Wednesday, June 10, 2026
Wednesday, June 10, 2026
Home Blog Page 2022

ಗಾಂಜಾ ಸಮಸ್ಯೆ : ಶಾಸಕರ ಪತ್ರ

0

ಶಿವಮೊಗ್ಗ ನಗರದಲ್ಲಿ ಇತ್ತೀಚೆಗೆ ಗಾಂಜಾ ಹಾವಳಿ ಹೆಚ್ಚಾಗಿದ್ದು, ಯುವ ಸಮೂಹ ಮಾದಕ ವ್ಯಸನಕ್ಕೆ ಬಲಿಯಾಗುತ್ತಿದೆ. ಇದರಲ್ಲಿ ಬಹುಪಾಲು ಶಾಲಾ-ಕಾಲೇಜು ವಿದ್ಯಾರ್ಥಿಗಳು ಮಾದಕ ವ್ಯಸನದಿಂದ ತಮ್ಮ ಭವಿಷ್ಯವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ.
ಈ ಕುರಿತು ಸ್ಥಳೀಯರು ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ. ಶಿವಮೊಗ್ಗ ನಗರದ ಎಲ್ಲಾ ಕಡೆಗಳಲ್ಲಿಯೂ ಗಾಂಜಾ ದೊರೆಯುತ್ತಿದೆ ಎಂಬ ಮಾತು ಕೇಳಿಬರುತ್ತಿದೆ. ಶಾಲೆಗಳು ಪ್ರಾರಂಭ ವಾಗದೇ ಇದ್ದುದ್ದರಿಂದ ಶಾಲಾ-ಕಾಲೇಜುಗಳ ಮೈದಾನದಲ್ಲಿ ಗುಂಪು-ಗುಂಪಾಗಿ ಗಾಂಜಾ ಸೇವನೆ ಮತ್ತು ಮಾರಾಟದ ಅವ್ಯಾವಹತವಾಗಿ ನಡೆಯುತ್ತಿದೆ ಎಂಬ ಬಗ್ಗೆ ಸಾರ್ವಜನಿಕರಿಂದ ದೂರು ದಾಖಲಾಗಿದೆ. ಅಲ್ಲದೆ ಇನ್ನೂ ಅಭಿವೃದ್ಧಿಯಾಗದೇ ಇರುವ ಬಡಾವಣೆಗಳ ಖಾಲಿ ನಿವೇಶನದಲ್ಲಿ ಸಹ ಇದೇ ವಾತಾವರಣ ಕಂಡುಬಂದಿದೆ ಎಂದು ಸ್ಥಳೀಯರು ಹೇಳಿದ್ದಾರೆ.


ನಗರದ ಕೃಷಿ ಕಾಲೇಜು ಹತ್ತಿರ ಇರುವ ಬಡಾವಣೆಗಳಲ್ಲಿ ಪರಸ್ಥಳದ ವಿದ್ಯಾರ್ಥಿಗಳು ಹಾಗೂ ಯುವಕರು ಬಹು ಸಂಖ್ಯೆಯಲ್ಲಿ ಮಾದಕ ವ್ಯಸನಿಗಳಾಗುತ್ತಿರುವುದು ಕಂಡುಬರುತ್ತಿದೆ.
ಗಾಂಜಾ ಸೇವನೆಯ ಮತ್ತಿನಲ್ಲಿ ಯುವಕರ ಗುಂಪು ದಾರಿಹೋಕರ ಮೇಲೆ ಹಲ್ಲೆಗೈಯುತ್ತಿದೆ. ಜನರ ಬಳಿ ಇರುವ ಬೆಲೆಬಾಳುವ ವಸ್ತುಗಳನ್ನು ದೋಚುತ್ತಾರೆ. ಪ್ರತಿಭಟಿಸಿದರೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡುತ್ತಾರೆ.ಇಂತಹ ಘಟನೆಗಳು ಪ್ರತಿದಿನ ಕೇಳಿಬರುತ್ತಿವೆ.
ಈ ಹಿನ್ನೆಲೆಯಲ್ಲಿ ಸಾರ್ವಜನಿಕರು ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದಾರೆ. ಈ ಎಲ್ಲಾ ಗಂಭೀರ ಸಂಗತಿಗಳನ್ನು ವಿಧಾನಪರಿಷತ್ತಿನ ಗೌರವಾನ್ವಿತ ಸದಸ್ಯರಾದ ಶ್ರೀ ಆಯನೂರು ಮಂಜುನಾಥ ಅವರು
ಶಿವಮೊಗ್ಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಪತ್ರದ ಮೂಲಕ ಗಮನ ಸೆಳೆದಿದ್ದಾರೆ. ಶೀಘ್ರ ಕ್ರಮ ತೆಗೆದುಕೊಳ್ಳಲುವಂತೆ ಒತ್ತಾಯಿಸಿದ್ದಾರೆ.

ಶಿವಮೊಗ್ಗದಲ್ಲಿ ಪರಿಸರ ಜಾಗೃತಿ ಜಾಥಾ

0

ಭಾರತ ಸರ್ಕಾರ ಯುವ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯದ ನೆಹರು ಯುವ ಕೇಂದ್ರ, ಮಹಾನಗರಪಾಲಿಕೆ, ಪಶು ವೈದ್ಯಕೀಯ ಮಹಾವಿದ್ಯಾಲಯ, ಎನ್‍ಎಸ್‍ಎಸ್ ಘಟಕ, ರೋಟರಿ, ಶಿವಮೊಗ್ಗ ಪದವಿ ಪೂರ್ವ ಹಾಗೂ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಶೀಪುರ ಇವರ ಸಂಯುಕ್ತಾಶ್ರಯದಲ್ಲಿ ಭಾರತ ಸರ್ಕಾರದ ಸ್ವಚ್ಛ ಭಾರತ್ ಅಭಿಯಾನದ ಅಡಿಯಲ್ಲಿ ಅಕ್ಟೋಬರ್ 1 ರಿಂದ 31 ರವರೆಗೆ ಪರಿಸರವನ್ನು ಪ್ಲಾಸ್ಟಿಕ್ ಮುಕ್ತವಾಗಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.


ಈ ಕಾರ್ಯಕ್ರಮದ ಅಂಗವಾಗಿ ಅ.22 ರಂದು ಕಾಶಿಪುರದಲ್ಲಿ ಹಮ್ಮಿಕೊಳ್ಳಲಾಗಿರುವ ಸ್ವಚ್ಚ ಭಾರತ ಕಾರ್ಯಕ್ರಮವನ್ನು ಜಿಲ್ಲಾ ಪಂಚಾಯತ್ ಸಿಇಓ ಎಂ.ಎಲ್.ವೈಶಾಲಿ ಉದ್ಘಾಟಿಸಿ ಮಾತನಾಡಿ, “ಸ್ವಚ್ಚ ಭಾರತದ ಕನಸು ಗಾಂಧೀಜಿಯವರ ಕಾಲದಿಂದ ಇದ್ದು, ಎಲ್ಲರೂ ಈ ಕಾರ್ಯಕ್ರಮದ ಯಶಸ್ಸಿಗಾಗಿ ಸಹಕರಿಸಬೇಕು. ಸ್ವಚ್ಚತೆಯು ಎಲ್ಲರ ಮನೆಗಳಿಂದ ಶುರುವಾಗಬೇಕು ” ಎಂದು ತಿಳಿಸಿದರು.
ಅಪರ ಜಿಲ್ಲಾಧಿಕಾರಿ ಡಾ.ನಾಗೇಂದ್ರ ಎಫ್.ಹೊನ್ನಳ್ಳಿಯವರು ಪ್ಲಾಸ್ಟಿಕ್ ನಿರ್ಮೂಲನೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, “ಪರಿಸರವನ್ನು ಸಚ್ಚವಾಗಿಡಲು ಸಾರ್ವಜನಿಕರ ಸಹಕಾರ ಅತ್ಯಗತ್ಯವಾಗಿದ್ದು ಕಸವನ್ನು ಸಮರ್ಪಕವಾಗಿ ವಿಲೇವಾರಿ ಮಾಡುವುದರ ಜೊತೆಗೆ, ಎಲ್ಲೆಂದರಲ್ಲಿ ಕಸ ಎಸೆಯುವುದನ್ನು ನಿಲ್ಲಿಸಬೇಕು. ಪ್ಲಾಸ್ಟಿಕ್ ಬಳಕೆಯಿಂದ ಪರಿಸರಕ್ಕೆ ಹಾನಿಯಾಗಿ, ರೋಗರುಜಿನಕ್ಕೆ ಕಾರಣವಾಗುತ್ತಿರುವುದರಿಂದ ಸಮರ್ಪಕ ವಿಲೇವಾರಿ” ಮಾಡಬೇಕೆಂದರು.ಮಹಾನಗರಪಾಲಿಕೆ ಸದಸ್ಯೆ ಅನಿತಾ ರವಿಶಂಕರ್, ಪಶು ವೈದ್ಯಕೀಯ ಮಹಾವಿದ್ಯಾಲಯದ ಡೀನ್ ಡಾ.ಪ್ರಕಾಶ್ ಮಾತನಾಡಿ ಪರಿಸರ ಜಾಗೃತಿ ಮೂಡಿಸಿದರು.


ಇದೇ ವೇಳೆ ವಿದ್ಯಾರ್ಥಿಗಳಿಂದ ಕಾಶಿಪುರ ಸುತ್ತಮುತ್ತಲಿನ ಬಡಾವಣೆಗಳಲ್ಲಿ ಸ್ವಚ್ಚತಾ ಕಾರ್ಯ ಮತ್ತು ಜಾಗೃತಿ ಜಾಥಾ ನಡೆಸಲಾಯಿತು. ಎನ್‍ಎಸ್‍ಎಸ್ ವಿದ್ಯಾರ್ಥಿಗಳು ಪರಿಸರ ಜಾಗೃತಿ ಕುರಿತು ಬೀದಿ ನಾಟಕ ಪ್ರದರ್ಶನ ನೀಡಿದರು. ಕಾರ್ಯಕ್ರಮದಲ್ಲಿ ನೆಹರು ಯುವ ಕೇಂದ್ರದ ಜಿಲ್ಲಾ ಯುವ ಅಧಿಕಾರಿ ಉಲ್ಲಾಸ್ ಕೆ.ಟಿ.ಕೆ, ಲೆಕ್ಕಾಧಿಕಾರಿ ರಮೇಶ್, ಎನ್‍ಎಸ್‍ಎಸ್ ಕಾರ್ಯಕ್ರಮಾಧಿಕಾರಿ ಡಾ.ಪರಿಸರ ನಾಗರಾಜ, ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಮಂಜುನಾಥ ಸ್ವಾಮಿ, ಕ್ಷೇತ್ರ ಪ್ರಚಾರ ಅಧಿಕಾರಿ ತುಕಾರಾಂಗೌಡ, ರೋಟರಿ ಶಿವಮೊಗ್ಗ ಪೂರ್ವದ ಅಧ್ಯಕ್ಷ ಮಂಜುನಾಥರಾವ್, ಕಾರ್ಯದರ್ಶಿ ಸತೀಶ್ಚಂದ್ರ, ಎನ್‍ಎಸ್‍ಎಸ್ ಅಧಿಕಾರಿಗಳಾದ ಧೂಳಪ್ಪ, ಡಾ.ವೆಂಕಟೇಶ್, ಸಮುದಾಯ ಸೇವೆಗಳ ನಿರ್ದೇಶಕ ಜಿ.ವಿಜಯಕುಮಾರ್, ಪರಿಸರ ಪ್ರೇಮಿ ಟಿ.ಎಸ್.ಮಹಾದೇವಸ್ವಾಮಿ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯ ಹಾಲಾನಾಯ್ಕ್, ಯುವ ಕಾರ್ಯಕರ್ತ ಶೇಖ್ ಹಸನ್, ದುತೇಂದ್ರ ಹಾಗೂ ಎನ್‍ಎಸ್‍ಎಸ್ ವಿದ್ಯಾರ್ಥಿಗಳು, ಸಾರ್ವಜನಿಕರು ಭಾಗವಹಿಸಿದ್ದರು.

ಗಾಳಿ , ಮಳೆಗೆ ತತ್ತರಿಸಿದ ಶಿವಮೊಗ್ಗ

0

ಶಿವಮೊಗ್ಗ ನಗರದಲ್ಲಿ ತಡರಾತ್ರಿ ಗುಡುಗು ಸಹಿತ ಧಾರಾಕಾರ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತ ಗೊಂಡಿತ್ತು. ಸ್ಮಾರ್ಟ್ ಸಿಟಿ ಕಾಮಗಾರಿಯಿಂದಾಗಿ ರಸ್ತೆಯ ಗುಂಡಿಗಳಲ್ಲಿ ನೀರು ತುಂಬಿದ ಕಾರಣ ವಾಹನ ಸವಾರರು ಹರಸಾಹಸ ಪಡುವಂತಾಗಿತ್ತು. ರಾಜ್ಯಾದ್ಯಂತ ಮುಂಗಾರು ಚುರುಕಾಗಿದ್ದು, ಹವಾಮಾನ ಇಲಾಖೆಯು ಇನ್ನೂ ನಾಲ್ಕು ದಿನಗಳ ಕಾಲ ಮಳೆ ಮುಂದುವರಿಯಲಿದ್ದು, ಕರಾವಳಿ ಜಿಲ್ಲೆಗಳಾದ ಉತ್ತರ ಕನ್ನಡ, ದಕ್ಷಿಣ ಕನ್ನಡ ಹಾಗೂ ಉಡುಪಿಯಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹೇಳಿದೆ. ಇದರೊಂದಿಗೆ ಈ ಜಿಲ್ಲೆ ಗಳಲ್ಲಿ ಯಲ್ಲೊ ಅಲರ್ಟ್ ಎಚ್ಚರಿಕೆ ನೀಡಿದೆ.

ಲಸಿಕೆ ಸಾಧನೆ: ಭಾರತೀಯರಿಗೆ ಅಭಿನಂದನೆ

0

ಭಾರತವು 100 ಕೋಟಿ ಕೋವಿಡ್- 19 ಲಸಿಕೆ ವಿತರಣೆಯಲ್ಲಿ ವಿಶ್ವದ ಎರಡನೇ ರಾಷ್ಟ್ರವಾಗಿ ಹೊರಹೊಮ್ಮಿದೆ. ಭಾರತದ ಹೆಮ್ಮೆಯ ಪ್ರಧಾನಮಂತ್ರಿಗಳಾದ ನರೇಂದ್ರ ಮೋದಿ ಅವರು ಇಂದು ದೇಶದ ಪ್ರಜೆಗಳನ್ನು ಉದ್ದೇಶಿಸಿ ಮಾತನಾಡಿ ಕೋವಿಡ್-19 ವಿರುದ್ಧ 100 ಕೋಟಿ ಲಸಿಕೆ ಸುರಕ್ಷಾ ಕವಚ. ಇದು ಪ್ರತಿಯೊಬ್ಬ ಭಾರತೀಯನ ಸಾಧನೆಯಾಗಿದೆ. ಲಸಿಕೆ ತಯಾರಕರು, ಆರೋಗ್ಯ ಕಾರ್ಯಕರ್ತರು ಅಭಿಯಾನ ಕಾರ್ಯಕ್ರಮದಲ್ಲಿ ಭಾಗಿಯಾಗಿರುವ ಎಲ್ಲರಿಗೂ ಕೃತಜ್ಞತೆಗಳನ್ನು ಸಲ್ಲಿಸಿದ್ದಾರೆ.

ಕೋವಿಡ್ ವಿರುದ್ಧ ಲಸಿಕೆ ಅವಶ್ಯಕ: ಡಾ. ರಣದೀಪ್ ಗುಲೇರಿಯಾ

0

ಡಾ. ರಣದೀಪ್ ಗುಲೇರಿಯಾ ಅವರು ಟ್ವಿಟರ್ ಮೂಲಕ ಲಸಿಕಾಕರಣದ ಪಾತ್ರವೇನು, ಮತ್ತು ಭಾರತಕ್ಕೆ ಮುಂದಿರುವ ಮಾರ್ಗವೇನು ಎಂಬುವುದರ ಬಗ್ಗೆ ಹಾಗೂ ಲಸಿಕೆ ಪಡೆಯುವುದರಿಂದ ಯಾವ ಪ್ರಯೋಜನಗಳಿವೆ ಎಂದು ಸಾಮಾಜಿಕ ಜಾಲತಾಣವಾದ, ಕೇಂದ್ರ ಆರೋಗ್ಯ ಇಲಾಖೆಯ ಟ್ವಿಟರ್ ಮೂಲಕ ತಿಳಿಸಿದ್ದಾರೆ.

ಹುತಾತ್ಮ ಪೋಲಿಸರಿಗೆ ಗೌರವ ನಮನ

0

ಕರ್ತವ್ಯದ ಸಂದರ್ಭ ದೇಶಾದ್ಯಂತ ಮರಣವನ್ನಪ್ಪಿದ ಪೋಲಿಸರಿಗೆ ಪೋಲಿಸ್ ಹುತಾತ್ಮರ ದಿನಾಚರಣೆ ಅಂಗವಾಗಿ ಇಂದು ಜಿಲ್ಲಾ ಪೋಲಿಸ್ ವತಿಯಿಂದ ನಮನ ಸಲ್ಲಿಸಲಾಯಿತು. ನಗರದ ಜಿಲ್ಲಾ ಸಶಸ್ತ್ರ ಮೀಸಲು ಪಡೆ (ಡಿಎಆರ್) ಮೈದಾನದಲ್ಲಿ ಪೋಲಿಸರು ಗೌರವ ಸಮರ್ಪಣೆ ಮಾಡಿದರು. ಈ ಕಾರ್ಯಕ್ರಮದಲ್ಲಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಮುಸ್ತಫಾ ಹುಸೇನ್, ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್, ಜಿಲ್ಲಾ ರಕ್ಷಣಾಧಿಕಾರಿ ಲಕ್ಷ್ಮೀ ಪ್ರಸಾದ್, ಹೆಚ್ಚುವರಿಗೆ ರಕ್ಷಣಾಧಿಕಾರಿ ಹೆಚ್.ಟಿ.ಶೇಖರ್ ಸೇರಿದಂತೆ ಹಲವು ಗಣ್ಯರು ಪುಷ್ಪಗುಚ್ಚ ಇರಿಸಿ ನಮನ ಸಲ್ಲಿಸಿದರು. ಇದೇ ವೇಳೆ ಪೋಲಿಸರು ಗಾಳಿಯಲ್ಲಿ ಮೂರು ಸುತ್ತು ಗುಂಡು ಹಾರಿಸಿ ಹುತಾತ್ಮ ಪೋಲಿಸರಿಗೆ ಗೌರವ ಸಲ್ಲಿಸಿದರು.

ಬೆಳೆ ನಾಶ, ಖೇದಕರ: ಕೃಷಿ ಸಚಿವ ಬಿ.ಸಿ. ಪಾಟೀಲ್

0

ಹೀರೆಕೆರೂರು, ರಟ್ಟಿಹಳ್ಳಿ ತಾಲೂಕಿನ ತಿಂಗಳಗೊಂದಿ ಗ್ರಾಮದಲ್ಲಿ ಬಸವರಾಜ್ ಎಂಬ ಕೃಷಿಕರ ಬಾಳೆತೋಟವನ್ನು ದುಷ್ಕರ್ಮಿಗಳು ಘಾಸಿಗೊಳಿಸಿದ್ದಾರೆ. ಮಾನ್ಯ ಕೃಷಿ ಸಚಿವರಾದ ಬಿ.ಸಿ. ಪಾಟೀಲ್ ಅವರು ಹಾನಿಯಾದ ಸ್ಥಳಕ್ಕೆ ಭೇಟಿ ನೀಡಿ, “ರೈತರು ಕಷ್ಟಪಟ್ಟು ಬೆಳೆದ ಬೆಳೆಯನ್ನು ಕ್ರೂರ ಮನಸ್ಸು ಉಳ್ಳವರು, ಬೆಳೆಯನ್ನು ನಾಶ ಮಾಡಿರುವುದು ಬೇಸರದ ಸಂಗತಿಯಾಗಿದೆ”. ಈ ವಿಷಯದ ಬಗ್ಗೆ ಪೊಲೀಸರೊಂದಿಗೆ ಮಾತನಾಡಿದ್ದೇನೆ, ಈ ಕೃತ್ಯಕ್ಕೆ ಭಾಗಿಯಾಗಿರುವವರ ವಿರುದ್ಧ ಕಠಿಣ ಕ್ರಮವನ್ನು ಕೈಗೊಳ್ಳಲಾಗುವುದು ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ್ ಅವರು ತಿಳಿಸಿದರು.

ಮಲೆನಾಡಿನಾದ್ಯಂತ ಸೀಗೆಹುಣ್ಣಿಮೆ ಸಂಭ್ರಮ

0

ತಾಳಗುಪ್ಪ: ಇಂದು ಭೂ‌ಮಾತೆಯ ಸೀಮಂತ ಹಬ್ಬವಾದ ಭೂಮಿ ಹುಣ್ಣಿಮೆ ಹಬ್ಬವನ್ನು ವಿಜೃಂಬಣೆಯಿಂದ ಆಚರಿಸಲಾಯಿತು. ಹೋಬಳಿಯ ಎಲ್ಲೆಡೆ ರೈತರು ತಮ್ಮ ಜಮೀನಿನಲ್ಲಿ ಫಸಲು ಮೈ ತುಂಬಿದ ಈ ದಿನವನ್ನು ಪೂಜಿಸುವ ಪದ್ದತಿ ಹಿಂದಿನಿಂದಲೂ ನಡೆದು ಬಂದಿದೆ. ಹುಣ್ಣಿಮೆಯ ಈ ದಿನ ಮಲೆನಾಡಿನ ರೈತರು ನಸುಕಿನಲ್ಲಿ ಎದ್ದು ವಿವಿಧ ಎಲೆಗಳ ಸೊಪ್ಪನ್ನು ಬೇಯಿಸಿ ಅದನ್ನು ತಮ್ಮ ಜಮೀನಿನಲ್ಲಿ ಎಲ್ಲೆಡೆ ಹಾಕುತ್ತಾರೆ. ಇದಕ್ಕೆ ಅಚ್ಚು ಬೀರುವುದು ಎನ್ನುತ್ತಾರೆ. ನಂತರ ಜಮೀನಿನಲ್ಲಿ ದೇವರ ಪ್ರತಿಷ್ಠಾಪಿಸಿ ಪೂಜೆ ಮಾಡಿ ಕಡುಬು ನೈವೇದ್ಯ ಮಾಡಿ ಅಲ್ಲಿಯೇ ಊಟ ಮಾಡುವ ಪದ್ದತಿ ಆಚರಿಸುತ್ತಾರೆ. ಕೃಷಿಕ ಹೀರೆಮನೆ ಬಾಲಚಂದ್ರರವರ ತೋಟದಲ್ಲಿ ಭೂ ಹುಣ್ಣಿಮೆಯನ್ನು ಆಚರಿಸಲಾಯಿತು. ನಮಗೆ ಅನ್ನ ನೀಡುತ್ತಿರುವ ಭೂಮಿತಾಯಿಗೆ ಕೃತಜ಼ತೆ ಸಲ್ಲಿಸುವ ಪರಿ ಇದಾಗಿದೆ. ವರದಿ ಕೃಪೆ: ಶ್ರೀ. ರಾಘವೇಂದ್ರ ಶರ್ಮಾ ತಲವಾಟ. ನಿರೂಪಣಾ ಧ್ವನಿ: ರಚನಾ.ಕೆ.ಆರ್

ಬಸವರಾಜ್ ಬೊಮ್ಮಾಯಿ ಸರ್ಕಾರಕ್ಕೆ ಬಿ.ಎಸ್. ಯಡಿಯೂರಪ್ಪನವರ ಶ್ಲಾಘನೆ

0

ಶಿವಮೊಗ್ಗದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ಕೇಂದ್ರ ಹಾಗೂ ರಾಜ್ಯ ಸರ್ಕಾರದ ಅಭಿವೃದ್ದಿ ಕಾರ್ಯಗಳ ಬಗ್ಗೆ ಶ್ಲಾಘಿಸಿದ್ದಾರೆ. ಕೇಂದ್ರ ಹಾಗೂ ರಾಜ್ಯ ಸರ್ಕಾರದ ಅಭಿವೃದ್ಧಿ ಕಾರ್ಯಗಳು ನೂರಕ್ಕೆ ನೂರು ಪ್ರಮಾಣದಷ್ಟು ಜನಸಾಮಾನ್ಯರಿಗೆ ಸಹಾಯಕವಾಗಿದೆ. ನಮ್ಮ ರಾಜ್ಯದ ಮಾನ್ಯ ಮುಖ್ಯಮಂತ್ರಿಗಳಾದ ಬಸವರಾಜ್ ಬೊಮ್ಮಯಿ, ನೇತೃತ್ವದ ಸರ್ಕಾರವು ಅಭಿವೃದ್ಧಿ ಕಾರ್ಯಗಳ ಮೂಲಕ ಜನರಿಗೆ ನೆರವಾಗುತ್ತಿದೆ. ವೃದ್ದಾಪ್ಯ ವೇತನ, ವಿಧವಾ ವೇತನ, ಅಂಗವಿಕಲರ ವೇತನಗಳಲ್ಲಿ 200ರೂ. ಗಳನ್ನು ಹೆಚ್ಚಿಸಲಾಗಿದೆ, ಹಾಗೂ ಲಕ್ಷಾಂತರ ಹೆಣ್ಣು ಮಕ್ಕಳಿಗೆ ನೆರವಾಗುವಂತೆ “ಭಾಗ್ಯ ಲಕ್ಷ್ಮೀ ಯೋಜನೆಯನ್ನು” ಜಾರಿಗೊಳಿಸಲಾಗಿದೆ. ಇದರಿಂದ ಹೆಣ್ಣು ಮಕ್ಕಳಿಗೆ ಸಹಾಯಕವಾಗಿದೆ. ನಮ್ಮ ದೇಶಕ್ಕೆ ನರೇಂದ್ರ ಮೋದಿಯವರಂತಹ ಪ್ರಧಾನಿಯನ್ನು ಪಡೆಯಲು ನಾವು ಅದೃಷ್ಟವಂತರು ಎಂದು ತಮ್ಮ ಅಭಿಪ್ರಾಯಗಳನ್ನು ಮಾಧ್ಯಮಗಳ ಎದುರು ಹಂಚಿಕೊಂಡರು.

ಮಲೆನಾಡಿನ ಅಮೂಲ್ಯ ಸಿರಿ:

0

ಶಿವಮೊಗ್ಗ ಲಕ್ಕಿನಕೊಪ್ಪ ಸರ್ಕಲ್ ನಲ್ಲಿರುವ ಒಂದು ಅಪರೂಪ ವಸ್ತು ಸಂಗ್ರಹಾಲಯ, ನಮ್ಮ ಗಮನ ಸೆಳೆಯುತ್ತದೆ ಅದೇ “ಅಮೂಲ್ಯ ಶೋಧ”. ಇದರ ಹಿನ್ನೆಲೆ ಅತ್ಯಂತ ಕುತೂಹಲ. ಇತಿಹಾಸ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದ, ಶ್ರೀ.ಹೆಚ್. ಖಂಡೋಬರಾವ್- ಯಶೋಧಮ್ಮರವರ ಪ್ರೇಮ ಸೌಧ. ಶ್ರೀ.ಹೆಚ್. ಖಂಡೋಬರಾವ್ ರವರು ಗತಿಸಿದ ತಮ್ಮ ಪತ್ನಿಯ ಪ್ರೇಮದ ಸಂಕೇತವಾಗಿ ಈ ಸಂಗ್ರಹಾಲಯವನ್ನು ರೂಪುಗೊಳಿಸಿದ್ದಾರೆ. 2008ರಲ್ಲಿ ಆರಂಭವಾದ ಈ ಅಮೂಲ್ಯ ಶೋಧ ಮಲೆನಾಡಿನ, ಅಷ್ಟೇಕೆ ಇಡೀ ನಾಡಿನಾದ್ಯಂತ ಇರುವ ಪುರಾತನ ವಸ್ತುಗಳ ಪ್ರಿಯರನ್ನ ಕೈ ಬೀಸಿ ಕರೆಯುತ್ತಿದೆ. ನಾಣ್ಯ ಸಂಗ್ರಹಕಾರಿಯಾಗಿಯು ಅತ್ಯಂತ ಪ್ರಸಿದ್ಧರಾಗಿರುವ ಖಂಡೋಬರಾವ್ ರವರು ಬಹುಮುಖಿ ಆಸಕ್ತಿಯ ಕೇಂದ್ರವಾದ ಈ ಅಮೂಲ್ಯ ಶೋಧ, ನಮ್ಮ ಮಲೆನಾಡಿನ ಮುಕುಟಕ್ಕೆ ಇಟ್ಟ ಕೀರ್ತಿ ಕಳಸವಾಗಿದೆ. ಇವರ ಈ ಕೊಡುಗೆಯನ್ನ ನಮ್ಮ ಮಲೆನಾಡಿನ ಆಸಕ್ತ ಬಳಗ ಮೆಚ್ಚಿ ಶ್ರೀ. ಹೆಚ್. ಖಂಡೋಬರಾವ್ ರವರಿಗೆ ಹಾರ್ಧಿಕವಾಗಿ, ಸತ್ಕಾರ, ಸನ್ಮಾನ,ಅಭಿಮಾನವನ್ನು ಅರ್ಪಿಸಿದೆ.