ಎಚ್ಎಎಲ್ ನಿಂದ 12 ಲಘು ಬಹುಪಯೋಗಿ ಹೇಳೆಕ್ಯಾಪ್ಟರ್ ಗಳು ಸೇರಿದಂತೆ 7,965 ಕೋಟಿ ರೂ. ವೆಚ್ಚದಲ್ಲಿ ಮಿಲಿಟರಿ ಉಪಕರಣಗಳು ಹಾಗೂ ಶಸ್ತ್ರಾಸ್ತ್ರಗಳ ಖರೀದಿಗೆ ರಕ್ಷಣಾ ಸಚಿವಾಲಯವು ಅನುಮೋದನೆ ನೀಡಿದೆ.
12 ಹೆಲಿಕ್ಯಾಪ್ಟರ್ ಗಳ ಜೊತೆಗೆ ವಿವಿಧ ಸೇನಾ ಪರಿಕರಗಳ ಖರೀದಿಗೆ, ಲಿಂಕ್ಸ್ ಯು 2 ನೇವಲ್ ಗನ್ ಫೈರ್ ಕಂಟ್ರೋಲ್ ಸಿಸ್ಟಂಗಳ ಖರೀದಿಗೂ ಒಪ್ಪಿಗೆ ನೀಡಲಾಗಿದೆ.
ಇವು ಯುದ್ಧನೌಕೆಗಳ ಸಾಮರ್ಥ್ಯಗಳನ್ನು ಹೆಚ್ಚಿಸಲಿವೆ. ರಕ್ಷಣಾ ಖರೀದಿ ಮಂಡಳಿ ಸಭೆಯಲ್ಲಿ ಖರೀದಿ ಪ್ರಸ್ತಾವಗಳಿಗೆ ಒಪ್ಪಿಗೆ ನೀಡಲಾಗಿದೆ ಎಂದು ಸಚಿವಾಲಯವು ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ.
‘ಆತ್ಮ ನಿರ್ಭರ ಭಾರತ’ ಚಿಂತನೆಗೆ ಹೆಚ್ಚಿನ ಒತ್ತು ನೀಡಲು ನೌಕಾಪಡೆ ಗಾಗಿ ಜಾಗತಿಕ ಮಟ್ಟದಲ್ಲಿ ಗನ್ ಗಳ ಖರೀದಿಯನ್ನು ಕೈಬಿಡಲಾಗಿದೆ. ಈಗ ಬಿಹೆಚ್ಇಎಲ್ ಗನ್ ಮೌಂಟ್ ಗಳನ್ನು ಅಭಿವೃದ್ಧಿಪಡಿಸಲಿದೆ. ನಿರ್ದಿಷ್ಟ ಗುರಿಗೆ ಅನುಗುಣವಾಗಿ ಪ್ರಯೋಗಿಸ ಬಹುದಾದ ಇಂಥ ಗಣಗಳನ್ನು ನೌಕದಳದ ಯುದ್ಧ ಹಡಗುಗಳಿಗೆ ಅಳವಡಿಸಲಾಗುತ್ತದೆ ಎಂದು ಹೇಳಿಕೆ ತಿಳಿಸಿದೆ.
ಈ ಎಲ್ಲಾ ಖರೀದಿ ಪ್ರಸ್ತಾವಗಳು ‘ಮೇಕ್ ಇನ್ ಇಂಡಿಯಾ’ದಡಿ ದೇಶಿಯ ವಿನ್ಯಾಸ, ಅಭಿವೃದ್ಧಿ ಮತ್ತು ತಯಾರಿಕೆಗೆ ಒತ್ತು ನೀಡಲಿದೆ ಎಂದು ಹೇಳಿಕೆ ತಿಳಿಸಿದೆ.
ಭಾರತ ಸೈನ್ಯಕ್ಕೆ ಮತ್ತಷ್ಟು ಬಲ
ಪ್ಯಾರಿಸ್ ಭೇಟಿ : ಫಲಶ್ರುತಿ
ಇತ್ತೀಚೆಗೆ ಇಟಲಿ ಮತ್ತು ಸ್ಕಾಟ್ಲ್ಯಾಂಡ್ ಪ್ರವಾಸ ಮುಗಿಸಿ ಬಂದ ಪ್ರಧಾನಿ ಮೋದಿ ಜಿ ಅವರು ಎರಡು ರಾಷ್ಟ್ರಗಳಲ್ಲಿ ನಡೆದ ಸಮಾವೇಶದ ಬಗ್ಗೆ ಸಮಾಧಾನ ವ್ಯಕ್ತಪಡಿಸಿದ್ದಾರೆ.
” ನನಗೆ ಪ್ಯಾರಿಸ್ನಲ್ಲಿ ನಡೆದ ಸಮಾವೇಶ ಕೇವಲ ಶಿಖರ ಸಮಾವೇಶವಾಗಿಲ್ಲ. ಅದು ನನಗೆ ಭಾವನಾತ್ಮಕ, ಬದ್ಧತೆಯುಳ್ಳದ್ದಾಗಿದೆ. ಅಲ್ಲಿ ನೀಡಿದ ಭರವಸೆ ಕೇವಲ ಇತರ ರಾಷ್ಟ್ರಗಳಿಗೆ ನೀಡಿದ ಹೇಳಿಕೆ ಆಗಿಲ್ಲ. ಆದರೆ ಎಲ್ಲಾ ಭರವಸೆಗಳು ಭಾರತದ 125 ಕೋಟಿ ಪ್ರಜೆಗಳು ತಮಗೆ ತಾವೇ ನೀಡಿದ ಭರವಸೆಗಳಾಗಿವೆ ಎಂದಿದ್ದಾರೆ. ಜಗತ್ತು ಇಂದು ಭಾರತದ ಬೃಹತ್ ಆರ್ಥಿಕ ವ್ಯವಸ್ಥೆಯ ಮೇಲೆ ನಂಬಿಕೆ ಇರಿಸಿವೆ. ಇದು ಪ್ಯಾರಿಸ್ ಶೃಂಗಸಭೆಯಲ್ಲಿ ಶೃತಪಟ್ಟಿದೆ. ನಾವು ಕಠಿಣ ಪರಿಶ್ರಮ ಹಾಗೂ ನಿರ್ಧಾರಗಳಿಂದ ಉತ್ತಮ ಫಲಿತಾಂಶವನ್ನು ನೀಡಲಿದ್ದೇವೆ” ಎಂದರು.
ಆರೋಗ್ಯಕರ ಹವಾಮಾನದತ್ತ ಭಾರತದ ಚಿತ್ತ
“ಜಾಗತಿಕ ತಾಪಮಾನ ಏರಿಕೆಯನ್ನು 1.5 ಡಿಗ್ರಿ ಸೆಲ್ಸಿಯಸ್ಗೆ ಮಿತಗೊಳಿಸುವ ನೆಟ್ ಝೀರೋ ಗುರಿಯನ್ನು ಭಾರತವು 2070 ತಲುಪಲಿದೆ” ಎಂದು ಪ್ರಧಾನಿ ನರೇಂದ್ರ ಮೋದಿಯವರು ಗ್ಲಾಸ್ಗೋದಲ್ಲಿ ನಡೆಯುತ್ತಿರುವ ಹವಾಮಾನ ವೈಪರೀತ್ಯ ತಡೆ ಸಮಾವೇಶದಲ್ಲಿ ಘೋಷಿಸಿದ್ದಾರೆ.
ಅಭಿವೃದ್ಧಿಶೀಲ ದೇಶಗಳಲ್ಲಿ ಈ ಗುರಿ ಹಾಕಿಕೊಂಡ ಮೊದಲ ದೇಶ ಭಾರತ ವಾಗಿದೆ. 2015ರ ಪ್ಯಾರಿಸ್ ಶೃಂಗಸಭೆಯಲ್ಲಿ ಹಾಕಿಕೊಂಡಿದ್ದ ಗುರಿಗಳನ್ನು ಪೂರ್ಣಪ್ರಮಾಣದಲ್ಲಿ ತಲುಪುವಲ್ಲಿ ಭಾರತವು ವಿಫಲವಾಗಿದೆ.
ಹೀಗಾಗಿ ಈ ನೂತನ ಕಾರ್ಯ ಯೋಜನೆಯನ್ನು ಪ್ರಕಟಿಸಿದೆ. ಈ ಮೂಲಕ ನೆಟ್ ಜೀರೋ ಗುರಿಯನ್ನು ತಲುಪಲು ಅವಕಾಶ ಮಾಡಿಕೊಂಡಿದೆ ಎಂದು ತಜ್ಞರು ವಿಶ್ಲೇಷಿಸಿದ್ದಾರೆ.
“2070ರ ವೇಳೆಗೆ ನೆಟ್ ಝಿರೋ ಸಾಧಿಸುತ್ತೇವೆ ಎಂಬುವುದು ಮಹತ್ವಕಾಂಕ್ಷಿ ಘೋಷಣೆ. ಈ ಗುರಿಯನ್ನು ತಲುಪುವುದು ಸವಾಲಿನ ಕೆಲಸ” ಎಂದು ಸೆಂಟರ್ ಫಾರ್ ಸೈನ್ಸ್ ಅಂಡ್ ಎನ್ವಿರೋನ್ಮೆಂಟ್ ನಿರ್ದೇಶಕಿ ಸುನಿತಾ ನಾರಾಯಣ ಅವರು ತಿಳಿಸಿದ್ದಾರೆ.
ಮೋದಿಯವರು ಈ ಗುರಿಯನ್ನು ಘೋಷಿಸುವ ಮೂಲಕ, ಅಭಿವೃದ್ಧಿ ಹೊಂದಿದ ದೇಶಗಳ ಮೇಲೆ ಮತ್ತೆ ಒತ್ತಡ ಸೃಷ್ಟಿಸಲು ಯತ್ನಿಸಿದ್ದಾರೆ. ಅಭಿವೃದ್ಧಿ ಹೊಂದಿದ ದೇಶಗಳು ಈಗ ಆರ್ಥಿಕ ನೆರವು ನೀಡಲೇಬೇಕಾದ ಒತ್ತಡದ ಪರಿಸ್ಥಿತಿಗೆ ಸಿಲುಕಲಿವೆ ಎಂದು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಯವರು ಗ್ಲಾಸ್ಗೋ ಸಮಾವೇಶದಲ್ಲಿ ನೇಪಾಳ ಪ್ರಧಾನಿ ಹಾಗೂ ಇಸ್ರೇಲ್ ಪ್ರಧಾನಿ ಜತೆಗೆ ಮಾತುಕತೆ ನಡೆಸಿದರು. ಗೇಟ್ಸ್ ಪ್ರತಿಷ್ಠಾನದ ಬಿಲ್ ಗೇಟ್ಸ್ ಅವರ ಜೊತೆಯೂ ಮೋದಿ ಮಾತುಕತೆ ನಡೆಸಿದರು.
2030ರ ವೇಳೆಗೆ ದೇಶದಲ್ಲಿ 450- 500 ಗಿಗಾವಾಟ್ ನಷ್ಟು ವಿದ್ಯುತ್ ಅನ್ನು ನವೀಕರಿಸಬಹುದಾದ ಮೂಲಗಳಿಂದ ಉತ್ಪಾದಿಸಲಾಗುವುದು. 2030ರ ವೇಳೆಗೆ ರೈಲ್ವೆಯ ಇಂಗಾಲ ಹೊರಸೂಸುವಿಕೆಯನ್ನು ಶೇಕಡ ನೂರರಷ್ಟು ಕಡಿತ ಮಾಡಲಾಗುವುದು. ಇದರಿಂದ ವಾರ್ಷಿಕ 6 ಕೋಟಿ ಟನ್ ಇಂಗಾಲದ ಮಾಲಿನ್ಯ ಕಡಿಮೆಯಾಗಲಿದೆ ಎಂಬ ಘೋಷಣೆಯನ್ನು ಮೋದಿ ಮಾಡಿದರು.
‘ಪಂಪ’ನ ಬನವಾಸಿಯಲ್ಲಿ ರಾಜ್ಯೋತ್ಸವ ವೈಭವ
ಬನವಾಸಿ , ಉತ್ತರ ಕನ್ನಡ
ಬನವಾಸಿ ಎಂದಾಕ್ಷಣ ಕನ್ನಡಿಗರ ಕಣ್ಮನದಲ್ಲಿ ನಿಲ್ಲುವುದು ಕನ್ನಡದ ಆದಿಕವಿ ಪಂಪನ ಚಿತ್ರ. “ಆರಂಕುಸವಿಟ್ಟೊಡಂ, ನೆನೆವುದೆನ್ನ ಮನಂ ಬನವಾಸಿ ದೇಶಮಂ” ಇದು ಪಂಪನ ಕಾವ್ಯದ ಪ್ರಖ್ಯಾತ ಸಾಲು. ಬನವಾಸಿ ಕದಂಬರ ಮೂಲ ಸ್ಥಳ ಹಾಗೂ ರಾಜಧಾನಿ. ಉತ್ತರ ಕನ್ನಡ ಜಿಲ್ಲೆಯ ಬನವಾಸಿಯಲ್ಲಿ ಕನ್ನಡ ರಾಜ್ಯೋತ್ಸವವು ವಿಜೃಂಭಣೆಯಿಂದ ಜರುಗಿತು. ಕಾರ್ಯಕ್ರಮದಲ್ಲಿ ವಿವಿಧ ಶಾಲಾ ಕಾಲೇಜು ಮಕ್ಕಳು, ಕಿತ್ತೂರು ರಾಣಿ ಚೆನ್ನಮ್ಮ, ಡಾಕ್ಟರ್ ಬಿ.ಆರ್ ಅಂಬೇಡ್ಕರ್, ಒನಕೆ ಓಬವ್ವ, ಟಿಪ್ಪು ಸುಲ್ತಾನ್, ಸೇರಿದಂತೆ ಹಲವಾರು ದೇಶಭಕ್ತರ ಹಾಗೂ ಮಹಾನ್ ವ್ಯಕ್ತಿಗಳ ವೇಷಭೂಷಣ ಧರಿಸಿ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ಯಕ್ಷಗಾನ, ಡೊಳ್ಳುಕುಣಿತ ಸೇರಿದಂತೆ ಮುಂತಾದ ಮಾತುಗಳಿಂದ ಕೂಡಿದ ಪ್ರದರ್ಶನ ಎಲ್ಲರ ಗಮನ ಸೆಳೆಯಿತು.
ದಡ್ಡನೆಂದು ಕರೆದುಕೊಂಡ ದೊಡ್ಡ ಕವಿ
ಯುಗಧರ್ಮ ರಾಮಣ್ಣ ಇವರು ಯುಗಧರ್ಮ ಎಂಬ ಅಂಕಿತದಿಂದ ಸಾವಿರಾರು ತ್ರಿಪದಿಗಳು ಹಾಗೂ ಲಾವಣಿಗಳನ್ನು ಬರೆದಿದ್ದಾರೆ. ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲೂಕು ಸಿದ್ದನಮಠ ಗ್ರಾಮದವರಾದ ರಾಮಣ್ಣ ಅನಕ್ಷರಸ್ಥ ಕವಿ. ಇವರು ಅನಕ್ಷರಸ್ಥರಾದರೂ ಸರಸ್ವತಿ ಇವರ ನಾಲಿಗೆ ಮೇಲೆ ನಲಿದಾಡುತ್ತಿದ್ದಾಳೆ. ಬಾಲ್ಯದಲ್ಲಿ ಎಮ್ಮೆ ಕಾಯಲು ಹೋಗುತ್ತಿದ್ದರು.ರಾಮಣ್ಣನಿಗೆ ನಾಟಕದ ಹುಚ್ಚು. ನಾಟಕದಲ್ಲಿ ಅಭಿನಯ ಮಾಡುತ್ತಿದ್ದರೆ ಇವರ ಪಾತ್ರವನ್ನು ನೋಡಲು ಜನರೆಲ್ಲಾ ಕಾತರದಿಂದ ಕಾಯುತ್ತಿದ್ದರು. ಅದೊಂದು ದಿನ ರಾಮಣ್ಣ ಗೆಳೆಯರ ಜೊತೆ ಮರದ ಕೆಳಗೆ ಕೂತು ಮಾತನಾಡುತ್ತಿದ್ದರು.ಆಗ ಅದೇನೋ ಮಿಂಚಿನ ಹಾಗೆ ಪ್ರಭೆಯೊಂದು ಬಂದು ಅವರ ತಲೆ ಒಳಗೆ ಹೋದಂತೆ ಆಯ್ತಂತೆ. ಆಗ ರಾಮಣ್ಣನ ತಲೆಯಲ್ಲಿ ಕೂಡಲೇ ಒಂದು ತ್ರಿಪದಿ ಬಂತಂತೆ. ಅದು ಅವರ ಮೊದಲ ತ್ರಿಪದಿ. “ರಾಜಕೀಯಕ್ಕೆ ಇಳಿಯದೆ ಸೋಜಾಗಿ ಇರುವವನು ಗೀಜಗದ ಗೂಡು ಇದ್ದಂತೆ ಅವನ ಬಾಳು ಮೋಜಾಗಿ ಇರುವುದೋ ಯುಗಧರ್ಮ” ಯುಗಧರ್ಮ, ಯುಗಧರ್ಮನ ತ್ರಿಪದಿಗಳು, ತೋಚಿದ್ಗೀಚು, ವಚನ ಧರ್ಮ ಎಂಬ ಪುಸ್ತಕಗಳು ಹೊರಬಂದಿದೆ. ಇವರ ಲಾವಣಿ ಸಂಗ್ರಹಿಸಿ ಶಿವಮೊಗ್ಗದ ಯುವರಾಜ್ ಕ್ಯಾಸೆಟ್ ಕೂಡ ಮಾಡಿದ್ದಾರೆ. ದಡ್ಡರ ಪದ ವಿಶ್ವವಿದ್ಯಾಲಯ ಎಂಬ ಯೋಜನೆಯನ್ನು ಹಾಕಿಕೊಂಡಿದ್ದಾರೆ.ಅಲ್ಲಿ ನಮ್ಮ ಗ್ರಾಮೀಣ ಕಲೆ ಹಾಗೂ ಸಂಸ್ಕೃತಿಯನ್ನು ಪರಿಚಯಿಸುವ ಯೋಜನೆ ಅವರದ್ದು. ರಾಮಣ್ಣ ಯಾವತ್ತೂ ತನ್ನನ್ನು ತಾನು ಎಂದೂ ಹೊಗಳಿಕೊಳ್ಳುವುದಿಲ್ಲ. ತನ್ನನ್ನೇ ತಾನು ಮಂಗ ಎಂದು ಹೇಳಿಕೊಳ್ಳುತ್ತಾರೆ. ಈ ಮಂಗ ಒಮ್ಮೆ ಬೆಂಗಳೂರಿಗೆ ಹೋಗಿತ್ತು, ಕಳ್ಳಿ ಸಾಲಲ್ಲಿ, ಕೊಳ್ಳಿ ಬೆಳಕಲ್ಲಿ, ತೆಳ್ಳನೆ ರಾಗಿ ಅಂಬಲಿ ಕುಡಿದು ಬೆಳೆದ ಮಂಗ ಇದು….. ಹೀಗೆ ತಮ್ಮ ಬಗ್ಗೆ ತಾವು ಹೇಳಿಕೊಳ್ಳುತ್ತಾರೆ. ಇವರು ಈ ಹಿಂದೆ ಚನ್ನಗಿರಿ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು. ಅನಕ್ಷರಸ್ಥ ಕವಿಯೊಬ್ಬ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಆಗಿರುವ ಇತಿಹಾಸ ರಾಜ್ಯದಲ್ಲಿ ಇದೇ ಮೊದಲು. ಕನ್ನಡದ ತೇರ ಕಟ್ಟೋಣ ಬನ್ನಿ ಎಂಬ ರಚನೆ ಬಹಳ ವೈಶಿಷ್ಟ್ಯದಿಂದ ಕೂಡಿದೆ. ಜಾತ್ರೆಯ ತೇರನ್ನ ವಿವಿಧವಾಗಿ ಅಲಂಕರಿಸಿ ಆನಂದಿಸುತ್ತೆವೆ. ತೇರಿನ ಪ್ರತಿ ವಿನ್ಯಾಸಕ್ಕೂ ಬಹುತೇಕ ಕನ್ನಡದ ಎಲ್ಲಾ ಕವಿಗಳ ಹೆಸರನ್ನ ಸಮೀಕರಿಸಿ ಪದ ಕಟ್ಟಿರುವ ಜಾಣ್ಮೆ ರಾಮಣ್ಣ ಅವರದ್ದು. ಅವರೇ ಹಾಡಿರುವ ತೇರ ಕಟ್ಟೊಣ ಬನ್ನಿ ಎಂಬ ಹಾಡಿನಲ್ಲಿ ಜಾನಪದ ಸೊಗಡಿದೆ. ( ಪರಿಚಯ ಮಾಹಿತಿ : ಶ್ರೀ ರಾಮಚಂದ್ರ ನಾಡಿಗ್ . ಪತ್ರಕರ್ತರು , ಶಿವಮೊಗ್ಗ)SHOW LESS
ದರ ಏರಿಕೆ ಕಂಡ ಕಾಳು ಮೆಣಸು
ಕಾಳು ಮೆಣಸು ದರ ಒಂದೇ ತಿಂಗಳಲ್ಲಿ ಕೆಜಿಗೆ 100 ರೂಪಾಯಿ ಹೆಚ್ಚಳವಾಗುವ ಮೂಲಕ ಕೃಷಿಕರ ಮೊಗದಲ್ಲಿ ಮಂದಹಾಸ ಮೂಡಿದೆ.
2013 14 ನಲ್ಲಿ ಇನ್ನೂರು ರೂಪಾಯಿ ಗಡಿದಾಟಿದ ಕಾಳುಮೆಣಸು ಧಾರಣೆ ದಿಢೀರ್ ಕುಸಿದು 270 ರೂಪಾಯಿವರೆಗೂ ಇಳಿದಿತ್ತು. ಆದರೆ ಈಗ ದಿಢೀರ್ 500ರ ಗಡಿ ದಾಟಿದ ಕಾಳುಮೆಣಸು ದರ ಕೃಷಿಕರಲ್ಲಿ ಸಂತಸ ಮೂಡಿಸಿದೆ.
ಕರಿಮೆಣಸು ಮಾರುಕಟ್ಟೆಯಲ್ಲಿ ಧಾರಣೆ ಏರುಗತಿಯಲ್ಲಿದ್ದು, ಇದು ಕೃಷಿಕರಲ್ಲಿ ಮಂದಹಾಸ ಮೂಡುವಂತೆ ಮಾಡಿದೆ. ಆದರೆ ಅಕಾಲಿಕ ಮಳೆಯಿಂದಾಗಿ ಈ ಬಾರಿ ಭಾರಿ ಪ್ರಮಾಣದಲ್ಲಿ ಬೆಳೆ ನಷ್ಟ ಆಗಿರುವ ಕಾರಣ ಬೆಲೆ ಏರಿಕೆಯಾಗಿದ್ದರೂ ಕೃಷಿಕರಿಗೆ ಇದರಿಂದ ದೊಡ್ಡಮಟ್ಟದ ಲಾಭವಾಗುವುದಿಲ್ಲ. ಮಾರುಕಟ್ಟೆ ಧಾರಣೆ ಇನ್ನಷ್ಟು ಏರಿಕೆ ಕಾಣುವ ಮುನ್ಸೂಚನೆ ಕಂಡುಬರುತ್ತಿದೆ ಎಂದು ಕೊಡಗು ಮುಖಂಡ, ಕರಿಮೆಣಸು ಬಳಕೆದಾರರ ಸಮನ್ವಯ ಸಮಿತಿಯ ವಿಶ್ವನಾಥ್ ಅವರು ತಿಳಿಸಿದ್ದಾರೆ.
ಕೈ ಸುಡುವಂತಿದೆ ಹಸಿರು ಪಟಾಕಿ ಬೆಲೆ
ದೇಶಾದ್ಯಂತ ಬೆಳಕಿನ ಹಬ್ಬ ದೀಪಾವಳಿಗೆ ದಿನಗಣನೆ ಪ್ರಾರಂಭವಾಗಿದೆ. ಹಬ್ಬದ ಸಿದ್ಧತೆಯಲ್ಲಿ ತೊಡಗಿದ್ದಾರೆ. ಸುಪ್ರೀಂ ಕೋರ್ಟ್ ಹಸಿರು ಪಟಾಕಿ ಬಳಸಲು ಅನುಮತಿ ನೀಡಿದೆ. ಸಾರ್ವಜನಿಕ ಆರೋಗ್ಯ ಮತ್ತು ಪರಿಸರ ಸಂರಕ್ಷಣೆ ಈ ಅನುಮತಿಯ ಹಿನ್ನೆಲೆಯಲ್ಲಿದೆ. ಯಾವುದೇ ಜನಾಂಗದ ವಿರುದ್ಧವು ಕೂಡ ಈ ಸೂಚನೆ ಹೊರಡಿಸಿಲ್ಲ. ಇಡೀ ಸಮುದಾಯದ ಕ್ಷೇಮ ನ್ಯಾಯಾಂಗದ ಹೊಣೆ ಎಂದು ಸ್ಪಷ್ಟೀಕರಿಸಿದೆ.
ದೀಪಾವಳಿ ಹಬ್ಬದಲ್ಲಿ ಮಕ್ಕಳಿಂದ ಹಿಡಿದು ಹಿರಿಯರು ಸೇರಿ ಪಟಾಕಿ ಸಿಡಿಸುವುದು ವಾಡಿಕೆಯಾಗಿದೆ. ಆದರೆ ಹಸಿರು ಪಟಾಕಿ ಗ್ರಾಹಕರ ಕೈಗೆ ನಿಲುಕಲಾರದಷ್ಟು ದುಬಾರಿಯಾಗಿದೆ. ಸಾಗಾಣಿಕೆ ವೆಚ್ಚ, ರಾಸಾಯನಿಕ ಕಚ್ಚಾ ಪದಾರ್ಥಗಳ ಬೆಲೆ ಏರಿಕೆಯಿಂದ ಈ ಬಾರಿ ಹಸಿರು ಪಟಾಕಿ ಬೆಲೆ ಶೇ.30 ರಷ್ಟು ಏರಿಕೆಯಾಗಿದೆ.
ದೇಶದಲ್ಲಿ ಪಟಾಕಿ ತಯಾರಿಕೆಗೆ ತಮಿಳುನಾಡಿನ ಶಿವಕಾಶಿಯು ಹೆಸರುವಾಸಿಯಾಗಿದೆ. ಇಲ್ಲಿಂದ ರಾಜ್ಯದ ಬೆಂಗಳೂರು ಮೈಸೂರು ಸೇರಿದಂತೆ ಹಲವು ಪ್ರಮುಖ ನಗರಗಳಿಗೆ ಡೀಲರ್ ಗಳ ಮೂಲಕ ಪಟಾಕಿ ಹಂಚಿಕೆಯಾಗುತ್ತದೆ. ಹೋಲ್ಸೇಲ್ ದರದಲ್ಲಿ ಸಿಗುವ ಪಟಾಕಿಗಳ ಸಾಗಾಣಿಕೆ ವೆಚ್ಚ ಹೊರೆಯಾಗಿದ್ದು, ಶೇ. 8.5 ರಷ್ಟು ಶೇ. 12 ರಷ್ಟು ಬೆಲೆ ಏರಿಕೆ ಮಾಡಿದ್ದಾರೆ.
ಸಾಮಾನ್ಯ ಹೂಕುಂಡದ ಪಟಾಕಿ ಬಾಕ್ಸ್ ಗೆ 100-200 ರೂಪಾಯಿ, ಹಸಿರು ಪಟಾಕಿ ಹೂಕುಂಡದ ಬಾಕ್ಸ್ ಗೆ 500-550 ರೂಪಾಯಿ ಹೆಚ್ಚಳವಾಗಿದೆ. ಸಾಮಾನ್ಯ ಪಟಾಕಿ ಬಾಕ್ಸ್ 20-100 ರೂಪಾಯಿ, ಹಸಿರು ಪಟಾಕಿ ಬಾಕ್ಸ್ 200-400 ರೂಪಾಯಿ ಏರಿಕೆಯಾಗಿದೆ. ಸಾಮಾನ್ಯ ಭೂ ಚಕ್ರದ ಬಾಕ್ಸ್ 50-100 ರೂಪಾಯಿ, ಹಸಿರು ಪಟಾಕಿಯ ಭೂ ಚಕ್ರದ ಬಾಕ್ಸ್ 120-250 ರೂಪಾಯಿಗಳಷ್ಟು ಹೆಚ್ಚಳವಾಗಿದೆ ಮತ್ತು ಸಾಮಾನ್ಯ ಆಟಂ ಬಾಂಬ್ 100-110 ರೂಪಾಯಿ ಏರಿಕೆಯಾದರೆ, ಹಸಿರು ಪಟಾಕಿಯ ಆಟಂ ಬಾಂಬ್ 120-150 ರೂಪಾಯಿಗಳಷ್ಟು ದುಬಾರಿಯಾಗಿದೆ.
ಈ ಬಾರಿಯ ದೀಪಾವಳಿ ಹಬ್ಬದ ಪಟಾಕಿ ದರ ಸಾಮಾನ್ಯ ವರ್ಗದವರ ಮೇಲೆ ಹೊರೆಯಾಗಿ ಪರಿಣಮಿಸಿದೆ.
ಕೋವಿಡ್ 19: ಜಾಗತಿಕ ಸಾವಿನ ಸಂಖ್ಯೆ 50 ಲಕ್ಷ
ಬಹುತೇಕ ರಾಷ್ಟ್ರಗಳಲ್ಲಿ ಕೊರೋನಾ ನಿರೋಧಕ ಲಸಿಕೆ ಅಭಿಯಾನ ನಡೆಯುತ್ತಿದ್ದರೂ ಜಗತ್ತಿನಾದ್ಯಂತ ಕೊರೋನಾಗೆ ಬಲಿಯಾಗುತ್ತಿರುವ ವರ ಸಂಖ್ಯೆ ಕಡಿಮೆಯಾಗುತ್ತಿಲ್ಲ. ಭಾರತ ಸೇರಿ ಇತ್ತೀಚಿಗೆ ಕೆಲವು ರಾಷ್ಟ್ರಗಳಲ್ಲಿ ನಿತ್ಯ ಸಾವಿನ ಸಂಖ್ಯೆ ಏರಿಕೆಯಾಗುತ್ತಲೇ ಇದೆ.
ದೇಶಾದ್ಯಂತ ಕಳೆದ 24 ಗಂಟೆಗಳಲ್ಲಿ 12,514 ಕೊರೋನಾ ಪ್ರಕರಣ ದಾಖಲಾಗಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ 1,58,817ಕ್ಕೆ ಇಳಿಕೆಯಾಗಿದೆ. ಇದು ಎರಡು 248 ದಿನಗಳಲ್ಲಿಯೇ ಕನಿಷ್ಠವಾಗಿದೆ. ಇನ್ನು ದೇಶದಲ್ಲಿ ಕೊರೋನಾ ಸೋಂಕಿನಿಂದ ಒಂದೇ ದಿನ 151 ಮೃತ ಪಟ್ಟಿದ್ದಾರೆ ಎಂದು ಆರೋಗ್ಯ ಸಚಿವಾಲಯದ ಮಾಹಿತಿ ನೀಡಿದೆ.
ಕೊರೋನಾ ನಿರೋಧಕ ಲಸಿಕೆ, ಜನ ಜಾಗೃತಿ ಸೇರಿ ಹಲವು ಕಾರಣಗಳಿಂದಾಗಿ ಜಗತ್ತಿನ ಬಹುತೇಕ ರಾಷ್ಟ್ರಗಳಲ್ಲಿ ಸೋಂಕಿನ ವೇತಿ ತಗ್ಗಿದ್ದರೂ, ಇತ್ತೀಚಿಗೆ ರಷ್ಯಾ, ಉಕ್ರೇನ್, ಪೂರ್ವ ಯುರೋಪಿನ ಕೆಲವು ರಾಷ್ಟ್ರಗಳಲ್ಲಿ ಸೋಂಕಿತರ ಸಂಖ್ಯೆ ಜಾಸ್ತಿಯಾಗುತ್ತಿರುವುದು ಆತಂಕ ಹೆಚ್ಚಿಸಿದೆ. ಮತ್ತೊಂದೆಡೆ ಲಸಿಕೆಯ ಶೀಘ್ರ ವಿತರಣೆಯಾಗದಿರುವುದು ಹಲವು ರಾಷ್ಟ್ರಗಳಿಗೆ ಮಾರಕವಾಗಿದೆ.
ಲಸಿಕೆಯ ಬಲವಿದ್ದರೂ ಜಗತ್ತಿನ ಅತ್ಯಂತ ಕೊರೊನಾ ವಿರುದ್ಧದ ಹೋರಾಟಕ್ಕೆ ಹಲವಾರು ಸವಾಲುಗಳಿವೆ. ಲಸಿಕೆ ವಿತರಣೆ, ಬೂಸ್ಟರ್ ಡೋಸ್, ಮಕ್ಕಳಿಗೆ ಲಸಿಕೆ ನೀಡಿಕೆ ಜೊತೆಗೆ ರೂಪಾಂತರಗಳ ಹಾವಳಿಯ ಭೀತಿ ಹೆಚ್ಚಿಸಿದೆ. ಇತ್ತೀಚಿಗಷ್ಟೇ ವ್ಯಾಪಿಸಿದ ₹2 ಇದಕ್ಕೆ ನಿದರ್ಶನವಾಗಿದೆ.
ಅಮೇರಿಕ, ಐರೋಪ್ಯ ಒಕ್ಕೂಟ, ಬ್ರಿಟನ್, ಬ್ರೆಜಿಲ್ ನಂತಹ ಮುಂದುವರೆದ ರಾಷ್ಟ್ರಗಳಲ್ಲಿ ಜಗತ್ತಿನ ಒಟ್ಟು ಸಾವಿನ ಪ್ರಮಾಣದಲ್ಲಿ 8ನೇ ಒಂದರಷ್ಟು ಪಾಲು ಹೊಂದಿವೆ. ಭಾರತವು ವಿಶ್ವದಲ್ಲಿ ಹೆಚ್ಚು ಸಾವು ಸಂಭವಿಸಿದ ರಾಷ್ಟ್ರಗಳ ಸಾಲಿನಲ್ಲಿದೆ.
ಚೀನಾದಲ್ಲಿ 2019ರ ನವೆಂಬರ್ ನಲ್ಲಿ ಕೊರೋನಾ ಮೊದಲ ಪ್ರಕರಣ ದಾಖಲಾಗಿತ್ತಲ್ಲದೆ, ಆ ದೇಶದಲ್ಲಿಯೇ 2020 ರ ಜನವರಿ 11 ರಂದು ಮೊದಲ ವ್ಯಕ್ತಿ ಸೋಂಕಿಗೆ ಬಲಿಯಾಗಿದ್ದರು. ಇದಾದ ಬಳಿಕ ಜಗತ್ತಿನಾದ್ಯಂತ ವಿಸ್ತರಿಸಿದ ಸೋಂಕಿನಿಂದ ಬಲಿಯಾದವರ ಸಂಖ್ಯೆ 50 ಲಕ್ಷ ದಾಟಿದೆ. ಭಾರತದಲ್ಲಿ ಮೊದಲ ಪ್ರಕರಣ 2020 ರ ಜನವರಿ 27ರಂದು ಕೇರಳದಲ್ಲಿ ದಾಖಲಾಗಿದೆ. ಅಲ್ಲದೆ, ದೇಶದಲ್ಲಿಯೇ ಕರ್ನಾಟಕದಲ್ಲಿ ಮೊದಲ ಸಾವು ದಾಖಲಾಗಿದೆ. ಕಲಬುರ್ಗಿಯಲ್ಲಿ ಮಾರ್ಚ್ 10ರಂದು 76 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ನಮ್ಮ ಸರ್ಕಾರಕ್ಕೆ ಮನ್ನಣೆ ನೀಡಿ : ಜಬಿಯುಲ್ಲಾ ಮುಜಾಹಿದ್
ಅಫ್ಘಾನಿಸ್ತಾನದ ಸದ್ಯದ ಸರ್ಕಾರಕ್ಕೆ ಅಂತರಾಷ್ಟ್ರೀಯ ಮನ್ನಣೆ ನೀಡಬೇಕು. ಇಲ್ಲದಿದ್ದರೆ ಆಫ್ಘಾನ್ ನಿಂದ ತೊಂದರೆಗಳು ಮುಂದುವರೆಯುತ್ತವೆ. ಇದು ಪ್ರಾದೇಶಿಕವಾದ ಸಮಸ್ಯೆ ಮತ್ತು ಕ್ರಮೇಣ ಜಾಗತಿಕ ಸಂಕಷ್ಟವಾಗಿ ಪರಿವರ್ತಿತವಾಗಬಹುದು ಎಂದು ಅಫ್ಘಾನಿಸ್ತಾನ್ ಸರ್ಕಾರದ ಪರವಾಗಿ ಅಮೇರಿಕಾಗೆ ಜಬಿಯುಲ್ಲಾ ಮುಜಾಹಿದ್ ಎಚ್ಚರಿಸಿದ್ದಾರೆ. ಆದ್ದರಿಂದ ಜಾಗತಿಕ ಶಕ್ತಿಗಳಾದ ಅಮೇರಿಕಾದ ಸಂಯುಕ್ತ ಸಂಸ್ಥಾನ ಮತ್ತು ಇತರೆ ದೇಶಗಳು ಸಮಯ ವ್ಯರ್ಥ ಮಾಡದೆ ಸರ್ಕಾರಕ್ಕೆ ಮನ್ನಣೆ ನೀಡಬೇಕೆಂದು ಕಡಕ್ ಸಂದೇಶ ರವಾನಿಸಿದ್ದಾರೆ.
ಮನುಜ ಕುಲ ಸಂರಕ್ಷಣೆಗೆ ಕರೆ
ಇಂಗಾಲ ಹೊರಸೂಸುವಿಕೆಯ ಕಡಿತದ ಬದ್ಧತೆಗೆ ರಾಷ್ಟ್ರಗಳು ವಿಫಲವಾದರೆ, ಪ್ರತಿ ದೇಶವೂ ತಮ್ಮ ಹವಾಮಾನ ವೈಪರೀತ್ಯ ತಡೆ ಯೋಜನೆ ಮತ್ತು ನೀತಿಯನ್ನು ಪರಿಷ್ಕರಿಸುತ್ತಲೇ ಇರಬೇಕು. ಇದು ಐದು ವರ್ಷಕ್ಕೆ ಒಮ್ಮೆ ಆದರೆ ಸಾಲದು, ಪ್ರತಿವರ್ಷವೂ ಮಾಡಲೇಬೇಕಾಗುತ್ತದೆ ಎಂದು ವಿಶ್ವಸಂಸ್ಥೆಯ ಮಹಾ ಪ್ರಧಾನ ಕಾರ್ಯದರ್ಶಿ ಆಂಟೋನಿಯೋ ಗುಟೆರಸ್ ಹೇಳಿದ್ದಾರೆ.
ಹವಾಮಾನ ವೈಪರೀತ್ಯವನ್ನು ತಡೆಗಟ್ಟುವ ಮೂಲಕ ಮಾನವ ಕುಲವನ್ನು ರಕ್ಷಿಸಬೇಕು ಎಂದು ಜಾಗತಿಕ ನಾಯಕರಿಗೆ ಗ್ಲಾಸ್ಕೋ ಹವಾಮಾನ ವೈಪರಿತ್ಯ ತಡೆ ಶೃಂಗಸಭೆಯು ಕರೆ ಕೊಟ್ಟಿದೆ.
ಶೃಂಗಸಭೆಯು ವಿಫಲವಾದರೆ ,ಜನರ ಆಕ್ರೋಶವನ್ನು ನಿಯಂತ್ರಿಸಲು ಸಾಧ್ಯವಿಲ್ಲ. ಮುಂದಿನ ತಲೆಮಾರುಗಳು ‘ನಮ್ಮನ್ನು ಕ್ಷಮಿಸದು’ ಎಂದು ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಎಚ್ಚರಿಕೆ ಕೊಟ್ಟಿದ್ದಾರೆ.
ಭಾರತದ ಹಾಗೆ ಅಭಿವೃದ್ಧಿಶೀಲ ರಾಷ್ಟ್ರಗಳ ಕೃಷಿಗೂ ಹವಾಮಾನ ಬದಲಾವಣೆಯು ಬಹುದೊಡ್ಡ ಸವಾಲಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಕುಡಿಯುವ ನೀರಿನಿಂದ ಕೈಗೆಟುಕುವ ದರದವರೆಗೆ ಎಲ್ಲವೂ ಹವಾಮಾನ ಬದಲಾವಣೆ ತಡೆಗೆ ಪೂರಕವಾಗಿರಬೇಕು ಎಂದು ಅವರು ಹೇಳಿದರು.
ಶ್ರೀಮಂತ ರಾಷ್ಟ್ರಗಳು ಇಂಗಾಲ ಹೊರಸೂಸುವಿಕೆಯನ್ನು ಈಗಿನ ಮಟ್ಟಕ್ಕೆ ಸ್ಥಗಿತಗೊಳಿಸಬೇಕು. ಆ ಮೂಲಕ, ಅಭಿವೃದ್ಧಿ ಹೊಂದುತ್ತಿರುವ ದೇಶಗಳಿಗೆ ಇಂಗಾಲ ಹೊರಸೂಸುವಿಕೆಗೆ ಅವಕಾಶ ಕಲ್ಪಿಸಬೇಕು ಎಂದು ಭಾರತವು ಒತ್ತಾಯಿಸಿದೆ.
