Monday, February 9, 2026
Monday, February 9, 2026
Home Blog Page 1832

ಓಮಿಕ್ರಾನ್ ಸೋಂಕು: ವಿಶೇಷ ಮಾರ್ಗಸೂಚಿ

0

ಕೋವಿಡ್ ರೂಪಾಂತರ ತಳಿ ಓಮಿಕ್ರಾನ್ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಳ್ಳುವಾಗ ಯಾವೆಲ್ಲ ಅಂಶಗಳನ್ನು ಪಾಲಿಸಬೇಕು ಎಂಬುದರ ಬಗ್ಗೆ ಕರ್ನಾಟಕ ಆರೋಗ್ಯ ಇಲಾಖೆ ಮಾರ್ಗಸೂಚಿ ಹೊರಡಿಸಿದೆ.

ಈ ಮಾರ್ಗಸೂಚಿಯ ಪ್ರಕಾರ ಯಾವುದೇ ರೋಗ ಲಕ್ಷಣಗಳು ರೋಗಿಯಲ್ಲಿ ಕಂಡು ಬರದೇ ಹೋದರೆ ಹತ್ತು ದಿನಕ್ಕೆ ಆಸ್ಪತ್ರೆಯಿಂದ ಬಿಡುಗಡೆ ಮಾಡಬಹುದಾಗಿದೆ.

ಬಿಡುಗಡೆಗೊಳ್ಳುವ ಮೂರು ದಿನದ ಮುಂಚೆ ಯಾವುದೇ ರೀತಿಯ ಜ್ವರ ಅಥವಾ ಯಾವುದೇ ರೋಗ ಲಕ್ಷಣಗಳು ಇರಬಾರದು. ಆಕ್ಸಿಜನ್ ಬೆಂಬಲ ಇಲ್ಲದೆ ನಾಲ್ಕು ದಿನಗಳ ಕಾಲ ಶೇ.95ರಷ್ಟು ಆಕ್ಸಿಜನ್ ಲೆವೆಲ್ ಇದ್ದರೆ ಡಿಸ್ಚಾರ್ಜ್ ಮಾಡಬಹುದು ಎಂದು ಕರ್ನಾಟಕ ರಾಜ್ಯ ಆರೋಗ್ಯ ಇಲಾಖೆಯ ಆಯುಕ್ತರು ಆದೇಶ ಹೊರಡಿಸಿದ್ದಾರೆ.

24 ಗಂಟೆ ಅವಧಿಯಲ್ಲಿ ಈ ಎರಡು ಆರ್ ಟಿಪಿಸಿಆರ್ ಪರೀಕ್ಷೆಯಲ್ಲಿ ನೆಗೆಟಿವ್ ವರದಿ ಬಂದರೆ ಅಂತವರನ್ನು ಮಾತ್ರ ಆಸ್ಪತ್ರೆಯಿಂದ ಬಿಡುಗಡೆ ಮಾಡಬಹುದಾಗಿದೆ. ಬಿಡುಗಡೆಗೊಂಡ ವ್ಯಕ್ತಿ, ಒಂದು ವಾರದ ಅವಧಿಗೆ ಹೋಂ ಕ್ವಾರಂಟೈನ್ ನಲ್ಲಿ ಇರಬೇಕು.

ನಂತರ ರೋಗ ಲಕ್ಷಣಗಳ ಬಗ್ಗೆ ತಾವೇ ನಿಗಾವಹಿಸಿಕೊಳ್ಳಬೇಕು. ಅದಕ್ಕೆ ಸಂಬಂಧಿಸಿದ ಮಾಹಿತಿ ಸಂಗ್ರಹಿಸಲು ಅಧಿಕಾರಿಗಳಿಗೆ ಸೂಚಿಸಲಾಗಿರುತ್ತದೆ. ಹೋಂ ಕ್ವಾರಂಟೈನ್ ನಲ್ಲಿದ್ದು ಆರು ದಿನ ಆರ್ ಟಿಪಿಸಿಆರ್ ಪರೀಕ್ಷೆ ಮಾಡಿಸಿದಾಗ ನೆಗೆಟಿವ್ ಬಂದರೆ ಅಂತವರ ಕ್ವಾರಂಟೈನ್ ಅನ್ನು ಕೊನೆಗೊಳಿಸ ಬಹುದು ಎಂದು ಸೂಚಿಸಲಾಗಿದೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

ಕೆಎಸ್ ಡಿಸಿ ಮತ್ತು ಮಾನ್ಸ್ಟರ್ ಕಂಪನಿ ಒಡಂಬಡಿಕೆ

0

ರಾಜ್ಯದಲ್ಲಿರುವ ಕೌಶಲ್ಯಪೂರ್ಣ ಉದ್ಯೋಗಾಕಾಂಕ್ಷಿಗಳಿಗೆ ಲಭ್ಯ ಅವಕಾಶಗಳ ಬಗ್ಗೆ ಮಾಹಿತಿ ನೀಡುವ ಜತೆಗೆ ಉದ್ಯೋಗ ಗಿಟ್ಟಿಸಿಕೊಳ್ಳಲು ನೆರವು ನೀಡುವ ಗುರಿಯೊಂದಿಗೆ ಕರ್ನಾಟಕ ಕೌಶಲ್ಯಾಭಿವೃದ್ಧಿ ನಿಗಮ (ಕೆಎಸ್ಡಿಸಿ) ಮತ್ತು ಮಾನ್ಸ್ಟರ್.ಕಾಂ ಕಂಪನಿಗಳು ಶುಕ್ರವಾರ ಒಡಂಬಡಿಕೆಗೆ ಸಹಿ ಹಾಕಿದವು.

ವಿಕಾಸಸೌಧದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಉನ್ನತ ಶಿಕ್ಷಣ ಮತ್ತು ಕೌಶಲ್ಯಾಭಿವೃದ್ಧಿ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರು ‌’ಉದ್ಯೋಗ ಸೃಷ್ಟಿಗೆ ರಾಜ್ಯ ಸರಕಾರವು ಸಾಕಷ್ಟು ಹಣವನ್ನು ವಿನಿಯೋಗಿಸುತ್ತಿದ್ದು, ನಿರುದ್ಯೋಗ ನಿವಾರಣೆಯೇ ಆದ್ಯತೆಯಾಗಿದೆ. ದೇಶದ ಸಂಘಟಿತ ವಲಯದಲ್ಲಿ 6 ಲಕ್ಷಕ್ಕೂ ಹೆಚ್ಚು ಮತ್ತು ರಾಜ್ಯವೊಂದರಲ್ಲೇ 2.30 ಲಕ್ಷಕ್ಕೂ ಹೆಚ್ಚು ಉದ್ಯೋಗಾವಕಾಶಗಳಿವೆ. ಉದ್ಯೋಗ ಸೃಷ್ಟಿಯ ಮೂಲಕ ಪ್ರತಿಭಾವಂತರು ವಿದೇಶಗಳಿಗೆ ವಲಸೆ ಹೋಗುವುದನ್ನು ತಡೆಯುವುದು ನಮ್ಮ ಗುರಿಗಳಲ್ಲಿ ಒಂದಾಗಿದೆ’ ಎಂದರು.

ಒಪ್ಪಂದದಂತೆ ಕೆಎಸ್ಡಿಸಿ ಮತ್ತು ಮಾನ್ಸ್ಟರ್ ಕಂಪನಿ ಪರಸ್ಪರ ಲಿಂಕ್ ಗಳನ್ನು ಹಂಚಿಕೊಳ್ಳಲಿವೆ. ಮಿಗಿಲಾಗಿ ಮಾನ್ಸ್ಟರ್ ಕಂಪನಿಯು ಪ್ರತೀ ತಿಂಗಳು ಸಮೀಕ್ಷೆ ನಡೆಸುವ ಮೂಲಕ ಯಾವ್ಯಾವ ಕ್ಷೇತ್ರಗಳಲ್ಲಿ ಎಷ್ಟೆಷ್ಟು ಉದ್ಯೋಗಗಳಿವೆ ಎನ್ನುವುದನ್ನು ಪಟ್ಟಿ ಮಾಡುತ್ತದೆ. ಇದರ ಆಧಾರದ ಮೇಲೆ ಕೌಶಲ್ಯಾಭಿವೃದ್ಧಿ ನಿಗಮವು ತರಬೇತಿಯ ಸ್ವರೂಪವನ್ನು ನಿರ್ಧರಿಸುತ್ತದೆ ಎಂದು ಅವರು ವಿವರಿಸಿದರು.

ಈ ಒಡಂಬಡಿಕೆಯ ಮೂಲಕ 1.86 ಲಕ್ಷಕ್ಕೂ ಹೆಚ್ಚು ಕೌಶಲ್ಯಪೂರ್ಣ ಉದ್ಯೋಗಾಕಾಂಕ್ಷಿಗಳಿಗೆ ನೆರವು ಸಿಗಲಿದೆ. ಅಲ್ಲದೆ, ಈ ಅಭ್ಯರ್ಥಿಗಳಿಗೆ ಮಾನ್ಸ್ಟರ್.ಕಾಂ ಕಂಪನಿಯು ವಿವಿಧೆಡೆಗಳಲ್ಲಿ ನಡೆಸುವ ಟ್ರಯಂಫ್, ಆಸ್ಪೈರ್, ವೆಲಾಸಿಟಿ ಮುಂತಾದ ನೇಮಕಾತಿ ಮೇಳಗಳಲ್ಲಿ ವಿಶೇಷ ಪ್ರವೇಶಾವಕಾಶ ಲಭ್ಯವಾಗಲಿದೆ. ಅಲ್ಲದೆ, ಮಾನ್ಸ್ಟರ್ ಕಂಪನಿಯ ಜ್ಞಾನ ಸಂಪನ್ಮೂಲಗಳಾದ ವೆಬಿನಾರ್, ಉದ್ಯೋಗ ಸೂಚ್ಯಂಕ ಮತ್ತು ಜ್ಞಾನ ಕೇಂದ್ರಗಳ ನೆರವೂ ದೊರೆಯಲಿದೆ ಅವರು ತಿಳಿಸಿದರು.

ರಾಜ್ಯದಲ್ಲಿ ಸದ್ಯಕ್ಕೆ 11.74 ಲಕ್ಷಕ್ಕೂ ಹೆಚ್ಚು ಉದ್ಯೋಗಾಕಾಂಕ್ಷಿಗಳು ಸೂಕ್ತ ಉದ್ಯೋಗಾವಕಾಶಗಳನ್ನು ಅರಸುತ್ತಿದ್ದು, ನೋಂದಾಯಿಸಿಕೊಂಡಿದ್ದಾರೆ. ಇವರೆಲ್ಲರಿಗೂ ಇನ್ನುಮುಂದೆ ಮಾನ್ಸ್ಟರ್ ಕಂಪನಿಯ ವೃತ್ತಿಸಂಬಂಧಿ ಸೇವೆಗಳು ಸಿಕ್ಕಲಿವೆ. ಈ ಸೇವೆಗಳಲ್ಲಿ ಉದ್ಯೋಗ ಅಂದಾಜು ಪರೀಕ್ಷೆಗಳು ಮುಂತಾದವು ಲಭ್ಯವಿವೆ ಎಂದು ಸಚಿವರು ನುಡಿದರು.

ಇದೇ ಸಂದರ್ಭದಲ್ಲಿ ಮಾತನಾಡಿದ ಕಂಪನಿಯ ಸಿಇಒ ಶೇಖರ್ ಗರೀಸಾ, ಈ ಒಡಂಬಡಿಕೆಯಿಂದಾಗಿ ಉದ್ಯೋಗಾಕಾಂಕ್ಷಿಗಳಿಗೆ ಮಾಹಿತಿ ನೀಡುವುದರ ಜತೆಗೆ ಉದ್ಯಮಗಳ ಅಗತ್ಯಕ್ಕೆ ತಕ್ಕಂತೆ ಅವರಿಗೆ ಕೌಶಲ್ಯಗಳನ್ನು ಪೂರೈಸಬಹುದು; ಅಲ್ಲದೆ, ಶಿಕ್ಷಣ ಸಂಸ್ಥೆಗಳನ್ನು ನೇರವಾಗಿ ಉದ್ದಿಮೆಗಳೊಂದಿಗೆ ಬೆಸೆಯಲಾಗುವುದು ಎಂದು ನುಡಿದರು.

ಕಾರ್ಯಕ್ರಮದಲ್ಲಿ ರಾಜ್ಯ ಕೌಶಲ್ಯಾಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಅಶ್ವಿನ್ ಗೌಡ ಉಪಸ್ಥಿತರಿದ್ದರು.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

ಜಯಲಲಿತಾ ಅಧಿಕೃತ ನಿವಾಸ: ಸಹೋದರನ ಮಕ್ಕಳಿಗೆ

0

ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ದಿ. ಜಯಲಲಿತಾ ಅವರ ನಿವಾಸವನ್ನು ಸ್ವಾಧೀನಕ್ಕೆ ಜಯ ಅವರ ಸಹೋದರನ ಮಕ್ಕಳು ತೆಗೆದುಕೊಂಡಿದ್ದಾರೆ.

ಸುದೀರ್ಘವಾಗಿ ಜಯಾ ಅವರ ಆಸ್ತಿ ವಿವಾದ ನಡೆಯುತ್ತಿತ್ತು. ಪ್ರಸ್ತುತ ಈ ಕಾನೂನು ಹೋರಾಟಕ್ಕೆ ತೆರೆಬಿದ್ದಿದೆ. ಪೊಯೆಸ್ ಗಾರ್ಡನ್ ನಲ್ಲಿರುವ ನಿವಾಸ ‘ವೇದ ನಿಲಯಂ’ ಅನ್ನು ಜಯಾ ಅವರ ಸಹೋದರ ಜಯಕುಮಾರ್ ಅವರ ಮಕ್ಕಳಾದ ದೀಪ ಹಾಗೂ ದೀಪಕ್ ಅವರು ತಮ್ಮ ಸ್ವಾಧೀನಕ್ಕೆ ಪಡೆದು ಕೊಂಡಿದ್ದಾರೆ.

ಚೆನ್ನೈನ ಜಿಲ್ಲಾಧಿಕಾರಿ ಜೆ. ವಿಜಯ್ ರಾಣಿ ಅವರು
ಅಧಿಕೃತವಾಗಿ ಬಂಗಲೆಯ ಕೀಲಿಕೈ ಅನ್ನು ದೀಪಾ ಮತ್ತು ದೀಪಕ್ ಅವರಿಗೆ ಒಪ್ಪಿಸಿದ್ದಾರೆ.

ಮದ್ರಾಸ್ ಹೈಕೋರ್ಟ್ ನ ಏಕಸದಸ್ಯ ಪೀಠವು ನ.24ರಂದು ನೀಡಿದ ಆದೇಶ ಅನ್ವಯ ಕಾನೂನುಬದ್ಧ ವಾರಸುದಾರರಿಗೆ ಜಯಲಲಿತಾ ಅವರ ಆಸ್ತಿಯ ಒಡೆತನ ನೀಡಲಾಗಿದೆ. ಈ ನಿವಾಸ ಜಯಕುಮಾರ್ ಅವರ ಮಕ್ಕಳಿಗೆ ಸೇರಬೇಕೆಂದು ಕೋರ್ಟ್ ಹೇಳಿತ್ತು. ಆ ಮೂಲಕ ಈ ಮನೆಯನ್ನು ವಶಕ್ಕೆ ಪಡೆಯುವ ಎಐಎಡಿಎಂಕೆ ಪ್ರಯತ್ನಕ್ಕೆ ನ್ಯಾಯಾಲಯ ತಡೆ ನೀಡಿತ್ತು.

ಇದು ಸಾಧಾರಣ ಗೆಲುವಲ್ಲ, ಅಸಾಧಾರಣ ಗೆಲುವು. ನಮ್ಮ ಬಾಲ್ಯದ ನೆನಪುಗಳು ಮತ್ತು ಜಯಲಲಿತಾ ಅವರೊಂದಿಗೆ ಕಳೆದ ಕ್ಷಣಗಳ ನೆನಪುಗಳನ್ನು ಹೊಂದಿರುವ ಮನೆ ಕೊನೆಗೂ ನಮಗೆ ಸೇರಿದೆ ಎಂದು ದೀಪಾ ಹಾಗೂ ದೀಪಕ್ ತಮ್ಮ ಸಂತೋಷವನ್ನು ವ್ಯಕ್ತಪಡಿಸಿದ್ದಾರೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

ಐಐಎಸ್ಸಿ ಬಗ್ಗೆ ಹೈಕೋರ್ಟ್ ಅಸಮಾಧಾನ

0

ಬೆಂಗಳೂರಿನ ಕಾಮಾಕ್ಷಿಪಾಳ್ಯದ ಕೈಗಾರಿಕಾ ಪ್ರದೇಶದಲ್ಲಿನ ಮಾಲಿನ್ಯಕ್ಕೆ ಸಂಬಂಧ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಭಾರತೀಯ ವಿಜ್ಞಾನ ಸಂಸ್ಥೆಯು ಅತ್ಯಂತ ದುಬಾರಿ ಸಂಸ್ಥೆಯಾಗಿದೆ. ಕೇವಲ ನೀರಿನ ಗುಣಮಟ್ಟದ ಪರಿಶೀಲನೆಗಾಗಿ 20ಲಕ್ಷರೂ ಕೇಳಿರುವ ಬಗ್ಗೆ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ಅವರು ಬೇಸರ ವ್ಯಕ್ತಪಡಿಸಿದ್ದಾರೆ.

ಈ ಪ್ರಕರಣದ ವಿಚಾರಣೆಯು ಸಿಜೆ ನೇತೃತ್ವದ ನ್ಯಾಯಪೀಠದ ಮುಂದೆ ನಿವಾಸಿಗಳ ಪರವಾಗಿ ಮಂಡಿಸಿದ ಸುಪ್ರೀಂಕೋರ್ಟ್ನ ಹಿರಿಯ ನ್ಯಾಯವಾದಿ ಪ್ರಶಾಂತ್ ಭೂಷಣ್ “ಮಾಲಿನ್ಯದ ಬಗ್ಗೆ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ನೀಡಿರುವ ವರದಿಗಳಲ್ಲಿ ಸಾಕಷ್ಟು ವ್ಯತ್ಯಾಸಗಳಿವೆ ಹಾಗಾಗಿ ಯಾವುದಾದರೂ ಮೂರನೇ ಏಜೆನ್ಸಿಗೆ ನೀಡುವುದು ಒಳ್ಳೆಯದು. ಐಐಎಸ್ಸಿಗೆ ಬೇಕಾದರೆ ವಹಿಸಬಹುದು” ಎಂದು ಸಲಹೆ ನೀಡಿದರು.

ಪ್ರಶಾಂತ್ ಭೂಷಣ್ ಅವರ ಈ ಸಲಹೆಗೆ ಸಿಜೆ “ಐಐಎಸ್ಸಿ ತುಂಬಾ ದುಬಾರಿ. ಇತ್ತೀಚೆಗೆ ಕೇವಲ ನೀರಿನ ಗುಣಮಟ್ಟದ ಪರಿಶೀಲನೆಗೆ 20ಲಕ್ಷರೂ ಪ್ರಸ್ತಾವನೆ ಕಳುಹಿಸಿದೆ. ಅದೂ ಮುಂಗಡವಾಗಿ ಹಣ ನೀಡಬೇಕಂತೆ. ಹಾಗಾಗಿ ಆ ಸಂಸ್ಥೆಯನ್ನು ಬಿಟ್ಟು ಬಿಡಿ” ಎಂದು ಮೌಖಿಕವಾಗಿ ಹೇಳಿದೆ.

ಕಳೆದ ವಾರ ನಡೆದ ಪ್ರಕರಣವೊಂದರ ವಿಚಾರಣೆ ವೇಳೆಯಲೂ ಸಿಜೆ “ಐಐಎಸ್ಸಿ ಬಗ್ಗೆ ನಮಗೆ ಯಾವುದೇ ಒಲವು ಉಳಿದಿಲ್ಲ. ಮಂಗಳೂರಿನ ಪಚ್ಚನಾಡಿ ಘನತ್ಯಾಜ್ಯ ಘಟಕದಿಂದ ಕುಡಿಯುವ ನೀರು ಕಲುಷಿತಗೊಂಡಿರುವುದಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಅದನ್ನು ನೋಡಿದ್ದೇವೆ. ನಮ್ಮ ದೃಷ್ಟಿಯಲ್ಲಿ ಐಐಎಸ್ಸಿ ವಿಶ್ವಾಸಾರ್ಹತೆ ಕಳೆದುಕೊಂಡಿದೆ” ಎಂದು ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ಬೇಸರ ವ್ಯಕ್ತಪಡಿಸಿದ್ದಾರೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

ಎನ್ಆರ್ ಸಿ ವಿಚಾರಣೆ: ನಿಷ್ಪಕ್ಷಪಾತ ನಡೆ ನನ್ನದು

0

ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿ ತಮ್ಮ ಸೇವೆಯ ಅತ್ಯಂತ ಸುಗಮವಾಗಿ ಸಾಗಿತ್ತು ಎಂದು ನಿವೃತ್ತ ಸಿಜೆಐ ರಂಜನ್ ಗೊಗೊಯ್ ತಿಳಿಸಿದ್ದಾರೆ.

ನನ್ನ ಸೇವೆಯ ಅವಧಿಯಲ್ಲಿ ರಾಜಕೀಯ ಹಸ್ತಕ್ಷೇಪ ಸನ್ನಿವೇಶಗಳನ್ನು ಎದುರಿಸಿದ್ದು ಅತ್ಯಲ್ಪ. ಆದರೆ ರಾಷ್ಟ್ರೀಯ ಪೌರತ್ವ ನೋಂದಣಿ ವಿಚಾರದಲ್ಲಿ ಕೋರ್ಟ್ ನಡೆ ಕೊಂಚ ನಿಧಾನವಾಗಿ ಸಾಗಲಿ ಎಂದು ಹಿರಿಯ ಅಧಿಕಾರಿಯೊಬ್ಬರು ಮನವಿ ಮಾಡಿದ್ದರು” ಎಂದು ಸುಪ್ರೀಂಕೋರ್ಟ್ ನ ಉನ್ನತ ಹುದ್ದೆಯಲ್ಲಿದ್ದಾಗ ತಮ್ಮ ಸೇವಾ ಅವಧಿಯಲ್ಲಿ ಈ ಬಗ್ಗೆ ಗೊಗೊಯ್ ಅವರು ನೆನಪು ಮಾಡಿಕೊಂಡರು.

ಹಿರಿಯ ಅಧಿಕಾರಿಯೊಬ್ಬರು ನನ್ನ ಮನೆಗೆ ಬಂದಿದ್ದರು. ಎನ್ ಆರ್ ಸಿ ವಿಚಾರಣೆಯಲ್ಲಿ ಸ್ವಲ್ಪ ವೇಗವನ್ನು ಕಡಿಮೆ ಮಾಡಬೇಕೆಂದು ಮನವಿ ಮಾಡಿದ್ದರು. ಆ ಸಂದರ್ಭದಲ್ಲಿ ನಾನು ಸುಪ್ರೀಂಕೋರ್ಟ್ ನ ಎರಡನೇ ಅಥವಾ ಮೂರನೇ ಹಿರಿಯ ನ್ಯಾಯಮೂರ್ತಿಯಾಗಿದ್ದೆ. ಎನ್ಆರ್ ಸಿ ಪ್ರಕರಣದ ವಿಚಾರಣೆ ನಡೆಸುತ್ತಿದ್ದೆ. ಆದ್ದರಿಂದ ನನ್ನನ್ನು ಭೇಟಿ ಮಾಡಲು ಬಂದಿದ್ದರು. ಆದರೆ ನಾನು ನಾನೇಕೆ ಹಾಗೆ ಮಾಡಬೇಕು? ನ್ಯಾಯಾಂಗಕ್ಕೆ ಸಂಬಂಧಿಸಿದಂತೆ ನನ್ನ ಕೆಲಸದಲ್ಲಿ ಯಾರ ಹಸ್ತಕ್ಷೇಪವನ್ನು ನಾನು ಇಷ್ಟಪಡುವುದಿಲ್ಲ ಎಂದು ಖಡಕ್ಕಾಗಿ ಉತ್ತರ ಹೇಳಿ ಕಳುಹಿಸಿದ್ದೆ ಎಂದಿದ್ದಾರೆ.

ನಂತರ 2019ರ ಆಗಸ್ಟ್ 31ರಂದು ಭಾರತದ ಅಸಲಿ ಪ್ರಜೆಗಳನ್ನು ಗುರುತಿಸಲು ಅಸ್ಸಾಂನಲ್ಲಿ ರಾಷ್ಟ್ರೀಯ ಪೌರತ್ವ ನೋಂದಣಿ ಅಂತಿಮ ಪಟ್ಟಿಯನ್ನು ಪ್ರಕಟಿಸಲಾಯಿತು.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

ಆಹಾರಪದ್ಧತಿಯನ್ನು ಹೇರಬೇಡಿ : ಕೋರ್ಟ್ ಕಿವಿಮಾತು

0

ಇತ್ತೀಚಿನ ದಿನಗಳಲ್ಲಿ ದೇಶದಲ್ಲಿ ಆಹಾರ ಪದ್ಧತಿಗಳ ಬಗ್ಗೆ ಆಗಾಗ ಕೆಲವೊಂದು ವಿಚಾರಗಳು ಕೇಳಿಬರುತ್ತಿದೆ. ಈ ಬಗ್ಗೆ ಗುಜರಾತ್ ಹೈಕೋರ್ಟ್ ತಿರುವು ಜನರ ಮನಸ್ಸು ಹಾಗೂ ಅಹಂಕಾರ ತಣಿಸಲೆಂದು ಬಹುಸಂಖ್ಯಾತ ಜನರ ಆಹಾರ ಪದ್ಧತಿ ಅಥವಾ ಸೇವನೆ ನಿಯಂತ್ರಿಸುವ ಸಾಹಸಕ್ಕೆ ಮುಂದಾಗಬೇಡಿ. ರಾತ್ರಿ ಕನಸುಬಿತ್ತೆಂದು, ಬೆಳಗ್ಗೆ ಜನರು ಕೆಲವು ವಸ್ತುಗಳನ್ನು ಮಾರಾಟ ಮಾಡಬಾರದೆಂದು ಆದೇಶ ಹೊರಡಿಸಲು ಸಾಧ್ಯವಿಲ್ಲ” ಎಂದು ಅಹಮದಾಬಾದ್ ನಗರಪಾಲಿಕೆಯಿಂದ ತರಾಟೆಗೆ ತೆಗೆದುಕೊಂಡಿದೆ.

ಅಹಮದಾಬಾದ್ ನಗರ ಪಾಲಿಕೆಯು 25 ಬೀದಿಬದಿ ವ್ಯಾಪಾರಸ್ಥರ ಮಾಂಸ ಮಾರಾಟದ ಗಾಡಿಗಳನ್ನು ವಶಕ್ಕೆ ಪಡೆದಿರುತ್ತದೆ. ಈ ಕುರಿತಂತೆ ಬೀದಿ ಬದಿ ವ್ಯಾಪಾರಸ್ಥರು ಕೋರ್ಟ್ ಮೆಟ್ಟಿಲೇರಿದ್ದರು.

ಈ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಬಿರೇನ್ ವೈಷ್ಣವ್ ಅವರಿದ್ದ ನ್ಯಾಯಪೀಠವು “ರಾಜಕೀಯ ಒತ್ತಡಕ್ಕೆ ಆಹಾರ ಸೇವನೆ ನಿಯಂತ್ರಣಕ್ಕೆ ಪಾಲಿಕೆ ಮುಂದಾಗಬಾರದು. ಆಡಳಿತಾರೂಢ ಪಕ್ಷಕ್ಕೆ ಮೊಟ್ಟೆಗಳ ಸೇವನೆ ಇಷ್ಟವಿಲ್ಲ ಎಂದ ಮಾತ್ರಕ್ಕೆ ಮೊಟ್ಟೆ ಮಾರಾಟ ನಿರ್ಬಂಧಿಸಿ, ಅವುಗಳನ್ನು ವಶಕ್ಕೆ ಪಡೆಯುತ್ತೀರಾ? ನೀವು ಮಾಡುತ್ತಿರುವುದು ಸರಿಯೇ? ನಾನು ನನ್ನ ಮನೆಯ ಹೊರಗಡೆ ಏನನ್ನು ತಿನ್ನಬೇಕು ಎಂದು ನೀವು ನಿರ್ಧರಿಸಲು ಹೇಗೆ ಸಾಧ್ಯ” ಎಂದು ಕಟುವಾಗಿ ಪ್ರಶ್ನಿಸಿದೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

ಉದ್ಯೋಗದಲ್ಲಿ ಮಹಿಳೆಯರಿಗೆ ಆದ್ಯತೆ- ಪ್ರಿಯಾಂಕ

0

ವಿಧಾನಸಭಾ ಚುನಾವಣೆಯು ಇನ್ನೇನು ಹತ್ತಿರದಲ್ಲಿಯೇ ಇದೆ. ಪ್ರಿಯಾಂಕ ಗಾಂಧಿ ಅವರು ಈ ಬಗ್ಗೆ ಗೋವಾಕ್ಕೆ ಒಂದು ದಿನದ ಪ್ರವಾಸ ಕೈಗೊಂಡಿದ್ದಾರೆ. ವಿವಿಧ ಹಳ್ಳಿಗಳಿಗೆ ಭೇಟಿ ನೀಡಿದ್ದಾರೆ.

ಗೋವಾದ ಮೊರ್ಪಿರ್ಲಾ ಗ್ರಾಮದಲ್ಲಿ
ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕ ಅವರು ಮಾತನಾಡಿ “ಗೋವಾ ವಿಧಾನಸಭೆ ಚುನಾವಣೆಯಲ್ಲಿ ತಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಸರ್ಕಾರಿ ಉದ್ಯೋಗಗಳಲ್ಲಿ ಮಹಿಳೆಯರಿಗೆ ಶೇ. 30ರಷ್ಟು ಮೀಸಲು ನೀಡಲಾಗುವುದು” ಎಂದು ಹೇಳಿದರು.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

ರಾವತ್ ಜೀ ಅಮರ್ ರಹೇ

0

ಡಿ.8ರಂದು ತಮಿಳುನಾಡಿನ ಊಟಿ ಬಳಿ ಸಂಭವಿಸಿದ ಸೇನಾ ಹೆಲಿಕ್ಯಾಪ್ಟರ್ ದುರಂತದಲ್ಲಿ ಹುತಾತ್ಮರಾದ ಭಾರತದ ಸಶಸ್ತ್ರಪಡೆಗಳ ಮುಖ್ಯಸ್ಥ ಬಿಪಿನ್ ರಾವತ್ ಮತ್ತು ಅವರ ಪತ್ನಿ ಮಧುಲಿಕಾ ಸೇರಿದಂತೆ 13 ಅಧಿಕಾರಿಗಳ ಅಂತ್ಯಸಂಸ್ಕಾರ ಸಕಲ ಸೇನಾ ಗೌರವಗಳೊಂದಿಗೆ ಶುಕ್ರವಾರ ನಡೆಯಿತು.

ಕಾಮರಾಜ್ ಮಾರ್ಗದಲ್ಲಿ ಇರುವಂತಹ ರಾವತ್ ಅವರ ಅಧಿಕೃತ ನಿವಾಸದಲ್ಲಿ ಬಿಪಿನ್ ರಾವತ್ ದಂಪತಿಗಳ ಪಾರ್ಥಿವ ಶರೀರಗಳನ್ನು ಸಾರ್ವಜನಿಕರ ಅಂತಿಮ ದರ್ಶನಕ್ಕೆ ಇಡಲಾಗಿತ್ತು. ಕೇಂದ್ರ ಗೃಹ ಸಚಿವ ಅಮಿತ್ ಶಾ, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಡೊಭಾಲ್, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಮತ್ತು ಸುಪ್ರೀಂ ಕೋರ್ಟ್ ನ ಮುಖ್ಯ ನ್ಯಾಯಮೂರ್ತಿ ಎನ್. ವಿ. ರಮಣ ಅವರು ರಾವತ್ ದಂಪತಿಗಳಿಗೆ ಅಂತಿಮ ನಮನ ಸಲ್ಲಿಸಿದರು.

ಬಿಪಿನ್ ರಾವತ್ ಮತ್ತು ಅವರ ಪತ್ನಿ ಮಧುಲೀಕಾ ರಾವತ್ ಅವರ ಅಂತಿಮಯಾತ್ರೆ ಉದ್ದಕ್ಕೂ ‘ಚಂದ್ರ-ತಾರೆ ಇರುವವರೆಗೂ ರಾವತ್ ಜೀ ಅಮರ’, ‘ವಂದೇ ಮಾತರಂ’, ‘ಭಾರತ್ ಮಾತಾಕೀ ಜೈ’ ಇಂದು ಜನರು ಘೋಷಣೆಗಳನ್ನು ಕೂಗಿದರು. ರಾವತ್ ದಂಪತಿಗಳ ಅಂತಿಮ ಯಾತ್ರೆ ಉದ್ದಕ್ಕೂ ಸಾವಿರಾರು ಜನರು ನೆರೆದಿದ್ದರು.

ಬ್ರಾರ್ ಸ್ಕ್ವೇರ್ ನಲ್ಲಿ ರಾವತ್ ದಂಪತಿಗಳ ಚಿತೆಗೆ ಸೇನಾಪಡೆಗಳ 800 ಸಿಬ್ಬಂದಿಯು ಹಾಜರಿರುವ ಮೂಲಕ ಸಕಲ ಸೇನಾ ಗೌರವ ಸಲ್ಲಿಸಲಾಯಿತು. ’17 ಗನ್
ಸೆಲ್ಯೂಟ್’ ನ ಭಾಗವಾಗಿ ಫಿರಂಗಿಗಳಿಂದ ಗುಂಡು ಹಾರಿಸಿ ಗೌರವ ಸಲ್ಲಿಸಲಾಯಿತು.ರಾವತ್ ಅವರ ಇಬ್ಬರು ಪುತ್ರಿಯರು ಪುತ್ರಿ ಧಾರ್ಮಿಕ ವಿಧಿ ವಿಧಾನಗಳನ್ನು ನೆರವೇರಿಸಿ ಅಗ್ನಿಸ್ಪರ್ಷ ಮಾಡಿದರು.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

ಉಪ ನೋಂದಣಿ ಕಚೇರಿಗಳಿಗೆ ಕಾವೇರಿ ಕೀ ಕಾರ್ಡ್

0

ರಾಜ್ಯ ಸರ್ಕಾರವು ಆಸ್ತಿ ಅಕ್ರಮಕ್ಕೆ ಬ್ರೇಕ್ ಹಾಕಲು ತೀರ್ಮಾನಿಸಿದೆ. ರಾಜ್ಯ ನೋಂದಣಿ ಮತ್ತು ಮುದ್ರಾಂಕ ಇಲಾಖೆಯು ಉಪನೋಂದಣಾಧಿಕಾರಿಗಳ ಕಚೇರಿಗಳಲ್ಲಿ ಆಸ್ತಿ ನೋಂದಣಿಗೆ ‘ಬ್ಲಾಕ್ ಚೈನ್ ತಂತ್ರಜ್ಞಾನ’ ವನ್ನು ಕಾರ್ಯರೂಪಕ್ಕೆತಂದಿದೆ.

ನಕಲಿ ದಾಖಲೆಗಳನ್ನು ಸೃಷ್ಟಿಸಿ ಆಸ್ತಿ ಕಬಳಿಸುವ, ಯಾರದ್ದೋ ಸ್ವತ್ತನ್ನು ಮತ್ಯಾರಿಗೋ ಮಾರಾಟ ಮಾಡುವ ಹಾಗೂ ಒಂದೇ ಆಸ್ತಿಯನ್ನು ಹಲವರಿಗೆ ಮಾರಾಟ ಮಾಡುವ ಆಸ್ತಿಕೋರರಿಗೆ ಈ ತಂತ್ರಜ್ಞಾನ ಮುಳ್ಳಾಗಿದೆ.

ಈ ತಂತ್ರಜ್ಞಾನವು ಆಸ್ತಿ ಸುರಕ್ಷಿತ ನಿಟ್ಟಿನಲ್ಲಿ ಹೊಸ ಮೈಲುಗಲ್ಲಾಗುವ ಭರವಸೆ ಮೂಡಿಸಿದೆ. ಈಗಾಗಲೇ ತುಮಕೂರು ಜಿಲ್ಲೆಯ ಗುಬ್ಬಿ ಮತ್ತು ದಾವಣಗೆರೆ ಜಿಲ್ಲೆಗಳಲ್ಲಿ ಜಗಳೂರು ಸಬ್ ರಿಜಿಸ್ಟರ್ ಕಚೇರಿಗಳಲ್ಲಿ ಪ್ರಾಯೋಗಿಕವಾಗಿ ಬ್ಲಾಕ್ ಚೈನ್ ತಂತ್ರಜ್ಞಾನ ಅಳವಡಿಸಲಾಗಿದೆ. ‘ಕಾವೇರಿ’ ತಂತ್ರಾಂಶ ಬಳಸಿ ಆಸ್ತಿ ನೋಂದಣಿ ಜಾರಿಗೆ ತರಲಾಗಿದೆ.

ಈ ತಂತ್ರಜ್ಞಾನದ ವಿಶೇಷವೆಂದರೆ ಆಸ್ತಿ ವರ್ಗಾವಣೆ ಪ್ರತಿಯೊಂದು ಪ್ರಕ್ರಿಯೆ ‘ಕಾವೇರಿ ಕೀ ಕಾರ್ಡ್’ ನಲ್ಲಿ ದಾಖಲಾಗುತ್ತದೆ. ದಸ್ತಾವೇಜುಗಳು ನೋಂದಣಿ ಮಾಹಿತಿ 5 ಪ್ರತ್ಯೇಕ ಸರ್ವರ್ ಗಳಲ್ಲಿ ದಾಖಲಾಗುವುದರಿಂದ ಟ್ಯಾಂಪರ್ ( ದಾಖಲಾತಿ ನಾಶ) ಅಸಾಧ್ಯ ಹಾಗೂ ಆಸ್ತಿ ವರ್ಗಾವಣೆ ಪ್ರಕ್ರಿಯೆ ಟ್ರ್ಯಾಕಿಂಗ್ ಮಾಡುವುದು ಸುಲಭವಾಗಿದೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

ಪೋಲಿಸ್ ಹಾಕಿ ಪಂದ್ಯ: ಕರ್ನಾಟಕ ಪರಾಜಯ

0

70 ನೇ ಅಖಿಲ ಭಾರತ ಪೊಲೀಸ್ ಹಾಕಿ ಚಾಂಪಿಯನ್ ಷಿಪ್ ನ ಸೆಮಿಫೈನಲ್ ಪಂದ್ಯದಲ್ಲಿ ಕರ್ನಾಟಕ ರಾಜ್ಯ ಪೊಲೀಸ್ ಹಾಕಿ ತಂಡವು ಐಟಿಬಿಪಿ ಜಲಂಧರ್ ತಂಡದ ವಿರುದ್ಧ ಸೋಲು ಕಂಡಿದೆ.

ಅಕ್ಕಿತಿಮ್ಮನಹಳ್ಳಿ ಯಲ್ಲಿರುವ ರಾಜ್ಯ ಹಾಕಿ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಕರ್ನಾಟಕ ಮತ್ತು ಐಟಿಬಿಪಿ ತಂಡಗಳು ನಿಗದಿತ ಅವಧಿಯಲ್ಲಿ 1-1 ಗೋಲ್ ಗಳ ಸಮಬಲದ ಹೋರಾಟದ ನೀಡಿದವು. ಫಲಿತಾಂಶಕ್ಕಾಗಿ ಪೆನಾಲ್ಟಿ ಶೂಟೌಟ್ ನಲ್ಲಿ ಕರ್ನಾಟಕ ರಾಜ್ಯ ಪೊಲೀಸ್ ಹಾಕಿ ತಂಡ 0-2 ಅಂತರದಿಂದ ಸೋಲುವ ಮೂಲಕ ಫೈನಲ್ ಪ್ರವೇಶಿಸುವ ಅವಕಾಶ ವಿಫಲವಾಗಿದೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.