Thursday, March 5, 2026
Thursday, March 5, 2026
Home Blog Page 357

Department of Information and Public Relations ಮಾದಕ ವಸ್ತುಗಳ ಸೇವನೆಯ ದುಷ್ಪರಿಣಾಮಗಳನ್ನ‌ ಯುವ ಜನತೆಗೆ ತಿಳಿಸಬೇಕು – ಶಾಸಕ‌ ಚೆನ್ನಿ

0

Department of Information and Public Relations ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ, ಬೆಂಗಳೂರು, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಶಿವಮೊಗ್ಗ ಇವರುಗಳ ಸಂಯುಕ್ತಾಶ್ರಯದಲ್ಲಿ ವಾಜಪೇಯಿ ಲೇಔಟ್‌ನಲ್ಲಿರುವ ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿನಿಲಯ ಇಲ್ಲಿ ಏರ್ಪಡಿಸಲಾಗಿದ್ದ ಮದ್ಯ ಮತ್ತು ಮಾದಕ ವ್ಯಸನಗಳ ದುಷ್ಪರಿಣಾಮಗಳ ಕುರಿತಾದ ವಿಚಾರ ಸಂಕಿರಣ ಕಾರ್ಯಕ್ರಮ‌ ಉದ್ಘಾಟಿಸಿ ಮಾತನಾಡಿದರು.

ಸಾಮಾನ್ಯವಾಗಿ ಹರೆಯದಲ್ಲಿ‌ ಬೇಡ ಎಂದ ವಸ್ತುಗಳ ಬಗ್ಗೆಯೇ ಮನಸ್ಸು ಸೆಳೆಯುತ್ತದೆ. ಯುವಜನತೆ ಮದ್ಯ ಮತ್ತು ಮಾದಕ ವಸ್ತುಗಳ ಬಳಕೆಗೆ ಹೆಚ್ಚು ಆಕರ್ಷಿತರಾಗುತ್ತಾರೆ. ಆದರೆ ಇದರಿಂದ ಆರೋಗ್ಯದ ಮೇಲಾಗುವ, ಕುಟುಂಬ ಮತ್ತು ಸಮಾಜದ ಮೇಲಾಗುವ ದುಷ್ಪರಿಣಾಮಗಳ ಬಗ್ಗೆ ತಿಳಿದುಕೊಳ್ಳಬೇಕು.

ಗಾಂಧಿಜಿ‌ಯವರು ನಮ್ಮ ದೇಶ ರಾಮರಾಜ್ಯ ಆಗಬೇಕು. ಮಾದಕ ವ್ಯಸನಕ್ಕೆ ಯಾರೂ ಒಳಗಾಗಬಾರದು ಎಂದಿದ್ದರು. ಅದರಂತೆ ನಾವು ನಡೆಯಬೇಕು.ಆದರೆ ನಾವು ಒಂದೆಡೆ ವ್ಯಸನದಿಂದ ದೂರ ಇರಿ ಎನ್ನುತ್ತೇವೆ. ಇನ್ನೊಂದೆಡೆ ಮಾಡಬಾರದು ಎಂಬುದಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗುತ್ತದೆ. ಮದ್ಯ ಅಂಗಡಿಗಳ ಸಂಖ್ಯೆ ಹೆಚ್ಚುತ್ತಿವೆ. ಸರ್ಕಾರಕ್ಕೆ
ರೂ. 40 ಸಾವಿರ ಕೋಟಿ ಆದಾಯ ಮದ್ಯದಿಂದ ಬರುತ್ತಿದೆ.
ಆದರೆ ಮಾದಕ ವ್ಯಸನದಿಂದ ಯುವಜನತೆ ಸೇರಿದಂತೆ ಈ ವ್ಯಸನಕ್ಕೆ ಒಳಗಾದವರ ಆರೋಗ್ಯ ಹಾಳಾಗುತ್ತಿದೆ. ಸಾಮಾಜಿಕ, ಕೌಟುಂಬಿಕ ಆರೋಗ್ಯ ಕೆಡುತ್ತದೆ. ಆದ್ದರಿಂದ ಮುಖ್ಯವಾಗಿ ಯುವಜನತೆ ಸರಿ ತಪ್ಪುಗಳ ಬಗ್ಗೆ ಆಲೋಚಿಸಬೇಕು.

ಗಂಭೀರವಾಗಿ‌ ಯೋಚಿಸಬೇಕು. ಯಾವುದು ಹಾನಿಕಾರವೋ ಅದನ್ನು‌ ಉಪಯೋಗಿಸಬಾರದೆಂಬ ದೃಢ ಸಂಕಲ್ಪ‌ ಮಾಡಬೇಕು.
ಹಿಂದೆ ಸ್ವಾತಂತ್ರ್ಯ ಕ್ಕಾಗಿ ಬಲಿದಾನ ಮಾಡಿದವರು ಬಹತೇಕರು ಯುವ ಹೋರಾಟಗಾರರು. ಪ್ರಸ್ತುತದಲ್ಲಿ ಇಂದಿನ‌ ಯುವಜನತೆ ವ್ಯಸನ ಮುಕ್ತ ಸಮಾಜ ನಿರ್ಮಿಸಲು ಹೋರಾಡಬೇಕಿದೆ. ಸಮಾಜ ಮುಖಿ‌ ಕೆಲಸ ಮಾಡುವಲ್ಲಿ‌ ಮುಂದಿರಬೇಕು.
ನಾನಂತೂ ಇದುವರೆಗೆ ಮದ್ಯ ಅಂಗಡಿ ತೆರೆಯಲು ಅವಕಾಶ ಮಾಡಿಕೊಟ್ಟಿಲ್ಲ ಎಂದ ಅವರು‌ ಯಾರಾದರೂ ಮದ್ಯ, ಮಾದಕ ವ್ಯಸನಕ್ಕೆ ಒಳಗಾಗಿದ್ದರೆ ಈಗಲೇ ಹೊರಬರಲು ದೃಢ ಸಂಕಲ್ಪ ಮಾಡಿ, ತೀರ್ಮಾನಿಸಿ‌ ಹೊರ ಬರಬೇಕು ಎಂದರು.

ನ್ಯೂರೋ ಭಾರತ್ ಆಸ್ಪತ್ರೆಯ ಮನೋವೈದ್ಯರಾದ ಡಾ.ಪ್ರಮೋದ್ ಹೆಚ್ ಎಲ್ ಉಪನ್ಯಾಸ ನೀಡಿ ಮಾತನಾಡಿ, ಕುತೂಹಲ, ಒತ್ತಡ, ಶೋಕಿ‌ ಹೀಗೆ ಇತರೆ ಕಾರಣದಿಂದ ಮಾದಕ ವಸ್ತುಗಳ ಉಪಯೋಗ ಆರಂಭವಾಗಿ, ಬರ ಬರುತ್ತಾ ಚಟವಾಗಿ ಹೋಗುತ್ತದೆ. ಚಟವಾಗಲು‌ನಮ್ಮ ಮೆದುಳಿನ ರಾಸಾಯನಿಕಗಳೂ ಕಾರಣವಾಗುತ್ತದೆ. ಮುಂದೆ ಬಿಡಲು ಮನಸ್ಸು ಮಾಡಿದರೂ ಸಾಧ್ಯವಾಗುವುದಿಲ್ಲ. ಸಾಮಾಜಿಕ‌ ಜಾಲತಾಣ, ಗೇಮ್ಸ್, ಜೂಜು ಇವೆಲ್ಲ ಚಟವಾಗಿ ಹೇಗೆ ಪರಿವರ್ತನೆ ಆಗುತ್ತದೆ. ಅದರಿಂದ ದೂರ ಇರುವುದು ಹೇಗೆ, ವ್ಯಸನಕ್ಕೆ ಒಳಗಾದರೆ ಅದನ್ನು‌ ಪತ್ತೆ ಹಚ್ಚುವುದು, ಅದರಿಂದ ಹೊರಬರುವ ಬಗೆ, ಮಾದಕ ವಸ್ತು ವ್ಯಸನಕ್ಕೆ ಲಭ್ಯವಿರುವ ಚಿಕಿತ್ಸೆ ಕುರಿತು ವಿವರವಾಗಿ ತಿಳಿಸಿಕೊಟ್ಟರು.

ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರಾದ ಮಲ್ಲೇಶಪ್ಪ ಮಾತನಾಡಿ ಇತ್ತೀಚೆಗೆ ವಿದ್ಯಾರ್ಥಿಗಳಲ್ಲಿ ಮಾದಕ ವಸ್ತುಗಳ ಬಳಕೆ ಹೆಚ್ಚುತ್ತಿರುವುದನ್ನು ಕಾಣುತ್ತಿದ್ದೇವೆ. ಇಂತಹ ಸಂದರ್ಭದಲ್ಲಿ ಮಾದಕ ವ್ಯಸನದಿಂದ ಉಂಟಾಗುವ ದುಷ್ಪರಿಣಾಮಗಳು, ವ್ಯಸನ ಮುಕ್ತವಾಗುವ ಬಗ್ಗೆ ಅರಿವು ಕಾರ್ಯಕ್ರಮದ ಅವಶ್ಯಕತೆ ಇದ್ದು ಯುವಜನತೆ ಇಂತಹ ಕಾರ್ಯಕ್ರಮಗಳ ಸದ್ಬಳಕೆ ಮಾಡಿಕೊಂಡು‌ ಯಾವುದೇ ವ್ಯಸನಕ್ಕೆ ಬಲಿಯಾಗದೆ ಬಲಿಷ್ಟ ಸಮಾಜ ನಿರ್ಮಿಸಲು ಮುಂದಾಗಬೇಕು ಎಂದರು.

ಕಾರ್ಯಕ್ರಮದಲ್ಲಿ ವಸತಿ ನಿಲಯಗಳ ಮೇಲ್ವಿಚಾರಕರು, ವಿದ್ಯಾರ್ಥಿಗಳು
ಪಾಲ್ಗೊಂಡಿದ್ದರು.
ವಾರ್ತಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕರಾದ ಮಾರುತಿ ಆರ್ ಸ್ವಾಗತಿಸಿ, ಕಾರ್ಯಕ್ರಮ ನಿರ್ವಹಿಸಿದರು. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಶೋಭಾ ವಂದಿಸಿದರು.

Karnataka State Liquor Control Board ಮದ್ಯ & ಮಾದಕ ವ್ಯಸನಗಳ ದುಷ್ಪರಿಣಾಮ‌ ಬಿಂಬಿಸುವ ಕಿರುನಾಟಕ‌ ಪ್ರದರ್ಶನ

0

Karnataka State Liquor Control Board ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ, ಬೆಂಗಳೂರು, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಶಿವಮೊಗ್ಗ ಇವರುಗಳ ಸಂಯುಕ್ತಾಶ್ರಯದಲ್ಲಿ ಗುರುವಾರ ಸಹ್ಯಾದ್ರಿ ವಾಣಿಜ್ಯ ಕಾಲೇಜಿನಲ್ಲಿ ಮಲೆನಾಡು ಕಲಾತಂಡದ ಕಲಾವಿದರಿಂದ ಮದ್ಯ ಮತ್ತು ಮಾದಕ ವ್ಯಸನಗಳ ದುಷ್ಪರಿಣಾಮಗಳ ಕುರಿತು ಜಾಗೃತಿ ಮೂಡಿಸುವ ಕಿರುನಾಟಕ ಪ್ರದರ್ಶಸಿದರು.

Karnataka State Liquor Control Board ಈ ಸಂದರ್ಭದಲ್ಲಿ ಕಾಲೇಜಿನ ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

CM Siddharamaiah ನ್ಯಾ‌.ನಾಗಮೋಹನ್ ದಾಸ್ ಆಯೋಗದ ಒಳ ಮೀಸಲಾತಿ ವರದಿ, ಸಂಪುಟ ಅಂಗೀಕರಿಸಿದೆ- ಸಿದ್ಧರಾಮಯ್ಯ

0

CM Siddharamaiah ನಿವೃತ್ತ ನ್ಯಾಯಮೂರ್ತಿಗಳಾದ ಹೆಚ್.ಎನ್. ನಾಗಮೋಹನ್ ದಾಸ್ ಅವರ ಅಧ್ಯಕ್ಷತೆಯಲ್ಲಿ ಪರಿಶಿಷ್ಟ ಜಾತಿಗಳಲ್ಲಿ ಒಳಮೀಸಲಾತಿ ಕಲ್ಪಿಸುವ ಸಂಬಂಧ ರಚಿಸಲಾಗಿದ್ದ ಏಕಸದಸ್ಯ ಆಯೋಗ ನೀಡಿದ ಮಧ್ಯಂತರ ವರದಿಯನ್ನು ನನ್ನ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯು ಅಂಗೀಕರಿಸಿದೆ.

ಈ ಆಯೋಗವು ನಾಲ್ಕು ಪ್ರಮುಖ ಶಿಫಾರಸ್ಸುಗಳನ್ನು ಮಾಡಿದೆ. ಕರ್ನಾಟಕ ರಾಜ್ಯದ ಪರಿಶಿಷ್ಟ ಜಾತಿಯಲ್ಲಿರುವ ಉಪಜಾತಿಗಳ ವೈಜ್ಞಾನಿಕ ವರ್ಗೀಕರಣ ಮಾಡಲು ಹೊಸದಾದ ಸಮೀಕ್ಷೆ ನಡೆಸಿ ದತ್ತಾಂಶವನ್ನು ಸಂಗ್ರಹಿಸಬೇಕು.

ಆಧುನಿಕ ವಿಜ್ಞಾನ ಮತ್ತು ತಂತ್ರಜ್ಞಾನದ ಸಾಧನಗಳನ್ನು ಬಳಸಿ 30 ರಿಂದ 40 ದಿವಸಗಳೊಳಗೆ ಹೊಸ ಸಮೀಕ್ಷೆಯನ್ನು ನಡೆಸಬಹುದೆಂದು ತಜ್ಞರು ಅಭಿಪ್ರಾಯ ಪಡುತ್ತಾರೆ. ಹೊಸದಾದ ಸಮೀಕ್ಷೆ ನಡೆಸಲು ಅಗತ್ಯವಿರುವ ಪ್ರಶ್ನಾವಳಿಯನ್ನು ಸಿದ್ಧಪಡಿಸಬೇಕು. ಯಾವ ಸಂಸ್ಥೆಯಿಂದ ಸಮೀಕ್ಷೆ ನಡೆಸಬೇಕು, ಸಮೀಕ್ಷೆಗೆ ಅಗತ್ಯವಿರುವ ತರಬೇತಿ, ಸಂಪನ್ಮೂಲ ಕ್ರೋಢೀಕರಣಗಳ ಉಸ್ತುವಾರಿಗಾಗಿ ಉನ್ನತ ಮಟ್ಟದ ಸಮಿತಿಯನ್ನು ರಚಿಸುವುದು ಸೂಕ್ತವೆಂದು ಆಯೋಗವು ಅಭಿಪ್ರಾಯಪಟ್ಟಿದೆ.

ಹೊಸ ಸಮೀಕ್ಷೆಯಿಂದ ಸಂಗ್ರಹಿಸಿದ ದತ್ತಾಂಶದ ಆಧಾರದ ಮೇಲೆ ಈ ವರದಿಯಲ್ಲಿ ತಿಳಿಯಪಡಿಸಿರುವ ಮಾನದಂಡಗಳಂತೆ ಪರಿಶಿಷ್ಟ ಜಾತಿಯಲ್ಲಿರುವ ಉಪಜಾತಿಗಳ ವರ್ಗೀಕರಣಗೊಳಿಸಿ ಲಭ್ಯವಿರುವ ಮೀಸಲಾತಿ ಪ್ರಮಾಣವನ್ನು ಆದ್ಯತೆ ಮೇಲೆ ಹಂಚಿಕೆ ಮಾಡಬೇಕು ಎಂದು ಸಮಿತಿ ಶಿಫಾರಸ್ಸು ಮಾಡಿದೆ.

CM Siddharamaiah ನಾಗಮೋಹನ್ ದಾಸ್ ಆಯೋಗದವರ ಮಧ್ಯಂತರ ವರದಿಯನ್ನು ಸಚಿವ ಸಂಪುಟ ಇಂದು ಅಂಗೀಕರಿಸಿದೆ. ಒಳಮೀಸಲಾತಿ ವರ್ಗೀಕರಣವನ್ನು ಶೀಘ್ರಗತಿಯಲ್ಲಿ ಕೈಗೊಳ್ಳುವ ಸಂಬಂಧ, ಹೊಸ ಸಮೀಕ್ಷೆ ನಡೆಸುವ ಕಾರ್ಯವನ್ನು ನಾಗಮೋಹನ್ ದಾಸ್ ಸಮಿತಿಗೆ ವಹಿಸಲು ಸಚಿವ ಸಂಪುಟ ನಿರ್ಣಯಿಸಿದೆ.

ಸಮೀಕ್ಷಾ ಕಾರ್ಯವನ್ನು 60 ದಿನದೊಳಗೆ ಪೂರ್ಣಗೊಳಿಸಿ ವರದಿ ಸಲ್ಲಿಸಲು ಅನುಕೂಲವಾಗುವಂತೆ ಸಮಿತಿಯ ಅವಧಿಯನ್ನು ಎರಡು ತಿಂಗಳವೆರೆಗೆ ವಿಸ್ತರಿಸಲಾಗಿದೆ.

KMF ಗ್ರಾಹಕರಿಗೆ ಹೊರೆಯಾಗದಂತೆ ಹಾಲಿನ ದರ ಏರಿಕೆ. ಹಾರಿಕೆ ಮಾತೋ , ಉಡಾಫೆಯೊ‌! ಅಂತೂ ಗ್ರಾಹಕರಿಗೆ ‘ಬರೆ’

0

KMF ಪ್ರಸ್ತುತ ಎಲ್ಲ ವಸ್ತುಗಳ ಬೆಲೆ ಏರಿಕೆಯಾಗಿರುವ ಕಾರಣದಿಂದ ಸಂಕಷ್ಟಕ್ಕೆ ಒಳಗಾಗಿರುವ ರಾಜ್ಯದ ಹೈನುಗಾರರ ನೆರವಿಗೆ ರಾಜ್ಯ ಸರ್ಕಾರವು ಧಾವಿಸಿದ್ದು, ಗ್ರಾಹಕರಿಗೆ ಹೊರೆಯಾಗದಂತೆ ಹಾಲಿನ ಬೆಲೆ ಏರಿಕೆ ಮಾಡಿದೆ.

ಕೆಎಂಎಫ್’ನ ನಂದಿನಿ ಹಾಲಿನ ಬೆಲೆಗೆ ಹೋಲಿಸಿದರೆ ಹೊರರಾಜ್ಯಗಳ ಹಾಲು ಒಕ್ಕೂಟಗಳು ಮಾರಾಟ ಮಾಡುವ ದರ ಹೆಚ್ಚಿನದ್ದಾಗಿದೆ.

KMF ಶುದ್ಧ ಹಾಗೂ ಗುಣಮಟ್ಟದ ದೃಷ್ಟಿಯಲ್ಲಿ ನಂದಿನಿ ಹಾಲು ಹಾಗೂ ಉತ್ಪನ್ನಗಳು ದೇಶದಲ್ಲೇ ಅತಿಹೆಚ್ಚು ಶ್ಲಾಘನೆಗೆ ಒಳಪಟ್ಟಿವೆ. ರಾಷ್ಟ್ರ ರಾಜಧಾನಿ ದೆಹಲಿ ಸೇರಿದಂತೆ ದೇಶದ ನಾನಾ ಭಾಗಗಳಿಂದ ನಂದಿನಿ ಹಾಲು ಹಾಗೂ ಇತರೆ ಉತ್ಪನ್ನಗಳಿಗೆ ಬೇಡಿಕೆ ವ್ಯಕ್ತವಾಗುತ್ತಿದೆ.

ಇದರಿಂದ ರಾಜ್ಯದ ಹೈನುಗಾರರಿಗೆ ಉತ್ತೇಜನ ಸಿಗುತ್ತಿದ್ದು, ಇದೀಗ ಸಣ್ಣ ಪ್ರಮಾಣದಲ್ಲಿ ಏರಿಕೆಯಾದ ಹಾಲಿನ ದರವು ನೇರವಾಗಿ ಹೈನುಗಾರರ ಕೈಸೇರುತ್ತಿರುವುದು ಪ್ರೋತ್ಸಾಹಕರವಾಗಿದೆ.

Supreme Court ಅಕ್ರಮ ಮರ ಕಡಿತಲೆ ₹1 ಲಕ್ಷ ದಂಡ.‌ಅಪರಾಧಿಗಳಿಗೆ ಕರುಣೆ ತೋರಬೇಡಿ ‘ಸುಪ್ರೀಂ’ ಅಭಿಪ್ರಾಯ

0

Supreme Court ಅಕ್ರಮವಾಗಿ ಕತ್ತರಿಸಿದ ಪ್ರತಿ ಮರಕ್ಕೆ 1 ಲಕ್ಷ ರೂ. ದಂಡ ವಿಧಿಸಿರುವ ವಿಚಾರದಲ್ಲಿ ಕರುಣೆ ತೋರುವ ಅಗತ್ಯವಿಲ್ಲ ಎಂದು ಸುಪ್ರೀಂ ಕೋರ್ಟ್‌ ಅಭಿಪ್ರಾಯಪಟ್ಟಿದೆ.

Supreme Court ಈ ನಿಟ್ಟಿನಲ್ಲಿ ಅಕ್ರಮವಾಗಿ ಮರ ಕಡಿದರೆ ಪ್ರಸಕ್ತ ವಿಧಿಸಲಾಗುತ್ತಿರುವ ದಂಡ ಮತ್ತು ಶಿಕ್ಷೆಯ ಪ್ರಮಾಣವನ್ನು ಹತ್ತುಪಟ್ಟು ಹೆಚ್ಚಿಸಲು ಅನುವಾಗುವಂತೆ ವೃಕ್ಷ ಸಂರಕ್ಷಣಾ ಕಾಯ್ದೆ 1972ಕ್ಕೆ ತಿದ್ದುಪಡಿ ತರಲು ಕ್ರಮ ವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದು ಅರಣ್ಯ ಸಚಿವರಾದ ಈಶ್ವರ್ ಖಂಡ್ರೆ ಅವರು ತಿಳಿಸಿದ್ದಾರೆ.

Rotary Club Shimoga ಉತ್ತಮ ಆರೋಗ್ಯ ರಕ್ಷಣೆಗೆ ಶುದ್ಧ ಕುಡಿಯುವ‌ ನೀರು ಮುಖ್ಯ- ನಾಗಭೂಷಣ್

0

Rotary Club Shimoga ಪ್ರತಿನಿತ್ಯ ಕುಡಿಯಲು ಬಳಸುವ ನೀರು ಶುದ್ಧತೆಯಿಂದ ಇರುವಂತೆ ನೋಡಿಕೊಳ್ಳಬೇಕು. ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಶುದ್ಧ ಕುಡಿಯುವ ನೀರು ಅವಶ್ಯಕ ಎಂದು ಸಂಪನ್ಮೂಲ ವ್ಯಕ್ತಿ ನಾಗಭೂಷಣ್ ಹೇಳಿದರು.

ವಿಶ್ವ ನೀರಿನ ದಿನ ಅಂಗವಾಗಿ ರೋಟರಿ ಕ್ಲಬ್ ಶಿವಮೊಗ್ಗ ಸೆಂಟ್ರಲ್ ವತಿಯಿಂದ ಕ್ಲಬ್ ಸದಸ್ಯರಿಗೆ ಆಯೋಜಿಸಿದ್ದ ನೀರು ಮತ್ತು ನೈರ್ಮಲ್ಯ ಕುರಿತ ಮಾಹಿತಿ ಕಾರ್ಯಾಗಾರದಲ್ಲಿ ಮಾತನಾಡಿ, ಸುರಕ್ಷಿತ ಕುಡಿಯುವ ನೀರು ನೈರ್ಮಲ್ಯ ಆರೋಗ್ಯ ಹಾಗೂ ಮಾನವನ ಯೋಗಕ್ಷೇಮಕ್ಕೆ ನಿರ್ಣಾಯಕವಾಗಿದೆ ಎಂದು ತಿಳಿಸಿದರು.

ಕುಡಿಯುವ ನೀರು ನೈರ್ಮಲ್ಯದ ಗುಣಮಟ್ಟವನ್ನು ಇನ್ನು ಸುಧಾರಿಸಬೇಕಿದೆ. ಅಸುರಕ್ಷಿತ ನೀರನ್ನು ಕುಡಿಯುವುದರಿಂದ ಅತಿಸಾರದಂತಹ ಕಾಯಿಲೆಗಳ ಮೂಲಕ ಮನುಷ್ಯನ ಆರೋಗ್ಯ ದುರ್ಬಲಗೊಳಿಸುತ್ತದೆ ಶುದ್ಧ ಸುರಕ್ಷಿತ ನೀರು ಕುಡಿಯುವುದು ಮಾನವನ ಹಕ್ಕು ಎಂದು ತಿಳಿಸಿದರು.

Rotary Club Shimoga ಸಭೆಯ ಅಧ್ಯಕ್ಷತೆ ವಹಿಸಿದ್ದ ರೋಟರಿ ಕ್ಲಬ್ ಸೆಂಟ್ರಲ್ ಅಧ್ಯಕ್ಷ ಕಿರಣ್ ಕುಮಾರ್ ಜಿ ಮಾತನಾಡಿ, ಶುದ್ಧ ಕುಡಿಯುವ ನೀರಿನಿಂದ ರೋಗಗಳನ್ನು ತಡೆಗಟ್ಟಬಹುದು. ನೀರು ಮತ್ತು ನೈರ್ಮಲ್ಯದ ಬಗ್ಗೆ ಇನ್ನೂ ಹೆಚ್ಚು ಹೆಚ್ಚು ಜಾಗೃತಿಗಳನ್ನು ಮೂಡಿಸಬೇಕು. ನೀರನ್ನು ಅನಾವಶ್ಯಕವಾಗಿ ಉಪಯೋಗಿಸಬೇಡಿ, ನೀರಿನ ಪ್ರಾಮುಖ್ಯತೆಯನ್ನು ಎಲ್ಲರೂ ಅರಿತುಕೊಳ್ಳಬೇಕು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ರವಿ ಕೋಟೊಜಿ, ಜಯಶೀಲ ಶೆಟ್ಟಿ, ಬಸವರಾಜ್ ಬಿ, ಅರುಣ್ ಕುಮಾರ್, ರಮಾನಾಥ್ ಗಿರಿಮಾಜಿ, ಎಸ್ ಕೆ ಕುಮಾರ್, ರಮೇಶ, ಸಂತೋಷ್ ಬಿ ಎ, ಚಂದ್ರು ಜೆಪಿ, ಧರ್ಮೇಂದ್ರ ಸಿಂಗ್ ಹಾಗೂ ಕ್ಲಬ್ಬಿನ ಎಲ್ಲಾ ಸದಸ್ಯರು ಭಾಗವಹಿಸಿದ್ದರು.

Yashasvini Yojana ಸಹಕಾರಿಗಳಿಗೆ ಯಶಸ್ವಿನಿ ಯೋಜನೆಯಲ್ಲಿ ನೋಂದಾಯಿಸಿಕೊಳ್ಳಲು ಮಾರ್ಚ್ 31 ಅಂತಿಮ ದಿನಾಂಕ

0

Yashasvini Yojana ಸಹಕಾರ ಇಲಾಖೆಯು 2024-25ನೇ ಸಾಲಿಗೆ ಯಶಸ್ವಿನಿ ಯೋಜನೆಯಡಿ ಫಲಾನುಭವಿಗಳನ್ನು ನೋಂದಾಯಿಸಿಕೊಳ್ಳುವಂತೆ ತಿಳಿಸಿದ್ದು, ಮಾ.31 ಕೊನೆಯ ದಿನಾಂಕವಾಗಿದೆ.
ಈ ಯೋಜನೆಯಡಿ ಮುಖ್ಯವಾಗಿ ಹೃದಯಕ್ಕೆ ಸಂಬಂಧಿಸಿದ ರೋಗಗಳು ಹಾಗೂ ಕಿವಿ, ಮೂಗು, ಗಂಟಲು ವ್ಯಾದಿಗಳು, ಕರುಳಿನ ಖಾಯಿಲೆಗಳು, ನರಗಳಿಗೆ ಸಂಬಂಧಿಸಿದ ಖಾಯಿಲೆಗಳು, ಕಣ್ಣಿನ ಖಾಯಿಲೆಗಳು, ಮೂಳೆ ರೋಗಗಳು, ಸ್ತ್ರೀಯರಿಗೆ ಸಂಬಂಧಿಸಿದ ಖಾಯಿಲೆಗಳಿಗೆ ಚಿಕಿತ್ಸಾ ಸೌಲಭ್ಯಗಳನ್ನು ರಾಜ್ಯದ ಯಶಸ್ವಿನಿ ನೆಟ್‌ವರ್ಕ್ ಆಸ್ಪತ್ರೆಗಳಲ್ಲಿ ಸಹಕಾರಿಗಳಿಗೆ ಒದಗಿಸಲಾಗುವುದು. ಈ ಯೋಜನೆಯಡಿ ಒಂದು ಫಲಾನುಭವಿ ಕುಟುಂಬಕ್ಕೆ ವಾರ್ಷಿಕ ವೈದ್ಯಕೀಯ ಚಿಕಿತ್ಸಾ ವೆಚ್ಚದ ಗರಿಷ್ಟ ಮಿತಿಯು ರೂ. 5.00 ಲಕ್ಷಕ್ಕೆ ನಿಗದಿಪಡಿಸಲಾಗಿದ್ದು, 1 ಏಪ್ರಿಲ್ 2025 ರಿಂದ 31 ಮಾರ್ಚ್ 2026ರವರೆಗೆ ಚಿಕಿತ್ಸಾ ಅವಧಿ ಚಾಲ್ತಿಯಲ್ಲಿರುತ್ತದೆ. Yashasvini Yojana ಜಿಲ್ಲೆಯ ಸಹಾಕರ ಸಂಘಗಳ ಸದಸ್ಯರುಗಳು ಯಶಸ್ವಿನ ಯೋಜನೆಯಡಿ ಮಾ.31 ರೊಳಗಾಗಿ ನೊಂದಾಯಿಸಿಕೊಂಡು ಯೋಜನೆಯ ಸದುಪಯೋಗ ಪಡೆದುಕೊಳ್ಳುವಂತೆ ಸಹಕಾರ ಸಂಘಗಳ ಉಪನಿಬಂಧಕ ನಾಗಭೂಷಣ್ ಚಂದ್ರಶೇಖರ್ ಕಲ್ಮನೆ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ಹೆಚ್ಚಿನ ಮಾಹಿತಿಗಾಗಿ ಹತ್ತಿರದ ಸಹಕಾರ ಸಂಘಗಳನ್ನು ಹಾಗೂ ಯಶಸ್ವಿನಿ ಕೋ ಆರ್ಡಿನೇಟರ್ ಹರೀಶ್ – 9739588777 ಇವರನ್ನು ಸಂಪರ್ಕಿಸುವುದು.
ವಿ.ಸೂ.: ಪರಿಶಿಷ್ಟ ಜಾತಿ/ಪಂಗಡದ ಸದಸ್ಯರು ಕುಟುಂಬದ ಪ್ರತಿಯೊಬ್ಬರ ಆರ್.ಡಿ. ನಂಬರ್ ಇರುವ ಜಾತಿ ಪ್ರಮಾಣ ಪತ್ರದ ಪ್ರತಿಯನ್ನು ಸಲ್ಲಿಸಬೇಕು.

S.N. Channabasappa ಉದ್ಯಾನವನದಲ್ಲಿ ಜಿಮ್,ಮಕ್ಕಳ ಆಟಿಕೆ ಅಳವಡಿಸಿ, ಗಿಡಮರನೆಟ್ಟು ಪರಿಸರ ಉಳಿಸಿ-ಎಸ್.ಎನ್.ಚನ್ನಬಸಪ್ಪ

0

S.N. Channabasappa ನಿವಾಸಿಗಳು ತಮ್ಮ ಮನೆ ಸುತ್ತಮುತ್ತ ಉತ್ತಮ ಗಿಡಗಳನ್ನು ಹಾಕಿ ಬೆಳೆಸಬೇಕು. ಹಾಗೂ ಬಡಾವಣೆಗಳಲ್ಲಿ ನಿರ್ಮಿಸಿರುವ ಉದ್ಯಾನವನಗಳನ್ನು ಸಂರಕ್ಷಿಸಿಕೊಂಡು ಹೋಗಬೇಕು ಎಂದು ಶಾಸಕರಾದ ಎಸ್ ಎನ್ ಚನ್ನಬಸಪ್ಪ ತಿಳಿಸಿದರು.
ಗುರುವಾರ ಕುವೆಂಪುನಗರದ ಎನ್‌ಇಎಸ್ ಬಡಾವಣೆಯ ಉದ್ಯಾನವನ ಅಭಿವೃದ್ದಿ ಕಾಮಗಾರಿಗೆ ಗುದ್ದಲಿಪೂಜೆ ನೆರವೇರಿಸಿ ಅವರು ಮಾತನಾಡಿದರು.
ಎನ್‌ಇಎಸ್ ಬಡಾವಣೆಯ ಉದ್ಯಾನವನಕ್ಕೆ ಯಾವೆಲ್ಲ ರೀತಿಯ ಗಿಡ-ಮರಗಳನ್ನು ಹಾಕಬೇಕು, ಎಲ್ಲಿ ಜಿಮ್ ಅಳವಡಿಸಬೇಕು, ಮಕ್ಕಳ ಆಟಿಕೆಗಳ ಅಳವಡಿಕೆ ಹೀಗೆ ಉದ್ಯಾನವನದ ಕುರಿತು ಸಮರ್ಪಕವಾದ ಯೋಜನೆ ತಯಾರಿಸಿ, ವ್ಯವಸ್ಥಿತವಾಗಿ ಉದ್ಯಾನವನ ನಿರ್ಮಿಸಿಕೊಳ್ಳಬೇಕೆಂದು ಕಿವಿಮಾತು ಹೇಳಿದ ಅವರು ಉದ್ಯಾನವನಗಳನ್ನು ಉಳಿಸಿಕೊಂಡು ಹೋಗುವಲ್ಲಿ ನಿವಾಸಿಗಳ ಸಹಕಾರ ಅತ್ಯಗತ್ಯವಾಗಿದೆ. ಎಲ್ಲ ನಿವಾಸಿಗಳು ಗಿಡ ಮರಗಳನ್ನು ನೆಡಬೇಕು ಹಾಗೂ ಉದ್ಯಾನವನದ ಸದುಪಯೋಗ ಪಡೆಯಬೇಕೆಂದು ತಿಳಿಸಿದರು.
ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷರಾದ ಹೆಚ್ ಎಸ್ ಸುಂದರೇಶ್ ಮಾತನಾಡಿ, ನಗರವನ್ನು ಹಸಿರೀಕರಣ ಮಾಡಲು ಸೂಡಾ ವತಿಯಿಂದ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. 05 ಕೆರೆಗಳನ್ನು ಅಭಿವೃದ್ದಿ ಪಡಿಸಲು ಸಹ ಶೀಘ್ರದಲ್ಲೇ ಟೆಂಡರ್ ಕರೆಯಲಾಗುವುದು. ಪ್ರಸ್ತುತ ಕುವೆಂಪು ನಗರದ ಹತ್ತಿರದ ಎನ್‌ಇಎಸ್ ಬಡಾವಣೆಯಲ್ಲಿ ಉದ್ಯಾನವನ ಅಭಿವೃದ್ದಿ ಕಾಮಗಾರಿಯನ್ನು ರೂ.25 ಲಕ್ಷ ವೆಚ್ಚದಲ್ಲಿ ಕೈಗೆತ್ತಿಕೊಳ್ಳಲಾಗುತ್ತಿದೆ. ಫೆನ್ಸಿಂಗ್, ಹೊರಾಂಗಣ ವ್ಯಾಮಾಯ ಸಾಮಗ್ರಿ, ಪಾಥ್‌ವೇ ನಿರ್ಮಾಣ, ಕಲ್ಲಿನ ಬೆಂಚುಗಳನ್ನು ಅಳವಡಿಸಲಾಗುವುದು. ಉತ್ತಮ ಮರಗಳಾಗುವಂತಹ ಗಿಡಗಳನ್ನು ನೆಡಲಾಗುವುದು ಎಂದ ಅವರು ಬಡಾವಣೆಗಳಲ್ಲಿನ ಎಲ್ಲ ನಿವಾಸಿಗಳು ತಮ್ಮ ಮನೆ ಮುಂದೆ ಗಿಡಗಳನ್ನು ಹಾಕಿ ಬೆಳೆಸಬೇಕು ಎಂದರು.
S.N. Channabasappa ಹಾಗೆಯೇ ಕೃಷಿನಗರದ ಡಾರ‍್ಸ್ ಕಾಲೋನಿಯಲ್ಲಿರುವ ಉದ್ಯಾನವನ ಅಭಿವೃದ್ದಿ ಕಾಮಗಾರಿಯನ್ನು ರೂ.20 ಲಕ್ಷ ಹಾಗೂ ಬಸವನಗುಡಿ 100 ಅಡಿ ರಸ್ತೆಯಲ್ಲಿರುವ ರೋಟರಿ ರಕ್ತನಿಧಿ ಹತ್ತಿರದ ಉದ್ಯಾನವನ ಅಭಿವೃದ್ದಿ ಕಾಮಗಾರಿಯನ್ನು ಅಂದಾಜು ಮೊತ್ತ ರೂ.20 ಲಕ್ಷದಲ್ಲಿ ಕೈಗೊಳ್ಳಲಾಗುವುದು ಎಂದು ತಿಳಿಸಿದ ಅವರು ಸಂಪರ್ಕ ರಸ್ತೆ ಸೇರಿದಂತೆ ಬಡಾವಣೆಗಳಲ್ಲಿನ ಸಮಸ್ಯೆಗಳ ಕುರಿತು ಪ್ರಾಧಿಕಾರದ ಗಮನಕ್ಕೆ ತಂದಲ್ಲಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಪಾಲಿಕೆ ಮಾಜಿ ಸದಸ್ಯರಾದ ಧೀರರಾಜ್ ಹೊನ್ನವಿಲೆ ಮಾತನಾಡಿ, ಎನ್‌ಇಎಎಸ್ ಬಡಾವಣೆಯ ಭಾಗದಲ್ಲಿ ರೆವೆನ್ಯು ನಿವೇಶನಗಳು ಮಧ್ಯೆ ಮಧ್ಯೆ ಇದ್ದು ಇದರಿಂದ ಮುಖ್ಯ ರಸ್ತೆಗೆ ಸಂಪರ್ಕ ರಸ್ತೆ ಸಾಧ್ಯವಾಗುತ್ತಿಲ್ಲ. ಕನ್ವರ್ಷನ್‌ಗೆ ಬಂದ ವೇಳೆ ಸಂಪರ್ಕ ರಸ್ತೆಗೆ ಅನುವು ಮಾಡಿಕೊಡಬೇಕು. ಹಾಗೂ ಈ ಭಾಗದಲ್ಲಿರುವ 6 ಕೆರಗಳನ್ನು ಅಭಿವೃದ್ದಿಪಡಿಸಿಕೊಡಬೇಕೆಂದು ಮನವಿ ಮಾಡಿದರು.
ಎನ್‌ಇಎಸ್ ಬಡಾವನೆ ನಿವಾಸಿಗಳ ಸಂಘದ ಅಧ್ಯಕ್ಷರಾದ ಪ್ರಸನ್ನ ಮಾತನಾಡಿ, ಬಡಾವಣೆ ಅಭಿವೃದ್ದಿ ಹೊಂದುತ್ತಿದೆ. ಆದರೆ ಇಲ್ಲಿ ಸಂಪರ್ಕ ರಸ್ತೆಗೆ ಸ್ವಲ್ಪ ತೊಂದರೆ ಇದ್ದು, ಸಂಪರ್ಕ ರಸ್ತೆ ನಿರ್ಮಿಸಿಕೊಡಬೇಕು ಹಾಗೂ ಸಿಟಿ ಬಸ್ ವ್ಯವಸ್ಥೆ ಮಾಡಿಕೊಡಬೇಕೆಂದು ಕೋರಿದರು.
ಕಾರ್ಯಕ್ರಮದಲ್ಲಿ ಪಾಲಿಕೆ ಮಾಜಿ ಸದಸ್ಯರಾದ ಜ್ಞಾನೇಶ್ವರ್, ಮಾಜಿ ಸೂಡಾ ಅಧ್ಯಕ್ಷ ನಾಗರಾಜ್, ಸೂಡಾ ಆಯುಕ್ತರಾದ ವಿಶ್ವನಾಥ ಮುದಜ್ಜಿ, ಸೂಡಾ ಅಭಿಯಂತರರಾದ ಬಸವರಾಜಪ್ಪ, ಗಂಗಾಧರ ಸ್ವಾಮಿ, ಅಧಿಕಾರಿಗಳು, ನಿವಾಸಿಗಳು ಪಾಲ್ಗೊಂಡಿದ್ದರು.

S.N.Chennabasappa ಪಿ & ಟಿ ಕಾಲೋನಿಯ ಬಳಿ ರೈಲ್ವೆ ಕ್ರಾಸಿಂಗ್ ನಲ್ಲಿ ಹಸುಗಳ ಸಾವು, ಶಾಸಕ ಚೆನ್ನಿ ಅವರಿಂದ ಪರಿಶೀಲನೆ

0

S.N.Chennabasappa ಪಿ & ಟಿ ಕಾಲೋನಿಯ ಬಳಿ ರೈಲ್ವೆ ಕ್ರಾಸಿಂಗ್ ನಲ್ಲಿ ಹಸುಗಳ ಸಾವು, ಶಾಸಕ ಚೆನ್ನಿ ಅವರಿಂದ ಪರಿಶೀಲನೆ ಪಿಎನ್‌ಟಿ ಕಾಲೋನಿಯ ಹಳೆ ರೈಲ್ವೆ ಗೇಟ್ ಬಳಿ ಹಸುಗಳ ಮಾರಣಾಂತಿಕ ಸಾವಿಗೆ ಕಾರಣವಾದ ಸ್ಥಳಕ್ಕೆ ಶಿವಮೊಗ್ಗ ನಗರ ಶಾಸಕರಾದ ಎಸ್ಎನ್ ಚನ್ನಬಸಪ್ಪ ಅವರು ಮಹಾನಗರ ಪಾಲಿಕೆ ಮತ್ತು ರೈಲ್ವೆ ಇಲಾಖೆಯ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಪರಿಶೀಲನೆಯ ವೇಳೆ ಘಟನೆಗೆ ಕಾರಣವಾದ ಅಸುರಕ್ಷಿತ ಪರಿಸ್ಥಿತಿಗಳು ಹಾಗೂ ತೊಂದರೆಗಳನ್ನು ಗುರುತಿಸಿ, ಅವುಗಳನ್ನು ತಕ್ಷಣ ಸರಿಪಡಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು. ಸ್ಥಳದಲ್ಲಿರುವ ರೈಲ್ವೆ ಕ್ರಾಸಿಂಗ್‌ನಲ್ಲಿ ಸುರಕ್ಷತೆ ಹೆಚ್ಚಿಸುವ ಸಲುವಾಗಿ ಅಗತ್ಯ ಎಚ್ಚರಿಕಾ ಸಂಕೇತಗಳು, ಬ್ಯಾರಿಕೇಡ್‌ಗಳು ಹಾಗೂ ಬೆಳಕಿನ ವ್ಯವಸ್ಥೆ ಸುಧಾರಣೆಗೊಳಿಸುವಂತೆ ಸೂಚಿಸಲಾಯಿತು.

S.N.Chennabasappa ಪಿ & ಟಿ ಕಾಲೋನಿಯ ಬಳಿ ರೈಲ್ವೆ ಕ್ರಾಸಿಂಗ್ ನಲ್ಲಿ ಹಸುಗಳ ಸಾವು, ಶಾಸಕ ಚೆನ್ನಿ ಅವರಿಂದ ಪರಿಶೀಲನೆ ಭವಿಷ್ಯದಲ್ಲಿ ಇಂತಹ ದುರ್ಘಟನೆಗಳು ಪುನರಾವೃತ್ತಿಯಾಗದಂತೆ ನಿರಂತರ ನಿಗಾ ಮತ್ತು ತಪಾಸಣೆ ನಡೆಸಲು ಸೂಚಿಸಿದರು.

ಈ ಸಂದರ್ಭದಲ್ಲಿ ಪಕ್ಷದ ಪ್ರಮುಖರು, ವಾರ್ಡ್ ಮುಖಂಡರು ಹಾಗೂ ಸ್ಥಳೀಯ ನಿವಾಸಿಗಳು ಉಪಸ್ಥಿತರಿದ್ದರು.

Sahyadri Welfare Associaltion ಎ- ಖಾತಾ & ‌ಬಿ- ಖಾತಾ ಅರಿವುಂಟು ಮಾಡುವ ಮೊದಲ ಕಾರ್ಯಕ್ರಮ ಶ್ಲಾಘನೀಯವಾಗಿದೆ- ಡಿ.ನಾಗೇಂದ್ರ

0

Sahyadri Welfare Associaltion ಎ- ಖಾತಾ, ಬಿ- ಖಾತಾ, ಈ ಅಸ್ತಿಗಳ ಬಗ್ಗೆ ಅರಿವು ಕಾರ್ಯಕ್ರಮವನ್ನು ಸಹ್ಯಾದ್ರಿ ನಗರ ಕ್ಷೇಮಾಭಿವೃದ್ದಿ ಸಂಘ ಸಹ್ಯಾದ್ರಿನಗರ ಶಿವಮೊಗ್ಗ ಇಲ್ಲಿ ಅರಿವು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದ ಅತಿಥಿಗಳಾಗಿ ಅಗಮಿಸಿದ್ದ ಮಹಾನಗರ ಪಾಲಿPಯ ಕಂದಾಯ ಆಯುಕ್ತರಾದ ಡಿ.ನಾಗೇಂದ್ರ ಮಾತಾನಾಡಿ ಈ ತರಹದ ಕಾರ್ಯಕ್ರಮ ಕ್ಷೇಮಾಬಿವೃದ್ದಿ ಸಂಘದ ಅಡಿಯಲ್ಲಿ ನಡೆದಿದ್ದು ಇದೇ ಮೊದಲು ಎಂದು ಶ್ಲಾಘಿಸಿದರು.
ನಿಮ್ಮ ಅರೋಗ್ಯದ ಬಗ್ಗೆ ನಿಗಾವಹಿಸಿ. ನಿಮ್ಮ ಸೇವೆಗೆ ನಾವು ಸದಾ ಸಿದ್ದ ಎಂದು ತಿಳಿಸಿದರು.
Sahyadri Welfare Associaltion ಸಾಗರದ ನಗರಸಭೆಯ ಅಧಿಕಾರಿಗಳಾದ ಎಂ.ಎಸ್.ರಾಜ್‌ಕುಮಾರ್ ಮಾತಾನಾಡಿ ಎ-ಖಾತಾ ಮಾಡಿಸಲು ಸಮಯ ನಿಗದಿ ಮಾಡಿಲ್ಲ ಅದರೆ ಬಿ-ಖಾತಾ ಮಾಡಿಸಲು ನಿರ್ದಿಷ್ಟ ಕೊನೆ ದಿನಾಂಕ ಇದೆ ಎಂದರು . ಈ ಬಡಾವಣೆಯ ಜನರ ತುಂಬಾ ಸುರಕ್ಷಿತವಾಗಿದ್ದೀರಿ. ಯುಜಿಡಿ ಲೈನ್ ಸಮಸ್ಯೆಗಳಿದ್ದಲ್ಲಿ ಸಂಬಂಧಪಟ್ಟ ಅಧಿಕಾರಿಗಳನ್ನು ಸಂಪರ್ಕಿಸಿ ಎಂದರು
ಸಂಘದ ರಾಘವೇಂದ್ರ, ಮಂಜಪ್ಪ.ಹಾಗೂ ಕಾರ್ಯದರ್ಶಿ ಗೀರಿಶ್.ಭಾಗವಯಿಸಿದ್ದರು. ಡಾ.ತ್ರೀವೇಣಿ ಎಲ್ಲರನ್ನು ಸ್ವಾಗತಿಸಿ. ವಂದಿಸಿದರು.ಈ ಸಂದರ್ಭದಲ್ಲಿ ಇನ್ನು ಮುಂತಾದವರು ಉಪಸ್ಥಿತರಿದ್ದರು.