Thursday, February 19, 2026
Thursday, February 19, 2026
Home Blog Page 1697

ಮಾಜಿ ಸಿಎಂ ಯಡಿಯೂರಪ್ಪ ಅವರಿಗೆ ಪ್ರೆಸ್ ಕ್ಲಬ್ ವಾರ್ಷಿಕ ಪ್ರಶಸ್ತಿ

0

ಬೆಂಗಳೂರು ಪ್ರೆಸ್ ಕ್ಲಬ್ ವತಿಯಿಂದ ಅರಮನೆ ಮೈದಾನದ ಗಾಯತ್ರಿ ವಿಹಾರ ದಲ್ಲಿ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ 2021ನೇ ಸಾಲಿನ ವರ್ಷದ ಪ್ರಶಸ್ತಿ ಹಾಗೂ ನಟ ಕಿಚ್ಚ ಸುದೀಪ್ ಗೆ ವಿಶೇಷ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಇದೇ ಸಂದರ್ಭದಲ್ಲಿ ವಿಜಯಕರ್ನಾಟಕದ ಬೆಂಗಳೂರು ಆವೃತ್ತಿಯ ಸ್ಥಾನಿಕ ಸಂಪಾದಕ ಸುದರ್ಶನ ಚನ್ನಂಗಿಹಳ್ಳಿ ಸೇರಿದಂತೆ ಹಲವು ಹಿರಿಯ ಪತ್ರಕರ್ತರಿಗೆ ಸಿಎಂ ಬಸವರಾಜ್ ಬೊಮ್ಮಾಯಿ ವಾರ್ಷಿಕ ಪ್ರಶಸ್ತಿ ಪ್ರದಾನ ಮಾಡಿದರು.

ಬೆಂಗಳೂರು ಪ್ರೆಸ್ ಕ್ಲಬ್ ನ ಯುಟ್ಯೂಬ್ ಚಾನೆಲ್ ಉದ್ಘಾಟಿಸಿದ ಸಚಿವ ಮುರುಗೇಶ್ ನಿರಾಣಿ, ಮಾಧ್ಯಮ ಸರಕಾರ ಮತ್ತು ಜನರ ನಡುವೆ ಸೇತುವೆಯಾಗಿ ಕಾರ್ಯ ನಿರ್ವಹಿಸುತ್ತಿದೆ. ಕೋವಿಡ್ ಮೇಲೆ ಪತ್ರಕರ್ತರು ಜೀವದ ಹಂಗುತೊರೆದು ಕೆಲಸ ನಿರ್ವಹಿಸಿದರು ಎಂದು ಶ್ಲಾಘಿಸಿದರು.

ಪದ್ಮಶ್ರೀ ಪ್ರಶಸ್ತಿ ಹರೇಕಳ ಹಾಜಬ್ಬ ಹಾಗೂ ಸಚಿವ ಡಾ.ಕೆ. ಸುಧಾಕರ್ ಅವರಿಗೆ 2020ನೇ ಸಾಲಿನ ವಿಶೇಷ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಪ್ರಜಾಪ್ರಭುತ್ವದಲ್ಲಿ ಪತ್ರಿಕಾರಂಗ ಹೆಚ್ಚು ಜೀವಂತಿಕೆಯಿಂದ ಕೆಲಸ ಮಾಡುತ್ತಿದೆ. ಸರಕಾರದ ತಪ್ಪುಗಳನ್ನು ಕಠಿಣ ಶಬ್ದಗಳಿಂದ ಟೀಕಿಸುವ ಮೂಲಕ ಉತ್ತಮ ಆಡಳಿತಕ್ಕೆ ದಾರಿ ತೋರಿಸುತ್ತಿದೆ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ಅವರು ತಿಳಿಸಿದರು.

ಕಾರ್ಯಕ್ರಮದಲ್ಲಿ ಸಚಿವರಾದ ಮುನಿರತ್ನ, ವಿಧಾನ ಪರಿಷತ್ತಿನ ಪ್ರತಿ ಪಕ್ಷದ ಉಪನಾಯಕ ಗೋವಿಂದರಾಜು, ಪ್ರೆಸ್ ಕ್ಲಬ್ ಅಧ್ಯಕ್ಷ ಸದಾಶಿವಶೆಣೈ, ಹಾಗೂ ಪ್ರಧಾನ ಕಾರ್ಯದರ್ಶಿ ಎಚ್.ವಿ. ಕಿರಣ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Start‘ to this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ತಡಗಣಿ ಹುಡುಗ ಉಕ್ರೇನ್ ನಲ್ಲಿ ಸುರಕ್ಷಿತ

0

ಯುದ್ಧಪೀಡಿತ ಉಕ್ರೇನ್ ನ ಕಾರ್ಕಿವ್ ನಗರದಲ್ಲಿರುವ ತಡಗಣಿ ಮೂಲದ ವಿದ್ಯಾರ್ಥಿ ಟಿ.ಎಂ. ಆದೀಶ್ ಸದ್ಯಕ್ಕೆ ಮೆಟ್ರೋ ಸುರಂಗದಲ್ಲಿ ಸುರಕ್ಷಿತವಾಗಿದ್ದಾರೆ.

ತಡಗಣಿ ನಿವಾಸಿ, ಸೊರಬದಲ್ಲಿ ಪಶುವೈದ್ಯಾಧಿಕಾರಿಯಾಗಿರುವ ಮಲ್ಲಿಕಾರ್ಜುನ್, ಗೀತಾ ಮಣಿ ದಂಪತಿ ಪುತ್ರ ಆದೀಶ್ ಅವರು ಕಾರ್ಕಿವ್ ನ ನ್ಯಾಷನಲ್ ಮೆಡಿಕಲ್ ಯೂನಿವರ್ಸಿಟಿಯಲ್ಲಿ 3ನೇ ವರ್ಷದ ಎಂಬಿಬಿಎಸ್ ವ್ಯಾಸಂಗ ಮಾಡುತ್ತಿದ್ದಾರೆ.

ಶುಕ್ರವಾರ ಸಂಜೆ ತಮ್ಮ ತಂದೆಗೆ ದೂರವಾಣಿ ಕರೆ ಮಾಡಿದ ವಿದ್ಯಾರ್ಥಿ , ಸದ್ಯ ಯಾವುದೇ ತೊಂದರೆ ಇಲ್ಲ. ಪರಿಸ್ಥಿತಿ ಹೀಗೆ ಮುಂದುವರಿದರೆ ನೀರು, ಆಹಾರಕ್ಕೆ ಅಭಾವವಾಗಬಹುದು ಎಂದಿದ್ದಾರೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Start‘ to this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಇನ್ನು ಮುಂದೆ ಕಸಾಪ ಸದಸ್ಯತ್ವ ಬೇಕೆ? ಐದನೇ ತರಗತಿ ಪಾಸಾಗಿರಬೇಕು

0

ಸದಸ್ಯತ್ವ ಶುಲ್ಕ, ಸದಸ್ಯತ್ವಕ್ಕೆ ಕನಿಷ್ಠ ಶಿಕ್ಷಣ, ಆಪ್ ಅಭಿವೃದ್ಧಿ ಸಹಿತ ಅನೇಕ ಅಂಶಗಳ ಉದ್ದೇಶಿತ ಕಸಾಪ ಬೈಲಾ ಕರಡು ಪ್ರತಿಗೆ ಕಸಾಪ ಕೇಂದ್ರ ಕಾರ್ಯಕಾರಿ ಸಮಿತಿ ಒಪ್ಪಿಗೆ ಸೂಚಿಸಿದೆ.
ಕಸಾಪ ಅಧ್ಯಕ್ಷ ಡಾ. ಮಹೇಶ್ ಜೋಶಿ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕಾರಿ ಸಮಿತಿಯಲ್ಲಿ ನಿಕಟಪೂರ್ವ ಅಧ್ಯಕ್ಷರು ಸೇರಿದಂತೆ 44 ಜಿಲ್ಲಾ ಮತ್ತು ಗಡಿ ಕಸಾಪಅಧ್ಯಕ್ಷರು ಭಾಗವಹಿಸಿದ್ದರು.

ಹೊಸ ಸದಸ್ಯತ್ವ ಪಡೆಯಲು 5ನೇ ತರಗತಿ ಪಾಸಾಗಿರಬೇಕು. ಇಲ್ಲವೇ ಕಸಾಪದ ಸರಳ ಪರೀಕ್ಷೆ ತೆಗೆದುಕೊಳ್ಳಬೇಕು ಎಂದು ನಿಗದಿಗೊಳಿಸಲಾಯಿತು. ಹಳೆ ಸದಸ್ಯರು ಹಾಗೂ ಕಲಾವಿದರಿಗೆ ಯಾವ ಶೈಕ್ಷಣಿಕ ಮಾನದಂಡವನ್ನೂ ನಿಗದಿ ಮಾಡದಿರಲು ತೀರ್ಮಾನಿಸಲಾಯಿತು.
ಕಸಾಪ ಪರಿಷತ್ತಿನ ಅಂಗರಚನೆ, ಕಾರ್ಯಕಾರಿ ಸಮಿತಿ ರಚನೆ, ಕಾರ್ಯವ್ಯಾಪ್ತಿ, ನಾನಾ ಘಟಕಗಳಿಗೆ ಸ್ವಂತ ಕಟ್ಟಡ ಒದಗಿಸುವುದೂ ಸೇರಿದಂತೆ ಅನೇಕ ತಿದ್ದುಪಡಿಗಳ ಸಂಬಂಧ ಸಭೆಯಲ್ಲಿ ಚರ್ಚೆ ನಡೆಯಿತು.

ಪರಿಷತ್ತಿನ ಧ್ಯೇಯೋದ್ದೇಶಗಳು ಹಾಗೂ ನಿಯಮ ನಿಬಂಧನೆಗಳ ತಿದ್ದುಪಡಿಗಳನ್ನು ಮೇನಲ್ಲಿ ಹಾವೇರಿ ಜಿಲ್ಲೆಯ ಕಾಗಿನೆಲೆಯಲ್ಲಿ ವಿಶೇಷ ಸರ್ವಸದಸ್ಯರ ಸಭೆ ಕರೆದು ಮಂಡಿಸಬೇಕೆಂದು ಕಾರ್ಯಕಾರಿ ಸಮಿತಿ ಸಭೆಯು ಉದ್ದೇಶಿತ ತಿದ್ದುಪಡಿಗಳ ಕರಡು ಪ್ರತಿಗೆ ಅನುಮೋದನೆ ನೀಡಿತು ಎಂದು ಕಸಾಪ ಬೆಂಗಳೂರು ನಗರ ಅಧ್ಯಕ್ಷ ಪ್ರಕಾಶ್ ಮೂರ್ತಿಯವರು ತಿಳಿಸಿದರು.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Start‘ to this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಯುದ್ಧ ನಿಲ್ಲಿಸಲು ರಷ್ಯಾ ಮೇಲೆ ವಿಶ್ವದ ಇತರ ದೇಶಗಳ ಒತ್ತಾಯ

0

ರಷ್ಯಾ ಸೇನೆಯು ಉಕ್ರೇನ್ ಮೇಲೆ ಮಿಲಿಟರಿ ಕಾರ್ಯಾಚರಣೆ ಹೆಸರಿನಲ್ಲಿ ನಡೆಸುತ್ತಿರುವ ಆಕ್ರಮಣ ಎರಡನೇ ದಿನದಂದು ಉಕ್ರೇನ್ ರಾಜಧಾನಿ ನಗರಕ್ಕೆ ರಷ್ಯಾ ಸೇನೆ ಲಗ್ಗೆ ಇಟ್ಟಿದೆ.

ರಷ್ಯಾ ಸೈನಿಕರು ಉಕ್ರೇನ್ ಸರ್ಕಾರಿ ಕಚೇರಿ, ಪ್ರಮುಖ ಕಟ್ಟಡಗಳು, ಅಣುಸ್ಥಾವರ, ವ್ಯಾಪಾರ ಕೇಂದ್ರಗಳು, ಖಜಾನೆಗಳನ್ನು ವಶಕ್ಕೆ ಪಡೆದುಕೊಳ್ಳುತ್ತಿದ್ದಾರೆ.

ಉಕ್ರೇನ್ ಯೋಧರು ರಷ್ಯಾ ಸೇನೆಯನ್ನು ತಡೆಯುವ ನಿಟ್ಟಿನಲ್ಲಿ ನಗರದ ಪ್ರದೇಶದಲ್ಲಿನ ಅನೇಕ ಸೇತುವೆಗಳನ್ನು ಖುದ್ದು ನಾಶಪಡಿಸಿದ್ದಾರೆ.

ರಷ್ಯಾ ಸೈನಿಕರನ್ನು ಹಿಮ್ಮೆಟ್ಟಿಸಲು 10,000 ನಾಗರಿಕರಿಗೆ ಪರವಾನಿಗಿ ಇಲ್ಲದೆಯೇ ರೈಫಲ್ ಗಳನ್ನು ವಿತರಿಸಿದೆ.

ಉಕ್ರೇನ್ ನಲ್ಲಿರುವ ಚೆರ್ನೋಬಿಲ್ ಅಣುಸ್ಥಾವರವನ್ನು ರಷ್ಯಾ ಸೇನೆ ಸಂಪೂರ್ಣವಾಗಿ ವಶಕ್ಕೆ ಪಡೆದು ಅಲ್ಲಿನ ಪರಮಾಣು ರಿಯಾಕ್ಟರ್ ಕಾರ್ಯಾರಂಭ ಮಾಡಿದ್ದನ್ನು ಪರಿಶೀಲಿಸಿ ಖಾತ್ರಿಪಡಿಸಿಕೊಂಡ ನಂತರ ರಷ್ಯಾ ಸರ್ಕಾರವು ದಾಳಿ ನಿಲ್ಲಿಸುವ ಪ್ರಸ್ತಾವನೆಯನ್ನು ಇರಿಸಿದೆ.

ರಷ್ಯಾ ವಿದೇಶಾಂಗ ಸಚಿವ ಸರ್ಗೀ ಲಾವ್ರೊವ್ ಅವರು “ದಾಳಿ ನಿಲ್ಲಿಸಿ, ಮಾತುಕತೆಗೆ ಮುಂದಾಗಲು ಸಿದ್ದರಿದ್ದೇವೆ. ಆದರೆ ಈ ಕೂಡಲೇ ಉಕ್ರೇನ್ ಸೇನೆಯು ಶಸ್ತ್ರಾಸ್ತ್ರಗಳನ್ನು ಕೆಳಗಿರಿಸಿ ಶರಣಾಗತಿಯನ್ನು ಘೋಷಿಸಬೇಕು. ಬೆಲಾರಸ್ ರಾಜಧಾನಿ ‘ಮಿನ್ ಸ್ಕ್’ ಅಥವಾ ಗೌಪ್ಯ ನಗರದಲ್ಲಿ ಸಂಧಾನ ಸಭೆ ನಡೆಸಲಾಗುವುದು” ಎಂದು ತಿಳಿಸಿದ್ದಾರೆ.

ಟರ್ಕಿ ಅಧ್ಯಕ್ಷ ತಯ್ಯಿಪ್ ಎರ್ಡೊಗಾನ್ ಅವರು “ಉಕ್ರೇನ್ ಮೇಲಿನ ರಷ್ಯಾ ಆಕ್ರಮಣಕ್ಕೆ ನ್ಯಾಟೊ, ಐರೋಪ್ಯ ಒಕ್ಕೂಟದ ನಿಷ್ಕ್ರಿಯತೆಯೇ ಪ್ರಮುಖ ಕಾರಣ. ವಿನಾಯಕ ಹೆಜ್ಜೆ ಇರಿಸದ ಹಿನ್ನೆಲೆಯಲ್ಲಿ ಪುಟಿನ್ ಧೈರ್ಯವಾಗಿ ಸೇನೆಯನ್ನು ಗಡಿಯೊಳಗೆ ನುಗ್ಗಿಸಿದರು” ಎಂದು ಹೇಳಿದ್ದಾರೆ.

ಫ್ರಾನ್ಸ್ ವಿತ್ತ ಸಚಿವ ಬ್ರುನೊಲಿಮೇರಿ ಅವರು “ಆರ್ಥಿಕವಾಗಿ ರಷ್ಯವನ್ನು ಪ್ರತ್ಯೇಕವಾಗಿರಿಸಲು ಎಲ್ಲಾ ಸಿದ್ಧತೆ ನಡೆಸಲಾಗುತ್ತಿದೆ. ಜಾಗತಿಕ ಹಣಕಾಸು ವ್ಯವಸ್ಥೆಯಿಂದ ರಷ್ಯಾವನ್ನು ದೂರ ತಳಲಾಗುವುದು. ರಷ್ಯಾದ ಆರ್ಥಿಕತೆ ದುರ್ಬಲವಾದರೆ, ಅವರ ಹುಂಬತನ ಕುಗ್ಗಲಿದೆ. ಐರೋಪ್ಯ ಒಕ್ಕೂಟದ ತಿರುಗೇಟು ಹೀಗಿರಲಿದೆ” ಎಂದು ಹೇಳಿದ್ದಾರೆ.

ಅಮೆರಿಕ ಅಧ್ಯಕ್ಷ ಜೋಬೈಡನ್ ಅವರು “ರಷ್ಯಾ ಸೇನೆಯು ಪುಟಿನ್ ನಿರ್ದೇಶನದಂತೆ ಉಕ್ರೇನ್ ನ ನೆರೆಹೊರೆಯ ಲ್ಯಾಟ್ವಿಯಾ, ಎಸ್ಟೊನಿಯಾ, ಲಿಥುವೆನಿಯಾ ಮೊದಲಾದ ರಾಷ್ಟ್ರಗಳು ಮತ್ತು ನೆಟ್ಟು ಸದಸ್ಯರ ಮೇಲೆ ಕಣ್ಣು ಹಾಕಿದರೆ ಪ್ರಬಲ ಪ್ರತಿದಾಳಿ ಎದುರಿಸಲಿದೆ. ಪುಟಿನ್ ತನ್ನ ಹಠಮಾರಿತನಕ್ಕೆ ಶಾಸ್ತಿ ಎದುರಿಸಬೇಕಾಗುತ್ತದೆ” ಎಂದು ಎಚ್ಚರಿಕೆ ನೀಡಿದ್ದಾರೆ.

ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಜೆಲೆನ್ ಸ್ಕಿ ಅವರು “ಅಮೆರಿಕ, ನ್ಯಾಟೊ ಸದಸ್ಯರು ರಷ್ಯಾ ವಿರುದ್ಧ ಹೇರಿರುವ ನಿರ್ಬಂಧಗಳು ಸಾಲದು. ಸದ್ಯದ ಸ್ಥಿತಿಯಲ್ಲಿ ಉಕ್ರೇನ್ ಸೇನೆ ನಾಗರಿಕರು ರಷ್ಯಾ ಆಕ್ರಮಣ ವಿರುದ್ಧ ಏಕಾಂಗಿಯಾಗಿ ರಸ್ತೆಗಳಲ್ಲಿ ಹೋರಾಡುತ್ತಿದ್ದಾರೆ. ನಮಗೆ ಹೆಚ್ಚಿನ ಬಲದ ಅಗತ್ಯವಿದೆ” ಎಂದು ಹೇಳಿದ್ದಾರೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Start‘ to this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಕೋವಿಡ್ ತೀವ್ರ ಇಳಿಕೆ ಕಾರಣ ‌ನಿರ್ಬಂಧಗಳ ಸಡಿಲಿಕೆ ರಾಜ್ಯಗಳಿಗೆ ಕೇಂದ್ರ ಸೂಚನೆ

0

ಕಳೆದ ತಿಂಗಳು ಆತಂಕ ಮೂಡಿಸಿದ್ದ ಕೋವಿಡ್ ಮೂರನೇ ಅಲೆಯು ಅತ್ಯಂತ ವೇಗವಾಗಿ ಇಳಿಕೆಯಾಗುತ್ತಿದೆ. ಜನರು ಸಹಜ ಸ್ಥಿತಿಯತ್ತ ಮರಳುತ್ತಿದ್ದಾರೆ.

ಕಳೆದ ಮೂರ್ನಾಲ್ಕು ದಿನಗಳಿಂದ ಸೋಂಕಿತರ ಸಂಖ್ಯೆ ಸಾವಿರದೊಳಗಿದೆ. ಸಾವಿನ ಸಂಖ್ಯೆ ಕೂಡ ಕಡಿಮೆಯಾಗಿದೆ. ಪ್ರಸ್ತುತ ಕೋವಿಡ್ ಸಕ್ರಿಯ ಪ್ರಕರಣಗಳ ಸಂಖ್ಯೆ 7,518 ರಷ್ಟಿದೆ. ಈ ತಿಂಗಳ ಅಂತ್ಯಕ್ಕೆ 2 ಸಾವಿರದ ಸಮೀಪ ಬರುವ ನಿರೀಕ್ಷೆ ಇದೆ.

ಸಾವಿನ ಸಂಖ್ಯೆ ಕೂಡ ಸಿಂಗಲ್ ಡಿಜಿಟ್ ಗೆ ಇಳಿಯಲಿದೆ. ಮೂರನೇ ಅಲೆಯಲ್ಲಿ 9.35 ಲಕ್ಷ ಜನರು ಸೋಂಕಿಗೆ ತುತ್ತಾಗಿದ್ದರು. 1,500 ಜನರು ಸೋಂಕಿನಿಂದ ಮೃತಪಟ್ಟಿದ್ದರು.

ದೇಶದಲ್ಲಿ ಕೋವಿಡ್ ಪ್ರಕರಣಗಳು ಗಣನೀಯವಾಗಿ ಕಡಿಮೆಯಾಗುತ್ತಿರುವ ಕಾರಣದಿಂದ ರಾತ್ರಿ ಕರ್ಫ್ಯೂ ಸೇರಿದಂತೆ ನಿರ್ಬಂಧಗಳನ್ನು ಸಡಿಲಗೊಳಿಸುವಂತೆ ಕೇಂದ್ರ ಸರ್ಕಾರವು ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಸಲಹೆ ನೀಡಿದೆ.

“ಸಾಮಾಜಿಕ,ಧಾರ್ಮಿಕ, ಮನೋರಂಜನೆ ಕ್ರೀಡೆ ಮತ್ತು ಶೈಕ್ಷಣಿಕ ಕಾರ್ಯಕ್ರಮಗಳಿಗೆ ಸಂಬಂಧಿಸಿದ ನಿರ್ಬಂಧಗಳನ್ನು ಸಡಿಲಗೊಳಿಸಬಹುದು. ಹಾಗಿಯೇ ರಾತ್ರಿ ಕರ್ಫ್ಯೂ ಅವಧಿಯನ್ನು ಕಡಿತ ಮಾಡಬಹುದು. ಸ್ಥಳೀಯ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸಿ ಕೈಗೊಳ್ಳಬೇಕು” ಎಂದು ಕೇಂದ್ರ ಗೃಹ ಕಾರ್ಯದರ್ಶಿ ಅಜಯ್ ಭಲ್ಲಾ ಅವರು ಸಲಹೆ ನೀಡುವ ಮೂಲಕ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಬರೆದಿದ್ದಾರೆ.

ಉರಿಯಲ್ಲಿ ಉಕ್ರೇನ್ ಬಸವಳಿದ ಭಾರತೀಯರು

0

ಯುದ್ಧಪೀಡಿತ ಉಕ್ರೇನ್ ನಲ್ಲಿ ತ್ರಿಶಂಕು ಸ್ಥಿತಿಗೆ ಸಿಲುಕಿರುವ 16 ಸಾವಿರ ಭಾರತೀಯರನ್ನು ಸುರಕ್ಷಿತವಾಗಿ ತಾಯ್ನಾಡಿಗೆ ಕರೆತರಲು ಭಾರತ ಸರ್ಕಾರ ಸಮರೋಪಾದಿಯಲ್ಲಿ ಪ್ರಯತ್ನಿಸುತ್ತಿದೆ. ಆದಷ್ಟು ಶೀಘ್ರವಾಗಿ ಸಾಧ್ಯವಾದಷ್ಟು ಎಲ್ಲಾ ಮಾರ್ಗಗಳ ಮೂಲಕ ಉಕ್ರೇನ್ ನಲ್ಲಿ ಸಿಲುಕಿರುವ ಭಾರತೀಯರ ಸ್ಥಳಾಂತರಕ್ಕೆ ಕ್ರಮ ಕೈಗೊಂಡಿದೆ.

ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರು ಕೇಂದ್ರ ಗೃಹ ಸಚಿವಾಲಯ, ನಾಗರಿಕ ವಿಮಾನಯಾನ ಸಚಿವಾಲಯಗಳು ಸಕಲ ಪ್ರಯತ್ನ ನಡೆಸುತ್ತಿವೆ. ಉಕ್ರೇನ್ ನಲ್ಲಿರುವ ಭಾರತೀಯ ರಾಯಭಾರ ಕಚೇರಿಯು ದೇಶದ ಎಲ್ಲಾ ವಿದ್ಯಾರ್ಥಿಗಳ ಪಟ್ಟಿ ತಯಾರಿಸುತ್ತಿದೆ ಎಂದು ತಿಳಿಸಿದ್ದಾರೆ.

ಉಕ್ರೇನ್ ನಿಂದ ಭಾರತೀಯರ ಸ್ಥಳಾಂತರದ ಸಂಪೂರ್ಣ ಖರ್ಚುವೆಚ್ಚವನ್ನು ತಾನೇ ಭರಿಸುವುದಾಗಿ ಕೇಂದ್ರ ಸರ್ಕಾರ ತಿಳಿಸಿದೆ.

ಭಾರತದ ಸುಮಾರು 40 ವಿದ್ಯಾರ್ಥಿಗಳು ಉಕ್ರೇನ್ ಪೋಲೆಂಡ್ ವರೆಗೆ ಎಂಟು ಕಿಲೋಮೀಟರ್ ಕಾಲ್ನಡಿಗೆಯಲ್ಲೇ ಸಾಗಿದ್ದಾರೆ. ಗಡಿ ರಾಷ್ಟ್ರಗಳ ಮೂಲಕ ಸ್ಥಳಾಂತರಕ್ಕೆ ಭಾರತ ಕ್ರಮ ಕೈಗೊಂಡ ಹಿನ್ನೆಲೆಯಲ್ಲಿ 40 ವಿದ್ಯಾರ್ಥಿಗಳು ಕಾಲೇಜು ಬಸ್ಸಿನಲ್ಲಿ ರಾಜಧಾನಿ ಕೀವ್ ನಿಂದ ಪೋಲೆಂಡ್ ಗಡಿಗೆ ತೆರಳುತ್ತಿದ್ದರು. ಆದರೆ ವಿದ್ಯಾರ್ಥಿಗಳನ್ನು ಅರ್ಧದಾರಿಯಲ್ಲೇ ಬಸ್ ನಿಂದ ತಿಳಿಸಿದ ಕಾರಣ ಅವರು ನಡೆದು ಗಡಿ ತಲುಪಿದ್ದಾರೆ ಎಂದು ತಿಳಿದುಬಂದಿದೆ.

ಉಕ್ರೇನಿನ ಸುಮಿ ನಗರದಲ್ಲಿರುವ ಕಟ್ಟಡವೊಂದರ ನೆಲಮಹಡಿಯಲ್ಲಿ ಭಾರತದ 400 ವಿದ್ಯಾರ್ಥಿಗಳು ಆಶ್ರಯ ಪಡೆದಿದ್ದು, ಸ್ಥಳಾಂತರಗೊಳಿಸುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ಉಕ್ರೇನ್ ನಲ್ಲಿ ಸಿಲುಕಿರುವ ಕನ್ನಡಿಗರ ರಕ್ಷಣೆಗೆ ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ. ಸಂಬಂಧ ವಿದೇಶಾಂಗ ವ್ಯವಹಾರಗಳ ಸಚಿವ ಜೈಶಂಕರ್ ಜೊತೆ ಮಾತುಕತೆ ನಡೆಸಲಾಗಿದೆ ಎಂದು ಸಿಎಂ ಬೊಮ್ಮಾಯಿ ಅವರು ಹೇಳಿದ್ದಾರೆ.

ಬೆಂಗಳೂರಿನ 28 ವಿದ್ಯಾರ್ಥಿಗಳು ಸೇರಿದಂತೆ ಕರ್ನಾಟಕದ ಒಟ್ಟು 91 ವಿದ್ಯಾರ್ಥಿಗಳು ಉಕ್ರೇನ್ ನಲ್ಲಿ ಸಿಲುಕಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಸಂಸದೀಯ ವ್ಯವಹಾರಗಳ ಸಚಿವ ಪ್ರಹಲ್ಲಾದ್ ಜೋಶಿ ಅವರು “ಉಕ್ರೇನ್ ನಲ್ಲಿ ಸಿಲುಕಿರುವ ಭಾರತೀಯ ಮೂಲದ 16,000 ಜನರು ಸುರಕ್ಷಿತವಾಗಿದ್ದು, ಅವರ ಕುಟುಂಬ ಸದಸ್ಯರು ಆತಂಕಪಡುವ ಅಗತ್ಯವಿಲ್ಲ” ಎಂದು ಹೇಳಿದ್ದಾರೆ.

ಉಕ್ರೇನ್ ರಾಜಧಾನಿ ಕೀವ್ ಗೆ ರಷ್ಯಾ ಸೇನಾಪಡೆ ನುಗ್ಗಿತು ವಿಮಾನ ನಿಲ್ದಾಣ ಪ್ರಮುಖ ಕಟ್ಟಡಗಳನ್ನು ವಶಕ್ಕೆ ಪಡೆದಿದೆ. ಉಕ್ರೇನಿನ ಚೆರ್ನೋಬಿಲ್ ಅಣುಸ್ಥಾವರವನ್ನ ರಷ್ಯ ತನ್ನ ವಶಕ್ಕೆ ಪಡೆದಿದೆ. ಅಲ್ಲದೆ ವಿಕಿರಣ ಸೋರಿಕೆಯ ಭೀತಿಯು ಕೂಡ ಎಲ್ಲೆಡೆ ಆತಂಕ ಮೂಡಿದೆ.

ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಭಾರತದ ಬೆಂಬಲಕ್ಕಾಗಿ ರಷ್ಯಾ ಅಮೆರಿಕ ಹಗ್ಗಜಗ್ಗಾಟ ನಡೆಸುತ್ತಿದೆ.

ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಅವರು ರಷ್ಯಾ ಅಧ್ಯಕ್ಷ ಪುಟಿನ್ ಅವರಿಗೆ ಫೋನ್ ಮೂಲಕ ಕರೆ ಮಾಡಿ ಉಕ್ರೇನ್ ನೊಂದಿಗೆ ಸಂಧಾನ ಮಾತುಕತೆ ನಡೆಸುವಂತೆ ಸಲಹೆಯನ್ನು ನೀಡಿದ್ದಾರೆ.

ಕೆನಡಾ, ಆಸ್ಟ್ರೇಲಿಯಾ, ನ್ಯೂಜಿಲೆಂಡ್, ಜಪಾನ್, ದಕ್ಷಿಣ ಕೊರಿಯಾದಿಂದಲು ಆರ್ಥಿಕ ದಿಗ್ಬಂದನ ವಿಧಿಸಿದೆ. ಅಲ್ಲದೇ ಯುರೋಪ್ ಒಕ್ಕೂಟ ಐರೋಪ್ಯ ದೇಶಗಳಲ್ಲಿರುವ ಪುಟಿನ್ ಆಸ್ತಿ ಜಪ್ತಿಗೆ ನಿರ್ಧರಿಸಿದೆ.

ರಷ್ಯಾದಾಳಿ ಆರಂಭಿಸಿದ ಎರಡು ದಿನಗಳಲ್ಲಿ ಆ ದೇಶದ 1,000ಕ್ಕೂ ಹೆಚ್ಚು ಸೈನಿಕರನ್ನು ಹತ್ಯೆ ಮಾಡಿರುವುದಾಗಿ ಉಕ್ರೇನ್ ಹೇಳಿಕೊಂಡಿದೆ ಹಾಗೂ ತಮ್ಮ ದೇಶದ 137 ಮಂದಿ ಮೃತಪಟ್ಟಿರುವುದಾಗಿ ಉಕ್ರೇನ್ ತಿಳಿಸಿದೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Start‘ to this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ನಾನು ನೋಡಿದ ಉಕ್ರೇನ್ ಆಗ ಹೀಗಿತ್ತು

0

ಉಕ್ರೇನ್ ಈಗ ರಷ್ಯಾದ ಬಾಂಬ್ ದಾಳಿಯಿಂದ ಹೊತ್ತಿ ಉರಿಯುತ್ತಿದೆ. 35 ವರ್ಷಗಳ ಹಿಂದೆ, ಅಂದರೆ 1987 ರಲ್ಲಿ ನಾನು ಸಂಯುಕ್ತ ಸೋವಿಯತ್ ರಷ್ಯಾಗೆ ಹೋಗಿದ್ದಾಗ ರಷ್ಯಾದ ರಾಜಧಾನಿ ಮಾಸ್ಕೋದಿಂದ ಉಕ್ರೇನ್ ಗೂ ಹೋಗಿದ್ದೆ. ಉಕ್ರೇನ್ ಗಣರಾಜ್ಯದ ರಾಜಧಾನಿಯಾಗಿದ್ದ ಕಿಯೇವ್ ನಗರದಲ್ಲಿ ಎರಡು ದಿನ ಇದ್ದೆ. ಹಾಗೇ ಉಕ್ರೇನಿನ ಗ್ರಾಮಗಳಿಗೂ ಭೇಟಿ ಕೊಟ್ಟಿದ್ದೆ. ಆಗ ಉಕ್ರೇನ್ ರಷ್ಯಾದ ಭಾಗವೇ ಆಗಿತ್ತು.

ಉಕ್ರೇನ್ ಕೃಷಿ ಉತ್ಪನ್ನಗಳಿಂದ ಸಮೃದ್ಧವಾಗಿತ್ತು. ಹಾಗೆಯೇ ಶಸ್ತ್ರಾಸ್ತ್ರಗಳ ಉತ್ಪಾದನೆಯಲ್ಲೂ ರಷ್ಯಾದಲ್ಲಿ ಉಕ್ರೇನ್ ಮುಂಚೂಣಿಯಲ್ಲಿತ್ತು. ರಷ್ಯಾವು ತನ್ನ ಉಕ್ರೇನ್ ನನ್ನು ತುಂಬಾ ಹೆಮ್ಮೆಯಿಂದ ನಮಗೆ ತೋರಿಸಿತು. ಉಕ್ರೇನ್ ಕೃಷಿ ಉತ್ಪಾದನೆಯಲ್ಲಿ ಸಮೃದ್ಧವಾಗುವಲ್ಲಿ ಅಲ್ಲಿನ ಕೃಷಿಕರ ಸಂಘಟನಾತ್ಮಕ ಕಾಯಕವೂ ಕಾರಣವೆಂಬುದು ಉಕ್ರೇನ್ ಗ್ರಾಮವೊಂದರಲ್ಲಿ ನಾನು ಮತ್ತು ನಮ್ಮ ತಂಡ ಒಂದು ರಾತ್ರಿ ತಂಗಿದಾಗ ನಡೆದ ಘಟನೆಯಿಂದ ಮನದಟ್ಟಾಯಿತು. ಅಂದು ಸಂಜೆಯವರೆಗೂ ನಾವು ಅಲ್ಲಿನ ಕೃಷಿ ಪ್ರದೇಶಗಳ ವೀಕ್ಷಣೆ ಮಾಡಿ ಅಲ್ಲೇ ತಂಗಿದೆವು. ನಡುರಾತ್ರಿ ವೇಳೆಗೆ ಗ್ರಾಮದಲ್ಲಿ ಜನರ ಚಟುವಟಿಕೆಯ ಸದ್ದು ಕೇಳಿಸಿತು, ಏನೆಂದು ಅಲ್ಲಿನವರನ್ನು ಕೇಳಿದಾಗ “ಹೊಲಗಳಿಗೆ ಕೀಟಗಳ ದಾಳಿಯಾಗಿದೆ, ಅದನ್ನು ನಿಯಂತ್ರಿಸಲು ಜನರು ಕೀಟನಾಶಕಗಳ ಸಹಿತ ಹೋಗುತ್ತಿದ್ದಾರೆ” ಎಂದು ಹೇಳಿದರು. ನಾವು ಊಟ ಮಾಡಿ ಮಲಗುವವರೆಗೂ ಇಲ್ಲದ ಕೀಟಗಳ ದಾಳಿ ಇದ್ದಕ್ಕಿದ್ದಂತೆಯೇ ಹಳ್ಳಿಯಲ್ಲಿ ಬಂದಿದೆಯೇ? ಎಂದು ಕೇಳಿದೆವು, ಕೀಟಗಳ ದಾಳಿ ಯಾಗಿರುವುದು ನಮ್ಮ ಹಳ್ಳಿಯಲ್ಲಿ ಅಲ್ಲ, ಇಲ್ಲಿಂದ ಕೆಲವು ಕಿಲೋಮೀಟರುಗಳ ದೂರದಲ್ಲಿರುವ ಗ್ರಾಮವೊಂದರಲ್ಲಿ ಎಂದರು. ಹಾಗಾದರೆ ಈ ಗ್ರಾಮದವರು ಏಕೆ ಕೀಟ ನಿಯಂತ್ರಣಕ್ಕಾಗಿ ಸಜ್ಜಾಗುತ್ತಿದ್ದಾರೆ? ಎಂದು ಕೇಳಿದಾಗ ” ಆ ಗ್ರಾಮಕ್ಕೆ ಬಂದ ಕೀಟಗಳು ಮುಂದೆ ನಮ್ಮ ಗ್ರಾಮಕ್ಕೂ ಬರುತ್ತವೆ, ನಾವೇ ಮುಂದಾಗಿ ಹೋಗಿ ಅವನ್ನು ನಿಯಂತ್ರಿಸಿದಲ್ಲಿ ಆ ಗ್ರಾಮದ ಬೆಳೆಯೂ ಉಳಿಯುತ್ತದೆ, ಮುಂದೆ ನಮ್ಮ ಗ್ರಾಮಕ್ಕೆ ಕೀಟಗಳ ದಾಳಿಯೂ ತಪ್ಪುತ್ತದೆ, ಹಾಗಾಗಿ ಇಲ್ಲಿಂದ ನಾವು ನಾವು ಹೋಗಿ ಕೀಟ ನಿಯಂತ್ರಣದಲ್ಲಿ ಆ ಗ್ರಾಮದವರಿಗೆ ಸಹಕಾರ ಮಾಡುತ್ತೇವೆ, ಇದು ನಮ್ಮಲ್ಲಿನ ಪದ್ಧತಿಯೆಂದರು!. ಹೀಗಿರುವುದರಿಂದಲೇ ಅಲ್ಲಿ ಕೃಷಿ ಉತ್ಪನ್ನ ಸಮೃದ್ಧವಾಗಿ ಇರುವುದೆಂದು ನಮಗೆ ಮನದಟ್ಟಾಯಿತು.

ಉಕ್ರೇನ್ ನ ರಾಜಧಾನಿ ಕಿಯೇವ್ ನಗರದಲ್ಲಿ ನಾವು ಸರ್ಕಸ್ ಒಂದನ್ನು ನೋಡಿದೆವು. ಆಗ ರಶಿಯನ್ ಸರ್ಕಸ್ ಎಂದರೆ ವಿಶ್ವದಲ್ಲಿ ಖ್ಯಾತಿ, ಅಷ್ಟೇ ಅಲ್ಲ ಅಲ್ಲಿನ ಸರ್ಕಾರಿ ವ್ಯವಸ್ಥೆಯೇ ಪೋಷಿಸುತ್ತಿತ್ತು. ನಾನು ನೋಡಿದ ಆ ಸರ್ಕಸ್ ಥಿಯೇಟರ್ ಅತ್ಯಂತ ವ್ಯವಸ್ಥಿತವಾಗಿತ್ತು ಹಾಗೂ ಅದು ಶಾಶ್ವತ ಕಟ್ಟಡವೇ ಆಗಿತ್ತು. ಸರ್ಕಸ್ ಕಲಾವಿದರುಗಳನ್ನು ಮಾತನಾಡಿಸಿದೆ, ಸರ್ಕಾರ ಕೊಡುವ ಸಂಬಳ ತಮಗೆ ಅತ್ಯಂತ ತೃಪ್ತಿದಾಯಕವಾಗಿದೆ ಎಂದು ಹೇಳಿದರು.

ಅಷ್ಟೇ ಅಲ್ಲ ಸರ್ಕಸ್ಸಿನ ಪ್ರಾಣಿಗಳನ್ನು ನೋಡಿದಾಗ ನಮಗೆ ತುಂಬಾ ಸಂತೋಷವಾಯಿತು, ಏಕೆಂದರೆ ಅವು ನಮ್ಮ ದೇಶದ ಸರ್ಕಸ್ ಕಂಪನಿಯ ಪ್ರಾಣಿಗಳಂತೆ ಬಡವಾಗಿರದೇ ದಷ್ಟಪುಷ್ಟವೂ, ಆರೋಗ್ಯಕರವೂ ಆಗಿದ್ದವು.

ಸರ್ಕಸ್ ಪ್ರದರ್ಶನದ ಮಧ್ಯದಲ್ಲಿ ನಮ್ಮನ್ನು ರಿಂಗ್ ನ ಮಧ್ಯಕ್ಕೆ ಆಹ್ವಾನಿಸಿ “ಇಂಡಿಯಾ ದೇಶದಿಂದ ಬಂದ ವಿಶೇಷ ಅತಿಥಿಗಳು” ಎಂದು ಪರಿಚಯಿಸಿದರು, ವೀಕ್ಷಕರು ಚಪ್ಪಾಳೆ ತಟ್ಟಿ ಸ್ವಾಗತಿಸಿದರು. ಈಗ ಅದೇ ಉಕ್ರೇನ್ ಹೊತ್ತಿ ಉರಿಯುತ್ತಿರುವುದು ನೋಡಿದರೆ, ಕೇಳಿದರೆ ಮನಸ್ಸಿಗೆ ತುಂಬಾ ನೋವಾಗುತ್ತಿದೆ.

-ಎಚ್.ಬಿ.ಮಂಜುನಾಥ, ಹಿರಿಯ ಪತ್ರಕರ್ತ

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Start‘ to this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ನನ್ನ ಪಾಲಿಸಿ ನನ್ನ ಕೈಯಲ್ಲಿ ಬೆಳೆ ವಿಮೆ ಯೋಜನೆ

0

ಪ್ರಧಾನ ಮಂತ್ರಿ ಫಸಲ್ ಬೀಮಾ ಯೋಜನೆಯ ವ್ಯಾಪ್ತಿಯನ್ನು ಹೆಚ್ಚಿಸುವ ಜೊತೆಗೆ ಯೋಜನೆಯನ್ನು ರೈತರ ಮನೆ ಬಾಗಿಲಿಗೆ ತಲುಪಿಸಲು ” ನನ್ನ ಪಾಲಿಸಿ ನನ್ನ ಕೈಯಲ್ಲಿ ” ಎಂಬ ಬೆಳೆ ವಿಮೆ ಪಾಲಿಸಿ ವಿತರಣಾ ಅಭಿಯಾನವನ್ನು ನಾವು ಪ್ರಾರಂಭಿಸಿದ್ದೆವೆ
ಎಂದು ಕೃಷಿ ಸಚಿವ ಬಿ‌.ಸಿ.ಪಾಟೀಲ್ ಅವರು ತಿಳಿಸಿದರು.

ಬೆಂಗಳೂರಿನ ಜಿಕೆವಿಕೆಯ ಬಿ.ಹೆಚ್.ಎಸ್ ಕಾಲೇಜಿನ ಆಡಿಟೋರಿಯಂ‌ನಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮವನ್ನುದ್ದೇಶಿಸಿ ಸಚಿವರು ಮಾತನಾಡಿದರು.

ಪ್ರಾಕೃತಿಕ ವಿಕೋಪಗಳಿಂದ ಬೆಳೆಗಳಿಗೆ ವಿಮಾ ಭದ್ರತಾ ಕವಚ ಒದಗಿಸುವುದು ನಮ್ಮ ಸಂಕಲ್ಪವಾಗಿದೆ. ಪ್ರಕೃತಿ ವಿಕೋಪಗಳಿಂದ ಬೆಳೆ ನಷ್ಟ ಉಂಟಾದಾಗ ರೈತರ ನೆರವಿಗೆ ಬರುವ ಯೋಜನೆ ಇದಾಗಿದೆ . ಹಿಂಗಾರು 2021-22ರ ಹಂಗಾಮಿನಲಿ , ನೋಂದಣಿ ಮಾಡಿದಂತಹ ರೈತರಿಗೆ ತಮ್ಮ ಪಾಲಿಸಿ ವಿವರವನ್ನು Inland Letter ನಮೂನೆಯಲ್ಲಿ ವಿತರಿಸುವ ಕಾರ್ಯಕ್ರಮ ಇದಾಗಿದೆ.

ಈಗ ರಾಜ್ಯದ ಲಕ್ಷಾಂತರ ರೈತರು “ ನನ್ನ ಪಾಲಿಸಿ ನನ್ನ ಕೈಯಲಿ … ” ಎಂದು ಹೇಳಿಕೊಳ್ಳಬಹುದು. 2021 ರ ಮುಂಗಾರು ಹಂಗಾಮಿನಲ್ಲಿ 113.49 ಕೋಟಿ ರೂ.ಬೆಳೆ ವಿಮಾ ಪರಿಹಾರ ಮೊತ್ತವು ಸ್ಥಳೀಯ ಪ್ರಕೃತಿ ವಿಕೋಪಗಳಡಿ ಇತ್ಯರ್ಥವಾಗಿದೆ.

2016-17 ಹಾಗೂ 2017-18ರ ಮುಂಗಾರು , ಹಿಂಗಾರು ಮತ್ತು ಬೇಸಿಗೆ ಹಂಗಾಮಿನ ವಿಮಾ ಪರಿಹಾರ ಮೊತ್ತವು ರೈತರ ಬ್ಯಾಂಕ್ ಖಾತೆ ಹಾಗೂ ಆಧಾರ್ ಸಂಖ್ಯೆ ಲಭ್ಯವಿಲ್ಲದ ಕಾರಣ ತಿರಸ್ಕೃತಗೊಂಡ ಹಣವನ್ನು 1.27 ಲಕ್ಷ ರೂ. ಅರ್ಹ ರೈತ ಫಲಾನುಭವಿಗಳಿಗೆ ಇತ್ಯರ್ಥಪಡಿಸಲಾಗಿದೆ ಎಂದರು.

ಕಳೆದ ಬಾರಿ ನಡೆದ ಸಭೆಯಲ್ಲಿ ವಿಮಾ ಸಂಸ್ಥೆಯವರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದರ ಫಲವಾಗಿ ಒಂದೇ ತಿಂಗಳಿನಲ್ಲಿ 43.89 ಕೋಟಿ ರೂ. ಪರಿಹಾರ ಮೊತ್ತವನ್ನು 33.160 ರೈತರಿಗೆ ಇತ್ಯರ್ಥಪಡಿಸಿ ಮಂಜೂರು ಮಾಡಲಾಗಿದೆ ಎಂದರು.

ಭಾರತೀಯ ರಾಷ್ಟ್ರೀಯ ಪಾವತಿ ನಿಗಮ (NPCI) ವೈಫಲ್ಯದಿಂದಾಗಿ ಹಲವಾರು ರೈತರಿಗೆ ಬೆಳೆವಿಮಾ ಪರಿಹಾರ ಮೊತ್ತ ಇತ್ಯರ್ಥವಾಗದ ಕಾರಣ ಎಲ್ಲಾ ರೈತರು ಕಡ್ಡಾಯವಾಗಿ ಆಧಾರ್ ಸಂಖ್ಯೆಯನ್ನು ಬ್ಯಾಂಕ್ ಖಾತೆಗೆ ಜೋಡಣೆ ಮಾಡಿಕೊಳ್ಳಲೇಬೇಕೆಂದು ಮತ್ತೊಮ್ಮೆ ಸಚಿವರು ಪುನರುಚ್ಚರಿಸಿದರು.

ಕಾರ್ಯಕ್ರಮದಲ್ಲಿ ಜಿಕೆವಿಕೆ ಕುಲಪತಿ ರಾಜೇಂದ್ರ ಪ್ರಸಾದ್, ಕೃಷಿ ಇಲಾಖಾ ನಿರ್ದೇಶಕಿ ನಂದಿನಿಕುಮಾರಿ,ಕೃಷಿ ಆಯುಕ್ತ ಬ್ರಿಜೇಶ್ ಕುಮಾರ್ ದೀಕ್ಷಿತ್, ಅಧಿಕಾರಿಗಳಾದ ಶಿವರಾಜ್,ವೆಂಕಟರಮಣ ರೆಡ್ಡಿ ಉಪಸ್ಥಿತರಿದ್ದರು.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Start‘ to this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಆಹಾರ ಪದಾರ್ಥ ಸ್ವಚ್ಛಗೊಳಿಸಿ ಅಡುಗೆ ತಯಾರಿಸಿ

0

ಇಂದು ಸಾಗರ ವಿಧಾನಸಭಾ ಕ್ಷೇತ್ರದ ಶಾಸಕರಾದ ಹೆಚ್.ಹಾಲಪ್ಪನವರು, ಸಾಗರದ ಜಂಬಗಾರು ಹಾಸ್ಟೆಲ್ ಗೆ ಭೇಟಿ ನೀಡಿದರು.
ವಸತಿ ಶಾಲೆಗಳ ಹಾಗೂ ಹಾಸ್ಟೆಲ್ ಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ವಾರ್ಡನ್ ಮತ್ತು ಸಿಬ್ಬಂದಿಗಳ ಜೊತೆ ಸಭೆ ನೆಡೆಸಿದರು.

ವಿದ್ಯಾರ್ಥಿಗಳಿಗೆ ಗುಣಮಟ್ಟದ ಆಹಾರ ನೀಡುವಂತೆ ಸೂಚಿಸಿದರು. ಹಾಸ್ಟೆಲ್ ಗಳಲ್ಲಿ ಸ್ವಚ್ಛತೆ ಕಾಪಾಡಿಕೊಂಡು, ಮಕ್ಕಳಿಗೆ ಅವಶ್ಯವಾದ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸುವಂತೆ ಎಚ್ಚರಿಕೆ ನೀಡಿದರು.

ಸಿಬ್ಬಂದಿಗಳಿಂದ ಅಕ್ಕಿಯನ್ನು ತರಿಸಿ ಪರಿಶೀಲನೆ ನಡೆಸಿದರು. ಅಕ್ಕಿಯನ್ನು ಮೊರದಲ್ಲಿ ಹಾಕಿ ಕೇರುತ್ತಾ ಅಕ್ಕಿಯನ್ನು ಸ್ವಚ್ಛಗೊಳಿಸುವ ಪ್ರಾತ್ಯಕ್ಷಿಕೆ ನೀಡಿದರು.

ಮಕ್ಕಳಿಗೆ ನೀಡಬೇಕಾದ ಆಹಾರ ಕಳಪೆಯಾಗಿದೆ. ಅಕ್ಕಿಯನ್ನು ಸರಿಯಾಗಿ ಸ್ವಚ್ಛಗೊಳಿಸದೆ ಅಡುಗೆ ಮಾಡಿ ಬಡಿಸುತ್ತಿರುವುದು ಗಮನಕ್ಕೆ ಬಂದಿದೆ. ಈ ರೀತಿ ಘಟನೆ ಮತ್ತೆ ಮರು ಕಳಿಸಿದರೆ ಸಂಬಂಧ ಪಟ್ಟವರ ಮೇಲೆ ಕಠಿಣ ಕಾನೂನು ಕ್ರಮ ಜರುಗಿಸುವ ಬಗ್ಗೆ ಎಚ್ಚರಿಸಿದರು.

ಈ ಸಂದರ್ಭದಲ್ಲಿ ಚುನಾಯಿತ ಪ್ರತಿನಿಧಿಗಳು, ಅಧಿಕಾರಿಗಳು ಮತ್ತು ಇನ್ನಿತರರು ಉಪಸ್ಥಿತರಿದ್ದರು.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Start‘ to this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಫೆ.27 ಕೆಳದಿ ಉತ್ಸವ- ಹರತಾಳು ಹಾಲಪ್ಪ

0

ಸಾಗರ ವಿಧಾನಸಭಾ ಕ್ಷೇತ್ರದ ಶಾಸಕರಾದ ಹೆಚ್.ಹಾಲಪ್ಪ ನವರು ಸಾಗರ ಸಹಾಯಕ ಆಯುಕ್ತರ ಕಛೇರಿಯಲ್ಲಿ ಅಧಿಕಾರಿಗಳ ಜೊತೆ ಸಭೆ ನೆಡೆಸಿದರು.

ಕೆಳದಿ ರಾಣಿ ಚೆನ್ನಮ್ಮ ಉತ್ಸವ ವನ್ನು ಪ್ರತಿ ವರ್ಷ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಸರ್ಕಾರಿ ಕಾರ್ಯಕ್ರಮವನ್ನಾಗಿ ಆಚರಿಸಲು 25 ಲಕ್ಷ ರೂ. ಅನುದಾನ ಮಂಜೂರಾತಿಯಾಗಿರುವ ಬಗ್ಗೆ ಮಾಹಿತಿ ನೀಡಿದರು.

ನವೆಂಬರ್ ವೇಳೆಗೆ ಕೆಳದಿ ರಾಣಿ ಚೆನ್ನಮ್ಮ ಉತ್ಸವ ನಡೆಸುವುದರ ಬಗ್ಗೆ ಸರಕಾರದ ಗಮನಕ್ಕೆ ತರಲಾಗಿತ್ತು. ಕೊರೊನಾ ಕಾರಣದಿಂದ ರಾಣಿ ಚೆನ್ನಮ್ಮ ಉತ್ಸವವನ್ನು ಮುಂದೂಡಲಾಗಿತ್ತು. ಈಗ ಕೊರೊನಾ ನಿಯಂತ್ರಣಕ್ಕೆ ಬಂದಿರುವ ಕಾರಣ ಮತ್ತೊಮ್ಮೆ ಸಿಎಂ ಅವರನ್ನು ಭೇಟಿಯಾಗಿ ಉತ್ಸವದ ಬಗ್ಗೆ ಪ್ರಸ್ತಾವನೆ ಸಲ್ಲಿಸಿದ್ದೆ. ಈ ವರ್ಷ ಆಚರಣೆಗೆ ಅವಕಾಶ ನೀಡಲಾಗಿದೆ.
ಉತ್ಸವದ ಆಚರಣೆಗೆ ಸರ್ಕಾರದಿಂದ 25 ಲಕ್ಷ ರೂ. ಮಂಜೂರಾಗಿದೆ. ಈ ವರ್ಷ ಸರಳವಾಗಿ ಉತ್ಸವವನ್ನು ಆಚರಿಸಲು ಸಿಎಂ ಅವರು ಒಪ್ಪಿಗೆ ನೀಡಿದ್ದಾರೆ. ಸಣ್ಣಪುಟ್ಟ ಕಾರ್ಯಕ್ರಮಗಳನ್ನು ನಡೆಸಬಹುದು ಎಂದು ಸಲಹೆ ನೀಡಿದ್ದಾರೆ.

ಫೆಬ್ರವರಿ 27 ರಂದು (ಕೆಳದಿ ರಾಣಿ ಚೆನ್ನಮ್ಮ ಪಟ್ಟಾಭಿಷೇಕವಾದ ದಿನ) ಸದರಿ ಕಾರ್ಯಕ್ರಮ ನೆಡೆಸಲು ಕೈಗೊಳ್ಳಬೇಕಾದ ರೂಪುರೇಷಗಳ ಬಗ್ಗೆ ಚರ್ಚಿಸಿದರು.

ಈ ಸಂದರ್ಭದಲ್ಲಿ ಎಸಿ, ತಹಶೀಲ್ದಾರರು, ಬಿ.ಟಿ ರವೀಂದ್ರ, ಪತ್ರಕರ್ತರಾದ ಜಿ.ನಾಗೇಶ್ ಮತ್ತಿತರರು ಉಪಸ್ಥಿತರಿದ್ದರು.