Department of Industry and Commerce ಹೆಚ್ಚಿನ ಉದ್ಯೋಗಾವಕಾಶ ಮತ್ತು ಆರ್ಥಿಕತೆಗೆ ಉತ್ತಮ ಕೊಡುಗೆ ನೀಡುತ್ತಿರುವ ಎಂಎಸ್ಎಂಇಗಳ ಕಾರ್ಯಕ್ಷಮತೆ ಮತ್ತು ವೇಗ ಹೆಚ್ಚಿಸುವ ಉದ್ದೇಶದಿಂದ ಸರ್ಕಾರ ಹಲವಾರು ಕಾರ್ಯಕ್ರಮಗಳನ್ನು ರೂಪಿಸಿದ್ದು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕರಾದ ಗಣೇಶ್ ಆರ್ ಹೇಳಿದರು.
ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ, ಜಿಲ್ಲಾ ಕೈಗಾರಿಕಾ ಕೇಂದ್ರ, ಶಿವಮೊಗ್ಗ, ವಿಶ್ವೇಶ್ವರಯ್ಯ ವ್ಯಾಪಾರ ಉತ್ತೇಜನಾ ಕೇಂದ್ರ (ವಿ.ಟಿ.ಪಿ.ಸಿ) ಹಾಗೂ ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘ ಇವರ ಸಹಯೋಗದಲ್ಲಿ “ಎಂಎಸ್ಎಂಇ.ಗಳ ಕಾರ್ಯಕ್ಷಮತೆಯನ್ನು ಹೆಚ್ಚಿಸುವುದು ಮತ್ತು ವೇಗಗೊಳಿಸುವುದು” (ಆರ್‌ಎಎಂಪಿ) ಯೋಜನೆಯಡಿಯಲ್ಲಿ ಲೀನ್ ಯೋಜನೆ ಮತ್ತು ಝಡ್.ಇ.ಡಿ. ಹಾಗೂ ರಫ್ತು ಕುರಿತು ಗೋಪಾಲ ಗೌಡ ಬಡಾವಣೆಯ ಜಿಲ್ಲಾ ಔಷಧ ಭವನದಲ್ಲಿ ಶನಿವಾರ ಏರ್ಪಡಿಸಲಾಗಿದ್ದ ಒಂದು ದಿನದ ಅರಿವು ಮೂಡಿಸುವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಕೃಷಿ ನಂತರ ಹೆಚ್ಚಿನ ಉದ್ಯೋಗಾವಕಾಶಗಳನ್ನು ಒದಗಿಸುತ್ತಿರುವುದು ಎಂಎಸ್ಎಂಇ(ಅತಿ ಸಣ್ಣ, ಸಣ್ಣ, ಮಧ್ಯಮ ಉದ್ಯಮಗಳು)ಗಳು. ಈ ಉದ್ಯಮಗಳ ಕಾರ್ಯಕ್ಷಮತೆ ಹೆಚ್ಚಿಸಲು ಮತ್ತು ವೇಗಗೊಳಿಸುವ ಉದ್ದೇಶದಿಂದ ಸರ್ಕಾರ ಹಲವಾರು ಕಾರ್ಯಕ್ರಮಗಳನ್ನು ಕೈಗೊಂಡಿದ್ದು, ಕಾಸಿಯಾ ಎಂಎಸ್ಎಂಇ ಗಳಿಗೆ ಪೂರಕವಾಗಿ ಕೆಲಸ ಮಾಡುತ್ತಾ ಸಹಕರಿಸುತ್ತಿರುವುದು ಅಭಿನಂದನೀಯ.
ಸರ್ಕಾರ ಪ್ರತಿ 5 ವರ್ಷಕ್ಕೊಮ್ಮೆ ಕೈಗಾರಿಕಾ ನೀತಿ ತಂದು ಕೈಗಾರಿಕೆಗಳಿಗೆ ಹಲವಾರು ಉತ್ತೇಜನ, ಸೌಲಭ್ಯಗಳನ್ನು ನೀಡುತ್ತಿದ್ದು ಇದರ ಸದುಪಯೋಗವನ್ನು ಉದ್ಯಮಿಗಳು ಮಾಡಿಕೊಳ್ಳಬೇಕು. ಉದ್ಯಮಿಗಳು ಸರ್ಕಾರದ ವಿವಿಧ ಯೋಜನೆಗಳ ಉಪಯೋಗ ಪಡೆದು ಹೆಚ್ಚಿನ ಸಂಖ್ಯೆಯ ಕೈಗಾರಿಕೆಗಳ ಸ್ಥಾಪನೆ, ವಿಸ್ತರಣೆ, ಮಾರ್ಪಾಡು ಮಾಡಬಹುದು ಎಂದರು.
ಕೇಂದ್ರ ಸರ್ಕಾರ ನಿರುದ್ಯೋಗ ಸಮಸ್ಯೆ ನಿವಾರಣೆಗೆ ಎಂಪ್ಲಾಯ್‌ಮೆಂಟ್ ಲಿಂಕ್ಡ್ ಇನ್ಸೆಂಟಿಸ್ ಸ್ಕೀಂ ಎಂಬ ಮಹಾತ್ವಾಕಾಂಕ್ಷಿ ಯೋಜನೆಯನ್ನು ಜಾರಿಗೆ ತಂದಿದ್ದು ಈ ಯೋಜನೆಯಡಿ ಎರಡು ವರ್ಷಗಳ ಕಾಲ ಉದ್ಯೋಗ ನೀಡಿದವರಿಗೆ ಮತ್ತು ಉದ್ಯೋಗ ಪಡೆದವರಿಬ್ಬರಿಗೂ ಪ್ರೋತ್ಸಾಹಧನ ನೀಡುತ್ತದೆ ಎಂದು ತಿಳಿಸಿದರು.
ಸಿಡ್ಬಿ ಡಿಜಿಎಂ ಗುಣಶೇಖರನ್ ಮಾತನಾಡಿ, ಇಂತಹ ಕಾರ್ಯಕ್ರಮಗಳು ಯುವ ಮತ್ತು ನವೋದ್ಯಮಿಗಳಿಗೆ ಕೈಗಾರಿಕೆಯಲ್ಲಿನ ವಿವಿಧ, ಹೊಸ ಹೊಸ ಅವಕಾಶಗಳ ಕುರಿತು ಮಾಹಿತಿ ಮತ್ತು ಅರಿವು ಮೂಡಿಸಲು ಸಹಕಾರಿಯಾಗಿದೆ. ಉದ್ಯಮಿಗಳು ಹೆಚ್ಚಿನ ಸಂಖ್ಯೆಯಲ್ಲಿ ಇಂತಹ ಕಾರ್ಯಕ್ರಮಗಳಸಲ್ಲಿ ಪಾಲ್ಗೊಂಡು ಸದುಪಯೋಗ ಪಡೆಯಬೇಕು. ವೇದಿಕೆ ಕಾರ್ಯಕ್ರಮದ ನಂತರ ಝಡ್.ಇ.ಡಿ. ಹಾಗೂ ರಫ್ತು ಕುರಿತು ಹೆಚ್ಚಿನ ಮಾಹಿತಿ ನೀಡಲಾಗುವುದು. ಈ ವಿಷಯದ ಕುರಿತು ಸಂದೇಹಗಳಿದ್ದರೆ ಕೇಳಿ ತಿಳಿದುಕೊಳ್ಳಬಹುದು ಎಂದರು.
ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷರಾದ ಗೋಪಿನಾಥ್ ಬಿ. ಮಾತನಾಡಿ, 1949 ರಲ್ಲಿ ಸ್ಥಾಪನೆಯಾದ ಕಾಸಿಯಾ ನಿರಂತರವಾಗಿ ಎಂಎಸ್ಎಂಇ ಗಳ ಶ್ರೇಯೋಭಿವೃದ್ದಿಗಾಗಿ ಕೆಲಸ ಮಾಡುತ್ತಿದೆ. ಕಾಸಿಯಾ ಎಂಎಸ್ಎಂಇ ಗಳ ಕಣ್ಣು ಮತ್ತು ಕಿವಿ ಎಂದೇ ಹೇಳಬಹುದು. ಎಂಎಸ್ಎಂಇ ಗಳಿಗೆ ಸಂಬಂಧಿಸಿದಂತೆ ಜಿಎಸ್‌ಟಿ, ಆರ್ಥಿಕತೆ, ತಾಂತ್ರಿಕ ವಿಷಯಗಳ ಕುರಿತು ಏನೇ ಸಮಸ್ಯೆಗಳಿದ್ದರೂ ಸರ್ಕಾರದ ಮಟ್ಟದಲ್ಲಿ ಚರ್ಚಿಸಿ ಪರಿಹಾರ ಒದಗಿಸುತ್ತಾ ಬಂದಿದ್ದು ಕಾಸಿಯಾ ಶಿವಮೊಗ್ಗದಲ್ಲಿ ಲೀನ್ ಯೋಜನೆ ಮತ್ತು ಝಡ್.ಇ.ಡಿ. ಹಾಗೂ ರಫ್ತು ಕುರಿತು ಉದ್ಯಮಿಗಳಿಗೆ ಕಾರ್ಯಕ್ರಮ ಮಾಡುತ್ತಿರುವು ಸಂತಸದ ವಿಷಯ.
ಎಂಎಸ್ಎಂಇ ಗಳು ಸಾಕಷ್ಟು ಉದ್ಯೋಗ ಸೃಷ್ಟಿಸಿದ್ದು ದೇಶದ ಜಿಡಿಪಿ ಗೆ ಶೇ. 29 ರಷ್ಟು ಕೊಡುಗೆ ನಿಡಿದ್ದು, ಸರ್ಕಾರ ತನ್ನ ಬಜೆಟ್‌ನಲ್ಲಿ ಎಂಎಸ್ಎಂಇ ಗಳಿಗೆ ಪೂರಕವಾದ ಯೋಜನೆಗಳನ್ನು ನೀಡಿದೆ. ಎಂಎಸ್‌ಎAಇ ಗಳಿಗಾಗಿಯೇ ಸಿಡ್ಬಿ ಬ್ಯಾಂಕ್‌ನ್ನೇ ನೀಡಿ ಸಹಕರಿಸಿದೆ. ಜಿಲ್ಲೆಯಲ್ಲಿ ಕೈಗಾರಿಕಾಭಿವೃದ್ದಿ ಎಲ್ಲ ಸಂಘಗಳು ಕೆಲಸ ಮಾಡುತ್ತಿದ್ದು ಜಿಲ್ಲೆಯನ್ನು ಒಂದು ಉತ್ತಮ ಇಂಡಸ್ಟಿçಯಲ್ ಹಬ್ ಮಾಡಲು ಶ್ರಮಿಸುತ್ತಿವೆ.
ಕಳೆದ ತ್ರೈಮಾಸಿಕದಲ್ಲಿ ದೇಶದ ಜಿಡಿಪಿ ಶೇ.7.8 ಗೆ ತಲುಪಿರುವುದು ಹೆಮ್ಮೆಯ ವಿಷಯವಾಗಿದ್ದು ಎಂಎಸ್‌ಎAಇ ಗಳ ಕೊಡುಗೆಯೂ ಇದೆ. ಭಾರತಕ್ಕೆ ಉತ್ತಮ ಭವಿಷ್ಯವಿದೆ. ಸರ್ಕಾರ ಉದ್ಯಮಿಗಳಿಗೆ ಹಲವಾರು ಯೋಜನೆಗಳನ್ನು ನೀಡಿದ್ದು ಸದ್ಬಳಕೆಯಾಗಬೇಕು ಎಂದರು.
ಮಾಚೇನಹಳ್ಳಿ ಕೈಗಾರಿಕಾ ಸಂಘದ ಅಧ್ಯಕ್ಷರಾದ ಬೆನಕಪ್ಪ ಮಾತನಾಡಿ, ಎಂಎಸ್ಎಂಇ ಗಳಿಗೆ ಕಾಸಿಯ, ಡಿಐಸಿ ಸಹಕಾರ ಅತ್ಯುತ್ತಮವಾಗಿದೆ. ದೇಶ ಪ್ರಗತಿ ಪಥದಲ್ಲಿದೆ. ಅವಕಾಶಗಳು, ಸೌಲಭ್ಯಗಳು ಬಹಳ ಇವೆ. ರಫ್ತಿಗೆ ತುಂಬಾ ಅವಕಾಶಗಳಿವೆ, ಹೊಸ ತಂತ್ರಜ್ಞಾನ, ಆರ್ಥಿಕ ಸಹಕಾರಗಳೂ ಇದ್ದು ಸದ್ಬಳಕೆ ಮಾಡಿಕೊಳ್ಳಬೇಕು. ಸಣ್ಣ ಸಣ್ಣ ಯಶಸ್ಸು, ಸುಧಾರಣೆಗಳು ಅಭಿವೃದ್ಧಿಗೆ ಹಾದಿಯಾಗಿದ್ದು ಸರ್ಕಾರ ನೀಡಿರುವ ಬಹಳಷ್ಟು ಯೋಜನೆಗಳನ್ನು ಉಪಯೋಗಿಸಿಕೊಳ್ಳಬೇಕೆಂದರು.
ಜಿಲ್ಲಾ ಕೈಗಾರಿಕಾ ಸಂಘದ ಅಧ್ಯಕ್ಷರಾದ ಜೋಯಿಸ್ ರಾಮಾಚಾರ್ ಮಾತನಾಡಿ, ಪ್ರತಿ ಜಿಲ್ಲೆಯಲ್ಲಿ ಈ ಕಾರ್ಯಕ್ರಮಗಳು ನಡೆಯುತ್ತಿದ್ದು ಯೋಜನೆಗಳ ಕುರಿತು ಅರಿವು ನೀಡುತ್ತಿದೆ. ಬ್ಯಾಂಕಿಂಗ್ ವಲಯದಿಂದ ಸಾಕಷ್ಟು ಪ್ರಯೋಜನಗಳಿವೆ. ಇದೆ. ಲೀನ್ ಯೋಜನೆಯಿಂದಾಗಿ ಉತ್ಪಾದನೆ ಪ್ರಕ್ರಿಯೆ ವೆಚ್ಚ ಕಡಿಮೆ ಆಗುತ್ತಿದೆ. ಕೈಗಾರಿಕ ಬೆಳೆಯಬೇಕೆಂದರೆ ದೇಶೀಯ ಮಾರುಕಟ್ಟೆ ಜೊತೆಗೆ ವಿದೇಶೀ ಮಾರುಕಟ್ಟೆಯನ್ನು ಪ್ರವೇಶಿಸಬೇಕು. ವಿವಿಧ ಯೋಜನೆಗಳು, ವಿದೇಶಿ ಮಾರುಕಟ್ಟೆ ಮತ್ತು ರಫ್ತು ಕುರಿತು ಈ ಕಾರ್ಯಕ್ರಮದಲ್ಲಿ ಸಾಕಷ್ಟು ಮಾಹಿತಿ ಮತ್ತು ಸಹಕಾರ ದೊರೆಯಲಿದೆ ಎಂದರು.
ವಿ.ಟಿ.ಪಿ.ಸಿ. ಧಾರವಾಡ ಶಾಖಾ ಕಛೇರಿಯ ಸಹಾಯಕ ನಿರ್ದೇಶಕ ಟಿ. ಎಸ್. ಮಲ್ಲಿಕಾರ್ಜುನ ಮಾತನಾಡಿ, ವಿಶ್ವೇಶ್ವರಯ್ಯ ವ್ಯಾಪಾರ ಉತ್ತೇಜನಾ ಕೇಂದ್ರ ಸರ್ಕಾರದ ಅಂಗ ಸಂಸ್ಥೆಯಾಗಿದ್ದು ರಫ್ತು ನೋಡಲ್ ಏಜೆನ್ಸಿಯಾಗಿದೆ. ರಫ್ತಿಗೆ ಉತ್ತೇಜನ ನೀಡಲಿದೆ. 2024-25 ನೇ ಸಾಲಿನಲ್ಲಿ ನಮ್ಮ ರಾಜ್ಯ ಶೇ.40 ರಷ್ಟು ಐಟಿ ಸರ್ವಿಸ್ ರಫ್ತು ಮಾಡಿದೆ. ಇತರೆ ರಫ್ತಿನಲ್ಲಿ 4 ನೇ ಸ್ಥಾನದಲ್ಲಿದ್ದು ಎರಡನೇ ಸ್ಥಾನಕ್ಕೆ ಬರಲು ಪ್ರಯತ್ನ ಮಾಡಲಾಗುತ್ತಿದೆ. ಕಳೆದ ಸಾಲಿನಲ್ಲಿ ಶಿವಮೊಗ್ಗ ಜಿಲ್ಲೆಯಿಂದ ರೂ. 443.7 ಕೋಟಿ ಮೊತ್ತದ ಸರಕು ರಫ್ತು ಮಾಡಲಾಗಿದೆ.
Department of Industry and Commerce ವಿಟಿಪಿಸಿ ಯು ರಫ್ತುದಾರರಿಗೆ ಮಾರುಕಟ್ಟೆ ಅವಕಾಶ ನೀಡುತ್ತದೆ. ಮಾರುಕಟ್ಟೆ ಅಭಿವೃದ್ಧಿ ಸಹಾಯ ಯೋಜನೆಯಡಿ ಸಹಕರಿಸುತ್ತದೆ. ವಿದೇಶಗಳಲ್ಲಿ ನಡೆಯುವ ಟ್ರೇಡ್ ಫೇರ್‌ಗಳಲ್ಲಿ ಭಾಗವಹಿಸಲು ಸಹಾಯ ಮಾಡುತ್ತದೆ ಎಂದು ತಿಳಿಸಿದರು.
ಸಿಡ್ಬಿ ಪ್ರಾದೇಶಿಕ ಕಚೇರಿಯ ಪ್ರಧಾನ ವ್ಯವಸ್ಥಾಪಕ ಎಸ್.ಶ್ರೀಪತಿ, ಕಾಸಿಯಾ ಗೌರವ ಪ್ರಧಾನ ಕಾರ್ಯದರ್ಶಿ ಎಸ್. ಎಂ. ಹುಸೇನ್, ಗ್ರಾಮೀಣ ಜಂಟಿ ಕಾರ್ಯದರ್ಶಿ ಕೇಶವ ಮೂರ್ತಿ ಆರ್ (ಕಿರಣ್), ನಗರ ಜಂಟಿ ಕಾರ್ಯದರ್ಶಿ ಎಸ್. ವಿಶ್ವೇಶ್ವರಯ್ಯ ಇತರೆ ಉದ್ಯಮಿಗಳು ಹಾಜರಿದ್ದರು. ಕಾಸಿಯಾ ಉಪಾಧ್ಯಕ್ಷರು ನಿಂಗಣ್ಣ ಎಸ್. ಬಿರಾದರ ಸ್ವಾಗತಿಸಿದರು.
Department of Industry and Commerce ಎಂಎಸ್ಎಂಇ ಗಳ ಕಾರ್ಯಕ್ಷಮತೆ ಹೆಚ್ಚಿಸಲು ಸರ್ಕಾರ ಹಲವಾರು ಯೋಜನೆಗಳನ್ನ ನಿರೂಪಿಸಿದೆ- ಆರ್.ಗಣೇಶ್
Indian Navy ಹೆಮ್ಮೆಯ ಯುದ್ಧ ನೌಕೆಗಳಾದ ಉದಯಗಿರಿ & ಹಿಮಗಿರಿಗೆ ಭದ್ರಾವತಿ ವಿಐಎಸ್ಎಲ್ ನಿಂದ ಉತ್ಕೃಷ್ಟ ದರ್ಜೆಯ ಉಕ್ಕು ಪೂರೈಕೆ
Indian Navy ಭಾರತದ ಅತಿದೊಡ್ಡ ಸಾರ್ವಜನಿಕ ವಲಯದ ಉಕ್ಕು ಉತ್ಪಾದಕ ಮತ್ತು ಭಾರತ ಸರ್ಕಾರದ ಉಕ್ಕು ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಮಹಾರತ್ನ ಕಂಪನಿಗಳಾದ ಸ್ಟೀಲ್ ಅಥಾರಿಟಿ ಆಫ್ ಇಂಡಿಯಾ ಲಿಮಿಟೆಡ್ , ಭಾರತೀಯ ನೌಕಾಪಡೆಯ ಮುಂದುವರಿದ ಮುಂಚೂಣಿ ಯುದ್ಧ ನೌಕೆಗಳಾದ IಓS ಉದಯಗಿರಿ ಮತ್ತು ಹಿಮಗಿರಿಗೆ ಸುಮಾರು ೮,೦೦೦ ಟನ್ ನಿರ್ಣಾಯಕ ದರ್ಜೆಯ ಉಕ್ಕನ್ನು ಪೂರೈಸುವ ಮೂಲಕ ರಾಷ್ಟçದ ರಕ್ಷಣಾ ವಲಯದೊಂದಿಗೆ ತನ್ನ ನಿರ್ಣಾಯಕ ಪಾಲುದಾರಿಕೆಯನ್ನು ಮುಂದುವರೆಸಿದೆ.
ಗೌರವಾನ್ವಿತ ರಕ್ಷಣಾ ಮಂತ್ರಿ ಶ್ರೀ ರಾಜನಾಥ್ ಸಿಂಗ್ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಅವರ ಆದೇಶದಂತೆ ಈ ಎರಡು ಯುದ್ಧ ನೌಕೆಗಳನ್ನು ಆಗಸ್ಟ್ ೨೬, ೨೦೨೫ರಂದು ವಿಶಾಖಪಟ್ಟಣಂನಲ್ಲಿ ಭಾರತೀಯ ನೌಕಾಪಡೆಗೆ ನಿಯೋಜಿಸಲಾಯಿತು.
ಭಾರತೀಯ ನೌಕಾಪಡೆಗಾಗಿ ಈ ಎರಡು ಮುಂದುವರೆದ ಯುದ್ಧ ನೌಕೆಗಳನ್ನು ನಿರ್ಮಿಸುವಲ್ಲಿ ಸೈಲ್ ನಿರ್ಣಾಯಕ ಪಾತ್ರವಹಿಸಿದೆ. ಮಜಗಾನ್ ಡಾಕ್ ಶಿಪ್ ಬಿಲ್ಡರ್ಸ್ ಲಿಮಿಟೆಡ್ (ಒಆಐ) ಮತ್ತು ಗಾರ್ಡನ್ ರೀಚ್ ಶಿಪ್ ಬಿಲ್ಡರ್ಸ್ & ಇಂಜಿನಿಯರ್ಸ್ ಲಿಮಿಟೆಡ್ (ಉಖSಇ) ಜೊತೆ ಪಾಲುದಾರಿಕೆ ಹೊಂದಿರುವ ಸೈಲ್, ಬೊಕಾರೋ, ಭಿಲಾಯ್ ಮತ್ತು ರರ‍್ಕೆಲಾ ಸ್ಟೀಲ್ ಪ್ಲಾಂಟ್‌ಗಳಿಂದ ಅಗತ್ಯವಾದ ನಿರ್ಣಾಯಕ ದರ್ಜೆಯ ಹಾಟ್-ರೋಲ್ಡ್ ಹಾಳೆಗಳ ಮತ್ತು ಪ್ಲೇಟ್‌ಗಳನ್ನು ಪೂರೈಸಿದೆ.
ಭಾರತೀಯ ನೌಕಾಪಡೆಗೆ ನಿರ್ಣಾಯಕ ದರ್ಜೆಯ ಉಕ್ಕನ್ನು ಅಭಿವೃದ್ಧಿಪಡಿಸುವ ಮತ್ತು ಒದಗಿಸುವ ಮೂಲಕ, ಸೈಲ್ ಆಮದು ಪರ್ಯಾಯ ಮತ್ತು ರಕ್ಷಣಾ ಸ್ವಾವಲಂಬನೆಗೆ ಗಮನಾರ್ಹ ಕೊಡುಗೆ ನೀಡಿದೆ, ‘ಆತ್ಮ ನಿರ್ಭರ ಭಾರತ್’ ಮತ್ತು ‘ಮೇಕ್ ಇನ್ ಇಂಡಿಯಾ’ ಉಪಕ್ರಮಗಳನ್ನು ನೇರವಾಗಿ ಬೆಂಬಲಿಸುತ್ತದೆ ಮತ್ತು ರಕ್ಷಣಾ ಅವಶ್ಯಕತೆಗಳಿಗಾಗಿ ಆಮದು ಮಾಡಿಕೊಂಡ ವಿಶೇಷ ಗುಣಮಟ್ಟದ ಉಕ್ಕಿನ ಮೇಲಿನ ಭಾರತದ ಅವಲಂಬನೆಯನ್ನು ಕಡಿಮೆ ಮಾಡುತ್ತದೆ.
ಖಾಲಿಯಿರುವ ವಿಶೇಷ ಪ್ಲೇಟ್ ಪ್ಲಾಂಟ್ ಮಾತ್ರ ಟ್ಯಾಂಕ್‌ಗಳು, ಯುದ್ಧನೌಕೆಗಳು ಮತ್ತು ಕ್ಷಿಪಣಿಗಳಂತಹ ರಕ್ಷಣಾ ಅನ್ವಯಿಕೆಗಳಿಗಾಗಿ ೧೦೦,೦೦೦ ಟನ್‌ಗಳಿಗೆ ಹೆಚ್ಚು ನಿರ್ಣಾಯಕ ದರ್ಜೆಯ ಉಕ್ಕನ್ನು ಪೂರೈಸಿದೆ.
I ಉದಯಗಿರಿ ಮತ್ತು ಹಿಮಗಿರಿಯ ಕಾರ್ಯಾರಂಭವು ಸಂಪೂರ್ಣವಾಗಿ ಸ್ಥಳೀಯ ರಕ್ಷಣಾ ಪರಿಸರ ವ್ಯವಸ್ಥೆಯ ಶಕ್ತಿ ಮತ್ತು ಆಳವನ್ನು ಅಡಿಪಾಯದ ಉಕ್ಕಿನಿಂದ ಹಿಡಿದು ಸಂಕೀರ್ಣ ವಿನ್ಯಾಸ ಮತ್ತು ಸಮರ್ಪಿತ ಸಿಬ್ಬಂದಿಯವರೆಗೆ – ಶಕ್ತಿಯುತವಾಗಿ ಪ್ರದರ್ಶಿಸುತ್ತದೆ.
ಭಾರತದ ರಕ್ಷಣಾ ವಲಯದೊಂದಿಗೆ ಸೈಲ್‌ನ ನಿರಂತರ ಪಾಲುದಾರಿಕೆಯು ಉತ್ತಮವಾಗಿ ಸ್ಥಾಪಿತವಾಗಿದೆ. ವಿಕ್ರಾಂತ್, ನೀಲಗಿರಿ, ಅಜಯ್, ನಿಸ್ತಾರ್, ಅರ್ನಾಲಾ, ವಿಂಧ್ಯಗಿರಿ ಮತ್ತು ಸೂರತ್‌ನಂತಹ ಐಕಾನಿಕ್ ಹಡಗುಗಳಿಗೆ ನಿರ್ಣಾಯಕ ದರ್ಜೆಯ ಉಕ್ಕನ್ನು ಪೂರೈಸುವ ಹೆಮ್ಮೆಯ ಇತಿಹಾಸವನ್ನು ಸೈಲ್ ಹೊಂದಿದೆ.
Indian Navy ಈ ಅಚಲ ಪ್ರಬುದ್ಧತೆಯು ಸೈಲ್‌ನ ವಿಶ್ವಾಸಾರ್ಹ ರಾಷ್ಟ್ರೀಯ ತಯಾರಕ ಮತ್ತು ದೇಶದಲ್ಲಿ ನಡೆಯುತ್ತಿರುವ ನೌಕಾ ಆಧುನೀಕರಣದಲ್ಲಿ ಪ್ರಮುಖ ಸಹಯೋಗಿಯಾಗಿ ಸ್ಥಾನವನ್ನು ಗಟ್ಟಿಗೊಳಿಸುತ್ತದೆ.
Information and Public Relations Department ಗಾಂಧಿ ಜಯಂತಿ ವಿಶೇಷವಾಗಿ ರಾಜ್ಯಮಟ್ಟದ ಪ್ರಬಂಧ ರಚನಾ ಸ್ಪರ್ಧೆ
Information and Public Relations Department ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ವತಿಯಿಂದ ಆಚರಿಸುತ್ತಿರುವ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ 156ನೇ ಜಯಂತಿಯ ದಿನಾಚರಣೆಯ ಅಂಗವಾಗಿ ವಿದ್ಯಾರ್ಥಿ ಹಾಗೂ ಯುವಜನರಲ್ಲಿ ಮಹಾತ್ಮ ಗಾಂಧೀಜಿಯವರ ಬದುಕು. ಸ್ವಾತಂತ್ರ್ಯ ಚಳುವಳಿ. ಸರಳತೆ, ಅಹಿಂಸಾ ಮಾರ್ಗ, ಸಹಬಾಳ್ವೆ, ಅಸ್ಪøಶ್ಯತೆ ನಿವಾರಣೆಗಾಗಿ ನಡೆಸಿದ ಪ್ರಯೋಗಗಳು ಇತ್ಯಾದಿ ವಿಚಾರಗಳ ಬಗ್ಗೆ ಪ್ರೌಢಶಾಲೆ. ಪದವಿ ಪೂರ್ವ ಹಾಗೂ ಪದವಿ-ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಬಾಪೂಜಿ ಪ್ರಬಂಧ ಸ್ಪರ್ಧೆಯನ್ನು ಜಿಲ್ಲಾ ಮತ್ತು ರಾಜ್ಯ ಮಟ್ಟದಲ್ಲಿ ಹಮ್ಮಿಕೊಳ್ಳಲಾಗುತ್ತಿದೆ.
ವಿವಿಧ ವಿಷಯಗಳ ಕುರಿತು ಪ್ರೌಢಶಾಲೆ. ಪದವಿ ಪೂರ್ವ ಶಿಕ್ಷಣ ಹಾಗೂ ಪದವಿ-ಸ್ನಾತಕೋತ್ತರ ಪದವಿಗಳ ಹಂತದ ವಿದ್ಯಾರ್ಥಿಗಳಿಗೆ ಒಟ್ಟು 3 ವಿಭಾಗಗಳಲ್ಲಿ ಬಾಪೂಜಿ ಪ್ರಬಂಧ ಸ್ಪರ್ಧೆಯನ್ನು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ಆಯೋಜಿಸಲು ಉದ್ದೇಶಿಸಿದೆ.
ವಿಜೇತರಿಗೆ ರಾಜ್ಯಮಟ್ಟದಲ್ಲಿ ಪ್ರಥಮ ಬಹುಮಾನ 31 ಸಾವಿರ ರೂ. ದ್ವಿತೀಯ ಬಹುಮಾನ 21 ಸಾವಿರ ರೂ. ಮತ್ತು ತೃತೀಯ ಬಹುಮಾನ 11 ಸಾವಿರ ರೂ. ಹಾಗೂ ಜಿಲ್ಲಾಮಟ್ಟದಲ್ಲಿ ಪ್ರಥಮ ಬಹುಮಾನ 3 ಸಾವಿರ ರೂ. ದ್ವಿತೀಯ ಬಹುಮಾನ 2 ಸಾವಿರ ರೂ ಮತ್ತು ತೃತೀಯ ಬಹುಮಾನ 1 ಸಾವಿರ ರೂ. ಬಹುಮಾನ ನೀಡಲಾಗುವುದು.
ಪ್ರೌಢ ಶಾಲಾ ವಿಭಾಗದಲ್ಲಿ :
1) ಸ್ವಚ್ಚತೆಯ ಪಾಠ – ಗಾಂಧೀಜಿಯವರ ಸಂದೇಶ, 2) ಮಕ್ಕಳ ಭವಿಷ್ಯ ನಿರ್ಮಾಣದಲ್ಲಿ ಗಾಂಧೀಜಿಯವರ ಪಾತ್ರ. 3) ಗಾಂಧೀಜಿಯವರ ಸ್ವಾತಂತ್ರ್ಯದ ಕನಸು – ನನ್ನ ಕಲ್ಪನೆ. ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿಗಳು ಈ ಮೂರು ವಿಷಯಗಳಲ್ಲಿ ಯಾವುದಾದರೂ ಒಂದು ವಿಷಯ ಕುರಿತು 700 ರಿಂದ 800 ಪದಗಳು ಮೀರದಂತೆ ಪ್ರಬಂಧ ಬರೆಯಬೇಕು.
ಪದವಿ ಪೂರ್ವ ಶಿಕ್ಷಣ ವಿಭಾಗದಲ್ಲಿ :
1) ಅಸ್ಪೃಶ್ಯತೆ ನಿವಾರಣೆಯಲ್ಲಿ ಗಾಂಧೀಜಿಯವರ ಹೋರಾಟ, 2) ಇಂದಿನ ಸಮಾಜದಲ್ಲಿ ಸರ್ವೋದಯ ಮತ್ತು ಅಂತ್ಯೋದಯದ ಪ್ರಾಸಂಗಿಕತೆ, 3) ಬದಲಾವಣೆ ನನ್ನಿಂದಲೇ ಆರಂಭ – ಗಾಂಧೀಜಿಯವರ ಪಾಠ, ಪದವಿ ಪೂರ್ವ ಶಿಕ್ಷಣ ವಿಭಾಗದ ವಿದ್ಯಾರ್ಥಿಗಳು ಈ ಮೂರು ವಿಷಯಗಳಲ್ಲಿ ಯಾವುದಾದರೂ ಒಂದು ವಿಷಯ ಕುರಿತು 900 ರಿಂದ 1000 ಪದಗಳು ಮೀರದಂತೆ ಪ್ರಬಂಧ ಬರೆಯಬೇಕು.
ಪದವಿ ಹಾಗೂ ಸ್ನಾತಕೋತ್ತರ ಪದವಿ ವಿಭಾಗದಲ್ಲಿ:
1) ಗಾಂಧೀಜಿ ಕಂಡ ನ್ಯಾಯಸಮ್ಮತ ರಾಜಕೀಯ ವ್ಯವಸ್ಥೆ, 2) ಗಾಂಧೀಜಿ ಮತ್ತು ಡಾ. ಬಿ.ಆರ್. ಅಂಬೇಡ್ಕರ್ – ತತ್ವಗಳ ಹೋಲಿಕೆ, 3) ಮೌಲ್ಯಾಧಾರಿತ ನಾಯಕತ್ವ ಹಾಗೂ ನೈತಿಕ ರಾಜಕಾರಣ – ಯುವಕರಿಗೆ ಗಾಂಧೀಜಿಯವರ ಪಾಠ. ಪದವಿ ಹಾಗೂ ಸ್ನಾತಕೋತ್ತರ ಪದವಿ ವಿಭಾಗದ ವಿದ್ಯಾರ್ಥಿಗಳು ಈ ಮೂರು ವಿಷಯಗಳಲ್ಲಿ ಯಾವುದಾದರೂ ಒಂದು ವಿಷಯ ಕುರಿತು 1400 ರಿಂದ 1500 ಪದಗಳು ಮೀರದಂತೆ ಪ್ರಬಂಧ ಬರೆಯಬೇಕು.
Information and Public Relations Department ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಎಲ್ಲಾ ಜಿಲ್ಲಾ ಕಚೇರಿಗಳು ರೊಳಗಾಗಿ ಜಿಲ್ಲಾಡಳಿತದ ಸಹಯೋಗದೊಂದಿಗೆ ದಿನಾಂಕ : 06-09-2025 ರೊಳಗಾಗಿ ಸ್ಪರ್ಧೆ ಏರ್ಪಡಿಸಿ ನಂತರ ಮೌಲ್ಯಮಾಪನ ಮಾಡಿ ದಿನಾಂಕ : 12-09-2025 ಒಳಗಾಗಿ ವಿಜೇತರ ವಿವರಗಳು ಹಾಗೂ ಪ್ರಬಂಧಗಳನ್ನು ಕೇಂದ್ರ ಕಚೇರಿಗೆ ಕಳುಹಿಸಬೇಕು. ಜಿಲ್ಲಾಮಟ್ಟದ ಪ್ರಥಮ ಬಹುಮಾನ ವಿಜೇತ ಪ್ರಬಂಧಗಳನ್ನು ರಾಜ್ಯಮಟ್ಟದಲ್ಲಿ ಮರುಮೌಲ್ಯಮಾಪನ ಮಾಡಿ. ರಾಜ್ಯಮಟ್ಟದ ಫಲಿತಾಂಶ ಘೋಷಿಸಲಾಗುವುದು.
ಪ್ರತಿ ವಿಭಾಗದಲ್ಲಿನ ಅತ್ಯುತ್ತಮವಾದ ಮೂರು (3) ಪ್ರಬಂಧಗಳಿಗೆ ಅಕ್ಟೋಬರ್ 02 ರಂದು ಜಿಲ್ಲಾ ಮಟ್ಟದ ಗಾಂಧೀ ಜಯಂತಿ ದಿನಾಚರಣೆ ಸಂದರ್ಭದಲ್ಲಿ ಬಹುಮಾನ ನೀಡಿ ಪ್ರಬಂಧ ರಚನೆಕಾರರನ್ನು ಗೌರವಿಸಲಾಗುವುದು.
ನಿಬಂಧನೆಗಳು :
ಪ್ರಬಂಧವು ಸಂಪೂರ್ಣವಾಗಿ ಸ್ವರಚಿತವಾಗಿರಬೇಕು. ಸ್ಪರ್ಧೆ ಏರ್ಪಡಿಸುವ ಸ್ಥಳದಲ್ಲಿಯೇ ಶುದ್ಧ ಕೈಬರಹದಲ್ಲಿ ಪ್ರಬಂಧ ಬರೆಯಬೇಕು. ಅಕರವಾಗಿ ಬಳಸಿದ ಪರಾಮರ್ಶನ / ಅಧಾರ ಗ್ರಂಥಗಳ ವಿವರಗಳನ್ನು ಪ್ರಬಂಧದ ಕೊನೆಯಲ್ಲಿ ನಮೂದಿಸಬೇಕು. ಆದರೆ, ಸ್ಪರ್ಧೆ ಏರ್ಪಡಿಸುವ ಸ್ಥಳದಲ್ಲಿ ಪರಾಮರ್ಶನ / ಆಧಾರ ಗ್ರಂಥಗಳು / ಮೊಬೈಲ್ ಗಳ ಬಳಕೆಗೆ ಅವಕಾಶವಿರುವುದಿಲ್ಲ. ಪ್ರಬಂಧಕಾರರ ಹೆಸರು, ವಿಳಾಸ ನಮೂದಿಸಿರಬೇಕು. ಪ್ರಬಂಧವು ಈ ಮೊದಲು ಎಲ್ಲಿಯೂ ಪ್ರಕಟವಾಗಿರಬಾರದು. ಆಯ್ದ ಪ್ರಬಂಧಗಳ ಪ್ರಕಟಣೆಯ ಹಕ್ಕನ್ನು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಕಾಯ್ದಿರಿಸಿಕೊಂಡಿರುತ್ತದೆ ಎಂದು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
BBMP Bangalore ಬಿಬಿಎಂಪಿ ಭ್ರಷ್ಠಾಚಾರದ ಬಗ್ಗೆ ನ್ಯಾ.ನಾಗಮೋಹನ ದಾಸ್ ವಿಚಾರಣಾ ಆಯೋಗದ ವರದಿ ಸಲ್ಲಿಕೆ
BBMP Bangalore ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ 2019-20 ರಿಂದ 2022-23 ರವರೆಗೆ ನಡೆದಿರುವ ಕಾಮಗಾರಿಗಳಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆದಿರುವ ಬಗ್ಗೆ ಸಂಪೂರ್ಣವಾದ ತನಿಖೆ ನಡೆಸಲು ರಚಿಸಲಾಗಿದ್ದ ನಿವೃತ್ತ ನ್ಯಾಯಮೂರ್ತಿಗಳಾದ ಹೆಚ್.ಎನ್.ನಾಗಮೋಹನ ದಾಸ್ ಅವರ ವಿಚಾರಣಾ ಆಯೋಗದ ತನಿಖಾ ವರದಿಯನ್ನು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಸ್ವೀಕರಿಸಿದರು.
BBMP Bangalore ಈ ತನಿಖಾ ವರದಿಯು ಅನುಬಂಧಗಳೊಂದಿಗೆ ಒಟ್ಟು 8,900 ಪುಟಗಳನ್ನು ಹೊಂದಿದ್ದು, ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕಾನೂನಿನಂತೆ ಕ್ರಮಕೈಗೊಳ್ಳಲು ಹಾಗೂ ಸುಧಾರಣಾ ಕ್ರಮಗಳನ್ನು ಕೈಗೊಳ್ಳಲು ಶಿಫಾರಸು ಮಾಡಿದ್ದಾರೆ.
D.K. Shivakumar ಕೃಷ್ಣಾ ಮೆಲ್ದಂಡೆ ಯೋಜನೆ ಹಂತ-3 ರ ಅನುಷ್ಠಾನಕ್ಕೆ ವಿವಿಧ ಪ್ರಕರಣಗಳ ಕುರಿತು ಸಚಿವರಿಂದ ಸಭೆ
D.K. Shivakumar ವಿಧಾನ ಸೌಧದ ಸಮ್ಮೇಳನ ಸಭಾಂಗಣದಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಅಧ್ಯಕ್ಷತೆಯಲ್ಲಿ ಕೃಷ್ಣಾ ಮೇಲ್ದಂಡೆ ಯೋಜನೆ ಹಂತ-3ರ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಭೂಸ್ವಾಧೀನ, ಪುನರ್ವತಿ ಮತ್ತು ಪುನರ್ ನಿರ್ಮಾಣ, ಭೂ ಪರಿಹಾರ ಹಾಗೂ ವಿವಿಧ ನ್ಯಾಯಾಲಯಗಳಲ್ಲಿ ಹೆಚ್ಚುವರಿ ಭೂಪರಿಹಾರ ಕೋರಿ ಸಲ್ಲಿಸಿರುವ ಪ್ರಕರಣಗಳ ಕುರಿತು ಸಭೆ ನಡೆಯಿತು.
D.K. Shivakumar ಈ ಸಭೆಯಲ್ಲಿ ಕಾನೂನು, ನ್ಯಾಯ, ಮಾನವ ಹಕ್ಕುಗಳು, ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಸಚಿವ ಎಚ್.ಕೆ ಪಾಟೀಲ, ಬೃಹತ್ ಕೈಗಾರಿಕಾ ಸಚಿವ ಎಂ.ಬಿ ಪಾಟೀಲ, ಅಬಕಾರಿ ಆರ್.ಬಿ.ತಿಮ್ಮಾಪೂರ ಸೇರಿದಂತೆ ಹಿರಿಯ ಅಧಿಕಾರಿಗಳು ಹಾಗೂ ಇತರೆ ಗಣ್ಯರು ಉಪಸ್ಥಿತರಿದ್ದರು.
Ganesha Chaturthi Festival ಮಲವಗೊಪ್ಪದಲ್ಲಿ “ಶಿವನ ಜೊತೆ ಭುವಿಗಿಳಿದ ಗಣಪ” ಗಣೇಶ ಮಂಟಪ ಅಲಂಕಾರ
Ganesha Chaturthi Festival ಧರ್ಮಸ್ಥಳದ ಮಂಜುನಾಥ ಸ್ವಾಮಿ ಹಾಗೂ ಅಣ್ಣಪ್ಪ ಸ್ವಾಮಿ ಎಲ್ಲರಿಗೂ ಕಾಪಾಡಲಿ. ಧರ್ಮವೂ ಉಳಿಯಲಿ. ಅಧರ್ಮವಾಗಿ ಮಾಡಿದ ಆರೋಪಗಳಿಗೆ ತಕ್ಕ ಶಾಸ್ತಿಯಾಗಲೀ, ಈ ಹಿನ್ನೆಲೆಯಲ್ಲಿ ಅಲಂಕರಿಸಲ್ಪಟ್ಟ ಗಣಪತಿ ಶಿವಮೊಗ್ಗದಲ್ಲಿ ಗಮನ ಸೆಳೆಯುತ್ತಿದೆ. ಮಲವಗೊಪ್ಪದ ಮೂರನೇ ತಿರುವಿನಲ್ಲಿ ಓಂ ಶ್ರೀ ಯುವಕರ ವಿದ್ಯಾ ಗಣಪತಿ ಸಂಘದವತಿಯಿಂದ ಪ್ರತಿಷ್ಠಾಪಿಸಲಾಗಿರುವ ತಂದೆ ಈಶ್ವರನ ಜೊತೆಗೆ ಭುವಿಗಿಳಿದು ಬಂದ ಗಣಪ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.
Chirantana Yoga and Music Trust ಚಿರಂತನ ಸಂಸ್ಥೆಯ 28 ನೇ ವಾರ್ಷಿಕೋತ್ಸವ ಸಾಧಕರಿಗೆ ಸನ್ಮಾನ
Chirantana Yoga and Music Trust 1997 ನೇ ಆಗಸ್ಟ್ 30 ಕ್ಕೆ ಸ್ಥಾಪನೆಯಾದ ಚಿರಂತನ ಯೋಗ ಮತ್ತು ಸಂಗೀತ ಟ್ರಸ್ಟ್ (ರಿ.,) ಶಿವಮೊಗ್ಗ ಕಳೆದ 28 ವರ್ಷಗಳಿಂದ ಮಕ್ಕಳು ಮತ್ತು ಮಹಿಳೆಯರಿಗಾಗಿ ಸಾಂಸ್ಕೃತಿಕ, ಶೈಕ್ಷಣಿಕ, ಧಾರ್ಮಿಕ ಹಾಗೂ ಯೋಗ ಪ್ರಾಣಾಯಾಮ ಧ್ಯಾನ ಕಾರ್ಯಕ್ರಮ ಗಳನ್ನು ಆಯೋಜಿಸುತ್ತ ಬಂದಿದೆ. Chirantana Yoga and Music Trust ಮಕ್ಕಳು ಮತ್ತು ಮಹಿಳೆಯರಿಗಾಗಿಯೇ ಮಹಿಳೆಯಿಂದ ಸ್ಥಾಪನೆಗೊಂಡ ಈ ಸಂಸ್ಥೆಯ 28 ನೇ ವಾರ್ಷಿಕೋತ್ಸವದ ಪ್ರಯುಕ್ತ ಸಾಧಕ ಗಾಯಕಿಯರಿಗೆ ಗೌರವ ಸಮರ್ಪಣೆ ಮಾಡುತ್ತಿದೆ. ಈ ವಾರ್ಷಿಕೋತ್ಸವ ಕಾರ್ಯಕ್ರಮ ಮಥುರಾ ಪ್ಯಾರಡೈಸ್ ಸಭಾಂಗಣದಲ್ಲಿ ದಿನಾಂಕ 31.8 .2025. ರ ಭಾನುವಾರ ಮಧ್ಯಾನ 4 ಗಂಟೆಗೆ ಪ್ರಾರಂಭವಾಗಲಿದೆ ಎಂದು ಸಂಸ್ಥೆಯ ಅಧ್ಯಕ್ಷರಾದ ಶ್ರೀಮತಿ ಶಾಂತ ಶೆಟ್ಟಿ ತಿಳಿಸಿದ್ದಾರೆ.
Ganesha Festival ಗೋವುಗಳ ರಕ್ಷಣೆಯಲ್ಲಿ ಗೋಪಾಲಕರ ಪಾತ್ರ ಮಹತ್ವವುಳ್ಳದ್ದು- ಜೆ.ಎಸ್.ಚಿದಾನಂದ ಗೌಡ
Ganesha chaturthi Festival ಕಲಿಯುಗದ ಕಾಮದೇನು ಎಂದು ಬಣ್ಣಿಸಲಾಗುವ ಗೋವಿಗೆ ಭಾರತೀಯ ಸಂಸ್ಕೃತಿಯಲ್ಲಿ ಪೂಜ್ಯನೀಯ ಗೌರವವಿದ್ದು, ಗೋವುಗಳ ಸೇವೆ ಮಾಡುವುದು ಪುಣ್ಯದ ಕಾರ್ಯವಾಗಿದೆ ಎಂದು ತಾಲೂಕು ಗೋ ಸಂರಕ್ಷಣಾ ಹೋರಾಟ ಸಮಿತಿ ಅಧ್ಯಕ್ಷ ಜೆ.ಎಸ್. ಚಿದಾನಂದಗೌಡ ಹೇಳಿದರು.
ಸೊರಬ ಪಟ್ಟಣದ ಶ್ರೀ ರಂಗನಾಥ ದೇವಸ್ಥಾನದ ಆವರಣದಲ್ಲಿ ತಾಲೂಕು ಗೋ ಸಂರಕ್ಷಣಾ ಹೋರಾಟ ಸಮಿತಿಯಿಂದ 20ನೇ ವರ್ಷದ ಗಣೇಶೋತ್ಸವ ಅಂಗವಾಗಿ ಹಮ್ಮಿಕೊಂಡ ಗೋಪಾಲಕರು ಹಾಗೂ ವಿವಿಧ ಕ್ಷೇತ್ರಗಳ ಸಾಧಕರ ಸನ್ಮಾನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಗೋವುಗಳ ರಕ್ಷಣೆಗೆ ಗೋಪಾಲಕರ ಪಾತ್ರ ಮಹತ್ವದ್ದಾಗಿದೆ. ಮನುಷ್ಯನಿಗೆ ಜೀವನ ಪೂರ್ತಿ ಹಾಲುಣಿಸುವ ಗೋವಿಗೆ ಮಹಾತಾಯಿ ಎಂದು ಕರೆಯುತ್ತೇವೆ. ಸಮಿತಿಯಿಂದ ಗೋವುಗಳ ರಕ್ಷಣೆ ಜೊತೆಗೆ ಗಣೇಶೋತ್ಸವದ ಸಂದರ್ಭದಲ್ಲಿ ಗೋಪಾಲಕರು, ಹೈನುಗಾರಿಕೆಯಲ್ಲಿ ತೊಡಗಿದವರು ಮತ್ತು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರನ್ನು ಗೌರವಿಸುವ ಕೆಲಸದ ಜೊತೆಗೆ ವರ್ಷಪೂರ್ತಿ ಸಾರ್ವಜನಿಕರಲ್ಲಿ ಗೋವಿನ ಕುರಿತು ಜಾಗೃತಿ ಮೂಡಿಸುವ ಕೆಲಸವನ್ನು ಸಮಿತಿಯಿಂದ ಮಾಡಲಾಗುತ್ತಿದೆ ಎಂದರು.
Ganesha Chaturthi Festival ಸಮಿತಿಯ ಗೌರವಾಧ್ಯಕ್ಷ ಕೆ. ಪ್ರಭಾಕರ ರಾಯ್ಕರ್ ಮಾತನಾಡಿ, ಗೋ ಸಂರಕ್ಷಣಾ ಹೋರಾಟ ಸಮಿತಯಿಂದ ಕಳೆದ 25 ವರ್ಷಗಳಿಂದ ಗೋವುಗಳ ರಕ್ಷಣೆ ಕಾರ್ಯ ಮಾಡಲಾಗುತ್ತಿದೆ. ಕಾಯಕ ನಿಷ್ಠೆಯಿಂದ ಕರ್ತವ್ಯ ನಿರ್ವಹಿಸಿದಾಗ ವೃತ್ತಿಯಲ್ಲಿ ಯಶಸ್ಸು ಕಾಣಲು ಸಾಧ್ಯವಾಗುತ್ತದೆ. ಕೆಲಸ ಯಾವುದೇ ಇರಲಿ ಪ್ರಾಮಾಣಿಕತೆಯಿಂದ ಇದ್ದಾಗ ಸಮಾಜದಲ್ಲಿಯೂ ಗೌರವ ಲಭಿಸುತ್ತದೆ. ಪ್ರಸಕ್ತ ವರ್ಷ ಚಾಲಕ, ಬಸ್ ನಿರ್ವಾಹಕ, ಹೋಟೆಲ್ ಉದ್ಯಮಿ ಹಾಗೂ ಗೋಪಾಲಕರನ್ನು ಸನ್ಮಾನಿಸಲಾಗುತ್ತಿದೆ ಎಂದರು.
ಇದೇ ಸಂದರ್ಭದಲ್ಲಿ ಚಾಲಕ ಎಸ್. ರಾಮಣ್ಣ, ಬಸ್ ನಿರ್ವಾಹಕ ಕೆ. ವೀರಭದ್ರಪ್ಪ, ಹಿರಿಯ ಹೋಟೆಲ್ ಉದ್ಯಮಿ ನಾರಾಯಣ ಭಟ್, ಗೋಪಾಲಕ ಹಾಗೂ ಹೈನುಗಾರಿಕೆಯಲ್ಲಿ ತೊಡಗಿರುವ ಯುವಕ ಜೆ.ವಿ. ಗುರುರಾಜ್ ಪಾಟೀಲ್ ಅವರನ್ನು ಸನ್ಮಾನಿಸಲಾಯಿತು.
ಸಭಾ ಕಾರ್ಯಕ್ರಮದ ನಂತರ ಶ್ರೀ ಗಣೇಶ ಮೂರ್ತಿಗೆ ೨೧ ತೆಂಗಿನ ಕಾಯಿ ಒಡೆದು ವಿಶೇಷ ಪೂಜೆ ಸಲ್ಲಿಸಿ, ಮೆರವಣಿಗೆ ನಡೆಸುವ ಮೂಲಕ ಪವಿತ್ರ ದಂಡಾವತಿ ನದಿಯಲ್ಲಿ ನಿಮಜ್ಜನ ನಡೆಸಲಾಯಿತು.
ಸಮಿತಿಯ ಗೌರವಾಧ್ಯಕ್ಷ ಕೆ. ಪ್ರಭಾಕರ ರಾಯ್ಕರ್, ಗೌರವ ಸದಸ್ಯ ಕೃಷ್ಣಮೂರ್ತಿ ಭಾವೆ, ಪ್ರಧಾನ ಕಾರ್ಯದರ್ಶಿ ವೀರೇಂದ್ರ ಗೌಡ ಜೇಡಗೇರಿ, ಉಪಾಧ್ಯಕ್ಷ ನಾಗಪ್ಪ ಎಸ್.ಬಿ. ಬಿದರಗೇರಿ, ಖಜಾಂಚಿ ರಾಜೇಂದ್ರ ಜೈನ್, ಸಂಘಟನಾ ಕಾರ್ಯದರ್ಶಿ ಯು.ಎಸ್. ಶರತ್ ಸ್ವಾಮಿ, ಕಾರ್ಯದರ್ಶಿ ಅಭಿ ಹೊಯ್ಸಳ, ಸಹ ಕಾರ್ಯದರ್ಶಿ ವೀರಭದ್ರ, ಸಿಂಪಿ ಸಮಾಜದ ಉಪಾಧ್ಯಕ್ಷ ಅನಿಲ್ ಕುಮಾರ್ ಬಾಂಬೋರೆ, ವಾಹನ ಚಾಲಕರ ಸಂಘದ ಅಧ್ಯಕ್ಷ ದಾನಶೇಖರ್ ಗುಂಡಶೆಟ್ಟಿಕೊಪ್ಪ, ಅಲೆಗ್ಸಾಂಡರ್ ಡಿಸೋಜಾ, ಬಸವರಾಜ ಹಳೇಸೊರಬ, ಚಂದ್ರಕಾAತ ತವನಂದಿ, ಭೂಪಾಲ್, ಸಮಿತಿಯ ಕಾರ್ಯಕರ್ತರಾದ ಉದ್ಯೋತ್‌ರಾಜ್ ಇಂದ್ರ ಜೈನ್, ಅಭಿಷೇಕ್ ಗೌಡ, ಚವನ್ ರಾಜ್ ಗೌಡ, ನಮಾಮಿರಾಜ್ ಇಂದ್ರ ಜೈನ್, ಕೌಶಿಕ್ ಗೌಡ ಸೇರಿದಂತೆ ಇತರರಿದ್ದರು.
Shankara Eye Hospital ಇದುವರೆಗೆ ಶಂಕರ ಕಣ್ಣಿನ ಆಸ್ಪತ್ರೆಯಿಂದ 5000 ನೇತ್ರ ಜೋಡಣೆ ಕಾರ್ಯವಾಗಿದೆ- ಡಾ.ಮಹೇಶ್
Shankara Eye Hospital ಪ್ರತಿಯೊಬ್ಬರೂ ಮರಣದ ನಂತರ ಕಣ್ಣುಗಳನ್ನು ದಾನ ಮಾಡಲು ಮುಂದಾಗಬೇಕು. ಇದರಿಂದ ಇನ್ನೊಬ್ಬರ ಬದುಕಿನಲ್ಲಿ ಬೆಳಕು ಮೂಡುತ್ತದೆ ಎಂದು ಶಂಕರ ಕಣ್ಣಿನ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ. ಮಹೇಶ್ ಹೇಳಿದರು.
40ನೇ ರಾಷ್ಟ್ರೀಯ ನೇತ್ರದಾನ ಪಾಕ್ಷಿಕ ದಿನಾಚರಣೆ ಪ್ರಯುಕ್ತ ಶಂಕರ ಕಣ್ಣಿನ ಆಸ್ಪತ್ರೆಯ ಆವರಣದಲ್ಲಿ ನೇತ್ರದಾನದ ಬಗ್ಗೆ ಜಾಗೃತಿ ಮತ್ತು ನೇತ್ರದಾನ ಮಾಡಲು ಮನವೊಲಿಸಿದ ವಿವಿಧ ಸಂಘಟನೆಗಳ ಪ್ರಮುಖರಿಗೆ ಆಯೋಜಿಸಿದ್ದ ಗೌರವ ಸಮರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ನಮ್ಮ ಕಣ್ಣುಗಳನ್ನು ಸಕಾಲದಲ್ಲಿ ನಾವು ಪರೀಕ್ಷೆ ಮಾಡಿಕೊಳ್ಳಬೇಕು. ಎಲ್ಲ ವಯಸ್ಸಿನವರು ಕಣ್ಣುಗಳನ್ನು ದಾನ ಮಾಡಬಹುದು. ನಮ್ಮಲ್ಲಿ ಒಂದು ವರ್ಷದಿಂದ ಹಿಡಿದು 94 ವರ್ಷದ ವಯೋಮಿತಿಯವರು ಕಣ್ಣುಗಳನ್ನು ದಾನ ಮಾಡಿದ್ದಾರೆ. ನೀವು ಮಾಡುವ ಪವಿತ್ರವಾದ ನೇತ್ರದಾನ ನಾಲ್ಕು ಅಂಧರ ಬಾಳಿಗೆ ಬೆಳಕಾಗುತ್ತದೆ. ಈ ನಿಟ್ಟಿನಲ್ಲಿ ಈಗಾಗಲೇ ಶಂಕರ ಕಣ್ಣಿನ ಆಸ್ಪತ್ರೆಯವರು ಎಲ್ಲರ ಸಹಕಾರದಿಂದ ಈವರೆಗೂ 2500ಕ್ಕಿಂತ ಹೆಚ್ಚು ನೇತ್ರಗಳನ್ನು ಸಂಗ್ರಹ ಮಾಡಿ ಜೋಡಿಸುವಲ್ಲಿ ಯಶಸ್ವಿಯಾಗಿದೆ ಎಂದು ತಿಳಿಸಿದರು.
ಡಾ. ರೂಪಶ್ರೀ ಮಾತನಾಡಿ, ಪ್ರತಿಯೊಬ್ಬರೂ ನೇತ್ರದಾನ ಮಾಡುವ ಇಚ್ಛೆಯನ್ನು ಹತ್ತಿರದ ಸಂಬಂಧಿಕರಿಗೆ ಮೊದಲೇ ತಿಳಿಸಿರಬೇಕು. ನೇತ್ರದಾನ ಒಂದು ಪವಿತ್ರವಾದ ದಾನ. ಆದ್ದರಿಂದ ಇಂದೇ ಎಲ್ಲರೂ ನಮ್ಮ ಮರಣದ ನಂತರ ನೇತ್ರದಾನವನ್ನು ಮಾಡುತ್ತೇವೆ ಎಂದು ಪ್ರತಿಜ್ಞೆ ಮಾಡೋಣ ಎಂದರು.
ಡಾ. ರಾಜಶೇಖರ್ ಮಾತನಾಡಿ, ನೇತ್ರದಾನಕ್ಕೆ ರಕ್ತದ ಒತ್ತಡ, ಸಕ್ಕರೆ ಕಾಯಿಲೆ, ಕಣ್ಣಿನಲ್ಲಿ ಪೊರೆ, ಕಣ್ಣಿನ ಶಸ್ತ್ರಚಿಕಿತ್ಸೆ ಮತ್ತು ಕನ್ನಡಕ ಧರಿಸುವುದಾಗಲಿ ಯಾವುದೇ ಇದ್ದರೂ ಸಹ ನೇತ್ರದಾನಕ್ಕೆ ಅಡ್ಡಿಯಾಗುವುದಿಲ್ಲ. ಮುಖದ ಆಕಾರವೂ ಕೂಡ ಬದಲಾಗುವುದಿಲ್ಲ. ಆದ್ದರಿಂದ ನಾವೆಲ್ಲರೂ ನೇತ್ರದಾನ ಮಾಡೋಣ ಎಂದು ತಿಳಿಸಿದರು.
Shankara Eye Hospital ಮುಖ್ಯ ಆಡಳಿತಾಧಿಕಾರಿ ಗಾಯತ್ರಿ ಶಾಂತರಾಮ್ ಮಾತನಾಡಿ, ನೇತ್ರದಾನದ ಬಗ್ಗೆ ಏನಾದರೂ ಅನುಮಾನಗಳಿದ್ದರೆ ಹಾಗೂ ಸಮಸ್ಯೆಗಳಿದ್ದರೆ ಅವುಗಳನ್ನು ನಾವು ಪರಿಹರಿಸುತ್ತೇವೆ. ಸಮಾಜದಲ್ಲಿ ನೇತ್ರದಾನಿಗಳು ಹೆಚ್ಚಾಗಬೇಕು. 25 ಲಕ್ಷಕ್ಕೂ ಹೆಚ್ಚು ಭಾರತೀಯರು ದೃಷ್ಟಿಹೀನರಾಗಿದ್ದಾರೆ. ಅವರ ಜೀವನಕ್ಕೆ ಬೆಳಕಾಗೋಣ, ನೇತ್ರದಾನದ ಸಂದೇಶವನ್ನು ಎಲ್ಲೆಡೆ ಪಸರಿಸೋಣ ಎಂದರು.
ಗುಡ್ ಲಕ್ ಆರೈಕೆ ನಿರ್ದೇಶಕ ಜಿ.ವಿಜಯಕುಮಾರ್ ಹಾಗೂ ಪಂಚಾಕ್ಷರಿ ಹಿರೇಮಠ್, ಹಿರಿಯ ಆಡಳಿತ ಅಧಿಕಾರಿ ಅನಿತಾ, ಚಿತ್ರದುರ್ಗದ ಬಸವೇಶ್ವರ ಪುನರ್ಜೋತಿ ಐ ಬ್ಯಾಂಕ್ ಪದಾಧಿಕಾರಿಗಳು ಹಾಗೂ ರೆಡ್ ಕ್ರಾಸ್ ಮತ್ತು ರೋಟರಿಯ ಪದಾಧಿಕಾರಿಗಳಿಗೆ ವಿವಿಧ ಸಂಘಟನೆಯ ಅಧ್ಯಕ್ಷರು ಹಾಗೂ ಪದಾಧಿಕಾರಿಗಳಿಗೆ ಗೌರವ ಸಮರ್ಪಿಸಿ ಅಭಿನಂದಿಸಲಾಯಿತು. ಶಂಕರ ಕಣ್ಣಿನ ಆಸ್ಪತ್ರೆಯ ಗಾಯಿತ್ರಿ.ಟಿ.ಎಸ್. ಹಾಗೂ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.
