Tuesday, March 3, 2026
Tuesday, March 3, 2026
Home Blog Page 331

Ravi Telex ಪತ್ರಕರ್ತ‌ “ಟೆಲೆಕ್ಸ್ ರವಿ ” ಗೆ ಅಬ್ದುಲ್ಲ ಮಾದುಮೂಲೆ ದತ್ತಿ ಪ್ರಶಸ್ತಿ

0

Ravi Telex ಕಾಸರಗೋಡು ಜಿಲ್ಲಾ ಕನ್ನಡ ಪತ್ರಕರ್ತರ ಕ್ಷೇಮಾಭಿವೃದ್ದಿ ಸಂಘದ ಪ್ರಸಕ್ತ ಸಾಲಿನ ರಾಜ್ಯಮಟ್ಟದ “ ಹವ್ವಾ ಹಸನ್ ಫೌಂಡೇಶನ್ ಅಬ್ದುಲ್ಲ ಮಾದುಮೂಲೆ ದತ್ತಿ ಪ್ರಶಸ್ತಿ” ಗೆ ಶಿವಮೊಗ್ಗದ ಹಿರಿಯ ಪತ್ರಕರ್ತ, ಶಿವಮೊಗ್ಗ ಟೆಲೆಕ್ಸ್ ಕನ್ನಡ ದಿನಪತ್ರಿಕೆ ಸಂಪಾದಕರಾದ ಎನ್. ರವಿಕುಮಾರ್ ಅವರು ಆಯ್ಕೆಯಾಗಿದ್ದಾರೆ.
ಕರ್ನಾಟಕದ ಪತ್ರಿಕೋದ್ಯಮದಲ್ಲಿ ಎನ್ .ರವಿಕುಮಾರ್ ಅವರ ವೃತ್ತಿಪರತೆ, ಸಾಮಾಜಿಕ ಸೌಹಾರ್ದತೆ ಮತ್ತು ವೈಚಾರಿಕತೆಯ ಪ್ರತಿಪಾದನೆಯನ್ನು ಗುರುತಿಸಿ ಕಾಸರಗೋಡು ಜಿಲ್ಲಾ ಕನ್ನಡ ಪತ್ರಕರ್ತರ ಕ್ಷೇಮಾಭಿವೃದ್ದಿ ಸಂಘವು, ಈ ವರ್ಷದ “ ಹವ್ವಾ ಹಸನ್ ಫೌಂಡೇಶನ್ ಅಬ್ದುಲ್ಲ ಮಾದುಮೂಲೆ ದತ್ತಿ ಪ್ರಶಸ್ತಿ” ಗೆ ಎನ್. ರವಿಕುಮಾರ್ ಅವರನ್ನು ಆಯ್ಕೆ ಮಾಡಿದೆ.
ಪ್ರಶಸ್ತಿಯು ನಗದು, ಮತ್ತು ಪ್ರಶಸ್ತಿ ಫಲಕ , ಸ್ಮರಣಿಕೆಯನ್ನು ಒಳಗೊಂಡಿದ್ದು ಮೇ.೩ ರಂದು ಸ್ವಾಗತ ಸಮಿತಿ ಅಧ್ಯಕ್ಷರಾದ ಕೆ.ಕೆ ಶೆಟ್ಟಿಕುತ್ತಿಕಾರ್ ಅವರ ಅಧ್ಯಕ್ಷತೆಯಲ್ಲಿ ಕಾಸರಗೋಡಿನ ಸೀತಾಂಗೋಳಿ ಎಲೈನ್ಸ್ ಸಭಾಂಗಣದಲ್ಲಿ ನಡೆಯಲಿರುವ ಸಮಾರಂಭದಲ್ಲಿ ಗಡಿನಾಡು ಪ್ರದೇಶಾಭಿವೃದ್ದಿ ಪ್ರಾಧಿಕಾರ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಸಹಯೋಗದಲ್ಲಿ ಪ್ರಶಸ್ತಿಪ್ರದಾನ ಮಾಡಲಾಗುವುದು.
Ravi Telex ಕರ್ನಾಟಕ ವಿಧಾನಪರಿಷತ್ತಿನ ಸಭಾಪತಿ ಬಸವರಾಜಹೊರಟ್ಟಿ, ಕೃಷಿ ಸಚಿವ ಚೆಲುವರಾಯಸ್ವಾಮಿ, ಗಡಿ ಪ್ರದೇಶಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷರಾದ ಸೋಮಣ್ಣ ಬೇವಿನಮರದ, ಕರ್ನಾಟಕ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾದ ಕೆ.ವಿ ಪ್ರಭಾಕರ್ , ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಶಿವಾನಂದ ತಗಡೂರು ಅವರುಗಳು ಭಾಗವಹಿಸಲಲಿದ್ದಾರೆ ಎಂದು ಕಾಸರಗೋಡು ಕನ್ನಡ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷರಾದ ರವಿ ನಾಯ್ಕಾಪು ಅವರು ತಿಳಿಸಿದ್ದಾರೆ.
ಎರಡು ದಶಕಗಳಿಂದ ಕಾಸರಗೋಡು ಜಿಲ್ಲಾಕನ್ನಡ ಪತ್ರಕರ್ತರ ಕ್ಷೇಮಾಭಿವೃದ್ದಿ ಸಂಘವು ಕೇರಳದಲ್ಲಿ ಜನಮನ್ನಣೆಗೆ ಪಾತ್ರವಾಗಿದ್ದು, ಇಲ್ಲಿನ ಕನ್ನಡ ಭಾಷೆ, ಸಂಸ್ಕೃತಿ, ಕಲೆಗಳ ಉಳಿವಿಗಾಗಿ ಮತ್ತು ಕನ್ನಡ –ಮಲೆಯಾಳಂ ಪತ್ರಕರ್ತರ ನಡುವಿನ ಸ್ನೇಹಸೇತುವಾಗಿ ಕೆಲಸ ಮಾಡುತ್ತಿದೆ.

Inner Wheel East Shimoga ಆಶ್ರಮವಾಸಿಗಳ ಸೇವೆ ,ದೇವರ ಸೇವೆಗೆ ಸಮ- ವಾಗ್ದೇವಿ ಬಸವರಾಜ್

0

Inner Wheel East Shimoga ಆಶ್ರಮವಾಸಿಗಳ ಸೇವೆ ದೇವರ ಸೇವೆಗೆ ಸಮಾನ. ಇಂತಹ ಪವಿತ್ರ ಸೇವೆ ಮಾಡುತ್ತಿರುವ ಗುಡ್ ಲಕ್ ಆರೈಕೆ ಕೇಂದ್ರದ ಕಾರ್ಯ ಶ್ಲಾಘನೀಯ ಎಂದು ಇನ್ನರ್ ವೀಲ್ ಪೂರ್ವ ಶಿವಮೊಗ್ಗದ ಅಧ್ಯಕ್ಷರಾದ ವಾಗ್ದೇವಿ ಬಸವರಾಜ್ ಅಭಿಮತ ವ್ಯಕ್ತಪಡಿಸಿದರು.

ನಗರದ ಇನ್ನರ್ ವೀಲ್ ಶಿವಮೊಗ್ಗ ಪೂರ್ವ ಸಂಸ್ಥೆ ವತಿಯಿಂದ ಗುಡ್ ಲಕ್ ಆರೈಕೆ ಕೇಂದ್ರದಲ್ಲಿನ ವೃದ್ಧರಿಗೆ ಅನಾಥರಿಗೆ ಮಲಗಲು ಮಂಚಗಳು ಹಾಗೂ ಕೇಂದ್ರಕ್ಕೆ ಬೇಕಾದ ಅಗತ್ಯ ವಸ್ತುಗಳನ್ನು ವಿತರಿಸಿ ಮಾತನಾಡಿದ ಅವರು, ಆಶ್ರಮವಾಸಿಗಳ ಸೇವೆ ದೇವರ ಸೇವೆಗೆ ಸಮಾನ. ಇಂದು ನಮ್ಮ ನಮ್ಮ ಮನೆಗಳಲ್ಲಿ ತಂದೆ ತಾಯಿಯರನ್ನು , ಹಿರಿಯರನ್ನು ನೋಡಿಕೊಳ್ಳಲು ಹಿಂದೇಟು ಹಾಕುವ ಕಾಲದಲ್ಲಿ ಗುಡ್ ಲಕ್ ಆರೈಕೆ ಕೇಂದ್ರ ಬಹಳ ವರ್ಷಗಳಿಂದ ಮಾನಸಿಕ ಅಸ್ವಸ್ಥರನ್ನು ಹಾಗೂ ವೃದ್ಧರನ್ನು ಆರೈಕೆ ಮಾಡುತ್ತಿರುವುದು ನಿಜವಾದ ಮಾನವೀಯ ಮನುಕುಲದ ಸ್ಫೂರ್ತಿಯಾಗಿದೆ ಎಂದು ನುಡಿದರು.

ಗುಡ್ ಲಕ್ ಆರೈಕೆ ಕೇಂದ್ರದ ಅಧ್ಯಕ್ಷರಾದ ಯು.ರವೀಂದ್ರನಾಥ ಐತಾಳ್ ಮಾತನಾಡಿ, ಸರ್ಕಾರದ ಯಾವುದೇ ಅನುದಾನವಿಲ್ಲದೆ ನಡೆಸುತ್ತಿರುವ ಸಂಸ್ಥೆ ನಮ್ಮದು. ದಾನಿಗಳ, ಸಂಘ ಸಂಸ್ಥೆಗಳ ನೆರವಿನಿಂದ ಹಾಗೂ ಅನ್ನಪೂರ್ಣೇಶ್ವರಿ ನಿತ್ಯ ಪ್ರಸಾದ ಯೋಜನೆಯಿಂದ ನಮ್ಮ ಆರೈಕೆ ಕೇಂದ್ರ ಇವತ್ತಿಗೂ ಯಾವುದೇ ತೊಂದರೆ ಇಲ್ಲದ ಹಾಗೆ ನಡೆಯುತ್ತಿದೆ ಎಂದು ನುಡಿದರು.

ಇದೇ ಸಂದರ್ಭದಲ್ಲಿ ಮಂಚದ ದಾನಿಗಳಾದ ನಿರ್ಮಲ ಮಹೇಂದ್ರರವರಿಗೆ. ಮತ್ತು ದಾನಿಗಳಿಗೆ ಇನ್ನರ್ ವೀಲ್ ಸಂಸ್ಥೆ ವತಿಯಿಂದ ಗೌರವಿಸಲಾಯಿತು.

ಗುಡ್ ಲಕ್ ಆರೈಕೆ ಕೇಂದ್ರದ ಕಾರ್ಯದರ್ಶಿ ಪಂಚಾಕ್ಷರಯ್ಯ ಹಿರೇಮಠ ಮಾತನಾಡಿ, ಗುಡ್ ಲಕ್ ಆರೈಕೆ ಕೇಂದ್ರದ ನಡೆದು ಬಂದ ದಾರಿಯನ್ನು ಸವಿಸ್ತಾರವಾಗಿ ವಿವರಿಸಿ ಹೇಳಿದರು.

Inner Wheel East Shimoga ಗುಡ್ ಲಕ್ ಆರೈಕೆ ಕೇಂದ್ರದ ನಿರ್ದೇಶಕರಾದ ಜಿ.ವಿಜಯ್ ಕುಮಾರ್ ಮಾತನಾಡಿ, ತಮ್ಮ ಹುಟ್ಟುಹಬ್ಬ, ವಿವಾಹ ವಾರ್ಷಿಕೋತ್ಸವ ಹಾಗೂ ಹಿರಿಯರ ನೆನಪಿನ ಕಾರ್ಯಕ್ರಮಗಳನ್ನು ಇಂತಹ ಸಂಸ್ಥೆಗಳಲ್ಲಿ ಹಮ್ಮಿಕೊಂಡರೆ ಆ ಕಾರ್ಯಕ್ರಮಗಳು ಸಾರ್ಥಕತೆಯ ಹೊಂದುತ್ತವೆ ಎಂದ ಅವರು, ಇನ್ನರ್ ವೀಲ್ ಸಂಸ್ಥೆಯ ಸೇವೆಯನ್ನು ಸ್ಮರಿಸಿದರು.ಕಾರ್ಯಕ್ರಮದಲ್ಲಿ ಇನ್ನರ್ ವೀಲ್ ಶಿವಮೊಗ್ಗ ಪೂರ್ವ ಸಂಸ್ಥೆಯ ಮಾಜಿ ಅಧ್ಯಕ್ಷರಾದ ಬಿಂದು ವಿಜಯ್ ಕುಮಾರ್, ವಾಣಿ ಪ್ರವೀಣ್, ಕಾರ್ಯದರ್ಶಿ ಲತಾ ಸೋಮಣ್ಣ, ವಿಜಯ ರಾಯ್ಕರ ಸೇರಿದಂತೆ ಇನ್ನರ್ ವೀಲ್ ಸಂಸ್ಥೆಯ ಸಹೋದರಿಯರು ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.

Klive Special Article ಸಾಕುಪ್ರಾಣಿ ಮತ್ತು ಸಾಕಿದ ಕರುಳುಗಳ ತಲ್ಲಣ ಬಿಂಬಿಸಿದ “ನಾಯಿ ಕಳೆದಿದೆ”

0

Klive Special Article ” ನಾಯಿ ಕಳೆದಿದೆ” ಎಂಬ ನಾಟಕದ ಹೆಸರೇ ಹೇಳುತ್ತದೆ ಇದು ಪ್ರಸ್ತುತ ದಿನಮಾನದ ಕಥಾಹಂದರ ಹೊಂದಿರುವಂತದ್ದು ಎಂದು. ಒಂದು ನಾಟಕ ಮನಸ್ಸಿಗೆ ನಾಟುವುದು ಕಥೆ ನಮ್ಮ ನಡುವೆ ನಡೆಯುತ್ತಿರುವುದೇನೋ ಎಂದು ಅನಿಸಿದಾಗ. ಅದರಂತೆ ಇದು ಕೂಡ ನೋಡಿದಾಗ ನಮ್ಮ ನಡುವೆಯೇ ನಡೆಯುತ್ತಿರುವ ಸನ್ನಿವೇಶಗಳೋ ಎಂಬಂತೆ ಖಂಡಿತವಾಗಿಯೂ ಭಾಸವಾಗುತ್ತದೆ. ಹಾಗಾಗಿ ಅದು ನೋಡುಗನನ್ನು ಸೆಳೆದುಬಿಡುತ್ತದೆ. ಅಜೇಯ ಸಂಸ್ಕೃತಿ ಬಳಗ ಶಿವಮೊಗ್ಗ ಆಯೋಜಿಸಿದ ಲಾವಣ್ಯ ಬೈಂದೂರು, ಕಲಾ ತಂಡ ಅಭಿನಯಿಸಿದ ‘ನಾಯಿಕಳೆದಿದೆ’ ಎಂಬ ನಾಟಕ ಇತ್ತೀಚೆಗಷ್ಟೇ ಕುವೆಂಪು ರಂಗಮಂದಿರದಲ್ಲಿ ಪ್ರದರ್ಶಿತಗೊಂಡಿತು.

ಒಂದು ಸೊಗಸಾದ ಜಿ. ಎಸ್. ಎಸ್ ರವರ ಭಾವಗೀತೆಯಾದ ‘ಎಲ್ಲೋ ಹುಡುಕಿದೆ ಇಲ್ಲದ ದೇವರ ಕಲ್ಲು ಮಣ್ಣುಗಳ ಗುಡಿಯೊಳಗೆ…’ಎಂಬುದರಿಂದ ಆರಂಭವಾಗುವ ನಾಟಕ ವೃದ್ಧ ದಂಪತಿಗಳು, ಅವರಿಗಿರೋ ಒಬ್ಬನೇ ಮಗ, ವಾರಾಂತ್ಯಕ್ಕೆ ಅವನು ಅಪ್ಪ ಅಮ್ಮನನ್ನು ನೋಡಲು ತನ್ನ ಪತ್ನಿ ಹಾಗೂ ಪತ್ನಿಯ ಪ್ರೀತಿಯ ನಾಯಿಯೊಂದಿಗೆ ಬರುವುದು, ಅದನ್ನೇ ಹಬ್ಬವೆನ್ನುವ ರೀತಿಯಲ್ಲಿ ಸಂಭ್ರಮಿಸುವ ತಾಯಿ. ಮಗ-ಸೊಸೆ ಬೇಕು ಆದರೆ, ಅವರು ತರುವ ನಾಯಿ ತನ್ನ ಜಾತಿಯ ಮಡಿಯ ಕಾರಣಕ್ಕಾಗಿ ಅದನ್ನು ವರ್ಜ್ಯ ಎನ್ನುವುದು, ನಂತರದ ಮಗ ಸೊಸೆಯರ ವಿದೇಶ ಪಯಣ,ಅವರನ್ನು ಒಲ್ಲದ ಮನಸ್ಸಿನಿಂದ ಕಳುಹಿಸಿಕೊಟ್ಟರೂ ನಾಯಿಯನ್ನು ತಮ್ಮ ಮನೆಯಲ್ಲಿ ಇಟ್ಟು ಕೊಳ್ಳಬೇಕಾಗಿ ಬಂದಾಗ ನಡೆಯುವ ಕಥಾವಸ್ತುವನ್ನು ಆಧರಿಸಿರುವ ನಾಟಕ ಇದಾಗಿದೆ.

ಈ ನಾಟಕದಲ್ಲಿ ಗಮನಿಸಬೇಕಾದ ಅಂಶಗಳೆಂದರೆ ಸಂಬಂಧಗಳ ಸೂಕ್ಷ್ಮತೆ, ಮಾತಾ ಪಿತೃಗಳ ಪ್ರೇಮ, ಇತ್ತೀಚಿನ ದಿನಗಳಲ್ಲಿ ಮನೆಯಲ್ಲಿನ ಮಕ್ಕಳಿಗಿಂತ ಸಾಕುಪ್ರಾಣಿಗಳ ಮೇಲಿನ ಅತಿಯಾಗಿ ಹಚ್ಚಿಕೊಳ್ಳುವ ಸಂಸ್ಕೃತಿ, ಮನೆಗೆ ಮನೆ ಮಗನಿಗಿಂತ ರೇಷನ್ ಹಾಕುವವನೇ ಹೆಚ್ಚಿನ ಸ್ಥಾನ ಸಂಪಾದಿಸುವುದು, ನಡುನಡುವೆ ಬೊಗಳುವ ನಾಯಿಯಂತೆ ಬಂದು ಹೋಗುವ ಮುನಿ ವೆಂಕಟಮ್ಮ ಅಲಿಯಾಸ್ ನಾಗವೇಣಿ, ಎಲ್ಲವೂ ಸಹ ಪ್ರಸ್ತುತವನ್ನು ಚೆನ್ನಾಗಿ ಕಟ್ಟಿಕೊಟ್ಟಿದೆ. ಇದರ ನಡುವೆಯೂ ಮನೆಯಲ್ಲಿ ಮಗ ಸೊಸೆ ಪ್ರೀತಿಸುವ ನಾಯಿ (ರಾಗಾ) ಮಕ್ಕಳ ಬದಲಿಗೆ ಬಂದು ಉಳಿದು ಆದ ರಗಳೆಗಳ ನಡುವೆ ಅದು ಇಲ್ಲವಾದಾಗ ಅದರ ಮೇಲಿನ ಪ್ರೇಮ ವ್ಯಕ್ತವಾಗುವ ರೀತಿ ಬಹಳ ಚೆನ್ನಾಗಿ ಮೂಡಿ ಬಂದಿದೆ.

ಇಡೀ ನಾಟಕವನ್ನು ಮನಮುಟ್ಟುವಂತೆ ಕೊಂಡೊಯ್ದದ್ದು ಒಂದು ಮುಗ್ಧ ವೃದ್ಧ ದಂಪತಿಗಳು. ಅವರಿಬ್ಬರೂ ಸಹ ತಮ್ಮ ಪಾತ್ರಕ್ಕೆ ಶೇಕಡಾ ನೂರಕ್ಕೆ ನೂರರಷ್ಟು ನ್ಯಾಯ ಒದಗಿಸಿದ್ದಾರೆ. ಕೆಲವು ದೃಶ್ಯಗಳಂತೂ ನೋಡುಗರನ್ನು ಭಾವುಕರನ್ನಾಗಿಸಿದ ಅಭಿನಯ ಅವರದಾಗಿತ್ತು. ಇದರ ಯಶಸ್ಸಿಗೆ ನಿಧಿ ಹಾಗೂ ಸುಬ್ರಹ್ಮಣ್ಯ ಉಪ್ಪುಂದ ಈ ಇಬ್ಬರು ಪಾತ್ರಧಾರಿಗಳನ್ನು ಮೆಚ್ಚಲೇಬೇಕು. ಇನ್ನು ಸಭ್ಯ ಗಯ್ಯಾಳಿ ಸೊಸೆ, ಅವನ ತಾಳಕ್ಕೆ ಕುಣಿಯುವ ಮಗ ಕೂಡ ತಮ್ಮ ಪಾತ್ರಕ್ಕೆ ಬೇಕಾದ ಜೀವ ತುಂಬಿದ್ದಾರೆ. ಮಧ್ಯದಲ್ಲಿ ಬಂದು ಹೋಗುವ ಭಾವನಾಗಿ ಗಣೇಶ್ ಕಾರಂತ್, ಮಗನಾಗಿ ಗುರು ಕೂಡ ಅವರ ಪಾತ್ರ ಅಚ್ಚುಕಟ್ಟಾಗಿ ನಿರ್ವಹಿಸಿದವರೇ ಆಗಿದ್ದಾರೆ. ರೇಷನ್ ಅಂಗಡಿ ಅಶೋಕ, ಆತ ಮನೆ ಮಗನಂತೆ ಜವಾಬ್ದಾರಿ ನಿರ್ವಹಿಸಿದ ಸಜ್ಜನ ವ್ಯಕ್ತಿತ್ದೊಂದಿಗೆ ಮನಸ್ಸಿನಲ್ಲಿ ಉಳಿಯುವಂತೆ ಆದರೆ, ಬಿಗ್ ಬಾಸ್ ಸ್ಪರ್ಧಿಯಾಗಿ ತಾನು ಮಾಡಿದ ರಾಜಕೀಯದಿಂದಲೇ ಗೆದ್ದು ಬಂದು ಸೆಲೆಬ್ರೇಟಯಂತಾದ ಮುನಿ ವೆಂಕಟಮ್ಮ (ನಾಗವೇಣಿ) ಹಾಗೂ ಆಕೆಯ ಅಸಿಸ್ಟೆಂಟ್ ಕೂಡ ತನ್ನ ಪಾತ್ರಕ್ಕೆ ತಕ್ಕಂತೆ ನಟಿಸಿದ್ದಾರೆ. ನಾಗವೇಣಿ ತಾನೇ ಶ್ರೇಷ್ಠ ಎನಿಸಿಕೊಂಡು, ಸಮಾಜ ಸೇವೆಯ ಹೆಸರಲ್ಲಿ ಹಣ ಸುಲಿಗೆ ಮಾಡುವ ಕಾಯಕ. ಅದರಿಂದ ಮುಗ್ದ ದಂಪತಿಗಳ ಮೇಲಾದ ಪರಿಣಾಮ ಕಂಡಾಗ ಪ್ರಸ್ತುತ ದಿನಗಳಲ್ಲಿ ಅಸಹಾಯಕರ ಮೇಲೆಯೇ ಇಂಥವರ ದಬ್ಬಾಳಿಕೆ ಹೆಚ್ಚು ಎನ್ನುವುದನ್ನು ಪ್ರಾತಿನಿಧಿಕವಾಗಿ ಅಭಿನಯಿಸಿ ತೋರಿಸಿದ್ದಾಳೆ.

Klive Special Article ಮುಗ್ಧರ ಮೇಲೆ ಮಾಡುವ ದಬ್ಬಾಳಿಕೆ ಒಂದು ಕಡೆಯಾದರೆ, ಅದಕ್ಕೆ ಎದುರಾಗಿ ಅವರಿಗೆ ಸಹಕರಿಸಲು ಬರುವ ಪಾತ್ರ ಮತ್ತೊಂದೆಡೆ. ಈ ಸನ್ನಿವೇಶ ನೋಡುವನಿಗೆ ಆಪ್ತವಾಗಿತ್ತು. ಮಗ ಸೊಸೆಯರು ವಿದೇಶದಿಂದ ಬಂದಾಗ ಅವರ ಆಡುವ ಮಾತುಗಳು, ಅವರು ತಂದೆ ತಾಯಿಯರನ್ನು ನೋಯಿಸಿ ನಾಯಿಯನ್ನೇ ಆದರಿಸುವುದು ಇದೆಯಲ್ಲ ಆ ಸನ್ನಿವೇಶವು ಇಂದಿನ ದಿನಗಳಲ್ಲಿ ನಡೆಯುವುದನ್ನು ಸಾಂಕೇತಿಕವಾಗಿ ತೋರಿಸಿದಂತಿತ್ತು.

ಒಂದು ಅಂಕದಿಂದ ಮತ್ತೊಂದು ಅಂಕಕ್ಕೆ ಬರುವಾಗ ನಡು ನಡುವೆ ದೃಶ್ಯಕ್ಕೆ ತಕ್ಕಂತೆ ಬರುವ ಭಾವಗೀತೆಗಳನ್ನು ಬಹು ಜತನದಿಂದ ಆಯ್ಕೆ ಮಾಡಿ ಬಳಸಿಕೊಳ್ಳಲಾಗಿದೆ. ಎಲ್ಲವೂ ಚಂದ ಅನಿಸುವಾಗ ಸ್ವಲ್ಪ ಜಾತಿಯ ಕುರಿತು ಮಾತನಾಡಿದ್ದು ಹಾಗೂ ಡಬಲ್ ಮೀನಿಂಗ್ ಹೊರತುಪಡಿಸಿದರೆ ರಾಜೇಂದ್ರ ಕಾರಂತರ ಈ ನಾಟಕ ಅದ್ಭುತ ಪ್ರದರ್ಶನವಾಗಿಯೇ ಕಂಡುಬಂದಿತು. ಬೆಳಕಿನ ನಿರ್ವಹಣೆ, ರಂಗಸಜ್ಜಕೆ, ಕನಸಿನಲ್ಲಿ ಬಂದು ಕಾಡುವ ನಾಯಿ, ಅತ್ಯುತ್ತಮ ಪ್ರಸಾದನ ಈ ಎಲ್ಲವೂ ನಾಟಕದ ಅಂದವನ್ನು ಮತ್ತಷ್ಟು ಹೆಚ್ಚಿಸಿತು.

ಸಾಮಾಜಿಕ ನಾಟಕಗಳು ನಮ್ಮನ್ನು ನಾವಿರುವ ರೀತಿಯನ್ನು ಪ್ರಶ್ನಿಸುವಂತೆಯೇ ಇದ್ದು, ವೃದ್ಧಾಪ್ಯದ ದಿನಗಳನ್ನು ನಮ್ಮ ಹಿರಿಯರಿಗೆ ನಾವು ಯಾವ ರೀತಿಯಲ್ಲಿ ಇರುವಂತೆ ನೋಡಿಕೊಳ್ಳಬೇಕು ಎಂಬುದು ಸಹ ನಮಗೆಲ್ಲ ಪಾಠವಾಗುವಂತೆ ಈ ನಾಟಕ ಇತ್ತು. ಮತ್ತೊಮ್ಮೆ ಹೇಳಬೇಕೆಂದರೆ ಎಲ್ಲರ ಅಭಿನಯವೂ ಮನಮುಟ್ಟುವಂತಿತ್ತು. ಈ ನಾಟಕ ಪ್ರದರ್ಶನ ಆಯೋಜಕರ ಅತ್ಯುತ್ತಮ ಆಯ್ಕೆ ಎನ್ನಬಹುದು.

ಡಾ. ಮೈತ್ರೇಯಿ ಆದಿತ್ಯ ಪ್ರಸಾದ್
ಸಂಸ್ಕೃತ ಉಪನ್ಯಾಸಕರು
ಪೇಸ್ ಕಾಲೇಜ್ ಶಿವಮೊಗ್ಗ
ಚಿತ್ರಕೃಪೆ: ಆದಿತ್ಯಪ್ರಸಾದ್ ಎಂ.

JCI Shivamogga Sahyadri ಉತ್ತಮ ಮಾತಿನ ಕೌಶಲದಿಂದ ಎಲ್ಲರ ಮನಸ್ಸು ಗೆಲ್ಲಬಹುದು- ಸಾಧ್ವಿ ಸಿ. ಕಾಂತ್

0

JCI Shivamogga Sahyadri ಪರಿಣಾಮಕಾರಿ ಭಾಷಣೆ ಕಲೆಯು ಆತ್ಮವಿಶ್ವಾಸ ವೃದ್ಧಿಸುವ ಜತೆಯಲ್ಲಿ ಉತ್ತಮ ವ್ಯಕ್ತಿತ್ವ ನಿರ್ಮಿಸಿಕೊಳ್ಳುವಲ್ಲಿ ಸಹಕಾರಿಯಾಗುತ್ತದೆ ಎಂದು ಬೌದ್ಧಿಕ ಆಸ್ತಿ ಹಕ್ಕುಗಳ ವಕೀಲೆ ಸಾಧ್ವಿ ಸಿ.ಕಾಂತ್ ಹೇಳಿದರು.

ಜೆಸಿಐ ಶಿವಮೊಗ್ಗ ಸಹ್ಯಾದ್ರಿ ಮತ್ತು ಜೆಸಿಐ ಶಿವಮೊಗ್ಗ ಕಾಮರ್ಸ್ ವತಿಯಿಂದ ಸಾನ್ವಿ ರೆಸಾರ್ಟ್ ನಲ್ಲಿ ಆಯೋಜಿಸಿದ್ದ ಪರಿಣಾಮಕಾರಿ ಭಾಷಣ ಕಲೆ ಹಾಗೂ ವ್ಯಕ್ತಿತ್ವ ನಿರ್ಮಾಣ ತರಬೇತಿ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿ, ಉತ್ತಮ ಮಾತಿನ ಕೌಶಲದಿಂದ ಎಲ್ಲರ ಮನಸ್ಸನ್ನು ಗೆಲ್ಲುವುದರ ಜತೆಯಲ್ಲಿ ಅನೇಕ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಸಾಧ್ಯವಿದೆ ಎಂದು ತಿಳಿಸಿದರು.

ಪ್ರತಿಯೊಬ್ಬರೂ ಜೀವನದಲ್ಲಿ ಗುರಿಯ ಸ್ಪಷ್ಟತೆ ಹೊಂದಿರಬೇಕು. ಸಂವಹನ ಕೌಶಲ್ಯ ಹಾಗೂ ಆತ್ಮವಿಶ್ವಾಸ ಹೊಂದುವುದರಿಂದ ಗುರಿ ಸಾಧಿಸಲು ಸಾಧ್ಯವಿದೆ. ನಿರಂತರವಾಗಿ ಪರಿಶ್ರಮ ವಹಿಸಿ ಮುನ್ನಡೆಬೇಕು. ಜೆಸಿಐ ಆಯೋಜಿಸುವ ಇಂತಹ ಶಿಬಿರಗಳಲ್ಲಿ ಯುವಜನರು ಹೆಚ್ಚು ಪಾಲ್ಗೊಳ್ಳಬೇಕು ಎಂದು ಸಲಹೆ ನೀಡಿದರು.

ಅಂತರಾಷ್ಟ್ರೀಯ ತರಬೇತುದಾರ ಉಡುಪಿಯ ವೇಣುಗೋಪಾಲ್ ಭಾಗವಹಿಸಿದ ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರ, ಪಾರಿತೋಷಕ ನೀಡಿ ಗೌರವಿಸಿದರು.
ವಲಯ ತರಬೇತುದಾರ ಚಂದ್ರಶೇಖರ್ ಮಾತನಾಡಿ ಕಾರ್ಯಕ್ರಮ ನಡೆಸಲು ಪೂರ್ವತಯಾರಿ, ಉದ್ಯೋಗ ಅವಕಾಶ ಸದುಪಯೋಗ ಪಡಿಸಿಕೊಳ್ಳುವ ಬಗ್ಗೆ ಹೆಚ್ಚು ತಿಳಿದುಕೊಳ್ಳಬೇಕು ಎಂದು ತಿಳಿಸಿದರು.

ಜೆಸಿಐ ಶಿವಮೊಗ್ಗ ಕಾಮರ್ಸ್ ಅಧ್ಯಕ್ಷೆ ನಿವೇದಿತಾ ವಿಕಾಸ್ ಮಾತನಾಡಿ, ಎರಡು ದಿನಗಳ ಶಿಬಿರದಲ್ಲಿ ಸಾಕಷ್ಟು ಬದಲಾವಣೆ ಆಗಿದ್ದು, ತರಬೇತಿ ಶಿಬಿರ ಯಶಸ್ವಿಯಾಗಿದೆ. ಮುಂದಿನ ದಿನಗಳಲ್ಲಿ ಹೆಚ್ಚು ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು ಎಂದು ತಿಳಿಸಿದರು.

JCI Shivamogga Sahyadri ಜೆಸಿಐ ಶಿವಮೊಗ್ಗ ಸಹ್ಯಾದ್ರಿ ಅಧ್ಯಕ್ಷ ಜಿ.ಗಣೇಶ್ ಎಲ್ಲ ತರಬೇತುದಾರರಿಗೆ ಸನ್ಮಾನಿಸಿ ಮಾತನಾಡಿದರು. ಜೆಸಿಐ ಪ್ರಮುಖರಾದ ಶೇಷಗಿರಿ, ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಉಪಾಧ್ಯಕ್ಷ ಜಿ.ವಿಜಯಕುಮಾರ್, ಪ್ರಮೋದ್ ಉಡುಪ, ಶಿಬಿರಾರ್ಥಿಗಳು ಭಾಗವಹಿಸಿದ್ದರು.

Vidyabhinava Vidyaranya Bharati Swami ಎಲ್ಲಾ ಜಾತಿಗೂ ಅದರದೇ ಆದ ವೈಶಿಷ್ಟ್ಯ- ಸಂಸ್ಕೃತಿ ಸಂಸ್ಕಾರ ಇರುತ್ತದೆ- ಕೂಡಲಿ ಶ್ರೀ ವಿದ್ಯಾಭಿನವ ವಿದ್ಯಾರಣ್ಯ ಭಾರತಿಶ್ರೀ

0

Vidyabhinava Vidyaranya Bharati Swami ಇತ್ತೀಚೆಗೆ ರಾಜ್ಯದ ವಿವಿಧ ಸಿಇಟಿ ಪರೀಕ್ಷಾ ಕೇಂದ್ರಗಳಲ್ಲಿ ಬ್ರಾಹ್ಮಣ ವಿದ್ಯಾರ್ಥಿಗಳ ಜನಿವಾರ ಕತ್ತರಿಸಿರುವ ಪ್ರಕರಣಗಳನ್ನು ಶ್ರೀಮದ್ ಜಗದ್ಗುರು ಶ್ರೀ ಕೂಡಲಿ ಶೃಂಗೇರಿ ಶಂಕರಾಚಾರ್ಯ ಮಹಾಸಂಸ್ಥಾನಮ್ ದಕ್ಷಿಣಾಮ್ನಾಯ ಶ್ರೀ ಶಾರದಾ ಪೀಠಮ್‍ನ ಪೀಠಾಧಿಪತಿ ಶ್ರೀ ವಿದ್ಯಾಭಿನವ ವಿದ್ಯಾರಣ್ಯ ಭಾರತಿ ಸ್ವಾಮಿಗಳು ಖಂಡಿಸಿದ್ದು, ಈ ಘಟನೆಗಳು ತಮಗೆ ತೀವ್ರ ಆಘಾತವನ್ನುಂಟು ಮಾಡಿದೆ ಎಂದು ತಿಳಿಸಿದ್ದಾರೆ.

ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು, ಭಾರತ ಹಲವು ಭಿನ್ನ ಭಿನ್ನ ಸಂಸ್ಕೃತಿಗಳನ್ನು ಭಾವೈಕ್ಯದಿಂದ ಒಗ್ಗೂಡಿಸಿಕೊಂಡು ಬಂದಿರುವ ರಾಷ್ಟ್ರ. ಆದರೆ, ಇತ್ತೀಚಿನ ದಿನಗಳಲ್ಲಿ ರಾಜಕೀಯ ಲಾಭಕ್ಕಾಗಿ ಜಾತಿ ಮತ್ತು ಕೋಮು ಪ್ರಚೋದನೆ ಮಾಡುತ್ತಾ ವಿದ್ಯಾರ್ಥಿಗಳ ಬದುಕನ್ನು ಹಾಳು ಮಾಡುವ ಕೃತ್ಯಗಳು ನಡೆಯುತ್ತಿವೆ.

ಇಲ್ಲಿ ಎಲ್ಲ ಜಾತಿಗೂ ಅದರದೇ ಆದ ವೈಶಿಷ್ಟ್ಯ-ಸಂಸ್ಕೃತಿ, ಸಂಸ್ಕಾರ ಇರುತ್ತದೆ. ಜನಿವಾರ-ಶಿವದಾರಗಳು ಕೇವಲ ಜಾತಿಯ ಸಂಕೇತಗಳಲ್ಲ. ಅವರ ಇಡೀ ಬದುಕು. ಜಾತ್ಯತೀತತೆಯ ಹೆಸರಿನಲ್ಲಿ ಯಾವುದೇ ಜಾತಿ-ಧರ್ಮದ ಅವಹೇಳನ, ತಿರಸ್ಕಾರ ಸರಿಯಲ್ಲ ಎಂದು ಶ್ರೀಗಳು ತಿಳಿಸಿದ್ದಾರೆ.

ರಾಜ್ಯದಲ್ಲಿ ನಡೆದಿರುವ ಈ ಪ್ರಕರಣ ಕೇವಲ ಬ್ರಾಹ್ಮಣ ಸಮುದಾಯಕ್ಕೆ ಮಾತ್ರ ನೋವುಂಟು ಮಾಡಿಲ್ಲ. ಇಡೀ ಹಿಂದೂ ಸಮಾಜಕ್ಕೆ ನೋವುಂಟು ಮಾಡಿದೆ. ಈ ಪ್ರಕರಣವನ್ನು ರಾಜಕೀಯಕ್ಕೆ ಬಳಸಿಕೊಳ್ಳದೇ ಇಂತಹ ಕೃತ್ಯಗಳು ಮುಂದೆ ನಡೆಯದಂತೆ ಸರ್ಕಾರ ಎಚ್ಚರಿಕೆ ವಹಿಸಬೇಕು. ಘಟನೆಗೆ ಕಾರಣರಾದವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ಶ್ರೀ ವಿದ್ಯಾಭಿನವ ವಿದ್ಯಾರಣ್ಯ ಭಾರತಿ ಸ್ವಾಮಿಗಳು ಒತ್ತಾಯಿಸಿದ್ದಾರೆ.

Vidyabhinava Vidyaranya Bharati Swami ಶ್ರೀಮದ್ ಜಗದ್ಗುರು ಶಂಕರಾಚಾರ್ಯ ಶ್ರೀ ವಿದ್ಯಾಭಿನವ ವಿದ್ಯಾರಣ್ಯ ಭಾರತೀ ಸ್ವಾಮಿನಃ
ಪೀಠಾಧಿಪತಿಗಳು
ಶ್ರೀಮದ್ ಜಗದ್ಗುರು ಶ್ರೀ ಕೂಡಲಿ ಶೃಂಗೇರಿ
ಶಂಕರಾಚಾರ್ಯ ಮಹಾಸಂಸ್ಥಾನಮ್, ಕೂಡಲಿ, ಶಿವಮೊಗ್ಗ.

Klive Special Article ಪ್ರೇಕ್ಷಕರ ಮನಗೆದ್ದ “ಪ್ರಣಯಗಾಥೆ”

0

(ಮೃಚ್ಚಕಟಿಕ ನಾಟಕ ರಂಗ ಸಮೀಕ್ಷೆ)

Klive Special Article ಶೂದ್ರಕ ಮಹಾಕವಿಯ “ಮೃಚ್ಛಕಟಿಕ”
ಪ್ರಾಚೀನ ಕಾಲವೊಂದರ ಸಾಮಾಜಿಕ ಚಿತ್ರಣವನ್ನ ಕಟ್ಟಿಕೊಡು‌ವ‌‌ ವಸ್ತುವುಳ್ಳ
ನಾಟಕ.

ಮನುಷ್ಯ ತಾನೆಸಗುವ ಒಳ್ಳೆಯ ಕೃತ್ಯ ಮತ್ತು ಕೆಟ್ಟಕೃತ್ಯಕ್ಕೆ ಜೀವಿತದಲ್ಲೇ ಫಲಸಿಗುತ್ತದೆ ಎಂಬ ನಿತ್ಯ‌ಸತ್ಯ‌ ಇಲ್ಲಿ‌ಅನಾವರಣಗೊಂಡಿದೆ.

ಒಂದು‌  ಸಾಮಾನ್ಯ‌ ಸಾಮಾಜಿಕ ವಾತಾವರಣದಲ್ಲಿ‌‌ ನಡೆಯುವ
ವಣಿಕ ಚಾರುದತ್ತ,  ಗಣಿಕೆ ವಸಂತ ಸೇನೆಯರ  ಸಾಧಾರಣ ಪ್ರೇಮಕ್ಕೆ ಅಮರತ್ವದ ಹೊಳಪು ನೀಡುವ ಕತೆಯಿದೆ. ಶಕಾರನು , ವಸಂತ ಸೇನೆಯ ಕೊಲೆಯ ಆರೋಪವನ್ನ  ಚಾರುದತ್ತನ ಮೇಲೆ ಹೊರಿಸುತ್ತಾನೆ.

ಮರಣದಂಡನೆಗೆ ಒಳಗಾದ ಚಾರುದತ್ತ  ಕೊನೆಗೆ ಒಲವಿನ ಮೂರ್ತಿ ವಸಂತಸೇನೆಯ  ಪ್ರವೇಶದಿಂದ ಬಿಡುಗಡೆಗೊಳ್ಳುತ್ತಾನೆ
ಈ ಆವರಣದಲ್ಲಿಯೇ
ಹಲವು ಪ್ರತ್ಯೇಕ ಘಟನೆಗಳ ಸರಣಿ ಇದೆ.

ಸರಣಿಗಳು ಒಂದಕ್ಕೊಂದು‌ ಹೆಣೆದುಕೊಂಡಿದ್ದು‌ ಪ್ರತೀ  ಘಟನೆಯೂ ಕೊನೆಗೆ ಒಳಿತಿನಲ್ಲೇ ಪರ್ಯವಸಾನಗೊಳ್ಳುತ್ತವೆ.

ನಿರ್ದೇಶಕ ವೈದ್ಯ,ಓರ್ವ ನಿಷ್ಣಾತ ಕಲಾವಿದ.  ಕತೆಯನ್ನ ವಿಂಗಡಿಸಿ , ರಂಗಪರಿಕರಗಳೊಂದಿಗೆ ಪೇರಿಸುತ್ತಾ
ಪ್ರೇಕ್ಷಕನನ್ನ ಸೆಳೆಯುತ್ತಾ‌‌‌ ಹೋಗಿದ್ದಾರೆ.

ವಸಂತಸೇನೆ,ಚಾರುದತ್ತ, ಮೈತ್ರೇಯ, ಸಖಿ, ಅರ್ಯಕ, ಶಕಾರ, ಶರ್ಮಿಳಕ,
ಜೂಜುಕೋರ,ರದನಿಕೆ, ಇಷ್ಟು‌ ಮುಖ್ಯ ಭೂಮಿಕೆಯಲ್ಲಿವೆ.

ನಾಟಕ ಗೆಲ್ಲುವುದು‌‌ ಪ್ರೀತಿಯ ಕತೆಯಿಂದ.ಆದರೆ  ಪಾತ್ರಗಳಲ್ಲಿ
ಶಕಾರ ( ಡಾ.ನಾಗಭೂಷಣ) ಅದೊಂದೇ ಇಡೀ ರಂಗಸ್ಥಳವನ್ಮ ತುಂಬಿಕೊಂಡು ಚಲಿಸುವ ಪಾತ್ರ.
ನಟನೆಯಲ್ಲಿ ಜೀವಂತಿಕೆ ತುಂಬಿದ್ದಾರೆ,

ಚಾರುದತ್ತ ಮತ್ತು‌ ವಸಂತ ಸೇನೆಯರ
ಒಲವಿನ ದೃಶ್ಯ ಮನೆಸೆಳಯುತ್ತದೆ.
ಆದರೆ ಅವರೀರ್ವ. ರಾತ್ರಿಯ ಮನೆ ಭೇಟಿ ತೀರಾ ಸಾಧರಾಣವಾಗಿ ಅಭಿನಯಿಸಲ್ಪಟ್ಟಿದೆ.

ರಂಗಸ್ಥಳದಲ್ಲಿ ಬಹುಪಾಲು ಚಲನೆ ತುಂಬಿರುವ ಮನೆಯ  ದೃಶ್ಯವನ್ನ
ಇನ್ನಷ್ಟು ಮುನ್ನೆಲೆಗೆ  ತರಬಹುದಿತ್ತು.

ಏಕೆಂದರೆ ಪ್ರಣಯಿಗಳ ಮುಖಭಾವ‌
ಪ್ರೇಕ್ಷಕನಿಗೆ ಸಂವಹಿಸುವುದೇ ಇಲ್ಲ.
ಮಂದ ಬೆಳಕಿನಲ್ಲೇ  ಈ‌‌ ದೃಶ್ಯ ಸಾಗಿ
ಪ್ರೇಕ್ಷಕನಲ್ಲಿ‌ ಈರ್ವರ  ಪ್ರೀತಿ‌ ಪ್ರಭಾವಿಸುವಲ್ಲಿ ಹೆಣಗಾಡುತ್ತದೆ.

Klive Special Article ಚಾರುದತ್ತ, ವಸಂತ ಸೇನೆ ಪಾತ್ರಧಾರಿಗಳಲ್ಲಿ ವಸಂತಸೇನೆ ( ಲಕ್ಷ್ಮಿ,ಎಸ್)  ನಟನೆಯಲ್ಲಿ ಮೈಚಳಿ ಬಿಟ್ಟಿದ್ದಾರೆ‌. ಆದರೆ  ಚಾರುದತ್ತನ ಪಾತ್ರಧಾರಿ ( ನಾಗರಾಜ್ ನೀಲ್) ಇನ್ನಷ್ಟೂ  ಪಳಗಬೇಕು, ಅದೊಂದು‌ ಭಾವನಾತ್ಮಕ. ಪಾತ್ರ. ಅದರ ಸ್ವಭಾವವನ್ನ  ಅರಗಿಸಿಕೊಳ್ಳಬೇಕಿದೆ.
ಮೈತ್ರೇಯ,( ಲೋಕೇಶ್, ನ್ಯಮತಿ) ಧ್ವನಿಪೂರ್ಣವಾಗಿದೆ.
ವ್ಯಾವಹಾರಿಕ ಜಗತ್ತಿನ ‌ಚವಕಾಶಿಗಳ
ಬಗ್ಗೆ ದೈನಿಕ ಜೀವನ ಕ್ಕೂ ಮಾತು‌ಬೆಸೆಯುವ‌‌  ‌ನಟನೆ ಚುರುಕಾಗಿದೆ.

ಜೂಜುಕೋರ, ಸರ್ಮಿಳಕ, ಆರ್ಯಕ
ಪಾತ್ರಧಾರಿಗಳು‌ತಮ್ಮ ಪಾಲನ್ನ ಸಮರ್ಪಕ ನಿರ್ವಹಿಸಿದ್ದಾರೆ. ವಸಂತ ಸೇನೆಯ ಸಖಿ ಮದನಿಕೆ,( ನಂದಿನಿ)
ಇನ್ನೂ ನಟನೆಯ ಪಾಠ‌ಕ್ಕೆ ಒಗ್ಗಬೇಕಿದೆ.

ರಂಗಸಜ್ಜಿಕೆ ಓಕೆ. ವಸಂತೋತ್ಸವದ
ದೃಶ್ಯ ಸಮೃದ್ಧವಾಗಿದೆ. ನಟರೆಲ್ಲರೂ‌
ಜೀವಂತಿಕೆಯಿಂದ  ನರ್ತಿಸಿದ್ದಾರೆ.
ಬಂಡಿಗಳ ಅದಲುಬದಲು ನಿಖರವಾಗಿ‌ ಬಿಂಬಿಸಲು‌ ವೈದ್ಯ ಬಳಸಿರುವ‌ ಕೌಶಲಕ್ಕೆ  ವಾಹ್ ಎನ್ನಬೇಕು.
.

ಬಹಳ ಅಚ್ವುಕಟ್ಟಾಗಿ  ನಮ್ಮನ್ನ ಗೆದ್ದವರೆಂದರೆ ಹಿರಿಯ ನಟ ಎನ್.ಕೆ.ಹಾಲೇಶ್. ಅವರ ಕೇಶ ವಿನ್ಯಾಸವನ್ನ
ಸುಧಾರಿಸಬಹುದಿತ್ತು. ಅದು ನಟರ ಕೊರತೆಯಲ್ಲ.
ಸಂಗೀತ ,ರಿಹರ್ಸಲ್ ಕಡಿಮೆಯೋ‌ ಗೊತ್ತಿಲ್ಲ. ಕಲಾವಿದರ ಪೈಕಿ ಸ್ತ್ರೀ‌ ಧ್ವನಿ‌ಇಂಪಾಗಿದೆ. ಪುರುಷ ಗಾಯಕ‌ ಇನ್ನಷ್ಟೂ ಭಾವನೆಗಳನ್ನ ತುಂಬಬೇಕಿದೆ. ಒಟ್ಟಾರೆ.ಹಿನ್ನೆಲೆ ಸಂಗೀತ‌ ಓಕೆ.

ಉಳಿದದ್ದು  ಬೆಳಕು.  ಚಾರುದತ್ತ ವಸಂತಸೇನೆ ದೃಶ್ಯಗಲಲ್ಲಿ‌ ಅವರ ಮುಖಭಾವಗಳೇ ಸ್ಪಷ್ಟವಿಲ್ಲ.
ಇನ್ನಷ್ಟು  ಪ್ರಖರತೆಯ ಬಗ್ಗೆ  ಗಮನ ನೀಡಬೇಕಿತ್ತು.

ಒಟ್ಟಾರೆ ರಂಗಕೃತಿಯಾಗಿ‌‌ ಕಂಡರಿಸಿದಾಗ  ಬೇರೆಬೇರೆಯಾಗಿ‌ ಗಮನಿಸಿದ ಅಂಶಗಳು, ಕೊರತೆಯಾಗಿ ಕಾಣುವುದಿಲ್ಲ.
ಅನುಭವಕ್ಕೆ ದಕ್ಕುವ‌ ವಸಂತ ಸೇನೆ ಮತ್ತು‌ ಚಾರುದತ್ತರ‌ ಒಲವಿನ ಮುಂದೆ
ಪ್ರೇಕ್ಷಕ ಪ್ರತ್ಯೇಕವಾಗುವುದೇ ಇಲ್ಲ.
ಬಹಳ ದಿನಗಳಿಂದ ಕಾದ ಪ್ರೇಕ್ಷಕರಿಗೆ
ವೈದ್ಯ‌ ನಿರಾಸೆ ಮಾಡಿಲ್ಲ. ಅದೇ ನಾವು‌ನೀಡುವ ಖುಲಾಸೆ .

ವಸಂತೋತ್ಸವಕ್ಕೆ ಹೊರಟ ಮಣ್ಣಿನ ಬಂಡಿ , ಒಂದು ಅದ್ಭುತ ಮತ್ತು‌‌ ಪರಿಣಾಮಕಾರಿ  ಸಂಕೇತ.
ವಸಂತಸೇನೆ , ಬದಲಾದ ಮಣ್ಣಿನ ಬಂಡಿ ಏರುತ್ತಾಳೆ. ಅವಳಿಗದಂಡದಿಂ‌‌ದ ಸಿದ್ಧವಾದ ಬಂಡಿಯಲ್ಲಿ  ಚಾರುದತ್ತನ‌ ಬದಲಿಗೆ  ಆರ್ಯಕ ಕುಳಿತುಕೊಳ್ಳುತ್ತಾನೆ.ರಾಜನಾಗುತ್ತಾನೆ ವಸಂತಸೇನೆ
ಮೃತ್ಯುವಿನ‌ ಬಳಿಸಾರಿ ಬದುಕುತ್ತಾಳೆ.
ಚಾರುದತ್ತ ,ಮೃತ್ಯು ದಂಡದಿಂ‌‌ದ ಬಿಡುಗಡೆ ಪಡಯು್ತ್ತಾನೆ.
ಮಣ್ಣೇ ಶಾಶ್ವತ. ಕೆಲವರು ಹೆಜ್ಜೆಹಾಕುತ್ತಾರೆ. ಹಲವರು‌ ಪ್ರಯಾಣಿಸುತ್ತಾರೆ. ಅದೇ ಮೂಕ ಸಾಕ್ಷಿ. ಇದೇ ಸಂದೇಶ

ಡಾ.ಸುಧೀಂದ್ರ.
ಪ್ರಧಾನ ಸಂಪಾದಕ. ಕೆ ಲೈವ್ ನ್ಯೂಸ್.ಶಿವಮೊಗ್ಗ.

Dr. Raj Kumar ಡಾ.ರಾಜ್ ಅಭಿನಯದ ಚಲನಚಿತ್ರ ಗೀತೆಗಳ ಗಾಯನ ಕಾರ್ಯಕ್ರಮ

0

Dr. Raj Kumar ವರನಟ ಡಾ ರಾಜ್ ಕುಮಾರ್ ರವರ ಜನ್ಮದಿನಾಚರಣೆ ಅಂಗವಾಗಿ ಏಪ್ರಿಲ್ 24 ರಂದು ಸಂಜೆ 6.00 ಗಂಟೆಗೆ ಸರಿಯಾಗಿ ನಗರದ ಕುವೆಂಪು ರಂಗಮಂದಿರದಲ್ಲಿ ಚಿತ್ರನಟ ಡಾ ರಾಜ್ ಕುಮಾರ್ ಅಭಿನಯದ ಚಲನಚಿತ್ರಗಳ ಗೀತೆಗಳನ್ನಾಧರಿಸಿದ ಗೀತಗಾಯನ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಪ್ರೆಸ್ ಟ್ರಸ್ಟ್, ಕಾರ್ಯನಿರತ ಪತ್ರಕರ್ತರ ಸಂಘ, ಸಿಹಿಮೊಗೆ ಚಿತ್ರಸಮಾಜ, ರಾಜ್ಯ ಸರ್ಕಾರಿ ನೌಕರರ ಸಂಘ ಹಾಗೂ ಕನ್ನಡ ಸಾಹಿತ್ಯ ಪರಿಷತ್ತು ಶಿವಮೊಗ್ಗ ಇವರುಗಳ ಸಂಯುಕ್ತಾಶ್ರಯದಲ್ಲಿ ಕಾರ್ಯಕ್ರಮವನ್ನು ಏರ್ಪಡಿಸಲಾಗಿದ್ದು, ಖ್ಯಾತ ಗಾಯಕಿ ಶ್ರೀಮತಿ ಸುರೇಖಾ ಹೆಗಡೆ ಮತ್ತು ತಂಡದವರು ಗೀತಗಾಯನ ಕಾರ್ಯಕ್ರಮವನ್ನು ನಡೆಸಿಕೊಡಲಿದ್ದಾರೆ.
Dr. Raj Kumar ಈ ಕಾರ್ಯಕ್ರಮವನ್ನು ರಾಜ್ಯ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಮಧು ಎಸ್.ಬಂಗಾರಪ್ಪ ಅವರು ಉದ್ಘಾಟಿಸುವರು. ಶಾಸಕ ಎಸ್.ಎನ್.ಚನ್ನಬಸಪ್ಪ ಅಧ್ಯಕ್ಷತೆ ವಹಿಸುವರು. ಸಂಸದ ಬಿ.ವೈ.ರಾಘವೇಂದ್ರ, ಗ್ರಾಮಾಂತರ ಶಾಸಕಿ ಶ್ರೀಮತಿ ಶಾರದಾ ಪೂರ್ಯಾನಾಯ್ಕ್ ಸೇರಿದಂತೆ ಜಿಲ್ಲೆಯ ಎಲ್ಲಾ ಶಾಸಕರು, ವಿಧಾನ ಪರಿಷತ್ ಸದಸ್ಯರು, ಸ್ಥಳೀಯ ಸಂಸ್ಥೆಗಳ ಚುನಾಯಿತ ಪ್ರತಿನಿಧಿಗಳು ಮುಖ್ಯ ಅತಿಥಿಗಳಾಗಿ ಆಗಮಿಸಲಿರುವರು. ಜಿಲ್ಲಾಧಿಕಾರಿ ಗುರುದತ್ತ ಹೆಗಡೆ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎನ್.ಹೇಮಂತ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ,ಮಿಥುನ್ ಕುಮಾರ್ ರವರು ಉಪಸ್ಥಿತರಿದ್ದು, ಡಾ| ರಾಜ್ ರವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವರು.
ಸಕಾಲದಲ್ಲಿ ಆರಂಭಗೊಳ್ಳಲಿರುವ ಈ ಕಾರ್ಯಕ್ರಮಕ್ಕೆ ಜಿಲ್ಲೆಯ ಎಲ್ಲಾ ರಾಜ್ ಕುಮಾರ್ ಅಭಿಮಾನಿಗಳು, ಕಲಾರಸಿಕರು, ವಿದ್ಯಾರ್ಥಿಗಳು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವಂತೆ ವಾರ್ತಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಆರ್.ಮಾರುತಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

S.N.Chennabasappa ಜನಿವಾರ ತೆಗೆಸಿದ ಪ್ರಕರಣ, ಘಟನೆ‌ಮುಂದೆ ತಪ್ಪಿಸಲು ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ವಿಪ್ರ ಸಂಘಟನೆಯ ಮನವಿ

0

S.N.Chennabasappa ಶಿವಮೊಗ್ಗದ ದುರ್ಗಿಗುಡಿಯ ಶ್ರೀ ರಾಘವೇಂದ್ರ ಸ್ವಾಮಿ ಮಠದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಶ್ರೀ ವಿಶ್ವಮಧ್ವ ಮಹಾಪರಿಷತ್ (ಶಿವಮೊಗ್ಗ ಶಾಖೆ) ಹಾಗೂ ಶಿವಮೊಗ್ಗ ಜಿಲ್ಲಾ ಸರ್ವ ವಿಪ್ರವೃಂದದ ನೇತೃತ್ವದಲ್ಲಿ ನಡೆದ ಮೌನ ಪ್ರತಿಭಟನೆಯಲ್ಲಿ ಶಿವಮೊಗ್ಗ ನಗರ ಶಾಸಕರಾದ ಎಸ್ ಎನ್ ಚನ್ನಬಸಪ್ಪ ಅವರು ಭಾಗವಹಿಸಿದ್ದರು.

ಸಿಇಟಿ ಪರೀಕ್ಷೆಯ ವೇಳೆ, ಶಿವಮೊಗ್ಗ, ಬೀದರ್ ಹಾಗೂ ಇತರ ಕೆಲವೊಂದು ಸ್ಥಳಗಳಲ್ಲಿ ಜನಿವಾರವನ್ನು ಬಿಚ್ಚುವ ಘಟನೆಗಳನ್ನು ಗಂಭೀರವಾಗಿ ಖಂಡಿಸಿ, ಹಿಂದೂ ಸಂಸ್ಕೃತಿಗೆ ಹಾಗೂ ವೈದಿಕ ಪರಂಪರೆಗೆ ಅಪಮಾನವಾಗಿರುವುದರಿಂದ, ಇಂತಹ ಘಟನೆಯನ್ನು ತಕ್ಷಣ ನಿಲ್ಲಿಸಿ, ಸಂಬಂಧಿತ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಶ್ರೀ ವಿಶ್ವಮಧ್ವ ಮಹಾಪರಿಷತ್ (ಶಿವಮೊಗ್ಗ ಶಾಖೆ) ಹಾಗೂ ಶಿವಮೊಗ್ಗ ಜಿಲ್ಲಾ ಸರ್ವ ವಿಪ್ರವೃಂದದ ವತಿಯಿಂದ ಜಿಲ್ಲಾಧಿಕಾರಿಗಳ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.

S.N.Chennabasappa ಈ ಸಂದರ್ಭದಲ್ಲಿ ರಾಜ್ಯ ಪ್ರಕೋಷ್ಟಗಳ ಸಂಯೋಜಕರಾದ ಶ್ರೀ ದತ್ತಾತ್ರಿ, ಮಾಜಿ ಶಾಸಕರಾದ ಶ್ರೀ ಪ್ರಸನ್ನ ಕುಮಾರ್, ಶ್ರೀ ವಿಶ್ವಮಧ್ವ ಮಹಾಪರಿಷತ್ ಶಿವಮೊಗ್ಗ ಶಾಖೆಯ ಪ್ರಮುಖರು, ಜಿಲ್ಲಾ ಸರ್ವ ವಿಪ್ರವೃಂದದ ಪದಾಧಿಕಾರಿಗಳು ಹಾಗೂ ಭಕ್ತ ವೃಂದಗಳು ಉಪಸ್ಥಿತರಿದ್ದರು.

Mathura Paradise ಏಪ್ರಿಲ್ 22, ಶಿವಮೊಗ್ಗದಲ್ಲಿ “ಹೋಟೆಲ್ ಉದ್ಯಮದಲ್ಲಿ ಹೊಸ ಪ್ರವೃತ್ತಿಗಳು” ಸಂವಾದ ಕಾರ್ಯಕ್ರಮ

0

Mathura Paradise ಶಿವಮೊಗ್ಗ ನಗರದ ಮಥುರಾ ಪ್ಯಾರಾಡೈಸ್ ಸಭಾಂಗಣದಲ್ಲಿ ಶಿವಮೊಗ್ಗ ಹೋಟೆಲ್ ಓನರ‍ಸ್ ಅಸೋಸಿಯೇಷನ್ ವತಿಯಿಂದ ಬೆಂಗಳೂರು ಕೆಎಸ್‌ಎಚ್‌ಎ ಸಹಕಾರದೊಂದಿಗೆ ಏ.22ರಂದು ಬೆಳಗ್ಗೆ 10.30ಕ್ಕೆ “ಹೋಟೆಲ್ ಉದ್ಯಮದಲ್ಲಿ ಹೊಸ ಪ್ರವೃತ್ತಿಗಳು” ವಿಷಯ ಕುರಿತು ವಿಶೇಷ ಮಾಹಿತಿ ಮತ್ತು ಸಂವಾದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

Mathura Paradise ಕಾರ್ಯಕ್ರಮದಲ್ಲಿ ಕೆಎಸ್‌ಎಚ್‌ಎ ಅಧ್ಯಕ್ಷ ಜಿ.ಕೆ.ಶೆಟ್ಟಿ, ಆಹಾರೋದ್ಯಮಿ ಗೋಪಾಡಿ ಶ್ರೀನಿವಾಸರಾವ್, ಶಿವಮೊಗ್ಗ ಹೋಟೆಲ್ ಓನರ‍ಸ್ ಅಸೋಸಿಯೇಷನ್ ಅಧ್ಯಕ್ಷ ಶಂಕರ ನಾರಾಯಣ ಹೊಳ್ಳ, ಕಾರ್ಯದರ್ಶಿ ಎನ್.ಗೋಪಿನಾಥ್, ಬಿಬಿಎಚ್‌ಎ ಗೌರವಾಧ್ಯಕ್ಷ ಪಿ.ಸಿ.ರಾವ್, ಅಧ್ಯಕ್ಷ ಸುಬ್ರಹ್ಮಣ್ಯ ಹೊಳ್ಳ, ಕಾರ್ಯದರ್ಶಿ ವಿರೇಂದ್ರ ಕಾಮತ್, ಕುವೆಂಪು ವಿವಿ ಅಸಿಸ್ಟೆಂಟ್ ಪ್ರೋಫೆಸರ್ ಶ್ರೀಕಾಂತ್ ಭಾಗವಹಿಸುವರು. ಹೋಟೆಲ್ ಉದ್ಯಮದಾರರು ಸಂವಾದದಲ್ಲಿ ಪಾಲ್ಗೊಳ್ಳುವಂತೆ ಶಿವಮೊಗ್ಗ ಹೋಟೆಲ್ ಓನರ‍ಸ್ ಅಸೋಸಿಯೇಷನ್ ಕಾರ್ಯದರ್ಶಿ ಎನ್.ಗೋಪಿನಾಥ್ ತಿಳಿಸಿದ್ದಾರೆ.

Friends Center Shivamogga ಒತ್ತಡದ ಪ್ರಪಂಚದಲ್ಲಿ ಒಟ್ಟಾಗಿ ಬೆರೆಯುವುದನ್ನ ಮರೆತಿದ್ದೇವೆ- ಪ್ರೊ.ಮಮತಾ

0

Friends Center Shivamogga ಮನುಷ್ಯನ ಮನಸ್ಸಿಗೆ ಸಂತಸ ನೀಡುವ ಔಷಧ ಸಂಗೀತ. ಮನುಷ್ಯನಲ್ಲಿನ ಬೇಸರ, ಖಿನ್ನತೆಯನ್ನು ದೂರ ಮಾಡುವ ಶಕ್ತಿ ಸಂಗೀತಕ್ಕಿದೆ ಎಂದು ಎಟಿಎನ್‌ಸಿಸಿ ಕಾಲೇಜಿನ ಪ್ರಾಚಾರ್ಯೆ ಮಮತಾ ಅಭಿಪ್ರಾಯಪಟ್ಟರು.

ಫ್ರೆಂಡ್ಸ್ ಸೆಂಟರ್ ಸಭಾಂಗಣದಲ್ಲಿ ಫ್ರೆಂಡ್ಸ್ ಸೆಂಟರ್ ಹಾಗೂ ಮಹಿಳಾ ಘಟಕದ ವತಿಯಿಂದ ಆಯೋಜಿಸಿದ್ದ ಸಾಧಕರಿಗೆ ಸನ್ಮಾನ ಹಾಗೂ ಬೆಳದಿಂಗಳಲಿ ಸಂಗೀತದ ಅಲೆಯಲಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಒತ್ತಡದ ಪ್ರಪಂಚದಲ್ಲಿ ಕುಟುಂಬದ ಸದಸ್ಯರೊಂದಿಗೆ ಸಹಭೋಜನ ಮರೆತಿದ್ದೇವೆ. ಒಟ್ಟಾಗಿ ಮಾತನಾಡುವುದು ಕಡಿಮೆ ಆಗುತ್ತಿದೆ ಎಂದು ತಿಳಿಸಿದರು.

ಫ್ರೆಂಡ್ಸ್ ಸೆಂಟರ್ ಈಗಾಗಲೇ ಐದು ದಶಕಗಳಿಂದ ಸಮಾಜಮುಖಿ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡು ಬರುತ್ತಿದ್ದು, ರಾಜ್ಯಮಟ್ಟದ ಚರ್ಚಾ ಸ್ಪರ್ಧೆ, ಸರಿಗಮಪ ಕಾರ್ಯಕ್ರಮಗಳನ್ನು ಸಹ ನಡೆಸಿದೆ. ಇಂತಹ ಸಂಗೀತ ಕಾರ್ಯಕ್ರಮಗಳು ಎಲ್ಲರನ್ನೂ ಒಟ್ಟುಗೂಡಿಸುವ ಜತೆಯಲ್ಲಿ ಧನಾತ್ಮಕ ಮನೋಭಾವವನ್ನು ಬೆಳೆಸುತ್ತದೆ ಎಂದು ತಿಳಿಸಿದರು.

ಫ್ರೆಂಡ್ಸ್ ಸೆಂಟರ್ ಸಂಸ್ಥಾಪಕ ಸದಸ್ಯ, ಮಾಜಿ ಅಧ್ಯಕ್ಷ ಶ್ಯಾಮ್‌ಪ್ರಸಾದ್ ಮಾತನಾಡಿ, ಫ್ರೆಂಡ್ಸ್ ಸೆಂಟರ್ ಸಮಾಜಮುಖಿ ಚಟುವಟಿಕೆಗಳಿಂದ ವಿಶೇಷ ಪ್ರಾಮುಖ್ಯತೆ ಹೊಂದಿದ್ದು, ಇಂತಹ ಕಾರ್ಯಕ್ರಮಗಳು ಸಂತೋಷವನ್ನು ಇಮ್ಮುಡಿಗೊಳಿಸುತ್ತವೆ ಎಂದು ಹೇಳಿದರು.

ರಾಷ್ಟ್ರೀಯ ಶಿಕ್ಷಣ ಸಂಸ್ಥೆ ಮಾಜಿ ಉಪಾಧ್ಯಕ್ಷ ಟಿ.ಆರ್.ಅಶ್ವತ್ಥನಾರಾಯಣ ಶೆಟ್ಟಿ ಮಾತನಾಡಿ, ಫ್ರೆಂಡ್ಸ್ ಸೆಂಟರ್ ಸಾಮಾಜಿಕ ಕೆಲಸಗಳ ಜತೆಯಲ್ಲಿ ಶಿಕ್ಷಣ ಕ್ಷೇತ್ರದಲ್ಲಿಯೂ ತೊಡಗಿಸಿಕೊಂಡಿದೆ. ಶಿಕ್ಷಣ ಕಾರ್ಯಗಳಿಗೆ ಅಗತ್ಯ ನೆರವು ಒದಗಿಸುವ ಕೆಲಸ ಮಾಡುತ್ತಿದೆ ಎಂದು ತಿಳಿಸಿದರು.

Friends Center Shivamogga ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಫ್ರೆಂಡ್ಸ್ ಸೆಂಟರ್ ಅಧ್ಯಕ್ಷ ಬಿ.ಜಿ.ಧನರಾಜ್ ಮಾತನಾಡಿ, ಕುಟುಂಬ ಸದಸ್ಯರು ಒಟ್ಟುಗೂಡಿ ಪರಸ್ಪರ ಸಮಯ ನೀಡಲು ಇಂತಹ ಸಂಗೀತ ಕಾರ್ಯಕ್ರಮಗಳು ಸಹಕಾರಿಯಾಗುತ್ತವೆ ಎಂದು ತಿಳಿಸಿದರು.

ಫ್ರೆಂಡ್ಸ್ ಸೆಂಟರ್ ಮಾಜಿ ಅಧ್ಯಕ್ಷ ಜಿ.ವಿಜಯಕುಮಾರ್, ವಿ.ನಾಗರಾಜ, ಎಸ್.ದತ್ತಾತ್ರಿ, ಮಲ್ಲಿಕಾರ್ಜುನ ಕಾನೂರು, ಮೋಹನ್, ಶ್ರೀರಂಜಿನಿ ದತ್ತಾತ್ರಿ, ಮಹೇಶ್ವರಪ್ಪ, ವೆಂಕಟೇಶ, ಉಮಾ ವೆಂಕಟೇಶ, ಬಿಂದು ವಿಜಯಕುಮಾರ್, ಖಜಾಂಚಿ ರಮೇಶ್, ಕಾರ್ಯದರ್ಶಿ ರವೀಂದ್ರನಾಥ ಐತಾಳ್, ಶ್ರೀನಿಧಿ ವೆಂಕಟೇಶ್, ಫ್ರೆಂಡ್ಸ್ ಸೆಂಟರ್ ಸದಸ್ಯರು ಇದ್ದರು.