Saturday, February 7, 2026
Saturday, February 7, 2026
Home Blog Page 1861

ಕಿವೀಸ್ ವಿರುದ್ಧದ ಟೆಸ್ಟ್ : ಭಾರತ ತಂಡ ಸಿದ್ಧ

0

ನ್ಯೂಜಿಲೆಂಡ್ ಎದುರಿನ ಮೊದಲ ಟೆಸ್ಟ್ ಕ್ರಿಕೆಟ್ ಸರಣಿಯ ನಾಳೆಯಿಂದ ಆರಂಭವಾಗಲಿದ್ದು. ರಾಹುಲ್ ಬದಲು ಸೂರ್ಯಕುಮಾರ್ ಯಾದವ್ ಗೆ ಸ್ಥಾನ ಕಲ್ಪಿಸಲಾಗಿದೆ.

ಗ್ರೀನ್ ಪಾರ್ಕ್ ನಲ್ಲಿ ನಡೆಯಲಿರುವ ನ್ಯೂಜಿಲೆಂಡ್ ವಿರುದ್ಧದ‌ ಮೊದಲ ಟೆಸ್ಟ್ನಲ್ಲಿ ಇನ್ನಿಂಗ್ಸ್ ಆರಂಭಿಸಬೇಕಿದ್ದ, ಬ್ಯಾಟ್ಸ್ಮನ್ K.L. ರಾಹುಲ್ ಗಾಯಗೊಂಡಿದ್ದಾರೆ.29 ವರ್ಷದ ರಾಹುಲ್ 40 ಟೆಸ್ಟ್ ಗಳಲ್ಲಿ ಆಡಿದ್ದು, 2321 ರನ್ ಗಳನ್ನು ಗಳಿಸಿದ್ದಾರೆ. ರಾಹುಲ್ ಎಡ ತೊಡೆಯ ಸ್ನಾಯು ಸೆಳೆತದಿಂದ ಬಳಲುತ್ತಿದ್ದಾರೆ. ಆದ್ದರಿಂದ ಅವರಿಗೆ ವಿಶ್ರಾಂತಿಯ ಅಗತ್ಯವಿದೆ. ಆದ್ದರಿಂದ ಅವರು ಎರಡು ಟೆಸ್ಟ್ ಗಳಲ್ಲಿ ಆಡಲು ಲಭ್ಯರಿಲ್ಲ. ಅವರು ಬೆಂಗಳೂರಿನಲ್ಲಿರುವ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ಪುನಸ್ಚೇತನ ತರಬೇತಿಗೆ ಸೇರಿಕೊಳ್ಳಲಿದ್ದಾರೆ.

ಮುಂದಿನ ತಿಂಗಳು ನಡೆಯಲಿರುವ ದಕ್ಷಿಣ ಆಫ್ರಿಕಾ ಎದುರಿನ ಸರಣಿಗೆ ಅವರು ತಂಡಕ್ಕೆ ಸೇರುವ ನಿರೀಕ್ಷೆ ಇದೆ ಎಂದು BCCI ಪ್ರಕಟಣೆಯಲ್ಲಿ ತಿಳಿಸಿದೆ.

ಅವರು ತಂಡದಿಂದ ಹೊರಬಿದ್ದಿರುವುದರಿಂದ ಮಯಂಕ್ ಅಗರ್ವಾಲ್ ಅವರೊಂದಿಗೆ ಇನ್ನಿಂಗ್ಸ್ ಆರಂಭಿಸುವ ಶುಭಮನ್ ಗಿಲ್ ಅವರ ಹೆಗಲಿಗೆ ಬೀಳುವುದು ಖಚಿತವಾಗಿದೆ. ಮುಂಬೈನ ಸೂರ್ಯ ಕುಮಾರ್ ಯಾದವ್ ಮಧ್ಯಮ ಕ್ರಮಾಂಕದ ಬ್ಯಾಟರ್ ಆಗಿ ಪದಾರ್ಪಣೆ ಮಾಡುವ ಸಾಧ್ಯತೆ ಹೆಚ್ಚಿದೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

ಭಾರತ ಅಂಡರ್ 21 ಹಾಕಿ ವಿಶ್ವಕಪ್

0

ಜೂನಿಯರ್ ಹಾಕಿ ವಿಶ್ವಕಪ್ ಪಂದ್ಯ ಇಂದಿನಿಂದ ಆರಂಭವಾಗಲಿದೆ. ಭಾರತ ಮತ್ತು ಫ್ರಾನ್ಸ್ ನಡುವೆ ಪಂದ್ಯ ನಡೆಯಲಿದೆ. ಭುವನೇಶ್ವರದ ಕಳಿಂಗ ಕ್ರೀಡಾಂಗಣದಲ್ಲಿ ಬಯೋಬಬಲ್ ವ್ಯವಸ್ಥೆಯ ಬಿ. ಗುಂಪಿನ ಮೊದಲ ಪಂದ್ಯದಲ್ಲಿ ಭಾರತವು ಪ್ರಾನ್ಸ್ ಎದುರಾಗಲಿದೆ.
ಟೋಕಿಯೋ ಒಲಂಪಿಕ್ಸ್ ನಲ್ಲಿ ಐತಿಹಾಸಿಕ ಸಾಧನೆ ಮಾಡಿದ ಭಾರತ ತಂಡದಲ್ಲಿ ಆಡಿದ ವಿವೇಕ ನೇತೃತ್ವದ ತಂಡವು ಇಂದು ಆರಂಭವಾಗಲಿರುವ ಜೂನಿಯರ್ ವಿಶ್ವಕಪ್ ಪಂದ್ಯ ಟೂರ್ನಿಯಲ್ಲಿ ಕಣಕ್ಕಿಳಿಯಲಿದೆ.
40 ವರ್ಷಗಳ ಹಿಂದೆ ಆರಂಭವಾದ ಟೂರ್ನಿಯಲ್ಲಿ ಫ್ರಾನ್ಸ್ ತಂಡವು 2013 ರಲ್ಲಿ ರನ್ನರ್ ಆಫ್ ಆಗಿತ್ತು. ಭಾರತದ ಎದುರು ಎರಡು ಬಾರಿ ಚಾಂಪಿಯನ್ ಮತ್ತು ಒಂದು ಬಾರಿ ರನ್ನರ್ಸ್ ಆಗಿದೆ. ಜರ್ಮನಿ ಒಟ್ಟು ಆರು ಬಾರಿ ಪ್ರಶಸ್ತಿ ಜೈಯಿಸಿದೆ. ಈ ಬಾರಿ ಡಿ ಗುಂಪಿನಲ್ಲಿ ಆಡಲಿದೆ. ತಲಾ ಒಂದು ಬಾರಿ ಪ್ರಶಸ್ತಿ ಜಯಿಸಿರುವ ಪಾಕಿಸ್ತಾನ ಮತ್ತು ಅರ್ಜೆಂಟೀನಾ ಕೂಡ ಇದೇ ಗುಂಪಿನಲ್ಲಿವೆ.
ಭಾರತ ತಂಡವು ಹಾಲಿ ಚಾಂಪಿಯನ್ ಆಗಿದ್ದು ಟ್ರೋಫಿ ಉಳಿಸಿಕೊಳ್ಳುವತ್ತ ಚಿತ್ತ ನೆಟ್ಟಿದೆ. ಅನುಭವಿ ಗ್ರಾಹಂ ರೀಡ್ ಮುಖ್ಯ ಕೋಚ್ ಮತ್ತು ಕನ್ನಡಿಗರಾದ ಬಿ.ಜೆ. ಕಾರಿಯಪ್ಪ ಕೋಚ್ ಆಗಿರುವ ತಂಡವು ಆತ್ಮವಿಶ್ವಾಸದ ಆಗಸದಲ್ಲಿದೆ. ಸತತ ಮೂರನೇ ಬಾರಿಗೆ ಭಾರತದಲ್ಲಿ ಈ ಟೂರ್ನಿ ಆಯೋಜನೆ ಆಗುತ್ತಿದೆ.
21 ವರ್ಷದೊಳಗಿನವರ 16 ತಂಡಗಳು ಈ ಟೂರ್ನಿಯಲ್ಲಿ ಪ್ರಶಸ್ತಿಗಾಗಿ ಸೆಣೆಸಲಿವೆ. ಭಾರತ ತಂಡದಲ್ಲಿ 20 ಆಟಗಾರರ ತಂಡವನ್ನು ಆಯ್ಕೆ ಮಾಡಲಾಗಿದೆ. ಅದರಲ್ಲಿ 18 ಆಟಗಾರರು ಫ್ರೆಂಟ್ ಲೈನ್ ನಲ್ಲಿದ್ದಾರೆ. 2 ಬದಲಿ ಆಟಗಾರರಿದ್ದಾರೆ. ಇದು ಪ್ರಶಸ್ತಿ ಉಳಿಸಿಕೊಳ್ಳಲು ಸಾಮರ್ಥ್ಯ ಮತ್ತು ಸಮತೋಲನವಿರುವ ತಂಡವಾಗಿದೆ ಎಂದು ರೀಡ್ ಹೇಳಿದ್ದಾರೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

ಲೋಕಜ್ಞಾನ ಒಲವಿನ ಆಟೋ ಚಾಲಕ- ಸುರಂಜನ್ ಕರ್ಮಾಕರ್

0

ಸಾಮಾನ್ಯವಾಗಿ ನಾವು ಕಷ್ಟದಲ್ಲಿರುವವರಿಗೆ ಆಟೋ ಚಾಲಕರು ಸಹಾಯ ಮಾಡಿರುವುದನ್ನ ಕೇಳಿರುತ್ತೇವೆ. ಆದರೆ ಇಲ್ಲೊಬ್ಬರು ಆಟೋ ಹತ್ತುವ ಪ್ರಯಾಣಿಕರಿಗೆ ಕೆಲವೊಂದಿಷ್ಟು ಪ್ರಶ್ನೆಗಳನ್ನು ಕೇಳಿ ಅವರು ಸರಿಯಾದ ಉತ್ತರವನ್ನು ನೀಡಿದ್ದರೆ ಪ್ರಯಾಣದ ವೆಚ್ಚ ಎಷ್ಟೇ ಆಗಿದ್ದರೂ, ಹಣ ಸ್ವೀಕರಿಸುವುದಿಲ್ಲ.

ಪಶ್ಚಿಮ ಬಂಗಾಳದ, ಹೌರಾ ಜಿಲ್ಲೆಯ ಲಿಲುವಾದಲ್ಲಿ ಆಟೋ ಚಾಲಕರೊಬ್ಬರು ಜನರ ಸಾಮಾನ್ಯ ಜ್ಞಾನ ಹೆಚ್ಚಿಸಲು ಒತ್ತು ನೀಡುತ್ತಿದ್ದಾರೆ. ‘ಕ್ವಿಜ್ ಮಾಸ್ಟರ್’ ಎಂದೇ ಪ್ರಸಿದ್ಧಿಯಾಗಿರುವ ಈತನ ಹೆಸರು ಸುರಂಜನ್ ಕರ್ಮಾಕರ್.

ತಮ್ಮ ಆಟೋ ಹತ್ತುವ ಪ್ರಯಾಣಿಕರಿಗೆ 15 ಪ್ರಶ್ನೆಗಳನ್ನು ಕೇಳುತ್ತಾರೆ. ಪ್ರಯಾಣಿಕರು ಎಲ್ಲಾ ಪ್ರಶ್ನೆಗಳಿಗೆ ಸರಿಯಾದ ಉತ್ತರ ನೀಡಿದರೆ, ಪ್ರಯಾಣದ ವೆಚ್ಚ ಎಷ್ಟೇ ಆಗಿದ್ದರೂ ಅವರಿಂದ ಹಣ ಪಡೆದುಕೊಳ್ಳುವುದಿಲ್ಲ.

ಸಾಮಾಜಿಕ ಜಾಲತಾಣವಾದ ಫೇಸ್ಬುಕ್ ನಲ್ಲಿ ಇವರ ಕುರಿತು ಸಂಕಲನ್ ಸಹಕಾರ ಎಂಬುವವರು ತಮ್ಮ ಫೇಸ್ಬುಕ್ ನಲ್ಲಿ ಬರೆದಿದ್ದಾರೆ.
“ನಾನು ಹಾಗೂ ನನ್ನ ಪತ್ನಿ ಆಟೋ ಹತ್ತಿದಾಗ, 15 ಪ್ರಶ್ನೆ ಕೇಳುತ್ತೇನೆ ಎಂದರು. ನೀವು ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸಿದರೆ ಬಾಡಿಗೆ ಪಡೆಯುವುದಿಲ್ಲ ಎಂದು ಸುರಂಜನ್ ಹೇಳಿದರು. ನಾನು ಮೊದಲಿಗೆ, ಹೆಚ್ಚಿನ ಬಾಡಿಗೆ ಹಣ ಬೇಕಾಗಿದೆ. ಅದಕ್ಕಾಗಿ ಇವರು ಇಂತಹ ಉಪಾಯ ಮಾಡಿದ್ದಾರೆ ಎಂದುಕೊಂಡೆ. ಅದರಲ್ಲೂ ರಾಷ್ಟ್ರ ಗೀತೆ ರಚಿಸಿದವರು ಯಾರು ಎಂದು ಮೊದಲ ಪ್ರಶ್ನೆ ಕೇಳಿದಾಗ ಇನ್ನೂ ಅನುಮಾನ ಹೆಚ್ಚಾಯಿತು. ಆದರೆ, ನಂತರದಲ್ಲಿ ಕೇಳಿದ ಪ್ರಶ್ನೆ ನಿಜವೆನ್ನಿಸಿತು ಎಂದು ಸಂಕಲನ್ ತಿಳಿಸಿದ್ದಾರೆ.
ಬಳಿಕ ಅವರು ಪಶ್ಚಿಮ ಬಂಗಾಳದ ಮೊದಲ ಮುಖ್ಯಮಂತ್ರಿ ಯಾರು ಎಂದು ಕೇಳಿದರು. ನಾನು ಬಿ.ಸಿ. ರಾಯ್ ಎಂದೆ. ಆದರೆ, ಆ ಉತ್ತರ ತಪ್ಪಾಗಿತ್ತು. ನಂತರ ಅವರು ಕೇಳಿದ ಪ್ರಶ್ನೆ ಕೇಳಿ ಬೆರಗಾದೆ. ವಿಕ್ರಮ ಬೇತಾಳ, ಶ್ರೀದೇವಿ ಜನ್ಮದಿನ, ಜಗತ್ತಿನ ಮೊದಲ ಟೆಸ್ಟ್ ಟ್ಯೂಬ್ ಬೇಬಿ ಯಿಂದ ಹಿಡಿದು ಅವರು ಎಲ್ಲಾ ವಿಷಯಗಳನ್ನು ಕುರಿತು ಪ್ರಶ್ನೆ ಕೇಳಿದರು. ನಾನು ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸಿದೆ. ಬಳಿಕ ಅವರು ನಾನು ಹೇಳಿದ ಜಾಗದಲ್ಲಿ ಬಿಟ್ಟರು. ಸುರಂಜನ್ ಗೆ ಓದುವ ಅಭ್ಯಾಸವಿದೆ. ಹಗಲಿಡೀ ದುಡಿದರೂ ರಾತ್ರಿ ಎರಡು ಗಂಟೆಯವರೆಗೆ ಓದುತ್ತಾರೆ “ಎಂದು ತಮ್ಮ ಫೇಸ್ ಬುಕ್ ಖಾತೆಯಲ್ಲಿ ಸಂಕಲನ್ ಮಾಹಿತಿ ನೀಡಿದ್ದಾರೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

ಗಣಿ ಸಂಪತ್ತಿನ ಮೂಲಕ ರಾಜ್ಯ ಸಂಪನ್ಮೂಲ ಗಳಿಸಬೇಕು

0

ನವದೆಹಲಿಯಲ್ಲಿ ಗಣಿ ಮತ್ತು ಖನಿಜಗಳ ಮೇಲಿನ 5ನೇ ರಾಷ್ಟ್ರೀಯ ಸಮಾವೇಶ ನಡೆಯಿತು.
ಕೇಂದ್ರ ಗಣಿ ಸಚಿವ ಪ್ರಹ್ಲಾದ್ ಜೋಶಿ ಮಾತನಾಡಿ, ಗಣಿ ಹರಾಜು ನಿಯಮ ಜಾರಿಗೆ ಬಂದು 7 ವರ್ಷಗಳಾದರೂ ಹಲವು ರಾಜ್ಯಗಳು ಒಂದೇ ಒಂದು ಗಣಿಯನ್ನೂ ಹರಾಜು ಮಾಡಿಲ್ಲ ಎಂದರು. ಹರಾಜನ್ನು ತ್ವರಿತಗೊಳಿಸುವಂತೆ ರಾಜ್ಯಗಳನ್ನು ಒತ್ತಾಯಿಸಿದರು.
ರಾಜ್ಯಗಳು ತಮ್ಮ ಸಂಪನ್ಮೂಲಗಳ ನಿಜವಾದ ಮೌಲ್ಯವನ್ನು ಅರಿತುಕೊಳ್ಳಲು ಸಂಪೂರ್ಣ ಖನಿಜ ನೀತಿಯನನ್ನು ಉದಾರಗೊಳಿಸುವಂತೆ ಕೇಳಿಕೊಂಡರು. ಆದಾಗ್ಯೂ, ಕೆಲವು ಖನಿಜ ಸಮೃದ್ಧವಾಗಿರುವ ರಾಜ್ಯಗಳು ಖನಿಜ ಬ್ಲಾಕ್‌ಗಳನ್ನು ಹರಾಜು ಮಾಡುವಲ್ಲಿ ಮತ್ತು ನೈಜ ಸಾಮರ್ಥ್ಯವನ್ನು ಸಾಧಿಸುವಲ್ಲಿ ಹಿಂದುಳಿದಿವೆ ಎಂದು ಸಚಿವರು ಹೇಳಿದರು.
“ನಾನು ಮತ್ತೊಮ್ಮೆ ರಾಜ್ಯ ಸರ್ಕಾರಗಳಿಗೆ ಮನವಿ ಮಾಡುತ್ತೇನೆ.. ನನ್ನ ಏಕೈಕ ವಿನಂತಿ ಏನೆಂದರೆ ನಿಮ್ಮ ಕ್ಷೇತ್ರವು ಬಹಳಷ್ಟು ಗಣಿಗಳನ್ನು ಹರಾಜಿಗೆ ತರುವುದು. ಬಹಳಷ್ಟು ಸುಧಾರಣೆಗಳನ್ನು ಮಾಡಬೇಕಾಗಿದೆ ಎಂದರು.
ವ್ಯಾಪಾರ ಮಾಡುವ ಸುಲಭತೆಯನ್ನು ಸುಧಾರಿಸಲು ಸರ್ಕಾರವು ಗಣಿಗಾರಿಕೆ ವಿಭಾಗದಲ್ಲಿ ಹೆಚ್ಚಿನ ಸುಧಾರಣೆಗಳನ್ನು ತರಲು ಬಯಸುತ್ತದೆ.ಅದು ಉದ್ಯಮ ಸ್ನೇಹಿಯಾಗಿದೆ ಮತ್ತು ಹೆಚ್ಚಿನ ಹೂಡಿಕೆಗಳನ್ನು ತರುತ್ತದೆ. “ನಾವು ಈಗಾಗಲೇ ಕೆಲವು ತಿದ್ದುಪಡಿಗಳನ್ನು ತರಲು ಯೋಚಿಸುತ್ತಿದ್ದೇವೆ” ಎಂದು ಜೋಶಿ ಹೇಳಿದರು.
ಮಧ್ಯಪ್ರದೇಶ ಮತ್ತು ರಾಜಸ್ಥಾನಗಳು ಹರಾಜು ಕಾರ್ಯವಿಧಾನದ ಮೂಲಕ ಸಂಯೋಜನೆ ಪರವಾನಗಿಗಾಗಿ ಪ್ರಸ್ತಾವನೆಗಳನ್ನು ಸಲ್ಲಿಸಿದ್ದವು. ಇವುಗಳು ರಾಜಸ್ಥಾನದಲ್ಲಿ ಸುಣ್ಣದ ಕಲ್ಲುಗಳನ್ನು ಮತ್ತು ಮಧ್ಯಪ್ರದೇಶದಲ್ಲಿ 19 ವಿವಿಧ ಖನಿಜ ಬ್ಲಾಕ್ ಗಳನ್ನು ಒಳಗೊಂಡಿದೆ. ಗಣಿ ಸಚಿವಾಲಯವು ಇತ್ತೀಚೆಗೆ ಈ ಬ್ಲಾಕ್‌ಗಳ ಹರಾಜಿಗೆ ಪೂರ್ವಾನುಮತಿ ನೀಡಿತ್ತು. “ಶಕ್ತಿಶಾಲಿ ಖನಿಜ ಸಾಮರ್ಥ್ಯವನ್ನು ತಲುಪಲು ಗಣಿಗಾರಿಕೆಯನ್ನು ಹೆಚ್ಚಿಸುವುದು ಅಗತ್ಯವಾಗಿದೆ.ಆದರೆ ಗಣಿಗಾರಿಕೆ ಚಟುವಟಿಕೆಗಳಿಂದ ಪರಿಸರಕ್ಕೆ ಆಗುವ ಪರಿಣಾಮಗಳ ಬಗ್ಗೆಯೂ ನಾವು ಜಾಗೃತರಾಗಿದ್ದೇವೆ” ಎಂದು ಅವರು ಒತ್ತಿ ಹೇಳಿದರು. ಸುಸ್ಥಿರ ಗಣಿಗಾರಿಕೆಯನ್ನು ಉತ್ತೇಜಿಸಲು, ಸಚಿವಾಲಯವು ಶುದ್ಧ ಮತ್ತು ಸುಸ್ಥಿರ ಗಣಿಗಾರಿಕೆಯ ದಿಕ್ಕಿನಲ್ಲಿ ಶ್ಲಾಘನೀಯ ಕ್ರಮಗಳನ್ನು ತೆಗೆದುಕೊಳ್ಳುತ್ತಿರುವ ಖನಿಜ ಗಣಿಗಾರರಿಗೆ ಗಣಿಗಳ ಸ್ಟಾರ್ ರೇಟಿಂಗ್‌ಗಳನ್ನು ಪರಿಚಯಿಸಿದೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

ಯುರೋಪ್- ಮಧ್ಯ ಏಷ್ಯಾ ಕೋವಿಡ್ ಗಂಭೀರತೆ

0

ಯುರೋಪ್, ಕೋವಿಡ್‌ನ ದೃಢವಾದ ಹಿಡಿತದಲ್ಲಿ ಉಳಿದಿದೆ ಮತ್ತು ಪ್ರಸ್ತುತ ಪ್ರವೃತ್ತಿಗಳು ಮುಂದುವರಿದರೆ ಈ ಚಳಿಗಾಲದಲ್ಲಿ ಖಂಡದಲ್ಲಿ ಸಾವಿನ ಸಂಖ್ಯೆ 2.2 ಮಿಲಿಯನ್‌ಗೆ ಏರಬಹುದು ಎಂದು ವಿಶ್ವ ಆರೋಗ್ಯ ಸಂಸ್ಥೆ ಆತಂಕ ವ್ಯಕ್ತಪಡಿಸಿದೆ.
ಯುರೋಪಿನಾದ್ಯಂತ ಮುಂಬರುವ ತಿಂಗಳುಗಳಲ್ಲಿ ಸುಮಾರು 700,000 ಜನರು ಸಾಯಬಹುದು ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.
ಕೆಲವು ದೇಶಗಳು ಕಠಿಣ ನಿರ್ಬಂಧಗಳನ್ನು ವಿಧಿಸಲು ಪ್ರೇರೇಪಿಸಿದೆ. ವಿಶ್ವ ಆರೋಗ್ಯ ಸಂಸ್ಥೆಯು ” ಪ್ರಸ್ತುತ ಮತ್ತು ಬರುವ ಮಾರ್ಚ್ ನಡುವೆ 53 ದೇಶಗಳ ಪೈಕಿ 49 ರಲ್ಲಿ ನಿಗಾ ಘಟಕಗಳಲ್ಲಿ ಹೆಚ್ಚಿನ ಅಥವಾ ತೀವ್ರ ಒತ್ತಡವನ್ನು ನಿರೀಕ್ಷಿಸುತ್ತಿವೆ ಎಂದಿದೆ.
ಕೋವಿಡ್ -19 ಯುರೋಪ್ ಮತ್ತು ಮಧ್ಯ ಏಷ್ಯಾದಾದ್ಯಂತ ಸಾವಿಗೆ ಪ್ರಮುಖ ಕಾರಣವಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ವರದಿ ಮಾಡಿದೆ.
ವಿಶ್ವ ಸಂಸ್ಥೆಯ ಪ್ರಕಾರ, ಆರೋಗ್ಯ ಮಾಪನಗಳು ಮತ್ತು ಮೌಲ್ಯಮಾಪನ ಸಂಸ್ಥೆಯು ಹೆಚ್ಚು-ಸಾಂಕ್ರಾಮಿಕ ಡೆಲ್ಟಾ ರೂಪಾಂತರ, ಸಾಕಷ್ಟು ವ್ಯಾಕ್ಸಿನೇಷನ್ ಕವರೇಜ್ ಮತ್ತು ಮಾಸ್ಕ್ ಧರಿಸುವುದು ಮತ್ತು ದೈಹಿಕ ಅಂತರದಂತಹ ಕ್ರಮಗಳನ್ನು ಸರಾಗಗೊಳಿಸುವ ಸಂಯೋಜನೆಯಿಂದ ಕೊವಿಡ್ ನಿಂದ ಉಂಟಾಗುವ ಸಾವನ್ನು ತಪ್ಪಿಸಬಹುದು ಎಂದು ತಿಳಿಸಿದೆ.
ಕೊವಿಡ್ ಕಾರಣದಿಂದ ಸೆಪ್ಟೆಂಬರ್ ಅಂತ್ಯದಲ್ಲಿ ದಿನಕ್ಕೆ 2100 ಸಾವುಗಳು ಸಂಭವಿಸಿವೆ. ಕಳೆದ ವಾರಕ್ಕೆ ಹೋಲಿಸಿದರೆ ಈಗ ಪ್ರತಿ ದಿನಕ್ಕೆ ಸುಮಾರು 4,200 ಸಾವುಗಳು ಹೆಚ್ಚಳವಾಗಿವೆ ಎಂದು ವಿಶ್ವ ಆರೋಗ್ಯ ಸಂಸ್ಥೆಯು ವರದಿ ಮಾಡಿದೆ.
ಯುರೋಪ್ ಮತ್ತು ಮಧ್ಯ ಏಷ್ಯಾದಾದ್ಯಂತ ಕೋವಿಡ್ -19 ಪರಿಸ್ಥಿತಿ ತುಂಬಾ ಗಂಭೀರವಾಗಿದೆ. ನಾವು ಮುಂದೆ ಸವಾಲಿನ ಚಳಿಗಾಲವನ್ನು ಎದುರಿಸುತ್ತೇವೆ” ಎಂದು ವಿಶ್ವ ಆರೋಗ್ಯ ಸಂಸ್ಥೆಯ ಯುರೋಪ್‌ನ ಪ್ರಾದೇಶಿಕ ನಿರ್ದೇಶಕ ಹ್ಯಾನ್ಸ್ ಕ್ಲೂ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಅವರು ವ್ಯಾಕ್ಸಿನೇಷನ್, ಸಾಮಾಜಿಕ ಅಂತರ, ಮುಖವಾಡಗಳ ಬಳಕೆ ಮತ್ತು ಕೈ ತೊಳೆಯುವಿಕೆಯನ್ನು ಒಳಗೊಂಡಿರುವ “ಲಸಿಕೆ ಪ್ಲಸ್” ವಿಧಾನಕ್ಕೆ ಕರೆ ನೀಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

ನಟಿ ಹೇಮಾ ಮಾಲಿನಿ : 2021ರ ಚಲನಚಿತ್ರ ವಾರ್ಷಿಕ ವ್ಯಕ್ತಿ

0

ಭಾರತೀಯ ಚಿತ್ರರಂಗದ ಖ್ಯಾತ ತಾರೆ ಹೇಮಾ ಮಾಲಿನಿ ಅವರಿಗೆ ‘ಚಲನಚಿತ್ರ ವಾರ್ಷಿಕ ವ್ಯಕ್ತಿ'(2021) ಪುರಸ್ಕಾರ ನೀಡಲಾಗಿದೆ. ಗೋವಾದ ಪಣಜಿಯಲ್ಲಿ ನಡೆದ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಈ ಗೌರವವನ್ನು ಅರ್ಪಿಸಲಾಯಿತು.

ಭಾರತೀಯ ಚಿತ್ರರಸಿಕರ ಮನಸೂರೆಗೊಂಡ ‘ಡ್ರೀಮ್ ಗರ್ಲ್’ ಎಂಬ ಖ್ಯಾತಿಗೆ ಪಾತ್ರರಾಗಿದ್ದಾರು. ಮೊದಲು ಅಭಿನಯಿಸಿದ ಹಿಂದಿ ಚಿತ್ರ ‘ಸಪ್ನೊಕಾ ಸೌದಾಗರ್’. ಕೇವಲ ನಟನೆಯೇ ಅಲ್ಲದೆ, ನರ್ತನ, ಬರಹ, ನಿರ್ದೇಶನ, ನಿರ್ಮಾಣ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಅವರು ತಮ್ಮದೇ ಕೊಡುಗೆ ನೀಡಿದ್ದಾರೆ. ಅವರ ನಟನೆಗೆ ‘ಫಿಲಂಫೇರ್ ಪ್ರಶಸ್ತಿ’, ‘ಫಿಲಂಫೇರ್ ಜೀವಮಾನ ಪ್ರಶಸ್ತಿ’ ನೀಡಲಾಗಿದೆ. ಅಲ್ಲದೆ 2012ರಲ್ಲಿ ‘ಪದ್ಮಶ್ರೀ’ ಯನ್ನು ನೀಡಿ ಗೌರವಿಸಲಾಗಿದೆ.

ಧರ್ಮೇಂದ್ರ ಮತ್ತು ರಾಜೇಶ್ ಖನ್ನಾ ಅವರೊಂದಿಗೆ ಹಲವು ಚಿತ್ರಗಳಲ್ಲಿ ನಾಯಕಿಯಾಗಿ ನಟಿಸಿ ಅನುಪಮ ಖ್ಯಾತಿಗಳಿಸಿದ್ದಾರೆ. ದೇಶ-ವಿದೇಶಗಳಲ್ಲಿ ಅವರು ತಮ್ಮ ಭರತನಾಟ್ಯ ಪ್ರದರ್ಶನವನ್ನು ನೀಡಿದ್ದಾರೆ. ಪ್ರಸ್ತುತ ಅವರ ನೇತೃತ್ವದಲ್ಲಿ ಮಾಲಿನಿ ನಾಟ್ಯವಿಹಾರ ಕಲಾಕೇಂದ್ರ ನಡೆಯುತ್ತಿದೆ.

ಪಣಜಿಯಲ್ಲಿ ನಡೆದ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಗೋವಾದ ಮುಖ್ಯಮಂತ್ರಿ ಡಾ.ಪ್ರಮೋದ್ ಸಾವಂತ್ ಮತ್ತು ಕೇಂದ್ರ ಪ್ರಸಾರ ಖಾತೆ ರಾಜ್ಯ ಸಚಿವ ಅನುರಾಗ್ ಠಾಕೂರ್ ಅವರು ಶ್ರೀಮತಿ ಹೇಮಮಾಲಿನಿ ಅವರಿಗೆ ಪದಕ, ಪ್ರಶಸ್ತಿ ನೀಡಿ ಪುರಸ್ಕರಿಸಿದರು.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

ಕೇಂದ್ರದ ಪಿಂಚಣಿದಾರರಿಗೆ ‘ಸಿಹಿ ಸುದ್ದಿ’

0

ದೇಶದಲ್ಲಿ ಇರುವ ಲಕ್ಷಾಂತರ ಪಿಂಚಣಿದಾರರಿಗೆ ಕೇಂದ್ರ ಸರ್ಕಾರದಿಂದ ಸಿಹಿಸುದ್ದಿ. ಪಿಂಚಣಿ ಪಡೆಯಲು ಜಂಟಿ ಬ್ಯಾಂಕ್ ಖಾತೆ ಕಡ್ಡಾಯವೆಂಬ ನಿಯಮ ವನ್ನು ಸರ್ಕಾರ ಸಡಿಲಗೊಳಿಸಿದೆ.

ನಿವೃತ್ತ ಸರ್ಕಾರಿ ಉದ್ಯೋಗಿಗೆ ತನ್ನ ಸಂಗಾತಿಯ ಜೊತೆಗೆ ಜಂಟಿ ಬ್ಯಾಂಕ್ ಖಾತೆ ಕಡ್ಡಾಯವಲ್ಲ. ಒಂದು ವೇಳೆ ಹಾಗೆ ಜಂಟಿ ಖಾತೆ ತೆರೆಯಲು ಸಾಧ್ಯವಾಗದ ಪರಿಸ್ಥಿತಿ ಇದ್ದರೆ ಈ ನಿಯಮವನ್ನು ಸಡಿಲಗೊಳಿಸಬಹುದು. ಕೇಂದ್ರ ಪಿಂಚಣಿ ಖಾತೆ ಸಚಿವ ಡಾ. ಜಿತೇಂದ್ರ ಸಿಂಗ್ ಹಿರಿಯ ಅಧಿಕಾರಿಗಳ ಜೊತೆ ಸಭೆ ನಡೆಸಿದ ಬಳಿಕ ಈ ವಿಷಯವನ್ನು ತಿಳಿಸಿದ್ದಾರೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

ತೈಲ ಬೆಲೆ ಇಳಿಕೆ: ಭಾರತ ಪ್ರತಿತಂತ್ರ

0

ದೇಶದಲ್ಲಿ ಹೆಚ್ಚಿದ ಬೇಡಿಕೆಗೆ ಅನುಗುಣವಾಗಿ ಕಚ್ಚಾತೈಲ ಉತ್ಪಾದನೆ ಮಾಡಲು, ಒತ್ತಡ ಹೇರಿದ ದೇಶಗಳಿಗೆ ಭಾರತ ಪೈಪೋಟಿ ನೀಡಲು ತಯಾರಾಗಿದೆ. ಜಾಗತಿಕ ತೈಲ ದರಗಳ ಮೇಲೆ ಒಪೆಕ್ ದೇಶಗಳ ಪ್ರಾಬಲ್ಯ ವನ್ನು ನಿಯಂತ್ರಿಸಲು ಭಾರತ ಪ್ರತ್ಯುತ್ತರ ನೀಡಲು ಮುಂದಾಗಿದೆ.

ಭಾರತವು ತನ್ನ ಸಂಗ್ರಹಾಗಾರ ಗಳಿಂದ 50ಲಕ್ಷ ಬ್ಯಾರಲ್ ಕಚ್ಚಾತೈಲವನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸಲು ನಿರ್ಧರಿಸಿದೆ. ಈ ಮೂಲಕ ಕಚ್ಚಾತೈಲದ ಆಮದು ಕಡಿತಗೊಳಿಸಿ, ಬೆಲೆ ನಿಯಂತ್ರಣಕ್ಕೆ ತರಲಿದೆ.

ಭಾರತವು 3.8 ಕೋಟಿ ಬ್ಯಾರೆಲ್ ಕಚ್ಚಾತೈಲವನ್ನು ಪೂರ್ವ ಮತ್ತು ಪಶ್ಚಿಮದ 3 ಕಡೆಗಳಲ್ಲಿ ಸಂಗ್ರಹಿಸಿದೆ. ಇದರಲ್ಲಿ 50ಲಕ್ಷ ಬ್ಯಾರಲ್ ಬಿಡುಗಡೆ ಮಾಡಲಾಗಿದೆ. ಏಳರಿಂದ ಹತ್ತು ದಿನಗಳ ಅಗತ್ಯಗಳಿಗೆ ಸಾಕಾಗಲಿದೆ. ಈ ಕಚ್ಚಾತೈಲವನ್ನು ಎಂ ಆರ್ ಪಿ ಎಲ್ (ಮಂಗಳೂರು ರಿಫೈನರಿ ಅಂಡ್ ಪೆಟ್ರೋಕೆಮಿಕಲ್ ) ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪ್ ಗೆ ಬಿಡುಗಡೆ ಮಾಡಲಾಗುತ್ತದೆ.

ವಿಶಿಷ್ಟ ವೆಂದರೆ ಇದೇ ಪ್ರಥಮ ಬಾರಿಗೆ ಭಾರತದ ಮುಂದಾಳತ್ವದಲ್ಲಿ ಇಂತಹ ಕಾರ್ಯತಂತ್ರ ಸಿದ್ಧಗೊಂಡಿದೆ.

ಅಮೆರಿಕ ,ಜಪಾನ್ ಮತ್ತು ದಕ್ಷಿಣ ಕೊರಿಯಾ ಇತರೆ ದೇಶಗಳು ಭಾರತದೊಂದಿಗೆ ಕೈ ಜೋಡಿಸಿವೆ. ಈ ದೇಶಗಳು ಒಟ್ಟಿಗೆ ತಮ್ಮ ಸಂಗ್ರಹಗಾರ ಗಳಿಂದ ಕಚ್ಚಾತೈಲವನ್ನು ಬಿಡುಗಡೆಗೊಳಿಸಿ ನಿರ್ಧರಿಸಿವೆ.

ಈ ರಾಷ್ಟ್ರಗಳು ತಮ್ಮದೇ ಸಂಗ್ರಹಾಗಾರ ದಲ್ಲಿರುವ ತೈಲವನ್ನು ಬಿಡುಗಡೆಗೊಳಿಸಿದಾಗ, ಸೌದಿ ಅರೇಬಿಯಾ ಮತ್ತು ರಷ್ಯಾ ನೇತೃತ್ವದ ತೈಲ ಉತ್ಪಾದಕ ರಾಷ್ಟ್ರಗಳಿಗೆ ಬೇಡಿಕೆ ಕಡಿಮೆಯಾಗಲಿದೆ. ಇದರಿಂದ ಆದೇಶಗಳು ಬೆಲೆ ಇಳಿಸುವ ಒತ್ತಡಕ್ಕೆ ಸಿಲುಕಲಿವೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

ಕೃಷಿ ಬೆಲೆ ಆಯೋಗ ಶಿಫಾರಸು

0

ರಾಜ್ಯದೆಲ್ಲೆಡೆ ಎರಡು ವಾರದಿಂದೀಚೆಗೆ ಸುರಿದ ಭಾರಿ ಮಳೆಯಿಂದಾಗಿ ರೈತರು ಮತ್ತಷ್ಟು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಮಳೆಯಿಂದಾಗಿ ರೈತರು ಬೆಳೆದಂತಹ ಬೆಳೆಗಳೆಲ್ಲ ನೀರು ಪಾಲಾಗಿದ್ದು ಅಪಾರ ಪ್ರಮಾಣದ ಬೆಳೆ ನಾಶವಾಗಿದೆ. ಈ ಪರಿಸ್ಥಿತಿ ಮನಗಂಡು ರಾಜ್ಯ ಕೃಷಿ ಬೆಲೆ ಆಯೋಗವು ಹಲವು ಶಿಫಾರಸ್ಸುಗಳನ್ನು ಮಾಡಿದೆ.

ಎನ್ ಡಿ ಆರ್ ಎಸ್ ಮಾರ್ಗಸೂಚಿಗಳನ್ನು ಸಿದ್ಧಪಡಿಸಿ ಕೃಷಿ ಮತ್ತು ವಾಣಿಜ್ಯ ಬೆಳೆಗಳು/ ಬಹುವಾರ್ಷಿಕ ಬೆಳೆಗಳಿಗೆ ಅನುಗುಣವಾಗಿ ಪ್ರತಿ ಹೆಕ್ಟೇರಿಗೆ 50,000.ರೂ ಹಾಗೂ 1 ಲಕ್ಷ.ರೂ ಪರಿಹಾರ ಧನ ಒದಗಿಸಲು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಬೇಕು. ಕೇಂದ್ರದ ಕಿಸಾನ್ ಸಮ್ಮಾನ್ ಯೋಜನೆ ಅಡಿ ವಾರ್ಷಿಕವಾಗಿ ನೀಡುವ 6,000.ರೂ ಗಳಿಂದ 10,000.ರೂಗಳವರೆಗೆ ಹೆಚ್ಚಿಸಿ ಎರಡು ಕಂತುಗಳಲ್ಲಿ ಖಾತೆಗೆ ವರ್ಗಾಯಿಸುವಂತೆ ಕೇಂದ್ರಕ್ಕೆ ಶಿಫಾರಸು ಸಲ್ಲಿಸಲಾಗಿದೆ .

ಕೃಷಿ ಮತ್ತು ತೋಟಗಾರಿಕೆ ಬೆಳೆಗಳ ವಿಸ್ತೀರ್ಣ, ಇಳುವರಿ, ಉತ್ಪಾದನೆ, ಸಾಗುವಳಿ ವೆಚ್ಚ ಮತ್ತು ಮಾರುಕಟ್ಟೆ ಬೆಲೆಗಳ ವಸ್ತುಸ್ಥಿತಿ ಹಾಗೂ ಗ್ರಾಹಕರ ನಡುವಿನ ಬೆಲೆ ಪ್ರಸರಣ ವಿಶ್ಲೇಷಣೆ ಕುರಿತಂತೆ ಆಯೋಗದ ಅಧ್ಯಕ್ಷ ಹನುಮನಗೌಡ ಬೆಳಗುರ್ಕಿ ಅವರು ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾ ದಲ್ಲಿ ಮಾನ್ಯ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರಿಗೆ ವರದಿಯ ಶಿಫಾರಸ್ಸುಗಳನ್ನು ಸಲ್ಲಿಸಿದರು. ಈ ಸಂದರ್ಭದಲ್ಲಿ ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿ ಎನ್.ಮಂಜುನಾಥ್ ಪ್ರಸಾದ್, ಕೃಷಿ ಇಲಾಖೆ ನಿರ್ದೇಶಕ ಶ್ರೀನಿವಾಸ್, ಮಾಜಿ ಶಾಸಕ ಪ್ರತಾಪಗೌಡ ಪಾಟೀಲ ಉಪಸ್ಥಿತರಿದ್ದರು.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

ಮಳೆಯಿಂದಾಗಿ ಆರೋಗ್ಯಸಮಸ್ಯೆಗಳು

0

ರಾಜ್ಯದಲ್ಲಿ ಹಲವು ದಿನಗಳಿಂದ ಮಳೆಯ ಪ್ರಮಾಣ ಹೆಚ್ಚಾಗಿದೆ. ವಾತಾವರಣದಲ್ಲಿನ ಬದಲಾವಣೆಯ ಕಾರಣ ಜನರಲ್ಲಿ ಆರೋಗ್ಯ ಸಮಸ್ಯೆ ಹೆಚ್ಚಾಗುತ್ತಿದೆ. ಪ್ರತಿಮನೆಯಲ್ಲೂ ಶೀತ, ಜ್ವರ, ಕೆಮ್ಮು ಹೀಗೆ ಹಲವಾರು ಆರೋಗ್ಯ ಸಮಸ್ಯೆಗಳು ಜನರನ್ನು ಕಾಡುತ್ತಿವೆ. ಇದರಿಂದ ಆಸ್ಪತ್ರೆಗಳಲ್ಲಿ ಸರದಿ ಸಾಲು ಹೆಚ್ಚಾಗುತ್ತಿದೆ.

ವಿಪರೀತ ಮಳೆ, ಚಳಿಯಿಂದ ರೋಗನಿರೋಧಕ ಶಕ್ತಿ ಕಡಿಮೆಯಾಗುತ್ತದೆ. ಇದರಿಂದ ಯಾವುದೇ ಸಣ್ಣ ಸಮಸ್ಯೆಯೂ ದೊಡ್ಡದಾಗುತ್ತದೆ. ರೋಗ ನಿರೋಧಕ ಶಕ್ತಿ ಕಡಿಮೆ ಹೊಂದಿದವರು ಬೇಗನೆ ಕಾಯಿಲೆಗೆ ಬೀಳುತ್ತಾರೆ. ಇಂಥವರು ಮಳೆಗಾಲದಲ್ಲಿ ಅರಿಶಿನ ಮಿಶ್ರಿತ ಹಾಲು, ಮೆಣಸು, ತುಳಸಿ ರಸದ ಜೊತೆ ಜೇನುತುಪ್ಪ ಶುಂಠಿ ಸೇವಿಸಿದರೆ ಉತ್ತಮ ಎಂದು ಬೆಂಗಳೂರಿನ ಆಯುರ್ವೇದದ ವೈದ್ಯರಾದ ಡಾ. ಮಂಜುನಾಥ್ ಡಿ. ನಾಯಕ್ ತಿಳಿಸಿದ್ದಾರೆ.

ಮಳೆಗಾಲದ ಸಮಯದಲ್ಲಿ ಸಾಮಾನ್ಯವಾಗಿ ಕಾಡುವ ಡೆಂಗ್ಯೂ, ಚಿಕನ್ ಗುನ್ಯಾ, ಮಲೇರಿಯಾ ಇವುಗಳ ಪ್ರಮಾಣ ಹೆಚ್ಚಾಗಿದೆ. ಮಳೆಗಾಲದಲ್ಲಿನ ಕಲುಷಿತ ನೀರಿನಿಂದ ನೆಗಡಿ, ಜ್ವರ, ತಲೆನೋವು, ಸೀನುವಿಕೆ ಇನ್ನು ಮುಂತಾದ ರೋಗಲಕ್ಷಣಗಳು ಕಾಣಿಸುತ್ತದೆ. ಕೆಲವರಿಗೆ ಹೆಪಟೈಟಿಸ್ ‘ಎ’ಕೂಡ ಕಾಣಿಸಿಕೊಳ್ಳುತ್ತಿದೆ. ಇದರ ಜೊತೆಗೆ ಜನರಿಗೆ ವೈರಲ್ ಜ್ವರ ಯಾವುದು, ಸಾಮಾನ್ಯ ಜ್ವರ ಯಾವುದು ಎಂದು ತಿಳಿಯದೆ ಕಂಗಾಲಾಗುತ್ತಿದ್ದಾರೆ.

ಸಾಮಾನ್ಯವಾಗಿ ಶೀತ, ಜ್ವರ, ಕೆಲವೊಮ್ಮೆ ಶ್ವಾಸಕೋಶದಲ್ಲಿ ಕಫ ಕಟ್ಟಿಕೊಂಡು ನ್ಯೂಮೋನಿಯಾ ಸಮಸ್ಯೆಗೆ ತಿರುಗುತ್ತದೆ. ಹಿರಿಯರು ಮತ್ತು ಮಕ್ಕಳು ಈ ಸಮಸ್ಯೆಗಳ ಒಳಗಾಗುವ ಪ್ರಮಾಣ ಹೆಚ್ಚಾಗಿರುತ್ತದೆ. ಹೀಗಾಗಿ ಜನರು ಆತಂಕಕ್ಕೆ ಒಳಗಾ ಗಿದ್ದಾರೆ.

ಶೀತ ,ಜ್ವರ ಜನರನ್ನು ಬಾಧಿಸದೆ ಇರುವ ಹಾಗೆ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕು. ಹೆಚ್ಚಾಗಿ ಬಿಸಿನೀರನ್ನು ಕುಡಿಯಬೇಕು. ಹುಳಿ ಹಣ್ಣು ಸೇವನೆ ಮಾಡಬಾರದು. ಶುಂಠಿ, ಅರಿಶಿನ, ಕಾಳುಮೆಣಸು ಕಷಾಯ ಕುಡಿಯಬೇಕು. ಖನಿಜಾಂಶ ಹೆಚ್ಚಿರುವ ಆಹಾರವನ್ನು ಸೇವಿಸಬೇಕು. ರೋಗ ಲಕ್ಷಣಗಳು ಕಂಡು ಬಂದರೆ ತಕ್ಷಣ ವೈದ್ಯರ ಸಲಹೆ ಪಡೆಯುವುದು ಒಳಿತು.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.