Friday, February 6, 2026
Friday, February 6, 2026
Home Blog Page 1864

ಸುರಿಮಳೆಗೆ ಉತ್ತರ ಕರ್ನಾಟಕ ಹೈರಾಣ.

0

ನವದೆಹಲಿ ಶಾಲೆಗಳ ಸಮೀಪದಲ್ಲಿರುವ ರಸ್ತೆಗಳಲ್ಲಿ ಸುರಕ್ಷತಾ ನಿಯಮಗಳನ್ನು ಇನ್ನಷ್ಟು ಕಟ್ಟುನಿಟ್ಟಾಗಿ ಜಾರಿಗೊಳಿಸಲು ಸುರಕ್ಷಿತ ಶಾಲಾ ವಲಯಗಳನ್ನು ಸ್ಥಾಪಿಸಲಾಗಿದೆ. ಈ ಪರಿಕಲ್ಪನೆಯನ್ನು ಬೆಂಗಳೂರು ಸೇರಿದಂತೆ ದೇಶದ ಐದು ನಗರಗಳಲ್ಲಿ ಪ್ರಾಯೋಗಿಕವಾಗಿ ಜಾರಿಗೊಳಿಸಲಾಗುತ್ತಿದೆ.

ಸುರಕ್ಷಿತ ಶಾಲಾ ವಲಯ ಎಂದು ಗುರುತಿಸಲಾಗದ ಪ್ರದೇಶದಲ್ಲಿ ಶಾಲೆಗಳ ಹತ್ತಿರ ಇರುವ ರಸ್ತೆಗಳಲ್ಲಿ ಸುರಕ್ಷಿತ ಸಂಚಾರಕ್ಕಾಗಿ ಈ ಕ್ರಮವನ್ನು ಕೈಗೊಳ್ಳಲಾಗಿದೆ. ಶಾಲಾ ಮಕ್ಕಳು, ಸಿಬ್ಬಂದಿ, ಪಾಲಕರ ಸಂಚಾರ, ಎಲ್ಲ ವಾಹನಗಳ ಸಂಚಾರ ಈ ರಸ್ತೆಗಳಲ್ಲಿ ಹೆಚ್ಚಾಗಿರುವ ಕಾರಣ, ಕ್ರಮವನ್ನು ಕೈಗೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.

ಶಾಲೆಗೆ ಸಂಬಂಧಿಸಿದ ಆವರಣದಿಂದ 300 ಅಡಿ ದೂರದವರೆಗೆ ಈ ವಲಯ ವ್ಯಾಪ್ತಿ ಇರುತ್ತದೆ. ಇಲ್ಲಿ ಸಂಚರಿಸುವ ವಾಹನಗಳಿಗೆ ವೇಗದ ಮಿತಿಯನ್ನು ನಿಗದಿ ಪಡಿಸಲಾಗಿದೆ. ಇದಕ್ಕೆ ಸಂಬಂಧಿಸಿದ ಸೂಚನಾ ಫಲಕಗಳನ್ನು ಶಾಲೆ ಆರಂಭಕ್ಕೂ ಮೊದಲೇ ಅಳವಡಿಕೆ ಮಾಡುವಂತೆ ಕ್ರಮ ಕೈಗೊಳ್ಳಲಾಗಿದೆ.

ಬೆಂಗಳೂರಿನ ಸೇಂಟ್ ಜೋಸೆಫ್ ಹೈ ಸ್ಕೂಲ್, ಚಾಮರಾಜಪೇಟೆಯಲ್ಲಿರುವ 116 ವರ್ಷಗಳ ಹಳೆಯ ಕೋಟೆ ಹೈಸ್ಕೂಲ್ ಯೋಜನೆಯ ಪ್ರಾಯೋಗಿಕ ಅನುಷ್ಠಾನಕ್ಕೆ ಆಯ್ಕೆಯಾಗಿವೆ.

ಬಹುರಾಷ್ಟ್ರೀಯ ಕಂಪನಿಯಾದ ‘3ಎಂ ಇಂಡಿಯಾ’ದ ಕಾರ್ಯಕ್ರಮವಾದ ” ಯಂಗ್ ಚೇಂಜ್ ಏಜೆಂಟ್ಸ್ ಫಾರ್ ರೋಡ್ ಸೇಫ್ಟಿ” ಹಾಗೂ ಕನ್ಸ ರ್ನ್ ಫಾರ್ ಅಂಡ್ ಪೆಡೆಸ್ಟ್ರಿಯನ್ ಸೇಫ್ಟಿ ಸಹಯೋಗದಲ್ಲಿ, ಬೆಂಗಳೂರಿನ ಸೆಂಟ್ ಜೋಸೆಫ್ ಹೈ ಸ್ಕೂಲ್ ನಲ್ಲಿ ಈ ಕಾರ್ಯಕ್ರಮವನ್ನು ಅನುಷ್ಠಾನ ಗೊಳಿಸಲಾಯಿತು.

ದೆಹಲಿಯ ಮಂದಿರ ಮಾರ್ಗದಲ್ಲಿರುವ ಎನ್. ಪಿ ಬಾಯ್ಸ್ ಸೀನಿಯರ್ ಸೆಕೆಂಡರಿ ಸ್ಕೂಲ್, ಪುಣೆಯ ಜ್ಞಾನ ಪ್ರಮೋಧಿನಿ ಪಾಠಶಾಲೆ, ಗುರು ಗ್ರಾಮದ ಸಿಲ್ವರ್ ಕ್ರೆಸ್ಟ್ ಸ್ಕೂಲ್ ಇನ್ನೂ ಹಲವು ಶಾಲೆಗಳು ಆಯ್ಕೆಯಾಗಿವೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

ಶಾಲಾವಲಯ ಘೋಷಣೆ: ಮಕ್ಕಳ ಸುರಕ್ಷೆ ಆದ್ಯತೆ.

ಟಿ20 ಕ್ರಿಕೆಟ್ ಸರಣಿ. ಭಾರತ ಕೈವಶ.

0

ಟಿ – 20 ಟೂರ್ನಿಯ 3 ರ ಸರಣಿಯಲ್ಲಿ ಭಾರತ ಸಮಗ್ರ ಜಯ ಸಾಧಿಸಿ ಸರಣಿ ಟ್ರೋಫಿಯನ್ನ ತನ್ನ ಮುಡಿಗೇರಿಸಿಕೊಂಡಿತು.
.ಟಿ – 20 ಅಂತಿಮ ಪಂದ್ಯವು ಭಾರತ ಮತ್ತು ನ್ಯೂಜಿಲ್ಯಾಂಡ್ ತಂಡಗಳ ನಡುವೆ ಕೋಲ್ಲೊತ್ತಾದಲ್ಲಿ ನಡೆಯಿತು.
ಕೊಲ್ಕತ್ತಾ ದ ಈಡನ್ ಗಾರ್ಡನ್ಸ್ ನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಭಾರತ ತಂಡವು 20 ಓವರ್ ಗಳಲ್ಲಿ 7 ವಿಕೆಟ್ ಪತನವಾಗಿ 184 ರನ್ ಗಳಿಸಿತು.
ರೋಹಿತ್ ನಾಯಕತ್ವದ ಚೊಚ್ಚಲ ಸರಣಿಯಲ್ಲಿ ಸಾಧನೆ ಚರಿತ್ರೆಯಾಗಿ ಮಾರ್ಪಟ್ಟಿತು.
ಟಿ – 20 ತಂಡದ ನಾಯಕತ್ವ ವಹಿಸಿಕೊಂಡ ಮೊದಲ ಸರಣಿಯಲ್ಲಿಯೆ ರೋಹಿತ್, ಬ್ಯಾಟಿಂಗ್ ಮತ್ತು ತಂತ್ರಗಾರಿಕೆಯಲ್ಲಿ ಮೇಲುಗೈ ಸಾಧಿಸಿದರು. ಬೌಂಡರಿಯೊಂದಿಗೆ ಖಾತೆ ತೆರೆದ ರೋಹಿತ್ ಅವರ ಆಟದ ಅಬ್ಬರ ಮೇರೆ ಮೀರಿತ್ತು.. ಇದರಿಂದಾಗಿ ಮೊದಲ 6 ಓವರ್ ಗಳಲ್ಲಿಯೆ ತಂಡವು 69 ರನ್ ಗಳಿಸಿತು.
ಹಿಟ್ ಮ್ಯಾನ್ ಖ್ಯಾ ತಿಗೆ ತಕ್ಕಂತೆ ಬ್ಯಾಟ್ ಬೀಸಿದ ರೋಹಿತ್ 31 ಎಸೆತಗಳಲ್ಲಿ 5 ಬೌಂಡರಿ ಹಾಗೂ 3 ಸಿಕ್ಸರ್ ಗಳನ್ನು ಸಿಡಿಸಿ 56 ರನ್ ಗಳಿಸಿಕೊಂಡರು. ಮುಂದೆ ಕಿವೀಸ್ ಬೌಲರ್ ಗಳು ಬಸವಳಿದರು .
ಮೊದಲ ವಿಕೆಟ್ ಹಂತದಲ್ಲಿ ಆಡಿದ ರೋಹಿತ್ ಶರ್ಮಾ ಮತ್ತು ಇಶಾನ್ – ಕಿಶನ್ ಉತ್ತಮ ಆರಂಭ ಮಾಡಿದರು. ಇವರಿಬ್ಬರ ಚೊಚ್ಚಲ ಬ್ಯಾಟಿಂಗ್ ಪ್ರದರ್ಶನದಿಂದ ತಂಡಕ್ಕೆ 69 ರನ್ ಸೇರಿಸಿದರು. ಆದರೆ 7 ನೇ ಓವರ್ ನಲ್ಲಿ ಸ್ಪಿನ್ನರ್ ಮಿಚೆಲ್ ಸ್ಯಾಂಟ್ನರ್ ಭಾರತ ಜೋಡಿಯ ಭರಾಟೆಗೆ ಕಡಿವಾಣ ಹಾಕಿದರು. 2 ನೇ ಎಸೆತದಲ್ಲಿ ಇಶಾನ್ ಕಿಶನ್ ವಿಕೆಟ್ ಪಡೆದ ಅವರು ಜೊತೆಯಾಟ ಮುರಿದರು. ಅದೇ ಓವರ್ ನ ಕೊನೆಯ ಎಸೆತದಲ್ಲಿ ಸುರ್ಯಕುಮಾರ್ ಯಾದವ್ ವಿಕೆಟ್ ಕೂಡ ಕಬಳಿಸಿದರು. ತಮ್ಮ ಇನ್ನೊಂದು ಓವರ್ ನಲ್ಲಿ ಸ್ಯಾಂಟ್ ನರ್ ಅವರು ರಿಷಬ್ ಪಂತ್ ವಿಕೆಟ್ ಕೂಡ ಗಳಿಸಿದರು. ಈ ಹಂತದಲ್ಲಿ ರೋಹಿತ್ ತಮ್ಮ ಆಟ ಮುಂದುವರಿಸಿದ್ದರು. ಅರ್ಧಶತಕ ಪೂರೈಸಿದ ಅವರು ಇನ್ನಷ್ಟು ಪ್ರಹಾರ ನಡೆಸುವ ಸಿದ್ಧತೆಯಲ್ಲಿದ್ದಾಗಲೇ ಸ್ಪಿನ್ನರ್ ಸೋಧಿ ಎಸೆತದಲ್ಲಿ ಅವರಿಗೇ ಕ್ಯಾಚ್ ಕೊಟ್ಟು ಔಟಾದರು.
ನಂತರ ವಿಕೆಟ್ ಗಳಲ್ಲಿ ಕ್ರೀಸ್ ಗ ಇಳಿದು ಜೊತೆಗೂಡಿದ ಶ್ರೇಯಸ್ ಅಯ್ಯರ್ 20 ಎಸೆತಗಳಲ್ಲಿ 25 ರನ್ ಗಳಿಸಿ ಮತ್ತು ವೆಂಕಟೇಶ್ ಅಯ್ಯರ್ 15 ಎಸೆತಗಳಲ್ಲಿ 20 ರನ್ ಗಳಿಸಿ ಮೊತ್ತವನ್ನು ಹಿಗ್ಗಿಸುವ ಪ್ರಯತ್ನ ಮಾಡಿದರೂ.ಅವರ ಇನ್ನಿಂಗ್ಸ್ ನಲ್ಲಿ ಇನ್ನೂ 4 ಓವರ್ ಗಳು ಬಾಕಿ ಇದ್ದಾಗಲೇ ಇಬ್ಬರೂ ಔಟ್ ಆದರು.
ನಂತರ ಕ್ರೀಸ್ ಗೆ ಬಂದ ದೀಪಕ್ ಚಹರ್, ಹರ್ಷಲ್ ರವರು ಕೊನೆಯ ಹಂತದಲ್ಲೂ ಕೂಡ ತಮ್ಮ ಬ್ಯಾಟಿಂಗ್ ಪ್ರತಿಭೆಯನ್ನು ಅನಾವರಣ ಗೊಳಿಸಿದರು ಹರ್ಷಲ್ ಹಿಟ್ ವಿಕೆಟ್ ಆಗುವ ಮುನ್ನ 11 ಎಸೆತಗಳಲ್ಲಿ18 ರನ್ ಗಳಿಸಿದರು. 2 ಬೌಂಡರಿ ಬಾರಿಸಿ ಹಾಗೂ 1 ಸಿಕ್ಸರ್ ಸಿಡಿಸಿದರು. ಹಾಗೆಯೇ ದೀಪಕ್ ಕೂಡ ಔಟಾಗದೆ 8 ಎಸೆತಗಳಲ್ಲಿ 21 ರನ್ ಗಳಿಸಿ ರೋಚಕವಾಗಿ ಬ್ಯಾಟ್ ಬೀಸಿದರು.
185 ರ. ಗೆಲುವಿನ ಗುರಿಯನ್ನಿತ್ತುಕೊಂಡು ಬೆನ್ನತ್ತಿ ಆಡಿದ ನ್ಯೂಜಿಲೆಂಡ್ ತಂಡ 17.2 ಓವರ್ ಗಳಲ್ಲಿ ಕೇವಲ 111 ರನ್ ಹೊಡೆದು ಆಲ್ ಔಟ್ ಆಯಿತು. ಮಾರ್ಟಿನ್ ಗಪ್ಟಿಲ್ ಅವರ 51 ರನ್ ಗಳ ಅರ್ಧಶತಕ ಅಕ್ಷರ್ ಪಟೇಲ್ ರವರ ಸ್ಪಿನ್ ಮೋಡಿಗೆ ಶರಣಾಗಿ ಅವರ ಅರ್ಧ ಶತಕ ಪ್ರಯತ್ನ ವ್ಯರ್ಥವಾಯಿತು.
73 ರನ್ ಗಳ ಅಂತರದಲ್ಲಿ ಕೀವಿಸ್ ತಂಡ ಸೋಲೊಪ್ಪಿತು.
ರಾಹುಲ್ ಇಲ್ಲದೆಯೇ ಇನ್ನಿಂಗ್ಸ್ ಆರಂಭಿಸಿದ ಭಾರತ ಬ್ಯಾಟುಗಾರರ ಕೊರತೆ ಅನುಭವಿಸಲೇ ಇಲ್ಲ. ಟಾಸ್ ಗೆದ್ದ ಭಾರತ
‌ಬ್ಯಾಟಿಂಗ್ ಆಯ್ಕೆ ಮಾಡಿಕೊಡಿದ್ದು ಸಫಲವಾಯಿತು.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

ಕೆ ಲೈವ್ ಸುದ್ದಿ ಸಾಲು

0

ಕನ್ನಡ ಸಾಹಿತ್ಯ ಪರಿಷತ್ತು ಶಿವಮೊಗ್ಗ ಜಿಲ್ಲಾಧ್ಯಕ್ಷರಾಗಿ ಶ್ರೀ.ಡಿ‌. ಮಂಜುನಾಥ್ ಆಯ್ಕೆಯಾಗಿದ್ದಾರೆ.

———*———

ಶಿವಮೊಗ್ಗದಿಂದ ಬಿಜೆಪಿಯ ಡಿ.ಎಸ್. ಅರುಣ್ ಮತ್ತು ಕಾಂಗ್ರೆಸ್ ನಿಂದ ಹಾಲಿ ಸದಸ್ಯ ಪ್ರಸನ್ನಕುಮಾರ್ ವಿಧಾನ ಪರಿಷತ್ ಗೆ ಸ್ಪರ್ಧಿಸುತ್ತಿದ್ದಾರೆ.

———–***———

ಟಿ-20 ಸರಣಿ ಭಾರತ-ನ್ಯೂಜಿಲೆಂಡ್ ಪಂದ್ಯಾವಳಿ. ಸರಣಿ ಭಾರತದ ಕೈವಶ.
ಭಾರತ- 183-7 (20)
ನ್ಯೂಜಿಲ್ಯಾಂಡ್ – 111 (17.2)

——-****——-

ಭಾರತೀಯ ರೈಲ್ವೆ ಇಲಾಖೆಯಿಂದ ಪ್ರಯಾಣಿಕರಿಗೆ 350ಕ್ಕೂ ಹೆಚ್ಚು ರೈಲುಗಳಲ್ಲಿ ಕ್ಯಾಟರಿಂಗ್ ಸೌಲಭ್ಯವನ್ನು ಆರಂಭಿಸಿದೆ.

———****———

ರಾಜಕುಮಾರ ಮತ್ತು ಯುವರತ್ನ ಚಲನಚಿತ್ರದ ನಿರ್ದೇಶಕರಾದ ಸಂತೋಷ್ ಆನಂದರಾಮ್ ಅವರು ಪುನೀತ್ ರಾಜಕುಮಾರ್ ಅವರ ಬಗ್ಗೆ ಬಯೋಪಿಕ್ ತಯಾರಿಕೆಯ ಕುರಿತು ಅನುಮತಿಯ ನಿರೀಕ್ಷೆಯಲ್ಲಿದ್ದಾರೆ.

———-**——–

ನವದೆಹಲಿಯ ದಟ್ಟ ವಾಯುಮಾಲಿನ್ಯದ ಪರಿಣಾಮ ವಾಹನಗಳಿಗೆ ಬಣ್ಣದ ಸ್ಟಿಕರ್ ಅಂಟಿಸಬೇಕೆಂದು ದೆಹಲಿ ಸರ್ಕಾರ ಸೂಚಿಸಿದೆ. ಹೋಲೋಗ್ರಾಮ್ ಸ್ಟಿಕರ್ ಗಳು ಎದುರಿಗೆ ಬಂದ ವಾಹನಗಳನ್ನು ಗುರುತಿಸಲು ಸಹಾಯ ಮಾಡುತ್ತವೆ ಎಂದು ತಿಳಿಸಲಾಗಿದೆ.

——–***——-

ಭಾರತೀಯ ಸೇನೆಯ ಗ್ರೂಪ್ ಕ್ಯಾಪ್ಟನ್ ಅಭಿನಂದನ್ ವರ್ಧಮಾನ್ ಅವರಿಗೆ ವೀರ ಚಕ್ರ ಪುರಸ್ಕಾರ ನೀಡಲಾಗಿದೆ.

——–**———

ಅಮೆರಿಕದ ಅಧ್ಯಕ್ಷ ಬೈಡೆನ್ ಸಂಪೂರ್ಣ ಆರೋಗ್ಯವಾಗಿದ್ದಾರೆ ಎಂದು ಶ್ವೇತಭವನದ ಫಿಸಿಶಿಯನ್ ಡಾ.ಕೆವಿನ್ ಒ.ಕೊನರ್ ತಿಳಿಸಿದ್ದಾರೆ.

——-**——–

ಮಿಂಚಿನ ಹಾಗೆ ಕೊವಿಡ್ 5ನೇ ಅಲೆ ಅಪ್ಪಳಿಸಿದೆ -ಫ್ರಾನ್ಸ್ ನ ಸರ್ಕಾರಿ ವಕ್ತಾರ -ಗೇಬ್ರಿಯಲ್ ಅಟ್ಟಾಲ್.

——-**——–

ಹಿಮಾಚಲ ಪ್ರದೇಶದಲ್ಲಿ, ಪೀಠಾಸೀನಾಧಿಕಾರಿಗಳ ಸಮಾವೇಶ

0

ವಿಧಾನಮಂಡಲದ ಸಚಿವಾಲಯಗಳಿಗೆ ಆರ್ಥಿಕ ಸ್ವಾಯತ್ತತೆ ನೀಡಬೇಕು. ಇದರ ಬಗ್ಗೆ ಮುಖ್ಯಮಂತ್ರಿ ಅವರ ಜೊತೆ ಮಾತನಾಡುತ್ತೇನೆ ಎಂದು ರಾಜ್ಯ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ತಿಳಿಸಿದ್ದಾರೆ.

ನ.17 ಮತ್ತು 18ರಂದು ಹಿಮಾಚಲ ಪ್ರದೇಶದಲ್ಲಿ ನಡೆದ ಪೀಠಾಸೀನಾಧಿಕಾರಿಗಳ ಸಮ್ಮೇಳನ ನಡೆಯಿತು. ಎಲ್ಲಾ ರಾಜ್ಯಗಳ ವಿಧಾನಮಂಡಲ ಸಚಿವಾಲಯಗಳಿಗೆ ಆರ್ಥಿಕ ಸ್ವಾವಲಂಬನೆಯ ಕುರಿತು ಸ್ವೀಕರಿಸಿದ ನಿರ್ಣಯದಲ್ಲಿ ಈ ವಿಷಯ ಪ್ರಸ್ತಾಪಿಸಲಾಗಿದೆ.

ಶಾಸಕಾಂಗದ ಘನತೆ ,ಗೌರವ ಕಾಪಾಡುವುದು ಮುಖ್ಯ. ಬಜೆಟ್ ನಂತರ ಹೆಚ್ಚುವರಿ ಅನುದಾನಕ್ಕೆ ಇಲಾಖೆ ಗಳಂತೆ ಶಾಸಕಾಂಗವು ಆರ್ಥಿಕ ಇಲಾಖೆಗೆ ಬೇಡುವುದು ಸರಿಯಲ್ಲ. ಈ ಕಾರಣಕ್ಕೆ ಆರ್ಥಿಕ ಸ್ವಾಯುತ್ತತೆ ಅಗತ್ಯವಿದೆ. ಸಂಸತ್ತಿನ ಮಾದರಿಯನ್ನು ಪಾಲಿಸಲು ಹಿಮಾಚಲ ಪ್ರದೇಶದಲ್ಲಿ ನಡೆದ ಸಮ್ಮೇಳನದ ನಿರ್ಣಯವನ್ನು ಅಲ್ಲಿನ ಸರ್ಕಾರ ಒಪ್ಪಿಕೊಂಡಿದೆ. ರಾಜ್ಯ ಸರ್ಕಾರವು ಕೂಡ ಸಮ್ಮತಿಸುವ ವಿಶ್ವಾಸವಿದೆ ಎಂದು ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

ಜಮ್ಮು ಮತ್ತು ಕಾಶ್ಮೀರದಲ್ಲಿ ಪ್ರಜಾಪ್ರಭುತ್ವ ಬಲಗೊಳ್ಳುತ್ತಿದೆ

0

ಕೇಂದ್ರಾಡಳಿತ ಪ್ರದೇಶದ ಸರ್ಕಾರವು ಜನರನ್ನು ಸಬಲೀಕರಣಗೊಳಿಸಲು ಹೊಸ, ಪಾರದರ್ಶಕ ಮತ್ತು ಜನಕೇಂದ್ರಿತ ಆಡಳಿತ ವ್ಯವಸ್ಥೆಯನ್ನು ಸ್ಥಾಪಿಸಲು ಪ್ರಯತ್ನಿಸಿದೆ ಎಂದು ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ತಿಳಿಸಿದ್ದಾರೆ.
ತಮ್ಮ ಭಾಷಣದಲ್ಲಿ ಜಮ್ಮು ಮತ್ತು ಕಾಶ್ಮೀರ ವಲಯದ ಆಡಳಿತಗಾರರ ಸಾಧನೆಗಳನ್ನು ಪಟ್ಟಿ ಮಾಡಿದ್ದಾರೆ. ತಮ್ಮ ‘ಆವಾಮ್ ಕಿ ಆವಾಜ್’ ರೇಡಿಯೋ ಕಾರ್ಯಕ್ರಮದ ಮಾಸಿಕ ಸಂಚಿಕೆಯಲ್ಲಿ ಮಾತನಾಡಿದರು. ಲೆಫ್ಟಿನೆಂಟ್ ಗವರ್ನರ್ ಅವರು ನೀಟ್ ( NEET- UG) ಪರೀಕ್ಷೆಯಲ್ಲಿ ರಾಷ್ಟ್ರೀಯ ಟಾಪರ್ ಆದ ತನ್ಮಯ್ ಗುಪ್ತಾ ಮತ್ತು ಕ್ರಿಕೆಟಿಗ ಉಮ್ರಾನ್ ಮಲಿಕ್ ಅವರನ್ನು ಅಭಿನಂದಿಸಿದರು.ಇವರು ಜಮ್ಮು ಮತ್ತು ಕಾಶ್ಮೀರದ ಯುವ ಪೀಳಿಗೆಗೆ ಹೊಸ ರೋಲ್ ಮಾಡೆಲ್ ಎಂದು ಕರೆದರು. ಸರ್ಕಾರದ ಹಲವಾರು ಮಹತ್ವದ ನಿರ್ಧಾರಗಳು ಜನರ ಸಬಲೀಕರಣವನ್ನು ಮುನ್ನಡೆಸುತ್ತಿವೆ. ಜಮ್ಮು ಮತ್ತು ಕಾಶ್ಮೀರವನ್ನು ಅಭಿವೃದ್ಧಿ ಮತ್ತು ಸಮೃದ್ಧಿಯ ಹೊಸ ಎತ್ತರಕ್ಕೆ ಕೊಂಡೊಯ್ಯುತ್ತಿವೆ ಎಂದು ಹೇಳಿದರು.
ಜಮ್ಮು ಮತ್ತು ಕಾಶ್ಮೀರದ ಇತಿಹಾಸದಲ್ಲಿ ಮೊದಲ ಬಾರಿಗೆ 7000 ನೇಮಕಾತಿಗಳನ್ನು ಅರ್ಹತೆಯ ಆಧಾರದ ಮೇಲೆ ಪಾರದರ್ಶಕ ರೀತಿಯಲ್ಲಿ ಮಾಡಲಾಗಿದೆ ಎಂದರು.
ಜಮ್ಮು ಮತ್ತು ಕಾಶ್ಮೀರ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಹುದ್ದೆಯ ನೇಮಕಾತಿ ಪರೀಕ್ಷೆಯಲ್ಲಿ ಒಂದು ಬಾರಿ ವಯೋಮಿತಿ ಸಡಿಲಿಕೆ ಮತ್ತು ಸೀಟುಗಳ ಸಂಖ್ಯೆಯಲ್ಲಿ ಹೆಚ್ಚಳವನ್ನು ಸರ್ಕಾರ ತೆಗೆದುಕೊಂಡಿರುವ ಮತ್ತೊಂದು ಪ್ರಮುಖ ನಿರ್ಧಾರವಾಗಿದೆ ಎಂದು ಅವರು ಹೇಳಿದರು. ಜಮ್ಮು ಮತ್ತು ಕಾಶ್ಮೀರ ಆಡಳಿತವು ತಳಮಟ್ಟದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬಲಪಡಿಸಲು ಅತ್ಯುತ್ತಮವಾಗಿ ಪ್ರಯತ್ನಿಸುತ್ತಿದೆ ಎಂದು ಸಿನ್ಹಾ ಹೇಳಿದ್ದಾರೆ.
ಅಭಿವೃದ್ಧಿ ಪ್ರಕ್ರಿಯೆಯಲ್ಲಿ ಸಾರ್ವಜನಿಕ ಭಾಗವಹಿಸುವಿಕೆಯನ್ನು ಹೆಚ್ಚಿಸುವುದು. ಉತ್ತಮ ಆಡಳಿತದ ತತ್ವಗಳನ್ನು ಅನುಷ್ಠಾನಗೊಳಿಸುವುದು. ಜಮ್ಮು ಮತ್ತು ಕಾಶ್ಮೀರದ ಜನರಿಗೆ ಸಾರ್ವಜನಿಕ ಸೇವೆಗಳಲ್ಲಿ ಸುಲಭವಾಗಿ ಪ್ರವೇಶಿಸುವಂತೆ ಮಾಡುವುದು. ಜೊತೆಗೆ ಯುವಕರಿಗೆ ಹೆಚ್ಚಿನ ಜೀವನೋಪಾಯದ ಅವಕಾಶಗಳನ್ನು ಸರ್ಕಾರ ಸೃಷ್ಟಿಸುತ್ತಿದೆ ಎಂದು ಅವರು ತಿಳಿಸಿದರು.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

ಬಿಡಿಎ ಸ್ವಚ್ಛಗೊಳಿಸಲು ಶೀಘ್ರ ಕ್ರಮ- ಸಿಎಂ

0

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ( ಬಿಡಿಎ) ಮೇಲಿನ ಭ್ರಷ್ಟಾಚಾರ ಆರೋಪದಲ್ಲಿ ಯಾರನ್ನೂ ರಕ್ಷಿಸುವ ಪ್ರಶ್ನೆಯೇ ಇಲ್ಲ ಎಂದು ಮಾನ್ಯ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ತಿಳಿಸಿದ್ದಾರೆ.

ಭ್ರಷ್ಟಾಚಾರ ನಿಗ್ರಹ ದಳ ವರದಿ ಸಲ್ಲಿಸಿದ ನಂತರ ಶಿಫಾರಸ್ಸುಗಳನ್ನು ತಪ್ಪದೇ ಪಾಲಿಸಲಾಗುವುದು. ತಪ್ಪಿತಸ್ಥರು ಎಷ್ಟೇ ಪ್ರಭಾವಶಾಲಿಯಾಗಿ ಇರಲಿ, ಅಧಿಕಾರಿಗಳೇ ಆಗಿರಲಿ ಅವರ ಮೇಲೆ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದರು.

ಸಾಮಾನ್ಯ ಜನರಿಂದಲೂ ಬಿಡಿಎ ಅಕ್ರಮಗಳ ಬಗ್ಗೆ ದೂರುಗಳು ಬಂದಿದ್ದವು. ಬಿಡಿಎ ಅಧ್ಯಕ್ಷ ಎಸ್.ಆರ್. ವಿಶ್ವನಾಥ್ ಕೂಡ ಗಮನ ಸೆಳೆದಿದ್ದರು. ನಗರಾಭಿವೃದ್ಧಿ ಇಲಾಖೆ ಅಧಿಕಾರಿಗಳಿಗೆ ತನಿಖೆ ಕೈಗೊಳ್ಳಲು ಸೂಚಿಸಲಾಗಿತ್ತು ಎಂದು ತಿಳಿಸಿದ್ದಾರೆ.

ಸಾಮಾನ್ಯ ಜನರಿಗೆ ಅಗತ್ಯವಿರುವ ಸೇವೆಗಳನ್ನು ಒದಗಿಸುವ ದೃಷ್ಟಿಯಿಂದ ಬಿಡಿಎ ಸ್ವಚ್ಛಗೊಳಿಸಬೇಕು ಎಂದು ಮಾನ್ಯ ಮುಖ್ಯಮಂತ್ರಿ ಅವರು ಮಾಧ್ಯಮ ಮಿತ್ರರಿಗೆ ತಿಳಿಸಿದ್ದಾರೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

ರಾಜಸ್ಥಾನ್: ಸಚಿವ ಸಂಪುಟ ಪುನಾರಚನೆ

0

ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರು ಸಚಿವ ಸಂಪುಟ ವಿಸ್ತರಿಸಿದ್ದಾರೆ. 15 ಮಂದಿ ನೂತನ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.
ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಂಪುಟ ವಿಸ್ತರಿಸಿದ್ದೇನೆ. 2023ರ ವಿಧಾನಸಭೆ ಗಮನದಲ್ಲಿಟ್ಟುಕೊಂಡು ಇನ್ನೆರಡು ದಿನಗಳಲ್ಲಿ ಖಾತೆ ಹಂಚಿಕೆ ಮಾಡಲಾಗುವುದು ಎಂದು ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್ ತಿಳಿಸಿದ್ದಾರೆ.
ರಾಜಸ್ಥಾನದಲ್ಲಿ ಮುಖ್ಯಮಂತ್ರಿ ಸೇರಿದಂತೆ ಸಂಪುಟ ಸದಸ್ಯರ ಗರಿಷ್ಠ ಸಂಖ್ಯೆ 30. ಈಗ ಮುಖ್ಯಮಂತ್ರಿ, 19 ಸಂಪುಟ ಸಚಿವರು ಮತ್ತು 10 ಸಹಾಯಕ ಸಚಿವರೊಂದಿಗೆ ಸಂಪುಟ ಭರ್ತಿಯಾಗಿದೆ. ಮಹಿಳಾ ಪ್ರಾತಿನಿಧ್ಯವೂ ಮೂರಕ್ಕೇರಿದೆ. ದಲಿತ ಸಮುದಾಯದ ನಾಲ್ವರಿಗೆ ಸಚಿವ ಸ್ಥಾನ ನೀಡಲಾಗಿದೆ.
11 ಸಂಪುಟ ಸಚಿವರು ಹಾಗೂ ನಾಲ್ವರು ಸಹಾಯಕ ಸಚಿವರು ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಸಚಿನ್ ಪೈಲೆಟ್ ಅವರು 18 ಬೆಂಬಲಿಗ ಶಾಸಕರೊಂದಿಗೆ 2019ರಲ್ಲಿ ಬಂಡಾಯ ಎದ್ದಾಗ ಸರ್ಕಾರಕ್ಕೆ ಬೆಂಬಲ ನೀಡಿದ 13 ಪಕ್ಷೇತರರ ಪೈಕಿ ಕೆಲವರಿಗೆ ಸಚಿವ ಸ್ಥಾನ ಸಿಗಬಹುದು ಎಂಬ ನಿರೀಕ್ಷೆ ಹುಸಿಯಾಗಿದೆ. ಯಾವೊಬ್ಬ ಪಕ್ಷೇತರ ಶಾಸಕರಿಗೆ ಸಚಿವ ಸ್ಥಾನ ನೀಡಿಲ್ಲ. ಬಿಎಸ್ಪಿಯನ್ನು ಕಾಂಗ್ರೆಸ್ ನಲ್ಲಿ ವಿಲೀನಗೊಳಿಸಿದ ಆರು ಶಾಸಕರ ಪೈಕಿ ಒಬ್ಬರಿಗೆ ಸಚಿವ ಸ್ಥಾನ ನೀಡಲಾಗಿದೆ. ಪೈಲೆಟ್ ಗೆ ಬೆಂಬಲ ನೀಡಿದ ಕಾರಣದಿಂದ ವಜಾಗೊಂಡಿದ್ದ ರಮೇಶ್ ಮೀನಾ ಮತ್ತು ವಿಶ್ವೇಂದ್ರ ಸಿಂಗ್ ಪುನಃ ಸಂಪುಟಕ್ಕೆ ಮರಳಿದ್ದಾರೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

ಚಾಕಲೇಟು, ಚೂಯಿಂಗ್ ಗಮ್ ನಲ್ಲಿ ಡ್ರಗ್ ಸಾಗಣೆ ಜಾಣತನ!

0

ದೇಶದ ಮೂರು ರಾಜ್ಯಗಳಲ್ಲಿ ಎನ್ ಸಿಬಿ ಕಾರ್ಯಾಚರಣೆ ನಡೆಸಿದೆ. ನಿಮಗೆ ಅಚ್ಚರಿಯಾಗಬಹುದು. ನಾವು ತಿನ್ನುವ ಚಾಕ್ಲೇಟ್, ಚೂಯಿಂಗ್ ಗಮ್, ಹಾಗೂ ನೆಟ್ಟು ಬೆಳೆಸುವ ತೆಂಗಿನ ಸಸಿ ಗಳಲ್ಲಿ ಬಚ್ಚಿಟ್ಟು ಸಾಗಿಸಲಾಗು ತ್ತಿದೆ.

ಕರ್ನಾಟಕ, ಆಂಧ್ರ ಪ್ರದೇಶ, ಮತ್ತು ಕೇರಳ ರಾಜ್ಯಗಳ ನಡೆಸಿದ ಡ್ರಗ್ಸ್ ಪತ್ತೆ ಕಾರ್ಯಾಚರಣೆ ಇದು ಕಂಡುಬಂದಿದೆ.

ಬೆಂಗಳೂರಿನಲ್ಲಿ ದೊರೆತ ಪ್ರಾಥಮಿಕ ಮಾಹಿತಿಯನ್ನು ಆಧರಿಸಿ ಮೂರು ರಾಜ್ಯಗಳಲ್ಲಿ ಪ್ರತ್ಯೇಕ ಸ್ಥಳಗಳ ಮೇಲೆ ದಾಳಿ ಮಾಡಲಾಗಿದೆ. ಬೆಂಗಳೂರಿನಿಂದ ತಿರುವಂತಪುರ ಕ್ಕೆ ಪಾರ್ಸೆಲ್ ಮೂಲಕ ಡ್ರಗ್ಸ್ ಕಳುಹಿಸಲಾಗುತ್ತಿದೆ ಎಂದು ಮಾಹಿತಿ ದೊರಕಿತ್ತು. ಇದನ್ನು ಆಧರಿಸಿ ತಿರುವನಂತಪುರಂದಲ್ಲಿ ಪಾರ್ಸೆಲ್ ಪಡೆದ ವ್ಯಕ್ತಿಯನ್ನು ವಿಚಾರಣೆ ಮಾಡಲಾಗಿದೆ. ಆತ ತಪ್ಪೊಪ್ಪಿಕೊಂಡಿದ್ದಾನೆ ಎಂದು ಎನ್ ಸಿಬಿ ವಲಯ ನಿರ್ದೇಶಕ ಅಮಿತ್ ಘಾವಟೆ ತಿಳಿಸಿದ್ದಾರೆ.

244 ಗ್ರಾಂ ಆಂಫೆಟಮೈನ್ , 25 ಎಲ್ ಎಸ್ ಡಿ ಕಾಗದ ಚೂರುಗಳು, 2 ಗ್ರಾಂ ಮೆಥಾಂಫೆಟಮೈನ್ , 44ಗ್ರಾಂ ಮೆಥಾಂಕ್ಯುಮೈನ್ , ಮತ್ತು 212 ಕೆ.ಜಿ 500 ಗ್ರಾಂ ಗಾಂಜಾ ಪತ್ತೆಯಾಗಿದೆ ಎಂದು ಎನ್ ಸಿಬಿ ನಿರ್ದೇಶಕ ತಿಳಿಸಿದ್ದಾರೆ.

ಚಾಕ್ಲೇಟ್, ಚೂಯಿಂಗ್ ಗಮ್, ತೆಂಗಿನಕಾಯಿ ಸಸಿಗಳಲ್ಲಿ ಡ್ರಗ್ಸ್ ಬಚ್ಚಿಟ್ಟು ಸಾಗಿಸಿದ ಆರು ಜನರನ್ನು ಬಂಧಿಸಲಾಗಿದೆ.

ತಮಿಳುನಾಡು ಮತ್ತು ಕೇರಳದಲ್ಲಿ ಹಲವು ದಿನಗಳಿಂದ ಮಳೆ ಬೀಳುತ್ತಿದೆ.ರೆಡ್ ಅಲರ್ಟ್ ಘೋಷಿಸಲಾಗಿದೆ. ಈ ಸಂದರ್ಭದಲ್ಲಿ ಪೆಡ್ಲರ್ ಗಳು ಡ್ರಗ್ಸ್ ಸಾಗಿಸುತ್ತಿದ್ದರು ಎಂದು ತಿಳಿದುಬಂದಿದೆ. ಪೆಡ್ಲರ್ ಗಳು ತಮ್ಮದೇ ಆದ ಗ್ಯಾಂಗ್ ಮೂಲಕ ಡ್ರಗ್ಸ್ ಸಾಗಣಿಕೆ ಮಾಡುತ್ತಿದ್ದರು. ಈ ಕೃತ್ಯಕ್ಕೆ ಬಳಸಿದ ಎರಡು ವಾಹನಗಳನ್ನು ಜಪ್ತಿ ಮಾಡಲಾಗಿದೆ. ಇದಕ್ಕೆ ಸಂಬಂಧಿಸಿದ ಹೆಚ್ಚುವರಿ ತನಿಖೆ ಮುಂದುವರಿಯುತ್ತಿದೆ ಎಂದು ಎನ್ ಸಿಬಿ ವಲಯ ನಿರ್ದೇಶಕ ಅಮಿತ್ ಘಾವಟೆ ತಿಳಿಸಿದ್ದಾರೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

ಆಂಧ್ರಪ್ರದೇಶ: 100 ಗ್ರಾಮಗಳಲ್ಲಿ ರೆಡ್ ಅಲರ್ಟ್ ಘೋಷಣೆ

0

ಕಳೆದ ನಾಲ್ಕು ದಿನಗಳಿಂದ ಸತತವಾಗಿ ಸುರಿದ ಭಾರಿ ಮಳೆಯಿಂದಾಗಿ ಧಾರ್ಮಿಕ ಕ್ಷೇತ್ರ ತಿರುಪತಿಯು ಜಲಾವೃತಗೊಂಡಿದೆ. ಈ ಹಿನ್ನೆಲೆಯಲ್ಲಿಯೇ ಈಗ ಆಂಧ್ರಪ್ರದೇಶದಲ್ಲಿ ಅತಿ ದೊಡ್ಡ ಅಣೆಕಟ್ಟೆಯಲ್ಲಿ ಬಿರುಕುಗಳು ಕಾಣಿಸಿಕೊಂಡಿದೆ.
ಅಣೆಕಟ್ಟೆಯ ಏರಿಗಳಲ್ಲಿನ ಕೆಲವು ಬಿರುಕುಗಳಿಂದ ನೀರು ಸೋರಿಕೆ ಆಗುತ್ತಿರುವುದನ್ನು ಗಮನಿಸಿದ ಸುತ್ತಮುತ್ತಲಿನ ಗ್ರಾಮಸ್ಥರು ಜಿಲ್ಲಾಡಳಿತಕ್ಕೆ ಮಾಹಿತಿ ನೀಡಿದ್ದಾರೆ.
ತಿರುಪತಿ ಬಳಿ ಇರುವ ರಾಮಚಂದ್ರಪುರಂನಲ್ಲಿನ ರಾಯಲಚಿರುವು ಅಣೆಕಟ್ಟಿನಲ್ಲಿ ಬಿರುಕುಗಳು ಕಂಡುಬಂದಿವೆ. ಇದರಿಂದ ಭಾರಿ ಮಳೆ ನಡುವೆ ಮತ್ತೊಂದು ಅನಾಹುತದ ಆತಂಕ ಎದುರಾಗಿದೆ.
ತಕ್ಷಣ ಕ್ರಮ ಕೈಗೊಂಡ ಜಿಲ್ಲಾಡಳಿತವು, ಅಣೆಕಟ್ಟೆ ಕೆಳಭಾಗದಲ್ಲಿರುವ ಸುಮಾರು 100 ಗ್ರಾಮಗಳಲ್ಲಿ ರೆಡ್ ಅಲರ್ಟ್ ಘೋಷಿಸಿದೆ. ದಾಖಲೆಗಳು ಹಾಗೂ ಅಗತ್ಯ ಪದಾರ್ಥಗಳ ಜೊತೆ ಆದಷ್ಟು ಶೀಘ್ರ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಮನವಿ ಮಾಡಲಾಗುತ್ತಿದೆ.
ಚೆನ್ನೈ ಹಾಗೂ ಕೋಲ್ಕತ್ತಾ ರಾಷ್ಟ್ರೀಯ ಹೆದ್ದಾರಿ 16ರಲ್ಲಿ ಮಳೆಯಿಂದ ರಸ್ತೆ ತೀವ್ರ ಹಾನಿಯಾದ ಹಿನ್ನೆಲೆಯಲ್ಲಿ ಪಡುಗು ಪಡುವಿನಲ್ಲಿ ರಸ್ತೆ ಸಂಚಾರಕ್ಕೆ ನಿರ್ಬಂಧ ಹೇರಲಾಗಿದೆ. ಪರಿಣಾಮ ನೂರಾರು ಲಾರಿಗಳು ರಸ್ತೆಬದಿ ಸಾಲಾಗಿ ನಿಂತು, ವಾಹನ ದಟ್ಟಣೆ ಉಂಟಾಗಿದೆ. ಕಡಪ ಅನಂತಪುರ ಸಂಪರ್ಕಿಸುವ ಪಾಪ ಗಣಿ ನದಿ ಸೇತುವೆ ಕುಸಿದಿದ್ದು, ಚೆನ್ನೈ- ವಿಜಯವಾಡ ರೈಲ್ವೆ ಮಾರ್ಗದ 17 ಎಕ್ಸ್ ಪ್ರೆಸ್ಸ್ ರೈಲುಗಳ ಸಂಚಾರ ರದ್ದು ಪಡಿಸಲಾಗಿದೆ ಎಂದು ಮಾಹಿತಿ ಲಭ್ಯವಾಗಿದೆ.
ವಿವಿಧ ಜಿಲ್ಲೆಗಳಲ್ಲಿ ಮಳೆಯಿಂದಾಗಿ ಸಂಭವಿಸಿದ ದುರಂತಗಳಲ್ಲಿ ಇದುವರೆಗೂ ಮೃತಪಟ್ಟವರ ಸಂಖ್ಯೆ 31ಕ್ಕೆ ಏರಿಕೆಯಾಗಿದೆ ಎಂದು ತಿಳಿದುಬಂದಿದೆ.