ಅಫ್ಘಾನಿಸ್ತಾನದ ಭೂಪ್ರದೇಶದ ಮೇಲೆ ಭಾರತ, ರಷ್ಯಾ ಮತ್ತು ಚೀನಾ ಯಾವುದೇ ದೇಶವು ಮೇಲೆ ದಾಳಿ ಮಾಡ ಬಳಸಲಾಗುವುದಿಲ್ಲ, ನಿಜವಾದ ಅಂತರ್ಗತ ಸರ್ಕಾರದ ರಚನೆಗಾಗಿ ಚಿಂತಿಸಲಾಗುತ್ತಿದೆ. ಯುದ್ಧ-ಹಾನಿಗೊಳಗಾದ ದೇಶಕ್ಕೆ ತಕ್ಷಣದ ಮತ್ತು ಅಡೆತಡೆಯಿಲ್ಲದ ಮಾನವೀಯ ಸಹಾಯಕ್ಕಾಗಿ ಒತ್ತಾಯಿಸಲಾಗಿದೆ. ಮೂರು ದೇಶಗಳ ವಿದೇಶಾಂಗ ಮಂತ್ರಿಗಳು, ರಷ್ಯಾ ಇಂಡಿಯಾ ಚೀನಾ (RIC) ಚೌಕಟ್ಟಿನ ಅಡಿಯಲ್ಲಿ ನಡೆದ ವರ್ಚುವಲ್ ಸಭೆಯಲ್ಲಿ ಭಾಗವಹಿಸಿ, ಅಫಘಾನ್ ನೇತೃತ್ವದ ಮತ್ತು ಅಫ್ಘಾನ್ ಒಡೆತನದ ಶಾಂತಿ ಪ್ರಕ್ರಿಯೆಯ ಮೂಲ ತತ್ವಕ್ಕೆ ಬೆಂಬಲವನ್ನು ಪುನರುಚ್ಚರಿಸಿದರು.
ಯುಎನ್ ಭದ್ರತಾ ಮಂಡಳಿಯು ಸೂಚಿಸಿದ ಅಲ್ ಖೈದಾ, ಐಎಸ್‌ಐಎಲ್, ಅಫ್ಘಾನಿಸ್ತಾನ ಮತ್ತು ಅಲ್ಲಿನ ಪ್ರದೇಶದಲ್ಲಿ ಇತರ ಶಾಶ್ವತ ಶಾಂತಿಯಂತಹ ಭಯೋತ್ಪಾದಕ ಗುಂಪುಗಳನ್ನು ತುರ್ತಾಗಿ ನಿರ್ಮೂಲನೆ ಮಾಡುವ ಅಗತ್ಯವನ್ನು ಸಚಿವರು ಒತ್ತಿ ಹೇಳಿದರು ಎಂದು ಮೂಲಗಳು ತಿಳಿಸಿವೆ.
ಸಭೆಯಲ್ಲಿ ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಅಧ್ಯಕ್ಷತೆ ವಹಿಸಿದ್ದರು. ಮತ್ತು ಅವರ ಚೀನಾದ ಸಹವರ್ತಿ ವಾಂಗ್ ಯಿ ಮತ್ತು ರಷ್ಯಾದ ವಿದೇಶಾಂಗ ಸಚಿವ ಸೆರ್ಗೆ ಲಾವ್ರೊವ್ ಉಪಸ್ಥಿತರಿದ್ದರು. ದೇಶದ ಪ್ರಮುಖ ಜನಾಂಗೀಯ ಮತ್ತು ರಾಜಕೀಯ ಗುಂಪುಗಳನ್ನು ಮಾತ್ರ ಪ್ರತಿನಿಧಿಸುವ ನಿಜವಾದ ಅಂತರ್ಗತ ಸರ್ಕಾರವನ್ನು ರಚಿಸಲು ಮಂತ್ರಿಗಳು ಕರೆ ನೀಡಿದ್ದಾರೆ ಎಂದು ಹೇಳಿದರು.
ಆಫ್ಘನ್ ಹಿತಚಿಂತನೆಯೇ ನಮ್ಮ ಅಪೇಕ್ಷೆ
ಸಂಸದರೆಲ್ಲರೂ ಸಂಸತ್ತಿನ ಘನತೆಯ ರಕ್ಷಕರು – ರಾಷ್ಟ್ರಪತಿ
ಆಡಳಿತ ಪಕ್ಷ ಅಥವಾ ವಿರೋಧ ಪಕ್ಷವನ್ನು ಪ್ರತಿನಿಧಿಸುವ ಎಲ್ಲಾ ಎಂಪಿಗಳು ಸಂಸತ್ತಿನ ಘನತೆಯ ರಕ್ಷಕರು ಮತ್ತು ಸ್ಪರ್ಧೆಯಲ್ಲಿ ಪೈಪೋಟಿ ಇರಬೇಕೆ ಹೊರತು ಗೊಂದಲಗಳು ಇರಬಾರದು ಎಂದು ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಅವರು ಹೇಳಿದ್ದಾರೆ.
ನವದೆಹಲಿಯಲ್ಲಿ ನಡೆದ ಸಂವಿಧಾನ ದಿನಾಚರಣೆ ಸಂದರ್ಭದಲ್ಲಿ ಈ ಅನಿಸಿಕೆ ವ್ಯಕ್ತಪಡಿಸಿದರು.

ಯಾವುದೇ ಭಿನ್ನಾಭಿಪ್ರಾಯಗಳು ಸಾರ್ವಜನಿಕ ಸೇವೆಯ ನಿಜವಾದ ಉದ್ದೇಶಕ್ಕೆ ಅಡ್ಡಿಯಾಗಬಾರದು. ಸ್ಥಾನವು ವಾಸ್ತವವಾಗಿ ಪ್ರಜಾಪ್ರಭುತ್ವದ ಪ್ರಮುಖ ಅಂಶವಾಗಿದೆ ಎಂದು ಅವರು ಹೇಳಿದರು. ಪರಿಣಾಮಕಾರಿ ವಿರೋಧವಿಲ್ಲದೆ, ಪ್ರಜಾಪ್ರಭುತ್ವವು ನಿಷ್ಪರಿಣಾಮಕಾರಿಯಾಗುತ್ತದೆ. ಸರ್ಕಾರ ಮತ್ತು ಪ್ರತಿಪಕ್ಷಗಳು ತಮ್ಮ ಭಿನ್ನಾಭಿಪ್ರಾಯಗಳ ಹೊರತಾಗಿಯೂ ನಾಗರಿಕರ ಹಿತದೃಷ್ಟಿಯಿಂದ ಒಟ್ಟಾಗಿ ಕೆಲಸ ಮಾಡುವುದನ್ನು ಮುಂದುವರೆಸುತ್ತವೆ ಎಂದು ನಿರೀಕ್ಷಿಸಲಾಗಿದೆ. ನಮ್ಮ ಸಂವಿಧಾನ ತಯಾರಕರು ಇದನ್ನು ಕಲ್ಪಿಸಿದ್ದರು. ರಾಷ್ಟ್ರ ನಿರ್ಮಾಣಕ್ಕೆ ಇದು ಅಗತ್ಯವಾಗಿದೆ ಎಂದು ಅವರು ಹೇಳಿದರು. ಆಡಳಿತ ಪಕ್ಷ ಮತ್ತು ವಿರೋಧ ಪಕ್ಷದ ಸದಸ್ಯರು ಪೈಪೋಟಿ ನಡೆಸುವುದು ಸಹಜ ಆದರೆ ಈ ಸ್ಪರ್ಧೆಯು ಉತ್ತಮವಾಗಿ ಪ್ರತಿನಿಧಿಸುವ ಪ್ರಜೆಗಳು ಮತ್ತು ಸಾರ್ವಜನಿಕ ಒಳಿತಿಗಾಗಿ ಉತ್ತಮ ಕೆಲಸಗಳನ್ನು ಮಾಡುವ ಬಗ್ಗೆ ಯೋಚನೆ ಮಾಡಬೇಕು ಎಂದು ಕೊವಿಂದ್ ಹೇಳಿದರು. ಸಂಸತ್ತಿನ ಎಲ್ಲಾ ಸದಸ್ಯರು ಸಂಸತ್ತಿನ ಘನತೆಯ ರಕ್ಷಕರು, ಆಡಳಿತ ಪಕ್ಷ ಅಥವಾ ವಿರೋಧ ಪಕ್ಷವನ್ನು ಪ್ರತಿನಿಧಿಸುತ್ತಾರೆ. ಆದರೆ ಪ್ರಜಾಪ್ರಭುತ್ವಕ್ಕೆ ಯಾವುದೇ ತೊಂದರೆ ಉಂಟಾಗದಂತೆ ನಡೆದುಕೊಳ್ಳುವುದು ಎಲ್ಲರ ಕರ್ತವ್ಯ ಎಂದು ಅವರು ಸಂಸತ್ ಭವನದ ಸೆಂಟ್ರಲ್ ಹಾಲ್‌ನಲ್ಲಿ ಭಾರತೀಯ ಸಂಸದೀಯ ಗುಂಪು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಹೇಳಿದರು.
ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು, ಗ್ರಾಮ ಸಭೆ, ವಿಧಾನ ಸಭೆ ಮತ್ತು ಸಂಸತ್ತಿನ ಚುನಾಯಿತ ಪ್ರತಿನಿಧಿಗಳು ಒಂದೇ ಆದ್ಯತೆಯನ್ನು ಹೊಂದಿರಬೇಕು. ತಮ್ಮ ಕ್ಷೇತ್ರಗಳ ಎಲ್ಲಾ ಜನರ ಕಲ್ಯಾಣಕ್ಕಾಗಿ ಮತ್ತು ರಾಷ್ಟ್ರದ ಹಿತಾಸಕ್ತಿಗಾಗಿ ಕೆಲಸ ಮಾಡುವುದು ಏಕ ಆದ್ಯತೆಯಾಗಿದೆ ಎಂದು ರಾಷ್ಟ್ರಪತಿಯವರು ತಿಳಿಸಿದ್ದಾರೆ.
ಕಸಾಪ ಅಧ್ಯಕ್ಷರಾಗಿ ಡಾ.ಮಹೇಶ್ ಜೋಶಿ ಪದಗ್ರಹಣ.
ಕಸಾಪ ಅಧ್ಯಕ್ಷರನ್ನಾಗಿ ಮತದಾರರು ನನ್ನನ್ನು ಚುನಾಯಿಸಿದ್ದಾರೆ. ನನ್ನನ್ನು ಐದು ವರ್ಷಗಳ ಕಾಲ ಯಾರು ಅಲುಗಾಡಿಸವಾಗುವುದಿಲ್ಲ . ಬೇರೆ ಅಕಾಡೆಮಿ, ಸಂಸ್ಥೆಗಳಲ್ಲಾದರೆ ಸರಕಾರ ನೇಮಕ ಮಾಡುತ್ತದೆ. ಯಾವಾಗ ಬೇಕೋ ಆಗ ತೆಗೆಯುವ ಅಧಿಕಾರವು ಸರ್ಕಾರಕ್ಕೆ ಇರುತ್ತದೆ. ಆದರೆ ಕಸಾಪ ಅಧ್ಯಕ್ಷ ಸ್ಥಾನ ಅಂಥದಲ್ಲ ಎಂದು ಮಹೇಶ್ ಜೋಶಿ ತಿಳಿಸಿದರು.
ಕಸಾಪದ 26ನೇ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕನ್ನಡ ಸಾಹಿತ್ಯ ಪರಿಷತ್ತಿನ ನಿಬಂಧನೆಗಳಿಗೆ ಅಮೂಲಾಗ್ರ ಬದಲಾವಣೆ ತರಲು ನಿವೃತ್ತ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ತಜ್ಞರು ಸಮಿತಿ ರಚಿಸಲಾಗುವುದು. ಕಸಾಪ ಆಡಳಿತ ಮಂಡಳಿಗೆ 1915 ರಲ್ಲಿ ನಿಯಮಾವಳಿಗಳನ್ನು ಜಾರಿಗೆ ತರಲಾಯಿತು. ತದನಂತರ ತಿದ್ದುಪಡಿ ಮಾಡಿಲ್ಲ. ಇದರಲ್ಲಿ ಸಾಕಷ್ಟು ಲೋಪದೋಷಗಳಿವೆ. ಹೀಗಾಗಿ ನಿಬಂಧನೆ ಅಥವಾ ನಿಯಮಗಳನ್ನು ಅಮೂಲಾಗ್ರವಾಗಿ ಬದಲಾಯಿಸಬೇಕಾಗಿದೆ ಎಂದರು.
ಪರಿಷತ್ತಿನ ಗೌರವಕ್ಕೆ ಧಕ್ಕೆ ತರುವಂತಹ ಕೆಲಸ ಮಾಡಲು ಬಿಡುವುದಿಲ್ಲ. ಅಂತಹ ಸಂಗತಿಗಳು ನನ್ನ ಗಮನಕ್ಕೆ ಬಂದರೆ ಮುಲಾಜಿಲ್ಲದೆ ಕ್ರಮ ಕೈಗೊಳ್ಳಲಾಗುವುದು. ಅಂತವರ ಸದಸ್ಯತ್ವವನ್ನು ಮೂರು ವರ್ಷಗಳ ಕಾಲ ಅಮಾನತು ಮಾಡಲಾಗುವುದು ಜೋಶಿ ತಿಳಿಸಿದರು.
ಕಸಾಪಗೆ ದೊಡ್ಡ ಇತಿಹಾಸವಿದೆ. ಈ ಸಂಸ್ಥೆಗೆ ನನ್ನ ಪತಿ ಚುನಾಯಿತರಾಗಿರುವುದು ಖುಷಿಯ ವಿಚಾರ. ಅವರು ರಾಜ್ಯಕ್ಕೆ, ಭಾಷೆಗೆ ಪ್ರತಿನಿಧಿಯಾಗಿದ್ದಾರೆ. ಅವರದ್ದು ಹೋರಾಟದ ಮನೋಭಾವ. ಹೀಗಾಗಿ ಅವರನ್ನು ಸಮಾಜಕ್ಕೆ ಮುಡುಪಾಗಿಟ್ಟಿದ್ದೇವೆ. ಅದಕ್ಕೆ ನಮ್ಮ ಕುಟುಂಬದ ಎಲ್ಲರೂ ಸಹಕಾರ ನೀಡುತ್ತೇವೆ ಎಂದು ಮಹೇಶ್ ಜೋಶಿ ಅವರ ಪತ್ನಿ ಮಾಲತಿ ಜೋಶಿಯವರು ಹೇಳಿದ್ದಾರೆ.
ಜನೌಷಧಿ ಕೇಂದ್ರ : ಅರ್ಜಿ ಆಹ್ವಾನ
ರಾಜ್ಯದ ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಜನೌಷಧಿ ಕೇಂದ್ರ ಪ್ರಾರಂಭಿಸುವ ಬಗ್ಗೆ ಸರಕಾರ ಆದೇಶ ಹೊರಡಿಸಿದೆ.
ಈ ಕುರಿತು, ಅರ್ಹ ಸರ್ಕಾರೇತರ ಸಂಸ್ಥೆಗಳು, ದತ್ತಿ ಸಂಸ್ಥೆಗಳು, ನಿರುದ್ಯೋಗ ಯುವಕರು, ಪದವಿ ಫಾರ್ಮಾಸಿಸ್ಟ್ ಗ ಗಮನಕ್ಕೆ ತರುವ ಉದ್ದೇಶದಿಂದ ಪತ್ರಿಕೆಯಲ್ಲಿ ಪ್ರಕಟಣೆ ನೀಡುವಂತೆ ತಿಳಿಸಲಾಗಿದೆ. ಅರ್ಜಿಗಳನ್ನು ಆರೋಗ್ಯ ಇಲಾಖೆ ನಿರ್ದೇಶನಾಲಯಕ್ಕೆ ಕಳುಹಿಸಿಕೊಡಲು ಸೂಚಿಸಲಾಗಿದೆ.
ಈಗಾಗಲೇ ಕೆಲವು ಸರ್ಕಾರಿ ಆಸ್ಪತ್ರೆಯ ಆವರಣದಲ್ಲಿ ಜನೌಷಧ ಮಳಿಗೆ ತೆರೆಯಲಾಗಿದೆ. ಇನ್ನುಳಿದ ಜಿಲ್ಲಾ, ತಾಲ್ಲೂಕಾ ಸಮುದಾಯ ಹಾಗೂ ಪ್ರಾರ್ಥಮಿಕ ಆರೋಗ್ಯ ಕೇಂದ್ರದಲ್ಲಿ ಮಳಿಗೆ ತೆರೆಯಲು ಸರ್ಕಾರ ಉದ್ದೇಶಿಸಿದ್ದು, ಈ ಕುರಿತು ಸುತ್ತೋಲೆ ಹೊರಡಿಸಿದೆ.
ಗುತ್ತಿಗೆ ಕಮಿಷನ್ ಆರೋಪ: ಹೆಸರು ಬಹಿರಂಗಮಾಡಿ
ಗುತ್ತಿಗೆದಾರರಿಂದ ಶೇ.40 ರಷ್ಟು ಲಂಚ ಪಡೆದವರ ಹೆಸರನ್ನು ಗುತ್ತಿಗೆದಾರರ ಸಂಘದವರು ದಾಖಲೆ ಸಮೇತ ಬಹಿರಂಗಪಡಿಸಬೇಕು ಎಂದು ರಾಜ್ಯ ಲೋಕೋಪಯೋಗಿ ಸಚಿವ ಸಿ ಸಿ ಪಾಟೀಲ್ ಅವರು ತಿಳಿಸಿದ್ದಾರೆ.
ಗುತ್ತಿಗೆದಾರರ ಸಂಘದವರು ದೂರಿನಲ್ಲಿ ಖಚಿತವಾದ ವಿವರಗಳಿಲ್ಲ. ಶೇ.40 ರಷ್ಟು ಲಂಚ ಕೊಡಲಾಗುತ್ತಿದೆ ಎಂಬ ದೂರನ್ನು ಯಾರು ಒಪ್ಪಲಿಕ್ಕೆ ಸಾಧ್ಯವಾಗುವುದಿಲ್ಲ. ನಿಜವಾಗಿಯೂ ಹಣ ಕೊಟ್ಟಿದ್ದರೆ ಗುತ್ತಿಗೆದಾರರೇ ಬಹಿರಂಗಪಡಿಸಲಿ. ಲಂಚ ಪಡೆದಿರುವ ಯಾರೇ ಸಚಿವರಾಗಲಿ ಅವರ ಹೆಸರನ್ನು ತಿಳಿಸಬೇಕು ಎಂದು ಆಗ್ರಹಿಸಿದ್ದಾರೆ.
ಗುತ್ತಿಗೆದಾರರ ಸಂಘದ ದೂರಿನ ಹಿನ್ನೆಲೆ ಯಾವುದೋ ತಂತ್ರ ಇದ್ದಂತೆ ಕಾಣಿಸುತ್ತಿದೆ. ಈ ಆರೋಪಗಳಿಗೆ ಯಾವುದೇ ಆಧಾರಗಳಿಲ್ಲ. ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಶೇ.10ರಷ್ಟು ಲಂಚ ಪಾವತಿ ಯಾಗುತ್ತಿದೆ ಎಂದು ಬಿಜೆಪಿ ಆರೋಪಿಸಿತ್ತು. ಈಗ ಅದೇ ರೀತಿ ಆರೋಪ ಮಾಡುತ್ತಿರುವ ಬಗ್ಗೆ ಅನುಮಾನ ಇದೆ ಎಂದು ರಾಜ್ಯ ಲೋಕೋಪಯೋಗಿ ಸಚಿವ ಸಿಸಿ ಪಾಟೀಲ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಹೋದೆಯಾ ಕೊವಿಡ್ ಅಂದ್ರೆ ಬಂದೆನಾ ಒಮಿಕ್ರಾನ್
ಕೋವಿಡ್-19 ಸಾಂಕ್ರಾಮಿಕ ಮೂರನೆಯ ಅಲೆಯು ಹೆಚ್ಚು ಅಪಾಯಕಾರಿ ಆಗಿರುವುದಿಲ್ಲ ಎಂದು ತಜ್ಞ ವೈದ್ಯರು ಹಾಗೂ ವಿಜ್ಞಾನಿಗಳು ಇದುವರೆಗೆ ನಿಟ್ಟುಸಿರು ಬಿಟ್ಟಿದ್ದರು. ಆದರೆ, ಕೊರೊನಾ ವೈರಾಣುವಿನ ರೂಪಾಂತರ ಜಗತ್ತಿನಾದ್ಯಂತ ತೀವ್ರವಾಗಿ ವ್ಯಾಪಿಸುವ ಆತಂಕ ನಿರ್ಮಾಣವಾಗಿದೆ.
ದಕ್ಷಿಣ ಆಫ್ರಿಕಾದ ಬೋಟ್ಸ್ ವಾನಾದಲ್ಲಿ ಮೊದಲ ಬಾರಿಗೆ ಪತ್ತೆಯಾದ ‘ಬಿ.1.1.529’ ರೂಪಾಂತರಿಯು ಈಗ ಇಸ್ರೇಲ್ ಮತ್ತು ಹಾಂಕಾಂಗ್ ಗೂ ವ್ಯಾಪಿಸಿರುವುದು ದೃಢಪಟ್ಟಿದೆ.
ಹೊಸ ಕೊರೊನಾ ರೂಪಾಂತರಿಯು ಆರ್ಭಟ ಹೆಚ್ಚಿಸುತ್ತಿರುವ ಹಿನ್ನೆಲೆಯಲ್ಲಿ ವಿಶ್ವ ಆರೋಗ್ಯ ಸಂಸ್ಥೆ ಮುಖ್ಯಸ್ಥ ಪೆಡ್ರೋಸ್ ಅಧಾನೊಮ್ ಅವರು ತುರ್ತು ಸಭೆಯನ್ನು ಆಯೋಜಿಸಿದ್ದಾರೆ. ದಕ್ಷಿಣ ಆಫ್ರಿಕಾ, ಹಾಂಕಾಂಗ್, ಇಸ್ರೇಲಿನಿಂದ ಹಿರಿಯ ವಿಜ್ಞಾನಿಗಳು ಹಾಗೂ ತಜ್ಞ ವೈದ್ಯರಿಂದ ಬೋಟ್ಸ್ ವಾನಾ ಪ್ರಸರಣದ ಬಗ್ಗೆ ವರದಿಯನ್ನು ಕೂಡ ವಿಆಸಂ (WHO) ಸಂಗ್ರಹಿಸಿದೆ. ಇದನ್ನು ಆಧರಿಸಿ, ಕೊರೊನಾ ರೂಪಾಂತರಿ ನಿಯಂತ್ರಣಕ್ಕೆ ಅಗತ್ಯ ರೂಪುರೇಷೆ ರಚಿಸಲು ಸಂಸ್ಥೆಯ ವಿಜ್ಞಾನಿಗಳೊಂದಿಗೆ ಪೆಡ್ರೋಸ್ ಮಹತ್ವದ ಚರ್ಚೆ ನಡೆಸಿದ್ದಾರೆ. ಶೀಘ್ರವೇ ಮುನ್ನೆಚ್ಚರಿಕೆ ಕ್ರಮಗಳ ಮಾರ್ಗಸೂಚಿಯನ್ನು ವಿಶ್ವಸಂಸ್ಥೆಯು ಎಲ್ಲ ರಾಷ್ಟ್ರಗಳಿಗೆ ರವಾನಿಸಲಿದೆ.
ತಪಾಸಣೆಯಲ್ಲಿ ಗುರುತು ಹಿಡಿಯಲಾಗದ ಅಥವಾ ಇನ್ನೂ ಕೂಡ ಗಂಭೀರ ಸ್ಥಿತಿಗೆ ತಲುಪದ ಮಾರಣಾಂತಿಕ ಕಾಯಿಲೆಯು ಇರುವವರಿಗೆ ಹೊಸ ರೂಪಾಂತರಿಯು ಮಾರಣಾಂತಿಕವಾಗಿದೆ. ಉದಾಹರಣೆಗೆ ಎಡ್ಸ್ ಸೋಂಕು ತಗುಲಿರುವುದು ಗಮನಕ್ಕೆ ಬರದವರಿಗೆ ಬೋಟ್ಸ್ ವಾನಾ ಸೋಂಕು ತಗುಲಿದ್ದಲ್ಲಿ ಅನಾರೋಗ್ಯ ಮಿತಿಮೀರಲಿದೆ. ಡೆಲ್ಟಾ ರೂಪಾತರಿಯನ್ನು ಇದು ಹಿಮ್ಮೆಟ್ಟಿಸಲಿದೆ ಎಂದು ಲಂಡನ್ ವಿಶ್ವವಿದ್ಯಾಲಯದ ಜೀನ್ಸ್ ಅಧ್ಯಯನ ವಿಜ್ಞಾನಿ ಪ್ರೋ.ಫ್ರಾಂಕೊಯಿಸ್ ಬಲ್ಲೌಕ್ಸ್ ತಿಳಿಸಿದ್ದಾರೆ.
ವಿಸಾ ನಿರ್ಬಂಧ ಸಡಿಲಿಸಿ ಅಂತರಾಷ್ಟ್ರೀಯ ವಿಮಾನ ಸಂಚಾರ ಮುಕ್ತಗೊಳಿಸಲು ಮುಂದಾಗಿರುವ ವೇಳೆಯಲ್ಲೇ ಹೊಸ ರೂಪಾಂತರಿ ಬಗ್ಗೆ ಎಚ್ಚರಿಕೆ ಸಿಕ್ಕಿದೆ. ಸಾರ್ವಜನಿಕರ ಆರೋಗ್ಯದ ದೃಷ್ಟಿಯಿಂದ ಬೊಟ್ಸ್ ವಾನಾ ನಿಯಂತ್ರಣ ಬಗ್ಗೆ ಗಂಭೀರ ಮುನ್ನೆಚ್ಚರಿಕೆ ಕ್ರಮಗಳನ್ನು ಜಾರಿಗೆ ತರಲಿದ್ದೇವೆ. ಭಾರತದಲ್ಲಿ ರೂಪಾಂತರಿ ಪತ್ತೆಯಾಗಿಲ್ಲ. ಆದರೂ ರಾಜ್ಯಗಳಿಗೂ ಈ ಬಗ್ಗೆ ಸೂಚನೆ ನೀಡಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಕಾರ್ಯದರ್ಶಿ ರಾಜೇಶ್ ಭೂಷಣ್ ಅವರು ತಿಳಿಸಿದ್ದಾರೆ.
ಹಂಪಿ ಉತ್ಸವದ ಮಾದರಿ ಕೆಳದಿ ಉತ್ಸವ ಜರುಗಬೇಕು
ಕೆಳದಿಯ ಸಮಗ್ರ ಅಭಿವೃದ್ಧಿಗೆ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಕೆಳದಿ ಶಿವಪ್ಪನಾಯಕ ಪ್ರತಿಷ್ಠಾನದ ಡಾ. ಕೆಳದಿ ವೆಂಕಟೇಶ್ ಜೋಯಿಸ್ ಆಗ್ರಹಿಸಿದ್ದಾರೆ.
ಕೆಳದಿ ಸಂಸ್ಥಾನಕ್ಕೆ ಸುಮಾರು 263 ವರ್ಷಗಳ ಇತಿಹಾಸ ಇದೆ. ಕ್ರಿ. ಶ 1499ರಿಂದ 1763ರ ವರೆಗೆ ಕೆಳದಿ ಯೂ ಸೇರಿ 13 ಜಿಲ್ಲೆಗಳ ಆಡಳಿತವನ್ನು 17 ರಾಜರು, ಇಬ್ಬರು ರಾಣಿಯರು, ಕೆಳದಿ ಆಳ್ವಿಕೆ ಮಾಡಿದ್ದಾರೆ. ಕರ್ನಾಟಕದ ರಾಜಕೀಯ, ಸಾಂಸ್ಕೃತಿಕ ಕ್ಷೇತ್ರಕ್ಕೆ ಇವರ ಕೊಡುಗೆ ಅಪಾರವಾಗಿದೆ ಎಂದು ಡಾ.ಕೆಳದಿ ವೆಂಕಟೇಶ್ ಜೊಯಿಸ್ ಅವರು ಹೇಳಿದರು.
ಪ್ರತಿವರ್ಷ ಕೆಳದಿ ಉತ್ಸವ ಆಚರಣೆಯನ್ನು ಸರ್ಕಾರವೇ ಮಾಡಬೇಕು. ಅಮೂಲ್ಯ ಕೆಳದಿಯ ಇತಿಹಾಸವನ್ನು ಎಲ್ಲರಿಗೂ ತಿಳಿಸಬೇಕು. ಹಂಪಿ ಉತ್ಸವದಂತೆ ಶಾಶ್ವತವಾಗಿ ಸರ್ಕಾರ ವಿಶೇಷ ಅನುದಾನ ನೀಡಬೇಕು. ಕುವೆಂಪು ವಿವಿಯಲ್ಲಿ ಕೆಳದಿ ರಾಣಿ ಚೆನ್ನಮ್ಮ ಅವರ ಜಯಂತಿ ಆಚರಿಸಬೇಕು. ಅವರ ಹೆಸರಿನಲ್ಲಿ ಅಧ್ಯಯನ ಪೀಠ ಸ್ಥಾಪಿಸಬೇಕು. ಹಾಗೂ ಅವರ ಹೆಸರು ಶಾಶ್ವತವಾಗಿ ಉಳಿಯುವಂತೆ ಮಾಡಬೇಕು ಎಂದು ಡಾ. ಕೆಳದಿ ವೆಂಕಟೇಶ್ ಜೋಯಿಸ್ ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಕೆಳದಿ ಇತಿಹಾಸ ಸ್ಮಾರಕವಾದ ರಾಜ್ಯದ ಸಮಾಧಿ ರಾಜರ ಶಿವಮೊಗ್ಗದಲ್ಲಿದೆ. ಅದನ್ನು ಸಂರಕ್ಷಿಸಲೇ ಬೇಕು ಎಂದು ನಿವೃತ್ತ ಪ್ರಾಧ್ಯಾಪಕಿ ಪ್ರೊ. ಕಿರಣ್ ದೇಸಾಯಿ ಮತ್ತು ಎನ್.ಜೆ. ರಾಜಶೇಖರ್ ಆಗ್ರಹಿಸಿದ್ದಾರೆ.
ಈ ಸಂದರ್ಭದಲ್ಲಿ ಕತ್ತಿಗೆ ಚನ್ನಪ್ಪ, ಬಳ್ಳೇಕೆರೆ ಸಂತೋಷ್, ಎನ್.ಎಲ್. ಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು.
ಭಾರತದಿಂದ 14 ರಾಷ್ಟ್ರಗಳಿಗೆ ಏರ್ ಇಂಡಿಯಾ ಸಂಚಾರ
ಡಿಸೆಂಬರ್ 15ರಿಂದ ಭಾರತದಿಂದ ಹಲವಾರು ರಾಷ್ಟ್ರಗಳಿಗೆ ಎಂದಿನಂತೆ ನಿಯಮಿತವಾಗಿ ಅಂತರಾಷ್ಟ್ರೀಯ ವಿಮಾನ ಹಾರಾಟ ಪುನಃ ಆರಂಭವಾಗಲಿದೆ.
ಫ್ರಾನ್ಸ್, ಬ್ರಿಟನ್, ಸಿಂಗಾಪುರ ಸೇರಿ 14 ರಾಷ್ಟ್ರ ಗಳಿಗೆ ಮಾತ್ರ ಸಾಮಾನ್ಯ ‘ಏರ್ ಬಬಲ್’ ವ್ಯವಸ್ಥೆಯಡಿಯಲ್ಲಿ ಹಾರಾಡ ಇರಲಿದೆ. ವಿಶ್ವದಾದ್ಯಂತ ಕೋವಿಡ್ 19 ಸ್ಥಿತಿಯನ್ನು ಪರಿಶೀಲಿಸಿ ಆರೋಗ್ಯ ಸಚಿವಾಲಯದ ಜೊತೆ ಸಮಾಲೋಚಿಸಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ. ಕೊವಿಡ್ -19 ಸಂಕಷ್ಟದ ಕಾರಣ 2022ರ ಮಾರ್ಚ್ ನಿಂದ ಅಂತರಾಷ್ಟ್ರೀಯ ವಿಮಾನ ಹಾರಾಟವನ್ನು ನಿರ್ಬಂಧಿಸಲಾಗಿತ್ತು.
ಹೆದ್ದಾರಿ ತಡೆ ರೈತರ ಪ್ರತಿಭಟನೆ
ಕೃಷಿ ಕಾಯ್ದೆ ಸೇರಿದಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರದ ನೀತಿಗಳನ್ನು ವಿರೋಧಿಸಿ ನಡೆದ ರೈತರ ಪ್ರತಿಭಟನೆಗೆ ರಾಜ್ಯದಲ್ಲಿ ವ್ಯಾಪಕ ಬೆಂಬಲ ವ್ಯಕ್ತವಾಗಿದೆ. ರಾಜ್ಯದ ನಾನಾ ಭಾಗಗಳಲ್ಲಿ ಹೆದ್ದಾರಿ ತಡೆದು ರೈತರು ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ದಿಲ್ಲಿ ರೈತರ ಹೋರಾಟದ ವರ್ಷಾಚರಣೆ ಮತ್ತು ಕೃಷಿ ಉತ್ಪನ್ನಗಳಿಗೆ ಶಾಸನಬದ್ಧ ಕನಿಷ್ಟ ಬೆಂಬಲ ಬೆಲೆ ನಿಗದಿ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕರ್ನಾಟಕ ಸಂಯುಕ್ತ ಕಿಸಾನ್ ಮೋರ್ಚಾ ಪ್ರತಿಭಟನೆ ಮತ್ತು ಹೆದ್ದಾರಿ ತಡೆಗೆ ಕರೆ ನೀಡಿತ್ತು.
ಪ್ರಧಾನಿ ಮೋದಿ ಮೂರು ಕೃಷಿ ಕಾಯ್ದೆಗಳನ್ನು ಚುನಾವಣೆ ಹಿನ್ನೆಲೆಯಲ್ಲಿ ವಾಪಸ್ ಪಡೆದಿದ್ದಾರೆ. ಇದರ ಹಿಂದೆ ರೈತರ ಹಿತ, ಕಾಳಜಿ ಕಾಣುತ್ತಿಲ್ಲ. ಹೀಗಾಗಿ ಎಲ್ಲಾ ಬೇಡಿಕೆ ಈಡೇರುವವರೆಗೂ ಹೋರಾಟ .
ಕನಿಷ್ಠ ಬೆಂಬಲ ಬೆಲೆಯನ್ನು ವೈಜ್ಞಾನಿಕ ರೀತಿಯಲ್ಲಿ ನಿಗದಿ ಮಾಡಬೇಕು. ಜಲ ಜೀವನ್ ಮಿಷನ್ ಹೆಸರಿನಲ್ಲಿ ಗ್ರಾಮೀಣ ಪ್ರದೇಶದ ಮನೆಗಳ ನೀರಿನ ಸಂಪರ್ಕ ಮೀಟರ್ ಅಳವಡಿಕೆ ನಿರ್ಧಾರ ಕೈಬಿಡಬೇಕು.
ಹಾಲು ಒಕ್ಕೂಟ ರೈತರಿಂದ ಖರೀದಿಸುವ ಪ್ರತಿ ಲೀಟರ್ ಹಾಲಿನ ಬೆಲೆಯನ್ನು ನಾಲ್ಕು ರೂಪಾಯಿ ಕಡಿಮೆ ಮಾಡಿದೆ. ಮತ್ತೊಂದೆಡೆ ಗ್ರಾಹಕರಿಗೆ ಹಳೆಯ ದರದಲ್ಲೇ ಹಾಲು ಮಾರುತ್ತಿದೆ. ಈ ಮೂಲಕ ಇಬ್ಬರಿಗೂ ವಂಚನೆ ಮಾಡಲಾಗುತ್ತಿದೆ. ಇದನ್ನು ಸರಿಪಡಿಸಿ ಹಿಂದಿನ ದರದ ಪ್ರಕಾರ ವಹಿವಾಟು ನಡೆಸಬೇಕು.
ಹೋರಾಟದಲ್ಲಿ ಹುತಾತ್ಮರಾದ ರೈತರ ಅವಲಂಬಿತರಿಗೆ ಮಾಸಿಕ ಭತ್ಯೆ ನೀಡಬೇಕು. ರೈತರ ಮೇಲಿನ ಮೊಕದ್ದಮೆ, ಹಿಂಪಡೆಯಬೇಕು.
ಅನಾವೃಷ್ಟಿ, ಅತಿವೃಷ್ಟಿಯಿಂದ ಆಗಿರುವ ಬೆಳೆ ನಾಶಕ್ಕೆ ಸೂಕ್ತ ಪರಿಹಾರ ನೀಡಬೇಕು. ಗ್ರಾಮೀಣ ಭಾಗದ ರಸ್ತೆಗಳನ್ನು ಅಭಿವೃದ್ಧಿಪಡಿಸಬೇಕು. ಈ ಎಲ್ಲಾ ಪ್ರಮುಖ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿದರು.
ಗುತ್ತಿಗೆ ಕಮಿಷನ್ ಪ್ರಕರಣ ತನಿಖೆಗೆ ಆದೇಶ
ರಾಜ್ಯದ ಗುತ್ತಿಗೆದಾರರ ಸಂಘದ ಅಧ್ಯಕ್ಷರ ಪತ್ರವು ಪ್ರಧಾನಿ ಅವರಿಗೆ ತಲುಪಿದೆ. ಈಗಾಗಲೇ ಪ್ರತಿಪಕ್ಷದವರ ಪ್ರತಿಭಟನೆಗೂ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಬೊಮ್ಮಾಯಿಯವರು ಕ್ರಮ ಕೈಗೊಂಡಿದ್ದಾರೆ.
ಶ್ರೀ ಬೊಮ್ಮಾಯಿಯವರು ಸಿಎಂ ಆಗಿ ಅಧಿಕಾರ ಸ್ವೀಕರಿಸಿದ ನಂತರ 10 ಕೋಟಿ ರೂ. ಹೆಚ್ಚು ಅನುದಾನದ ಎಲ್ಲಾ ಟೆಂಡರ್ ಪ್ರಕ್ರಿಯೆ, ಪ್ರಗತಿ ಕಾಮಗಾರಿಗಳ ಬಗ್ಗೆ ತನಿಖೆ ನಡೆಸಿ ವರದಿ ನೀಡುವಂತೆ ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್ ಅವರು ಎಲ್ಲಾ ಇಲಾಖೆಗಳಿಗೆ ಆದೇಶಿಸಿದ್ದಾರೆ.
ನಾನು ಸಿಎಂ ಆಗಿ ಅಧಿಕಾರ ವಹಿಸಿಕೊಂಡ ಬಳಿಕ ಉಲ್ಲೇಖಿಸಲಾದ ಇಲಾಖೆಗಳಲ್ಲಿ ಮಂಜೂರಾದ ಪ್ರಮುಖ ಕಾಮಗಾರಿಗಳನ್ನು ಪರಿಶೀಲಿಸಿಬೇಕು. ಯಾವುದೇ ಲೋಪಗಳು ಕಂಡುಬಂದ ಕಡೆ ವಿಸ್ತೃತ ತನಿಖೆಗೆ ಒಳಪಡಬೇಕು. ಈ ಬಗ್ಗೆ ಸಂಬಂಧಪಟ್ಟ ಇಲಾಖೆಗಳ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳು ಅಥವಾ ಪ್ರಧಾನ ಕಾರ್ಯದರ್ಶಿಗಳಿಗೆ ಕೂಡಲೇ ನಿರ್ದೇಶನ ನೀಡಬೇಕು ಎಂದು ಸಿಎಂ ಸೂಚಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಮಾಜಿ ಪ್ರಧಾನಿ ಎಚ್. ಡಿ .ದೇವೇಗೌಡ ನವರು, ಗುತ್ತಿಗೆದಾರರ ಸಂಘ ಪ್ರಧಾನಿಗೆ ಬರೆದಿರುವ ‘ಕಮಿಷನ್ ‘ ಪತ್ರದ ವಿಚಾರದಲ್ಲಿ ಯಾವುದೇ ದೊಡ್ಡ ವ್ಯತ್ಯಾಸವಿಲ್ಲ. ರಾಜಕೀಯ ವ್ಯವಸ್ಥೆ ಈ ಮಟ್ಟಿಗೆ ಬರಲು ಕಾಂಗ್ರೆಸ್, ಬಿಜೆಪಿ ಎರಡೂ ಪಕ್ಷಗಳು ಕಾರಣ. ದಿಲ್ಲಿ ಮಟ್ಟದಲ್ಲಿ ದೊಡ್ಡ ನಾಯಕರು ಸೇರಿದರೆ ಏನಾದರೂ ಬದಲಾವಣೆ ತರಲು ಸಾಧ್ಯ ಎಂದಿದ್ದಾರೆ.
