Friday, February 27, 2026
Friday, February 27, 2026
Home Blog Page 275

Information and Public Relations Department ನಗರದ ಸರ್ಕಾರಿ ಬಸ್ ನಿಲ್ದಾಣದಲ್ಲಿ ಸರ್ಕಾರದ ಯೋಜನೆಗಳನ್ನು ಬಿಂಬಿಸುವ ವಸ್ತು ಪ್ರದರ್ಶನ

0

Information and Public Relations Department ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ವತಿಯಿಂದ ರಾಜ್ಯ ಸರ್ಕಾರದ 2 ವರ್ಷಗಳ ಸಾಧನೆ ಹಾಗೂ ಯೋಜನೆಗಳನ್ನು ಬಿಂಬಿಸುವ ವಸ್ತು ಪ್ರದರ್ಶನವನ್ನು ನಗರದ ಸರ್ಕಾರಿ ಬಸ್ ನಿಲ್ದಾಣದಲ್ಲಿ ಜೂ. 20 ರಿಂದ 26ರವರೆಗೆ ಏರ್ಪಡಿಸಲಾಗುತ್ತಿದೆ. ಈ ವಸ್ತು ಪ್ರದರ್ಶನವು ಸಾರ್ವಜನಿಕರ ವೀಕ್ಷಣೆಗೆ ಅವಕಾಶ ಲಭ್ಯವಿರುತ್ತದೆ.

Klive Special Article ಈ ಶತಮಾನದಲ್ಲಿ ಯೋಗವು ಜಗತ್ತನ್ನು ಒಂದುಗೂಡಿಸಿದೆ

0

Klive Special Article ಪ್ರಾಚೀನ ಭಾರತೀಯ ಸಂಪ್ರದಾಯದ ಅಮೂಲ್ಯ ಕೊಡುಗೆಯಾದ ಯೋಗವು ದೈಹಿಕ ಮತ್ತು ಮಾನಸಿಕ ಯೋಗ ಕ್ಷೇಮವನ್ನು ಹೆಚ್ಚಿಸುವ ಅತ್ಯಂತ ವಿಶ್ವಾಸಾರ್ಹ ಸಾಧನಗಳಲ್ಲಿ ಒಂದಾಗಿದೆ. ಯೋಗ ಎಂಬ ಪದವು ಸಂಸ್ಕೃತ ಮೂಲ “ಯುಜ್” ನಿಂದ ಬಂದಿದೆ. ಇದರರ್ಥ ಸೇರುವುದು ಒಗ್ಗೂಡುವುದು. ಇದು ಮನಸ್ಸು ಮತ್ತು ಕ್ರಿಯೆಯ ಸಂಯಮ ಮತ್ತು ನೆರವೇರಿಕೆ. ಮಾನವ ಮತ್ತು ಪ್ರಕೃತಿಯ ನಡುವಿನ ಸಾಮರಸ್ಯ ಆರೋಗ್ಯ ಮತ್ತು ಯೋಗಕ್ಷೇಮದ ಸಮಗ್ರ ವಿಧಾನ.
ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರ ನಿರಂತರ ಪ್ರಯತ್ನಗಳಿಂದಾಗಿ ಜೂನ್ 21 ದಿನಾಂಕವನ್ನು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯು “ಅಂತರಾಷ್ಟ್ರೀಯ ಯೋಗ ದಿನ” ವೆಂದು ಘೋಷಿಸಿತು. ತನ್ನ ನಿರ್ಣಯದಲ್ಲಿ ಯುಎನ್‌ಜಿಎ (UNGA) “ಯೋಗವು ಜೀವನದ ಎಲ್ಲಾ ಅಂಶಗಳ ನಡುವೆ ಸಮತೋಲನವನ್ನು ಸಾಧಿಸುವುದರ ಜೊತೆಗೆ ಆರೋಗ್ಯ ಮತ್ತು ಯೋಗಕ್ಷೇಮಕ್ಕೆ ಸಮಗ್ರ ವಿಧಾನವನ್ನು ವದಗಿಸುತ್ತದೆ” ಮತ್ತು ಯೋಗಭ್ಯಾಸದ ಪ್ರಯೋಜನಗಳ ಬಗ್ಗೆ ಮಾಹಿತಿಯ ವ್ಯಾಪಕ ಪ್ರಸಾರವು ವಿಶ್ವ ಜನಸಂಖ್ಯೆಯ ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿದೆ ಎಂದು ಅನುಮೋದಿಸಿತು. Klive Special Article 2014ರಲ್ಲಿ ವಿಶ್ವಸಂಸ್ಥೆಯು ಯೋಗವನ್ನು ಅಳವಡಿಸಿಕೊಂಡ ನಂತರ ಜೂನ್ 21ರಂದು ವಿಶ್ವದಾದ್ಯಂತ ಆಚರಿಸಲಾಗುವ ಯೋಗವನ್ನು ಗುರುತಿಸುವ ದಿನವೇ “ಅಂತರಾಷ್ಟ್ರೀಯ ಯೋಗ ದಿನ”
ಪ್ರತಿವರ್ಷದಂತೆ ಯೋಗ ದಿನದಂದು ಒಂದು ಥೀಮ್ ನೊಂದಿಗೆ ಆಚರಿಸಲಾಗುತ್ತದೆ. 2025ರ ಥೀಮ್ “ಒಂದು ಭೂಮಿ ಒಂದು ಆರೋಗ್ಯಕ್ಕಾಗಿ ಯೋಗ ” ಎಂಬುದು ಈ ವರ್ಷದ ಘೋಷವಾಕ್ಯವಾಗಿದೆ.
ಯೋಗವು ದೈಹಿಕ ಭಂಗಿಗಳು ಉಸಿರಾಟದ ವ್ಯಾಯಾಮಗಳು, ಧ್ಯಾನ ಮತ್ತು ನೈತಿಕ ತತ್ವಗಳನ್ನು ಸಂಯೋಜಿಸುವ ಒಂದು ಶಿಸ್ತು. ಯೋಗದ ಮೂಲತತ್ವವು ಮನಸ್ಸು, ದೇಹ ಮತ್ತು ಆತ್ಮದ ನಡುವೆ ಸಾಮರಸ್ಯವನ್ನು ಸಾಧಿಸುವುದರಲ್ಲಿದೆ.
ಸಾಂಪ್ರದಾಯಿಕವಾಗಿ ನಾಲ್ಕು ವಿಭಿನ್ನ ರೀತಿಯ ಯೋಗಗಳಿವೆ ಕರ್ಮ ಯೋಗ, ಜ್ಞಾನ ಯೋಗ ,ಭಕ್ತಿ ಯೋಗ, ಮತ್ತು ಹಠ ಯೋಗ. ಆಧುನಿಕ ಮಾನವ ಜನಾಂಗದಲ್ಲಿ ಯೋಗ ಮೌಲ್ಯಗಳು ಹಾಗೂ ಆಸನಗಳು, ಪ್ರಾಣಾಯಾಮಗಳು, ಕ್ರಿಯೆಗಳು ಮತ್ತು ಧ್ಯಾನಗಳಂತಹ ಅಭ್ಯಾಸಗಳನ್ನು ಅಳವಡಿಸುವ ಮೂಲಕ ನಾವು ಎಲ್ಲಾ ರೋಗಗಳನ್ನು ತಡೆಗಟ್ಟಬಹುದು. ಯೋಗದ ಮೂಲಕ ಹಿರಿಯ ನಾಗರಿಕರು ತಮ್ಮ ಮಾನಸಿಕ ಸಾಮರ್ಥ್ಯವನ್ನು ಉಳಿಸಿಕೊಳ್ಳಬಹುದು. ದೇಹದ ಆರೋಗ್ಯ ಕಾಪಾಡಿಕೊಳ್ಳಲು ಔಷಧಗಳಿಗಿಂತ ಯೋಗಾಸನಗಳು ಹೆಚ್ಚು ಉಪಯುಕ್ತವಾಗಿದೆ.

ಮಹಿಳೆಯರ ಆರೋಗ್ಯಕ್ಕೆ ಯೋಗಾಸನಗಳೇಕೆ ಮುಖ್ಯ?
ನಿಯಮಿತ ಯೋಗಭ್ಯಾಸದಿಂದ ಅನೇಕ ರೀತಿಯ ಆರೋಗ್ಯ ಸಮಸ್ಯೆಗಳಿಂದ ದೂರವಿರಬಹುದು. ಹೀಗಾಗಿ ಯೋಗ ಎಲ್ಲರಿಗೂ ಮುಖ್ಯ ಅದರಲ್ಲೂ ಹೆಣ್ಣು ಮಕ್ಕಳಿಗೆ ಯೋಗ ಕೊಂಚ ಹೆಚ್ಚಿನ ಉಪಯೋಗವನ್ನು ನೀಡುತ್ತದೆ. ಪುರುಷರಿಗಿಂತ ಒಂದು ಕೈ ಹೆಚ್ಚಿನ ಒತ್ತಡ ದೇಹದ ಸೂಕ್ಷ್ಮತೆ ಹೊಂದಿರುವ ಹೆಣ್ಣು ಮಕ್ಕಳಿಗೆ ಯೋಗ ತುಂಬಾ ಮುಖ್ಯ. ಬಹುತೇಕ ಮಹಿಳೆಯರು ಎದುರಿಸುತ್ತಿರುವ ಸಮಸ್ಯೆ ಎಂದರೆ ಅದು ಪಿಸಿಓಡಿ (PCOD) ಅಥವಾ ಪಿಸಿಒಎಸ್(PCOS )ಸಮಸ್ಯೆ.
ಅನಿಯಮಿತ ಮುಟ್ಟಿನ ದಿನಗಳು ಗರ್ಭಾವಸ್ಥೆ ಸಮಸ್ಯೆ, ತಲೆನೋವು, ಅತಿಯಾದ ದೇಹದ ತೂಕ ಪಿಸಿಒಡಿಯಿಂದ ಕಾಣಿಸಿಕೊಳ್ಳುತ್ತದೆ. ಇದರ ನಿವಾರಣೆಗೆ ಯೋಗಾಸನಗಳು ಅತ್ಯುತ್ತಮ ಪರಿಹಾರವಾಗಿದೆ. ಭುಜಂಗಾಸನ, ಬಾಲಾಸನ, ವಜ್ರಾಸನ ಸೇರಿದಂತೆ ಅನೇಕ ವ್ಯಾಯಾಮಗಳು ಹಾಗೂ ಪ್ರಾಣಾಯಾಮ ಮುದ್ರೆಗಳು ಕೂಡ ಪಿಸಿಒಎಸ್ ಸಮಸ್ಯೆಗೆ ಪರಿಹಾರ ನೀಡುತ್ತದೆ. ಆದರೆ ನಿಯಮಿತ ಅಭ್ಯಾಸ ಮುಖ್ಯವಾಗಿರುತ್ತದೆ. ಪ್ರತಿ ಹೆಣ್ಣು ಮನೆ ಮಕ್ಕಳು ಉದ್ಯೋಗ ಎಲ್ಲವನ್ನು ನಿರ್ವಹಿಸಬೇಕಾದ ಅನಿವಾರ್ಯತೆ ಇರುತ್ತದೆ. ಅಂತಹ ಸಂದರ್ಭದಲ್ಲಿ ಮಾನಸಿಕ ಸ್ಥಿತಿಯನ್ನು ಸೀಮಿತದಲ್ಲಿಟ್ಟುಕೊಳ್ಳುವುದು ಮುಖ್ಯವಾಗಿರುತ್ತದೆ. ತಾಳ್ಮೆ ಏಕಾಗ್ರತೆ ಮಹಿಳೆಯರಲ್ಲಿ ಅಗತ್ಯವಾಗಿ ಇರಬೇಕು. ಹೀಗಾಗಿ ಯೋಗ ಪ್ರಾಣಾಯಾಮ ಹೆಚ್ಚು ಉಪಯುಕ್ತವಾಗಿದೆ. ಇದರಿಂದ ಮಾನಸಿಕವಾಗಿ ಒತ್ತಡ ಮುಕ್ತವಾಗಿರಬಹುದು.
ಆರೋಗ್ಯವನ್ನು ಸಮತೋಲನದಲ್ಲಿಟ್ಟುಕೊಳ್ಳಲು ಯೋಗಾಸನ ಎಷ್ಟು ಮುಖ್ಯವೊ ನಾವು ಸೇವನೆ ಮಾಡುವ ಆಹಾರ ಕೂಡ ಅಷ್ಟೇ ಮುಖ್ಯವಾಗಿರುತ್ತದೆ .ಯೋಗಾಸನದಿಂದ ರೋಗಗಳು ಕಡಿಮೆಯಾಗುವುದಿಲ್ಲ ಬದಲಾಗಿ ನಿಯಂತ್ರಣದಲ್ಲಿರುತ್ತದೆ .ಹೀಗಾಗಿ ರೋಗವನ್ನು ಬರೆದಂತೆ ತಡೆಯಲು ಯೋಗಾಸನಗಳು ಹೆಚ್ಚು ಉಪಯುಕ್ತವಾಗಿದೆ. ಜೊತೆಗೆ ಹಸಿರು ತರಕಾರಿಗಳ ಸೇವನೆ, ಸಕ್ಕರೆ ಮತ್ತು ಸಂಸ್ಕರಿತ ಆಹಾರಗಳ ಸೇವನೆಯನ್ನು ಕಡಿಮೆ ಮಾಡುವುದು. ಜಂಕ್ ಫುಡ್ ಗಳಿಂದಲೂ ದೂರ ಇರುವುದು ಒಳ್ಳೆಯದು . ಇಂತಹ ಅಭ್ಯಾಸಗಳಿಂದ ಯೋಗದ ಪೂರ್ಣ ಪ್ರಯೋಜನವನ್ನು ಪಡೆಯಬಹುದು. ನಿಯಮಿತ ಯೋಗದ ಅಭ್ಯಾಸವಿದ್ದರೆ 40 ರಿಂದ 45 ನಿಮಿಷಗಳ ಕಾಲ ಯೋಗ ಮಾಡಿದ ಮೇಲೆ ಐದು ನಿಮಿಷವಾದರೂ ಶವಾಸನವನ್ನು ಮಾಡಲೇಬೇಕು. ಶವಾಸನದಿಂದ ಇಡೀ ದೇಹಕ್ಕೆ ರಿಲ್ಯಾಕ್ಸ್ ನೀಡುತ್ತದೆ. ಜೊತೆಗೆ ಶರೀರದ ಎಲ್ಲಾ ಭಾಗಗಳಿಗೆ ರಕ್ತ ಸಂಚಾರ ಸರಿಯಾಗಿ ಆಗುವಂತೆ ಮಾಡುತ್ತದೆ. ಹೀಗಾಗಿ ಯೋಗಾಭ್ಯಾಸ ಮಾಡಿದ ನಂತರ ಶವಾಸನ ಮಾಡುವುದು ಮಹತ್ವವಾಗಿದೆ. ಮುಖ್ಯವಾಗಿ ಮಹಿಳೆಯರಿಗೆ ಯೋಗಭ್ಯಾಸ ದೇಹದಲ್ಲಿ ಹೆಚ್ಚು ಕ್ಯಾಲೋರಿಗಳನ್ನು ಸುಡಬಹುದು. ಹೀಗಾಗಿ ಶವಾಸನ ದೇಹವನ್ನು ಆರಾಮದಾಯಕ ಸ್ಥಿತಿಗೆ ತರುವಲ್ಲಿ ಸಹಾಯ ಮಾಡುತ್ತದೆ.

ಯೋಗವನ್ನು ನೀ ಮಾಡುತ್ತಿದ್ದರೆ,
ರೋಗವನ್ನು ನೀ ತಡೆಯಬಹುದು,
ಯೋಗ ಮಾಡಿ ಆರೋಗ್ಯವಾಗಿರಿ.

ವಿಶ್ವ ಯೋಗ ದಿನದ ಶುಭಾಶಯಗಳು.

ವೀಣಾ ಚನ್ನವೀರಪ್ಪ,
ಪೂರ್ಣ ಪ್ರಜ್ಞಾ ಯೋಗ ಕೇಂದ್ರ,
ತೇವರಚಟ್ನಹಳ್ಳಿ

District Legal Services Authority ಯೋಗಾಭ್ಯಾಸದ ಮಹತ್ವ ಕುರಿತು ಹಿರಿಯ ನಾಗರೀಕರಿಗೆ ಮಾಹಿತಿ ಕಾರ್ಯಕ್ರಮ

0

District Legal Services Authority ಶಿವಮೊಗ್ಗ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃಧ್ದಿ ಇಲಾಖೆ, ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಇಲಾಖೆ, ಜಿಲ್ಲಾ ಆಯುಷ್ ಇಲಾಖೆ, ಜಿಲ್ಲಾ ಸರ್ಕಾರಿ ನಿವೃತ್ತ ನೌಕರರ ಸಂಘ ಹಾಗು ನೇಸರ ಸೆಂಟರ್ ಫಾರ್ ರೂರಲ್ ಅಡ್ವಾನ್ಸ್ಮೆಂಟ್ ಶಿವಮೊಗ್ಗ ಇವರ ಸಂಯುಕ್ತಾಶ್ರಯದಲ್ಲಿ ಜೂ.20 ರ ಬೆಳಿಗ್ಗೆ 10.30 ಕ್ಕೆ ‘ವಿಶ್ವ ಹಿರಿಯ ನಾಗರೀಕರ ನಿಂದನ ಜಾಗೃತಿ ಕಾರ್ಯಕ್ರಮ’ ಹಾಗೂ ‘ಹಿರಿಯ ನಾಗರೀಕರ ಯೋಗಾಭ್ಯಾಸದ ಮಹತ್ವ’ ದ ಕುರಿತು ಮಾಹಿತಿ ಕಾರ್ಯಕ್ರಮ ಏರ್ಪಡಿಸಲಾಗಿದೆ. ಆದ್ದರಿಂದ ಎಲ್ಲಾ ಹಿರಿಯ ನಾಗರೀಕರು ಈ ಕಾರ್ಯಕ್ರಮದ ಸದುಪಯೋಗ ಪಡೆಯಬೇಕೆಂದು ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ತಿಳಿಸಿದ್ದಾರೆ.

Swachh Bharat Mission ಸ್ವಚ್ಛ ಭಾರತ್ ಮಿಷನ್ ಅಡಿಯಲ್ಲಿ ಸ್ವಸಹಾಯ ಗುಂಪುಗಳ ಸದಸ್ಯರಿಂದ ಅರ್ಜಿ ಆಹ್ವಾನ

0

Swachh Bharat Mission ಸಾಗರ ನಗರಸಭೆಗೆ ಸ್ವಚ್ಛ ಭಾರತ್ ಮಿಷನ್ 2.0 ಅಡಿಯಲ್ಲಿ ಐ.ಇ.ಸಿ. ಯೋಜನೆಯಡಿಯಲ್ಲಿ ವಿವಿಧ ಚಟುವಟಿಕೆಗಳನ್ನು ಕೈಗೊಳ್ಳಲು 3 ವರ್ಷಗಳ ಅವಧಿಗೆ ಡೇ ನಲ್ಮ್ ಯೋಜನೆಯಡಿ ನೋಂದಾಯಿತ ಸ್ವ-ಸಹಾಯ ಗುಂಪುಗಳ ಒಟ್ಟು 9 ಸದಸ್ಯರ ನೇಮಕಾತಿಗಾಗಿ ಆಸಕ್ತರಿಂದ ಅರ್ಜಿ ಆಹ್ವಾನಿಸಿದೆ.
ಆಸಕ್ತರು ಗುರುತಿನ ಚೀಟಿ, ವಿಳಾಸ ಪ್ರಮಾಣ ಪತ್ರ, ಸ್ವ-ಸಹಾಯ ಗುಂಪಿನ ಸದಸ್ಯರಾಗಿರುವುದಕ್ಕೆ ಪುರಾವೆ, ಶೈಕ್ಷಣಿಕ ಅರ್ಹತೆಯ ದಾಖಲೆಗಳು ಮತ್ತು ಡೇ ನಲ್ಮ್ ನಿಂದ ನೋಂದಣಿಯಾಗಿರುವ ದಾಖಲೆಗಳೊಂದಿಗೆ ಅರ್ಜಿಯನ್ನು ಜೂ.19ರೊಳಗಾಗಿ ನಗರಸಭೆ ಕಚೇರಿಯ ಟಪಾಲು ವಿಭಾಗದಲ್ಲಿ ನೀಡಿ ಸ್ವೀಕೃತಿಯನ್ನು ಪಡೆಯುವುದು.
Swachh Bharat Mission ಹೆಚ್ಚಿನ ಮಾಹಿತಿಗಾಗಿ ಸಾಗರ ನಗರ ಸಭೆಯ ಸಹಾಯಕ ಪರಿಸರ ಅಭಿಯಂತರರನ್ನು ಹಾಗೂ ವೆಬ್‌ಸೈಟ್ www.sagaracity.mrc.gov.in ನ್ನು ಸಂಪರ್ಕಿಸುವುದು.

Department of Youth Empowerment and Sports ನಮ್ಮೂರ ಶಾಲೆಗೆ ನಮ್ಮ ಯುವಜನರು ಯೋಜನೆ ಅನುಷ್ಠಾನಕ್ಕೆ ಅರ್ಜಿ ಆಹ್ವಾನ

0

Department of Youth Empowerment and Sports ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯು ರಾಜ್ಯ ಯುವನೀತಿ 2012 ಅನುಷ್ಠಾನದಡಿಯಲ್ಲಿ ನಮ್ಮೂರ ಶಾಲೆಗೆ ನಮ್ಮ ಯುವಜನರು ಯೋಜನೆಯನ್ನು ಮತ್ತೊಮ್ಮೆ ಜಾರಿಗೆ ತರಲಾಗಿದ್ದು, ಆಸಕ್ತ ಶಾಲೆಗಳಿಂದ ಪ್ರಸ್ತಾವನೆ/ ಅರ್ಜಿ ಆಹ್ವಾನಿಸಿದೆ.
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಕೆ, ಶಿಕ್ಷಣ ಇಲಾಖೆ ಹಾಗೂ ಮಾನ್ಯತೆ ಪಡೆದಿರುವ ಕ್ರೀಡಾ ಸಂಸ್ಥೆಗಳು ಆಯೋಜಿಸುವ ತಾಲೂಕು, ಜಿಲ್ಲೆ, ರಾಜ್ಯ ಮತ್ತು ರಾಷ್ಟ್ರಮಟ್ಟದ ಕ್ರೀಡಾಕೂಟಗಳಲ್ಲಿ ಉತ್ತಮ ಸಾಧನೆ ತೋರುವ ಕ್ರೀಡಾಪಟುಗಳನ್ನು ಹೊಂದಿರುವ ಸರ್ಕಾರಿ ಶಾಲೆಗಳನ್ನು ಗುರುತಿಸಿ ಆಯ್ಕೆಯಾದ ಪ್ರತಿ ಶಾಲೆಗೆ ಪ್ರೋತ್ಸಾಹವಾಗಿ ತಲಾ ರೂ. 1.00 ಲಕ್ಷದಂತೆ ಸರ್ಕಾರದಿಂದ ಪ್ರೋತ್ಸಾಹಧನವನ್ನು ನೀಡಲು ತೀರ್ಮಾನಿಸಿದ್ದು, ಈ ಅನುದಾನದಲ್ಲಿ ರೂ. 10,000/-ಗಳನ್ನು ಆಯ್ಕೆಯಾದ ಶಾಲೆಯ ದೈಹಿಕ ಶಿಕ್ಷಕರಿಗೆ ಮತ್ತು ರೂ. 90,000/-ಗಳನ್ನು ಶಾಲೆಯ ಎಸ್.ಡಿ.ಎಂ.ಸಿ.ಗೆ ಅಗತ್ಯ ಕ್ರೀಡಾ ಸಾಮಗ್ರಿಗಳ ಖರೀದಿಸಬೇಕಾಗಿರುತ್ತದೆ.
Department of Youth Empowerment and Sports ಆಸಕ್ತ ಶಿವಮೊಗ್ಗ ಜಿಲ್ಲೆಯ ಸರ್ಕಾರಿ ಶಾಲೆಗಳು 2024-25ನೇ ಸಾಲಿನ ಕ್ರೀಡೆಯಲ್ಲಿ ಉತ್ತಮ ಸಾಧನೆ ತೋರಿರುವ ಹೆಚ್ಚಿನ ಸಂಖ್ಯೆಯ ಕ್ರೀಡಾಪಟುಗಳನ್ನು ಹೊಂದಿದ ಜಿಲ್ಲೆಯ ಸರ್ಕಾರಿ ಶಾಲೆಯವರು ಪ್ರಸ್ತಾವನೆಯನ್ನು ಜೂ. 25 ರೊಳಗಾಗಿ ಸಹಾಯಕ ನಿರ್ದೇಶಕರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ನೆಹರು ಕ್ರೀಡಾಂಗಣ, ಶಿವಮೊಗ್ಗ ಸಲ್ಲಿಸುವಂತೆ ಇಲಾಖೆ ಸಹಾಯಕ ನಿರ್ದೆಶಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

ಹೆಚ್ಚಿನ ಮಾಹಿತಿಗಾಗಿ ಮೊ.ಸಂ.: 9900280416 ನ್ನು ಸಂಪರ್ಕಿಸುವುದು.

MESCOM ಜೂ.20 ರಂದು ಶಿವಮೊಗ್ಗದ ವಿವಿಧೆಡೆ ವಿದ್ಯುತ್ ವ್ಯತ್ಯಯ

0

MESCOM ಶಿವಮೊಗ್ಗ ಎಂ ಆರ್.ಎಸ್. ವಿವಿ ಕೇಂದ್ರ ಮುಖ್ಯ ಸ್ವೀಕರಣಾ ಕೇಂದ್ರದ 66 ಕೆವಿ ಬಸ್ ತ್ರೈಮಾಸಿಕ ನಿರ್ವಹಣಾ ಕಾಮಗಾರಿ ಹಮ್ಮಿಕೊಂಡಿರುವುದರಿಂದ ತ್ಯಾವರೆಚಟ್ನಹಳ್ಳಿ ವಿವಿ ಕೇಂದ್ರದಿಂದ ವಿದ್ಯುತ್ ಸರಬರಾಜಾಗುವ ಪ್ರದೇಶನಗಳಿಗೆ ಜೂ.20 ರಂದು ಬೆಳ್ಳಗ್ಗೆ 9-30 ರಿಂದ ಸಂಜೆ 05-00 ರವರೆಗೆ ಶಿವಬಸವನಗರ, ಇಂದಿರಾ ಗಾಂಧಿ ಬಡಾವಣೆ, ಕುವೆಂಪುನಗರ, ಸೂಡಾ ಲೇಔಟ್, ತ್ರೀಮೂರ್ತಿನಗರ, ನವುಲೆ, ಮಾರುತಿ ಬಡಾವಣೆ, ಸವಳಂಗರಸ್ತೆ, ಸರ್ಜಿ ಕನ್ವೆಷನಲ್ ಹಾಲ್, ಎಲ್.ಬಿ.ಎಸ್.ನಗರ, ಅಶ್ವಥ್ ನಗರ, ಕೀರ್ತಿನಗರ, ದೇವಂಗಿ 1 ನೇ ಹಂತ, ಬಸವೇಶ್ವರನಗರ, ಡಾಲರ‍್ಸ್ ಕಾಲೋನಿ, ಪವನ ಶ್ರೀ ಬಡಾವಣೆ, ಪೆಬಲ್ಸ್ ಅಪಾರ್ಟ್ಮೆಂಟ್, ಶಾಂತಿನಗರ, ರಾಗಿಗುಡ್ಡ, ಪಾಪ್ಯೂಲರ್ ರೈಸ್‌ಮಿಲ್, ಪೇಸ್ ಕಾಲೇಜ್, ತರಳಬಾಳು ಬಡಾವಣೆ, ಈಶ್ವರ್ ರೈಸ್ ಮಿಲ್, ಸೇವಾಲಾಲ್ ನಗರ, ತಾವರೆಚಟ್ನಹಳ್ಳಿ, ವಡ್ಡರಹಟ್ಟಿ, ವಿಜಯಲಕ್ಷ್ಮೀ ರೈಸ್ ಮಿಲ್, ದೇವಂಗಿ ತೋಟ, ತಾವರೆಚಟ್ನಹಳ್ಳಿ ಯುಜಿಡಿ ಪ್ಲಾಂಟ್, MESCOM ಗುಂಡಪ್ಪ ಶೆಡ್ ಯುಜಿಡಿ ಪ್ಲಾಂಟ್, ಶಾದ್ ನಗರ, ಮಲ್ಲಿಕಾರ್ಜುನ ನಗರ, ರೆಡ್ಡಿ ಲೇಔಟ್, ಜೆಎನ್‌ಎನ್‌ಸಿ ಎಂಜಿನಿಯರಿಂಗ್ ಕಾಲೇಜ್ ಹಾಗೂ ಸುತ್ತ ಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು, ಸಾರ್ವಜನಿಕರು ಸಹಕರಿಸುವಂತೆ ಮೆಸ್ಕಾಂ ತಿಳಿಸಿದೆ.

Shivamogga District Tourism Development Forum ಜೋಗ-ಬಂಗಾರಮಕ್ಕಿ-ಹೊಸಗುಂದಕ್ಕೆ ಒಂದು ದಿನದ ಮಳೆಗಾಲದ ಪ್ರವಾಸ

0

Shivamogga District Tourism Development Forum ಸರಳವಾಗಿ ಎಲ್ಲರಿಗೂ ಪ್ರವಾಸ ಕೈಗೆಟಕಬೇಕು ಎನ್ನುವ ಸದುದ್ಧೇಶದಿಂದ ಈಗಾಗಲೇ ಹಲವಾರು ಪ್ರವಾಸವನ್ನು ಕೈಗೊಂಡ ನಗರದ ಶಿವಮೊಗ್ಗ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ವೇದಿಕೆಯಿಂದ ಒಂದು ದಿನದ ಮಳೆಗಾಲದ ವಿಶೇಷ ಪ್ರವಾಸವನ್ನು 06.07.2025 ರ ಭಾನುವಾರ ಶಿವಮೊಗ್ಗದಿಂದ ಜೋಗ, ಬಂಗಾರುಮಕ್ಕಿ ಶ್ರೀ ವೀರಾಂಜನೇಯ ದೇವಸ್ಥಾನ ಹಾಗೂ ಹೊಸಗುಂದದಲ್ಲಿರುವ ಶ್ರೀ ಉಮಾಮಹೇಶ್ವರ ದೇವಸ್ಥಾನಕ್ಕೆ ಮಳೆಗಾಲದ ವಿಶೇಷ ಪ್ರವಾಸವನ್ನು ಏರ್ಪಡಿಸಲಾಗಿದೆ.

ಶಿವಮೊಗ್ಗದಿಂದ ಬೆಳಿಗ್ಗೆ 7.30 ಕ್ಕೆ ಹೊರಟು ರಾತ್ರಿ 8 ರ ಒಳಗಾಗಿ ಶಿವಮೊಗ್ಗಕ್ಕೆ ತಲುಪಲಾಗುವುದು.

Shivamogga District Tourism Development Forum ಬಸ್ ಚಾರ್ಜ್ ಮತ್ತು ಬೆಳಗಿನ ಉಪಹಾರ ಸೇರಿ ಶುಲ್ಕ ಒಬ್ಬರಿಗೆ ರೂ 450.00 ಮಾತ್ರ. 45 ಜನರಿಗೆ ಮಾತ್ರ ಅವಕಾಶವಿದ್ದು ಮೊದಲು ಹೆಸರು ನೋಂದಾಯಿಸಿದವರಿಗೆ ಆದ್ಯತೆ ನೀಡಲಾಗುವುದು. ಆಸಕ್ತರು ತಮ್ಮ ಹೆಸರನ್ನು ರವೀಂದ್ರ ದೂರವಾಣಿ 9916929220
ಇವರ ಬಳಿ ನೋಂದಾಯಿಸುವಂತೆ ಶಿವಮೊಗ್ಗ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ವೇದಿಕೆ ಕಾರ್ಯದರ್ಶಿ ಎನ್.ಗೋಪಿನಾಥ್ ಅವರು ತಿಳಿಸಿದ್ದಾರೆ.

Actor Kamal Haasan ಛಲ ಬಿಡದೆ ‘ಸುಪ್ರೀಂ’ ನಲ್ಲಿ ಗೆದ್ದು ಬೀಗಿದ “ಕನ್ನಡ ವಿವಾದಿ” ಕಮಲ್ ಹಾಸನ್

0

Actor Kamal Haasan ಕನ್ನಡದ ಭಾಷಾ ಚರಿತ್ರೆ ತಿಳಿಯದೆ ದಡ್ಡ ಹೇಳಿಕೆ ನೀಡಿದ ಚಿತ್ರನಟ ಕಮಲ್ ಹಾಸನ್ ಕರ್ನಾಟಕದಲ್ಲಿ
” ಥಗ್ ಲೈಫ್ ” ಚಿತ್ರ ಬಿಡುಗಡೆಗೆ ಹೆಣಗಾಟ ನಡೆಸಿದ್ದಾರೆ.

ರಾಜ್ಯದ ನ್ಯಾಯಾಲಯದಲ್ಲಿ
ಸೌಜನ್ಯಕ್ಕಾದರೂ ತಮ್ಮ ಹೇಳಿಕೆಗೆ ಕ್ಷಮೆಯಾಚಿಸಲು ನ್ಯಾಯಾಧೀಶರು ಕಮಲ್ ಹಾಸನ್ ಗೆ ಸೂಚಿಸಿದ್ದರು. ಕ್ಷಮೆ ಕೇಳಿದ ನಂತರ ಬಿಡುಗಡೆ ಎಂಬ ಅರ್ಥ ಬರುವಂತೆ ಕೋರ್ಟ್ ಸಲಹೆನೀಡಿತ್ತು.
ಆದರೆ ಕಮಲ್ ಹಾಸನ್ ಹಠವಾದಿಯಂತೆ
ಕ್ಷಮೆ ಕೇಳಲಾರೆ. ತನ್ನ ಹೇಳಿಕೆ ಸರಿ ಇದೆ ಎಂದು ಚಂಡಿ ಹಿಡಿದಿದ್ದರು.

ಅದೂ ಸಾಲದೆ ರಾಜ್ಯದ ಕೋರ್ಟ್ ತೀರ್ಪಿನ ವಿರುದ್ಧ. ಸುಪ್ರೀಂ ನಲ್ಲಿ ಮನವಿ‌ ಸಲ್ಲಿಸಿದ್ದರು.
ಈಗ “ಸುಪ್ರೀಂ ” ಚಿತ್ರ ಬಿಡುಗಡೆಗೆ ಅನುವು ಮಾಡಿಕೊಡುವ ತೀರ್ಪು ನೀಡಿದೆ.

ಕಮಲ್ ಹಾಸನ್ ಅಭಿಪ್ರಾಯಕ್ಕಿಂತ ಸಿನಿಮಾ ನೋಡಬೇಕೆ ,ಬೇಡವೆ? ಎಂಬ ಬಗ್ಗೆ ಸಾರ್ವಜನಿಕರೇ ತೀರ್ಮಾನಿಸುತ್ತಾರೆ.
ಇದಕ್ಕೆ ಅಡೆತಡೆ ತರಬಾರದು ಎಂದು
ಸುಪ್ರೀಂ ಅಭಿಪ್ರಾಯ ನೀಡಿದೆ.

Actor Kamal Haasan ಈಗ ಎದ್ದಿರುವ ಪ್ರಶ್ನೆಯೆಂದರೆ ಕನ್ನಡಾಭಿಮಾನಿಗಳು
ಹೇಗೆ ಪ್ರತಿಕ್ರಿಯಿಸುತ್ತಾರೆ? .
ಕನ್ನಡ ಪರ ಸಂಘಟನೆಗಳಿಗೀಗ
ಯಾವರೀತಿ ಪ್ರತಿರೋಧ ಅಥವಾ
ಕನ್ನಡ ವಿರೋಧಿ‌ ಹೇಳಿಕೆಗೆ ಸ್ಪಂದಿಸುತ್ತಾರೆ? ಕಾದು ನೋಡಬೇಕಿದೆ.
ಮುಖ್ಯವಾಗಿ ರಾಜ್ಯ ಸರ್ಕಾರ ಮತ್ತು
ಚಲನಚಿತ್ರ ವಾಣಿಜ್ಯ ಮಂಡಳಿಯ ಕ್ರಮವೂ ಇಲ್ಲಿ‌ ಪ್ರಧಾನ ಪಾತ್ರವಹಿಸಲಿದೆ ಎಂಬುದು ವಿಶ್ಲೇಷಕರ ಅನಿಸಿಕೆಯಾಗಿದೆ.
ಈಬಗ್ಗೆ ರಾಜ್ತದ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್
ತಮ್ಮ ಅನಿಸಿಕೆ ವ್ಯಕ್ತಪಡಿಸಿದ್ದಾರೆ.

ಥಗ್ ಲೈಫ್’ ಸಿನಿಮಾ ಬಿಡುಗಡೆಗೆ ಸುಪ್ರೀಂ ಕೋರ್ಟ್ ಅನುಮತಿ ನೀಡಿದೆ.
ಈ ಸಂಬಂಧ ಕಾನೂನು ಸುವ್ಯವಸ್ಥೆ ಕಾಪಾಡುವಂತೆ ಕನ್ನಡಪರ ಸಂಘಟನೆಗಳಿಗೆ ಡಿಸಿಎಂ ಡಿ.ಕೆ.ಶಿವಕುಮಾರ್ ಮನವಿ ಮಾಡಿದ್ದಾರೆ. ಕೋರ್ಟ್ ಏನು ಆದೇಶ ನೀಡಿದೆಯೋ ಅದನ್ನು ನಾವು ಗೌರವದಿಂದ ಪಾಲನೆ ಮಾಡಬೇಕಿದೆ ಎಂದಿದ್ದಾರೆ.

District Consumer Disputes Redressal Commission ಮಣಪುರಂ ಫೈನಾನ್ಸ್ ಸೇವಾ ನ್ಯೂನ್ಯತೆ: ಪರಿಹಾರ ನೀಡಲು ಆಯೋಗ ಆದೇಶ

0

District Consumer Disputes Redressal Commission ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನ ಗೌರಾಪುರ ಅಜ್ಜಂಪುರದ ತಾಲಿಬ್ ಪಾಷ ಬಿನ್ ಅನ್ಸರ್ ಪಾಷ ಇವರು ಮಣಪುರಂ ಫೈನಾನ್ಸ್ ಲಿಮಿಟೆಡ್ ಶಿವಮೊಗ್ಗ, ಮುಜೀರ್‌ಪಾಷ, ಕೇರಾಫ್ ವಿನಸ್ ಆಟೋಮೊಬೈಲ್ಸ್ ಹಾಸನ ಮತ್ತು ರೀಜನಲ್ ಟ್ರಾನ್ಸ್ಪೋರ್ಟ್ ಅಥಾರಿಟಿ ಎಆರ್‌ಟಿಓ ತರೀಕೆರೆ ಇವರ ವಿರುದ್ದ ಸೇವಾನ್ಯೂನ್ಯತೆ ಕುರಿತು ದಾಖಲಿಸಿದ್ದ ದೂರನ್ನು ಆಲಿಸಿದ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗವು ದೂರುದಾರಿಗೆ ಸೂಕ್ತ ಪರಿಹಾರ ನೀಡುವಂತೆ ತೀರ್ಪು ನೀಡಿದೆ.
ದೂರುದಾರರು ಲಾರಿ ಸಂಖ್ಯೆ: ಕೆ.ಎ.52-ಬಿ-4032ರ ಮಾಲೀಕರಾಗಿದ್ದು, 1 ನೇ ಎದುರುದಾರ ಹಣಕಾಸು ಸಂಸ್ಥೆಯಿಂದ ರೂ.8,30,000/- ಗಳ ಸಾಲವನ್ನು(ಲೋನ್ ಕಂ ಹೈಪೋಥಿಕೇಶನ್)ಪಡೆದಿದ್ದು, 52 ಇಎಂಐ ಕಂತುಗಳ ಮೂಲಕ ಸಾಲವನ್ನು ತೀರಿಸಲು ಒಪ್ಪಂದವಾಗಿರುತ್ತದೆ. ಮತ್ತು ದೂರುದಾರರು ಸಾಲವನ್ನು ಪಡೆಯುವಾಗ ಆರು ಬ್ಲಾಂಕ್ ಚೆಕ್‌ಗಳನ್ನು ಸಹ ನೀಡಿರುತ್ತಾರೆ. ತದನಂತರ ಲಾರಿಯು ಅಪಘಾತವಾಗಿದ್ದು, ಈ ಲಾರಿಯನ್ನು ಪೊಲೀಸ್‌ನವರು ವಶಕ್ಕೆ ಪಡೆದಿರುತ್ತಾರೆ. ದಿನಾಂಕ:20/02/2024 ರಂದು ಪೊಲೀಸ್‌ನವರಿಂದ ಲಾರಿಯನ್ನು ಬಿಡಿಸಿಕೊಂಡು ರಿಪೇರಿಗಾಗಿ ಬಿಟ್ಟಿದ್ದಾಗ ಎದುರುದಾರರು ಲಾರಿಯನ್ನು ತನ್ನ ಏಜೆಂಟರ ಮೂಲಕ ವಶಕ್ಕೆ ಪಡೆದಿರುತ್ತಾರೆ. ಆಗ ದೂರುದಾರರು ಎಆರ್‌ಟಿಓ ತರಿಕೇರೆ ರವರಿಗೆ ಪತ್ರವನ್ನು ಬರೆದು ಲಾರಿಯನ್ನು ಬೇರೆ ಯಾರ ಹೆಸರಿಗೂ ವರ್ಗಾಯಿಸಬಾರೆಂದು ತಿಳಿಸಿರುತ್ತಾರೆ.
1 ನೇ ಎದುರುದಾರರು ಲಾರಿಯನ್ನು ಸೀಜ್ ಮಾಡುವ ಮುಂಚಿತವಾಗಿ ಎದುರುದಾರರಿಗೆ ನೋಟಿಸನ್ನಾಗಲಿ ಅಥವಾ ನ್ಯಾಯಾಲಯದ ಆದೇಶವನ್ನಾಗಲಿ ತರದೇ ಲಾರಿಯನ್ನು ಸೀಜ್ ಮಾಡಿರುವುದು ಲೋನ್ ಕಂ ಹೈಪೋಥಿಕೇಶನ್ ಅಗ್ರಿಮೆಂಟ್‌ಗೆ ವಿರುದ್ದವಾಗಿದ್ದು, ಎದುರುದಾರರ ನಡೆಯಿಂದ ತಮಗೆ ಬಹಳ ಆರ್ಥಿಕ ನಷ್ಟ ಉಂಟಾಗಿರುವುದಾಗಿ ಮತ್ತು ತಾವು ರೂ.1,87,000/-ಗಳ ಸಾಲ ಕಟ್ಟಿದ್ದರು ಸಹ ಅಗ್ರಿಮೆಂಟ್ ವಿರುದ್ದವಾಗಿ ಲಾರಿಯನ್ನು ಸೀಜ್ ಮಾಡಿ 2 ನೇ ಎದುರುದಾರರಿಗೆ ಬಾಡಿಗೆ ರೂಪದಲ್ಲಿ ಲಾರಿಯನ್ನು ನೀಡಿರುವುದರಿಂದ ತಮಗೆ ಪ್ರತಿ ದಿನ ರೂ. 1,500/- ನಷ್ಟವಾಗುತ್ತಿರುವುದಾಗಿ ಮತ್ತು ಎದುರುದಾರರ ಈ ನಡೆಯನ್ನು ಸೇವಾ ನ್ಯೂನ್ಯತೆ ಎಂದು ದೂರನ್ನು ಸಲ್ಲಿಸಿರುತ್ತಾರೆ.
District Consumer Disputes Redressal Commission ಆಯೋಗವು ದೂರುದಾರರು ಮತ್ತು ಎದುರುದಾರರು ಸಲ್ಲಿಸಿರುವ ಪ್ರಮಾಣಪತ್ರ ಮತ್ತು ದಾಖಲಾತಿಗಳನ್ನು ಪರಿಶೀಲಿಸಿ ಉಭಯ ಪಕ್ಷದವರ ವಾದ-ವಿವಾದಗಳನ್ನು ಆಲಿಸಿ 1 ನೇ ಎದುರುದಾರರು ದೂರುದಾರರಿಗೆ ಕಾನೂನು ರೀತ್ಯಾ ನೋಟಿಸ್ ಅನ್ನು ನೀಡದೆ ಲಾರಿಯನ್ನು ವಶಪಡಿಸಿಕೊಂಡು ಮಾರಿರುವುದರಿಂದ ಎದುರುದಾರರು ಸೇವಾ ನ್ಯೂನ್ಯತೆಯನ್ನು ಎಸಗಿರುವುದಾಗಿ ಪರಿಗಣಿಸಿ ದೂರನ್ನು ಭಾಗಶಃ ಪುರಸ್ಕರಿಸಿ ಈ ಆದೇಶವಾದ ದಿನಾಂಕದಿಂದ 45 ದಿನಗಳೊಳಗಾಗಿ ದೂರುದಾರರ ವಶಕ್ಕೆ ಲಾರಿಯನ್ನು ನೀಡತಕ್ಕದ್ದು, ತಪ್ಪಿದಲ್ಲಿ ಈ ಆದೇಶವಾದ ದಿನಾಂಕದಿಂದ ಪ್ರತಿದಿನ ರೂ.1000/-ಗಳನ್ನು ದೂರುದಾರರ ವಶಕ್ಕೆ ಲಾರಿಯನ್ನು ನೀಡುವವರೆಗೂ ಪಾವತಿಸಬೇಕೆಂದು ಹಾಗೂ 1 ನೇ ಎದುರುದಾರರು ರೂ.20,000/- ಗಳನ್ನು ಮಾನಸಿಕ ವೇದನೆಗೆ ಹಾಗೂ ದೂರಿನ ಖರ್ಚು-ವೆಚ್ಚಕ್ಕಾಗಿ ಈ ಆದೇಶವಾದ 45 ದಿನಗಳೊಳಗೆ ಪಾವತಿಸಬೇಕು. ತಪ್ಪಿದಲ್ಲಿ ಈ ಮೊತ್ತಕ್ಕೆ ಶೇ.12 ರಂತೆ ಬಡ್ಡಿಯನ್ನ ಸೇರಿಸಿ ಈ ಆದೇಶವಾದ ದಿನದಿಂದ ಪೂರಾ ಹಣ ಪಾವತಿಸುವವರೆಗೂ ಪಾವತಿಸಲು ಹಾಗೂ 2 ಮತ್ತು 3 ನೇ ಎದುರುದಾರರ ವಿರುದ್ಧ ದೂರನ್ನು ವಜಾ ಮಾಡಿರುವುದಾಗಿ ಶಿವಮೊಗ್ಗ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷರಾದ ಟಿ.ಶಿವಣ್ಣ ಮತ್ತು ಸದಸ್ಯರಾದ ಬಿ.ಡಿ.ಯೋಗಾನಂದ ಭಾಂಡ್ಯ ಇವರನ್ನೊಳಗೊಂಡ ಪೀಠವು ದಿನಾಂಕ:5/6/20205 ರಂದು ಆದೇಶಿಸಿದೆ.

Shivamogga Soldier Welfare and Rehabilitation Department ಸೇನೆಗೆ ಸೇರ ಬಯಸುವ ಆಕಾಂಕ್ಷಿಗಳಿಗೆ ಮಾರ್ಗದರ್ಶನ

0

Shivamogga Soldier Welfare and Rehabilitation Department ಸೇನೆಗೆ ಸೇರಲು ಬಯಸುವ ಆಸಕ್ತ ಯುವಕ/ಯುವತಿಯರಿಗಾಗಿ ಶಿವಮೊಗ್ಗದಲ್ಲಿ ಜೂ. 21 ರಂದು ಬೆಳಗ್ಗೆ 9.00 ಕ್ಕೆ ಮಂಗಳೂರು ಸೇನಾ ನೇಮಕಾತಿ ಕಛೇರಿಯ ನಿರ್ದೇಶಕರಿಂದ ಮಾರ್ಗದರ್ಶನ ಉಪನ್ಯಾಸವನ್ನು ಹಮ್ಮಿಕೊಳ್ಳಲಾಗಿದ್ದು, ಆಸಕ್ತ ಯುವಕ/ಯುವತಿಯರು ತಮ್ಮ ಹೆಸರು, ವಿದ್ಯಾರ್ಹತೆಯ ವಿವರಗಳನ್ನು ವಾಟ್ಸಪ್ ನಂಬರ್ 9591894552 ಗೆ ಕೇವಲ ವಾಟ್ಸಪ್ ಮೇಸೇಜ್ ಮಾಡುವ ಮೂಲಕ ನೋಂದಾಯಿಸಿಕೊಳ್ಳುವುದು.
ನೋಂದಾಯಿಸಿಕೊಂಡವರು ಮಾರ್ಗದರ್ಶನ ಉಪನ್ಯಾಸಕ್ಕೆ ಹಾಜರಾಗಲು ಅರ್ಹರಾಗಿರುತ್ತಾರೆಂದು ಶಿವಮೊಗ್ಗ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಉಪ ನಿರ್ದೇಶಕರು ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಯನ್ನು/ಮಾರ್ಪಾಡುಗಳನ್ನು ತಮ್ಮ ವಾಟ್ಸಪ್ ಸಂಖ್ಯೆಗೆ ಅಗತ್ಯವಿದ್ದಲ್ಲಿ ತಿಳಿಸಲಾಗುವುದು.