Sunday, March 8, 2026
Sunday, March 8, 2026
Home Blog Page 371

Rotary Club Shivamogga ನಿರಂತರ ಸೇವಾಕಾರ್ಯ ನಡೆಸುವ ಸಂಸ್ಥೆ ರೋಟರಿ : ಗವರ್ನರ್ ದೇವಾನಂದ್

0

Rotary Club Shivamogga ಸಮಾಜಮುಖಿ ಆಲೋಚನೆಗಳೊಂದಿಗೆ ನಿರಂತರವಾಗಿ ಸೇವಾ ಕಾರ್ಯಗಳನ್ನು ನಡೆಸುವ ಸಂಸ್ಥೆ ರೋಟರಿಯಾಗಿದೆ ಎಂದು ಜಿಲ್ಲಾ ಗವರ್ನರ್ ದೇವಾನಂದ್ ಹೇಳಿದರು.
ರೋಟರಿ ಕ್ಲಬ್ ಶಿವಮೊಗ್ಗ ರಿವರ್‌ಸೈಡ್ ಸಂಸ್ಥೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಮಾತನಾಡಿ, ಉತ್ತಮ ಸೇವಾ ಕಾರ್ಯಗಳನ್ನು ನಡೆಸುತ್ತಿರುವುದು ಶ್ಲಾಘನೀಯ. ಆರೋಗ್ಯ ಸಮಾಜ ನಿರ್ಮಾಣ ಮಾಡುವಲ್ಲಿ ರೋಟರಿ ಸಂಸ್ಥೆ ಮಹತ್ತರ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುತ್ತಿದೆ. ಶುದ್ಧ ಕುಡಿಯುವ ನೀರಿನ ಘಟಕ ಕೊಡುಗೆ ನೀಡಿರುವುದು ಅಭಿನಂದನೀಯ ಎಂದು ತಿಳಿಸಿದರು.
ಒಳಿತಿಗಾಗಿ ಒಂದಾಗೋಣ ಎಂಬ ಘೋಷವಾಕ್ಯದೊಂದಿಗೆ ಎಲ್ಲರೂ ಕಾರ್ಯ ನಿರ್ವಹಿಸಬೇಕು. ವಿಶ್ವದ 120 ರಾಷ್ಟ್ರಗಳಲ್ಲಿ 12 ಲಕ್ಷಕ್ಕಿಂತ ಹೆಚ್ಚು ಸದಸ್ಯರನ್ನು ಹೊಂದಿರುವ ರೋಟರಿ ಸಂಸ್ಥೆ ಉತ್ತಮ ಕೆಲಸ ಮಾಡುತ್ತಿದೆ. ಶಾಲಾ ಮಕ್ಕಳಿಗೆ ಸಮವಸ್ತ್ರ ವಿತರಿಸಿರುವುದು ಒಳ್ಳೆಯ ಕಾರ್ಯ ಎಂದರು.
ಇಂಗು ಗುಂಡಿ, ಸಸಿ ನೆಡುವ ಕಾರ್ಯ, ಬಯೋಡೈವರ್ಸಿಟಿ ಪಾರ್ಕ್, ಹಸಿರು ಕ್ರಾಂತಿ, ಔಷದಿ ಗಿಡನೆಟ್ಟು, ಮಕ್ಕಳಿಗೆ ಪ್ರಕೃತಿ ಬಗ್ಗೆ, ರಸ್ತೆ ಸುರಕ್ಷತೆ ಬಗ್ಗೆ ಮಾಹಿತಿ ನೀಡುವ ಮಾಹಿತಿ ನೀಡುವ ಕಾರ್ಯಕ್ರಮಗಳನ್ನು ರಿವರ್‌ಸೈಡ್ ಸಂಸ್ಥೆ ಮಾಡಿರುವುದು ಶ್ಲಾಘನೀಯ ಎಂದು ಹೇಳಿದರು.
Rotary Club Shivamogga ಅಧ್ಯಕ್ಷತೆ ವಹಿಸಿದ್ದ ರೋಟರಿ ಕ್ಲಬ್ ಶಿವಮೊಗ್ಗ ರಿವರ್‌ಸೈಡ್ ಅಧ್ಯಕ್ಷ ಎಂ ಆರ್ ಬಸವರಾಜ್ ಮಾತನಾಡಿ, ವೃತ್ತಿಯ ಜತೆಯಲ್ಲಿ ಹೆಚ್ಚಿನ ಸೇವಾಕಾರ್ಯಗಳನ್ನು ಕ್ಲಬ್ ವತಿಯಿಂದ ಮಾಡುತ್ತಿದ್ದು, ಸಮಾಜಮುಖಿ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ. ಎಲ್ಲರ ಸಹಕಾರದಿಂದ ಹೆಚ್ಚಿನ ಕಾರ್ಯಕ್ರಮಗಳನ್ನು ನಡೆಸಲಾಗುವುದು ಎಂದು ತಿಳಿಸಿದರು.
ಸಿಗಂದೂರು ಸೇತುವೆ ನಿರ್ಮಾಣದ ಪ್ರಮುಖ ಇಂಜಿನಿಯರ್ ಪೀರ್ ಪಾಷಾ, ಪ್ರಮುಖರಾದ ಆನಂದಮೂರ್ತಿ ಹಾಗೂ ಎಸ್.ಎಸ್.ವಾಗೇಶ್ ಅವರಿಗೆ ರೋಟರಿ ಕ್ಲಬ್ ಶಿವಮೊಗ್ಗ ರಿವರ್‌ಸೈಡ್ ಸಂಸ್ಥೆಯಿಂದ ಸನ್ಮಾನಿಸಲಾಯಿತು. ವಲಯ 10ರ ಸಹಾಯಕ ಗವರ್ನರ್‌ ಎಸ್‌ ಆರ್‌ ನಾಗರಾಜ್‌, ವಾಸಂತಿ, ಬಸವರಾಜ್, ಕೆ.ಪಿ.ಶೆಟ್ಟಿ, ಧನರಾಜ್, ವಿನಯ್, ನಾಗರಾಜ್, ಸೋಮಶೇಖರ್, ಪಿಡಿಜಿ ಚಂದ್ರಶೇಖರ್, ಭಾರತಿ, ಜಗನಾಥ್, ಜಿ.ವಿಜಯಕುಮಾರ್, ಶಂಕರ್, ವಿಶ್ವಾಸ್, ದೇವೇಂದ್ರಪ್ಪ, ಮಂಜುನಾಥ್, ಮಲ್ಲೇಶ್, ದ್ವಾರಕನಾಥ್, ವಿಶ್ವನಾಥ್ ನಾಯ್ಕ್, ರಾಜೇಶ್, ಸುಪ್ರಿಯ, ಮಲ್ಲೇಶ್ ಮತ್ತು ಇತರ ಕ್ಲಬ್ ಸದಸ್ಯರು ಭಾಗವಹಿಸಿದ್ದರು.

A.R. Rahman ಖ್ಯಾತ ಸಂಗೀತ ಸಂಯೋಜಕ ಎ.ಆರ್ ರೆಹಮಾನ್ ಆಸ್ಪತ್ರೆಗೆ ದಾಖಲು

0

A.R. Rahman ಖ್ಯಾತ ಸಂಗೀತ ಸಂಯೋಜಕ ಎ.ಆರ್.ರೆಹಮಾನ್ ಅವರಿಗೆ ಬೆಳಗ್ಗೆ ದಿಢೀರ್ ಎದೆನೋವು ಕಾಣಿಸಿಕೊಂಡ ಹಿನ್ನೆಲೆ ಚೆನ್ನೈನ ಅಪೊಲೊ ಆಸ್ಪತ್ರೆಗೆ ದಾಖಲಿಸಲಾಗಿದೆ.

ಇತ್ತೀಚಿಗಷ್ಟೆ ವಿದೇಶದಿಂದ ವಾಪಸಾದ ನಂತರ ಕುತ್ತಿಗೆ ಭಾಗದಲ್ಲಿನ ನೋವು ಉಂಟಾದ ಕಾರಣ ಚಿಕಿತ್ಸೆ ಪಡೆದುಕೊಂಡಿದ್ದರು.

ಎದೆನೋವಿನ ಹಿನ್ನೆಲೆಯಲ್ಲಿ ಎ.ಆರ್ ರೆಹಮಾನ್ ಅವರಿಗೆ ECG, ಎಕೋಕಾರ್ಡಿಯೋಗ್ರಾಮ್ ಸೇರಿ ವಿವಿಧ ಪರೀಕ್ಷೆಗಳನ್ನು ಮಾಡಲಾಗಿದೆ. ಸದ್ಯಕ್ಕೆ ಹೆಚ್ಚಿನ ಮಾಹಿತಿಯನ್ನು ನಿರೀಕ್ಷೆ ಮಾಡಲಾಗುತ್ತಿದೆ.
ಆಸ್ಪತ್ರೆ ಮೂಲಗಳ ಪ್ರಕಾರ ಚಿಕಿತ್ಸೆ ನೀಡುತ್ತಿರುವ ವೈದ್ಯರು ರೆಹಮಾನ್ ಅವರಿಗೆ ಆಂಜಿಯೋಗ್ರಾಮ್ ಮಾಡುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

A.R. Rahman ರೆಹಮಾನ್ ಅವರು ಬೇಗ ಚೇತರಿಸಿಕೊಳ್ಳಲೆಂದು ಅವರ ಅಭಿಮಾನಿಗಳು ಸಾಮಾಜಿಕ ಮಾಧ್ಯಮದ ಮೂಲಕ ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ.

Ayushman Bharat Project ಆಯುಷ್ಮಾನ್ ಯೋಜನೆಯ ಹಣ ದುರ್ಬಳಕೆ ಕೇಂದ್ರದ ತನಿಖೆಯಿಂದ ಬಹಿರಂಗ

0

Ayushman Bharat Project ಎಲ್ಲ ವರ್ಗದ ಜನರಿಗೆ ಉತ್ತಮ ಆರೋಗ್ಯ ಒದಗಿಸುವ ಉದ್ದೇಶದಿಂದ ಆರಂಭಿಸಿರುವ ‘ಆಯುಷ್ಮಾನ್ ಭಾರತ್’ ಯೋಜನೆಯಲ್ಲಿ 562 ಕೋಟಿ ರೂ. ಲೂಟಿಯಾಗಿರುವುದು ಪತ್ತೆಯಾಗಿದೆ. ದೇಶದ ಕೇಂದ್ರಾಡಳಿತ ಪ್ರದೇಶಗಳು ಸೇರಿ ಒಟ್ಟು 24 ರಾಜ್ಯಗಳಲ್ಲಿ ಈ ರೀತಿ ಮೋಸ ನಡೆದಿದೆ. ಸುಳ್ಳು ದಾಖಲೆ ಮತ್ತು ಚಿಕಿತ್ಸೆಯ ನಕಲಿ ಬಿಲ್ ಸೃಷ್ಟಿಸಿ ಹಣ ದೋಚಲಾಗಿದೆ. ಉತ್ತರ ಪ್ರದೇಶವೊಂದರಲ್ಲಿಯೇ 139 ಕೋಟಿ ರೂ. ಮೋಸ ನಡೆದಿದೆ ಎಂದು ಕೇಂದ್ರ ಸರಕಾರ ಹೇಳಿದೆ.

Ayushman Bharat Project ಕರ್ನಾಟಕದಲ್ಲಿ ಎಲ್ಲಿಯೂ ನಕಲಿ ಬಿಲ್‌ ತಯಾರಿಸಿದ ಪ್ರಕರಣ ಪತ್ತೆಯಾಗಿಲ್ಲ, ಖಾಸಗಿ ಆಸ್ಪತ್ರೆಗಳು ಚಿಕಿತ್ಸಾದರ ಪರಿಷ್ಕರಿಸಲು ಕೇಳುತ್ತಿವೆ ಎಂದು ವೈದ್ಯಕೀಯ ಶಿಕ್ಷಣ ಸಚಿವರಾದ ಡಾ.ಶರಣಪ್ರಕಾಶ ಪಾಟೀಲ್ ಅವರು ತಿಳಿಸಿದ್ದಾರೆ.ಕೇಂದ್ರ ಆರೋಗ್ಯ ಖಾತೆ ಸಹಾಯಕ ಸಚಿವ ಪ್ರತಾಪ್‌ ರಾವ್ ಜಾಧವ್ ಅವರು ರಾಜ್ಯಸಭೆಯಲ್ಲಿ ನೀಡಿದ ಲಿಖಿತ ಉತ್ತರ ದಲ್ಲಿ ಈ ಮಾಹಿತಿಗಳನ್ನು ಹಂಚಿಕೊಂಡಿದ್ದು, ಯೋಜನೆಯಲ್ಲಿ ಅಕ್ರಮ ತಡೆಗೆ ಮತ್ತಷ್ಟು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ

CM Siddaramaiah ಕರ್ನಾಟಕದ 2024 ರ ಬಜೆಟ್ ಪ್ರಗತಿ 68% ಮಾತ್ರ

0

CM Siddaramaiah 2024-25ನೇ ಆರ್ಥಿಕ ವರ್ಷ ಮುಕ್ತಾಯಗೊಳ್ಳುವ ಹಂತದಲ್ಲಿದ್ದರೂ 11 ತಿಂಗಳಲ್ಲಿ ಬಜೆಟ್‌ ವೆಚ್ಚ ಪ್ರಮಾಣ ಶೇ.68ರಷ್ಟು ಮೀರಿಲ್ಲ. ಪರಿಣಾಮವಾಗಿ 2024ರ ಮಾರ್ಚ್ 31ರೊಳಗೆ ಬಾಕಿ ಶೇ.32ರಷ್ಟು ಅಂದರೆ 1.02 ಲಕ್ಷ ಕೋಟಿ ರೂ. ವೆಚ್ಚ ಮಾಡಬೇಕಿದ್ದು, ದೊಡ್ಡ ಪ್ರಮಾಣದಲ್ಲಿ ಅನುದಾನ ಬಳಕೆಯಾಗದೆ ಉಳಿಯುವ ಸಾಧ್ಯತೆ ಇದೆ.

ಸಿದ್ದರಾಮಯ್ಯ ಅವರು ಎರಡನೇ ಬಾರಿಗೆ ಮುಖ್ಯಮಂತ್ರಿಯಾದ ಬಳಿಕ ಎರಡನೇ ಬಾರಿಗೆ ಮಂಡಿಸಿದ 2024-25ನೇ ಸಾಲಿನ ಬಜೆಟ್‌ನಲ್ಲಿ ಇಲಾಖೆಗಳಿಗೆ ಒಟ್ಟು 3.79 ಲಕ್ಷ ಕೋಟಿ ರೂ. ಹಂಚಿಕೆಯಾಗಿತ್ತು. ಆರಂಭಿಕ ಶಿಲ್ಕು ರೂಪದಲ್ಲಿ14,142 ಕೋಟಿ ರೂ. ಸೇರಿದಂತೆ ಒಟ್ಟು 3.22 ಲಕ್ಷ ಕೋಟಿ ರೂ.ಗಳನ್ನು ಇಲಾಖೆಗಳ ಮೂಲಕ ವೆಚ್ಚ ಮಾಡುವ ಗುರಿಯಿತ್ತು. ಆದರೆ ಆರ್ಥಿಕ ವರ್ಷದ 11 ತಿಂಗಳಲ್ಲಿ ವೆಚ್ಚ ಮಾಡಿರುವುದು ಶೇ.68.29ರಷ್ಟು ಅನುದಾನ ಮಾತ್ರ.


ಪ್ರಸಕ್ತ ವರ್ಷದಲ್ಲಿ ಫೆಬ್ರವರಿ ಅಂತ್ಯದವರೆಗೆ ಸರಕಾರ ಇಲಾಖೆಗಳಿಗೆ ಬಿಡುಗಡೆ ಮಾಡಿರುವ ಒಟ್ಟು ಮೊತ್ತ2.50 ಲಕ್ಷ ಕೋಟಿ ರೂ. ಅಂದರೆ ಒಟ್ಟು ಹಂಚಿಕೆ ಮೊತ್ತದಲ್ಲಿ ಶೇ.77ರಷ್ಟು ಹಣವಷ್ಟೇ ಬಿಡುಗಡೆಯಾಗಿತ್ತು. ಅದರಲ್ಲಿ ಶೇ.87ರಷ್ಟು ಅಂದರೆ 2.19 ಲಕ್ಷ ಕೋಟಿ ರೂ. ವೆಚ್ಚವಾಗಿದೆ. ಮಾರ್ಚ್ನಲ್ಲಿ ಸರಕಾರ ಒಟ್ಟು 71,401 ಕೋಟಿ ರೂ. ಬಿಡುಗಡೆ ಮಾಡಬೇಕಿದ್ದು, ಅಷ್ಟು ಹಣವನ್ನೂ ಇಲಾಖೆಗಳು 15 ದಿನದೊಳಗೆ ವೆಚ್ಚ ಮಾಡಬೇಕಿದೆ.

Madhu Bangarappa ಕೇರಳದಲ್ಲಿ ನಾರಾಯಣ ಗುರುಗಳ ವಾರ್ಷಿಕೋತ್ಸವ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ

0

Madhu Bangarappa ಮಾನ್ಯ ಶಾಲಾ ಶಿಕ್ಷಣ ಹಾಗೂ ಸಾಕ್ಷಾತಾ ಇಲಾಖೆ ಸಚಿವರಾದ ಸನ್ಮಾನ್ಯ ಮಧು ಬಂಗಾರಪ್ಪನವರು ಕೇರಳದ ಕಣ್ಣೂರು ಜಿಲ್ಲೆಯ ತಳ್ಳಿಚೇರಿಯಲ್ಲಿ ಹಮ್ಮಿಕೊಂಡಿದ್ದ “ನಾರಾಯಣ ಗುರುಗಳ ವಾರ್ಷಿಕೋತ್ಸವ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದರು.

ಕಾರ್ಯಕ್ರಮಕ್ಕೂ ಮೊದಲು ಶ್ರೀ ನಾರಾಯಣ ಗುರುಗಳು ಜೀವಂತವಾಗಿದ್ದಾಗ ಪ್ರತಿಷ್ಠಾಪಿಸಲಾದ ಏಕೈಕ ದೇವಾಲಯಕ್ಕೆ ಭೇಟಿನೀಡಿ ಆಶೀರ್ವಾದ ಪಡೆದರು.

ಬಳಿಕ ಕೇರಳ ವಿಧಾನಸಭೆಯ ಸ್ಪೀಕರ್ ಶ್ರೀ ಎ.ಎನ್ ಶಂಶೀರ್ ಅವರೊಂದಿಗೆ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿ, ಮಾತನಾಡಿದರು.

Madhu Bangarappa ಈ ವೇಳೆ ಮಹೋತ್ಸವ ಕಮಿಟಿ ಅಧ್ಯಕ್ಷರಾದ ಶ್ರೀ ಗೋಕುಲನ್ ಗೋಪಾಲನ್, ಸಂಸದರಾದ ಶ್ರೀ ಶಫಿ ಪರಂಬಿಲ್, ಮಾಜಿ ಶಾಸಕರಾದ ಶ್ರೀ ಎಂ.ವಿ ಜಯರಾಜನ್, ಮಾಜಿ ವಿಧಾನಪರಿಷತ್ ಸದಸ್ಯರಾದ ಶ್ರೀ ಹರೀಶ್ ಕುಮಾರ್, ಶ್ರೀ ಟಿ.ಕೆ ರಾಜನ್, ಶ್ರೀ ರವೀಂದ್ರ ಪೊಯ್ಲೂರು, ಶ್ರೀ ಕೆ.ಸತ್ಯನ್ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.

Government of Karnataka ನದಿ ಸ್ನಾನಘಟ್ಟಗಳ 500 ಮೀಟರ್‌ ಫಾಸಲೆಯಲ್ಲಿ ಸೋಪು- ಶ್ಯಾಂಪು ಮಾರಾಟ ನಿಷೇಧ

0

Government of Karnataka ಪವಿತ್ರ ನದಿಗಳ ಸಂರಕ್ಷಣೆಗೆ ರಾಜ್ಯ ಕಾಂಗ್ರೆಸ್ ಸರ್ಕಾರದ ದೃಢ ನಿಲುವು,
ಪವಿತ್ರ ನದಿಗಳ ಸ್ನಾನಘಟ್ಟಗಳ 500 ಮೀಟರ್ ವ್ಯಾಪ್ತಿಯಲ್ಲಿ ಸೋಪು, ಶಾಂಪೂ ಮಾರಾಟ ಮಾಡುವುದನ್ನ ಕರ್ನಾಟಕ‌‌ಸರ್ಕಾರ ನಿಷೇಧ‌ ಮಾಡಿದೆ.
Government of Karnataka ಜಲಸಂಪನ್ನೂಲಗಳ
ಸ್ವಚ್ಛತೆ ಸಂರಕ್ಷಿಸುವಲ್ಲಿ ರಾಜ್ಯದ ಈ‌‌ ಕ್ರಮ ಸ್ತುತ್ಯರ್ಹವಾಗಿದೆ.

International Film Festival ಬೆಂಗಳೂರು 16 ನೇ ಅಂತಾರಾಷ್ಟ್ರೀಯ ಚಲಚಿತ್ರೋತ್ಸವ. ನಟಿ ಶಬಾನ ಅಜ್ಮಿ ಅವರಿಗೆ ಜೀವಮಾನ‌‌ ಸಾಧನೆ ಪ್ರಶಸ್ತಿ‌

0

International Film Festival ಬೆಂಗಳೂರಿನಲ್ಲಿ‌ ಆಯೋಜಿಸಿದ್ದ 16ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಅಂಗವಾಗಿ ಕೊಡಮಾಡುವ ಜೀವಮಾನ ಸಾಧನೆ ಪ್ರಶಸ್ತಿ ವಿಜೇತ ನಟಿ ಶಬಾನಾ ಆಜ್ಮಿ ಅವರಿಗೆ ರಾಜ್ಯದ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಪ್ರಶಸ್ತಿಪತ್ರ ಮತ್ತು 10 ಲಕ್ಷದ ಚೆಕ್ ನೀಡಿ, ಗೌರವಿಸಿದರು.

ವಿಶ್ವ ವಿಖ್ಯಾತ ಕವಿ, ಗೀತರಚನೆಕಾರ ಜಾವೇದ್ ಅಖ್ತರ್ ಅವರು ಈ ಸಂದರ್ಭದಲ್ಲಿ ಜೊತೆಗಿದ್ದರು.

International Film Festival ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಎಲ್.ಕೆ.ಅತೀಕ್, ಚಲನಚಿತ್ರ ಅಕಾಡೆಮಿ ಅಧ್ಯಕ್ಷರಾದ ಸಾದು ಕೋಕಿಲ, ಸರ್ಕಾರದ ಕಾರ್ಯದರ್ಶಿ ಕಾವೇರಿ, ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾದ ಕೆ.ವಿ.ಪ್ರಭಾಕರ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಆಯುಕ್ತರಾದ ಹೇಮಂತ್ ನಿಂಬಾಳ್ಕರ್, 16 ನೇ ಅಂತಾರಾಷ್ಟ್ರೀಯ ಚಲನ ಚಿತ್ರೋತ್ಸವದ ಕಲಾ ನಿರ್ದೇಶಕ ವಿದ್ಯಾಶಂಕರ್ ಅವರು ಉಪಸ್ಥಿತರಿದ್ದರು.

CM Siddharamaiah ಕರ್ನಾಟಕಕ್ಕೆ ಕೇಂದ್ರದಿಂದ “ರಾಷ್ಟ್ರೀಯ ಇ-ಆಡಳಿತ ಪ್ರಶಸ್ತಿ” ಘೋಷಣೆ

0

CM Siddharamaiah ಕರ್ನಾಟಕ ರಾಜ್ಯ ದೂರ ಸಂವೇದಿ ಅನ್ವಯಿಕ‌ ಕೇಂದ್ರದ ಕಾರ್ಯದಕ್ಷತೆಗಾಗಿ ಕೇಂದ್ರ ಸರ್ಕಾರದ 2024ನೇ ಸಾಲಿನ “ರಾಷ್ಟ್ರೀಯ ಇ-ಆಡಳಿತ ಪ್ರಶಸ್ತಿ”ಗೆ ರಾಜ್ಯ ಭಾಜನವಾಗಿದೆ ಎಂದು ತಿಳಿಸಲು ಹರ್ಷಿಸುತ್ತೇನೆ. ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ತಮ್ಮ ಸಂತಸ ಹಂಚಿಕೊಂಡಿದ್ದಾರೆ

ಕರ್ನಾಟಕವು ಪಾರದರ್ಶಕ, ಜನಸ್ನೇಹಿ ಆಡಳಿತಕ್ಕೆ ಇಡೀ ದೇಶಕ್ಕೆ ಮಾದರಿ ರಾಜ್ಯ. ಈ ಪ್ರಶಸ್ತಿಯು ಜನಪರ ಕಾರ್ಯದ ನಮ್ಮ ಉತ್ಸಾಹವನ್ನು ನೂರ್ಮಡಿಗೊಳಿಸಿದೆ. ಎಂದು ತಮ್ಮ ಜಾಲತಾಣದ x ಖಾತೆಯಲ್ಲಿ‌ ತಿಳಿಸಿದ್ದಾರೆ

Jog Falls ಕಾಮಗಾರಿ ಅಪೂರ್ಣ, ಜೋಗ ಜಲಪಾತ ವೀಕ್ಷಣೆ ಏಪ್ರಿಲ್ 3o ರವರೆಗೆ ಸಾರ್ವಜನಿಕರಿಗೆ ಪ್ರವೇಶ ನಿರ್ಬಂಧ

0

ಶಿವಮೊಗ್ಗ ಜಿಲ್ಲೆಯ ವಿಶ್ವ ವಿಖ್ಯಾತ ಜೋಗ ಜಲಪಾತ ಪ್ರದೇಶದ ವ್ಯಾಪ್ತಿಯಲ್ಲಿ ಪ್ರವಾಸಿಗರಿಗೆ ಮೂಲಭೂತ ಸೌಲಭ್ಯ ಒದಗಿಸಲು ಸಮಗ್ರ ಅಭಿವೃದ್ಧಿ ಕಾಮಗಾರಿ ನೆಡೆಯುತ್ತಿದ್ದು ಈ ಕಾಮಗಾರಿಗಳಲ್ಲಿ ಜೋಗ ಜಲಪಾತದ ಮುಖ್ಯದ್ವಾರದ ಕಾಮಗಾರಿಯೂ ಒಂದಾಗಿರುವ ಕಾರಣ ಏ.30 ರವರೆಗೆ ಜೋಗ ಜಲಪಾತಕ್ಕೆ ಸಾರ್ವಜನಿಕರು ಮತ್ತು ಪ್ರವಾಸಿಗರಿಗೆ ಪ್ರವೇಶವನ್ನು ನಿರ್ಬಂಧಿಸಲಾಗಿದೆ.

ಜೋಗ ಜಲಪಾತದ ಮುಖ್ಯದ್ವಾರದ ಕಾಮಗಾರಿಯು ಕಾಲ ಮಿತಿಯೊಳಗೆ ಪೂರ್ಣಗೊಳಿಸಬೇಕಿದ್ದು, ಕಾಮಗಾರಿ ಅನುಷ್ಟಾನದ ಸಮಯದಲ್ಲಿ ಸಾರ್ವಜನಿಕರು ಮತ್ತು ಪ್ರವಾಸಿಗರಿಗೆ ಯಾವುದೇ ರೀತಿಯ ತೊಂದರೆಯಾಗಬಾರದೆಂಬ ಹಿತದೃಷ್ಟಿಯಿಂದ ಜೋಗ ಜಲಪಾತದ ಪ್ರವೇಶ ದ್ವಾರವನ್ನು ಜ.1 ರಿಂದ ಮಾ.15 ರವರೆ ಮುಚ್ಚಲಾಗಿರುತ್ತದೆ.

Jog Falls ಮಾ.15 ರ ವೇಳೆಗೂ ಜೋಗ ಜಲಪಾತದ ಮುಖ್ಯ ದ್ವಾರದ ಕಾಮಗಾರಿಯು ಪೂರ್ಣಗೊಳ್ಳದೇ ಇರುವುದರಿಂದ ಏ.30 ರವರೆಗೆ ಮುಚ್ಚಲಾಗಿದೆ. ಆದ್ದರಿಂದ ಸಾರ್ವಜನಿಕರು ಮತ್ತು ಪ್ರವಾಸಿಗರು ಸಹಕರಿಸಬೇಕೆಂದು ಜಿಲ್ಲಾಧಿಕಾರಿಗಳು ಹಾಗೂ ಜೋಗ ನಿರ್ವಹಣಾ ಪ್ರಾಧಿಕಾರದ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳಾದ ಗುರುದತ್ತ ಹೆಗಡೆ ಮನವಿ ಮಾಡಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 08182-251444 ಸಂಪರ್ಕಿಸಬಹುದಾಗಿದೆ.

Namma TV Shivamogga ಭೀಮ, ನನಗೆ ಜನಪ್ರಿಯತೆ ತಂದ ಸಿನಿಮಾ-ಚಿತ್ರ ನಟಿ ಪ್ರಿಯಾ

0

Namma TV Shivamogga ರಂಗಭೂಮಿ ತಾಯಿ ಇದ್ದ ಹಾಗೆ ಚಲನಚಿತ್ರ ತಂದೆ ಇದ್ದ ಹಾಗೆ. ನಮ್ಮ ಮಲೆನಾಡಿನ ಜನ ನನಗೆ ತುಂಬಾ ಪ್ರೀತಿ ತೋರಿಸಿದ್ದಾರೆ. ಅವರ ಪ್ರೀತಿ ಬಹಳ ದೊಡ್ಡದು ಎಂದು ‘ಭೀಮ’ ಚಿತ್ರದ ಮೂಲಕ ಮನೆ ಮಾತಾಗಿರುವ ಚಿತ್ರ ನಟಿ ಪ್ರಿಯಾ ಹೇಳಿದರು.

ನಮ್ಮ ಟಿವಿ ಶಿವಮೊಗ್ಗದ ಸ್ಟುಡಿಯೋದಲ್ಲಿ ಪ್ರಖ್ಯಾತ ಸಿನಿಮಾ ತಾರೆಯವರಾದ ಪ್ರಿಯಾ ಅವಿನಾಶ್ ಅವರಿಗೆ ಏರ್ಪಡಿಸಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ನಾನು 10 ಚಲನಚಿತ್ರ ಅದೆಷ್ಟೊ ಕಿರುತೆರೆಯಲ್ಲಿ ನಟಿಸಿದರೂ ಸಹ ನನಗೆ ಅತ್ಯಂತ ಹೆಸರು ತಂದು ಕೊಟ್ಟ ಭೀಮ ಚಲನ ಚಿತ್ರ ನನಗೆ ಹೆಸರು ತಂದುಕೊಟ್ಟಿತು. ನಿಜ ಜೀವನದಲ್ಲಿ ನಾನು ಪೋಲಿಸು ಅಧಿಕಾರಿಯಾಗಬೇಕೆಂದಿದ್ದೆ. ಆದರೆ ಚಲನ ಚಿತ್ರದಲ್ಲಿ ನಾನು ಪೋಲೀಸು ಅಧಿಕಾರಿ ಪಾತ್ರ ಮಾಡಿದೆ.

ನಾನು ಶಿವಮೊಗ್ಗದ ಸೊಸೆ ಎಂದು ಹೆಮ್ಮೆಯಿಂದ ಹೇಳಿಕೊಂಡರು. ಬರುವ ದಿನಗಳಲ್ಲಿ ರಂಗಭೂಮಿಯಲ್ಲಿ ಇನ್ನೂ ಅನೇಕ ಕಾರ್ಯ ಯೋಜನೆಗಳನ್ನು ಹಮ್ಮಿಕೊಂಡಿದ್ದೇವೆ ಹಾಗೂ ವಿಶೇಷವಾಗಿ ಹೊಸ ಹೊಸ ಕಲಾವಿದರನ್ನು ರಂಗಭೂಮಿಗೆ ಪರಿಚಯಿಸುವ ಕೆಲಸ ಮಾಡಲು ಇಚ್ಚಿಸಿದ್ದೇವೆ ಎಂದು ನುಡಿದರು.

ಈ ಸಂದರ್ಭದಲ್ಲಿ ಕನ್ನಡಕ್ಕಾಗಿ ಒಂದನ್ನು ಒತ್ತಿ ಚಿತ್ರದ ನಟ ಅವಿನಾಶ್ ಮಾತನಾಡಿ, ಶಿವಮೊಗ್ಗದಲ್ಲಿ ಓದಿ ಬೆಳೆದು ಇಲ್ಲಿಯೇ ರಂಗಭೂಮಿಯಲ್ಲಿ ಕೆಲಸ ಮಾಡಿ, ಕಿರುತೆರೆಗಳಲ್ಲಿ ಅಭಿನಯಿಸಿ, ನಂತರ ಈಗ ಚಲನಚಿತ್ರಗಳಲ್ಲಿ ಅಭಿನಯಿಸುತ್ತಿದ್ದೇನೆ. ಜೊತೆಗೆ ಒಂದು ಚಿತ್ರವನ್ನು ಸಹ ನಿರ್ಮಾಣ ಮಾಡಿದ್ದು, ಸದ್ಯದಲ್ಲೇ ಅದು ಸಹ ತೆರೆ ಕಾಣಲಿದೆ ಎಂದು ಹೇಳಿದರು.

Namma TV Shivamogga ಶಿವಮೊಗ್ಗದ ರಂಗಭೂಮಿಯಲ್ಲಿ ರೇಣುಕಪ್ಪ, ಗಿರೀಶ್, ಅಚಿ, ವೈದ್ಯ ಹಾಗೂ ಹಲವರು ಕಲಾವಿದನಾಗಿ ಅಭಿನಯಿಸಿದ ಅನುಭವಗಳನ್ನು ಹಂಚಿಕೊಂಡರು.

ಈ ಸಂದರ್ಭದಲ್ಲಿ ಇಬ್ಬರು ಚಲನಚಿತ್ರ ನಟ ನಟಿಯರಿಗೆ ನಮ್ಮ ಟಿವಿ ವತಿಯಿಂದ ಆತ್ಮೀಯವಾಗಿ ಸನ್ಮಾನಿಸಲಾಯಿತು. ನಮ್ಮ ಟಿವಿ ನಿರೂಪಕ ಜಿ.ವಿಜಯಕುಮಾರ್, ಶ್ರೀಕಾಂತ್, ತರುಣ್ ಮತ್ತು ಬಿಂದು ವಿಜಯ ಕುಮಾರ್ ಸಿಬ್ಬಂದಿ ವರ್ಗದವರು ಪಾಲ್ಗೊಂಡಿದ್ದರು. ಅವರ ಜೊತೆ ಎಂ.ಎನ್.ಸುಂದರ ರಾಜ್, ಶಿಕ್ಷಣ ತಜ್ಞೆ ರಮ್ಯಾ ಅನಿಲ್ ಭಾಗವಹಿಸಿದ್ದರು. ನಂತರ ಅವಿನಾಶ್ ಮತ್ತು ಪ್ರಿಯಾ ಅವರ ಸಂದರ್ಶನ ನಡೆಯಿತು.