Friday, July 24, 2026
Friday, July 24, 2026

District Consumer Disputes Redressal Commission ಕರ್ನಾಟಕ ಬ್ಯಾಂಕ್ ಸೇವಾ ನ್ಯೂನತೆ ದೂರು: ಪರಿಹಾರ ನೀಡಲು ಆದೇಶ

Date:

ಶಿವಮೊಗ್ಗ ಜಿಲ್ಲೆಯ ಕಾಚಿನಕಟ್ಟೆ ನಾಗರಾಜ್ ಬಿ.ಎಂ. ಎಂಬುವವರು ಸಂತೇ ಕಡೂರು ಕೆನರಾ ಬ್ಯಾಂಕ್ ಶಾಖೆ, ಮಲ್ಲಿಗೆನಹಳ್ಳಿ ಲೀಡ್ ಬ್ಯಾಂಕ್ ಚೇರ್‌ಮನ್ ಮತ್ತು ಶಿವಮೊಗ್ಗ ಗೋಪಿಸರ್ಕಲ್ ಕರ್ನಾಟಕ ಬ್ಯಾಂಕ್ ಮೇನ್ ಬ್ರಾಂಚ್ ವ್ಯವಸ್ಥಾಪಕರು ಇವರುಗಳ ವಿರುದ್ಧ ಕರ್ನಾಟಕ ಬ್ಯಾಂಕ್‌ನ ರೂ. 5.50 ಲಕ್ಷ ಚೆಕ್‌ನ್ನು ಕೆನರಾ ಬ್ಯಾಂಕ್‌ಗೆ ಸಲ್ಲಿಸಿದ್ದು, ಖಾತೆಯಲ್ಲಿ ರೂ. 55,000 ಗಳನ್ನು ಮಾತ್ರ ಜಮಾ ಮಾಡಿ ಸೇವಾನ್ಯೂನ್ಯತೆ ಎಸಗಿರುತ್ತಾರೆ ಎಂದು ವಕೀಲರ ಮೂಲಕ ನೀಡಿದ್ದ ದೂರನ್ನು ಆಲಿಸಿದ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು ಎದುರುದಾರರಿಂದ ದೂರುದಾರರಿಗೆ ಸೂಕ್ತ ಪರಿಹಾರ ನೀಡುವಂತೆ ತೀರ್ಪು ನೀಡಿದೆ.
ದೂರುದಾರರು 2024ರ ಜುಲೈನಲ್ಲಿ ಕೆನರಾ ಬ್ಯಾಂಕ್‌ನ ತಮ್ಮ ಖಾತೆಗೆ ರೂ. 5.50 ಲಕ್ಷ ಮೊತ್ತ ಕರ್ನಾಟಕ ಬ್ಯಾಂಕ್ ಚೆಕ್‌ನ್ನು ವರ್ಗಾವಣೆಗಾಗಿ ಸಲ್ಲಿಸಿದ್ದು, ಖಾತೆಯಲ್ಲಿ ರೂ. 55,000/- ಗಳನ್ನು ಮಾತ್ರ ಜಮಾ ಮಾಡಿರುತ್ತಾರೆ. ಈ ಕುರಿತು ಅನೇಕ ಸಲ ಪತ್ರ ವ್ಯವಹಾರ ಮಾಡಿ ಉಳಿದ ಮೊತ್ತ 4,95,000/-ಗಳನ್ನು ಜಮಾ ಮಾಡುವಂತೆ ಕೇಳಿಕೊಂಡರೂ ಎದುರುದಾರರು ಯಾವುದೇ ಪ್ರತ್ಯುತ್ತರ ನೀಡದೆ ಸೇವಾನ್ಯೂನತೆ ಎಸಗಿರುತ್ತಾರೆ ಎಂದು ಆಯೋಗಕ್ಕೆ ದೂರನ್ನು ಸಲ್ಲಿಸಿರುತ್ತಾರೆ.
District Consumer Disputes Redressal Commission ಆಯೋಗವು ದೂರನ್ನು ದಾಖಲಿಸಿಕೊಂಡು ಮೂರು ಎದುರುದಾರರಿಗೆ ನೋಟೀಸ್ ನೀಡಿದ್ದು, ಎದುರುದಾರರು ತಮ್ಮ ವಕೀಲರ ಮೂಲಕ ಹಾಜರಾಗಿ ಕೆನರಾ ಬ್ಯಾಂಕ್ ತಮ್ಮ ತಕರಾರಿನಲ್ಲಿ ದೂರುದಾರರ ಚೆಕ್‌ನ್ನು ಕರ್ನಾಟಕ ಬ್ಯಾಂಕ್ ಶಾಖೆಗೆ ಚೆಕ್ ಮೊತ್ತವನ್ನು ಕಳುಹಿಸಲು ಸಲ್ಲಿಸಿದ್ದು, ಅಲ್ಲಿಂದ ರೂ. 55,000/- ಗಳನ್ನು ಮಾತ್ರ ಕಳುಹಿಸಿರುತ್ತಾರೆ. ಉಳಿಕೆ ವ್ಯತ್ಯಾಸದ ಮೊತ್ತವನ್ನು ಕಳುಹಿಸಲು ಪತ್ರ ಸಲ್ಲಿಸಿರುತ್ತೇವೆ. ಆದ್ದರಿಂದ ಕೆನರಾ ಬ್ಯಾಂಕ್‌ನಿಂದ ಯಾವುದೇ ಸೇವಾ ನ್ಯೂನ್ಯತೆಯಾಗಿರುವುದಿಲ್ಲ ಎಂದು ಹೇಳಿರುತ್ತಾರೆ.
ಆಯೋಗವು ದೂರುದಾರರು ಸಲ್ಲಿಸಿರುವ ಪ್ರಮಾಣ ಪತ್ರ ಮತ್ತು ದಾಖಲಾತಿಗಳನ್ನು ಪರಿಶೀಲಿಸಿ, ದೂರುದಾರರ ವಾದವನ್ನು ಆಲಿಸಿ, ಎದುರುದಾರರು ಚೆಕ್‌ನ ಪೂರ್ಣ ಮೊತ್ತವನ್ನು ಖಾತೆಗೆ ಜಮಾ ಮಾಡದೆ ಸೇವಾ ನ್ಯೂನ್ಯತೆ ಎಸಗಿರುತ್ತಾರೆ ಎಂದು ತೀರ್ಮಾನಿಸಿ, ದೂರನ್ನು ಭಾಗಶಃ ಪುರಸ್ಕರಿಸಿ, ಎದುರುದಾರರು ಕರ್ನಾಟಕ ಬ್ಯಾಂಕ್ ದೂರುದಾರರಿಗೆ ಚೆಕ್ ಅನ್ವಯದ ವ್ಯತ್ಯಾಸದ ಮೊತ್ತ ರೂ. 4,95,000/- ದಿ:21/02/2025ರಿಂದ ವಾರ್ಷಿಕ ಶೇ. 6ರ ಬಡ್ಡಿಯನ್ನು ಸೇರಿಸಿ ಪೂರ್ತಿ ಹಣವನ್ನು ಈ ಆದೇಶವಾದ 45 ದಿನಗಳೊಳಗಾಗಿ ಪಾವತಿಸುವಂತೆ, ತಪ್ಪಿದ್ದಲ್ಲಿ ವಾರ್ಷಿಕ ಶೇ. 9ರ ಬಡ್ಡಿಯನ್ನು ಸೇರಿಸಿ ಪೂರ್ತಿ ಹಣ ಪಾವತಿಸುವವರೆಗೆ ನೀಡುವಂತೆ ಹಾಗೂ ರೂ. 25,000/- ಗಳನ್ನು ಮಾನಸಿಕ ಹಿಂಸೆ ಮತ್ತು ದೂರಿನ ಖರ್ಚು ವೆಚ್ಚಕ್ಕಾಗಿ ಈ ಆದೇಶವಾದ 45 ದಿನಗಳೊಳಗಾಗಿ ದೂರುದಾರರಿಗೆ ಪಾವತಿಸುವಂತೆ ತಪ್ಪಿದ್ದಲ್ಲಿ ವಾರ್ಷಿಕ ಶೇ. 9ರ ಬಡ್ಡಿಯನ್ನು ಸೇರಿಸಿ ಪೂರ್ತಿ ಹಣ ಪಾವತಿಸುವವರೆಗೆ ನೀಡುವಂತೆ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷರಾದ ಟಿ.ಶಿವಣ್ಣ ಮತ್ತು ಸದಸ್ಯರಾದ ಬಿ.ಡಿ.ಯೋಗಾನಂದ ಭಾಂಡ್ಯ ಇವರನ್ನೊಳಗೊಂಡ ಪೀಠವು ಫೆ.12 ರಂದು ಆದೇಶಿಸಿದೆ ಎಂದು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಸಹಾಯಕ ರಿಜಿಸ್ಟಾçರ್ ಗಂಗಾಧರ ನಾಯ್ಕ್ ಎಂ.ಟಿ. ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

S.N. Channabasappa ನೀಟ್ ಗೊಂದಲ, ಪ್ರತಿಭಟನೆ : ರಾಷ್ಟ್ರವಿರೋಧಿ ಶಕ್ತಿಗಳ ಕರಾಳ ತಂತ್ರ- ಎಸ್.ಎನ್.ಚನ್ನಬಸಪ್ಪ

S.N. Channabasappa ದೆಹಲಿಯಲ್ಲಿ ಜಿರಳೆ ಪಕ್ಷದ ಹೆಸರಿನಲ್ಲಿ ನಡೆದದ್ದು ವಿದ್ಯಾರ್ಥಿಗಳ ಹೋರಾಟ...

K. J.George ಪ್ರವಾಸೋದ್ಯಮ ಇಲಾಖೆ ವ್ಯಾಪ್ತಿಯ ಹೋಟೆಲ್ ಗಳು, ಆತಿಥ್ಯ ಕೇಂದ್ರಗಳು ಹಂತಹಂತವಾಗಿ ಉನ್ನತೀಕರಣ : ಸಚಿವ ಕೆ.ಜೆ.ಜಾರ್ಜ್

K.J. George ರಾಜ್ಯದ ಪ್ರವಾಸೋದ್ಯಮ ಮೂಲಸೌಕರ್ಯವನ್ನು ಜಾಗತಿಕ ಗುಣಮಟ್ಟಕ್ಕೆ ಏರಿಸುವ ಉದ್ದೇಶದಿಂದ,...

Kuvempu University ಕುವೆಂಪು ವಿವಿಯ ಸ್ನಾತಕೋತ್ತರ ಡಿಪ್ಲೊಮಾ ಪ್ರವೇಶಾತಿಗೆ ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆ

Kuvempu University ಕುವೆಂಪು ವಿಶ್ವವಿದ್ಯಾಲಯವು 2026-27ನೇ ಸಾಲಿನ ವಿವಿಧ ಸ್ನಾತಕೋತ್ತರ ಪದವಿ,...