Thursday, August 13, 2026
Thursday, August 13, 2026
Home Blog Page 250

Backward Classes Welfare Department 2025-26 ನೇ ಸಾಲಿಗೆ ಮೆಟ್ರಿಕ್ ನಂತರದ ಕೋರ್ಸ್ ವ್ಯಾಸಂಗ ಮಾಡುತ್ತಿರುವ ಹಿಂದುಳಿದ ವಿದ್ಯಾರ್ಥಿಗಳಿಗೆ ಮಾಹಿತಿ

0

Backward Classes Welfare Department 2025-26 ನೇ ಸಾಲಿಗೆ ಮೆಟ್ರಿಕ್ ನಂತರದ ಕೋರ್ಸುಗಳಲ್ಲಿ ವ್ಯಾಸಂಗ ಮಾಡುತ್ತಿರುವ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳು ಹಾಗೂ ಪ್ರವರ್ಗ-1ರ ಅಲೆಮಾರಿ/ಅಲೆಮಾರಿ ಜನಾಂಗದ ವಿದ್ಯಾರ್ಥಿಗಳಿಂದ ಮೆಟ್ರಿಕ್ ನಂತರದ ವಿದ್ಯಾರ್ಥಿವೇತನ, ಅಲೆಮಾರಿ/ಅಲೆಮಾರಿ ಜನಾಂಗದ ಮೆಟ್ರಿಕ್ ನಂತರದ ಅರ್ಹತಾ ವಿದ್ಯಾರ್ಥಿವೇತನ, ಶುಲ್ಕ ವಿನಾಯಿತಿ, ವಿದ್ಯಾಸಿರಿ-ಊಟ ಮತ್ತು ವಸತಿ ಸಹಾಯ ಯೋಜನೆ ಸೌಲಭ್ಯ ನೀಡಲು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವತಿಯಿಂದ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದ್ದು, ಅರ್ಜಿ ಸಲ್ಲಿಸುವ ಕಡೆಯ ದಿನಾಂಕವನ್ನು ದಿ:30/01/2026 ರವರೆಗೆ ವಿಸ್ತರಿಸಲಾಗಿದೆ.

ಆಸಕ್ತರು ವೆಬ್‌ಸೈಟ್ https://ssp.postmatric.karnataka.gov.in ಮೂಲಕ ಜ.30 ರೊಳಗಾಗಿ ಆನ್‌ಲೈನ್ ಅರ್ಜಿ ಸಲ್ಲಿಸಬೇಕು. ಕಾರ್ಯಕ್ರಮಗಳ ವಿವರ, ಅರ್ಹತೆ, ಸಲ್ಲಿಸಬೇಕಾದ ದಾಖಲೆಗಳು ಹಾಗೂ ವಿದ್ಯಾರ್ಥಿವೇತನಕ್ಕೆ ಸಂಬಂಧಿಸಿದ ಸರ್ಕಾರಿ ಆದೇಶಗಳ ಬಗ್ಗೆ ಮಾಹಿತಿಗಾಗಿ https://bcwd.karnataka.gov.in ವೆಬ್‌ಸೈಟ್‌ಗೆ ಭೇಟಿ ನೀಡಬಹುದು.

Backward Classes Welfare Department ಹೆಚ್ಚಿನ ಮಾಹಿತಿಗಾಗಿ ಇಲಾಖೆಯ ಸಹಾಯವಾಣಿ: 8050770005, ಇ-ಮೇಲ್ bcwdhelpline@gmail.com ಹಾಗೂ ರಾಜ್ಯ ವಿದ್ಯಾರ್ಥಿವೇತನ ತಂತ್ರಾಂಶದ ಸಹಾಯವಾಣಿ ಇ-ಮೇಲ್ postmatrichelp@karnataka.gov.in ಅಥವಾ ದೂ.ಸಂ: 1902 ಗೆ ಸಂಪರ್ಕಿಸಬಹುದೆಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ತಿಳಿಸಿದ್ದಾರೆ.

MESCOM ಡಿಸೆಂಬರ್ 26.ಸೋಮಿನಕೊಪ್ಪ ಸುತ್ತಮುತ್ತ ವಿದ್ಯುತ್ ಸರಬರಾಜು ವ್ಯತ್ಯಯ

0

MESCOM ಆಲ್ಕೋಳ ವಿದ್ಯುತ್ ವಿತರಣ ಕೇಂದ್ರದ ವ್ಯಾಪ್ತಿಯಲ್ಲಿ ತುರ್ತು ಕಾಮಗಾರಿ ಹಮ್ಮಿಕೊಂಡಿರುವುದರಿಂದ ಡಿ. 26 ರಂದು ಬೆಳಗ್ಗೆ 9.00 ರಿಂದ ಸಂಜೆ 5.00 ರವರೆಗೆ ಸೋಮಿನಕೊಪ್ಪ, ಹೊಂಗಿರಣ ಲೇಔಟ್, ಗೋಕುಲ್ ಲೇಔಟ್, ಸಹ್ಯಾದ್ರಿನಗರ, ಮುನಿಯಪ್ಪ ಲೇಔಟ್, ಸಂಗೊಳ್ಳಿ ರಾಯಣ್ಣ ಲೇಔಟ್, ವೆಟರ‍್ನರಿ ಕಾಲೇಜು ರಸ್ತೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು, ಸಾರ್ವಜನಿಕರು ಸಹಕರಿಸುವಂತೆ ಮೆಸ್ಕಾಂ ಇಲಾಖೆ ತಿಳಿಸಿದೆ.

Gavisiddeshwara Fair Festival ಭಕ್ತಿ, ಶ್ರದ್ದೆ ಮತ್ತು ದಾಸೋಹಗಳ ಸಂಕೇತ, ಕೊಪ್ಪಳ ಶ್ರೀಗವಿಸಿದ್ಧೇಶ್ವರ ಜಾತ್ರೆ-ಮುರಳೀಧರ ನಾಡಿಗೇರ್

0

Gavisiddeshwara Fair Festival ದಕ್ಷಿಣ ಭಾರತದ ಕುಂಭಮೇಳ ಎಂದೇ ಖ್ಯಾತಿ ಪಡೆದ ಕೊಪ್ಪಳದ ಗವಿಸಿದ್ದೇಶ್ವರ ಜಾತ್ರಾ ಮಹೋತ್ಸವವು 2026ರ ಜನವರಿ 5ರಿಂದ ಆರಂಭವಾಗಿ 15 ದಿನಗಳ ಕಾಲ ಭವ್ಯವಾಗಿ ಜರುಗಲಿದೆ. ಈ ಬಾರಿಯ ಜಾತ್ರೆಯಲ್ಲಿ ಸುಮಾರು ಎಂಟು ಲಕ್ಷಕ್ಕೂ ಅಧಿಕ ಭಕ್ತ ಸಮೂಹ ಆಗಮಿಸುವ ನಿರೀಕ್ಷೆಯಿದ್ದು, ಅದಕ್ಕೆ ತಕ್ಕಂತೆ ಜಿಲ್ಲಾಡಳಿತ ಹಾಗೂ ಗವಿಸಿದ್ದೇಶ್ವರ ಸಂಸ್ಥಾನವು ಸಕಲ ಸಿದ್ಧತೆಗಳನ್ನು ಕೈಗೊಂಡಿದೆ.

ಸಂಸ್ಥಾನದ ಶ್ರೀ ಗವಿಮಠದ ಜಾತ್ರೆ ಪ್ರತಿವರ್ಷವೂ ವಿಭಿನ್ನ, ವಿಶಿಷ್ಟ ಹಾಗೂ ಅರ್ಥಪೂರ್ಣವಾಗಿ ನಡೆಯುತ್ತಿದ್ದು, ಈ ಬಾರಿ ಆಧುನಿಕತೆಯ ಸ್ಪರ್ಶದೊಂದಿಗೆ 2026ರ ಮಹಾಜಾತ್ರೆಯ ಆಹ್ವಾನವನ್ನು ಶ್ರೀಮಠದ ಭಕ್ತರಿಗೆ ನೇರವಾಗಿ ತಲುಪಿಸುವ ಸತ್ಕಾರ್ಯಕ್ಕೆ ಕೈಹಾಕಲಾಗಿದೆ.

ಡಿಜಿಟಲ್ ತಂತ್ರಜ್ಞಾನದಲ್ಲಿ ಜಾತ್ರೆಯ ಆಹ್ವಾನ
ಜನವರಿ 05, 06 ಹಾಗೂ 07ರಂದು ನಡೆಯುವ ಅಜ್ಜನ ಜಾತ್ರೆಗೆ ಭಕ್ತರನ್ನು ಆಹ್ವಾನಿಸುವ ದೃಶ್ಯವನ್ನು ಡ್ರೋನ್ ಕ್ಯಾಮರಾ ಮೂಲಕ ಸೆರೆಹಿಡಿದು, ಡಿಜಿಟಲ್ ತಂತ್ರಜ್ಞಾನ ಬಳಸಿ ತಯಾರಿಸಲಾದ ಟ್ರೇಲರ್ ಸಾಂಗ್ ಅನ್ನು ಇಂದು 19-12-2025 ಬೆಳಿಗ್ಗೆ 09:00 ಗಂಟೆಗೆ ಶ್ರೀಮಠದ ಸ್ವಚ್ಛತಾ ಕಾರ್ಯದಲ್ಲಿ ತೊಡಗಿಕೊಂಡಿರುವ ಸೇವಕರಿಂದ ಬಿಡುಗಡೆಗೊಳಿಸಲಾಗಿದೆ. ಇದು ಈ ವರ್ಷದ ಜಾತ್ರೆಯ ವಿಶೇಷ ಆಕರ್ಷಣೆಯಾಗಿದೆ.

ಈ ಟ್ರೇಲರ್ ಸಾಂಗ್‌ನಲ್ಲಿರುವ “ಭಕ್ತಿಯ ಮನೆ ಮನಗಳಲ್ಲಿ ಮುಕ್ತಿಯ ಕೆನೆ ನೆನಹಿನಲ್ಲಿ ಓಂಕಾರವು ಕೋಟೆ ಕಟ್ಟಿ
ಬೆಟ್ಟಗಳು ಧ್ಯಾನದಲಿ ಸಿದ್ಧ ಪುರುಷ ಗವಿಸಿದ್ದನೇ ಇಷ್ಟ ಪ್ರಾಣ ಭಾವದಲ್ಲಿ ಜಾತ್ರೋತ್ಸವ ನಮ್ಮ ಯಾತ್ರೋತ್ಸವ”
ಎಂಬ ಅಧ್ಯಾತ್ಮಪೂರ್ಣ, ಭಕ್ತಿಭಾವ ತುಂಬಿದ ಸಾಹಿತ್ಯಕ್ಕೆ ಕೊಪ್ಪಳದ ಗಾಯಕ ಸದಾಶಿವ ಪಾಟೀಲರು ಜೀವ ತುಂಬಿದ್ದಾರೆ.

ಈ ಹಾಡಿನಲ್ಲಿ ಶ್ರೀ ಶಿವಶಾಂತವೀರ ಹಾಗೂ ಶ್ರೀ ಮರಿಶಾಂತವೀರ ಮಹಾಸ್ವಾಮಿಗಳ ಮೂರ್ತಿಶಿಲ್ಪಗಳು, ಚಿಕೇನಕೊಪ್ಪದ ಶರಣರ ದೀರ್ಘದಂಡ ನಮಸ್ಕಾರ, ಜಾತ್ರೆಯ ಮಹಾದಾಸೋಹದ ಸಿದ್ಧತೆ, ಪ್ರಸಾದ ಸೇವನೆ, ಹಾಗೂ ಶ್ರೀಗವಿಮಠದ ವಿವಿಧ ಸೇವಕರ ಸೇವಾ ಕಾರ್ಯಗಳು ಮನಮುಟ್ಟುವಂತೆ ಚಿತ್ರಿತವಾಗಿವೆ. ಜೊತೆಗೆ ಪ್ರಾಕೃತಿಕ ಬೆಟ್ಟ-ಗುಡ್ಡಗಳು, ಕೆರೆಗಳು ಮತ್ತು ಸಹಜ ವೈಭವದ ದೃಶ್ಯಗಳನ್ನು ಸಂಯೋಜಿಸಿ ಟ್ರೇಲರ್ ಸಾಂಗ್ ಮೂಲಕ ಭಕ್ತರಿಗೆ ಜಾತ್ರೆಯ ಆಹ್ವಾನ ನೀಡಲಾಗಿದೆ.

ಈ ಬಾರಿಯ ಜಾತ್ರೆಯ ವಿಶೇಷ ಆಕರ್ಷಣೆಗಳು
ಪ್ರತಿ ವರ್ಷದಂತೆ ಕೌಶಲ್ಯಾಭಿವೃದ್ಧಿ ಇಲಾಖೆಯಿಂದ ಕರಕುಶಲ ವಸ್ತುಗಳ ಪ್ರದರ್ಶನ ಮತ್ತು ಮಾರಾಟ ಮೇಳ
ಕೃಷಿ ಮೇಳ, ತಾರಸಿ ತೋಟ (ಟೆರೇಸ್ ಗಾರ್ಡನ್), ಫಲ-ಪುಷ್ಪ ಪ್ರದರ್ಶನ
ರಕ್ತದಾನ ಶಿಬಿರ, ರಂಗೋಲಿ ಪ್ರದರ್ಶನ ಸೇರಿದಂತೆ ಹಲವು ವೈವಿಧ್ಯಮಯ ಕಾರ್ಯಕ್ರಮಗಳು ಆಯೋಜನೆಯಾಗಲಿದೆ.

Gavisiddeshwara Fair Festival ವಿಶೇಷ ಅನ್ನದಾಸೋಹ
ದೇಶದ ಅನೇಕ ಮಠಗಳು ಅನ್ನದಾಸೋಹಕ್ಕೆ ಹೆಸರುವಾಸಿಯಾಗಿದ್ದರೂ, ಶ್ರೀ ಗವಿಸಿದ್ದೇಶ್ವರ ಮಠವು ತನ್ನ ವಿಭಿನ್ನ ಮತ್ತು ವಿಶಿಷ್ಟ ಅನ್ನದಾಸೋಹದ ಮೂಲಕ ಖ್ಯಾತಿ ಪಡೆದಿದೆ. ಈ ಬಾರಿ ಸಹ ಸರಳ, ಸುರಕ್ಷಿತ ಮತ್ತು ಆರೋಗ್ಯಕರ ಪ್ರಸಾದ ವ್ಯವಸ್ಥೆ ಮಾಡಲಾಗಿದೆ. ಮೊದಲ ದಿನದಿಂದ ಕೊನೆಯ ದಿನದವರೆಗೂ ಮಠದ ವತಿಯಿಂದ ಹಾಗೂ ಭಕ್ತಾದಿಗಳ ಸಹಕಾರದಿಂದ ವಿಶೇಷ ಅನ್ನದಾಸೋಹ ನಡೆಯಲಿದೆ.ಪ್ರತಿ ವರ್ಷ ಕೀಪ್ಪಳ ಮತ್ತು ಸುತ್ತಮುತ್ತಲಿನ ಕಾರ್ಖಾನೆಗಳ ಸಹಕಾರದಿಂದ ನೆಡೆಸಲಾಗುತ್ತಿದ್ದ ಜಾತ್ರೆ ಈಬಾರ ಕಾರ್ಖಾನೆಗಳ ಸಹಕಾರ ಮತ್ತು ಧನ ಸಹಾಯಕ್ಕೆ ಮುಂದಾಗದಂತೆ ಶ್ರೀಗಳು ಭಕ್ತರಿಗೆ ತಿಳಿಸಿದ್ದರೆ.

ನೀರಿನ ವ್ಯವಸ್ಥೆ
70 ನಲ್ಲಿಇರುವ ಎರಡು ನೀರಿನ ಕಟ್ಟೆಗಳು, 50 ನಲ್ಲಿಇರುವ ಇನ್ನೊಂದು ಕಟ್ಟೆಯನ್ನು ಸಿದ್ಧಗೊಳಿಸಲಾಗಿದೆ. 250-300 ಭಕ್ತರು ಏಕಕಾಲಕ್ಕೆ ನೀರನ್ನು ಸೇವಿಸುವ ಬೃಹತ್‌ ವ್ಯವಸ್ಥೆ ಕಲ್ಪಿಸಲಾಗಿದೆ. ಸಿಹಿ ಪದಾರ್ಥವಾದ ಮಾದಲಿ ಈ ನಾಡಿನ ವಿಶೇಷ ತಿನಿಸಾಗಿದೆ. ಜಾತ್ರೆಯ ವಿಶೇಷವೂ ಹೌದು ಅದಕ್ಕೆಂದೆ 166 ಅಡಿ ವಿಸ್ತೀರ್ಣದ 3, 206 ಅಡಿ ವಿಸ್ತೀರ್ಣದ 3 ಕಟ್ಟೆಗಳು ಒಟ್ಟು 6 ಮಾದಲಿ ಕಟ್ಟೆಗಳು ನಿರ್ಮಾಣಗೊಂಡಿವೆ. ಮಹಿಳೆಯರಿಗೆ ಹಾಗೂ ಪುರುಷರಿಗೆ ಪ್ರತ್ಯೆಕವಾಗಿ ಕೌಂಟರ್‌ಗಳನ್ನು ಪ್ರಸಾದ ನೀಡಿಸಿಕೊಳ್ಳಲಿಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ. ಅಲ್ಲದೆ 4 ಪ್ರವೇಶ ದ್ವಾರಗಳು, 65 ಅಡಿಯ ಅನ್ನ ಸಂಗ್ರಹಣಾ ಕಟ್ಟೆ ನಿರ್ಮಿಸಲಾಗಿದೆ.

ಪೊಲೀಸ್‌ ಕಣ್ಗಾವಲು
ಪ್ರತಿದಿನ ಪ್ರಸಾದದ ಉಸ್ತುವಾರಿ ಹಾಗೂ ಪರಿಶೀಲನೆಗಾಗಿ ಆಹಾರ ಇಲಾಖೆಯ ಅಧಿಕಾರಿಗಳು, ಪೊಲೀಸರು ಇರುತ್ತಾರೆ. ಪ್ರಸಾದ ನಿಲಯದ ಸುತ್ತಲೂ ಪೊಲೀಸ್‌ ಕಣ್ಗಾವಲು ಇದ್ದು, ತಂತಿ ಬೇಲಿ ಅಳವಡಿಸಲಾಗಿದೆ. ಮಹಾದಾಸೋಹದಲ್ಲಿಭಕ್ತರ ಸುರಕ್ಷತೆಗಾಗಿ ಹೊರ, ಓಳಾಂಗಣ ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಜಾತ್ರಾಮಹೋತ್ಸವ ಮಹಾದಾಸೋಹದಲ್ಲಿಒಂದು ದಿನಕ್ಕೆ ಸುಮಾರು 300 ರಿಂದ 400ರವರೆಗೆ ಭಕ್ತರು ಪ್ರಸಾದ ತಯಾರಿಸಲಿದ್ದಾರೆ. ಪ್ರಸಾದ ವಿತರಣೆಯಲ್ಲಿಸುಮಾರು 500 ರಿಂದ 600 ಭಕ್ತರು ಪಾಲ್ಗೊಳ್ಳುವರು. ಜಾತ್ರಾಮಹೋತ್ಸವ ಪ್ರಾರಂಭದಿಂದ ಮುಕ್ತಾಯದ ವರೆಗೆ ಪ್ರಸಾದ ನಿಲಯದಲ್ಲಿಸುಮಾರು 25 ಸಾವಿರ ಭಕ್ತರು ನಾನ ಸೇವೆಯಲ್ಲಿಪಾಲ್ಗೊಳ್ಳುವರು. ಜಾತ್ರೆಯ ಪ್ರಾರಂಭದಿಂದ ಮುಕ್ತಾಯದವರೆಗೆ ಸುಮಾರು 15 ರಿಂದ 18 ಲಕ್ಷ ಭಕ್ತರು ಪ್ರಸಾದ ಸ್ವೀಕರಿಸುವ ನಿರೀಕ್ಷೆ ಇದೆ.

ಗವಿಮಠದ ಐತಿಹಾಸಿಕ ಹಿನ್ನೆಲೆ – ಗುಡದಯ್ಯನಿಂದ ಗವಿಸಿದ್ದನಾಗುವವರೆಗೆ
ಶಾಲಿವಾಹನ ಶಕ 1008ರಲ್ಲಿ ರುದ್ರಮುನಿ ಶಿವಯೋಗಿಗಳಿಂದ ಸ್ಥಾಪಿತವಾದ ಶ್ರೀ ಗವಿಮಠವು ಇದುವರೆಗೆ 18 ಪೀಠಾಧಿಪತಿಗಳನ್ನು ಕಂಡಿದೆ. 11ನೇ ಪೀಠಾಧಿಪತಿ ಗವಿಸಿದ್ದೇಶ್ವರ ಸ್ವಾಮೀಜಿ ಕಾಯಕ, ಪೂಜೆ ಹಾಗೂ ಅನುಷ್ಠಾನ ತತ್ವಗಳಿಂದ ಪ್ರಸಿದ್ಧರಾದವರು. ಲಿಂಗದ ಬೆಳಕಿನಲ್ಲೇ ಲೀನವಾಗಿ ಸಜೀವ ಸಮಾಧಿ ಹೊಂದಿದ ಗವಿಸಿದ್ದೇಶ್ವರರ ಗದ್ದುಗೆ ಮಠದ ಹೃದಯವಾಗಿದೆ.

ಮೂಲತಃ ಗುಡದಯ್ಯ ಎಂಬ ಹೆಸರಿನಿಂದ ಪ್ರಸಿದ್ಧರಾಗಿದ್ದ ಗವಿಸಿದ್ದೇಶ್ವರರು, ಮಳೆಮಲ್ಲೇಶ್ವರ ಬೆಟ್ಟದಲ್ಲಿ ಧ್ಯಾನಾಸಕ್ತರಾಗಿದ್ದರು. ಅವರ ಪವಾಡ ಶಕ್ತಿಯಿಂದ ಹಸುವನ್ನು ಬದುಕಿಸಿದ ಘಟನೆ ಅವರ ಮಹಿಮೆಯನ್ನು ಬೆಳಗಿಸಿದೆ. ಬಳಿಕ ಗವಿಮಠದ 11ನೇ ಪೀಠಾಧಿಪತಿಯಾಗಿ ನೇಮಕಗೊಂಡು ಸಮಾಜೋದ್ಧಾರ ಕಾರ್ಯಗಳಲ್ಲಿ ತೊಡಗಿದರು. ಕ್ರಿ.ಶ. 1816ರಲ್ಲಿ ಗುರುಗಳಿಗಾಗಿ ನಿರ್ಮಿಸುತ್ತಿದ್ದ ಸಮಾಧಿಯ ಮೇಲೆಯೇ ಧ್ಯಾನಗೈಯುತ್ತಲೇ ಲಿಂಗೈಕ್ಯರಾದರು. ಆ ದಿನವನ್ನೇ ಗವಿಸಿದ್ದೇಶ್ವರ ಜಾತ್ರೆಯಾಗಿ ಆಚರಿಸಲಾಗುತ್ತಿದೆ.

ಕೈಲಾಸ ಮಂಟಪ ಮತ್ತು ಜಾತ್ರೆಯ ವೈಭವ
ಕೈಲಾಸ ಮಂಟಪದಲ್ಲಿ ನಾಡಿನ ಹರ-ಗುರು-ಚರಮೂರ್ತಿಗಳ ದಿವ್ಯ ಸಾನಿಧ್ಯದಲ್ಲಿ ಕಾರ್ಯಕ್ರಮಗಳು ಜರುಗಲಿದ್ದು, ಪರಿಸರ ಸ್ನೇಹಿ ಮತ್ತು ನೈಸರ್ಗಿಕ ವೇದಿಕೆ ಇದರ ವಿಶೇಷತೆ.

ಜಾತ್ರೆಯ ಸಂದರ್ಭದಲ್ಲಿ ನಡೆಯುವ ಕಡುಬಿನ ಕಾಳಗ (ಮದ್ದು ಸುಡುಮದು), ಗವಿಮಠದ ಕೆರೆಯಲ್ಲಿ ನಡೆಯುವ ತೆಪ್ಪೋತ್ಸವ, ಹಾಗೂ ಪ್ರತಿದಿನ ವಿಭಿನ್ನ ಪ್ರಸಾದ ವ್ಯವಸ್ಥೆಗಳು ಭಕ್ತರನ್ನು ಆಕರ್ಷಿಸುತ್ತವೆ.

ಒಟ್ಟಾರೆ, ಪರಿಸರ, ಆರೋಗ್ಯ ಮತ್ತು ಭಕ್ತರ ಮೇಲಿನ ಕಾಳಜಿಯನ್ನು ಪ್ರಧಾನವಾಗಿಟ್ಟುಕೊಂಡ ಗವಿಸಿದ್ದೇಶ್ವರ ಜಾತ್ರೆ ಈ ಭಾಗದ ನಡದಾಡುವ ದೈವದಂತೆ ಪರಿಣಮಿಸಿದೆ.

ಕೊಪ್ಪಳದ ಗವಿಸಿದ್ದೇಶ್ವರ (ಅಜ್ಜನ ಜಾತ್ರೆ) ಜಾತ್ರೆಯ ಮಹಾರಥೋತ್ಸವ ಜನವರಿ 5, 2026 ರಂದು ನಡೆಯಲಿದೆ, ಇದು ದಕ್ಷಿಣ ಭಾರತದ ಕುಂಭಮೇಳ ಎಂದೇ ಪ್ರಸಿದ್ಧವಾಗಿದೆ, ಲಕ್ಷಾಂತರ ಭಕ್ತರು ಸೇರಿ ದಾಸೋಹ ಸ್ವೀಕರಿಸುತ್ತಾರೆ ಮತ್ತು ಅದ್ಧೂರಿ ಮೆರವಣಿಗೆಗಳು, ಕಲಾ ಕಾರ್ಯಕ್ರಮಗಳು ಇರುತ್ತವೆ. ಜಾತ್ರೆಯ ಸಮಯದಲ್ಲಿ ನಿರಂತರವಾಗಿ 15 ದಿನಗಳ ಕಾಲ ಉಚಿತ ಪ್ರಸಾದ (ದಾಸೋಹ) ನೀಡಲಾಗುತ್ತದೆ.
5-6 ಸಾವಿರ ಭಕ್ತರಿಗೆ ಏಕಕಾಲದಲ್ಲಿ ಪ್ರಸಾದ ಸ್ವೀಕರಿಸಲು 6 ಎಕರೆ ವಿಸ್ತೀರ್ಣದ ವ್ಯವಸ್ಥೆ, 76 ಕೌಂಟರ್‌ಗಳು, ದೊಡ್ಡ ಅಡುಗೆ ಕೋಣೆಗಳು, ಸಿಸಿ ಕ್ಯಾಮೆರಾಗಳ ಅಳವಡಿಕೆ ಮಾಡಲಾಗಿದೆ. ಯಾವುದೇ ಔಪಚಾರಿಕ ಸಮಿತಿಯಿಲ್ಲದೆ ಭಕ್ತರಿಂದಲೇ ಆಯೋಜಿಸಲ್ಪಡುತ್ತದೆ.

ಕಾಶಿಗೆ ಹೋಗಲಾಗದವರು ಕೊಪ್ಪಳದ ಅಜ್ಜನ ಜಾತ್ರೆಗೆ ಬನ್ನಿ – ಕಣ್ಣು ತುಂಬಿಸಿಕೊಂಡು ಅಜ್ಜನ ಆಶೀರ್ವಾದ ಪಡೆಯಿರಿ.

ಮುರಳೀಧರ್ ನಾಡಿಗೇರ್
9008017727

Breaking News ಜವರಗೊಂಡನಹಳ್ಳಿ ಬಳಿ ಬಸ್ – ಕಂಟೈನರ್ ಲಾರಿ ಭೀಕರ ಅಪಘಾತ. 9 ಬಸ್ ಪ್ರಯಾಣಿಕರ ಸಜೀವ ದಹನ.

0

Breaking News ಚಿತ್ರದುರ್ಗ ಜಿಲ್ಲೆಯ ಗೋರ್ಲರ್ಡ್ಕು ಕ್ರಾಸ್ ಬಳಿ ಬಸ್ ಲಾರಿ ಅಪಘಾತ ಸಂಭವಿಸಿದೆ.
ಮುಂಜಾನೆ 2-05 ಗಂಟೆ ಸುಮಾರಿಗೆ ಈ ಘಟನೆ ನಡೆದಿರುವುದಾಗಿ ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ನಿದ್ದೆಗಣ್ಣಿನಲ್ಲಿದ್ದ ಲಾರಿ ಡ್ರೈವರ್ ಎದುರು ಬರುತ್ತಿದಗದ ಸೀಬರ್ಡ್ ಹೆಸರಿನ ಬಸ್ಸಿಗೆ ಮುಖಾಮುಖಿ ಡಿಕ್ಕಿ ಹೊಡೆದರ ಪರಿಣಾಮ
ಬಸ್ ನ ಡಿಸೆಲ್ ಟ್ಯಾಂಕ್ ಸ್ಫೋಟಿಸಿ ಭುಗಿಲ್ಲನೆ ಬೆಂಕಿ ಹೊತ್ತಿಕೊಂಡಿದೆ.
ಬಸ್ಸಿಗೆ ಒಂದೇ ಹೊರಬಾಗಿಲು ಇದ್ದ ಕಾರಣ ಸ್ಥಳಲ್ಲೆ ಒಂಭತ್ತು ಮಂದಿ ಪ್ರಯಾಣಿಕರು ಧಿಗ್ಗನೆ ಎದ್ದ ಬೆಂಕಿಯ ಕೆನ್ನಾಲಿಗೆಯಿಂದ ಪಾರಾಗಲಾರದೇ ಸುಟ್ಟು ಕರಕಲಾಗಿದ್ದಾರೆ. ದೇಹಗಳು
ಗುರುತೇ ಸಿಗದಂತಾಗಿದೆ
ಎಂದು ಸ್ಥಳೀಯ ಪರಿಹಾರ ಕ್ರಮ ಕೈಗೊಂಡಿರುವ ಅಧಿಕಾರಿಗಳು ಹೇಳಿದ್ದಾರೆ.

Breaking News ಚಿತ್ರದುರ್ಗದ ಗೊರ್ಲಡ್ಕು ಕ್ರಾಸ್ ಬಳಿ ಸಂಭವಿಸಿದ ಭೀಕರ ಬಸ್ ಅಪಘಾತದಲ್ಲಿ 9 ಮಂದಿ ಸಜೀವ ದಹನವಾಗಿದ್ದಾರೆ. ಘಟನೆಗೆ ಪ್ರಧಾನಿ ನರೇಂದ್ರ ಮೋದಿ ಸಂತಾಪ ಸೂಚಿಸಿದ್ದು, ಮೃತರ ಕುಟುಂಬಗಳಿಗೆ ಪ್ರಧಾನ ಮಂತ್ರಿಗಳ ರಾಷ್ಟ್ರೀಯ ಪರಿಹಾರ ನಿಧಿಯಿಂದ 2 ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ.
ಗಾಯಾಳುಗಳಿಗೆ 50,000 ರೂ. ನೆರವು ನೀಡಲಾಗುವುದು ಎಂದು ಪ್ರಧಾನಿ ಸಚಿವಾಲಯ ಪ್ರಕಟಿಸಿದೆ. .

Karnataka Skill Development Authority ಸಮಯ ಪಾಲನೆ- ಸಂವಹನ, ವ್ಯಕ್ತಿತ್ವ ವಿಕಸನ& ವೃತ್ತಿ ಕೌಶಲ್ಯ ಕಾರ್ಯಾಗಾರ.

0

Karnataka Skill Development Authority ಕರ್ನಾಟಕ ರಾಜ್ಯ ಸಾರ್ವಜನಿಕ ಶಿಕ್ಷಣ ಇಲಾಖೆಯ ಲಿಪಿಕ ನೌಕರರ, ವಾಹನ ಚಾಲಕರ ಮತ್ತು ಗ್ರೂಪ್ ಡಿ ನೌಕರರ ಸಂಘ, ಬೆಂಗಳೂರು ಹಾಗೂ ಶಿವಮೊಗ್ಗ ಜಿಲ್ಲಾ ಶಾಖೆ ಇವರ ಸಂಯುಕ್ತಾಶ್ರಯದಲ್ಲಿ ಡಿ. 27 ರಂದು ಬೆಳಗ್ಗೆ 10.00ಕ್ಕೆ ಶಿವಮೊಗ್ಗದ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಸಭಾಂಗಣದಲ್ಲಿ ಸಮಯ ಪಾಲನೆ -ಸಂವಹನ, ವ್ಯಕ್ತಿತ್ವ ವಿಕಸನ ಮತ್ತು ವೃತ್ತಿ ಕೌಶಲ್ಯ ಕಾರ್ಯಾಗಾರ ಹಾಗೂ 2025-29ನೇ ಸಾಲಿಗೆ ನೂತನವಾಗಿ ಆಯ್ಕೆಯಾಗಿರುವ ಶಿವಮೊಗ್ಗ ಜಿಲ್ಲೆ, ವಿಶೇಷ ಘಟನ ಮತ್ತು ಜಿಲ್ಲೆಯ ಎಲ್ಲಾ ತಾಲೂಕು ಸಂಘದ ಪದಾಧಿಕಾರಿಗಳ ಪದಗ್ರಹಣ ಸಮಾರಂಭ, ಎಸ್.ಎಸ್.ಎಲ್.ಸಿ. ಮತ್ತು ದ್ವಿತೀಯ ಪಿ.ಯು.ಸಿ. ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕಗಳಿಸಿದ ಬೋಧಕೇತರ ನೌಕರರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಮತ್ತು ನಿವೃತ್ತ ಬೋಧಕೇತರ ನೌಕರರಿಗೆ ಸನ್ಮಾನ ಸಮಾರಂಭ ಹಾಗೂ ಶಿವಮೊಗ್ಗ ಜಿಲ್ಲಾ ಸಂಘದ ಮಹಾಸಭೆಯನ್ನು ಆಯೋಜಿಸಲಾಗಿದೆ.
ಈ ಕಾರ್ಯಕ್ರಮವನ್ನು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಮಧು ಬಂಗಾರಪ್ಪ Karnataka Skill Development Authority ಉದ್ಘಾಟಿಸುವರು. ಕ.ರಾ.ಸಾ.ಶಿ.ಇ.ಲಿ.ನೌ.,ವಾ.ಚಾ.ಮತ್ತು ಗ್ರೂ.ಡಿ.ನೌಕರರ ಸಂಘದ ಜಿಲ್ಲಾಧ್ಯಕ್ಷ ಕಿರಣ್ ಎಸ್.ಕೆ. ಅಧ್ಯಕ್ಷತೆ ವಹಿಸುವರು. ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್. ಷಡಾಕ್ಷರಿ ಪದಗ್ರಾಹಿ ಪದಾಧಿಕಾರಿಗಳಿಗೆ ಸನ್ಮಾನ ಮಾಡಲಿದ್ದಾರೆ. ಕ.ರಾ.ಸ.ನೌ.ಸಂ.ಜಿಲ್ಲಾಧ್ಯಕ್ಷ ಅರ್.ಮೋಹನ್ ಕುಮಾರ್ ನಿವೃತ್ತ ಬೋಧಕೇತರ ನೌಕರರಿಗೆ ಸನ್ಮಾನ ಮಾಡಲಿದ್ದಾರೆ. ಕ.ರಾ.ಸಾ.ಶಿ.ಇ.ಲಿ.ನೌ.,ವಾ.ಚಾ.ಮತ್ತು ಗ್ರೂ.ಡಿ.ನೌಕರರ ಸಂಘದ ರಾಜ್ಯಾಧ್ಯಕ್ಷ ನವೀನ ಎಸ್.ಆರ್. ಇವರು ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮಾಡಲಿದ್ದಾರೆ. ರಾಜ್ಯ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ಸಿದ್ದಬಸಪ್ಪ ಬಿ.ಇವರು ದ್ವಿತೀಯ ಪಿ.ಯು.ಸಿ. ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮಾಡಲಿದ್ದಾರೆ.
ಕಾರ್ಯಕ್ರಮದಲ್ಲಿ ರಾಜ್ಯ ಮತ್ತು ಜಿಲ್ಲೆಯ ವಿವಿಧ ಇಲಾಖೆಗಳ ಅಧಿಕಾರಿ/ಸಿಬ್ಬಂದಿಗಳು ಪಾಲ್ಗೊಳ್ಳಲಿದ್ದಾರೆ

Karnataka Rajyotsava  ತೀರ್ಥಹಳ್ಳಿಯಲ್ಲಿ ವರ್ಣಮಯ ಕನ್ನಡ ರಾಜ್ಯೋತ್ಸವ

0

Karnataka Rajyotsava ತೀರ್ಥಹಳ್ಳಿಯ ಪ್ರತಿಷ್ಠಿತ ಮಲೆನಾಡು ಯುವಕರ ಸೇವಾ ಸಂಸ್ಥೆಯಿಂದ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಸರ್.ಎಂ. ವಿಶ್ವೇಶ್ವರಯ್ಯ ಪುತ್ಥಳಿಗೆ ಮತ್ತು ಕರ್ನಾಟಕ ರತ್ನ ಪುನಿತ್ ರಾಜ್‌ಕುಮಾರ್ ಸ್ಮರಣೆ ನಿಮಿತ್ತ ಅವರ ಮಾಲಾರ್ಪಣೆ ಮಾಡಲಾಯಿತು. ಈ ಸಂದರ್ಭದಲ್ಲಿ ರಾಜ್ಯ ಮಟ್ಟದ ಹಲವು ಪ್ರಶಸ್ತಿ ಪಡೆದಿರುವ ಶಿವಮೊಗ್ಗ ನಗರದ ಮಯೂರಿ ನೃತ್ಯ ಕೇಂದ್ರದ ಸಂಸ್ಥಾಪಕಿ ವಿದೂಶಿ ಶ್ರೀಮತಿ ಶ್ವೇತಾ ಪ್ರಕಾಶ್ ಅವರಿಗೆ ರಾಷ್ಟ್ರಕವಿ ಕುವೆಂಪು ಸದ್ಭವನ ರಾಜ್ಯ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಮಾಜಿ ಉಪ ಮುಖ್ಯಮಂತ್ರಿ
Karnataka Rajyotsava ಕೆ.ಎಸ್. ಈಶ್ವರಪ್ಪ, ರಾಷ್ಟ್ರ ಬಳಗದ ಯುವ ಮುಖಂಡ ಕೆ.ಇ. ಕಾಂತೇಶ್, ಡಿಸಿಸಿ ಬ್ಯಾಂಕ್ ನಿರ್ದೇಶಕ ಎಸ್.ಕೆ. ಮರಿಯಪ್ಪ, ಲಕ್ಷ್ಮೀ ಟ್ರ್ಯಾಕ್ಟರ್ ಮಾಲೀಕರಾದ ಕೆ. ರವೀಂದ್ರ ಸಂಸ್ಥೆಯ ಅದ್ಯಕ್ಷ ಕುಬೇರ ಮತ್ತು ಪದಾಧಿಕಾರಿಗಳು ಹಾಜರಿದ್ದರು.

Shimoga News ಕನ್ನಡ ಬಾರದ ಸರ್ಕಾರಿ ನೌಕರರಿಗಾಗಿ ಅಂಚೆಮೂಲಕ ಕನ್ನಡ ಶಿಕ್ಷಣ ಯೋಜನೆ: ಅರ್ಜಿಗಳ ಆಹ್ವಾನ

0

Shimoga News ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ ಮತ್ತು ಮೈಸೂರಿನ ಭಾರತೀಯ ಭಾಷೆಗಳ ಕೇಂದ್ರ ಸಂಸ್ಥೆ ಸಂಯುಕ್ತಾಶ್ರಯದಲ್ಲಿ ಕರ್ನಾಟಕದಲ್ಲಿರುವ ಕನ್ನಡ ಬಾರದ ಎಲ್ಲಾ ಸರ್ಕಾರಿ ನೌಕರರಿಗಾಗಿ ಒಂದು ವರ್ಷದ ಅಂಚೆ ಮುಲಕ ಕನ್ನಡ ಶಿಕ್ಷಣ ಯೋಜನೆಯನ್ನು ನಡೆಸುತ್ತಿದ್ದು, ಇದಕ್ಕೆ ಕರ್ನಾಟಕದಲ್ಲಿರುವ ಎಲ್ಲಾ ನಗರಸಭೆ, ಕ.ವಿ.ಪ್ರ.ನಿ.ನಿ., ಕೆ.ಎಸ್.ಆರ್.ಟಿ.ಸಿ., ವಿಶ್ವ ವಿದ್ಯಾಲಯಗಳು, ಶಾಲಾ ಕಾಲೇಜುಗಳು ಮತ್ತಿತರ ಸರ್ಕಾರಿ ಅನುದಾನ ಪಡೆಯುವ ಸಂಸ್ಥೆಗಳ ನೌಕರರು ಮತ್ತು ಎಲ್ಲಾ ರಾಷ್ಟಿçÃಕೃತ ಬ್ಯಾಂಕುಗಳ ನೌಕರರುಗಳಿಂದ ಅರ್ಜಿ ಆಹ್ವಾನಿಸಿದೆ.
ಕರ್ನಾಟಕ ಸರ್ಕಾರಿ ನೌಕರರು ಸಂಪರ್ಕ ಶಿಬಿರ ಹಾಗೂ ಪರೀಕ್ಷೆಗಳಿಗೆ ಹಾಜರಾಗುವಾಗಿನ ಅವರ ಕಚೇರಿಯ ಗೈರು ಹಾಜರಿಯನ್ನು ಅನ್ಯಕಾರ್ಯ ನಿಮಿತ್ತ ಎಂದು ಪರಿಗಣಿಸಲಾಗುವುದು. ಅಂಚೆ ಮೂಲಕ ಕನ್ನಡ ಶಿಕ್ಷಣ ಯೋಜನೆಗೆ ನೋಂದಾಯಿಸಿಕೊAಡು ಉತ್ತೀರ್ಣರಾದವರಿಗೆ ಕರ್ನಾಟಕ ಲೋಕಸೇವಾ ಆಯೋಗದ ಕನ್ನಡ ಪರೀಕ್ಷೆಯಿಂದ ಕರ್ನಾಟಕ ಸರ್ಕಾರದ ಅಧಿಸೂಚನೆಯಂತೆ ವಿನಾಯಿತಿ ನೀಡಲಾಗುವುದು.
Shimoga News ಈ ಯೋಜನೆಯನ್ನು ಸಾರ್ವಜನಿಕರಿಗೂ ವಿಸ್ತರಿಸಲಾಗಿದ್ದು, ಎಸ್.ಎಸ್.ಎಲ್.ಸಿ. ಉತ್ತೀರ್ಣರಾಗಿರುವ 18-50 ವಯೋಮಿತಿಯ ಆಸಕ್ತರು ಭರ್ತಿ ಮಾಡಿದ ಅರ್ಜಿಯೊಂದಿಗೆ ರೂ. 250/- ಡಿ.ಡಿ.ಯನ್ನು ಕಳುಹಿಸಬೇಕು. ನೋಂದಾಯಿತರಿಗೆ ಇಪ್ಪತ್ತು ಪಾಠಾವಳಿಗಳನ್ನು ಕಳುಹಿಸಲಾಗುವುದು. ತರಬೇತಿ ಮತ್ತು ಸಂಪರ್ಕ ಶಿಬಿರದ ಅಂತ್ಯದಲ್ಲಿ ಪರೀಕ್ಷೆಗಳನ್ನು ನಡೆಸಲಾಗುವುದು.
ಆಸಕ್ತರು ನಿಗದಿತ ನಮೂನೆ ಅರ್ಜಿಯನ್ನು ಪ್ರಭಾರಿ ಅಧಿಕಾರಿಗಳು, ಅಂಚೆ ಮೂಲಕ ಕನ್ನಡ ಶಿಕ್ಷಣ ಯೋಜನೆ, ಭಾರತೀಯ ಭಾಷೆಗಳ ಕೇಂದ್ರ ಸಂಸ್ಥೆ, ಮಾನಸಗಂಗೋತ್ರಿ, ಮೈಸೂರು-570006, ದೂ.ಸಂ.0821-2345128 ಇವರಿಗೆ 5.00 ರೂ.ಗಳ ಅಂಚೆ ಚೀಟಿಯನ್ನು ಹಚ್ಚಿದ ಸ್ವವಿಳಾಸ ಹೊಂದಿರುವ ಲಕೋಟೆಯನ್ನು ಕಳುಹಿಸಿ ಅರ್ಜಿ ಪಡೆದುಕೊಂಡು, ಭರ್ತಿ ಮಾಡಿದ ಅರ್ಜಿಯನ್ನು ದಿ: 10/01/2026 ರೊಳಗಾಗಿ ಸಲ್ಲಿಸುವಂತೆ ಪ್ರಭಾರಿ ಅಧಿಕಾರಿ ಡಾ.ಪಿ.ಆರ್. ಧರ್ಮೇಶ್ ಫನಾಂಡಿಜ್ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

J.S. Chidananda Gowda ನಾಡಿಗೆ ಅನ್ನನೀಡುವ ರೈತನನ್ನ ಎಲ್ಲರೂ ಗೌರವಿಸಬೇಕು- ಜೆ.ಎಸ್.ಚಿದಾನಂದ ಗೌಡ.

0

J.S. Chidananda Gowda ಪಟ್ಟಣದ ಪುರಸಭೆ ಮುಂಭಾಗದ ವೃತ್ತಕ್ಕೆ ರೈತ ವೃತ್ತ ಎಂದು ನಾಮಕರಣ ಮಾಡಬೇಕು, ರೈತ ದಿನಾಚರಣೆಯನ್ನು ಹಬ್ಬದಂತೆ ಆಚರಿಸಬೇಕು ಹಾಗೂ ಹೋರಿ ಹಬ್ಬಕ್ಕೆ ಮಾನ್ಯತೆ ನೀಡಬೇಕು ಎಂದು ಆಗ್ರಹಿಸಿ ಸಾರ್ವಜನಿಕ ಹಿತರಕ್ಷಣಾ ಹೋರಾಟ ಸಮಿತಿ, ಗೋ ಸಂರಕ್ಷಣಾ ಹೋರಾಟ ಸಮಿತಿ ಹಾಗೂ ಜನಪದ ಕ್ರೀಡೆ ಹೋರಿ ಹಬ್ಬ ಆಚರಣಾ ಸಮಿತಿ ವತಿಯಿಂದ ಹಬ್ಬದ ಹೋರಿಗಳೊಂದಿಗೆ ವಿಶೇಷವಾಗಿ ರಾಷ್ಟಿçÃಯ ರೈತ ದಿನಾಚರಣೆ ಆಚರಿಸಲಾಯಿತು.
ನೇತೃತ್ವ ವಹಿಸಿದ್ದ ಸಮಿತಿಯ ಅಧ್ಯಕ್ಷ ಜೆ.ಎಸ್. ಚಿದಾನಂದಗೌಡ ಮಾತನಾಡಿ, ನಾಡಿಗೆ ಅನ್ನ ನೀಡುವ ರೈತರನ್ನು ಗೌರವಿಸುವುದು ಪ್ರತಿಯೊಬ್ಬ ಪ್ರಜ್ಞಾವಂತ ನಾಗರೀಕರ ಕರ್ತವ್ಯವಾಗಿದೆ. ಈಗಾಗಲೇ ಕಳೆದ ಒಂದು ದಶಕದಿಂದ ಹೋರಾಟ ಮಾಡಲಾಗುತ್ತಿದ್ದು, ಪಟ್ಟಣದ ಪುರಸಭೆ ಮುಂಭಾಗದ ವೃತ್ತಕ್ಕೆ ರೈತ ವೃತ್ತ ಎಂದು ನಾಮಕರಣ ಮಾಡಬೇಕು ಹಾಗೂ ಜನಪದ ಕ್ರೀಡೆ ಹೋರಿ ಹಬ್ಬಕ್ಕೆ ಸರ್ಕಾರ ಮಾನ್ಯತೆ ನೀಡಬೇಕು. ವಿದೇಶಿ ಕ್ರೀಡೆಗಳಿಗೆ ಕ್ರೀಡಾಂಗಣ ಮಾಡುವ ಸರ್ಕಾರ ರೈತರ ಜನಪದ ಕ್ರೀಡೆಯಾದ ಹೋರಿ ಹಬ್ಬಕ್ಕೂ ಪ್ರತಿ ತಾಲೂಕಿನಲ್ಲಿ ಕ್ರೀಡಾಂಗಣ ಮಾಡಬೇಕು ಎಂದು ಆಗ್ರಹಿಸಲಾಗುತ್ತಿದೆ. ಈ ಹಿಂದೆ ಬಿ.ಎಸ್. ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಶಿಕಾರಿಪುರದ ಅವರ ನಿವಾಸಕ್ಕೆ ತೆರಳಿ ಸಹ ಮನವಿ ಸಲ್ಲಿಸಲಾಗಿದೆ. ಮಾತ್ರವಲ್ಲದೆ, ರೈತ ದಿನಾಚರಣೆಗೆ ಆಗ್ರಹಿಸಿ ಇತ್ತೀಚೆಗೆ ಬೆಳಗಾವಿ ಅಧಿವೇಶನಕ್ಕೆ ತೆರಳಿ ಕೃಷಿ ಸಚಿವರಾದ ಚಲುವರಾಯಸ್ವಾಮಿ ಅವರಿಗೂ ಮನವಿ ಮಾಡಲಾಗಿದೆ. ರೈತರಿಗೆ ಗೌರವಿಸುವ ನಿಟ್ಟಿನಲ್ಲಿ ನಮ್ಮ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಆಗ್ರಹಿಸಿದರು.
ಸಮಿತಿಯ ಗೌರವಾಧ್ಯಕ್ಷ ಕೆ. ಪ್ರಭಾಕರ ರಾಯ್ಕ್ಕರ್ ಮಾತನಾಡಿ, ದೇಶದಲ್ಲಿ ವಿವಿಧ ಆಚರಣೆಗಳನ್ನು ನಡೆಸಲಾಗುತ್ತಿದೆ. ಆದರೆ, ರೈತ ದಿನಾಚರಣೆಗೆ ತಾತ್ಸರದ ಮನೋಭಾವ ಸಲ್ಲದು. ಸಮಿತಿಯಿಂದ ಹಲವಾರು ಹೋರಾಟಗಳನ್ನು ಮಾಡಲಾಗುತ್ತಿದೆ. ರೈತ ವೃತ್ತ ಹಾಗೂ ರೈತ ದಿನಾಚರಣೆಗೆ ಆಗ್ರಹಿಸಿ ಅನೇಕ ಮನವಿಗಳನ್ನು ಸಲ್ಲಿಸಲಾಗಿದೆ. ರೈತರು ಕೃಷಿ ಚಟುವಟಿಕೆಗಳು ಮುಗಿದ ಮೇಲೆ ದೀಪಾವಳಿ ನಂತರದಲ್ಲಿ ಹೋರಿ ಹಬ್ಬ ಮಾಡುತ್ತಾರೆ. ಅದಕ್ಕೆ ಸರ್ಕಾರ ಅನುಮತಿ ನೀಡಬೇಕು ಎಂದರು.
J.S. Chidananda Gowda ಜನಪದ ಕ್ರೀಡೆ ಹೋರಿ ಹಬ್ಬ ಆಚರಣಾ ಸಮಿತಿ ಜಿಲ್ಲಾ ಕಾರ್ಯದರ್ಶಿ ಷಣ್ಮುಖಪ್ಪ ಹರಗಿ ಮಾತನಾಡಿ, ರೈತರು ಹೋರಿಗಳನ್ನು ತಮ್ಮ ಮಕ್ಕಳಂತೆ ಸಾಕುತ್ತಾರೆ. ಈಗಾಗಲೇ ತಮಿಳುನಾಡಿನಲ್ಲಿ ಜಲ್ಲಿಕಟ್ಟು, ಕರಾವಳಿ ಭಾಗದಲ್ಲಿ ಕಂಬಳಕ್ಕೆ ಮಾನ್ಯತೆ ನೀಡಲಾಗಿದೆ. ಆದರೆ, ರೈತರ ಜನಪದ ಕ್ರೀಡೆಯಾದ ಹೋರಿ ಹಬ್ಬಕ್ಕೆ ಸಾಕಷ್ಟು ಸಮಸ್ಯೆಗಳು ಎದುರಾಗುತ್ತಿದೆ. ಸಮಿತಿಯಿಂದ ಹೈಕೋರ್ಟ್ ಮೊರೆ ಸಹ ಹೋಗಲಾಗಿದೆ. ರೈತ ದಿನಾಚರಣೆ ಆಚರಿಸುವ ಜೊತೆಗೆ ಹೋರಿ ಹಬ್ಬಕ್ಕೆ ಸರ್ಕಾರ ಮಾನ್ಯತೆ ನೀಡಬೇಕು ಎಂದು ಒತ್ತಾಯಿಸಿದರು.
ಇದಕ್ಕೂ ಮೊದಲು ಪಟ್ಟಣದ ಶ್ರೀ ರಂಗನಾಥ ದೇವಸ್ಥಾನದ ಮುಂಭಾಗದಿAದ ಮುಖ್ಯರಸ್ತೆ ಮಾರ್ಗವಾಗಿ ಪುರಸಭೆ ಮುಂಭಾಗದ ವರೆಗೆ ಮೆರವಣಿಗೆ ನಡೆಸಲಾಗಯಿತು. ಮೆರವಣಿಗೆಯಲ್ಲಿ ಕೊಡಕಣಿ ಡೇಂಜರ್ ಬಸವ, ಹಳೇಸೊರಬದ ಜೀವದ ಒಡೆಯ, ಮರೂರು ತಾರಕಾಸುರ, ಪುಟ್ಟನಹಳ್ಳಿ ಮಲೆನಾಡ ಸಿರಿ, ಹಳೇಸೊರಬ ಶ್ರೀಕೃಷ್ಣ ಹೆಸರಿನ ಹೋರಿಗಳು ಪಾಲ್ಗೊಂಡಿದ್ದವು. ಪುರಸಭೆ ಮುಖ್ಯಾಧಿಕಾರಿ ಚಂದನ್ ಅವರ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
ಸಮಿತಿಯ ಪ್ರಧಾನ ಕಾರ್ಯದರ್ಶಿ ವೀರೇಂದ್ರಗೌಡ ಜೇಡಗೇರಿ, ಉಪಾಧ್ಯಕ್ಷರಾದ ನಾಗಪ್ಪ ಬಿದರಗೇರಿ, ಶರತ್ ಸ್ವಾಮಿ, ಕುರುಬ ಸಮಾಜದ ಮುಖಂಡ ತಿಪ್ಪಣ್ಣ, ವೀರಶೈವ ಲಿಂಗಾಯತ ಸಮಾಜದ ಮುಖಂಡರಾದ ವಿಶ್ವನಾಥ ಗೌಡ, ಡಿ. ಶಿವಯೋಗಿ, ಯುವ ಮುಖಂಡರಾದ ಅರುಣ ಬೆಳಕು, ರವಿ ಕೇಸರಿ ಯಡಗೊಪ್ಪ, ಧರ್ಮಪ್ಪ, ಕುಮಾರ, ನಾಗರಾಜ ಜೇಡಗೇರಿ, ಪ್ರಮುಖರಾದ ಲಿಂಗರಾಜ ಹಳೇಸೊರಬ, ಮುಕುಂದಪ್ಪ ಕೊಡಕಣಿ, ಜನಾರ್ಧನ, ಮೋಹನ, ಈಶ್ವರ, ಅಭಿಷೇಕ್, ಶ್ರೀಕಾಂತ, ಪ್ರಮೋದ, ಲಕ್ಷ÷್ಮಣ, ಕಿರಣ್ ಮರೂರು, ಸಂತೋಷ್, ಅವಿನಾಷ್, ಆದರ್ಶ, ಪ್ರವೀಣ್ ಪುಟ್ಟನಹಳ್ಳಿ, ಮಂಜುನಾಥ, ನಿತೀನ್, ಹೇಮಂತ್, ರೋಹಿತ್, ಜಗದೀಶ್ ಹಳೇಸೊರಬ ಇತರರಿದ್ದರು.

Shimoga News ದೇಶದಲ್ಲೇ ಕರ್ನಾಟಕವು ಪ್ರವಾಸಿಗರನ್ನ ಆಕರ್ಷಿಸುತ್ತಿದೆ- ಎನ್.ಗೋಪಿನಾಥ್.

0

Shimoga News ಪ್ರಾಕೃತಿಕ ಹಾಗೂ ಐತಿಹಾಸಿಕವಾಗಿ ಪ್ರವಾಸೋದ್ಯಮಕ್ಕೆ ಹೆಚ್ಚಿನ ಅವಕಾಶವಿರುವ ಜಿಲ್ಲೆ ಶಿವಮೊಗ್ಗ ಎಂದು ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ವೇದಿಕೆ ಅಧ್ಯಕ್ಷ ಎನ್.ಗೋಪಿನಾಥ್ ಹೇಳಿದರು.

ನಗರದ ಮಥುರಾ ಪ್ಯಾರಾಡೈಸ್ ಸಭಾಂಗಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ವೇದಿಕೆ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡು ಮಾತನಾಡಿದರು.

ಭಾರತದಲ್ಲಿಯೇ ಕರ್ನಾಟಕ ರಾಜ್ಯವು ಶಿಲ್ಪಕಲೆ, ಐತಿಹಾಸಿಕ ಪ್ರದೇಶಗಳು, ಪ್ರಕೃತಿದತ್ತ ಕೊಡುಗೆಯಿಂದ ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ಬೆಟ್ಟ, ಗುಡ್ಡ, ನದಿ ತೊರೆಯಿಂದ ಶಿವಮೊಗ್ಗ ಜಿಲ್ಲೆ ಅತ್ಯಂತ ಶ್ರೀಮಂತವಾಗಿದೆ. ಇದರಿಂದ ಇಲ್ಲಿಯೂ ಪ್ರವಾಸಕ್ಕೆ ಹೆಚ್ಚಿನ ಅವಕಾಶವಿದೆ ಎಂದು ತಿಳಿಸಿದರು.

ಪ್ರಾದೇಶಿಕವಾಗಿ ನಗರಗಳು ಅಭಿವೃದ್ಧಿ ಹೊಂದಲು ಪ್ರವಾಸೋದ್ಯಮ ಹೆಚ್ಚಿನ ಆರ್ಥಿಕ ನೆರವು ನೀಡುತ್ತದೆ. ಇದರಿಂದ ಹಲವಾರು ರೀತಿಯ ನೆರವು ಹರಿದು ಬರುವುದರಿಂದ, ಗುಡಿ ಕೈಗಾರಿಕೆ, ಹೋಟೆಲ್ ಉದ್ಯಮ, ಸ್ಥಳಿಯ ಆಹಾರ, ಪ್ರವಾಸಿ ವಾಹನಗಳಿಗೆ ನೇರವಾಗಿ ಸಹಾಯ ದೊರಕುತ್ತದೆ ಎಂದರು.

ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ವೇದಿಕೆ ನಿಕಟಪೂರ್ವ ಅಧ್ಯಕ್ಷ ಡಿ.ಎಸ್.ಶಂಕರಪ್ಪ ಅವರನ್ನು ಸನ್ಮಾನಿಸಲಾಯಿತು. ನಂತರ ಮಾತನಾಡಿ, ಮೂರು ವರ್ಷ ಬಹಳ ಸಹಕಾರ ಕೊಟ್ಟು ಯಶಸ್ವಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಯಿತು. ಪ್ರವಾಸೋದ್ಯಮ ಅಭಿವೃದ್ಧಿ ವೇದಿಕೆ ವತಿಯಿಂದ ಅಂಡಮಾನ್, ಶ್ರೀಲಂಕ, ಹಿಮಾಲಯ ಚಾರಣಗಳನ್ನು ಆಯೋಜಿಸಿದ್ದೇವೆ. ಸರ್ಕಾರದ ವತಿಯಿಂದ ವೀಕ್ ಎಂಡ್ ಕಾರ್ಯಕ್ರಮ ಆಯೋಜಿಸಲು ಸಲಹೆ ನೀಡಿದಾಗ ಜಿಲ್ಲಾಧಿಕಾರಿಗಳು ವೇದಿಕೆಯಿಂದ ಪ್ರಾರಂಭಿಸಿದಲ್ಲಿ ಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದ್ದರು. ಬಸ್ ಮಾಲೀಕರ ಸಂಘದ ಅಧ್ಯಕ್ಷ ರಂಗಪ್ಪ ಅವರ ಸಹಕಾರದಿಂದ ಸತತವಾಗಿ ನಾಲ್ಕು ಭಾನುವಾರ ಬಹಳ ಕಡಿಮೆ ಖರ್ಚಿನಲ್ಲಿ ಪ್ರವಾಸ ಏರ್ಪಡಿಲಾಗಿತ್ತು ಎಂದು ತಿಳಿಸಿದರು.

Shimoga News ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ವೇದಿಕೆಯ ಅ.ನಾ.ವಿಜಯೇಂದ್ರ ರಾವ್ ಮಾತನಾಡಿ, ಪ್ರಾರಂಭದಲ್ಲಿ ಉತ್ತಮ ಆರಂಭ ಕಂಡ ನಮ್ಮ ವೇದಿಕೆ ನಂತರ ಸ್ವಲ್ಪ ಹಿನ್ನೆಡೆಗೆ ಬಂದಾಗ ಅಧಿಕಾರ ವಹಿಸಿಕೊಂಡ ಶಂಕರಪ್ಪ ಅವರು ಅತ್ಯುತ್ತಮ ಕಾರ್ಯ ಮಾಡಿ ಮುನ್ನಡೆಸಿದ್ದಾರೆ. ಇನ್ನೂ ಅನೇಕ ಕಡೆಗೆ ಪ್ರವಾಸ ಏರ್ಪಡಿಸಿ ಯಾವುದೆ ಲಾಭ ಗಳಿಕೆ ಪಡೆಯದೆ ಪ್ರವಾಸಿಗರಿಗೆ ಉತ್ತಮ ವ್ಯವಸ್ಥೆಯ ಹಾಗೂ ಅತ್ಯಂತ ಕಡಿಮೆ ದರದಲ್ಲಿ ಪ್ರವಾಸವನ್ನು ಜಿಲ್ಲೆ, ರಾಜ್ಯ, ರಾಷ್ಟ್ರ, ಅಂತರಾಷ್ಟ್ರೀಯ ಕಾರ್ಯಕ್ರಮ ಹಮ್ಮಿಕೊಳ್ಳುವ ಅಭಿಲಾಷೆಯನ್ನು ಹೊಸ ಅಧ್ಯಕ್ಷರು ಹೊಂದಿದ್ದಾರೆ. ಅವರಿಗೆ ಉತ್ತಮ ಸಹಕಾರವನ್ನು ಹೊಸ ಆಡಳಿತ ಮಂಡಳಿ ನೀಡುವುದಾಗಿ ತಿಳಿಸಿದರು.

ಹೊಸ ಆಡಳಿತ ಮಂಡಳಿಯ ಆಯ್ಕೆಯನ್ನು ವಸಂತ್ ಹೋಬಳಿದಾರ್ ಘೋಷಿಸಿದರು. ಅಧ್ಯಕ್ಷರಾಗಿ ಎನ್.ಗೋಪಿನಾಥ್, ಕಾರ್ಯದರ್ಶಿಯಾಗಿ ಜಿ.ವಿಜಯಕುಮಾರ್ ಸಹಕಾರ್ಯದರ್ಶಿ ಅ.ನಾ.ವಿಜಯೇಂದ್ರ ರಾವ್, ಖಚಾಂಚಿ ನಿರ್ಮಲ ಕಾಶಿ, ನಿರ್ದೇಶಕರಾಗಿ ಲಕ್ಷ್ಮೀ ನಾಗೇಶ್, ಪ್ರೇಮ ಹೆಗ್ಡೆ, ಮಲ್ಲಿಕಾರ್ಜುನ್ ಕಾನೂರ್, ರವೀಂದ್ರ, ಮನೋಹರ್ ಆಯ್ಕೆಯಾದರು.

ಯೂತ್ ಹಾಸ್ಟೆಲ್ಸ್ ತರುಣೋಣದಯ ಘಟಕ, ಶಿವಮೊಗ್ಗ ಸೈಕಲ್ ಕ್ಲಬ್, ಬೈಕ್ ಕ್ಲಬ್, ಇತಿಹಾಸ ವೇದಿಕೆ ಅಧ್ಯಕ್ಷ, ಕಾರ್ಯದರ್ಶಿ ಸಲಹಾ ಸಮಿತಿ ಸದಸ್ಯರಾಗಿ ಕಾರ್ಯನಿರ್ವಹಿಸಲು ಆಹ್ವಾನಿತರಾಗಿರುತ್ತಾರೆ. ದಿಲೀಪ್ ನಾಡಿಗ್ ಸ್ವಾಗತಿಸಿದರು. ಉಷಾ ಪ್ರಾರ್ಥಿಸಿದರು. ಮಹದೇವಸ್ವಾಮಿ ವಂದಿಸಿದರು.

Canara Bank ಕೆನರಾ ಬ್ಯಾಂಕ್, ಗ್ರಾಮೀಣ ಸ್ವ ಉದ್ಯೋಗ ತರಬೇತಿ ಕೇಂದ್ರದಿಂದ ಉಚಿತ ಅಣಬೆ ಕೃಷಿ ಕಲಿಕಾ ಚಟುವಟಿಕೆ.

0

Canara Bank ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ತಾಲ್ಲೂಕು ಸೊಣ್ಣಹಳ್ಳಿಪುರದಲ್ಲಿರುವ ಕೆನರಾ ಬ್ಯಾಂಕ್ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆಯಲ್ಲಿ ದಿ:05/01/2026 ರಿಂದ 10 ದಿನಗಳ ಕಾಲ ನಿರುದ್ಯೋಗಿ ಪುರುಷರಿಗೆ ಮತ್ತು ಮಹಿಳೆಯರಿಗೆ ಉಚಿತ ಅಣಬೆ ಬೇಸಾಯ ತರಬೇತಿ ಶಿಬಿರವನ್ನು ಏರ್ಪಡಿಸಿದ್ದು, ಸ್ವಯಂ ಉದ್ಯೋಗಿಗಳಾಗಲು ಬಯಸುವ 18 ರಿಂದ 50 ವರ್ಷ ವಯಸ್ಸಿನ ನಿರುದ್ಯೋಗಿ ಪುರುಷರು ಮತ್ತು ಮಹಿಳೆಯರಿಂದ ಅರ್ಜಿ ಆಹ್ವಾನಿಸಿದೆ.
 ಈ ಶಿಬಿರದ ಸಮಯದಲ್ಲಿ ತರಬೇತಿ, ಊಟ ಹಾಗೂ ವಸತಿ ಸೌಕರ್ಯಗಳು ಉಚಿತವಾಗಿ ಶಿಬಿರಾರ್ಥಿಗಳಿಗೆ ಕಲ್ಪಿಸಲಾಗುವುದು. ಗ್ರಾಮೀಣ ಭಾಗದ ಬಿಪಿಎಲ್ ಅಭ್ಯರ್ಥಿಗಳಿಗೆ ಮೊದಲ ಆದ್ಯತೆಯನ್ನು ನೀಡಲಾಗುವುದು. ಅಭ್ಯರ್ಥಿಗಳು ಸ್ಥಳೀಯ ಭಾಷೆ ಬಲ್ಲವರಾಗಿದ್ದು, ಕನ್ನಡ ಓದಲು ಮತ್ತು ಬರೆಯಲು ತಿಳಿದಿರಬೇಕು. ತರಬೇತಿ ನಂತರ ಕೇಂದ್ರ ಸರ್ಕಾರದ ಗ್ರಾಮೀಣ ಸಚಿವಾಲಯದಿಂದ ಪ್ರಮಾಣ ಪತ್ರವನ್ನು ವಿತರಿಸಲಾಗುವುದು.
Canara Bank ಆಸಕ್ತಿಯುಳ್ಳ ಅಭ್ಯರ್ಥಿಗಳು ಡಿ. 30ರಂದು ಬೆಳಿಗ್ಗೆ 10.00 ಘಂಟೆಗೆ ಕೆನರಾ ಬ್ಯಾಂಕ್ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆ, ಸೊಣ್ಣಹಳ್ಳಿಪುರ, ಹಸಿಗಾಳ(ಅಂಚೆ), ಹೊಸಕೋಟೆ ತಾಲ್ಲೂಕು, ಬೆಂಗಳೂರು ಗ್ರಾಮಾಂತರ ಜಿಲ್ಲೆ ಇಲ್ಲಿ ನಡೆಯುವ ತರಬೇತಿಗೆ ನೇರವಾಗಿ ವಿದ್ಯಾರ್ಹತೆ ಮತ್ತು ವಿಳಾಸ ದಾಖಲಾತಿಗಳೊಂದಿಗೆ ಹಾಜರಾಗುವುದು. ಸಂದರ್ಶನಕ್ಕೆ ಹಾಜರಾಗಲು ಅಸಾಧ್ಯವಾದಲ್ಲಿ ಡಿ. 30 ರೊಳಗೆ ಸಂಸ್ಥೆಯ ದೂರವಾಣಿ ಸಂಖ್ಯೆ 8970476050/ 9591514154/ 9686248369/ 6363139123/ 9505894247 ಗಳನ್ನು ಸಂಪರ್ಕಿಸಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬಹುದೆAದು ಸಂಸ್ಥೆಯ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.