Friday, February 20, 2026
Friday, February 20, 2026
Home Blog Page 196

S.N.Chennabasappa 2022 ರಲ್ಲಿ ಘೋಷಿಸಲಾದ ದೇವಾಲಯ ಅನುದಾನದಲ್ಲಿ 50% ಮಾತ್ರ ಮಂಜೂರು, ಮಿಕ್ಕ ಬಾಕಿ ಮೊತ್ತಕ್ಕೆ ಹಣವಿಲ್ಲ ಎಂಬ ಉತ್ತರ- ಎಸ್.ಎನ್.ಚನ್ನಬಸಪ್ಪ

0

S.N.Chennabasappa 2022ರಲ್ಲಿ ದೇವಾಲಯಗಳಿಗೆ ಘೋಷಿಸಲಾದ ರೂ. 5 ಕೋಟಿ ಅನುದಾನದಲ್ಲಿ ಕೇವಲ 50% ಮಾತ್ರ ಬಿಡುಗಡೆಗೊಂಡಿದೆ. ಬದಲಾದ ಸರ್ಕಾರದ ಅವಧಿಯಲ್ಲಿ ಉಳಿದಿರುವ ಅನುದಾನದ ಬಗ್ಗೆ ಈಗ ಮನವಿ ಸಲ್ಲಿಸಿದರೆ “ಹಣವಿಲ್ಲ” ಎಂಬ ಉತ್ತರ ದೊರೆಯುತ್ತಿದೆ. ಇದು ಭಕ್ತರ ಧಾರ್ಮಿಕ ಭಾವನೆಗಳನ್ನು ನಿರ್ಲಕ್ಷಿಸುವಂತಿದೆ.

ಮುಜರಾಯಿ ಸಚಿವರು “ಮುಖ್ಯಮಂತ್ರಿಗಳ ಬಳಿ ಕೇಳಿ” ಎಂಬ ಅಸಹಾಯಕ ಉತ್ತರ ನೀಡಿರುವುದು ಆಡಳಿತದ ಅಸಮರ್ಥತೆಯನ್ನು ಸ್ಪಷ್ಟಪಡಿಸುತ್ತದೆ. ಸರ್ಕಾರ ಬದಲಾದರೂ ದೇವಾಲಯಗಳು ಹಾಗೂ ಧಾರ್ಮಿಕ ಕಾರ್ಯಗಳಿಗೆ ನೀಡುವ ಬದ್ಧತೆ ಬದಲಾಗಬಾರದು.

S.N.Chennabasappa ದೇಗುಲಗಳು ಕೇವಲ ಪೂಜಾ ಸ್ಥಳಗಳಷ್ಟೇ ಅಲ್ಲ, ಸಮಾಜದ ಧಾರ್ಮಿಕ-ಸಾಂಸ್ಕೃತಿಕ ಪರಂಪರೆಯನ್ನು ಕಾಪಾಡುವ ಕೇಂದ್ರಗಳಾಗಿವೆ. ಇವುಗಳಿಗೆ ಘೋಷಿಸಲಾದ ಅನುದಾನವನ್ನು ತಕ್ಷಣ ಬಿಡುಗಡೆ ಮಾಡುವಂತೆ ಶಾಸಕರಾದ ಎಸ್ ಎನ್ ಚನ್ನಬಸಪ್ಪ ಅವರು ಸರ್ಕಾರಕ್ಕೆ ಸದನದಲ್ಲಿ ಪ್ರಸ್ತಾಪಿಸಿದರು.

Cosmo Club Shivamogga ಸಮಾಜದ ದಾರಿ ದೀಪ ಕೃಷ್ಣನ ಜೀವನವೇ ತೆರೆದ ಪುಸ್ತಕ- ಶ್ರೀರಂಜಿನಿ‌ ದತ್ತಾತ್ರಿ

0

Cosmo Club Shivamogga ಕೃಷ್ಣ ದೇವಗುಣ ಸಂಪನ್ನ ಮಾತ್ರವಲ್ಲ. ಕೃಷ್ಣ ಕೌಶಲ್ಯದಗಣಿ, ತತ್ವಜ್ಞಾನಿ, ಶ್ರೇಷ್ಠ ಯೋಧ, ಸಂಗೀತ, ನೃತ್ಯದ ಮಹಾ ಪಂಡಿತ, ಅದ್ಭುತ ರಾಜ ಕಾರಣಿ, ಅದ್ಭುತ ವಾಕ್‌ಚಾತುರ್ಯ ಹೊಂದಿದಾತ, ಆದರ್ಶ ನಡವಳಿಕೆಗಳ ಆಗರ, ಮಾನವೀಯ ಮೌಲ್ಯಗಳ ಹರಿಕಾರ, ಗುರಿ ಸಾಧಿಸುವವರೆಗೂ ಹಿಂದೆ ನೋಡದ ಶ್ರಮಜೀವಿ. ಕುಟುಂಬ-ಸಮಾಜ-ದೇಶ-ಧರ್ಮ ಒಂದಕ್ಕೊಂದು ಬೆಸೆದ ಬಂಧಗಳು. ಕುಟುಂಬವೇ ಧರ್ಮದ ತಳಹದಿ. ಅಧರ್ಮದ ಹಾದಿಯಲ್ಲಿ ನಡೆದ ಕುಟುಂಬ ನಿರ್ನಾಮ ಆಗುವುದರಲ್ಲಿ ಸಂಶಯವಿಲ್ಲ ಎಂದು ಸಾಕ್ಷೀಕರಿಸಿದವ ಕೃಷ್ಣ. ಹಾಗಾಗಿಯೇ ಅಧರ್ಮದ ಹಾದಿ ಹಿಡಿದಿದ್ದ ಕೌರವನ ಜೊತೆಯಿದ್ದ ಭೀಷ, ಕರ್ಣ, ದ್ರೋಣಾಚಾರ್ಯರನ್ನು ಇಲ್ಲವಾಗಿಸಿದ ಶ್ರೀಕೃಷ್ಣ. ರಣಯುದ್ಧದ ನಡುವೆಯೂ ಗೀತಾಜ್ಞಾನ ಬೋಧಿಸಿ ಪ್ರಪಂಚಕ್ಕೆ ಮನುಕುಲದ ಸಾರ ಸಾರಿದ ಶ್ರೀಕೃಷ್ಣ ಭವಿರ್ಷ ವರ್ತಮಾನ ಎರಡೂ ಮೌಲ್ಯಯುಕ್ತವಾಗಿರಬೇಕು. ಅದೇ ಸಮಾಜದ ದಾರಿದೀಪ ಎಂದು ತಿಳಿಸಿಕೊಟ್ಟ ಪರಮಾತ್ಮ ಶ್ರೀಕೃಷ್ಣ. ಕೃಷ್ಣನ ಜೀವನವೇಒಂದು ಪ್ರಯೋಗಶಾಲೆ. ಧರ್ಮ, ಕರ್ತವ್ಯ, ಕುಠಿಲತೆ, ಸ್ನೇಹ, ಸಮಾಜ, ರಾಷ್ಟ್ರ, ಸ್ಥಿತಿಸ್ಥಾಪಕ ಸಿದ್ದಾಂತ ಎಲ್ಲವನ್ನು ಸಾಕ್ಷೀಕರಿಸಿದ ಕೃಷ್ಣನ ಬದುಕು ಒಂದು ತೆರೆದ ಹಾಳೆಯಂತೆ ಎಂದು ಶ್ರೀರಂಜಿನಿ ದತ್ತಾತ್ರಿ, ಮಿತ್ರೆ ಕಾಸ್ಮೋ ಕ್ಲಬ್‌ ಮಹಿಳಾ ಬಳಗದ ಅಧ್ಯಕ್ಷೆ ನುಡಿದರು.

ಶ್ರೀಕೃಷ್ಣ ಜನ್ಮಾಷ್ಠಮಿಯ ಅಂಗವಾಗಿ ಕಾಸ್ಮೋಕ್ಲಬ್ ಶುಭಾಂಗಣದಲ್ಲಿ ಮಿತ್ರೆ ಕಾಸ್ಮೋ ಕ್ಲಬ್‌ ಮಹಿಳಾ ಬಳಗ, ಇನ್ನರ್‌ವ್ಹೀಲ್‌ಕ್ಲಬ್‌ಶಿವಮೊಗ್ಗ, ಮನ್ವಂತರ ಮಹಿಳಾ ಮಂಡಳ ಇದರ ಸಂಯುಕ್ತಆಶ್ರಯದಲ್ಲಿ ಹಮ್ಮಿಕೊಂಡಿದ್ದ“ಕೃಷ್ಣಾ ರಾಧೆರಾಗರಸ ಸಂಭ್ರಮ” ದಲ್ಲಿ ಪ್ರೀತಿಯಿಂದ ಯೋಜಿಸಿದ್ದ ಈ ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕ ನುಡಿಗಳನಾಡಿದ ಶ್ರೀರಂಜಿನಿ ದತ್ತಾತ್ರಿಯವರು ಶುದ್ಧತೆಯ ಸಂಕೇತವೇ ರಾಧೆ. ಸ್ನೇಹ, ಪ್ರೀತಿ, ಭಕ್ತಿ, ನಂಬಿಕೆ, ಶ್ರದ್ಧೆ, ದೃಢತೆ, ಸಂಕಲ್ಪ ಈ ಎಲ್ಲಕ್ಕೂರಾಧೆ ನೆನಪಾಗುತ್ತಾಳೆ.ರಾಧೆ ಕೃಷ್ಣನ ಗೋಕುಲ ನಿರ್ಗಮನದ ನಂತರ ಎದುರಾದ ಯಾವ ಕಷ್ಟಗಳಿಗೂ ಬೆನ್ನು ಹಾಕದೆ ಘನತೆ ಕಾಪಿಟ್ಟಳು. ಒಂಟಿ ಹೆಣ್ಣು ಬದುಕಬಲ್ಲೆ ಎಂದು ಜಗತ್ತಿಗೆ ತೋರಿದಳು. ರಾಧಾ ಕೃಷ್ಣ ಒಂದೇಆತ್ಮ, ಎರಡುದೇಹ. ತನ್ನ ಆತ್ಮದ ಜೊತೆ ಮದುವೆಯೇ ಎಂದೇ ಕೃಷ್ಣ ರಾಧೆಯೊಂದಿಗೆ ಮದುವೆ ಆಗಲಿಲ್ಲ ಎಂಬುದು ಪುರಾಣ ಪ್ರಸಿದ್ದ ಎಂಬ ಹಲವು ವಿಚಾರಗಳನ್ನು ಶ್ರೀರಂಜಿನಿ ದತ್ತಾತ್ರಿ ಮಾತನಾಡಿದರು.

ಉಭಯ ಭಾರತೀ ತಂಡದ ನಾಯಕಿ ಲತಾ ಶಂಕರ್‌ರವರು ಶ್ರೇಷ್ಠತೆ ಮೆರೆದ ಶ್ರೀಕೃಷ್ಣ ಜನಿಸಿದ್ದು ಮಥುರಾ, ಬೆಳೆದಿದ್ದು ಗೋಕುಲ, ರಾಜನಾಗಿದ್ದು ದ್ವಾರಕೆಯಲ್ಲಿ.ಈ ನಡುವೆರಾಧೆಯ ಪ್ರೀತಿಯ ಅನನ್ಯತೆಯಲ್ಲಿ ಜಗತ್ತಿಗೆ ಸಂದೇಶ ನೀಡಿದ. ಸಾವಿರಾರು ಹೆಸರುಗಳಿಂದ ಕರೆಯಲ್ಪಡುವ ಶ್ರೀಕೃಷ್ಣ ಎಂದಿಗೂ ಜಗತ್ತಿಗೆ ಮಾರ್ಗದರ್ಶಕ ಅಂತೆಯೇ ನಮ್ಮಂತಹ ಮಹಿಳಾ ಸಂಘಗಳು ಸಮಾಜಕ್ಕೆ ಸದಾ ಆದರ್ಶವಾಗಿದ್ದು ಬದ್ಧತೆಯನ್ನು ಕಟ್ಟಿಕೊಡೋಣ ಎಂದರು.

ಇನ್ನರ್ ವ್ಹೀಲ್‌ ಅಧ್ಯಕ್ಷೆ ಲತಾ ರಮೇಶ್‌ರವರು ಹಿಂದುಗಳ ಆರಾಧ್ಯ ದೈವ ಶ್ರೀಕೃಷ್ಣ ವಿಷ್ಣುವಿನ ಎಂಟನೇ ಅವತಾರ. ಭೂದೇವಿಯ ಕೋರಿಕೆಯ ಮೇರೆಗೆ ಅವತರಿಸಿದ. ಕಾರಣ ರಾಕ್ಷಸ ತತ್ವದ ಗುಣದ ಅಟ್ಟಹಾಸದಲ್ಲಿ ಭೂಮಿ ನಲುಗಿ ಹೋಗಿತ್ತು. ಕಂಸನೂ ಸೇರಿದಂತೆ ಪೂತನಾ, ಖಗಾಸುರ, ಶಕಟಾಸುರ, ಕೃಣಾವರ್ತ, ವತ್ಸಾಸುರ, ಬಕಾಸುರ, ಅಘಾಸುರ, ನರಕಾಸುರ, ಹೀಗೆ ನೂರಾರು ಅಸುರರು ಅಟ್ಟಹಾಸ ಮೆರೆಯುತ್ತಿದ್ದರು.ಆ ದುಷ್ಟರನ್ನು ಸಧೆ ಬಡಿಯಲೆಂದೇ ಕೃಷ್ಣ ಭೂಮಿಗೆ ಅವತರಿಸಿದ. ಜೊತೆಗೆ ರಾಧೆಯ ತತ್ವ ಸಾರಿದ ಎಂದರು.

Cosmo Club Shivamogga ಮನ್ವಂತರದ ಕಾರ್ಯದರ್ಶಿ ಆಶಾ ಪ್ರಕಾಶ್ ಮೂರು ಗಂಟೆಗಳ ಕಾರ್ಯಕ್ರಮವಿದು. ಆದರೆ ಮೂವತ್ತು ದಿನಗಳ ಯೋಜನೆ ಸರಿಯಾಗಿರಬೇಕು ಅದನ್ನೆಲ್ಲ ಯೋಜಿಸಿ, ಜೋಡಿಸಿ, ರಾಧಾಕೃಷ್ಣರ ಆರಾಧನೆಯೊಂದಿಗೆ ಎಲ್ಲರನ್ನು ಒಂದೇ ವೇದಿಕೆಯಲ್ಲಿ ಒಗ್ಗೂಡಿಸಿ, ಹಾಡು, ನೃತ್ಯ ಕಲಿಸಿ ಪ್ರಸ್ತುತ ಪಡಿಸಲು ಸಹಕಾರಿಯಾದ ಮಿತ್ರೆ ಕಾಸ್ಮೋ ಕ್ಲಬ್‌ಮಹಿಳಾ ಬಳಗಕ್ಕೆ ಶುಭಕೋರಿದರು.

ವೇದಿಕೆಯಲ್ಲಿ ಮಿತ್ರೆ ಕಾಸ್ಮೋ ಕ್ಲಬ್ ಮಹಿಳಾ ಬಳಗದ ಶ್ರೀರಂಜಿನಿ ದತ್ತಾತ್ರಿ, ದೀಪಾ ಶ್ರೀನಿವಾಸ್, ವೀಣಾಹರ್ಷ, ಸುನಿತಾ ಅರುಣ್, ಹೇಮಾ ಸತೀಶ್. ಇನ್ನರ್‌ವ್ಹೀಲ್‌ನ ಲತಾ ರಮೇಶ್, ಶೃತಿ ರಾಕೇಶ್, ಸುಧಾ ಹೆಗಡೆ, ಮನ್ವಂತರದ ಆಶಾಪ್ರಕಾಶ್, ಸವಿತಾ ವೆಂಕಟೇಶ್, ಉಭಯ ಭಾರತೀತಂಡದ ಲತಾ ಶಂಕರ್, ಸದಸ್ಯರಾದ ನಿಖಿಲಾ, ಸುಧಾ ಬೆನಕಪ್ಪ, ಲಲಿತಾರವೀಶ್, ನಳಿನಿ ಐತಾಳ್, ಸೌಮ್ಯ ಶಿವಕುಮಾರ್, ದೀಪಾ ಮಂಜುನಾಥ್, ಸುಲಕ್ಷಣಾ ಶಿವಪ್ರಕಾಶ್, ಕಾವೇರಿ ಉಪಸ್ಥಿತಿ ಇದ್ದರು.

ನಿಖಿಲಾ ನಿರೂಪಿಸಿ, ಸುನಿತಾ ಅರುಣ್ ಪ್ರಾರ್ಥಿಸಿ, ಲತಾ ಶಂಕರ್‌ ಸ್ವಾಗತಿಸಿ, ಶ್ರೀರಂಜಿನಿ ದತ್ತಾತ್ರಿ ರಾಧಾಕೃಷ್ಣರ ಮಹತ್ವ ತಿಳಿಸಿ, ಸುಧಾ ಬೆನಕಪ್ಪ ಉಭಯ ಭಾರತಿ ತತ್ವಜ್ಞಾನಿಯ ಬಗ್ಗೆ ಪರಿಚಯ ನೀಡಿ, ಲಲಿತಾ ರವೀಶ್ ವಂದಿಸಿದರು. ಮೂರು ಸಂಸ್ಥೆಗಳು ರಾಧಾಕೃಷ್ಣರ ಭಜನೆ, ಹಾಡು, ನೃತ್ಯವನ್ನು ಸುಂದರವಾಗಿ ಪ್ರಸ್ತುತಪಡಿಸಿದರು.

Klive Special Article ನಿಮ್ಮೂರಿನ ಇತಿಹಾಸ ನಿಮಗೆಷ್ಟು ಗೊತ್ತು? ವಿವರಣೆ: ದಿಲೀಪ್ ನಾಡಿಗ್. ಶಿವಮೊಗ್ಗ

0

ಭಾಗ 2. ಕೆಳದಿ ನಾನು ಮೊದಲೇ ಹೇಳಿದಂತೆ ಇದು ಮಲೆನಾಡಿಗರ ಆತ್ಮ, ಕೆಳದಿ ಎಂಬ ಹೆಸರೇ ರೋಮಾಂಚಕ, ದಟ್ಟ ಅಡವಿ ಮಲೆನಾಡಿನ‌ ಪುಟ್ಟ ಪಾಳೆಯವೊಂದು ಹುಟ್ಟಿದ್ದು ಅಖಂಡ ಭಾರತದಲ್ಲೇ ಹೆಸರಾಗಿದ್ದು ಬಹುಶಃ ಈ ಪರಿಯಾಗಿ ಕೆಳದಿ ಸಂಸ್ಥಾನವೊಂದು ಸಾಮ್ರಾಜ್ಯವಾಗಿ ಬೆಳೆಯುತ್ತದೆಂಬ ಕಲ್ಪನೆ ಕೆಳದಿಯ ಸ್ಥಾಪಕರಾದ ಚೌಡಪ್ಪ ನಾಯಕರಿಗೂ, ಭದ್ರಪ್ಪನಾಯಕರಿಗೂ ಇರಲಿಲ್ಲವೆಂದು ಅನಿಸುತ್ತದೆ. ತಮ್ಮಷ್ಟಕ್ಕೇ ತಾವು ಮಲೆನಾಡಿನ ಪುಟ್ಟ ಪಾಳೆಯವೊಂದನ್ನು ಸ್ಥಾಪಿಸಿ ದೂರ ದೇಶದಲ್ಲೂ ಪ್ರಸಿದ್ದಿ ಪಡೆಯಿತೆಂದರೆ ಅದಕ್ಕೆ ಪ್ರಾಕೃತಿಕವಾಗಿ, ದೈವಿಕವಾಗಿ, ಮಾನಸಿಕವಾಗಿ, ದೈಹಿಕವಾಗಿ ಆತ್ಮಬಲ ತುಂಬಿದ್ದು ನೀಲಕಂಠೇಶ್ವರ ರಾಮೇಶ್ವರನೆಂಬ ನಂಬಿಕೆ. ಚೌಡಪ್ಪನಾಯಕರು ಶಕ ವರುಷ ೧೨೨೪ ರಲ್ಲಿ ಸಿದ್ಧಾರ್ಥ ಸಂವತ್ಸರದ ಮಾಘ ಶುದ್ಧ ತದಿಗೆಯಂದು ಪಟ್ಟಾಭಿಷಿಕ್ತರಾಗಿ ಕೆಳದಿಯಲ್ಲಿ ಅರಮನೆಯನ್ನು, ಇಕ್ಕೇರಿಯಲ್ಲಿ ಕೋಟೆಯೊಂದನ್ನೂ ನಿರ್ಮಾಣ ಮಾಡಿದರು. Klive Special Article ಚೌಡಪ್ಪನಾಯಕರಾದಿಯಾಗಿ ಕೆಳದಿಯನ್ನು, ನಂತರ ಬಿದನೂರನ್ನು 16 ರಾಜರು, ಇಬ್ಬರು ರಾಣಿಯರು(ಚೆನ್ನಮಾಜಿ, ವೀರಮ್ಮಾಜಿ,) ಆಳ್ವಿಕೆ ನಡೆಸಿದರು. ಪ್ರಕೃತಿ ಸೌಂದರ್ಯ, ಬೆಟ್ಟಗುಡ್ಡಗಳು, ದಟ್ಟ ಕಾಡುಗಳು, ಕಣಿವೆಗಳಿಂದ ಕೂಡಿದ ಕೆಳದಿ ಅಭೇದ್ಯವಾಗಿತ್ತು, ಮಹಾಯೋಧರೂ, ಅಪ್ರತಿಮ ಸಾಹಸಿಗರೂ, ವೀರರೂ ಆಗಿದ್ದ ಕೆಳದಿಯ ಅರಸರು, ಕೋಟೆ, ಸುರಂಗಗಳ ನಿರ್ಮಿಸಿ, ನೂರಾರು ದೇವಾಯಲದ ನಿರ್ಮಾಣ, ನಾಲ್ಕು ಸಾವಿರ ಕೆರೆಗಳ ನಿರ್ಮಾಣ ಕಾರ್ಯವನ್ನು ಮಾಡಿ ಕೃಷಿಗೆ ಹೆಚ್ಚಿನ ಮಹತ್ವ ಕೊಟ್ಟಿದ್ದಲ್ಲದೆ ಕೆಳದಿ ರಾಜ್ಯದಲ್ಲಿ ಯಾವುದೇ ಒಬ್ಬ ಪ್ರಜೆಯೂ ಹಸಿವಿನಿಂದ ಮಲಗಬಾರದೆಂದು ದಾಸೋಹ, ಗಂಜಿಕೇಂದ್ರದ ನಿರ್ಮಾಣ ಮಾಡಿದ್ದರು. ಯುದ್ದತಂತ್ರದಲ್ಲಿ, ರಾಯಭಾರಿಯಾಗಿ, ಗೂಢಚಾರಿಕೆಯಲ್ಲಿ ನಿಪುಣರೂ ಆಗಿದ್ದ ಕೆಳದಿಯ ಅರಸು ಒಟ್ಟು 263 ಸುಧೀರ್ಘ ಕಾಲದ ಇತಿಹಾಸವನ್ನು ನಿರ್ಮಿಸಿದರು. ಇದರಲ್ಲಿ ಮೊದಲಿಗರಾಗಿ ದೊಡ್ಡಸಂಕಣ್ಣನಾಯಕರದ್ದು ಬಹುದೊಡ್ಡ ಕೊಡುಗೆ ಇದ್ದು ಅದನ್ನು ಮುಂದೆ ತಿಳಿಯೋಣ.

Chamber Of Commerce Shivamogga ಉದ್ಯಮಿಗಳು ಪಿಎಂ ವಿಕಸಿತ ಭಾರತ್ ರೋಜ್ ಗಾರ್ ಯೋಜನೆಯ ಪ್ರಯೋಜನ ಪಡೆಯಬೇಕು-ಬಿ.ಗೋಪಿನಾಥ್

0

Chamber Of Commerce Shivamogga ವಾಣಿಜ್ಯ ಮತ್ತು ಕೈಗಾರಿಕಾ ಉದ್ಯಮಿಗಳು ಪ್ರಧಾನ ಮಂತ್ರಿ ವಿಕಸಿತ ಭಾರತ್ ರೋಜಗಾರ್ ಉದ್ಯೋಗಾಧಾರಿತ ಪ್ರೋತ್ಸಾಹಧನ (ಇಎಲ್‌ಐ) ಯೋಜನೆಯ ಪ್ರಯೋಜನ ಪಡೆಯಬೇಕು ಎಂದು ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಬಿ.ಗೋಪಿನಾಥ್ ಹೇಳಿದರು.

ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಶಾಂತಲಾ ಸ್ಪೇರೋ ಕಾಸ್ಟ್ ಸಭಾಂಗಣದಲ್ಲಿ ವಾಣಿಜ್ಯ ಮತ್ತು ಕೈಗಾರಿಕೆ ಸಂಘ, ಪ್ರಾದೇಶಿಕ ಭವಿಷ್ಯ ನಿಧಿ ಕಚೇರಿ ಸಹಭಾಗಿತ್ವದಲ್ಲಿ ಏರ್ಪಡಿಸಿದ್ದ ಪ್ರಧಾನ ಮಂತ್ರಿ ವಿಕಸಿತ್ ಭಾರತ್ ರೋಜಗಾರ್ ಯೋಜನೆ ಮಾಹಿತಿ ಕಾರ್ಯಗಾರದಲ್ಲಿ ಮಾತನಾಡಿದರು.

ಎಲ್ಲ ಕ್ಷೇತ್ರಗಳಲ್ಲಿ ಉದ್ಯೋಗ ಸೃಷ್ಟಿ, ಉದ್ಯೋಗಾರ್ಹತೆ ಮತ್ತು ಸಾಮಾಜಿಕ ಭದ್ರತೆಯನ್ನು ಹೆಚ್ಚಿಸಲಿರುವ ಉದ್ಯೋಗ ಸಂಬಂಧಿತ ಪ್ರೋತ್ಸಾಹ ಧನ (ಇಎಲ್ ಐ) ಯೋಜನೆಯು ಹೊಸ ಉದ್ಯೋಗ ಸೃಷ್ಟಿ ಮತ್ತು ನಿರಂತರ ಉದ್ಯೋಗಕ್ಕಾಗಿ ಆರ್ಥಿಕ ಪ್ರೋತ್ಸಾಹ ನೀಡುತ್ತದೆ ಎಂದು ತಿಳಿಸಿದರು.

ಯೋಜನೆಯು ಇಪಿಎಫ್‌ಒ ಅಡಿಯಲ್ಲಿ ಹೊಸ ಉದ್ಯೋಗಿಗಳನ್ನು ನೇಮಿಸಿಕೊಳ್ಳಲು ಉದ್ಯೋಗದಾತರನ್ನು ಪ್ರೋತ್ಸಾಹಿಸುವ ಮೂಲಕ ಕಾರ್ಯಪಡೆಯನ್ನು ಔಪಚಾರಿಕಗೊಳಿಸುವ ಗುರಿ ಹೊಂದಿದೆ.

ಯೋಜನೆಗೆ ಕೇಂದ್ರ ಬಜೆಟ್‌ನಲ್ಲಿ 99,446 ಕೋಟಿ ರೂ. ಹಣ ಮೀಸಲಿಟ್ಟಿದೆ. 3.50 ಕೋಟಿ ಹೊಸ ಉದ್ಯೋಗ ಸೃಷ್ಟಿಸುವ ಗುರಿ ಹೊಂದಿದೆ. ಆದ್ದರಿಂದ ಹೆಚ್ಚು ಹೆಚ್ಚು ಯುವ ಉದ್ಯೋಗವನ್ನು ಸೃಷ್ಟಿಸುವುದರ ಮೂಲಕ ಯೋಜನೆಯ ಪ್ರಯೋಜನವನ್ನು ಜಿಲ್ಲೆಯ ಎಲ್ಲ ಉದ್ಯಮಿಗಳು ಬಳಸಿಕೊಳ್ಳಬೇಕು. ನಮ್ಮ ಸಂಘದಿಂದ ಎಲ್ಲ ಸಹಕಾರ ನೀಡಲಾಗುತ್ತದೆ ಎಂದರು.

ಪ್ರಾದೇಶಿಕ ಭವಿಷ್ಯ ನಿಧಿ ಕಚೇರಿಯ ಇಪಿಎಫ್‌ಒ ಲೆಕ್ಕಾಧಿಕಾರಿ ಸುನಿಲ್ ಟಿ ಎಸ್ ಮಾತನಾಡಿ, ಯೋಜನೆಯು ಎರಡು ಭಾಗಗಳನ್ನು ಹೊಂದಿದ್ದು, ಎ ಭಾಗವು ಇಪಿಎಫ್‌ಒನಲ್ಲಿ ನೋಂದಾಯಿತರಾದ ಮೊದಲ ಬಾರಿಯ ಉದ್ಯೋಗಿಗಳಿಗೆ ಪ್ರೋತ್ಸಾಹ ಧನ ಒದಗಿಸುತ್ತದೆ. ಮೊದಲ ಬಾರಿಯ 1.92 ಕೋಟಿ ಉದ್ಯೋಗಿಗಳಿಗೆ ಪ್ರಯೋಜನ ನೀಡುತ್ತದೆ. ಬಿ ಭಾಗವು ಉತ್ಪಾದನಾ ವಲಯದ ಮೇಲೆ ವಿಶೇಷವಾಗಿ ಗಮನ ಕೇಂದ್ರೀಕರಿಸುತ್ತದೆ. ಉದ್ಯೋಗದಾತರಿಗೆ ಪ್ರೋತ್ಸಾಹ ಧನ ಒದಗಿಸುತ್ತದೆ. 2.60 ಕೋಟಿ ಜನರಿಗೆ ಹೆಚ್ಚುವರಿ ಉದ್ಯೋಗ ಸೃಷ್ಟಿಸಲು ಉದ್ಯೋಗದಾತರನ್ನು ಪ್ರೋತ್ಸಾಹಿಸುವ ನಿರೀಕ್ಷೆಯಿದೆ ಎಂದರು.

Chamber Of Commerce Shivamogga ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಆರ್.ಗಣೇಶ್ ಮಾತನಾಡಿ, ಇಎಲ್‌ಐ ಯೋಜನೆಯು ಎಲ್ಲ ಕ್ಷೇತ್ರಗಳಲ್ಲಿ, ವಿಶೇಷವಾಗಿ ಉತ್ಪಾದನಾ ವಲಯದಲ್ಲಿ ಉದ್ಯೋಗ ಸೃಷ್ಟಿ ಹೆಚ್ಚಿಸಲು ಸರ್ಕಾರ ಉದ್ದೇಶಿಸಿದೆ.

ಕೋಟ್ಯಂತರ ಯುವಕರು ಮತ್ತು ಮಹಿಳೆಯರಿಗೆ ಸಾಮಾಜಿಕ ಭದ್ರತಾ ವ್ಯಾಪ್ತಿ ವಿಸ್ತರಿಸುತ್ತದೆ ಎಂದರು.
ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಉಪಾಧ್ಯಕ್ಷ ಜಿ.ವಿಜಯಕುಮಾರ್, ಕಾರ್ಯದರ್ಶಿ ಎ.ಎಂ.ಸುರೇಶ್, ಖಜಾಂಚಿ ಆರ್.ಮನೋಹರ, ನಿರ್ದೇಶಕರಾದ ಎಸ್.ಎಸ್.ಉದಯಕುಮಾರ್, ಗಣೇಶ್ ಎಂ.ಅಂಗಡಿ, ಕೆ.ಬಿ.ಶಿವಕುಮಾರ್, ಪ್ರದೀಪ್ ವಿ.ಎಲಿ, ವಿನೋದ್ ಕುಮಾರ್ ಜೈನ್, ಜಿ.ವಿ.ಕಿರಣ್ ಕುಮಾರ್, ಹೆಚ್.ಎಸ್.ನರೇಂದ್ರ, ರವಿಪ್ರಕಾಶ್ ಜೆನ್ನಿ, ಬಿ.ಸುರೇಶ್ ಕುಮಾರ್, ಮಾಜಿ ಅಧ್ಯಕ್ಷ ಟಿ.ಆರ್.ಅಶ್ವಥ್ ನಾರಾಯಣ್ ಶೆಟ್ಟಿ, ಜಿಲ್ಲಾ ಕೈಗಾರಿಕಾ ಕೇಂದ್ರದ ಉಪ ಜಂಟಿ ನಿರ್ದೇಶಕ ಸುರೇಶ್, ಪ್ರಾದೇಶಿಕ ಭವಿಷ್ಯ ನಿಧಿ ಕಚೇರಿಯ ಹಿರಿಯ ಸಹಾಯಕ ಗಿರಿಶಂಕರ್, ಟಿ ಕೆ ರವೀಂದ್ರ ಹಾಗೂ ಅನೇಕ ಉದ್ಯಮಿಗಳು ಭಾಗವಹಿಸಿದ್ದರು.

Shivamogga District Chamber of Commerce and Industry ನಾಗ ಸುಬ್ರಹ್ಮಣ್ಯ ದೇಗುಲದಲ್ಲಿ ಕೃಷ್ಣ- ರಾಧೆಯರ ವೇಷ ಭೂಷಣದಲ್ಲಿ ಮಿಂಚಿದ ಮಕ್ಕಳ ಸಮೂಹ

0

Shivamogga District Chamber of Commerce and Industry ಶ್ರೀ ಕೃಷ್ಣ ಜನ್ಮಾಷ್ಟಮಿಯ ಅಂಗವಾಗಿ ನಗರದ ಗೋಪಾಲದಲ್ಲಿರುವ ನಾಗಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಕೃಷ್ಣ ರಾಧೆಯರ ವೇಷ ಭೂಷಣ ಸ್ಪರ್ಧೆ ಆಯೋಜಿಸಲಾಗಿದ್ದು. ಬಡಾವಣೆಯ ಮಕ್ಕಳು ರಾಧೆ ಕೃಷ್ಣನ ವಿವಿಧ ಬಗೆಯ ವೇಷ ಭೂಷಣಗಳನ್ನು ಧರಿಸಿ ಸ್ಪರ್ಧೆಯಲ್ಲಿ ಭಾಗವಹಿಸಿ ಸಂಭ್ರಮಿಸಿದರು. ಇದೇ ಸಂದರ್ಭದಲ್ಲಿ ನಾಗ ಸುಬ್ರಹ್ಮಣ್ಯ ದೇವಸ್ಥಾನದ ಪ್ರಧಾನ ಅರ್ಚಕರಾದ ಸಂದೇಶ ಉಪಾಧ್ಯ ಮಾತನಾಡುತ್ತಾ ಮಕ್ಕಳಲ್ಲಿ ದೇವರನ್ನು ಕಾಣೋಣ. ಚಿಕ್ಕ ಮಕ್ಕಳ ಮುಗ್ಧ ಮನಸ್ಸಿನಲ್ಲಿ ಯಾವುದೇ ರೀತಿಯ ಭಾವನೆಗಳು ಇರುವುದಿಲ್ಲ ಅವರ ವೇಷಭೂಷಣಗಳನ್ನು ನೋಡುವುದೇ ಒಂದು ಸಂಭ್ರಮ ಹಬ್ಬಗಳು ನಮ್ಮ ಸಂಸ್ಕೃತಿಯ ಪ್ರತೀಕ ಹಬ್ಬಗಳು ನಮಗೆ ಜೀವನೋತ್ಸಾಹವನ್ನು ಮೂಡಿಸುತ್ತದೆ ಎಂದು ನುಡಿದರು. ಇದೇ ಸಂದರ್ಭದಲ್ಲಿ ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಉಪಾಧ್ಯಕ್ಷ ಜಿ ವಿಜಯಕುಮಾರ್ ಅವರು ಮಾತನಾಡುತ್ತಾ. ನಾಗಸುಬ್ರಹ್ಮಣ್ಯ ದೇವಸ್ಥಾನ ಕೇವಲ ಪೂಜೆ ಪುನಸ್ಕಾರಕ್ಕೆ ಸೀಮಿತವಾಗದೆ ಧಾರ್ಮಿಕ ಕಾರ್ಯಕ್ರಮಗಳು ಹಾಗೂ ಸಮಾಜಮುಖಿ ಕಾರ್ಯಕ್ರಮಗಳನ್ನು ತುಂಬಾ ವಿಶೇಷವಾಗಿ ಮಾಡುವುದರ ಮುಖಾಂತರ ಶಿವಮೊಗ್ಗದಲ್ಲಿ ಒಂದು ಮಾದರಿ ದೇವಸ್ಥಾನವಾಗಿದೆ. ಪ್ರತಿಭಾ ಪುರಸ್ಕಾರ ಹಾಗೂ ಶ್ರಾವಣದ ಕಾರ್ಯಕ್ರಮಗಳು ಮತ್ತು ನಾಗನಿಗೆ ವಿಶೇಷ ಪೂಜೆ ಈ ರೀತಿ ಹತ್ತು ಹಲವಾರು ಕಾರ್ಯಕ್ರಮಗಳನ್ನು ಮಾಡುವುದರ ಮುಖಾಂತರ ನಾಗಸಬ್ರಹ್ಮಣ್ಯ ದೇವಸ್ಥಾನ ಜನಮಾನಸದಲ್ಲಿ ಉಳಿದಿದೆ ಹಾಗೆ ಇಲ್ಲಿಯ ಸಮಿತಿಯವರು ತುಂಬಾ ಕ್ರಿಯಾಶೀಲರಾಗಿದ್ದು ಧಾರ್ಮಿಕ ಕಾರ್ಯಕ್ರಮಗಳಿಗೆ ತುಂಬಾ ಸಹಕಾರ ನೀಡುತ್ತಾರೆ ಎಂದು ಪ್ರಶಂಸಿಸಿದರು. Shivamogga District Chamber of Commerce and Industry ಕಾರ್ಯಕ್ರಮದ ಅಧ್ಯಕ್ಷತೆಯನ್ನು ದೇವಸ್ಥಾನ ಸಮಿತಿಯ ಅಧ್ಯಕ್ಷರಾದ ರಾಮಲಿಂಗಪ್ಪನವರು ವಹಿಸಿ ಮಾತನಾಡುತ್ತಾ ಚಿಕ್ಕ ಮಕ್ಕಳಿದ್ದಾಗ ಅವರಿಗೆ ಇಂಥ ವೇಷಭೂಷಣಗಳನ್ನು ಧರಿಸುವುದರಿಂದ ಅವರನ್ನೇ ಸಂಸ್ಕಾರ ಹಾಗೂ ದೈವತ್ವ ಭಾವನೆ ಮೂಡುತ್ತದೆ ಅದರ ಜೊತೆಗೆ ಜೀವನಪರ್ಯಂತ ನೆನಪಿನಲ್ಲಿ ಉಳಿಯುತ್ತದೆ. ಆದ್ದರಿಂದ ಇಂತಹ ಅವಕಾಶಗಳನ್ನು ಮಕ್ಕಳಿಗೆ ನೀಡಬೇಕು ಎಲ್ಲಾ ಕಾರ್ಯಕ್ರಮಗಳನ್ನು ತುಂಬಾ ಅಚ್ಚುಕಟ್ಟಾಗಿ ವ್ಯವಸ್ಥಿತವಾಗಿ ಮಾಡುತ್ತಾ ಬಂದಿರುವ ಸಂದೇಶ ಉಪಾಧ್ಯಾಯ ಹಾಗೂ ತಂಡರವರಿಗೆ ಅಭಿನಂದಿಸಿದರು. ಇದೇ ಸಂದರ್ಭದಲ್ಲಿ ಕೃಷ್ಣ ರಾಧೆಯರ ಹಾಗೂ ಸ್ಲೋಕ .ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ಪ್ರಮಾಣ ಪತ್ರ ಪಾರಿತೋಷಕ ನೀಡಿ ಗೌರವಿಸಿದರು… ಏನಾದ್ರು ಕ್ಲಬ್ ಮಾಜಿ ಅಧ್ಯಕ್ಷರಾದ ಬಿಂದು ವಿಜಯ ಕುಮಾರ್ ಅವರು ಭಜನಾ ಮಂಡಳಿಯವರಿಗೆ ನೆನಪಿನ ಕಾಣಿಕೆ ನೀಡಿ ಗೌರವಿಸಿದರು ಕಾರ್ಯಕ್ರಮದಲ್ಲಿ ಭಜನಾ ಮಂಡಳಿಯ ಸದಸ್ಯರು. ಅರ್ಚಕ ವೃಂದ ದವರು. ಹಾಗೂ ದೇವಸ್ಥಾನ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು

DC Shivamogga ಸೇವಾನಿರತ ಸರ್ಕಾರಿ ಅಧಿಕಾರಿ/ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದರೆ ಅಂಥವರ ವಿರುದ್ಧ ನಿರ್ದಾಕ್ಷೀಣ್ಯ ಕ್ರಮ- ಗುರುದತ್ತ ಹೆಗಡೆ

0

DC Shivamogga ಸೇವಾನಿರತ ಸರ್ಕಾರಿ ಇಲಾಖೆಗಳ ಅಧಿಕಾರಿ, ಸಿಬ್ಬಂಧಿಗಳ ಮೇಲೆ ಹಲ್ಲೆ ಮಾಡುವವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕಾನೂನು ಕ್ರಮ ಕೈಗೊಳ್ಳಲಾಗುವುದು. ಸರ್ಕಾರಿ ನೌಕರರು ಯಾವುದೇ ಆತಂಕಗಳಿಲ್ಲದೇ ನಿರ್ಭೀತಿಯಿಂದ ಪ್ರಮಾಣಿಕವಾಗಿ ಜನಸಾಮಾನ್ಯರ ಸೇವೆಗೆ ಸಮರ್ಪಿಸಿಕೊಳ್ಳುವಂತೆ ಜಿಲ್ಲಾಧಿಕಾರಿ ಗುರುದತ್ತಹೆಗಡೆ ಅವರು ಹೇಳಿದರು.

ಅವರು ತಮ್ಮ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಸರ್ಕಾರಿ ನೌಕರರ ಕುಂದು-ಕೊರತೆ, ಸಮಸ್ಯೆ, ಸೇವಾಸೌಲಭ್ಯಗಳ ತ್ವರಿತ ಸ್ಪಂದನೆಗಾಗಿ ರಚಿಸಲಾಗಿರುವ ಜಿಲ್ಲಾ ಮಟ್ಟದ ಜಂಟಿ ಸಮಾಲೋಚನಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.

ನೌಕರರಿಗೆ ತಮ್ಮ ಕಾರ್ಯಕ್ಷೇತ್ರದಲ್ಲಿ ಯಾವುದೇ ಅಭದ್ರತೆ ಕಾಡದಂತೆ ನೋಡಿಕೊಳ್ಳಬೇಕಾದುದು ಹಾಗೂ ವ್ಯವಸ್ಥೆಗೆ ಪೂರಕವಾಗಿ ಸಹಕರಿಸಬೇಕಾದುದು ನಾಗರೀಕರೆಲ್ಲರ ಕರ್ತವ್ಯವಾಗಿದೆ ಎಂದ ಅವರು, ಸಾರ್ವಜನಿಕ ಜೀವನದಲ್ಲಿ ಕಾರ್ಯನಿರ್ವಹಿಸುವ ನೌಕರರಿಗೆ ಸೂಕ್ತ ರಕ್ಷಣೆ ಸಿಗಬೇಕು. ಕರ್ತವ್ಯ ನಿರ್ವಹಿಸುವ ಸಂದರ್ಭದಲ್ಲಿ ನೌಕರರ ಮೇಲೆ ಸಲ್ಲದ ಕಾರಣಕ್ಕೆ ಹಲ್ಲೆಗೆ ಮುಂದಾಗುವುದು, ಅನುಚಿತವಾಗಿ ವರ್ತಿಸುವುದನ್ನು ಗಂಭೀರವಾಗಿ ಪರಿಗಣಿಸಿ, ಸೂಕ್ತ ದಂಡನೆಗೆ ಗುರುಪಡಿಸಲಾಗುವುದು ಎಂದವರು ನುಡಿದರು.

ಇತ್ತೀಚಿನ ದಿನಗಳಲ್ಲಿ ಆರ್.ಟಿ.ಐ. ಅರ್ಜಿಗಳನ್ನು ಸಲ್ಲಿಸಿ, ಅಧಿಕಾರಿಗಳಿಗೆ ಇನ್ನಿಲ್ಲದಂತೆ ಕಾಡುವುದು, ಬೇಡಿಕೆ ಸಲ್ಲಿಸುವುದು, ಸೇವಾ ಕ್ಷೇತ್ರದಲ್ಲಿ ಅನಗತ್ಯ ಕಿರಿಕಿರಿ ಉಂಟು ಮಾಡುತ್ತಿರುವುದು ಕಂಡುಬರುತ್ತಿದೆ. ಅಲ್ಲದೇ ಪತ್ರಿಕೆಗಳಲ್ಲಿ ಆಧಾರರಹಿತ ಆರೋಪ ಮಾಡುವುದಲ್ಲದೇ ಅಸಂವಿಧಾನಿಕ ಪದಗಳ ಬಳಕೆ ಮಾಡುತ್ತಿರುವುದನ್ನೂ ಸಹ ಗಂಭೀರವಾಗಿ ಪರಿಗಣಿಸಲಾಗುವುದು. ಅಂತಹ ವ್ಯಕ್ತಿಗಳ ವಿರುದ್ಧ ಮೊಕದ್ದಮೆ ದಾಖಲಿಸಿ, ಕಾನೂನು ಕ್ರಮ ಕೈಗೊಳ್ಳುವುದು ಅನಿವಾರ್ಯವಾಗಲಿದೆ ಎಂದವರು ನುಡಿದರು.

ಜಿಲ್ಲೆ, ನಗರ ಮತ್ತು ಪಟ್ಪಣ ಪ್ರದೇಶಗಳಲ್ಲಿ ನೌಕರರ ಬೇಡಿಕೆಗನುಗುಣವಾಗಿ ವಸತಿ ಗೃಹಗಳು ದೊರೆಯುತ್ತಿಲ್ಲ. ಅಲ್ಲದೇ ಹಲವು ದಶಕಗಳ ಹಿಂದೆ ನಿರ್ಮಾಣಗೊಂಡಿರುವ ಅನೇಕ ವಸತಿ ಗೃಹಗಳು ದುರಸ್ತಿ ಕಾಣದಿರುವುದನ್ನು ಕೂಡ ಗಮನಿಸಲಾಗಿದೆ. ಲಭ್ಯವಿರುವ ವಸತಿಗೃಹಗಳ ಹಂಚಿಕೆಯಲ್ಲಿ ಅನುಸರಿಸಬೇಕಾದ ಕ್ರಮಗಳ ಕುರಿತು ಚರ್ಚಿಸಿದ ಅವರು, ವಸತಿಗೃಹಗಳ ದುರಸ್ತಿ ಬಗ್ಗೆ ಲೋಕೋಪಯೋಗಿ ಇಲಾಖಾ ಅಧಿಕಾರಿಗಳೊಂದಿಗೆ ಚರ್ಚಿಸಿ ಅಗತ್ಯ ಕ್ರಮಕ್ಕೆ ಸೂಚಿಸಲಾಗುವುದು ಎಂದರು.

ರಾಜ್ಯ ಸರ್ಕಾರಿ ನೌಕರರ ಆರೋಗ್ಯ ಸುರಕ್ಷತೆಗಾಗಿ ಜಾರಿಯಾಗಿರುವ ನಗದು ರಹಿತ ಆರೋಗ್ಯ ಸೇವೆ ಒದಗಿಸುವ ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆಯ ಸಮರ್ಪಕ ಅನುಷ್ಟಾನದಿಂದಾಗಿ ಸಾವಿರಾರು ಕುಟುಂಬಗಳು ಉತ್ತಮ ಗುಣಮಟ್ಟದ ಚಿಕಿತ್ಸೆ ಪಡೆಯಲು ಸಾಧ್ಯವಾಗಲಿದೆ. ಈ ಮಹತ್ವಾಕಾಂಕ್ಷಿ ಯೋಜನೆಯಡಿ ಜಿಲ್ಲೆಯಲ್ಲಿ ವಿವಿಧ ಇಲಾಖೆಗಳ 16000 ನೌಕರರು ಹಾಗೂ ಅವರ ಕುಟುಂಬದ ಸದಸ್ಯರು ನಗದು ರಹಿತ ಆರೋಗ್ಯ ಸೌಲಭ್ಯವನ್ನು ಪಡೆದುಕೊಳ್ಳಲಿದ್ದಾರೆ. ಸರ್ಕಾರಿ ನೌಕರರಿಗೆ ದುಬಾರಿ ವೆಚ್ಚದ ಮಾರಣಾಂತಿಕ ಕಾಯಿಲೆಗಳು ಹಾಗೂ ಶಸ್ತ್ರ ಚಿಕಿತ್ಸೆ ಸೇರಿದಂತೆ ಬಹುತೇಕ ಕಾಯಿಲೆಗಳಿಗೆ ಉಚಿತ ಚಿಕಿತ್ಸೆ ದೊರೆಯಲಿದೆ ಎಂದವರು ನುಡಿದರು.

ಈ ಯೋಜನೆಯಡಿ ಜಿಲ್ಲಾ ಕೇಂದ್ರಗಳಲ್ಲಿನ ಅನೇಕ ಆಸ್ಪತ್ರೆಗಳು ಆರೋಗ್ಯ ಸೇವೆ ಒದಗಿಸಲು ಈವರೆಗೆ ನೋಂದಣಿಯಾಗದಿರುವುದು ಕಂಡುಬಂದಿದೆ. ನಗರದ ಪ್ರತಿಷ್ಠಿತ ಆಸ್ಪತ್ರೆಗಳ ಮುಖ್ಯಸ್ಥರೊಂದಿಗೆ ಚರ್ಚಿಸಿ, ಯೋಜನಾ ವ್ಯಾಪ್ತಿಗೊಳಪಟ್ಟು ಒಪ್ಪಂದ ಮಾಡಿಕೊಂಡು ನೌಕರರಿಗೆ ಅವರ ಕುಟುಂಬದ ಅವಲಂಬಿತರಿಗೆ ಆರೋಗ್ಯ ಸೇವೆ ಒದಗಿಸಲು ಮುಂದಾಗುವಂತೆ ಮನವಿ ಮಾಡಿಕೊಳ್ಳಲಾಗುವುದು ಎಂದರು.

ಸಭೆಯಲ್ಲಿ ಉಪಸ್ಥಿತರಿದ್ದ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಆರ್.ಮೋಹನ್ಕುಮಾರ್ಅವರು ಮಾತನಾಡಿ, ಕಾಲಕಾಲಕ್ಕೆ ಬದಲಾಗುತ್ತಿರುವ ಆಡಳಿತ ವ್ಯವಸ್ಥೆಗೆ ಪೂರಕವಾಗಿ ನೌಕರರೂ ಕೂಡ ಹೊಂದಿಕೊಳ್ಳಬೇಕಾಗಿದೆ. ಸೇವಾವಧಿಯಲ್ಲಿ ನೌಕರರಿಗೆ ಹೊಸದಾಗಿ ಅನುಷ್ಠಾನಗೊಳ್ಳುವ ವಿವಿಧ ಯೋಜನೆಗಳು, ಕಾಯ್ದೆಗಳ ಪೂರ್ಣ ಜ್ಞಾನ ಇರಬೇಕು. ಯೋಜನೆಗಳನ್ನು ಜನಸಾಮಾನ್ಯರಿಗೆ ತಲುಪಿಸುವಲ್ಲಿ ನೌಕರರಿಗೂ ಅರಿವು ಇರಬೇಕಾದುದು ಅಗತ್ಯ. ಈ ದಿಸೆಯಲ್ಲಿ ವಿವಿಧ ಯೋಜನೆಗಳು, ಕಾಯ್ದೆಗಳ ಅನುಷ್ಠಾನದ ಕುರಿತು ತರಬೇತಿ ಕಾರ್ಯಾಗಾರಗಳನ್ನು ಜಿಲ್ಲಾಡಳಿತ ಮತ್ತು ಆಡಳಿತ ಸುಧಾರಣಾ ಇಲಾಖೆ, ಜಿಲ್ಲಾ ತರಬೇತಿ ಸಂಸ್ಥೆಗಳ ಮೂಲಕ ಆಯೋಜಿಸಬೇಕು ಎಂದವರು ನುಡಿದರು.

DC Shivamogga ಜಿಲ್ಲಾಧಿಕಾರಿಗಳು ಅಗತ್ಯ ತರಬೇತಿ ಕಾರ್ಯಾಗಾರಗಳನ್ನು ಆಯೋಜಿಸಲು ಸೂಚಿಸಲಾಗುವುದು ಎಂದರು.
ವಿವಿಧ ಇಲಾಖೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ನೌಕರರು ವರ್ಗಾವಣೆಗೊಂಡು ಜಿಲ್ಲೆಗೆ ಬಂದಲ್ಲಿ ಅವರ ಮಕ್ಕಳ ಶಿಕ್ಷಣ ಮುಂದುವರೆಸಲು ಶಾಲಾ ದಾಖಲಾತಿಗಾಗಿ ತೆರಳಿದಾಗ, ಪ್ರವೇಶ ನಿರಾಕರಿಸುವುದು ಸಾಮಾನ್ಯ ಸಂಗತಿಯಾಗಿದೆ. ಶಾಲಾ ಆಡಳಿತ ಮಂಡಳಿಯವರಿಗೆ ದಾಖಲಾತಿಗಾಗಿ ಸೂಕ್ತ ಮಾರ್ಗದರ್ಶನ ನೀಡುವಂತೆ ಆರ್.ಮೋಹನ್ ರವರು ಮನವಿ ಮಾಡಿದರು.

ಸಭೆಯಲ್ಲಿ ಜಿಲ್ಲಾ ಮಟ್ಟದ ಜಂಟಿ ಸಮಾಲೋಚನಾ ಸಮಿತಿಯ ಸದಸ್ಯ ಕಾರ್ಯದರ್ಶಿ ಹಾಗೂ ಅಪರ ಜಿಲ್ಲಾಧಿಕಾರಿ ಸಿದ್ಧಲಿಂಗರೆಡ್ಡಿ, ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಶ್ರೀಮತಿ ಸುಜಾತಾ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಉಪನಿರ್ದೇಶಕ ಮಂಜುನಾಥಸ್ವಾಮಿ, ಆರ್.ಪಾಪಣ್ಣ, ಡಾ|| ಹಿರೇಮಠ್, ಪ್ರೌಢಶಾಲಾ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ಸಿದ್ದಬಸಪ್ಪ, ಉಮೇಶ್ಸೇರಿದಂತೆ ನೌಕರರ ಸಂಘದ ಪದಾಧಿಕಾರಿಗಳು, ಎಲ್ಲಾ ತಾಲೂಕು ಘಟಕಗಳ ಅಧ್ಯಕ್ಷರುಗಳು ಹಾಗೂ ನಗರದ ಖಾಸಗಿ ಆಸ್ಪತ್ರೆಗಳ ಆಡಳಿತಾಧಿಕಾರಿಗಳು ಉಪಸ್ಥಿತರಿದ್ದರು.

Rotary Club Shimoga ಶಿವಮೊಗ್ಗ ಕೃಷಿನಗರದಲ್ಲಿ ರೋಟರಿ ಕ್ಲಬ್ ನಿಂದ ರಕ್ತದಾನ & ಉಚಿತ ಆರೋಗ್ಯ ತಪಾಸಣಾ ಶಿಬಿರ

0

Rotary Club Shimoga ರೋಟರಿ ಕ್ಲಬ್ ಶಿವಮೊಗ್ಗ ರಿವರ್ ಸೈಡ್ ಮತ್ತು ಸುಬ್ಬಯ್ಯ ವೈದ್ಯಕೀಯ ಮಹಾವಿದ್ಯಾಲಯ ಆಸ್ಪತ್ರೆ, ಪುರಲೆ ಶಿವಮೊಗ್ಗ ಇವರ ಸಹಾಯಯೋಗ ದೊಂದಿಗೆ. ರಕ್ತದಾನ ಶಿಬಿರ ಉಚಿತ ಆರೋಗ್ಯ ತಪಾಸಣಾ ಶಿಬಿರ ವನ್ನು ದಿನಾಂಕ 23 .08. 2025 ಶನಿವಾರ ಬೆಳಿಗ್ಗೆ 10 ರಿಂದ ಮಧ್ಯಾಹ್ನ 2-00 ಗಂಟೆಯವರೆಗೆ ರೋಟರಿ ಕ್ಲಬ್ ಶಿವಮೊಗ್ಗ ರಿವರ್ಸ್ ಸೈಡ್ ಭವನ, ಕೃಷಿ ನಗರ ಶಿವಮೊಗ್ಗದಲ್ಲಿ ನಡೆಸಲಾಗುತ್ತದೆ.

Rotary Club Shimoga ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೆ.ಎಸ್. ವಿಶ್ವನಾಥ ನಾಯಕ ರೋಟರಿ ಕ್ಲಬ್, ಶಿವಮೊಗ್ಗ ರಿವರ್ಸೈಡ್ ಇವರು ವಹಿಸಲಿದ್ದು ಕಾರ್ಯಕ್ರಮದ ಉದ್ಘಾಟನೆಯನ್ನು ಮಾಜಿ ಕಾರ್ಪೊರೇಟರ್ ಹಾಗೂ ರಿವರ್ಸ್ ಸೈಡ್ ನ ಮಾಜಿ ಅಧ್ಯಕ್ಷರು ಎಚ್. ಸಿ. ಯೋಗೇಶ್, ಡಾಕ್ಟರ್ ವಿನಾಯಕ. ಜಿ. ರೋಟರಿ ಕ್ಲಬ್ ಶಿವಮೊಗ್ಗ ರಿವರ್ಸ್ ಸೈಡ್ ನ ಅಸಿಸ್ಟೆಂಟ್ ಗವರ್ನರ್ ಆದಂತಹ ಕೆ.ಪಿ. ಶೆಟ್ಟಿ, ಝೋನಲ್ ಲೆಫ್ಟಿನೆಂಟ್ ಎಸ್. ಪಿ. ಶಂಕರ್ ಇವರುಗಳಿಂದ ನಡೆಸಿಕೊಡಲಾಗುತ್ತದೆ

Chamber Of Commerce Shivamogga ನಮ್ಮ ಪೂರ್ವಜರ‌ ಮಾರ್ಗದರ್ಶನದಲ್ಲಿ ಯಶಸ್ವಿಯಾಗಿ ನಾವು ಸಾಗುತ್ತಿದ್ದೇವೆ – ಲೋಕೇಶ್ ಕಾಳೆ

0

Chamber Of Commerce Shivamogga ನಮ್ಮ ಸನಾತನ ಧರ್ಮದಲ್ಲಿ ಭಗವತ್ ದ್ವಜ ಹಿಂದು ಸಮಾಜದ ಹೆಗ್ಗರುತ್ತಾಗಿ ಗುರ್ತಿಸಿ ಕೊಂಡಿದೆ ಎಂದು ಆರ್.ಎಸ್.ಎಸ್.ಮುಕಂಡರಾದ ಲೋಕೇಶ್ ಕಾಳೆಯವರು ನಾಗರಾಜ್ ರವರ ಗಾಯಿತ್ರಿ ಅಸೋಸಿಯೆಟ್ಸ್ ಹೊಸ ಮಳಿಗೆ(ಧೈವಜ್ಞ ಸೊಸೈಟಿ ಹಿಂಭಾಗ) ಉದ್ಘಾಟಿಸಿ ಮಾತನಾಡುತ್ತಿದ್ದರು.
ನಮ್ಮ ಪೂರ್ವಜರು ಹಾಕಿ ಕೊಟ್ಟಿರುವ ಮಾರ್ಗದರ್ಶನದಲ್ಲಿ ನಡೆಸಿಕೊಂಡು ಬಂದಿರುವ ಪದ್ದತಿಯಲ್ಲಿ ನಾವೆಲ್ಲರೂ ಸಾಗುತ್ತಿದ್ದೇವೆ. ಅದಕ್ಕೆ ಸಹಕಾರಿಯಾಗಿ ನಾಗರಾಜ್ ರವರು ಎಲ್ಲರಿಗೂ ಮಾದರಿಯಾಗಿದ್ದಾರೆ. ಅವರ ಈ ಉದ್ದಿಮೆ ಹೆಚ್ಚಿನ ಯಶಸ್ಸು ಗಳಿಸಲಿ ಎಂದರು.
ಧ್ವಜ ನಾಗರಾಜ್ ಎಂದೇ ಗುರ್ತಿಸಿ ಕೊಂಡಿರುವ ಇವರು, ಯಾವುದೇ ಕಾರ್ಯ ಕ್ರಮ ಇರಲಿ ಅದಕ್ಕೆ ತಕ್ಕ ವ್ಯವಸ್ಥೆ ಮಾಡುತ್ತಾರೆ. ಇವರ ಕಾರ್ಯಕ್ಷಮತೆ ಎಲ್ಲರಿಗೂ ಸಹಕಾರಿಯಾಗಿದೆ. ಯಾವುದೆ ಸಭೆ, ಸಮಾರಂಭ, ಜಾತ್ರೆ, ಉತ್ಸವಗಳಲ್ಲಿ ಇವರ ದ್ವಜದ ಅಲಂಕಾರ, ಬ್ಯಾನರ್, ಟೀ ಶರ್ಟ್, ಕ್ಯಾಪ್ ಎಲ್ಲರ ಗಮನ ಸೆಳೆಯುತ್ತದೆ. ಇವರ ನಿಸ್ವರ್ಥಸೇವೆಯಿಂದ ನಗರವಲ್ಲದೆ, ಇತರ ಜಿಲ್ಲೆಗಳಲ್ಲೂ ಇವರ ಸೇವೆ ಗಮನಸೆಳೆದಿದೆ ಎಂದು ವೈ.ಹೆಚ್.ಐ.ಎ ತರುಣೋದಯ ಘಟಕದ ಛೇರ್ಮನ್ ವಾಗೇಶ್ ನುಡಿದರು.
ಸನಾತನ ಧರ್ಮ ವಿಶ್ವಕ್ಕೆ ಮಾದರಿಯಾಗಿದೆ ಅದರ ಉನ್ನತಿಗಾಗಿ ಶ್ರಮಿಸಿ ಮುಂದಿನ ಪೀಳಿಗೆಗೆ ಉಳಿಸಿ ಬೆಳೆಸುವ ಸಲುವಾಗಿ ಎಲ್ಲಾ ರಾಜಕೀಯ ಪಕ್ಷ, ಕ್ರೀಡೆ, ಧರ್ಮದ ಪರವಾಗಿ ಪ್ರಚಾರ ಸಾಮಗ್ರಿಗಳನ್ನು ಶ್ರಮವಹಿಸಿ ತಯಾರಿಸಿ ಮಾರಾಟ ಮಾಡುತ್ತಿರುವುದಾಗಿ ಮಾಲಿಕರಾದ ನಾಗರಾಜ್ ನುಡಿದರು.
Chamber Of Commerce Shivamogga ಇವರಿಗೆ ಶುಭವನ್ನು ಕೋರಿ ನನ್ನ ಕನಸಿನ ಶಿವಮೊಗ್ಗ ಅಧ್ಯಕ್ಷರಾದ ಗೋಪಿನಾಥ್, ಸಂಸ್ಕೃತ ಭಾರತಿಯ ಅ.ನ.ವಿಜಯೇಂದ್ರ, ಜಿಲ್ಲಾ ಕೈಗಾರಿಕ ಮತ್ತು ವಾಣಿಜ್ಯ ಸಂಘದ ಉಪಾಧ್ಯಕ್ಷ ವಿಜಯಕುಮಾರ್, ವಿಶ್ವಕರ್ಮ ಸಮಾಜದ ಮುಖಂಡರಾದ ಮಂಜುನಾಥಚಾರ್, ವಿನೋದ್, ತನುಜಾ ನಾಗರಾಜ್, ಭಾರತಿಮಲ್ಲಿಕಾರ್ಜುನ ಚಾರ್ ರವೀಂದ್ರ, ದಿಲೀಪ್ ನಾಡಿಗ್, ಸಂಘ ಪರಿವಾರದ ಎಲ್ಲರೂ ಶುಭಕೋರಿದರು.

Sahyadri College ಪ್ರವಾಸಿಗರು ಹೆಚ್ಚೆಚ್ಚು ಆಗಮಿಸಿದಷ್ಟೂ ಸ್ಥಳೀಯರಿಗೆ ಉದ್ಯೋಗಾವಕಾಶ- ಎನ್.ಗೋಪಿನಾಥ್

0

Sahyadri College ಆರ್ಥಿಕ ಸಬಲೀಕರಣಕ್ಕೆ ಪ್ರವಾಸೋದ್ಯಮ ಅಗತ್ಯ ಎಂದು ನನ್ನ ಕನಸಿನ ಶಿವಮೊಗ್ಗ ಅಧ್ಯಕ್ಷ ಎನ್.ಗೋಪಿನಾಥ್ ಹೇಳಿದರು.
ಶಿವಮೊಗ್ಗ ಇತಿಹಾಸ ಅಭಿವೃದ್ಧಿ ವೇದಿಕೆ ಏರ್ಪಡಿಸಿದ್ದ ಪ್ರವಾಸ ಕಾರ್ಯಕ್ರಮದಲ್ಲಿ ಸಹ್ಯಾದ್ರಿ ಕಾಲೇಜಿನ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿ, ಪ್ರವಾಸಿಗರು ಬರುವುದರಿಂದ ಸ್ಥಳಿಯರಿಗೆ ಉದ್ಯೋಗ ದೊರಕುತ್ತದೆ. ಆರ್ಥಿಕ ಬೆಳವಣಿಗೆ ಹೆಚ್ಚುವ ಜತೆಯಲ್ಲಿ ಸಮೃದ್ಧಿ ಜೀವನ ಸಾಗಿಸಲು ಸಾಧ್ಯ ಎಂದು ತಿಳಿಸಿದರು.
ಶಿವಮೊಗ್ಗ ಸುತ್ತಮುತ್ತಲ ಇತಿಹಾಸ ಪ್ರಸಿದ್ಧ ಪ್ರದೇಶಗಳನ್ನು ಜನಸಾಮಾನ್ಯರಿಗೂ ತಿಳುವಳಿಕೆ ಮೂಡಿಸುವ ಕಾರ್ಯವನ್ನು ಇತಿಹಾಸ ವೇದಿಕೆ ಏರ್ಪಡಿಸುತ್ತಿದೆ. ನಗರದ ಸಹ್ಯಾದ್ರಿ ಕಾಲೇಜಿನ ಇತಿಹಾಸ ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳು ಭಾಗವಹಿಸುವ ಮೂಲಕ ಉತ್ತಮ ಸ್ಪಂದನೆ ದೊರಕುತ್ತಿದೆ ಎಂದರು.
ವೇದಿಕೆ ಕಾರ್ಯದರ್ಶಿ ದಿಲೀಪ್ ನಾಡಿಗ್ ಮಾತನಾಡಿ, ಶತಮಾನಗಳ ಹಿಂದೆ ನಮ್ಮ ರಾಜ್ಯ ಸಮೃದ್ಧಿಯಿಂದ ಕೂಡಿತ್ತು. ರಾಜರ ಆಡಳಿತದಲ್ಲಿ ಆದ ಜಯ, ವಿಶೇಷ ಕಾರ್ಯಗಳನ್ನು ಕಲ್ಲಿನ ಮೇಲೆ ಕೆತ್ತಿಸಿ ಇಟ್ಟಿದ್ದು, ಅವುಗಳನ್ನು ಇತಿಹಾಸ ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಪ್ರಾತ್ಯಕ್ಷಿಕೆ ಮೂಲಕ ಅರಿವನ್ನು ಮೂಡಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದರು.
ಯೂತ್ ಹಾಸ್ಟೆಲ್ ಚೇರ್ಮನ್ ವಾಗೇಶ್ ಮಾತನಾಡಿ, ಹಲವಾರು ಸ್ಥಳಿಯ ಚಾರಣಗಳನ್ನು ಹಾಗೂ ಹಿಮಾಲಯ ಚಾರಣಗಳನ್ನು ಏರ್ಪಡಿಸಿ ಯುವಜನರಲ್ಲಿ ಸಾಹಸ ಪ್ರವೃತ್ತಿಗೆ ಸಹರಿಸುತ್ತಿದ್ದೇವೆ. ಜೊತೆಗೆ ಇತಿಹಾಸದ ಬಗ್ಗೆ ಮುಂದಿನ ಪೀಳಿಗೆಗೆ ಕೊಡುಗೆ ನೀಡುವ ಸಲುವಾಗಿ ಇಂತಹ ಪ್ರವಾಸ ಆಯೋಜನೆ ಮಾಡಲಾಗಿದೆ ಎಂದು ತಿಳಿಸಿದರು.
Sahyadri College ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಉಪಾಧ್ಯಕ್ಷ ಜಿ.ವಿಜಯಕುಮಾರ್ ಮಾತನಾಡಿ, ಯೂತ್ ಹಾಸ್ಟೆಲ್ ಸದಸ್ಯತ್ವ ಪಡೆದರೆ ಅಂತರಾಷ್ಟ್ರೀಯ ಮನ್ನಣೆ ಇದೆ. ಜವಾಬ್ದಾರಿಯುತವಾಗಿ, ಅತ್ಯುತ್ತಮ ಸೌಲಭ್ಯದೊಂದಿಗೆ ಕಡಿಮೆ ವೆಚ್ಚದಲ್ಲಿ ಚಾರಣ ಏರ್ಪಡಿಸಲಾಗುತ್ತದೆ. ಇದರ ಪ್ರಯೋಜನವನ್ನು ವಿದ್ಯಾರ್ಥಿಗಳು ಪಡೆಯಬೇಕು ಎಂದರು.
ವೇದಿಕೆ ಸದಸ್ಯರಾದ ಆದಿತ್ಯಪ್ರಸಾದ್ ಮಾತನಾಡಿ, ಚಾರಣ, ಪ್ರವಾಸಗಳಲ್ಲಿ ಎಲ್ಲೆಂದರಲ್ಲಿ ಪ್ಲಾಸ್ಟಿಕ್ ಹರಡಬೇಡಿ, ಪೂರ್ವಜರು ಉಳಿಸಿ ಬೆಳೆಸಿರುವ ಪ್ರದೇಶಗಳನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು ಎಂದರು.
ಸದಸ್ಯ ನಾಗರಾಜ್, ಮಂಜುನಾಥ್ ಮತ್ತಿತರರು ಉಪಸ್ಥಿತರಿದ್ದರು

Employment Dairy Farming Scheme ವಾಲ್ಮೀಕಿ ಪರಿಶಿಷ್ಠ ಪಂಗಡಗಳ ಅಭಿವೃದ್ಧಿ ನಿಗಮದಿಂದ ವಿವಿಧ ಸಾಲಸೌಲಭ್ಯ ಪಡೆಯಲು ಅರ್ಜಿ ಆಹ್ವಾನ

0

Employment Dairy Farming Scheme ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದಿಂದ 2052-26ನೇ ಸಾಲಿಗೆ ವಿವಿಧ ಯೋಜನೆಗಳಡಿ ಸೌಲಭ್ಯ ನೀಡಲು ಆನ್ ಲೈನ್ ಅರ್ಜಿ ಆಹ್ವಾನಿಸಲಾಗಿದೆ.

ಸ್ವಯಂ ಉದ್ಯೋಗ ನೇರ ಸಾಲ ಯೋಜನೆ, ಸ್ವಯಂ ಉದ್ಯೋಗ ಹೈನುಗಾರಿಕೆ ಯೋಜನೆ,ಉದ್ಯಮ ಶೀಲತಾ ಅಭಿವೃದ್ಧಿ ಯೋಜನೆ, ಮೈಕ್ರೋ ಕ್ರೆಡಿಟ್ ಯೋಜನೆ, ಸ್ವಾವಲಂಬಿ ಸಾರಥಿ ವಾಹನ ಯೋಜನೆ, ಗಂಗಾ ಕಲ್ಯಾಣ ಯೋಜನೆ, ಭೂ ಒಡೆತನ ಯೋಜನೆಗಳಿಗೆ ಆಸಕ್ತ ಫಲಾಪೇಕ್ಷಿಗಳು ಅರ್ಜಿಯನ್ನು ಸೇವಾ ಸಿಂಧು ಪೋರ್ಟಲ್ https://sevasindhu.karnataka.gov.in ನಲ್ಲಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಸೆ.17 ಕೊನೆಯ ದಿನವಾಗಿರುತ್ತದೆ. 2023-24 ಮತ್ತು 2024-25ನೇ ಸಾಲಿನಲ್ಲಿ ಅರ್ಜಿ ಸಲ್ಲಿಸಿದವರು ಮತ್ತೊಮ್ಮೆ ಅರ್ಜಿ ಸಲ್ಲಿಸುವ ಅವಶ್ಯಕತೆ ಇರುವುದಿಲ್ಲ. ಹೆಚ್ಚಿನ ಮಾಹಿತಿಗಾಗಿ ದೂ.ಸಂ. 08182-276776 ಗೆ ಸಂಪರ್ಕಿಸಬಹುದು ಎಂದು ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕರು ತಿಳಿಸಿದ್ದಾರೆ.