Department of Soldiers Welfare and Rehabilitation ಇತ್ತಿಚೀನ ದಿನಗಳಲ್ಲಿ ಮಾಜಿ ಸೈನಿಕರು ಮತ್ತು ಅವರ ಅವಲಂಬಿತರಿಗೆ ಕೆಲವು ಖಾಸಗಿ ವ್ಯಕ್ತಿಗಳು ಮತ್ತು ಕೆಲವೊಂದು ಸಂಘ-ಸಂಸ್ಥೆಗಳು ಆಮಿಷಗಳನ್ನು ನೀಡಿ ನಮ್ಮ ಸಂಘಕ್ಕೆ ನೋಂದಣಿಯಾದರೆ ನಿಮ್ಮ ಎಲ್ಲ ಕುಂದುಕೊರತೆಗಳನ್ನು ಬಗೆಹರಿಸಿ ಕೊಡುತ್ತೇವೆ, ಜಮೀನು ಮಂಜೂರಾತಿ ಮಾಡಿಸಿಕೊಡುತ್ತೇವೆ ಎಂಬಿತ್ಯಾದಿ ಸುಳ್ಳು ಭರವಸೆಗಳನ್ನು ನೀಡುತ್ತಿರುವುದಾಗಿ ಹಾಗೂ ಚೀಟಿ ಮತ್ತು ಫೈನಾನ್ಸ್ ಯೋಜನೆಗಳಲ್ಲಿ ಹಣವನ್ನು ಹೂಡಿಕೆ ಮಾಡುವಂತೆ ಒತ್ತಡವನ್ನು ಹಾಕುತ್ತಿದ್ದಾರೆಂಬ ಮಾಹಿತಿಯು ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ ಕಛೇರಿಯ ಗಮನಕ್ಕೆ ಬಂದಿರುತ್ತದೆ. Department of Soldiers Welfare and Rehabilitation ಇಂತಹ ಅಮಿಷಗಳಿಗೆ ಕಿವಿಗೊಡಬಾರದೆಂದು ಹಾಗೂ ಖಾಸಗೀ ಯೂಟ್ಯೂಬ್, ಇನ್ ಸ್ಟಾಗ್ರಾಮ್, ವಾಟ್ಸಪ್ ಗ್ರೂಪ್, ಫೇಸ್‌ಬುಕ್ ಪೇಜ್ ಮತ್ತು ಇತರೆ ಸಾಮಾಜಿಕ ಜಾಲತಾಣಗಳಲ್ಲಿ ಬರುವಂತಹ ಮಾಜಿ ಸೈನಿಕರ ಪಾಲಿಸಿಗಳ ಹೆಚ್ಚಿನ ಪತ್ರಗಳು ಕೂಡ ನಕಲಿಯಾಗಿರುತ್ತವೆಯೆಂದು ಹಾಗೂ ಮಾಜಿ ಸೈನಿಕರುಗಳಿಗೆ ಪಾಲಿಸಿ/ದಾಖಲೆಗಳ ಯಾವುದೇ ರೀತಿಯ ಅನುಮಾನಗಳಿದ್ದರೆ ನೇರವಾಗಿ ಸೈನಿಕ ಕಛೇರಿಗೆ ಸಂಪರ್ಕಿಸಿ ಸ್ಪಷ್ಟಿಕರಣವನ್ನು ಪಡೆಯಬೇಕೆಂದು ಉಪ ನಿರ್ದೇಶಕರು, ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ, ಶಿವಮೊಗ್ಗ ಇವರು ತಿಳಿಸಿದ್ದಾರೆ.
Breaking News ಕಾಶ್ಮೀರದಲ್ಲಿ ಉಗ್ರರದಾಳಿಗೆ ಸಿಲುಕಿ ಶಿವಮೊಗ್ಗದ ಮಂಜುನಾಥರಾವ್ ಸಾವು
Breaking News ಪ್ರವಾಸಕ್ಕೆ ತೆರಳಿದ್ದ ಶಿವಮೊಗ್ಗದ ಮೂಲದ ವ್ಯಕ್ತಿ ಸಾವು
ರಿಯಲ್ ಎಸ್ಟೇಟ್ ಉದ್ಯಮಿ ಮಂಜುನಾಥ್ ರಾವ್ (47)ಅವರು ಕಾಶ್ಮೀರದಲ್ಲಿ ಭಯೋತ್ಪಾದಕರ ದಾಳಿಗೆ ಬಲಿಯಾಗಿದ್ದಾರೆ.
ಪತ್ನಿ ಪಲ್ಲವಿ ಹಾಗೂ ಪುತ್ರ ಅಭಿಜೇಯ ಜೊತೆ ಪ್ರವಾಸಕ್ಕೆ ಹೋಗಿದ್ದ ಮಂಜುನಾಥ್ ರಾವ್ ಅವರು ಏಪ್ರಿಲ್ 19ರಂದು ಕಾಶ್ಮೀರದ ಪಾಲಂಗಾವ್ ಗೆ ಪ್ರವಾಸಕ್ಕೆ ತೆರಳಿದ್ದರು.
Breaking News ಅಟ್ಯಾಕ್ ನಲ್ಲಿ ಸ್ಥಳದಲ್ಲೇ ಸಾವನ್ನಪ್ಪಿರುವ ಮಂಜುನಾಥ್ ರಾವ್ ಅವರು ಸಾವನ್ನಪ್ಪಿದ್ದು, ಮಂಜುನಾಥ್ ಪತ್ನಿ ಹಾಗೂ ಪುತ್ರರನ್ನ ರಕ್ಷಿಸಿ, ಬೇರೆಡೆ ಸ್ಥಳಿಯರು ಕರೆದೊಯ್ದಿದ್ದಾರೆ.
State Department of School Education and Literacy ಸಚಿವ ಮಧು ಬಂಗಾರಪ್ಪ ಅವರಿಂದ ಮಾತೃಶ್ರೀ & ದಿ.ಬಂಗಾರಪ್ಪ ಸಮಾಧಿ ಸ್ಥಳಕ್ಕೆ ಭೇಟಿ
State Department of School Education and Literacy ರಾಜ್ಯ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಮಧು ಬಂಗಾರಪ್ಪನವರು ತಮ್ಮ ಕುಟುಂಬದೊಂದಿಗೆ ಸೊರಬದ ಬಂಗಾರಧಾಮದಲ್ಲಿರುವ ತಮ್ಮ ಮಾತೃಶ್ರೀ ದಿll. ಶಕುಂತಲಾ ಮತ್ತು ತಂದೆಯವರಾದ ಮಾಜಿ ಮುಖ್ಯಮಂತ್ರಿ ದಿll. ಎಸ್. ಬಂಗಾರಪ್ಪ ಅವರ ಸಮಾಧಿ ಸ್ಥಳಕ್ಕೆ ಭೇಟಿ ನೀಡಿ, ಪೂಜೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಶ್ರೀಮತಿ ಅನಿತಾ ಮಧು ಬಂಗಾರಪ್ಪ, ಪುತ್ರ ಸೂರ್ಯ ಸೇರಿದಂತೆ ಬಂಗಾರಪ್ಪ ಅಭಿಮಾನಿ ಬಳಗದ ಪದಾಧಿಕಾರಿಗಳು, ಸಾರ್ವಜನಿಕರು ಉಪಸ್ಥಿತರಿದ್ದರು.
Madhu Bangarappa ಎಲ್ಲಾ ತಾಲ್ಲೂಕುಗಳಲ್ಲಿ ಜನಸ್ಪಂದನ ಕಾರ್ಯಕ್ರಮ- ಮಧು ಬಂಗಾರಪ್ಪ
Madhu Bangarappa ಜನರ ಸಮಸ್ಯೆಗಳನ್ನು ಆಲಿಸಿ, ಶೀಘ್ರ ಪರಿಹಾರ ದೊರಕಿಸಲು ಮತ್ತು ಆಡಳಿತ ಸುಧಾರಣೆಯಲ್ಲಿ ‘ಜನಸ್ಪಂದನ’ ಕಾರ್ಯಕ್ರಮ ಬಹಳ ಮುಖ್ಯ ಪಾತ್ರ ವಹಿಸುತ್ತದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಮಧು ಬಂಗಾರಪ್ಪ ತಿಳಿಸಿದರು.
ನಾಗರೀಕರ ಅಹವಾಲುಗಳನ್ನು ಆಲಿಸಿ ಸೂಕ್ತ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಸೋಮವಾರ ಈಡಿಗರ ಸಭಾ ಭವನದಲ್ಲಿ ಏರ್ಪಡಿಸಲಾಗಿದ್ದ ಜಿಲ್ಲಾ ಮಟ್ಟದ ‘ಜನಸ್ಪಂದನ’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ತಾಲ್ಲೂಕುಗಳಲ್ಲಿ ಜನಸ್ಪಂದನ ಕಾರ್ಯಕ್ರಮ ಮಾಡುವುದರಿಂದ ಎಲ್ಲ
ಸಾರ್ವಜನಿಕರಿಗೆ ಅನುಕೂಲವಾಗುತ್ತದೆ.
ಚುನಾಯಿತ ಪ್ರತಿನಿಧಿಗಳು,ಅಧಿಕಾರಿಗಳು ಇಲ್ಲಿ ಹಾಜರಾಗುವ ಕಾರಣ ಜನರ ಸಮಸ್ಯೆಗಳು ಅರ್ಥ ಆಗುತ್ತವೆ. ಪರಹಾರಕ್ಕೆ ಅನೇಕ ಕಾನೂನು ಇದ್ದು, ಅವುಗಳನ್ನು ಅನ್ವಯಿಸಿ, ಸಾರ್ವಜನಿಕರಿಗೆ ಅನುಕೂಲ ಮಾಡಲಾಗುವುದು. ಮುಂದಿನ ದಿನಗಳಲ್ಲಿ ಎಲ್ಲ ತಾಲ್ಲೂಕುಗಳಲ್ಲಿ ಜನಸ್ಪಂದನ ಕಾರ್ಯಕ್ರಮ ಮಾಡಲಾಗುವುದು. ಮಾನ್ಯ ಮುಖ್ಯಮಂತ್ರಿಗಳು ಸಹ ಬೇರೆ ಬೇರೆ ಜಿಲ್ಲೆಗಳಿಗೆ ತೆರಳಿ ಜನಸ್ಪಂದನ ಸಭೆ ನಡೆಸಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸುತ್ತಾರೆ.
ಆಡಳಿತ ಸುಧಾರಣೆಯಲ್ಲಿ ಇಂತಹ ಕಾರ್ಯಕ್ರಮಗಳು ಬಹಳ ಮುಖ್ಯ ಪಾತ್ರ ವಹಿಸುತ್ತವೆ . ಯಾವುದೇ ಸಮಸ್ಯೆಗಳಿದ್ದರೂ ಚರ್ಚಿಸಿ, ಬಗೆಹರಿಸುವ ನಿಟ್ಟಿನಲ್ಲಿ ಪ್ರಯತ್ನ ಮಾಡೋಣ ಎಂದರು.
ಕಾರ್ಯಕ್ರಮದಲ್ಲಿ ಸಾಗರ ಕ್ಷೇತ್ರದ ಶಾಸಕರಾದ ಬೇಳೂರು ಗೋಪಾಲಕೃಷ್ಣ ಮಾತನಾಡಿ, ಕ್ಷೇತ್ರದಲ್ಲಿನ ಸಮಸ್ಯೆಗಳ ಕುರಿತು ನೇರವಾಗಿ ಮಾತನಾಡಿ, ಇತ್ಯರ್ಥ ಪಡಿಸಲು ಇಡೀ ಜಿಲ್ಲಾ ಆಡಳಿತ ಯಂತ್ರವೇ ಇಂದು ಇಲ್ಲಿ ಹಾಜರಿದ್ದು, ಮುಕ್ತ ಚರ್ಚೆ ನಡೆಯಲಿ, ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಉತ್ತಮ ಕಾರ್ಯಕ್ರಮವಾಗಲಿ ಎಂದರು.
ಚುನಾಯಿತ ಪ್ರತಿನಿಧಿಗಳು, ಪ.ಪಂ. ಅಧ್ಯಕ್ಷ ನಾಗಪ್ಪ, ಪ.ಪಂ ಉಪಾಧ್ಯಕ್ಷೆ ಚಂದ್ರಕಲಾ,ಗ್ಯಾರಂಟಿ ಯೋಜನೆಗಳ ತಾಲ್ಲೂಕು ಅಧ್ಯಕ್ಷ ಚಿದಂಬರ, ಕೆಡಿಪಿ ಸದಸ್ಯರು, ಜಿಲ್ಲಾಧಿಕಾರಿ ಗುರುದತ್ತ ಹೆಗಡೆ, ಜಿಲ್ಲಾ ಪೋಲಿಸ್ ವರಿಷ್ಟಾಧಿಕಾರಿ ಮಿಥುನ್ ಕುಮಾರ್, ಅಪರ ಜಿಲ್ಲಾಧಿಕಾರಿ ಸಿದ್ಧಲಿಂಗ ರೆಡ್ಡಿ, ಜಿ.ಪಂ ಉಪ ಕಾರ್ಯದರ್ಶಿ ಜಯಲಕ್ಷ್ಮಿ, ಸಾಗರ ಉಪ ವಿಭಾಗದ ಅರಣ್ಯ ಸಂರಕ್ಷಣಾಧಿಕಾರಿ ಮೋಹನ್ ಕುಮಾರ್, ಹೊಸನಗರ ಪ್ರಭಾರ ಎಸಿ ರಶ್ಮಿ, ಪ.ಪಂ, ಗ್ರಾ.ಪಂ ಗಳ ಗಳ ಚುನಾಯಿತ ಪ್ರತಿನಿಧಿಗಳು, ಸಾರ್ವಜನಿಕರು ಹಾಜರಿದ್ದರು.
Madhu Bangarappa ಅರ್ಜಿಗಳ ಮಹಾಪೂರ: ಸಚಿವರಿಂದ ಸ್ವೀಕಾರ :
ಸೊರಬ ತಾಲ್ಲೂಕು ತಲಗಡ್ಡೆ ಗ್ರಾಮದ ಗಣಪತಿ ಬಿ ಇವರ ಜಮೀನಿಗೆ ಗಂಗಾ ಕಲ್ಯಾಣ ಯೋಜನೆಯಡಿ ೨೦೨೩ ರಲ್ಲೇ ಬೋರ್ ವೆಲ್ ಮಂಜೂರಾದರೂ ಇದುವರೆಗೆ ಬೋರ್ ಕೊರೆದಿಲ್ಲ, ಶೀಘ್ರದಲ್ಲೇ ಬೋರ್ ಕೊರೆಸಬೇಕೆಂದು ಅರ್ಜಿ ಸಲ್ಲಿಸಿದರು.
೮೦ ವರ್ಷದ ಮಳವಳ್ಳಿ ಗ್ರಾಮದ ಪಾರ್ವತಮ್ಮ ಎಂಬುವವರನ್ನು ೨೦೨೧ ರಲ್ಲಿ ಪಡಿತರ ಚೀಟಿಯಲ್ಲಿ ಮರಣ ಹೊಂದಿರುವುದಾಗಿ ನಮೂದಿಸಿ ಪಡಿತರ ಚೀಟಿ ರದ್ದುಪಡುಸಲಾಗಿದೆ. ತಾವು ಜೀವಂತವಾಗಿದ್ದು ವಂಚಿತರಾಗಿದ್ದ ಸೌಲಭ್ಯಗಳನ್ನು ನೀಡಬೇಕೆಂದು ಖುದ್ದು ಸಚಿವರಿಗೆ ಅರ್ಜಿ ಸಲ್ಲಿಸಿದರು. ಸಚಿವರು ಪ್ರತಿಕ್ರಿಯಿಸಿ, ಈ ಅಚಾತುರ್ಯವೆಸಗಿ ತೊಂದರೆಪಡಿಸಿದ ಅಧಿಕಾರಿ ವಿರುದ್ದ ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದರು.
ರಂಗನಾಥ್ ಅರ್ಜಿ ಸಲ್ಲಿಸಿ ಹೊಸನಗರದ ೬ ನೇ ವಾರ್ಡ್ನಲ್ಲಿ ಅಸಮರ್ಪಕ ವಿದ್ಯುತ್ ಸಂಪರ್ಕದಿಂದಾಗು ತುಂಬಾ ತೊಂದರೆಯಾಗುತ್ತಿದೆ. ರಿಪ್ಪನ್ ಪೇಟೆಯಲ್ಲಿ ಎಕ್ಸ್ ಪ್ರೆಸ್ ಲೈನ್ ಅಳವಡಿಸಿ ಸಮಸ್ಯೆ ಗೆ ಪರಿಹಾರ ಒದಗಿಸಬೇಕೆಂದು ಮನವಿ ಮಾಡಿದರು.
ಮುಂಬಾರು ಗ್ರಾ.ಪಂ ವ್ಯಾಪ್ತಿಯಲ್ಲಿ ಕುಡಿಯುವ ನೀರು ಮತ್ತು ವಿದ್ಯುತ್ ಸಮಸ್ಯೆ ಹೆಚ್ಚಿದ್ದು ಬಗೆಹರಿಸುವಂತೆ ಮುಂಬಾರು ಗ್ರಾ.ಪಂ. ಅಧ್ಯಕ್ಷ ರು ಮನವಿ ಮಾಡಿದರು. ಕೆರೆಕೊಪ್ಪ ಟೀಕಪ್ಪ ಯೋಗ ನಾಯಕ್, ಸ.ನಂ.೭೯ ರಲ್ಲಿ ತಮ್ಮ ಅಜ್ಜನ ಕಾಲದಿಂದ ಜಾಗದ ಅನುಭೋಗದಲ್ಲಿದ್ದು, ಈ ಜಾಗವು ಗೋಮಾಳ ಅರಣ್ಯ ಭೂಮಿಯಾಗಿರುತ್ತದೆ. ಬಗರ್ ಹುಕುಂ ಅರ್ಜಿ ಸಲ್ಲಿಸಿದ್ದು, ಇಲ್ಲಿ ಜಂಟಿ ಸರ್ವೇ ನಡೆಸಿ ಜಾಗ ಮಂಜೂರು ಮಾಡಬೇಕೆಂದು ಮನವಿ ಸಲ್ಲಿಸಿದರು.
ನಂಜುವಳ್ಳಿ ಗ್ರಾಮದ ಶೇಖರಪ್ಪ , ಸ.ನಂ.೪ ರಲ್ಲಿ ೮ ಎಕರೆ ಜಾಗದ ಕುರಿತು ತಮ್ಮ ಕುಟುಂಬದ ಇಬ್ಬರ ಹೆಸರಲ್ಲಿ ಜಂಟಿ ಪಹಣಿ ಇದ್ದು, ಶರಾವತಿ ವಸತಿ ಸೌಲಭ್ಯ ಕಲ್ಪಿಸುವ ವೇಳೆ ಈ ಜಮೀನು ಅರಣ್ಯ ಭೂಮಿ ಎಂದು ನಮೂದಾಗಿರುತ್ತದೆ. ಡಿ ರಿಸರ್ವ್ ಮಾಡುವ ಪ್ರಸ್ತಾವನೆಯಲ್ಲಿ ತಮ್ಮ ಕುಟುಂಬ ಮತ್ತು ತಮ್ಮ ಊರಿನ ಹೆಸರು ಸೇರಿಸಬೇಕು ಎಂಸುಮನವಿಮಾಡಿದರು.
ಮಜರೆ ಬಾಳೆಹಳ್ಳದ ಹರೀಶ್, ಸ.ನಂ. ೧೫೪ ರಲ್ಲಿ ತಾವು ೪೦ ವರ್ಷಗಳಿಂದ ೪ ಎಕರೆ ಜಮೀನು ಬಗರ್ ಹುಕುಂ ಜಮೀನು ಹೊಂದಿದ್ದು, ನಿಯಮಾನುಸಾರ ಬಗರ್ ಹುಕುಂ ಅರ್ಜಿ ಸಹ ಸಲ್ಲಿಸಿರುತ್ತೇನೆ, ಜಮೀನು ಮಂಜೂರು ಮಾಡಿಸಿಕೊಡಬೇಕಾಗಿ ಕೋರಿ ಅರ್ಜಿ ಸಲ್ಲಿಸಿದರು.
ನಗರದ ಕೆ ಎಂ ರವಿ ಇವರು ಅರ್ಜಿ ಸಲ್ಲಿಸಿ ಸರ್ವೆ ನಂ ೩, ೧೫ ರ ಬಸವನಬ್ಯಾಣ ಮತ್ತು ಸ.ನಂ.೨೭ ಮತ್ತು ೭೭ ಗಿಣಿಕಲ್ ಸರ್ಕಾರಿ ಹಿ.ಪ್ರಾ ಬಾಲಕರ ಶಾಲೆ ಸಂಬಂಧಿಸಿದಂತೆ ೧೯೫೫ ರಲ್ಲಿ ಮೈಸೂರು ಮಹಾರಾಜರು ೧೦ ಎಕರೆ ಜಮೀನು ಶಾಲೆಗೆ ನೀಡಿದ್ದು, ಅದರಿಂದ ಬರುವ ಆದಾಯ ಶಾಲೆಗೆ ಹೋಗುತ್ತಿಲ್ಲ. ಗೇಣಿಕಾರರ ಅನುಭೋಗದಲ್ಲಿರುತ್ತದೆ. ಈ ಜಮೀನಿನಿಂದ ಬರುವ ಆದಾಯ ಶಾಲೆಗೆ ಹೋಗುವಂತೆ ಮಾಡಬೇಕು. ಹಾಗೂ
ಕಾನಗೋಡು ಸರ್ಕಾರಿ ಪ್ರೌಢಶಾಲೆಯಲ್ಲಿ ಇಂಗ್ಲಿಷ್ ಮೀಡಿಯಂ ಆರಂಭಿಸಬೇಕು ಎಂದು ಮನವಿ ಮಾಡಿದರು. ಸಚಿವರು ಡಿಡಿಪಿಯು ರವರು ಇದನ್ನು ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದರು.
ಮಳವಳ್ಳಿ ಅಗಸರಕೊಪ್ಪ ಇಲ್ಲಿ ಇಂದಿರಾಗಾಂಧಿ ವಸತಿ ಶಾಲೆಗೆ ೧೧ ಎಕರೆ ಜಾಗ ಗುರುತಿಸಲಾಗಿದ್ದರೂ ಇದುವರೆಗೆ ಮಂಜೂರಾಗಿಲ್ಲ ಶೀಘ್ರವಾಗಿ ಮಂಜೂರು ಮಾಡಬೇಕೆಂದು ಗ್ರಾಮದ ಲಕ್ಷ್ಮಣ ಮತ್ತು ಇತರರು ಅರ್ಜಿ ಸಲ್ಲಿಸಿದರು.
Anju KLive Sub Editor, [4/22/2025 12:12 PM]
ವೀರಭದ್ರಪ್ಪ ಇವರು ಸ.ನಂ.೧೧೫ ರ ಜಮೀನನ್ನು ಪೋಡಿ ದುರಸ್ತಿ ಮಾಡಿಕೊಡಬೇಕು ಎಂದು ಅರ್ಜಿ ಸಲ್ಲಿಸಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಉದ್ಯೋಗಿನಿ ಯೋಜನೆಯಡಿ ೨೦೨೨-೨೩ ರಲ್ಲಿ ಗೀತಾ ಅರ್ಜಿ ಸಲ್ಲಿಸಿದ್ದರೂ ಇದುವರೆಗೆ ಸಹಾಯಧನ ಬಂದಿರುವುದಿಲ್ಲವೆಂದು ಅರ್ಜಿ ಸಲ್ಲಿಸಿದರು.
ಕೆರೆಕೊಪ್ಪದ ಶ್ರೀನಿವಾಸ ಅರ್ಜಿ ಸಲ್ಲಿಸಿ, ತಾವು ಮನೆ ಮೇಲುಂದ ಬಿದ್ದು ಕೈ ಮುರಿದಿದ್ದು ಯಾವುದೇ ಕೆಲಸ ಮಾಡಲು ಬಾರದ ಕಾರಣ ಅಂಗವಿಕಲ ಮಾಸಿಕ ವೇತನ ನೀಡುವಂತೆ ಮನವಿ ಸಲ್ಲಿಸಿದರು.
ತ್ರಿಣಿವೆ, ನೆಲ್ಲುಂಡೆ ಅಕ್ಕಪಕ್ಕದ ಗ್ರಾಮಸ್ಥರು ತಮ್ಮ ಗ್ರಾಮಗಳಿಗೆ ಸರ್ಕಾರಿ ಬಸ್ ಬಿಡುವಂತೆ ಕೋರಿದರು.
ದೋಬೈಲು ಗ್ರಾದ ಮಹೇಂದ್ರ ಬುಕ್ಕಿವರೆ ಅರ್ಜಿ ಸಲ್ಲಿಸಿ, ಕೆರೆಹಳ್ಳಿ ಹೋಬಳಿ ಗುಬ್ಬಿಗ ಗ್ರಾಮದ ಮುಳಗಡೆ ರೈತರ ಭೂಮಿಯ ಜಂಟಿ ಸರ್ವೆ ಮಾಡದೇ ಬಿಟ್ಟು ಹೋಗಿರುತ್ತದೆ. ಆದ್ದರಿಂದ ಜಂಟಿ ಸರ್ವೇ ಮಾಡಿಸುವಂತೆ ಹಾಗೂ ಸ.ನಂ. ೨೮ ರಲ್ಲಿ ಕೃಷಿ ಮಾಡಿತ್ತಿರುವ ರೈತರ ಸುಮಾರು ೭೧ ಎಕರೆ ಜಮೀನನ್ನುಪಕ್ಕಾ ಪೋಡಿ ಮಾಡಿಸುವಂತೆ ಕೋರಿದರು.
ಜಯನಗರದಲ್ಲಿ ಖಬರಸ್ತಾನಕ್ಕೆ ಜಾಗ ನೀಡಬೇಕೆಂದು ಅಬ್ದುಲ್ ಖಾದರ್ ಮನವಿ ಮಾಡಿದರು.
ವಿದ್ಯುತ್, ಕುಡಿಯುವ ನೀರು , ಬಗರ್ ಹುಕುಂ ಭೂಮಿ ಮಂಜೂರಾತಿ ಸೇರಿದಂತೆ ಇತರೆ ಸಮಸ್ಯೆಗಳ ಕುರಿತು ಮಧ್ಯಾಹ್ನ.೨ ಗಂಟೆ ಹೊತ್ತಿಗೆ ಒಟ್ಟು 116 ಅರ್ಜಿಗಳನ್ನುಸ್ವೀಕರಿಸಲಾಯಿತು.
ಸಚಿವರು, ಶಾಸಕರು ಅಹವಾಲು ಆಲಿಸಿ, ಅರ್ಜಿಗಳನ್ನು ಸ್ವೀಕರಿಸಿ ಸ್ಥಳದಲ್ಲೇ ಇದ್ದ ಅಧಿಕಾರಿಗಳಿಗೆ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಒದಗಿಸುವಂತೆ ಸೂಚನೆ ನೀಡಿದರು.
ಏಪ್ರಿಲ್ 27. “ತಳಿ” ನಾಟಕ ಪ್ರದರ್ಶನ
ಶಿವಮೊಗ್ಗ ನಗರದ ಅಜೇಯ ಸಂಸ್ಕೃತಿ ಬಳಗದ ವತಿಯಿಂದ ಏಪ್ರಿಲ್ 27ರ ಭಾನುವಾರ ಸಂಜೆ 6.30ಕ್ಕೆ ಕುವೆಂಪು ರಂಗಮಂದಿರದಲ್ಲಿ ಹೃದಯಂಗಮವಾದ ವಸ್ತುವನ್ನು ಹೊಂದಿರುವ ‘ತಳಿ’ ಎಂಬ ನೂತನ ನಾಟಕವನ್ನು ಏರ್ಪಡಿಸಲಾಗಿದೆ.
ಖ್ಯಾತ ನಟ ಮತ್ತು ನಿರ್ದೇಶಕ ಎಸ್.ಎನ್. ಸೇತುರಾಮ್ ಅವರ ರಚನೆ ಮತ್ತು ನಿರ್ದೇಶನದ ಈ ನಾಟಕದ ಪ್ರದರ್ಶನಕ್ಕೆ 100 ರೂಗಳ ಟಿಕೆಟ್ ದರ ಇರಿಸಲಾಗಿದೆ.
ಈಗಾಗಲೇ ಕೆಲವು ಪ್ರದರ್ಶನ ಕಂಡು, ಭಾರೀ ಜನ ಮೆಚ್ಚುಗೆ ಪಡೆದಿರುವ ಈ ನಾಟಕವನ್ನು ಆಸಕ್ತ ನಾಟಕಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ವೀಕ್ಷಿಸಬೇಕೆಂದು ಅಜೇಯ ಸಂಸ್ಕೃತಿ ಬಳಗ ವಿನಂತಿಸಿದೆ.
ಮುಂಚಿತವಾಗಿ ಟಿಕೆಟ್ ಬೇಕಾದವರು ನೆಹರು ರಸ್ತೆಯ ರಾಯಲ್ ಕಾಫಿ ವರ್ಕ್ಸ್ ನಲ್ಲಿ ಪಡೆಯಬಹುದು. ಟಿಕೆಟ್ ಗಾಗಿ ಅಥವಾ ಹೆಚ್ಚಿನ ಮಾಹಿತಿಗಾಗಿ 94484 58457, 83108 76277, 98441 53534 ಇಲ್ಲಿಗೆ ಸಂಪರ್ಕಿಸಿ.
MESCOM ಹೊಸನಗರ ಮೆಸ್ಕಾಂ ಉಪವಿಭಾಗ ಕಛೇರಿಯಲ್ಲಿ ಏಪ್ರಿಲ್ 24 ರಂದು ಜನಸಂಪರ್ಕ ಸಭೆ
MESCOM ಹೊಸನಗರ ಮೆಸ್ಕಾಂ ಉಪವಿಭಾಗ ಕಛೇರಿಯಲ್ಲಿ ಏ.24ರಂದು ಬೆಳಿಗ್ಗೆ 11.00 ರಿಂದ 01.00 ರವರೆಗೆ ಜನ ಸಂಪರ್ಕ ಸಭೆ ನಡೆಯಲ್ಲಿದೆ.
ಈ ಸಭೆಯಲ್ಲಿ ಮೆಸ್ಕಾಂನ ಅಧಿಕಾರಿಗಳು ಭಾಗವಹಿಸಲ್ಲಿದ್ದಾರೆ, ಸಂಬಂಧ ಪಟ್ಟ ಪ್ರದೇಶದ ಗ್ರಾಹಕರ ಅಹವಾಲುಗಳನ್ನು ಸ್ವೀಕರಿಸುವುದರಿಂದ ಈ ಅವಕಾಶವನ್ನು ಗ್ರಾಹಕರು ಸದುಪಯೋಗಪಡಿಸಿ ಕೊಳ್ಳುವಂತೆ ಮೆಸ್ಕಾಂ ತಿಳಿಸಿದೆ.
ಸಂಪರ್ಕಿಸಬಹುದಾದ ದೂರವಾಣಿ ಸಂಖ್ಯೆ ; 9448289517.
Shivamogga Police ಅಪರಿಚತ ವ್ಯಕ್ತಿಯ ಶವ ಪತ್ತೆ, ಗುರುತಿಗೆ ಸಹಕರಿಸಲು ಪೊಲೀಸ್ ಪ್ರಕಟಣೆ
Shivamogga Police ಏ. 20 ರಂದು ಶಿವಮೊಗ್ಗ ಮತ್ತು ಕುಂಸಿ ನಿಲ್ದಾಣಗಳ ಮಧ್ಯೆ ರೈಲಿಗೆ ಸಿಲುಕಿ 45 ರಿಂದ 50 ವಯಸ್ಸಿನ ವ್ಯಕ್ತಿ ಮೃತಪಟ್ಟಿದ್ದು, ಈತನ ಹೆಸರು, ವಿಳಾಸ ಪತ್ತೆಯಾಗಿರುವುದಿಲ್ಲ.
ಈ ಮೃತ ವ್ಯಕ್ತಿಯ ಚಹರೆ 5.04 ಅಡಿ ಎತ್ತರ, ಸಾಧಾರಣ ಮೈಕಟ್ಟು, ಕಡುಗೋಧಿ ಮೈ ಬಣ್ಣ, ಕೋಲುಮುಖ ಹೊಂದಿರುತ್ತಾನೆ. ಮೈಮೇಲೆ ಕಡುಗುಲಾಬಿ ಬಣ್ಣದ ಶರ್ಟ್, ಬಿಳಿ ಬಣ್ಣರ ಲುಂಗಿ ಧರಿಸಿರುತ್ತಾನೆ.
Shivamogga Police ಈ ವ್ಯಕ್ತಿಯ ವಾರಸ್ಸುದಾರರ ಬಗ್ಗೆ ತಿಳಿದಲ್ಲಿ ಶಿವಮೊಗ್ಗ ರೈಲ್ವೆ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ರವನ್ನ ಸಂಪರ್ಕಿಸಲು ಕೋರಿದ್ದಾರೆ. ದೂ.ಸಂ.: 08182-222974/ 9480802124ನ್ನು ಸಂಪರ್ಕಿಸಿ ಮಾಹಿತಿ ನೀಡುವಂತೆ ರೈಲ್ವೆ ಪೊಲೀಸರು ತಿಳಿಸಿದ್ದಾರೆ.
Disrtict Legal Services Authority ಜಿಲ್ಲೆಯಲ್ಲಿ ನೋಂದಾವಣೆ ರದ್ದಾಗಿರುವ ಕೆಲವು ಶಿಶು ಪಾಲನಾ ಶಾಲೆಗಳ ಬಗ್ಗೆ ಇಲಾಖೆ ಪ್ರಕಟಣೆ
Disrtict Legal Services Authority ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆಗಳ ಅದೇಶದನ್ವಯ ಶಿವಮೊಗ್ಗ ಜಿಲ್ಲೆಯಲ್ಲಿ ಬಾಲನ್ಯಾಯ ಕಾಯ್ದೆ,2015ರ ಸೆಕ್ಷನ್ 41 (1) ರಡಿ ನೋಂದಾಯಿಸಲ್ಪಟ್ಟಿರುವ ಆಶಾ ಕಿರಣ ಬುದ್ಧಿಮಾಂದ್ಯ ಮಕ್ಕಳ ವಸತಿ ಶಾಲೆ, ವಿದ್ಯಾನಗರ, ಶಿವಮೊಗ್ಗ, ತರಂಗ ಕಿವುಡು ಮಕ್ಕಳ ಹಿರಿಯ ವಸತಿ ಶಾಲೆ, ಬಸವೇಶ್ವರನಗರ, ಶಿವಮೊಗ್ಗ, ತರಂಗ ಕಿವುಡು ಮಕ್ಕಳ ವಸತಿ ನಿಲಯ, ನ್ಯೂಟೌನ್, ಭದ್ರಾವತಿ, ಮದರ್ ತೆರೆಸಾ ರೆಸಿಡೆನ್ಸಿಯಲ್ ಸ್ಕೂಲ್ ಫಾರ್ ಹಿಯರಿಂಗ್ ಇಂಪರಡ್, ಭದ್ರಾವತಿ, ಮಾತೃಛಾಯ ಸರ್ವಧರ್ಮ ಸಂಸ್ಥೆ, ಸ್ವಾಮಿ ವಿವೇಕಾನಂದ ಬಡಾವಣೆ, ಗೋಪಾಳ, ಶಿವಮೊಗ್ಗ ಮತ್ತು ಸುಜ್ಞಾನ ಸಂಸ್ಥೆ, ಶಾಂತಿನಗರ, ಶಿಕಾರಿಪುರ ತಾಲೂಕು ಈ 06 ಮಕ್ಕಳ Disrtict Legal Services Authority ಪಾಲನಾ ಸಂಸ್ಥೆಗಳನ್ನು ಪಾಲನೆ, ಪೋಷಣೆ ಮತ್ತು ರಕ್ಷಣೆ ಅಗತ್ಯವಿರುವ ಮಕ್ಕಳಿಲ್ಲದ ಕಾರಣ ಬಾಲನ್ಯಾಯ ಕಾಯ್ದೆ, 2015 ಸೆಕ್ಷನ್ 41(7)ರನ್ವಯ ಪ್ರದತ್ತವಾದ ಅಧಿಕಾರ ಚಲಾಯಿಸಿ ಸರ್ಕಾರಿ ಆದೇಶದನ್ವಯ ದಿ: 17/03/2025 ರಿಂದ ಅನ್ವಯವಾಗುವಂತೆ ರದ್ದುಗೊಳಿಸಲಾಗಿದೆ ಎಂದು ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು ತಿಳಿಸಿದ್ದಾರೆ.
Fisheries project 2024-25ನೇ ಸಾಲಿನ ಮತ್ಸ್ಯಸಂಪದ ಯೋಜನೆಗೆ ಅರ್ಹರಿಂದ ಅರ್ಜಿ ಆಹ್ವಾನ
Fisheries project 2024-25 ನೇ ಸಾಲಿನ ಪ್ರಧಾನ ಮಂತ್ರಿ ಮತ್ಯ್ಸ ಸಂಪದ ಮತ್ತು ನೀಲಿಕ್ರಾಂತಿ ಯೋಜನೆಯಡಿ ಕೇಂದ್ರ ಕಚೇರಿಯಿಂದ ಮರು ಹಂಚಿಕೆ ಮಾಡಿ ನೀಡಿರುವ ಗುರಿಗಳಿಗನುಸಾರವಾಗಿ ಬಾಕಿಯಿರುವ ಗುರಿಗಳಿಗೆ ಅರ್ಹ ಫಲಾನುಭವಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ.
Fisheries project ಅರ್ಜಿಯನ್ನು ಸಲ್ಲಿಸಲು ಮೇ 9 ರ ಸಂಜೆ 5.30 ಕೊನೆಯ ದಿನವಾಗಿರುತ್ತದೆ. ಎಂದು ಮೀನುಗಾರಿಕೆ ಉಪನಿರ್ದೇಶಕರು ತಿಳಿಸಿದ್ದಾರೆ.
Sankara Eye Hospital ‘ಅಕಾಯ್’ ವಾರ್ಷಿಕ ಸಮಾವೇಶ, ನೇತ್ರ ಆರೈಕೆಯ ಬಗ್ಗೆ ಜಾಗೃತಿ
Sankara Eye Hospital ಶಂಕರ ಕಣ್ಣಿನ ಆಸ್ಪತ್ರೆ ಶಿವಮೊಗ್ಗದಲ್ಲಿ 4ನೇ ಆಕಾಯ್ನ (ಅಸೋಸಿಯೇಶನ್ ಆಫ್ ಕಮ್ಯೂನಿಟಿ ಆಪ್ತಲ್ಮಾಲಜಿ ಆಫ್ ಇಂಡಿಯಾ) ವಾರ್ಷಿಕ ಸಮಾವೇಶ, ಕರ್ನಾಟಕ ಆವೃತ್ತಿಯನ್ನು ದಿನಾಂಕ 20.04.2025 ರಂದು ಕರ್ನಾಟಕ ಆಫ್ತಾಲ್ಮಿಕ್ ಸೋಸೈಟಿ, ಮಲ್ನಾಡ್ ಆಫ್ತಾಲ್ಮಿಕ್ ಅಸೋಸಿಯೇಶನ್ ಮತ್ತು ಶಂಕರ ಆಕ್ಯಾಡೆಮಿ ಆಫ್ ವಿಷನ್ ಸಹಯೋಗದೊಂದಿಗೆ ಆಯೋಜಿಸಲಾಗಿತ್ತು.
ಆಕಾಯ್ನ ಅಸೋಸಿಯೇಶನ್‌ನ ಗೌರವಾನ್ವಿತ ಕಾರ್ಯದರ್ಶಿಗಳಾದ ಡಾ|| ಸಪನ್ ಕುಮಾರ್ ಸಮಂತರವರು ಹಾಗೂ ಅಂತರ ರಾಜ್ಯ , ರಾಜ್ಯ ಮಟ್ಟದ ಮತ್ತು ಶಂಕರ ಕಣ್ಣಿನ ಆಸ್ಪತ್ರೆ ಬೆಂಗಳೂರಿನ ವಾಗ್ಮಿಗಳು ಮತ್ತು ನೇತ್ರ ವೈದ್ಯರು ಆಗಮಿಸಿ ಸಮುದಾಯ ನೇತ್ರ ಆರೈಕೆಯ ಮಹತ್ವ ಮತ್ತು ನಿರಂತರ ಸೇವೆಯ ಮಹತ್ವವನ್ನು ಪ್ರಸ್ಥುತಪಡಿಸಿದರು.
ವಿವಿಧ ವೈದ್ಯಕೀಯ ಕಾಲೇಜಿನ ಸ್ನಾತ್ತಕೋತ್ತರ ನೇತ್ರ ವೈದ್ಯರಿಗೆ ರಸಪ್ರಶ್ನೆ, ಪೋಸ್ಟರ್ ಪ್ರಸ್ಥುತಿ, ಕೇಸ್ ಪ್ರಸೆಂಟೇ಼ನ್ ಚಟುವಟಿಕೆಗಳನ್ನು ಕೈಗೊಂಡು ವಿಜೇತರಿಗೆ ಸೂಕ್ತ ಬಹುಮಾನಗಳನ್ನು ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ 82 ನೇತ್ರ ವೈದ್ಯರು ಪಾಲ್ಗೊಂಡಿದ್ದರು.
Sankara Eye Hospital ಶಂಕರ ಕಣ್ಣಿನ ಆಸ್ಪತ್ರೆಯ ನೇತ್ರ ನಿಧಿಯ ಮುಖ್ಯಸ್ಥರು ಡಾಮಲ್ಲಿಕಾರ್ಜುನ್ ಎಮ್ ಹೆಚ್, ಮುಖ್ಯ ವೈದ್ಯಾಧಿಕಾರಿಗಳು ಡಾಮಹೇಶ್ ಎಸ್ ಹಾಗೂ ಶಿವಮೊಗ್ಗ ಜಿಲ್ಲೆಯ ಡಿ ಬಿ ಸಿ ಎಸ್ ಕಾರ್ಯ ನಿರ್ವಾಹಣಾಧಿಕಾರಿಗಳಾದ ಡಾ||ಕಿರಣ್ ಕುಮಾರ್ ಉಪಸ್ಥಿತರಿದ್ದರು.
ಇತರೆ ವೈದ್ಯ ವೃಂದದವರು ಉಪಸ್ಥಿತರಿದ್ದರು. ಕಾರ್ಯಕ್ರಮದ ನಿರೂಪಣೆಯನ್ನು ಡಾ ರೂಪಶ್ರೀ ಅವರು ಮಾಡಿದರು, ಡಾಕೃಷ್ಣಪ್ರಸಾದ್ ಕುಡ್ಲು ರವರು ಅಧ್ಯಕ್ಷತೆಯನ್ನು ವಹಿಸಿದ್ದರು, ವಂದನೆಗಳನ್ನು ಡಾ||ಕವಿತಾ ಅವರು ಮಾಡಿದರು.
