ಮುಜರಾಯಿ ಇಲಾಖೆ ವ್ಯಾಪ್ತಿಯ ಎಲ್ಲಾ ದೇವಾಲಯಗಳ ಸಮಗ್ರ ಮಾಹಿತಿ ಮತ್ತು ಸೇವೆಯ ವಿವರವನ್ನು ಬೆರಳ ತುದಿಯಲ್ಲಿ ಪಡೆಯ ಬಹುದಾದ ಸಮಗ್ರ ದೇವಾಲಯ ನಿರ್ವಹಣಾ ವ್ಯವಸ್ಥೆ ಹಾಗೂ ದೇವಾಲಯಗಳ ಸಮಗ್ರ ಅಭಿವೃದ್ಧಿಗಾಗಿ ದೈವ ಸಂಕಲ್ಪ ಯೋಜನೆಗೆ ಸಿಎಂ ಬಸವರಾಜ್ ಬೊಮ್ಮಾಯಿ ಅವರು ಚಾಲನೆ ನೀಡಿದರು.
ಗೃಹ ಕಚೇರಿ ಕೃಷ್ಣಾದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಮುಖ್ಯಮಂತ್ರಿ, ದೇವಾಲಯಗಳ ಸಮಗ್ರ ಮಾಹಿತಿಯನ್ನು ಬೆರಳ ತುದಿಯಲ್ಲಿ ಪಡೆಯುವ ಡಿಜಿಟಲ್ ವ್ಯವಸ್ಥೆ ಇಂದಿನ ಅಗತ್ಯವಾಗಿತ್ತು. ಈ ಸೌಲಭ್ಯಗಳ ಜೊತೆಗೆ ದೇವಸ್ಥಾನಗಳಲ್ಲಿ ಕೆಎಸ್ಆರ್ ಟಿಸಿ ಸಾರಿಗೆ ವ್ಯವಸ್ಥೆ ವಿವರ ಸೇರ್ಪಡೆ ಮಾಡಬೇಕು. ಪ್ರವಾಸ ಯೋಜನೆಯನ್ನು ಸುಲಭವಾಗಿ ಮಾಡಬಹುದಾದ ಮಾಹಿತಿ ಅಳವಡಿಸಿ, ದೇವಸ್ಥಾನಗಳ ಆಸ್ತಿಗಳ ಸಂರಕ್ಷಣೆಗೂ ಹೆಚ್ಚಿನ ಕಾಳಜಿ ವಹಿಸಬೇಕು. ದೇವಾಲಯಗಳಲ್ಲಿ ಅಗತ್ಯ ಸೌಲಭ್ಯ ಕಲ್ಪಿಸುವ ಸಂಬಂಧ ಮಾಸ್ಟರ್ ಪ್ಲಾನ್ಸ್ ಸಿದ್ಧಪಡಿಸಿ ಸಲ್ಲಿಸಬೇಕು.ಭೇಟಿ ನೀಡುವವರ ಸಂಖ್ಯೆ ಇತರೆ ವಿವರ ದಾಖಲಿಸಲು ಪ್ರಯತ್ನಿಸಬೇಕು ಎಂದು ಸೂಚನೆ ನೀಡಿದರು.
ಸಚಿವೆ ಶಶಿಕಲಾ ಜೊಲ್ಲೆ ಅವರು ಮಾತನಾಡಿ, ಪ್ರಧಾನಿ ನರೇಂದ್ರ ಮೋದಿಯವರ ಡಿಜಿಟಲ್ ಇಂಡಿಯಾ ಕನಸನ್ನು ನನಸಾಗಿಸುವಲ್ಲಿ ಐಟಿಎಂಎಸ್ ಪಾತ್ರ ಮಹತ್ವದಾಗಿದೆ. ದೇಶ-ವಿದೇಶಗಳಿಂದ ರಾಜ್ಯದ ದೇವಾಲಯಗಳಿಗೆ ಭೇಟಿ ನೀಡುವ ಲಕ್ಷಾಂತರ ಭಕ್ತರಿಗೆ ಅತ್ಯುತ್ತಮ ಸೌಕರ್ಯ ಒದಗಿಸಲು ಇಲಾಖೆ ಬದ್ಧವಾಗಿದೆ ಎಂದರು.
ಈ ಸಂದರ್ಭದಲ್ಲಿ ಶಾಸಕ ಎಸ್.ಎ. ರಾಮದಾಸ್, ಸಿಎಂ ಪ್ರಧಾನ ಕಾರ್ಯದರ್ಶಿ ಎನ್. ಮಂಜುನಾಥ ಪ್ರಸಾದ್, ಮುಜರಾಯಿ ಇಲಾಖೆ ಪ್ರಧಾನ ಕಾರ್ಯದರ್ಶಿ ತುಷಾರ್ ಗಿರಿನಾಥ್, ಮುಜರಾಯಿ ಇಲಾಖೆ ಆಯುಕ್ತ ರೋಹಿಣಿ ಸಿಂಧೂರಿ ಹಾಗೂ ಇನ್ನಿತರರು ಉಪಸ್ಥಿತರಿದ್ದರು.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.
Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.
KLIVE at Google News App
KLIVE Android App on Google Play Store
Download the most loved Klive App for your Android phone or tablet.
ಮಹಾನಗರಗಳಲ್ಲಿ ವಾಸ ಮಾಡುವ ಬಡಜನರ ಬದುಕು ಸುಧಾರಣೆಗೆ ಕಾರ್ಪೊರೇಟ್ ವಲಯ ಒತ್ತು ನೀಡಬೇಕು ಎಂದು ಸಚಿವ ಡಾ.ಸಿ.ಎನ್. ಅಶ್ವಥನಾರಾಯಣ ಅವರು ತಿಳಿಸಿದರು. ಬೆಂಗಳೂರು ವಾಣಿಜ್ಯ ಮತ್ತು ಕೈಗಾರಿಕಾ ಮಹಾ ಒಕ್ಕೂಟ ದಕ್ಷಿಣ ಭಾರತದ ವಿಭಾಗವು ನಗರದ ಖಾಸಗಿ ಹೋಟೆಲ್ ನಲ್ಲಿ ಏರ್ಪಡಿಸಿದ್ದ ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ ಮತ್ತು ಸುಸ್ಥಿರ ಅಭಿವೃದ್ಧಿ ಸಮಾವೇಶ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.
ದೊಡ್ಡ ನಗರಗಳಲ್ಲಿ ಇರುವ ಬಡವರ ದನಿ ಯಾರಿಗೂ ಕೇಳದಂತಾಗಿದೆ. ಅವರು ಘನತೆಯುಕ್ತ ಜೀವನಕ್ಕೆ ಬೇಕಾದ ಸವಲತ್ತುಗಳು ಸಿಗುತ್ತಿಲ್ಲ. ಕಾರ್ಪೊರೇಟ್ ವಲಯವು ಈ ಬಗ್ಗೆ ಗಮನ ಹರಿಸದೇ ಹೋದರೆ ದೊಡ್ಡ ಕಂದಕ ನಿರ್ಮಾಣವಾಗಿ ಸಾಮಾಜಿಕ ಸ್ವಾಸ್ಥ್ಯ ಹಾಳಾಗುವ ಅಪಾಯವಿದೆ ಎಂದರು.
ಕಾರ್ಪೊರೇಟ್ ವಲಯವು ಸಮಾಜದೊಂದಿಗೆ ಸಂಪರ್ಕ ಹೊಂದುವುದು ಅತ್ಯಗತ್ಯವಾಗಿದೆ. ಜನರಿಂದ ದೂರವಾಗಿ ಉದ್ಯಮ ಸಂಸ್ಕೃತಿ ಬೆಳೆಯಲು ಸಾಧ್ಯವಿಲ್ಲ. ಸಮಾಜವು ಆರೋಗ್ಯಕರವಾಗಿ ಬೆಳೆಯಬೇಕಾದರೆ ನಾವು ಮಹಾನಗರಗಳಲ್ಲಿ ಇರುವ ಅವಕಾಶ ವಂಚಿತರ ಬಗ್ಗೆಯೂ ಗಮನಹರಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ರಾಜ್ಯ ಸರ್ಕಾರದ ಸ್ಟಾರ್ಟ್ ಅಪ್ ಮಿಷನ್ ಗ್ರೂಪ್ ಮುಖ್ಯಸ್ಥ ಪ್ರಶಾಂತ್ ಪ್ರಕಾಶ್ ಅವರಿಗೆ ಸಾಮಾಜಿಕ ಪರಿವರ್ತನಾಶೀಲ ಉದ್ಯಮಿ ಪುರಸ್ಕಾರವನ್ನು ಪ್ರದಾನ ಮಾಡಲಾಯಿತು.
ಸ್ಮಾರ್ಟ್ ಇಂಡಿಯಾ ಪ್ರೈ.ಲಿ. ಕರ್ನಾಟಕ ಮಹಿಳಾ ಉದ್ಯಮಿಗಳ ಒಕ್ಕೂಟ ಅವೇಕ್, ಟಾಟಾ ಕಂಸಲ್ಟೆನ್ಸಿ ಸರ್ವಿಸಸ್, ಎಲ್ ಆಂಟಿ ಟಿ ಟೆಕ್ನೋಲಜಿಸ್,ಎಸ್ ಬಿಐ ಲೈಫ್ ಇನ್ಸೂರೆನ್ಸ್, ಪೇಟಿಎಂ ಫೌಂಡೇಶನ್ ಹಾಗೂ ಇತರೆ ಸಂಸ್ಥೆಗಳಿಗೆ ಸಿ ಎಸ್ ಆರ್ ಪುರಸ್ಕಾರಗಳನ್ನು ನೀಡಲಾಯಿತು.
ಕಾರ್ಯಕ್ರಮದಲ್ಲಿ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್, ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್ ಮುಖ್ಯಸ್ಥ ಬಿ.ವಿ. ನಾಯ್ಡು, ಉದ್ಯಮಿ ಅಭಿಷೇಕ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.
Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.
KLIVE at Google News App
KLIVE Android App on Google Play Store
Download the most loved Klive App for your Android phone or tablet.
ಸುಪ್ರಸಿದ್ಧ ಐತಿಹಾಸಿಕ ಶಿವಮೊಗ್ಗ ನಗರದ ಕೋಟೆ ಶ್ರೀ ಮಾರಿಕಾಂಬ ದೇವಿಯ ಜಾತ್ರಾ ಮಹೋತ್ಸವಕ್ಕೆ ಶಿವಮೊಗ್ಗ ಸಿಟಿ ಕೋಆಪರೇಟಿವ್ ಬ್ಯಾಂಕ್ ನಿಂದ ಜಾತ್ರೆಗೆ ದೇವಿಯ ಸೇವಾರ್ಥ ದೇಣಿಗೆಯನ್ನು ಮಾರಿಕಾಂಬ ಸೇವಾ ಸಮಿತಿ ಅಧ್ಯಕ್ಷರಾದ ಎಸ್ ಕೆ ಮರಿಯಪ್ಪನವರಿಗೆ ಮತ್ತು ಮಾರಿಕಾಂಬ ಸಮಿತಿಯ ಪದಾಧಿಕಾರಿಗಳಿಗೆ ಬ್ಯಾಂಕಿನ ಅಧ್ಯಕ್ಷರಾದ ಕೆ ರಂಗನಾಥ್ ರವರ… Read more: ಮಾರಿಕಾಂಬ ಜಾತ್ರೆಗೆ ಸಿಟಿ ಕೋ ಅಪರೇಟಿವ್ ಬ್ಯಾಂಕ್ ದೇಣಿಗೆ ಅರ್ಪಣೆ
ಭಗವಂತನ ನಾಮವನ್ನು ಶ್ರದ್ಧೆಯಿಂದ ಉಚ್ಚರಿಸುವಾಗ ಮನಸ್ಸು ಕ್ರಮೇಣ ಶುದ್ಧವಾಗುತ್ತದೆ ಎಂದು ಭಜನಾ ಪರಿಷತ್ ಶಿವಮೊಗ್ಗ ಕಾರ್ಯದರ್ಶಿ ಶಬರೀಶ್ ಕಣ್ಣನ್ ಹೇಳಿದರು. ಮಹಾಶಿವರಾತ್ರಿ ಪ್ರಯುಕ್ತ ಫ್ರೆಂಡ್ಸ್ ಸೆಂಟರ್ ವತಿಯಿಂದ ಆಯೋಜಿಸಿದ್ದ ಭಜನಾ ಕಾರ್ಯಕ್ರಮದಲ್ಲಿ ಮಾತನಾಡಿ, ಚಿತ್ತಶುದ್ಧಿಯೇ ಆಧ್ಯಾತ್ಮಿಕ ಜೀವನದ ಮೊದಲ ಹೆಜ್ಜೆ. ಭಜನೆಯ ಮೂಲಕ ಮನಸ್ಸಿನಲ್ಲಿ ನೆಲೆಯೂರಿರುವ ಅಹಂಕಾರ, ಅಸೂಯೆ,… Read more: ಭಜನೆಯಿಂದ ಚಿತ್ತಶುದ್ಧಿ.ಅರಿಷಡ್ವರ್ಗ ಕರಗುತ್ತವೆ- ಶಬರೀಶ್ ಕಣ್ಣನ್
ಹೊನ್ನಾಳಿ ಹಿರೇಕಲ್ಮಠದಲ್ಲಿ ರಾಜ್ಯಮಟ್ಟದ ಕೃಷಿ ಮೇಳವು ಇದೇ ತಿಂಗಳು 27 28 ಹಾಗೂ 1.2.ರಂದು ನಾಲ್ಕು ದಿನಗಳ ಕಾಲ ಕೃಷಿ ಮೇಳವು ನಡೆಯಲಿದೆ. ಲಿಂಗೈಕ್ಯ ಶ್ರೀ ಮೃತ್ಯುಂಜಯ ಶಿವಾಚಾರ್ಯ ಮಹಾಸ್ವಾಮೀಜಿಯವರ 56ನೇ ಪುಣ್ಯರಾಧನೆ ಹಾಗೂ ಶ್ರೀ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಜಿಯವರ 11ನೇ ವರ್ಷದ ಪುಣ್ಯ ಸ್ಮರಣೆ ಪ್ರಯುಕ್ತ ನಡೆಯಲಿದೆ.ದತ್ತಿ… Read more: ಹೊನ್ನಾಳಿ ಹಿರೇಕಲ್ಮಠದಲ್ಲಿ ಫೆ.27 ರಿಂದ ಮಾರ್ಚ್ 2 ವರೆಗೆ ಕೃಷಿಮೇಳ
Chandragutti Festival ಸೊರಬ ತಾಲ್ಲೂಕಿನ ಚಂದ್ರಗುತ್ತಿ ಗ್ರಾಮದಲ್ಲಿ ಫೆ.24 ಮತ್ತು 25 ರಂದು ಶ್ರೀ ರೇಣುಕಮ್ಮ ದೇವಿ ಜಾತ್ರೆ ನಡೆಯುತ್ತಿದ್ದು ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಹಿನ್ನೆಲೆಯಲ್ಲಿ ಈ 2 ದಿನಗಳ ಕಾಲ ಬೆತ್ತಲೆ ಸೇವೆಯನ್ನು ನಿಷೇಧಿಸಿ ಜಿಲ್ಲಾಧಿಕಾರಿಗಳಾದ ಪ್ರಭುಲಿಂಗ ಕವಳಿಕಟ್ಟಿಯವರು ಆದೇಶಿಸಿದ್ದಾರೆ.ಕರ್ನಾಟಕ ಪೊಲೀಸ್ ಕಾಯ್ದೆ 1963 ರ… Read more: Chandragutti Festival ಚಂದ್ರಗುತ್ತಿ ದೇವಿಜಾತ್ರೆಯಲ್ಲಿ ಬೆತ್ತಲೆ ಸೇವೆ ನಿಷೇಧಿಸಿ ಡೀಸಿ ಅವರ ಆದೇಶ
ಕರ್ನಾಟಕ ವೀರಶೈವ ಲಿಂಗಾಯತ ಸಮುದಾಯದ ಅಭಿವೃದ್ದಿ ನಿಗಮದ ವತಿಯಿಂದ 2025-26 ನೇ ಸಾಲಿಗೆ ಆಹಾರ ವಾಹಿನಿ ಯೋಜನೆಯಡಿ ಸ್ಥಳಾಂತರಿಸಬಹುದಾದ ತಿಂಡಿ ಮಳಿಗೆಗಳನ್ನು ನಾಲ್ಕು ಚಕ್ರಗಳ ಇವಿ-ಗೂಡ್ಸ್ ವಾಹನಗಳನ್ನು ಅಗತ್ಯಕ್ಕೆ ತಕ್ಕಂತೆ ನವೀಕರಿಸಿ ಫಲಾನುಭವಿಗಳಿಗೆ ವಿತರಿಸುವ ಯೋಜನೆಯಲ್ಲಿ ನಿಗಮದಿಂದ ವಾಹನ ಖರೀದಿಗೆ ರೂ.3.00 ಲಕ್ಷಗಳ ಸಹಾಯಧನವನ್ನು ಪಡೆಯಲು ಸೇವಾಸಿಂದು ಪೋರ್ಟೆಲ್… Read more: ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮದಿಂದ ಆಹಾರವಾಹಿನಿ ಸೌಲಭ್ಯ ಯೋಜನೆ: ಸಹಾಯಧನಕ್ಕೆ ಅರ್ಜಿ ಆಹ್ವಾನ
ಶಿವಮೊಗ್ಗ ತಾಲ್ಲೂಕು ತೋಟಗಾರಿಕೆ ಇಲಾಖೆಯ ವತಿಯಿಂದ 2025-26 ನೇ ಸಾಲಿನಲ್ಲಿ ಸಮಗ್ರ ತೋಟಗಾರಿಕೆ ಅಭಿವೃದ್ದಿ ಯೋಜನೆಯಡಿ ‘ತರಕಾರಿ ಬೀಜಗಳ ಕಿಟ್’ ಗಳನ್ನು ರೈತರಿಗೆ ವಿತರಿಸಲು ರೈತರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಫೆ.23 ಕಡೆಯ ದಿನವಾಗಿದ್ದು ರೈತರು ತಮ್ಮ ಜಮೀನಿಗೆ ಸಂಬಂಧಪಟ್ಟ ಪ್ರಸ್ತುತ ವರ್ಷದ ಪಹಣಿ/ಆರ್ಟಿಸಿ, ಪಾಸ್ಪೋರ್ಟ್ ಅಳತೆಯ… Read more: ‘ತರಕಾರಿ ಬೀಜಗಳ ಕಿಟ್ ‘ ಪಡೆಯಲು ಆಸಕ್ತ ರೈತರಿಂದ ಅರ್ಜಿ ಆಹ್ವಾನ
MESCOM ಶಿವಮೊಗ್ಗ ಗ್ರಾಮೀಣ ಉಪವಿಭಾಗ ವ್ಯಾಪ್ತಿಯಲ್ಲಿ ಬರುವಂತಹ ವಿದ್ಯುತ್ ಗ್ರಾಹಕರ ಕುಂದು ಕೊರತೆಗಳನ್ನು ಪರಿಹರಿಸಲು ಮತ್ತು ತುರ್ತು ಕ್ರಮಗಳನ್ನು ತೆಗದುಕೊಳ್ಳುವ ಸಲುವಾಗಿ ಫೆ.20 ರ ಬೆಳಿಗ್ಗೆ 11 ರಿಂದ ಮಧ್ಯಾಹ್ನ 1 ಗಂಟೆವರೆಗೆ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್(ವಿ)ರವರ ಕಚೇರಿ, ಪಾಲನೆ ಮತ್ತು ನಿರ್ವಹಣೆ ಗ್ರಾಮೀಣ ಉಪವಿಭಾಗ, ಬಾಲರಾಜ್ ಅರಸ್… Read more: MESCOM ಶಿವಮೊಗ್ಗ ಗ್ರಾಮೀಣ ಮೆಸ್ಕಾಂ ಉಪವಿಭಾಗ ಕಛೇರಿಯಲ್ಲಿ ಫೆ.20 ರಂದು ಜನಸಂಪರ್ಕ ಸಭೆ
ಶಿಕಾರಿಪುರದಲ್ಲಿ ಕರ್ತವ್ಯ ನಿರತ ಪೊಲೀಸ್ ಗೆ ಬೈಕ್ ನಲ್ಲಿ ಯುವಕರು – ಡಿಕ್ಕಿ ಹೊಡೆದ ಘಟನೆ ನಡೆದಿದೆ.ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದಲ್ಲಿ ಕರ್ತವ್ಯ ನಿರತ ಪೊಲೀಸ್ ಸಿಬ್ಬಂದಿಗೆ ಬೈಕ್ ವೊಂದು ಡಿಕ್ಕಿ ಹೊಡೆದ ಪರಿಣಾಮ ಗಾಯಳುವನ್ನು ಶಿವಮೊಗ್ಗದ ಮ್ಯಾಕ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಶಿಕಾರಿಪುರದ ಅಕ್ಕಮಹಾದೇವಿ ವೃತ್ತದಲ್ಲಿ ಪಾರ್ಕಿಂಗ್ ಲಾಟ್ ನಲ್ಲಿ… Read more: ಶಿಕಾರಿಪುರದಲ್ಲಿ ಬೈಕ್ ಡಿಕ್ಕಿಯಾಗಿ ಪೊಲೀಸ್ ಸಿಬ್ಬಂದಿಗೆ ಗಾಯ.
ಶಿವಮೊಗ್ಗ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಮತ್ತು ಬಾಲನ್ಯಾಯ ಮಂಡಳಿಯ ಸಂಯುಕ್ತ ಆಶ್ರಯದಲ್ಲಿ ಫೆ. 13 ರಂದು ಸರ್ಕಾರಿ ಬಾಲಕಿಯರ ಬಾಲಮಂದಿರದ ಮಕ್ಕಳಿಂದ ನೃತ್ಯ ಮತ್ತು ಚಲನೆಯ ಚಿಕಿತ್ಸಾ ಪ್ರಾತ್ಯಕ್ಷಿಕೆ ಯಶಸ್ವಿಯಾಗಿ ನಡೆಯಿತು. ಡಾ.ಕೆ.ಎಸ್.ಪವಿತ್ರಾರ ನಿರ್ದೇಶನದಲ್ಲಿ ನಡೆದ ಈ ಶಿಬಿರದಲ್ಲಿ 3 ತಿಂಗಳುಗಳ ಕಾಲ ಕಲಿತ ನೃತ್ಯ ಚಲನೆಯ… Read more: ನೃತ್ಯ ಮತ್ತು ಚಲನೆಯ ಚಿಕಿತ್ಸಾ ಶಿಬಿರಗಳು ಮಕ್ಕಳಿಗೆ ಉಪಯುಕ್ತ- ನ್ಯಾ. ದೀಪಾ
Agnipath scheme ಅಗ್ನಿಪಥ್ ಯೋಜನೆಯಡಿ 2027ನೇ ಸಾಲಿನ ಅಗ್ನಿವೀರ್ ನೇಮಕಾತಿ ಪರೀಕ್ಷೆಗೆ ಶಿವಮೊಗ್ಗ, ದಾವಣಗೆರೆ. ಬಾಗಲಕೋಟೆ, ವಿಜಯಪುರ, ಧಾರವಾಡ, ಉತ್ತರ ಕನ್ನಡ, ದಕ್ಷಿಣ ಕನ್ನಡ, ಗದಗ, ಉಡುಪಿ, ಹಾವೇರಿ ಮತ್ತು ಚಿಕ್ಕಮಗಳೂರು ಜಿಲ್ಲೆಗಳ ಅವಿವಾಹಿತ ಪುರುಷ ಅಭ್ಯರ್ಥಿಗಳಿಂದ ಆನ್ಲೈನ್ ಅರ್ಜಿಗಳನ್ನು ಅಹ್ವಾನಿಸಲಾಗಿದೆ.ಆಸಕ್ತರು ಆನ್ಲೈನ್ ನೋಂದಣಿ ಪೊರ್ಟಲ್-WWW.JOININDINARMY.NIC.IN ರ ಮೂಲಕ… Read more: Agnipath scheme ಅಗ್ನಿವೀರ್ ನೇಮಕಾತಿಗಾಗಿ ಆನ್ ಲೈನ್ ಅರ್ಜಿ ಆಹ್ವಾನ
ಅಂಚೆ ಇಲಾಖೆಯ ಪೋಸ್ಟ್ ಮ್ಯಾನ್ ಮತ್ತು ಎಂ ಟಿ ಎಸ್ ವರ್ಗದವರಿಗೆ ವಿಶೇಷ ಸನ್ಮಾನಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿ ವಿಶ್ವವಿದ್ಯಾಲಯ ನವಲೆ ಇವರ ವತಿಯಿಂದ ಗುಡ್ಡಗಾಡುಗಳಲ್ಲಿ ಹಾಗೂ ಮಳೆ ಚಳಿ ಎಲ್ಲಾ ಸಮಯದಲ್ಲೂ ಪ್ರತಿಯೊಂದು ಮೂಲೆ ಮೂಲೆಗಳಿಗೆ ಹೋಗಿ ಯಾವ ಪಲಾಪೇಕ್ಷೆ ಇಲ್ಲದೆ ಸರಿಯಾದ ಸಮಯಕ್ಕೆ ಅಂಚೆ ಸೇವೆ ಸಲ್ಲಿಸುತ್ತಿರುವ… Read more: ಅಂಚೆ ಇಲಾಖೆಯ “ಮೌನ ಸಿಬ್ಬಂದಿ”ಯ ಸಾರ್ಥಕ ಸೇವೆಗೆ ಸನ್ಮಾನ
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.
Why Keelambi MediaLab Pvt Ltd in Today’s News Shivamogga ?
Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.
The global home pages of many News companies are often international in nature ?
Being intended for international audiences, they often ask the user to select a regional site. Such regional sites tend to be in a single language (usually the common language for the majority of the expected audience). The regional selection might direct the user to a sub-site within the same domain, or it might direct to a website in a different country. Regardless of the method, a good consistent design will make the user feel that it is still the part of the same site, and retain the feeling of an international site.
KLIVE at Google News App
KLIVE Android App on Google Play Store
Download the most loved Klive App for your Android phone or tablet.
ಫೆಬ್ರವರಿ 26 ರಿಂದ ನಗರದಲ್ಲಿ ಕರ್ಫ್ಯೂ ಅವಧಿ ಸಡಿಲಿಕೆ- ಜಿಲ್ಲಾಧಿಕಾರಿ | Dr. Selvamani RFebruary 25, 2022ಫೆಬ್ರವರಿ 26 ರಿಂದ ಕರ್ಫ್ಯೂ ವೇಳೆ ಸಡಿಲಿಕೆ ಮಾಡಲಾಗುವುದು.ಶನಿವಾರ ಬೆಳಿಗ್ಗೆ 6 ಗಂಟೆಯಿಂದ ಅಪರಾಹ್ನ 4 ಗಂಟೆಯವರೆಗೆ ವ್ಯಾಪಾರ ವಹಿವಾಟಿಗೆ ಅವಕಾಶವಿದೆ. ಅಂಗಡಿಮುಂಗಟ್ಟು ಗಳನ್ನ ಎಂದಿನಂತೆ ತೆರೆಯಬಹುದು.ಈ ಬಗ್ಗೆ ಸೂಕ್ತ ಸೂಚನೆಗಳನ್ನ ಜಿಲ್ಲಾಧಿಕಾರಿಯವರಾದ ಡಾ.ಸೆಲ್ವಮಣಿಯವರು ನೀಡಿದ್ದಾರೆ.ಈ ಮುನ್ನ ವ್ಯಾಪಾರಸ್ಥರ ಸಂಘಟನೆಯು ಜಿಲ್ಲಾಧಿಕಾರಿಗಳನ್ನ ಕರ್ಫ್ಯೂ ಸಡಿಲಿಕೆ ಬಗ್ಗೆ ಮನವಿ ಸಲ್ಲಿಸಿದ್ದನ್ನ ಇಲ್ಲಿ ಸ್ಮರಿಸಬಹುದಾಗಿದೆ.ಆದರೆ ಶನಿವಾರವೂ ಶಾಲೆಗಳಿಗೆ ರಜೆ ಮುಂದುವರೆಯುತ್ತದೆ ಎಂದು ತಿಳಿದು ಬಂದಿದೆ. ಸೋಮವಾರದ ಪರಿಸ್ಥಿತಿ ಪರಿಶೀಲಿಸಿ ಶಾಲಾಕಾಲೇಜುಗಳ ಆರಂಭಕ್ಕೆ ಸೂಕ್ತ ಆದೇಶನೀಡಲಾಗುವುದು ಎಂದು ತಿಳಿಸಲಾಗಿದೆ.ನಗರದಲ್ಲಿ ಶಾಂತ ವಾತಾವರಣವಿದ್ದು … Continue reading
ರಣಜಿ ಕ್ರಿಕೆಟ್ ಜಮ್ಮು& ಕಾಶ್ಮೀರದ ವಿರುದ್ಧ ಕರ್ನಾಟಕFebruary 25, 2022ರಣಜಿ ಟ್ರೋಫಿ ಟೂರ್ನಿಯ ಎಲೈಟ್ ಸಿ ಗುಂಪಿನ ಎರಡನೇ ಪಂದ್ಯದಲ್ಲಿ ಕರ್ನಾಟಕ ತಂಡ ಜಮ್ಮು ಮತ್ತು ಕಾಶ್ಮೀರ ವಿರುದ್ಧ ಚೇತೋಹಾರಿ ಪ್ರದರ್ಶನ ನೀಡಿದೆ. ಇಂಡಿಯನ್ ಇನ್ ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಚೆಂಪ್ಲೆಸ್ಟ್ ಗ್ರೌಂಡ್ ನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲ ಬ್ಯಾಟಿಂಗ್ ಆರಂಭಿಸಿದ ಕರ್ನಾಟಕ ತಂಡವು ದಿನದಾಟದ ಮುಕ್ತಾಯಕ್ಕೆ 90 ಓವರುಗಳಲ್ಲಿ 8 ವಿಕೆಟ್ ಗೆ 268 ರನ್ ಕಲೆಹಾಕಿದೆ. ಕರುಣ್ ನಾಯರ್ 267 ಎಸೆತಕ್ಕೆ 21 ಫೋರ್, 1 ಸಿಕ್ಸರ್ ಬಾರಿಸುವ ಮೂಲಕ 152 … Continue reading
ಉಕ್ರೇನ್ ನಲ್ಲಿನ ರಾಜ್ಯದ ವಿದ್ಯಾರ್ಥಿಗಳ ಬಗ್ಗೆ ತಾಜಾ ಸಮಾಚಾರFebruary 25, 2022ಉಕ್ರೇನ್ ಮತ್ತು ರಷ್ಯಾದ ನಡುವೆ ಯುದ್ಧ ಪ್ರಾರಂಭವಾದ ಬೆನ್ನಲ್ಲೇ ಯುದ್ಧಗ್ರಸ್ತ ಉಕ್ರೇನ್ ನಲ್ಲಿ ರಾಜ್ಯದ ನೂರಾರು ವಿದ್ಯಾರ್ಥಿಗಳು ಸಿಲುಕಿದ್ದಾರೆ. ಬಹುತೇಕ ವಿದ್ಯಾರ್ಥಿಗಳು ಉಕ್ರೇನ್ ದಲ್ಲಿ ವೈದ್ಯಕೀಯ ವಿದ್ಯಾಭ್ಯಾಸಕ್ಕೆಂದು ತಿಳಿದವರಾಗಿದ್ದಾರೆ. ಕೇಂದ್ರ ಸರ್ಕಾರ ಅಲ್ಲಿ ಸಿಲುಕಿರುವ ವಿದ್ಯಾರ್ಥಿಗಳಿಗೆ ತವರಿಗೆ ಮರಳುವಂತೆ ಸೂಚಿಸಿದ್ದರೂ ಸಹ ವಿಮಾನ ಟಿಕೆಟ್ ತಕ್ಷಣಕ್ಕೆ ಸಿಗದೇ ಅವರು ಅಲ್ಲೇ ಉಳಿದು ಕೊಳ್ಳುವಂತಾಗಿದೆ. ಭಾರತ ಮೂಲದ ವಿದ್ಯಾರ್ಥಿಗಳು ಏರ್ಪೋರ್ಟ್ ಕಡೆಗೆ ಹೋಗುತ್ತಿದ್ದ ವೇಳೆ ದಾಳಿ ಆರಂಭವಾಗಿ ವಿಮಾನ ಸಂಚಾರ ಸ್ಥಗಿತಗೊಂಡಿದೆ. ಬಹುತೇಕರು ಸದ್ಯ ಹಾಸ್ಟೆಲ್ಗಳಲ್ಲಿ ವಾಸವಾಗಿದ್ದಾರೆ ಅವರಿಗೆ … Continue reading
ರಷ್ಯಕ್ಕೆ ಯುರೋಪ್ ಯೂನಿಯನ್ ಎಚ್ಚರಿಕೆ ಸಂದೇಶFebruary 25, 2022ಐರೋಪ್ಯ ಒಕ್ಕೂಟವು ರಷ್ಯಾದಿಂದ ಅಪ್ರಚೋದಿತ ಆಕ್ರಮಣದ ಪರಿಣಾಮ ಬೃಹತ್ ಹಾನಿಗೆ ಒಳಗಾಗಿರುವ ಉಕ್ರೇನಿಗೆ ಮರುನಿರ್ಮಾಣಕ್ಕೆ ಬೃಹತ್ ಪರಿಹಾರದ ಪ್ಯಾಕೇಜ್ ಅನ್ನು ಘೋಷಿಸಿದೆ. ಅತ್ತ ಕಡೆ ರಷ್ಯಾ ಪ್ರಧಾನಿ ಪುಟಿನ್ ದುರ್ಗತಿಗೆ ಐರೋಪ್ಯ ಒಕ್ಕೂಟವು ನಿರ್ಬಂಧಗಳನ್ನು ಹೇರಲು ನಿರ್ಣಯಿಸಿದೆ. ಅಮೆರಿಕ, ನ್ಯಾಟೋ, ಇಯು ಸೇರಿಕೊಂಡು ಯುರೋಪ್ ನಿಂದ ರಷ್ಯಾದ ಎಲ್ಲಾ ವ್ಯವಹಾರಗಳನ್ನು ಹೊರಗಟ್ಟಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುತ್ತಿವೆ. ಈ ಕುರಿತಂತೆ ಇಯು ಅಧ್ಯಕ್ಷೆ ಉರ್ಸುಲಾ ಲಿಯಿನ್ ಅವರು ಪ್ರಾಥಮಿಕವಾಗಿ ಪುಟಿನ್ ಸರ್ಕಾರದ ರಾಜಕೀಯ ಮುಖಂಡರು, ಸಚಿವರುಗಳು ಅಮೆರಿಕ ಮತ್ತು … Continue reading
ಉಕ್ರೇನಿನ ಭಾರತೀಯರಿಗೆ ಕೇಂದ್ರ ಸರ್ಕಾರದ ಸುರಕ್ಷತಾ ಕ್ರಮFebruary 25, 2022ಭಾರತದ ರಾಯಭಾರ ಕಚೇರಿಯಿಂದ ಉಕ್ರೇನ್ ನಲ್ಲಿರುವ ಭಾರತೀಯ ನಾಗರಿಕರಿಗೆ ಮಹತ್ವದ ಸೂಚನೆ ನೀಡಲಾಗಿದೆ.ಉಕ್ರೇನ್ ಗಡಿ ದೇಶದ ಚೆಕ್‌ಪೋಸ್ಟ್‌ಗೆ ಬರುವಂತೆ ತಿಳಿಸಲಾಗಿದೆ. ಪೋಲೆಂಡ್, ಸ್ಲೊವಾಕಿಯಾ, ರೊಮೇನಿಯಾ, ಹಂಗೇರಿ ದೇಶಗಳ ಗಡಿ ಭಾಗಕ್ಕೆ ಬರುವಂತೆ ಉಕ್ರೇನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ ತಿಳಿಸಿದೆ. 4 ಪ್ರತ್ಯೇಕ ತಂಡಗಳನ್ನು ರಚನೆ ಮಾಡಲಾಗಿದೆ. ಈಗಾಗಲೇ ಅವು ನಾಲ್ಕು ದೇಶಗಳಲ್ಲಿವೆ. ನಾಲ್ಕು ರಾಷ್ಟ್ರಗಳ ಮೂಲಕ ಉಕ್ರೇನ್ ಗಡಿಗೆ ತೆರಳಲಿರುವ ತಂಡಗಳು ಭಾರತೀಯರನ್ನು ರಕ್ಷಿಸಲಿವೆ. ಪ್ರಸ್ತುತ ಹಂಗೇರಿ ರಾಯಭಾರಿ ಕಚೇರಿ ತಿಳಿಸಿರುವಂತೆ, ಹಂಗೇರಿ ಹಾಗೂ ರೊಮೇನಿಯಾ ಗಡಿಯಿಂದ … Continue reading
ಉಕ್ರೇನಿನ ವೈದ್ಯಕೀಯ ವ್ಯಾಸಂಗಕ್ಕೆ ಭಾರತೀಯರ ಒಲವು ಯಾಕೆ?February 25, 2022ಉಕ್ರೇನ್ ನಲ್ಲಿ ವೈದ್ಯಕೀಯ ಶಿಕ್ಷಣ ಭಾರೀ ಅಗ್ಗ ಎಂಬುದು ಜನಜನಿತ. ಇದೇ ಕಾರಣಕ್ಕಾಗಿ ಭಾರತದಿಂದ ಸಾಕಷ್ಟು ಮಂದಿ ಅಲ್ಲಿಗೆ ವಿದ್ಯಾಭ್ಯಾಸಕ್ಕಾಗಿ ಹೋಗಿದ್ದಾರೆ ಎನ್ನಲಾಗಿದೆ.ಯುರೋಪ್ ಸೇರಿದಂತೆ ಇಡೀ ವಿಶ್ವ ಅತ್ಯಂತ ಕಡಿಮೆ ವೆಚ್ಚದ ದೇಶ ಎಂಬ ಹಿರಿಮೆ ಉಕ್ರೇನ್ ಗೆ ಇದೆ. ಇಲ್ಲಿ ವಿವಿಧ ದೇಶದ 75 ಸಾವಿರ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಭಾರತೀಯ ವಿದ್ಯಾರ್ಥಿಗಳ ಸಂಖ್ಯೆ 20 ಸಾವಿರ ಎಂದು ತಿಳಿದುಬಂದಿದೆ. ಭಾರತೀಯ ವಿದ್ಯಾರ್ಥಿಗಳಿಗೆ ಇದು ಏಕೆ ನೆಚ್ಚಿನ ದೇಶವಾಯಿತು ಎಂದರೆ ಉಕ್ರೇನ್ ನ ಖಾಸಗಿ ವೈದ್ಯಕೀಯ … Continue reading
ನಕಲಿ ಮದ್ಯ ತಯಾರಿಕೆ ಮತ್ತು ಪೂರೈಕೆ ನಿಯಂತ್ರಿಸಲು ಕ್ರಮFebruary 25, 2022ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ರಾಜ್ಯದಲ್ಲಿ ನಕಲಿ ಮದ್ಯ ಜಾಲದ ಹಿಂದೆ ಯಾರೇ ಇದ್ದರೂ ಅವರನ್ನು ಇಲ್ಲದೆ ಕ್ರಮ ಜರುಗಿಸುವಂತೆ ಅಬಕಾರಿ ಇಲಾಖೆ ಆಯುಕ್ತರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ವಿಧಾನಸೌಧದಲ್ಲಿ ಸಿಎಂ ಬೊಮ್ಮಾಯಿ ಅವರು ಅಬಕಾರಿ ಇಲಾಖೆಯ ಅಧಿಕಾರಿಗಳೊಂದಿಗೆ ಬಜೆಟ್ ಪೂರ್ವ ಸಭೆ ನಡೆಸಿದ ಪದಾಧಿಕಾರಿಗಳ ಬೇಡಿಕೆ ಸಮಸ್ಯೆಗಳನ್ನು ಆಲಿಸಿ ಚರ್ಚೆನಡೆಸಿದರು. ಪದಾಧಿಕಾರಿಗಳು “ನಕಲಿ ಮದ್ಯ ತಯಾರಿಕೆ ಮತ್ತು ಹೊರ ರಾಜ್ಯದಿಂದ ಪೂರೈಕೆಯಾಗುವ ನಕಲಿ ಮದ್ಯ ತಡೆಗೆ ಸರ್ಕಾರ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಇದರಿಂದ ಸರ್ಕಾರಕ್ಕೆ ಆದಾಯ … Continue reading
ರಾಜ್ಯದಲ್ಲಿ ರಾಗಿ ಮೆಕ್ಕೆಜೋಳ ಬೆಂಬಲ ಬೆಲೆ ಏರಿಸಲು ಮಾಜಿ ಪ್ರಧಾನಿ ಒತ್ತಾಯFebruary 25, 2022ರಾಗಿ ಹಾಗೂ ಮೆಕ್ಕೆಜೋಳಕ್ಕೆ ನೀಡಲಾಗುತ್ತಿರುವ ಕನಿಷ್ಠ ಬೆಂಬಲ ಬೆಲೆಯ ಬಗ್ಗೆ ಪುನರ್ ಪರಿಶೀಲಿಸಲು ಹಾಗೂ ರಾಗಿಗೆ 4000 ರೂ. ಮೆಕ್ಕೆಜೋಳಕ್ಕೆ 2500 ರೂ. ಸೂಕ್ತ ಹಾಗೂ ಗೌರವಯುತ ದರ ನಿಗದಿಪಡಿಸಿ ಹೆಚ್ಚು ಖರೀದಿ ಕೇಂದ್ರ ತೆರೆಯಲು ಕ್ರಮ ಕೈಗೊಳ್ಳಬೇಕು ಎಂದು ಪ್ರಧಾನಿ ಮೋದಿ ಅವರಿಗೆ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಪತ್ರ ಬರೆದಿದ್ದಾರೆ. ರಾಜ್ಯದಲ್ಲಿ ಈ ಬಾರಿ ರಾಗಿ, ಮೆಕ್ಕೆಜೋಳವನ್ನು ಹೆಚ್ಚಿನ ಪ್ರಮಾಣದಲ್ಲಿ ಬೆಳೆಯಲಾಗಿದೆ. ಆದರೆ ನಾಲ್ಕು ಎಕರೆಗಿಂತ ಕಡಿಮೆ ಭೂಮಿ ಹೊಂದಿರುವ ರೈತರಿಂದ ಗರಿಷ್ಠ 20 … Continue reading
ಈ ಬಾರಿ ಬೇಸಿಗೆ ರಜೆ ಅವಧಿ ಕಡಿತFebruary 25, 2022ಸಾರ್ವಜನಿಕ ಶಿಕ್ಷಣ ಇಲಾಖೆಯು ಪ್ರಸಕ್ತ ಶೈಕ್ಷಣಿಕ ವರ್ಷ ವನ್ನು ಏಪ್ರಿಲ್ ಒಂಬತ್ತಕ್ಕೆ ಮುಕ್ತಾಯಗೊಳಿಸಲು ನಿರ್ಧರಿಸಿದ್ದು, ಮೇ 16ರಿಂದಲೇ ಮುಂದಿನ ಶೈಕ್ಷಣಿಕ ವರ್ಷ ಆರಂಭಕ್ಕೆ ನಿರ್ಧರಿಸಿದೆ. ಅಂದರೆ ಈ ಬಾರಿ ಕೇವಲ 37 ದಿನ ಮಾತ್ರ ಬೇಸಿಗೆ ರಜೆ ಇರುತ್ತದೆ. ಈ ಹಿಂದಿ ಸಾಮಾನ್ಯವಾಗಿ ಶಾಲಾ ಶೈಕ್ಷಣಿಕ ವರ್ಷ ಮೇ 29 ರಿಂದ ಆರಂಭಗೊಂಡು 10ನೇ ತಾರೀಖಿಗೆ ಪೂರ್ಣಗೊಳ್ಳುತ್ತಿತ್ತು. ಆದರೆ, ಕೋವಿಡ್ 19 ಸೋಂಕು ಹೆಚ್ಚಾದ ಹಿನ್ನೆಲೆಯಲ್ಲಿ 2019-20 ಮತ್ತು 2020-21ನೇ ಸಾಲಿನಲ್ಲೂ ಶೇ.50 ರಿಂದ 60ರಷ್ಟು ದಿನಗಳು … Continue reading
ಜಾಲತಾಣಗಳಲ್ಲಿ ಪ್ರಚೋದನಕಾರಿ ಪೊಸ್ಟ್ ಹಾಕಿದರೆ ಕ್ರಮ-ಗೃಹಸಚಿವFebruary 25, 2022ಆರಗ ಜ್ಞಾನೇಂದ್ರ ಅವರು ಸಾಮಾಜಿಕ ಜಾಲತಾಣಗಳ ಮೇಲೆ ನಿಗಾ ವಹಿಸಲಾಗಿದ್ದು, ಪ್ರಚೋದನಕಾರಿ ಪೋಸ್ಟ್ ಹಾಕುವವರನ್ನು ಬಂಧಿಸಿ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಖಡಕ್ ವಾರ್ನಿಂಗ್ ನೀಡಿದ್ದಾರೆ. “ಸಾಮಾಜಿಕ ಜಾಲತಾಣದಲ್ಲಿ ಹೇಗೆ ಬೇಕಾದರೂ, ಏನು ಬೇಕಾದರೂ ಪೋಸ್ಟ್ ಮಾಡುವಂತಿಲ್ಲ. ಅಂತವರನ್ನು ಬಂಧಿಸಿ ಕಾನೂನು ಕ್ರಮ ಜರುಗಿಸಲು ಎಲ್ಲ ರೀತಿ ಪ್ರಯತ್ನ ನಡೆದಿದೆ ಇಂತಹ ಪೋಸ್ಟ್ ಸಂದೇಶಗಳನ್ನು ಪರಿಶೀಲಿಸಲು ಪೊಲೀಸ್ ಠಾಣೆಗಳಲ್ಲಿ ಸಿಬ್ಬಂದಿ ಇದ್ದಾರೆ. ಸಾಮಾಜಿಕ ಜಾಲತಾಣವನ್ನು ವಿವೇಚನಾರಹಿತವಾಗಿ ಬಳಸುವ ಅಗತ್ಯವಿದೆ” ಎಂದು ಆರಗ ಜ್ಞಾನೇಂದ್ರ ಅವರು ತಿಳಿಸಿದರು. ಹರ್ಷನ … Continue reading
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.
Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.
KLIVE at Google News App
KLIVE Android App on Google Play Store
Download the most loved Klive App for your Android phone or tablet.
ಫೆಬ್ರವರಿ 26 ರಿಂದ ಕರ್ಫ್ಯೂ ವೇಳೆ ಸಡಿಲಿಕೆ ಮಾಡಲಾಗುವುದು. ಶನಿವಾರ ಬೆಳಿಗ್ಗೆ 6 ಗಂಟೆಯಿಂದ ಅಪರಾಹ್ನ 4 ಗಂಟೆಯವರೆಗೆ ವ್ಯಾಪಾರ ವಹಿವಾಟಿಗೆ ಅವಕಾಶವಿದೆ. ಅಂಗಡಿಮುಂಗಟ್ಟು ಗಳನ್ನ ಎಂದಿನಂತೆ ತೆರೆಯಬಹುದು. ಈ ಬಗ್ಗೆ ಸೂಕ್ತ ಸೂಚನೆಗಳನ್ನ ಜಿಲ್ಲಾಧಿಕಾರಿಯವರಾದ ಡಾ.ಸೆಲ್ವಮಣಿಯವರು ನೀಡಿದ್ದಾರೆ. ಈ ಮುನ್ನ ವ್ಯಾಪಾರಸ್ಥರ ಸಂಘಟನೆಯು ಜಿಲ್ಲಾಧಿಕಾರಿಗಳನ್ನ ಕರ್ಫ್ಯೂ ಸಡಿಲಿಕೆ ಬಗ್ಗೆ ಮನವಿ ಸಲ್ಲಿಸಿದ್ದನ್ನ ಇಲ್ಲಿ ಸ್ಮರಿಸಬಹುದಾಗಿದೆ. ಆದರೆ ಶನಿವಾರವೂ ಶಾಲೆಗಳಿಗೆ ರಜೆ ಮುಂದುವರೆಯುತ್ತದೆ ಎಂದು ತಿಳಿದು ಬಂದಿದೆ. ಸೋಮವಾರದ ಪರಿಸ್ಥಿತಿ ಪರಿಶೀಲಿಸಿ ಶಾಲಾಕಾಲೇಜುಗಳ ಆರಂಭಕ್ಕೆ ಸೂಕ್ತ ಆದೇಶನೀಡಲಾಗುವುದು ಎಂದು ತಿಳಿಸಲಾಗಿದೆ. ನಗರದಲ್ಲಿ ಶಾಂತ ವಾತಾವರಣವಿದ್ದು ಸಾರ್ವಜನಿಕರು ಯಾವುದೇ ಊಹಾಪೋಹಗಳನ್ನ ನಂಬದೇ ಜಿಲ್ಲಾಡಳಿತದೊಂದಿಗೆ ಸಹಕರಿಸಬೇಕೆಂದು ಸಾರ್ವಜನಿಕರಲ್ಲಿ ಜಿಲ್ಲಾಧಿಕಾರಿಗಳು ಮನವಿ ಮಾಡಿದ್ದಾರೆ.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.
Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.
KLIVE at Google News App
KLIVE Android App on Google Play Store
Download the most loved Klive App for your Android phone or tablet.
ರಣಜಿ ಟ್ರೋಫಿ ಟೂರ್ನಿಯ ಎಲೈಟ್ ಸಿ ಗುಂಪಿನ ಎರಡನೇ ಪಂದ್ಯದಲ್ಲಿ ಕರ್ನಾಟಕ ತಂಡ ಜಮ್ಮು ಮತ್ತು ಕಾಶ್ಮೀರ ವಿರುದ್ಧ ಚೇತೋಹಾರಿ ಪ್ರದರ್ಶನ ನೀಡಿದೆ.
ಇಂಡಿಯನ್ ಇನ್ ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಚೆಂಪ್ಲೆಸ್ಟ್ ಗ್ರೌಂಡ್ ನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲ ಬ್ಯಾಟಿಂಗ್ ಆರಂಭಿಸಿದ ಕರ್ನಾಟಕ ತಂಡವು ದಿನದಾಟದ ಮುಕ್ತಾಯಕ್ಕೆ 90 ಓವರುಗಳಲ್ಲಿ 8 ವಿಕೆಟ್ ಗೆ 268 ರನ್ ಕಲೆಹಾಕಿದೆ.
ಕರುಣ್ ನಾಯರ್ 267 ಎಸೆತಕ್ಕೆ 21 ಫೋರ್, 1 ಸಿಕ್ಸರ್ ಬಾರಿಸುವ ಮೂಲಕ 152 ರನ್ ಗಳಿಸಿದರು. ಇದು ಕರ್ನಾಟಕ ತಂಡಕ್ಕೆ ಆಸರೆ ಆಯಿತು.
ನಾಕೌಟ್ ಹಂತವನ್ನು ಜೀವಂತವಾಗಿರಿಸಿಕೊಳ್ಳಲು ಗೆಲ್ಲಲೇಬೇಕಾದ ಒತ್ತಡದಲ್ಲಿರುವ ಮನೀಶ್ ಪಾಂಡೆ ಆರಂಭಿಕ ಆಘಾತ ಅನುಭವಿಸಿದರು. ಆದರೆ ದ್ವಿತೀಯ ವಿಕೆಟ್ ಗೆ ಜೊತೆಗೂಡಿ ಆರ್. ಸಮರ್ಥ್ (45) ಮತ್ತು ಕರುಣ್ ನಾಯರ್ (98 )ರನ್ ಜೊತೆಯಾಟ ನಿರ್ವಹಿಸಿದರು.
ರೈಲ್ವೇಸ್ ವಿರುದ್ಧ ಶತಕ ಸಿಡಿಸಿದ ಸಿದ್ದಾರ್ಥ್, ಮನೀಶ್ ಪಾಂಡೆ ಸೇರಿದಂತೆ ಮಧ್ಯಮ ಹಾಗೂ ಕೆಳ ಕ್ರಮಾಂಕದ ಬ್ಯಾಟರ್ ಗಳು ಈ ಪಂದ್ಯದಲ್ಲಿ ನಿರಾಸೆ ಮೂಡಿಸಿದರು.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.
Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.
KLIVE at Google News App
KLIVE Android App on Google Play Store
Download the most loved Klive App for your Android phone or tablet.
ಉಕ್ರೇನ್ ಮತ್ತು ರಷ್ಯಾದ ನಡುವೆ ಯುದ್ಧ ಪ್ರಾರಂಭವಾದ ಬೆನ್ನಲ್ಲೇ ಯುದ್ಧಗ್ರಸ್ತ ಉಕ್ರೇನ್ ನಲ್ಲಿ ರಾಜ್ಯದ ನೂರಾರು ವಿದ್ಯಾರ್ಥಿಗಳು ಸಿಲುಕಿದ್ದಾರೆ.
ಬಹುತೇಕ ವಿದ್ಯಾರ್ಥಿಗಳು ಉಕ್ರೇನ್ ದಲ್ಲಿ ವೈದ್ಯಕೀಯ ವಿದ್ಯಾಭ್ಯಾಸಕ್ಕೆಂದು ತಿಳಿದವರಾಗಿದ್ದಾರೆ. ಕೇಂದ್ರ ಸರ್ಕಾರ ಅಲ್ಲಿ ಸಿಲುಕಿರುವ ವಿದ್ಯಾರ್ಥಿಗಳಿಗೆ ತವರಿಗೆ ಮರಳುವಂತೆ ಸೂಚಿಸಿದ್ದರೂ ಸಹ ವಿಮಾನ ಟಿಕೆಟ್ ತಕ್ಷಣಕ್ಕೆ ಸಿಗದೇ ಅವರು ಅಲ್ಲೇ ಉಳಿದು ಕೊಳ್ಳುವಂತಾಗಿದೆ.
ಭಾರತ ಮೂಲದ ವಿದ್ಯಾರ್ಥಿಗಳು ಏರ್ಪೋರ್ಟ್ ಕಡೆಗೆ ಹೋಗುತ್ತಿದ್ದ ವೇಳೆ ದಾಳಿ ಆರಂಭವಾಗಿ ವಿಮಾನ ಸಂಚಾರ ಸ್ಥಗಿತಗೊಂಡಿದೆ. ಬಹುತೇಕರು ಸದ್ಯ ಹಾಸ್ಟೆಲ್ಗಳಲ್ಲಿ ವಾಸವಾಗಿದ್ದಾರೆ ಅವರಿಗೆ ಈಗ ಏನು ಸಮಸ್ಯೆ ಇಲ್ಲ ಆದರೆ ಯುದ್ಧ ಮುಂದುವರೆದರೆ ಆಹಾರ ಧಾನ್ಯ ಕೊರತೆ, ನೀರಿನ ಸಮಸ್ಯೆ ಎದುರಾಗುವ ಆತಂಕ ಕಾಡಬಹುದು ಎನ್ನಲಾಗಿದೆ.
ಶಿವಮೊಗ್ಗದ ಇಬ್ಬರು ವಿದ್ಯಾರ್ಥಿಗಳ ಪೈಕಿ ಉಕ್ರೇನ್ ಮತ್ತು ರಷ್ಯಾದ ನಡುವೆ ಯುದ್ಧ ಪ್ರಾರಂಭವಾದ ಬೆನ್ನಲ್ಲೇ ಯುದ್ಧಗ್ರಸ್ತ ಉಕ್ರೇನ್ ನಲ್ಲಿ ರಾಜ್ಯದ ನೂರಾರು ವಿದ್ಯಾರ್ಥಿಗಳು ಸಿಲುಕಿದ್ದಾರೆ.
ಬಹುತೇಕ ವಿದ್ಯಾರ್ಥಿಗಳು ಉಕ್ರೇನ್ ದಲ್ಲಿ ವೈದ್ಯಕೀಯ ವಿದ್ಯಾಭ್ಯಾಸಕ್ಕೆಂದು ತಿಳಿದವರಾಗಿದ್ದಾರೆ. ಕೇಂದ್ರ ಸರ್ಕಾರ ಅಲ್ಲಿ ಸಿಲುಕಿರುವ ವಿದ್ಯಾರ್ಥಿಗಳಿಗೆ ತವರಿಗೆ ಮರಳುವಂತೆ ಸೂಚಿಸಿದ್ದರೂ ಸಹ ವಿಮಾನ ಟಿಕೆಟ್ ತಕ್ಷಣಕ್ಕೆ ಸಿಗದೇ ಅವರು ಅಲ್ಲೇ ಉಳಿದು ಕೊಳ್ಳುವಂತಾಗಿದೆ.
ಭಾರತ ಮೂಲದ ವಿದ್ಯಾರ್ಥಿಗಳು ಏರ್ಪೋರ್ಟ್ ಕಡೆಗೆ ಹೋಗುತ್ತಿದ್ದ ವೇಳೆ ದಾಳಿ ಆರಂಭವಾಗಿ ವಿಮಾನ ಸಂಚಾರ ಸ್ಥಗಿತಗೊಂಡಿದೆ. ಬಹುತೇಕರು ಸದ್ಯ ಹಾಸ್ಟೆಲ್ಗಳಲ್ಲಿ ವಾಸವಾಗಿದ್ದಾರೆ ಅವರಿಗೆ ಈಗ ಏನು ಸಮಸ್ಯೆ ಇಲ್ಲ ಆದರೆ ಯುದ್ಧ ಮುಂದುವರೆದರೆ ಆಹಾರ ಧಾನ್ಯ ಕೊರತೆ, ನೀರಿನ ಸಮಸ್ಯೆ ಎದುರಾಗುವ ಆತಂಕ ಕಾಡಬಹುದು ಎನ್ನಲಾಗಿದೆ.
ಶಿವಮೊಗ್ಗದ ಇಬ್ಬರು ವಿದ್ಯಾರ್ಥಿಗಳ ಪೈಕಿ ವಿದ್ಯಾನಗರ ಜಯಶೀಲ ಅವರು ಕಜಕಸ್ತಾನದ ಮೂಲಕ ದಿಲ್ಲಿಗೆ ತಲುಪಿದ್ದಾರೆ. ಶಿವಮೊಗ್ಗ ತಾಲೂಕಿನ ಸಂತೆಕಡೂರು ಗ್ರಾಮದ ತೇಜಸ್ ಅವರು ಉಕ್ರೇನ್ ನ ಖಾರ್ಕಿವ್ ನಲ್ಲಿರುವ ವಿ.ಎನ್.ಕರಾಜಿನ್ ಖಾರ್ಕಿವ್ ನ್ಯಾಷನಲ್ ಯೂನಿವರ್ಸಿಟಿಯಲ್ಲಿ ಎಂಬಿಬಿಎಸ್ 5ನೇ ಸೆಮಿಸ್ಟರ್ ವ್ಯಾಸಂಗ ಮಾಡುತ್ತಿದ್ದಾರೆ. ತೇಜಸ್ ಅವರು ಅಲ್ಲಿ ಸುರಕ್ಷಿತವಾಗಿದ್ದಾರೆ.
ಯಲಬುರ್ಗಾ ತಾಲೂಕಿನ ಕಲ್ಲೂರು ಗ್ರಾಮದ ಸಂಗಮೇಶ ಸೊಪ್ಪಿಮಠ ಅವರು ಉಕ್ರೇನಿನ ಮೆನಿ ಸ್ತೀಯ ವಿ.ಎನ್.ಪಿ ಎಂ ಎಂ ಮೆಡಿಕಲ್ ಕಾಲೇಜಿನಲ್ಲಿ 3ನೇ ವರ್ಷದ ಎಂಬಿಬಿಎಸ್ ಅಧ್ಯಯನ ಮಾಡುತ್ತಿದ್ದಾರೆ. ಫೆಬ್ರವರಿ 28ರಂದು ಸಂಗಮೇಶ್ ವಾಪಸ್ ಬರಲು ಬುಕಿಂಗ್ ಮಾಡಿದ್ದು ವಿಮಾನ ಕ್ಯಾನ್ಸಲ್ ಆಗಿದೆ. ಸತ್ಯ ಸಂಗಮೇಶ್ ಸುರಕ್ಷಿತ ಸ್ಥಳದಲ್ಲಿದ್ದಾರೆಂದು ತಿಳಿದುಬಂದಿದೆ.
ದಾವಣಗೆರೆ ಮೂಲದ ಮೂವರು ವಿದ್ಯಾರ್ಥಿಗಳಾದ ಅಬೀದ್ ಅಲಿ,ಸೈಹದಾ ಅಬಿಬಾ ಉಕ್ರೇನ್ ನಲ್ಲಿ ಸಿಲುಕಿದ್ದಾರೆ.
ಚಿತ್ರದುರ್ಗದ ಮೂಲದ ಸುನೇಹಾ, ಕಡೂರು ಮೂಲದ ಆರ್. ಇಂಚರ ರಾಮನಗರ ಜಿಲ್ಲೆಯ ಚನ್ನಪಟ್ಟಣದ ನಿವೇದಿತಾ, ತಾಳಿಕೋಟಿ ತಾಲೂಕಿನ ತಮದಡ್ಡಿ ಗ್ರಾಮದ ಸುಚಿತ್ರ ಮಲ್ಲನಗೌಡ ಕವಡಿಮಟ್ಟಿ ಅವರು ಊರಿನಲ್ಲಿ ಸಿಲುಕಿದ್ದಾರೆ. ಉಕ್ರೇನ್ ನಲ್ಲಿ ಸಿಲುಕಿರುವ ವಿದ್ಯಾರ್ಥಿಗಳನ್ನು ಕರೆಸಿಕೊಳ್ಳಲು ಅಲ್ಲಿನ ಜಿಲ್ಲಾಡಳಿತಗಳು ಸಂಬಂಧಪಟ್ಟ ಇಲಾಖೆಯೊಂದಿಗೆ ನಿರಂತರವಾಗಿ ಪ್ರಯತ್ನಿಸುತ್ತಿದ್ದಾರೆ.
“ಉಕ್ರೇನ್ ನಲ್ಲಿ ಸಿಲುಕಿರುವ ಕನ್ನಡಿಗರನ್ನು ಸುರಕ್ಷಿತವಾಗಿ ರಾಜ್ಯಕ್ಕೆ ಕರೆತರಲು ಎಲ್ಲಾ ಅಗತ್ಯ ಕ್ರಮಕೈಗೊಳ್ಳಲಾಗಿದೆ. ಈ ಬಗ್ಗೆ ಉಕ್ರೇನ್ ನಲ್ಲಿರುವ ಭಾರತೀಯ ರಾಯಭಾರಿ ಕಚೇರಿಯೊಂದಿಗೆ ನಿರಂತರ ಸಂಪರ್ಕದಲ್ಲಿರಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ” ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹೇಳಿದ್ದಾರೆ. ದಿಲ್ಲಿಗೆ ತಲುಪಿದ್ದಾರೆ. ಶಿವಮೊಗ್ಗ ತಾಲೂಕಿನ ಸಂತೆಕಡೂರು ಗ್ರಾಮದ ತೇಜಸ್ ಅವರು ಉಕ್ರೇನ್ ನ ಖಾರ್ಕಿವ್ ನಲ್ಲಿರುವ ವಿ.ಎನ್.ಕರಾಜಿನ್ ಖಾರ್ಕಿವ್ ನ್ಯಾಷನಲ್ ಯೂನಿವರ್ಸಿಟಿಯಲ್ಲಿ ಎಂಬಿಬಿಎಸ್ 5ನೇ ಸೆಮಿಸ್ಟರ್ ವ್ಯಾಸಂಗ ಮಾಡುತ್ತಿದ್ದಾರೆ. ತೇಜಸ್ ಅವರು ಅಲ್ಲಿ ಸುರಕ್ಷಿತವಾಗಿದ್ದಾರೆ.
ಯಲಬುರ್ಗಾ ತಾಲೂಕಿನ ಕಲ್ಲೂರು ಗ್ರಾಮದ ಸಂಗಮೇಶ ಸೊಪ್ಪಿಮಠ ಅವರು ಉಕ್ರೇನಿನ ಮೆನಿ ಸ್ತೀಯ ವಿ.ಎನ್.ಪಿ ಎಂ ಎಂ ಮೆಡಿಕಲ್ ಕಾಲೇಜಿನಲ್ಲಿ 3ನೇ ವರ್ಷದ ಎಂಬಿಬಿಎಸ್ ಅಧ್ಯಯನ ಮಾಡುತ್ತಿದ್ದಾರೆ. ಫೆಬ್ರವರಿ 28ರಂದು ಸಂಗಮೇಶ್ ವಾಪಸ್ ಬರಲು ಬುಕಿಂಗ್ ಮಾಡಿದ್ದು ವಿಮಾನ ಕ್ಯಾನ್ಸಲ್ ಆಗಿದೆ. ಸದ್ಯ ಸಂಗಮೇಶ್ ಸುರಕ್ಷಿತ ಸ್ಥಳದಲ್ಲಿದ್ದಾರೆಂದು ತಿಳಿದುಬಂದಿದೆ.
ದಾವಣಗೆರೆ ಮೂಲದ ಮೂವರು ವಿದ್ಯಾರ್ಥಿಗಳಾದ ಅಬೀದ್ ಅಲಿ,ಸೈಹದಾ ಅಬಿಬಾ ಉಕ್ರೇನ್ ನಲ್ಲಿ ಸಿಲುಕಿದ್ದಾರೆ.
ಚಿತ್ರದುರ್ಗದ ಮೂಲದ ಸುನೇಹಾ, ಕಡೂರು ಮೂಲದ ಆರ್. ಇಂಚರ ರಾಮನಗರ ಜಿಲ್ಲೆಯ ಚನ್ನಪಟ್ಟಣದ ನಿವೇದಿತಾ, ತಾಳಿಕೋಟಿ ತಾಲೂಕಿನ ತಮದಡ್ಡಿ ಗ್ರಾಮದ ಸುಚಿತ್ರ ಮಲ್ಲನಗೌಡ ಕವಡಿಮಟ್ಟಿ ಅವರು ಊರಿನಲ್ಲಿ ಸಿಲುಕಿದ್ದಾರೆ. ಉಕ್ರೇನ್ ನಲ್ಲಿ ಸಿಲುಕಿರುವ ವಿದ್ಯಾರ್ಥಿಗಳನ್ನು ಕರೆಸಿಕೊಳ್ಳಲು ಅಲ್ಲಿನ ಜಿಲ್ಲಾಡಳಿತಗಳು ಸಂಬಂಧಪಟ್ಟ ಇಲಾಖೆಯೊಂದಿಗೆ ನಿರಂತರವಾಗಿ ಪ್ರಯತ್ನಿಸುತ್ತಿದ್ದಾರೆ.
“ಉಕ್ರೇನ್ ನಲ್ಲಿ ಸಿಲುಕಿರುವ ಕನ್ನಡಿಗರನ್ನು ಸುರಕ್ಷಿತವಾಗಿ ರಾಜ್ಯಕ್ಕೆ ಕರೆತರಲು ಎಲ್ಲಾ ಅಗತ್ಯ ಕ್ರಮಕೈಗೊಳ್ಳಲಾಗಿದೆ. ಈ ಬಗ್ಗೆ ಉಕ್ರೇನ್ ನಲ್ಲಿರುವ ಭಾರತೀಯ ರಾಯಭಾರಿ ಕಚೇರಿಯೊಂದಿಗೆ ನಿರಂತರ ಸಂಪರ್ಕದಲ್ಲಿರಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ” ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹೇಳಿದ್ದಾರೆ.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.
Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.
KLIVE at Google News App
KLIVE Android App on Google Play Store
Download the most loved Klive App for your Android phone or tablet.
ಐರೋಪ್ಯ ಒಕ್ಕೂಟವು ರಷ್ಯಾದಿಂದ ಅಪ್ರಚೋದಿತ ಆಕ್ರಮಣದ ಪರಿಣಾಮ ಬೃಹತ್ ಹಾನಿಗೆ ಒಳಗಾಗಿರುವ ಉಕ್ರೇನಿಗೆ ಮರುನಿರ್ಮಾಣಕ್ಕೆ ಬೃಹತ್ ಪರಿಹಾರದ ಪ್ಯಾಕೇಜ್ ಅನ್ನು ಘೋಷಿಸಿದೆ. ಅತ್ತ ಕಡೆ ರಷ್ಯಾ ಪ್ರಧಾನಿ ಪುಟಿನ್ ದುರ್ಗತಿಗೆ ಐರೋಪ್ಯ ಒಕ್ಕೂಟವು ನಿರ್ಬಂಧಗಳನ್ನು ಹೇರಲು ನಿರ್ಣಯಿಸಿದೆ.
ಅಮೆರಿಕ, ನ್ಯಾಟೋ, ಇಯು ಸೇರಿಕೊಂಡು ಯುರೋಪ್ ನಿಂದ ರಷ್ಯಾದ ಎಲ್ಲಾ ವ್ಯವಹಾರಗಳನ್ನು ಹೊರಗಟ್ಟಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುತ್ತಿವೆ.
ಈ ಕುರಿತಂತೆ ಇಯು ಅಧ್ಯಕ್ಷೆ ಉರ್ಸುಲಾ ಲಿಯಿನ್ ಅವರು ಪ್ರಾಥಮಿಕವಾಗಿ ಪುಟಿನ್ ಸರ್ಕಾರದ ರಾಜಕೀಯ ಮುಖಂಡರು, ಸಚಿವರುಗಳು ಅಮೆರಿಕ ಮತ್ತು ಯುರೋಪ್ ಮೇಟಿ ಮೇಲೆ ನಿರ್ಬಂಧ ಹೇರುತ್ತಿದ್ದೇವೆ. ಜೊತೆಗೆ ಕೈಗಾರಿಕೆ, ಆಮದು-ರಫ್ತು ಉತ್ಪನ್ನಗಳ ಜಾಲದಿಂದ ರಷ್ಯಾವನ್ನು ಹೊರಗಿಡುವುದು. ಬ್ಯಾಂಕ್ ಸೇರಿದಂತೆ ಬಹುತೇಕ ಎಲ್ಲಾ ರೀತಿಯ ಹಣದ ವಹಿವಾಟುಗಳನ್ನು ರಷ್ಯಾ ಜೊತೆ ಕಡಿದುಕೊಳ್ಳಲು ಹಂತಹಂತವಾಗಿ ಮುಂದಾಗುತ್ತೇವೆ. ಜಾಗತಿಕ ಇಂಟರ್ ಬ್ಯಾಂಕ್ ಪಾವತಿ ವ್ಯವಸ್ಥೆಯಿಂದ ಹೊರಗಿಡುವ ಮೂಲಕ ರಾಜ್ಯದ ಆರ್ಥಿಕತೆಗೆ ದೊಡ್ಡ ಪೆಟ್ಟು ಕೊಡಲಿದ್ದೇವೆ ಎಂದು ಎಚ್ಚರಿಕೆ ನೀಡಿದ್ದಾರೆ.
ಇಯು ಅಧ್ಯಕ್ಷೆ ಉರ್ಸುಲಾ ವೊನ್ ಡೆರ್ ಲಿಯಿನ್ ಅವರು “2ನೇ ಮಹಾಯುದ್ಧದ ನಂತರ ಅತ್ಯಂತ ಭೀಕರ ಸನ್ನಿವೇಶ ಎದುರಿಸುತ್ತಿದ್ದೇವೆ. ಉಕ್ರೇನ್ ಬಿಕ್ಕಟ್ಟು ಬಗ್ಗೆ ಐರೋಪ್ಯ ಒಕ್ಕೂಟದ ಸದಸ್ಯ ರಾಷ್ಟ್ರಗಳ ವಿದೇಶಾಂಗ ಸಚಿವರ ಸಭೆಯಲ್ಲಿ ರಷ್ಯಾ ಮೇಲೆ ಭವಿಷ್ಯದಲ್ಲಿ ಹೇರಲಾಗುವ ಮಹತ್ವದ ನಿರ್ಬಂಧಗಳನ್ನು ನಿರ್ಣಯಿಸಲಾಗುವುದು. ಸದ್ಯಕ್ಕೆ ವ್ಯಾಪಾರ ಸ್ಥಗಿತ ರಾಜಕೀಯ ಮುಖಂಡರಿಗೆ ಪ್ರವೇಶ ನಿರಾಕರಣೆ ತೀರ್ಮಾನಗಳಿಗೆ ಒಕ್ಕೂಟದಲ್ಲಿ ಒಪ್ಪಿಗೆ ಸಿಕ್ಕಿದೆ” ಎಂದು ತಿಳಿಸಿದ್ದಾರೆ.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.
Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.
KLIVE at Google News App
KLIVE Android App on Google Play Store
Download the most loved Klive App for your Android phone or tablet.
ಭಾರತದ ರಾಯಭಾರ ಕಚೇರಿಯಿಂದ ಉಕ್ರೇನ್ ನಲ್ಲಿರುವ ಭಾರತೀಯ ನಾಗರಿಕರಿಗೆ ಮಹತ್ವದ ಸೂಚನೆ ನೀಡಲಾಗಿದೆ. ಉಕ್ರೇನ್ ಗಡಿ ದೇಶದ ಚೆಕ್‌ಪೋಸ್ಟ್‌ಗೆ ಬರುವಂತೆ ತಿಳಿಸಲಾಗಿದೆ. ಪೋಲೆಂಡ್, ಸ್ಲೊವಾಕಿಯಾ, ರೊಮೇನಿಯಾ, ಹಂಗೇರಿ ದೇಶಗಳ ಗಡಿ ಭಾಗಕ್ಕೆ ಬರುವಂತೆ ಉಕ್ರೇನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ ತಿಳಿಸಿದೆ.
4 ಪ್ರತ್ಯೇಕ ತಂಡಗಳನ್ನು ರಚನೆ ಮಾಡಲಾಗಿದೆ. ಈಗಾಗಲೇ ಅವು ನಾಲ್ಕು ದೇಶಗಳಲ್ಲಿವೆ. ನಾಲ್ಕು ರಾಷ್ಟ್ರಗಳ ಮೂಲಕ ಉಕ್ರೇನ್ ಗಡಿಗೆ ತೆರಳಲಿರುವ ತಂಡಗಳು ಭಾರತೀಯರನ್ನು ರಕ್ಷಿಸಲಿವೆ.
ಪ್ರಸ್ತುತ ಹಂಗೇರಿ ರಾಯಭಾರಿ ಕಚೇರಿ ತಿಳಿಸಿರುವಂತೆ, ಹಂಗೇರಿ ಹಾಗೂ ರೊಮೇನಿಯಾ ಗಡಿಯಿಂದ ಸ್ಥಳಾಂತರ ಪ್ರಕ್ರಿಯೆ ಕೈಗೊಳ್ಳಲು ಸರ್ಕಾರ ನಿರ್ಧರಿಸುತ್ತಿದೆ. ಮೂಲಗಳನ್ನು ಉಲ್ಲೇಖಿಸಿ ಎಎನ್ಐ ಮಾಹಿತಿ ನೀಡಿರುವಂತೆ, ‘ಭಾರತೀಯರ ಸ್ಥಳಾಂತರ ಪ್ರಕ್ರಿಯೆಯಲ್ಲಿ ವಿಮಾನ ಪ್ರಯಾಣದ ವೆಚ್ಚವನ್ನು ಕೇಂದ್ರ ಸರ್ಕಾರ ಭರಿಸಲಿದೆ. ಈ ಮೂಲಕ ಉಕ್ರೇನ್ನಲ್ಲಿ ಸಿಲುಕಿರುವವರನ್ನು ಉಚಿತವಾಗಿ ಭಾರತವಾಗಿ ಸ್ಥಳಾಂತರಿಸಲಾಗುತ್ತದೆ’ ಎಂದು ಹೇಳಲಾಗಿದೆ.
ಪ್ರಸ್ತುತ ರಕ್ಷಣೆಗೆ ತೆರಳಿರುವ ಭಾರತೀಯ ತಂಡಗಳು ರೊಮೇನಿಯನ್ ಗಡಿಯನ್ನು ತಲುಪಿದ್ದು, ಇದು ಉಕ್ರೇನಿಯನ್ ರಾಜಧಾನಿ ಕೈವ್‌ನಿಂದ ಸರಿಸುಮಾರು 12 ಗಂಟೆಗಳ ಪ್ರಯಾಣದ ದೂರದಲ್ಲಿದೆ. ನಾಗರಿಕ ವಿಮಾನಗಳಿಗೆ ವಾಯುಪ್ರದೇಶವನ್ನು ಮುಚ್ಚಿರುವುದರಿಂದ ಭಾರತೀಯ ಪ್ರಜೆಗಳು ಸುರಕ್ಷಿತವಾಗಿ ಮನೆಗೆ ಮರಳಲು ಬುಚಾರೆಸ್ಟ್‌ನಲ್ಲಿ ವಿಮಾನಗಳನ್ನು ಹತ್ತಲಿದ್ದಾರೆ.
ಹಲವಾರು ಭಾರತೀಯ ಪ್ರಜೆಗಳು ಕೈವ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯಲ್ಲಿ ಆಶ್ರಯ ಪಡೆದಿದ್ದಾರೆ. ರಾಯಭಾರ ಕಚೇರಿ ಆವರಣದ ಸುತ್ತ ಶೆಲ್ ದಾಳಿ ನಡೆದಿರುವ ಬಗ್ಗೆ ವರದಿಗಳಿದ್ದರೂ ಯಾವುದೇ ಹಾನಿಯಾಗಿಲ್ಲ. ವ್ಲಾಡಿಮಿರ್ ಪುಟಿನ್ ಅವರ ಪಡೆಗಳು ಉಕ್ರೇನ್ ಅನ್ನು ಆಕ್ರಮಿಸಿದಾಗಿನಿಂದ, ಭಾರತ ಆತಂಕದಲ್ಲಿದೆ. ಉಕ್ರೇನ್‌ನಲ್ಲಿರುವ ಪ್ರಜೆಗಳನ್ನು ಸಂಪೂರ್ಣವಾಗಿ ಸ್ಥಳಾಂತರಿಸುವ ಪ್ರಕ್ರಿಯೆಯನ್ನು ಮೇಲ್ವಿಚಾರಣೆ ಮಾಡಲು ವಿದೇಶಾಂಗ ವ್ಯವಹಾರಗಳ ಸಚಿವಾಲಯವು ದೆಹಲಿಯಲ್ಲಿ 24×7 ನಿಯಂತ್ರಣ ಕೊಠಡಿಯನ್ನು ಸ್ಥಾಪಿಸಿದೆ ಎಂದು ತಿಳಿದು ಬಂದಿದೆ. ಕೈವ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯು ನಾಗರಿಕರಿಗೆ ಸಲಹೆಗಳನ್ನು ನೀಡುತ್ತಿದೆ. ಹೆಚ್ಚಾಗಿ ವಿದ್ಯಾರ್ಥಿಗಳು ಎಲ್ಲಿದ್ದರೂ ಶಾಂತವಾಗಿರಲು, ಪರ್ಯಾಯ ಮಾರ್ಗದ ಮೂಲಕ ಸ್ಥಳಾಂತರಿಸುವ ವ್ಯವಸ್ಥೆ ಮಾಡುವುದಾಗಿ ಭರವಸೆ ನೀಡಿದೆ.
Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.
Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.
KLIVE at Google News App
KLIVE Android App on Google Play Store
Download the most loved Klive App for your Android phone or tablet.
ಉಕ್ರೇನ್ ನಲ್ಲಿ ವೈದ್ಯಕೀಯ ಶಿಕ್ಷಣ ಭಾರೀ ಅಗ್ಗ ಎಂಬುದು ಜನಜನಿತ. ಇದೇ ಕಾರಣಕ್ಕಾಗಿ ಭಾರತದಿಂದ ಸಾಕಷ್ಟು ಮಂದಿ ಅಲ್ಲಿಗೆ ವಿದ್ಯಾಭ್ಯಾಸಕ್ಕಾಗಿ ಹೋಗಿದ್ದಾರೆ ಎನ್ನಲಾಗಿದೆ. ಯುರೋಪ್ ಸೇರಿದಂತೆ ಇಡೀ ವಿಶ್ವ ಅತ್ಯಂತ ಕಡಿಮೆ ವೆಚ್ಚದ ದೇಶ ಎಂಬ ಹಿರಿಮೆ ಉಕ್ರೇನ್ ಗೆ ಇದೆ. ಇಲ್ಲಿ ವಿವಿಧ ದೇಶದ 75 ಸಾವಿರ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಭಾರತೀಯ ವಿದ್ಯಾರ್ಥಿಗಳ ಸಂಖ್ಯೆ 20 ಸಾವಿರ ಎಂದು ತಿಳಿದುಬಂದಿದೆ.
ಭಾರತೀಯ ವಿದ್ಯಾರ್ಥಿಗಳಿಗೆ ಇದು ಏಕೆ ನೆಚ್ಚಿನ ದೇಶವಾಯಿತು ಎಂದರೆ ಉಕ್ರೇನ್ ನ ಖಾಸಗಿ ವೈದ್ಯಕೀಯ ಕಾಲೇಜುಗಳ ಬೋಧನಾ ಶುಲ್ಕ ಭಾರತದ ಕಾಲೇಜುಗಳಿಗೆ ಹೋಲಿಸಿದರೆ ತುಂಬಾ ಅಗ್ಗವಾಗಿದೆ. ಉಕ್ರೇನಿಯನ್ ಕಾಲೇಜುಗಳು ವಿಶ್ವ ಆರೋಗ್ಯ ಮಂಡಳಿ ಮತ್ತು ಭಾರತೀಯ ವೈದ್ಯಕೀಯ ಮಂಡಳಿ ಗಳ ಮಾನ್ಯತೆ ಗಳಿಸಿವೆ. ಯುರೋಪ್ ವೈದ್ಯಕೀಯ ಮಂಡಳಿ, ಬ್ರಿಟನ್ ಜನರಲ್ ವೈದ್ಯಕೀಯ ಮಂಡಳಿಗಳು ಕೂಡ ಮಾನ್ಯತೆ ನೀಡಿರುವುದರಿಂದ ಸಹಜವಾಗಿಯೇ ವೈದ್ಯಕೀಯ ಪದವಿ ಪಡೆದವರ ಉದ್ಯೋಗ ಅವಕಾಶಗಳು ಹೆಚ್ಚಿರುತ್ತವೆ.
ಭಾರತದಲ್ಲಿ 1.20 ಲಕ್ಷ ವಿದ್ಯಾರ್ಥಿಗಳು ಪ್ರವೇಶ ಪರೀಕ್ಷೆ ಬರೆಯುತ್ತಿದ್ದು, ಅವರಲ್ಲಿ 60 ಸಾವಿರ ವಿದ್ಯಾರ್ಥಿಗಳಿಗೆ ಸೀಟು ಸಿಗುತ್ತದೆ. ನಮ್ಮಂತಹ ಮಧ್ಯಮ ವರ್ಗದ ಕುಟುಂಬದ ಮಕ್ಕಳಿಗೆ ದುಬಾರಿ ಶುಲ್ಕ ಪಾವತಿ ಕಷ್ಟ. ಭಾರತದಲ್ಲಿ ಕಲಿಯಲು ಶಿಕ್ಷಣ ಸಾಲ ಕೂಡ ಸಿಗುವುದಿಲ್ಲ. ಅಲ್ಲಿ ಕಲಿಯುವುದಾದರೆ ಹೆಚ್ಚಿನ ಸಾಲ ಸಿಗುತ್ತದೆ. ಹಾಗಾಗಿ ಮಗಳನ್ನು ಅಲ್ಲಿಗೆ ಕಳಿಸಿದ್ದೇವೆ ಎಂದು ಉಕ್ರೇನ್ ನಲ್ಲಿ ವೈದ್ಯಕೀಯ ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿನಿಯ ತಾಯಿ ಸಂಧ್ಯಾ ಅವರು ತಿಳಿಸಿದ್ದಾರೆ.
ಭಾರತದಲ್ಲಿ ಪ್ರವೇಶ ಪರೀಕ್ಷೆ ಕಡ್ಡಾಯವಾಗಿದೆ. ಕಡಿಮೆ ಅಂಕ ಸಿಕ್ಕಿದವರಿಗೆ ಪ್ರವೇಶ ದೊರೆಯುವುದಿಲ್ಲ. ಆದರೆ ಕೆಲವರಿಗೆ ವೈದ್ಯಕೀಯ ವಿದ್ಯಾಭ್ಯಾಸದ ಕನಸು ದೊಡ್ಡದಾಗಿರುತ್ತದೆ. ಅಂಥವರು ಉಕ್ರೇನ್ ಗೆ ಹೋಗುತ್ತಾರೆ ಎನ್ನಲಾಗಿದೆ.
ಕರ್ನಾಟಕವೂ ಸೇರಿದಂತೆ ಎಲ್ಲ ಕಡೆಗಳಿಂದ ಅಲ್ಲಿನ ವಿವಿಗಳಿಗೆ ವಿದ್ಯಾರ್ಥಿಗಳನ್ನು ದಾಖಲಿಸುವ ಏಜೆಂಟರುಗಳು ಇದ್ದಾರೆ.
ಭಾರತ ಸರ್ಕಾರ ಉಕ್ರೇನ್ ನಲ್ಲಿರುವವರು ತಕ್ಷಣ ಮರಳುವಂತೆ ಸೂಚನೆ ನೀಡಿತ್ತು. ಕಳೆದು ಮಂಗಳವಾರದಿಂದಲೇ ಅಲ್ಲಿಂದ ಭಾರತಕ್ಕೆ ಬರುವವರ ಸಂಖ್ಯೆ ಹೆಚ್ಚಿತ್ತು. ಈ ದೇಶವನ್ನು ತೊರೆಯುವಂತೆ ಭಾರತೀಯ ರಾಯಭಾರ ಕಚೇರಿ ಹೇಳಿದ ನಂತರ ದುಬಾರಿ ಟಿಕೆಟ್ ಗಳನ್ನು ಕಾಯ್ದಿರಿಸಿದ್ದವರ ಸಂಖ್ಯೆ ಕೂಡ ಹೆಚ್ಚಿತು.