Thursday, September 17, 2026
Thursday, September 17, 2026
Home Blog Page 2119

ಹೊಸ ಶಿಕ್ಷಣ ನೀತಿಯಿಂದ, ಜಾಗತಿಕ ಗುಣಮಟ್ಟ

0

ಕುವೆಂಪು ವಿಶ್ವವಿದ್ಯಾಲಯದಲ್ಲಿ ನೂತನ ಶಿಕ್ಷಣ ಕುರಿತು ವಿಶ್ವವಿದ್ಯಾಲಯದ ಹಿರೇಮಠ ಸಭಾಂಗಣದಲ್ಲಿ ಒಂದು ದಿನದ ಕಾರ್ಯಾಗಾರವನ್ನು ಆಯೋಜಿಸಲಾಗಿತ್ತು.
ಹೊಸ ಶಿಕ್ಷಣ ನೀತಿಯ ಅನುಷ್ಠಾನದಲ್ಲಿ ಶಿಕ್ಷಣ ಸಂಸ್ಥೆ ಮತ್ತು ಶಿಕ್ಷಕರ ಪಾತ್ರ ಮಹತ್ತರವಾದದ್ದು, ಈ ರೀತಿಯ ಶಿಕ್ಷಣ ಕ್ಷೇತ್ರದಲ್ಲಿ ಬದಲಾವಣೆಯನ್ನು ತರಲಿದೆ ಅದಕ್ಕೆ ಸೂಕ್ತ ಕ್ರಮಗಳು ಅಗತ್ಯವಿದ್ದು, ನಮ್ಮಿಂದ ಅದು ಆರಂಭವಾಗಲಿ. 3 ದಶಕಗಳ ಬಳಿಕ ಕೇಂದ್ರ ಸರ್ಕಾರ ರೂಪಿಸಿರುವ ಮಹತ್ವಾಕಾಂಕ್ಷೆಯ ಶಿಕ್ಷಣ ನೀತಿ ಇದಾಗಿದೆ. ಭಾರತೀಯ ಶೈಕ್ಷಣಿಕ ವ್ಯವಸ್ಥೆಗೆ ಜಾಗತಿಕ ಗುಣಮಟ್ಟವನ್ನು ತಂದುಕೊಡಲಿದೆ ಎಂದು ಕುವೆಂಪು ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಬಿ.ಪಿ.ವೀರಭದ್ರಪ್ಪ ಅವರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.
ಕುವೆಂಪು ವಿಶ್ವವಿದ್ಯಾಲಯದ ಕುಲಸಚಿವೆ ಜಿ.ಅನುರಾಧ ಅವರು ‘ ನೂತನ ಶಿಕ್ಷಣ ನೀತಿಯನ್ನು ವಿಶ್ವವಿದ್ಯಾಲಯ ವ್ಯಾಪ್ತಿಯ ಪದವಿ ಕಾಲೇಜುಗಳಲ್ಲಿ ಅನುಷ್ಠಾನಗೊಳಿಸಲಾಗುತ್ತಿದ್ದು, ಯಾವುದೇ ರೀತಿಯ ಗೊಂದಲಗಳು ಉಂಟಾದಲ್ಲಿ ವಿಶ್ವವಿದ್ಯಾಲಯದ ಆಡಳಿತ ವ್ಯವಸ್ಥೆ ಸೂಕ್ತ ಕ್ರಮ ಕೈಗೊಳ್ಳಲಿದೆ ಎಂದರು.
ಭೂಗರ್ಭಶಾಸ್ತ್ರ ವಿಭಾಗದ ಪ್ರೊ. ಸೈಯದ್ ಅಶ್ಫಕ್ ಅಹಮ್ಮದ್ ಅವರು ನೂ ತನ ಶಿಕ್ಷಣ ನೀತಿಯಡಿ ವಿದ್ಯಾರ್ಥಿಗಳ ಪ್ರವೇಶ, ತರಗತಿಗಳು,ಪರೀಕ್ಷೆ, ಕ್ರೆಡಿಟ್ ಪಾಯಿಂಟ್ ಕುರಿತು ವಿವಿಧ ಕಾಲೇಜುಗಳಿಂದ ಆಗಮಿಸಿದ ಅಧ್ಯಾಪಕರುಗಳಿಗೆ ಸವಿಸ್ತಾರವಾಗಿ ಮಾಹಿತಿ ನೀಡಿದರು.
ಐಕ್ಯೂಎಸಿ ನಿರ್ದೇಶಕ ಪ್ರೊ. ಹೆಚ್. ಎಸ್.ಜಯಣ್ಣ, ವಿವಿಧ ಕಾಲೇಜುಗಳ ಪ್ರಾಂಶುಪಾಲರುಗಳು, ಅಧ್ಯಾಪಕರು ಕಾರ್ಯಗಾರದಲ್ಲಿ ಉಪಸ್ಥಿತರಿದ್ದರು.

ಎಂದಿನಂತೆ, ಬಿಎಂಟಿಸಿ ಬಸ್ ಸಂಚಾರ

0

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿ ಎಂ ಟಿ ಸಿ) ನಗರದ ವಿವಿಧ ಭಾಗಗಳಿಂದ ವಿಮಾನ ನಿಲ್ದಾಣಕ್ಕೆ ಎಸಿ ಬಸ್ ಗಳ ಸಂಖ್ಯೆಯನ್ನು ಕ್ರಮೇಣವಾಗಿ ಹೆಚ್ಚಿಸಲಾಗುತ್ತಿದೆ.
ರಾಜ್ಯದಲ್ಲಿ ಕೊರೋನಾ ಸೋಂಕಿತರ ಪ್ರಕರಣಗಳು ಕಡಿಮೆಯಾಗುತ್ತಿದ್ದಂತೆ, ಎಲ್ಲಾ ಜನ ಜೀವನ ಸ್ಥಿತಿಯು ಸಹಜ ರೀತಿಯಲ್ಲಿ ಮೊದಲಿನಂತಾಗಿದೆ. ಇದೇ ರೀತಿ ಸಾರಿಗೆ ಬಸ್ ಗಳ ಸಂಖ್ಯೆಯಲ್ಲೂ ಕ್ರಮೇಣವಾಗಿ ಹೆಚ್ಚಿಸಲಾಗುತ್ತಿದೆ.
ಕೊರೋನಾ ಕಾರಣದಿಂದಾಗಿ ಸಾರಿಗೆ ಸೇವೆಗಳನ್ನು ನಿರ್ಬಂಧಿಸಲಾಗಿತ್ತು. ಆದರೆ ಈಗ ಬೆಂಗಳೂರಿನ ಮಹಾನಗರ ಸಾರಿಗೆ ಸಂಸ್ಥೆ ನಗರದ ವಿವಿಧ ಭಾಗಗಳಿಂದ ವಿಮಾನ ನಿಲ್ದಾಣಕ್ಕೆ ಎಸಿ ಬಸ್ ಗಳ ಸಂಖ್ಯೆಯನ್ನು ಹೆಚ್ಚಿಸುತ್ತಿದೆ.

ಕೋವಿಡ್ -19ರ ಎರಡನೇ ಅಲೆಯ ಸಮಯದಲ್ಲಿ ಕಾರಣ, ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತು ನಗರದ ಇತರ ಭಾಗಗಳ ನಡುವೆ ಕಾರ್ಯನಿರ್ವಹಿಸುವ ಬಿಎಂಟಿಸಿ ಯ ಬಸ್ ಗಳನ್ನು ನಿಲ್ಲಿಸಲಾಗಿತ್ತು. ಆದರೆ ಈಗ ಮತ್ತೇ ಎಲ್ಲಾ ಸ್ಥಿತಿ ಸಹಜವಾಗಿರುವ ಕಾರಣ, ಹಿಂದಿನಿಂದ ಸಾರಿಗೆ ಸೇವೆಗಳು ಆರಂಭಗೊಳ್ಳಲಿದೆ. ಹಾಗೂ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕಾರ್ಯನಿರ್ವಹಿಸುವ ಬಸ್ ಗಳ ಸಂಖ್ಯೆಯನ್ನು 45 ರಿಂದ 58ಕ್ಕೆ ಹೆಚ್ಚಿಸಲಾಗಿದೆ.

‘ನಾವು ಬೇಡಿಕೆಗೆ ಅನುಗುಣವಾಗಿ ಸಂಖ್ಯೆಯನ್ನು ಹೆಚ್ಚಿಸುತ್ತೇವೆ ‘ ಎಂದು ಹಿರಿಯ ಬಿಎಂಟಿಸಿ ಅಧಿಕಾರಿಯೊಬ್ಬರು ಮಾಧ್ಯಮ ದಾರರಿಗೆ ತಿಳಿಸಿದರು.

ರಜನಿ ಕ್ಷೇಮವಿದ್ದಾರೆ ವದಂತಿ ನಂಬಬೇಡಿ

ಸೂಪರ್ ಸ್ಟಾರ್ ನಟ ರಜನಿಕಾಂತ್ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಅವರನ್ನು ಆಸ್ಪತ್ರೆಗೆ ದಾಖಲು ಮಾಡಿರುವ ಸುದ್ದಿ ತಿಳಿಯುತ್ತಿದ್ದಂತೆಯೇ ಅಭಿಮಾನಿಗಳು ಅಪಾರ ಸಂಖ್ಯೆಯಲ್ಲಿ ಚೆನ್ನೈ ಆಸ್ಪತ್ರೆಗೆ ಆಗಮಿಸುತ್ತಿದ್ದರು.
ಈಗಾಗಲೇ ಸಾಕಷ್ಟು ಬಾರಿ ಆಸ್ಪತ್ರೆಗೆ ದಾಖಲಾಗಿದ್ದ ರಜನಿಕಾಂತ್ ಅವರ ಆರೋಗ್ಯದ ಬಗ್ಗೆ ನಾನಾ ವದಂತಿಗಳು ಹರಿದಾಡುತ್ತಿವೆ. ಈ ಹಿನ್ನೆಲೆಯಲ್ಲಿ ರಜನಿಕಾಂತ್ ಅವರು ಸ್ಪಷ್ಟನೆ ನೀಡಿದ್ದು, “ರಜನಿಕಾಂತ್ ಕ್ಷೇಮವಾಗಿದ್ದಾರೆ. ಅವರ ಆರೋಗ್ಯದ ಬಗ್ಗೆ ಹರಿದಾಡುತ್ತಿರುವ ವದಂತಿಗಳನ್ನು ನಂಬಬೇಡಿ “ಎಂದು ಹೇಳಿದ್ದಾರೆ.
ಕೆಲವು ದಿನಗಳ ಹಿಂದಷ್ಟೇ ರಜನಿಕಾಂತ್ ಅವರು ದೆಹಲಿಯಲ್ಲಿ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರಿಂದ ಪ್ರತಿಷ್ಠಿತ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಸ್ವೀಕರಿಸಿದ್ದರು.

ರಿಪ್ಪನ್ ಪೇಟೆಯಲ್ಲಿ “ಅಪ್ಪು”ಗೆ ಗೌರವ ನಮನ

0

ನಟ ಪುನಿತ್ ರಾಜ್ ಕುಮಾರ್ ನಿನ್ನೆ ಅಕಾಲಿಕ ನಿಧನರಾದ್ದಾರೆ.ಈ ಹಿನ್ನೆಲೆಯಲ್ಲಿ ಶಿವಮೊಗ್ಗ ಜಿಲ್ಲೆಯ ರಿಪ್ಪನ್ ಪೇಟೆಯಲ್ಲಿ ಅಂಗಡಿ ಮುಂಗಟ್ಟು ಬಂದ್ ಮಾಡಿ ಅಗಲಿದ ನಟನಿಗೆ ಗೌರವ ನಮನ ಸಲ್ಲಿಸಲಾಗಿದೆ.

ರಿಪ್ಪನ್ ಪೇಟೆಯಲ್ಲಿ ಔಷಧಿ ಮಳಿಗೆಗಳನ್ನು ಹೊರತು ಪಡಿಸಿ ಉಳಿದೆಲ್ಲ ಮಳಿಗೆಗಳು, ವ್ಯಾಪಾರ ವಹಿವಾಟುಗಳನ್ನು ಸ್ಥಗಿತಗೊಳಿಸಲಾಗಿದೆ. ಮಧ್ಯಾಹ್ನದವರೆಗೆ ಎಲ್ಲಾ ಅಂಗಡಿಗಳನ್ನು ಬಂದ್ ಮಾಡಲಾಗುವುದು ಎಂಬ ಮಾಹಿತಿ ಲಭ್ಯವಾಗಿದೆ.
ವಾಹನ ಸಂಚಾರ, ಬಸ್ಸುಗಳ ಓಡಾಟಕ್ಕೆ ಯಾವುದೆ ಅಡ್ಡಿಯಾಗಿಲ್ಲ. ರಿಪ್ಪನ್ ಪೇಟೆ ಸರ್ಕಲ್’ನಲ್ಲಿ ಪುನಿತ್ ರಾಜ್ ಕುಮಾರ್ ಭಾವಚಿತ್ರಕ್ಕೆ ಹೂವು ಹಾಕಿ ಗೌರವ ಸಲ್ಲಿಸಲಾಗಿದೆ.

ಕುಪ್ಪಳಿಯಲ್ಲಿ ಸಮಾಜವಾದಿ ಅಧ್ಯಯನ ಶಿಬಿರ

0

ಕುಪ್ಪಳ್ಳಿಯ ಶತಮಾನೋತ್ಸವ ಭವನದ ಹೇಮಾಂಗಣದಲ್ಲಿ ಇಂದು ಮತ್ತು ನಾಳೆ ಪರ್ಯಾಯ ಜೀವನ ಪದ್ಧತಿ ವಿಷಯವಾಗಿ ಸಮಾಜವಾದಿ ಅಧ್ಯಯನ ಶಿಬಿರ ಆಯೋಜಿಸಲಾಗಿದೆ.

ಲೋಹಿಯಾ ಜನ್ಮಶತಾಬ್ದಿ ಪ್ರತಿಷ್ಠಾನ ಹಾಗೂ ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನ ಸಹೋದ್ಯೋಗ ಸಹಯೋಗದಲ್ಲಿ ಈ ಶಿಬಿರ ನೆರವೇರಲಿದೆ. ಇಂದು ಬೆಳಿಗ್ಗೆ ಬೆಂಗಳೂರಿನ ಗಾಂಧಿ ಸ್ಮಾರಕ ನಿಧಿ ಕಾರ್ಯಕಾರಿ ಸಮಿತಿ ಸದಸ್ಯ ಪ್ರೊ.ಜಿ. ಬಿ. ಶಿವರಾಜ್ ಉದ್ಘಾಟಿಸಿದರು. ಬೆಂಗಳೂರಿನ ಎಂ.ಚಂದ್ರಶೇಖರ ಪ್ರತಿಷ್ಠಾನದ ಎಂಸಿ ನರೇಂದ್ರ ಅಧ್ಯಕ್ಷತೆ ವಹಿಸಿದ್ದರು. ಡಾ. ಸಂಜೀವ್ ಕುಲಕರ್ಣಿ ಆಹಾರ ಮತ್ತು ಆರೋಗ್ಯ ಪದ್ಧತಿ ಕುರಿತು ಮಾತನಾಡಿದ್ದಾರೆ. ಇಂದು ಮಧ್ಯಾಹ್ನ 3 ಗಂಟೆಗೆ ಮೇಲುಕೋಟೆಯ ಕಾರ್ಯಕರ್ತ ಸಂತೋಷ್ ಕೌಲಗಿ ಸಹಕಾರ ಮತ್ತು ಸಹಬಾಳ್ವೆ ವಿಷಯವಾಗಿ ಮಾತನಾಡಲಿದ್ದಾರೆ.
ನಾಳೆ ಮೈಸೂರಿನ ಕಲಾವಿದ ಸಚ್ಚಿದಾನಂದ ಅವರು ಚರಕ ಬಳಕೆ ಕುರಿತು ಮಾಹಿತಿ ನೀಡುವರು. ಶಿರಸಿಯ ಪರಿಸರ ಕಾರ್ಯಕರ್ತ ಕೇಶವ ಕೋರ್ಸೆ ಅವರು ಜೀವನ ಪದ್ಧತಿ ಮತ್ತು ಶಿಕ್ಷಣ ತರಬೇತಿಯ ಕುರಿತು ಮಾಹಿತಿ ನೀಡುತ್ತಾರೆ. ಪ್ರತಿ ಗೋಷ್ಠಿ ಮುಕ್ತಾಯದ ನಂತರ ಚರ್ಚೆ ಇರುತ್ತದೆ. ಕುವೆಂಪು ಪ್ರತಿಷ್ಠಾನದ ಸಮ ಕಾರ್ಯದರ್ಶಿ ಕಡಿದಾಳು ಪ್ರಕಾಶ್ ರವರ ಅಧ್ಯಕ್ಷತೆಯಲ್ಲಿ ಶಿಬಿರಾರ್ಥಿಗಳ ಪ್ರತಿಕ್ರಿಯೆ ಗೋಷ್ಠಿ ಹಾಗೂ ಸಮಾರೋಪ ನಡೆಯಲಿದೆ.

ಬದಲಾದ ಫೇಸ್ ಬುಕ್ ಬ್ರಾಂಡ್ ನೇಮ್

0

ಸಾಮಾಜಿಕ ಜಾಲತಾಣ ಫೇಸ್ಬುಕ್ ನನ್ನ ಬ್ರಾಂಡ್ ಗೆ ಹೊಸ ಹೆಸರನ್ನು ‘ಮೆಟಾ’ ಎಂದು ಬದಲಿಸಿದೆ. ಈ ಮೊದಲು ಫೇಸ್ ಬುಕ್ ಬ್ರಾಂಡ್ ಹೆಸರು ಕೂಡ ಫೇಸ್ ಬುಕ್ ಆಗಿತ್ತು. ಮೆಟಾವರ್ಸ್ ಎನ್ನುವುದು ಕಂಪ್ಯೂಟರೀಕೃತ ತಂತ್ರಜ್ಞಾನ ಸ್ಪೇಸ್ ಆಗಿದ್ದು, ಬಳಕೆದಾರರು ಈ ವರ್ಚುವಲ್ ರಿಯಾಲಿಟಿಯನ್ನು ಬಳಸಬಹುದಾಗಿದೆ.
ಬ್ರಾಂಡ್ ಹೆಸರು ಬದಲಾಗಿರುವುದರಿಂದ ಬಳಕೆದಾರರು ತಮ್ಮ ಪೋಸ್ಟ್ಗಳನ್ನು ವಿಡಿಯೋಗಳನ್ನು , ಹಂಚಲು ಬಳಸುವ ಫೇಸ್ ಬುಕ್ ಹೆಸರು ಬದಲಾಗುವುದಿಲ್ಲ. ಇನ್ಸ್ಟಾಗ್ರಾಮ್, ಮೆಸೆಂಜರ್ ಹಾಗೂ ವಾಟ್ಸಪ್ ಹೆಸರೂ ಬದಲಾಗುವುದಿಲ್ಲ.
ಆದರೆ ಡಿಸೆಂಬರ್ ಒಂದರಿಂದ ಕಂಪನಿಯ ಷೇರು ಎಂವಿಆರ್ ಎಸ್ ಎಂಬ ಹೊಸ ಸಂಕ್ಷಿಪ್ತ ಹೆಸರಲ್ಲಿ ಗುರುತಿಸಿಕೊಳ್ಳಲಿದೆ ಎಂದು ಫೇಸ್ ಬುಕ್ ತಿಳಿಸಿದೆ.
ಫೇಸ್ ಬುಕ್ ಭವಿಷ್ಯದಲ್ಲಿ ತನ್ನ ಬೆಳವಣಿಗೆಗೆ ವರ್ಚುವಲ್ ಡಿಜಿಟಲ್ ತಂತ್ರಜ್ಞಾನವನ್ನು ವ್ಯಾಪಕವಾಗಿ ಅಳವಡಿಸಿಕೊಳ್ಳಲಿದೆ. ಈ ನಿಟ್ಟಿನಲ್ಲಿ ಬ್ರಾಂಡ್ ಗೆ ಹೊಸ ರೂಪ ನೀಡಲಾಗಿದೆ ಎಂದು ಫೇಸ್ ಬುಕ್ ನ ಸಿಇಒ ಮಾರ್ಕ್ ಜುಕರ್ ಬರ್ಕ್ ತಿಳಿಸಿದ್ದಾರೆ.

ರಾಜ್ಯದ ಸಾರಿಗೆ ಸೇವೆ : ನಂ.1ರಿಂದ ಆನ್ ಲೈನ್ ಆಗಲಿದೆ

0

ಕರ್ನಾಟಕ ಆಡಳಿತ ಸುಧಾರಣಾ ಆಯೋಗ -2ರ ಶಿಫಾರಸು ಹಾಗೂ ಕೇಂದ್ರ ಸರ್ಕಾರದ ನಿರ್ದೇಶನ ನಿಯಮಾವಳಿಗಳನ್ವಯ ಆಯ್ದ 30 ಪ್ರಮುಖ ಸೇವೆಗಳನ್ನು ಆನ್ ಲೈನ್ ನಲ್ಲೇ ಜನರಿಗೆ ಒದಗಿಸಲು ಸಾರಿಗೆ ಇಲಾಖೆ ಸಿದ್ಧತೆ ನಡೆಸಿದೆ. ಎನ್ಐಸಿ ಸಹಯೋಗದಲ್ಲಿ ಅಗತ್ಯ ವ್ಯವಸ್ಥೆ ಕಲ್ಪಿಸುವ ಕಾರ್ಯ ನಡೆಯುತ್ತಿದೆ. ಸದ್ಯದಲ್ಲೇ ಅಂತಿಮ ರೂಪ ಪಡೆಯಲಿದ್ದು, ಭ್ರಷ್ಟಾಚಾರ ಮುಕ್ತ ಸೇವೆ ಸಿಗುವ ನಿರೀಕ್ಷೆ ಮೂಡಿಸಿದೆ.
ಸಾರಿಗೆ ಇಲಾಖೆ ಸೇವೆಯನ್ನು ಸಾಧ್ಯವಾದಷ್ಟು ಸುಲಭ, ಸರಳ ಹಾಗೂ ಭ್ರಷ್ಟಾಚಾರ ಮುಕ್ತವಾಗಿ ಒದಗಿಸುವ ನಿಟ್ಟಿನಲ್ಲಿ ಹೊಸ ಪ್ರಯತ್ನ ನಡೆಸಲಾಗುತ್ತಿದೆ. “
ಆಡಳಿತ ಸುಧಾರಣಾ ಆಯೋಗ-2ರ ಶಿಫಾರಸು ಕೇಂದ್ರ ಸರ್ಕಾರದ ಮಾರ್ಗಸೂಚಿಗಳನ್ನು ಗಮನದಲ್ಲಿಟ್ಟುಕೊಂಡು ಆಯ್ದ 30 ಸೇವೆಗಳನ್ನು ಆನ್ ಲೈನ್ ಮೂಲಕ ಒದಗಿಸಲು ಪ್ರಯತ್ನ ನಡೆದಿದೆ “ಎಂದು ಸಾರಿಗೆ ಇಲಾಖೆ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಕುಮಾರ್ ಕಟಾರಿಯಾ ತಿಳಿಸಿದ್ದಾರೆ.
ರಾಜ್ಯದಲ್ಲಿ ಸಾರಿಗೆ ಇಲಾಖೆಯು 47 ಬಗೆಯ ಸೇವೆ ಒದಗಿಸುತ್ತಿದೆ. ಸಾರಿಗೆ ಇಲಾಖೆ ಸೇವೆಗಾಗಿ ವರ್ಷವಿಡಿ 50 ಲಕ್ಷಕ್ಕೂ ಹೆಚ್ಚು ಜನ ಕಚೇರಿಗೆ ಭೇಟಿ ನೀಡುತ್ತಾರೆ ಎಂಬ ಅಂದಾಜು ಇದೆ. ಇಷ್ಟು ಜನರ ಸಮಯ, ಸಂಚಾರ, ವೆಚ್ಚಕ್ಕೆ ತಡೆ ಹಾಕಿ ಆಯ್ದ ಸೇವೆಗಳನ್ನು ಕುಳಿತಲ್ಲೇ ಪಡೆಯುವ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುವ ಪ್ರಯತ್ನಕ್ಕೆ ಮುಂದಾಗಿದೆ.
ವಾಹನದ ನೋಂದಣಿ ಪ್ರಮಾಣ ಪತ್ರದ (ಆರ್.ಸಿ) ಜೊತೆಗೆ ನೊಂದಣಿ ಸಂಖ್ಯೆ ಹಂಚಿಕೆ, ತಾತ್ಕಾಲಿಕ ನೊಂದಣಿ, ವಾಹನಗಳ ವರ್ಗಾವಣೆ, ಆರ್. ಸಿ ನಕಲು ಪ್ರತಿ, ಪ್ರಮಾಣಪತ್ರದಲ್ಲಿ ಬದಲಾವಣೆ, ಕಲಿಕೆ ಚಾಲನಾ ಪರವಾನಗಿ (ಎಲ್.ಎಲ್.) ವಿತರಣೆ, ಎಲ್.ಎಲ್.ನಲ್ಲಿ ಹೆಸರು ಅಥವಾ ವಿಳಾಸ ಬದಲಾವಣೆ, ಕಂಡಕ್ಟರ್ ಪರವಾನಗಿ /ನವೀಕರಣ ಸೇರಿದಂತೆ 5:30 ಸೇವೆಗಳು ನವೆಂಬರ್ ಒಂದರಿಂದ ಆನ್ ಲೈನ್ ನಲ್ಲಿ ಲಭ್ಯವಾಗಲಿವೆ.

ಸಾವಿನಲ್ಲೂ ಸಾರ್ಥಕತೆ ಮೆರೆದ “ಅಪ್ಪು”

ತಮ್ಮ ಮುಗ್ಧ ನಗುವಿನ ಮೂಲಕ ಅಸಂಖ್ಯಾತ ಅಭಿಮಾನಿಗಳನ್ನು ಗಳಿಸಿದ್ದ ನಟ ಪುನೀತ್ ರಾಜ್ ಕುಮಾರ್ ರವರು ನಿನ್ನೆ ಅಸುನೀಗಿದ್ದಾರೆ.
ಅವರಿಗೆ 46 ವರ್ಷ ವಯಸ್ಸಾಗಿತ್ತು. ಆರೋಗ್ಯದಲ್ಲಿ ಏರುಪೇರಾದ ಹಿನ್ನಲೆಯಲ್ಲಿ ನಟ ಪುನೀತ್ ರಾಜಕುಮಾರ್ ಅವರನ್ನು ಬೆಂಗಳೂರಿನ ವಿಕ್ರಂ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಹಲೋಕವನ್ನು ತ್ಯಜಿಸಿದ್ದಾರೆ.
ಪುನೀತ್ ರಾಜಕುಮಾರ್ ಅವರು ಬೆಳಿಗ್ಗೆಯಿಂದ ಜಿಮ್ ಗೆ ತೆರಳಿ, ಅಲ್ಲಿ ಎರಡು ಗಂಟೆ ವ್ಯಾಯಾಮ ಮಾಡಿದ್ದರು. ಆಗ ಎದೆಯಲ್ಲಿ ನೋವು ಕಾಣಿಸಿಕೊಂಡಿದ್ದರಿಂದ ಕುಟುಂಬದ ವೈದ್ಯರ ಬಳಿ ಹೋಗಿದ್ದರು.ಇಸಿಜಿ ಪರೀಕ್ಷೆ ನಡೆಸಿದಾಗ ಹೃದಯಘಾತ ಆಗಿರುವುದು ದೃಢಪಟ್ಟಿತ್ತು. ಹೆಚ್ಚಿನ ಚಿಕಿತ್ಸೆಗೆ ವಿಕ್ರಂ ಆಸ್ಪತ್ರೆಗೆ ಬರುವಾಗ ಮಾರ್ಗ ಮಧ್ಯದಲ್ಲಿಯೇ ಹೃದಯದ ಚುಟುವಟಿಕೆಗೆ ಸ್ತಬ್ಧವಾಗಿತ್ತು. ಹೃದಯವು ತುಂಬಾ ದುರ್ಬಲವಾಗಿತ್ತು. ಮೂರು ಗಂಟೆಗಳು ತಜ್ಞ ವೈದ್ಯರು ಚಿಕಿತ್ಸೆ ನೀಡಿದರೂ ಅವರ ದೇಹ ಚಿಕಿತ್ಸೆಗೆ ಸ್ಪಂದಿಸಲಿಲ್ಲ ಎಂದು ವಿಕ್ರಮ್ ಆಸ್ಪತ್ರೆ ಹೃದ್ರೋಗ ತನ್ನ ಡಾಕ್ಟರ್ ರಂಗನಾಥ್ ನಾಯಕ್ ತಿಳಿಸಿದ್ದಾರೆ.
ಪುನೀತ್ ರಾಜಕುಮಾರ್ ಅವರ ಅಕಾಲಿಕ ನಿಧನ ಕನ್ನಡ ಸಿನಿಮಾ ಲೋಕಕ್ಕೆ ಮಾತ್ರವಲ್ಲದೆ ಇಡೀ ಭಾರತೀಯ ಸಿನಿಮಾರಂಗಕ್ಕೆ ಆದ ನಷ್ಟವಾಗಿದೆ.
ಕುಟುಂಬದವರು, ಕೋಟ್ಯಾಂತರ ಅಭಿಮಾನಿಗಳು, ಬಂಧು ಮಿತ್ರರು, ಕಣ್ಣೀರು ಸುರಿಸುತ್ತಿದ್ದಾರೆ. ತಮ್ಮ ತಂದೆಯ ಹಾದಿಯಲ್ಲಿ ಸಾಗಿರುವ ಪುನೀತ್, ನೇತ್ರದಾನ ಮಾಡುವ ಮೂಲಕ ಸಾವಿನಲ್ಲಿಯೂ ಸಾರ್ಥಕತೆ ಮೆರೆದಿದ್ದಾರೆ. ಗಣ್ಯರು, ಚಿತ್ರರಂಗದವರು, ಕೋಟ್ಯಾಂತರ ಅಭಿಮಾನಿ ಬಳಗದವರು ಶೋಕದಲ್ಲಿ ಮುಳುಗಿದ್ದು, ಸಂತಾಪ ಸೂಚಿಸಿದ್ದಾರೆ.
ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಭಾನುವಾರ ಅಂತ್ಯಸಂಸ್ಕಾರ ಕ್ರಿಯೆ ಮಾಡಲಾಗುವುದು ಎಂದು ತಿಳಿದು ಬಂದಿದೆ. ಅಭಿಮಾನಿಗಳು ಶಾಂತ ರೀತಿಯಿಂದ ಪುನೀತ್ ಅವರನ್ನು ಕಳುಹಿಸಿ ಕೊಡಬೇಕೆಂದು ರಾಘವೇಂದ್ರ ರಾಜಕುಮಾರ್, ಸಿಎಂ ಬಸವರಾಜ್ ಬೊಮ್ಮಾಯಿ ಸೇರಿದಂತೆ ಹಲವರು ವಿನಂತಿ ಮಾಡಿದ್ದಾರೆ.

ಹಳ್ಳಿ ಹೃದಯದ ‘ಬಂಗಾರ’

0

ಶೀ ಎಸ್.ಕೆ ಶೇಷಚಂದ್ರಿಕ ಅವರು ನಾಡಿನ ಹಿರಿಯ ಮಾಧ್ಯಮ ತಜ್ಞರಲ್ಲಿ ಒಬ್ಬರಾಗಿದ್ದಾರೆ. ಭಾರತ ಸರ್ಕಾರದ ಕ್ಷೇತ್ರ ಪ್ರಚಾರ ಇಲಾಖೆ, ಆಕಾಶವಾಣಿ , ದೂರದರ್ಶನ, ಇಂತಹ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಸೇವೆ ಸಲ್ಲಿಸಿ ಅಪಾರ ಅನುಭವ ಹೊಂದಿದ್ದಾರೆ. ಹಿರಿಯ ಪತ್ರಕರ್ತರಾಗಿ ನಾಡಿನ ಪ್ರಮುಖ ದಿನ ಪತ್ರಿಕೆಗಳಲ್ಲಿ ಸೇವೆ ಸಲ್ಲಿಸಿಯೂ ಖ್ಯಾತಿಯನ್ನು ಪಡೆದಿದ್ದಾರೆ. ಆಕಾಶವಾಣಿಯಲ್ಲಿ ಬಾತ್ಮೀದಾರರಾಗಿ ಸಲ್ಲಿಸಿದ ವಿಶಿಷ್ಟ ಸೇವೆಗಾಗಿ ಭಾರತ ಸರ್ಕಾರವು ನೀಡುವ ಎಲ್.ಕೆ. ಶರ್ಮಾ ಪ್ರಶಸ್ತಿ ಪುರಸ್ಕೃತರಾಗಿದ್ದಾರೆ. ಪ್ರಸ್ತುತ ಈ ವರ್ಷ ಅವರಿಗೆ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘ ನೀಡುವ ಪಾಟೀಲ ಪುಟ್ಟಪ್ಪ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಇವರಿಗೆ ರಾಜ್ಯೋತ್ಸವ ಮತ್ತು ಮಾಧ್ಯಮ ಪ್ರಶಸ್ತಿಗಳನ್ನೂ ಸಹ ನೀಡಿ ಗೌರವಿಸಲಾಗಿದೆ. ಸಾರೆಕೊಪ್ಪ ಬಂಗಾರಪ್ಪ ನವರು ಮುಖ್ಯಮಂತ್ರಿಯವರಾಗಿದ್ದಾಗ ಇವರು ಮಾಧ್ಯಮ ಕಾರ್ಯಾದರ್ಶಿಯಾಗಿಯೂ ಸೇವೆ ಸಲ್ಲಿಸಿದ್ದಾರೆ. ಈ ಲೇಖನದಲ್ಲಿ ಬಂಗಾರಪ್ಪನವರೊಂದಿಗಿನ ಮಾನವೀಯ ಪ್ರಸಂಗದ ನೆನಪನ್ನು ಹಂಚಿಕೊಂಡಿದ್ದಾರೆ.

ಹಳ್ಳಿ ಹೃದಯದ ‘ಬಂಗಾರ’

ನಾಡಿನ ಜನತೆ ದಿವಂಗತ ಬಂಗಾರಪ್ಪ ನವರನ್ನು ಎಂದಿಗೂ ಮರೆಯುವಂತಿಲ್ಲ. ಕೃಷಿಕ ಸಮುದಾಯ ಅವರು ಕೈಗೊಂಡ ದಿಟ್ಟ ನಿರ್ಧಾರಕ್ಕೆ ಖುಣಿಯಾಗಿದೆ. ಇವರಂತಹ ಮಾನವೀಯ ಗುಣಗಳ ನಾಯಕ ಪುನಃ ಸಿಗುವುದು ಅಪರೂಪ. ನಾನು ಮುಖ್ಯಮಂತ್ರಿ ಬಂಗಾರಪ್ಪನವರ ಆಪ್ತ ಸಹಾಯಕರಲ್ಲಿ ಒಬ್ಬನಾಗಿದ್ದೆ. ಅವರ ಮಾಧ್ಯಮ ಕಾರ್ಯದರ್ಶಿಯಾಗಿದ್ದವನು. ಹೀಗಾಗಿ ಅವರ ಗುಣದೋಷಗಳನ್ನು ತಿಳಿದವನು. ಹೃದಯ ವೈಶಾಲ್ಯತೆಯಲ್ಲಿ ಬಂಗಾರಪ್ಪನವರು ಸಾಕ್ಷಾತ್ ದಾನಶೂರ ಕರ್ಣ. ಆದರೆ, ಅವರಲ್ಲಿದ್ದ ದೌರ್ಬಲ್ಯವೆಂದರೆ ಶೀಘ್ರಕೋಪ, ತಾಳ್ಮೆ ಕಡಿಮೆ. ಬೇರೆಯವರ ಮಾತು ಹಿಡಿಸದಿದ್ದರೆ ಕೂಡಲೇ ತಾಳ್ಮೆಗೆಡುವ ಸ್ವಭಾವ ಅವರದ್ದು.
ಬಂಗಾರಪ್ಪನವರು ಒಮ್ಮೆ ತಾಳ್ಮೆ ಕಳೆದುಕೊಂಡು ಮರುಘಳಿಗೆಯಲ್ಲೇ ಹೃದಯ ಶ್ರೀಮಂತಿಕೆ ತೋರಿದ ಪ್ರಸಂಗವನ್ನು ಹೇಳಬಯಸುತ್ತೇನೆ.
ಬಂಗಾರಪ್ಪನವರು ನಾಡಿನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿ ಸುಮಾರು ಐದು ತಿಂಗಳಾಗಿತ್ತು. ಒಂದು ದಿನ ಸಂಜೆ ನಡೆದ ಘಟನೆ ಇದು. ಕರ್ನಾಟಕದ ಮುಖ್ಯಮಂತ್ರಿಯ ಅಧಿಕೃತ ನಿವಾಸ “ಕಾವೇರಿ”ಯಲ್ಲಿ ನಡೆದ ಪ್ರಸಂಗ.
ಮುಖ್ಯಮಂತ್ರಿಯಾದರು ರಾಜಧಾನಿಯಲ್ಲಿ ಇದ್ದಾಗ ಸಂಜೆಯವರೆಗೂ ಬ್ಯಾಡ್ಮಿಂಟನ್ ಆಟ ಆಡುವುದು ಬಂಗಾರಪ್ಪನವರ ಖಾಯಂ ಹವ್ಯಾಸ. ಉತ್ತಮ ಕ್ರೀಡಾಪಟು ಅವರು.
ಅಂದೊಂದು ದಿನ ಬಂಗಾರಪ್ಪನವರ ಸ್ವಕ್ಷೇತ್ರ ಸೊರಬ ತಾಲೂಕಿನ ಕೆಲವು ಗ್ರಾಮಗಳ ಎರಡು ಬಸ್ ಜನ “ಕಾವೇರಿ” ಬಾಗಿಲಿಗೆ ಬಂದಿಳಿದರು. ಮುಂಚಿತವಾಗಿ ಮುನ್ಸೂಚನೆ ಕೊಡದೇ ತಮ್ಮ ಪ್ರೀತಿಯ ಬಂಗಾರಣ್ಣನನ್ನು ನೋಡಲು ಬೆಂಗಳೂರಿಗೆ ದಿಡೀರ್ ಬಂದಿಳಿದಿದ್ದರು. ಆಗಿನ್ನೂ ಮೊಬೈಲ್ ಇರಲಿಲ್ಲ. ಕನಿಷ್ಠ ಟೆಲಿಫೋನ್ ನಲ್ಲಿ ಕರೆ ಮಾಡಿ ಬರಬೇಕಿತ್ತು, ಮಲೆನಾಡಿನ ಮುಗ್ಧರು. ಮುಖ್ಯಮಂತ್ರಿಯನ್ನು ಕಾಣುವ ಉತ್ಸಾಹವೇ ಹೊರತು ‘ಶಿಷ್ಟಾಚಾರ’ ಏನೇನು ತಿಳಿಯದ ಅಮಾಯಕರು.
ಮುಖ್ಯಮಂತ್ರಿ ನಿವಾಸ ಕಾವೇರಿಯಲ್ಲಿ ಎಂದರೆ ಮುಂಭಾಗ ಹಾಗೂ ಎಡಬಲದಲ್ಲಿ ವ್ಯವಸ್ಥಿತವಾಗಿ ಬೆಳೆಸಿರುವ ಕೈತೋಟ. ವರ್ಷವಿಡಿ ಹಸಿರು ಕಂಗೊಳಿಸುವ ಪೊದೆಯಂತಹ ಗಿಡಗಳ ಉದ್ಯಾನ ಈ ಸದನ. ಮಲೆನಾಡಿಗರಿಗೆ ಇದು ಸಾಗರ -ಸೊರಬವಿದ್ದಂತೆ.
ಸಾಮಾನ್ಯವಾಗಿ ಸಂಜೆಯವರೆಗೂ ಆಟವಾಡಿ ಬಳಲಿ ಬೆವರು ಸುರಿಸಿದರೂ ಲವಲವಿಕೆ ಮತ್ತು ಹುರುಪಿನಿಂದ ಮನೆಗೆ ಹಿಂದಿರುಗುತ್ತಿದ್ದರು ಬಂಗಾರಪ್ಪ.
ಅವರ ಕ್ಷೇತ್ರದ ಜನ ಎರಡು ಬಸ್ಸುಗಳಿಂದ ಕಾವೇರಿಯಲ್ಲಿ ಇಳಿದಾಗ ಮುಖ್ಯಮಂತ್ರಿ ಇನ್ನೂ ಬಂದಿರಲಿಲ್ಲ. ಕಾಗದ ಪತ್ರಕ್ಕೆ ಸಹಿ ಹಾಕಿಸಿಕೊಳ್ಳಲು ಪತ್ರಿಕಾ ಕಾರ್ಯದರ್ಶಿಯಾದ ನಾನು ಮತ್ತು ನನ್ನ ಸಹೋದ್ಯೋಗಿ ನಟರಾಜ್ ಸಾಹೇಬರಿಗಾಗಿ ಕಾಯುತ್ತಿದ್ದೆವು.

Sarekoppa Bangarappa


ಆಗಷ್ಟೇ ಕಾವೇರಿ ಭವನದ ಒಳಗೆ ಬಂದಿದ್ದರು ಮುಖ್ಯಮಂತ್ರಿಯವರ ಕ್ಷೇತ್ರದ ಎರಡು ಬಸ್ ಜನ. ದೂರದಿಂದ ಬಂದವರು ಪ್ರಯಾಣದ ಆಯಾಸ. ಬಸ್ ಇಳಿದ ಕೂಡಲೇ ಕೈಕಾಲು ಝಾಡಿಸಿ ವಿಶ್ರಮಿಸಿ ಕೊಳ್ಳುವ ಮನಸ್ಸು. ಮಹಿಳೆಯರಿಗಂತೂ ಮಕ್ಕಳ ಮೂತ್ರ ವಿಸರ್ಜನೆ ಮಾಡಿಸುವ ಕಾತುರ. ಜೊತೆಗೆ ಜಲಭಾದೆ ಅವಸರ.
ಇದೇ ಸಮಯಕ್ಕೆ ಮುಖ್ಯಮಂತ್ರಿಯವರ ಕಾರು ಕಾವೇರಿ ಪ್ರವೇಶಿಸಿತ್ತು. ಗಿಡಗಳ ಮತ್ತೆ ಪ್ರಕೃತಿ ಕರೆಗಾಗಿ ನಿಂತ ಕುಳಿತ ಹಳ್ಳಿಗರು. ಯಾರನ್ನು ತಡೆಯುವಂತಿಲ್ಲ. ತಡೆದರೂ ನಡೆಯುವಂತಿಲ್ಲ.
ಬಂಗಾರಪ್ಪನವರಿಗೆ ಈ ದೃಶ್ಯ ಕಂಡು ಎಲ್ಲಿಲ್ಲದ ಕೋಪ ಉಕ್ಕಿ ಬಂತು. ಅವರದ್ದು ತಪ್ಪಿಲ್ಲ ಮುಖ್ಯಮಂತ್ರಿಯ ಮನೆಯ ಮುಂದೆ ನಡೆಯಬಾರದ ಘಟನೆ ನಡೆದಿದ್ದೆಲ್ಲ ಕಂಡು ಬಂಗಾರಪ್ಪನವರು ಸಿಂಹ ಆವಾಹನೆಯಾದಂತೆ ಗರ್ಜಿಸಿದ್ದರು. ಕೆಂಡವಾದರು ಅವರು ಯಾರೂ ಏನೂ ಹೇಳುವಂತಿಲ್ಲ. ಸೊರಬದ ಬಂಧುಗಳಂತೂ ತಲೆತಗ್ಗಿಸಿ ನಿಂತಿದ್ದರು. ತಮ್ಮ ನೆಚ್ಚಿನ ನಾಯಕನ ಕೋಪ ಅವರನ್ನು ಕಂಗೆಡಿಸಿತ್ತು.
ಬಹುಶಃ ದಿಗ್ಬ್ರಾಂತ ಗೊಂಡ ಗ್ರಾಮ ನಿವಾಸಿಗಳು ತಲೆತಗ್ಗಿಸಿ ಬಸ್ಸಿನತ್ತ ಹೊರಡುತ್ತಿದ್ದಂತೆ ಕಂಡಿತು. ಬಂಗಾರಪ್ಪನವರು ಕೋಪದಿಂದ ಮಹಡಿ ಹತ್ತಿ ಹೊರಟು ಹೋಗಿದ್ದರು. ಇದ್ದ ಎರಡು ಮೃದು ಸೆಕ್ಯೂರಿಟಿ ಸಿಬ್ಬಂದಿಗೂ ದಿಕ್ಕು ತೋಚಲಿಲ್ಲ.
ಮಾನ್ಯ ಬಂಗಾರಪ್ಪನವರ ನಡೆನುಡಿ ತಿಳಿದಿದ್ದ ನಾನು ಮತ್ತು ನಟರಾಜನಿಗೆ ಇದು ಕ್ಷಣಮಾತ್ರದ ಕೋಪ ಎಂಬ ಅರಿವಿತ್ತು. ಕೂಡಲೇ ಬಸ್ ಕಡೆ ಹೊರಟ ಮಂದಿಗೆ ಸಮಾಧಾನ ಹೇಳಿ ತಾಳ್ಮೆಯಿಂದ ಬಸ್ಸಿನಲ್ಲಿಯೇ ಇರಲು ವ್ಯವಸ್ಥೆ ಮಾಡಿದೆವು. ಪರಸ್ಥಳದಿಂದ ಬಂದ ಬಂಗಾರಪ್ಪನವರ ಹಿತೈಷಿಗಳ ಯೋಗಕ್ಷೇಮ, ಊಟ-ತಿಂಡಿ ,ವಾಸ್ತವ್ಯ ಇವು ನಮ್ಮ ಆರೈಕೆಯಾಗಿತ್ತು.
ನಾವು ನಿರೀಕ್ಷಿಸಿದಂತೆಯೇ ಆಯಿತು. ಆಟವಾಡಿ ಬಂದ ಬಂಗಾರಪ್ಪ ತಣ್ಣನೆ ನೀರಿನ ಸ್ನಾನ ಮುಗಿಸಿ ಕೆಳಗಿಳಿದು ಬಂದಾಗ ಶಾಂತ ಮೂರ್ತಿಯಾಗಿದ್ದರು.
ನಮಗೆ ಸ್ಪಷ್ಟವಾಗಿ ಗೊತ್ತಿತ್ತು ಪಶ್ಚಾತ್ತಾಪದಿಂದ ನೊಂದಿದ್ದರು ಬಂಗಾರಪ್ಪ. ಅಂತೆಯೇ ಕರ್ತವ್ಯದ ಕಡೆಯಿಂದ ಎಚ್ಚರವಾಗಿದ್ದರು ಇದೆಲ್ಲ ನಡೆದಾಗ 9:30. ಇಷ್ಟರೊಳಗಾಗಿ ನಾನು ಮತ್ತು ನಟರಾಜ್ ಪಕ್ಕದಲ್ಲಿದ್ದ ಅಶೋಕ ಹೋಟೆಲ್ ನ ಮ್ಯಾನೇಜರ್ ಸಾಮ್ರಾಟ್ ನನ್ನು ಕಂಡು ಪರಿಸ್ಥಿತಿ ವಿವರಿಸಿ ಮುಖ್ಯಮಂತ್ರಿ ಅವರನ್ನು ಕಾಣಲು ಬಂದ ಗ್ರಾಮಸ್ಥರಿಗೆ ಊಟದ ವ್ಯವಸ್ಥೆ ಮಾಡಲು ಮನವಿ ಮಾಡಿಕೊಂಡಿದ್ದೆವು.ಆತ ಒಪ್ಪಿದ್ದ.
ಇತ್ತ ಬಂಗಾರಪ್ಪನವರ ‘ತಾಯಿಯ ಕರುಳು’ ಸ್ಪಷ್ಟವಾಗಿ ಅವರ ಮುಖ ಮಾತಿನಲ್ಲಿ ಪ್ರತ್ಯಕ್ಷವಾಗಿತ್ತು.”ಅವರೆಲ್ಲರ ರಾತ್ರಿ ಊಟ ವಸತಿ ಸೌಕರ್ಯ ಇದು ಮುಖ್ಯ” ಎಂದರು ಬಂಗಾರಪ್ಪ. ಮುಖ್ಯಮಂತ್ರಿಯ ಮಾತು ಎಂದರೆ ಆಜ್ಞೆ -ಇದ್ದಂತೆ ಎಲ್ಲಾ ವ್ಯವಸ್ಥೆ ಆಗಿತ್ತು.
ಇಲ್ಲಿ ನಾವು ಗುರುತಿಸಬೇಕಾದ ಗುಣವೆಂದರೆ, ಬಂಗಾರಪ್ಪನವರಿಗೆ ಇದ್ದ ಹೃದಯ ವೈಶಾಲ್ಯತೆ. ಬಡವರು, ಅಶಕ್ತರು, ದೀನರು, ದಲಿತರು – ಹೀಗೆ ಬಡವರನ್ನು ಕಂಡರೆ ಅವರಲ್ಲಿದ್ದ ಅಕ್ಕರೆ ಮತ್ತು ದಾನ-ಧರ್ಮ ಮನೋಭಾವ ಅಪಾರವಾಗಿತ್ತು.
ಬಂಗಾರಪ್ಪನವರ ದಾನ ಹೇಗಿತ್ತೆಂದರೆ ಬಲಗೈಯಲ್ಲಿ ಕೊಟ್ಟಿದ್ದು ಎಡಗೈಗೆ ಗೊತ್ತಾಗುತ್ತಿರಲಿಲ್ಲ. ನನ್ನನ್ನು ಸೇರಿ ಆಪ್ತರಿಗೆ ಜೇಬಿನಲ್ಲಿದ್ದುದನ್ನೆಲ್ಲ ಸುರಿದು ಪ್ರವಾಸ ಸಮಯದಲ್ಲಿ ದಾನ ಮಾಡುತ್ತಿದ್ದ ಕಲಿಯುಗ ಕರ್ಣ ಇವರು.
ಅಂದು ಸಂಜೆ ನಡೆದಿದ್ದೆ ಹೀಗೆಯೇ. ರಾತ್ರಿ ಸುಮಾರು 10.30 ಸಮಯದಲ್ಲಿ ಅಶೋಕ ಐಷಾರಾಮಿ ಹೋಟೆಲ್ ನ ಸ್ವಿಮಿಂಗ್ ಫೂಲ್ ಸುತ್ತ ಕುಳಿತ ಸೊರಬ ದ ಹಿತೈಷಿಗಳಿಗೆ ಕೈಯಾರೆ ಊಟ ಬಡಿಸಿ ತಮ್ಮ ತಾಳ್ಮೆ ತಪ್ಪಿದ ನಡವಳಿಕೆಗಾಗಿ ಕೈಮುಗಿದು ಕ್ಷಮೆಯಾಚಿಸಿದ್ದರು, ಕರ್ನಾಟಕದ ಮುಖ್ಯಮಂತ್ರಿ ಸಾರೆಕೊಪ್ಪ ಬಂಗಾರಪ್ಪ.

ಸತತ ಮೂರನೇ ಬಾರಿಯೂ ಗೆದ್ದ ಪಾಕ್

0

ಟಿ – 20 ವಿಶ್ವಕಪ್ ಟೂರ್ನಿಯ ಸೂಪರ್ – 12 ರ B ಗುಂಪಿನ ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನ ತಂಡಗಳ ನಡುವೆ ಪಂದ್ಯ ನಡೆಯಿತು. ಅಫ್ಘಾನಿಸ್ತಾನ ತಂಡದ ವಿರುದ್ಧ ಪಾಕಿಸ್ತಾನ ಜಯ ಗಳಿಸಿತು.
ದುಬೈ ಕ್ರೀಡಾಂಗಣದಲ್ಲಿ ನಿನ್ನೆ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಅಫ್ಘಾನಿಸ್ತಾನ 20 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 147 ರನ್ ಗಳಿಸಿತು.
ಪಾಕ್ ತಂಡದ ಉತ್ತಮ ಬೌಲರ್ ಗಳಿಂದ ಅಫ್ಘಾನಿಸ್ತಾನ ತಂಡದ ಆರಂಭದಲ್ಲಿಯೇ ಪೆಟ್ಟುಕೊಟ್ಟಿತು. ಇನ್ನಿಂಗ್ಸ್ 2 ನೇ ಓವರ್ ನಲ್ಲಿ ಇಮದ್ ವಾಸಿಂ ಎಸೆತದಲ್ಲಿ ಹಜರತ್ ಉಲ್ಲಾ ಜಜೈ ಔಟಾದರು. 76 ರನ್ ಗಳಿಗೆ 6 ವಿಕೆಟ್ ಕಳೆದುಕೊಂಡ ತಂಡವು ಬೇಗನೆ ಕುಸಿಯುವ ಹಾದಿ ಹತ್ತಿತು. ಆದರೆ, ಅಷ್ಟರಲ್ಲೇ 13 ನೇ ಓವರ್ ನಲ್ಲಿ ಜೊತೆಗೂಡಿದ ನಾಯಕ ನಬಿ 32 ಎಸೆತಕ್ಕೆ 35 ರನ್ ಗಳಿಸಿ, 5 ಬೌಂಡರಿ ಸಿಡಿಸಿ ಮತ್ತು ನೈಟ್ 25 ಎಸೆತಕ್ಕೆ 4 ಬೌಂಡರಿ ಹಾಗೂ 1 ಸಿಕ್ಸರ್ ಸಿಡಿಸಿ 35 ರನ್ ಗಳಿಸಿದರು. ಇವರ ಜೊತೆಯಾಟದಿಂದ ಇನ್ನಿಂಗ್ಸಿನಲ್ಲಿ ಚಿತ್ರಣವೇ ಬದಲಾಯಿಸಿದರು. ನಂತರ 7 ನೇ ವಿಕೆಟ್ ಜೊತೆಯಾಟದಲ್ಲಿ 71 ರನ್ ಗಳನ್ನ ಕಲೆ ಹಾಕಿದ್ದು ಈ ರನ್ ಗಳು ಬಂದಿದ್ದು ಕೊನೆಯ 7 ಓವರ್ ಗಳಲ್ಲಿ ಎಂಬುದು ಸಂಕ್ಷಿಪ್ತವಾಗಿ ಕಂಡಿತು.
147 ರನ್ ಗಳ ಗುರಿಯನ್ನಿಟ್ಟುಕೊಂಡು ಬೆನ್ನತ್ತಿ ಆಡಿದ ಪಾಕಿಸ್ತಾನ ಕೇವಲ 19 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 148 ರನ್ ಬಾರಿಸಿ ಭರ್ಜರಿ ಗೆಲುವು ಸಾಧಿಸಿತು.