Thursday, August 13, 2026
Thursday, August 13, 2026
Home Blog Page 244

New Year 2026 ಇಂದಿನ ಕವಿತೆ.ನಾಳಿನ ಹಾರೈಕೆ.ಕವಿ: ಶೋಭಾ ಸತೀಶ್.

0

New Year 2026 ಹೊಸ ವರುಷ
ಹೊಸ ವರುಷವು ಬಂದಿತು
ಎಲ್ಲೆಡೆ ಸಂಭ್ರಮ ತಂದಿತು
ನವ ಉಲ್ಲಾಸವ ಮೂಡಿಸಿತು
ಅರಿವು ಮೂಡಿಸಲು ಮುಂದಾಯಿತು

ತಿಳಿ ಆರೋಗ್ಯವೇ ಭಾಗ್ಯವು
ಇರಲಿ ನಿತ್ಯ ಯೋಗ ಧ್ಯಾನವು
ಪಂಚೇಂದ್ರಿಯಗಳ ನಿಗ್ರಹವು
ಸೇವಿಸುವ ಸಮತೋಲನ ಆಹಾರವು

ಅನುಭವಅಧ್ಯಯನದಿ ಸುಜ್ಞಾನಿಯಾಗು
ಸರ್ವರಿಗೂ ಸ್ಪೂರ್ತಿ ನೀನಾಗು
ಕಾಯಕದಲ್ಲೇ ಕೈಲಾಸ ಕಾಣುವಂತವನಾಗು
ಪರಿಸರದ ಸಂರಕ್ಷಕ ನಿನಾಗು

New Year 2026 ಮೂರು ದಿನದ ಬಾಳುನೋಡು
ಬಯಸಬೇಡ ಯಾರಿಗೂ ಕೇಡು
ದುಷ್ಟ ಗುಣಗಳ ಸುಟ್ಟು ಬಿಡು
ಗುರು ಹಿರಿಯರಿಗೆ ಗೌರವ ಕೊಡು

ಸ್ವಾರ್ಥವೇ ಗುರಿಯಾಗದಿರಲಿ
ಹಂಚಿ ತಿಂದು ಕೂಡಿ ಬಾಳುತ್ತಿರಲಿ
ಸುಜ್ಞಾನವ ಎಲ್ಲೆಡೆ ಹಂಚುತ್ತಿರಲಿ
ಅಹಂ ಎಂಬುದು ಎಂದಿಗೂ ಸುಳಿಯದಿರಲಿ

ಶೋಭಾ ಸತೀಶ್ ಶಿಕ್ಷಕಿ
ಸ ಹಿ ಪ್ರಾ ಶಾಲೆ ಚಿಲಕಾದ್ರಿಹಳ್ಳಿ
ಶಿವಮೊಗ್ಗ
ದೂ. ಸಂಖ್ಯೆ 8762603511

Shimoga News ಅರ್ಚಕ ವೃತ್ತಿಯಲ್ಲಿ ಭಾವ ಬೇಕು.ಭಕ್ತರಲ್ಲಿ ಭಕ್ತಿ ಬೇಕು- ಡಾ.ಹೆಚ್.ಬಿ.ಮಂಜುನಾಥ್.

0

Shimoga News ಅಂದುಕೊಳ್ಳುವುದು ಸಂಕಲ್ಪವಾದರೆ ಅದರಂತೆ ಮಾಡುವುದು ಸಾಧನೆ, ಸಂಕಲ್ಪ ಮತ್ತು ಸಾಧನೆಗಳ ಉದ್ದೇಶ ಒಳ್ಳೆಯದಾಗಿದ್ದರೆ ಅದು ಸುಕೃತಿ ಎನಿಸಿಕೊಳ್ಳುತ್ತದೆ ಎಂದು ಹಿರಿಯಪತ್ರಕರ್ತ ಡಾ.ಎಚ್ ಬಿ ಮಂಜುನಾಥ ಅಭಿಪ್ರಾಯ ಪಟ್ಟರು.

ಕರ್ನಾಟಕ ದೇವಾಲಯ ಸಂವರ್ಧನಾ ಸಮಿತಿ ವತಿಯಿಂದ ಹೊನ್ನಾಳಿ ಚಂದ್ರಗಿರಿ ಪ್ರತಿಷ್ಠಾನದ ಸಹಯೋಗದೊಂದಿಗೆ ಹಿರೇಕಲ್ಮಠದಲ್ಲಿ ಏರ್ಪಾಡಾಗಿದ್ದ ದೇವಾಲಯ ಅರ್ಚಕರುಗಳ ಪ್ರಶಿಕ್ಷಣ ಶಿಬಿರದಲ್ಲಿ ಸಂಪ್ರದಾಯಗಳ ಕುರಿತಾಗಿ ಮಾತನಾಡುತ್ತಾ ಅಂದುಕೊಳ್ಳುವುದು ಅಂದುಕೊಂಡಂತೆ ಮಾಡುವುದು ಈ ಎರಡೂ ಸಾಮರ್ಥ್ಯ ಪ್ರಪಂಚದಲ್ಲಿ ಮಾನವ ಜೀವಿಗಳಿಗೆ ಮಾತ್ರವೇ ಇದ್ದು ಒಳ್ಳೆಯದನ್ನೇ ಅಂದುಕೊಳ್ಳಬೇಕು ಅದರಂತೆ ಒಳ್ಳೆಯದನ್ನೇ ಮಾಡಬೇಕು, ಅರ್ಚಕರುಗಳು ಸಹಾ ಭಕ್ತರ ಪರವಾಗಿ ಸದುದ್ದೇಶದ ಸಂಕಲ್ಪಗಳನ್ನು ಮಾಡಿ ಅದರಂತೆ ಪೂಜಾ ಕಾರ್ಯವನ್ನು ನೆರವೇರಿಸಬೇಕು. ಇದಕ್ಕೆಲ್ಲಾ ಯೋಗ್ಯವಾಗಿ ದೇವಸ್ಥಾನ ನಿರ್ಮಿಸುವಲ್ಲಿ ಬುದ್ಧಿ ಬೇಕು, ಅರ್ಚಕ ವೃತ್ತಿಯಲ್ಲಿ ಭಾವ ಬೇಕು, ಭಕ್ತರರಲ್ಲಿ ಭಕ್ತಿ ಬೇಕು, ಇದಕ್ಕೆ ಪೂರಕವಾಗಿ ಅನಾದಿಕಾಲದಿಂದಲೂ ಸನಾತನರು ಹೇಳಿರುವ ಸಂಪ್ರದಾಯಗಳಿದ್ದು ಇದರಲ್ಲಿ ಅನೇಕವು ವೈಜ್ಞಾನಿಕ ವೈಚಾರಿಕವಾಗಿಯೂ ಸಮರ್ಥನೀಯವಾಗಿದ್ದು ಅಂತವುಗಳನ್ನು ಪಾಲಿಸಿಕೊಂಡು ಬರಬೇಕು ಎಂಬುದನ್ನು ಉದಾಹರಣೆಗಳ ಸಹಿತ ವಿವರಿಸಿದರು.

Shimoga News ಹೊನ್ನಾಳಿ ತಾಲೂಕು ಹಾಗೂ ವಿವಿಧೆಡೆಗಳಿಂದ ಅನೇಕ ದೇವಾಲಯಗಳ ಅರ್ಚಕರುಗಳು ಈ ಶಿಬಿರದಲ್ಲಿ ಭಾಗವಹಿಸಿದ್ದರು. ಕರ್ನಾಟಕ ದೇವಾಲಯ ಸಂವರ್ಧನಾ ಸಮಿತಿಯ ಪ್ರಮುಖರಾದ ಮನೋಹರ ಮಠದ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

S. Rudre Gowda ರಮಣ ಮಹರ್ಷಿಗಳ‌ ಜೀವನ ನಮಗೆಲ್ಲ ಪ್ರೇರಕ ಶಕ್ತಿ- ಎಸ್.ರುದ್ರೆಗೌಡ

0

S. Rudre Gowda ರಮಣ ಮಹರ್ಷಿಗಳ ಜೀವನ ಸಂದೇಶ ನಮಗೆಲ್ಲ ಪ್ರೇರಣೆ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಎಸ್.ರುದ್ರೇಗೌಡ ಹೇಳಿದರು.

ಬಸವ ಕೇಂದ್ರದಲ್ಲಿ ಶ್ರೀ ರಮಣ ಕೇಂದ್ರದ ವತಿಯಿಂದ ರಮಣ ಜಯಂತಿ ಪ್ರಯುಕ್ತ ಆಯೋಜಿಸಿದ್ದ ಡಿ.ಜಿ.ಶಿವಣ್ಣಗೌಡ ದತ್ತಿನಿಧಿ ಕಾರ್ಯಕ್ರಮದಲ್ಲಿ ಮಾತನಾಡಿ, ಭಗವಾನ್ ಶ್ರೀ ರಮಣರು ಮೌನವಾಗಿದ್ದುಕೊಂಡೇ ಸಮಾಜವನ್ನು ತಿದ್ದಿದರು. ಅಂತಹವರ ಬಗ್ಗೆ ಶಿವಮೊಗ್ಗದಲ್ಲಿ ಒಂದು ಉತ್ತಮ ಕಟ್ಟಡ ನಿರ್ಮಾಣ ಮಾಡಲು ಮುಂದಿನ ದಿನಗಳಲ್ಲಿ ಪ್ರಯತ್ನಿಸೋಣ ಎಂದು ತಿಳಿಸಿದರು.

ವಿಧಾನ ಪರಿಷತ್ ಸದಸ್ಯ ಡಿ.ಎಸ್.ಅರುಣ್ ಮಾತನಾಡಿ, ಇಂದಿನ ಜೀವನದ ತೊಳಲಾಟದಲ್ಲಿ ರಮಣರ ತತ್ವಗಳು ಮನಶಾಂತಿ ನೀಡುತ್ತದೆ ಎಂಬುದನ್ನು ಅರಿಯಬೇಕು. ಇಂದಿನ ಕಾರ್ಯಕ್ರಮ ಅರ್ಥಪೂರ್ಣ ಎಂದು ಹೇಳಿದರು.

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಷಡಾಕ್ಷರಿ ಮಾತನಾಡಿ, ಶಾಲಾ ಪಠ್ಯದಲ್ಲಿ ರಮಣರ ಬಗ್ಗೆ ತಿಳಿಸುವ ಪಠ್ಯ ಸೇರಿಸಬೇಕು. ಶಿವಮೊಗ್ಗದಲ್ಲಿ ಒಂದು ಶಾಶ್ವತವಾದ ರಮಣ ಕೇಂದ್ರ ಸ್ಥಾಪಿಸಲು ಎಲ್ಲ ರೀತಿಯ ನೆರವು ನೀಡುವುದಾಗಿ ಭರವಸೆ ನೀಡಿದರು.

ಶಾಂತಿಯನ್ನು ಅರಸಿಕೊಂಡು ಹೋಗಬೇಕಿಲ್ಲ. ಅದು ನಮ್ಮಲ್ಲಿಯೇ ಇದೆ ಎಂಬ ರಮಣರ ಮಾತು ನಮಗೆ ಮಾರ್ಗದರ್ಶನವಾಗಬೇಕು ಎಂದು ತಿಳಿಸಿದರು.

S. Rudre Gowda ವಿದ್ವಾನ್ ರಾಘವೇಂದ್ರ ಭಟ್ ಮಾತನಾಡಿ, ರಮಣ ಮಹರ್ಷಿಗಳು ನಿದ್ರೆಯಲ್ಲಿಯೂ ಸದಾ ಜಾಗೃತವಾಗಿದ್ದ ಮಹಾಸಾಧಕರಾಗಿದ್ದರು. ಅರುಣಾಚಲ ಎಂಬ ಹೆಸರನ್ನು ಕೇಳಿ ಪುಳಕಿತರಾದ ಬಾಲಕ ರಮಣ ಇಡೀ ತನ್ನ ಜೀವನವನ್ನು ತಿರುವಣ್ಣಾಮಲೈನಲ್ಲಿ ಕಳೆದ ರೀತಿ ಇತರರಿಗೆ ಮಾದರಿಯಾಗಿದ್ದಾರೆ. 71 ವರ್ಷ ಜೀವಿಸಿದ್ದ ಮಹಾ ಸಾಧಕರು ಇರುವಷ್ಟು ದಿನವೂ ಸಕಲ ಪ್ರಾಣಿ ಪಕ್ಷಿಗಳನ್ನು, ಎಲ್ಲ ಜೀವಿಗಳನ್ನೂ ಒಂದೇ ರೀತಿಯಲ್ಲಿ ಕಾಣುವ ಮನಸ್ಸನ್ನು ಹೊಂದಿದ್ದರು ಎಂದರು.

ಲಲಿತಮ್ಮ ಮತ್ತು ಸಂಗಡಿಗರಿಂದ ಭಕ್ತಿಗೀತೆಗಳ ಕಾರ್ಯಕ್ರಮ ನಡೆಯಿತು. ರತ್ನಮ್ಮ ಪ್ರಾರ್ಥಿಸಿದರು. ರಮಣ ಕೇಂದ್ರದ ವಿನಾಯಕ ಸ್ವಾಗತಿಸಿದರು. ಎಂ.ಎನ್.ಸುಂದರ್ ರಾಜ್ ಪ್ರಾಸ್ತಾವಿಕ ಮಾತನಾಡಿದರು. ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಉಪಾಧ್ಯಕ್ಷ ಜಿ.ವಿಜಯಕುಮಾರ್ ವಂದಿಸಿದರು. ಶಾಂತಮ್ಮ, ವಿನಯ್, ಚನ್ನಪ್ಪ, ಡಿ.ಎಸ್.ಚಂದ್ರಶೇಖರ್, ಶೀಲಾ ಚಂದ್ರಶೇಖರ್, ಎ.ಎಲ್.ಚಂದ್ರಶೇಖರ ಉಪಸ್ಥಿತರಿದ್ದರು.

Vaikuntha Ekadashi ಮುಕ್ಕೋಟಿ ಏಕಾದಶಿ…ಲೇ: ಎನ್.ಜಯಭೀಮ ಜೊಯ್ಸ್.ಶಿವಮೊಗ್ಗ

0

Vaikuntha Ekadashi ಇಂದು ವೈಕುಂಠ ಏಕಾದಶಿ.ಇದನ್ನು ಮುಕ್ಕೋಟಿ ಏಕಾದಶಿಯೆಂದೂ ಕರೆಯುತ್ತಾರೆ.ಅಲ್ಲದೇ ಈ ಏಕಾದಶಿಯನ್ನು ಪುತ್ರದಾಏಕಾದಶೀ ಎಂದೂ ಕರೆಯುತ್ತಾರೆ.
ಚಿತ್ತಶುದ್ಧಿ,ಭಾವಶುದ್ಧಿ ಆಧ್ಯಾತ್ಮದ ಹಾದಿಯ
ಮೊದಲ ಹೆಜ್ಜೆ.ಆ ಭಗವಂತನ ಅನುಗ್ರಹ ಪಡೆಯಲು ಏಕಾದಶಿ ಉಪವಾಸ ಸುಲಭದಮಾರ್ಗ ಎಂದು ನಮ್ಮ ಹಿರಿಯರು ಗುರುತಿಸಿದ್ದಾರೆ.ಉಪವಾಸದಿಂದ ಆ ಭಗವಂತನ ಆರಾಧನೆಮಾಡಬೇಕು,ನಮ್ಮೊಳಗೆ ಸಂವಾದ ನಡೆದು ವಿಚಾರಗಳು ಮಥನಗೊಳ್ಳಲು ಅವಕಾಶ ಕೊಡುವ ಮೌನದ ಆಚರಣೆಯಿಂದ ಮನಸ್ಸು ಮೃದುವಾಗಿ ಒಳ ಹೊರಗೆ ತುಂಬಿಕೊಂಡಿರುವ “ನಾರಾಯಣ”ನನ್ನು ಅನುಭವಿಸಲು ಇದು ಸಾಧನ.
ಏಕಾದಶ ಅಂದರೆ11 ಎಂದರ್ಥ.ಪ್ರತಿ ಮಾಸದಲ್ಲಿ (ತಿಂಗಳು) ಎರಡು ಏಕಾದಶಿಗಳು ಬರುತ್ತವೆ.
ಆದರೆ ಪುಷ್ಯ ಮಾಸದ ಶುಕ್ಲಪಕ್ಷದಲ್ಲಿ ಬರುವ ಏಕಾದಶಿಯು ವೈಕುಂಠ ಏಕಾದಶಿ ಎಂದೇ
ಪ್ರಸಿದ್ಧಿ ಪಡೆದಿದೆ.
ಅಂದು ವೈಕುಂಠದ ಉತ್ತರ ಬಾಗಿಲ ಮೂಲಕ
Vaikuntha Ekadashi ನಾರಾಯಣ ಮುಕ್ಕೋಟಿ ದೇವತೆಗಳಿಗೆ ದರ್ಶನ ನೀಡುತ್ತಾನೆ ಎಂದು ಪ್ರತೀತಿ ಇದೆ.
ಅದೇ ಕಾರಣಕ್ಕೆ ವೈಷ್ಣವ ಆಲಯಗಳಲ್ಲಿ ವಿಶೇಷವಾಗಿ ವೈಕುಂಠದ್ವಾರ ರೂಪಿಸಿಭಕ್ತರಿಗೆಪ್ರವೇಶಕಲ್ಪಿಸಿರುತ್ತಾರೆ. ವೈಕುಂಠ ಏಕಾದಶಿ ಒಂದೇ ಅಲ್ಲ,ಎಲ್ಲ ಏಕಾದಶಿಗಳೂ ಉಪವಾಸ ವ್ರತಕ್ಕೆ ಶ್ರೇಷ್ಠವಾದವು. ಆದರೆ ವೈಕುಂಠ ಏಕಾದಶಿಯಂದುಉಪವಾಸಮಾಡಿದ ಫಲ ನೂರ್ಮಡಿ ಯಾಗಿರುತ್ತದೆ.ಅಂದುನಿಟ್ಟುಪವಾಸವೇ
ಶ್ರೇಷ್ಠವಾದುದು.ಹಸಿವಾದತಕ್ಷಣಉಣ್ಣುವುದನ್ನು,ಅನ್ನಿಸಿದ ತಕ್ಷಣ ಮಾತಾಡುವುದನ್ನು ಕಲಿತ ಮನಸ್ಸು ಮತ್ತು ದೇಹಗಳು ಒಂದು ದಿನದ ಮಟ್ಟಿಗಾದರೂ ದೇವರ ಸ್ಮರಣೆ ಮಾಡುತ್ತಾ, ಭಗವಂತನ ಚಿಂತನೆಯಲ್ಲಿ ತೊಡಗಬೇಕುಎನ್ನುವುದೇನಮ್ಮಹಿರಿಯರುಹಾಕಿಕೊಟ್ಟ
ಏಕಾದಶಿಯ ಮಹತ್ವ.
ವೈಕುಂಠಏಕಾದಶಿಯಯದಿನವಾದಇಂದುಆಭಗವಂತನು(ಶ್ರೀಹರಿ)ಎಲ್ಲರಿಗೂಸನ್ಮಂಗಳವನ್ನುದಯಪಾಲಿಸಲಿ ಎಂತ ಪ್ರಾರ್ಥಿಸೋಣ.

Kuvempu ಜನಮನ ಕನ್ನಡ ರಕ್ಷಣಾ ವೇದಿಕೆಯಿಂದ ಕುವೆಂಪು ಜಯಂತಿ ಆಚರಣೆ.

0

Kuvempu ಜನಮನ ಕನ್ನಡ ರಕ್ಷಣಾ ವೇದಿಕೆ ರಾಜ್ಯ ಸಂಘಟನೆ ವತಿಯಿಂದ ರಾಷ್ಟ್ರಕವಿ ಕುವೆಂಪು ಅವರ ಜನ್ಮದಿನ ವನ್ನು ಶಿವಮೊಗ್ಗ ನಗರದ ಶಿವಪ್ಪ ನಾಯಕನ ಪ್ರತಿಮೆಯ ಮುಂದೆ ಸಂಭ್ರಮದಿಂದ ಆಚರಿಸಲಾಯಿತು, ಈ ಕಾರ್ಯಕ್ರಮದಲ್ಲಿ ಜನಮನ ಕರವೇ ರಾಜ್ಯ ಸಂಘಟನೆಯ ರಾಜ್ಯಾಧ್ಯಕ್ಷರಾದ ಜನಾರ್ದನ ಸಾಲಿಯನ್, ಕಜಾಂಚಿ ಸಿದ್ದಣ್ಣ, ಪ್ರಧಾನ ಕಾರ್ಯದರ್ಶಿ ಎನ್, ಮಾಲತೇಶ್, Kuvempu ಪತ್ರಕರ್ತರು ಹಾಗೂ ಸಾಹಿತಿಗಳಾದ ಗಾ,ರಾ, ಶ್ರೀನಿವಾಸ್, ಅನಿಲ್, ಪದಾಧಿಕಾರಿಗಳಾದ ಕಿರಣ್, ರಾಮಣ್ಣ ರಾಗಿಗುಡ್ಡ, ರಾಮು, ಪಾರ್ತಿಬನ್, ಮುರುಗನ್, ಪ್ರದೀಪ್, ಗಣೇಶ್, ಪ್ರೇಮ್, ವೀಣಾ, ಹೆಚ್, ಸುಮಾ ಕೆ, ಎಸ್, ಸುಜಾತ, ಪುಷ್ಪ ಒಡೆಯರ್, ಶೋಭಾ, ಪುಷ್ಪ, ಇನ್ನು ಮುಂತಾದವರು ಭಾಗವಹಿಸಿದ್ದರು.

Shimoga News ಮಾನ್ಯತೆ ಪಡೆದ ಪತ್ರಕರ್ತರ ಬಸ್ ಪಾಸ್ ಮಾನ್ಯತಾ ಅವಧಿ ವಿಸ್ತರಣೆ

0

Shimoga News ಮಾನ್ಯತೆ ಪಡೆದ ಪತ್ರಕರ್ತರಿಗೆ ವಿತರಿಸಲಾಗಿರುವ ಸ್ಮಾರ್ಟ್‌ ಕಾರ್ಡ್‌ಗಳ
ಮಾನ್ಯತಾ ಅವಧಿಯು ದಿನಾಂಕ: 31.12.2025 ಕ್ಕೆ ಕೊನೆಗೊಳ್ಳಲಿದ್ದು, 2026 ಮತ್ತು 2027ನೇ ಸಾಲಿನ ಮಾನ್ಯತೆ
ಪಡೆದ ಪತ್ರಕರ್ತರ ಸ್ಮಾರ್ಟ್‌ ಕಾರ್ಡ್‌ಗಳನ್ನು ಜರೂರಾಗಿ ಮುದ್ರಿಸಿ ನೀಡುವಂತೆ ಕೋರಿರುತ್ತಾರೆ.
ಮಾನ್ಯತೆ ಪಡೆದ ಪತ್ರಕರ್ತರ ಬಸ್ ಪಾಸುಗಳನ್ನು ಮುದ್ರಿಸಲು ಕಾಲಾವಕಾಶದ ಅವಶ್ಯಕತೆ ಇರುವುದರಿಂದ,
ಕ.ರಾ.ರ.ಸಾ.ನಿಗಮದ ವತಿಯಿಂದ ವಿತರಿಸಲಾಗಿರುವ ಸ್ಮಾರ್ಟ್‌ ಕಾರ್ಡ್ ಬಸ್‌ಪಾಸ್‌ಗಳ ಮಾನ್ಯತಾ ಅವಧಿಯನ್ನು
ಸೂಕ್ತಾಧಿಕಾರಿಗಳ ಅನುಮೋದನೆಯಂತೆ ದಿನಾಂಕ: 28.02.2026 ರವರೆಗೆ ವಿಸ್ತರಿಸಲಾಗಿದೆ.

ಎಂದು ಆಯುಕ್ತರು, ವಾರ್ತಾ ಮತ್ತು
ಸಾರ್ವಜನಿಕ ಸಂಪರ್ಕ ಇಲಾಖೆ ರವರ ಪ್ರಕಟಣೆ ತಿಳಿಸುತ್ತದೆ

Priyank Kharge ಪಂಚಮಿತ್ರ ಪೋರ್ಟಲ್ ಯಶಸ್ವಿ ನಿರ್ವಹಣೆ- ಸಚಿವ ಪ್ರಯಾಂಕ ಖರ್ಗೆ.

0

Priyank Kharge ಗ್ರಾಮ ಪಂಚಾಯತಿಗಳ ವ್ಯಾಪ್ತಿಯಲ್ಲಿ ಸರ್ಕಾರದ ವಿವಿಧ ಇಲಾಖೆಗಳ ಸೇವೆಗಳನ್ನು ನೀಡುವ ‘ಪಂಚಮಿತ್ರ’ ಪೋರ್ಟಲ್ ಮತ್ತು ವಾಟ್ಸಪ್ ಚಾಟ್‌ ಮೂಲಕ ಜನರು ತಮ್ಮ ಕುಂದುಕೊರತೆಗಳ ಬಗ್ಗೆ ಅಹವಾಲುಗಳನ್ನು ಸಲ್ಲಿಸಲು ಅವಕಾಶ ಕಲ್ಪಿಸುವ ವಿನೂತನ ಯೋಜನೆ ಪ್ರಾರಂಭಿಸಲಾಗಿತ್ತು. ಜನರು ಮನೆಯಲ್ಲಿಯೇ ಕುಳಿತು ವಾಟ್ಸಪ್ ಮೂಲಕ ಅಹವಾಲು ಸಲ್ಲಿಸಲು ಸಹಾಯವಾಣಿ ಸಂಖ್ಯೆ 8277506000 ಪ್ರಾರಂಭಿಸಲಾಗಿತ್ತು. ಇದು ದೇಶದಲ್ಲೇ ಈ ರೀತಿಯ ಪ್ರಥಮ ಪ್ರಯತ್ನವಾಗಿದ್ದು, ಇದೀಗ ಅತ್ಯಂತ ಯಶಸ್ವಿ ಯೋಜನೆಯಾಗಿ ಹೊರಹೊಮ್ಮಿದೆ.

ಗ್ರಾಮೀಣ ಪ್ರದೇಶಗಳ ಜನರು ವಿವಿಧ ಕೆಲಸಗಳಿಗಾಗಿ ತಾಲೂಕು ಕೇಂದ್ರಗಳಲ್ಲಿನ ಸರ್ಕಾರಿ ಕಚೇರಿಗಳಿಗೆ ಅಲೆಯುವುದನ್ನು ತಪ್ಪಿಸುವುದಕ್ಕಾಗಿ ಗ್ರಾಮ ಪಂಚಾಯತಿಗಳಲ್ಲಿಯೇ ಅಗತ್ಯ ಸೇವೆಗಳನ್ನು ಒದಗಿಸಲಾಗುತ್ತಿದೆ. ಇದರೊಂದಿಗೆ ಮಧ್ಯವರ್ತಿಗಳ ಹಾವಳಿ ತಪ್ಪಿಸಲು ಈ ಯೋಜನೆ ಸಹಕಾರಿಯಾಗಿದೆ.

Priyank Kharge ರಾಜ್ಯದಲ್ಲಿ ಈವರೆಗಿನ ಪಂಚಮಿತ್ರ ವಾಟ್ಸಪ್ ಚಾಟ್ ಬಾಟ್ ಬಳಕೆದಾರರ ವರದಿ ಹೀಗಿದೆ :

➧ ರಾಜ್ಯದ ಒಟ್ಟು ಬಳಕೆದಾರರು : 1,21,535

➧ ಎಲ್ಲಾ ಜಿಲ್ಲೆಗಳಿಂದ ಅಹವಾಲು ಸ್ವೀಕಾರ : 12,771

➧ ಅಹವಾಲುಗಳ ವಿಲೇವಾರಿ : 12,708

ಗ್ರಾಮ ಪಂಚಾಯತಿಗಳಿಗೆ ಸಂಬಂಧಿಸಿದ ಮಾಹಿತಿ, ಸೇವೆಗಳು ಮತ್ತು ಕುಂದುಕೊರತೆಗಳ ಅಹವಾಲು ಸಲ್ಲಿಸಲು ಸುಲಭ ಮಾರ್ಗ ಇದಾಗಿದೆ. ಗ್ರಾಮೀಣ ಜನರು ಈ ಯೋಜನೆಯನ್ನು ಸದುಪಯೋಗ ಪಡಿಸಿಕೊಳ್ಳಬೇಕಾಗಿ ಕೋರುತ್ತೇನೆ ಎಂದು‌ ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ , ತಂತ್ರಜ್ಞಾನ ಇಲಾಖೆ ಸಚಿವ ಪ್ರಿಯಾಂಕ ಖರ್ಗೆ ಮನವಿಮಾಡಿದ್ದಾರೆ.

ATNCC ಎಟಿಎನ್ ಸಿಸಿ ಹಳೇ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷರಾಗಿಎಸ್.ಎಸ್.‌ವಾಗೇಶ್ ಅಯ್ಕೆ

0

ATNCC ಆಚಾರ್ಯ ತುಳಸಿ ರಾಷ್ಟ್ರೀಯ ವಾಣಿಜ್ಯ ಮಹಾವಿದ್ಯಾಲಯದ ಹಳೆಯ ವಿದ್ಯಾರ್ಥಿ ಸಂಘ(ರಿ)ನ 2025-2030ನೇ ಸಾಲಿನ ಆಡಳಿತ ಮಂಡಳಿಯ ಆಯ್ಕೆ ಪ್ರಕ್ರಿಯೆಯಲ್ಲಿ ಅವಿರೋದವಾಗಿ ಆಯ್ಕೆನಡೆದು
ಅಧ್ಯಕ್ಷರಾಗಿ ಎಸ್.ಎಸ್.ವಾಗೇಶ್, ಉಪಾಧ್ಯಕ್ಷರಾಗಿ ಪ್ರೋ.ಆಶಾಲತ,
ಕೇಶವಮೂರ್ತಿ, ಕಾರ್ಯದರ್ಶಿಯಾಗಿ ಶಿವಾನಂದಸಾನು, ಸಹಕಾರ್ಯದರ್ಶಿಯಾಗಿ
ಸ್ಮೀತಾರೂಪೇಶ್, ಮತ್ತು ದಿಲೀಪ್ ನಾಡಿಗ್ ಖಚಾಂಚಿಯಾಗಿ ಘನಶ್ಯಾಮ್

ನಿರ್ದೇಶಕರಾಗಿ
ಜಿ.ವಿಜಯಕುಮಾರ್,
ಎ.ಎಮ್.ಮಹೇಶ್,
ಪ್ರಕಾಶ್ ಕಮಾರ್ ಸಮನ್ವಯಕಾಶಿ,
ಸುನೀಲ್ ಅಂಬೋರೆ,
ನವೀನ್ ಕುಮಾರ್
ಸಿ.ಎನ್.ಸುರೇಶ್,
ಸೈಯದ್ ಅಬೂತಾಹಿರ್,
ಆಯ್ಕೆಯಾಗಿದ್ದಾರೆ.

ಚುನಾವಣಾಧಿಕಾರಿಗಳಾಗಿ ಪ್ರಾಂಶುಪಾಲರಾದ ಮಮತಾ.ಪಿ.ಆರ್ ನಡೆಸಿಕೊಟ್ಟರು.

Araga Jnanendra “ಇದೇನು ಧರ್ಮಛತ್ರವಾ? ಬೆಂಗಳೂರು ಜನರ ಗತಿಯೇನು?”- ಆರಗ ಜ್ಞಾನೇಂದ್ರ.

0

Araga Jnanendra ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಹೆಚ್ಚುತ್ತಿರುವ ಬಾಂಗ್ಲಾದೇಶದ ಅಕ್ರಮ ವಲಸಿಗರ ಹಾವಳಿ ಮತ್ತು ಡ್ರಗ್ಸ್ ಜಾಲದ ಬಗ್ಗೆ ಮಾಜಿ ಗೃಹ ಸಚಿವ ಅರಗ ಜ್ಞಾನೇಂದ್ರ ಅವರು ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಬೆಂಗಳೂರಿನಲ್ಲಿ ಜನರು ಬದುಕು ಕಟ್ಟಿಕೊಳ್ಳುವುವುದು ಕಷ್ಟ ಎಂಬಂತಹ ಸನ್ನಿವೇಶ ನಿರ್ಮಾಣವಾಗುತ್ತಿದೆ. ಮೂರು ಜನ ರಿಕ್ಷಾ ಚಾಲಕರು ಮಾತನಾಡುತ್ತಾರೆ, ಬೆಂಗಳೂರಿನಲ್ಲಿ ಬಾಂಗ್ಲಾದೇಶದ ಯುವಕರು ರಿಕ್ಷಾ ಚಾಲಕರಾಗಿ ಕೆಲಸ ಮಾಡುತ್ತಿದ್ದಾರೆ. ಇಲ್ಲಿ ಚೆನ್ನಾಗಿ ಬದುಕು ಕಟ್ಟಿಕೊಂಡಿದ್ದೇವೆ ಎಂದು ಹೇಳುತ್ತಾ ಬಾಂಗ್ಲಾದ ಯುವಕರನ್ನು ಇಲ್ಲಿಗೆ ಬನ್ನಿ ಎಂದು ಕರೆಯುತ್ತಿದ್ಧಾರೆ. ಅವರು ಇಲ್ಲಿಂದಲೇ ತಮ್ಮ ದೇಶದ ಇತರರನ್ನು ಬೆಂಗಳೂರಿಗೆ ಬರುವಂತೆ ಪ್ರೇರೇಪಿಸುತ್ತಿದ್ದಾರೆ. ಇದು ರಾಜ್ಯದ ಭದ್ರತೆಗೆ ದೊಡ್ಡ ಅಪಾಯ. ಇವೆರಲ್ಲಾ ಬರೀ ಆಟೋ ಓಡಿಸಿಕೊಂಡಿದ್ದಾರಾ? ಅಥವಾ ಬೇರೆನೋ ಮಾಡುತ್ತಿದ್ಧಾರಾ? ಇವರನ್ನ ಒಳಕ್ಕೆ ಸರಿಸಿಕೊಂಡು ಗತಿಯೇನು? ಇದೇನು ಧರ್ಮಛತ್ರವಾ? ಬೆಂಗಳೂರು ಜನರ ಗತಿಯೇನು? ಈ ವಿಚಾರ ಕೇಳಿ ಆಶ್ಚರ್ಯವಾಯ್ತು. ಈ ಬಗ್ಗೆ ಪೊಲೀಸರು ಅವರನ್ನ Araga Jnanendra ಅರೆಸ್ಟ್ ಮಾಡಬೇಕು. ಹೀಗೆ ಅಕ್ರಮವಾಗಿ ನೆಲೆಸಿರುವ ಇವರಿಗೆ ಇಲ್ಲಿ ನೆಲೆ ಒದಗಿಸಿದವರು ಯಾರು? ಇವರಿಗೆ ಬೇಕಾದ ದಾಖಲೆಗಳನ್ನು ಸೃಷ್ಟಿಸಿಕೊಟ್ಟವರು ಯಾರು? ಎಂಬ ಬಗ್ಗೆ ಪೊಲೀಸರು ತಕ್ಷಣ ಸಮಗ್ರ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು. ಇತ್ತೀಚೆಗೆ ಮೈಸೂರಿನಲ್ಲಿ ಡ್ರಗ್ಸ್ ಸೀಜ್ ಆಗಿತ್ತು, ಈಗ ಬೆಂಗಳೂರಿನಲ್ಲಿ ಡ್ರಗ್ಸ್ ತಯಾರಿಕಾ ಘಟಕವನ್ನು ಮಹಾರಾಷ್ಟ್ರ ಪೊಲೀಸರು ಬಂದು ಪತ್ತೆ ಮಾಡಿರುವುದು ರಾಜ್ಯ ಪೊಲೀಸರಿಗೆ ನಾಚಿಕೆಗೇಡಿನ ಸಂಗತಿ. ಮಹಾರಾಷ್ಟ್ರ ಪೊಲೀಸರು ಬಂದು ಹಿಡಿಯುತ್ತಾರೆ ಅಂತ ಹೇಳಿದರೆ, ನಮ್ಮ ಪೊಲೀಸರಿಗೆ ಇದ್ಯಾಕೆ ಗೊತ್ತಾಗುತ್ತಿಲ್ಲ. ಗೊತ್ತಾಗುತ್ತೆ, ಆದರೆ ಇಲ್ಲಿ ಕೆಲವರ ಇನ್ವಾಲ್ಮೆಂಟ್​ ಇದೆ. ಭಷ್ಟ್ರಚಾರದ ಮೂಲಕ ಟ್ರಾನ್ಸಫರ್ ಆಗಿರುವುದರ ಫಲ ಇದಾಗಿದೆ ಎಂದ ಸಚಿವರು ಈ ವಿಚಾರ ಗೃಹ ಇಲಾಖೆಗೆ ಅವಮಾನದ ಸಂಗತಿ ಎಂದರು. ಇದು ಸರ್ಕಾರದ ವೀಕ್ ಪಾಯಿಂಟ್, ಸರ್ಕಾರದ ದರಿದ್ರತನ. ಈ ನಿಟ್ಟಿನಲ್ಲಿ ನಮ್​ ಇಲಾಖೆಯ ಪೊಲೀಸರನ್ನೆ ತನಿಖೆಗೆ ಒಳಪಡಿಸಬೇಕು ಎಂದು ಒತ್ತಾಯಿಸುತ್ತೇನೆ ಎಂದು ಶಾಸಕ‌ ಆರಗ ಜ್ಞಾನೇಂದ್ರ ಹೇಳಿದರು.

B. Y. Raghavendra ಆಧ್ಯಾತ್ಮಿಕತೆ,ಸಂಸ್ಕೃತಿ ಮತ್ತು ಸಾಮಾಜಿಕ ಸೌಹಾರ್ದತೆ ಬೆಳೆಸುವ ಕಾರ್ಯಕ್ರಮಗಳು ನಿರಂತರ ನಡೆಯಲಿ- ಬಿ.ವೈ.ರಾಘವೇಂದ್ರ.

0

B. Y. Raghavendra ಶಿವಮೊಗ್ಗದ ಅಂಬೇಡ್ಕರ್ ಭವನದಲ್ಲಿ ಶ್ರೀ ಶಿವಕುಮಾರ ಸ್ವಾಮೀಜಿಗಳ ನೌಕರರ ಸಂಘ, ಶಿವಮೊಗ್ಗ ಹಾಗೂ ಶ್ರೀ ಬಸವೇಶ್ವರ ವೀರಶೈವ–ಲಿಂಗಾಯತ ಸಮಾಜ ಸೇವಾ ಸಂಘ, ಶಿವಮೊಗ್ಗ ಇವರ ಸಹಯೋಗದಲ್ಲಿ ಆಯೋಜಿಸಲಾದ ಮೂರು ದಿನಗಳ ಆಧ್ಯಾತ್ಮಿಕ ಪ್ರವಚನ ಕಾರ್ಯಕ್ರಮದ ಕೊನೆಯ ದಿನದ ಲಿಂಗತತ್ವ ದರ್ಶನ ಪ್ರವಚನದಲ್ಲಿ ಸಂಸದ ಬಿ.ವೈ.ರಾಘವೇಂದ್ರ ಭಾಗವಹಿಸಿದ್ದರು.

ಪರಮಪೂಜ್ಯ ಮಹಾಸನ್ನಿಧಿ ಶ್ರೀಮತ್ ಕಾಶಿ ಜ್ಞಾನ ಸಿಂಹಾಸನಾಧೀಶ್ವರ ಶ್ರೀ ಶ್ರೀ ಶ್ರೀ 1008 ಜಗದ್ಗುರು ವಿದ್ಯಾವಾಚಸ್ಪತಿ ಡಾ. ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರು, ಜಂಗಮವಾಡಿ ಮಠ, ವಾರಾಣಸಿ ಇವರ ದಿವ್ಯ ವಚನಗಳು ಲಿಂಗತತ್ವದ ಗಾಢ ಅರ್ಥ, ಮಾನವೀಯ ಮೌಲ್ಯಗಳು ಹಾಗೂ ಸಮಾಜದಲ್ಲಿ ಧರ್ಮ–ನೈತಿಕತೆಯ ಮಹತ್ವವನ್ನು ಸ್ಪಷ್ಟವಾಗಿ ತಿಳಿಸಿದವು..

B. Y. Raghavendra ಈ ಕಾರ್ಯಕ್ರಮದಲ್ಲಿ ಶಿವಮೊಗ್ಗ ಜಿಲ್ಲೆಯ ಮಾನ್ಯ ಶಾಸಕರಾದ ಶ್ರೀ ಚನ್ನಬಸಪ್ಪ ಅವರು, ಶ್ರೀ ಸಿ.ಎಸ್. ಷಡಾಕ್ಷರಿ, ಶ್ರೀ ಎಸ್.ಎಸ್. ಜ್ಯೋತಿಪ್ರಕಾಶ್, ಶ್ರೀ ಎಸ್.ಪಿ. ದಿನೇಶ್, ಶ್ರೀ ಬಳ್ಳೇಕೆರೆ ಸಂತೋಷ್ ಹಾಗೂ ಅನೇಕ ಭಕ್ತವೃಂದದವರು ಉಪಸ್ಥಿತರಿದ್ದರು.

ಆಧ್ಯಾತ್ಮಿಕತೆ, ಸಂಸ್ಕೃತಿ ಮತ್ತು ಸಾಮಾಜಿಕ ಸೌಹಾರ್ದತೆಯನ್ನು ಬೆಳೆಸುವ ಇಂತಹ ಕಾರ್ಯಕ್ರಮಗಳು ನಿರಂತರವಾಗಿ ನಡೆಯಲಿ ಎಂಬುದು ಸಂಸದ ಬಿ.ವೈ.ರಾಘವೇಂದ್ರ ಹಾರೈಸಿದರು