Monday, February 9, 2026
Monday, February 9, 2026
Home Blog Page 1824

ಮುಷ್ಕರದಿಂದಾಗಿ ಬ್ಯಾಂಕ್ ಸೇವೆಗಳಿಗೆ ಅಡ್ಡಿ

0

ಬ್ಯಾಂಕ್ ಖಾಸಗೀಕರಣ ವಿರೋಧಿಸಿ ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಗಳ ಉದ್ಯೋಗಿಗಳು, ದೇಶದಾದ್ಯಂತ ಮುಷ್ಕರ ನಡೆಸಿದರು. ಇದರಿಂದಾಗಿ ರಾಷ್ಟ್ರೀಕೃತ ಬ್ಯಾಂಕುಗಳ ಶಾಖೆಗಳಲ್ಲಿ ಹಣ ವರ್ಗಾವಣೆ, ಸಾಲ ಮಂಜೂರಾತಿ ಸೇವೆಗಳಿಗೆ ಅಡ್ಡಿಯುಂಟಾಯಿತು.

ಮುಷ್ಕರದಿಂದಾಗಿ ಸುಮಾರು 18,600 ಕೋಟಿ ಮೌಲ್ಯದ 20.4 ಲಕ್ಷ ಚೆಕ್ ಗಳ ಕ್ಲಿಯರೆನ್ಸ್ ಆಗಿಲ್ಲ ಎಂದು ಅಖಿಲ ಭಾರತ ಬ್ಯಾಂಕ್ ಉದ್ಯೋಗಿಗಳ ಸಂಘ ಪ್ರಧಾನ ಕಾರ್ಯದರ್ಶಿ ಸಿ. ಎಚ್. ವೆಂಕಟಾಚಲಂ ತಿಳಿಸಿದ್ದಾರೆ.

ಕೇಂದ್ರ ಸರ್ಕಾರದ ಬದಲಾಗದ ಧೋರಣೆಯಿಂದಾಗಿ ಒಂದು ಲಕ್ಷಕ್ಕಿಂತಲೂ ಅಧಿಕ ಬ್ಯಾಂಕ್ ಶಾಖೆಗಳು ಹಾಗೂ ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳ ಕಾರ್ಯನಿರ್ವಹಣೆಗೆ ಅಡ್ಡಿ ಉಂಟಾಯಿತು ಎಂದು ಅಖಿಲ ಭಾರತ ಬ್ಯಾಂಕ್ ಅಧಿಕಾರಿಗಳ ಸಂಘದ ಪ್ರಧಾನ ಕಾರ್ಯದರ್ಶಿ ಸೌಮ್ಯ ದತ್ತಾ ಅವರು ತಿಳಿಸಿದ್ದಾರೆ.

9 ಸಂಘಟನೆಗಳನ್ನು ಒಳಗೊಂಡಿರುವ ಬ್ಯಾಂಕ್ ಸಂಘಟನೆಗಳ ಸಂಯುಕ್ತ ವೇದಿಕೆ ಎರಡು ದಿನಗಳ ಮುಷ್ಕರ ಕರೆ ನೀಡಿದೆ.

ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳು ವಿಮಾ ಕಂಪನಿಗಳ ಖಾಸಗೀಕರಣ, ಭಾರತೀಯ ಜೀವ ವಿಮಾ ನಿಗಮದಲ್ಲಿನ ಬಂಡವಾಳ ಹಿಂತೆಗೆತ, ವಿಮಾ ಕ್ಷೇತ್ರದಲ್ಲಿ ಶೇ.24ರವರೆಗೆ ಎಫ್ ಡಿಐ ಗೆ ಅವಕಾಶ ದಂತಹ ಕೇಂದ್ರ ಸರ್ಕಾರದ ನಿರ್ಧಾರಗಳಿಗೆ ಯುಎಫ್ ಬಿಯು ತನ್ನ ವಿರೋಧವನ್ನು ವ್ಯಕ್ತಪಡಿಸಿದೆ.

ಕರ್ನಾಟಕದಲ್ಲಿಯೂ ಬ್ಯಾಂಕ್ ನೌಕರರು ಹಾಗೂ ಅಧಿಕಾರಿಗಳು ಮುಷ್ಕರದಲ್ಲಿ ಭಾಗವಹಿಸಿದ್ದರು. ಇದರಿಂದಾಗಿ ರಾಷ್ಟ್ರೀಕೃತ ಬ್ಯಾಂಕ್ ಗಳಲ್ಲಿ ಸೇವೆಗಳು ಲಭ್ಯವಾಗಲಿಲ್ಲ ಎಂದು ನೌಕರರ ಸಂಘಟನೆಯ ಮುಖಂಡರು ಹೇಳಿದ್ದಾರೆ.

ಬೆಂಗಳೂರಿನಲ್ಲಿ ಕೆ. ಜಿ. ರಸ್ತೆಯಲ್ಲಿರುವ ಭಾರತೀಯ ಸ್ಟೇಟ್ ಬ್ಯಾಂಕ್ ಕಚೇರಿಯ ಬಳಿ ಸುಮಾರು ಸಾವಿರದ ಐನೂರಕ್ಕೂ ಹೆಚ್ಚು ಸಿಬ್ಬಂದಿಗಳು ಹಾಗೂ ಅಧಿಕಾರಿಗಳು ಕೇಂದ್ರ ಸರ್ಕಾರದ ನಿರ್ಧಾರಗಳ ವಿರುದ್ಧ ಪ್ರತಿಭಟನೆಯನ್ನು ನಡೆಸಿದ್ದಾರೆ. ಈ ಮಾಹಿತಿಯನ್ನು ಭಾರತೀಯ ರಾಷ್ಟ್ರೀಯ ಬ್ಯಾಂಕ್ ಉದ್ಯೋಗಿಗಳ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ನರಸಿಂಹಮೂರ್ತಿ ಎಂ.ಕೆ. ಅವರು ಮಾಧ್ಯಮ ಮಿತ್ರರಿಗೆ ತಿಳಿಸಿದ್ದಾರೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

ರಾಜ್ಯದಲ್ಲಿ ಇಂದು 5 ಓಮಿಕ್ರಾನ್ ಸೋಂಕು ಪತ್ತೆ!

0

ಕರ್ನಾಟಕದಲ್ಲಿ ಕೊರೋನಾ ರೂಪಾಂತರ ತಳಿ ಓಮಿಕ್ರಾನ್ ಐದು ಜನರಲ್ಲಿ ಸೋಂಕು ಪತ್ತೆಯಾಗಿದೆ.

ಇದರಿಂದ ರಾಜ್ಯದಲ್ಲಿ ಓಮಿಕ್ರಾನ್ ಒಟ್ಟು ಪ್ರಕರಣ ಎಂಟಕ್ಕೆ ಏರಿದೆ.

ಬ್ರಿಟನ್ ನಿಂದ ಬಂದಿದ್ದ 19 ವರ್ಷದ ಯುವತಿ, ಹಾಗೂ ನೈಜೀರಿಯಾದಿಂದ ಬೆಂಗಳೂರಿಗೆ ಬಂದಿದ್ದ 52 ವರ್ಷದ ವ್ಯಕ್ತಿಯಲ್ಲಿ ಓಮಿಕ್ರಾನ್ ವೈರಸ್ ಪತ್ತೆಯಾಗಿದೆ. ಈ ವ್ಯಕ್ತಿಯು ಬೆಂಗಳೂರು ವಿಮಾನ ನಿಲ್ದಾಣದ ಮೂಲಕ ಬೆಳಗಾವಿ ಗೆ ತೆರಳಿದ್ದಾರೆ.

ದೆಹಲಿಯಿಂದ ಬಂದಿದ್ದ 70 ವರ್ಷದ ವ್ಯಕ್ತಿ ಮತ್ತು ದಕ್ಷಿಣ ಆಫ್ರಿಕಾದಿಂದ ಬಂದಿರುವ 33 ವರ್ಷದ ವ್ಯಕ್ತಿಯಲ್ಲಿ ಓಮಿಕ್ರಾನ್ ಸೋಂಕು ದೃಢಪಟ್ಟಿದೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

ತುಪ್ಪ ತಯಾರಿಕೆ : ನಕಲಿ ಜಾಲ ಪತ್ತೆ

0

ಇತ್ತೀಚಿನ ದಿನಗಳಲ್ಲಿ ಆಹಾರ ಪದಾರ್ಥಗಳ ನಕಲಿ ಮಾರಾಟ ಹೆಚ್ಚಾಗಿದೆ. ಮೈಸೂರಿನಲ್ಲಿ ಕೆಎಂಎಫ್ ನ ಜನಪ್ರಿಯಾ ನಂದಿನಿ ತುಪ್ಪವನ್ನು ನಕಲಿ ತಯಾರಿಕೆ ಮಾಡುವ ಪ್ರಯತ್ನ ನಡೆದಿದೆ. ಸ್ಥಳೀಯರು ನೀಡಿದ ಮಾಹಿತಿಯ ಮೇರೆಗೆ ಮಾನವ ಹಕ್ಕುಗಳ ರಕ್ಷಣಾ ಹಾಗೂ ಭ್ರಷ್ಟಾಚಾರ ನಿರ್ಮೂಲನಾ ಸೇವಾ ಸಮಿತಿಯ ಸದಸ್ಯರು ನಕಲಿ ತುಪ್ಪ ತಯಾರಿಕಾ ಘಟಕದ ಮೇಲೆ ದಾಳಿ ನಡೆಸಿದ್ದಾರೆ.

ಈ ದಾಳಿಯ ವೇಳೆ ಒಂದೂವರೆ ಟನ್ ಕಲಬೆರಿಕೆ ತುಪ್ಪ, 500 ಕೆಜಿ ವನಸ್ಪತಿ, 500 ಲೀಟರ್ ಪಾಮ್ ಆಯಿಲ್ ವಶಪಡಿಸಿಕೊಳ್ಳಲಾಗಿದೆ. ಈ ನಕಲಿ ತುಪ್ಪಕ್ಕೆ ವನಸ್ಪತಿ ಹಾಗೂ ಪಾಮ್ ಆಯಿಲ್ ಸೇರಿಸಿ ನಂದಿನಿ ತುಪ್ಪದ ನಕಲಿ ಲೇಬಲ್ ತಯಾರಿಸಿ, ಸೀಲ್ ಮಾಡಲಾಗಿದೆ. ಈ ವೇಳೆ ಪ್ಯಾಕಿಂಗ್ ಯಂತ್ರ ಪತ್ತೆಯಾಗಿದೆ.

ಈ ದಾಳಿಯಲ್ಲಿ ಮೈಸೂರು ಜಿಲ್ಲಾ ಹಾಲು ಒಕ್ಕೂಟ ವ್ಯವಸ್ಥಾಪಕ ನಿರ್ದೇಶಕ ಬಿ.ಎನ್.ವಿಜಯ್ ಕುಮಾರ್ ನೇತೃತ್ವದ ಅಧಿಕಾರಿಗಳ ತಂಡ ಹಾಗೂ ಆಹಾರ ಸುರಕ್ಷತೆ ಗುಣಮಟ್ಟದ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ನಕಲಿ ನಂದಿನಿ ತುಪ್ಪ ಎಂದು ಖಚಿತಪಡಿಸಿದ್ದಾರೆ.

ಹೊಸಹುಂಡಿ ನಿವಾಸಿ ಕೃಷ್ಣ ಅವರ ತೋಟವನ್ನು 4 ತಿಂಗಳ ಹಿಂದೆಯಷ್ಟೇ ಶ್ರೀರಾಂಪುರದ ಮುರುಗೇಶ್ ಎಂಬವರ ಹೆಸರಿನಲ್ಲಿ ಗುತ್ತಿಗೆ ಪಡೆದುಕೊಳ್ಳಲಾಗಿದೆ. ಮೂರು ತಿಂಗಳಿಂದ ನಕಲಿ ತುಪ್ಪ ತಯಾರಿಕೆ ಮಾಡಲಾಗುತ್ತಿದೆ ಎಂದು ಸಂಘಟನೆಯ ಅಧ್ಯಕ್ಷ ವಿನೋದ್ ಮಾಹಿತಿ ನೀಡಿದ್ದಾರೆ.

“ನಕಲಿ ನಂದಿನಿ ತುಪ್ಪ ಉತ್ಪಾದನೆ ಬಗ್ಗೆ ಮಾಹಿತಿ ದೊರೆತ ಹಿನ್ನೆಲೆಯಲ್ಲಿ ದಾಳಿ ನಡೆಸಿದ ಅಧಿಕಾರಿಗಳು ಹಾಗೂ ಆಹಾರ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದೇವೆ. ಪ್ರಕರಣವನ್ನು ಪರಿಶೀಲಿಸಿ ಸಂಬಂಧಪಟ್ಟವರ ಮೇಲೆ ಕಾನೂನು ರೀತಿಯ ಕಠಿಣ ಕ್ರಮ ಜರುಗಿಸಬೇಕೆಂದು” ಮಾನವ ಹಕ್ಕುಗಳ ಸೇವಾ ಸಮಿತಿ ಅಧ್ಯಕ್ಷ ವಿನೋದ್ ಆಗ್ರಹಿಸಿದ್ದಾರೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

ಶ್ರೀ ಶಾರದಾ ದರ್ಶನಕ್ಕೆ ಕೋವಿಡ್ ಲಸಿಕೆ ಕಡ್ಡಾಯ

0

ದೇಶಾದ್ಯಂತ ಕೋವಿಡ್ ಜೊತೆಗೆ ಓಮಿಕ್ರಾನ್ ತನ್ನ ದುಷ್ಪರಿಣಾಮವನ್ನು ಮಂದಗತಿಯಲ್ಲಿ ಬೀರುತ್ತಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಹಲವು ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೊಳಿಸಿದೆ.

ಶೃಂಗೇರಿಯ ಶ್ರೀ ಶಾರದಾ ಪೀಠದಲ್ಲಿ ಭಕ್ತಾದಿಗಳ ಪ್ರವೇಶಕ್ಕೆ ಹೊಸ ನಿಯಮ ಜಾರಿ ಮಾಡಲಾಗಿದೆ. ಭಕ್ತಾದಿಗಳು ಪ್ರವೇಶಕ್ಕೆ ಕೋವಿಡ್ ಲಸಿಕೆಯ 2 ಡೋಸ್ ಗಳನ್ನ ಕಡ್ಡಾಯವಾಗಿ ಪಡೆದಿರಬೇಕು. 2 ಡೋಸ್ ಲಸಿಕೆ ಪಡೆದಿರುವ ಪ್ರಮಾಣಪತ್ರ ಹಾಜರುಪಡಿಸಬೇಕು. ಕೋವಿಡ್ ನಿಯಮಾವಳಿಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಶ್ರೀಮಠ ತಿಳಿಸಿದೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

ಮಕ್ಕಳಿಗೆ ಉಚಿತ ಡಿಟ್ಯಾಪ್ ಲಸಿಕೆ

0

ರಾಜ್ಯ ಸರ್ಕಾರ ರಾಜ್ಯಾದ್ಯಂತ ಹತ್ತು ವರ್ಷದ ಮಕ್ಕಳಿಗೆ ಉಚಿತವಾಗಿ ಡಿಟ್ಯಾಪ್ ಲಸಿಕೆಯನ್ನು ನೀಡಲು ನಿರ್ಧರಿಸಿದೆ.

ಈ ಲಸಿಕೆಯು ಗಂಟಲು ಮಾರಿ, ನಾಯಿ ಕೆಮ್ಮು ಮತ್ತು ಧನುರ್ವಾಯು ರೋಗಗಳನ್ನು ತಡೆಗಟ್ಟುವಲ್ಲಿ ಮುಖ್ಯಪಾತ್ರವಹಿಸುತ್ತದೆ. ಈ ಲಸಿಕೆಯನ್ನು ಈಗಾಗಲೇ ಪಡೆದುಕೊಂಡಿರುವ ಮಕ್ಕಳಿಗೆ ಬೂಸ್ಟರ್ ಡೋಸ್ ಆಗಿಯೂ ನೀಡಲಾಗುತ್ತದೆ.

ಈ ಲಸಿಕೆಯನ್ನು ನಿರ್ದಿಷ್ಟ ವೇಳಾಪಟ್ಟಿಯ ಅನುಸಾರ 5 ಡೋಸ್ ಗಳಾಗಿ ನೀಡಲಾಗುತ್ತದೆ. 2,4,6 ತಿಂಗಳು, 15ರಿಂದ 18 ತಿಂಗಳೊಳಗೆ ಮತ್ತು 4 ರಿಂದ 6 ವರ್ಷದೊಳಗಿನ ಮಕ್ಕಳಿಗೆ ನೀಡಲಾಗುತ್ತದೆ. ಬಳಿಕ 10ನೇ ವರ್ಷಕ್ಕೆ ಒಂದು ಬೂಸ್ಟರ್ ಡೋಸ್ ನೀಡಲಾಗುತ್ತದೆ.

ಮಕ್ಕಳು ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದರೆ, ಆ ಸಮಯವನ್ನು ಹೊರತುಪಡಿಸಿ ಬೇರೆಲ್ಲಾ ಸಮಯದಲ್ಲಿ ಈ ಲಸಿಕೆ ಕೊಡಿಸಬಹುದಾಗಿದೆ.

ಲಸಿಕೆಯು ಹತ್ತಿರದ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ತಾಲ್ಲೂಕು ಮತ್ತು ಜಿಲ್ಲಾ ಆಸ್ಪತ್ರೆಗಳಲ್ಲಿ ಉಚಿತವಾಗಿ ನೀಡಲಾಗುತ್ತದೆ. ಖಾಸಗಿ ಕ್ಲಿನಿಕ್ ಗಳಲ್ಲೂ ಕೂಡ ಈ ಲಸಿಕೆಯನ್ನು ಪಡೆಯಬಹುದು. ಲಸಿಕೆ ಪಡೆದುಕೊಂಡ ದಿನ ಸ್ವಲ್ಪ ಜ್ವರ ಕಾಣಿಸಿಕೊಳ್ಳುತ್ತದೆ. ಇಂಜೆಕ್ಷನ್ ನೀಡಿದ ಸ್ಥಳದಲ್ಲಿ ಕೆಂಪಾಗಿ ಊತ ಕಾಣಿಸಿಕೊಳ್ಳುತ್ತದೆ ಮತ್ತು ಆಯಾಸ ಬಿಟ್ಟರೆ ಬೇರೆ ಯಾವ ಅಡ್ಡ ಪರಿಣಾಮವೂ ಬೀರುವುದಿಲ್ಲ.

” ಚುಚ್ಚುಮದ್ದು ಮಗುವಿಗೆ ರಕ್ಷಣೆ ನೀಡಲು ದೇಹದ ಸ್ವಯಂ ಪ್ರತಿರಕ್ಷಣಾ ವ್ಯವಸ್ಥೆಯನ್ನು ಪ್ರಚೋದಿಸುತ್ತವೆ. ಚುಚ್ಚುಮದ್ದನ್ನು ಚುಚ್ಚಿಸಿಕೊಳ್ಳುವುದರಿಂದ ಆಗುವ ಸಣ್ಣಪುಟ್ಟ ಅಡ್ಡಪರಿಣಾಮಗಳಿಗೆ ಹೋಲಿಸಿದರೆ, ಚುಚ್ಚಿಸಿಕೊಳ್ಳದಿದ್ದರೆ ಆಗುವ ಅಪಾಯವೇ ಹೆಚ್ಚು” ಎಂದು ಬೆಂಗಳೂರಿನ ಇಂದಿರಾಗಾಂಧಿ ಮಕ್ಕಳ ಆಸ್ಪತ್ರೆಯ ನಿರ್ದೇಶಕ ಡಾ. ಸಂಜಯ್ ಕೆ.ಎಸ್ ತಿಳಿಸಿದ್ದಾರೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

ಶೌರ್ಯ ಪ್ರಶಸ್ತಿ ಮೊತ್ತ ಏರಿಕೆ : ಸಿ.ಎಂ ಬೊಮ್ಮಾಯಿ

0

ಸಾಹಸಿ ಯೋಧರಿಗೆ ಕೇಂದ್ರ ಸರ್ಕಾರ ನೀಡುವ ಶೌರ್ಯ ಪ್ರಶಸ್ತಿಗೆ ಪೂರಕವಾಗಿ ರಾಜ್ಯ ಸರ್ಕಾರ ನೀಡುವ ಗೌರವಧನವನ್ನು ಎಂಟು ಪಟ್ಟು ಹೆಚ್ಚಿಸಿದೆ.

ರಾಜ್ಯ ಮೂಲದ ಯೋಧರು ಪರಮವೀರ ಚಕ್ರ, ಮಹಾವೀರ ಚಕ್ರ ಸೇರಿದಂತೆ ನಾನಾ ಶೌರ್ಯ ಪ್ರಶಸ್ತಿ ಪಡೆದವರಿಗೆ ರಾಜ್ಯ ಸರ್ಕಾರ ಒಂದು ಸಲಕ್ಕೆ ಗೌರವ ಧನವಾಗಿ ನಗದು ಮೊತ್ತವನ್ನು ನೀಡುತ್ತಿದೆ. ದೇಶದ ಹಲವು ರಾಜ್ಯಗಳು ಶೌರ್ಯ ಪ್ರಶಸ್ತಿಯ ಧನವನ್ನು ಹೆಚ್ಚಿಸಿದ ಹಿನ್ನಲೆಯಲ್ಲಿ ರಾಜ್ಯ ಸರ್ಕಾರವು ಗೌರವಧನದ ಮೊತ್ತವನ್ನು ಹೆಚ್ಚಿಸಲು ನಿರ್ಧರಿಸಿದೆ. ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ವತಿಯಿಂದ ನೀಡಲಾಗುವ ಅನುದಾನವನ್ನು ಕೂಡ ಹೆಚ್ಚಿಸುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಬೆಳಗಾವಿ ಅಧಿವೇಶನದಲ್ಲಿ ತಿಳಿಸಿದರು.

ಈ ಹಿಂದೆ ಪರಮವೀರಚಕ್ರ ಈಗಿನ ಮೊತ್ತ 25 ಲಕ್ಷ ರೂ, ಪರಿಷ್ಕೃತ ಮೊತ್ತ 1.5 ಕೋಟಿ ರೂ. ಅಶೋಕ ಚಕ್ರ ಈಗಿನ ಮೊತ್ತ 25 ಲಕ್ಷರೂ, ಪರಿಷ್ಕೃತ ಮೊತ್ತ 1.5 ಕೋಟಿ ರೂ. ಮಹಾವೀರ ಚಕ್ರ ಈಗಿನ ಮೊತ್ತ 12 ಲಕ್ಷ ರೂ, ಪರಿಷ್ಕೃತ ಮೊತ್ತ 01 ಕೋಟಿ ರೂ. ಕೀರ್ತಿ ಚಕ್ರ ಈಗಿನ ಮೊತ್ತ 12 ಲಕ್ಷ ರೂ, ಪರಿಷ್ಕೃತ ಮೊತ್ತ 01ಕೋಟಿ ರೂ. ವೀರ ಚಕ್ರ ಈಗಿನ ಮೊತ್ತ 8 ಲಕ್ಷ ರೂ, ಪರಿಷ್ಕೃತ ಮೊತ್ತ 50 ಲಕ್ಷರೂ. ಶೌರ್ಯ ಚಕ್ರ ಈಗಿನ ಮೊತ್ತ 8 ಲಕ್ಷ ರೂ, ಪರಿಷ್ಕೃತ ಮೊತ್ತ 50 ಕೋಟಿ ರೂ. ಸೇನಾ/ನೌಕಾ ಸೇನಾ/ವಾಯು ಸೇನಾ ಪದಕ ಈಗಿನ ಮೊತ್ತ 2 ಲಕ್ಷ ರೂ, ಪರಿಷ್ಕೃತ ಮೊತ್ತ 15 ಲಕ್ಷ ರೂ. ವಿಶೇಷ ಪ್ರಶಸ್ತಿಗಳು ಈಗಿನ ಮೊತ್ತ 2 ಲಕ್ಷ ರೂ, ಪರಿಷ್ಕೃತ ಮೊತ್ತ 15 ಲಕ್ಷ ರೂ ದಷ್ಟು ಹೆಚ್ಚಿಸಲಾಗಿದೆ.

‘ಯೋಧರ ಮನೋಭಿಲಾಷೆಯನ್ನು ಹೆಚ್ಚಿಸಿ, ದೇಶಸೇವೆಯಲ್ಲಿ ತೊಡಗಿಸಿಕೊಳ್ಳುವಂತೆ ಮತ್ತು ಯೋಧರ ಮನೋಸ್ಥೈರ್ಯ ಹೆಚ್ಚಳವನ್ನು ಪ್ರೋತ್ಸಾಹಿಸುವ ಕ್ರಮ ಇದಾಗಿದೆ. ರಾಜ್ಯ ಸರ್ಕಾರ ಸೈನಿಕ ಕಲ್ಯಾಣಕ್ಕೆ ಆದ್ಯತೆ ನೀಡುತ್ತಿದೆ’ ಎಂದು ಬೊಮ್ಮಾಯಿ ಅವರು ಹೇಳಿದರು.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

ಶೇ.40ರಷ್ಟು ಭ್ರಷ್ಟಾಚಾರ : ಕಾಂಗ್ರೆಸ್ ಪ್ರತಿಭಟನೆ

0

ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ವಿರೋಧ ಪಕ್ಷ ಕಾಂಗ್ರೆಸ್ ಬೆಳಗಾವಿಯ ತನ್ನ ಕಚೇರಿಯಿಂದ ಸುವರ್ಣಸೌಧದವರೆಗೆ ಟ್ಯಾಕ್ಟರ್ ನಲ್ಲಿ ಆಗಮಿಸಿ ಬೃಹತ್ ಪ್ರತಿಭಟನೆ ನಡಿಸಿತು. ರಾಜ್ಯ ಬಿಜೆಪಿ ಸರ್ಕಾರ ದಲ್ಲಿ ಶೇ.40 ರಷ್ಟು ಕಮಿಷನ್ ಭ್ರಷ್ಟಾಚಾರ ನಡೆಯುತ್ತಿದೆ ಎಂದು ಆರೋಪಿಸಿ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.

ಈ ಪ್ರತಿಭಟನೆಯು ಸುವರ್ಣಸೌಧದ ಪ್ರವೇಶ ದ್ವಾರದವರೆಗೆ ಆಗಮಿಸುತ್ತಿದ್ದಂತೆ ಪೊಲೀಸರು ಪ್ರತಿಭಟನಾಕಾರರನ್ನು ತಡೆದರು. ಈ ವೇಳೆ ಕಾಂಗ್ರೆಸ್ ಮುಖಂಡರ ಮತ್ತು ಪೊಲೀಸರ ನಡುವೆ ವಾಗ್ವಾದ ನಡೆಯಿತು. ನಾಯಕರು ಪಟ್ಟುಬಿಡದೆ ಸುವರ್ಣಸೌಧದ ಆವರಣದೊಳಗೆ ಕೊನೆಗೂ ಪ್ರತಿಭಟನೆಯ ಟ್ರ್ಯಾಕ್ಟರ್ ಅನ್ನು ಕೊಂಡೊಯ್ಯುವಲ್ಲಿ ಯಶಸ್ವಿಯಾದರು.

‘ಮೋದಿಯವರು ದಾಖಲೆ ಇಲ್ಲದೆ ನಮ್ಮ ಸರಕಾರವನ್ನು 10% ಸರ್ಕಾರ ಎಂದಿದ್ದರು. ಈಗಿನದ್ದು 40% ಕಮಿಷನ್ ಸರ್ಕಾರ ಎಂದು ಗುತ್ತಿಗೆದಾರರೇ ಆರೋಪಿಸಿದ್ದಾರೆ. ಇದಕ್ಕಿಂತ ದೊಡ್ಡ ದಾಖಲೆ ಏನು ಬೇಕು?’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಪ್ರಶ್ನಿಸಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿರುವ ಸಚಿವರಾದ ಆರ್.ಅಶೋಕ್ ಹಾಗೂ ಕೆ.ಎಸ್.ಈಶ್ವರಪ್ಪ ಅವರು ‘ನಮ್ಮ ಸರ್ಕಾರದ ಮೇಲೆ ಆರೋಪ ಮಾಡಿದ ಗುತ್ತಿಗೆದಾರ ಕಾಂಗ್ರೆಸ್ ಏಜೆಂಟ್. ಇವರನ್ನು ಮುಂದಿಟ್ಟು ಕಾಂಗ್ರೆಸ್ ನಾಯಕರು ಗಾಳಿಯಲ್ಲಿ ಗುಂಡು ಹಾರಿಸುತ್ತಿದ್ದಾರೆ. ಸಂಪೂರ್ಣ ತನಿಖೆ ನಡೆದರೆ ಕಾಂಗ್ರೆಸ್ ನಾಯಕರು ಇದರಲ್ಲಿ ಸಿಕ್ಕಿಹಾಕಿಕೊಳ್ಳಾದೆ ಇರುತ್ತಾರೆಯೇ’ಎಂದು ಸವಾಲು ಹಾಕಿದರು.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

ಆಣೆ ಪ್ರಮಾಣಕ್ಕೆ ಕಟ್ಟುಬಿದ್ದು ತಿರಸ್ಕೃತವಾದ ಮತಗಳು

0

ಎಲ್ಲಾ ಅಭ್ಯರ್ಥಿಗಳ ಕೈಯಿಂದ ಹಣ ಪಡೆದುಕೊಂಡಿದ್ದೇವೆ. ಉಡುಗೊರೆ ಬೇರೆ ಕೊಟ್ಟಿದ್ದಾರೆ. ಸಾಲದಕ್ಕೆ ತಮಗೇ ಮತ ಹಾಕುವುದಾಗಿ ಆಣೆ-ಪ್ರಮಾಣ ಮಾಡಿಸಿಕೊಂಡಿದ್ದಾರೆ. ಹೀಗಿರುವಾಗ ಮತ ಹಾಕದೆ ಇದ್ದರೆ ಅಥವಾ ನೀಡಿದರೆ ದೇವರು ಶಾಪಕ್ಕೆ ಒಳಗಾಗಬೇಕಾದಿತು ಎಂದು ಕೆಲವು ಮತದಾರರು ಎಲ್ಲರಿಗೂ ಮತವನ್ನು ಹಾಕಿದ್ದಾರೆ.
ಹಣ, ಆಣೆ ಪ್ರಮಾಣಗಳಿಗೆ ಕಟ್ಟುಬಿದ್ದ ಮತದಾರು ಎಲ್ಲರಿಗೂ ಓಟು ಹಾಕಿ ಬರೋಬ್ಬರಿ 3000 ಓಟುಗಳು ತಿರಸ್ಕೃತವಾಗಿವೆ.
ಮೇಲ್ಮನೆ ಚುನಾವಣೆ ಮತದಾನ ಸ್ವಲ್ಪಮಟ್ಟಿಗೆ ಸಂಕೀರ್ಣವೇ. ಹಾಗಾಗಿ ಇದರ ಬಗ್ಗೆ ಸಾಕಷ್ಟು ತರಬೇತಿಯನ್ನೂ ನೀಡಲಾಗಿತ್ತು. ಅಷ್ಟಾಗಿಯೂ ತಿಳಿಯದವರಿಗೆ ಸಹಾಯಕರನ್ನು ನೇಮಿಸಿಕೊಳ್ಳುವ ಅವಕಾಶವಿತ್ತು. ಅಷ್ಟಾದರೂ ಸಾಕಷ್ಟು ಮತಗಳು ಅಸಿಂಧುವಾಗಿರುವುದರ ಹಿಂದೆ ಈ ಅಂಶಗಳ ಪ್ರಭಾವೇ ದಟ್ಟವಾಗಿದೆ ಎನ್ನಲಾಗುತ್ತಿದೆ.
ಚುನಾವಣೆಯನ್ನು ಪ್ರತಿಷ್ಠೆಗಾಗಿ ತೆಗೆದುಕೊಂಡಿದ್ದ ರಾಜಕೀಯ ಪಕ್ಷಗಳ ಮುಖಂಡರು, ಮತದಾರರಿಗೆ ಹಣ ಕೊಟ್ಟು ತಮಗೆ ಮತ ನೀಡುವಂತೆ ಕೋರಿಕೊಂಡಿದ್ದರು.
ವಿಧಾನಪರಿಷತ್ ಚುನಾವಣೆಯಲ್ಲಿ ದೊಡ್ಡ ಪ್ರಮಾಣದಲ್ಲಿ ಮತಗಳು ಅಸಿಂಧುವಾಗಲು ಇದು ಪ್ರಧಾನ ಕಾರಣ ಎನ್ನುವುದು ಮೇಲ್ನೋಟಕ್ಕೆ ಕಂಡು ಬಂದಿದೆ.
ಚುನಾವಣೆಯಾದ 98,648 ಮತಗಳ ಪೈಕಿ 3024 ಮತಗಳು ತಿರಸೃತಗೊಂಡಿವೆ.
ಹಲವು ಸದಸ್ಯರು ಹಣ ಕಳೆದುಕೊಳ್ಳಲು ಇಷ್ಟಪಡದೆ ಹಾಗೂ ಪಕ್ಷದ ನಾಯಕರ ಒತ್ತಡಕ್ಕೆ ಕಟ್ಟುಬಿದ್ದು ಒಂದಕ್ಕಿಂತ ಹೆಚ್ಚು ಪಕ್ಷದ ಮುಖಂಡರಿಗೆ ತಮ್ಮ ಪಕ್ಷಕ್ಕೆ ಮತ ನೀಡುವುದಾಗಿ ಪ್ರಮಾಣ ಮಾಡಿದ್ದರು. ಮತದಾನ ಮಾಡುವ ವೇಳೆ ಉಭಯ ಸಂಕಟಕ್ಕೆ ಸಿಲುಕಿದ ಈ ಮತದಾರರು ಆಣೆ- ಪ್ರಮಾಣಕ್ಕೆ ಹೆದರಿ ತಾವು ಹಣ ಪಡೆದ ಎಲ್ಲ ಅಭ್ಯರ್ಥಿಗಳಿಗೂ ಪ್ರಥಮ ಪ್ರಾಶಸ್ತ್ಯದ ಮತ ನೀಡುವ ಮೂಲಕ ನ್ಯಾಯ ಒದಗಿಸಬಹುದು ಎಂದು ಯೋಚಿಸಿ ಅದರಂತೆ ಮತಚಲಾಯಿಸಿದ್ದಾರೆ.
ಒಬ್ಬರಿಗಿಂತಲೂ ಹೆಚ್ಚು ಜನರಿಗೆ ಒಂದೇ ಪ್ರಾಶಸ್ತ್ಯದ ಮತ ನೀಡಿದರೆ ಮತ ಆಗುತ್ತದೆ ಎಂಬುದಕ್ಕಿಂತ ಆಣೆ ಪ್ರಮಾಣದ ಬಲವೇ ಮೇಲಾಗಿರುವುದು ಖಚಿತಪಟ್ಟಿದೆ.
ತಮ್ಮ ಪಕ್ಷದ ಅಭ್ಯರ್ಥಿಗೆ ಮತ ನೀಡಬೇಕೆಂದು ತಿರುಪತಿ ತಿಮ್ಮಪ್ಪ, ಶನೇಶ್ವರ ಸ್ವಾಮಿ ಮೇಲೆ ಆಣೆ ಮಾಡಿಸಿಕೊಂಡ ವಿಡಿಯೋಗಳು ಸಹ ವೈರಲ್ ಆಗಿದ್ದವು ಎನ್ನಲಾಗಿದೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

ಕನ್ನಡಧ್ವಜ ಸುಟ್ಟಿದ್ದು ಹೇಯಕೃತ್ಯ. -ಮಹೇಶ್ ಜೋಷಿ ಪ್ರತಿಕ್ರಿಯೆ

0

ಶಿವಸೇನೆಯ ಪುಂಡರು ಕೊಲ್ಲಾಪುರದಲ್ಲಿ ಕನ್ನಡ ಧ್ವಜ ಸುಟ್ಟ ಹಿನ್ನೆಲೆಯಲ್ಲಿ ಎಂಇಎಸ್ ಮುಖಂಡರಿಗೆ ಕನ್ನಡಪರ ಕಾರ್ಯಕರ್ತರು ಮಸಿ ಬಳಿದರು.
ಈ ಕಾರಣಕ್ಕೆ ಅವರ ವಿರುದ್ಧ ಬೆಳಗಾವಿ ಪೊಲೀಸರು ಕೊಲೆ ಯತ್ನದ ಕೇಸ್ ಹಾಕಿರುವುದು ಖಂಡನೀಯ. ಇದರ ವಿರುದ್ಧ ಎಂಥ ಹೋರಾಟಕ್ಕೂ ಸಿದ್ಧ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನಾಡೋಜ ಡಾ. ಮಹೇಶ್ ಜೋಶಿ ಹೇಳಿದ್ದಾರೆ.
ನಾನು ವಿನಾಕಾರಣ ಯಾರೊಂದಿಗೂ ಘರ್ಷಣೆಗೆ ಇಳಿಯುವುದಿಲ್ಲ. ಆದರೆ ನಾಡು-ನುಡಿಗೆ ಆಪತ್ತು ಬಂದರೆ ಹೋರಾಟಗಾರರ ಜೊತೆ ಸೇರಿ ಹೋರಾಟಗಾರನಾಗುತ್ತೆನೆ. ಕಾನೂನು ಹೋರಾಟದ ಅಗತ್ಯವಿದ್ದರೆ ಸಚಿವರೊಂದಿಗೆ ಚರ್ಚಿಸಿ ಕಾನೂನು ಹೋರಾಟಕ್ಕೂ ಸಿದ್ಧನಾಗಿದ್ದೇನೆ ಎಂದು ಜೋಶಿ ಎಚ್ಚರಿಕೆ ನೀಡಿದ್ದಾರೆ.
ಶಿವಸೇನೆಯ ಕಿಡಿಗೇಡಿಗಳು ಕನ್ನಡ ಧ್ವಜ ಸುಟ್ಟಿದ್ದು ಹೇಯ ಕೃತ್ಯ. ಇದನ್ನು ಖಂಡಿಸಿ ಕನ್ನಡಪರ ಹೋರಾಟಗಾರರು ಪ್ರತಿಭಟಿಸಿ ಎಂಇಎಸ್ ಮುಖಂಡನಿಗೆ ಮಸಿ ಹಾಕಿದ್ದಾರಷ್ಟೆ. ಆದರೆ ಕನ್ನಡಪರ ಹೋರಾಟಗಾರರ ಬಳಿ ಯಾವುದೇ ಆಯುಧವಿರಲಿಲ್ಲ. ನನಗೆ ಕೇವಲ ಇಂಕನ್ನು ಎರಚಿ ತಮ್ಮ ಕನ್ನಡ ನಾಡಿನ ಪರವಾದ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇಷ್ಟಕ್ಕೆ ಕೊಲೆಯತ್ನ ಎಂದು ದೂರು ದಾಖಲಿಸಿರುವುದು ಜಾಮೀನು ಸಿಗಬಾರದು ಎಂಬ ದುರುದ್ದೇಶವನ್ನು ಹೊಂದಿದೆ ಎಂದರು.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

ಜನವರಿ,ಫೆಬ್ರವರಿಯಲ್ಲಿ ಓಮಿಕ್ರಾನ್ ತೀವ್ರ ಏರಿಕೆ ಲಕ್ಷಣವಿದೆ.

0

ಕೊರೊನಾದ ಹೊಸ ರೂಪಾಂತರಿ ವೈರಾಣು ಓಮಿಕ್ರಾನ್ ಸೋಂಕಿನ ಪ್ರಕರಣಗಳು ಜನವರಿ ಫೆಬ್ರವರಿ ತಿಂಗಳಿನಲ್ಲಿ ದೇಶಾದ್ಯಂತ ತೀವ್ರವಾಗಿ ಏರಿಕೆ ಕಾಣುವ ಸಾಧ್ಯತೆಯಿದೆ ಎಂದು ಹೇಳಿರುವ ಕೇಂದ್ರ ಸರ್ಕಾರವು ಹೊಸ ರೂಪಾಂತರಿಯು ಡೆಲ್ಟಾ ದಷ್ಟು ತೀವ್ರವಾಗಿರುವುದಿಲ್ಲ ಎಂದು ತಿಳಿಸಿದೆ.
ಕಳೆದ ತಿಂಗಳು ದಕ್ಷಿಣ ಆಫ್ರಿಕದಲ್ಲಿ ಪತ್ತೆಯಾದ ವೈರಾಣು ಈಗ 60ಕ್ಕೂ ಹೆಚ್ಚು ರಾಷ್ಟ್ರಗಳಿಗೆ ವ್ಯಾಪಿಸಿದೆ. ಇಂತಹ ವೇಗದ ಪ್ರಸರಣವನ್ನು ಹಿಂದೆಂದೂ ಕಂಡಿಲ್ಲ . ಹೆಚ್ಚು ಜನರು ಕೊರೊನಾ ನಿರೋಧಕ ಲಸಿಕೆ ಪಡೆದಿರುವುದರಿಂದ ಓಮಿಕ್ರಾನ್ ಸೋಂಕಿನಿಂದ ಅನಾರೋಗ್ಯದ ಗಂಭೀರತೆ ಕಡಿಮೆ ಇದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ವರದಿ ಮಾಡಿದೆ.
ಓಮಿಕ್ರಾನ್ ತೀವ್ರವಾಗಿ ಪ್ರಸರಣ ಹೊಂದಿದ್ದರೂ ತೀರಾ ಅಪಾಯಕಾರಿಯಲ್ಲ. ಡೆಲ್ಟಾ ಗಿಂತಲೂ ಕಡಿಮೆ ಆರೋಗ್ಯ ಸಮಸ್ಯೆಗಳನ್ನು ಈ ಸೋಂಕು ಉಂಟು ಮಾಡಲಿದೆ. ಏಕೆಂದರೆ ಸಾಂಕ್ರಾಮಿಕ ಪ್ರಸರಣದ ಅಂತ್ಯ ಭಾಗದಲ್ಲಿ ನಾವಿದ್ದೇವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.