Thursday, August 13, 2026
Thursday, August 13, 2026
Home Blog Page 251

Shimoga News ಸಂಗೀತ ರಸಿಕರನ್ನ ರಂಜಿಸಿದ ನಿಜಗುಣಿ ಮಂಗಿ ಅವರ ಹಿಂದೂಸ್ತಾನಿ ಗಾಯನ

0

Shimoga News ಸಾಗರ ರಸ್ತೆಯ ವೀರೇಶ್ವರ ಪುಣ್ಯಾಶ್ರಮ ಸಂಸ್ಕತ ಪಾಠ ಶಾಲೆಯಲ್ಲಿ ಗಾನಲಹರಿ ೧೧೫ನೇ ಅಮಾವಾಸ್ಯೆಯ ಸಂಗೀತ ಸಂಜೆ ಕಾರ್ಯಕ್ರಮವು ಯಶಸ್ವಿಯಾಗಿ ನಡೆಯಿತು. ರಾಜ್ಯ ಪ್ರಶಸ್ತಿ ಪುರಸ್ಕೃತ ಆರ್.ಬಿ. ಸಂಗಮೇಶ್ವರ ಗವಾಯಿಗಳೂ ಅಧ್ಯಕ್ಷತೆ ವಹಿಸುವರು. ಗೋಪಾಳದ ಶ್ರೀ ಶಾರದಾ ಶಂಕರ ಭಜನಾ ಮಂಡಳಿಯಿಂದ ಭಜನಾ ಸೇವೆ ಮತ್ತು ಆಶ್ರಮದ ಅಂಧ ಮಕ್ಕಳಿಂದ ಪ್ರಾರ್ಥನೆ ಮತ್ತು ಹುಬ್ಬಳ್ಳಿಯ ಹಿಂದೂಸ್ಥಾನಿ ಗಾಯಕ ನಿಜಗುಣಿ ಮಂಗಿ ಅವರಿಂದ ಸಂಗೀತ ಸೇವೆ ನಡೆಯಿತು. ರಾಜ್ಯ ಪ್ರಶಸ್ತಿ ಪುರಸ್ಕೃತ ರಾಮಣ್ಣ ಭಜಂತ್ರಿ ಶಹನಾಯ, ವೀರಭದ್ರಯ್ಯ ಶಾಸ್ತ್ರಿಗಳಿಂದ ವೇದಘೋಷ ಹಾಗೂ ಹಿರಿಯ ತಬಲ ಕಲಾವಿದರಾದ ಪಂ. Shimoga News ಆರ್. ತುಕಾರಾಮ್ ರಂಗಧೋಳ್ ವಿನಾಯಕ್ ಭಟ್ ಅವರ ತಬಲ ಸೇವೆ ಹಾಗೂ ಸಿದ್ದಣ್ಣ ಬಡಿಗಾರ್ ಅವರು ಆರ್‍ಮೋನಿಯಂ ನೊಂದಿಗೆ ಸಾಥ್ ನೀಡಲಿದ್ದಾರೆ. ಸಂಗೀತ ಶಿಕ್ಷಕಿ ನಾದಶ್ರೀ ಫಕೀರಯ್ಯ ಕಾರ್ಯಕ್ರಮ ಶಾಸ್ತ್ರಿ ಅವರು ನಿರೂಪಿಸಿದರು.

Gurudutt Hegde ಕಾರ್ಮಿಕನ ಮೇಲೆ ಪೊಲೀಸ್ ಅಧಿಕಾರಿ ಹಲ್ಲೆ: ಸೂಕ್ತ ಕ್ರಮಕ್ಕಾಗಿಕಾಂಗ್ರೆಸ್ ಕಾರ್ಯಕರ್ತರ ಆಗ್ರಹ

0

Gurudutt Hegde ಹೊರ ಊರುಗಳಿಂದ ಬಂದು, ತುತ್ತು ಅನ್ನಕ್ಕಾಗಿ ಹೋಟೆಲ್‌ಗಳಲ್ಲಿ ಕ್ಲೀನರ್‌ಗಳಾಗಿ ಕೆಲಸ ಮಾಡುವ ಕಾರ್ಮಿಕನ ಮೇಲೆ ಮೊನ್ನೆ ರಾತ್ರಿ ಏಕಾಏಕಿ ಹಲ್ಲೆ ಮಾಡಿದ ದೊಡ್ಡಪೇಟೆ ಪೋಲೀಸ್ ಠಾಣೆಯ ಪೋಲೀಸ್ ಅಧಿಕಾರಿಯ ವರ್ತನೆ ನಾಗರೀಕ ಸಮಾಜ ತಲೆತಗ್ಗಿಸುವಂಥದ್ದು. ಸಮಯ ಮೀರಿ ಹೋಟೆಲ್ ವ್ಯಾಪಾರವನ್ನು ನಡೆಸುತ್ತಿರುವ ಹೋಟೆಲ್ ಮಾಲೀಕರ ವಿರುದ್ಧ ಕಾನೂನು ಕ್ರಮ ಕೈಗೊಳ್ಳದೆ, ಹೋಟೆಲ್‌ಗಳಲ್ಲಿ ಕೆಲಸ ಮಾಡುವ ಕಾರ್ಮಿಕರ ಮೇಲೆ ಹಲ್ಲೆ ಮಾಡುವುದು ಎಷ್ಟರಮಟ್ಟಿಗೆ ಸರಿ ಎಂಬುದನ್ನು ಸಾರ್ವಜನಿಕರ ವಲಯದ ಪ್ರಶ್ನೆಯಾಗಿದೆ

ನಗರದಲ್ಲಿ ಯುವಕರು ಗಾಂಜಾ ವ್ಯಸನಿಗಳಾಗಿ ಸಾರ್ವಜನಿಕ ವಲಯದಲ್ಲಿ ಕಿರಿಕಿರಿ ಉಂಟು ಮಾಡುತ್ತಾ ಭಯದ ವಾತಾವರಣ ಸೃಷ್ಟಿಸಿದ್ದು, ಜೊತೆಗೆ ಶಿವಮೊಗ್ಗ ನಗರ ಸೇರಿದಂತೆ ಹೊರವಲಯ, ಗ್ರಾಮೀಣ ಪ್ರದೇಶದ ಗಡಿ ಭಾಗದಲ್ಲಿ ಅಕ್ರಮವಾಗಿ ಎಗ್ಗಿಲ್ಲದೆ ಯಾವುದೇ ಕಾನೂನಿನ ಭಯವಿಲ್ಲದೆ ಕಾನೂನುಬಾಹಿರ ಇಸ್ಪೀಟ್ ಆಟಗಳ ಚಟುವಟಿಕೆ ಸರಾಗವಾಗಿ ನಡೆಯುತ್ತಿದ್ದು, ಇದನ್ನು ನಿಯಂತ್ರಿಸಬೇಕಾದ ಪೋಲೀಸ್ ಇಲಾಖೆಯ ಕೆಲವು ಅಧಿಕಾರಿಗಳು ಮತ್ತು ಸಿಬ್ಬಂದಿಗಳೇ ಇಸ್ಪೀಟ್ ಅಡ್ಡೆಗಳಿಗೆ ರಕ್ಷಣಾ ಕವಚದಂತೆ ರಕ್ಷಣೆ ನೀಡುತ್ತಿದ್ದಾರೆಂದು ಸಾರ್ವಜನಿಕರು ಆರೋಪಿಸುತ್ತಿದ್ದಾರೆ.

ಇಸ್ಪೀಟು ಅಡ್ಡೆಗಳಿಂದ ಹಲವು ಕುಟುಂಬಗಳು ಮನೆ-ಮಠಗಳನ್ನು ಕಳೆದುಕೊಂಡು ಬೀದಿಗೆ ಬಂದಿದ್ದು, ತಂದೆ-ತಾಯಿ, ಹೆಂಡತಿ-ಮಕ್ಕಳು ಕಣ್ಣೀರಿಡುತ್ತಾ ಸರ್ಕಾರ ಮತ್ತು ಪೋಲೀಸ್ ಇಲಾಖೆಗೆ ಶಾಪ ಹಾಕುತ್ತಿದ್ದು, ಕೆಲವು ಯುವಕರು ಇಸ್ಪೀಟ್ ಆಟದಲ್ಲಿ ತೊಡಗಿಸಿಕೊಂಡು ನಷ್ಟ ಅನುಭವಿಸಿ, ನಂತರ ಅಪರಾಧ ಕೃತ್ಯಗಳಲ್ಲಿ ಭಾಗವಹಿಸುತ್ತಿರುವುದು ಅತ್ಯಂತ ಕಳವಳದ ಸಂಗತಿ. ಇಂತಹ ಹಲವು ಕಾನೂನುಬಾಹಿರ ಚಟುವಟಿಕೆಗಳಿಗೆ ಕಡಿವಾಣ ಹಾಕಬೇಕಾದ ಪೋಲೀಸ್ ಇಲಾಖೆಯ ಕೆಲವೇ ಅಧಿಕಾರಿಗಳು, ತುತ್ತು ಅನ್ನಕ್ಕಾಗಿ ಕೆಲಸ ಮಾಡುವ ಹೋಟೆಲ್ ಕಾರ್ಮಿಕರ ಮೇಲೆ ಹಲ್ಲೆ ನಡೆಸುವುದು ಎಷ್ಟರಮಟ್ಟಿಗೆ ಸರಿ. ಕೂಡಲೇ ಮಾನ್ಯ ಜಿಲ್ಲಾ ರಕ್ಷಣಾಧಿಕಾರಿಗಳು ಹೋಟೆಲ್ ಕಾರ್ಮಿಕನ ಮೇಲೆ ಹಲ್ಲೆ ಮಾಡಿದ ಪೋಲೀಸ್ ಅಧಿಕಾರಿ ವಿರುದ್ಧ ಕಾನೂನುಕ್ರಮ ಕೈಗೊಳ್ಳಬೇಕು,

Gurudutt Hegde ಶಿವಮೊಗ್ಗ ನಗರ ಹಾಗೂ ಗ್ರಾಮಾಂತರ ಪ್ರದೇಶಗಳಲ್ಲಿ ಎಗ್ಗಿಲ್ಲದೆ ನಡೆಯುತ್ತಿರುವ ಇಸ್ಪೀಟು ಅಡ್ಡೆಗಳ ಮೇಲೆ ದಾಳಿ ನಡೆಸಿ ಸಂಪೂರ್ಣ ಬಂದ್ ಮಾಡಿಸಬೇಕು. ಇನ್ನು ಹತ್ತು ದಿನಗಳಲ್ಲಿ ಕ್ರಮ ತೆಗೆದುಕೊಳ್ಳದೇ ಹೋದಲ್ಲಿ, ಶಿವಮೊಗ್ಗ ಯುವ ಕಾಂಗ್ರೆಸ್‌ನಿಂದ ಸ್ಥಳೀಯ ನಾಗರೀಕರೊಂದಿಗೆ ನಾವುಗಳೇ ಮುತ್ತಿಗೆ ಹಾಕಲಾಗುವುದು. ಮುಂದಾಗುವ ಎಲ್ಲಾ ಅನಾಹುತಗಳಿಗೆ ಜಿಲ್ಲಾಡಳಿತವೇ ನೇರ ಹೊಣೆಯಾಗುವುದೆಂದು ಎಚ್ಚರಿಸುತ್ತಿದ್ದೇವೆ

ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ ರಂಗನಾಥ್, ಜಿಲ್ಲಾ ಯುವ ಕಾಂಗ್ರೆಸ್ ನ ಹೆಚ್ ಪಿ ಗಿರೀಶ್, ಹಾಪ್ ಕಾಮ್ಸ್ ನಿರ್ದೇಶಕ ಎಸ್ ಎಮ್ ಶರತ್ ಮರಿಯಪ್ಪ, ಗ್ಯಾರಂಟಿ ಪ್ರಾಧಿಕಾರದ ಸದಸ್ಯರಾದ ಎಸ್ ಕುಮಾರೇಶ್,ಎಸ್ ಬಸವರಾಜ್, ಯುವ ಕಾಂಗ್ರೆಸ್ ನ ಪದಾಧಿಕಾರಿಗಳಾದ ಪುಷ್ಪಕ್ ಕುಮಾರ್, ಎಂ ರಾಕೇಶ್, ಮೋಹನ್ ಸೋಮಿನಕೊಪ್ಪ, ರಾಹುಲ್ ಸಿಗೆಹಟ್ಟಿ, ಸಚಿನ್, ರಾಜೇಶ್ ಮಂದಾರ, ಅಧ್ಯಾನ್ ಪಾಷಾ, ಎಸ್ ಜೆ, ಮಿಥುನ್ , ಸಂಜಯ್, ಪ್ರಜ್ವಲ್, ಕಿರಣ್ ರಂಗೇಗೌಡ, ವೆಂಕಟೇಶ್ ಕಲ್ಲೂರು, ನಿತಿನ್ ಇತರರು ಇದ್ದರು

Christmas ಹದಿನೇಳು ವರ್ಷಗಳಿಂದ “ಆಶಾಕಿರಣ” ದಲ್ಲಿ ಹರ್ಷದ ಕ್ರಿಸ್ ಮಸ್ ಆಚರಣೆ- ಫಾ.ಸ್ಕ್ಯಾನಿಡಿಸೋಜಾ.

0

Christmas 2025 ಭರವಸೆಯ ವರ್ಷ ಮುಗಿದು ಹೊಸ ವರ್ಷದ ಆಚರಣೆಯ ಸಂಭ್ರಮದಲ್ಲಿ ಇದ್ದೇವೆ ಹೊಸ ವರ್ಷ ಎಲ್ಲರ ಬಾಳಲ್ಲಿ ಬೆಳಕನ್ನು ಹಾಗೂ ಸುಖ ಸಂತೋಷವನ್ನು ತರಲಿ ಎಂದು ಸೆಕ್ರೆಟ್ ಚರ್ಚಿನ ಪ್ರಧಾನ ಗುರುಗಳಾದ ಫಾದರ್ ಸ್ಕ್ಯಾನಿ ಡಿಸೋಜ ಅವರು ನುಡಿದರು ಅವರು ಇಂದು ಆಶಾ ಕಿರಣದಲ್ಲಿ ಬುದ್ಧಿಮಾಂದ್ರ ಮಕ್ಕಳ ಜೊತೆಗೆ ಕೇಕ್ ಕಟ್ ಮಾಡಿ ಸಿಹಿ ವಿತರಿಸಿ ಆಶೀರ್ವದಿಸಿ ಮಾತನಾಡಿದರು 17 ವರ್ಷಗಳಿಂದ ನಿರಂತರವಾಗಿ ಹೊಸ ವರ್ಷವನ್ನು ಆಶಾ ಕಿರಣದಲ್ಲಿ ಆಚರಣೆ ಮಾಡುತ್ತ ಆರ್ಥಿಕ ಸಹಾಯವನ್ನು ನೀಡುತ್ತಾ ಆಚರಿಸುತ್ತಾ ಬಂದಿದ್ದೇವೆ ಎಂದು ನುಡಿದರು ಇದೇ ಸಂದರ್ಭದಲ್ಲಿ ಕ್ರಿಶ್ಚಿಯನ್ ಮುಖಂಡರು ಹಾಗೂ Christmas ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಚಿನ್ನಪ್ಪನವರು ಮಾತನಾಡುತ್ತಾ ಯೇಸುವಿನ ಕರುಣೆ ದಯೆ ಆಶೀರ್ವಾದ ಸದಾ ಮಕ್ಕಳ ಮೇಲೆ ಇರಲಿ ಕ್ರಿಸ್ಮಸ್ ಹಬ್ಬವನ್ನು ಸಡಗರ ಸಂಭ್ರಮದಿಂದ ಎಂದು ಕರೆ ನೀಡಿದರು. ಕಾರ್ಯಕ್ರಮದಲ್ಲಿ ಶಿವಮೊಗ್ಗ ಜಿಲ್ಲೆ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಉಪಾಧ್ಯಕ್ಷ ಜಿ ವಿಜಯಕುಮಾರ್. ನಾದನ್. ವಾರ್ಡನ್ ಚಂದ್ರಯ್ಯ ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು

Shimoga Christmas ಶಿವಮೊಗ್ಗದಲ್ಲಿ ಕ್ರಿಸ್ ಮಸ್ ವಿಶೇಷದ ಚಿತ್ತಾಕರ್ಷಕ ನಕ್ಷತ್ರ ತಯಾರಿಕಾ ಸ್ಪರ್ಧೆ.

0

Shimoga Christmas ದಿ ಒರಿಜಿನಲ್ ಆಭರಣ ಜ್ಯುವೆಲ್ಲರ್ಸ್ ಸಂಸ್ಥೆ ವತಿಯಿಂದ ಆಯೋಜಿಸಿದ್ದ ಆಭರಣ ಕ್ರಿಸ್‌ಮಸ್ ನಕ್ಷತ್ರ ತಯಾರಿಕೆ ಸ್ಪರ್ಧೆ ಕಾರ್ಯಕ್ರಮವನ್ನು ಯೇಸುವಿನ ಪವಿತ್ರ ಹೃದಯ ಪ್ರಧಾನಾಲಯದ ಉಪ ಗುರು ಫಾದರ್ ಜಾನ್ಸನ್ ಆರ್ ಹಾಗೂ ಮೇರಿ ಸ್ಯಾಂತೋಮ್ ಫಾದರ್ ಸಾಜನ್ ಉದ್ಘಾಟಿಸಿದರು. ನಕ್ಷತ್ರ ತಯಾರಿಕೆ ಸ್ಪರ್ಧೆಗೆ 50 ಜನ ಭಾಗವಹಿಸಿ 25 ಸಾಂಪ್ರದಾಯಿಕ Shimoga Christmas ನಕ್ಷತ್ರಗಳನ್ನು ತಯಾರಿಕೆ ಮಾಡಿದ್ದರು. ಪ್ರಥಮ, ದ್ವಿತೀಯ ಮತ್ತು ತೃತಿಯ ಬಹುಮಾನ ವಿತರಿಸಲಾಯಿತು. ಭಾಗವಹಿಸಿದವರಿಗೆ ಎಲ್ಲರಿಗೂ ಹಬ್ಬದ ಉಡುಗೊರೆ ಗಿಫ್ಟ್ ವೊಚರ್ ಕೊಡುವುದರ ಮೂಲಕ ಕಾರ್ಯಕ್ರಮ ಯಶಸ್ವಿಗೊಳಿಸಲಾಯಿತು.

B. Y. Raghavendra ದ್ವೇಷ ಭಾಷಣ ಕಾಯಿದೆ ಜಾರಿಗೆ ತರದಿರಲು ಆಗ್ರಹಿಸಿಸಂಸದ ರಾಘವೇಂದ್ರ ಪ್ರತಿಭಟನೆಯಲ್ಲಿ ಭಾಗಿ.

0

B. Y. Raghavendra ಕಾಂಗ್ರೆಸ್ ಸರ್ಕಾರ ಜಾರಿಗೆ ತರಲು ಉದ್ದೇಶಿಸಿರುವ ಕರ್ನಾಟಕ ದ್ವೇಷ ಭಾಷಣ ಮತ್ತು ದ್ವೇಷ ಅಪರಾಧಗಳ ಪ್ರತಿಬಂಧಕ ವಿಧೇಯಕ 2025ರ ವಿರುದ್ಧ ಇಂದು ಶಿಕಾರಿಪುರದಲ್ಲಿ ಪಕ್ಷದ ಕಾರ್ಯಕರ್ತರೊಂದಿಗೆ ಸಂಸದ ರಾಘವೇಂದ್ರ ಪ್ರತಿಭಟನಾ ಮೆರವಣಿಗೆಯಲ್ಲಿ ಭಾಗವಹಿಸಿದ್ದರು.

ರಾಜ್ಯದ ಘನತೆವೆತ್ತ ರಾಜ್ಯಪಾಲರು ಈ ಕರಾಳ ಮಸೂದೆಗೆ ಅಂಗೀಕಾರ ನೀಡದಂತೆ ಮಾನ್ಯ ತಹಶೀಲ್ದಾರ್ ಅವರ ಮೂಲಕ ಮನವಿ ಪತ್ರ ಸಲ್ಲಿಸಿದರು.

B. Y. Raghavendra ಈ ಸಂದರ್ಭದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷರಾದ ಶ್ರೀ ಬಿ.ವೈ. ವಿಜಯೇಂದ್ರ ಅವರ ನೇತೃತ್ವದಲ್ಲಿ, ಶಿಕಾರಿಪುರ ತಾಲೂಕು ಕಚೇರಿ ಮುಂಭಾಗ ನಡೆದ ಈ ಪ್ರತಿಭಟನೆಯಲ್ಲಿ ಸಾವಿರಾರು ಕಾರ್ಯಕರ್ತರು ಭಾಗವಹಿಸಿದ್ದರು.

S. N. Channabasappa ಶಾಲಾ ವಾರ್ಷಿಕೋತ್ಸವ : ವಿದ್ಯಾರ್ಥಿಗಳ ಸುಪ್ತಪ್ರತಿಭೆ ಅನಾವರಣಕ್ಕೆ ಸೂಕ್ತ ವೇದಿಕೆ- ಶಾಸಕ ಚನ್ನಬಸಪ್ಪ.

0

S. N. Channabasappa ರೋಟರಿ ಪೂರ್ವ ಆಂಗ್ಲ ಮಾದ್ಯಮ ಶಾಲೆಯ ವಾರ್ಷಿಕೊತ್ಸವ ಸಮಾರಂಭವನ್ನು ದಿನಾಂಕ ೨೦-೧೨-೨೦೨೫ರಂದು ನಗರದ ಅಂಬೇಡ್ಕರ್ ಭವನದಲ್ಲಿ ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಯಿತು. ನಗರದ ಜನಪ್ರಿಯ ಶಾಸಕರಾದ ಶ್ರೀ ಎಸ್ ಎನ್ ಚನ್ನಬಸಪ್ಪ (ಚನ್ನಿ) ನವರು ವಾರ್ಷಿಕೊತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡುತ್ತಾ ಶಾಲಾ ವಾರ್ಷಿಕೊತ್ಸವವು ವಿದ್ಯಾರ್ಥಿಗಳಲ್ಲಿ ಸುಪ್ತವಾಗಿರುವ ಸಾಂಸ್ಕೃತಿಕ ಸಂಭ್ರಮಗಳ ಅನಾವರಣಕ್ಕೆ ಸೂಕ್ತವೇದಿಕೆಯೆಂದು, ರೋಟರಿ ಶಾಲೆಯು ಸುಮಾರು ೪೫ ವರ್ಷಗಳ ಹಿಂದಿನಿಂದಲೂ ನಗರದಲ್ಲಿ ಒಂದು ಪ್ರತಿಷ್ಟಿತ ಶಾಲೆಯಾಗಿದ್ದು, ಗುಣಮಟ್ಟದ ಶಿಕ್ಷಣ, ಮತ್ತು ಮೌಲ್ಯಯುತ ಶಿಕ್ಷಣಕ್ಕೆ ಹೆಸರುವಾಸಿಯಾಗಿದೆಯೆಂದು,ಈ ಶಾಲೆಯಲ್ಲಿ ಪೊಷಕರಿಂದ ಯಾವುದೇ ರೀತಿಯ ಡೊನೇಷನ್ ತೆಗೆದುಕೊಳ್ಳದೆ ಇರುವುದು ಈ ಶಾಲೆಯ ವೆಶಿಷ್ಟÀ್ಟವಾಗಿದ್ದು ಇದರ ಸದುಪಯೋಗವನ್ನು ವಿದ್ಯಾರ್ಥಿಗಳ ಪೊಷಕರು ಪಡೆದುಕೊಳ್ಳಬೇಕೆಂದು ತಿಳಿಸುತ್ತಾ ಶಿಕ್ಷಣವು ಕೂಡ ಇಂದಿನ ದಿನಮಾನಸಗಳಲ್ಲಿ ಒಂದು ವಾಣಿಜ್ಯೋದ್ಯಮ ಹಂತಕ್ಕೆ ಬಂದಿದ್ದು ಈ ನಿಟ್ಟಿನಲ್ಲಿ ರೋಟರಿ ಆಂಗ್ಲ ಮಾದ್ಯಮ ಶಾಲೆಯು ನಗರದಲ್ಲಿ ಒಂದು ಮಾದರಿ ಶಾಲೆಯಾಗಿರುತ್ತದೆಂದು ತಿಳಿಸಿದರು. ಇದೇ ಸಂದAರ್ಭದಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡುತ್ತಾ ಪರಿಸರದ ಬಗ್ಗೆ ಹೆಚ್ಚಿನ ಕಾಳಜಿಯನ್ನು ವಹಿಸಬೇಕೆಂದು ಪ್ರತಿಯೊಬ್ಬ ವಿದ್ಯಾರ್ಥಿಗಳು ತಮ್ಮ ಸುತ್ತಮುತ್ತಲಿನ ಪರಿಸರದ ಸ್ಚಚ್ಚತೆಯ ¨ಗ್ಗೆ ಗಮನ ನಿಡುವುದರ ಜೊತೆಗೆ ಪ್ಲಾಸ್ಟಿಕ್ ನ್ನು ಬಳಸದಂತೆ ಸಾರ್ವಜನಕರಿಗೆ ಅರಿವು ಮೂಡಿಸುವ ಮನೊಪ್ರವೃತ್ತಿಯನ್ನು ಬೆಳೆಸಿಕೊಳ್ಳಬೇಕೆಂದು ಕರೆನೀಡಿದರು.
ಸಮಾರಂಭದ ಅದ್ಯಕ್ಷತೆಯನ್ನು ರೋಟರಿ ಪೂರ್ವ ಎಜುಕೇಶನಲ್ & ಛಾರಿಟಬಲ್ ಟ್ರಸ್ಟಿನ ಮ್ಯಾನೇಜಿಂಗ್ ಟ್ರಸ್ಟಿ ರೊ. ಶ್ರೀ ಕೆ ಬಿ ರವಿಶಂಕರ್ ವಹಿಸಿದ್ದು ಸಮಾರಂಭದಲ್ಲಿ ಹಾಜರಿದ್ದ ಪೋಷಕರನ್ನು ಕುರಿತು ಮಾತನಾಡುತ್ತಾ ಪ್ರತಿವರ್ಷದಂತೆ ಈ ವರ್ಷವೂ ಶಾಲಾ ವಾರ್ಷಿಕೊತ್ಸವ ಸಮಾರಂಭವನ್ನು ಅತ್ಯಂತ ವಿಜೃಂಬಣೆಯಿಂದ ಆಚರಿಸಲಾಗುತ್ತಿದ್ದು, ಶಾಲೆಯ ಸಾಂಸೃತಿಕ ವೈಭವನ್ನು ಪ್ರಕಟಿಸುವ ಶಾಲಾ ಹಬ್ಬ ಇದಾಗಿರುತ್ತದೆಂದು ತಿಳಿಸಿತ್ತಾ ಕಳೆದ ಎರಡು ವರ್ಷಗಳಿಂದಲು ಎಸ್ ಎಸ್ ಎಲ್ ಸಿಯಲ್ಲಿ ೧೦೦ ಕ್ಕೆ ೧೦೦ ಫಲಿತಾಂಶವು ಬರುತ್ತಿದ್ದು ಈ ಭಾರಿ ೧೦೦ ಕ್ಕೆ ೧೦೦ ಫಲಿತಾಂಶ ಬರಲು ಎಲ್ಲಾ ರೀತಿ ಕ್ರಮಗಳನ್ನು ಆಡಳಿತ ಮಂಡಳಿ ಈಗಾಗಲೇ ಕೈಗೊಂಡಿರುತ್ತದೆAದು ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳ ಪೊಷಕರು ಕೂಡ ಹೆಚ್ಚಿನ ಗಮನವಹಿಸಬೇಕೆಂದು ಕರೆ ನೀಡಿದರು.
ಸಮಾರಂಭದ ಇನ್ನೊರ್ವ ಮುಖ್ಯ ಅತಿಥಿಯಾಗಿ ಆಗಮಿಸಿರುವ ಶ್ರೀಯುತ ರಮೇಶ್ ಕ್ಷೇತ್ರ ಶಿಕ್ಷಾಣಾಧಿಕಾರಿಗಳು ಇವರು ಮಾತನಾಡುತ್ತಾ ಸಮಾರಂಭದ ಉದ್ಘಾಟನೆ ಮಾಡಿದ್ದ ಶಾಸಕರ ಅಭಿಪ್ರಾಯವನ್ನು ತಾವು ಕೂಡ ಅನುಮೊದಿಸುವುದಾಗಿ ಈ ಶಾಲೆಯಲ್ಲಿ ಯಾವುದೇ ರೀತಿಯ ಡೊನೇಷನ್ ಇಲ್ಲದೆ ವಿದ್ಯಾರ್ಥಿಗಳನ್ನು ದಾಖಲಾತಿ ಮಾಡಿಕೊಳ್ಳುತ್ತಿರುವುದು ಈ ಶಾಲೆಯ ಹೆಗ್ಗಳಿಕೆ ಯಾಗಿರುತ್ತದೆಂದು ತಿಳಿಸುತ್ತಾ ಈಗಾಗಲೇ ಈ ಶೈಕ್ಷಣಿಕ ವರ್ಷದ ಮುಕ್ತಾಯ ಹಂತಕ್ಕೆ ಬಂದಿರುವ ಪ್ರಯುಕ್ತ ವಿದ್ಯಾರ್ಥಿಗಳೆಲ್ಲರೂ ತಮ್ಮ ಓದಿಗೆ ಹೆಚ್ಚಿನ ಗಮನ ನೀಡಬೇಕೆಂದು ಕರೆನೀಡಿದರು.
ಈ ಸಮಾರಂಭದಲ್ಲಿ ಟ್ರಸ್ಟಿನ ಕಾರ್ಯದರ್ಶಿಯಾದ ರೊ. ಎಸ್ ಸಿ ರಾಮಚಂದ್ರರವರು ಮಾತನಾಡುತ್ತಾ ರೋಟರಿ ಆಂಗ್ಲ ಮಾದ್ಯಮ ಶಾಲೆಯಲ್ಲಿ ಇರುವ ಶಿಕ್ಷಕರೆಲ್ಲರೂ ನುರಿತ ಮತ್ತು ಹೆಚ್ಚಿನ ಅನುಭವವುಳ್ಳವರಾಗಿದ್ದು ಗುಣಮಟ್ಟದ ಶಿಕ್ಷಣವನ್ನು ನೀಡಲಾಗುತ್ತಿದ್ದು ಮುಂಬರುವ ದಿನಗಳಲ್ಲಿ ಈ ಶಾಲೆಗೆ ಹೆಚ್ಚಿನ ಸಂಖೆಯಲ್ಲಿ ವಿದ್ಯಾರ್ಥಿಗಳು ದಾಖಲಾಗಲು ಹಾಜರಿರುವ ಪೊಷಕರೆಲ್ಲರು ಸಹಕರಿಸಬೇಕೆಂದು ಕರೆನೀಡಿದರು.
S. N. Channabasappa ಶಾಲೆಯ ಪ್ರಿನ್ಸಿಪಾಲ್ ಶ್ರೀ ಸೂರ್ಯನಾರಾಯಣ್ ಆರ್ ರವರು ಶಾಲಾ ವಾರ್ಷಿಕ ವರದಿಯನ್ನು ಮಂಡಿಸುತ್ತಾ ಈ ಶೈಕ್ಷಿಣಿಕ ವರ್ಷದಲ್ಲಿ ನಡೆಸಲಾದ ಕಾರ್ಯ ಚಟುವಟಿಕೆಗಳ ಸಮಗ್ರ ಮಾಹಿತಿಗಳನ್ನು ಸಭೆಯಲ್ಲಿ ಮಂಡಿಸುತ್ತಾ ಶಿಕ್ಷಣದ ಜೊತೆಗೆ ಪಠ್ಯೇತರ ಚಟುವಟಿಕೆಗಳಿಗೂ ಕೂಡ ಹೆಚ್ಚಿನ ಒತ್ತು ನೀಡಲಾಗಿದೆಯೆಂದು ತಿಳಿಸಿದರು.
ಸಮಾರಂಭದಲ್ಲಿ (ಜೆ.ಎನ್,ಎನ್,ಸಿ) ತಾಂತ್ರಿಕ ಕಾಲೇಜಿನ ಪ್ರೋಫೆಸರ್ ಶ್ರೀಯುತ ಸುನೀಲ್ ಎಮ್ ಡಿ ಯವರು ಪ್ರತಿ ವರ್ಷದಂತೆ ಈ ವರ್ಷವು ಶಾಲಾ ವಾರ್ಷಿಕೊತ್ಸವ ಸಮಾರಂಭದಲ್ಲಿ ಹಾಜರಿದ್ದು ಬಡಮಕ್ಕಳ ವಿದ್ಯಾರ್ಜೆನೆಗೆ ಅನುಕೂಲವಾಗುವಂತೆ ರೂ ೧೦,೦೦೦ ಗಳ ದೇಣಿಗೆಯನ್ನು ನೀಡಿ ಮಾತನಾಡುತ್ತಾ ತಾವು ಕೂಡ ರೋಟರಿ ಶಾಲೆಯಲ್ಲಿಯೇ ತಮ್ಮ ಹೈಸ್ಕೂಲ್‌ವರೆಗೆನ ವಿದ್ತಾರ್ಥಿ ಜೀವನವನ್ನು ಕಳೆದಿದ್ದು ಈ ಸಮಾರಂಭದಲ್ಲಿ ಬಾಗವಹಿಸುವುದು ತಮಗೆ ಹೆಮ್ಮೆಯ ವಿಷಯವೆಂದು ತಿಳಿಸುತ್ತಾ ಕಳೆದ ಬಾರಿ ಎಸ್ ಎಸ್ ಎಲ್ ಸಿಯಲ್ಲಿ ಅತಿಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ನಗದು ಬಹುಮಾನ ವಿತರಿಸಿ ಪ್ರೋತ್ಸಾಹಿಸಿದರು.
ಈ ಸಮಾರಂಭದಲ್ಲಿ ಉಪಾದ್ಯಕ್ಷರುಗಳಾದ ರೊ. ಶ್ರೀಮತಿ ನಾಗವೇಣಿ ಎಸ್ ಆರ್ ,ರೊ. ಸುರೇಶ್ ಕುಮಾರ್ ,ಖಜಾಂಚಿ ಮಂಜುನಾಥ ಎನ್ ಬಿ ಮತ್ತು ಜಂಟಿ ಕಾರ್ಯದರ್ಶಿಗಳಾದ ವಿಜಯ್ ಕುಮಾರ್ ಜಿ ,ಡಾ|| ಅರುಣ್ ಎಮ್ ಎಸ್ ರವರು ಹಾಜರಿದ್ದು, ವಿದ್ಯಾರ್ಥಿಗಳಿಗೆ ಹಿತವಚನ ನೀಡಿzರು ಮತ್ತು ಸಮಾರಂಭದಲ್ಲಿ ಟ್ರಸ್ಟಿಗಳಾದ ಪೇಟ್ರನ್ ಟ್ರಸ್ಟಿ ಕಡಿದಾಳ್ ಗೋಪಾಲ್, ಹೇಮಂತ್ ಎಮ್ ಸಿ, ಪ್ರವೀಶ್ ಡಿ ,ಚಂದ್ರಶೇಖರಯ್ಯ ಎಮ್, ಹಾಜರಿದ್ದು ಸಮಾರಂಭದ ಮೆರಗನ್ನು ಹೆಚ್ಚಿಸಿದರು. ಸಭಾಕಾರ್ಯ ಕ್ರಮದನಂತರ ಎಲ್ ಕೆ ಜಿ ಯಿಂದ ಹತ್ತನೆ ತರಗತಿಯ ವಿದ್ಯಾರ್ಥಿಗಳು ಮತ್ತು ಶಾಲೆಯ ಶಿಕ್ಷಕಿಯರು ಹಾಗೂ ಸಿಬ್ಬಂದಿ ವರ್ಗದವರೆಲ್ಲರೂ ಸೇರಿ ವೈವಿದ್ಯಮಯ ಸಾಂಸೃತಿಕ ಕಾರ್ಯಕ್ರಮವನ್ನು ನಡೆಸಿಕೊಟ್ಟು ಶಾಲಾ ಸಾಂಸೃತಿಕ ವೈಭªವÀನ್ನು ಅನಾವರಣಗೊಳಿಸಿದರು. ಸಮಾರಂಭದ ನಿರೂಪಣೆಯನ್ನು ಹರ್ಷಿತ ಸಹ ಶಿಕ್ಷಕಿ ನಡೆಸಿದ್ದು ಕೊನೆಯಲ್ಲಿ ದೀಪಿಕಾ ಪಿ ಸಹಶಿಕ್ಷಕಿ ಇವರ ವಂದನಾರ್ಪಣೆಯೊಂದಿಗೆ ಸಮಾರಂಭವನ್ನು ಮುಕ್ತಾಯವಾಯಿತು.

Sacred Heart High School ಸೇಕ್ರೆಡ್ ಹಾರ್ಟ್ ಪ್ರೌಢಶಾಲೆಯ ವಜ್ರ ಮಹೋತ್ಸವ: ಹಳೇ ವಿದ್ಯಾರ್ಥಿಗಳ ಸಮ್ಮಿಲನ.

0

Sacred Heart High School ಸೇಕ್ರೆಡ್ ಹಾರ್ಟ್ ಪ್ರೌಢ ಶಾಲೆಯ ವಜ್ರ ಮಹೋತ್ಸವದ ಅಂಗವಾಗಿ ಹಳೆಯ ವಿದ್ಯಾರ್ಥಿಗಳ ಸಮ್ಮಿಲನವನ್ನು ದಿನಾಂಕ 21-12-2025 ರಂದು ಹಮ್ಮಿಕೊಳ್ಳಲಾಗಿತ್ತು. ಅಂದು ಬೆಳಗ್ಗೆ ಹಳೆಯ ವಿದ್ಯಾರ್ಥಿಗಳಿಗೆ ಆಟೋಟ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಸಂಜೆ ಸಭಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಖ್ಯಾತ ನಟ ವಿಜಯ್ ರಾಘವೇಂದ್ರ, ಶ್ರೀಯುತ ಕುಮಾರ್ ಬಂಗಾರಪ್ಪ, ಡಾ. ಧನಂಜಯ ಸರ್ಜಿ, ಶ್ರೀಯುತ ಸಿ. ಎಸ್ ಷಡಾಕ್ಷರಿ, ಶ್ರೀಯುತ ಯೋಗೇಶ್ ಹೆಚ್ ಸಿ, ಶ್ರೀಯುತ ಬಳ್ಳೆಕೆರೆ ಸಂತೋಷ್, ಶ್ರೀಯುತ ಹರ್ಷ ಎನ್,ಎಸ್ ಚಿನ್ನಪ್ಪ ಹಾಗೂ ಹಳೆಯ Sacred Heart High School ಮುಖ್ಯೋಪಾಧ್ಯಾಯರು ಹಾಗೂ ಶಿಕ್ಷಕರು ಉಪಸ್ಥಿತರಿದ್ದರು. ಆಡಳಿತ ಮಂಡಳಿಯ ಮುಖ್ಯಸ್ಥರ ಪ್ರಸನ್ನತೆಯಲ್ಲಿ ಅಂದಿನ ಕಾರ್ಯಕ್ರಮ ಪ್ರಾರಂಭವಾಯಿತು. ಬಳಿಕ ಹಳೆಯ ವಿದ್ಯಾರ್ಥಿಗಳ ಪರಿಚಯ ಹಾಗೂ ಮನೋರಂಜನಾ ಕಾರ್ಯಕ್ರಮಗಳು ಜರುಗಿದವು. ಬಳಿಕ ಅದ್ದೂರಿ ಭೋಜನದೊಂದಿಗೆ ಈ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಲಾಯಿತು.

Shimoga News ಗಾಯಕ ಡಾ.ಅಪ್ಪಗೆರೆ ತಿಮ್ಮರಾಜು ಅವರ ನೇತೃತ್ವದಲ್ಲಿ ಜನಪದ ಗೀತ ಗಾಯನ ತರಬೇತಿ ಶಿಬಿರ.

0

Shimoga News ಚಿರಂತನ ಯೋಗ ಮತ್ತು ಸಂಗೀತ ಟ್ರಸ್ಟ್ ನಿಂದ ಕರ್ನಾಟಕ ಸಂಘ ಶಿವಮೊಗ್ಗ, ಕರ್ನಾಟಕ ಸುಗಮ ಸಂಗೀತ ಪರಿಷತ್ ಜಿಲ್ಲಾ ಘಟಕದಿಂದ ಡಾ. ಅಪ್ಪಗೆರೆ ತಿಮ್ಮರಾಜು ಅವರ ಸಾರಥ್ಯದಲ್ಲಿ ಡಿಸೆಂಬರ್ 24 ಮತ್ತು 25ರಂದು ಕರ್ನಾಟಕ ಸಂಘದ ಸಭಾಂಗಣದಲ್ಲಿ “ಜಾಣರ ಪದ-ಜನಪದ” ಜಾನಪದ ಗೀತಗಾಯನ ತರಬೇತಿ ಶಿಬಿರ ಹಮ್ಮಿಕೊಳ್ಳಲಾಗಿದೆ.

Shimoga News ಡಿಸೆಂಬರ್ 24ರಂದು ಬೆಳಗ್ಗೆ 10.15ಕ್ಕೆ ಶಿಬಿರವನ್ನು ಜಿಲ್ಲಾ ಲೇಖಕಿಯರ ಸಂಘದ ಸಂಸ್ಥಾಪಕಿ ಎಸ್.ವಿ.ಚಂದ್ರಕಲಾ ಉದ್ಘಾಟಿಸುವರು. ಚಿರಂತನ ಯೋಗ ಮತ್ತು ಸಂಗೀತ ಟ್ರಸ್ಟ್ ಸ್ಥಾಪಕ ಅಧ್ಯಕ್ಷೆ ಶಾಂತಾ ಎಸ್.ಶೆಟ್ಟಿ ಅಧ್ಯಕ್ಷತೆ ವಹಿಸುವರು. ಡಾ. ಅಪ್ಪಗೆರೆ ತಿಮ್ಮರಾಜು ಶಿಬಿರದ ನೇತೃತ್ವ ವಹಿಸುವರು. ಎಚ್.ಆರ್.ಶಂಕರನಾರಾಯಣ ಶಾಸ್ತ್ರಿ, ಎಚ್.ಎಸ್.ರಮಾಶಾಸ್ತ್ರಿ ಪಾಲ್ಗೊಳ್ಳುವರು.

ಡಿಸೆಂಬರ್ 25ರಂದು ಸಂಜೆ 4.30ಕ್ಕೆ ಸಮಾರೋಪ ಸಮಾರಂಭದಲ್ಲಿ ಪತ್ರಕರ್ತ ಎಸ್.ಚಂದ್ರಕಾಂತ್, ಸಮಾಜ ಸೇವಕ ಕೆ.ಇ.ಕಾಂತೇಶ್, ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಉಪಾಧ್ಯಕ್ಷ ಜಿ.ವಿಜಯಕುಮಾರ್ ಭಾಗವಹಿಸುವರು.

ಫೋಟೊ: ಡಾ. ಅಪ್ಪಗೆರೆ ತಿಮ್ಮರಾಜು

Shimoga APMC ಭಾನುವಾರ ಬೆಳಿಗ್ಗೆ ಮಾತ್ರ ಎಪಿಎಂಸಿ ಬಳಿರಾಸಾಯನಿಕ ರಹಿತ ಸಾವಯವ ಪದಾರ್ಥಗಳ ಮಾರಾಟದ” ವಿಷಮುಕ್ತ ರೈತರ ಸಂತೆ”.

0

Shimoga APMC ಪ್ರತಿ ಭಾನುವಾರ ಶಿವಮೊಗ್ಗ ವಿನೋಬನಗರ- ಆಲ್ಕೊಳ ರಸ್ತೆಯ ಎಪಿಎಂಸಿ ತರಕಾರಿ ಮಾರುಕಟ್ಟೆ ಗಿಂತ ಸ್ವಲ್ಪ ದೂರದ ಐಜಿ ಸರ್ಕಲ್ ನಲ್ಲಿ ವಿಷ ಮುಕ್ತ ರೈತರ ಸಂತೆ ನಡೆಯುತ್ತದೆ. ಬೆಳಿಗ್ಗೆ 07 ರಿಂದ 10 ಗಂಟೆ ವರೆಗೆ.
ಸಾವಯವ ಮತ್ತು ಸಹಜ ಕೃಷಿಯಲ್ಲಿ ಯಾವುದೇ ರಾಸಾಯನಿಕ, ಕ್ರಿಮಿನಾಶಕ ಬಳಸದೇ ಬೆಳೆದ ಪದಾರ್ಥಗಳನ್ನು ಮಾರಾಟ ಮಾಡಲಾಗುತ್ತಿದೆ. ಆಸಕ್ತರು ಭೇಟಿ ನೀಡಿ ಖರೀದಿ ಮಾಡಬಹುದು. ಇಲ್ಲಿ ರೈತರಿಂದ ನೇರ ಮಾರಾಟ.

Shimoga News ಡಿಸೆಂಬರ್ 28.ಸರ್ವ ಜಾತಿ- ಜನಾಂಗಗಳವಿಧುರ-ವಿಧವೆ ಸಮಾಲೋಚನಾ ಸಭೆ.

0

Shimoga News “ಮರಳಿ ಯತ್ನವ ಮಾಡು ಮರಳಿ ಯತ್ನವ ಮಾಡು” ಎಂಬ ತತ್ವಪದದಂತೆ ಶಿವಮೊಗ್ಗ ನಗರದ ಶ್ರೀ ಕಲಾ ಕೌಶಲ್ಯಾಭಿವೃದ್ಧಿ ಕೇಂದ್ರದಲ್ಲಿ ಇದೇ ಡಿಸೆಂಬರ್-28 ರಂದು ಭಾನುವಾರ ಸವ೯ ಜಾತಿ-ಜನಾಂಗಗಳ ವಿಧುರ-ವಿಧವೆ ಪುನರ್ವಿವಾಹ ಸಮಾಲೋಚನೆ ಸಭೆ ಏಪ೯ಡಿಸಲಾಗಿದೆ.
ಇದೊಂದು ಮಾನವೀಯ ಸಂಬಂಧ ಹಾಗು ಸಾಮಾಜಿಕ ಕಳಕಳಿಯ ಹೊಸ ದಿಕ್ಕಿನ ಕಡೆಗಿನ ಪ್ರಯತ್ನವಾಗಿದ್ದು ನಾಡಿನ ನಾನಾ ಕಡೆಗಳಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಅಂದು ಬೆಳಿಗ್ಗೆ 11=00 ಗಂಟೆಗೆ ವಿವಿಧೆಡೆಗಳಿಂದ ವಿಧುರ-ವಿಧವೆ ಹಾಗು ಪರಿತ್ಯಕ್ತರು ಭಾಗವಹಿಸಲಿದ್ದಾರೆ.
Shimoga News ಆಸಕ್ತರು ಆರ್.ಟಿ. ನಟರಾಜ್ ಶ್ರೀಕಲಾ ಕೌಶಲ್ಯಾಭಿವೃದ್ಧಿ ಕೇಂದ್ರ, ಒಂದನೆ ಮಹಡಿ, ಜಿಲ್ಲಾ ನಿವೃತ್ತ ನೌಕರರ ಸಂಘದ ಕಟ್ಟಡ, ಪ್ರೆಸ್ ಕ್ಲಬ್ ಎದುರು, ಆರ್.ಟಿ.ಒ. ಆಫೀಸ್ ರಸ್ತೆ, ಜಿಲ್ಲಾಧಿಕಾರಿಗಳ ಕಚೇರಿ ಆವರಣ, ಶಿವಮೊಗ್ಗ. ಮೊಬೈಲ್ : 9448143165/9449552635/9342158359/6363002259 ಇವರಲ್ಲಿ ಹೆಸರು ನೊಂದಾಯಿಸಿಕೊಂಡು ಪೋಸ್ಟ್ ಕಾಡ್೯ ಸೈಜ್ ಫೋಟೋ, ಆಧಾರ್ ಕಾಡ್೯, ಇತರೆ ಸಮಂಜಸ ದಾಖಲೆಗಳ ಸಹಿತ ಕಾಯ೯ಕ್ರಮದಲ್ಲಿ ಭಾಗವಹಿಸಬಹುದು.