Thursday, February 12, 2026
Thursday, February 12, 2026
Home Blog Page 1784

ಆಫ್ ಲೈನ್ ನಲ್ಲೂ ಡಿಜಿಟಲ್ ಪಾವತಿಗೆ ಅವಕಾಶ : ಆರ್ ಬಿಐ

0

ಗ್ರಾಮೀಣ ಮತ್ತು ಅರೆ ಪಟ್ಟಣ ಪ್ರದೇಶಗಳಲ್ಲಿ ಡಿಜಿಟಲ್ ವಹಿವಾಟುಗಳನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಭಾರತೀಯ ರಿಸರ್ವ್ ಬ್ಯಾಂಕ್, ಇಂಟರ್ನೆಟ್ ಸೇವೆ ಇಲ್ಲದಿದ್ದರೂ ಡಿಜಿಟಲ್ ಪಾವತಿಯನ್ನು ಸಾಧ್ಯವಾಗಿಸಲು ಅಗತ್ಯವಿರುವ ನಿಯಮಗಳ ಚೌಕಟ್ಟನ್ನು ಪ್ರಕಟಿಸಿದೆ.
ಯುಪಿಐ ಪಾವತಿ ಅಥವಾ ಇಂಟರ್ನೆಟ್ ಬ್ಯಾಂಕಿಂಗ್ ನಲ್ಲಿ ಇರುವಂತೆ ಪಾಸ್ ವರ್ಡ್ ಬಳಸಿ ಪಾವತಿಗೆ ಅನುಮೋದನೆ ನೀಡುವ ಅಗತ್ಯ ಆಫ್ಲೈನ್ ಡಿಜಿಟಲ್ ಪಾವತಿಯಲ್ಲಿ ಇರುವುದಿಲ್ಲ. ಇಂಟರ್ನೆಟ್ ಸೌಲಭ್ಯ ಇಲ್ಲದೆಯೂ ಈ ಬಗೆಯ ಪಾವತಿ ನಡೆಯುವ ಕಾರಣ, ಹಣ ಕಡಿತವಾಗಿರುವ ಅಥವಾ ಜಮಾ ಆಗಿರುವ ಕುರಿತು ಎಸ್ಎಂಎಸ್ ಸಂದೇಶವು ತುಸು ವಿಳಂಬವಾಗಿ ಬರಲಿದೆ ಎಂದು ಆರ್ ಬಿಐ ತಿಳಿಸಿದೆ.
ಇಂಟರ್ನೆಟ್ ಲಭ್ಯತೆ ಇಲ್ಲದ ಕಡೆಗಳಲ್ಲಿ, ಪ್ರತಿ ವಹಿವಾಟಿನಲ್ಲಿ ಗರಿಷ್ಠ ರೂ.200ರವರೆಗೆ ಪಾವತಿ ಮಾಡಲು ಅವಕಾಶ ಕಲ್ಪಿಸಲಾಗಿದೆ. ಹಣ ಪಾವತಿಸುವ ವ್ಯಕ್ತಿ ಹಾಗೂ ಸ್ವೀಕರಿಸುವ ವ್ಯಕ್ತಿ ಒಂದೇ ಕಡೆ ಇದ್ದಾಗ ಮಾತ್ರ ಈ ಬಗೆಯ ಪಾವತಿ ಸಾಧ್ಯವಾಗಲಿದೆ.
ಕಾರ್ಡ್, ವ್ಯಾಲೆಟ್ ಮತ್ತು ಮೊಬೈಲ್ ಸಾಧನ ಬಳಸಿ ಹಣ ಪಾವತಿಸುವ ಅವಕಾಶ ಇದೆ.
ಇಂಟರ್ನೆಟ್ ಲಭ್ಯ ಇಲ್ಲದ ಪ್ರದೇಶಗಳಲ್ಲಿ ಆಫ್ ಲೈನ್ ಮೂಲಕ ಪಾವತಿ ಸಾಧ್ಯವೇ ಎಂಬುದನ್ನು ಆರ್ ಬಿಐ 2020ರ ಸೆಪ್ಟೆಂಬರ್ ನಿಂದ 2021ರ ಜೂನ್ ನಡುವೆ ಪ್ರಾಯೋಗಿಕವಾಗಿ ಪರಿಶೀಲಿಸಿತ್ತು. ಈ ಪ್ರಕ್ರಿಯೆಯಲ್ಲಿ ಕಂಡುಕೊಂಡ ಅಂಶಗಳನ್ನು ಆಧರಿಸಿ, ನಿಯಮಗಳ ಚೌಕಟ್ಟನ್ನು ರೂಪಿಸಲಾಗಿದೆ.
ಇಂಟರ್ನೆಟ್ ಸಂಪರ್ಕ ದುರ್ಬಲವಾಗಿರುವ ಕಡೆಗಳಲ್ಲಿ ಈ ಬಗೆಯ ಪಾವತಿ ಸೌಲಭ್ಯವು ಡಿಜಿಟಲ್ ವಹಿವಾಟುಗಳಿಗೆ ಉತ್ತೇಜನ ನೀಡುವ ನಿರೀಕ್ಷೆಯಿದೆ ಎಂದು ಆರ್ ಬಿಐ ಹೇಳಿದೆ.
ಬಳಕೆದಾರರಿಂದ ಒಪ್ಪಿಗೆ ಪಡೆದ ನಂತರವೇ, ಆ ವ್ಯಕ್ತಿ ಗೆ ಆಫ್ ಲೈನ್ ಪಾವತಿಗೆ ಅವಕಾಶ ಕಲ್ಪಿಸಬಹುದು. ಈ ಬಗೆಯ ಪಾವತಿಗಳಲ್ಲಿ ಅಡಚಣೆ ಉಂಟಾದರೆ ಗ್ರಾಹಕರಿಗೆ ಏಕೀಕೃತ ಒಂಬುಡ್ಸ್ ಮನ್ ವ್ಯವಸ್ಥೆಯ ಮೊರೆ ಹೋಗಲು ಅವಕಾಶ ಇರುತ್ತದೆ ಎಂದು ತಿಳಿಸಿದೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Startto this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಕನ್ನಡ ಮಾಧ್ಯಮ ಎಂಜಿನಿಯರಿಂಗ್ : ವಿದ್ಯಾರ್ಥಿಗಳ ನಿರಾಸಕ್ತಿ

0

ಕೇಂದ್ರ ಸರ್ಕಾರದ ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಅನ್ವಯ ಪ್ರಸಕ್ತ ಶೈಕ್ಷಣಿಕ ವರ್ಷದಿಂದ ರಾಜ್ಯ ಸರ್ಕಾರ ಆರಂಭಿಸಿರುವ ಕನ್ನಡದಲ್ಲಿ ಎಂಜಿನಿಯರಿಂಗ್ ಪದವಿಗೆ ವಿದ್ಯಾರ್ಥಿಗಳು ನೀರಸ ಪ್ರತಿಕ್ರಿಯೆ ತೋರಿಸಿದ್ದಾರೆ.

ಕನ್ನಡ ಮಾಧ್ಯಮ ಎಂಜಿನಿಯರಿಂಗ್ ಕೋರ್ಸ್ ಗಳನ್ನು ಆಯ್ಕೆ ಮಾಡಿಕೊಂಡಿದ್ದ ಮೂರು ವಿದ್ಯಾರ್ಥಿಗಳು ಈ ಸೀಟುಗಳನ್ನು ತಿರಸ್ಕರಿಸಿ ಆಂಗ್ಲಮಾಧ್ಯಮ ಕೋರ್ಸ್ ಗಳಿಗೆ ದಾಖಲಾಗಿದ್ದಾರೆ.

ಪ್ರಸಕ್ತ ವರ್ಷದಿಂದ ಸರ್ಕಾರಿ ಮತ್ತು ಖಾಸಗಿ ಎಂಜಿನಿಯರಿಂಗ್ ಕಾಲೇಜುಗಳಲ್ಲಿ ಆರಂಭಿಸಿರುವ ನಾಲ್ಕು ವರ್ಷಗಳ ಬಿ.ಎಸ್ಸಿ ಆನರ್ಸ್ ಪದವಿ ಕೋರ್ಸ್ ಗಳಿಗೆ ದಾಖಲಾಗಲು ವಿದ್ಯಾರ್ಥಿಗಳು ಹಿಂಜರಿಯುತ್ತಿರುವುದು ವರದಿಯಾಗಿದೆ.

ಸರ್ಕಾರ ಅಗತ್ಯ ಪೂರ್ವಸಿದ್ಧತೆ ಕೈಗೊಳ್ಳದೆ ಮತ್ತು ವ್ಯಾಪಕ ಪ್ರಚಾರ ನೀಡದೆ ಆತುರದಿಂದ ಎಂಜಿನಿಯರಿಂಗ್ ಕಾಲೇಜುಗಳಲ್ಲಿ ಕನ್ನಡದಲ್ಲಿ ಎಂಜಿನಿಯರಿಂಗ್ ಪದವಿ ಮತ್ತು ಬಿ.ಎಸ್ಸಿ ಆನರ್ಸ್ ಪದವಿ ಗಳನ್ನು ಜಾರಿಗೆ ತಂದಿರುವುದೇ ವಿದ್ಯಾರ್ಥಿಗಳಿಂದ ನೀರಸ ಪ್ರತಿಕ್ರಿಯೆ ವ್ಯಕ್ತವಾಗಲು ಕಾರಣ ಎಂಬ ಆರೋಪಗಳು ಕೇಳಿಬರುತ್ತಿದೆ.

ಈ ಕುರಿತಂತೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕಿ ಎಸ್.ರಮ್ಯಾ ಅವರು ‘ಈ ಕೋರ್ಸ್ ಗಳಿಗೆ ಉತ್ತಮ ಬೇಡಿಕೆ ಬರಬಹುದು ಎಂಬ ನಮ್ಮ ನಿರೀಕ್ಷೆ ಹುಸಿಯಾಗಿದೆ. ವಿದ್ಯಾರ್ಥಿಗಳನ್ನು ಸೆಳೆಯಲು ವಿಟಿಯು ಜೊತೆ ಚರ್ಚಿಸಿ ಕ್ರಮ ಜರುಗಿಸಲಾಗುವುದು’ ಎಂದು ತಿಳಿಸಿದ್ದಾರೆ.

“ಕನ್ನಡ ಎಂಜಿನಿಯರಿಂಗ್ ವಿದ್ಯಾರ್ಥಿಗಳನ್ನು ಆಕರ್ಷಿಸಲು ಕನ್ನಡ ಪಠ್ಯಪುಸ್ತಕಗಳು ಲಭ್ಯವಾಗುವಂತೆ ಮಾಡುವುದು ಹಾಗೂ ಕೋರ್ಸ್ ಗಳ ಬಗ್ಗೆ ಹೆಚ್ಚು ಪ್ರಚಾರ ಕೈಗೊಳ್ಳುವುದು ಸೇರಿದಂತೆ ಇತರ ಕ್ರಮಗಳ ಬಗ್ಗೆಯೂ ಚಿಂತನೆ ನಡೆಸಲಾಗುವುದು” ಎಂದು ವಿಟಿಯು ಕುಲಪತಿ ಪ್ರೊ. ಕರಿಸಿದ್ದಪ್ಪ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Startto this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಕೋವಿಡ್ ನಿಯಂತ್ರಣಕ್ಕೆ ಸರ್ಕಾರದ ಮಹತ್ವದ ಸಭೆ

0

ಕರ್ನಾಟಕದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ದಿನೇ ದಿನೇ ಏರುಗತಿ ಕಾಣುತ್ತಿದೆ. ಆ ಹಿನ್ನೆಲೆಯಲ್ಲೇ ಕೈಗೊಳ್ಳಬೇಕಾದ ನಿಯಂತ್ರಣ ಕ್ರಮಗಳ ಬಗ್ಗೆ ಚರ್ಚಿಸಿ ತೀರ್ಮಾನ ಕೈಗೊಳ್ಳುವ ಮಹತ್ವದ ಸಭೆ ಸರಕಾರ ನಡೆಸಲಿದೆ.
ಕೋವಿಡ್ ದೃಢ ಪ್ರಮಾಣ ಶೇ.5ರಷ್ಟು ಮೀರಿದ ಪ್ರದೇಶಗಳಲ್ಲಿ ಲಾಕ್ ಡೌನ್ ಸೇರಿದಂತೆ ಕಠಿಣ ಕ್ರಮ ಕೈಗೊಳ್ಳಬೇಕು. ದೃಢ ಪ್ರಮಾಣ ದರ ಆಧರಿಸಿ ವಲಯಗಳನ್ನು ವಿಂಗಡಿಸಿ, ಕ್ರಮ ಕೈಗೊಳ್ಳಬೇಕು ಎಂದು ತಾಂತ್ರಿಕ ಸಲಹಾ ಸಮಿತಿ ಸರ್ಕಾರಕ್ಕೆ ಶಿಫಾರಸು ಮಾಡಿದೆ.
ಈ ಶಿಫಾರಸುಗಳ ಜೊತೆಗೆ, ಮಹಾರಾಷ್ಟ್ರ, ತಮಿಳುನಾಡು, ಕೇರಳದಲ್ಲಿ ಕೈಗೊಂಡ ಕ್ರಮಗಳ ಬಗ್ಗೆಯೂ ಪರಿಶೀಲನೆ ನಡೆಸಲಾಗುವುದು ಎಂದು ಮೂಲಗಳು ತಿಳಿಸಿವೆ.
ಡಿಸೆಂಬರ್ 3ರಂದು 413ರಷ್ಟಿದ್ದ ಕೋವಿಡ್ ಪ್ರಕರಣಗಳ ಸಂಖ್ಯೆ ಜನವರಿ ಮೊದಲ ವಾರ 1,290ಕ್ಕೆ ಏರಿದೆ.
ಕೋವಿಡ್ ಪತ್ತೆಗೆ ನಡೆಸುವ ಪರೀಕ್ಷೆಗಳ ಸಂಖ್ಯೆಯೂ ಅದೇ ಮಟ್ಟದಲ್ಲಿ ಏರಿದೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಡಿಸೆಂಬರ್ ಮೊದಲ ವಾರ ಪ್ರಕರಣಗಳ ಸಂಖ್ಯೆ 150ರ ಆಸುಪಾಸಿನಲ್ಲಿದ್ದು, ಧೃಡ ಪ್ರಮಾಣ ಶೇ.0.47ರಷ್ಟಿತ್ತು.
ಜನವರಿ ಮೊದಲ ವಾರ ಪ್ರಕರಣ ಸಂಖ್ಯೆ 1,041ಕ್ಕೆ ಇದ್ದು ಧೃಡ ಪ್ರಮಾಣ ಶೇ.1.43ಕ್ಕೆ ಹೆಚ್ಚಳವಾಗಿದೆ ಎನ್ನಲಾಗುತ್ತಿದೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Startto this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಜಮ್ಮು ಕಾಶ್ಮೀರ : ಇಬ್ಬರು ಉಗ್ರರ ಹತ್ಯೆ

0

ಜಮ್ಮು-ಕಾಶ್ಮೀರದಲ್ಲಿ ಲಷ್ಕರೆ ತಯ್ಬಾ ಅಗ್ರ ಕಮಾಂಡರ್ ಸಲೀಂ ಪರ್ರೆ ಸೇರಿದಂತೆ ಇಬ್ಬರು ಉಗ್ರರನ್ನು ಭದ್ರತಾ ಸಿಬ್ಬಂದಿ ಹೊಡೆದುರುಳಿಸಿದ್ದಾರೆ.

ಶ್ರೀನಗರದ ಶಾಲಿಮಾರ್ ನಲ್ಲಿ ಮೋಸ್ಟ್ ವಾಂಟೆಡ್ ಉಗ್ರ ಸಲೀಂ ಹಾಗೂ ಪಾಕಿಸ್ತಾನದ ಉಗ್ರ ಹಫೀಸ್ ಅಡಗಿರುವ ಬಗ್ಗೆ ಭದ್ರತಾ ಸಿಬ್ಬಂದಿಗೆ ಬಂದಂತಹ ಖಚಿತ ಮಾಹಿತಿಯ ಮೇರೆಗೆ ಕಾರ್ಯಾಚರಣೆ ನಡೆಸಿ ಸಲೀಂ ನನ್ನು ಹತ್ಯೆಗೈದಿದ್ದಾರೆ.

ಯೋಧರು ಕಾರ್ಯಾಚರಣೆ ನಡೆಸುತ್ತಿದ್ದ ವೇಳೆ ಪಾಕಿಸ್ತಾನದ ಉಗ್ರ ಹಫೀಸ್ ಪರಾರಿಯಾಗಲು ಯತ್ನಿಸಿದ್ದಾನೆ. ಆತನನ್ನು ಭಾರತೀಯ ಸೈನಿಕರು ಬೆನ್ನತ್ತಿ ಎನ್ಕೌಂಟರ್ ನಡೆಸಿ ಹತ್ಯೆಗೈದಿದ್ದಾರೆ.

ಭಾರತೀಯ ಯೋಧರು ಕಳೆದವಾರವಷ್ಟೇ ಕೇವಲ 36 ಗಂಟೆಯಲ್ಲಿ 9 ಉಗ್ರರನ್ನು ಹತ್ಯೆಗೈದು ಶೌರ್ಯ ಮೆರೆದಿದ್ದಾರೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Startto this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಗೃಹ ಇಲಾಖೆಗೆ ಹೆಸರು ತನ್ನಿ- ಸಚಿವ ಆರಗ ಜ್ಞಾನೇಂದ್ರ

0

ಪೊಲೀಸರು ಒಳ್ಳೆಯ ಕೆಲಸ ಮಾಡದ್ದಿದ್ದರೆ, ನಾನು ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಡುವ ಸಂದರ್ಭ ಎದುರಾಗುತ್ತದೆ ಎಂದು ಗೃಹಸಚಿವ ಆರಗ ಜ್ಞಾನೇಂದ್ರ ಅವರು ಎಚ್ಚರಿಕೆ ನೀಡಿದ್ದಾರೆ.

ತೀರ್ಥಹಳ್ಳಿ ಪಟ್ಟಣದಲ್ಲಿ ಶ್ರೀರಾಮೇಶ್ವರ ದೇವರ ಎಳ್ಳಮಾವಾಸ್ಯೆ ಜಾತ್ರೆ ಬಂದೋಬಸ್ತ್ ಗೆ ನೇಮಕಗೊಂಡ ರಕ್ಷಣಾ ಸಿಬ್ಬಂದಿಗಳನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.

“ಪೊಲೀಸರು ಒಳ್ಳೆಯ ಕೆಲಸ ಮಾಡಿ ಗೃಹ ಇಲಾಖೆಗೆ ಹೆಸರು ತರಬೇಕು” ಎಂದು ಆರಗ ಜ್ಞಾನೇಂದ್ರ ಅವರು ಹೇಳಿದರು.

ಪೊಲೀಸರು ಹೊಣೆಗಾರಿಕೆ ನಿರ್ವಹಿಸುವಲ್ಲಿ ವಿಫಲವಾದ ಕಾರಣಕ್ಕೆ ದೇಶದಲ್ಲಿ ಅನೇಕ ಗೃಹ ಸಚಿವರು ರಾಜೀನಾಮೆ ನೀಡಿದ ಪ್ರಸಂಗ ಘಟಿಸಿವೆ. ಅಂತಹ ಸಂದರ್ಭ ನನಗೆ ಪೊಲೀಸರಿಂದ ಆಗಬಾರದು. ಪೊಲೀಸರ ಸಹಕಾರ ನನಗೆ ಬೇಕಿದೆ. ನಿಮಗೆ ನನ್ನಿಂದ ಸಿಗುವಂತಹ ಎಲ್ಲ ಸಹಕಾರ ಮಾಡುತ್ತೇನೆ. ಎಷ್ಟೇ ಒತ್ತಡ ಇದ್ದರೂ ನನ್ನ ಕೆಲಸ ಮಾಡದೇ ಬಿಡುವುದಿಲ್ಲ. ರಾತ್ರಿ 12 ಗಂಟೆಯಾದರೂ ಪ್ರತಿ ಕಡತ ಪರಿಶೀಲಿಸಿ ಸಹಿ ಮಾಡುತ್ತೇನೆ. ಪೊಲೀಸ್ ಇಲಾಖೆಯ ಸತತವಾಗಿ ಕೆಲಸ ಮಾಡಬೇಕು ಎಂಬುದೇ ನನ್ನ ಅಭಿಲಾಷೆ ಎಂದು ಗೃಹ ಸಚಿವರಾದ ಆರಗ ಜ್ಞಾನೇಂದ್ರ ಅವರು ತಿಳಿಸಿದ್ದಾರೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Startto this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಅತಿಥಿ ಉಪನ್ಯಾಸಕರ ಬೇಡಿಕೆ ಈಡೇರಸಿ- ಹರತಾಳು ಹಾಲಪ್ಪ

0

ಸಾಗರ ತಾಲೂಕಿನ ವಿವಿಧ ಸರ್ಕಾರಿ ಪದವಿ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರ ಬಗೆಹರಿಸುವಂತೆ ಶಾಸಕ ಹಾಲಪ್ಪ ಅವರು ಮುಖ್ಯಮಂತ್ರಿಯವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದಾರೆ.

ವಿವಿಧ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅತಿಥಿ ಉಪನ್ಯಾಸಕರು ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ಕೆಲವು ದಿನಗಳಿಂದ ತರಗತಿಗಳನ್ನು ಬಹಿಷ್ಕರಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ. ಪದವಿ ವಿದ್ಯಾರ್ಥಿಗಳಿಗೆ ತರಗತಿಗಳು ಸರಿಯಾಗಿ ನಡೆಯುತ್ತಿಲ್ಲ. ಜೊತೆಗೆ ಜನವರಿ ತಿಂಗಳಲ್ಲಿ ಆಂತರಿಕ ಪರೀಕ್ಷೆ ಎದುರಿಸಬೇಕಾಗಿದೆ. ಪದವಿ ಶಿಕ್ಷಣ ಪಡೆದುಕೊಳ್ಳುವ ಗ್ರಾಮೀಣ ವಿದ್ಯಾರ್ಥಿಗಳಿಗೆ ಸಮಸ್ಯೆಯಾಗಿದೆ. ಅತಿಥಿ ಉಪನ್ಯಾಸಕರ ಸಮಸ್ಯೆಗೆ ಸಮರ್ಪಕ ಪರಿಹಾರ ಒದಗಿಸುವ ಮೂಲಕ ಕಾಲೇಜುಗಳಲ್ಲಿ ಶೈಕ್ಷಣಿಕ ಚಟುವಟಿಕೆ ನಿರಂತರವಾಗಿ ನಡೆಯುವಂತೆ ನೋಡಿಕೊಳ್ಳಬೇಕು. ಖಾಲಿ ಇರುವ ಪ್ರಾಧ್ಯಾಪಕ ಹುದ್ದೆಗಳನ್ನು ಭರ್ತಿ ಮಾಡಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Startto this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಪಂಚಾಯತಿ ಕ್ಷೇತ್ರಗಳ ವಿಂಗಡಣೆ ಸಮಿತಿಗೆ ಚಾಲನೆ

0

ಜನಸಂಖ್ಯೆ ಆಧಾರದಲ್ಲಿ ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಕ್ಷೇತ್ರ ಮರು ವಿಂಗಡಣೆ ಗೆ, ಗಡಿ ನಿರ್ಧರಿಸುವ, ಸದಸ್ಯರ ಸಂಖ್ಯೆ ನಿರ್ಧರಿಸುವ ಮತ್ತು ಮೀಸಲು ನಿಗದಿ ಪಡಿಸಲು ರಚಿಸಿರುವ ಪಂಚಾಯಿತಿ ಸಮಿತಿಯು ತನ್ನ ಕಾರ್ಯಕ್ಕೆ ಅಧಿಕೃತ ಚಾಲನೆ ನೀಡಿದೆ.

ಜಿಲ್ಲಾಧಿಕಾರಿಗಳ ಜೊತೆ ಇತ್ತೀಚಿಗೆ ವರ್ಚುವಲ್ ಸಭೆ ನಡೆಸಿರುವ ತ್ರಿಸದಸ್ಯ ಸಮಿತಿ, ಜಿಲ್ಲಾ ಮಟ್ಟದಿಂದ ಪ್ರಾಥಮಿಕ ಮಾಹಿತಿ ಪಡೆದಿದೆ. 2021-2026 ರ ಅವಧಿಗೆ ಪಂಚಾಯಿತಿ ಗಳ ಗಡಿ ನಿರ್ಧರಿಸಬೇಕಾಗಿದೆ. ಈ ಕುರಿತು ಆಯೋಗಕ್ಕೆ ಸೂಕ್ತ ಪ್ರಸ್ತಾವನೆಗಳನ್ನು ಸಲ್ಲಿಸುವಂತೆ ಜಿಲ್ಲಾಧಿಕಾರಿಗಳಿಗೆ ಸಮಿತಿ ಅಧ್ಯಕ್ಷ ಎಂ. ಲಕ್ಷ್ಮೀನಾರಾಯಣ ಅವರು ಸೂಚನೆ ನೀಡಿದ್ದಾರೆ.

ಗಡಿ ನಿರ್ಧರಿಸುವ ಹಕ್ಕು ಹೊಂದಿದ್ದ ರಾಜ್ಯ ಚುನಾವಣಾ ಆಯೋಗಕ್ಕೆ ಈ ಮೊದಲು ಜಿಲ್ಲಾಧಿಕಾರಿಗಳು ಸಲ್ಲಿಸಿದ್ದ ಪ್ರಸ್ತಾವನೆಗಳ ಬಗ್ಗೆ ಸಾರ್ವಜನಿಕರು ಮತ್ತು ಸ್ಥಳೀಯ ಜನಪ್ರತಿನಿಧಿಗಳು ಆಕ್ಷೇಪಿಸಿದ್ದ ನ್ನು ಸಭೆಯಲ್ಲಿ ಪ್ರಸ್ತಾಪಿಸಲಾಯಿತು. ಆಯೋಗಕ್ಕೆ ವರದಿ ಸಲ್ಲಿಸಿ, ಅನುಭವ ಹೊಂದಿರುವ ಜಿಲ್ಲಾಧಿಕಾರಿಗಳ ಸಲಹೆ, ಸೂಚನೆ ಹಾಗೂ ಸಹಕಾರ ಅಗತ್ಯವಿರುವ ಬಗ್ಗೆ ಸಮಿತಿ ಮನವರಿಕೆ ಮಾಡಿಕೊಟ್ಟಿದೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Startto this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ನ್ಯೂಯಾರ್ಕ್ ನಲ್ಲೇ ಒಂದೇ ದಿನದಲ್ಲಿ 85K ಕೋವಿಡ್ ಪ್ರಕರಣ

0

ನ್ಯೂ ಯಾರ್ಕ್ ನಲ್ಲಿ 2021 ರ ಕೊನೆಯ ದಿನದಂದು 85 ಸಾವಿರಕ್ಕೂ ಹೆಚ್ಚು ಹೊಸ ಕೊರೊನಾ ವೈರಸ್ ಪ್ರಕರಣಗಳನ್ನು ದಾಖಲಿಸಿದೆ. ಇದು ಸಾಂಕ್ರಾಮಿಕ ರೋಗ ಪ್ರಾರಂಭವಾದಾಗಿನಿಂದ ರಾಜ್ಯದಲ್ಲಿ ಅತಿ ಹೆಚ್ಚು ಪ್ರಕರಣಗಳಲ್ಲಿ ಇದು ಮೊದಲನೆಯದಾಗಿದೆ ಎಂದು ಅಧಿಕಾರಿಗಳು ತಿಳಿಸಿದರು. ಕೊರೊನಾ ಪಾಸಿಟಿವ್ ಪರೀಕ್ಷಾ ಫಲಿತಾಂಶಗಳ ಸಂಖ್ಯೆ -85,476 ಕ್ಕೆ ತಲುಪಿದೆ. ರಜಾದಿನದ ಪ್ರಯಾಣ ಮತ್ತು ಕೂಟಗಳಿಂದ ಹೊಸ ಸೋಂಕುಗಳು ಅಧಿಕೃತ ಎಣಿಕೆಗಳಲ್ಲಿ ಪ್ರತಿಫಲಿಸುವುದಿಲ್ಲ. ಚಳಿಗಾಲದ ಉಲ್ಬಣದಿಂದ ನಾವು ಹೋರಾಡುತ್ತಿದ್ದೆವೆ. ಕೋವಿಡ್ -19 ನಿಂದ ಜನಸಮುದಾಯವನ್ನು ಹೇಗೆ ರಕ್ಷಿಸಬೇಕು ಎಂಬ ಆತಂಕದಲ್ಲಿ ನಾವಿದ್ದೇವೆ ಎಂದು ಗವರ್ನರ್ ಕ್ಯಾಥಿ ಹೊಚುಲ್ ಹೇಳಿದ್ದಾರೆ. ಮುಖವಾಡವನ್ನು ಧರಿಸಿ, ನಿಮ್ಮ ಕೈಗಳನ್ನು ತೊಳೆದುಕೊಳ್ಳಿ ಮತ್ತು ನಮ್ಮ ವಿಲೇವಾರಿಯಲ್ಲಿರುವ ಲಸಿಕೆಯನ್ನು ಹೊಂದಿರುವ ಅತ್ಯುತ್ತಮ ಸಾಧನದ ಲಾಭವನ್ನು ಪಡೆದುಕೊಳ್ಳಿ. ನ್ಯೂಯಾರ್ಕ್ ವಾಷಿಂಗ್ಟನ್ DC ಮತ್ತು ಇತರ ಪೂರ್ವ ರಾಜ್ಯಗಳ ಜೊತೆಗೆ ರಾಷ್ಟ್ರೀಯ ಉಲ್ಬಣವನ್ನು ಮುನ್ನಡೆಸುವ 7 ಹಾಟ್ ಸ್ಪಾಟ್‌ಗಳಲ್ಲಿ ಒಂದಾಗಿದೆ. ಎಂದು ತಿಳಿಸಿದರು.
ದೇಶಾದ್ಯಂತ ದಾಖಲೆಯ 585,013 ಹೊಸ ಪ್ರಕರಣಗಳು ದಾಖಲಾಗಿವೆ.
ಆಸ್ಪತ್ರೆಯು ದೇಶಾದ್ಯಂತ ಮೇಲ್ಮುಖವಾಗಿದೆ. ನ್ಯೂಯಾರ್ಕ್ ರಾಜ್ಯದಲ್ಲಿ ಹಿಂದಿನ 24 ಗಂಟೆಗಳಲ್ಲಿ ಸುಮಾರು 90 ಸಾವಿರ ಲಸಿಕೆ ಡೋಸ್‌ಗಳನ್ನು ನೀಡಲಾಗಿದೆ. ಕೋವಿಡ್‌ನಿಂದಾಗಿ ರಾಜ್ಯದಲ್ಲಿ 88 ಸಾವುಗಳು ಸಂಭವಿಸಿವೆ ಎನ್ನಲಾಗುತ್ತಿದೆ. ರಾಷ್ಟ್ರೀಯವಾಗಿ, ನ್ಯೂಯಾರ್ಕ್ ಟೈಮ್ಸ್ ಡೇಟಾಬೇಸ್ ಪ್ರಕಾರ 1,181 ಕೋವಿಡ್ ಕೇಸ್ ಗಳು ದಾಖಲಾಗಿವೆ. ಎರಡು ವಾರಗಳ ಹಿಂದೆ, ನ್ಯೂಯಾರ್ಕ್‌ನಲ್ಲಿ ಒಟ್ಟು 21 ಸಾವಿರ ಧನಾತ್ಮಕ ಪರೀಕ್ಷೆಗಳು ಆತಂಕಕಾರಿ ದಾಖಲೆಯನ್ನು ಸ್ಥಾಪಿಸಲು ಸಾಕಾಗಿತ್ತು. ಕೆಲವು ಪರೀಕ್ಷಾ ತಜ್ಞರ ಪ್ರಕಾರ, ಓಮಿಕ್ರಾನ್‌ನ ಕಾಲಾವಧಿಯು 72 ಗಂಟೆಗಳಷ್ಟು ಎನ್ನ ಲಾಗುತ್ತಿದೆ.
ವಿಮಾನಯಾನ ಸಂಸ್ಥೆಗಳು ಯುನೈಟೆಡ್ ಸ್ಟೇಟ್ಸ್‌ನಾದ್ಯಂತ 2700 ಕ್ಕೂ ಹೆಚ್ಚು ವಿಮಾನಗಳನ್ನು ರದ್ದುಗೊಳಿಸಿವೆ. ರಾಷ್ಟ್ರದ ಮಧ್ಯಭಾಗದಲ್ಲಿ ಭಾರೀ ಹಿಮಪಾತದ ವರದಿಗಳ ನಡುವೆ ರದ್ದತಿಯನ್ನು ಮಾಡಲಾಯಿತು. ವಿಮಾನಯಾನ ಡೇಟಾ ಪೂರೈಕೆದಾರರಾದ ಫ್ಲೈಟ್‌ವೇರ್ ಪ್ರಕಾರ, ವಾರದ ಎಲ್ಲಾ ನಿಗದಿತ ವಿಮಾನಗಳಲ್ಲಿ 5.7% ರಷ್ಟು 2000 ಟ್ರಿಪ್‌ಗಳನ್ನು ಏರ್ ಲೈನ್ಸ್ ರದ್ದುಗೊಳಿಸಿದೆ. ಸುಮಾರು ಅರ್ಧದಷ್ಟು ರದ್ದತಿಗಳು ಚಿಕಾಗೋದ ಎರಡು ವಿಮಾನ ನಿಲ್ದಾಣಗಳಲ್ಲಿ ಕೇಂದ್ರೀಕೃತವಾಗಿವೆ. ಅಲ್ಲಿ ಭಾನುವಾರದವರೆಗೆ ದಿನವಿಡೀ ಭಾರೀ ಹಿಮ ಮತ್ತು ಬಲವಾದ ಗಾಳಿಯನ್ನು ನಿರೀಕ್ಷಿಸಲಾಗಿದೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Startto this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಪ್ರೊ.ಕಬಡ್ಡಿ ಲೀಗ್ ಬೆಂಗಳೂರು ಬುಲ್ಸ್ ಅಗ್ರಸ್ಥಾನ

0

ಬೆಂಗಳೂರಿನ ವೈಟ್ ಫೀಲ್ಡ್ ನಲ್ಲಿರುವ ಶೆರಟಾನ್ ಗ್ರ್ಯಾಂಡ್ ಹೋಟೆಲ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪ್ರೊ ಕಬಡ್ಡಿ ಲೀಗ್ ಪಂದ್ಯಾವಳಿಯಲ್ಲಿ ಭಾನುವಾರ 4 ತಂಡಗಳ ನಡುವೆ ಪಂದ್ಯ ನಡೆಯಿತು.
ಸ್ಟೀಲರ್ಸ್ ವಿರುದ್ಧ ಜಯಂಟ್ಸ್ ಗೆ ಸೋಲು
ಮೊದಲನೇ ಪಂದ್ಯವು:
ಗುಜರಾತ್ ಜಯಂಟ್ಸ್(36) ಮತ್ತು ಹರಿಯಾಣ ಸ್ಟೀಲರ್ಸ್(38) ತಂಡಗಳ ನಡುವೆ ಪಂದ್ಯ ನಡೆಯಿತು.ಗುಜರಾತ್ ವಿರುದ್ಧ ಹರಿಯಾಣ ಭರ್ಜರಿ ಜಯ ಸಾಧಿಸಿತು.
ಹರಿಯಾಣ ತಂಡವು ಮೊದಲಾರ್ಧದ ವಿರಾಮದ ವೇಳೆಗೆ 22-10 ರಿಂದ ಮುನ್ನಡೆ ಸಾಧಿಸಿತ್ತು.ಆದರೆ,ವಿರಾಮದ ನಂತರ ಗುಜರಾತ್ ತಂಡವು ತನ್ನ ಪೌರುಷ ತೋರಿತು.ನಿರಂತರ ದಾಳಿ ನೀಡಿದ ಗುಜರಾತ್ ತಂಡವು ಒಂದು ಹಂತದಲ್ಲಿ ಸಮಬಲದಲ್ಲಿತ್ತು.ತಂಡದ ಆಲ್ ರೌಂಡರ್ ರಾಕೇಶ್ 19 ಅಂಕಗಳನ್ನು ಗಳಿಸಿ ತಂಡಕ್ಕೆ ಸೇರಿಸಿದರು.
ರೇಡಿಂಗ್ ನಲ್ಲಿ ವಿಕಾಸ್ 11 ಅಂಕಗಳನ್ನು ಗಳಿಸಿದರು. ಆಲ್ ರೌಂಡರ್ ಮೀಟು ಕೂಡ 10 ಅಂಕಗಳಿಸಿ ತಂಡದ ಗೆಲುವಿಗೆ ರೂವಾರಿಗಳಾಗಿ ಹರಿಯಾಣ ತಂಡವು 38-36 ರಿಂದ ಗುಜರಾತ್ ತಂಡವನ್ನು ಸೋಲಿಸಿ ಹರಿಯಾಣ ಗೆಲುವಿನ ದಡ ಮುಟ್ಟುವಂತೆ ಮಾಡಿದರು.
ಪುಣೇರಿ ವಿರುದ್ಧ ಬೆಂಗಳೂರು ರೋಚಕ ಜಯ
ಎರೆಡನೇ ಪಂದ್ಯವು:
ಪುಣೇರಿ‌ ಪಲ್ಟನ್(29) ಮತ್ತು ಬೆಂಗಳೂರು ಬುಲ್ಸ್ (40) ತಂಡಗಳ ನಡುವೆ ಪಂದ್ಯ ನಡೆಯಿತು. ಪುಣೀರಿ ವಿರುದ್ಧ ಜಯ ಸಾಧಿಸಿದ ಬೆಂಗಳೂರು ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ.
ಮೊದಲಾರ್ಧದ ವಿರಾಮದ ವೇಳೆಗೆ ಪುಣೇರಿ ತಂಡವು 18-13 ರಿಂದ ಮುನ್ನಡೆ ಸಾಧಿಸಿತ್ತು.
ವಿರಾಮದ ನಂತರ ತಕ್ಕಂತೆ ಪೈಪೋಟಿ ನೀಡಿದ ಪವನ್ ಬಳಗವು ಪುಣೇರಿಗೆ ಸೋಲಿನತ್ತ ತಳ್ಳಿತು. ಈ ಅವಧಿಯಲ್ಲಿ 27 ಪಾಯಿಂಟ್ಸ್ ತನ್ನ ಬುಟ್ಟಿಗೆ ಹಾಕಿಕೊಂಡ ಬೆಂಗಳೂರು ತಂಡವು ಪವನ್ ಶೆರಾವತ್ ಮತ್ತು ಚಂದ್ರನ್ ರಂಜಿತ್ (6) ಅಂಕ ಹಾಗೆಯೇ ಭರತ್ ಕೂಡ ಉತ್ತಮ ಜೊತೆಗೂಡಿ ಉತ್ತಮ ಪ್ರದರ್ಶನ ನೀಡುವತ್ತ ಇವರುಗಳ ಆಟವು ಮಹತ್ವದಾಗಿತ್ತು.
ಇದರಿಂದ ಬೆಂಗಳೂರು ತಂಡ 11 ಪಾಯಿಂಟ್ ಗಳ ಅಂತರದಿಂದ ರೋಚಕ ಜಯ ಸಾಧಿಸಿತು.
ಟಾಪ್ ಪಟ್ಟಿಯಲ್ಲಿರುವ 4 ತಂಡಗಳು:
೧. ಬೆಂಗಳೂರು ಬುಲ್ಸ್ :-23
೨. ದಬಾಂಗ್ ಡೆಲ್ಲಿ :-21
೩. ಯು.ಮುಂಬಾ :-17
೪. ಪಟ್ನಾ ಪೈರೇಟ್ಸ್ :-16
ಇಂದು ನಡೆಯಲಿರುವ ಪಂದ್ಯಗಳು:
೧. ಜೈಪುರ್ ಪಿಂಕ್ ಪ್ಯಾಂಥರ್ಸ್ ಮತ್ತು ಬೆಂಗಾಲ್ ವಾರಿಯರ್ಸ್
ಸಮಯ:7.30
೨. ತೆಲುಗು ಟೈಟನ್ಸ್ ಮತ್ತು ಪಟ್ನಾ ಪೈರೇಟ್ಸ್
ಸಮಯ:8.30

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Startto this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಎಂದಿನಂತೆ ಪ್ರಸಕ್ತ ವರ್ಷವೂ ಇ ಡಬ್ಲ್ಯೂ ಎಸ್ ಮೀಸಲಾತಿ

0

ವೈದ್ಯಕೀಯ ಕೋರ್ಸ್ ಗಳ ಪ್ರವೇಶಕ್ಕಾಗಿ ನಡೆಯುವ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆಗೆ ಆರ್ಥಿಕವಾಗಿ ಹಿಂದುಳಿದ ವರ್ಗಗಳಿಗೆ ಈಗಾಗಲೇ ಅಸ್ತಿತ್ವದಲ್ಲಿರುವ ಮೀಸಲಾತಿಯೇ ಪ್ರಸಕ್ತ ಶೈಕ್ಷಣಿಕ ವರ್ಷಕ್ಕೆ ಅನ್ವಯವಾಗಲಿದೆ ಎಂದು ಸುಪ್ರೀಂಕೋರ್ಟ್ ಗೆ ಕೇಂದ್ರ ಸರ್ಕಾರ ತಿಳಿಸಿದೆ.
ವೈದ್ಯಕೀಯ ಕೋರ್ಸ್ ಗಳಿಗೆ ಸೀಟು ಹಂಚಿಕೆ ಮಾಡುವಾಗ ಇತರೆ ಹಿಂದುಳಿದ ವರ್ಗಗಳಿಗೆ ಕೇಂದ್ರ ಸರ್ಕಾರವು ಶೇ.27ರಷ್ಟು ಹಾಗೂ ವಾರ್ಷಿಕ 8 ಲಕ್ಷ ರೂಪಾಯಿವರೆಗೆ ಆದಾಯ ಹೊಂದಿರುವ ಸಾಮಾನ್ಯ ವರ್ಗದ ಇಡಬ್ಲ್ಯುಎಸ್ ಗಳಿಗೆ ಶೇ.10ರಷ್ಟು ಮೀಸಲಾತಿ ನೀಡುವ ಕುರಿತು ಅಧಿಸೂಚನೆ ಹೊರಡಿಸಿದ್ದು, ಇದನ್ನು ಪ್ರಶ್ನಿಸಿ ಸಲ್ಲಿಕೆಯಾದ ಅರ್ಜಿಗಳನ್ನು ಸುಪ್ರೀಂ ಕೋರ್ಟ್ ವಿಚಾರಣೆ ನಡೆಸುತ್ತಿದೆ. ಅಲ್ಲದೆ, ಯಾವ ಆಧಾರದ ಮೇಲೆ ಎಂಟು ಲಕ್ಷ ರೂಪಾಯಿ ಆದಾಯ ಮಿತಿ ನಿಗದಿ ಪಡಿಸಿದ್ದರು ಎಂದು ಕೇಂದ್ರ ಸರ್ಕಾರವನ್ನೂ ಮೊದಲು ಪ್ರಶ್ನಿಸಿತ್ತು.
ಇಡಬ್ಲ್ಯುಎಸ್ ಮೀಸಲಾತಿ ಪ್ರಶ್ನಿಸಿ ಪ್ರಕರಣ ನ್ಯಾಯಾಲಯದಲ್ಲಿದ್ದು, ನೀಟ್ -ಪಿಜಿ ಕೌನ್ಸಿಲಿಂಗ್ ಸಹ ವಿಳಂಬವಾಗಿದೆ. ಇದನ್ನು ಖಂಡಿಸಿ ಕಳೆದವಾರ ಹೊಸದಿಲ್ಲಿಯಲ್ಲಿ ಕಿರಿಯ ವೈದ್ಯರ ಪ್ರತಿಭಟನೆ ನಡೆಸಿದ್ದರು. ಬಳಿಕ ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವೀಯ ಅವರು ಇಡಬ್ಲ್ಯೂಎಸ್ ನಿಯಮಗಳ ಪರಿಷ್ಕರಣೆ ವರದಿಯನ್ನು ಸುಪ್ರೀಂ ಕೋರ್ಟ್ ತಜ್ಞರ ಸಮಿತಿಗೆ ನೀಡಲಾಗುವುದು ಎಂದು ಭರವಸೆ ನೀಡಿದ ಬಳಿಕವೇ ಪ್ರತಿಭಟನೆ ನಿಲ್ಲಿಸಿದ್ದರು.
ಈಗ ಕೇಂದ್ರ ಸರ್ಕಾರವು ಈ ಕುರಿತು ನ್ಯಾಯಾಲಯಕ್ಕೆ ಅಫಿಡವಿಟ್ ಸಲ್ಲಿಸಿದ್ದು, ಪ್ರಸ್ತುತ ಶೈಕ್ಷಣಿಕ ಸಾಲಿಗೆ ಈಗಾಗಲೇ ಪ್ರವೇಶಾತಿ, ಸೀಟು ಹಂಚಿಕೆ ನಡೆಯುತ್ತಿರುವ ಕಾರಣ ಸದ್ಯ ನಿಯಮ ಬದಲಾವಣೆ ಮಾಡುವುದು ಗೊಂದಲಕ್ಕೀಡು ಮಾಡಲಿದೆ. ಹಾಗಾಗಿ ಮುಂದಿನ ವರ್ಷದಿಂದ ಹೊಸ ನಿಯಮಗಳು ಅನ್ವಯವಾಗುತ್ತದೆ ಎಂದು ಮಾಹಿತಿ ನೀಡಿದೆ.
ಅಲ್ಲದೆ, ಇಡಬ್ಲ್ಯೂಎಸ್ ಆದಾಯಮಿತಿ ಮಾನದಂಡದ ಅರ್ಹತೆಯನ್ನು ನಿರ್ಧರಿಸಿರುವ ಮೂವರು ಸದಸ್ಯರುಳ್ಳ ಸಮಿತಿಯ ಶಿಫಾರಸುಗಳನ್ನು ಸಹ ಸ್ವೀಕರಿಸಲಾಗುವುದು ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಬಳಿಕ ನ್ಯಾಯಾಲಯವು ಜನವರಿ 6ಕ್ಕೆ ವಿಚಾರಣೆ ಮುಂದೂಡಿತು.