ಶಿವಮೊಗ್ಗದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ಕೇಂದ್ರ ಹಾಗೂ ರಾಜ್ಯ ಸರ್ಕಾರದ ಅಭಿವೃದ್ದಿ ಕಾರ್ಯಗಳ ಬಗ್ಗೆ ಶ್ಲಾಘಿಸಿದ್ದಾರೆ. ಕೇಂದ್ರ ಹಾಗೂ ರಾಜ್ಯ ಸರ್ಕಾರದ ಅಭಿವೃದ್ಧಿ ಕಾರ್ಯಗಳು ನೂರಕ್ಕೆ ನೂರು ಪ್ರಮಾಣದಷ್ಟು ಜನಸಾಮಾನ್ಯರಿಗೆ ಸಹಾಯಕವಾಗಿದೆ. ನಮ್ಮ ರಾಜ್ಯದ ಮಾನ್ಯ ಮುಖ್ಯಮಂತ್ರಿಗಳಾದ ಬಸವರಾಜ್ ಬೊಮ್ಮಯಿ, ನೇತೃತ್ವದ ಸರ್ಕಾರವು ಅಭಿವೃದ್ಧಿ ಕಾರ್ಯಗಳ ಮೂಲಕ ಜನರಿಗೆ ನೆರವಾಗುತ್ತಿದೆ. ವೃದ್ದಾಪ್ಯ ವೇತನ, ವಿಧವಾ ವೇತನ, ಅಂಗವಿಕಲರ ವೇತನಗಳಲ್ಲಿ 200ರೂ. ಗಳನ್ನು ಹೆಚ್ಚಿಸಲಾಗಿದೆ, ಹಾಗೂ ಲಕ್ಷಾಂತರ ಹೆಣ್ಣು ಮಕ್ಕಳಿಗೆ ನೆರವಾಗುವಂತೆ “ಭಾಗ್ಯ ಲಕ್ಷ್ಮೀ ಯೋಜನೆಯನ್ನು” ಜಾರಿಗೊಳಿಸಲಾಗಿದೆ. ಇದರಿಂದ ಹೆಣ್ಣು ಮಕ್ಕಳಿಗೆ ಸಹಾಯಕವಾಗಿದೆ. ನಮ್ಮ ದೇಶಕ್ಕೆ ನರೇಂದ್ರ ಮೋದಿಯವರಂತಹ ಪ್ರಧಾನಿಯನ್ನು ಪಡೆಯಲು ನಾವು ಅದೃಷ್ಟವಂತರು ಎಂದು ತಮ್ಮ ಅಭಿಪ್ರಾಯಗಳನ್ನು ಮಾಧ್ಯಮಗಳ ಎದುರು ಹಂಚಿಕೊಂಡರು.
ಮಲೆನಾಡಿನ ಅಮೂಲ್ಯ ಸಿರಿ:
ಶಿವಮೊಗ್ಗ ಲಕ್ಕಿನಕೊಪ್ಪ ಸರ್ಕಲ್ ನಲ್ಲಿರುವ ಒಂದು ಅಪರೂಪ ವಸ್ತು ಸಂಗ್ರಹಾಲಯ, ನಮ್ಮ ಗಮನ ಸೆಳೆಯುತ್ತದೆ ಅದೇ “ಅಮೂಲ್ಯ ಶೋಧ”. ಇದರ ಹಿನ್ನೆಲೆ ಅತ್ಯಂತ ಕುತೂಹಲ. ಇತಿಹಾಸ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದ, ಶ್ರೀ.ಹೆಚ್. ಖಂಡೋಬರಾವ್- ಯಶೋಧಮ್ಮರವರ ಪ್ರೇಮ ಸೌಧ. ಶ್ರೀ.ಹೆಚ್. ಖಂಡೋಬರಾವ್ ರವರು ಗತಿಸಿದ ತಮ್ಮ ಪತ್ನಿಯ ಪ್ರೇಮದ ಸಂಕೇತವಾಗಿ ಈ ಸಂಗ್ರಹಾಲಯವನ್ನು ರೂಪುಗೊಳಿಸಿದ್ದಾರೆ. 2008ರಲ್ಲಿ ಆರಂಭವಾದ ಈ ಅಮೂಲ್ಯ ಶೋಧ ಮಲೆನಾಡಿನ, ಅಷ್ಟೇಕೆ ಇಡೀ ನಾಡಿನಾದ್ಯಂತ ಇರುವ ಪುರಾತನ ವಸ್ತುಗಳ ಪ್ರಿಯರನ್ನ ಕೈ ಬೀಸಿ ಕರೆಯುತ್ತಿದೆ. ನಾಣ್ಯ ಸಂಗ್ರಹಕಾರಿಯಾಗಿಯು ಅತ್ಯಂತ ಪ್ರಸಿದ್ಧರಾಗಿರುವ ಖಂಡೋಬರಾವ್ ರವರು ಬಹುಮುಖಿ ಆಸಕ್ತಿಯ ಕೇಂದ್ರವಾದ ಈ ಅಮೂಲ್ಯ ಶೋಧ, ನಮ್ಮ ಮಲೆನಾಡಿನ ಮುಕುಟಕ್ಕೆ ಇಟ್ಟ ಕೀರ್ತಿ ಕಳಸವಾಗಿದೆ. ಇವರ ಈ ಕೊಡುಗೆಯನ್ನ ನಮ್ಮ ಮಲೆನಾಡಿನ ಆಸಕ್ತ ಬಳಗ ಮೆಚ್ಚಿ ಶ್ರೀ. ಹೆಚ್. ಖಂಡೋಬರಾವ್ ರವರಿಗೆ ಹಾರ್ಧಿಕವಾಗಿ, ಸತ್ಕಾರ, ಸನ್ಮಾನ,ಅಭಿಮಾನವನ್ನು ಅರ್ಪಿಸಿದೆ.
ಪೆಟ್ರೋಲ್, ಡಿಸೇಲ್ ಬೆಲೆ ಏರಿಕೆ ಖಂಡಿಸಿ ಏಕಾಂಗಿ ಪ್ರತಿಭಟನೆ
ದಿನದಿಂದ ದಿನಕ್ಕೆ ಅಗತ್ಯ ವಸ್ತುಗಳ ಬೆಲೆ ಏರಿಕೆ ಹಾಗೂ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಆಗುತ್ತಿರುವುದನ್ನು ಖಂಡಿಸಿ ಸಂಯುಕ್ತ ಜನತಾದಳದ ರಾಜ್ಯ ಕಾರ್ಯದರ್ಶಿ ಶಶಿಕುಮಾರ್. ಎಸ್ ಗೌಡ ಅವರು ಶಿವಮೊಗ್ಗ ನಗರದ ಗಾಂಧಿ ಪಾರ್ಕ್ ನ ಗಾಂಧಿ ಪ್ರತಿಮೆ ಎದುರು ಏಕಾಂಗಿ ಪ್ರತಿಭಟನೆ ನಡೆಸಿದರು. ಪ್ರತಿದಿನದ ಅಗತ್ಯವಸ್ತುಗಳ ಬೆಲೆ ಏರಿಕೆ ಹಾಗೂ ಗ್ಯಾಸ್, ಪೆಟ್ರೋಲ್, ಡೀಸೆಲ್ ಸೇರಿದಂತೆ ಇತರ ವಸ್ತುಗಳ ಬೆಲೆ ಏರಿಕೆ ಆಗುತ್ತಿದೆ. ಇದರಿಂದ ಜನಸಾಮಾನ್ಯರು ಜೀವನ ನಡೆಸುವುದು ಕಷ್ಟಕರವಾಗಿದೆ ಹಾಗಾಗಿ ಕೇಂದ್ರ ಸರ್ಕಾರ ಪೆಟ್ರೋಲ್, ಡೀಸೆಲ್ ಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು ಎಲೆಕ್ಟ್ರಾನಿಕ್ ವಾಹನಗಳಿಗೆ ಸರ್ಕಾರ ಹೆಚ್ಚಿನ ಉತ್ತೇಜನ ನೀಡಬೇಕು ಜೊತೆಗೆ ಬಿಪಿಎಲ್ ಕಾರ್ಡ್ ದಾರರಿಗೆ ಅಡಿಗೆ ಅನಿಲ, ಎಣ್ಣೆ, ಬೇಳೆಕಾಳುಗಳನ್ನು ರಿಯಾಯಿತಿ ದರದಲ್ಲಿ ಒದಗಿಸಬೇಕು ಎಂದು ಆಗ್ರಹಿಸಿ ಏಕಾಂಗಿ ಪ್ರತಿಭಟನೆ ನಡೆಸಿದರು.
ಸಾಗರದಲ್ಲಿ ಪ್ರವಾಸಿ ವಾಹನಗಳಿಂದ ಟ್ರಾಫಿಕ್ ಜಾಮ್
ದಸರಾ ಹಬ್ಬದ ಪ್ರಯುಕ್ತ ಸಾಲುಸಾಲಾಗಿ ರಜೆಗಳಿರುವುದರಿಂದ ಪ್ರವಾಸಿಗರು ಮಲೆನಾಡಿನತ್ತ ಮುಖ ಮಾಡಿದ್ದಾರೆ. ಮಲೆನಾಡಿನ ಪ್ರಮುಖ ಪ್ರವಾಸಿ ಸ್ಥಳಗಳಾದ ಸಿಗಂದೂರು ಹಾಗೂ ಜೋಗ ಜಲಪಾತವನ್ನು ವೀಕ್ಷಿಸಲು ಜನರು ಮುಗಿಬಿದ್ದಿದ್ದಾರೆ. ಹೀಗಾಗಿ ಹೆಚ್ಚಾದ ಪ್ರವಾಸಿಗರ ವಾಹನಗಳಿಂದಾಗಿ ಸಾಗರದ ಎಲ್ಲಾ ರಸ್ತೆಗಳಲ್ಲೂ 2 ಗಂಟೆ ಯಿಂದ ಟ್ರಾಫಿಕ್ ಜಾಮ್ ಆಗಿದು, ಪ್ರಯಾಣಿಕರು ಪರದಾಡುವಂತಾಗಿದೆ. ಸಾಗರ ಬಸ್ ನಿಲ್ದಾಣದ ಬಳಿಯಿಂದ ಐಬಿ ಸರ್ಕಲ್ ಅವರಿಗೆ ಮೂರು ಕಿಲೋಮೀಟರ್ ಟ್ರಾಫಿಕ್ ಜಾಮ್ ನಲ್ಲಿ ಸಾವಿರಾರು ವಾಹನಗಳು ಸಿಲುಕಿದು, ಟ್ರಾಫಿಕ್ ನಿಯಂತ್ರಿಸಲು ಪೊಲೀಸರು ಹರಸಾಹಸ ಪಡುತ್ತಿದ್ದಾರೆ.
ಜಿಲ್ಲಾಧಿಕಾರಿಗಳ ಗ್ರಾಮ ವಾಸ್ತವ್ಯ ಇಂದು ಆರಂಭ
ಜಿಲ್ಲಾಧಿಕಾರಿಗಳ ನಡೆ ಹಳ್ಳಿಕಡೆ ಕಂದಾಯ ಇಲಾಖೆಯಿಂದ ಹೊಸ ಪರಿಕಲ್ಪನೆಯಡಿ ಪ್ರತಿ ತಿಂಗಳ 3ನೇ ಶನಿವಾರದಂದು ಜಿಲ್ಲಾಧಿಕಾರಿಗಳು ಗ್ರಾಮ ಭೇಟಿ ನೀಡಿ ವಾಸ್ತವ್ಯ ಮಾಡುವ ಕಾರ್ಯಕ್ರಮ ಕೊರೋನ ಕಾರಣದಿಂದಾಗಿ ಸ್ಥಗಿತಗೊಂಡಿತ್ತು. ಕೊರೋನ ಕಡಿಮೆಯಾದ ಬಳಿಕ ಮತ್ತೆ ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ ಕಾರ್ಯಕ್ರಮ ಇಂದು ಪುನರಾರಂಭಗೊಂಡಿದೆ. ಗಾಜನೂರು ಗ್ರಾಮದಲ್ಲಿ ಗ್ರಾಮ ವಾಸ್ತವ್ಯ ಕಾರ್ಯಕ್ರಮಕ್ಕೆ ಜಿಲ್ಲಾಧಿಕಾರಿ ಕೆ ಬಿ ಶಿವಕುಮಾರ್ ಚಾಲನೆ ನೀಡಿ ಗ್ರಾಮಸ್ಥರ ಕುಂದುಕೊರತೆಗಳನ್ನು ಆಲಿಸಿದರು ಈ ಸಂದರ್ಭದಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಭಾಗಿಯಾಗಿದ್ದರು.
ಕೋಟಿಗೊಬ್ಬ 3ಗೆ ಚಿತ್ರ ರಸಿಕರಿಂದ ಸಡಗರದ ಸ್ವಾಗತ
ಕೋವಿಡ್ ಎರಡನೇ ಅಲೆ ಬಳಿಕ ಸ್ಯಾಂಡಲ್ ವುಡ್ ನ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿನಯದ ಬಹು ನಿರೀಕ್ಷಿತ ಸಿನಿಮಾ ಕೋಟಿಗೊಬ್ಬ 3 ಆಯುಧ ಪೂಜೆಯೆಂದು ತೆರೆಕಾಣಬೇಕಿತ್ತು. ಆದರೆ ಹಲವು ಕಾರಣದಿಂದ ಚಿತ್ರಪ್ರದರ್ಶನ ಗೊಳ್ಳದೆ ಅಭಿಮಾನಿಗಳಲ್ಲಿ ಭಾರಿ ನಿರಾಸೆ ಮೂಡಿಸಿತು. ವಿಜಯದಶಮಿಯಂದು ರಾಜ್ಯಾದ್ಯಂತ 300ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಕೋಟಿಗೊಬ್ಬ 3 ಚಿತ್ರ ಅದ್ಧೂರಿಯಾಗಿ ತೆರೆಕಂಡಿದೆ. ಉತ್ತಮ ಪ್ರದರ್ಶನ ಕಾಣುತ್ತಿದೆ.
ಯೋಗ ದಸರಾ : ಹುರುಪಿನ ಆರಂಭ
ನಾಡ ಹಬ್ಬ ದಸರಾ ಪ್ರಯುಕ್ತ ಮಹಾನಗರ ಪಾಲಿಕೆ ಸಾಕಷ್ಟು ಕಾರ್ಯಕ್ರಮಗಳನ್ನು ಆಯೋಜನೆ ಮಾಡಿದೆ. ಕಳೆದೆರಡು ವರ್ಷಗಳಿಂದ ಕೊರೊನಾ ಮಹಾಮಾರಿಂದಾಗಿ ಸ್ಥಗಿತಗೊಂಡಿದ್ದ ದಸರಾ ವೈಭವ ಈ ವರ್ಷ ಮತ್ತೆ ಮರುಕರಳಿಸಿದ್ದು ಇಂದು ದಸರಾ ಹಬ್ಬದ ಪ್ರಯುಕ್ತ ಯೋಗ ದಸರಾವನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದಲ್ಲಿ ಕಣಾದ ಯೋಗ ಮತ್ತು ರಿಸರ್ಚ್ ಫೌಂಡೇಷನ್ ಹಾಗೂ ಪ್ರಾಣಯಾಮ ಬ್ರಹ್ಮ ಕುಮಾರಿ ಈಶ್ವರಿ ವಿಶ್ವವಿದ್ಯಾಲಯ ಇವರ ಆಶ್ರಯದಲ್ಲಿ ಯೋಗ ಹಾಗೂ ಯೋಗ ನಡಿಗೆ ,ಚಂಡೆ,ಮದ್ದಳೆ ಹಾಗೂ ಮಲ್ಲಕಂಬ ಕಾರ್ಯಕ್ರಮವನ್ನು ಆಯೋಜಿಸಿ ಉತ್ತಮ ಆರೋಗ್ಯಕ್ಕಾಗಿ ಯೋಗ ಎನ್ನುವ ಮೂಲಕ ಯೋಗ ಮಾಡಲಾಯಿತು. ನಂತರ ಯೋಗ ವಿದ್ಯಾರ್ಥಿಗಳಿಂದ ಟ್ರಾಕ್ಟರ್ ನಲ್ಲಿ ಮಲ್ಲಕಂಬ ಪ್ರದರ್ಶನ ನೋಡುಗರ ಗಮನ ಸೆಳೆಯಿತು ಕಾರ್ಯಕ್ರಮದಲ್ಲಿ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಲಕ್ಷ್ಮಿ ಪ್ರಸಾದ್ ,ಮಹಾನಗರ ಪಾಲಿಕೆ ಮೇಯರ್ ಸುನೀತಾ ಅಣ್ಣಪ್ಪ ಸೇರಿದಂತೆ ಮಹಾನಗರ ಪಾಲಿಕೆ ಸದಸ್ಯರು ಉಪಸ್ಥಿತರಿದ್ದರು.
ಬಾಂಗ್ಲಾ 12 ರ ಘಟ್ಟಕ್ಕೆ ಲಗ್ಗೆ
ಅಲ್ ಅಮೆರತ್ ಒಮನ್ ನಲ್ಲಿ ನಡೆದ. ಟಿ – 20 ವಿಶ್ವಕಪ್ ಟೂರ್ನಿಯು ಪಪುವ ನ್ಯೂಗಿನಿ ಮತ್ತು ಬಾಂಗ್ಲಾದೇಶ ನಡುವೆ ಬಿ.ಗುಂಪಿನಲ್ಲಿ ನಡೆದ ಪಂದ್ಯದಲ್ಲಿ ಬಾಂಗ್ಲಾದೇಶವು ನ್ಯೂಗಿನಿ ತಂಡದ ವಿರುದ್ಧ 84 ರನ್ ಗಳ ಮೂಲಕ ಭರ್ಜರಿ ಜಯಗಳಿಸಿ.ಟೂರ್ನಿಯ ಸೂಪರ್ 12 ರ ಘಟ್ಟ ಪ್ರವೇಶಿಸಿದೆ.
ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಬಾಂಗ್ಲಾದೇಶ 182 ರನ್ ಬಾರಿಸಿತು. 182 ರನ್ ಗಳನ್ನ ಗುರಿಯನ್ನಿಟ್ಟುಕೊಂಡು ಬೆನ್ನತ್ತಿದ ಪಪುವ ನ್ಯೂಗಿನಿ ತಂಡವು 97 ರನ್ ಗಳಿಗೆ ಆಲೌಟ್ ಆಯಿತು.
ಶಕೀಬ್ ಅಲ್ ಹಸನ್ ಭರ್ಜರಿ ಆಟದಲ್ಲಿ 4 ವಿಕೆಟ್ ಗಳನ್ನು ಪಡೆದು ಮಿಂಚಿ ಬಾಂಗ್ಲಾದೇಶವನ್ನು ಗೆಲುವಿನ ಹಾದಿ ಕಡೆಗೆ ಕರೆದೊಯ್ದರು.ಬಾಂಗ್ಲಾದೇಶವು ಮೊದಲನೇ ಓವರ್ ನಲ್ಲೇ ಆಘಾತ ಕಂಡು. ನಾಯಕ ಮೊಹಮ್ಮದ್ದುಲ್ಲ ಮತ್ತು ಶಕೀಬ್ ಅಲ್ ಹಸನ್ ರವರು ಅಂಕಣಕ್ಕೆ ಇಳಿದರು. ನಾಯಕ ಮೊಹಮ್ಮದ್ದುಲ್ಲ ಭರ್ಜರಿ ಆಟದಿಂದ ಮಿಂಚಿ 28 ಎಸೆತಗಳಲ್ಲಿ ಅರ್ಧಶತಕ ಗಳಿಸಿ ಅವರು ಕೊನೆಯ 5 ಓವರ್ ಗಳಲ್ಲಿ 68 ರನ್ ಕಲೆ ಹಾಕುವ ಮೂಲಕ ತಂಡವು ಉತ್ತಮ ಮೊತ್ತ ಗಳಿಸಲು ನೆರವಾದರು.ಹಾಗೆಯೇ ಮೊಹಮ್ಮದ್ದುಲ್ಲ ಮತ್ತು ಶಕೀಬ್ ಜೊತೆಯಾಟದಿಂದಾಗಿ ಬಾಂಗ್ಲಾದೇಶ ಪವರ್ ಪ್ಲೇ ಮುಕ್ತಾಯದ ವೇಳೆ 45 ರನ್ ಗಳಿಸಿ. ಗೆಲುವಿನ ದಡ ಸೇರಿಸಿದರು.
ಲಸಿಕೆ ಸಾಧನೆ, ಇತಿಹಾಸ ಸೃಷ್ಟಿ:
ಭಾರತವು ಶತಕೋಟಿ ಡೋಸ್ ಕೋರೋನಾ ಲಸಿಕೆ ಪೂರೈಸುವ ಮೂಲಕ, ಮಹತ್ತರ ಸಾಧನೆಯನ್ನು ಗೈದಿದೆ. ಭಾರತದಲ್ಲಿ ನೀಡಿರುವ ಲಸಿಕೆಗಳ ಪ್ರಮಾಣ ಇತರೇ ದೇಶಗಳಿಗಿಂತ ಹೆಚ್ಚಾಗಿದೆ.
ಕೇವಲ ಒಂಭತ್ತು ತಿಂಗಳಲ್ಲಿ ಇದು ಭಾರತದ ಬೃಹತ್ ಸಾಧನೆಯೇ ಸರಿ.
ಮಾನ್ಯ ರಾಷ್ಟ್ರಪತಿ ಗಳಾದ ಶ್ರೀ. ರಾಮನಾಥ್ ಕೋವಿಂದ್ ಅವರು “ದೇಶವು ಇಂದು ಹೊಸ ಇತಿಹಾಸವನ್ನು ಸೃಷ್ಟಿಸಿದೆ. ದೇಶವು ನೂರು ಕೋಟಿ ಲಸಿಕೆಯನ್ನು ಪೂರೈಸಿದೆ” ಈ ಮೂಲಕ ಭಾರತೀಯರಿಗೆ ಅಭಿನಂದನೆಗಳನ್ನು ವ್ಯಕ್ತಪಡಿಸಿದ್ದಾರೆ. ಭಾರತೀಯರನ್ನುಉದ್ದೇಶಿಸಿ ಹರ್ಷವನ್ನು, ತಮ್ಮ ಸಾಮಾಜಿಕ ಜಾಲತಾಣವಾದ ಟ್ವೀಟರ್ ನಲ್ಲಿ ಅಭಿಪ್ರಾಯ ಹಂಚಿಕೊಂಡಿದ್ದಾರೆ.
