Tuesday, August 11, 2026
Tuesday, August 11, 2026
Home Blog Page 214

ಸಂಪೂರ್ಣ ಸುಟ್ಟು ಭಸ್ಮವಾದ ಹೊಸನಗರದಿಂದ ಬೆಂಗಳೂರಿಗೆ ಹೊರಟಿದ್ದ ಖಾಸಗಿ ಬಸ್

0

ಶಿವಮೊಗ್ಗ ಹಾಗೂ ಹೊಸನಗರ ತಾಲೂಕಿನ ಗಡಿ ಭಾಗದಲ್ಲಿ ಚಲಿಸುತ್ತಿದ್ದ ಬಸ್ ನಲ್ಲಿ ಕಾಣಿಸಿಕೊಂಡ ಬೆಂಕಿ ಘಟನೆ ನಡೆದಿದೆ.

ಶ್ರೀ ಅನ್ನಪೂರ್ಣೇಶ್ವರಿ ಎಂಬ ಖಾಸಗಿ ಬಸ್ ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಅರಸಾಳು ಹಾಗೂ ಸುಡೂರು ಗ್ರಾಮಗಳ ಮಧ್ಯೆ ನಡೆದ ಈ ಘಟನೆ ಸಂಭವಿಸಿದೆ.

ಹೊಸನಗರದಿಂದ ಬೆಂಗಳೂರಿಗೆ ಹೊರಟಿದ್ದ ಸ್ಲೀಪರ್ ಬಸ್ ಇದಾಗಿದ್ದು,
ಚಾಲಕ ಸೇರಿದಂತೆ 40 ಜನ ಪ್ರಯಾಣಿಸುತಿದ್ದರು ಎನ್ನಲಾಗಿದೆ.

ಘಟನೆಯಲ್ಲಿ ಎಂಟು ಜನರಿಗೆ ಗಾಯಯಳಾಗಿವೆ.ರಸ್ತೆ ಪಕ್ಕದ ಮರಕ್ಕೆ ಡಿಕ್ಕಿಯಾದ ನಂತರ ಚಾಲಕ ಬಸ್ ನಿಲ್ಲಿಸಿದ್ದಾರೆ. ಹೆಚ್ಚಿನ ಚಿಕಿತ್ಸೆಗಾಗಿ ಗಾಯಾಳುಗಳು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಸ್ಥಳಕ್ಕೆ ಅಗ್ನಿಶಾಮಕದಳ, ಪೋಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.

ಫೆಬ್ರವರಿ 01 ರಂದು ಶಿವಮೊಗ್ಗದಲ್ಲಿ ಶ್ರೀ ಮಡಿವಾಳ ಮಾಚಿದೇವ ಜಯಂತಿ ಕಾರ್ಯಕ್ರಮ

0

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರ ಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಜಿಲ್ಲಾ ಮಡಿವಾಳ ಸಮಾಜ ಸಂಘ, ಶಿವಮೊಗ್ಗ ಇವರ ಸಂಯುಕ್ತಾಶ್ರಯದಲ್ಲಿ ಫೆಬ್ರವರಿ 01 ರಂದು ಬೆಳಿಗ್ಗೆ 11 ಗಂಟೆಗೆ ನಗರದ ಕುವೆಂಪು ರಂಗಮಂದಿರದಲ್ಲಿ ಶ್ರೀ ಮಡಿವಾಳ ಮಾಚಿದೇವ ಜಯಂತಿಯನ್ನು ಆಯೋಜಿಸಲಾಗಿದೆ.
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖಾ ಹಾಗೂ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಮಧುಬಂಗಾರಪ್ಪ ಇವರು ಕಾರ್ಯಕ್ರಮದ ಉದ್ಘಾಟನೆ ನೆರವೇರಿಸುವರು. ಶಾಸಕರಾದ ಎಸ್.ಎನ್. ಚನ್ನಬಸಪ್ಪರವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ತಂಗಡಗಿ ಶಿವರಾಜ್ ಸಂಗಪ್ಪರವರು ವಿಶೇಷ ಆಹ್ವಾನಿತರಾಗಿ ಉಪಸ್ಥಿತರಿರಲಿದ್ದಾರೆ.
ಸಂಸದರು, ವಿಧಾನಸಭಾ, ವಿಧಾನ ಪರಿಷತ್ ಶಾಸಕರು, ವಿವಿಧ ನಿಗಮ, ಮಂಡಳಿ, ಪ್ರಾಧಿಕಾರದ ಅಧ್ಯಕ್ಷರು, ಮಹಾನಗರಪಾಲಿಕೆ ಮಹಾಪೌರರು, ಕರ್ನಾಟಕ ಮಡಿವಾಳ ಮಾಚಿದೇವ ಅಭಿವೃದ್ದಿ ನಿಗಮದ ನಾಮ ನಿರ್ದೇಶಕರು,ಜಿಲ್ಲಾ ಮಡಿವಾಳ ಸಮಾಜದ ಅಧ್ಯಕ್ಷರು, ಜಿಲ್ಲಾಧಿಕಾರಿಗಳು, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗಳು, ಜಿ.ಪಂ ಸಿಇಓ, ಪಾಲಿಕೆ ಆಯುಕ್ತರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರು, ಜನಪ್ರತಿನಿಧಿಗಳು, ಸರ್ಕಾರಿ ಅಧಿಕಾರಿಗಳು ಸೇರಿದಂತೆ ವಿವಿಧ ಸಂಘಟನೆ ಮುಖಂಡರು, ಪದಾಧಿಕಾರಿಗಳು ಪಾಲ್ಗೊಳ್ಳುವರು.
ಈ ಕಾರ್ಯಕ್ರಮದಲ್ಲಿ ಸಾಗರ ತಾಲೂಕು, ತ್ಯಾಗರ್ತಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಳೆಯ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕ ನಾಗರಾಜ ಎ.ಎಂ.ರವರು ವಿಶೇಷ ಉಪನ್ಯಾಸ ನೀಡುವರು.

ಜ.27 ರಂದು ಶಿವಮೊಗ್ಗದ ನಟನಂ ಬಾಲ ನಾಟ್ಯ ಕೇಂದ್ರದಿಂದ ವಿಶೇಷ ನೃತ್ಯ ಕಾರ್ಯಕ್ರಮ

0

ಜ. 27 ರ ನಾಳೆ ಸಂಜೆ 5:30ಕ್ಕೆ ಶಿವಮೊಗ್ಗದ ಹೆಸರಾಂತ ಭರತನಾಟ್ಯ ಶಾಲೆಯಾದ ನಟನಂ ಬಾಲ ನಾಟ್ಯ ಕೇಂದ್ರದ ನರ್ತನಾಂಕುರ – ೧ ಎಂಬ ಭರತನಾಟ್ಯ, ಜಾನಪದ ಹಾಗೂ ಫ್ಯೂಶನ್ ನೃತ್ಯದ ಕಾರ್ಯಕ್ರಮವನ್ನು ಕರ್ನಾಟಕ ಕಲಾಶ್ರೀ ವಿದ್ವಾನ್ ಡಾ. ಎಸ್ ಕೇಶವಕುಮಾರ್ ಪಿಳ್ಳೈ ಹಾಗೂ ವಿದ್ವಾನ್ ಚೇತನ್ ಎಸ್, ಸಿ ವಿದುಷಿ ನಾಟ್ಯಶ್ರೀ ಚೇತನ್ ಇವರು ಪ್ರಸ್ತುತಪಡಿಸಲಿದ್ದಾರೆ.
ಈ ಕಾರ್ಯಕ್ರಮದ ವಿಶೇಷ ಆಕರ್ಷಣೆಯಾಗಿ ಮಹಾಕಾಳಿ ಸ್ತುತಿ, ಈಜಿಪ್ಟಿಯನ್ ವಿನ್ ಡ್ಯಾನ್ಸ್ ಮತ್ತು ಜಪಾನ್ ಫ್ಯಾನ್ ಡ್ಯಾನ್ಸ್ ಅಭಿನಯಿಸುತ್ತಿದ್ದಾರೆ.
ಶಿವಮೊಗ್ಗದ ನಮ್ಮ ಕೇಂದ್ರದ ವಿದ್ಯಾರ್ಥಿಗಳು ಹಾಗೂ ಹೊಳೆ ಹೊನ್ನೂರಿನ ಹೊಸ ಶಾಖೆಯ 40 ವಿದ್ಯಾರ್ಥಿಗಳು ಸೇರಿ ಒಟ್ಟು 95 ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ನರ್ತಿಸಲಿದ್ದಾರೆ.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಆರ್ ಶೇಖರ್ ಅವರು ವಹಿಸಲಿದ್ದಾರೆ.
ಈ ಕಾರ್ಯಕ್ರಮಕ್ಕೆ ಕಲಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ಕರ್ನಾಟಕ ಕಲಾಶ್ರೀ ವಿದ್ವಾನ್ ಡಾ. ಎಸ್ ಕೇಶವ್ ಕುಮಾರ್ ಪಿಳ್ಳೈ ಅವರು ಕೋರಿದ್ದಾರೆ.

Chamber of Commerce Shivamogga ಆತ್ಮ ನಿರ್ಭರ ಕಾರ್ಯಕ್ರಮಗಳಿಂದ ವಿಕಸಿತ ಭಾರತದೆಡೆಗೆ ಸದೃಢ ಹೆಜ್ಜೆ: ಬಿ.ಗೋಪಿನಾಥ್

0

Chamber of Commerce Shivamogga ಭಾರತವು ಡಿಜಿಟಲ್ ಇಂಡಿಯಾ, ಮೇಕ್ ಇನ್ ಇಂಡಿಯಾ, ಆತ್ಮ ನಿರ್ಭರ ಕಾರ್ಯಕ್ರಮಗಳಿಂದ ವಿಕಸಿತ ಭಾರತ ಆಗುತ್ತಿದ್ದು, ಮೂರನೇ ಅತಿ ದೊಡ್ಡ ಆರ್ಥಿಕ ಶಕ್ತಿಯಾಗುವತ್ತ ಮುನ್ನುಗುತ್ತಿದೆ ಎಂದು ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಬಿ.ಗೋಪಿನಾಥ್ ಹೇಳಿದರು.

ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಆವರಣದಲ್ಲಿ ಆಯೋಜಿಸಿದ್ದ 77ನೇ ಗಣರಾಜ್ಯೋತ್ಸದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ಉತ್ತಮ ಸಂವಿಧಾನ ಭಾರತ ದೇಶದಲ್ಲಿ ರಚನೆಯಾಗಿದ್ದು, ಈ ದಿನ ಭಾರತದ ಸಾರ್ವಭೌಮತ್ವ ಮತ್ತು ಪ್ರಜಾಪ್ರಭುತ್ವ ಆಡಳಿತವನ್ನು ಆಚರಿಸುತ್ತದೆ. ವೈವಿಧ್ಯತೆಯಲ್ಲಿ ಏಕತೆ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಮತ್ತಷ್ಟು ಎತ್ತಿ ತೋರಿಸುತ್ತದೆ. ನ್ಯಾಯ, ಸಮಾನತೆ ಮತ್ತು ಸ್ವಾತಂತ್ರ‍್ಯದ ತತ್ವಗಳನ್ನು ಬಲಪಡಿಸುವ ದಿನವಾಗಿದೆ ಎಂದು ತಿಳಿಸಿದರು.

ಸಂಘದ ಮಾಜಿ ಅಧ್ಯಕ್ಷ ಕೆ.ವಿ.ವಸಂತ್‌ಕುಮಾರ್ ಮಾತನಾಡಿ, ದೇಶದ ಐಕ್ಯತೆ, ಏಕತೆ ಮತ್ತು ಅಖಂಡತೆ ಬಗ್ಗೆ, ದೇಶದ ಅಭಿವೃದ್ದಿಯಲ್ಲಿ ನಮ್ಮ ಜವಾಬ್ದಾರಿ ಕರ್ತವ್ಯಗಳನ್ನು ನಿರ್ವಹಿಸುವ ಬಗ್ಗೆ ಜನತೆಯ ಸಹಕಾರದ ಪ್ರಾಮುಖ್ಯತೆ ತಿಳಿಸಿದರು.

ಸಂಘದ ಮಾಜಿ ಅಧ್ಯಕ್ಷ ಜೆ.ಆರ್.ವಾಸುದೇವ ಮಾತನಾಡಿ, ದೇಶದಲ್ಲಿ ಮೂಲಸೌಕರ್ಯಗಳನ್ನು ಒದಗಿಸುವಲ್ಲಿ ಸರ್ಕಾರ ಹೆಚ್ಚಿನ ಸಾಧನೆ ಮಾಡುತ್ತಿದೆ. ಪ್ರಜೆಗಳಾದ ನಾವು ಸಂವಿಧಾನದ ಹಕ್ಕು, ಜವಾಬ್ದಾರಿಯನ್ನು ಅರಿಯುವಲ್ಲಿ ನಾವು ತುಂಬಾ ಹಿಂದಿದ್ದೇವೆ. ದೇಶದ ಅಭಿವೃದ್ಧಿಯಲ್ಲಿ ಮುಂದಿನ ಪೀಳಿಗೆಗೆ ತಿಳಿಹೇಳುವ ಜವಾಬ್ದಾರಿ ನಮ್ಮ ಮೇಲಿದೆ. ಯುವಜನರನ್ನು ದೇಶಭಿಮಾನದ ಕಡೆ ಸೆಳೆಯುವ ಪ್ರಯತ್ನವಾಗಬೇಕಿದೆ ಎಂದರು.

Chamber of Commerce Shivamogga ಸಂಘದ ಉಪಾಧ್ಯಕ್ಷ ಜಿ.ವಿಜಯಕುಮಾರ್, ಕಾರ್ಯದರ್ಶಿಎ.ಎಂ.ಸುರೇಶ್, ಖಜಾಂಚಿ ಆರ್.ಮನೋಹರ, ಮಾಜಿ ಅಧ್ಯಕ್ಷ ಕೆ.ವಿ.ವಸಂತ್‌ಕುಮಾರ್, ಟಿ.ಆರ್.ಆಶ್ವಥ್‌ನಾರಾಯಣ ಶೆಟ್ಟಿ, ಜೆ.ಆರ್.ವಾಸುದೇವ, ಡಿ.ಎಸ್.ನಟರಾಜ್, ನಿರ್ದೇಶಕರಾದ ಎಸ್.ಎಸ್.ಉದಯಕುಮಾರ್, ಪಿ.ರುದ್ರೇಶ್, ಪ್ರದೀಪ್ ವಿ.ಎಲಿ, ಗಣೇಶ ಎಂ.ಅಂಗಡಿ, ವಿನೋದ್‌ಕುಮಾರ್ ಜೈನ್, ಕೆ.ಎನ್.ರಾಜಶೇಖರ್, ಬಿ.ಸುರೇಶ್ ಕುಮಾರ್, ಸಂಯೋಜಿತ ಸಂಘ ಸಂಸ್ಥೆಗಳ ಪದಾಧಿಕಾರಿಗಳಾದ ಉಮೇಶ್ ಶಾಸ್ತ್ರಿ, ಪ್ರಶಾಂತ್ ಶಾಸ್ತ್ರಿ, ಎಂ.ಸಿ.ದೇವರಾಜ್, ಶಿವರಾಜ್ ಉಡುಗಣಿ, ಚಂದ್ರಶೇಖರ್ ಉಪಸ್ಥಿತರಿದ್ದರು.

Bharat Scouts and Guides ವಿಶ್ವದ ಎಲ್ಲ ರಾಷ್ಟ್ರಗಳಿಗೂ ಮಾದರಿ ನಮ್ಮ ಸಂವಿಧಾನ : ಶಕುಂತಲಾ ಚಂದ್ರಶೇಖರ್

0

Bharat Scouts and Guides ಭಾರತದ ಸಂವಿಧಾನ ಎಲ್ಲ ರಾಷ್ಟ್ರಗಳಿಗೂ ಮಾದರಿಯಾಗಿದೆ ಎಂದು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಪ್ರಧಾನ ಆಯುಕ್ತೆ ಶಕುಂತಲಾ ಚಂದ್ರಶೇಖರ್ ಹೇಳಿದರು.

ನಗರದ ಸ್ಕೌಟ್ಸ್ ಭವನದ ಆವರಣದಲ್ಲಿ ಆಯೋಜಿಸಿದ್ದ 77ನೇ ಗಣರಾಜ್ಯೋತ್ಸವ ಸಮಾರಂಭದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ಸಂವಿಧಾನದ ಆಶಯದಂತೆ ನಾವೆಲ್ಲರೂ ನಡೆದುಕೊಳ್ಳಬೇಕು. ನಮ್ಮ ಸಂವಿಧಾನ ಶಿಲ್ಪಿ ಡಾ. ಬಿ.ಆರ್.ಅಂಬೇಡ್ಕರ್ ಅವರು ರಚಿಸಿದ ಸಂವಿಧಾನ ಇಂದಿಗೂ ಸಹ ತುಂಬಾ ಪ್ರಸ್ತುತವಾಗಿದೆ. ನಮ್ಮ ದೇಶಕ್ಕಾಗಿ ದುಡಿದ ಮಹನೀಯರನ್ನು ಸದಾ ಸ್ಮರಿಸಬೇಕು ಎಂದು ತಿಳಿಸಿದರು.

ಆಯುಕ್ತ ಕೆ.ರವಿ ಮಾತನಾಡಿ, ಮಕ್ಕಳಲ್ಲಿ ರಾಷ್ಟ್ರ ಪ್ರೇಮ ಹಾಗೂ ಇತಿಹಾಸದ ಬಗ್ಗೆ ಅರಿವು ಮೂಡಿಸುವ ಅಗತ್ಯತೆ ಇದೆ. ನಮ್ಮ ರಾಷ್ಟ್ರ ಸುವ್ಯವಸ್ಥಿತವಾಗಿ ಆಡಳಿತ ನಡೆಯುತ್ತಿದೆ. ಇದಕ್ಕೆ ನಮ್ಮ ದೇಶದ ಸಂವಿಧಾನವೇ ಕಾರಣ. ಎಲ್ಲರೂ ಸಂವಿಧಾನವನ್ನು ಗೌರವಿಸೋಣ ಎಂದು ತಿಳಿಸಿದರು.

Bharat Scouts and Guides ಸಮಾರಂಭದಲ್ಲಿ ಮಕ್ಕಳಿಂದ ಪೆರೇಡ್ ಹಾಗೂ ಕವಾಯತು ನಡೆಯಿತು. ಸಮಾರಂಭದಲ್ಲಿ ಸ್ಕೌಟ್ಸ್ ಆಯುಕ್ತ ಎಸ್.ಜಿ.ಆನಂದ್, ಕೇಂದ್ರ ಸ್ಥಾನಿಕ ಆಯುಕ್ತ ಜಿ.ವಿಜಯಕುಮಾರ್, ಗೈಡ್ ಆಯುಕ್ತೆ ಲಕ್ಷ್ಮೀ ಕೆ.ರವಿ, ಜಿಲ್ಲಾ ಕಾರ್ಯದರ್ಶಿ ಚಂದ್ರಶೇಖರಯ್ಯ, ಜಂಟಿ ಕಾರ್ಯದರ್ಶಿ ವೈ.ಆರ್.ವೀರೇಶಪ್ಪ, ಸ್ಥಳೀಯ ಸಂಸ್ಥೆ ಕಾರ್ಯದರ್ಶಿ ರಾಜೇಶ್ ಅವಲಕ್ಕಿ, ದೊರೆ, ಚೇತನ್ ರಾಯನಹಳ್ಳಿ, ಪರಮೇಶ್ವರ್, ಚುಡಾಮಣಿ ಪವಾರ್, ರುದ್ರಪ್ಪ ಚೀಲೂರ್, ಚಂದ್ರಶೇಖರ್, ಕೃಷ್ಣಸ್ವಾಮಿ, ಜಿಲ್ಲಾ ಹಾಗೂ ಸ್ಥಳೀಯ ಸಂಸ್ಥೆ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಶಿಕಾರಿಪುರದಲ್ಲಿ ರಾಷ್ಟ್ರಮಟ್ಟದ ಕುಸ್ತಿ ಪಂದ್ಯಾವಳಿ

0

ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಸವಿ ನೆನಪಿಗಾಗಿ ಮೂರನೇ ಬಾರಿಗೆ ರಾಷ್ಟ್ರ ಮಟ್ಟದ 25 ಜೋಡಿ ಕುಸ್ತಿ ಪಂದ್ಯಾವಳಿಗಳನ್ನು ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಎಂ ಶ್ರೀಕಾಂತ್ ರವರು ಉದ್ಘಾಟಿಸಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದರು

ಈ ಕುಸ್ತಿ ಪಂದ್ಯಾವಳಿಗೆ ಹಲವು ರಾಜ್ಯಗಳಿಂದ ಹೆಸರಾಂತ ಪೈಲ್ವಾನ್ ಗಳು ಕುಸ್ತಿ ಪಂದ್ಯಾವಳಿಗೆ ಭಾಗವಹಿಸಿದ್ದರು ಇದರ ಅಧ್ಯಕ್ಷತೆಯನ್ನು ಸಂದೀಪ್ ರವರು ವಹಿಸಿದರು

ಈ ಸಂದರ್ಭದಲ್ಲಿ ಕೆಪಿಸಿಸಿ ಕಾರ್ಯದರ್ಶಿಯಾದ ಗೋಣಿ ಮಾಲ್ತೇಶ್ ರವರು, ಕಾಂಗ್ರೆಸ್ ಯುವ ಮುಖಂಡರಾದ ವಿನಯ್ ತಾಂಡ್ಲೆ, ಗ್ಯಾರೆಂಟಿ ಯೋಜನೆ ಸದ್ಯಸರದ ಬಸವ,ಕರ್ಕುಚಿ ಲೋಕೇಶ್,ಪುರಲೆ ಮಂಜು,ಮೋಹನ್, ಹಾಗು ಶಿಕಾರಿಪುರದ ಹಲವು ನಾಯಕರು ಮುಖಂಡರುಗಳು ಭಾಗಿಯಾಗಿದ್ದರು.

ಗಣರಾಜ್ಯೋತ್ಸವದ ಅಂಗವಾಗಿ ಮೊಬೈಲ್ ರಿಪೇರ್ ಸಂಘದ ವತಿಯಿಂದ ಸಿಹಿ ಹಚ್ಚುವ ಕಾರ್ಯಕ್ರಮ

0

ಗಣರಾಜ್ಯೋತ್ಸವ ಕಾರ್ಯಕ್ರಮದ ಅಂಗವಾಗಿ ಮೊಬೈಲ್ ರಿಪೇರ್ ಸಂಘದ ವತಿಯಿಂದ ಸಿಹಿ ಹಚ್ಚುವ ಕಾರ್ಯಕ್ರಮ ಹಮ್ಮಿ ಕೊಳ್ಳಲಾಗಿತ್ತು.

ದಿನಾಂಕ 26/1/26 ಸೋಮವಾರ ಬೆಳಿಗ್ಗೆ 11.30 ಕೇ ಶಿವಮೊಗ್ಗ ನಗರದ ಶಿವಪ್ಪ ನಾಯಕ ಸರ್ಕಲ್ ಬಳಿ ಕಾರ್ಯಕ್ರಮ ನಡೆಸಲಾಯ್ತು .
ಈ ಸಂದರ್ಭದಲ್ಲಿ ಕನ್ನಡಪರ ಹೋರಾಟಗಾರರಿಗೆ ಹಾಗೂ ಪತ್ರಕರ್ತರಿಗೆ ಸನ್ಮಾನ ಮಾಡಲಾಯಿತು ಅದರಲ್ಲಿ ಕನ್ನಡ ಜನಮನ ರಕ್ಷಣಾ ವೇದಿಕೆ ರಾಜ್ಯಧ್ಯಕ್ಷರಾದ ಜನಾರ್ಧನ್ ಸಾಲಿಯಾನ್ ಮಲೆನಾಡ ಕನ್ನಡ ಪಡೆ ಜಿಲ್ಲಾಧ್ಯಕ್ಷರಾದ ಶ್ರುತಿ ಪ್ರಮೋದ್ ಪತ್ರಿಕಾ ವಿತರಕರ ಒಕ್ಕೂಟದ ಜಿಲ್ಲಾಧ್ಯಕ್ಷರಾದ ಮಾಲತೇಶ್ ಎನ್ ಹಾಗೂ ಪತ್ರಕರ್ತರಾದ ಅರವಿಂದ್ ರವರಿಗೂ ಸನ್ಮಾನ ಮಾಡಲಾಯಿತು.

ಗಣರಾಜ್ಯೋತ್ಸವದ ಅಂಗವಾಗಿ ದಿ ಒರಿಜಿನಲ್ ಆಭರಣ ಜ್ಯುವೆಲ್ಲರ್ಸ್ ಪೌರಕಾರ್ಮಿಕರಿಗೆ ಸನ್ಮಾನ

0

ದಿ ಒರಿಜಿನಲ್ ಆಭರಣ ಜ್ಯುವೆಲ್ಲರ್ಸ್ ಶಿವಮೊಗ್ಗ ಗಣರಾಜ್ಯೋತ್ಸವದ ಅಂಗವಾಗಿ ಪೌರಕಾರ್ಮಿಕರಿಗೆ ಆತ್ಮೀಯ ಸನ್ಮಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದಲ್ಲಿ ಶಿವಮೊಗ್ಗ ಶಾಖೆಯ ವ್ಯವಸ್ಥಾಪಕರಾದ ಶ್ರೀಯುತ ಗಣಪತಿ ಷಣೆ ರವರು ಹಾಗೂ ರಾಮಚಂದ್ರ ಭಟ್ ಉಪಸ್ಥಿತರಿದ್ದರು. ಶಿವಮೊಗ್ಗ ನಗರದ ನಗರಸಭೆಯ ಸುಮಾರು ಹತ್ತು ಜನ ಪೌರ ಕಾರ್ಮಿಕರಿಗೆ ಈ ಕಾರ್ಯಕ್ರಮಕ್ಕೆ ಆಹ್ವಾನಿಸಿ ಗೌರವಪೂರ್ವಕವಾಗಿ ಸನ್ಮಾನಿಸಿ ಹಾಗೂ ಆಭರಣ ಜ್ಯುವೆಲರ್ಸ್ ಸಂಸ್ಥೆಯ ಮುಮೆಂಟೊ ಕೊಡುವುದರ ಮೂಲಕ ಮತ್ತು ಬಂದ ಎಲ್ಲಾ ಪೌರಕಾರ್ಮಿಕರಿಗೆ ಗಿಫ್ಟ್ ವೋಚರ್ ಗಳನ್ನು ಕೊಡುವುದರ ಮೂಲಕ ಸನ್ಮಾನಿಸಲಾಯಿತು. ಹಾಗೂ ಶಾಖೆಯ ವ್ಯವಸ್ಥಾಪಕರು ಮಾತನಾಡಿ ಪ್ರತಿದಿನ ನಾವು ನಿದ್ದೆಯಿಂದ ಹೇಳುವ ಮುನ್ನವೇ ನಗರದ ರಸ್ತೆಯನ್ನು ಬಡಾವಣೆಗಳನ್ನು ಸ್ವಚ್ಛಗೊಳಿಸಿ ನಮ್ಮ ಆರೋಗ್ಯವನ್ನು ಕಾಪಾಡುವ ಮಹಾನ್ ವ್ಯಕ್ತಿಗಳೇ ಈ ಪೌರ ಕಾರ್ಮಿಕರು ಇವರು ಕೇವಲ ಸ್ವಚ್ಛತಾ ಕಾರ್ಮಿಕರಲ್ಲ.ಇವರು ಸಮಾಜದ ನಿಜವಾದ ಆರೋಗ್ಯ ಕಾವಲುಗಾರರು ಅಥವಾ ‘ವೈದ್ಯರು’ ಎಂದರೆ ತಪ್ಪಾಗಲಾರದು. ಎಂದು ಹೇಳುತ್ತಾ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲಾಯಿತು.

ಸೊರಬದಲ್ಲಿ ರಾಜ್ಯ ಮಟ್ಟದ ಹೋರಿ ಬೆದರಿಸುವ ಹಬ್ಬ

0

ಮಲೆನಾಡು ಭಾಗದ ರೈತರ ಹಬ್ಬವಾಗಿರುವ ಜನಪದ ಕ್ರೀಡೆ, ಸಾಂಪ್ರದಾಯಿಕ ರಾಜ್ಯ ಮಟ್ಟದ ಹೋರಿ ಬೆದರಿಸುವ ಹಬ್ಬ ಪಟ್ಟಣದ ಹೊರವಲಯದ ಹಳೇಸೊರಬ ಗ್ರಾಮದಲ್ಲಿ ಜರುಗಿತು.

ಗ್ರಾಮೀಣ ಪ್ರದೇಶಗಳಲ್ಲಿ ಹೋರಿ ಬೆದರಿಸುವ ಹಬ್ಬ ಮಹತ್ವವನ್ನು ಪಡೆದಿದ್ದು, ಅಖಾಡದಲ್ಲಿ ಹೋರಿಗಳು ಓಡಿ ಹೋಗುವುದನ್ನು ನೋಡಲು ತಾಲೂಕಿನ ವಿವಿಧ ಗ್ರಾಮಗಳು ಸೇರಿದಂತೆ ನೆರೆಯ ತಾಲೂಕು, ಜಿಲ್ಲೆಗಳಿಂದ ಭಾರಿ ಸಂಖ್ಯೆಯಲ್ಲಿ ಹೋರಿ ಪ್ರೀಯರು ಆಗಮಿಸಿದ್ದರು. ಅಖಾಡದಲ್ಲಿ ಪೈಲ್ವಾನರ ಕೈಗೆ ಸಿಗದಂತೆ ಹೋರಿಗಳು ಓಡಿ ಹೋಗುವ ದೃಶ್ಯ ನೋಡುಗರ ಮೈನವಿರೇಳಿಸಿತು.

ಹೋರಿಗಳ ಮಾಲೀಕರು ಹೋರಿಗಳಿಗೆ ವಿವಿಧ ಬಗೆಯ ಜೂಲಗಳನ್ನು ಹೊದಿಸಿ, ಬಣ್ಣ ಬಣ್ಣದ ಬಲೂನುಗಳು ಹಾಗೂ ಕೊಬ್ಬರಿ ಕಟ್ಟಿ ಶೃಂಗರಿಸಿದ್ದರು. ಅಖಾಡದಲ್ಲಿ ಪ್ರೀತಿಗಾಗಿ ಹಳೇಸೊರಬದ ಹುಚ್ಚ ರಾಕ್ ಸ್ಟಾರ್, ಎನ್.ಟಿ.ಸಿ. ಸಾಹುಕಾರ, ಕರ್ಜಿಗಿ ಜೂನಿಯರ್ ಪವರ್, ಮಾವಲಿ ಸುರಂಗ, ಮುಗಳಿಕೊಪ್ಪದ ಅಂಜನಾದ್ರಿ, ಕುಪಗಡ್ಡೆ ಬುಲೆಟ್, ಸಾರೆಕೊಪ್ಪ ಕಿಂಗ್, ಹರೂರು ಘಟಸರ್ಪ, ಆರ್.ಸಿ.ಬಿ. ಕಿಂಗ್ , ಕಣ್ಣೂರ್ ವಿಧೂರ, ಜಡೆ ಕೇಪೇಗೌಡ, ಗುಡಗಿನಕೊಪ್ಪ ಶ್ರೀ ಕೃಷ್ಣ, ಶಾಂತಗೇರಿ ಪೈಲ್ವಾನ್, ಸಿಗಂಧೂರ್ ಎಕ್ಸ್‌ಪ್ರೆಸ್‌, ಸೊರಬದ ರಾವಣ, ಮಲೆನಾಡು ಮಹಾರಾಜ, ಶಿರಾಳಕೊಪ್ಪ ಎಚ್.ಎಫ್. ಡಾನ್, ಅಂಬಿಗಾರ ಡಾನ್ ಸೇರಿದಂತೆ ವಿವಿಧ ಹೆಸರಿನ ಹೋರಿಗಳು ಓಡಿದವು.

ಯುವಕರು ಹೋರಿಗಳನ್ನು ಹಿಡಿದು ಬಲ ಪ್ರದರ್ಶಿಸಿದರೆ, ಜನತೆ ಅದನ್ನು ನೋಡಿ ರೋಮಾಂಚನಗೊಂಡರು. ಅಖಾಡದಲ್ಲಿ ತೇರಿನಂತೆ ಕಾಣುವ ಪೀಪಿ ಹೋರಿಗಳು ಓಡಿ ಬರುತ್ತಿದ್ದಂತೆ ನೆರೆದವರಿಂದ ಕೇಕೆ, ಶಿಳ್ಳೆ, ಚಪ್ಪಾಳೆಗಳು ಜೋರಾಗಿಯೇ ಕೇಳಿಬಂದಿತು.

ಹಳೇಸೊರಬದ ಶ್ರೀ ರಾಮೇಶ್ವರ ಯುವಕ ಸಂಘದವರು ಅಖಾಡದಲ್ಲಿ ಸುರಕ್ಷತೆಗೆ ಹೆಚ್ಚಿನ ಗಮನ ನೀಡಿದ್ದರು. ಅಖಾಡದಲ್ಲಿ ಎರಡು ಬದಿಯಲ್ಲಿ ಸುರಕ್ಷತಾ ಕ್ರಮ ಕೈಗೊಂಡು, ಕ್ರಮವಾಗಿ ಒಂದೊಂದೆ ಹೋರಿಗಳನ್ನು ಓಡಿಸಿದರು. ಇದರಿಂದ ಯಾವುದೇ ಅಪಾಯಗಳು ಸಂಭವಿಸಲಿಲ್ಲ. ಆಯೋಜಕರು ಉತ್ತಮ ರೀತಿಯಲ್ಲಿ ಸುರಕ್ಷತೆಗೆ ಗಮನ ನೀಡಿದ್ದರು. ಇದು ಸಾರ್ವಜನಿಕರ ಪ್ರಶಂಸೆಗೆ ಪಾತ್ರವಾಯಿತು. ಅಖಾಡದಲ್ಲಿ ಉತ್ತಮವಾಗಿ ಓಡಿದ ಹೋರಿಗಳು ಹಾಗೂ ಬಲ ಪ್ರದರ್ಶನ ತೋರಿದ ಯುವಕರನ್ನು ಗುರುತಿಸಲಾಯಿತು.

ಸೈಲ್-ವಿಐಎಸ್‌ಎಲ್‌ನಲ್ಲಿ ಗಣರಾಜ್ಯೋತ್ಸವ ದಿನಾಚರಣೆ

0

ವಿಐಎಸ್‌ಎಲ್ ಸಿಲ್ವರ್ ಜ್ಯೂಬಿಲಿ ಸ್ಟೇಡಿಯಂನಲ್ಲಿ ೨೬ನೇ ಜನವರಿ ೨೦೨೬ರಂದು ರಾಷ್ಟçದ ೭೭ನೇ ಗಣರಾಜ್ಯೋತ್ಸವವನ್ನು ಆಚರಿಸಲಾಯಿತು. ಕಾರ್ಯಪಾಲಕ ನಿರ್ದೇಶಕರಾದ ಶ್ರೀಯುತ ಅನುಪ್ ಕುಮಾರ್ ಅವರು ರಾಷ್ಟçಧ್ವಜ ಅನಾವರಣ ಮಾಡಿದರು.

ವಿಐಎಸ್‌ಎಲ್ ಸೆಕ್ಯುರಿಟಿ, ಎನ್.ಸಿ.ಸಿ, ಭದ್ರಾವತಿಯ ಪ್ರೌಢ ಮತ್ತು ಹಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳು ಪಥಸಂಚಲನದಲ್ಲಿ ಭಾಗವಹಿಸಿದ್ದರು.

ಲಿಟ್ಲಫ್ಲವರ್ ಹಿರಿಯ ಪ್ರಾಥಮಿಕ ಶಾಲೆ ಮತ್ತು ಸೈಂಟ್ ಚಾರ್ಲ್ಸ್ ಆಂಗ್ಲ ಪ್ರೌಢಶಾಲೆಯ ವಿದ್ಯಾರ್ಥಿಗಳು ರಾಷ್ಟ್ರೀಯ ಐಕ್ಯತೆ ಮತ್ತು ದೇಶಪ್ರೇಮ ವಿಷಯಗಳ ಕುರಿತು ವರ್ಣರಂಜಿತ ಸಾಂಸ್ಕೃತಿಕ ಕಾರ್ಯಕ್ರಮ ಪ್ರದರ್ಶಿಸಿದರು ಮತ್ತು ಸಮೂಹಗಾನ ಹಾಡಿದರು.

ವಿಐಎಸ್‌ಎಲ್ ಉದ್ಯೋಗಿಗಳು ಕಳೆದ ವರ್ಷದಲ್ಲಿ ಮಾಡಿದ ವಿಶೇಷ ಸಾಧನೆಗಾಗಿ ವಿಶೇಷ ಪ್ರಶಸ್ತಿ, ಜವಹಾರ್, ನೆಹರು ಮತ್ತು ಡಾ|| ಬಿ.ಆರ್. ಅಂಬೇಡ್ಕರ್ ಪ್ರಶಸ್ತಿಗಳನ್ನು ವಿತರಿಸಲಾಯಿತು. ಸಾಂಸ್ಕೃತಿಕ ಕಾರ್ಯಕ್ರಮ ತಂಡಗಳಿಗೆ ಹಾಗೂ ಮಿಕ್ಕ ಎಲ್ಲಾ ಪಥಸಂಚಲನ ತಂಡಗಳಿಗೆ ಈ ಸಂದರ್ಭದಲ್ಲಿ ಆಕರ್ಷಕ ಟ್ರೋಫಿಗಳನ್ನು ನೀಡಲಾಯಿತು. ವಿಐಎಸ್‌ಎಲ್ ಕಾರ್ಮಿಕರ ಸಂಘ ಮತ್ತು ವಿಐಎಸ್‌ಎಲ್ ಅಧಿಕಾರಿಗಳ ಸಂಘದ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿ ಸದಸ್ಯರು, ಇಸ್ಪಾತ್ ಮಹಿಳಾ ಸಮಾಜದ ಸದಸ್ಯರು, ಕಾರ್ಮಿಕರು, ಗುತ್ತಿಗೆ ಕಾರ್ಮಿಕರು, ಶಾಲಾ ಮಕ್ಕಳು, ಪೋಷಕರು, ಅಧ್ಯಾಪಕ ವೃಂದದವರು, ಭದ್ರಾವತಿಯ ನಾಗರೀಕರು ಕಾಯಕ್ರಮದಲ್ಲಿ ಭಾಗವಹಿಸಿದ್ದರು.

ಉಪ ಪ್ರಬಂಧಕರಾದ ಶ್ರೀ ಎಮ್. ಕೃಷ್ಣ, ಮತ್ತು ಆರ್. ಹರೀಶ್ ರವರು ಕಾರ್ಯಕ್ರಮವನ್ನು ನಿರೂಪಿಸಿದರು. ಈ ಕಾರ್ಯಕ್ರಮದ ಸಂಯೋಜನೆಯನ್ನು ಶ್ರೀ ನವೀನ್ ರಾಹುಲ್, ಉಪ ಮಹಾಪ್ರಬಂಧಕರು (ನಗರಾಡಳಿತ ಮತ್ತು ಸಾರ್ವಜನಿಕ ಸಂಪರ್ಕ) ಮಾಡಿದ್ದರು.