Sunday, March 8, 2026
Sunday, March 8, 2026
Home Blog Page 370

DC Shivamogga ತಾಪಮಾನ ಎದುರಿಸಲು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರಿಂದ ಆಪ್ತ ಸಲಹೆ

0

DC Shivamogga ಬಿಸಿಲಿನ ತಾಪಮಾನ ಹೆಚ್ಚಾಗುತ್ತಿದ್ದು, ಜನರ ಆರೋಗ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದ್ದು, ಸಾರ್ವಜನಿಕ ಆರೋಗ್ಯ ಸಲಹೆಯನ್ನು ಅನುಸರಿಸುವ ಮೂಲಕ ತಮ್ಮ ಆರೋಗ್ಯದ ಕಾಳಜಿ ವಹಿಸಬೇಕೆಂದು ಜಿಲ್ಲಾಧಿಕಾರಿ ಗುರುದತ್ತ ಹೆಗೆಡೆ ತಿಳಿಸಿದ್ದಾರೆ.
ಈ ಬಾರಿ ಬಿಸಿಲಿನ ತಾಪಮಾನ ಹೆಚ್ಚಾಗಿದೆ. ಅಲ್ಲದೆ ಮಾರ್ಚ್ ಯಿಂದ ಮೇ ವರೆಗೆ ವಾತಾರವಣದಲ್ಲಿ ಬಿಸಿಗಾಳಿ ಬೀಸಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ವರದಿ ನೀಡಿದೆ. ಇದರಿಂದಾಗಿ ವಾತಾವರಣದಲ್ಲಿ ಅನೇಕ ರೀತಿಯ ಬದಲಾವಣೆ ಉಂಟಾಗಿ ಆರೋಗ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದ್ದು, ಜಿಲ್ಲೆಯ ಜನರು ತಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು.
ಜಿಲ್ಲೆಯಲ್ಲಿ ಬಿಸಿಲು ಹೆಚ್ಚಾಗಿದೆ. ದಿನೇ ದಿನೇ ಸಾರ್ವಜನಿಕರು ಕೆಲಸದ ಒತ್ತಡದ ಜೊತೆಗೆ ಬಿಸಿಲಿನ ಬೇಗೆಯನ್ನು ಸಹಿಸಿಕೊಳ್ಳದ ಸ್ಥಿತಿಗೆ ತಲುಪಿದ್ದಾರೆ. ಇದರಿಂದ ಮಾನಸಿಕವಾಗಿ ಹಾಗೂ ದೈಹಿಕವಾಗಿ ಕುಗ್ಗುತ್ತಿದ್ದಾರೆ. ಈ ಸಂದರ್ಭದಲ್ಲಿ ಸಾಮಾನ್ಯವಾಗಿ ಮನುಷ್ಯನ ದೇಹದ ಉಷ್ಣತೆಯು 36.4 ಡಿಗ್ರಿ ಸೆ ನಿಂದ 37.2 ಡಿಗ್ರಿ ಸೆ( 97.5 ಡಿಗ್ರಿ ಸೆ ಎಫ್ ನಿಂದ 98.9 ಡಿಗ್ರಿ ಸೆ ಎಫ್) ಆಗಿರುತ್ತದೆ. ಹಾಗಾಗಿ ಒಳಾಂಗಣ ಹಾಗೂ ಹೊರಾಂಗಣ ಪ್ರದೇಶಗಳು ಹೆಚ್ಚಿನ ಉಷ್ಣತೆಯಿಂದ ಕೂಡಿರುತ್ತದೆ. ಈ ಉಷ್ಣತೆಯ ಒತ್ತಡದಿಂದ ಆರೋಗ್ಯ ಸಮಸ್ಯೆಗಳು ಉಂಟಾಗುತ್ತದೆ.
ನೀರು ಹೆಚ್ಚು ಸೇವಿಸಿ:
ಬಾಯಾರಿಕೆ ನಿರ್ಜಲೀಕರಣದ ಲಕ್ಷಣವಾಗಿದ್ದು. ಪ್ರಯಾಣ ಮಾಡುವ ಸಮಯದಲ್ಲಿ ಹಾಗೂ ಬಾಯಾರಿಕೆ ಇಲ್ಲದಿದ್ದರೂ ಸಹ ಹೆಚ್ಚೆಚ್ಚು ನೀರನ್ನು ಆಗಾಗ್ಗೆ ಕುಡಿಯಬೇಕು. ಮೌಖಿಕ ಪುನರ್ಜಲೀಕರಣ ದ್ರಾವಣ ಹಾಗೂ ಮನೆಯಲ್ಲಿಯೇ ಸಿದ್ದಪಡಿಸಿದ ನಿಂಬೆ ಹಣ್ಣಿನ ಶರಬತ್ತು, ಮಜ್ಜಿಗೆ/ಲಸ್ಸಿ, ಹಣ್ಣಿನ ಜ್ಯೂಸ್‌ಗಳನ್ನು ಒಂದು ಚಿಟಿಕೆ ಉಪ್ಪಿನೊಂದಿಗೆ ಸೇವಿಸಬೇಕು. ಹಾಗೂ ಈ ಋತುಮಾನದಲ್ಲಿ ಲಭ್ಯವಿರುವ ಹೆಚ್ಚಿನ ನೀರಿನಾಂಶ ಹೊಂದಿರುವ ಹಣ್ಣು ಹಾಗೂ ತರಕಾರಿಗಳನ್ನು ಸೇವಿಸಬೇಕು. ಇದರಿಂದ ದೇಹವು ಒಣಗದೆ ಚರ್ಮವು ಸದಾ ತ್ವಚ್ಛೆಯಿಂದ ಕೂಡಿರುತ್ತದೆ.
ಇದಲ್ಲದೆ ನಾವು ಧರಿಸುವ ಬಟ್ಟೆಗಳು ಕೂಡ ದೇಹದ ಸುರಕ್ಷತೆಗೆ ಬಹುಮುಖ್ಯವಾಗಿದೆ. ಇಂತಹ ತಾಪಮಾನದಲ್ಲಿ ತಿಳಿ ಬಣ್ಣದ, ಅಳಕವಾದ ಹತ್ತಿಯ ಬಟ್ಟೆಯನ್ನು ಧರಿಸಬೇಕು. ಹೊರ ಹೋಗುವ ಸಂದರ್ಭದಲ್ಲಿ ಛತ್ರಿ, ಟೋಪಿ, ಟವೆಲ್ ಅಥವಾ ಇನ್ನಾವುದೇ ಸಂಪ್ರಾದಯಿಕ ಪದ್ಧತಿಯನ್ನು ಅನುಸರಿಸಿ ಬಿಸಿಲಿನಿಂದ ಪಡೆಯಬೇಕು. ಈ ಸಂದರ್ಭದಲ್ಲಿ ಚಪ್ಪಲಿ/ ಶೂಸ್‌ಗಳನ್ನು ಧರಿಸಬೇಕು.
ಬಿಸಿಲಿನಲ್ಲಿ ಅಂದರೆ 12 ರಿಂದ 3 ಗಂಟೆಗೆ ಹೊರ ಹೋಗುವುದನ್ನು ತಪ್ಪಿಸಬೇಕು. ಚಪ್ಪಲಿ ಧರಸಿ ಹೊರ ಹೋಗಬೇಕು. ಮಧ್ಯಾಹ್ನ ಅಡುಗೆ ಸಿದ್ದಪಡಿಸುವ ಪ್ರದೇಶದಲ್ಲಿ ಕಿಟಕಿ ಹಾಗೂ ಬಾಗಿಲನ್ನು ತೆರದಿಡಿ, ಮಧ್ಯಾಹ್ನ ಟೀ, ಕಾಫಿ ಮತ್ತು ಕಾರ್ಬೊನೇಟೆಡ್ ಪಾನೀಯಗಳು ಅಥವಾ ಹೆಚ್ಚು ಸಕ್ಕರೆ ಅಂಶವನ್ನು ಹೊಂದಿದ ಪಾನೀಯಗಳಿಂದ ದೂರವಿರಿ. ಇದರಿಂದ ದೇಹವನ್ನು ನಿರ್ಜಲೀಕರಣಗೊಳಿಸುತ್ತದೆ ಅಥವಾ ಹೊಟ್ಟೆ ನೋವು ಉಂಟು ಮಾಡುತ್ತದೆ.
ಉಷ್ಣತೆಯ ಪರಿಣಾಮದಿಂದಾಗುವ ಆರೋಗ್ಯ ಸಮಸ್ಯೆಗಳು : ಮನುಷ್ಯನ ದೇಹವು ನೀರಿನಿಂದ ಕೂಡಿದ್ದು, ದಿನವಿಡಿ ಸಕ್ರಿಯವಾಗಿರಲು, ದೇಹದ ತ್ವಚ್ಛೆಗಾಗಿ ನೀರು ಅತ್ಯವಶ್ಯ. ಹಾಗಾಗಿ ಈ ಬಿಸಿಯ ಧಗೆಯಲ್ಲಿ ದೇಹಕ್ಕೆ ಅಗತ್ಯಕ್ಕಿಂತÀ ಹೆಚ್ಚಿನ ನೀರನ್ನು ಪೂರೈಸಬೇಕು. ಇಲ್ಲಿದಿದ್ದರೆ ಅತಿಯಾದ ಉಷ್ಣತೆಯಿಂದಾ ಗಿ ಸಾಧಾರಣದಿಂದ ತ್ರೀವ ಜ್ವರ, ಗಂಧೆಗಳು, ಊತಗಳು, ಸ್ನಾಯು ಸೆಳೆತಗಳು, ಪ್ರಜ್ಞೆ ತಪ್ಪುವುದು, ಉಷ್ಣತೆಯಿಂದ ಸುಸ್ತಾಗುವುದು ಹಾಗೂ ಉಷ್ಣತೆಯಿಂದ ಪಾಶ್ವವಾಯು ಉಂಟಾಗುತ್ತದೆ. ಹಾಗೂ ಉಷ್ಣತೆ ತೀವ್ರತೆಗೆ ಹೃದ್ರೋಗ ಸಮಸ್ಯೆಗಳು, ಉಸಿರಾಟದ ಸಮಸ್ಯೆಗಳು ಹಾಗೂ ಕಿಡ್ನಿ ಸಮಸ್ಯೆಗಳು ಅಧಿಕವಾಗುತ್ತದೆ. ಜೊತೆಗೆ ಅತಿಯಾದ ಶಾಖದಿಂದ ತಲೆ ಸುತ್ತುವುದು, ಅತಿಯಾದ ಬಾಯಾರಿಕೆ, ವಾಕರಿಕೆ ಅಥವಾ ವಾಂತಿಯಾಗುವುದು, ಮೂತ್ರ ವಿಸರ್ಜನೆ ಪ್ರಮಾಣದಲ್ಲಿ ಕಡಿಮೆಯಾಗುವುದು ಹಾಗೂ ಹಳದಿ ಬಣ್ಣದ ಮೂತ್ರ, ತಲೆನೋವು, ಏರು ಗತಿಯ ಉಸಿರಾಟ ಹಾಗೂ ಹೃದಯದ ಬಡಿತದ ಆರೋಗ್ಯ ಸಮಸ್ಯೆಗಳು ಉಂಟಾಗುತ್ತದೆ.
DC Shivamogga ನವಜಾತ ಶಿಶುಗಳು, ಗರ್ಭಿಣಿಯರು, ವೃದ್ದರು ಎಚ್ಚg Àವಹಿಸಿ:
ಬಿಸಿಗಾಳಿಯ ಒತ್ತಡ ಹಾಗೂ ಬಿಸಿ ಗಾಳಿಗೆ ಸಂಬAಧಪಟ್ಟ ಆರೋಗ್ಯ ಸಮಸ್ಯೆಗಳಿಂದ ಎಲ್ಲರಿಗೂ ಅಪಾಯವಿದ್ದು, ನವಜಾತ ಶಿಶುಗಳು ಹಾಗೂ ಚಿಕ್ಕಮಕ್ಕಳು, ಗರ್ಭಿಣಿಯರು, ಹೊರಾಂಗಣದಲ್ಲಿ ಕೆಲಸ ನಿರ್ವಹಿಸುವವರು, ಮಾನಸಿಕ ಸಮಸ್ಯೆಗಳಿಂದ ಬಳಲುತ್ತಿರುವವರು, ಆರೋಗ್ಯ ಸಮಸ್ಯೆಗಳಿರುವವರು ವಿಶೇಷವಾಗಿ ಹೃದ್ರೋಗ ಹಾಗೂ ರಕ್ತದ ಒತ್ತಡದಿಂದ ಬಳಲುತ್ತಿರುವವರು ಹೆಚ್ಚು ಜಾಗೂರಕತೆಯಿಂದರಬೇಕು. ಹಾಗೂ ಪ್ರತ್ಯೇಕವಾಗಿ/ ಒಂಟಿಯಾಗಿ ವಾಸಿಸುವ ವೃದ್ಧರು ಅಥವಾ ರೋಗಿಗಳ ಉಸ್ತುವಾರಿ ಹಾಗೂ ಅವರ ಆರೋಗ್ಯ ಸ್ಥಿತಿಯ ಮೇಲ್ವಿಚಾರಣೆಯನ್ನು ದೈನಂದಿನವಾಗಿ ಕೈಗೊಳ್ಳಬೇಕು. ಮನೆಯ ಒಳಾಂಗಣವನ್ನು ತಣ್ಣಗಿರಿಸಲು ಪರದೆಗಳು/ ಷಟರ್‌ಗಳನ್ನು ಬಳಸಬೇಕು ಹಾಗೂ ರಾತ್ರಿ ಸಮಯದಲ್ಲಿ ಕಿಟಿಕಿಗಳನ್ನು ತೆರೆದಿಡಬೇಕು. ಹಗಲು ಹೊತ್ತಿನಲ್ಲಿ ಮನೆಯ ಕೆಳಗಿನ ಮಹಡಿಗಳಲ್ಲಿರುವುದು ಉತ್ತಮ, ಶರೀರವನ್ನು ತಣ್ಣಗಿಡಲು ಫ್ಯಾನ್ ಅಥವಾ ತೇವವಾದ ಬಟ್ಟೆಯನ್ನು ಬಳಸಬಹುದು.
ಉಷ್ಣತೆಯಿಂದ ಆರೋಗ್ಯ ಸಮಸ್ಯೆ ತಡೆಗಟ್ಟುವುದು:
ಅತಿಯಾದ ಉಷ್ಣತೆಯಿಂದ ಆರೋಗ್ಯ ಸಮಸ್ಯೆ ಉಂಟಾದರೆ ತಕ್ಷಣವೇ ತಂಪಾದ ಸ್ಥಳಕ್ಕೆ ತೆರಳಿ ಮತ್ತು ದ್ರವಾಹಾರವನ್ನು ಸೇವಿಸಿ, ತಕ್ಷಣವೇ ಸಹಾಯ ಹಾಗೂ ವೈದ್ಯಕೀಯ ನೇರವನ್ನು ಪಡೆಯಿರಿ. ದೇಹದ ಉಷ್ಣತೆಯನ್ನು ಪರೀಕ್ಷಿಸಿ. ಮಾಂಸಖAಡಗಳಲ್ಲಿ ಸೆಳೆತ ಕಂಡಬAದಲ್ಲಿ ತಕ್ಷಣವೇ ತಂಪಾದ ಸ್ಥಳದಲ್ಲಿ ವಿಶ್ರಾಂತಿ ಪಡೆಯಿರಿ ಹಾಗೂ ಹೆಚ್ಚು ಎಲೆಕ್ಟೊçಲೈಟ್ ಗಳನ್ನು ಹೊಂದಿದ ಮೌಖಿಕ ಪುನರ್ಜಲೀಕರಣ ದ್ರಾವಣಗಳನ್ನು ಸೇವಿಸಬೇಕು. ಅತಿಯಾದ ಉಷ್ಣತೆಯಿಂದ ಉಂಟಾಗುವ ಸ್ನಾಯು ಸೆಳೆತವು 1 ಗಂಟೆಯ ಅವಧಿಯಲ್ಲಿ ಶಮನಗೊಳ್ಳದಿದ್ದರೆ ವೈದ್ಯಕೀಯ ನೆರವನ್ನು ಪಡೆಯಬೇಕು.
ಹೊರಾಂಗಣ ಚಟುವಟಿಕೆಗಳನ್ನು ಆದಷ್ಟು ದಿನದ ತಣ್ಣನೆಯ ಸಮಯದಲ್ಲಿ ಅಂದರೆ ಬೆಳಗಿನ ಹೊತ್ತು ಅಥವಾ ಸಂಜೆಗೆ ಸೀಮಿತವಿರುವಂತೆ ಬದಲಾಯಿಸಿಕೊಳ್ಳಬೇಕು. ಹೊರಾಂಗಣ ಪ್ರದೇಶಗಳಲ್ಲಿ ಆಯೋಜಿಸಲಾಗುವ ಚಟುವಟಿಕೆಗಳು ಪೂರ್ವಾಹ್ನ 11 ಗಂಟೆಯ ಒಳಗೆ ಮುಕ್ತಾಯಗೊಳಿಸುವುದು ಉತ್ತಮ. ಪೂರ್ವಾಹ್ನ 11 ರಿಂದ ಸಂಜೆ 4 ಗಂಟೆ ಅವಧಿಯಲ್ಲಿ ಹೊರಾಂಗಣ ಸಭೆಗಳು/ಚಟುವಟಿಕೆಗಳು ನಡೆಯುವ ಪ್ರದೇಶದಲ್ಲಿ ಸಾರ್ವಜನಿಕರಿಗೆ ಬಿಸಲಿನಿಂದ ರಕ್ಷಣೆ ನೀಡಲು ಅಗತ್ಯ ಶಾಮಿಯಾನ ವ್ಯವಸ್ಥೆ ಮಾಡುವುದು. ಉತ್ತಮ ಗಾಳಿ ವ್ಯವಸ್ಥೆಯನ್ನು ಖಚಿತಪಡಿಸಿಕೊಳ್ಳಬೇಕು. ಕುಡಿಯುವ ನೀರಿನ ವ್ಯವಸ್ಥೆಯನ್ನು ಕಡ್ಡಾಯವಾಗಿ ಮಾಡಬೇಕು.
ಸದಾ ಎಚ್ಚರದಿಂದಿರಿ :
ರೇಡಿಯೋ, ದೂರರ್ಶನ ಹಾಗೂ ದಿನಪತ್ರಿಕೆಗಳ ಮೂಲಕ ಸ್ಥಳೀಯ ಹವಾಮಾನದ ಮಾಹಿತಿಯನ್ನು ಪಡೆದು ಅದರಂತೆ ಚಟುವಟಿಕೆಗಳನ್ನು ಯೋಜಿಸುವುದು ಉತ್ತಮ. ಈ ಕುರಿತು ಕಾಲಕಾಲಕ್ಕೆ ಮಾಹಿತಿಯನ್ನು ಕರ್ನಾಟಕ ಸ್ಟೇಟ್ ನ್ಯಾಚುರಲ್ ಡಿಸ್ಸಾಸ್ಟರ್ ಮಾನಿಟರಿಂಗ್ ಸೆಂಟರ್‌ನ ಜಾಲತಾಣ https://www.ksdmc.org/default.aspx ದಲ್ಲಿ ಮಾಹಿತಿಯನ್ನು ಪಡೆಯಬಹುದು ಎಂದು ಅವರು ತಿಳಿಸಿದ್ದಾರೆ.

Karnataka Upalokayukta ಇಂದಿನಿಂದ ಉಪಲೋಕಾಯುಕ್ತನ್ಯಾ.ಕೆ.ಎನ್.ಫಣೀಂದ್ರ ಅವರಿಂದ ಸಾರ್ವಜನಿಕ ಅಹವಾಲು ಸ್ವೀಕಾರ

0

Karnataka Upalokayukta ಕರ್ನಾಟಕ ಉಪಲೋಕಾಯುಕ್ತ ನ್ಯಾ.ಕೆ.ಎನ್.ಫಣೀಂದ್ರ ಅವರು ಮಾ. 18 ರಿಂದ 21 ರವರೆಗೆ ಶಿವಮೊಗ್ಗ ನಗರಕ್ಕೆ ಭೇಟಿ ನೀಡಿ, ಸಾರ್ವಜನಿಕರಿಂದ ಅಹವಾಲುಗಳನ್ನು ಸ್ವೀಕರಿಸುವರು ಅಲ್ಲದೇ ಇದೇ ಅವಧಿಯಲ್ಲಿ ವಿವಿಧ ಸಭೆ-ಸಮಾರಂಭ, ತರಬೇತಿ ಕಾರ್ಯಾಗಾರಗಳು, ಸಮಾಲೋಚನಾ ಸಭೆಗಳಲ್ಲಿ ಭಾಗವಹಿಸುವರು.
ಮಾ.18ರಂದು ಸಂಜೆ 7.40ಕ್ಕೆ ಶಿವಮೊಗ್ಗಕ್ಕೆ ಆಗಮಿಸಿ ವಾಸ್ತವ್ಯ ಮಾಡುವರು. ಮಾ.19ರಂದು ಬೆಳಿಗ್ಗೆ 10.00 ರಿಂದ ಸಂಜೆ 5.00 ರವರೆಗೆ ನಗರದ ಕುವೆಂಪು ರಂಗಮಂದಿರದಲ್ಲಿ ಸಾರ್ವಜನಿಕರಿಂದ ಅಹವಾಲುಗಳನ್ನು ಸ್ವೀಕರಿಸುವರು. ಜಿಲ್ಲೆಯಲ್ಲಿ ಯಾವುದೇ ಸಾರ್ವಜನಿಕರಿಗೆ ಸರ್ಕಾರಿ ಅಧಿಕಾರಿ/ನೌಕರರಿಂದ ಕಾನೂನು ರೀತ್ಯಾ ಆಗಬೇಕಾದ ಕೆಲಸದಲ್ಲಿ ವಿಳಂಬನೆಯಾಗಿದ್ದಲ್ಲಿ ಅಥವಾ ನ್ಯಾಯಯುತವಾಗಿ ಮಾಡಿಕೊಡಬೇಕಾದ ಕೆಲಸಗಳಲ್ಲಿ ವೃಥಾ ತೊಂದರೆಕೊಡುವುದು ಅಥವಾ ಇನ್ಯಾವುದೇ ತರಹದ ದುರಾಡಳಿತದಲ್ಲಿ ತೊಡಗಿದ್ದರೆ, ಅದರಿಂದ ತೊಂದರೆಗೊಳಗಾದ ಸಾರ್ವಜನಿಕರು ತಮ್ಮ ಅಹವಾಲುಗಳನ್ನು ಅರ್ಜಿ ನಮೂನೆ 1 ಮತ್ತು 2 ರಲ್ಲಿ ಲಿಖಿತವಾಗಿ ದಾಖಲೆ, ಸಸಾಕ್ಷಾಧಾರಗಳೊಂದಿಗೆ ಸಲ್ಲಿಸಬಹುದಾಗಿದೆ.
Karnataka Upalokayukta ಮಾ.20 ರಂದು ಬೆಳಿಗ್ಗೆ 11.00 ರಿಂದ 11.30 ರವರೆಗೆ ನಗರದ ಜಿಲ್ಲಾ ಪಂಚಾಯಿತಿಯ ನಜೀರ್ ಸಾಬ್ ಸಭಾಂಗಣದಲ್ಲಿ ಲೋಕಾಯುಕ್ತ ಸಂಸ್ಥೆಯಲ್ಲಿ ದಾಖಲಾಗಿರುವ ತನಿಖೆ/ವಿಚಾರಣೆಗೆ ಬಾಕಿ ಇರುವ ಪ್ರಕರಣಗಳನ್ನು ಪರಿಹರಿಸುವ ಕುರಿತು ದೂರುದಾರರು ಮತ್ತು ಎದುರುದಾರರ ಸಮ್ಮುಖದಲ್ಲಿ ಕಾನೂನು ರೀತ್ಯಾ ವಿಚಾರಣೆ ನಡೆಸುತ್ತಾರೆ. ಈ ಸಮಯದಲ್ಲಿ ದೂರುದಾರರು ಮತ್ತು ಎದುರುದಾರರ ಹಾಜರಿದ್ದು ಇದರ ಸದುಪಯೋಗಪಡೆದುಕೊಳ್ಳುವಂತೆ ಶಿವಮೊಗ್ಗ ಲೋಕಾಯುಕ್ತ ಇಲಾಖೆಯ ಪೊಲೀಸ್ ಅಧೀಕ್ಷಕ ಮಂಜುನಾಥ ಚೌದರಿ. ಎಂ.ಹೆಚ್. ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

Rural Development and Panchayat Raj Department ಶಿವಮೊಗ್ಗ ಜಿಲ್ಲಾಭಿವೃದ್ಧಿ ಕುರಿತಂತೆ ಸಚಿವ ಭೈರತಿ ಸುರೇಶ್ ಸಮ್ಮುಖ ಉಸ್ತುವಾರಿ ಸಚಿವ ಮಧು‌ಬಂಗಾರಪ್ಪ ಸಭೆ

0

Rural Development and Panchayat Raj Department ಶಿವಮೊಗ್ಗ ಜಿಲ್ಲೆಗೆ ಸಂಬಂಧಿಸಿದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಕುರಿತು ವಿಧಾನಸೌಧದಲ್ಲಿ ನಗರಾಭಿವೃದ್ಧಿ ಸಚಿವರಾದ ಶ್ರೀ ಭೈರತಿ ಸುರೇಶ್, ಗ್ರಾಮೀಣಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆ ಸಚಿವರಾದ ಶ್ರೀ ಪ್ರಿಯಾಂಕ್ ಖರ್ಗೆ ಹಾಗೂ ಉನ್ನತ ಶಿಕ್ಷಣ ಸಚಿವರಾದ ಶ್ರೀ ಡಾ.ಎಂ.ಸಿ ಸುಧಾಕರ್ ಅವರೊಂದಿಗೆ ಸಭೆ ನಡೆಸಲಾಯಿತು.

ಸುಮಾರು 650 ಕೋಟಿ ರೂಪಾಯಿಗಳ ವೆಚ್ಚದಲ್ಲಿ ನಗರಾಭಿವೃದ್ಧಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸಹಯೋಗದೊಂದಿಗೆ ಸೊರಬ ತಾಲೂಕಿನ 331 ಗ್ರಾಮಗಳು ಹಾಗೂ ಸೊರಬ, ಶಿರಾಳಕೊಪ್ಪ ಮತ್ತು ಆನವಟ್ಟಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಶರಾವತಿ ನದಿಯಿಂದ ಶಾಶ್ವತ ಕುಡಿಯುವ ನೀರಿನ ಯೋಜನೆ ಸಂಬಂಧಿಸಿದಂತೆ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಅಧಿಕಾರಿಗಳೊಂದಿಗೆ ಸಮಗ್ರವಾಗಿ ಚರ್ಚಿಸಿ, ಯೋಜನೆಯನ್ನು ಮಂಜೂರು ಮಾಡುವಂತೆ ಒತ್ತಾಯಿಸಿದೆ. ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಸಚಿವರು ಯೊಜನೆಗೆ ಅನುದಾನ ಬಿಡುಗಡೆ ಮಾಡುವ ಭರವಸೆ ನೀಡಿದರು.

ಈ ವೇಳೆ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಶ್ರೀ ಪೊನ್ನಣ್ಣ ಸೇರಿದಂತೆ ಸಂಬಂಧಪಟ್ಟ ಇಲಾಖೆಯ ಉನ್ನತ ಅಧಿಕಾರಿಗಳು ಉಪಸ್ಥಿತರಿದ್ದರು.

Klive Special Article ಜಾತಿ ವ್ಯವಸ್ಥೆ ಜಿಗುಟನ್ನ ಸಮರ್ಥ ಬಿಂಬಿಸಿದ ಚೋಮನದುಡಿ

0

Klive Special Article ಬದುಕ ಬವಣೆಗಿದು ನಿತ್ಯದ ಉಡಿ…

“ಚೋಮನ ದುಡಿ” – ನಾಟಕ

ಇತ್ತೀಚೆಗೆ ಸುವರ್ಣ ಸಾಂಸ್ಕೃತಿಕ ಭವನದಲ್ಲಿ ರಂಗಾಯಣ ಶಿವಮೊಗ್ಗ ಮತ್ತು ನಮ್ ಹಳ್ಳಿ ಥಿಯೇಟರ್ ನಿಂದ ಆಯೋಜಿತವಾದ ನಾಟಕ ಚೋಮನ ದುಡಿ. ಇದನ್ನು ಅಭಿನಯಿಸಿದವರು ಬೈಂದೂರಿನ ಸುರಭಿ ನಾಟಕ ತಂಡ.

ಚೋಮನದುಡಿ ಸಿನಿಮಾವಾಗಿ ನೋಡಿದ್ದರೂ ಅದು ನಾಟಕವಾಗಿ ನೋಡುವ ಮಜವೇ ಬೇರೆ. ಸಿನಿಮಾಗಿಂತಲೂ ನಾಟಕ ಭಿನ್ನ. ಅದರಲ್ಲೂ ಕಾರಂತರ ಕಾದಂಬರಿಯೊಂದು ಸಿನಿಮಾವಾಗಿ, ನಾಟಕವೂ ಆಗಿ ಮೂಡಿ ಬಂದಾಗ ಅದರ ಮೇಲಿದ್ದ ನಿರೀಕ್ಷೆ ಅಪಾರ. ಅದರಂತೆ ಸಿನಿಮಾ ಗೆದ್ದಿತ್ತು, ಈಗ ಸುರಭಿ ಬೈಂದೂರು ಅಭಿನಯಿಸಿದ ನಾಟಕವು ಗೆದ್ದಿತು. ಚೋಮನದುಡಿ ನಾಟಕವು ಜಾತಿ ವ್ಯವಸ್ಥೆಯ ಅಸ್ಪೃಶ್ಯತೆ, ಬಡತನ ಮತ್ತು ಸಾಮಾಜಿಕ ಅಸಮಾನತೆಗಳಂತಹ ಗಂಭೀರ ವಿಷಯಗಳನ್ನು ಎತ್ತಿ ತೋರಿಸುತ್ತದೆ. ಈ ನಾಟಕವು ಅಂದಿನ ಸಮಾಜದಲ್ಲಿ ದಲಿತರು ಅನುಭವಿಸುತ್ತಿದ್ದ ನೋವು, ಸಂಕಟ ಮತ್ತು ಶೋಷಣೆಯನ್ನು ಮನಮುಟ್ಟುವಂತೆ ಚಿತ್ರಿಸುತ್ತದೆ. ಪ್ರೇಕ್ಷಕರಲ್ಲಿ ಸಾಮಾಜಿಕ ಅರಿವು ಮತ್ತು ಸಂವೇದನೆಯನ್ನು ಮೂಡಿಸುವಲ್ಲಿ ಯಶಸ್ವಿಯಾಗಿದೆ.

ಚೋಮನದುಡಿ ಎಂಬ ಈ ನಾಟಕದ ಕಥಾನಾಯಕನೇ ಚೋಮ ಮತ್ತು ಅವನ ದುಡಿ. ಅವನ ಕಷ್ಟ ಸುಖಗಳಲ್ಲಿ ನೋವು ನಲಿವುಗಳಲ್ಲಿ ಅವನೊಂದಿಗೆ ಇದ್ದಿರುವುದೇ ಅವನ ದುಡಿ. ಹಾಗಾಗಿ ಚೋಮನ ಪಾತ್ರ ಪರಿಚಯ ಆರಂಭವೇ ಅದ್ಭುತವಾಗಿ ಈ ನಾಟಕದಲ್ಲಿ ಮೂಡಿಬಂದಿತು. ದಲಿತರ ಸಂಕೇತವಾಗಿ ನಿಲ್ಲುವ ಪಾತ್ರವಾದ ಚೋಮ ನಾಟಕದಲ್ಲಿ ಅವನ ಆಸೆ ಕನಸುಗಳು ಅದನ್ನು ತನ್ನ ಯಜಮಾನರ ಮುಂದೆ ಬೇಡಿಕೊಳ್ಳುವ ರೀತಿ, ಅಚಲವಾದ ನಂಬಿಕೆ, ವಿಶ್ವಾಸವನ್ನು ಇಟ್ಟುಕೊಂಡೆ ಪದೇ ಪದೇ ಕೇಳುವುದು ಮತ್ತು ನಿರಾಸೆಯಾದಾಗ ಅಭಿನಯಿಸಿದ ರೀತಿ ಎಲ್ಲವೂ ಅನ್ಯಾದೃಶ. ಸತ್ಯನಾ ಕೊಡೇರಿ ಅವರ ಅಭಿನಯವಂತು ಪ್ರೇಕ್ಷಕರ ಮನದಾಳಕ್ಕಿಳಿದು ನಿಲ್ಲುವಲ್ಲಿ ಯಶಸ್ವಿಯಾಯಿತು. ತಾನು ಬೇಸಾಯಗಾರನಾಗಬೇಕೆಂಬ ಹಠಕ್ಕೆ ಬಿದ್ದ ಚೋಮದು ತನ್ನ ಮಕ್ಕಳನ್ನು ಕಳೆದುಕೊಳ್ಳುತ್ತಾ ಹೋದರೂ ತಾನು ಸಾಕಿದ ಎತ್ತುಗಳನ್ನು ಬಿಡಲು ತಯಾರಿರಲ್ಲದ ಮನಸ್ಥಿತಿ. ಅವನ ಮಗನಾದ ನೀಲಾ ಸಾಯುವ ದಿನದ ದೃಶ್ಯಗಳಲ್ಲಿ ಅಂತೂ ಸಾವಿಗೆ ಜಾತಿ ಧರ್ಮಗಳ ಭೇದವಿಲ್ಲದಿದ್ದರೂ ಅಸ್ಪೃಶ್ಯತೆ ಅವನ ಕೊನೆಗೆ ಕಾರಣವಾಯಿತು ಎನ್ನುವಾಗ ನೋಡುಗರ ಮನ ಕಲುಕುವ ಅಭಿನಯವನ್ನು ತಂಡ ನೀಡಿತ್ತು.

ಬಹು ಮುಖ್ಯವಾಗಿ ‘ಅವರಿಗೆಲ್ಲ ಸಿಗುವುದು ನನಗ್ಯಾಕೆ ಸಿಗಲ್ಲ? ಕೇಳ್ತೀನಿ, ಅಂತ ತನ್ನ ಅಸಮಾನತೆಯ ವಿರುದ್ಧವಾಗಿ ಚೋಮನಾಡುವ ಮಾತುಗಳು, ಕರಿ ನಾಯಿ ಯಾವತ್ತೂ ಬಿಳಿ ನಾಯಿ ಆಗಲ್ಲ ಎಂದು ಅಪ್ಪನನ್ನು ಸಂತೈಸುವ ಬೆಳ್ಳಿಗೆ ಕರಿನಾಯಿ ಏನು ತಿನ್ನತ್ತೋ ಅದನ್ನೇ ಬಿಳಿ ನಾಯಿ ತಿನ್ನುತ್ತೆ ಎಂದು ಉತ್ತರಿಸುವ ಚೋಮ ಈ ಸನ್ನಿವೇಶಗಳು ಅಚ್ಚಳಿಯದೇ ನೋಡುಗನ ಮನದಲ್ಲಿ ಉಳಿದುಬಿಡುತ್ತದೆ. ಹಾಗಾಗಿ ಚೋಮನ ಪಾತ್ರಕ್ಕಂತೂ ಸಂಪೂರ್ಣ ನ್ಯಾಯ ಒದಗಿಸಿದ್ದಾರೆ ಶ್ರೀ ಸತ್ಯನಾ ಕೊಡೇರಿ ಅವರು.

ಅದರಂತೆ ಬೆಳ್ಳಿಯ ಪಾತ್ರವು ಸಹ ನೆನಪಿನಲ್ಲಿ ಉಳಿಯುವ ಪಾತ್ರ. ಅಪ್ಪನನ್ನು ಸಂತೈಸುವಾಗ, ಮನೆ ನಿಭಾಯಿಸುವಾಗ, ಸಾಲ ತೀರಿಸಲು ತಾನೆ ಹೋಗಿ, ಸಾಲ ತೀರಿಸಿ ಸಾಮಾಜಿಕ ವ್ಯವಸ್ಥೆಯ ಕಟ್ಟುಪಾಡಿನಲ್ಲಿ ಪುರುಷನ ಕಾಮ ತೃಶಗೆ ಅವಳು ಬಲಿಯಾಗುವ ಎಲ್ಲಾ ಸನ್ನಿವೇಶಗಳಲ್ಲೂ ನೈಜ ಅಭಿನಯದಿಂದಲೇ ನೆನಪಿನಲ್ಲಿ ಉಳಿದಿದ್ದಾಳೆ ಬೆಳ್ಳಿ ಪಾತ್ರಧಾರಿ ಕಾವೇರಿ.

ಇನ್ನು ಉಳಿದ ಪಾತ್ರಗಳಾದ ಚೋಮನ ಗಂಡು ಮಕ್ಕಳು, ಸಂಕಪ್ಪಯ್ಯನವರು, ಸೇರಿಗಾರನಾದ ಮನ್ವೇಲು ಪಾತ್ರಧಾರಿ ಸುಧಾಕರ ಬೈಂದೂರು ಸೇರಿದಂತೆ ಎಲ್ಲರೂ ತಮ್ಮ ತಮ್ಮ ಪಾತ್ರಗಳಿಗೆ ಜೀವ ತುಂಬಿದ್ದಾರೆ. ಇದಕ್ಕೆ ಜೊತೆಯಾಗಿ ನಿಂತಿದ್ದು ಅವರು ಬಳಸಿಕೊಂಡ ರಂಗ ಪರಿಕರಗಳು. ಅದು ಗುಡಿಸಲಿನ ದೃಶ್ಯವಾಗಿರಬಹುದು ಅಥವಾ ಸಂಕಪ್ಪಯ್ಯನವರ ಮನೆಯ ದೃಶ್ಯಗಳಾಗಿರಬಹುದು ಎಲ್ಲವೂ ಆ ಕಾಲದ ಚಿತ್ರಣ ಕಣ್ಣಿಗೆ ಕಟ್ಟುವಂತಿತ್ತು. ಜಾತಿ ವ್ಯವಸ್ಥೆಯ ಕುರಿತಾಗಿ ಅಸ್ಪೃಶ್ಯತೆ ಮತ್ತು ಅದನ್ನೇ ಚೆನ್ನಾಗಿ ತೋರಿಸುವಂತೆ ನಾಟಕದ ಕೊನೆಯ ದ್ರಶ್ಯದಲ್ಲಿ ಸಮಾಜವೇ ಜಾತಿ ಹೆಸರಿನಲ್ಲಿ ದಲಿತರನ್ನು ಕಟ್ಟಿ ಹಾಕಿದೆ ಎಂದು ತೋರಿಸುವುದಕ್ಕಾಗಿ ಬೇಲಿಯನ್ನು ಬಳಸಿದ ರೀತಿ ಅಂತೂ ಬಹು ಸೊಗಸಾಗಿ ಮೂಡಿಬಂದಿತು.

Klive Special Article ಶ್ರೀ ಗಣೇಶ್ ಮಂದಾರ್ತಿ ಅವರ ನಿರ್ದೇಶನ, ಬೈಂದೂರಿನ ಸುರಭಿ ತಂಡದ ಎಲ್ಲರ ನೈಜ ಅಭಿನಯ, ಅದಕ್ಕೆ ಪೂರಕವಾದ ಸಂಗೀತ, ಸಾಂಕೇತಿಕವಾಗಿ ಎಲ್ಲವನ್ನು ಹೇಳುತ್ತಿರುವ ರಂಗಸಜ್ಜಿಕೆ, ವಿಕ್ರಮ್ ಉಪ್ಪುಂದ ಅವರ ಮುಖವರ್ಣಿಕೆ, ಪ್ರತಿಯೊಂದು ಸಹ ಅದ್ಭುತ. ನಾಟಕದ ಸಂಭಾಷಣೆಗಳು ಸಂಗೀತ ಮತ್ತು ರಂಗ ವಿನ್ಯಾಸ, ಕಥೆಯ ಭಾವನಾತ್ಮಕಥೆಯನ್ನು ಹೆಚ್ಚಿಸುತ್ತಿತ್ತು. 20ನೇ ದಶಕದ ಕಥೆ ಹೆಣೆದ ಕಾರಂತರು, ಎಂದಿಗೂ ಆ ಕಥೆ ಮತ್ತು ಅದರ ಸಂಭಾಷಣೆಗಳು ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುವಂತಿದೆ. ಚೋಮನ ದುಡಿ ನಾಟಕ ಸಾಮಾಜಿಕ ಬದಲಾವಣೆಗೆ ಪ್ರೇರಣೆ ನೀಡುವಲ್ಲಿ ಮಹತ್ವದ ಪಾತ್ರ ವಹಿಸಿದೆ.

ಸಂಭಾಷಣೆ ಹಳ್ಳಿಯ ಶೈಲಿಯಲ್ಲಿ ಮತ್ತು ನೈಜ ಜೀವನಕ್ಕೆ ಹೊಂದಿಕೊಂಡಂತೆ ಮೂಡಿಬಂದಿವೆ. ಅಲ್ಲಿನ ಪಾತ್ರಗಳು ಮಾತನಾಡುವ ರೀತಿ, ಅವರ ಆಕ್ರೋಶ, ದುಃಖ, ಹತಾಶೆ ಎಲ್ಲವೂ ನೈಜತೆಗೆ ತುಂಬಾ ಹತ್ತಿರವಿದ್ದಂತೆ ಇತ್ತು. ಈ ಎಲ್ಲಾ ಅಂಶಗಳು ಪ್ರೇಕ್ಷಕನ ಮನಸ್ಸಿನಲ್ಲಿ ತೀವ್ರ ಭಾವನಾತ್ಮಕ ಪ್ರಭಾವ ಬೀರುವಂತಹದ್ದಾಗಿತ್ತು. ಈ ನಾಟಕ ಶೋಷಿತ ವರ್ಗದ ಜೀವನ ಸಂಕಟಗಳನ್ನು ವಿಶ್ಲೇಷಿಸುವ ಪ್ರಯತ್ನವಾಗಿದ್ದು, ಇದರ ಕಠೋರ ವಾಸ್ತವಿಕತೆ ಮತ್ತು ಶಕ್ತಿಯುತ ನಟನೆಗಳು, ಪ್ರೇಕ್ಷಕರಲ್ಲಿ ಆಳವಾದ ಪರಿಣಾಮ ಬೀರುತ್ತದೆ. ಇದೊಂದು ಕಲಾತ್ಮಕತೆಯ ಜೊತೆಗೆ ಸಾಮಾಜಿಕ ಅಂತರಂಗವನ್ನು ಎಲ್ಲರಿಗೂ ತಲುಪಿಸುವ ಪರಿಣಾಮಕಾರಿ ನಾಟಕವಾಗಿದ್ದು ಈ ನಾಟಕವನ್ನು ಆಯೋಜಿಸಿದ ಎಲ್ಲರಿಗೂ ಕೂಡ ಧನ್ಯವಾದಗಳು.

ಡಾ. ಮೈತ್ರೇಯಿ ಆದಿತ್ಯಪ್ರಸಾದ್
ಸಂಸ್ಕೃತ ಉಪನ್ಯಾಸಕರು,
ಪೇಸ್ ಕಾಲೇಜ್ ಶಿವಮೊಗ್ಗ.
ಚಿತ್ರಕೃಪೆ : ಆದಿತ್ಯ ಪ್ರಸಾದ್ ಎಂ.

DC Shivamogga ಬಿಸಿಲಿನ ತಾಪಮಾನ ಹೆಚ್ಚಾಗುತ್ತಿದ್ದು, ಆರೋಗ್ಯದ ಕಾಳಜಿ ವಹಿಸಿ: ಜಿಲ್ಲಾಧಿಕಾರಿ ಗುರುದತ್ತ ಹೆಗೆಡೆ

0

DC Shivamogga ಬಿಸಿಲಿನ ತಾಪಮಾನ ಹೆಚ್ಚಾಗುತ್ತಿದ್ದು, ಜನರ ಆರೋಗ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದ್ದು, ಸಾರ್ವಜನಿಕ ಆರೋಗ್ಯ ಸಲಹೆಯನ್ನು ಅನುಸರಿಸುವ ಮೂಲಕ ತಮ್ಮ ಆರೋಗ್ಯದ ಕಾಳಜಿ ವಹಿಸಬೇಕೆಂದು ಜಿಲ್ಲಾಧಿಕಾರಿ ಗುರುದತ್ತ ಹೆಗೆಡೆ ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಬಿಸಿಲು ಹೆಚ್ಚಾಗಿದೆ. ದಿನೇ ದಿನೇ ಸಾರ್ವಜನಿಕರು ಕೆಲಸದ ಒತ್ತಡದ ಜೊತೆಗೆ ಬಿಸಿಲಿನ ಬೇಗೆಯನ್ನು ಸಹಿಸಿಕೊಳ್ಳದ ಸ್ಥಿತಿಗೆ ತಲುಪಿದ್ದಾರೆ. ಇದರಿಂದ ಮಾನಸಿಕವಾಗಿ ಹಾಗೂ ದೈಹಿಕವಾಗಿ ಕುಗ್ಗುತ್ತಿದ್ದಾರೆ. ಈ ಸಂದರ್ಭದಲ್ಲಿ ಸಾಮಾನ್ಯವಾಗಿ ಮನುಷ್ಯನ ದೇಹದ ಉಷ್ಣತೆಯು 36.4 ಡಿಗ್ರಿ ಸೆ ನಿಂದ 37.2 ಡಿಗ್ರಿ ಸೆ( 97.5 ಡಿಗ್ರಿ ಸೆ ಎಫ್ ನಿಂದ 98.9 ಡಿಗ್ರಿ ಸೆ ಎಫ್) ಆಗಿರುತ್ತದೆ. ಹಾಗಾಗಿ ಒಳಾಂಗಣ ಹಾಗೂ ಹೊರಾಂಗಣ ಪ್ರದೇಶಗಳು ಹೆಚ್ಚಿನ ಉಷ್ಣತೆಯಿಂದ ಕೂಡಿರುತ್ತದೆ. ಈ ಉಷ್ಣತೆಯ ಒತ್ತಡದಿಂದ ಆರೋಗ್ಯ ಸಮಸ್ಯೆಗಳು ಉಂಟಾಗುತ್ತದೆ.

ಇದಲ್ಲದೆ ನಾವು ಧರಿಸುವ ಬಟ್ಟೆಗಳು ಕೂಡ ದೇಹದ ಸುರಕ್ಷತೆಗೆ ಬಹುಮುಖ್ಯವಾಗಿದೆ. ಇಂತಹ ತಾಪಮಾನದಲ್ಲಿ ತಿಳಿ ಬಣ್ಣದ, ಅಳಕವಾದ ಹತ್ತಿಯ ಬಟ್ಟೆಯನ್ನು ಧರಿಸಬೇಕು. ಹೊರ ಹೋಗುವ ಸಂದರ್ಭದಲ್ಲಿ ಛತ್ರಿ, ಟೋಪಿ, ಟವೆಲ್ ಅಥವಾ ಇನ್ನಾವುದೇ ಸಂಪ್ರಾದಯಿಕ ಪದ್ಧತಿಯನ್ನು ಅನುಸರಿಸಿ ಬಿಸಿಲಿನಿಂದ ಪಡೆಯಬೇಕು ಎಂದಿದ್ದಾರೆ.

DC Shivamogga ಈ ಸಂದರ್ಭದಲ್ಲಿ ಚಪ್ಪಲಿ/ ಶೂಸ್‌ಗಳನ್ನು ಧರಿಸಬೇಕು.
ಬಿಸಿಲಿನಲ್ಲಿ ಅಂದರೆ 12 ರಿಂದ 3 ಗಂಟೆಗೆ ಹೊರ ಹೋಗುವುದನ್ನು ತಪ್ಪಿಸಬೇಕು. ಚಪ್ಪಲಿ ಧರಸಿ ಹೊರ ಹೋಗಬೇಕು. ಮಧ್ಯಾಹ್ನ ಅಡುಗೆ ಸಿದ್ದಪಡಿಸುವ ಪ್ರದೇಶದಲ್ಲಿ ಕಿಟಕಿ ಹಾಗೂ ಬಾಗಿಲನ್ನು ತೆರದಿಡಿ, ಮಧ್ಯಾಹ್ನ ಟೀ, ಕಾಫಿ ಮತ್ತು ಕಾರ್ಬೊನೇಟೆಡ್ ಪಾನೀಯಗಳು ಅಥವಾ ಹೆಚ್ಚು ಸಕ್ಕರೆ ಅಂಶವನ್ನು ಹೊಂದಿದ ಪಾನೀಯಗಳಿಂದ ದೂರವಿರಿ ಎಂದು ಎಚ್ಚರಿಸಿದ್ದಾರೆ.

K.S. Eshwarappa ಕಾಂಗ್ರೆಸ್ ಸರ್ಕಾರದ ನಡವಳಿಕೆ ಯಾರಿಗೂ ನೆಮ್ಮದಿ ತರುತ್ತಿಲ್ಲ :ಕೆ.ಎಸ್​.ಈಶ್ವರಪ್ಪ

0

K.S. Eshwarappa ಮಾಸೂರಿನ ಯುವತಿ ಸ್ವಾತಿ ಹತ್ಯೆ ವಿಷಯದಲ್ಲಿ ಕಾಂಗ್ರೆಸ್ ಸರ್ಕಾರದ ನಡವಳಿಕೆ ಯಾರಿಗೂ ನೆಮ್ಮದಿ ತರುತ್ತಿಲ್ಲ ಎಂದು ಮಾಜಿ ಡಿಸಿಎಂ ಕೆ.ಎಸ್​.ಈಶ್ವರಪ್ಪ ಆರೋಪಿಸಿದ್ದಾರೆ.
ಶಿವಮೊಗ್ಗದಲ್ಲಿ ಮಾತನಾಡಿದ ಅವರು, ಸ್ವಾತಿಯನ್ನು ಲವ್​ ಜಿಹಾದ್​ ಮೂಲಕ ಬಲೆಗೆ ಬೀಳಿಸಿಕೊಂಡು ಕಾರಿನಲ್ಲಿ ಕರೆದುಕೊಂಡು ಹೋಗಿ ಕುತ್ತಿಗೆ ಬಿಗಿದು ಸಾಯಿಸಿ ನದಿಗೆ ಬಿಸಾಕಿ ಹೋಗುವ ರಾಕ್ಷಿಸಿ ಕೃತ್ಯದ ಬಗ್ಗೆ ಸಿಎಂ ಆದಿಯಾಗಿ ಯಾರೊಬ್ಬರೂ ಖಂಡನೆ ಮಾಡಿಲ್ಲ. ಸಿಎಂ ಹಾಗೂ ಡಿಸಿಎಂ ಮಾತೆತ್ತಿದರೆ ನೀವು ಮುಸಲ್ಮಾನ್​ ವಿರೋಧಿ ಎನ್ನುತ್ತಾರೆ. ಸ್ವಾತಿ ನಿಮ್ಮ ಮಗಳೇ ಆಗಿದ್ದರೆ ನೀವು ಸುಮ್ಮನಿರುತ್ತಿದ್ದರೆ ಎಂದು ಪ್ರಶ್ನಿಸಿದ ಈಶ್ವರಪ್ಪ ಸ್ವಾತಿಯ ಮೃತ ದೇಹ ನದಿಯಿಂದ ಮೇಲಕ್ಕೆ ಬರುತ್ತಿದ್ದಂತೆಯೇ ಪೊಲೀಸರು ಆತುರದಿಂದ ಶವ ಸಂಸ್ಕಾರ ಮಾಡಿದ್ದಾರೆ ಎಂದರು.
K.S. Eshwarappa ಸ್ವಾತಿ ಹತ್ಯೆ ಪ್ರಕರಣ ಇಡೀ ರಾಜ್ಯದ ಜನ ತಲೆ ತಗ್ಗಿಸುವ ಕೆಲಸ. ಒಂದು ವೇಳೆ ಮುಸ್ಲಿಮ್​ ಯುವತಿಯನ್ನು ಯಾರಾದರೊಬ್ಬ ಹಿಂದೂ ಯುವಕ ಸಾಯಿಸಿ ಬಿಸಾಕಿದ್ದರೆ ನೀವು ಬೆಂಕಿ ಹಚ್ಚುತ್ತಿದ್ದರಲ್ಲವೆ. ರಾಜ್ಯದಲ್ಲಿ ಹಿಂದೂ ಹೆಣ್ಣು ಮಕ್ಕಳು ಎಂದರೆ ಬೆಲೆಯೆ ಇಲ್ಲದಂತಾಗಿದೆ. ಹಾಗಾಗಿ ಹಿಂದೂ ಹೆಣ್ಣು ಮಕ್ಕಳು ರಾಕ್ಷಸಿ ಮುಸಲ್ಮಾನ ಗೂಂಡಾಗಳ ಬಗ್ಗೆ ಎಚ್ಚರದಿಂದರಬೇಕು. ಹಾಗೆಯೇ ಹೆಣ್ಣು ಮಕ್ಕಳು ಈ ರೀತಿ ದುರ್ಬಳಕೆ ಮಾಡಿಕೊಳ್ಳುವವರನ್ನು ಗುಂಡಿಟ್ಟು ಕೊಲ್ಲುವ ಕಾಯ್ದೆ ಜಾರಿಗೆ ಬರಬೇಕು ಎಂದು ಆಗ್ರಹಿಸಿದರು.

Actor Puneet Rajkumar ದಿವಂಗತ ನಟ ಪುನೀತ್ ರಾಜಕುಮಾರ್ 50ನೇ ಹುಟ್ಟುಹಬ್ಬ ಆಚರಣೆ

0

Actor Puneet Rajkumar ನಟ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರ 50ನೇ ವರ್ಷದ ಹುಟ್ಟುಹಬ್ಬವು ಸಂಭ್ರಮದಿಂದ ನೆರವೇರುತ್ತಿದೆ. ಅಪ್ಪು ಅಭಿಮಾನಿಗಳು ಎಲ್ಲೆಡೆ ಈ ದಿನವನ್ನು ಹಬ್ಬದಂತೆ ಆಚರಿಸುತ್ತಿದ್ದಾರೆ. ಸಿನಿಮಾ ನಟರು, ರಾಜಕೀಯ ನಾಯಕರು ಕೂಡ ಅಪ್ಪು ಹುಟ್ಟುಹಬ್ಬಕ್ಕೆ ಶುಭಕೋರಿದ್ದಾರೆ. ಪುನೀತ್‌ ಅವರಿಗೆ ಮನೆಯಲ್ಲೂ ಅಭಿಮಾನಿಗಳಿದ್ದಾರೆ.

Yakshakala Academy Bangalore ಮಾರ್ಚ 20 ರಂದು ಪಾರ್ತಿಸುಬ್ಬ ರಚಿತ ಪಟ್ಟಾಭಿಷೇಕ ಯಕ್ಷಗಾನ ಪ್ರಯೋಗ

0

Yakshakala Academy Bangalore ಯಕ್ಷಕಲಾ ಅಕಾಡಮಿ ಬೆಂಗಳೂರು ಇದರ ಆಯೋಜನೆಯಲ್ಲಿ ಮಾರ್ಚ 20 ರಂದು ಪಾರ್ತಿಸುಬ್ಬ ರಚಿತ ಪಟ್ಟಾಭಿಷೇಕ ಯಕ್ಷಗಾನ ಪ್ರಯೋಗವು ಬೆಂಗಳೂರಿನ ನಯನ ಸಭಾಂಗಣದಲ್ಲಿ ಸಂಜೆ 6 ಗಂಟೆಗೆ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಕಲಾವಿದರಾಗಿ ಚಿತ್ಕಲ ತುಂಗ, ಸಂಪತ್ ಆಚಾರ್ಯ್, ಪನ್ನಗ ಮಯ್ಯ, ರವಿ ಮಡೋಡಿ, ಕೃಷ್ಣ ಶಾಸ್ತ್ರಿ, ಮನೋಜ್ ಭಟ್, ವಿನಯ್ ಹೊಸ್ತೋಟ, ರಾಘವೇಂದ್ರ ಐತಾಳ್, ವಿಜೇತ್ ಭಟ್, ಸದಾಶಿವ ತುಂಗ, ಕವಿತಾ ಮುಂತಾದವರು ಭಾಗವಹಿಸಲಿದ್ದಾರೆ ಎಂದು ತಿಳಿಸಲಾಗಿದೆ.

-ರವಿ ಮಡೋಡಿ
9986384205

Inner Wheel Institute ಇನ್ನರ್ ವೀಲ್ ಜಿಲ್ಲಾ ಚೇರ್ಮನ್ ಆಗಿ ಶಬರಿ ಕಡಿದಾಳ್ ಆಯ್ಕೆ

0

Inner Wheel Institute ಅಂತರಾಷ್ಟ್ರೀಯ ಪ್ರತಿಷ್ಠಿತ ಸೇವಾ ಸಂಸ್ಥೆಗಳಲ್ಲಿ ಒಂದಾದ ಇನ್ನರ್ ವೀಲ್ ಸಂಸ್ಥೆಗೆ ಜಿಲ್ಲಾ ಚೇರ್ಮನ್ ಆಗಿ ಶಿವಮೊಗ್ಗದ ಇನ್ನರ್ ವೀಲ್ ಶಿವಮೊಗ್ಗ ಪೂರ್ವ ಸಂಸ್ಥೆಯ ಶಬರಿ ಕಡಿದಾಳವರು ಆಯ್ಕೆಯಾಗಿದ್ದಾರೆ.

2025 -26 ನೇ ಸಾಲಿಗೆ ಇನ್ನರ್ ವೀಲ್ ಸಂಸ್ಥೆ ಎಂಟು ರೆವಿನ್ಯೂ ಜಿಲ್ಲೆಗಳಾದ ಹಾಸನ, ಮೈಸೂರು, ಶಿವಮೊಗ್ಗ, ಚಿಕ್ಕಮಂಗಳೂರು, ಮಡಿಕೇರಿ, ಉಡುಪಿ, ಮಂಗಳೂರು, ಚಾಮರಾಜನಗರ, ಈ ಜಿಲ್ಲೆಗಳನ್ನು ಒಳಗೊಂಡಂತೆ 55 ಇನ್ನರ್ ವೀಲ್ ಕ್ಲಬ್ ಗಳಿದ್ದು, ಈ ಕ್ಲಬ್ ಗಳ ನಾಯಕತ್ವವನ್ನು ವಹಿಸಿ ಜಿಲ್ಲಾ ಚೇರ್ಮನ್ ಆಗಿ ಆಯ್ಕೆಯಾಗಿದ್ದಾರೆ.

ಈ ಪ್ರತಿಷ್ಠಿತ ಹುದ್ದೆ ಒಂದು ವರ್ಷಗಳ ಕಾಲ ಅವಧಿಗೆ ಇದ್ದು, ಅನೇಕ ಸೇವಾ ಕಾರ್ಯಗಳ ಯೋಜನೆಗಳನ್ನು ಹಮ್ಮಿಕೊಂಡಿದ್ದಾರೆ ಇವರಿಗೆ ಇನ್ನರ್ ವೀಲ್ ಕ್ಲಬ್ ಶಿವಮೊಗ್ಗ ಪೂರ್ವ ವತಿಯಿಂದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಮತ್ತು ಸದಸ್ಯರು ಸನ್ಮಾನಿಸಿ ಗೌರವಿಸಿದರು.

Inner Wheel Institute ಶಬರಿ ಕಡಿದಾಳ್ ಇವರು ಡಾ. ಕಡಿದಾಳ್ ಗೋಪಾಲ್ ಅವರ ಪುತ್ರಿಯಾಗಿದ್ದು, ಶಬರಿ ಕಡಿದಾಳ್ ರವರು ಶಿವಮೊಗ್ಗದ ಗೆಳತಿ. ಶಾರದಾ ಜೆಸಿ, ಎಲೈಟ್ ಸಂಸ್ಥೆ, ಶ್ರೀನಿಧಿ ಎಜುಕೇಶನ್ ಟ್ರಸ್ಟ್ ನ ಟ್ರಸ್ಟಿ, ಒಕ್ಕಲಿಗರ ಮಹಿಳಾ ವೇದಿಕೆಯಲ್ಲಿ ಪದಾಧಿಕಾರಿಗಳಾಗಿ ಹಾಗೂ ಶಿವಮೊಗ್ಗದ ಅನೇಕ ಸಂಘ ಸಂಸ್ಥೆಗಳಲ್ಲಿ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿರುವರು.

ಕಾರ್ಯಕ್ರಮದಲ್ಲಿ ಇನ್ನರ್ ವೀಲ್ ಶಿವಮೊಗ್ಗ ಪೂರ್ವದ ಅಧ್ಯಕ್ಷರಾದ ವಾಗ್ದೇವಿ ಬಸವರಾಜ್, ಮಾಜಿ ಅಧ್ಯಕ್ಷರಾದ ಬಿಂದು ವಿಜಯ ಕುಮಾರ್, ವಿಜಯ ರಾಯ್ಕರ್, ಪದ್ಮಿನಿ ಹೋಬಳಿದಾರ್, ಆಶಾ ಶ್ರೀಕಾಂತ್, ರಾಜೇಶ್ವರಿ ಪ್ರತಾಪ್, ವೇದಾ ನಾಗರಾಜ್, ಮಧುರ ಮಹೇಶ್, ಜ್ಯೋತಿ ಸುಬ್ಬೇಗೌಡ, ಅನಿತಾ ರವಿಶಂಕರ್, ಸೀತಾಲಕ್ಷ್ಮೀ, ಸುಮತಿ ಕುಮಾರಸ್ವಾಮಿ, ಜ್ಯೋತಿ, ಡಾ. ಲಲಿತಾ ಭರತ್, ಭಾಗ್ಯ ಹಾಗೂ ಇನ್ನರ್ ವೀಲ್ ಸದಸ್ಯರು ಉಪಸ್ಥಿತರಿದ್ದರು.

International Women’s Day ಶಿವಮೊಗ್ಗದಲ್ಲಿ ಮಾರ್ಚ್ 19ಕ್ಕೆ ಉಚಿತ ಆರೋಗ್ಯ ತಪಾಸಣಾ ಶಿಬಿರ

0

International Women’s Day ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಫ್ರೆಂಡ್ಸ್ ಸೆಂಟರ್ ಮಹಿಳಾ ವಿಭಾಗದಿಂದ
ನಗರದ ಶುಭಂ ಹೋಟೆಲ್ ಎದುರಿನಲ್ಲಿರುವ ಶಾಂತಾ ನರ್ಸಿಂಗ್ ಹೋಂ ಪಕ್ಕದ ಸತ್ಯಶ್ರೀ ಆರ್ಕೇಡ್‌ನಲ್ಲಿ ಮಾರ್ಚ್ 19ರಂದು ಬೆಳಗ್ಗೆ 10ಕ್ಕೆ ಉಚಿತ ಆರೋಗ್ಯ ತಪಾಸಣಾ ಶಿಬಿರ ಹಮ್ಮಿಕೊಳ್ಳಲಾಗಿದೆ.
International Women’s Day ಶಿಬಿರ ಉದ್ಘಾಟನಾ ಕಾರ್ಯಕ್ರಮದಲ್ಲಿ ವೈದ್ಯ ಡಾ. ಚಂದುಶ್ರೀ, ಐಎಂಎ ಶಿವಮೊಗ್ಗ ಕಾರ್ಯದರ್ಶಿ ಡಾ. ವಿನಯಾ ಶ್ರೀನಿವಾಸ್, ಡಾ. ಎಚ್.ಸಿ.ಶಿವಕುಮಾರ್, ಫ್ರೆಂಡ್ಸ್ ಸೆಂಟರ್ ಅಧ್ಯಕ್ಷ ಧನರಾಜ.ಬಿ.ಜಿ. ಪಾಲ್ಗೊಳ್ಳುವರು. ಮಹಿಳಾ ವಿಭಾಗದ ಅಧ್ಯಕ್ಷೆ ಸಪ್ನಾ ಬದರೀನಾಥ್ ಅಧ್ಯಕ್ಷತೆ ವಹಿಸುವರು. ಕಣ್ಣು ತಪಾಸಣೆ ಪರೀಕ್ಷೆಗೆ ವಾಸನ್ ಐ ಕೇರ್ ಶಿವಮೊಗ್ಗ ಸಹಕಾರ ನೀಡುವರು. ಹೆಚ್ಚಿನ ಮಾಹಿತಿಗೆ ಮೊ.ಸಂ. 9481500004, 8088882425 ಸಂಪರ್ಕಿಸಬಹುದಾಗಿದೆ ಎಂದು ಫ್ರೆಂಡ್ಸ್ ಸೆಂಟರ್ ಮಹಿಳಾ ವಿಭಾಗದ ಅಧ್ಯಕ್ಷೆ ಸಪ್ನಾ ಬದರೀನಾಥ್, ಕಾರ್ಯದರ್ಶಿ ಸ್ಮಿತಾ ನವೀನ್ ತಿಳಿಸಿದ್ದಾರೆ.