Friday, February 27, 2026
Friday, February 27, 2026
Home Blog Page 278

Sagar Jambagaru Railway Station ಸಾಗರ ಜಂಬಗಾರು ರೈಲ್ವೆ ಟ್ರಾಕ್ಷನ್‌ಗೆ ವಿದ್ಯುತ್ ಸಂಪರ್ಕ : ಎಚ್ಚರಿಕೆ

0

Sagar Jambagaru Railway Station ಶಿವಮೊಗ್ಗ ತಾಲೂಕು ಸಾಗರ ಜಂಬಗಾರು ರೈಲ್ವೆ ಟ್ರಾಕ್ಷನ್ ವಿದ್ಯುತ್ ಕೇಂದ್ರಕ್ಕೆ 5 ಎಂ.ವಿ.ಎ. ವಿದ್ಯುತ್ ಹೊರೆಯನ್ನು 110 ಕೆ.ವಿ. ವೋಲ್ಟೇಜ್ ರೆಫ್ರೆನ್ಸ್ನಲ್ಲಿ 110/33/11 ಕೆವಿ ಸಾಗರ ವಿದ್ಯುತ್ ಉಪಕೇಂದ್ರದಿಂದ ಮಂಡಕಳಲೆ ಗ್ರಾಮದ ಮುಖಾಂತರ 0.215 ಕಿ.ಮೀ. 110 ಕೆವಿ 400ಚ.ಮೀ.ಮೀ. ಭೂಗತ ಕೇಬಲ್ ಮುಖಾಂತರ ವಿದ್ಯುತ್ ಸರಬರಾಜು ಪೂರೈಸುವ ಕಾಮಗಾರಿಯು ಪೂರ್ಣಗೊಂಡಿದ್ದು, ಜೂ.13 ರಂದು ಅಥವಾ ನಂತರದ ದಿನಗಳಲ್ಲಿ ಯಾವುದೇ ಕ್ಷಣದಲ್ಲಿಯಾದರೂ ವಿದ್ಯುತ್ ಸರಬರಾಜು ಮಾಡಲಾಗುತಿದೆ. ಸಾರ್ವಜನಿಕರು ಈ ಮಾರ್ಗದಲ್ಲಿ ಕೆಪಿಟಿಸಿಎಲ್ 110 ಕೆವಿ ಭೂಗತ ಕೇಬಲ್ ಎಂದು ಕಲ್ಲಿನ ಫಲಕ ನೆಡಲಾಗಿರುವ ಕಡೆ ಯಾವುದೇ ಕಾಮಗಾರಿಗಳಿಗೆ ಗುಂಡಿಯನ್ನು ತೆಗೆಯುವುದನ್ನು ನಿಷೇಧಿಸಲಾಗಿದ್ದು, ಈ ಕೃತ್ಯದಿಂದ ಉಂಟಾಗುವ ವಿದ್ಯುತ್ ಅಪಘಾತಗಳ ಪರಿಣಾಮಗಳಿಗೆ ನೇರ ಹೊಣೆಗಾರರಾಗಿರುತ್ತಾರೆ ಮತ್ತು ಒಂದು ವೇಳೆ ಭೂಮಿ ಅಗಿಯುವ ಕೃತ್ಯದಿಂದ ಕೇಬಲ್‌ಗೆ ಹಾನಿಯಾದಲ್ಲಿ ಇದರ ರಿಪೇರಿಯ/ಹೊಸ ಕೇಬಲ್‌ನ ಸಂಪೂರ್ಣ ವೆಚ್ಚವನ್ನೂ ಭರಿಸಬೇಕಾಗುತ್ತದೆ. ಅನಿವಾರ್ಯ ಸಂದರ್ಭದಲ್ಲಿ ಈ ಪ್ರದೇಶಗಳಲ್ಲಿ ಇನ್ನಿತರ ಇಲಾಖೆಗಳು ಅಥವಾ ಸಾರ್ವಜನಿಕರು ಕೆಲಸ ಮಾಡಬೇಕಾದಲ್ಲಿ ನಿಗಮದ ವತಿಯಿಂದ ನಿರಾಕ್ಷೇಪಣೆ ಪತ್ರ ಪಡೆದು ಸಂಬAಧಿಸಿದ ಅಧಿಕಾರಿಗಳನ್ನು ಸಂಪರ್ಕಿಸಿ ಅವರ ಸಮ್ಮುಖದಲ್ಲಿಯೇ ಕೆಲಸ ನಿರ್ವಹಿಸಲು ಸೂಚಿಸಿದೆ.
Sagar Jambagaru Railway Station ಈ ಎಲ್ಲಾ ನಿಯಮಗಳನ್ನು ಉಲ್ಲಂಘಿಸಿ ವಿದ್ಯುತ್ ಅಪಘಾತ ಸಂಭವಿಸಿದಲ್ಲಿ ಕೆಲಸ ನಿರ್ವಹಿಸಿದವರೇ ನೇರ ಹೊಣೆಗಾರರಾಗಿದ್ದು, ನಿಗಮವು ಜವಾಬ್ಧಾರಿಯಾಗಿರುವುದಿಲ್ಲ ಹಾಗೂ ಯಾವುದೇ ಪರಿಹಾರವನ್ನು ನೀಡಲಾಗುವುದಿಲ್ಲ ಎಂದು ಕಾರ್ಯನಿರ್ವಾಹಕ ಇಂಜಿನಿಯರ್ (ವಿ), ಯೋಜನೆ ವಿಭಾಗ, ಕವಿಪ್ರನಿನಿ ಶಿವಮೊಗ್ಗ ಇವರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

Karnataka Maratha Communities Development Corporation Limited ಮರಾಠ ಅಭಿವೃದ್ಧಿ ನಿಗಮದಿಂದ ವಿವಿಧ ಯೋಜನೆಗಳಿಗೆ ಅರ್ಜಿ ಆಹ್ವಾನ

0

Karnataka Maratha Communities Development Corporation Limited ಕರ್ನಾಟಕ ಮರಾಠ ಸಮುದಾಯಗಳ ಅಭಿವೃದ್ಧಿ ನಿಗಮದಿಂದ 2025-26 ನೇ ಸಾಲಿಗೆ ಹಿಂದುಳಿದ ವರ್ಗಗಳ ಜನರಿಗೆ ವಿವಿಧ ಯೋಜನೆಗಳಾದ ಶಹಾಜೀರಾಜೇ ಸಮೃದ್ಧಿ ಯೋಜನೆ (ಸ್ವಯಂ ಉದ್ಯೋಗ ನೇರ ಸಾಲ ಮತ್ತು ಸಹಾಯಧನ), ಜೀಜಾವು ಜಲಭಾಗ್ಯ ಯೋಜನೆ (ಗಂಗಾ ಕಲ್ಯಾಣ ನೀರಾವರಿ ಯೋಜನೆ), ಅರಿವು ಶೈಕ್ಷಣಿಕ ಸಾಲ ಯೋಜನೆ, (ಅರಿವು ಶೈಕ್ಷಣಕ ಸಾಲ ಯೋಜನೆ ನವೀಕರಣ), ಶಾಹುಮಹಾರಾಜ ವಿದೇಶಿ ವಿಶ್ವ ವಿದ್ಯಾಲಯಗಳಲ್ಲಿ ಉನ್ನತ ವ್ಯಾಸಂಗ ಸಾಲ ಯೋಜನೆ (ರಾಜಶ್ರೀ ಶಾಹುಮಹಾರಾಜ ವಿದೇಶಿ ವಿಶ್ವ ವಿದ್ಯಾಲಯಗಳಲ್ಲಿ ಉನ್ನತ ವ್ಯಾಸಂಗ ಸಾಲ ಯೋಜನೆ), ಮರಾಠ ಮಿಲ್ಟ್ರೀ ಹೋಟೆಲ್ ಯೋಜನೆ, ಸ್ವಯಂ ಉದ್ಯೋಗ ಸಾಲ ಯೋಜನೆ (ವ್ಯಾಣಿಜ್ಯ ಬ್ಯಾಂಕುಗಳ ಸಹಯೋಗದೊಂದಿಗೆ), ಸ್ವಾತಂತ್ರ್ಯ ಅಮೃತ ಮಹೋತ್ಸವದ ಮುನ್ನಡೆ ಯೋಜನೆಗಳಿಗೆ (ವಿಶ್ವಕರ್ಮ, ಉಪ್ಪಾರ, ಅಂಬಿಗ, ಸವಿತಾ, ಮಡಿವಾಳ, ಅಲೆಮಾರಿ ಮತ್ತು ಅರೆ ಅಲೆಮಾರಿ ಸಮುದಾಯ, ಒಕ್ಕಲಿಗ, ಲಿಂಗಾಯಿತ, ಕಾಡುಗೊಲ್ಲ, ಹಟ್ಟಿಗೊಲ್ಲ, ಮತ್ತು ಇದರ ಉಪ ಸಮುದಾಯಗಳನ್ನು ಹೊರತು ಪಡಿಸಿ) ಮರಾಠ ಸಮುದಾಯದ ಜನರಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ.
Karnataka Maratha Communities Development Corporation Limited ಅರ್ಜಿದಾರರು ತಮ್ಮ ಆಧಾರ್ ಸಂಖ್ಯೆಗೆ ಮೊಬೈಲ್ ಸಂಖ್ಯೆಯನ್ನು ಜೋಡಣೆ ಮಾಡಿರಬೇಕು ಹಾಗೂ ಬ್ಯಾಂಕ್ ಖಾತೆಗೆ ಆಧಾರ್ ಸಂಖ್ಯೆಯನ್ನು ಸೀಡಿಂಗ್ ಮಾಡಿಸಿರಬೇಕು. ನಿರ್ದೇಶಕರ ಮಂಡಳಿಯ ವಿವೇಚನಾ ಕೋಟಾದಡಿ ಸೌಲಭ್ಯ ಪಡೆಯ ಬಯಸುವವರೂ ಸಹ ಆನ್ ಲೈನ್ ನಲ್ಲಿ ಪ್ರತ್ಯೇಕವಾಗಿ ಅರ್ಜಿಯನ್ನು ಸಲ್ಲಿಸುವುದು. ಒಂದು ಕುಟುಂಬದ ಒಬ್ಬ ಸದಸ್ಯರು ಮಾತ್ರ ಮೇಲ್ಕಂಡ ಯಾವುದಾದರೂ ಒಂದು ಯೋಜನೆಯಲ್ಲಿ ಸೌಲಭ್ಯ ಪಡೆಯಲು ಅರ್ಜಿ ಸಲ್ಲಿಸಬಹುದು. 2023-24 ಮತ್ತು 2024-25 ನೇ ಸಾಲಿನ ನಿಗದಿತ ಯೋಜನೆಗೆ ಅರ್ಜಿ ಸಲ್ಲಿಸಿ ಆಯ್ಕೆಯಾಗದವರು ಈ ವರ್ಷ ಅರ್ಜಿ ಸಲ್ಲಿಸುವ ಅವಶ್ಯಕತೆ ಇರುವುದಿಲ್ಲ.
ಎಲ್ಲಾ ಯೋಜನೆಗಳಿಗೆ ಅರ್ಜಿಯನ್ನು ಸೇವಾಸಿಂಧು ಪೋರ್ಟಲ್ ಮುಖಾಂತರ ಗ್ರಾಮ ಒನ್, ಬೆಂಗಳೂರು ಒನ್, ಮತ್ತು ಕರ್ನಾಟಕ ಒನ್ ಸೇವಾ ಕೇಂದ್ರಗಳಲ್ಲಿ ಆನ್ ಲೈನ್ ಮೂಲಕ ಜುಲೈ 4 ರೊಳಗಾಗಿ ಸಲ್ಲಿಸುವುದು. (ಶೈಕ್ಷಣಿಕ ಸಾಲ ಯೋಜನೆಗೆ ಕೊನೆಯ ದಿನಾಂಕ ಇರುವುದಿಲ್ಲ).
ಹೆಚ್ಚಿನ ಮಾಹಿತಿಗಾಗಿ https://kmcdc.karnataka.gov.in ಹಾಗೂ ನಿಗಮದ ಸಹಾಯವಾಣಿ ಮೊ.ನಂ. 8867537799 ದೂ.ಸಂ.080-29903994 ಗಳನ್ನು ಸಂಪರ್ಕಿಸಬಹುದು ಎಂದು ನಿಗಮದ ಜಿಲ್ಲಾ ವ್ಯವಸ್ಥಾಪಕ ಡಾ. ಪ್ರಕಾಶ್ ಆರ್ ಪಾಗೋಜಿ ತಿಳಿಸಿದ್ದಾರೆ.

Jayanagara Police ವಾಹನಗಳ ವಾರಸುದಾರರ ಪತ್ತೆಗೆ ಮನವಿ

0

Jayanagara Police ಜಯನಗರ ಪೊಲೀಸ್ ಠಾಣೆಯಲ್ಲಿ ವಾರಸುದಾರರಿಲ್ಲದ 8 ವಾಹನಗಳಿದ್ದು, ಕೆಎ-14-ಇಇ-1582- ಟಿವಿಎಸ್ ಎಕ್ಸ್ಎಲ್, ಕೆಎ-14-ಕ್ಯೂ-7882-ಟಿವಿಎಸ್ ವಿಕ್ಟರ್, ಕೆಎ-18 ಜೆ-6899-ಹಿರೋಹೊಂಡಾ ಸ್ಪ್ಲೆಂಡರ್, ಕೆಎ-05-ಕೆಡಿ-2731-ಪಿಯಗ್ಗಿಯೋ ಎಪ್ರಿಲಾ, ಕೆಎ-03-ಇಎನ್-3389-ಟಿವಿಎಸ್ ಫೀಯರೊ, ಕೆಎ-02-ಇಕೆ-0300-ಹೋಂಡಾ ಯಾಕ್ಟೀವಾ, ಕೆಎ-14-ಎಸ್-0508-ಹೋಂಡಾ ಯಾಕ್ಟೀವಾ, ಕೆಎ-14-ಎಲ್-3568 ಟಿವಿಎಸ್ ಎಕ್ಸ್ಎಲ್ ಸೂಪರ್. ಈ ರಿಜಿಸ್ಟ್ರೇಷನ್ ನಂಬರಿನ ವಾಹನಗಳ Jayanagara Police ವಾರಸುದಾರರು ಇದ್ದಲ್ಲಿ ಜಯನಗರ ಪೊಲೀಸ್ ಠಾಣೆ ದೂ.ಸಂ.: 08182-261416ನ್ನು ಸಂಪರ್ಕಿಸಿ ಮಾಹಿತಿ ನೀಡುವಂತೆ ಪೊಲೀಸ್ ತಿಳಿಸಿದೆ.

Shivamogga Police ಅಪರಿಚಿತ ವ್ಯಕ್ತಿ ಸಾವು

0

Shivamogga Police ಶಿವಮೊಗ್ಗ ಬಿ.ಹೆಚ್ ರಸ್ತೆಯಲ್ಲಿರುವ ಮಿನಾಕ್ಷಿ ಭವನದ ಬಳಿ ಅಸ್ವಸ್ಥರಾಗಿ ಬಿದಿದ್ದ ಸುಮಾರು 55 ರಿಂದ 60 ವರ್ಷದ ಅನಾಮಧೇಮಯ ವ್ಯಕ್ತಿಯನ್ನು ಜೂ.6 ರಂದು ಮೆಗ್ಗಾನ್ ಆಸ್ಪತ್ರೆಗ ದಾಖಲು ಮಾಡಿದ್ದು, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುತ್ತಾರೆ.
ಮೃತ ವ್ಯಕ್ತಿಯು 5.5 ಅಡಿ ಎತ್ತರ, ಕೋಲು ಮುಖ, ಸಾಧಾರಣ ಮೈಕಟ್ಟು, ಎಣ್ಣೆಗೆಂಪು ಮೈ ಬಣ್ಣ ಹೊಂದಿದ್ದು ತಲೆಯಲ್ಲಿ 2 ಇಂಚು ಉದ್ದದ ಕಪ್ಪು ಬಿಳಿನ ಕೂದಲು, 2 ಇಂಚು ಉದ್ದದ ಗಡ್ಡ, ಬಲಗೈಯಲ್ಲಿ ಉಮಾ ಮತ್ತು ಉಷಾ ಎಂಬ ಹೆಸರಿನ ಹಚ್ಚೆ, ಎಡ ಬಗಲಿನಲ್ಲಿ ರಾಗಿಕಾಳು ಗಾತ್ರದ ಕಪ್ಪು ಮಚ್ಚೆ ಇರುತ್ತದೆ. Shivamogga Police ಮೈ ಮೇಲೆ ಸಣ್ಣಸಣ್ಣ ಚೌಕಗಳುಳ್ಳ ಕಪ್ಪು ಬಣ್ಣದ ಅರ್ಧ ತೋಳಿನ ಶರ್ಟ್ ಹಾಗೂ ನೀಲಿ ಬಣ್ಣದ ನೈಟ್ ಪ್ಯಾಂಟ್ ಧರಿಸಿದ್ದಾರೆ. ಈ ವ್ಯಕ್ತಿಯ ವಾರಸುದಾರರು ಯಾರಾದರೂ ಇದ್ದಲ್ಲಿ ಕೋಟೆ ಪೊಲೀಸ್ ಠಾಣೆಯನ್ನು ಸಂಪರ್ಕಿಸಬಹುದೆಂದು ತಿಳಿಸಿದೆ.

Shimoga-Bhadravati Urban Development Authority ಸುಂದರ ನಗರ ನಿರ್ಮಾಣಕ್ಕೆ ನಾಗರೀಕರು ಕೈ ಜೋಡಿಸಲು ಮನವಿ : ಹೆಚ್ ಎಸ್ ಸುಂದರೇಶ್

0

Shimoga-Bhadravati Urban Development Authority ಮಲೆನಾಡು ಭಾಗದಲ್ಲಿ ಹಸಿರು ಉಳಿಸಲು ಮತ್ತು ಆರೋಗ್ಯಕರ ಜೀವನ ನಡೆಸಲು ಉದ್ಯಾನವನಗಳಲ್ಲಿ ಜಿಮ್, ಮಕ್ಕಳ ಆಟಿಕೆ ಅಳವಡಿಕೆ ಸೇರಿದಂತೆ ಸುಂದರ ನಗರ ನಿರ್ಮಾಣಕ್ಕೆ ಸೂಡಾ ಪ್ರಯತ್ನ ಪಡುತ್ತಿದ್ದು ನಗರದ ನಾಗರೀಕರು ಸಹ ಕೈಜೋಡಿಸಬೇಕೆಂದು ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷರಾದ ಹೆಚ್ ಎಸ್ ಸುಂದರೇಶ್ ಕೋರಿದರು.
ಗುರುವಾರ ಶಿವಮೊಗ್ಗ ನಗರದ ಗೋಪಿಶೆಟ್ಟಿಕೊಪ್ಪದ ಸುರಭಿ ಸಮುದಾಯ ಭವನದ ಹಿಂಭಾಗದ ಉದ್ಯಾನವನದಲ್ಲಿ ಉದ್ಯಾನವನ ಅಭಿವೃದ್ದಿ ಕಾಮಗಾರಿಗೆ ಗುದ್ದಲಿಪೂಜೆ ನೆರವೇರಿಸಿ ಅವರು ಮಾತನಾಡಿದರು.
ಇತ್ತೀಚಿಗೆ ಮಲೆನಾಡು ಬಯಲು ಸೀಮೆಯಾಗುತ್ತಿದೆ. ಹಸಿರು ಕಡಿಮೆಯಾಗುತ್ತಿದೆ. ನಾವು ನಮ್ಮ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಚ-ಸುಂದರವಾಗಿಟ್ಟುಕೊಳ್ಳಬೇಕು. ಮನೆ ಸುತ್ತಮುತ್ತ ಗಿಡಗಳನ್ನು ನೆಟ್ಟು ಪೋಷಿಸಬೇಕು. ಇತ್ತೀಚಿನ ವಾತಾವರಣ, ಜೀವನಶೈಲಿ, ಆಹಾರ ಪದ್ದತಿಯಿಂದ ಅನೇಕ ಸಮಸ್ಯೆಗಳು ಎದುರುಗಾಗುತ್ತಿದ್ದು, ಸಾರ್ವಜನಿಕರು ಉತ್ತಮ ಪರಿಸರದಲ್ಲಿ ವಾಯುವಿಹಾರ, ವ್ಯಾಯಾಮ, ಜಿಮ್ ಮಾಡಲು ಉದ್ಯಾನವನಗಳನ್ನು ಅಭಿವೃದ್ದಿಪಡಿಸಲಾಗುತ್ತಿದೆ. ಸೂಡಾ ವತಿಯಿಂದ ಈಗಾಗಲೇ 33 ಪಾರ್ಕುಗಳನ್ನು ಅಭಿವೃದ್ದಿಪಡಿಸಲಾಗುತ್ತಿದ್ದು ಪಾರ್ಕ್ಗಳಲ್ಲಿ ವಾಕಿಂಗ್ ಪಾಥ್, ಜಿಮ್, ಮಕ್ಕಳ ಆಟಿಕೆ ಅಳವಡಿಕೆ ಮಾಡಲಾಗುತ್ತಿದೆ.
ಮುಂದಿನ ದಿನಗಳಲ್ಲಿ ಪ್ರಾಧಿಕಾರದ ವ್ಯಾಪ್ತಿಯಲ್ಲಿ 45 ಪಾರ್ಕ್ಗಳನ್ನು ಅಭಿವೃದ್ದಿ ಪಡಿಸಲಾಗುವುದು. ಹಾಗೂ ಪ್ರಸ್ತುತ 17 ಕೆರೆಗಳ ಅಭಿವೃದ್ದಿ ಮಾಡಲು ಕ್ರಮ ವಹಿಸಲಾಗುತ್ತಿದೆ ಎಂದರು.
ಗೋಪಿಶೆಟ್ಟಿಕೊಪ್ಪದ ಸುರಭಿ ಸಮುದಾಯ ಭವನದ ಹಿಂಭಾಗದ ಉದ್ಯಾನವನಕ್ಕೆ ರೂ.20 ಲಕ್ಷ ಮೊತ್ತದಲ್ಲಿ ಉದ್ಯಾನವನ ಪ್ರದೇಶವನ್ನು ಸ್ವಚ್ಚಗೊಳಿಸಿ ಸಮತಟ್ಟು ಮಾಡುವುದು, ಉದ್ಯಾನವನದ ಪ್ರದೇಶಕ್ಕೆ ಫೌಂಡೇಶನ್ ಸಹಿತ ಕಾಂಕ್ರಿಟ್ ಪಿಲ್ಲರ್‌ನೊಂದಿಗೆ ಚೈನ್ ಲಿಂಕ್ ಫೆನ್ಸಿಂಗ್ ಮತ್ತು ಗೇಟ್ ಅಳವಡಿಕೆ ಮಾಡಲಾಗುವುದು.
Shimoga-Bhadravati Urban Development Authority ನಗರದ ಸ್ವಾಮಿ ವಿವೇಕಾನಂದ ಬಡಾವಣೆಯ ಇ-ಬ್ಲಾಕ್ ಉದ್ಯಾನವನದಲ್ಲಿ ರೂ.20 ಲಕ್ಷ ಮೊತ್ತದಲ್ಲಿ ಪ್ಲಾಟ್‌ಫಾರ್ಮ್ ನಿರ್ಮಾಣದೊಂದಿಗೆ 11 ಸಂಖ್ಯೆ ಹೊರಾಂಗಣ ವ್ಯಾಯಾಮ ಸಾಮಗ್ರಿ ಅಳವಡಿಕೆ, ಉದ್ಯಾನವನದಲ್ಲಿ ಸಂಪ್ ನಿರ್ಮಾಣ, ಉದ್ಯಾನವನದಲ್ಲಿ ಫೆನ್ಸಿಂಗ್ ದುರಸ್ತಿಪಡಿಸಲಾಗುವುದು ಎಂದರು.
ನಗರದ ಗೋಪಾಳ ಬಡಾವಣೆ ಡಿ ಮತ್ತು ಇ-ಬ್ಲಾಕ್‌ಗಳ ಉದ್ಯಾನವನದಲ್ಲಿ ರೂ.25 ಲಕ್ಷ ಮೊತ್ತದ ಅಭಿವೃದ್ದಿ ಕಾಮಗಾರಿಗೆ ಗುದ್ದಲಿಪೂಜೆ ನೆರವೇರಿಸಿದ ಅವರು ಉದ್ಯಾನವನದಲ್ಲಿ ಪ್ಲಾಟ್‌ಫಾರ್ಮ್ ನಿರ್ಮಾಣದೊಂದಿಗೆ 09 ಸಂಖ್ಯೆ ಹೊರಾಂಗಣ ವ್ಯಾಯಾಮ ಸಾಮಗ್ರಿ ಅಳವಡಿಕೆ, ಉದ್ಯಾನವನದಲ್ಲಿ ಫೆನ್ಸಿಂಗ್ ದುರಸ್ತಿ, ಹಾಗೂ ಹಾಲಿ ಇರುವ ಪಾಥ್‌ವೇನ ಆಯ್ದ ಭಾಗದಲ್ಲಿ ದುರಸ್ತಿಪಡಿಸುವುದು, ಉದ್ಯಾನವನದಲ್ಲಿ 07 ಸಂಖ್ಯೆ ಸಾದರಳ್ಳಿ ಕಲ್ಲಿನ ಬೆಂಚು ಅಳವಡಿಕೆ ಮಾಡಲಾಗುವುದು ಎಂದರು.
ನಗರದ ಪಂಪಾ ನಗರದಲ್ಲಿರುವ ಮಲೆನಾಡು ಸೊಸೈಟಿ ಪಕ್ಕದ ಉದ್ಯಾನವನದ ಅಭಿವೃದ್ದಿ ಮತ್ತು ಗಾಡಿಕೊಪ್ಪ ಪೊಲೀಸ್ ಲೇಔಟ್ ಉದ್ಯಾನವನದಲ್ಲಿ ಮಕ್ಕಳ ಆಟಿಕೆ ಅಳವಡಿಕೆಗೆ ರೂ.25 ಲಕ್ಷ ಮೊತ್ತದಲ್ಲಿ ಕಾಮಗಾರಿ ಕೈಗೊಳ್ಳಲಾಗುತ್ತಿದ್ದು ಉದ್ಯಾನವನದಲ್ಲಿ ಪ್ಲಾಟ್‌ಫಾರ್ಮ್ ನಿರ್ಮಾಣದೊಂದಿಗೆ 8 ಸಂಖ್ಯೆ ಹೊರಾಂಗಣದಲ್ಲಿ ವ್ಯಾಯಾಮ ಸಾಮಗ್ರಿ ಅಳವಡಿಕೆ, ಸುಮಾರು 100 ಮೀ ಪಾಥ್‌ವೇ ನಿರ್ಮಾಣ ಹಾಗೂ 03 ಸಂಖ್ಯೆ ಸಾದರಳ್ಳಿ ಕಲ್ಲಿನ ಬೆಂಚು ಅಳವಡಿಕೆ ಮಾಡಲಾಗುವುದು ಎಂದರು.
ಈ ವೇಳೆ ಶಾಸಕರಾದ ಎಸ್ ಎನ್ ಚನ್ನಬಸಪ್ಪ, ಬಡಾವಣೆಗಳ ನಿವಾಸಿಗಳು, ಎಇಇ ಬಸವರಾಜ್, ಇಂಜಿನಿಯರ್ ದಿನೇಶ್ ಇತರರು ಪಾಲ್ಗೊಂಡಿದ್ದರು.

CM Siddharamaih ಸಿಎಂ ಸಿದ್ಧರಾಮಯ್ಯ ಅವರಿಂದ ಕುಸುಮ್ ಸೌರೀಕರಣ ಯೋಜನೆಗೆ ಚಾಲನೆ

0

CM Siddharamaih ನಮ್ಮ ಸರ್ಕಾರ ಪ್ರತೀ ವರ್ಷ ₹19,000 ಕೋಟಿ ರೂಪಾಯಿ ಪಂಪ್ ಸೆಟ್ ಸಬ್ಸಿಡಿ ಹಣ ನೀಡುತ್ತಿದೆ.
ಹಿಂದಿನ ಬಿಜೆಪಿ ಸರ್ಕಾರದ ಎರಡು ವರ್ಷಗಳಲ್ಲಿ ಈ ಯೋಜನೆ ಆರಂಭಿಸಲೇ ಇಲ್ಲ. ಮತ್ತೆ ನಾವೇ ಅಧಿಕಾರಕ್ಕೆ ಬಂದು ಜಾರಿ ಮಾಡಿದ್ದೇವೆ‌ ಎಂದು ಸಿದ್ಧರಾಮಯ್ಯ ಹೇಳಿದ್ದಾರೆ

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ವಿವಿಧ ಇಲಾಖೆಗಳ ಸಹಯೋಗದಲ್ಲಿ ಆಯೋಜಿಸಿದ್ದ ಕುಸುಮ್ ಸೌರೀಕರಣ ಯೋಜನೆಗೆ ಚಾಲನೆ ನೀಡಿ, ‘ಲಿಪಿ-ಮನೆ’ ಕಟ್ಟಡ ನಿರ್ಮಾಣ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಮಾತನಾಡಿದರು

ನಾನು ಉದ್ಘಾಟನೆ ಮಾಡಿರುವ 70 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದನೆಯ ಸೌರೀಕರಣ ಘಟಕದಿಂದ ರೈತರಿಗೆ ಹಗಲಿನಲ್ಲೇ 3 ಫೇಸ್ ವಿದ್ಯುತ್ ಅನ್ನು 5 ಗಂಟೆಗಳ ಕಾಲ ಒದಗಿಸಲಾಗುತ್ತಿದೆ.
ಸಂಪೂರ್ಣ ಗುಣಮಟ್ಟದ ವಿದ್ಯುತ್ ರೈತರ ಪಂಪ್ ಸೆಟ್ ಗಳಿಗೆ ಸಿಗುತ್ತಿರುವುದರಿಂದ ವಿದ್ಯುತ್ ಅಪವ್ಯಯ ಆಗುವುದು ತಪ್ಪಿದೆ.

ಹೆಸರಿಗೆ ಇದು ಕೇಂದ್ರದ ಯೋಜನೆ. ಆದರೆ ರಾಜ್ಯ ಸರ್ಕಾರ ಶೇ.50 ರಷ್ಟು ಹಣ ಕೊಡುತ್ತದೆ. ಶೇ.20 ರಷ್ಟು ಹಣ ಹೂಡಿಕೆದಾರರದ್ದು. ಕೇಂದ್ರ ಸರ್ಕಾರ ಕೊಡುವುದು ಕೇವಲ ಶೇ.30 ರಷ್ಟು ಹಣ ಮಾತ್ರ. ಆದರೂ ಇದಕ್ಕೆ ಕೇಂದ್ರದ ಯೋಜನೆ ಎಂದು ಹೆಸರಿಟ್ಟಿದ್ದಾರೆ.
ಒಂದು ಮೆವ್ಯಾ ವಿದ್ಯುತ್ ಉತ್ಪಾದನೆಗೆ 3 ಕೋಟಿ ಖರ್ಚಾದರೆ ಒಂದು ಕೋಟಿ ಮಾತ್ರ ಕೇಂದ್ರ ಸರ್ಕಾರದ್ದು. ಉಳಿದದ್ದಷ್ಟನ್ನೂ ನಾವು ಕೊಡುತ್ತೇವೆ.

ನಾವು ಅಧಿಕಾರಕ್ಕೆ ಬಂದು 4 ಸಾವಿರ ಮೆ.ವ್ಯಾ ವಿದ್ಯುತ್ ಉತ್ಪಾದನೆ ಹೆಚ್ಚಿಸಿದ್ದೇವೆ. ಈಗ ಒಟ್ಟು 30 ಸಾವಿರ ಮೆ.ವ್ಯಾ ಉತ್ಪಾದನೆ ಆಗುತ್ತಿದೆ. ಮುಂದಿನ ಮೂರು ವರ್ಷಗಳಲ್ಲಿ 60 ಸಾವಿರ ಮೆ.ವ್ಯಾ ಗೆ ಉತ್ಪಾದನೆ ಹೆಚ್ಚಿಸುವ ಗುರಿ ಹೊಂದಿದ್ದೇವೆ.
ಆ ಮೂಲಕ ರೈತರ ಬಹು ದೊಡ್ಡ ಸಂಕಷ್ಟಕ್ಕೆ ಪರಿಹಾರ ಒದಗಿಸಿಕೊಡುತ್ತಿದ್ದೇವೆ.

ನಾವು ಚುನಾವಣೆಗೂ ಮೊದಲು ಕೊಟ್ಟಿದ್ದ ಭರವಸೆಗಳಲ್ಲಿ ಬಹುಪಾಲನ್ನು ಈಗಾಗಲೇ ಈಡೇರಿಸಿ ರಾಜ್ಯದ ಜನರ ಮನೆ ಬಾಗಿಲಿಗೆ ತಲುಪಿಸಿದ್ದೇವೆ. ಮುಂದಿನ ಮೂರು ವರ್ಷಗಳಲ್ಲಿ ಉಳಿದ್ದದ್ದೆಲ್ಲವನ್ನೂ ಈಡೇರಿಸಿ ನುಡಿದಂತೆ ನಡೆಯುವ ನಮ್ಮ ಪರಂಪರೆಯನ್ನು ಮುಂದುವರೆಸುತ್ತೇವೆ.

CM Siddharamaih ಮುಂದಿನ ಬಜೆಟ್ ನಲ್ಲಿ ಗೌರಿಬಿದನೂರಿಗೆ ಒಳಚರಂಡಿ ವ್ಯವಸ್ಥೆಯನ್ನು ಕಲ್ಪಿಸಲಾಗುವುದು.
ಅಲಿಪುರ ಗ್ರಾಮ ಪಂಚಾಯ್ತಿಯನ್ನು ಪಟ್ಟಣ ಪಂಚಾಯತಿಯಾಗಿ ಮೇಲ್ದರ್ಜೆಗೆ ಏರಿಸಲಾಗುವುದು.
ಶಾಸಕ ಪುಟ್ಟಸ್ವಾಮಿಗೌಡರು ಮತ್ತು ಶಿವಶಂಕರ ರೆಡ್ಡಿಯವರು ಮುಂದಿಟ್ಟಿರುವ ಎಲ್ಲಾ ಬೇಡಿಕೆಗಳನ್ನು ಈಡೇರಿಸಲಾಗುವುದು ಎಂದು ಮುಖ್ಯಮಂತ್ರಿಗಳು ತಿಳಿಸಿದರು.

CM Siddharamaih ರಾಜ್ಯದಲ್ಲಿ ಕೋವಿಡ್ ಪರಿಸ್ಥಿತಿ ಕುರಿತು ಅಧಿಕಾರಿಗಳೊಂದಿಗೆ ಸಿಎಂ ಸಭೆ

0

CM Siddharamaih ರಾಜ್ಯದಲ್ಲಿ ಕೋವಿಡ್ ಪರಿಸ್ಥಿತಿ ಕುರಿತು ಆರೋಗ್ಯ ಸಚಿವರು ಹಾಗೂ ಸರ್ಕಾರದ ಹಿರಿಯ ಅಧಿಕಾರಿಗಳೊಂದಿಗೆ ಸಿಎಂ ಸಿದ್ದರಾಮಯ್ಯನವರು ಸಭೆ ನಡೆಸಿ ಸಲಹೆ ಸೂಚನೆ ನೀಡಿದರು. ಈ ಸಭೆಯ ಮುಖ್ಯಾಂಶಗಳು:

  • ಕೋವಿಡ್ ಬಗ್ಗೆ ಜನರು ಯಾವುದೇ ಆತಂಕಪಡುವ ಅಗತ್ಯವಿಲ್ಲ. ಆದರೂ ಮುಂಜಾಗರೂಕತಾ ಕ್ರಮಗಳನ್ನು ಅನುಸರಿಸಬೇಕು.
  • ರಾಜ್ಯದಲ್ಲಿ ಮೇ ತಿಂಗಳ ಬಳಿಕ ಕೋವಿಡ್ ಪರೀಕ್ಷೆ ಹೆಚ್ಚಿಸಲಾಗಿದೆ. ಈ ತಿಂಗಳು ಪ್ರತಿ ದಿನ ಸರಾಸರಿ 500 ಪರೀಕ್ಷೆ ನಡೆಸುತ್ತಿದ್ದೇವೆ.
  • ಕಳೆದ 10 ದಿನಗಳಲ್ಲಿ 5 ಸಾವಿರ ಪರೀಕ್ಷೆ ನಡೆಸಲಾಗಿದ್ದು, 862 ಕೋವಿಡ್ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಇದುವರೆಗೆ 11ಸಾವು ಸಂಭವಿಸಿದೆ. ಆದರೂ ಇದರಲ್ಲಿ 10 ಪ್ರಕರಣಗಳಲ್ಲಿ ಕೋವಿಡ್ ಕಾರಣದಿಂದ ಸಾವು ಸಂಭವಿಸಿಲ್ಲ. ವಿವಿಧ ರೀತಿಯ ಅನಾರೋಗ್ಯಕ್ಕೆ ತುತ್ತಾಗಿದ್ದ ರೋಗಿಗಳು ಈ ಪ್ರಕರಣಗಳಲ್ಲಿ ಸಾವನ್ನಪ್ಪಿದ್ದಾರೆ. ಒಂದು ಪ್ರಕರಣದ ಆಡಿಟ್ ವರದಿ ಬರಬೇಕಾಗಿದೆ.
  • ಕೋವಿಡ್ ಬಗ್ಗೆ ಯಾರೂ ಅನಗತ್ಯ ಗೊಂದಲ ಮೂಡಿಸಬಾರದು. ಸಾರ್ವಜನಿಕರು ಭಯಪಡುವ ಅಗತ್ಯವಿಲ್ಲ. ಎಲ್ಲಾ ಆಸ್ಪತ್ರೆಗಳಲ್ಲಿ ಕೋವಿಡ್ ಪ್ರಕರಣಗಳನ್ನು ನಿಭಾಯಿಸಲು ಸೂಕ್ತ ವ್ಯವಸ್ಥೆಯನ್ನು ಕೈಗೊಳ್ಳಬೇಕು ಎಂಬ ಸೂಚನೆ ನೀಡಲಾಗಿದೆ.
  • ಆರೋಗ್ಯ ಇಲಾಖೆ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆ ಸಮನ್ವಯದಿಂದ ಕಾರ್ಯನಿರ್ವಹಿಸಬೇಕು.
  • ಖಾಸಗಿ ಆಸ್ಪತ್ರೆಗಳಲ್ಲಿ ಅನಗತ್ಯವಾಗಿ ಕೋವಿಡ್ ಪರೀಕ್ಷೆ ಹೆಸರಿನಲ್ಲಿ ದುಬಾರಿ ಶುಲ್ಕ ವಿಧಿಸುತ್ತಿರುವ ದೂರುಗಳ ಬಗ್ಗೆ ಪರಿಶೀಲನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ತಿಳಿಸಿದರು.

Sri Ranganatha Temple ವೇದಾವತಿ ವಲಯ ಸುರಭಿ ಶಾಖೆಯಿಂದ ಪ್ರಾರಂಭವಾದ ಉಚಿತ ಯೋಗ ತರಗತಿ ಆರಂಭ

0

Sri Ranganatha Temple ಸಂಸ್ಕಾರ ಸಂಘಟನೆ ಸೇವೆ ಎಂಬ ಧ್ಯೇಯೋದ್ಧೇಶಗಳೊಂದಿಗೆ ಪುಟ್ಟ ಸಸಿಯಾಗಿ ಜನ್ಮ ತಳೆದ ಪತಂಜಲಿ ಯೋಗ ಶಿಕ್ಷಣ ಸಮಿತಿಯು ಇಂದು ರಾಜ್ಯ, ರಾಷ್ಟ್ರ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಬೃಹತ್ ವೃಕ್ಷವಾಗಿ ಹರಡಿ ಇಂದು 800 ಕ್ಕಿಂತ ಹೆಚ್ಚು ಶಾಖೆಗಳನ್ನು ಹೊಂದಿದೆ ಹಾಗು ಪ್ರತಿನಿತ್ಯ ಉಚಿತ ಯೋಗ ತರಬೇತಿಯ ಶಿಕ್ಷಣವನ್ನು ನೀಡುತ್ತಿದೆ ಎಂದು ಸಮೀತಿಯ ರಾಮಚಂದ್ರ ತಿಳಿಸಿದರು.

ಸೊರಬ ಪಟ್ಟಣದ ಶ್ರೀ ರಂಗನಾಥ ದೇವಸ್ಥಾನದ ಶ್ರೀ ರಂಗ ಕಸ್ವೇಷನ್ ಹಾಲ್‌ನಲ್ಲಿ ಪತಂಜಲಿ ಯೋಗ ಶಿಕ್ಷಣ ಸಮಿತಿಯ ವೇದಾವತಿ ವಲಯ ಸುರಭಿ ಶಾಖೆಯಿಂದ ಪ್ರಾರಂಭವಾದ ಉಚಿತ ಯೋಗ ತರಗತಿಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಅವರು ಮಾತನಾಡಿದರು.

ಲಕ್ಷಾಂತರ ಯೋಗ ಬಂಧುಗಳ ಮಹಾನ್ ಪರಿವಾರ ಇದಾಗಿದ್ದು, ಪ್ರತಿದಿನ ಉಚಿತವಾಗಿ ಸಾವಿರಾರು ಶಿಬಿರಗಳನ್ನು ಆಯೋಜಿಸುತ್ತಾ ಜನರಿಗೆ ಧನಾತ್ಮಕ ಚಿಂತನೆ ಕ್ರಿಯಾಶಿಲ ವ್ಯಕ್ತಿತ್ವ ಹಾಗೂ ಆದರ್ಶ ಕುಟುಂಬದ ತರಬೇತಿಯನ್ನು ನೀಡುತ್ತಾ ಸಮಾಜದಲ್ಲಿ ಉತ್ತಮವದ ಪರಿವರ್ತನೆಗೆ ಕಾರಣೀಭೂತವಾಗಿದೆ ಎಂದರು.

ಸಮಿತಿಯು ಯೋಗ ವಿದ್ಯೇಯ ಮುಖಾಂತರ ಸಮಾಜನ ಅವಶ್ಯಕತೆಗಳಾದ ಆರೋಗ್ಯ, ಮಕ್ಕಳಿಗೆ ದೈಹಿಕ ಶಿಕ್ಷಣ, ಯುವಕರಿಗೆ ಮಾರ್ಗದರ್ಶನ, ಗೃಹಸ್ಥಾಶ್ರಮ ಧರ್ಮ, ಸ್ವಚ್ಛತೆ, ಸೌಂದರ್ಯ, ಒತ್ತಡ ರಹಿತ ವ್ಯವಸ್ಥಿತ ಜೀವನ ವೃತ್ತಿಯಲ್ಲಿ ನಾವಿನ್ಯತೆ ಮತ್ತು ಆದ್ಯಾತ್ಮಿಕ ಮಾರ್ಗದರ್ಶನವನ್ನು ನೀಡುತ್ತಿದೆ.

ನಮ್ಮ ಸಮಿತಿಯಲ್ಲಿ ಸಂಸ್ಕಾರ ಸಂಘಟನೆಗಳಿಗೆ ಪೂರಕವಾಗಿ ಕುಟುಂಬ ಪ್ರವಾಸ, ಮಾತೃಪೂಜನಾ ಮಾತೃಭೋಜನಾ, ಸತ್ಸಂಗ, ಸ್ನೇಹಮಿಲನ, ರಾಷ್ಟ್ರೀಯ ಭಾವನೆಗಳ ಉದ್ಧೀಪನೆಗಾಗಿ ಭಾರತಮಾತಾ ಪೂಜೆ, ಯುಗಾದಿ, ಗುರುಪೂರ್ಣಿಮಾ, ಸಂಕ್ರಾಂತಿ, ರಕ್ಷಬಂಧನ, ರಥಸಪ್ತಮಿ ದಿನದಂದು 108 ಸಾಮೂಹಿಕ ಸೂರ್ಯನಮಸ್ಕಾರ ಮುಂತಾದ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ ಎಂದರು.

Sri Ranganatha Temple ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಾಗರಾಜ ವಹಿಸಿದ್ದರು. ದೀಪ ಬೆಳಗುವ ಮೂಲಕ ಕಾರ್ಯಮವನ್ನು ಮಹೇಶ ಗೋಖಲೆ ಉದ್ಘಾಟಿಸಿ ಮಾತನಾಡಿದರು. ಪೃಥ್ವಿ ಪ್ರಾರ್ಥಿಸಿದರು. ಅಶ್ವಿನಿ ಸ್ವಾಗತಿಸಿದರು. ಗಣಪತಿ ವಂದಿಸಿದರು. ಪತಂಜಲಿ ಯೋಗ ಶಿಕ್ಷಣ ಸಮಿತಿಯ ವೇದಾವತಿ ವಲಯ ಸುರಭಿ ಶಾಖೆಯ ಮುಖ್ಯ ಶಿಕ್ಷಕಿ ವಕೀಲೆ ಮಂಜುಳ ಕಾರ್ಯಕ್ರಮವನ್ನು ನಿರ್ವಹಿಸಿದರು.

Civil Defence Warriors ಸ್ವಯಂ ಸೇವಕರಾಗಿ ನಾಗರಿಕ ರಕ್ಷಣಾಗೆ ನೋಂದಾಯಿಸಿಕೊಳ್ಳಲು ಮಾಜಿ ಸೈನಿಕರಿಗೆ ಆಹ್ವಾನ

0

Civil Defence Warriors ಡೈರೆಕ್ಟರ್ ಜನರಲ್ (ಅಗ್ನಿ ಶಾಮಕ, ನಾಗರಿಕ ರಕ್ಷಣಾ ಮತ್ತು ಗೃಹ ರಕ್ಷಕ) ಇವರು ಹೆಚ್ಚಿನ ಸಂಖ್ಯೆಯ ಮಾಜಿ ಸೈನಿಕರನ್ನು ನಾಗರಿಕ ರಕ್ಷಣಾ (ಸಿವಿಲ್ ಡಿಫೆನ್ಸ್)ಗೆ ಸ್ವಯಂ ಸೇವಕರಾಗಿ ನೋಂದಾಯಿಸಿಕೊಳ್ಳಲು ಆಸಕ್ತರಿಂದ ಆನ್‌ಲೈನ್ ಅರ್ಜಿ ಆಹ್ವಾನಿಸಿದೆ.
ಆಸಕ್ತರು ಆನ್‌ಲೈನ್ ಪೋರ್ಟಲ್ www.civildefencewarriors.gov.in (CD warriors) ರಲ್ಲಿ ಅರ್ಜಿ ಸಲ್ಲಿಸುವುದು. ನೋಂದಾಯಿಸಿಕೊAಡ ಸೈನಿಕರು ಅದಷ್ಟು ಶೀಘ್ರವಾಗಿ ಶಿವಮೊಗ್ಗ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಕಛೇರಿಯಲ್ಲಿ ತಮ್ಮ ಹೆಸರನ್ನು ದಾಖಲಿಸಬೇಕೆಂದು ಉಪ ನಿರ್ದೇಶಕರು, ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ, ಶಿವಮೊಗ್ಗ ಇವರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ಹೆಚ್ಚಿನ ಮಾಹಿತಿಗಾಗಿ ಉಮೇಶ್ ಶರ್ಮ ಎಡಿಜಿ, ಸಿವಿಲ್ ಡಿಫೆನ್ಸ್, ದೂ.ಸಂ.: 011-20863645 ಇವರನ್ನು ಸಂಪರ್ಕಿಸುವುದು.

Ahmedabad Plane Crash ಅಹಮದಾಬಾದ್ ವಿಮಾನ ನಿಲ್ದಾಣದ ಬಳಿ ಏರ್ ಇಂಡಿಯಾ ವಿಮಾನ ಪತನ

0

Ahmedabad Plane Crash ಅಹಮದಾಬಾದ್ ವಿಮಾನ ನಿಲ್ದಾಣದ ಬಳಿ ಗುರುವಾರ ಏರ್ ಇಂಡಿಯಾ ವಿಮಾನ ಪತನವಾಗಿದೆ.

242ಕ್ಕೂ ಹೆಚ್ಚು ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ವಿಮಾನವೊಂದು ಗುಜರಾತ್‌ನ ಅಹಮದಾಬಾದ್‌ನಲ್ಲಿ ಪತನಗೊಂಡಿದ್ದು, ವಿಮಾನದಲ್ಲಿದ್ದ ಎಲ್ಲರೂ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ.

ಸುಮಾರು ಮಧ್ಯಾಹ್ನ 1:50ಕ್ಕೆ ಈ ಘಟನೆ ನಡೆದಿದೆ ಎಂದು ತಿಳಿದುಬಂದಿದೆ.

230 ಪ್ರಯಾಣಿಕರು ಮತ್ತು 12 ಸಿಬ್ಬಂದಿಯೊಂದಿಗೆ ಲಂಡನ್‌ಗೆ ಹೊರಟಿದ್ದ ಏರ್ ಇಂಡಿಯಾ ವಿಮಾನ AI-171 ಗುರುವಾರ ಅಹಮದಾಬಾದ್ ವಿಮಾನ ನಿಲ್ದಾಣದ ಬಳಿ ಟೇಕ್ ಆಫ್ ಆದ ಸ್ವಲ್ಪ ಸಮಯದ ನಂತರ ಅಪಘಾತಕ್ಕೆ ಈಡಾಗಿದೆ.

ವಿಮಾನವು ಮೇಘನಿ ನಗರ ಬಳಿ ಪತನ ಆಗಿದ್ದು, ಆ ಪ್ರದೇಶದಲ್ಲಿ ಭೀತಿಯನ್ನುಂಟು ಮಾಡಿದೆ. ಇನ್ನು ವಿಮಾನ ಪತನವಾದ ಪ್ರದೇಶದ ದೃಶ್ಯಗಳು ಎಲ್ಲೆಡೆ ವೈರಲ್‌ ಆಗುತ್ತಿವೆ.