Wednesday, February 18, 2026
Wednesday, February 18, 2026
Home Blog Page 1714

Shimoga News – Thursday, 17 February 2022

0

Book Your Advertisement Now in Shimoga News.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Shimoga News
Send a Whatsapp message Startto this contact to get started. That’s it! We will send you your daily dose of positive Shimoga News on Whatsapp!

Why Keelambi Media Lab Pvt Ltd in Shimoga News ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

Shimoga News

KLIVE Android App on Google Play Store

Shimoga News

Download the most loved Klive App for your Android phone or tablet.

ಟೀಮ್ ಇಂಡಿಯಾ ಗೆಲುವಿನತ್ತ ಮೊದಲ ಹೆಜ್ಜೆ

0

ನಾಯಕ ರೋಹಿತ್ ಶರ್ಮಾ ಅವರು ಸಿಡಿಲಬ್ಬರದ ಬ್ಯಾಟಿಂಗ್ ಮತ್ತು ಯುವ ಆಟಗಾರರಾದ ಇಶಾನ್ ಕಿಶನ್ ಹಾಗೂ ಸೂರ್ಯಕುಮಾರ್ ಯಾದವ್ ಅವರ ಜವಾಬ್ದಾರಿಯುತ ಆಟದ ನೆರವಿನಿಂದ ಭಾರತ ತಂಡ ಮೂರು ಪಂದ್ಯಗಳ ಟಿ-20 ಸರಣಿಯ ಮೊದಲ ಪಂದ್ಯದಲ್ಲಿ 6 ವಿಕೆಟ್ ಗಳಿಂದ ವೆಸ್ಟ್ ಇಂಡೀಸ್ ತಂಡವನ್ನು ಮಣಿಸಿದೆ. ಇದರೊಂದಿಗೆ ಸರಣಿಯಲ್ಲಿ 1- 0 ಮುನ್ನಡೆ ಸಾಧಿಸಿದೆ.

ಈಡನ್ ಗಾರ್ಡನ್ಸ್ ನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ ಗೆ ಆಹ್ವಾನ ಪಡೆದ ವೆಸ್ಟ್ ಇಂಡೀಸ್ ತಂಡ 20 ಓವರ್ಗಳಲ್ಲಿ 7 ವಿಕೆಟ್ ಗೆ 157 ರನ್ ಕಲೆಹಾಕಿತು. ನಂತರ ಗುರಿ ಬೆನ್ನತ್ತಿದ್ದ ಭಾರತ 18.5 ಓವರ್ ಗಳಲ್ಲಿ ನಾಲ್ಕು ವಿಕೆಟ್ ನಷ್ಟಕ್ಕೆ 162 ರನ್ ಗಳಿಸಿ ಗೆಲುವಿನ ಕೇಕೆ ಹಾಕಿತು. ನಾಯಕ ರೋಹಿತ್ ಶರ್ಮಾ ಜೊತೆ ಇಶಾನ್ ಕಿಶನ್, ಸೂರ್ಯ ಕುಮಾರ್ ಯಾದವ್ ಮತ್ತು ವೆಂಕಟೇಶ್ ಅಯ್ಯರ್ ತಂಡದ ಗೆಲುವಿಗೆ ಕಾಣಿಕೆ ನೀಡಿದ್ದಾರೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Start‘ to this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಮಾನಸಿಕ ಖಿನ್ನತೆ ಆತಂಕಬೇಡ ಪರಿಹಾರವಿದೆ

0

ಮಾನಸಿಕ ಖಿನ್ನತೆ ಎಂಬುವುದು ಇತ್ತೀಚಿನ ದಿನಗಳಲ್ಲಿ ಜನರನ್ನು ಕಾಡುವ ಅನೇಕ ಸಮಸ್ಯೆಗಳಲ್ಲಿ ಇದು ಕೂಡ ಒಂದಾಗಿದೆ. ಖಿನ್ನತೆ ಯೆಂಬುದು ಮನುಷ್ಯನಿಗೆ ಬರುವ ಶೀತಾ, ಕೆಮ್ಮು, ಜ್ವರ ಇದೇ ರೀತಿ ಬರುವ ಸಾಮಾನ್ಯ ವಾದಂತಹ ಮಾನಸಿಕ ತೊಂದರೆ ಇದಾಗಿದೆ.

ಖಿನ್ನತೆ ಎಂಬುದು ಇಂಥವರಿಗೆ ಬರುತ್ತದೆ ಎಂದು ನಿರ್ಧರಿಸಲು ಸಾಧ್ಯವಿಲ್ಲ. ಅಂದರೆ ಲಿಂಗಬೇಧವಿಲ್ಲದೆ, ಬಡವ ಶ್ರೀಮಂತ ಎಂಬ ಭೇದಭಾವವಿಲ್ಲದೆ, ಮೇಲು-ಕೀಳು ಎಂಬ ಪರಿಮಿತಿಯಿಲ್ಲದೆ ಯಾರನ್ನು ಬೇಕಾದರೂ ಕಾಡಬಹುದಾದ ಸಮಸ್ಯೆ ಖಿನ್ನತೆ ಯಾಗಿದೆ.

ಖಿನ್ನತೆಗೆ ವಯೋಮಿತಿ ಇರುವುದಿಲ್ಲ. ಮನುಷ್ಯನ ಜೀವಿತದವಧಿಯ ಹಂತದಲ್ಲಿ ಯಾವಾಗ ಬೇಕಾದರೂ ಸಹ ಕಾಣಿಸಿಕೊಳ್ಳಬಹುದು. ಖಿನ್ನತೆ ಒಬ್ಬ ವ್ಯಕ್ತಿಯ ಭಾವನೆ, ವರ್ತನೆ, ಆತನ ಹಾವಭಾವದ ಮೇಲೆ ವ್ಯತ್ಯಾಸವನ್ನುಂಟು ಮಾಡುತ್ತದೆ. ಇದರ ಜೊತೆಗೆ ಶಾರೀರಿಕ ಆರೋಗ್ಯದ ಮೇಲೂ ಸಹ ದುಷ್ಪರಿಣಾಮವನ್ನು ಬೀರುತ್ತದೆ.

ಮಾನಸಿಕ ಖಿನ್ನತೆ ಎಂಬುದು ಮೊದಲೇ ತಿಳಿಸಿರುವಂತೆ ಯಾರನ್ನ ಬೇಕಾದರೂ, ಯಾವ ಸಮಯದಲ್ಲಿ ಬೇಕಾದರೂ ಒಬ್ಬ ವ್ಯಕ್ತಿಯಲ್ಲಿ ಕಾಣಿಸಿಕೊಳ್ಳಬಹುದಾದ ಸಾಮಾನ್ಯ ರೋಗ ಇದಾಗಿದೆ. ಖಿನ್ನತೆಗೆ ಒಳಗಾಗುವ ವರು ಸಾಮಾನ್ಯವಾಗಿ ಪುರುಷರಿಗಿಂತ ಮಹಿಳೆಯರು ಹೆಚ್ಚು ಎಂದು ಅನೇಕ ಅಧ್ಯಯನಗಳಿಂದ ತಿಳಿದುಬಂದಿದೆ.
30ರಿಂದ 40 ವರ್ಷದವರಲ್ಲಿ ಹೆಚ್ಚಾಗಿ ಖಿನ್ನತೆಗೆ ಒಳಗಾಗುತ್ತಾರೆ ಎಂದು ಅಧ್ಯಯನಗಳು ತಿಳಿಸಿವೆ. ಆದ್ರೆ, ಪ್ರಸ್ತುತ ದಿನಗಳಲ್ಲಿ ಯುವಕರು ಕೂಡ ಖಿನ್ನತೆಗೆ ಒಳಗಾಗುತ್ತಾರೆ.

ಹಾಗಾದ್ರೆ, ಖಿನ್ನತೆಗೆ ಒಳಗಾದ ವ್ಯಕ್ತಿಗಳ ಲಕ್ಷಣಗಳನ್ನು ಮೊದಲು ನಾವು ತಿಳಿದುಕೊಳ್ಳೋಣ. ಖಿನ್ನತೆಗೆ ಒಳಗಾಗಿರುವ ವ್ಯಕ್ತಿ ಯಾವಾಗಲೂ ಒಂಟಿಯಾಗಿರಲು ಬಯಸುತ್ತಾನೆ. ಆತನಲ್ಲಿ ಯಾವಾಗಲೂ ಬೇಸರ, ದುಃಖ, ನಿರ್ಲಕ್ಷ್ಯ ಭಾವದಿಂದ ಇರುತ್ತಾನೆ. ಖಿನ್ನತೆಗೊಳಗಾದ ವ್ಯಕ್ತಿ ಅತಿವೇಗವಾಗಿ ಆಯಾಸ ಗೊಳ್ಳುತ್ತಾನೆ. ಮತ್ತು ಅವನಲ್ಲಿ ಹಸಿವು ಕ್ಷೀಣಿಸುತ್ತದೆ.
ಆತನಲ್ಲಿ ನಿದ್ರಾಹೀನತೆ ಸಮಸ್ಯೆ ಕಂಡುಬರುತ್ತದೆ. ಖಿನ್ನತೆಗೆ ಒಳಗಾದ ವ್ಯಕ್ತಿ ಯಾವಾಗಲೂ ಭವಿಷ್ಯದ ಬಗ್ಗೆ ನಿರಾಶಾಭಾವನೆ, ತಾನು ನಿರುಪಯುಕ್ತ ತನ್ನಿಂದ ಏನು ಆಗದು ಹೀಗೆ ಹಲವಾರು ವಿಚಾರದ ಬಗ್ಗೆ ಯಾವಾಗಲೂ ಚಿಂತಿಸುತ್ತಲೇ ಇರುತ್ತಾನೆ. ಇದರ ಜೊತೆಗೆ ಆತನಲ್ಲಿ ಪಾಪಪ್ರಜ್ಞೆಯೂ ಕೂಡ ಕಾಡುತ್ತಿರುತ್ತದೆ.
ಕೆಲವರಲ್ಲಿ ಸಿಟ್ಟು, ಅತಿಯಾದ ಹೆದರಿಕೆ ಅಳುಕು ಕಂಡುಬರುತ್ತದೆ. ಖಿನ್ನತೆಗೆ ಒಳಗಾಗಿರುವ ವ್ಯಕ್ತಿಯಲ್ಲಿ ಯಾವುದಾದರೂ ನಿರ್ಧಾರ ತೆಗೆದುಕೊಳ್ಳಲು ಆತನಿಗೆ ಕಷ್ಟಕರವಾಗುತ್ತದೆ. ಏಕೆಂದರೆ ಆತನಲ್ಲಿ ಏಕಾಗ್ರತೆ ಕಡಿಮೆ ಇರುತ್ತದೆ. ಯಾವಾಗಲೂ ಆತ ಕೆಟ್ಟ ಯೋಚನೆಗಳನ್ನು ಮಾಡುತ್ತಿರುತ್ತಾನೆ.ಅಂದರೆ ಆತ್ಮಹತ್ಯೆಯ ಬಗ್ಗೆ ಚಿಂತಿಸುವುದು ಹೀಗೆ. ಈ
ಎಲ್ಲಾ ಲಕ್ಷಣಗಳು ಖಿನ್ನತೆಗೊಳಗಾಗಿ ಇರುವ ವ್ಯಕ್ತಿಯಲ್ಲಿ ಕಂಡುಬರುತ್ತದೆ ಎಂದು ವೈದ್ಯರು ತಿಳಿಸಿದ್ದಾರೆ.

ಒಬ್ಬ ವ್ಯಕ್ತಿ ಬದುಕಿನಲ್ಲಿ ಹಲವಾರು ಬಾರಿ ಆತ ಖಿನ್ನತೆಗೆ ಒಳಗಾಗಬಹುದು. ಕೆಲವರು ಕೇವಲ ಒಂದೇ ಬಾರಿ ಖಿನ್ನತೆಗೂ ಸಹ ಒಳಗಾಗಬಹುದು. ಸಾಮಾನ್ಯವಾಗಿ ವ್ಯವಹಾರದ ಕಷ್ಟನಷ್ಟಗಳ ಕಾರಣದಿಂದಾಗಿ ಅನೇಕ ವ್ಯಕ್ತಿಗಳು ಖಿನ್ನತೆಗೆ ಒಳಗಾಗುತ್ತಾರೆ. ಖಿನ್ನತೆಗೆ ಸಮರ್ಪಕವಾದ ಕಾರಣಗಳೇ ಇರಬೇಕೆಂದೇನೂ ಇಲ್ಲ. ಕೆಲವೊಮ್ಮೆ ಅನೇಕ ವ್ಯಕ್ತಿಗಳಲ್ಲಿ ವಂಶ ಪಾರಂಪರಿಕವಾಗಿ ಖಿನ್ನತೆಗೆ ಒಳಗಾಗುವ ಸಾಧ್ಯತೆಗಳು ಹೆಚ್ಚಿದೆ ಎಂದು ಅಧ್ಯಯನಗಳಿಂದ ತಿಳಿದುಬಂದಿದೆ.

ಹೆಚ್ಚಾಗಿ ಖಿನ್ನತೆಗೆ ಒಳಗಾಗುವವರು ಹಣಕಾಸಿನ ತೊಂದರೆಗಳು ಇರುವುದು ಅಥವಾ ತಮ್ಮ ಪ್ರೀತಿಪಾತ್ರರ ಸಾವು, ವಿವಾಹ ವಿಚ್ಛೇದನಗಳ ಸಮಸ್ಯೆ, ವ್ಯವಹಾರದ ಒತ್ತಡಗಳು ಹೀಗೆ ಹತ್ತು ಹಲವಾರು ಕಾರಣಗಳಿಂದ ಒಬ್ಬ ವ್ಯಕ್ತಿ ಖಿನ್ನತೆಗೆ ಒಳಗಾಗುತ್ತಾನೆ ಎಂದು ವೈದ್ಯರು ಹೇಳಿದ್ದಾರೆ.

ಖಿನ್ನತೆಯಿಂದ ಹೊರಬರುವುದು ಹೇಗಿದ್ದರೆ, ಖಿನ್ನತೆಗೊಳಗಾದವರಿಗೆ ಪ್ರತಿದಿನ ಧ್ಯಾನ,ವ್ಯಾಯಾಮ ಮಾಡುವುದರಿಂದ ಆತನಲ್ಲಿ ಏಕಾಗ್ರತೆ ಮೂಡುವಲ್ಲಿ ಸಹಾಯಕವಾಗುತ್ತದೆ. ತನ್ನ ದಿನದ ಬಹು ಸಮಯವನ್ನು ಕುಟುಂಬದವರ ಜೊತೆ ಕಳೆಯುವುದರಿಂದ ಮನಸ್ಸಿಗೆ ಖುಷಿ ಆಗುವ ಜೊತೆ ತನ್ನ ಬೆಂಬಲಕ್ಕೆ ಕುಟುಂಬದವರು ಇದ್ದಾರೆ ಎಂಬ ಭಾವನೆ ಮೂಡಲು ಸಹಾಯಕವಾಗುತ್ತದೆ. ತನ್ನ ಬಿಡುವಿನ ಸಮಯದಲ್ಲಿ ಸಂಗೀತವನ್ನು ಕೇಳುವುದು.ಮಕ್ಕಳ ಜೊತೆ ಆಟವಾಡುವುದು, ಸಾಕು ಪ್ರಾಣಿಗಳ ಜೊತೆ ಸಮಯ ಕಳೆಯುವುದರಿಂದ ಮನಸ್ಸು ಹಗರಾಗಲು ಇದು ಸಹಾಯಕ ಎಂದು ಹೇಳಬಹುದು. ಕರಕುಶಲ ವಸ್ತುಗಳನ್ನು ತಯಾರಿಸುವುದು, ಹೊಸ ತರದ ಅಡುಗೆ ಗಳನ್ನು ಮಾಡುವುದು ಹೀಗೆ ತನ್ನ ಸಮಯವನ್ನು ಕಳೆಯುವುದರಿಂದ ಖಿನ್ನತೆಗೊಳಗಾದ ವ್ಯಕ್ತಿಯನ್ನು ಖಿನ್ನತೆಯಿಂದ ಹೊರತರಲು ಈ ಅಂಶಗಳು ಸಹಾಯಕವಾಗುತ್ತದೆ ಎಂದು ಹೇಳಬಹುದು.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Start‘ to this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ದೇಶದಲ್ಲಿ ಕೊರೋನಾ ಪಾಸಿಟಿವಿಟಿ ಶೇ3.63ಕ್ಕೆ ಇಳಿಕೆ

0

ದೇಶದಲ್ಲಿ ಕೊರೋನಾ ಸೋಂಕಿನ ಹೊಸ ಪ್ರಕರಣಗಳ ಸಂಖ್ಯೆ ಗಣನೀಯವಾಗಿ ಇಳಿಮುಖವಾಗುತ್ತಿದೆ. ಇದರ ಹಿನ್ನೆಲೆಯಲ್ಲಿ ನಿರ್ಬಂಧಗಳು ಕೈಬಿಡುವ ಅಥವಾ ಮತ್ತಷ್ಟು ಸಡಿಲಗೊಳಿಸುವ ಸಂಬಂಧ ತೀರ್ಮಾನ ಕೈಗೊಳ್ಳಬೇಕು ಎಂದು ಕೇಂದ್ರ ಸರ್ಕಾರವು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸಲಹೆ ನೀಡಿದೆ.

ಈ ಸಂಬಂಧ ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ ಅವರು ರಾಜ್ಯಗಳಿಗೆ ಪತ್ರ ಬರೆದಿದ್ದಾರೆ. ಪರಿಶೀಲನಾ ಸಭೆಯ ಗಳನ್ನು ವಲಯದಲ್ಲಿನ ಸೋಂಕಿನ ಆದರಿಸಿ ನಿರ್ಧಾರ ಕೈಗೊಳ್ಳಬೇಕು ಎಂದು ಸಲಹೆ ನೀಡಿದ್ದಾರೆ.

ದೇಶದಲ್ಲಿ ಜನವರಿ 21ರಿಂದ ಕೋರೋಣ ಸೋಂಕಿನ ಹೊಸ ಪ್ರಕರಣಗಳ ಸಂಖ್ಯೆ ಕಡಿಮೆಯಾಗಿದೆ. ಈ ಭಾರ ಸರಾಸರಿ ದೈನಂದಿನ ಪ್ರಕರಣಗಳು 50,476 ಇದ್ದರೆ ಬುಧವಾರ 27,409 ಪ್ರಕರಣಗಳು ದಾಖಲಾಗಿದೆ. ದೈನಂದಿನ ಪಾಸಿಟಿವಿಟಿ ಪ್ರಮಾಣವು ಶೇ.3.63ಕ್ಕೆ ಇಳಿದಿದೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Start‘ to this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ರಾಜ್ಯದಲ್ಲಿ ಕೋವಿಡ್ ಸೋಂಕು ಇಳಿಕೆ

0

ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಕಡಿಮೆಯಾಗುವುದರ ಜೊತೆಗೆ ಕೊರೋನಾ ಸಾವಿನ ಪ್ರಮಾಣವು ಕೂಡ ಇಳಿಮುಖ ಕಂಡಿದೆ.

ನಿನ್ನೆ 99,516 ಜನರಿಗೆ ಕೊರೋನಾ ಪರೀಕ್ಷೆ ನಡೆಸಲಾಗಿದೆ. 1,894 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ. 24 ಜನರು ಮೃತಪಟ್ಟಿದ್ದಾರೆ. ಪ್ರಸ್ತುತ 23,284 ಸಕ್ರಿಯ ಪ್ರಕರಣಗಳಿವೆ. ರಾಜ್ಯದಲ್ಲಿ ಸೋಂಕಿನ ಪ್ರಮಾಣ ಶೇ.1.90 ರಷ್ಟಿದೆ. ಇದುವರೆಗೆ ರಾಜ್ಯದಲ್ಲಿ 39.31 ಲಕ್ಷ ಜನರು ಸೋಂಕಿಗೆ ಒಳಗಾಗಿದ್ದಾರೆ. 39,715 ಜನರು ಮೃತರಾಗಿದ್ದಾರೆ. ಫೆಬ್ರವರಿ 16ರಂದು 5,418 ಮಂದಿ ಗುಣಮುಖರಾಗಿದ್ದಾರೆ. ಒಟ್ಟು ಗುಣಮುಖರಾದವರ ಸಂಖ್ಯೆ 38.68 ಲಕ್ಷಕ್ಕೆ ಏರಿಕೆಯಾಗಿದೆ.

ಬೆಂಗಳೂರು ನಗರದಲ್ಲಿ 835 ಮತ್ತು ಮೈಸೂರಿನಲ್ಲಿ 125 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ. ಉಳಿದ 23 ಜಿಲ್ಲೆಗಳಲ್ಲಿ ಸೋಂಕಿತರ ಸಂಖ್ಯೆ ಎರಡಂಕಿ ಯಲ್ಲಿದ್ದರೆ, ಐದು ಜಿಲ್ಲೆಗಳಲ್ಲಿ ಒಂದಂಕಿ ಯಲ್ಲಿದೆ.

ಇದೇ ಸಂದರ್ಭದಲ್ಲಿ ಬೆಂಗಳೂರು ನಗರದಲ್ಲಿ ನಾಲ್ಕು, ಬಳ್ಳಾರಿಯಲ್ಲಿ 3, ಉತ್ತರ ಕನ್ನಡ, ದಾರವಾಡ ಬಾಗಲಕೋಟೆ, ಉಡುಪಿಯಲ್ಲಿ ತಲಾ 2, ಚಿಕ್ಕಬಳ್ಳಾಪುರ,ದಕ್ಷಿಣ ಕನ್ನಡ, ರಾಯಚೂರು, ವಿಜಯನಗರದಲ್ಲಿ ಒಬ್ಬ ಸೋಂಕಿತರು ಮೃತಪಟ್ಟಿದ್ದಾರೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Start‘ to this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ತಪ್ಪು ತಪ್ಪೆಂದೇಕೆ ಹೀಗೆಳೆಯುವಿರಿ

0

ತಪ್ಪುಗಳು ಮನುಷ್ಯನಿಂದ ಆಗದೆ ಮರದಿಂದ ಆಗಲು ಸಾಧ್ಯವೇ ಎನ್ನುವ ಮಾತನ್ನು ನೀವು ಕೇಳಿಯೇ ಇರುತ್ತೀರಿ.
ಹಾಗಾದ್ರೆ ತಪ್ಪು ಮಾಡುವುದು ಒಳ್ಳೆಯದ್ದೋ , ಕೆಟ್ಟದ್ದೋ ಅನ್ನೋ ಪ್ರಶ್ನೆ ಮನಸ್ಸಿನಲ್ಲಿ ಮೂಡುವುದು ಸಹಜ.
ಒಮ್ಮೊಮ್ಮೆ ನಾವು ಮಾಡುವ ತಪ್ಪುಗಳು ಸರಿದಾರಿಯನ್ನು ತೋರಿಸಿಕೊಡುತ್ತದೆ. ಮತ್ತೊಮ್ಮೆ ಒಂದು ಸಣ್ಣ ತಪ್ಪು ಕೂಡ ದೊಡ್ಡ ಅವಾಂತರವನ್ನೇ ಸೃಷ್ಟಿಮಾಡುತ್ತದೆ.

ಹಾಗಾದ್ರೆ ತಪ್ಪು ಮಾಡುವುದು ತಪ್ಪಾ? ನಮ್ಮಿಂದ ತಪ್ಪೇ ಆಗದಂತೆ ನೋಡಿಕೊಳ್ಳೋದು ಸರಿ ದಾರಿನಾ ಅನಿಸಬಹುದು.
ನಮ್ಮಿಂದ ತಪ್ಪಾಗುವುದು ಬೇರೆ. ನಾವು ತಪ್ಪು ಮಾಡುವುದು ಬೇರೆ, ತಪ್ಪು ಆಗುವುದಕ್ಕೂ ಮಾಡುವುದಕ್ಕೂ ವ್ಯತ್ಯಾಸವೇನು ಅಂತ ನಿಮ್ಮ ಮನಸ್ಸಲ್ಲಿ ಪ್ರಶ್ನೆ ಮೂಡಬಹುದು.?
ಗೊತ್ತಿದ್ದು ಗೊತ್ತಿದ್ದು ನಾವು ಅದನ್ನು ಮಾಡುತ್ತೇವೆ ಅಂದ್ರೆ ಅದು ಘನಘೋರ ತಪ್ಪು. ಗೊತ್ತಿಲ್ಲದೆ ಆಗುವುದು ಸಹಜ ತಪ್ಪು ಅನ್ನಬಹುದೇನೋ…

ಮನುಷ್ಯನ ಜೀವನವೆಂದರೆ ತಪ್ಪುಗಳ ಸರಮಾಲೆ. ಬಹುಶಃ ತಪ್ಪು ಮಾಡದ ವ್ಯಕ್ತಿ ಜಗತ್ತಿನಲ್ಲಿಯೇ ಯಾರೂ ಇರಲಿಕ್ಕಿಲ್ಲ. ತಪ್ಪು ಮಾಡಿಯೇ ಮನುಷ್ಯ ಅದರ ಅನುಭವದಿಂದ ಬೆಳೆಯುತ್ತಾನೆ. ಎಲ್ಲವೂ ಸರಿಯಾಗಿಯೇ, ಸಮಸ್ಯೆಯಿಲ್ಲದೆ ನಡೆದರೆ ಅಂತಹ ಅನುಭವ ಪಕ್ವತೆಯನ್ನು ಪಡೆದಿಲ್ಲವೆಂದರ್ಥ.
ತಪ್ಪು ಮಾಡದೇ ಇರುವುದು ಬಹಳ ಕಠಿಣ. ಆದ್ದರಿಂದ ತಪ್ಪಾಗಿರುವುದನ್ನು ಸರಿ ಮಾಡಿಕೊಳ್ಳುವುದು ಮನುಷ್ಯನ ದೊಡ್ಡಗುಣ ಎನ್ನಬಹುದು. Mistakes are the portals to discoveries ಎಂಬುದನ್ನು James jercee ಅವರು ಹೇಳಿದ್ದಾರೆ. ನಮ್ಮ ಸಾಧನೆಗೆ ತಪ್ಪುಗಳು ಕೂಡ ಒಂದು ಮೆಟ್ಟಿಲಾಗಬಹುದು. ನಾವು ಮಾಡುವ ಒಳ್ಳೆಯ ಕೆಲಸಕ್ಕೆ ಭಗವಂತ ತಕ್ಷಣ ಯಾಕೆ ಫಲ ಕೊಡುವುದಿಲ್ಲ ? ಎಂದು ಯಾರೋ ಒಬ್ಬರು ಮಹಾತ್ಮ ರೊಡನೆ ಕೇಳಿದರಂತೆ. ಅದಕ್ಕವರು -ನಾವು ಮಾಡಿದ ತಪ್ಪುಗಳಿಗೆ ಕೂಡ ಭಗವಂತ ತಕ್ಷಣ ಶಿಕ್ಷೆ ಕೊಡುವುದಿಲ್ಲ ಎಂದರಂತೆ. ಅದಕ್ಕಾಗಿಯೇ ತಿಳಿದವರು ಹೇಳುತ್ತಾರೆ , ತಪ್ಪು ಮಾಡುವುದು ಮನುಜ ಗುಣ. ಆದರೆ ಕ್ಷಮಿಸುವುದು ದೈವೀಗುಣ ಅಂತ.

ಜಪಾನಿಯರಲ್ಲಿ ಒಂದು ಗುಣವಿದೆಯಂತೆ.ಅವರು ತಪ್ಪುಗಳನ್ನು ತಮ್ಮ ಲಾಭಕ್ಕಾಗಿ ಬಳಸಿಕೊಳ್ಳುತ್ತಾರೆ. ಅದು ಹೇಗೆ? ತಪ್ಪುಗಳನ್ನು ಲಾಭಕ್ಕೆ ಬಳಸಿಕೊಳ್ಳುವುದು ಎನ್ನುವುದು ನಿಮ್ಮ ಪ್ರಶ್ನೆಯಾಗಿರಬಹುದು. ಯಾವುದಾದರೂ ಪ್ರಮಾದ ವಾದರೆ, ಆಕಸ್ಮಿಕವಾಗಿ ತಪ್ಪಾದರೆ, ಅದು ಅವರ ಗಮನಕ್ಕೆ ಬಂದರೆ ಅದನ್ನು ಒಂದು ವಿಧಿಯೆಂದೇ ಬಗೆಯುತ್ತಾರೆ. ಏಕೆ ಗೊತ್ತೇ? ಅವರ ಪ್ರಕಾರ, ನಮ್ಮ ಕೆಲಸವು ಇನ್ನಷ್ಟು ಉತ್ತಮಗೊಳಿಸಲು ತಪ್ಪುಗಳೇ ಕೀಲಿಕೈ ಇದ್ದಂತೆ ಎನ್ನುವುದು ಅವರ ಭಾವನೆ.

ತಿಳಿದೊ ತಿಳಿಯದೊ ಕೆಲವೊಮ್ಮೆ ನಮ್ಮಿಂದ ತಪ್ಪಾಗುವುದು ಸಹಜ. ಇದರಿಂದಾಗಿ ನಮ್ಮ ಪ್ರೀತಿ ಪಾತ್ರರು, ಸ್ನೇಹಿತರು, ಅಥವಾ ಬಂಧುಗಳ ನಡುವೆ ಮನಸ್ತಾಪ ಉಂಟಾಗುತ್ತದೆ.
ನಾವು ಮಾಡಿದ ತಪ್ಪು ನಮ್ಮ ಅಂತರಾತ್ಮಕ್ಕೆ ತಪ್ಪು ಎಂಬುದಾಗಿ ತಿಳಿದ ತಕ್ಷಣ ನಾವು ಅದನ್ನು ಒಪ್ಪಿಕೊಳ್ಳಬೇಕು. ಅದರೊಂದಿಗೆ ಹೃದಯಪೂರ್ವಕವಾಗಿ ಕ್ಷಮೆಯನ್ನೂ ಕೇಳಬೇಕು. ನಮ್ಮಿಂದ ಆದ ತಪ್ಪಿಗೆ ನೋವನ್ನು ಕಡಿಮೆ ಮಾಡಲು ಸಾಧ್ಯವಾಗದೇ ಇದ್ದರೂ, ಪಶ್ಚಾತಾಪದಿಂದ ಮುಕ್ತರಾಗಬಹುದು.

ಇನ್ನೊಬ್ಬರು ನಮ್ಮ ತಪ್ಪನ್ನು ಎತ್ತಿ ತೋರಿಸುವ ಮೊದಲೇ, ಅವರು ಅದನ್ನು ಎಲ್ಲೆಡೆ ಹರಡುವ ಮೊದಲೇ, ನಮ್ಮ ತಪ್ಪನ್ನು ನಾವು ಒಪ್ಪಿಕೊಂಡರೆ ಉತ್ತಮ ಅಲ್ಲವೇ?

ನಮ್ಮ ತಪ್ಪನ್ನು ಒಪ್ಪಿಕೊಳ್ಳುವುದುರಿಂದ ಅಸಮಾಧಾನದ ವಾತಾವರಣ ತಿಳಿಯಾಗುತ್ತದೆ. ನಮ್ಮ ತಪ್ಪನ್ನು ನಾವು ಒಪ್ಪಿಕೊಂಡರೆ ಇತರರೂ ನಮ್ಮ ಸಹಾಯಕ್ಕೆ ಬರುತ್ತಾರೆ. ನಮಗೆ ನಮ್ಮ ತಪ್ಪಿನ ಅರಿವಾದಲ್ಲಿ ಎದುರಿಗೆ ಇರುವವರು ಸಹ ಪರ್ವಾಗಿಲ್ಲ ಅಂಥದ್ದೇನು ಆಗಿಲ್ಲವಲ್ಲ ಎಂದು ನಮ್ಮ ರಕ್ಷಣೆಗೆ ಬರುತ್ತಾರೆ. ನಮ್ಮಿಂದ ಬೇರೆಯವರಿಗೆ ತೊಂದರೆ ಆದ ತಕ್ಷಣ ಕ್ಷಮಿಸಿ ಎಂದರೆ ಅವರು ಕ್ಷಮಿಸುತ್ತಾರೆ. ಒಂದು ವೇಳೆ ನಾವು ನಮ್ಮ ತಪ್ಪನ್ನು ಒಪ್ಪಿಕೊಳ್ಳದೆ ಇದಕ್ಕೆ ಇತರರನ್ನು ದೂರಿದರೆ ಸಮಾಜ ತಕ್ಷಣ ನನ್ನನ್ನು ದೂಷಿಸಲು ಪ್ರಾರಂಭಿಸುತ್ತದೆ.

ಮನೋವಿಜ್ಞಾನಿಗಳ ಪ್ರಕಾರ, ನಮ್ಮ ತಪ್ಪನ್ನು ದೇವರು ಬೇಕಾದರೂ ಮನ್ನಿಸಬಹುದು. ಆದರೆ ನಮ್ಮ ನರಮಂಡಲ ಮಾತ್ರ ಕ್ಷಮಿಸುವುದಿಲ್ಲ ಎಂಬುದಾಗಿ ಹೇಳುತ್ತಾರೆ. ಅಂದರೆ ನಾವು ಪ್ರಜ್ಞಾಪೂರ್ವಕವಾಗಿ ಪ್ರತಿ ಬಾರಿಯೂ ಮಾಡಿದ ತಪ್ಪನ್ನು ಪದೇ ಪದೇ ಮರುಕಳಿಸುತ್ತಿದ್ದರೆ, ನಮ್ಮ ಆರೋಗ್ಯವನ್ನೂ , ನೆಮ್ಮದಿಯನ್ನೂ ಹಾಳುಮಾಡುತ್ತದೆ.

ಆದ್ದರಿಂದ ನಮ್ಮ ಆರೋಗ್ಯವನ್ನೂ, ನೆಮ್ಮದಿಯನ್ನು ಕಾಪಾಡಿಕೊಳ್ಳಬೇಕಾದರೆ ಪ್ರಜ್ಞಾಪೂರ್ವಕವಾಗಿ ತಪ್ಪು ಮಾಡದಿರೋಣ. ತಪ್ಪು ನಡೆದಾಗ ಒಪ್ಪಿಕೊಳ್ಳೋಣ. ಆತ್ಮಸಾಕ್ಷಿಗೆ ಸರಿಯಾಗಿ ನಡೆದುಕೊಳ್ಳೋಣ. ಇತರರ ತಪ್ಪುಗಳನ್ನು ಕ್ಷಮಿಸೋಣ.

ನಮ್ಮಿಂದಾದ ತಪ್ಪುಗಳನ್ನು ಒಪ್ಪಿಕೊಳ್ಳೋಣ. ಆದರೆ ಅಪ್ಪಿಕೊಳ್ಳುವುದು ಬೇಡ…. ನಿಮಗೇನು ಅನ್ನಿಸುತ್ತದೆ….?

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Start‘ to this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾಗಿ ಶ್ರೀಶಿವಾನಂದ ತಗಡೂರು

0

ಕರ್ನಾಟಕ ಕಾರ್ಯಕರ್ತ ಪತ್ರಕರ್ತರ ಸಂಘದ ಅಧ್ಯಕ್ಷರಾಗಿ ಮತ್ತೊಂದು ಅವಧಿಗೆ ಶಿವಾನಂದ ತಗಡೂರು ಅವಿರೋಧವಾಗಿ ಆಯ್ಕೆಯಾಗಿದೆ. ಅಧಿಕೃತ ಘೋಷಣೆ ಮಾತ್ರ ಬಾಕಿ ಇದೆ. ಅವರ ಅಧಿಕಾರದ ಅವಧಿ 2025 ರ ವರೆಗೆ ಇರುತ್ತದೆ.

1990 ರಲ್ಲಿ ಜನಮಿತ್ರ ಪತ್ರಿಕೆಯ ಮೂಲಕ ಪತ್ರಿಕೋದ್ಯಮ ಪ್ರವೇಶಿಸಿದ ಶಿವಾನಂದ ಅವರು ಈ ವಾರ, ಜನವಾಹಿನಿ, ವಿಜಯ ವಾಣಿ ಹೀಗೆ ಹಲವಾರು ಪತ್ರಿಕೆಗಳಲ್ಲಿ ಕೆಲಸ ಮಾಡಿದ್ದಾರೆ. ಪ್ರಸ್ತುತ ಶಿವಾನಂದ ಅವರು ವಿಜಯವಾಣಿ ಪತ್ರಿಕೆಯ ಹಿರಿಯ ವಿಶೇಷ ವರದಿಗಾರರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಹಾಸನ ಜಿಲ್ಲೆ ಕಾರ್ಯನಿರತ ಪತ್ರಕರ್ತರ ಸಂಘದ ಸಾಮಾನ್ಯ ಸದಸ್ಯರಾಗಿ, ಜಿಲ್ಲಾ ಸಂಘದ ಅಧ್ಯಕ್ಷರಾಗಿ, 2011 ರಿಂದ 2018 ರವರೆಗೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ.

ರಾಜ್ಯದಿಂದ ಪತ್ರಕರ್ತರ ಸಂಘಟಿಸಿದೆ. ಕೊರೋನಾಕ್ಕೆ ಬಲಿಯದ ಪತ್ರಕರ್ತರಲ್ಲಿ, ತೀವ್ರ ಸಂಕಷ್ಟದಲ್ಲಿದ್ದ 50ಕ್ಕೂ ಹೆಚ್ಚು ಕುಟುಂಬಕ್ಕೆ ತಲಾ 5 ಲಕ್ಷ ಪರಿಹಾರವನ್ನು ಸರ್ಕಾರದಿಂದ ಕೊಡಿಸಿದ್ದು, ತಗಡೂರು ಅವರ ಸಂಘಟನೆಯ ಶಕ್ತಿಗೆ ಹಿಡಿದ ಕನ್ನಡಿಯಾಗಿದೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Start‘ to this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಶಿವಮೊಗ್ಗ ಜಿಲ್ಲೆಯ ಹಲವೆಡೆ ಹಿಜಾಬ್ ಮನವೊಲಿಕೆ ಮತ್ತು ಪ್ರತಿರೋಧ ಪ್ರಸಂಗ

0

ರಾಜ್ಯದಾದ್ಯಂತ ಹಿಜಾಬ್ ಮತ್ತು ಕೇಸರಿ ಶಾಲು ವಿವಾದದ ನಂತರ ಕಾಲೇಜುಗಳು ಪುನರಾರಂಭಗೊಂಡಿದೆ. ಇದರ ಜೊತೆಗೆ ಹಿಜಾಬ್ ವಿವಾದ ಕೂಡ ಮುಂದುವರೆಯುತ್ತಿದೆ. ಕಾಲೇಜಿನಲ್ಲಿ ಹಿಜಾಬ್ ಧರಿಸಲು ಅವಕಾಶ ನೀಡಬೇಕು ಎಂದು ಪಟ್ಟು ಹಿಡಿದು ವಿದ್ಯಾರ್ಥಿನಿಯರು, ತರಗತಿಗಳನ್ನು ಬಹಿಷ್ಕರಿಸಿ ಮನೆಗೆ ತೆರಳಿದ್ದಾರೆ.

ಶಿವಮೊಗ್ಗದ ಡಿವಿಎಸ್ ಕಾಲೇಜಿನಲ್ಲಿ ಹಿಜಾಬ್ ಧರಿಸಿ ಬಂದಿದ್ದ ಅನೇಕ ವಿದ್ಯಾರ್ಥಿನಿಯರು ಕಾಲೇಜು ಸಿಬ್ಬಂದಿ ಕಾಲೇಜು ಸಿಬ್ಬಂದಿ ಮನವೊಲಿಕೆಯ ನಂತರ ತೆಗೆದು ತರಗತಿಗೆ ಹಾಜರಾಗಿದ್ದಾರೆ.ಹಿಜಾಬ್ ತೆಗೆಯಲು ಒಪ್ಪದ ಕೆಲ ವಿದ್ಯಾರ್ಥಿಗಳು ಮನವೊಲಿಕೆಗೆ ಬಗ್ಗದೆ ಕಾಲೇಜಿನಿಂದ ವಾಪಸ್ ತೆರಳಿದ್ದಾರೆ. ಇನ್ನು ಮುಂತಾದವರು ಕಾಲೇಜಿಗೆ ಗೈರಾಗಿದ್ದಾರೆ. ಅನೇಕ ಶಾಲೆಗಳ ಬಳಿಕ ಕಾಲೇಜುಗಳಲ್ಲಿ ಹಿಜಾಬ್ ವಿವಾದ ಮುಂದುವರೆದಿದೆ.

ಹಿಜಾಬ್ ನಮ್ಮ ಜನ್ಮ ಸಿದ್ಧ ಹಕ್ಕು. ಸಂವಿಧಾನಿಕ ಹಕ್ಕಾಗಿದೆ. ಹೈಕೋರ್ಟ್ ಆದೇಶ ಏನೇ ಇರಲಿ, ನಮಗೆ ಹಿಜಾಬ್ ಬೇಕು. ಜೊತೆಗೆ ಶಿಕ್ಷಣ ಕೊಡಬೇಕು ಎಂದು ಪಟ್ಟುಹಿಡಿದರು. ಕೋರ್ಟ್ ಆದೇಶ ಇನ್ನೂ ಬಂದಿಲ್ಲ ಆದ್ದರಿಂದ ಹಿಜಾಬ್ ಧರಿಸಿಯೇ ತರಗತಿಯೊಳಗೆ ಕೂರುವುದಕ್ಕೆ ಬಿಡಬೇಕು. ಇದೆಲ್ಲ ತಾರತಮ್ಯ ಯಾಕೆ ಎಂದು ಕಾಲೇಜು ಸಿಬ್ಬಂದಿ ವಿರುದ್ಧ ಕೆಲ ವಿದ್ಯಾರ್ಥಿನಿಯರು ಆಕ್ರೋಶವನ್ನು ವ್ಯಕ್ತಪಡಿಸಿದರು.

ವಿದ್ಯಾರ್ಥಿನಿಯರೊಂದಿಗೆ‌ ಕಾಲೇಜಿಗೆ ಬಂದಿದ್ದ ಪೋಷಕರು ಕೂಡ ಪ್ರವೇಶ ನಿರಾಕರಿಸಿದ ಕಾಲೇಜು ಆಡಳಿತ ಮಂಡಳಿ ವಿರುದ್ಧ ಆಕ್ರೋಶವನ್ನು ಹೊರಹಾಕಿ ದರು. ಕಾಲೇಜು ಪ್ರವೇಶದ ಸಂದರ್ಭದಲ್ಲಿ ಅದು, ಇದು ಅಂತೆಲ್ಲ ಲಕ್ಷಗಟ್ಟಲೆ ಶುಲ್ಕ ತೆಗೆದುಕೊಳ್ಳುತ್ತೀರಿ. ಈಗ ಅದು ಬೇಡ, ಇದು ಬೇಡ ಅಂತ ವಿದ್ಯಾರ್ಥಿಗಳ ನಡುವೆ ನೀವೇ ತಾರತಮ್ಯ ಸೃಷ್ಟಿ ಮಾಡುತ್ತಿದ್ದೀರಿ. ನೀವು ಸರಿಯಾದ ಕ್ರಮ ತೆಗೆದುಕೊಂಡರೆ ಇದೆಲ್ಲ ಆಗುತ್ತಾ ಎಂದು ಕಿಡಿಕಾರಿದರು. ಇಷ್ಟೆಲ್ಲಾ ಘಟನೆ ನಡೆದರೂ ಕಾಲೇಜಿಗೆ ಪ್ರವೇಶ ನೀಡದ ಹಿನ್ನೆಲೆಯಲ್ಲಿ ಡಿವಿಗೆ ಪಿಯು ಕಾಲೇಜಿನಲ್ಲಿ ಹಿಜಾಬ್ ಧರಿಸಿದ ಹಲವು ವಿದ್ಯಾರ್ಥಿನಿಯರು ಮನೆಗೆ ತೆರಳಿದ್ದಾರೆ.

ಇದೇ ರೀತಿ ಶಿರಾಳಕೊಪ್ಪದ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಪಿಯುಸಿ ವಿದ್ಯಾರ್ಥಿನಿಯರು ಹಿಜಾಬ್ ಧರಿಸಲು ಅವಕಾಶ ನೀಡಬೇಕು ಎಂದು ಆಗ್ರಹಿಸಿ ಗೇಟ್ ಬಳಿ ಪ್ರತಿಭಟನೆ ನಡೆಸಿದರು.

ಆಮೇಲೆ ಕಾಲೇಜಿನ ಪ್ರಾಂಶುಪಾಲರು ಮತ್ತು ಉಪನ್ಯಾಸಕರು ಹೈಕೋರ್ಟ್ ಮಧ್ಯಂತರ ತೀರ್ಪಿನ ಬಗ್ಗೆ ಮನವರಿಕೆ ಮಾಡಿಕೊಡುವ ಪ್ರಯತ್ನ ಮಾಡಿದರೂ ಸಹ ವಿದ್ಯಾರ್ಥಿನಿಯರು ಜಗ್ಗಲಿಲ್ಲ. ಈ ಸುದ್ದಿ ಎಲ್ಲೆಡೆ ಹರಿದಾಡುತ್ತಿದೆ ಕಾಲೇಜಿನ ಸುತ್ತಮುತ್ತಲು ಅನೇಕ ಯುವಕರು ಮತ್ತು ಮುಸ್ಲಿಂ ಸಮಾಜದ ಮುಖಂಡರು ಜಮಾಯಿಸಿದ್ದರು.

ಭದ್ರಾವತಿಯ ಸಂಚಿಯ ಹೊನ್ನಮ್ಮ ಪ್ರೌಢಶಾಲೆ ವಿದ್ಯಾರ್ಥಿಗಳು ಹಿಜಾಬ್ ಧರಿಸಿ ಪ್ರತಿಭಟನೆ ನಡೆಸಿದರು. ಇದೇ ಸಂದರ್ಭದಲ್ಲಿ ಪಿಯು ಕಾಲೇಜು 9 ವಿದ್ಯಾರ್ಥಿನಿಯರು ಹಿಜಾಬ್ ತೆಗೆದು ತರಗತಿ ಒಳಗೆ ತೆರಳಲು ನಿರಾಕರಣ ಮಾಡಿದ್ದರಿಂದ ಅವರು ಶಾಲಾ ಆವರಣದಿಂದ ಹೊರ ನಡೆದರು.

ಆದರೆ ಪ್ರೌಢಶಾಲೆಯ ಸುಮಾರು 70 ಮಂದಿ ವಿದ್ಯಾರ್ಥಿನಿಯರು ಹಿಜಾಬ್ ಧರಿಸುವುದು ತಮ್ಮ ಹಕ್ಕು ಎಂದು ಫಲಕವನ್ನು ಹಿಡಿದು ಆವರಣದಲ್ಲಿಯೇ ಕುಳಿತಾಗ ಆಡಳಿತ ಮಂಡಳಿ ಸದಸ್ಯರು ವಿದ್ಯಾರ್ಥಿಗಳಿಗೆ ಮನವರಿಕೆ ಮಾಡುವ ಪ್ರಯತ್ನ ನಡೆಸಿದ್ದಾರೆ.

ಇದಾದ ನಂತರ ಸ್ಥಳಕ್ಕೆ ಬಂದ ತಹಶೀಲ್ದಾರ್ ಆರ್. ಪ್ರದೀಪ್ ಸ್ಥಳದಲ್ಲಿ ಕುಳಿತಿದ್ದ ವಿದ್ಯಾರ್ಥಿನಿಯರಿಗೆ ಮನವರಿಕೆ ಮಾಡಲು ಪ್ರಯತ್ನಿಸುವ ಜೊತೆಗೆ ಪ್ರಸ್ತುತ ಇರುವ 144 ಸೆಕ್ಷನ್ ಜಾರಿ ಇರುವ ಕಾರಣ ಈ ರೀತಿಯಲ್ಲಿ ಒಟ್ಟಾಗಿ ಕುಳಿತು ಕೊಳ್ಳಲು ಅವಕಾಶವಿಲ್ಲ. ಇಷ್ಟವಿದ್ದವರು ಹಿಜಾಬ್ ತೆಗೆದು ತರಗತಿಗೆ ಹೋಗಿ ಎಂದು ಕರೆ ನೀಡಿದರು.

ಅಂತಿಮವಾಗಿ ಮನವೊಲಿಕೆಯ ನಂತರ ಮಣಿದ ವಿದ್ಯಾರ್ಥಿ ಸಮೂಹ ತರಗತಿ ಪ್ರವೇಶಕ್ಕೆ ಮುನ್ನ ತಮ್ಮ ತಲೆಯ ಮೇಲಿನ ಹಿಜಾಕ್ ತೆಗೆದು ಪಾಠ ಪ್ರವಚನ ಕೇಳಲು ತೆರಳಿದ್ದು ಅಧಿಕಾರಿಗಳ ಮನದಲ್ಲಿ ಸಂತೋಷವನ್ನು ಮೂಡಿಸಿತ್ತು.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Start‘ to this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಸ್ವಚ್ಛತೆ ಅರಿವು ಮೂಡಿಸುತ್ತಿರುವ ನಿಟ್ಟೂರು ಪಿಡಿಓ

0

ನಿಟ್ಟೂರು ಪಂಚಾಯತಿ ವ್ಯಾಪ್ತಿಯ ಪ್ರತೀ ಅಂಗಡಿ ಮತ್ತು ಮನೆಗಳಿಗೆ ಕಸದ ವಾಹನವನ್ನು ಸ್ವತಃ ಪಿಡಿಒ ನಾಗರಾಜ್ ಅವರೇ ಚಲಾಯಿಸಿಕೊಂಡು ಹೋಗಿ ಕಸ ಸಂಗ್ರಹಿಸಿ ಸಾರ್ವಜನಿಕರಿಗೆ ಸಚ್ಛತೆ ಬಗ್ಗೆ ಅರಿವು ಮೂಡಿಸಿದ್ದಾರೆ.

ಪ್ರತೀ ಮಂಗಳವಾರ ಮತ್ತು ಶುಕ್ರವಾರ ಪೇಟೆ ವ್ಯಾಪ್ತಿಯ ಅಂಗಡಿ ಮತ್ತು ಮನೆಗಳಿಗೆ ಕಸದ ವಾಹನ ಹೋಗಿ ಕಸ ಸಂಗ್ರಹ ಮಾಡುತ್ತಿದ್ದರೂ ಸಹ ಕೆಲವು ಅಂಗಡಿ ವರ್ತಕರು ಬೇಕಾಬಿಟ್ಟಿ ಕಸವನ್ನು ರಸ್ತೆಗೆ ಎಸೆಯುತ್ತಿದ್ದರು. ಈ ಬಗ್ಗೆ ಗ್ರಾ.ಪಂ.ಸಾಮಾನ್ಯ ಸಭೆಯಲ್ಲಿ ಕಸ ಸಂಗ್ರಹದ ಜತೆ ಸಾರ್ವಜನಿಕರಿಗೆ ಸ್ವಚ್ಛತೆ ಬಗ್ಗೆ ಅರಿವು ಸಹ ಮಾಡಿಸಬೇಕು ಎಂದು ಚರ್ಚಿಸಲಾಗಿತ್ತು.

ಅದರಂತೆ ಪಿಡಿಓ ನಾಗರಾಜ್ ಅವರು ಮಂಗಳವಾರ ಮನೆ ಮನೆಗೆ ಸ್ವತಃ ತಾವೇ ಸಿಬ್ಬಂದಿಯೊಂದಿಗೆ ಕಸದ ವಾಹನ ಚಲಾಯಿಸಿಕೊಂಡು ಹೋಗಿ ಕಸ ಸಂಗ್ರಹಿಸಿ, ಸ್ವಚ್ಛತೆ ಅರಿವು ಮೂಡಿಸಿ ಕರ್ತವ್ಯ ಪ್ರಜ್ಞೆ ಮೆರೆದಿದ್ದಾರೆ. ಪಿಡಿಒ ಅವರ ಈ ಕ್ರಮಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Start‘ to this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಎಲ್ಐಸಿ ಯಲ್ಲಿ ವಾರಸುದಾರಿಕೆ ಇಲ್ಲದ ಕೋಟಿಗಟ್ಟಲೆ ಹಣ

0

ಭಾರತೀಯ ಜೀವ ವಿಮಾ ನಿಗಮದಲ್ಲಿ (ಎಲ್ಐಸಿ) ವಾರಸುದಾರಿಕೆ ಇಲ್ಲದಿರುವ ನಿಧಿಯ ಮೊತ್ತ 21,500 ಕೋಟಿ ರೂ. ಇಂದು ಮಾರುಕಟ್ಟೆ ನಿಯಂತ್ರಕ ಸೆಬಿಗೆ ತಿಳಿಸಲಾಗಿದೆ.
ಷೇರು ಮಾರುಕಟ್ಟೆಯಲ್ಲಿ ಆರಂಭಿಕ ಶೇರು ಬಿಡುಗಡೆಗೆ ಸಜ್ಜಾಗಿರುವ (ಐಪಿಒ) ಎಲ್ಐಸಿ,ಈ ಸಂಬಂಧ ಸೆಬಿಗೆ ಬುಧವಾರ ಮಾಹಿತಿ ನೀಡಿದೆ.
ಪ್ರತಿಯೊಂದು ವಿಮೆ ಕಂಪನಿಯು 1,000 ರೂ. ಅಥವಾ ಹೆಚ್ಚಿನ ವಾರಸುದಾರಿಕೆ ಇಲ್ಲದ ನಿಧಿಯನ್ನು ತನ್ನ ವೆಬ್ ಸೈಟ್ ನಲ್ಲಿ ತಿಳಿಸಬೇಕಾಗುತ್ತದೆ. ಪಾಲಿಸಿದಾರರಿಗೆ ಇದು ಉಪಯುಕ್ತವೆನಿಸುತ್ತದೆ.

2021ರ ಸೆಪ್ಟೆಂಬರ್ ವೇಳೆಗೆ ಇಂಥ ನಿಧಿಯ ಮೊತ್ತ 21,539 ಕೋಟಿ ರೂ.ಗೆ ಏರಿಕೆಯಾಗಿದೆ ಎಂದು ಎಲ್ಐಸಿ ತಿಳಿಸಿದೆ.
2019ರ ಮಾರ್ಚ್ ಅಂತ್ಯಕ್ಕೆ 13,843 ಕೋಟಿ ರೂ. ಗಳಿದ್ದ ನಿಧಿಯು 2020ರ ಮಾರ್ಚ್ ಅಂತ್ಯಕ್ಕೆ 16,052 ಕೋಟಿ ರೂ.ಗೆ ವೃದ್ಧಿಸಿತ್ತು. ವಾರಸುದಾರರಿಲ್ಲದ ಹಣವನ್ನು 10 ವರ್ಷಗಳ ಬಳಿಕ ಹಿರಿಯ ನಾಗರಿಕರ ಕಲ್ಯಾಣ ಯೋಜನೆಗಳಿಗೆ ವರ್ಗಾಯಿಸಲಾಗುತ್ತದೆ ಎಂದು ತಿಳಿದುಬಂದಿದೆ.