ ಎಲ್ಲರನ್ನೂ ಗೌರವಿಸುತ್ತಿದ್ದರು. ಇಂತಹ ವೃತ್ತಿಯಲ್ಲಿ ಬಂದಿರುವ ಬಲಿಜ ಸಮಾಜದವರು ಅತ್ಯಂತ ಪ್ರೀತಿ, ವಿಶ್ವಾಸಾರ್ಹ ಉಳ್ಳವರು.
ತಾತಯ್ಯನವರು ತಮ್ಮ ನುಡಿಗಳ ಮೂಲಕ ಸಮಾಜಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. 110 ವರ್ಷ ಕಾಲ ಬದುಕಿದ್ದ ಇವರಿಗೆ ಜನರು ಋಣಾತ್ಮಕತೆ ಹೆಚ್ಚು ವಾಲುವುದರ ಬಗ್ಗೆ ಅಸಮಾಧಾನವಿತ್ತು. ದುಷ್ಟರನ್ನು ದೂರವಿಡಬೇಕೆಂದು ಹೇಳುತ್ತಾ, ತಾವೂ ನುಡಿದಂತೆ ನಡೆಯುತ್ತಿದ್ದರು. ಕೈವಾರ ತಾತಯ್ಯ ಸೇರಿದಂತೆ ಮಹನೀಯರು ಯಾವುದೇ ಜಾತಿಗೆ ಸೀಮಿತರಲ್ಲ. ಸಮಾನತೆಯನ್ನು ಪ್ರತಿಪಾದಿಸಿದ್ದಾರೆ.

ನಮ್ಮಲ್ಲಿ ಹಿಂದುಳಿದ ಸಮಾಜಗಳು ಸಾಕಷ್ಟಿವೆ. ಬಲಿಜ ಸಮಾಜ 2 ಎ ಪ್ರವರ್ಗಕ್ಕೆ ಸೇರಬೇಕು. ಅವಕಾಶ ಸಿಕ್ಕರೆ ತಾವೂ ಸಹ ನಾಯಕರ ಹತ್ತಿರ ಈ ಬಗ್ಗೆ ಪ್ರಸ್ತಾಪಿಸುತ್ತೇನೆ ಎಂದ ಅವರು ನಾವೆಲ್ಲರೂ ಶ್ರೇಷ್ಠರು. ಒಗ್ಗಾಟ್ಟಾಗಬೇಕು.ಆಗ ಅಭಿವೃದ್ಧಿ ಸಾಧ್ಯ ಎಂದರು.
ಸಹ್ಯಾದ್ರಿ ವಿಜ್ಞಾನ ಕಾಲೇಜಿನ ಪ್ರಾಧ್ಯಾಪಕಿ ಡಾ.ಛಾಯಾಕುಮಾರಿ.ಇ ವಿಶೇಷ ಉಪನ್ಯಾಸ ನೀಡಿ ಮಾತನಾಡಿ, ಗುರುವಿದ್ದಲ್ಲಿ ಮೋಕ್ಷವಿದೆ. ಗುರುವಿಲ್ಲದೆ ಗೋವಿಂದನನ್ನೂ ಪಡೆಯಲು ಸಾಧ್ಯವಿಲ್ಲ. ಕೈವಾರ ತಾತಯ್ಯನವರನ್ನು ಪದಗಳಲ್ಲಿ ವರ್ಣಿಸಲು ಸಾಧ್ಯವಿಲ್ಲ. ಅವರೊಂದು ಅಗಾಧವಾದ ಸಮುದ್ರ. ತಾತಯ್ಯ ಎಂದರೆ ದೇವರು ಕುಣಿಸುವ ತಾಳಕ್ಕೆ ತಕ್ಕಂತೆ ಕುಣಿಯುವವನು ಎಂದರ್ಥ ಎಂದು ತಾತಯ್ಯ ನಂಬಿದ್ದರು. ಅವರು ದೈವಾಂಶ ಸಂಭೂತರು ಎಂದು ತಿಳಿಸಿದ ಅವರು ತಾತಯ್ಯನವರ ಬಾಲ್ಯ, ತಾರುಣ್ಯ ಸೇರಿದಂತೆ ಜೀವನದ ವಿವಿಧ ಘಟ್ಟಗಳನ್ನು ವಿವರಿಸಿದರು.
Department of Kannada and Culture ಸಾಮಾನ್ಯ ವ್ಯಕ್ತಿಯಾಗಿದ್ದ ತಾತಯ್ಯನವರು ಸಂಸಾರದ ಕ್ಲೇಷಗಳಿಂದ ಹೊರಬರಲು ಗುರುಗಳೋರ್ವರು, ಸಾಕಷ್ಟು ವಿದ್ಯೆ ಇಲ್ಲದ ತಾತಯ್ಯನವರಿಗೆ ಬೆಣಚು ಕಲ್ಲನ್ನು ನೀಡಿ, ಈ ಕಲ್ಲು ಕಲ್ಲು ಸಕ್ಕರೆಯಾಗಿ ಬಾಯಲ್ಲಿ ಕರಗುವ ತನಕ ಇದನ್ನು ಬಾಯಲ್ಲಿಟ್ಟುಕೊಂಡು ನಾರಾಯಣನ ಧ್ಯಾನ ಮಾಡುವಂತೆ ತಿಳಿಸುತ್ತಾರೆ. ಅದರಂತೆ ತಾತಯ್ಯನವರು ಓಂ ನಾರೇಯಣ ನಮಃ ಎಂದು ನಾರಾಯಣನ ಧ್ಯಾನದಲ್ಲಿ ತಲ್ಲೀನರಾದರು. ಸುಮಾರು 3 ವರ್ಷ ಕಳೆದ ನಂತರ ಗುರುಗಳು ನೀಡಿದ ಕಲ್ಲು, ಕಲ್ಲು ಸಕ್ಕರೆಯಾಗಿ ಕರಗಲು ಆರಂಭವಾಗುತ್ತದೆ. ಹೀಗೆ ಮುಂದೆ ಅವರು ಪವಾಡ ಪುರುಷರಾಗುತ್ತಾರೆ. ಮನುಷ್ಯನ ಅಹಂ ಎಂಬ ಅಂಧಕಾರ ಸಕ್ಕರೆಯಂತೆ ಕರಗಬೇಕು. ಜ್ಞಾನ ಜ್ಯೋತಿ ಬೆಳಗಬೇಕು ಎಂದು ಪ್ರತಿಪಾದಿಸುತ್ತಾರೆ. ಸಮಾಜ ಸುಧಾರಕನಾಗಿ ಬೆಳೆಯಬೇಕು, ಜನರನ್ನು ಮೌಢ್ಯದಿಂದ ಹೊರತರಬೇಕೆಂಬ ಉದ್ದೇಶದಿಂದ ಅವರು ಜನರನ್ನು ಪ್ರೇರೇಪಿಸಲು ಆರಂಭಿಸುತ್ತಾರೆAದು ತಿಳಿಸಿದರು.
ಕಾರ್ಯಕ್ರಮದಲ್ಲಿ ವಿಶೇಷ ಸಾಧನೆ ಮಾಡಿದ ಸಮಾಜದ ಸ್ನೇಹಾ ಹಾಗೂ ಕೆಯುಡಬ್ಲುö್ಯಜೆ ದತ್ತಿನಿಧಿ ವಾರ್ಷಿಕ ಪ್ರಶಸ್ತಿ ಪುರಸ್ಕೃತೆ ಪತ್ರಕರ್ತೆ ಕವಿತಾ ಇವರನ್ನು ಸನ್ಮಾನಿಸಲಾಯಿತು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಉಮೇಶ್ ಹೆಚ್ ಸ್ವಾಗತಿಸಿದರು, ಜಿಲ್ಲಾ ಬಲಿಜ ಸೇವಾ ಸಂಘದ ಅಧ್ಯಕ್ಷ ಜಿ. ರಾಘವೇಂದ್ರ, ಜಿಲ್ಲಾ ಬಲಿಜ ಸೇವಾ ಸಂಘದ ಕಾರ್ಯದರ್ಶಿ ಬಿ. ಆರ್. ಶಿವಕಯಮಾರ್, ಜಿಲ್ಲಾ ಬಲಿಜ ಸೌಹಾರ್ಧ ಪತ್ತಿನ ಸಹಕಾರ ಸಂಘದ ವೆಂಕಟೇಶ ನಾಯ್ಡು, ಆದಿಲಕ್ಷ್ಮಿ ಬಲಿಜ ಮಹಿಳಾ ಸಮಾಜದ ಸ್ಮಿತಾ ಶಿವಕುಮಾರ್, ತಹಶೀಲ್ದಾರ್ ಎಂ ಲಿಂಗರಾಜು, ಸಮಾಜದ ಮುಖಂಡರು ಉಪಸ್ಥಿತರಿದ್ದರು.

ತಾಯಿ ಸರಸ್ವತಿಯ ಕೃಪಾಕಟಾಕ್ಷ ಪರೀಕ್ಷಾರ್ಥಿ ಮಕ್ಕಳಿಗೆ ಸಿಗಲಿ- ಪೂಜಾ ನಾಗರಾಜ್ ಪರಿಸರ

0

ಶಿವಮೊಗ್ಗದ ವಿನೋಬ ನಗರದ ಸಮೀಪವಿರುವ ಶಾಲೆಯಲ್ಲಿ ಸರಸ್ವತಿ ಪೂಜಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. 2024 25 ನೇ ಸಾಲಿನ ಶೈಕ್ಷಣಿಕ ವರ್ಷದ ಅಂತಿಮ ಹಂತದಲ್ಲಿದ್ದು ಪೂರ್ವ ಪ್ರಾಥಮಿಕ ಶಾಲಾ ಮಕ್ಕಳಿಗೆ ಹಾಗೂ ಹತ್ತನೇ ತರಗತಿಯ ವಿದ್ಯಾರ್ಥಿಗಳಿಗೆ ತಾಯಿ ಸರಸ್ವತಿ ಮಾತೆಯ ಕೃಪಾಶೀರ್ವಾದ ಪ್ರತಿಯೊಬ್ಬರಿಗೂ ಸಿಗಲೆಂದು ಹಾಗೂ ಎಸ್. ಎಸ್. ಎಲ್. ಸಿ. ಪರೀಕ್ಷೆ ಬರೆಯುತ್ತಿರುವ ವಿದ್ಯಾರ್ಥಿಗಳಿಗೆ ಜ್ಞಾಪಕ ಶಕ್ತಿ ಹಾಗೂ ಕೃಪಾ ಕಟಾಕ್ಷ ಸಿಗಲೆಂದು ಸಂಸ್ಥೆಯ ಕಾರ್ಯದರ್ಶಿಗಳಾದ ಶ್ರೀಮತಿ ಪೂಜಾ ನಾಗರಾಜ್ ಪರಿಸರ ಮಾತನಾಡಿದರು. ನಂತರ ಗುರುಗಳಾದ ಶ್ರೀ ಕೆ. ಮಂಜುನಾಥ್ ಭಟ್ ರವರ ಸಮ್ಮುಖದಲ್ಲಿ ಸರಸ್ವತಿ ಮಾತಿಗೆ ಪೂಜೆಯನ್ನು ಸಲ್ಲಿಸಲಾಯಿತು. ಪೂರ್ವ ಪ್ರಾಥಮಿಕ ಶಾಲಾ ಮಕ್ಕಳಿಂದ ಹತ್ತನೇ ನೇ ತರಗತಿಯ ವಿದ್ಯಾರ್ಥಿಗಳು ಸರಸ್ವತಿ ಮಾತೆಯನ್ನು ಆರಾಧಿಸುತ್ತಾ ಭಕ್ತಿ ಪೂರ್ವಕ ಗೀತೆಗಳನ್ನು ಸರಸ್ವತಿ ಮಾತಿಗೆ ಸಲ್ಲಿಸಿದರು. ಈ ಕಾರ್ಯಕ್ರಮದಲ್ಲಿ ಶಾಲೆಯ ಕಾರ್ಯದರ್ಶಿಗಳು, ಆಡಳಿತಾಧಿಕಾರಿಗಳು, ಮುಖ್ಯೋಪಾಧ್ಯಾಯರು, ಹಾಗೂ ಶಿಕ್ಷಕ ವೃಂದದವರು ಭಾಗಿಯಾಗಿದ್ದರು.

Bharat Scouts and Guides ಸ್ಕೌಟ್ಸ್ & ಗೈಡ್ಸ್ ಚಟುವಟಿಕೆಯಲ್ಲಿ ರಾಷ್ಟ್ರದಲ್ಲೇ ಕರ್ನಾಟಕಕ್ಕೆ ಪ್ರಥಮ ಸ್ಥಾನ- ಪಿ.ಜಿ.ಆರ್.ಸಿಂಧಿಯಾ

0

Bharat Scouts and Guides ಶಿವಮೊಗ್ಗ ಜಿಲ್ಲಾ ಸ್ಕೌಟ್ ಗೈಡ್ ಸಂಸ್ಥೆ ಬದ್ಧತೆಯ ನಾಯಕರನ್ನು ಹೊಂದಿದೆ ಎಂದು ಪಿ.ಜಿ.ಆರ್ ಸಿಂಧ್ಯಾ ಮೆಚ್ಚುಗೆ ವ್ಯಕ್ತಪಡಿಸಿದರು.

ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್, ಶಿವಮೊಗ್ಗ ಜಿಲ್ಲಾ ಸಂಸ್ಥೆಗೆ ಭೇಟಿ ನೀಡಿ, ಪ್ರಗತಿ ಪರಿಶೀಲನಾ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಶಿವಮೊಗ್ಗ ಜಿಲ್ಲಾ ಸಂಸ್ಥೆಯ ಇತಿಹಾಸದಲ್ಲಿ ಬದ್ಧತೆಯ ನಾಯಕರು ಕಟ್ಟಿ ಬೆಳೆಸಿರವ ಸಂಸ್ಥೆಯನ್ನು ಉಳಿಸಿಕೊಂಡು, ಇನ್ನೂ ಹೆಚ್ಚಿನ ರೀತಿಯಲ್ಲಿ ಬೆಳೆಸಿಕೊಂಡು ಹೋಗುವಂತೆ, ಗಣತಿಯನ್ನು ಹೆಚ್ಚಿಸುವಂತೆ, ರಚನಾತ್ಮಕ ಚಟುವಟಿಕೆಯನ್ನು ಹಮ್ಮಿಕೊಳ್ಳುವಂತೆ, ಮುಂದಿನ ಬೇಸಿಗೆ ಶಿಬಿರಗಳನ್ನು ಯಶಸ್ವಿಗೊಳಿಸುವಂತೆ ಪದಾಧಿಕಾರಿಗಳಿಗೆ ತಿಳಿಸಿದರು. ರಾಜ್ಯದ ಎಲ್ಲಾ ಜಿಲ್ಲಾ ಸಂಸ್ಥೆ ಸ್ಥಳೀಯ ಸಂಸ್ಥೆಗಳು ಹಾಗೂ ಶಿಕ್ಷಣ ಸಂಸ್ಥೆಗಳ ಸಹಕಾರದಿಂದ ದೇಶದಲ್ಲೇ ನಮ್ಮ ಕರ್ನಾಟಕ ರಾಜ್ಯ ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್ ಪ್ರಥಮ ಸ್ಥಾನದಲ್ಲಿದೆ ಎಂದು ನುಡಿದರು.

ಅಂತರ ರಾಷ್ಟ್ರೀಯ ಉಪ ಆಯುಕ್ತರಾದ ಮಧುಸೂದನ್ ಮಾತನಾಡಿ, ಜಿಲ್ಲೆಯಲ್ಲಿ ಸ್ಕೌಟ್ ಗೈಡ್ ಚಳುವಳಿಯನ್ನು ವಿಸ್ತರಿಸಲು ವಿಫುಲ ಅವಕಾಶವಿದ್ದು, ಸರ್ವರೂ ಅದರ ಕಡೆ ಗಮನ ಹರಿಸಬೇಕೆಂದು ಕೋರಿದರು.

ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಮುಖ್ಯ ಆಯುಕ್ತರಾದ ಶಕುಂತಲಾ ಚಂದ್ರಶೇಖರ ಮಾತನಾಡಿ, ಶಿವಮೊಗ್ಗ ಜಿಲ್ಲೆಯೂ ರಾಜ್ಯದ ಎಲ್ಲಾ ಕಾರ್ಯ ಚಟುವಟಿಕೆಯಲ್ಲಿ ಭಾಗವಹಿಸುತ್ತಿದೆ ಮತ್ತು ಮುಂದಿನ ಎಲ್ಲಾ ಕಾರ್ಯಗಳಿಗೂ ನಮ್ಮ ಸಹಕಾರ ಇರುತ್ತದೆ ಎಂದು ತಿಳಿಸಿದರು.

Bharat Scouts and Guides ಸಭೆಯಲ್ಲಿ ರಾಜ್ಯ ಸಂಘಟನಾ ಆಯುಕ್ತ ಎಂ.ಪ್ರಭಾಕರ್ ಭಟ್, ಸ್ಕೌಟ್ ಮಾಜಿ ಜಿಲ್ಲಾ ಆಯುಕ್ತರಾದ ಎಸ್.ಉಮೇಶ್ ಶಾಸ್ತ್ರೀ, ಜಿಲ್ಲಾ ಕೇಂದ್ರ ಸ್ಥಾನಿಕ ಆಯುಕ್ತರಾದ ಜಿ.ವಿಜಯ್ ಕುಮಾರ್, ರಾಘವೇಂದ್ರ, ಜಿಲ್ಲಾ ಖಜಾಂಜಿ ಚೂಡಾಮಣಿ ಈ ಪವಾರ್, ಜಂಟಿ ಕಾರ್ಯದರ್ಶಿ ಲಕ್ಷ್ಮಿ ರವಿ, ಸಹ ಕಾರ್ಯದರ್ಶಿ ವೀರೇಶಪ್ಪ, ಜಿಲ್ಲಾ ತರಬೇತಿ ಆಯುಕ್ತರಾದ ಶಿವಶಂಕರ ಮತ್ತು ಗೀತಾ ಚಿಕ್ಮಟ್ಟ್, ಸಹಾಯಕ ಜಿಲ್ಲಾ ಆಯುಕ್ತ ಹೆಚ್.ಪರಮೇಶ್ವರ, ತರಬೇತಿ ನಾಯಕಿ ಕಾತ್ಯಾಯಿನಿ, ಹೇಮಲತಾ, ಮೀನಾಕ್ಷಮ್ಮ, ತರಬೇತಿ ನಾಯಕ ರಾಜೇಶ್ ಅವಲಕ್ಕಿ, ಕಛೇರಿ ಸಿಬ್ಬಂದಿಗಳು ಉಪಸ್ಥಿತರಿದ್ದರು. ಸ್ಕೌಟ್ ಜಿಲ್ಲಾ ಆಯುಕ್ತರಾದ ಎಸ್.ಜಿ.ಆನಂದ್ ಸ್ವಾಗತಿಸಿದರು, ರೋವರ್ ಜಿಲ್ಲಾ ಆಯುಕ್ತರಾದ ಕೆ.ರವಿ, ಕಳೆದ ಮೂರು ತಿಂಗಳಿನ ವರದಿ ಸಲ್ಲಿಸಿದರು. ಜಿಲ್ಲಾ ಕಾರ್ಯದರ್ಶಿ ಚಂದ್ರಶೇಖರಯ್ಯ ವಂದಿಸಿದರು.

Agnipath Scheme ಶಿವಮೊಗ್ಗ ಸೇರಿದಂತೆ ಒಂಭತ್ತು ಜಿಲ್ಲೆಗಳ ಅವಿವಾಹಿತ ಅಭ್ಯರ್ಥಿಗಳಿಂದ ಅಗ್ನಿವೀರ್ ನೇಮಕಾತಿ ಪರೀಕ್ಷೆಗೆ ಅರ್ಜಿಸಲ್ಲಿಕೆಗೆ ಆಹ್ವಾನ

0

Agnipath Scheme ಅಗ್ನಿಪಥ್ ಯೋಜನೆಯಡಿ 2025-26ನೇ ಸಾಲಿನ ಅಗ್ನಿವೀರ್ ನೇಮಕಾತಿ ಪರೀಕ್ಷೆಗೆ ಬಾಗಲಕೋಟೆ, ಗದಗ, ವಿಜಯಪುರ, ಧಾರವಾಡ, ಉತ್ತರ ಕನ್ನಡ, ಉಡುಪಿ, ದಾವಣಗೆರೆ, ಹಾವೇರಿ, ಚಿಕ್ಕಮಗಳೂರು ಮತ್ತು ಶಿವಮೊಗ್ಗ ಜಿಲ್ಲೆಗಳ ಅವಿವಾಹಿತ ಪುರುಷ ಅಭ್ಯರ್ಥಿಗಳಿಂದ ಆನ್‌ಲೈನ್ ಅರ್ಜಿಗಳನ್ನು ಅಹ್ವಾನಿಸಲಾಗಿದೆ.
ಆನ್‌ಲೈನ್ ನೋಂದಣಿಯು ಮಾರ್ಚ್ 12 ರಿಂದ ಏಪ್ರಿಲ್ 10 ರವರೆಗೆ ಇರುತ್ತದೆ. ನೋಂದಣಿ ಪೊರ್ಟಲ್- WWW.JOININDINARMY.NIC.IN ಹಾಗೂ ಆನ್‌ಲೈನ್ ಪರೀಕ್ಷೆಯು ಜೂನ್ 2025 ರಲ್ಲಿ ನಡೆಯುವ ಸಾಧ್ಯತೆಯಿದ್ದು, ದಿನಾಂಕವನ್ನು ನಂತರ ಪ್ರಕಟಿಸಲಾಗುವುದು.
ಭಾರತೀಯ ಸೇನೆಯಲ್ಲಿ ಆಯ್ಕೆ ‘ನ್ಯಾಯಯುತ ಮತ್ತು ಪಾರದರ್ಶಕ’ವಾಗಿದ್ದು, ಅರ್ಹತೆ ಮೇಲೆ ಮಾತ್ರ ನಡೆಯುತ್ತದೆ. ಯಾವುದೇ ಹಂತದಲ್ಲಿ ಭಾರತೀಯ ಸೇನೆಯಲ್ಲಿ ಆಯ್ಕೆ ಅಥವಾ ನೇಮಕಾತಿಗಾಗಿ ಯಾರಿಗೂ ಲಂಚ ನೀಡಬಾರದು ಹಾಗೂ ನೇಮಕಾತಿ ಏಜೆಂಟ್ ಗಳಂತೆ ನಟಿಸುವ, ಆಮಿಷ ಒಡ್ಡುವ ವ್ಯಕ್ತಿಗಳಿಗೆ ಬಲಿಯಾಗಬಾರದೆಂದು ಶಿವಮೊಗ್ಗ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಉಪ ನಿರ್ದೇಶಕರು ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಮಂಗಳೂರು ಸೇನಾ ನೇಮಕಾತಿ ಕಛೇರಿ ದೂರವಾಣಿ ಸಂಖ್ಯೆ- 0824-2951279 ಹಾಗೂ ಇಮೇಲ್: aromangalore2021@gmail.com k ಸಂಪರ್ಕಿಸಬಹುದಾಗಿದೆ.