Tuesday, August 4, 2026
Tuesday, August 4, 2026
Home Blog Page 2047

ಜಮ್ಮು & ಕಾಶ್ಮೀರ ಚುನಾವಣೆಗೆ ವೇದಿಕೆ ಸಿದ್ಧ

0

ಜಮ್ಮು-ಕಾಶ್ಮೀರ ವಿಧಾನಸಭೆ ಕ್ಷೇತ್ರ ಪುನರ್ ವಿಂಗಡಣೆ ಪೂರ್ಣಗೊಂಡಿರುವ ಹಿನ್ನೆಲೆ 2022ರ ಮೇ- ಜೂನ್ ನಲ್ಲಿ ಚುನಾವಣೆ ನಡೆಯುವುದು ಖಚಿತವಾಗಿದೆ. ಈ ಮೊದಲು ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ ಸಂವಿಧಾನದ 370ನೇ ವಿಧಿಯನ್ನು ಕೇಂದ್ರ ಸರ್ಕಾರ 2019ರ ಆಗಸ್ಟ್ 5ರಂದು ರದ್ದುಪಡಿಸಿ ಕೇಂದ್ರಾಡಳಿತ ಪ್ರದೇಶ ರಚಿಸಿದ ಬಳಿಕ ಇದೇ ಮೊದಲ ಬಾರಿಗೆ ನಡೆಯಲಿರುವ ಚುನಾವಣೆ ಇದಾಗಿದೆ.

ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ರಂಜನಾ ದೇಸಾಯಿ ನೇತೃತ್ವ ಕ್ಷೇತ್ರ ಪುನರ್ ವಿಂಗಡನೆ ಆಯೋಗವು ತನ್ನ ಜವಾಬ್ದಾರಿಯನ್ನು ಪೂರ್ಣಗೊಳಿಸಿದ್ದು, ಕರಡು ಸಿದ್ಧಪಡಿಸಿದೆ. ಈ ಕುರಿತಂತೆ ಅಂತಿಮ ವರದಿಯನ್ನು ಸರ್ಕಾರಕ್ಕೆ ಆಯೋಗ ನೀಡಿದೆ ಎಂದು ಮೂಲಗಳು ತಿಳಿಸಿವೆ.

ಜಮ್ಮು ಮತ್ತು ಕಾಶ್ಮೀರದಲ್ಲಿ ಹೊಸದಾಗಿ ಅಸ್ತಿತ್ವಕ್ಕೆ ಬರಲಿರುವ ವಿಧಾನಸಭೆಯಲ್ಲಿ 90 ಕ್ಷೇತ್ರಗಳು ಇವೆ. ಈ ಹಿಂದೆ ಕಾಶ್ಮೀರ ವಲಯದ 47, ಜಮ್ಮು ವಲಯದ 36 ಕ್ಷೇತ್ರಗಳು ಸೇರಿದಂತೆ 87 ಕ್ಷೇತ್ರಗಳನ್ನು ಹೊಂದಿತ್ತು. 4 ಕ್ಷೇತ್ರಗಳು ಮತ್ತೊಂದು ಕೇಂದ್ರಾಡಳಿತ ಪ್ರದೇಶ ನಡಕೆ ಸೇರಿದ್ದವು. ಹೊಸ ವಿಧಾನಸಭೆಯಲ್ಲಿ ಜಮ್ಮು ವಲಯಕ್ಕೆ 6 ಕ್ಷೇತ್ರಗಳನ್ನು ಹೆಚ್ಚುವರಿಯಾಗಿ ನೀಡಲಾಗಿದೆ. ಕಾಶ್ಮೀರ ವಲಯದ 2 ಕ್ಷೇತ್ರ ಕಡಿತ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.

ಕ್ಷೇತ್ರ ಪುನರ್ ವಿಂಗಡಣೆ ಪ್ರಕ್ರಿಯೆ ಮುಕ್ತಾಯದ ಹಂತ ತಲುಪಿದ ಮಾಹಿತಿ ತಿಳಿಯುತ್ತಿದ್ದಂತೆಯೇ ಅಲ್ಲಿನ ಎಲ್ಲಾ ಪಕ್ಷಗಳು ಚುನಾವಣೆ ಸಿದ್ಧತೆಯಲ್ಲಿ ತೊಡಗಿವೆ.

ಸಿಂಧು ಹೋರಾಟ ಮುಕ್ತಾಯ

0

ಇಂಡೋನೇಷ್ಯಾ ಓಪನ್ ಸೂಪರ್ 1000 ಬ್ಯಾಡ್ಮಿಂಟನ್ ಟೂರ್ನಿಯ ಸೆಮಿಫೈನಲ್ ನಲ್ಲಿ ಎರಡು ಬಾರಿ ಒಲಿಂಪಿಕ್ಸ್ ಪದಕ ವಿಜೇತ ಭಾರತದ ಷಟ್ಲರ್ ಪಿ.ವಿ.ಸಿಂಧೂ ಸೋಲು ಕಂಡಿದ್ದಾರೆ.

ಶನಿವಾರ ನಡೆದ ಸೆಮಿಫೈನಲ್ ನಲ್ಲಿ ಥಾಯ್ಲೆಂಡ್ ರಚನಾಕ್ ಇಂತನಾನ್ ವಿರುದ್ಧ 21-15, 19-21, 14-21 ಗೇಮ್ ಗಳಿಂದ ಪಿ.ವಿ.ಸಿಂಧೂ ಮುಗ್ಗರಿಸಿದರು. ಇದು ಪಿ.ವಿ.ಸಿಂಧೂ ಅವರಿಗೆ ಸತತ ಮೂರನೇ ಬಿ ಡಬ್ಲ್ಯು ಎಫ್ ಸೆಮಿಫೈನಲ್ ನ ಸೋಲಾಗಿದೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

ಕೃಷಿಕರ ಬೇಡಿಕೆಗಳ ಬಗ್ಗೆ ಸಂಸತ್ ಅಧಿವೇಶನದಲ್ಲಿ ಚರ್ಚೆ.

0

ರೈತರ ಬೇಡಿಕೆಗಳ ಬಗ್ಗೆ ಕೇಂದ್ರ ಸರ್ಕಾರದ ಗಮನ ಹರಿಸಲು, ದೆಹಲಿಯ ಸಂಸತ್ ಭವನದ ವರೆಗೆ ನಡೆಸಲು ಉದ್ದೇಶಿಸಿದ್ದ ಟ್ಯಾಕ್ಟರ್ ರಾಲಿಯನ್ನು ಬಿಟ್ಟಿರುವುದಾಗಿ ರೈತ ಸಂಘಟನೆಗಳ ಒಕ್ಕೂಟದ ಸಂಯುಕ್ತ ಕಿಸಾನ್ ಮೋರ್ಚಾ ತಿಳಿಸಿದೆ.

ಸಂಸತ್ತಿನ ಚಳಿಗಾಲದ ಅಧಿವೇಶನವು ನ.29ರಂದು ಆರಂಭವಾಗಲಿದೆ. ಅದೇ ದಿನ ಟ್ಯಾಕ್ಟರ್ ರಾಲಿ ನಡೆಸಲು ರೈತರ ಸಂಘಟನೆಗಳ ಒಕ್ಕೂಟ ಎಸ್ ಕೆ ಎಂ ತೀರ್ಮಾನಿಸಲಾಗಿತ್ತು.

ಈಗ ಸಂಸತ್ತು ಭವನದವರೆಗೆ ನಡೆಸಲು ಉದ್ದೇಶಿಸಿದ್ದ ರಾಲಿ ರದ್ದಾಗಿದೆ.

ನಮ್ಮ ಬೇಡಿಕೆಗಳ ಕುರಿತು ಪ್ರಧಾನಿಗೆ ಪತ್ರ ಬರೆದಿದ್ದೇವೆ.ಅದರ ಪ್ರತಿಕ್ರಿಯೆಯನ್ನು ಎದುರು ನೋಡುತ್ತಿದ್ದೇವೆ. ಡಿಸೆಂಬರ್ ನಾಲ್ಕರಂದು ಮತ್ತೊಂದು ಸಭೆ ನಡೆಸುತ್ತೇವೆ. ಅನಂತರ ಹೋರಾಟಕ್ಕೆ ನಿರ್ಧರಿಸುತ್ತೇವೆ ಎಂದು ಎಸ್ ಕೆ ಎಂ ಮುಖಂಡ ದರ್ಶನ್ ಪಾಲ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಸರ್ಕಾರವು ರೈತರೊಂದಿಗೆ ಗೌರವದಲ್ಲಿ ಮಾತುಕತೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ.

ಇದಕ್ಕೂ ಮುನ್ನ ಪ್ರತಿಭಟನೆಯನ್ನು ಕೈಬಿಡುವಂತೆ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ಮನವಿ ಮಾಡಿದ್ದರು.
‘ಭತ್ತದ ಕೂಳೆಗೆ ಬೆಂಕಿ ಹಾಕುವುದನ್ನು ಅಪರಾಧ ಎಂದು ಪರಿಗಣಿಸಬಾರದು ಎಂಬ ಕೃಷಿಕರ ಬೇಡಿಕೆಯನ್ನು ಸರ್ಕಾರ ಒಪ್ಪಿಕೊಂಡಿದೆ. ಬೆಳೆ ವೈವಿಧ್ಯತೆ, ಕನಿಷ್ಠ ಬೆಂಬಲ ಬೆಲೆ ಖಾತರಿ ಸೇರಿದಂತೆ ಇತರೆ ಬೇಡಿಕೆಗಳ ಬಗ್ಗೆ ಚರ್ಚೆ ನಡೆಸಬೇಕಿದೆ. ಪ್ರಧಾನಮಂತ್ರಿ ಈಗಾಗಲೇ ಪ್ರಕಟಗೊಳಿಸಿರುವ ಅಂತೆ ಸಮಿತಿ ರಚನೆಯೊಂದಿಗೆ ಈ ಬೇಡಿಕೆಗಳನ್ನು ಈಡೇರಿಸಲಾಗುವುದು ಎಂದು ಹೇಳಿದ್ದಾರೆ.

ಪ್ರತಿಭಟನನಿರತ ರೈತರ ಮೇಲೆ ಹೇರಿರುವ ಮೊಕದ್ದಮೆಗಳನ್ನು ವಾಪಸಾತಿಯು ರಾಜ್ಯಗಳ ವ್ಯಾಪ್ತಿಗೆ ಬರಲಿದೆ. ಪ್ರಕರಣಗಳ ಗಂಭೀರತೆ ಆಧರಿಸಿ ಪ್ರಕರಣ ಕೈಬಿಡುವುದು ಮತ್ತು ಪರಿಹಾರ ಘೋಷಣೆ ಕುರಿತು ರಾಜ್ಯ ಸರ್ಕಾರ ತೀರ್ಮಾನಿಸಬೇಕಿದೆ. ಮೂರು ಕೃಷಿ ಕಾಯ್ದೆಗಳನ್ನು ಕೈ ಬಿಡಲಾಗುವುದು ಎಂದು ಸರ್ಕಾರ ಪ್ರಕಟಿಸಿದ ನಂತರ ಮುಷ್ಕರ ಮುಂದುವರೆಯುವುದ ರಲ್ಲಿ ಅರ್ಥವಿಲ್ಲ. ಅದಕ್ಕಾಗಿ ದೊಡ್ಡ ಮನಸ್ಸು ಮಾಡಿ ಧರಣಿ ಕೈಬಿಡಬೇಕು ಎಂದು ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಕೋರಿದ್ದಾರೆ.

ಓಮಿಕ್ರಾನ್ ವೈರಸ್: ಆಗ್ನೇಯ ಏಷ್ಯಾ ದೇಶಗಳಿಗೆ “ವಿಆಸಂ” ಸೂಚನೆ

0

ಕೋವಿಡ್ ಹೊಸ ರೂಪಾಂತರಿ ವೈರಸ್ ಓಮಿಕ್ರಾನ್ ಸೋಂಕು ಹೆಚ್ಚಾಗುತ್ತಿರುವ ಬೆನ್ನಲ್ಲೇ ವಿಶ್ವ ಆರೋಗ್ಯ ಸಂಸ್ಥೆಯು ಆಗ್ನೇಯ ಏಷ್ಯಾ ಭಾಗದ ರಾಷ್ಟ್ರಗಳು ಹೆಚ್ಚಿನ ಜಾಗರೂಕತೆ ವಹಿಸಬೇಕು ಎಂದು ಸಲಹೆ ನೀಡಿದೆ.

“ಆಗ್ನೇಯ ಏಷ್ಯಾದಲ್ಲಿ ಶೇ. 48ರಷ್ಟು ಜನರು ಇನ್ನೂ ಕೊರೋನಾ ನಿರೋಧಕ ಲಸಿಕೆ ಯಾವುದೂ ಕೂಡ ಪಡೆದಿಲ್ಲ. ಹೀಗಾಗಿ ಈ ದೇಶಗಳಲ್ಲಿ ಮುನ್ನೆಚ್ಚರಿಕೆ ಅತ್ಯಗತ್ಯ” ಎಂದು ಡಬ್ಲ್ಯೂಎಚ್ಒ ಆಗ್ನೇಯ ಏಷ್ಯಾದ ಪ್ರದೇಶದ ನಿರ್ದೇಶಕ್ಕೆ ಡಾ. ಪೂನಮ್ ಖೇತ್ರಪಾಲ್ ಸಿಂಗ್ ತಿಳಿಸಿದ್ದಾರೆ.

ಡಬ್ಲ್ಯೂ ಎಚ್ಒ ಜನತೆಗೆ “ಲಸಿಕೆ ಪಡೆದಿದ್ದೇವೆ ಎಂಬ ಹುಂಬತನದಲ್ಲಿ ಮುನ್ನೆಚ್ಚರಿಕೆ ಕಡೆಗಣನೆ ಬೇಡ. ಎರಡನೇದು ಹಾಕಿಸಿಕೊಳ್ಳದೇ ಇದ್ದವರು ತ್ವರಿತವಾಗಿ ಹಾಕಿಸಿಕೊಳ್ಳಿ. ಮನೆಯಿಂದ ಹೊರಹೋಗುವ ಮುನ್ನ ಮಾಸ್ಕ್ ಧಾರಣೆ ಮರೆಯಬೇಡಿ. ಸಾರ್ವಜನಿಕ ಸ್ಥಳಗಳಲ್ಲಿ ಸಾಮಾಜಿಕ ಅಂತರ ಪಾಲಿಸುವುದು ಅಗತ್ಯ. ಸಾಧ್ಯವಾದಷ್ಟು ಕೆಲದಿನಗಳ ಕಾಲ ಒಂದೇ ಸ್ಥಳದಲ್ಲಿ. ವಿದೇಶ ಪ್ರಯಾಣ ಕೆಲದಿನಗಳ ಮಟ್ಟಿಗೆ ಬೇಡವೇ ಬೇಡವೆಂದು” ಸಲಹೆ ನೀಡಿದೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

ಸಿಇಟಿ ಫಲಿತಾಂಶ ಪ್ರಕಟಣೆ

0

ಎಂಜಿನಿಯರಿಂಗ್ ಸೇರಿದಂತೆ ವೃತ್ತಿಪರ ಹಲವಾರು ಕೋರ್ಸ್ ಗಳ ಪ್ರವೇಶಕ್ಕೆ ಸಂಬಂಧಿಸಿದ ಅಭ್ಯರ್ಥಿಗಳಿಗೆ ಮತ್ತು ಸೀಟು ಹಂಚಿಕೆ ಮಾಡಲಾಗಿದೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಇದರ ಫಲಿತಾಂಶವನ್ನು ಪ್ರಕಟಿಸಿದೆ.

ಸೀಟು ಹಂಚಿಕೆಯಾದ ವಿದ್ಯಾರ್ಥಿಗಳು ‘ಚಾಯ್ಸ್’ ಆಯ್ಕೆ ಮಾಡಲು ನವೆಂಬರ್ 29 ರಿಂದ ಡಿಸೆಂಬರ್ 1ರವರೆಗೆ ಅವಕಾಶ ಕಲ್ಪಿಸಿ ಕೊಡಲಾಗಿದೆ.
ವಾಯ್ಸ್ ನಲ್ಲಿ ಒಟ್ಟು ನಾಲ್ಕು ಆಯ್ಕೆಗಳನ್ನು ನೀಡಲಾಗಿರುತ್ತದೆ.

ಒಂದನೇ ಚಾಯ್ಸ್ ನಲ್ಲಿ ಪ್ರಥಮ ಸುತ್ತಿನಲ್ಲಿ ಹಂಚಿಕೆಯಾದ ಸೀಟು ಸಂಪೂರ್ಣವಾಗಿ ಇಷ್ಟವಾಗಿದೆ. ಯಾವುದೇ ಬದಲಾವಣೆ ಅವಶ್ಯಕತೆ ಇಲ್ಲ. ಮುಂದಿನ ಸುತ್ತುಗಳಲ್ಲಿ ಯು ನೀಟ್ ವೈದ್ಯಕೀಯ, ದಂತ ವೈದ್ಯಕೀಯ, ಎಂಜಿನಿಯರಿಂಗ್, ಫಾರ್ ಸೈನ್ಸ್, ವೆಟರ್ನರಿ, ಹೀಗೆ ಹಲವಾರು ಕೋರ್ಸ್ ಗಳಿಗೆ ಭಾಗವಹಿಸಲು ಇಷ್ಟವಿರುವುದಿಲ್ಲ ಎಂಬುವುದು ಕಡ್ಡಾಯವಾಗಿ ನಮೂದಿಸಬೇಕು.

ಚಾಯ್ಸ್ ಎರಡರಲ್ಲಿ ಹಂಚಿಕೆಯಾದ ಸೀಟು ಇಷ್ಟವಾಗಿದ್ದರೂ, ಇನ್ನೂ ಉತ್ತಮ ಸೀಟನ್ನು ಪಡೆಯುವ ಮುಂದಿನ ಸುತ್ತಿನಲ್ಲಿ ಭಾಗವಹಿಸಬಹುದು. ಯುಜಿ ನೀಟ್ ವೈದ್ಯಕೀಯ, ವೈದ್ಯಕೀಯ ಕೋರ್ಸ್ ಗಳ ಸುತ್ತುಗಳಲ್ಲಿ ಭಾಗವಹಿಸಬಹುದು. ಎರಡನೇ ಸುತ್ತಿನಲ್ಲಿ ಅಭ್ಯರ್ಥಿಗಳಿಗೆ ಇಷ್ಟವಾದ ಸೀಟುಗಳು ಲಭ್ಯವಾಗದಿದ್ದಲ್ಲಿ, ಮೊದಲ ಸುತ್ತಿನಲ್ಲಿ ಹಂಚಿಕೆಯಾದ ಸೀಟು ಉಳಿಯುತ್ತದೆ.

ಚಾಯ್ಸ್ ಮೂರರಲ್ಲಿ ಹಂಚಿಕೆಯಾದ ಸೀಟನ್ನು ರದ್ದುಪಡಿಸಿ ಕೊಂಡು ಎಂಜಿನಿಯರಿಂಗ್ ಸೇರಿದಂತೆ ಹಲವು ಕೋರ್ಸ್ ಗಳ ಪ್ರವೇಶಕ್ಕೆ ಮುಂದಿನ ಸುತ್ತಿನಲ್ಲಿ ಭಾಗವಹಿಸಬಹುದಾಗಿದೆ.

ಚಾಯ್ಸ್ ನಾಲ್ಕರಲ್ಲಿ ಮೊದಲ ಸುತ್ತಿನಲ್ಲಿ ದೊರೆತಿರುವ ಸೀಟುಗಳು ತೃಪ್ತಿಕರವಾಗಿಲ್ಲ. ಯುಜಿಸಿಇಟಿ 2021ರ ಯಾವುದೇ ಸುತ್ತಿನ ಸೀಟುಗಳ ಹಂಚಿಕೆ ಯಲ್ಲಿ ಭಾಗವಹಿಸಲು ಅರ್ಹತೆ ಪಡೆಯುವುದಿಲ್ಲ. ಯುಜಿ ನೀಟ್ ವೈದ್ಯಕೀಯ ಅಥವಾ ಯಾವುದೇ ಕೋರ್ಸ್ಗಳ ಸುತ್ತುಗಳಲ್ಲಿ ಭಾಗವಹಿಸುವ ಬಗ್ಗೆ ಅಭ್ಯರ್ಥಿಗಳು ಎಚ್ಚರಿಕೆಯಿಂದ ಚಾಯ್ಸ್ ಗಳನ್ನು ಆಯ್ಕೆ ಮಾಡಬೇಕು.

ಶುಲ್ಕ ಪಾವತಿ ಮತ್ತು ಪ್ರವೇಶ ಪತ್ರಗಳನ್ನು ಡೌನ್ಲೋಡ್ ಮಾಡಿಕೊಳ್ಳಲು ಚಾಯ್ಸ್ 1ರ ಅಭ್ಯರ್ಥಿಗಳಿಗೆ ಮಾತ್ರ ನವೆಂಬರ್ 30ರಿಂದ ಡಿಸೆಂಬರ್ 2 ರ ವರೆಗೆ ಅವಕಾಶ ನೀಡಲಾಗಿದೆ. ಈ ಅಭ್ಯರ್ಥಿಗಳು ಕಾಲೇಜಿನಲ್ಲಿ ಪ್ರವೇಶ ಪಡೆಯಲು ಡಿ. 3ರ ವರೆಗೆ ಸಮಯ ನೀಡಲಾಗಿದೆ.

ಎಚ್ಚರವಿದ್ದರೆ ಓಮಿಕ್ರಾನ್ ತಡೆ – ಡಾ.ಸುಧಾಕರ್

0

ಕರೋನವೈರಸ್ ರೂಪಾಂತರ ತಳಿ ಓಮಿಕ್ರಾನ್ ಅನೇಕ ದೇಶದಲ್ಲಿ ಕಾಣಿಸಿಕೊಂಡಿದೆ. ಇದು ಅತಿವೇಗವಾಗಿ ಹರಡುವುದರಿಂದ ರಾಜ್ಯದ ಜನರು ಎಚ್ಚರಿಕೆ ವಹಿಸುವಂತೆ ಆರೋಗ್ಯ ಸಚಿವ ಡಾ. ಸುಧಾಕರ್ ಮನವಿ
ಮಾಡಿಕೊಂಡಿದ್ದಾರೆ.

ರೂಪಾಂತರಿ ಕೊರೋನಾ ವೈರಸ್ ಅತೀ ವೇಗವಾಗಿ ಹರಡುತ್ತಿದೆ. ವಿಶ್ವ ಆರೋಗ್ಯ ಸಂಸ್ಥೆಯೇ ಇದರ ಬಗ್ಗೆ ಮಾಹಿತಿ ನೀಡಿದೆ. ವೈರಸ್ ಬಗ್ಗೆ ಸದ್ಯಕ್ಕೆ ಆತಂಕ ಬೇಡ. ಈ ಸಂಬಂಧ ರಾಜ್ಯದಲ್ಲಿ ಈಗಾಗಲೇ ಹೊಸ ಮಾರ್ಗಸೂಚಿಯನ್ನು ಬಿಡುಗಡೆ ಮಾಡಲಾಗಿದೆ. ರೂಪಾಂತರಿ ವೈರಸ್ ಇರುವ ದೇಶದಿಂದ ಬಂದರೆ ವಿಮಾನ ನಿಲ್ದಾಣದಲ್ಲಿಯೇ ಸಂಪೂರ್ಣ ಪರೀಕ್ಷೆ ನಡೆಸಲಾಗುತ್ತಿದೆ. ಕೋಫಿ ಕರೆದಿ ಪಾಸಿಟಿವ್ ಬಂದರೆ ಪ್ರತ್ಯೇಕವಾಗಿ ಇಡಲಾಗುತ್ತದೆ. ಒಂದು ವಾರದ ಬಳಿಕ ಮತ್ತೊಂದು ಪರೀಕ್ಷೆ ಮಾಡಲಾಗುತ್ತದೆ ಎಂದು ಆರೋಗ್ಯ ಸಚಿವ ಡಾ. ಸುಧಾಕರ್ ಅವರು ತಿಳಿಸಿದರು.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

ಓಮಿಕ್ರಾನ್ ತಡೆ: ಪ್ರಧಾನಿ ಪೂರ್ವ ಸಿದ್ಧತಾ ಸಭೆ

0

ಕೋವಿಡ್-19 ಎರಡನೇ ಅಲೆ ಬಳಿಕ ಈಗ ವಿಶ್ವದಲ್ಲಿ ಓಮಿಕ್ರೋನ್ ರೂಪಾಂತರ ವೈರಸ್ ಅತ್ಯಂತ ಅಪಾಯಕಾರಿಯಾಗಿದೆ. ಭಾರತದಲ್ಲಿ ಮತ್ತೊಂದು ಅಲೆಯನ್ನು ತಪ್ಪಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಜ್ಜಾಗುತ್ತಿವೆ.

ದಕ್ಷಿಣ ಆಫ್ರಿಕಾದಲ್ಲಿ ಪತ್ತೆಯಾಗಿರುವ ಅತ್ಯಂತ ಮಾರಕ ಎನ್ನಲಾಗುತ್ತಿರುವ ‘ಓಮಿಕ್ರಾನ್’ ರೂಪಾಂತರಿ ವೈರಸ್ ಹಲವು ದೇಶಗಳಲ್ಲಿ ಆತಂಕವನ್ನು ಉಂಟುಮಾಡಿದೆ.

ಭಾರತದಲ್ಲಿ ಈ ವೈರಸ್ ಪತ್ತೆಯಾಗಿಲ್ಲದಿದ್ದರೂ ಸಹ ಮುಂಜಾಗೃತಾ ಕ್ರಮವಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಮರೋಪಾದಿಯಲ್ಲಿ ಕ್ರಮಗಳನ್ನು ಕೈಗೊಳ್ಳಲಾಗುತ್ತಿವೆ.

ರೂಪಾಂತರಿ ಓಮಿಕ್ರಾನ್ ಪತ್ತೆ ಹಿನ್ನೆಲೆಯಲ್ಲಿ ಮಾನ್ಯ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಶನಿವಾರ ವಿವಿಧ ಸಚಿವಾಲಯಗಳ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು. ಹೊಸ ರೂಪಾಂತರಿ ಏನು-ಎತ್ತ? ಅದರ ಅಪಾಯಗಳೇನು? ಯಾವ ರಾಷ್ಟ್ರಗಳಲ್ಲಿ ಈ ವೈರಸ್ ಪತ್ತೆಯಾಗಿದೆ ಹಾಗೂ ಇನ್ನು ಹಲವು ಮಾಹಿತಿಯನ್ನು ಅಧಿಕಾರಿಗಳು ಪ್ರಧಾನಿ ಅವರಿಗೆ ವಿವರಿಸಿದರು.

ಪ್ರಧಾನಿ ಮೋದಿ ಅವರು ಅಧಿಕಾರಿಗಳಿಗೆ ಅಂತರಾಷ್ಟ್ರೀಯ ಪ್ರಯಾಣಿಕರ ಮೇಲೆ ಹೆಚ್ಚಿನ ನಿಗಾ ಇರಿಸುವುದು. ವಿದೇಶಗಳಿಂದ ಬರುವವರನ್ನು ವಾರೆಂಟ್ ಎಂಗೆ ಒಳಪಡಿಸಿ ಜಿನೋಮ್ ಸೀಕ್ವೆನ್ಸ್ ನಡೆಸಬೇಕು. ಸೋಂಕು ಕಾಣಿಸಿಕೊಂಡಿರುವ ದೇಶದಿಂದ ಬಂದವರ ಮೇಲೆ ಹೆಚ್ಚು ನಿಗಾ ಇರಿಸಬೇಕು. ಹೆಚ್ಚು ಸೋಂಕು ಇರುವೆಡೆ ಕಂಟೈನ್ ಮೆಂಟ್ ಮತ್ತು ನಿಗಾ ಚಟುವಟಿಕೆ ತೀವ್ರಗೊಳಿಸಬೇಕು. ಅಂತರ್ರಾಷ್ಟ್ರೀಯ ವಿಮಾನ ನಿರ್ಬಂಧ ಸಡಿಲಗೊಳಿಸುವ ಯೋಜನೆಯು ಮುಂದೂಡಬೇಕು. ಕೇಂದ್ರ ಆರೋಗ್ಯ ಸಚಿವಾಲಯವು ರಾಜ್ಯಗಳ ಜೊತೆ ನಿಕಟವಾಗಿ ಕಾರ್ಯನಿರ್ವಹಿಸಬೇಕು ಎಂದು ಸಲಹೇ ನೀಡಿದ್ದಾರೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

ಶಿವಮೊಗ್ಗ-ಭದ್ರಾವತಿ ಪೋಲಿಸ್ ಕಮೀಷನರೇಟ್ ಪ್ರಸ್ತಾವನೆ.

0

ಶಿವಮೊಗ್ಗ ಭದ್ರಾವತಿ ಕಮಿಷನರೇಟ್ ಮಾಡಲು ಪ್ರಸ್ತಾವನೆ ಇದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ತಿಳಿಸಿದರು.

ಭದ್ರಾವತಿಗೆ ಇನ್ನೊಬ್ಬರು ಐಪಿಎಸ್ ಅಧಿಕಾರಿ ಹಾಕಲಾಗಿದೆ. ಲಕ್ಷಾಂತರ ಪ್ರಕರಣಗಳಿವೆ. ಎಫ್ ಎಸ್ ಎಲ್ ಆರಂಭ ಮಾಡುವ ಚಿಂತನೆ ಇದೆ. ಪ್ರಸ್ತುತ ಬಳ್ಳಾರಿಯಲ್ಲಿ ಎಫ್ ಎಸ್ ಎಲ್ ಆರಂಭ ಮಾಡಲಾಗುತ್ತದೆ ಎಂದು ಸಚಿವರು ಹೇಳಿದರು.

ಶಿವಮೊಗ್ಗದಲ್ಲಿ ಇತ್ತೀಚಿಗೆ ಹಫ್ತಾ ವಸೂಲಿ ಪ್ರಕರಣದಬಗ್ಗೆ ಮಾತನಾಡಿದರು. ಇಂತಹ ಪ್ರಕರಣಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಒಂದೊಂದೇ ಠಾಣೆಯಲ್ಲಿ ಎಂಟರಿಂದ ಹತ್ತು ವರ್ಷಗಳ ಕಾಲ ಪೊಲೀಸರು ಕಾರ್ಯನಿರ್ವಹಿಸುತ್ತಿದ್ದಾರೆ. ಒಂದು ವೇಳೆ ಅಪರಾಧಿಗಳ ಜೊತೆಗೆ ಕೈಜೋಡಿಸಿದರೆ ಅಂತವರ ವಿರುದ್ಧ ಕಠಿಣ ಕ್ರಮವನ್ನು ಕೈಗೊಳ್ಳಲಾಗುವುದು. ಮುಂದಿನ ದಿನಗಳಲ್ಲಿ ಶಿವಮೊಗ್ಗದಲ್ಲಿ ಎಫ್ ಎಸ್ ಎಲ್ ಆಗಬೇಕೆಂಬ ಬೇಡಿಕೆಯಿದೆ. ಪೊಲೀಸ್ ಠಾಣೆಗಳನ್ನು ಸದ್ಯಕ್ಕೆ ಅಪ್ ಗ್ರೇಡ್ ಮಾಡಲಾಗಿದೆ. ಜನಸಂಖ್ಯೆ ಆಧಾರದ ಮೇಲೆ ಠಾಣೆಗಳನ್ನು ಮಾಡಲಾಗುವುದು ಎಂದು ಮಾನ್ಯ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಮಾಧ್ಯಮ ಮಿತ್ರರಿಗೆ ತಿಳಿಸಿದ್ದಾರೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

ಮೆಸ್ಕಾಂ ‘ಬೆಳಕು’ ವಿದ್ಯುತ್ ಯೋಜನೆ.

0

ವಿದ್ಯುತ್ ರಹಿತ ಮನೆಗಳಿಗೆ ಮೆಸ್ಕಾಂ ವತಿಯಿಂದ ಬೆಳಕು ಯೋಜನೆಯಡಿ ವಿದ್ಯುತ್ ಸಂಪರ್ಕ ಕಲ್ಪಿಸಲಾಗುತ್ತಿದೆ ಎಂದು ಹೊಳೆಹೊನ್ನೂರು ಮೆಸ್ಕಾಂ ಉಪ ವಿಭಾಗ ಕಚೇರಿಯ ಎ ಇ ಇ ವಿಜಯ್ ಕುಮಾರ್ ತಿಳಿಸಿದರು.

ಬೆಳಕು ಯೋಜನೆಯ ಬಗ್ಗೆ ಎಲ್ಲಾ ಗ್ರಾಮ ಪಂಚಾಯಿತಿಗಳಿಗೂ ಪತ್ರ ಕಳುಹಿಸಿಕೊಡಲಾಗಿದೆ. ಪಂಚಾಯಿತಿ ಅಧಿಕಾರಿಗಳು ಅವರ ಪಂಚಾಯಿತಿ ವ್ಯಾಪ್ತಿಯಲ್ಲಿರುವ ವಿದ್ಯುತ್ ರಹಿತ ಮನೆಗಳ ಪಟ್ಟಿ ಮಾಡಬೇಕು. ಫಲಾನುಭವಿಗಳ ಪಡಿತರ ಚೀಟಿ, ಆಧಾರ್ ಕಾರ್ಡ್ ಮತ್ತು ಮೊಬೈಲ್ ಸಂಖ್ಯೆ ಮಾಹಿತಿಯನ್ನು. ಸದರಿ ಪಟ್ಟಿಯಂತೆ ಯೋಜನಾ ವರದಿ ತಯಾರಿಸಿ ವಿದ್ಯುತ್ ರಹಿತ ಮನೆಗಳಿಗೆ ಉಚಿತ ವಿದ್ಯುತ್ ಸಂಪರ್ಕ ಕಲ್ಪಿಸಿ ಕೊಡುವ ವ್ಯವಸ್ಥೆ ಮಾಡಲಾಗುತ್ತದೆ. ಈ ಸೌಲಭ್ಯವನ್ನು ಎಲ್ಲರೂ ಸದುಪಯೋಗ ಪಡೆದುಕೊಳ್ಳಬೇಕು ಎಂದು ವಿಜಯ್ ಕುಮಾರ್ ಮಾಧ್ಯಮ ಮಿತ್ರರಿಗೆ ತಿಳಿಸಿದರು.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

ರಾಜ್ಯದಲ್ಲಿ ಕ್ಷೇತ್ರ ಪುನರ್ವಿಂಗಡಣೆ ಆಯೋಗ

0

ಕ್ಷೇತ್ರ ಮರು ವಿಂಗಡಣೆ ಆಯೋಗದ ರಚನೆಗೆ ಆದೇಶ ಹೊರಡಿಸಿದ ರಾಜ್ಯ ಸರ್ಕಾರ. ಜನಸಂಖ್ಯೆ ಆಧಾರದಲ್ಲಿ ಪಂಚಾಯ್ತಿಗಳ ಕ್ಷೇತ್ರ ಮರುವಿಂಗಡನೆ ಮತ್ತು ಮೀಸಲು ನಿಗದಿಗೆ ರಾಜ್ಯ ಸರ್ಕಾರ ರಚಿಸಿದ್ದ ಪಂಚಾಯಿತಿಗಳ ಸೀಮಾ ನಿರ್ಣಯಕ್ಕೆ ಚಾಲನೆ ಸಿಕ್ಕಿದೆ.

ಈ ಆಯೋಗದ ಅಧ್ಯಕ್ಷರಾಗಿ ನಿವೃತ್ತ ಅಪರ ಮುಖ್ಯ ಕಾರ್ಯದರ್ಶಿ ಲಕ್ಷ್ಮೀನಾರಾಯಣ, ಸದಸ್ಯರಾಗಿ ಸರ್ಕಾರದ ಕಾರ್ಯದರ್ಶಿ ಎಸ್.ಎಸ್. ಪಟ್ಟಣಶೆಟ್ಟಿ, ಪಂಚಾಯತ ತಜ್ಞರಾಗಿ ರಾಮಪ್ರಿಯ ಮತ್ತು ಪದನಿಮಿತ್ತ ಸದಸ್ಯರಾಗಿ ಆರ್ ಡಿ ಪಿ ಆರ್ ಇಲಾಖೆಯ ಆಯುಕ್ತರು ಸೀಮಾ ನಿರ್ಣಯ ಅಂತಿಮಗೊಳಿಸಲಿದ್ದಾರೆ.

ಪ್ರತಿ ಕ್ಷೇತ್ರಗಳ ಜನಸಂಖ್ಯೆಯು ಕಾರ್ಯ ಸಾಧ್ಯವಾಗುವಷ್ಟು ಸಮಾನವಾಗಿರುವಂತೆ ಸೀಮಾ ನಿರ್ಣಯ ಗೊಳಿಸುವುದು. ಜನಸಂಖ್ಯೆ ಆಧಾರದಲ್ಲಿ ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಮತ್ತು ಗ್ರಾಮ ಪಂಚಾಯಿತಿ ಚುನಾಯಿಸಬೇಕು ಸದಸ್ಯರ ಸಂಖ್ಯೆ ನಿಗದಿಪಡಿಸುವುದು. ಪಂಚಾಯಿತಿಗೆ ಚುನಾಯಿಸಲು ಅಗತ್ಯವಾದ ಸದಸ್ಯರ ಸಂಖ್ಯೆಯನ್ನು ಕ್ಷೇತ್ರಗಳಾಗಿ ವಿಂಗಡಿಸಲು ಶಿಫಾರಸು ಮಾಡುವುದು. ಪ್ರತಿಯೊಂದು ಕ್ಷೇತ್ರವು ಭೌಗೋಳಿಕವಾಗಿ ನಿಬಿಡತೆ ಇರುವಂತೆ ಸೀಮಾ ನಿರ್ಣಯಿಸುವುದು. ಸರ್ಕಾರ ನಿಗದಿಪಡಿಸಿದ ಪ್ರಕಾರ್ಯಗಳನ್ನು ನೆರವೇರಿಸುವುದು ಈ ಆಯೋಗದ ಕಾರ್ಯಗಳಾಗಿವೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.