Friday, February 6, 2026
Friday, February 6, 2026
Home Blog Page 1863

ಶೀಘ್ರ ಜಾಗ ಗುರುತಿಸಿ ಮನೆ ನಿರ್ಮಿಸಿಕೊಡುವೆ – ಸಿಎಂ

0

ಮನೆ ಕಳೆದುಕೊಂಡವರಿಗೆ ಬೇರೆ ಜಾಗ ಗುರುತಿಸಿ ಮನೆ ಕಟ್ಟಿಕೊಡುವ ವ್ಯವಸ್ಥೆ ಮಾಡುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಹೊಸಕೊಟೆ ಮತ್ತು ಕೋಲಾರದಲ್ಲಿ ಮಳೆ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಸಮೀಕ್ಷೆ ನಡೆಸಿದರು.
“ವಿಧಾನಪರಿಷತ್ ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಮುಖ್ಯಮಂತ್ರಿಗಳು ಹಾಗೂ ಇಲಾಖೆ ಸಚಿವರು ಪ್ರವಾಸ ಮಾಡಬಹುದು ಎಂದು ಚುನಾವಣಾ ಆಯೋಗವು ತಿಳಿಸಿದೆ. ಉಸ್ತುವಾರಿ ಸಚಿವರಿಗೆ ಸಂಚರಿಸಲು ಅವಕಾಶವಿಲ್ಲ. ಹೀಗಾಗಿ ದೊಡ್ಡ ಪ್ರಮಾಣದಲ್ಲಿ ನಷ್ಟವಾಗಿರುವ ಕಡೆ ನಾನೇ ಹೋಗುತ್ತಿದ್ದೇನೆ ಎಂದರು.”
ಅಕಾಲಿಕ ಮಳೆಯಿಂದಾಗಿ ಎಷ್ಟು ನಷ್ಟವಾಗಿದೆ ಎಂಬುದು ಸಮೀಕ್ಷೆ ಪೂರ್ಣವಾದ ಬಳಿಕ ಸ್ಪಷ್ಟ ವರದಿ ಸಿಗಲಿದೆ ಎಂದರು.
ಹೊಸಕೋಟೆಯಲ್ಲಿ ಸಚಿವ ಎಂಟಿಬಿ ನಾಗರಾಜ್ ಮಾತನಾಡಿ, ಮಳೆಯಿಂದ ಜನರು ನಾನಾ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಸರಕಾರಿ ಆಸ್ಪತ್ರೆ ಹಿಂಭಾಗದ ಜಾಗದಲ್ಲಿ ಸಾಕಷ್ಟು ಮನೆಗಳಿಗೆ ನೀರು ನುಗ್ಗಿ ಹಾನಿಯಾಗಿದೆ. ಈ ಬಗ್ಗೆ ನಿರಂತರವಾಗಿ ಸಾರ್ವಜನಿಕರೊಂದಿಗೆ ಸಂಪರ್ಕದಲ್ಲಿದ್ದು, ಅವರಿಗೆ ಅವಶ್ಯಕತೆ ಇರುವ ರೇಷನ್, ತಾತ್ಕಾಲಿಕ ಕಾಳಜಿ ಕೇಂದ್ರ ಸೇರಿದಂತೆ ಎಲ್ಲ ರೀತಿಯ ವ್ಯವಸ್ಥೆ ಮಾಡುತ್ತಿದ್ದೆನೆ ಎಂದರು.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

ವೀರ ಚಕ್ರ ಸನ್ಮಾನಿತ,ಕ್ಯಾಪ್ಟನ್ ಅಭಿನಂದನ್

0

ನವದೆಹಲಿಯಲ್ಲಿ ಕ್ಯಾಪ್ಟನ್ ಅಭಿನಂದನ್ ವರ್ಧಮಾನ್ ಅವರಿಗೆ ವೀರ ಚಕ್ರ ಪುರಸ್ಕಾರ ನೀಡಲಾಯಿತು.
ಮಾನ್ಯ ರಾಷ್ಟ್ರಪತಿಗಳಾದ ಶ್ರೀ ರಾಮನಾಥ ಕೋವಿಂದ ಅವರು ಕ್ಯಾ. ಅಭಿನಂದನ್ ಅವರಿಗೆ ಸುಂದರ ಸಮಾರಂಭದಲ್ಲಿ ಈ ಗೌರವ ಅರ್ಪಿಸಿದರು.

2019ರಲ್ಲಿ ವೈಮಾನಿಕ ದಾಳಿ ಮುಖಾಂತರ ಅಭಿನಂದನ್ ಅವರು ಪಾಕಿಸ್ತಾನದ ವಿಮಾನವನ್ನು ಹೊಡೆದುರುಳಿಸಿದ್ದರು. ಈ ಸಾಹಸದ ಪ್ರತೀಕವಾಗಿ ಅವರಿಗೆ ದೇಶದ ಮೂರನೇ ಅತ್ಯುನ್ನತ ಶೌರ್ಯ ಪ್ರಶಸ್ತಿ ‘ವೀರ ಚಕ್ರ’ ನೀಡಲಾಗಿದೆ.

ಅಭಿನಂದನೆ ಅವರು ವೈಮಾನಿಕ ದಾಳಿ ನಂತರದ ಸಂದರ್ಭದಲ್ಲಿ ಪಾಕಿಸ್ತಾನ ಸೇನೆಯ ವಶದಲ್ಲಿದ್ದರು. ಈ ಸಮಯದಲ್ಲಿ ಅಭಿನಂದನ್ ಅವರು ಕೆಚ್ಚೆದೆಯಿಂದ ಅಸಾಧಾರಣ ಧೈರ್ಯ ಮತ್ತು ಶೌರ್ಯ ಪ್ರದರ್ಶಿಸಿದ್ದರು. ಜೀವದ ಉಳಿವನ್ನು ಕಡೆಗಣಿಸಿ, ತಮ್ಮ ಕರ್ತವ್ಯಪ್ರಜ್ಞೆಯನ್ನು ತೋರಿಸಿದ್ದರು ಎಂದು ರಾಷ್ಟ್ರಪತಿ ಭವನ ಟ್ವೀಟ್ ನಲ್ಲಿ ತಿಳಿಸಲಾಗಿದೆ.

ಈ ಸಮಾರಂಭ ಮಾನ್ಯ ಪ್ರಧಾನಿ ನರೇಂದ್ರ ಮೋದಿ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ಸೇನೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

ಕಸಾಪ ನೂತನ ಅಧ್ಯಕ್ಷ ಡಾ. ಮಹೇಶ್ ಜೋಶಿ

0

ಕನ್ನಡ ಸಾಹಿತ್ಯ ಪರಿಷತ್ತಿನ 26ನೇ ರಾಜ್ಯ ಅಧ್ಯಕ್ಷರಾಗಿ ನಾಡೋಜ ಡಾ. ಮಹೇಶ್ ಜೋಶಿ ಅವರು ಆಯ್ಕೆಯಾಗಿದ್ದು ಅಧಿಕೃತ ಘೋಷಣೆ ಬಾಕಿ ಇದೆ .

ನಾಡೋಜ ಡಾ. ಮಹೇಶ್ ಜೋಶಿ ಅವರು ನಾನು ರಾಜಕೀಯವಾಗಿ ತಟಸ್ಥ; ಯಾವುದೇ ಪಕ್ಷದ ಸದಸ್ಯನಲ್ಲ, ಗುರುತಿಸಿಕೊಂಡಿಲ್ಲ. ನಾನು ಕನ್ನಡ ಪಂಥದವನು. ನಾನು ಯಾವುದೇ ಪಕ್ಷದ ಬ್ಯಾನರ್ ಹಿಡಿದು ಮತ ಕೇಳಿಲ್ಲ.

ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯರ ಸಂಖ್ಯೆ ಕೋಟಿಗೇರಿಸುವುದು ಮತ್ತು ಶುಲ್ಕವನ್ನು 500 ರೂ. ನಿಂದ 250 ರೂ ಗೆ ಇಳಿಸುವುದು , ಆಡಳಿತ ಮತ್ತು ಹಣಕಾಸಿನ ವ್ಯವಸ್ಥೆ ಪಾರದರ್ಶಕ ಗೊಳಿಸುವುದು, ಡಿಜಿಟಲೀಕರಣಕ್ಕೆ ಒತ್ತು ನೀಡುವುದು, ಪರಿಷತ್ತಿನ ಹೆಸರಿನಲ್ಲಿ ನಡೆಯುವ ಅಕ್ರಮ ಚಟುವಟಿಕೆಗಳನ್ನು ನಿಯಂತ್ರಿಸಲು ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ನಾಡೋಜ ಡಾ. ಮಹೇಶ್ ಜೋಶಿ ಅವರು ತಮ್ಮ ಮುಂದಿನ ಯೋಜನೆಗಳನ್ನು ಮಾಧ್ಯಮ ಮಿತ್ರರೊಂದಿಗೆ ಹಂಚಿಕೊಂಡಿದ್ದಾರೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

ಆತಂಕ ಹುಟ್ಟಿಸಿದ ಅಮೆಜಾನ್

0

2 ವರ್ಷಗಳ ಹಿಂದೆ ವಿಶ್ವವೇ ಬಿಚ್ಚಿ ಬೀಳಿಸಿದಂತಹ ಪುಲ್ವಾಮಾ ಧಾಳಿಯಲ್ಲಿ 40 ಯೋಧರು ಹುತಾತ್ಮರಾಗಿದ್ದರು. ಈಗ ಪುಲ್ವಾಮಾ ಪ್ರಕರಣ ಮತ್ತೊಂದು ತಿರುವು ಪಡೆದಿದ್ದು ಉಗ್ರರು ಇ-ಕಾಮರ್ಸ್ ಸಂಸ್ಥೆ ಅಮೆಜಾನ್ ಮೂಲಕ ಧಾಳಿಗೆ ಬೇಕಾದ ರಾಸಾಯನಿಕ ಹಾಗೂ ಉಪಕರಣಗಳನ್ನು ಖರೀದಿಸಿರುವುದು ಬೆಳಕಿಗೆ ಬಂದಿದೆ.

ಭಾರತದಾದ್ಯಂತ ಹೆಸರುವಾಸಿಯಾಗಿರುವ ಅಮೆಜಾನ್ ಆನ್ಲೈನ್ ಮಾರುಕಟ್ಟೆ ವ್ಯಾಪಾರವು ಇತ್ತೀಚೆಗೆ ಒಂದಲ್ಲ ಒಂದು ರೀತಿಯ ಗೊಂದಲಕ್ಕೆ ಸಿಲುಕಿ ಕೊಳ್ಳುತ್ತಿರುವುದನ್ನು ಕಾಣಬಹುದಾಗಿದೆ. ಕೆಲ ದಿನಗಳ ಹಿಂದೆ ಅಮೆಜಾನ್ ವಿರುದ್ಧ ಮಧ್ಯಪ್ರದೇಶ ಮತ್ತು ಆಂಧ್ರಪ್ರದೇಶಗಳಲ್ಲಿ ಗಾಂಜಾ ಮಾರಾಟ ಮಾಡಿದ ಪ್ರಕರಣ ದಾಖಲಾಗಿರುವ ಬೆನ್ನಲ್ಲಿಯೇ, ಈಗ ಸ್ಪೋಟಕ ಮಾಹಿತಿಯೊಂದು ಹೊರಬಿದ್ದಿದೆ. ಭಾರತೀಯ ಸೇನೆಯ 40 ಯೋಧರು ಹುತಾತ್ಮರಾಗಲು ಕಾರಣವಾದ ದಾಳಿಗೂ ಮುನ್ನ ಸುಧಾರಿತ ಸ್ಫೋಟಕ ಸಾಧನ ತಯಾರಿಸಲು ಬಳಸುವಂತಹ ರಾಸಾಯನಿಕ ಗಳಾದ ಅಮೋನಿಯಂ ನೈಟ್ರೇಟ್, ನೈಟ್ರೋಗ್ಲಿಸರಿನ್ ಹಾಗೂ ಬ್ಯಾಟರಿಗಳು ಸೇರಿ ಹಲವು ಉಪಕರಣಗಳನ್ನು ಆನ್ಲೈನ್ ಮೂಲಕ ಖರೀದಿಸಲಾಗಿದೆ ಎಂದು ಸಿಎಐಟಿ ರಾಷ್ಟ್ರೀಯ ಅಧ್ಯಕ್ಷ ಬಿ.ಸಿ.ಭಾರ್ತಿಯಾ ತಿಳಿಸಿದ್ದಾರೆ.

ಯಾಂತ್ರಿಕ ಬದುಕಿಗೆ ಒಗ್ಗಿಕೊಂಡಿರುವ ಇಂದಿನ ಜನತೆ ಅಮೆಜಾನ್ ನಂತಹ ಹಲವು ಆನ್ಲೈನ್ ಶಾಪಿಂಗ್ ಗೆ ಮುಂದಾಗಿದ್ದಾರೆ. ಇಂತಹ ಆನ್ಲೈನ್ ಶಾಪಿಂಗ್ ಗಳಿಂದ ಯುವಜನತೆ ಹಾದಿ ತಪ್ಪುತ್ತಿದ್ದಾರೆ ಎಂಬ ಆತಂಕ ಕೂಡ ಪೋಷಕರಲ್ಲಿ ಮೂಡಿದೆ.

ಇತ್ತೀಚಿಗೆ ಪುಲ್ವಾಮಾ ಧಾಳಿ ಬಳಿಕ ರಾಷ್ಟ್ರೀಯ ತನಿಖಾ ಸಂಸ್ಥೆಯ ಅಧಿಕಾರಿಗಳು ಬಂಧಿಸಿದ ವ್ಯಕ್ತಿ ನೀಡಿದ ಮಾಹಿತಿಯಿಂದಲೇ ಈ ಆತಂಕಕಾರಿ ಸಂಗತಿ ಬಹಿರಂಗವಾಗಿದೆ. ಹಾಗಾದರೆ ಈ ಮೂಲಕ ಏನು ಬೇಕಾದರೂ ಮಾರಾಟ ಮಾಡಬಹುದು ಎಂದು ಇ-ಕಾಮರ್ಸ್ ಸಂಸ್ಥೆಗಳು ಭಾವಿಸಿವೆಯೇ ಎಂದು ಭಾರ್ತಿಯಾ ಆತಂಕ ವ್ಯಕ್ತಪಡಿಸಿದ್ದಾರೆ.

ಆನ್ಲೈನ್ ಮಾರುಕಟ್ಟೆಯಿಂದಾಗಿ ಸ್ಥಳೀಯ ವರ್ತಕರು ಹೈರಾಣಾಗಿದ್ದಾರೆ. ಜೀವನ ನಡೆಸುವುದೇ ಅವರಿಗೆ ಕಷ್ಟವಾಗಿದೆ. ಎಲ್ಲ ಆನ್ಲೈನ್ ಮಯ ಆಗಿರುವಾಗ ಕೇಂದ್ರ ಸರ್ಕಾರ ಇಂತಹ ಆನ್ಲೈನ್ ಮಾರುಕಟ್ಟೆ ಸಂಸ್ಥೆಗಳಿಗೆ ಕಟ್ಟುನಿಟ್ಟಿನ ಮಾರ್ಗಸೂಚಿಯನ್ನು ನೀಡಬೇಕು. ಆನ್ ಲೈನ್ ಮಾರುಕಟ್ಟೆ ವ್ಯವಸ್ಥೆಯಲ್ಲಿ ಕಾನೂನುಬಾಹಿರ ಚಟುವಟಿಕೆಗಳಿಗೆ ಸಂಬಂಧಿಸಿದ ವಸ್ತುಗಳ ಮಾರಾಟವನ್ನು ನಿಷೇಧಿಸಬೇಕು.

ಸ್ಪೋಟಕ ಕಾಯ್ದೆ -1884 ರ ಪ್ರಕಾರ ಅಮೋನಿಯಂ ಉತ್ಪಾದನೆ, ಮಾರಾಟ ಹಾಗೂ ಸಂಗ್ರಹವನ್ನು 2021ರಲ್ಲಿ ನಿಷೇಧಿಸಲಾಗಿದೆ. ಅಲ್ಲದೆ, 2006ರಲ್ಲಿ ಮಾಲೇಗಾಂವ್ ಹಾಗೂ 2008ರಲ್ಲಿ ದಿಲ್ಲಿಯಲ್ಲಿ ನಡೆದ ದಾಳಿಯಲ್ಲಿ ಇದೇ ರಾಸಾಯನಿಕ ಬಳಸಲಾಗಿತ್ತು. ಇಷ್ಟೆಲ್ಲಾ ಆದರೂ ಸಹ ಅಮೆಜಾನ್ ಇಂತಹ ರಾಸಾಯನಿಕ ಮಾರಾಟ ಮಾಡುತ್ತಿರುವುದು ದೇಶದ ಭದ್ರತೆಗೆ ಅಪಾಯಕಾರಿಯಾಗಿದೆ ಎಂದು ಬಿ.ಸಿ. ಭಾರ್ತಿಯಾ ಅವರು ಹೇಳಿದರು.

ಅಮೆಜಾನ್ ವಿರುದ್ಧ ಸೂಕ್ತ ತನಿಖೆಯಾಗಬೇಕು ಹಾಗೂ ಸಂಬಂಧಿಸಿದ ಸಂಸ್ಥೆ ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ಸಿಎಐಟಿ ರಾಷ್ಟ್ರೀಯ ಅಧ್ಯಕ್ಷ ಬಿ.ಸಿ. ಭಾರ್ತಿಯಾ ಅಭಿಪ್ರಾಯ ಪಟ್ಟಿದ್ದಾರೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

ದೇಶದಾದ್ಯಂತ ಮನೆಗೆಲಸದವರ ಸಮೀಕ್ಷೆ

0

ದೇಶದಲ್ಲಿರುವ ಎಲ್ಲಾ ಜಿಲ್ಲೆಗಳಲ್ಲಿ, ಏಕಕಾಲಕ್ಕೆ ಮನೆಗೆಲಸದವರ ಸಮೀಕ್ಷೆ ನಡೆಯಲಿದೆ.

ಅಡುಗೆಯವರು, ಕಾವಲುಗಾರರು, ಸ್ವಚ್ಛತಾ ಸಿಬ್ಬಂದಿಗಳು ಹೀಗೆ ಹಲವಾರು ರೀತಿಯ ಸೇವೆ ಒದಗಿಸುವ ಮನೆಗೆಲಸದವರ ಸಮಸ್ಯೆಯನ್ನು ಅರಿಯಲು ಅಖಿಲ ಭಾರತ ಮಟ್ಟದ ಸಮೀಕ್ಷೆಯನ್ನು ಕೇಂದ್ರ ಸರ್ಕಾರ ಆರಂಭಿಸಿದೆ.

ಕೇಂದ್ರ ಕಾರ್ಮಿಕ ಸಚಿವ ಭೂಪೇಂದರ್ ಯಾದವ್ ಈ ಸಮೀಕ್ಷೆಗೆ ಚಾಲನೆ ನೀಡಿದ್ದಾರೆ.

ಮನೆಗೆಲಸದವರ ನಿಖರವಾದ ಸಂಖ್ಯೆ ಮತ್ತು ಅನುಪಾತವನ್ನು ಅಂದಾಜು ಮಾಡುವುದು. ವಿವಿಧ ಕುಟುಂಬಗಳಲ್ಲಿ ಇರುವ ಮನೆಗೆಲಸದವರ ಸಮಸ್ಯೆಯನ್ನು ಅರ್ಥ ಮಾಡಿಕೊಳ್ಳಲು ದಾಖಲೆ ಆಧಾರಿತ, ದತ್ತಾಂಶ ಚಾಲಿತ ನೀತಿಗಳನ್ನು ಅರ್ಥ ಮಾಡಿಕೊಳ್ಳಬೇಕು.ರಾಷ್ಟ್ರ ಮತ್ತು ರಾಜ್ಯ ಮಟ್ಟದ ಸಮೀಕ್ಷೆ ನಡೆಯಲಿದೆ.
ನಗರೀಕರಣದಿಂದಾಗಿ, ಕಾರ್ಮಿಕರ ವಲಸೆ ಹೆಚ್ಚಾಗಿದೆ. ಮನೆಗೆಲಸ ಆಸಕ್ತಿ ಇರುವ ಕಾರ್ಮಿಕರ ಸಂಖ್ಯೆ ತೀವ್ರ ಹೆಚ್ಚಾಗಿದೆ. ಈ ವಲಯದಲ್ಲಿ ಕೆಲಸ ಮಾಡುವವರ ಸುರಕ್ಷತೆ ಮತ್ತು ಹಕ್ಕು ರಕ್ಷಣೆ ನಿಟ್ಟಿನಲ್ಲಿ ಸೂಕ್ತ ನೀತಿ ರೂಪಿಸಲು ಅಗತ್ಯವಿದೆ ಎಂದು ಸಚಿವರು ತಿಳಿಸಿದರು.

ಮನೆಗೆಲಸದವರ ರಾಷ್ಟ್ರ ಮಟ್ಟದ ಸಮೀಕ್ಷೆ ಇದೇ ಪ್ರಥಮ ಬಾರಿಗೆ ನಡೆಸಲಾಗುತ್ತಿದೆ. ಈ ವಲಯದಲ್ಲಿ ಕಾರ್ಮಿಕರ ಕಲ್ಯಾಣಕ್ಕಾಗಿ ಸೂಕ್ತ ನೀತಿ ರೂಪಿಸಲಾಗಿದೆ. ಸಮಾಜದಲ್ಲಿನ ಎಲ್ಲಾ ಜನರಿಗೂ ಈ ಸೌಲಭ್ಯ ದೊರೆಯಬೇಕೆಂಬ ಸರ್ಕಾರದ ಬದ್ಧತೆಯನ್ನು ತೋರಿಸುತ್ತದೆ. ಅವರ ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳಲು ನೆರವು ನೀಡುವ ಈ ಸಮೀಕ್ಷೆಯು ಒಂದು ವರ್ಷದೊಳಗೆ ಮುಕ್ತಾಯಗೊಳ್ಳಲಿದೆ ಎಂದು ಕೇಂದ್ರದ ಕಾರ್ಮಿಕ ಸಚಿವ ಭೂಪೇಂದರ್ ಯಾದವ್ ತಿಳಿಸಿದ್ದಾರೆ.

ಇ- ಶ್ರಮ್ ಕೋರ್ಟಿನಲ್ಲಿ ನೋಂದಣಿ ಮಾಡಿಸಿಕೊಂಡಿರುವ ಅಸಂಘಟಿತ ವಲಯದ ಒಟ್ಟು 8.56 ಕೋಟಿ ಕಾರ್ಮಿಕರಿದ್ದಾರೆ. ಇದರಲ್ಲಿ ಶೇ. 8. 8 ರಷ್ಟು ಕಾರ್ಮಿಕರು ಮನೆಗೆಲಸದ ವರ್ಗಕ್ಕೆ ಸೇರಿದ್ದಾರೆ. ಈ ವರ್ಗವು ಕೃಷಿ ಮತ್ತು ನಿರ್ಮಾಣ ವಲಯದ ನಂತರ ಇರುವ ಮೂರನೇ ಅತಿದೊಡ್ಡ ವರ್ಗವಾಗಿದೆ.

ಮನೆಗೆಲಸ ಆರಂಭಿಸಿದಾಗಿನಿಂದ ವಯಸ್ಸು, ಶಿಕ್ಷಣ, ಔದ್ಯೋಗಿಕ ತರಬೇತಿ ,ಕೆಲಸ ಮಾಡಿದ ದಿನಗಳ ಸಂಖ್ಯೆ, ಹಲವಾರು ಮಾಹಿತಿಗಳನ್ನು ಸಮೀಕ್ಷೆಯ ವೇಳೆ ಸಂಗ್ರಹಿಸಲಾಗುತ್ತದೆ ಎಂದು ಕಾರ್ಮಿಕ ಸಚಿವಾಲಯ ತಿಳಿಸಿದೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

ಕೃಷಿ ಮುನ್ನಡೆಗೆ ಎಸ್ ಬಿಐ ಪಂಚಸೂತ್ರ

0

ಕೃಷಿ ಕ್ಷೇತ್ರದಲ್ಲಿ ದಿನೇದಿನೇ ಹೊಸ ಆವಿಷ್ಕಾರಗಳು ನಡೆಯುತ್ತಿವೆ. ಕೃಷಿ ಅಭಿವೃದ್ದಿಯಿಂದ ದೇಶದ ಅಭಿವೃದ್ಧಿ ಸಾಧ್ಯವಾಗಲಿದೆ‌. ಈ ಹಿನ್ನೆಲೆಯಲ್ಲಿ ಸರ್ಕಾರ ಅನೇಕ ಯೋಜನೆಗಳನ್ನು ಹಾಕಿಕೊಂಡಿದೆ. ಬ್ಯಾಂಕಿಂಗ್ ಕ್ಷೇತ್ರವು ಕೂಡ ಕೃಷಿ ಪ್ರಗತಿಯನ್ನು ಗುರಿಯಾಗಿಟ್ಟುಕೊಂಡು ಅನೇಕ ಸುಧಾರಣೆಗಳನ್ನು ಕೈಗೊಳ್ಳುತ್ತಿವೆ.
ಎಸ್ ಬಿಐ ಸಂಶೋಧನಾ ವರದಿಯು ಕೃಷಿ ಕ್ಷೇತ್ರದ ಸುಧಾರಣೆಗೆ 5 ಸಲಹೆಗಳನ್ನು ನೀಡಿದೆ.
ರಾಷ್ಟ್ರೀಯ ಕೃಷಿ ಮಾರುಕಟ್ಟೆಯಲ್ಲಿ (ಇ-ನ್ಯಾಮ್) ಕನಿಷ್ಠ ಬೆಂಬಲ ಬೆಲೆಯನ್ನು ಮೂಲ ನೆಲೆಯಾಗಿ ನಿಗದಿಪಡಿಸಲು ಪರಿಶೀಲಿಸಬಹುದು.
ಗುತ್ತಿಗೆ ಕೃಷಿ ಕುರಿತ ಸಂಸ್ಥೆ ರಚಿಸಬೇಕು.
ಎಪಿಎಂಸಿಗಳ ಮೂಲ ಸೌಕರ್ಯ ಅಭಿವೃದ್ಧಿಪಡಿಸಬೇಕು. ವರದಿಯ ಪ್ರಕಾರ ಕೊಯ್ಲು ಮತ್ತು ನಂತರದ ಅವಧಿಯಲ್ಲಿ 27,000 ಕೋಟಿ ರೂ. ಮೌಲ್ಯದ ಧಾನ್ಯಗಳು, 10,000 ಕೋಟಿ ರೂ. ಮೌಲ್ಯದ ತೈಲ ಧಾನ್ಯಗಳು, 5,000 ಕೋಟಿ ರೂ. ಮೌಲ್ಯದ ಬೇಳೆಕಾಳುಗಳು ನಷ್ಟವಾಗುತ್ತವೆ. ಇದನ್ನು ತಪ್ಪಿಸಲು ಎಪಿಎಂಸಿ ಗಳ ಮೂಲಸೌಕರ್ಯ ವೃದ್ಧಿಸಬೇಕು. ಸುಸಜ್ಜಿತ ಗೊಳಿಸಬೇಕು.
ಬೆಳೆಗಳ ದರ ಖಾತರಿಗಾಗಿ ಕನಿಷ್ಠ ಬೆಂಬಲ ಬೆಲೆಯ (ಎಸ್ಎಸ್ ಪಿ) ಬದಲಾಗಿ ಬೆಳೆಗಳ ಖರೀದಿಗೆ ಖಾತರಿಯನ್ನು ಕೊಡಬಹುದು. ಉದಾಹರಣೆಗೆ ಕನಿಷ್ಠ 5 ವರ್ಷಗಳ ಅವಧಿಗೆ ಇಷ್ಟು ಪ್ರಮಾಣದ ಬೆಳೆ ಖರೀದಿಸಲಾಗುವುದು ಎಂಬ ಖಾತ್ರಿಯನ್ನು ನೀಡುವುದು. ಕನಿಷ್ಠ ಕಳೆದ ವರ್ಷದ ಬೆಳೆಯ ಶೇಕಡಾವಾರು ಪ್ರಮಾಣವನ್ನು ಗಮನಿಸಿ, ಅಷ್ಟನ್ನು ಖರೀದಿಸುವ ಖಾತರಿ ನೀಡಬಹುದು.
ರಾಜ್ಯಗಳಲ್ಲಿ ವ್ಯವಸ್ಥಿತವಾಗಿ ಕೃಷಿ ಉತ್ಪನ್ನಗಳ ಖರೀದಿಗೆ ವ್ಯವಸ್ಥೆ ಮಾಡಬೇಕು. ಪಂಜಾಬ್ ಮತ್ತು ಹರಿಯಾಣದಲ್ಲಿ ಉತ್ಪಾದನೆಯಾಗುವ ಶೇ. 83 ಧಾನ್ಯಗಳ ಖರೀದಿಗೆ ಸರ್ಕಾರಿ ವ್ಯವಸ್ಥೆಯಿದೆ. ಕೆಲ ರಾಜ್ಯಗಳಲ್ಲಿ ಒಂದಂಕಿಗೆ ಇಳಿದಿದೆ.
ನಮ್ಮ ರಾಜ್ಯದ ರೈತ ಸಂಘಟನೆಗಳು ಈ ದೃಷ್ಟಿಯಿಂದ ಹೆಚ್ಚಿನ ಪ್ರಮಾಣದಲ್ಲಿ ಧಾನ್ಯ ಖರೀದಿಗೆ ಸರ್ಕಾರಕ್ಕೆ ಒತ್ತಾಯಿಸಬೇಕಿದೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

ಕಂಡೆ ನಾ ನರಸಿಂಹನ..! ಕನಕರ ನರಸಿಂಹ ದರ್ಶನ.

0

ಕನಕದಾಸರು..ಮಹತ್ವದ ಕವಿಗಳು. ದಾಸ ಸಮೂಹದಲ್ಲೇ ಅತೀವ,ಅದ್ಭುತ ಕಲ್ಪನಾಶಕ್ತಿಯುಳ್ಳ ಪ್ರತಿಭೆ. ಅವರ ಪ್ರತಿಮೆ,ರೂಪಕಗಳು ದಾಸ ಸಾಹಿತ್ಯ ಸಹೃದಯರನ್ನ ಸೋಜಿಗದ ಸಾಗರದಲ್ಲಿ ಮುಳುಗಿಸಿಬಿಡುತ್ತದೆ. ವಿವಿಧ ಕೃತಿಗಳ ಒಳಹೊಕ್ಕು ಅವರನ್ನ ಅರ್ಥಮಾಡಿಕೊಳ್ಳುವ ಸಾಹಸ ಇನ್ನೂ ಪೂರ್ಣವಾಗಿಲ್ಲವೇನೊ? ಅಂತ ಅನಿಸುತ್ತದೆ. ಅವರ ಮುಂಡಿಗೆಗಳನ್ನ ಓದಿದಾಗ ಇದು ನಮಗೆ ವೇದ್ಯವಾಗುತ್ತದೆ.ವಿದ್ವಾಂಸರೂ ಕೂಡ ಒಂದುಕ್ಷಣ ಮನಮಂಥನ ಮಾಡಿಕೊಳ್ಳುವಂತಿದೆ… ಪೂರ್ಣ ಅವುಗಳ ಬಗ್ಗೆ ವಿಶೇಷ ಅಧ್ಯಯನವೇ ಬೇಕೇನೊ?.ಏಕೆಂದರೆ ಅವರ ಗೂಢಾರ್ಥಗಳು ಒಬ್ಬೊಬ್ಬರಿಗೆ ಒಂದೊಂದು ಅರ್ಥ ನೀಡುತ್ತವೆ.

ಬಹಳ ಸಹೃದಯರ ಅಂತಃಕರಣ ಕಲಕಿ,ಆಂತರ್ಯ ಮೀಟಿದ ಮುಂಡಿಗೆಗಳಲ್ಲಿ ” ಮರವ ನುಂಗು ಪಕ್ಷಿ.ಮನೆಯೊಳಗೆ ಬಂದಿದೆ!. ಇದರ ಕುರುಹ ಪೇಳಿ ಕುಳಿತಿರುವ ಜನರು!” ಒಂದಾಗಿದೆ. ಅತ್ಯಂತ ಆಸಕ್ತಿಪೂರ್ವಕ ಓದಿಸಿಕೊಳ್ಳುತ್ತದೆ.ಇದನ್ನ ಆಮೂಲಾಗ್ರ ಜೀರ್ಣಿಸಿಕೊಳ್ಳುವಲ್ಲಿ ಬೇಕಾದದ್ದು ಅತೀ ಬುದ್ಧಿವಂತಿಕೆಯಲ್ಲ.ಸಾಮಾನ್ಯ ಜ್ಞಾನ ಎಂಬುದನ್ನ ಮುಂಡಿಗೆಗಳನ್ನ ಬಿಡಿಸಿದ ಜಾಣ/ಜಾಣೆಯರು ತಮ್ಮ ಅನಿಸಿಕೆ ವ್ಯಕ್ತಪಡಿಸುತ್ತಾರೆ. ಅಲೌಕಿಕ ಸಂಗತಿಗಳ ಮೂಲಕ ಲೌಕಿಕ ಸಾಮಗ್ರಿಯನ್ನ ಆಧರಿಸಿ ನಮ್ಮನ್ನ ಆಧ್ಯಾತ್ಮದ ಸುಳಿಯಲ್ಲಿ ಸಿಕ್ಕಿಸಿಬಿಡುತ್ತಾರೆ. ಸಮಾಧಾನದ ಚಿತ್ತದಿಂದ ಗ್ರಹಿಸಿದಾಗ ಮುಂಡಿಗೆಗಳ ಅಂತರಂಗ ಹೂವಿನ ಪಕಳೆಗಳಂತೆ ಬಿಚ್ಚಿಕೊಳ್ಳುತ್ತಾ ಹೋಗುತ್ತದೆ.! ನೋಡಲಿಕ್ಕೆ ಬೆರಗು,ಬೆಡಗು ತುಂಬಿದ ಸಾಲುಗಳು.
” ಒಂಟಿಕೊಂಬಿನ ಪಕ್ಷಿ,ಒಡಲೊಳಗೆ ಕರುಳಿಲ್ಲ.ಗಂಟಲು ಮೂರುಂಟು ಮೂಗು ಇಲ್ಲ.ಕುಂಟು ಮನುಜನ ತೆರದಿ ಕುಳಿತಿಹುದು ಮನೆಯೊಳಗೆ ಎಂಟು ಹತ್ತರ ಭಕ್ಷ್ಯ ಭಕ್ಷಿಸುವುದು.” ಕೊಂಚ ಅದರೊಳಗೇ ಸಾಗಿದರೇ ಬೀಸುವ ಕಲ್ಲಿನ ಪ್ರತಿಮೆ ಇದನ್ನೆಲ್ಲ ಒಳಗೊಂಡಿದೆ ಎಂಬ ಅರ್ಥ ಹೊಳೆದಾಗ ನಮಗೆ ನಾವೇ ಚೋದ್ಯದೊಳಗೇ ಮುಳುಗಿಬಿಡುತ್ತೇವೆ.
ಬೀಸುವ ಕಲ್ಲಿನ ಗೂಟ,ಒಂಟಿಕೊಂಬು. ಎರಡೂ ವೃತ್ತಾಕಾರದ ಕಲ್ಲಿನ ನಡುವೆ ಏನಿಲ್ಲ.( ಕರುಳಿಲ್ಲ). ನಡುವೆ ಕೇಂದ್ರ ಬಿಂದುವಿನಲ್ಲಿ ಕಾಳು ಹಾಕಲು ಪುಟಾಣಿ ಗುಣಿ.ಅದಕ್ಕೆ ಮೂರು ರಂಧ್ರಗಳು( ಗಂಟಲು). ..ಹೀಗೇ ಬೀಸುವ ಕಲ್ಲಿನ ಚಿತ್ರ ನಮ್ಮ ಚಿತ್ತದಲ್ಲಿ ಕೆತ್ತಿಕೊಳ್ಳುತ್ತಾ ಸಾಗುತ್ತದೆ.ಇದು ಜನಪ್ರಿಯವಾದ ಅವರ ಮುಂಡಿಗೆಯ ಒಂದು ಝಲಕ್ ಅಷ್ಟೆ.

ಅವರ ಕೃತಿರಚನೆಯ ಮೂಸೆಯಲ್ಲಿ ಅನೇಕ ಅದ್ಭುತ ಚಮತ್ಕಾರಗಳನ್ನ ಓದಿ ಅನುಭವಿಸಬಹುದು. ಈಗ ನರಸಿಂಹಾವತಾರದ ಒಂದು ಪ್ರಸಂಗ.
ಪ್ರಹ್ಲಾದ ತನ್ನ ತಂದೆಗೆ ಕಂಬದಲ್ಲೂ ಇದ್ದಾನೆ ಹರಿ!.ಎಂದ ತಕ್ಷಣ ಅದಕ್ಕೆ ಗದೆಯನ್ನ ಘಟ್ಟಿಸಿದಾಗ ಉಂಟಾದ ದೃಶ್ಯವನ್ನ ಕನಕದಾಸರ ಹಾಡಿನಲ್ಲೇ ಕಾಣಬೇಕು.
ಘುಡುಘುಡಿಸಿ ಕಂಬದಲಿ ದಢದಢ ಸಿಡಿಲು ಸಿಡಿಯೆ ಕಿಡಿಕಿಡಿಸೆ!.ಇದ್ದಕ್ಕಿದ್ದಂತೆ
ಅರಮನೆಯ ಕಂಬ ಬಿರಿಯುವ,..ಹೋಳಾಗುವ ಕ್ರಿಯೆ ಧ್ವನಿಪೂರ್ಣವಾಗಿ ಪದಗಳಲ್ಲೇ ತುಂಬಿದ್ದಾರೆ.ಕಂಬದೊಳಗೆ ಮುಂಚೆ ಉದ್ಭವಿಸಿದ ಸದ್ದು ‘ಘುಡುಘುಡು’ ಎದೆ ನಡುಗುವ ರೀತಿ ಕೇಳಿಸಿತಂತೆ.ಆ ಕಂಬ ಒಡೆದ ಪರಿ ಹೇಗಿತ್ತೆಂದರೆ ” ದಢದಢ ” ಸಿಡಿಲು ಬಡಿಯುವುದಲ್ಲ ಸಿಡಿಯಿತು ಎನ್ನುತ್ತಾರೆ! ಅಷ್ಟಕ್ಕೇ ನಿಲ್ಲಿಸುವುದಿಲ್ಲ!.ಅಲ್ಲಿಂದ ಬೆಂಕಿಯ ಕಿಡಿಗಳು ಹೊತ್ತಿಕೊಂಡವಂತೆ!.
ಮುಂದೇನಾಯಿತು ಎಂದರೆ” ನುಡಿಯಡಗಲೊಡನೆ ಮುಡಿವಿಡಿದು…” ಅಂದರೆ ನೇರ ಹಿರಣ್ಯಕಶಿಪುವಿನ ಗಂಟಲೊಣಗಿತು.ಅವನ ” ಮುಡಿವಿಡಿದು”
ಘಡಘಡನೆ ನಡುಗಿತು ಇಡೀ ಅರಮನೆ.ಘುಡುಘುಡಿಸಿ ಕಂಬದಿಂದ ನೆಲಕ್ಕೆ ಪಾದವಿಟ್ಟಿದ್ದೇ ತಡ ಇಡೀ ವಾತಾವರಣ ಒಂದುಕ್ಷಣ ಮಂಕಾಯಿತು.ಇಂಥ ಸಂದರ್ಭದಲ್ಲೇ ನರಸಿಂಹನಾಗಿ ಕಂಡ ಶ್ರೀಹರಿ. ಹಿರಣ್ಶಕಶಿಪುವನ್ನ ತನ್ನತೊಡೆಯ ಮೇಲೆ ಕೆಡವಿಕೊಂಡ ಆ ಭೀಕರ ಸನ್ನಿವೇಶ ಈ ಸಾಲುಗಳಲ್ಲಿ ಮೂಡುತ್ತಾ ಹೋಗಿದೆ.

ಮುಂದಿನ ಚಿತ್ರ ಕಟ್ಟಿಕೊಡುವ ಕನಕರ ಕಾವ್ಯಶಕ್ತಿ ಇನ್ನೊಂದು ಮಜಲು ತಲುಪುತ್ತದೆ. ಹಿರಣ್ಯಕಶಿಪುವಿನ ಸಂಹಾರದ ಚಿತ್ರಣ ಅಷ್ಟೇ ರೌದ್ರವಾಗಿದೆ.
ಉರದೊಳಪ್ಪಳಿಸಿ ಅರಿಬಸಿರ ಸರಸರನೆ ಸೀಳಿ….ಎಂಬಲ್ಲಿ ಹಿರಣ್ಯಕಶಿಪುವಿನ
ಎದೆ ಸೀಳಿ,ಕರುಳ ಬಗೆದ. ಅದು ಹೇಗಿತ್ತು?. ಪರಿಪರಿಯಲಿ ಚರ್ಮ ಎಳೆದೆಳೆದು ನರಗಳನ್ನ ನೂಲಿನೆಳೆಗಳಂತೆ ಸೆಳೆದನಂತೆ.ಜೊತೆಗೆ ರಕ್ತತೊಯ್ದು ಕರುಳನ್ನ ಕೊರಳಿಗೆ ಹಾರಹಾಕಿಕೊಂಡ ಪ್ರಹ್ಲಾದನ ಆರಾಧ್ಯ ದೈವ.ಕೈಗಳಿಂದ
ನೆತ್ತರು ದಳದಳ ಇಳಿಯುತ್ತಿದ್ದ ಶ್ರೀಹರಿಯನ್ನ ಕನಕರು ನಮಗೆ ತೋರಿಸುತ್ತಾರೆ‌.ಇಡೀ ವಿವರಣೆ ಸಹೃದಯನಲ್ಲಿ ಸಂಹಾರ ಕ್ರಿಯೆಯ ಭಿಭತ್ಸ
ಚಿತ್ರ ಮೂಡುತ್ತದೆ.

ಮುಂದಿನ ಪಂಕ್ತಿಗಳಲ್ಲಿ ಕನಕರು ಆಗಷ್ಟೇ ಕಟ್ಟಿಕೊಟ್ಟಿದ್ದ ರೌದ್ರ ದೃಶ್ಯಕ್ಕೆ ತದ್ವಿರುದ್ಧವಾಗಿ ಚಮತ್ಕಾರಿಕೆಯೆಂಬಂತೆ ಶಾಂತ ಸ್ಥಿತಿಗೆ ನಮ್ಮನ್ನೊಯ್ಯುವರು.
ಪ್ರಜಾಪೀಡಕ ಅರಸನ ಅಂತ್ಯದಿಂದ ಪುರಜನರೆಲ್ಲ ಸಮಾಧಾನಪಟ್ಟರು. ದೇವಾನುದೇವತೆಗಳೆಲ್ಲ ಹೂಮಳೆಗೈದರು.ಸಂಗಡ ವಿವಿಧ ವಾದ್ಯಗಳ ನಾದ ಮುಗಿಲುಮುಟ್ಟಿತ್ತು. ಒಟ್ಟು ಸಂಭ್ರಮದ ಸನ್ನಿವೇಶ ಓದುಗನೂ ಮಿಂಚಿನಂತೆ
ನಿಟ್ಟುಸಿರು ಚೆಲ್ಲುವಂತಾಗುತ್ತದೆ.ಮುಗ್ಧ ಶಿಶು ಪ್ರಹ್ಲಾದ ಶ್ರೀಹರಿಯನ್ನ ಮನಸಾರೆ ಸ್ತುತಿ ಮಾಡಿದ.ಆ ಶ್ರೀಹರಿಯೇ ಕಾಗಿನೆಲೆಯಾದಿಕೇಶವನಾಗಿ ಕನಕರ ಮೆಚ್ಚಿನ ಅಂಕಿತವಾಗಿ ಲಾಸ್ಯವಾಡಿದ್ದಾನೆ.

ಅದೇ ಚಿತ್ರ ರಚನೆಯ ಪಲ್ಲವಿಯಲ್ಲಿ ಕಡೆಯುತ್ತಾರೆ.
” ಕಂಡೆ ನಾ ತಂಡ ತಂಡದ ಹಿಂಡು ಹಿಂಡು ದೈವ ಪ್ರಚಂಡ,ರಿಪುಗಂಡ
ಉದ್ದಂಡ ನರಸಿಂಹನ ಕಂಡೆನಯ್ಯ…”
ಇಡೀ ರಚನೆಯಲ್ಲಿ ಅಸಾಮಾನ್ಯ ರೂಪದಲ್ಲಿ ಕಾಣಿಸಿಕೊಂಡ ,ದುಷ್ಟಶಿಕ್ಷಕ ನರಸಿಂಹಾವತಾರವನ್ನ ತಾವೇ ಅದೀಗ ಕಂಡಂತೆ ಬೆರಗಾಗುತ್ತಾರೆ.
ದೈವಗಣದಲ್ಲಿ ಪ್ರಚಂಡನಾಗಿ ತೋರಿದ್ದಾನೆ ಶ್ರೀಹರಿ!.ದಾಸರಿಗೆ ವಿಷ್ಣುಪಾರಮ್ಯವನ್ನ ಎಷ್ಟು ಹೋಲಿಕೆಮಾಡಿದರೂ ತೃಪ್ತಿಯಿಲ್ಲ.!
ಶಬ್ದಜಾಲದಲ್ಲೇ ಅಕ್ಷರಗಳ ನಾಟ್ಯ.ಅರ್ಥವನ್ನ ಸಮರ್ಥವಾಗಿ ಹೊಮ್ಮಿಸುವ
ಹೆಮ್ಮೆಯ ಕವಿ ಕನಕದಾಸರು.ನರಸಿಂಹ ಅವತಾರ ಆಗಿಹೋದ ಪೌರಾಣಿಕ ಸಂಗತಿ.ಆದರೆ ಅವರ ಈ‌ ಕೃತಿ ಮನನಮಾಡಬೇಕು. ಮತ್ತೆ ಮತ್ತೆ ನಮ್ಮ ಮನಃಪಟಲದಲ್ಲೇ ನರಸಿಂಹಮೂಡುತ್ತಾನೆ. ಲೌಕಿಕದ ಜಡತೆಯನ್ನ ಸೀಳಿಕೊಂಡೇ ಧುತ್ತನೆ ದರ್ಶನ ನೀಡುವಂತೆ ಮಾಡುತ್ತಾರೆ ಕನಕದಾಸರು.
ಅಕ್ಷರಗಳಲ್ಲಿ ಅತಿಶಯರೂಪಿನ ಪರಮಾತ್ಮನನ್ನ ಕಾವ್ಯಶಕ್ತಿ ಮೂಲಕ ಸಾಕ್ಷಾತ್ಕರಿಸಿದ ಕನಕ ಪ್ರತಿಭೆಗೆ ಸಾವಿರದ ಶರಣು.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

ದೇಶದಲ್ಲಿ ಕೋವಿಡ್ ಪರಿಸ್ಥಿತಿ

0

ದೇಶದಲ್ಲಿ 10,488 ಹೊಸ ಕೋವಿಡ್ ಪ್ರಕರಣಗಳು ದಾಖಲಾಗಿವೆ. ಇದರೊಂದಿಗೆ ದೇಶದ ಒಟ್ಟು ಸೋಂಕಿತರ ಸಂಖ್ಯೆ 3,45,10,413 ಕ್ಕೆ ತಲುಪಿದೆ. ಕೇಂದ್ರ ಆರೋಗ್ಯ ಸಚಿವಾಲಯದ ಅಂಕಿಅಂಶ ಗಳ ಪ್ರಕಾರ ಕಳೆದ 532 ದಿನಗಳಲ್ಲಿ ಸಕ್ರಿಯ ಪ್ರಕರಣಗಳು 1,22,724 ಕ್ಕೆ ಇಳಿದಿವೆ. ಕೋವಿಡ್ ರೋಗದ ಕಾರಣ 313 ಹೊಸ ಸಾವುಗಳಾಗಿವೆ. ಹೊಸ ಸೋಂಕುಗಳ ದೈನಂದಿನ ಏರಿಕೆಯು 44 ದಿನಗಳಲ್ಲಿ 20,000 ಕ್ಕಿಂತ ಕಡಿಮೆಯಾಗಿದೆ. ಕರ್ನಾಟಕದಲ್ಲಿ ಪ್ರಸ್ತುತ ವರದಿಯ ಪ್ರಕಾರ, 247 ಹೊಸ ಕೋವಿಡ್ ಪ್ರಕರಣಗಳು ಮತ್ತು ಒಂದು ಸಾವು ವರದಿಯಾಗಿದೆ. 247 ಹೊಸ ಪ್ರಕರಣಗಳಲ್ಲಿ, 134 ಬೆಂಗಳೂರು ನಗರದಿಂದ ಬಂದಿದ್ದು, ನಗರದಲ್ಲಿ 180 ಡಿಸ್ಚಾರ್ಜ್ ಮತ್ತು ಒಂದು ಸಾವು ಕಂಡಿದೆ. ರಾಜ್ಯದಲ್ಲಿ ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 7064. ಇದೇ ವೇಳೆ, ಕೇರಳದಲ್ಲಿ 5080 ಹೊಸ ಪ್ರಕರಣಗಳು ಮತ್ತು 196 ಸಾವುಗಳು ದಾಖಲಾಗಿವೆ. ಎರ್ನಾಕುಲಂ ನಲ್ಲಿ 873 ಅತಿ ಹೆಚ್ಚು ಪ್ರಕರಣಗಳನ್ನು ದಾಖಲಾಗಿವೆ. ರಾಷ್ಟ್ರೀಯ ಚೇತರಿಕೆ ದರವು 98.30% ರಷ್ಟು ದಾಖಲಾಗಿದೆ. ಇದು ಮಾರ್ಚ್ 2020ಕ್ಕಿಂತ ಅತಿ ಹೆಚ್ಚು ಎಂದು ಸಚಿವಾಲಯ ತಿಳಿಸಿದೆ. 24 ಗಂಟೆಗಳ ಅವಧಿಯಲ್ಲಿ ಸಕ್ರಿಯ 2,154 ಪ್ರಕರಣಗಳು ದಾಖಲಾಗಿವೆ. ದೇಶವು ಮೇ 4 ರಂದು ಕೋಟ್ಯಾಂತರ ಪ್ರಕರಣಗಳು ಮತ್ತು ಜೂನ್ 23 ರಂದು 3 ಕೋಟಿ ಪ್ರಕರಣಗಳ ಗಂಭೀರ ಮೈಲಿಗಲ್ಲನ್ನು ದಾಟಿದೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

ಹಸಿರು ನ್ಯಾಯಮಂಡಳಿ : ರೈಲ್ವೆ ಇಲಾಖೆಗೆ ಕಿವಿಮಾತು

0

ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯು ಭಾರತೀಯ ರೈಲ್ವೇಗಳಿಗೆ ಹಳಿಗಳನ್ನು ದೋಷಪೂರಿತವಾಗಿ ಬಳಸದಂತೆ ಮತ್ತು ಹತ್ತಿರದ ವಾಸಸ್ಥಳದಿಂದ ತ್ಯಾಜ್ಯನೀರಿನ ವಿಲೇವಾರಿ ಮಾಡದಂತೆ ನೋಡಿಕೊಳ್ಳಲು ನಿರ್ದೇಶಿಸಿದೆ. ಎನ್‌ಜಿಟಿ ಅಧ್ಯಕ್ಷ ನ್ಯಾಯಮೂರ್ತಿ ಆದರ್ಶ್ ಕುಮಾರ್ ಗೋಯೆಲ್ ಅವರ ನೇತೃತ್ವದಲ್ಲಿ ಖಾಸಗಿ ಏಜೆನ್ಸಿಗಳು ಅಡುಗೆ ಅಥವಾ ನೈರ್ಮಲ್ಯ ನಿರ್ವಹಣೆಗಾಗಿ ನೇಮಿಸಿದ ಸ್ಥಳಗಳನ್ನು ಹೊರತುಪಡಿಸಿ ತ್ಯಾಜ್ಯವನ್ನು ವಿಲೇವಾರಿ ಮಾಡಬಾರದು ಎಂದು ಪೀಠ ಹೇಳಿದೆ. “ನೈರ್ಮಲ್ಯ, ಸಾರ್ವಜನಿಕ ಆರೋಗ್ಯ ಮತ್ತು ಸ್ವಚ್ಛ ಪರಿಸರದ ಹಿತಾಸಕ್ತಿಯಲ್ಲಿ, ತ್ಯಾಜ್ಯ ನಿರ್ವಹಣೆಯ ಅಂಶಗಳನ್ನು ಒಳಗೊಂಡಿರುವ ಸೂಕ್ತವಾದ ಪರಿಸರ ನಿರ್ವಹಣಾ ಯೋಜನೆಯನ್ನು ವಿಕಸನ ಗೊಳಿಸಬೇಕು. ಹಾಗಾಗಿ ಪ್ರತ್ಯೇಕ ನಿಲ್ದಾಣಗಳನ್ನು ಸಕ್ರಿಯಗೊಳಿಸಲು ರೈಲ್ವೆ ಮಂಡಳಿಯು ಆಧುನಿಕ ವಿನ್ಯಾಸದ ಯೋಜನೆಯನ್ನು ಅಭಿವೃದ್ಧಿಪಡಿಸುವುದು ಅವಶ್ಯಕವಾಗಿದೆ” ಎಂದು ಆದರ್ಶ್ ಕುಮಾರ್ ಗೋಯಲ್ ಅವರು ತಿಳಿಸಿದ್ದಾರೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

ಫ್ರಾನ್ಸ್ : ಕೊವಿಡ್ ಐದನೇ ಅಲೆ ಅಬ್ಬರ

0

ಫ್ರಾನ್ಸ್‌ನಲ್ಲಿ ಕರೋನ ವೈರಸ್ ಸೋಂಕುಗಳು ಅಪಾಯಕಾರಿ ಪ್ರಮಾಣದಲ್ಲಿ ಏರುತ್ತಿವೆ ಎಂದು ಸರ್ಕಾರ ಭಾನುವಾರ ವರದಿ ಮಾಡಿದೆ. ಕಳೆದ 7 ದಿನಗಳಲ್ಲಿ ಸರಾಸರಿ 17,153 ಹೊಸ ಪ್ರಕರಣಗಳು ದಾಖಲಾಗಿವೆ . ಆರೋಗ್ಯ ಅಧಿಕಾರಿಗಳ ಪ್ರಕಾರ, ಒಂದು ವಾರದಿಂದ ಶೇ. 81 ರಷ್ಟು ಕೋವಿಡ್ ಪ್ರಕರಣಗಳು ಹೆಚ್ಚಳವಾಗಿದೆ.
5 ನೇ ಅಲೆಯು ಮಿಂಚಿನ ವೇಗದಲ್ಲಿ ಪ್ರಾರಂಭವಾಗುತ್ತಿದೆ ಎಂದು “ಸರ್ಕಾರದ ವಕ್ತಾರ ಗೇಬ್ರಿಯಲ್ ಅಟಲ್ ಮಾಧ್ಯಮಗಳಿಗೆ ತಿಳಿಸಿದರು.
ಕಳೆದ ಮೂರು ವಾರಗಳಲ್ಲಿ ದಾಖಲಾದ ಪ್ರಕರಣಗಳ ಸರಾಸರಿ ಏರಿಕೆಗಿಂತ ಮೂರು ಪಟ್ಟು ಹೆಚ್ಚಾಗಿದೆ.ಇದು ಸೋಂಕುಗಳ ಘಾತೀಯ ವೇಗವರ್ಧನೆಯನ್ನು ಸೂಚಿಸುತ್ತದೆ. ಆಸ್ಪತ್ರೆಗಳಲ್ಲಿ ಕೋವಿಡ್ ರೋಗಿಗಳ ಬೃಹತ್ ಒಳಹರಿವಿಗೆ ಕಾರಣವಾಗಿಲ್ಲ, ಫ್ರಾನ್ಸ್ ನಲ್ಲಿ ಅಧಿಕ ಪ್ರಮಾಣದ ವ್ಯಾಕ್ಸಿನೇಷನ್‌ಗಳು ಆದ ಕಾರಣ, ಇದು ಕೋವಿಡ್‌ನ ಅತ್ಯಂತ ಅಪಾಯಕಾರಿ ರೂಪಗಳ ವಿರುದ್ಧ ಹೆಚ್ಚು ಪರಿಣಾಮಕಾರಿಯಾಗಿದೆ ಎಂದು ಆರೋಗ್ಯ ಇಲಾಖೆ ವರದಿ ಮಾಡಿದೆ.
ಫ್ರಾನ್ಸ್ ನ ಎರಡು ಆಸ್ಪತ್ರೆಗಳಲ್ಲಿ ಒಟ್ಟು 7,974 ಕೋವಿಡ್ ರೋಗಿಗಳು, ಮತ್ತು ಅವರಲ್ಲಿ 1,333 ಜನರು ತೀವ್ರ ಚಿಕಿತ್ಸೆಯಲ್ಲಿದ್ದಾರೆ. “ಸೋಂಕುಗಳಲ್ಲಿ ಬಹಳ ಬಲವಾದ ಹೆಚ್ಚಳವಿದೆ, ಆದರೆ ಫ್ರಾನ್ಸ್‌ನಲ್ಲಿ ಬಹುದೊಡ್ಡ ಸಂಖ್ಯೆಯಲ್ಲಿ ಕೋವಿಡ್ ವ್ಯಾಕ್ಸಿನೇಷನ್ ಆಗಿರುವುದು ಸಹಾಯಕವಾಗಿದೆ ಎಂದರು. “ಬೂಸ್ಟರ್ ಶಾಟ್‌ಗಳಿಗೆ ಸಂಬಂಧಿಸಿದಂತೆ ನಾವು ನಮ್ಮ ನೆರೆಹೊರೆಯವರಿಗಿಂತ ಮುಂದಿರುವಂತೆ ತೋರುತ್ತಿದೆ”.
ಫ್ರೆಂಚ್ ರೆಸ್ಟೋರೆಂಟ್ ಗಳು, ತಿಥಿಗಳು ಮತ್ತು ಅನೇಕ ಸಾಂಸ್ಕೃತಿಕ ಸ್ಥಳಗಳಲ್ಲಿ ಅಗತ್ಯವಿರುವ ಆರೋಗ್ಯ ಪಾಸ್ ಗಳನ್ನು ವೈಯಕ್ತಿಕವಾಗಿ ನೀಡಲಾಗಿದೆ. ಅದರಲ್ಲಿ ವ್ಯಕ್ತಿ ಲಸಿಕೆ ಪಡೆದಿರುವ ಬಗ್ಗೆ, ಇತ್ತೀಚಿಗೆ ಕೊವಿಡ್ ನಿಂದ ಚೇತರಿಸಿಕೊಂಡ ಬಗ್ಗೆ, ವೈರಸ್ ಗೆ ನಕಾರತ್ಮಕ ಸ್ಪಂದಿಸಿರುವ ಬಗ್ಗೆ ಮಾಹಿತಿ ನೀಡಿ ಪ್ರಮಾಣಿಕರಿಸಲಾಗಿದೆ. ಬೇಸಿಗೆಯಲ್ಲಿ ಇತರ ದೇಶಗಳಿಗಿಂತ ಫ್ರಾನ್ಸ್‌ನ ಆರೋಗ್ಯ ಪಾಸ್‌ನ ಪರಿಚಯ ಕೋವಿಡ್ ಅನ್ನು ನಿಯಂತ್ರಣದಲ್ಲಿಡಲು ಸಹಾಯ ಮಾಡುತ್ತದೆ ಎಂದು ಅವರು ಹೇಳಿದರು.
“ಲಸಿಕೆ ಹಾಕಿದ ಜನರಿಗಿಂತ ಹೆಚ್ಚಾಗಿ ಲಸಿಕೆ ಹಾಕದ ಜನರ ಮೇಲೆ ನಿರ್ಬಂಧಗಳ ಭಾರವನ್ನು ತರಲು ಸರ್ಕಾರವು ತನ್ನ ಆಯ್ಕೆಯೊಂದಿಗೆ ನಿಲ್ಲುವುದನ್ನು ಮುಂದುವರೆಸಿದೆ” ಎಂದು ಅಟಲ್ ಅವರು ತಿಳಿಸಿದ್ದಾರೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.