Sunday, April 19, 2026
Sunday, April 19, 2026

Department of Soldiers Welfare and Rehabilitation ಸಾಮಾಜಿಕ ಜಾಲತಾಣಗಳಲ್ಲಿ ಹಣಹೂಡಲು ಮಾಜಿ ಸೈನಿಕರಿಗೆ ಆಮಿಷ, ಎಚ್ಚರಿಕೆ ವಹಿಸಲು ಇಲಾಖೆ ಪ್ರಕಟಣೆ

Date:

Department of Soldiers Welfare and Rehabilitation ಇತ್ತಿಚೀನ ದಿನಗಳಲ್ಲಿ ಮಾಜಿ ಸೈನಿಕರು ಮತ್ತು ಅವರ ಅವಲಂಬಿತರಿಗೆ ಕೆಲವು ಖಾಸಗಿ ವ್ಯಕ್ತಿಗಳು ಮತ್ತು ಕೆಲವೊಂದು ಸಂಘ-ಸಂಸ್ಥೆಗಳು ಆಮಿಷಗಳನ್ನು ನೀಡಿ ನಮ್ಮ ಸಂಘಕ್ಕೆ ನೋಂದಣಿಯಾದರೆ ನಿಮ್ಮ ಎಲ್ಲ ಕುಂದುಕೊರತೆಗಳನ್ನು ಬಗೆಹರಿಸಿ ಕೊಡುತ್ತೇವೆ, ಜಮೀನು ಮಂಜೂರಾತಿ ಮಾಡಿಸಿಕೊಡುತ್ತೇವೆ ಎಂಬಿತ್ಯಾದಿ ಸುಳ್ಳು ಭರವಸೆಗಳನ್ನು ನೀಡುತ್ತಿರುವುದಾಗಿ ಹಾಗೂ ಚೀಟಿ ಮತ್ತು ಫೈನಾನ್ಸ್ ಯೋಜನೆಗಳಲ್ಲಿ ಹಣವನ್ನು ಹೂಡಿಕೆ ಮಾಡುವಂತೆ ಒತ್ತಡವನ್ನು ಹಾಕುತ್ತಿದ್ದಾರೆಂಬ ಮಾಹಿತಿಯು ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ ಕಛೇರಿಯ ಗಮನಕ್ಕೆ ಬಂದಿರುತ್ತದೆ. Department of Soldiers Welfare and Rehabilitation ಇಂತಹ ಅಮಿಷಗಳಿಗೆ ಕಿವಿಗೊಡಬಾರದೆಂದು ಹಾಗೂ ಖಾಸಗೀ ಯೂಟ್ಯೂಬ್, ಇನ್ ಸ್ಟಾಗ್ರಾಮ್, ವಾಟ್ಸಪ್ ಗ್ರೂಪ್, ಫೇಸ್‌ಬುಕ್ ಪೇಜ್ ಮತ್ತು ಇತರೆ ಸಾಮಾಜಿಕ ಜಾಲತಾಣಗಳಲ್ಲಿ ಬರುವಂತಹ ಮಾಜಿ ಸೈನಿಕರ ಪಾಲಿಸಿಗಳ ಹೆಚ್ಚಿನ ಪತ್ರಗಳು ಕೂಡ ನಕಲಿಯಾಗಿರುತ್ತವೆಯೆಂದು ಹಾಗೂ ಮಾಜಿ ಸೈನಿಕರುಗಳಿಗೆ ಪಾಲಿಸಿ/ದಾಖಲೆಗಳ ಯಾವುದೇ ರೀತಿಯ ಅನುಮಾನಗಳಿದ್ದರೆ ನೇರವಾಗಿ ಸೈನಿಕ ಕಛೇರಿಗೆ ಸಂಪರ್ಕಿಸಿ ಸ್ಪಷ್ಟಿಕರಣವನ್ನು ಪಡೆಯಬೇಕೆಂದು ಉಪ ನಿರ್ದೇಶಕರು, ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ, ಶಿವಮೊಗ್ಗ ಇವರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Bhadravati Police ಭದ್ರಾವತಿಯಿಂದ ವ್ಯಕ್ತಿ ನಾಪತ್ತೆ, ಹಳೇನಗರ ಪೊಲೀಸ್ ಠಾಣೆ ಪ್ರಕಟಣೆ

Bhadravati Police ಭದ್ರಾವತಿ ಹಳೆ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಅಂಬೇಡ್ಕರ್...

MESCOM ಏಪ್ರಿಲ್ 19. ಶಿವಮೊಗ್ಗ ದುರ್ಗಿಗುಡಿ‌ ಸುತ್ತಮುತ್ತ ವಿದ್ಯುತ್ ಸರಬರಾಜು ವ್ಯತ್ಯಯ

MESCOM ಶಿವಮೊಗ್ಗ ನಗರ ಉಪವಿಭಾಗ-1, ಘಟಕ-2ರ ವ್ಯಾಪ್ತಿಯಲ್ಲಿ ವಿದ್ಯುತ್ ಕಂಬ...

Sri Shankaracharya Jayanti ಏ.21ರಂದು ಶ್ರೀ ಶಂಕರಾಚಾರ್ಯ ಜಯಂತಿ

Sri Shankaracharya Jayanti ಶಿವಮೊಗ್ಗ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರ...