Thursday, March 5, 2026
Thursday, March 5, 2026
Home Blog Page 356

Myanmar-Thailand Earthquake ಥೈಲ್ಯಾಂಡ್ & ಮಯನ್ಮಾರ್ ಭೂಕಂಪ 600 ಕ್ಕೂ ಹೆಚ್ಚು ಸಾವು

0

Myanmar-Thailand Earthquake ಥೈಲ್ಯಾಂಡ್ ಮತ್ತು ಮಯನ್ಮಾರ್​ ಸಂಭವಿಸಿದ ಭೂಕಂಪ ಭೀಕರವಾಗಿದೆ.
ಕಡಿಮೆ ಅಂದರೂ 694 ಸಾವನ್ನಪ್ಪಿದ್ದಾರೆ. 1670 ಕ್ಕೂ ಹೆಚ್ಚು ಮಂದಿ ಗಾಯಗಳಾಗಿದ್ದಾರೆ
ಎಂದು ವರದಿ ತಿಳಿಸಿದೆ.

ಮಯನ್ಮಾರ್​​​​ನ ಸಗೈಂಗ್​ನಲ್ಲಿ 7.7 ರಿಕ್ಟರ್​ ಮಾಪಕದಂತೆ ಭೂಕಂಪ ಸಂಭವಿಸಿದೆ. ರಾಜಧಾನಿ ನೇಪಿಡಾವ್ದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ಭೂಕಂಪ ಪೀಡಿತರು ನುಗ್ಗುತ್ತಿದ್ದಾರೆ.
ಮಂಡಲಯ್ ನ ಮಸೀದಿಯಲ್ಲಿ ಪ್ರಾರ್ಥನೆ ಮಾಡುತ್ತಿದ್ದವರ ಮೇಲೆ ಮಸೀದಿ ಣ ನ ಚಾವಣಿ ಕಂಪಿಸಿ ಕುಸಿದು ಬಿದ್ದಿದೆ. ಇದೇ ಪಟ್ಟಣದ ಯುನಿವರ್ಸಿಟಿ ಕಟ್ಟಡಕ್ಕೆ ತೀವ್ರ ಹಾನಿಯಾಗಿದೆಯೆಂದು ಹೇಳಲಾಗಿದೆ.
ಬ್ಯಾಂಕಾಕ್‌ನಲ್ಲಿ ಪ್ರಬಲ ಭೂಕಂಪ, ಕಟ್ಟಡಗಳ ಕುಸಿತ ಮಾಹಿತಿ‌ ಮತ್ತು ಭಾರತೀಯರಿಗಾಗಿ ಸಹಾಯವಾಣಿ ಆರಂಭಿಸಲಾಗಿದೆ.

Myanmar-Thailand Earthquake ಅಮೆರಿಕಾದಿಂದ ಈಗಾಗಲೇ ಮಯನ್ಮಾರ್​ಗೆ 5 ಮಿಲಿಯನ್ ಡಾಲರ್ ನೆರವು ಘೋಷಿಸಲಾಗಿದೆ.

Shimoga District Police Department ಪೊಲೀಸ್ ಧ್ವಜ‌‌ ದಿನಾಚರಣೆಗೆ ಪೂರ್ವಸಿದ್ಧತೆ- ಜಿ.ಕೆ.ಮಿಥುನ್ ಕುಮಾರ್

0

Shimoga District Police Department ಶಿವಮೊಗ್ಗ ಜಿಲ್ಲಾ ಪೊಲೀಸ್ ಇಲಾಖೆಯ ವತಿಯಿಂದ ಏ. 02 ರಂದು ಬೆಳಗ್ಗೆ 8.00ಕ್ಕೆ ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ ಪೊಲೀಸ್ ಧ್ವಜ ದಿನಾಚರಣೆಯನ್ನು ಆಚರಿಸಲಾಗುತ್ತಿದೆ. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭದ್ರಾವತಿ ನ್ಯೂಟೌನ್ ಠಾಣೆಯ ನಿವೃತ್ತ ಎ.ಎಸ್.ಐ. ವಿ.ಎನ್. ಪುಟ್ಟುಸಿಂಗ್ ಅವರು ಪಾಲ್ಗೊಳ್ಳಲಿದ್ದಾರೆ ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಜಿ.ಕೆ ಮಿಥುನ್‌ಕುಮಾರ್ ಅವರು ತಿಳಿಸಿದ್ದಾರೆ.

JCI Shivamogga ನೋವು ನಲಿವನ್ನು ಸಮನಾಗಿ ಸ್ವೀಕರಿಸಬೇಕು-ಜೇಸಿ ನರಸಿಂಹ‌ಮೂರ್ತಿ

0

JCI Shivamogga ಜೆಸಿಐ ಸಮೃದ್ಧಿ ಘಟಕದ ಅಧ್ಯಕ್ಷರಾದ ಜೆಸಿ ನರಸಿಂಹ ಮೂರ್ತಿ ಮತ್ತು ಎಲ್ಲಾ ಪದಾಧಿಕಾರಿಗಳಿಂದ ಅದ್ದೂರಿಯಾಗಿ ಯುಗಾದಿ ಸಂಭ್ರಮ ಹಾಗೂ ಜೆಸಿಐ ಸೀನಿಯರ್ ವಿನಿತ್.ಆರ್ ಜೆಡ್ ವಿಪಿ ರವರಿಂದ ಜೆಸಿಐ ಪದಾಧಿಕಾರಿಗಳು ಮತ್ತು ಸದಸ್ಯರಿಗೆ ಎಲ್ ಡಿ ಎಂ ಟಿ ವಿಶೇಷ ತರಬೇತಿ ನೀಡಲಾಯಿತು.

ಈ ವೇಳೆ ಮಾತನಾಡಿದ ಜೆಸಿಐ ಸಮೃದ್ಧಿ ಘಟಕದ ಅಧ್ಯಕ್ಷರಾದ ಜೆಸಿ ನರಸಿಂಹ ಮೂರ್ತಿ, ಯುಗಾದಿ ಹಬ್ಬದ ದಿನ ಬೇವು ಬೆಲ್ಲ ಸೇವಿಸಿ ಇತರರಿಗೆ ಹಂಚುವ ವಿಶೇಷ ಸಂಪ್ರದಾಯವಿದೆ. ಬೇವು ಬೆಲ್ಲವು ಜೀವನದಲ್ಲಿ ಎದುರಾಗುವ ಸುಖ ದುಃಖವನ್ನು, ನೋವು ನಲಿವನ್ನು ಸಮನಾಗಿ ಸ್ವೀಕರಿಸಬೇಕು ಎಂಬ ಅರ್ಥದಲ್ಲಿ ಸಿಹಿ ಕಹಿ ಎರಡನ್ನು ಈ ಹಬ್ಬದಲ್ಲಿ ಸೇವಿಸಲಾಗುತ್ತದೆ ಎಂದರು.

ಜೀವನದಲ್ಲಿ ಕಷ್ಟ ಬಂದಾಗ ಕುಗ್ಗದೇ, ಸುಖ ಬಂದಾಗ ಹಿಗ್ಗದೇ ಎಲ್ಲದನ್ನೂ ಸಮಾನವಾಗಿ ಸ್ವೀಕರಿಸಬೇಕು ಎಂಬುದನ್ನು ಯುಗಾದಿ ಹಬ್ಬದ ಆಚರಣೆ ಮೂಲಕ ಪ್ರತಿಯೊಬ್ಬರೂ ಅರಿತುಕೊಳ್ಳಬೇಕು ಎಂದರು.

ಈ ದಿನದ ವಿಶೇಷ ಕಾರ್ಯಕ್ರಮದಲ್ಲಿ ಎಲ್ಲರೂ ಅವರವರ ಮನೆಯಿಂದ ವಿಶೇಷವಾದ ಅನೇಕ ಬಗೆಯ ಸಿಹಿ ಅಡುಗೆಗಳನ್ನು ಮಾಡಿಕೊಂಡು ತಂದಿದ್ದರು.

ಕಾರ್ಯಕ್ರಮದಲ್ಲಿ ಜೆಸಿಐ ಸೀನಿಯರ್ ಗೌರೀಶ್ ಭಾರ್ಗವ ಜೆಡ್ ಪಿ ಇವರು ಆಗಮಿಸಿದ್ದರು. ಕಾರ್ಯದರ್ಶಿ ಜೆಸಿ ಗಾಯತ್ರಿ ಯಲ್ಲಪ್ಪ ಗೌಡ, ಜೆಸಿ ನರಸಮ್ಮ, ಜೆಸಿ ಅನಿತಾ ಸೀರಿಯಲ್, ಜೆಸಿ ಸುಮಾ ಕಳಸಾಪುರ, ಜೆಸಿ ಶಶಿಕಲಾ, ಜೆಸಿ ಪಾರ್ವತಿ, ಜೆಸಿ ಅನ್ನಪೂರ್ಣ, ಜೆಸಿ ಪುಷ್ಪಲತಾ, ಜೆಸಿ ಸುಮಾ, ಜೆಸಿ ಕವಿತಾ, ಜೆಸಿ ಪ್ರೇಮ್ ಗೌಡ, ಜೆಸಿ ಗಗನ್, ಜೆಸಿ ಲಲಿತ ಪ್ರಕಾಶ್, ಜೆಸಿ ಲೋಲ, ಜೆಸಿ ಪುಷ್ಪ, ಜೆಸಿ ಮಾಲಾ, ಜೆಸಿ ಮಂಜುಳಾ ಮತ್ತು ಸ್ನೇಹಿತೆಯರು ಹಾಗೂ ಕುಟುಂಬದವರು ಹಾಜರಿದ್ದರು.

Scouts & Guides ಸ್ಕೌಟ್ಸ್ & ಗೈಡ್ಸ್ ನಮ್ಮೆಲ್ಲರ ದಾರಿದೀಪ- ಡಾ.ಸುಜಾತ ಹೊಸಮನಿ

0

ನಮ್ಮ ಹೆಮ್ಮೆಯ ಸಂಸ್ಥೆ ಸ್ಕೌಟ್ಸ್ ಅಂಡ್ ಗೈಡ್ಸ್

ನಿಸರ್ಗದ ಮಡಿಲಲಿ ಕುಳಿತು..
ನಿಸ್ವಾರ್ಥ ಸೇವಾಭಾವವ ಬೆಳೆಸಿ
ಪ್ರಾಣಿ-ಪಕ್ಷಿಯ ಪ್ರೀತಿ ಕಲಿಸಿ
ಸಹಬಾಳ್ವೆ ಸಮನ್ವಯ ತಿಳಿಸಿ
ದೇಶಾಭಿಮಾನವ ಹುಟ್ಟಿಸುವ ಧ್ಯೇಯ ಹೇಳುವ ಸಂಸ್ಥೆಯಿದು..

ವಿಶ್ವಶಾಂತಿಗೆ ಶ್ರಮಿಸುವ,
ಕಾಯಾವಾಚಾ ಮನಸಾ ಪರಿಶುದ್ಧತೆಯ ತತ್ವ ಪಾಲಿಸುವ
ಪರಿಸರ ಪ್ರಜ್ಞೆ ಮೂಡಿಸುವ
ಪರಿಸರ ಉಳಿಸಿ ಬೆಳೆಸುವ
ಸಮಾನತೆಯ ಕಲಿಸುವ
ಎಲ್ಲರಲು ಒಗ್ಗಟ್ಟಿನ ಭಾವ ಮೂಡಿಸುವ ಸಂಸ್ಥೆಯಿದು..

ಶಿಸ್ತುಬದ್ಧ ಸಮವಸ್ತ್ರವ ಧರಿಸಿ
ಜಾತಿ, ಭೇದ-ಭಾವ ಮರೆಸಿ
ಚಳುವಳಿಯ ಭಾವಕ್ಕೆ ಉತ್ತೇಜಿಸಿ..
ಸಹಾಯ, ಸಹಾನುಭೂತಿಯ ಭಾವ ಬೆಳೆಸಿ..
ಹೊಸತನದ ಬೀಜವ ಭಿತ್ತಿ;
ನಾಯಕತ್ವ, ಶಿಸ್ತು, ಜವಾಬ್ದಾರಿ ತಿಳಿಸುವ,‌ ಕಲಿಸುವ ಸಂಸ್ಥೆಯಿದು..

ಜೀವ ಭಾವದ ರೂಪ..
ಮಾನವತೆಯ ಪ್ರತಿರೂಪ..
ಅವರೇ ನಮ್ಮ ರಾಬರ್ಟ್
ಬೇಡನ ಪೋವಲ್..
ಚಳವಳಿಯ ಸಂಸ್ಥಾಪಕ
ಹೊಸ ಶಿಬಿರದ ನಿರೂಪಕ

Scouts & Guides ಮಕ್ಕಳ ಮನವ ಬೆಳಗಲು
ಸಮಸಮಾಜ ಕಟ್ಟಲು
ಶ್ರಮಿಸಿದರು ನಿರಂತರ
ಸ್ಕೌಟ್ಸ್ ಮತ್ತು ಗೈಡ್ಸ್
ಚಳುವಳಿ ಆರಂಭಿಸಿದರು..
ಹೊಸ ಮುನ್ನುಡಿ ಬರೆದರು..

ರಾಬರ್ಟ್
ಬೇಡನ ಪೋವಲ್ ನೆನೆಯೋಣ..
ಸ್ಕೌಟ್ಸ್ ಗೈಡ್ಸ್ ಜೊತೆಗಿರೋಣ..

ರಾಬರ್ಟ್
ಬೇಡನ ಪೋವಲ್ ನಮ್ಮ ಜೀವದಾತ..
ಸ್ಕೌಟ್ಸ್ ಗೈಡ್ಸ್ ನಮ್ಮೆಲ್ಲರ ದಾರಿದೀಪ..

ಡಾ.ಸುಜಾತಾ ಹೊಸಮನಿ
ಕೇಂದ್ರ ಸ್ಥಾನಿಕ ಆಯುಕ್ತರು

National Tobacco Control Programme ತಂಬಾಕು ನಿಯಂತ್ರಣ ಕೋಶ ಸಿಬ್ಬಂದಿಯಿಂದ ಜಿಲ್ಲೆಯ ವಿವಿಧೆಡೆ ದಾಳಿ 18 ಪ್ರಕರಣ ದಾಖಲೆ

0

National Tobacco Control Programme ಶಿವಮೊಗ್ಗ ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ವತಿಯಿಂದ ದಿನಾಂಕ 28.03.2025 ರಂದು ಶಿವಮೊಗ್ಗ ನಗರದ ಖಾಸಗಿ ಬಸ್ ನಿಲ್ದಾಣದಲ್ಲಿ ಕೋಟ್ಪ ಕಾಯ್ದೆ ಉಲ್ಲಂಘಿಸುವವರ ವಿರುದ್ಧ ದಾಳಿಗಳನ್ನು ಹಮ್ಮಿಕೊಳ್ಳಲಾಯಿತು.

ಒಟ್ಟು 18 ಪ್ರಕರಣಗಳನ್ನು ದಾಖಲಿಸಿ, ಸ್ಥಳದಲ್ಲೇ ರೂ. 3000 ದಂಡವನ್ನು ಸಂಗ್ರಹಿಸಲಾಯಿತು. ತಂಡದಲ್ಲಿ ತಾಲೂಕು ಆರೋಗ್ಯ ಅಧಿಕಾರಿ ಡಾ. ಚಂದ್ರಶೇಖರ್, ರಾಷ್ಟ್ರೀಯ ತಂಬಾಕು ನಿಯಂತ್ರಣ ಕಾರ್ಯಕ್ರಮದ ಜಿಲ್ಲಾ ಸಲಹೆಗಾರ ಹೇಮಂತ್ ರಾಜ್ ಅರಸ್, ಸಮಾಜ ಕಾರ್ಯಕರ್ತ ರವಿರಾಜ್ ಜಿ ಕೆ, ಆರೋಗ್ಯ ನಿರೀಕ್ಷಣಾಧಿಕಾರಿ ಬಸವರಾಜ್, ಮಹಾನಗರಪಾಲಿಕೆ ಆರೋಗ್ಯ ನಿರೀಕ್ಷಣಾಧಿಕಾರಿ ವಿಕಾಸ್, ಆರೋಗ್ಯ ಇಲಾಖೆ, ಮಹಾನಗರಪಾಲಿಕೆ ಹಾಗೂ ಪೊಲೀಸ್ ಇಲಾಖೆ ಸಿಬ್ಬಂದಿಗಳು ಭಾಗವಹಿಸಿದ್ದರು.

Klive Special Article ಯುಗಾದಿಯೆಂದರೆ ಎಷ್ಟೊಂದು ನೆನಪುಗಳು? ಲೇ: ಎಚ್.ಕೆ.ವಿವೇಕಾನಂದ

0

Klive Special Article ಯುಗಾದಿ…..

” ಉಳ್ಳವರು ಶಿವಾಲಯ ಮಾಡುವರು,
ನಾನೇನ ಮಾಡಲಿ ಬಡವನಯ್ಯ,
ಎನ್ನ ಕಾಲೇ ಕಂಬ,
ದೇಹವೇ ದೇಗುಲ
ಶಿರವೇ ಹೊನ್ನ ಕಳಸವಯ್ಯ, ಕೂಡಲಸಂಗಮದೇವ ಕೇಳಯ್ಯ,
ಸ್ಥಾವರಕ್ಕಳಿವುಂಟು ಜಂಗಮಕ್ಕಳಿವಿಲ್ಲ……..”

ಎಂಬ ಬಸವಣ್ಣನವರ ವಚನದ ಸಾಲುಗಳನ್ನು ನೆನಪು ಮಾಡಿಕೊಳ್ಳುತ್ತಾ…

“ಯುಗ ಯುಗಾದಿ ಕಳೆದರು ಯುಗಾದಿ ಮರಳಿ ಬರುತಿದೆ,
ಹೊಸ ವರುಷಕೆ ಹೊಸ ಹರುಷವ ಹೊಸತು ಹೊಸತು ತರುತಿದೆ……”

ವರಕವಿ ದತ್ತಾತ್ರೇಯ ರಾಮಚಂದ್ರ ಬೇಂದ್ರೆಯವರ ಕವನದ ಸಾಲುಗಳನ್ನು ಗುನುಗುತ್ತಾ…….

ಭಾರತದ ಪ್ರಾಕೃತಿಕ ಸಂಸ್ಕೃತಿಗೆ ಈ ವಸಂತ ಋತುವಿನ ಆಗಮನ ಹೊಸ ವರುಷ ಎಂಬುದು ಹೆಚ್ಚು ಅರ್ಥಪೂರ್ಣವಾಗಿದೆ…..

ಪ್ರಕೃತಿಯೇ ಹೊಸ ಹುಟ್ಟು ಪಡೆಯುವ ಮುಖ್ಯವಾಗಿ ಸಸ್ಯ ಲೋಕ ಚಿಗುರಿದಾಗ ಕಾಣುವ ಸಂಭ್ರಮ ನಮ್ಮ ಅರಿವಿಗೆ ಬರುತ್ತದೆ……..

ಹಬ್ಬಗಳ ಧಾರ್ಮಿಕ ಮಹತ್ವ ಏನೇ ಇರಲಿ ಸಾಂಸ್ಕೃತಿಕವಾಗಿ ಹಬ್ಬಗಳು ಜೀವನೋತ್ಸಾಹದ ಕುರುಹುಗಳು. ಸಂಬಂಧಗಳನ್ನು ಬೆಸೆಯುವ ಮತ್ತು ಪುನರ್ ಸ್ಥಾಪಿಸುವ ಪ್ರಕ್ರಿಯೆಗಳ ಚಾಲನಾ ಶಕ್ತಿ…….

Klive Special Article ವೈವಿಧ್ಯಮಯ ಭಾರತದಲ್ಲಿ ಹಬ್ಬಗಳನ್ನು ವಿಜೃಂಭಿಸುವುದರ ಜೊತೆಗೆ ಆರ್ಥಿಕ ಅಸಮಾನತೆಯ ಇನ್ನೊಂದು ಮುಖವೂ ತೆರೆದುಕೊಳ್ಳುತ್ತದೆ. ಈಗ ಆ ಅಂತರ ಕಡಿಮೆಯಾಗಿದ್ದರೂ ಕೆಲವು ದಶಕಗಳ ಹಿಂದೆ ಹಬ್ಬಗಳು ಸಹ ಶ್ರೀಮಂತಿಕೆಯ ಪ್ರದರ್ಶನ ಒಂದು ಕಡೆ ಮತ್ತು ಬಡವರ ‌ಆರ್ಥಿಕ ನರಳಾಟ ಮತ್ತೊಂದು ಕಡೆ ಕಣ್ಣಿಗೆ ಕಾಣುವಷ್ಟು ಸ್ಪಷ್ಟವಾಗಿತ್ತು. ವಿಶೇಷ ಊಟ ಮತ್ತು ಹೊಸ ಬಟ್ಟೆ ಹಾಗು ಮನೆಗೆ ಸುಣ್ಣ ಬಣ್ಣ ಜೊತೆಗೆ ಹೊಸ ಮದುವೆಯ ಜೋಡಿಗಳ ಬೇಡಿಕೆ ಹೀಗೆ ಒಂದಷ್ಟು ಆರ್ಥಿಕ ಒತ್ತಡ ಬಡವರನ್ನು ಕಾಡುತ್ತಿತ್ತು……..

ಜಾಗತೀಕರಣದ ನಂತರ ಭಾರತದ ಮಧ್ಯಮ ವರ್ಗದ ಆರ್ಥಿಕ ಪರಿಸ್ಥಿತಿ ಸುಧಾರಿಸಿತು. ಆದರೆ ಅದರ ಪರಿಣಾಮ ಹಬ್ಬಗಳ ಪ್ರಭಾವವೂ ಕ್ಷೀಣಿಸಿತು ಮತ್ತು ಹೆಚ್ಚು ಕೃತಕವಾಯಿತು. ಅದು ಎಂದಿನಂತೆ ಒಂದು ಸಹಜ ಬದಲಾವಣೆ ಎಂದು ಭಾವಿಸಬಹುದು……

ಸಾಮಾನ್ಯವಾಗಿ ಗ್ರಾಮೀಣ ಭಾಗದ ಯುಗಾದಿ ಹಬ್ಬವೆಂದರೆ….‌

ತಲೆಗೆ ಎಣ್ಣೆ ಹಚ್ಚುವವರು,
ಮೈಗೆ ಎಣ್ಣೆ ತೀಡುವವರು,
ಹೊಟ್ಟೆಗೆ ಎಣ್ಣೆ ಹಾಕುವವರು,
ಹೋಳಿಗೆ ತುಪ್ಪ ಸವಿಯುವವರು,
ಕೋಳಿ, ಕುರಿ ಮಾಂಸ ಭಕ್ಷಿಸುವವರು,
ಇಸ್ಪೀಟ್ ಆಟ ಆಡುವವರು,
ಹೊಸ ಬಟ್ಟೆ ಹಾಕಿ ನಲಿಯುವವರು,
ಹೊಸ ವರ್ಷ ಸಂಭ್ರಮಿಸುವವರು,
ನವ ಜೋಡಿಗಳು,
ಹಳೆ ಬೇರುಗಳು,
ಬಡತನದ ನೋವುಗಳು,
ಸಿರಿತನದ ಖುಷಿಗಳು,
ಅಗಲಿದವರ ನೆನಪುಗಳು,
ಹುಟ್ಟಿದವರ ನಲಿವುಗಳು,

ಯುಗಾದಿ ಎಂದರೆ ಅದೊಂದು ನೆನಪಿನಾ ಹಬ್ಬ.
ಸಿಹಿಯೂ ಇದೆ – ಕಹಿಯೂ ಇದೆ.
ಕಾಲನ ಪಯಣದಲಿ ಸಿಹಿ ಕಹಿಯಾಗಿ – ಕಹಿ ಸಿಹಿಯಾದ ಅನುಭವ ಒಂದು ವಿಸ್ಮಯ.

ಆಗ ಮಾವಂದಿರು ತಮ್ಮ ಒರಟು ಕೈಗಳಲ್ಲಿ ಪುಟ್ಟ ಬೆತ್ತಲೆ ಮೈಗೆ ಸುಡುವ ಎಣ್ಣೆ ತಿಕ್ಕುತ್ತಿದ್ದರೆ ಅಲ್ಲೇ ನರಕ ದರ್ಶನ.
ಈಗ Massage parlor ನಲ್ಲಿ ಬಾಡಿ ಮಸಾಜ್ ಮಾಡುತ್ತಾ ಎಷ್ಟೇ ಒತ್ತಿದರೂ ಅದೊಂದು ಸ್ವರ್ಗ ಸುಖ.

ಆಗ ಕಲ್ಲಿನಲಿ ಮೈ ಉಜ್ಜಿ ಬೀದಿಯ ಸುಡು ಬಿಸಿಲಿನಲ್ಲಿ ಬಿಸಿ ನೀರಿನಲ್ಲಿ ಅಮ್ಮ ಸ್ನಾನ ಮಾಡಿಸುತ್ತಿದ್ದರೆ ಅದೊಂದು ಯಾತನಾಮಯ ಸಮಯ.
ಈಗ ಹದ ಬೆರೆತ ಬಿಸಿ ನೀರಿನ ಬಾತ್ ಟಬ್ಬಿನಲಿ ಕುಳಿತು shower ನಲ್ಲಿ ಸ್ನಾನ ಮಾಡುತ್ತಿದ್ದರೆ ಸಮಯದ ಪರಿವೇ ಇರುವುದಿಲ್ಲ.

ಅಂದು ಹೊಸ ಬಟ್ಟೆಗಾಗಿ ತಿಂಗಳ ಮೊದಲೇ ರೋಮಾಂಚನದ ಕನಸಿನ ಅನುಭವವಾಗುತಿತ್ತು.
ಇಂದು ಈ ಸುಡು ಬೇಸಿಗೆಯಲಿ ಬಟ್ಟೆ ತೊಡಲೇ ಉತ್ಸಾಹವಿಲ್ಲ. ಕಪಾಟಿನೊಳಗಿಂದ ಇನ್ನೂ ಧರಿಸದ ಹೊಸ ಬಟ್ಟೆಗಳು ಗಹಗಹಿಸಿ ನಗುತ್ತಿವೆ.

ಅಂದು ಹೋಳಿಗೆಯ ಹೂರಣ ಕದ್ದು ತಿನ್ನಲು ನಾನಾ ಯೋಚನೆ – ನಾನಾ ಯೋಜನೆ.
ಇಂದು ತಟ್ಟೆಯ ಮುಂದೆ ಭಕ್ಷ್ಯಭೋಜನ. ತಿನ್ನಲು ಮಾತ್ರ ನಾನಾ ಭಯ.

ಅಂದು ನೆಂಟರು ಬಂದರೆ ಸಂಭ್ರಮವೋ ಸಂಭ್ರಮ. ಜನ ಹೆಚ್ಚಾದಷ್ಟೂ ಖುಷಿಯೋ ಖುಷಿ.
ಇಂದು ಅತಿಥಿಗಳು ಬಂದರೆ ಏನೋ ಕಸಿವಿಸಿ. ಅದಕ್ಕಿಂತ ಟಿವಿಯೇ ವಾಸಿ ಎನಿಸುತ್ತದೆ.

ಅಂದು ಶಿಸ್ತಿನ ಅಪ್ಪ ದೆವ್ವದಂತೆ ಕಾಣುತ್ತಿದ್ದರು.
ಇಂದು ಫೋಟೋ ಆಗಿರುವ ಅಪ್ಪನೇ ದೇವರು.

ಅಂದು ಬುಧ್ಧ ಬಸವ ಗಾಂಧಿ ಸುಭಾಷ್ ಅಂಬೇಡ್ಕರ್ ಆಜಾದ್ ಗಳೇ ಆದರ್ಶ.
ಇಂದು ಬಿಲ್ ಗೇಟ್ಸ್, ಎಲಾನ್ ಮಸ್ಕ್, ಅಂಬಾನಿ, ಅದಾನಿ, ಮಿತ್ತಲ್, ಹಿಂದೂಜಾಗಳೇ ಆದರ್ಶ.

ಅಂದು ಸತ್ಯ, ಸರಳತೆ, ಸ್ವಾಭಿಮಾನ, ಮಾನವೀಯ ಮೌಲ್ಯಗಳೇ ಜೀವನ ಧ್ಯೇಯ.
ಇಂದು ಕಾರು, ಬಂಗಲೇ, ಒಡವೆ, ಶ್ರೀಮಂತಿಕೆಗಳೇ ಬದುಕಿನ ಧ್ಯೇಯ.

ಆದರೂ,
ನಿರಾಸೆ ಏನಿಲ್ಲ.
ಅಂದಿಲ್ಲದ ಎಷ್ಟೋ ಸೌಲಭ್ಯಗಳು ಇಂದಿವೆ.
ಅಂದಿಲ್ಲದ ಅರಿವು ಜ್ಞಾನ ಇಂದಿದೆ.
ಅಂದಿಲ್ಲದ ಅನುಭವ ಇಂದಿದೆ.
ಅರಿತು ಬಾಳಿದರೆ ಅಂದಿಗೂ ಇಂದಿಗೂ ವ್ಯತ್ಯಾಸವೇನಿಲ್ಲ…….

ಏನೂ ಇಲ್ಲದಿದ್ದಾಗ ಎಲ್ಲವನ್ನೂ ಗಳಿಸಿದೆ.
ಎಲ್ಲವೂ ಇರುವಾಗ ಏನನ್ನಾದರೂ ಸಾಧಿಸುವಾಸೆ.
ಕಾಲಾಯ ತಸ್ಮೈ ನಮ:….

ಎಲ್ಲರಿಗೂ ಯುಗಾದಿ ಹಬ್ಬದ ಶುಭಾಶಯಗಳು….

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,
ವಿವೇಕಾನಂದ. ಎಚ್. ಕೆ.
9844013068………

Department of Kannada and Culture ಶ್ರೀಅಗ್ನಿ‌ಬನ್ನಿರಾಯರು ತಿಗಳ ಸಮುದಾಯದ ಶ್ರೇಷ್ಟ ಗುರುಗಳು- ಸಿ.ಎಸ್.ಚಂದ್ರಭೂಪಾಲ್

0

Department of Kannada and Culture ಅಗ್ನಿವಂಶ ಕ್ಷತ್ರಿಯರ ಕುಲ ಪುರುಷರಾದ ಶ್ರೀ ಅಗ್ನಿಬನ್ನಿರಾಯರು ತಿಗಳರ ಸಮುದಾಯದ ಶ್ರೇಷ್ಠ ಗುರುಗಳಾಗಿದ್ದು, ಈ ಸಮಾಜವು ದುಡಿಮೆಗೆ ಹೆಚ್ಚಿನ ಆದ್ಯತೆ ನೀಡುವ ಶ್ರಮಜೀವಿಗಳು. ಕಾಯಕ ನಿಷ್ಠರು ಎಂದು ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆ ಅನುಷ್ಠಾನ ಪ್ರಾಧಿಕಾರ ಅಧ್ಯಕ್ಷರಾದ ಸಿ.ಎಸ್.ಚಂದ್ರಭೂಪಾಲ್ ಶ್ಲಾಘಿಸಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರಪಾಲಿಕೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಶುಕ್ರವಾರ ನಗರದ ಕುವೆಂಪುರಂಗಮಂದಿರಲ್ಲಿ ಆಯೋಜಿಸಿದ್ದ ಶ್ರೀ ಅಗ್ನಿ ಬನ್ನಿರಾಯಸ್ವಾಮಿ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಭೂಮಂಡಲದಲ್ಲಿ ಅರಾಜಕತೆ ತಾಂಡವವಾಡುತ್ತಿದ್ದಾಗ ಸಮಸ್ತ ಜೀವ ಸಂಕುಲವನ್ನು ರಕ್ಷಿಸಲು ಸಂದರ್ಭ ಒದಗಿ ಬರುತ್ತದೆ. ಅಂತಹ ಸಮಯದಲ್ಲಿ ಶಂಭು ಮಹರ್ಷಿಗಳು ಸಪ್ತ ಋಷಿಗಳನ್ನು ಸೇರಿಸಿ ಅರ್ಬುದಾಂಚಲ ಪರ್ವತದ ಮೇಲೆ ಯಾಗವನ್ನು ನಡೆಸುತ್ತಾರೆ. ಅಲ್ಲಿಗೆ ಆಗಮಿಸಿದ ತ್ರಿಮೂರ್ತಿಗಳು ಯಾಗಕ್ಕೆ ಕಾಮಧೇನುವಿನ ತುಪ್ಪದಿಂದ ಆಹುತಿಯನ್ನು ನೀಡುತ್ತಾರೆ. ಹಾಗೂ ಪರಶಿವನು ತನ್ನ ಮೂರನೇ ಕಣ್ಣಿನಲ್ಲಿ ಮೂಡಿದ ಹನಿಯನ್ನು ಕೆಂದಾವರೆ ಪುಷ್ಪದೊಡನೆ ಯಜ್ಞಕುಂಡಕ್ಕೆ ಅರ್ಪಣೆ ಮಾಡುತ್ತಾನೆ. ಶಿವನ ಈ ಅಂಶದಿಂದ ಮೀನ ಮಾಸ ಉತ್ತರ ನಕ್ಷತ್ರದ ದಿನದಂದು ಪ್ರಜ್ವಲಿಸುವ ಅಗ್ನಿಯಿಂದ ವೀರ ಅಗ್ನಿ ಮಹಾರಾಜರು ಜನಿಸುತ್ತಾರೆ ಎಂದು ತಿಳಿಸಿದರು.
ತಿಗಳರ ಸಮುದಾಯವು ಪುರಾಣದಲ್ಲಿ ಹೆಚ್ಚಿನ ಪ್ರಾಶಸ್ತ್ಯ ಪಡೆದಿದೆ. ಮಹಾಭಾರತದಲ್ಲಿ ಪಾಂಡವರು ಯುದ್ಧವನ್ನು ಜಯ ಸಾಧಿಸುವಲ್ಲಿ ತಿಗಳರ ಸಮುದಾಯವು ಪ್ರಮುಖ ಪಾತ್ರ ವಹಿಸಿದೆ. ತಿಗಳರ ಸಮುದಾಯದ ಸಹಕಾರ ಹಾಗೂ ಬೆಂಬಲವಿಲ್ಲದೆ ಯಾವುದೇ ಯುದ್ಧವನ್ನಾಗಲಿ, ಕಾರ್ಯವನ್ನಾಗಲೀ ಜಯಗೊಳಿಸಲಾಗುವುದಿಲ್ಲ ಎಂಬ ಪ್ರತೀತಿ ಇದೆ ಎಂದ ಅವರು ತಿಗಳರನ್ನು ನಾನು ಹತ್ತಿರದಿಂದ ನೋಡಿದ್ದೇನೆ. ಅವರು ಶ್ರಮ ಮತ್ತು ಸ್ನೇಹಜೀವಿಗಳು. ಹಣ ಅಂತಸ್ತಿಗಿಂತ ಕಾಯಕಕ್ಕೆ ಪ್ರಾಮುಖ್ಯತೆ ನೀಡುವ ಸಮಾಜ ಎಂದರು.
Department of Kannada and Culture ಅಗ್ನಿಬನ್ನಿರಾಯ ಸ್ವಾಮಿಯ ಬಗ್ಗೆ ಇನ್ನೂ ಹೆಚ್ಚೆಚ್ಚು ತಿಳಿದುಕೊಳ್ಳಬೇಕು. ಸಮಾಜದ ಮುಖಂಡರು ಈ ನಿಟ್ಟಿನಲ್ಲಿ ಕೆಲಸ ಮಾಡಬೇಕು. ತುಮಕೂರು ವಿಶ್ವವಿದ್ಯಾಲಯದಲ್ಲಿ ಶ್ರೀ ಅಗ್ನಿಬನ್ನಿರಾಯ ಸ್ವಾಮಿ ಅಧ್ಯಯನ ಪೀಠವನ್ನು ಸ್ಥಾಪನೆ ಮಾಡಲಾಗಿದ್ದು, ಇದರ ಸದ್ಬಳಕೆ ಮಾಡಿಕೊಳ್ಳಬೇಕು. ಈ ಸಮುದಾಯ ಆರ್ಥಿಕವಾಗಿ, ಸಾಮಾಜಿಕವಾಗಿ, ರಾಜಕೀಯವಾಗಿ ಸೇರಿದಂತೆ ಸರ್ವಾಂಗೀಣ ಅಭಿವೃದ್ದಿಯಾಗಬೇಕು ಎಂದ ಅವರು ನಿಮ್ಮ ಸಮುದಾಯದ ಇನ್ನಷ್ಟು ಅಭಿವೃದ್ದಿ ಹೊಂದಲು ಸರ್ಕಾರದಿಂದ ಯೋಜನೆಯನ್ನು ರೂಪಿಸಲು ಮನವಿ ಮಾಡುತ್ತೇನೆ ಎಂದರು.
ಸಮಾಜದ ಮುಖಂಡರಾದ ಮಹಾದೇವ ಮಾತನಾಡಿ, ಶ್ರೀ ಅಗ್ನಿಬನ್ನಿರಾಯ ಸ್ವಾಮಿಗಳು ಮಹಾಪುರುಷರು. ಈ ಸಮುದಾಯದಲ್ಲಿ ಜನಿಸಿದ ನಾವೆಲ್ಲರೂ ಧನ್ಯರು. ಮೈಸೂರು, ಬೆಂಗಳೂರು ಹಾಗೂ ಮಳವಳ್ಳಿ ಭಾಗದಲ್ಲಿ ತಿಗಳರ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ನಾವೆಲ್ಲರೂ ಒಗ್ಗಟ್ಟಾಗಿ ಇಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸಬೇಕು. ತುಮಕೂರಿನಲ್ಲಿ ಸಮಾಜದ ಸಮಾವೇಶ ಆಗುತ್ತಿದೆ. ಮುಂದಿನ ದಿನಗಳಲ್ಲಿ ಜಿಲ್ಲೆಯಲ್ಲಿಯೂ ಸಮಾಜದ ಎಲ್ಲರೂ ಒಗ್ಗಟ್ಟಾಗಿ ಹೆಚ್ಚಿನ ಸಂಖ್ಯೆಯಲ್ಲಿ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಹೆಚ್.ಉಮೇಶ್, ಸಮಾಜದ ಮುಖಂಡರಾದ ನಾಗರಾಜ, ಪದ್ಮಾ, ಚಂದ್ರಕಲಾ ಹಾಗೂ ಸಮಾಜದ ಪ್ರಮುಖರುಗಳು ಪಾಲ್ಗೊಂಡಿದ್ದರು.

International Women’s Day ಕವನಗಳು ಸರಳ,ಸಹಜ ಮತ್ತು ಪ್ರಾಸಬದ್ಧವಾಗಿರ ಬೇಕು- ವಿಜಯಾಶ್ರೀಧರ್

0

International Women’s Day ಶಿವಮೊಗ್ಗ ಜಿಲ್ಲಾ ಲೇಖಕಿಯರು ಹಾಗೂ ವಾಚಕಿಯರ ಸಂಘದ ವತಿಯಿಂದ ವಿಶ್ವಮಹಿಳಾ ದಿನಾಚರಣೆಯನ್ನು ಆಚರಿಸಲಾಯಿತು.

ಈ ವೇಳೆ ಕಾರ್ಯಕ್ರಮವನ್ನು ಉದ್ಘಾಟಿಸಿದ ಶ್ರೀಮತಿ ವಿಜಯಾ ಶ್ರೀಧರ್ ಮಾತನಾಡಿದ, ಹೆಸರಾಂತ ಕವಿಗಳಾದ ದ.ರಾ.ಬೇಂದ್ರೆ, ಕುವೆಂಪು, ಜಿ.ಎಸ್.ಶಿವರುದ್ರಪ್ಪ, ನಿಸಾರ್ ಅಹಮದ್ ರವರ ಕವನಗಳ ವೈಶಿಷ್ಟ್ಯತೆಯನ್ನು ಉದಾಹರಿಸುತ್ತಾ, ಕವನಗಳು ಸರಳ, ಸಹಜ ಹಾಗೂ ಪ್ರಾಸಬದ್ಧವಾಗಿರಬೇಕೆಂದು ಕವನ ರಚನೆಯ ಕುರಿತಾಗಿ ತಿಳಿಸಿದರು.

ಗೌರವಾಧ್ಯಕ್ಷೆ ಚಂದ್ರಕಲಾ ಮಾತನಾಡಿ, ತಮಗೆ ಬಾಲ್ಯದಿಂದಲೇ ಕವನ ರಚನೆಯ ಬಗೆಗೆ ಒಲವಿತ್ತು ಎಂದು ತಮ್ಮ ಬಾಲ್ಯದ ಕವನ ರಚನೆಯಲ್ಲಿನ ಆಸಕ್ತಿ ಬಗ್ಗೆ ತಿಳಿಸಿ, ಬಾಲ್ಯದಲ್ಲಿ ಅವರು ಬರೆದ ಸುಂದರ ಕವಿತೆಯೊಂದರ ಕುರಿತು ವಿವರಿಸಿದರು.

ಮುಖ್ಯ ಅತಿಥಿಗಳಾಗಿ ಆಗನಿಸಿದ್ದ ಸುನೀತಾ ರಾವ್ ಮಾತನಾಡಿ, ಮಹಿಳಾ ದಿನಾಚರಣೆ ಪ್ರಾರಂಭವಾದದುದರ ಕುರಿತು ಮಾಹಿತಿ ನೀಡಿದರು. ಹಾಗೂ ಎಲ್ಲಿ ಮಹಿಳಾ ಶೋಷಣೆಯಾದರೂ ಅಲ್ಲಿ ಮಹಿಳೆಯರು ಸಂಘಟಿತರಾಗಬೇಕೆಂಬ ಕಳಕಳಿ ವ್ಯಕ್ತಪಡಿಸಿದರು.

International Women’s Day ಕವಿಗೋಷ್ಠಿಯಲ್ಲಿ ಪ್ರಮುಖರಾದ ಗುಣ.ಎಸ್, ಇಂದಿರಾ, ಗಾಯತ್ರಿ ರಮೇಶ್, ಡಿ.ಬಿ.ನಾಗರತ್ನಮ್ಮ, ನಾಗರತ್ನಮ್ಮ ಸುಬ್ರಮಣ್ಯ, ಸು. ವಿಜಯಲಕ್ಷ್ಮೀ, ಉಷಾ ನಾಗರಾಜ್, ಜಯಲಕ್ಷ್ಮೀ ಚಂದ್ರಹಾಸ, ಸ್ಮಿತಾ ನಂದೀಶ್, ಜಯಶ್ರೀ ಗಣೇಶ್, ವಿಜಯಲಕ್ಷ್ಮೀ ಪಂಡಿತ್, ತಾರಾ ಪ್ರಸಾದ್, ಮಂಜುಳಾ ಉಮೇಶ್, ಹೇಮಾ, ಆಶಾಲತಾ, ದೇವಿ ನಾಗರತ್ನಮ್ಮ, ಕುಮುದಾ ಸುಶೀಲ್, ರಮಾಶಾಸ್ತ್ರಿ, ಸುಮಾ ಮಂಜುನಾಥ್, ರುಕ್ಮಿಣಿ ಆನಂದ್, ಸ್ತ್ರೀ ಸಂವೇದನೆಯ ಕುರಿತಾಗಿ ಕವನಗಳನ್ನು ವಾಚಿಸಿದರು.

ಕಾರ್ಯಕ್ರಮದಲ್ಲಿ ಅಧ್ಯಕ್ಷೆ ಕಾತ್ಯಾಯಿನಿ.ಸಿ.ಎಸ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಕಾರ್ಯದರ್ಶಿ ಮಾಲಾ ರಾಮಚಂದ್ರ ಎಲ್ಲರನ್ನೂ ಸ್ವಾಗತಿಸಿ, ಶ್ರೀರಂಜಿನಿ ದತ್ತಾತ್ರಿ ಕಾರ್ಯಕ್ರಮ ನಿರೂಪಿಸಿ, ರುಕ್ಮಿಣಿ ಆನಂದ್ ವಂದಿಸಿದರು.

ನೋನಿ ಗ್ರೋಯರ್ಸ್ ಸಂಘ ರದ್ದತಿಗೆ ಕ್ರಮ, ಆಕ್ಷೇಪಣೆಗಳಿಗೆ ಆಹ್ವಾನ

0

Noni Growers Association ಕರ್ನಾಟಕ ಸಂಘಗಳ ನೋಂದಣಿ ಕಾಯ್ದೆ 1960ರಡಿ ನೋಂದಣಿಯಾಗಿರುವ ಶಿವಮೊಗ್ಗ ನೋನಿ ಗ್ರೋವರ‍್ಸ್ ಅಸೋಸಿಯೇಷನ್, ಕೃಷಿ ಉತ್ಪನ್ನಗಳ ಪೂರೈಕೆಯ ಕೊರತೆಯಿಂದಾಗಿ ನಡೆಸಲು ವಿಫಲವಾಗಿರುವ ಕಾರಣ ರದ್ದುಪಡಿಸಲು ಕ್ರಮ ಕೈಗೊಳ್ಳಲಾಗಿದೆ.
Noni Growers Association ಈ ಕುರಿತು ಸಂಬಂಧಪಟ್ಟವರ ಆಕ್ಷೇಪಣೆಗಳೇನಾದರೂ ಇದ್ದಲ್ಲಿ ಜಿಲ್ಲಾ ನೋಂದಣಾಧಿಕಾರಿಗಳು ಹಾಗೂ ಸಹಕಾರ ಸಂಘಗಳ ಉಪನಿಬಂಧಕರು, ಸಹಕಾರ ಭವನ, ಮೊದಲನೆ ಮಹಡಿ, ಡಿ.ಸಿ.ಕಾಂಪೌಂಡ್, ಶಿವಮೊಗ್ಗ ಇವರ ಕಚೇರಿಗೆ ಏಳು ದಿನಗಳೊಳಗಾಗಿ ಸಲ್ಲಿಸುವಂತೆ ಹಾಗೂ ತಪ್ಪಿದ್ದಲ್ಲಿ ಯಾವುದೇ ಆಕ್ಷೇಪಣೆಗಳು ಇಲ್ಲವೆಂದು ಪರಿಗಣಿಸಿ, ಸಂಘದ ನೋಂದಣಿ ರದ್ದುಪಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಸಂಘಗಳ ನೋಂದಣಾಧಿಕಾರಿಗಳು ತಿಳಿಸಿರುತ್ತಾರೆ.

Department of Soldiers Welfare and Rehabilitation ರಾಷ್ಟ್ರೀಯ ಸೈನಿಕ ಸ್ಮಾರಕದ ಸಹಾಯಕ ಪರಿಪಾಲಕ ನೇಮಕಾತಿಗಾಗಿ ಅರ್ಜಿ ಆಹ್ವಾನ

0

Department of Soldiers Welfare and Rehabilitation ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯು ಹೊರಗುತ್ತಿಗೆ ಮೂಲಕ ತಾತ್ಕಾಲಿಕವಾಗಿ ರಾಷ್ಟ್ರೀಯ ಸೈನಿಕ ಸ್ಮಾರಕದ ಸಹಾಯಕ ಮೇಲ್ವಿಚಾರಕ ಹುದ್ದೆಗಾಗಿ ಜೆ.ಸಿ.ಓ. ರ‍್ಯಾಂಕ್‌ನಿAದ ನಿವೃತ್ತರಾಗಿರುವ ಕನ್ನಡವನ್ನು ಸರಳವಾಗಿ ಮಾತನಾಡಲು, ಓದಲು, ಬರೆಯಲು ಹಾಗೂ ಗಣಕ ಯಂತ್ರದಲ್ಲಿ ಕನ್ನಡ ಮತ್ತು ಆಂಗ್ಲ ಭಾಷೆಗಳಲ್ಲಿ ಪತ್ರ ತಯಾರಿಸುವ ಕೌಶಲ್ಯವುಳ್ಳ 55 ವರ್ಷದೊಳಗಿನ ಮಾಜಿ ಸೈನಿಕರಿಂದ ಅರ್ಜಿ ಆಹ್ವಾನಿಸಿದೆ.
Department of Soldiers Welfare and Rehabilitation ಆಸಕ್ತರು ಅರ್ಜಿ ನಮೂನೆಯನ್ನು ಇಲಾಖೆಯ ವೆಬ್‌ಸೈಟ್ http://sainikwelfare.karnataka.gov.in ರಲ್ಲಿ ಪಡೆದು, ಭರ್ತಿ ಮಾಡಿದ ಅರ್ಜಿಯನ್ನು ಇ-ಮೇಲ್ dirdswrblr@gmail.com ರ ಮೂಲಕ ಅಥವಾ ಅಂಚೆ ಮೂಲಕ ಏ.10 ರೊಳಗಾಗಿ ಸಲ್ಲಿಸುವಂತೆ ಶಿವಮೊಗ್ಗ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಉಪನಿರ್ದೇಶಕ ಡಾ. ಸಿ.ಎ.ಹಿರೇಮಠರವರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ಹೆಚ್ಚಿನ ಮಾಹಿತಿಗಾಗಿ ದೂ.ಸಂ.: 080-25589459 ನ್ನು ಸಂಪರ್ಕಿಸುವುದು.