Sunday, February 22, 2026
Sunday, February 22, 2026
Home Blog Page 1659

ಸಂಧಾನ ಚರ್ಚೆಗಳ ಬಗ್ಗೆ ಉಕ್ರೇನ್ ಜನತೆಯ ಒಪ್ಪಿಗೆ ಪಡೆದು ನಂತರ ಸಮ್ಮತಿ-ಝೆಲೆನ್ಸ್ಕಿ

0

ರಷ್ಯಾದೊಂದಿಗೆ ಶಾಂತಿ ಮಾತುಕತೆಯಲ್ಲಿ ಒಪ್ಪಿಗೆಯಾಗುವ ಯಾವುದೇ ಒಪ್ಪಂದವನ್ನು ನಾನು ಒಪ್ಪುವ ಮುನ್ನ ಉಕ್ರೇನ್‌ ಜನರ ಜನಾಭಿಪ್ರಾಯ ಸಂಗ್ರಹಿಸಲಾಗುವುದು ಎಂದು ಅಧ್ಯಕ್ಷ ವೊಲೊಡಿಮಿರ್‌ ಝೆಲೆನ್‌ಸ್ಕಿ ತಿಳಿಸಿದ್ದಾರೆ.

ಉಕ್ರೇನ್‌ ಮೇಲೆ ರಷ್ಯಾ ಯುದ್ಧ ಆರಂಭಿಸಿ ಇಂದಿಗೆ 27 ದಿನಗಳು ಕಳೆದಿವೆ.
ಆದರೂ ಪುಟ್ಟ ರಾಷ್ಟ್ರ ಕೀವ್ ಪುಟಿನ್‌ ಸೇನೆಯನ್ನು ದಿಟ್ಟವಾಗಿಯೇ ಎದುರಿಸುತ್ತಿದೆ. ದಾಳಿಯ ನಡುವೆಯೂ ನಡೆದ ಮಾತುಕತೆಗಳು ವಿಫಲವಾಗುತ್ತಿದ್ದಂತೆ ರಷ್ಯಾ ಪಡೆಗಳ ಆಕ್ರಮಣಕಾರಿ ಕಾರ್ಯಾಚರಣೆಗಳು ಮತ್ತಷ್ಟು ಹೆಚ್ಚಿವೆ.

ಅಮೆರಿಕ, ಫ್ರಾನ್ಸ್‌, ಬ್ರಿಟನ್‌ ಸೇರಿದಂತೆ ಹಲವು ದೇಶಗಳು ಉಕ್ರೇನ್‌ಗೆ ಬೆಂಬಲ ನೀಡತ್ತಲೇ ಬಂದಿದೆ.
ಆಗಾಗ ಸಾಮಾಜಿಕ ಜಾಲತಾಣಗಳಲ್ಲಿ ಮಾಹಿತಿ ಹಂಚಿಕೊಳ್ಳುತ್ತಿರುವ ಉಕ್ರೇನ್‌ ಅಧ್ಯಕ್ಷ ವೊಲೊಡಿಮಿರ್‌ ಝೆಲೆನ್‌ಸ್ಕಿ, ರಷ್ಯಾದೊಂದಿಗೆ ಶಾಂತಿ ಮಾತುಕತೆಯಲ್ಲಿ ಒಪ್ಪಿಗೆಯಾಗುವ ಯಾವುದೇ ಒಪ್ಪಂದವನ್ನು ಉಕ್ರೇನ್‌ನಲ್ಲಿ ಜನಾಭಿಪ್ರಾಯ ಸಂಗ್ರಹಣೆಗೆ ಸಲ್ಲಿಸಲಾಗುವುದು ಎಂದು ಹೇಳಿದ್ದಾರೆ.

ಪ್ರಾದೇಶಿಕ ಉಕ್ರೇನಿಯನ್ ಸಾರ್ವಜನಿಕ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ಝೆಲೆನ್‌ಸ್ಕಿ, ನಾನು ಎಲ್ಲ ಸಮಾಲೋಚನಾ ಗುಂಪುಗಳಿಗೆ ವಿವರಿಸಿದ್ದೇನೆ. ನೀವು ಈ ಎಲ್ಲ ಬದಲಾವಣೆಗಳ ಬಗ್ಗೆ (ಭವಿಷ್ಯದ ಒಪ್ಪಂದಗಳು) ಮಾತನಾಡುವಾಗ ಅವು ಐತಿಹಾಸಿಕವಾಗಬಹುದು.
ಹೀಗಾಗಿ ಅಂತಿಮವಾಗಿ ನಾವು ಜನಾಭಿಪ್ರಾಯ ಸಂಗ್ರಹಕ್ಕೆ ಮುಂದಾಗುತ್ತೇವೆ ಎಂದಿದ್ದಾರೆ.

ಜನರು ಕೆಲವು ವಿಧದ ರಾಜಿಗಳು, ಹೊಂದಾಣಿಕೆಗಳು ಹಾಗೂ ರಷ್ಯಾ ಜೊತೆಗಿನ ಮಾತುಕತೆಗಳ ಭಾಗವಾಗಿದ್ದಾರೆ ಎಂದು ಉಕ್ರೇನ್​ ಅಧ್ಯಕ್ಷ ಝೆಲೆನ್ಸ್ಕಿ ತಿಳಿಸಿದ್ದಾರೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Start‘ to this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಕಾಶ್ಮೀರ ಜನಗಳ ಬಗ್ಗೆ ಮುಸ್ಲೀಂ ದೇಶಗಳು ಏನೂ ಮಾಡಲಾಗಿಲ್ಲ- ಇಮ್ರಾನ್

0

ಕಾಶ್ಮೀರವೀಗ ಭಾರತದ ಅವಿನಾ ಸಂಬಂಧ ಬೆಸೆದುಕೊಂಡಿದ್ದರೂ
ಪಕ್ಕದ ಪಾಕಿಸ್ತಾನ ಕ್ಯಾತೆ ತೆಗೆಯುವುದನ್ನ
ಬಿಟ್ಟಿಲ್ಲ. ಈಗ ಅದರ ಬಗ್ಗೆ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಈಗ ಇನ್ನೊಂದು ಟ್ವಿಸ್ಟ್ ನೀಡಿ ಮಾತನಾಡಿದ್ದಾರೆ.
“ಜಗತ್ತಿನಲ್ಲಿ 1.5 ಶತಕೋಟಿ ಮುಸ್ಲೀಂ
ಜನಾಂಗವಿದೆ.ಆದರೆ ಕಾಶ್ಮೀರಿಗಳ ಬಗ್ಗೆ ಏನನ್ನೂ ಮಾಡಲಾಗಿಲ್ಲ. ಯಾವುದೇ ದೇಶವನ್ನು ಸ್ವಾಧೀನಪಡೆಯುವ ಬಗ್ಗೆ ಪ್ರಸ್ತುತ ಮಾತನಾಡುತ್ತಿಲ್ಲ.
ಕಾಶ್ಮೀರ ಜನರು ಮತ್ತು ಹಕ್ಕುಗಳ ಬಗ್ಗೆ ಮಾತ್ರ ಮಾತನಾಡುತ್ತಿದ್ದೇವೆ.
ಮುಸ್ಲಿಂ ದೇಶಗಳು ಒಳಗೊಳಗೇ ಹಂಚಿಹೋಗಿರುವ
ಕಾರಣ ಒಐಸಿ ( OIC)
ಯನ್ನು ಗಂಭೀರ ಪರಿಗಣಿಸಿಲ್ಲ.ಹೀಗಾಗಿ ನಮ್ಮ ಧ್ವನಿ ಸಾಕಾಗುವುದಿಲ್ಲ.
ಅಂತಾರಾಷ್ಟ್ರೀಯ ಕಾನೂನು ಕಾಶ್ಮೀರ ಜನರ ಹಕ್ಕುಗಳ ಪರವಾಗಿದೆ.
ಈಗ ನಾವೆಲ್ಲ ಒಂದಾಗಬೇಕು” ಎಂದು ಇಮ್ರಾನ್ ಕಳಕಳಿಯ ಭಾಷಣ ಮಾಡಿದ್ದಾರೆ.
ಅವರು ಆರ್ಗನೈಸೇಷನ್ ಆಫ್ ಇಸ್ಲಾಮಿಕ್ ಕೋ ಆಪರೇಷನ್ ನ
ಉದ್ಘಾಟನಾ ಭಾಷಣ ಮಾಡಿದಾಗ ಹೇಳಿದ ಅಭಿಪ್ರಾಯಗಳಿವು.

ದಿನೇದಿನೇ ಜಾಗತಿಕ ಹಿಂಸಾಚಾರಗಳಲ್ಲಿ
ತಮ್ಮ ಜನಾಂಗದ ಮೇಲೆ ಬರುತ್ತಿರುವ ಆರೋಪಗಳ ಬಗ್ಗೆ ಒಳನಡುಕದಿಂದಲೇ ಈ ನುಡಿಗಳಾಡಿರುವ ಸಾಧ್ಯತೆ ಇರಬಹುದು.
ಅಲ್ಲದೇ ಆಂತರಿಕವಾಗಿ ಭುಗಿಲೆದ್ದಿರುವ ಅವಿಶ್ವಾಸ ಗೊತ್ತುವಳಿಯ
ಭಯವೂ ಅವರನ್ನ ಈ ರೀತಿ ಮಾತಾಡಲು
ಪ್ರೇರಣೆ ನೀಡಿರಬಹುದು ಎಂದು ರಾಜಕೀಯ ಪರಿಣತರ ಲೆಕ್ಕಾಚಾರವಾಗಿದೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Start‘ to this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ವೀರ ಕನ್ನಡಿಗ ಪುನೀತ್ ಈಗ ಡಾ. ಪುನೀತ್

0

ಚಿತ್ರ ನಟ ಪವರ್ ಸ್ಟಾರ್ ದಿ. ಪುನೀತ್ ರಾಜ್‌ಕುಮಾರ್, ಹಿರಿಯ ವಿಜ್ಞಾನಿ ಡಾ.ವಾಸುದೇವ್ ಕಲ್ಕುಂಟೆ ಹಾಗೂ ಜಾನಪದ ಗಾಯಕ ಮಳವಳ್ಳಿ ಮಹಾದೇವಸ್ವಾಮಿ ಅತ್ರೆ ಅವರಿಗೆ ಮೈಸೂರು ವಿಶ್ವವಿದ್ಯಾಲಯದಿಂದ ಮಂಗಳವಾರ ಗೌರವ ಡಾಕ್ಟರೇಟ್ ಪದವಿಯನ್ನು ಪ್ರದಾನ ಮಾಡಲಾಯಿತು.
ನಗರದಲ್ಲಿರುವ ಮೈಸೂರು ವಿಶ್ವವಿದ್ಯಾಲಯದ ಕ್ರಾಫರ್ಡ್ ಹಾಲ್‌ನಲ್ಲಿ ನಡೆದ ವಿವಿಯ 102ನೇ ಪದವಿ ಪ್ರದಾನ ಮಾಡಲಾಯಿತು.

ಘಟಿಕೋತ್ಸವ ಸಮಾರಂಭದಲ್ಲಿ ರಾಜ್ಯ ಪಾಲ ಥಾವರ ಚಂದ್ ಗೆಹ್ಲೋಟ್ ಅವರು ಈ ಮೂವರು ಗಣ್ಯರಿಗೆ ಗೌರವ ಡಾಕ್ಟರೇಟ್ ಪದವಿ ನೀಡಿ, ಗೌರವಿಸಿದರು.

ಚಿತ್ರ ನಟ ಪುನೀತ್ ರಾಜ್ ಕುಮಾರ್ ಪತ್ನಿ ಅಶ್ವಿನಿ ಅವರು ಪುನೀತ್ ಅವರಿಗೆ ಮರಣೋತ್ತರವಾಗಿ ನೀಡಲಾದ ಗೌರವ ಡಾಕ್ಟರೇಟ್ ಅನ್ನು ಸ್ವೀಕರಿಸಿದರು.

ಜಾನಪದ, ಸಂಗೀತ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಖ್ಯಾತ ಗಾಯಕ ಎಂ.ಮಹದೇವಸ್ವಾಮಿ ಅವರಿಗೆ ಗೌರವ ಡಾಕ್ಟರೇಟ್‌ ಅನ್ನು ನೀಡಿಲಾಯಿತು. ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ ) ನಿವೃತ್ತ ಪ್ರಧಾನ ನಿರ್ದೇಶಕ ಡಾ.ವಾಸುದೇವ್ ಕಲ್ಕುಂಟೆ ಅತ್ರೆ ಅವರು ವಿಜ್ಞಾನ ಕ್ಷೇತ್ರದಲ್ಲಿ ಅಪಾರ ಸಾಧನೆ ಮಾಡಿರುವುದನ್ನು ಪರಿಗಣಿಸಿ ಅವರಿಗೆ ಗೌರವ ಡಾಕ್ಟರೇಟ್ ಪದವಿ ನೀಡಿ ಗೌರವಿಸಲಾಯಿತು.

ವಿವಿಯ 102ನೇ ಘಟಿಕೋತ್ಸವದಲ್ಲಿ ಒಟ್ಟು 28,581 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು. ಇವರಲ್ಲಿ 18,567 ಮಂದಿ ಮಹಿಳೆಯರು, 10,014 ಮಂದಿ ಪುರುಷ ವಿದ್ಯಾರ್ಥಿಗಳು ಪದವಿ ಸ್ವೀಕರಿಸಿದರು. 157 ಮಂದಿ ಪಿಎಚ್ ಡಿ ಪದವಿ ಪಡೆದರು.

ಒಟ್ಟು 213 ಮಂದಿ ರ‍್ಯಾಂಕ್ ವಿಜೇತರಿಗೆ ಒಟ್ಟು 376 ಚಿನ್ನದ ಪದಕಗಳು ಹಾಗೂ 214 ನಗದು ಬಹುಮಾನ ನೀಡಿ ಅಭಿನಂದಿಸಲಾಯಿತು.
ಸಮಾರಂಭದಲ್ಲಿ ನ್ಯಾಕ್ ನಿರ್ದೇಶಕ ಪ್ರೊ. ಎಸ್.ಸಿ.ಶರ್ಮಾ ಘಟಿಕೋತ್ಸವ ಭಾಷಣ ಮಾಡಿದರು.
ವಿವಿ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Start‘ to this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಮಹಿಳೆಯರ ಏಕದಿನ ವಿಶ್ವಕಪ್ ಕ್ರಿಕೆಟ್ ಭಾರತ ಉಪಾಂತ್ಯಕ್ಕೆ

0

ಏಕದಿನ ವಿಶ್ವಕಪ್ ನ ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ಭಾರತ ತಂಡ ಭರ್ಜರಿ ಗೆಲುವು ಸಾಧಿಸಿದೆ.

ಗೆಲುವಿನ ಬೆನ್ನಟ್ಟಿದ ಮಿಥಾಲಿ ರಾಜ್ ಪಡೆ ಪಂದ್ಯದಲ್ಲಿ 110 ರನ್ ಅಂತರದಿಂದ ಜಯ ಸಾಧಿಸಿದೆ.
ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ ಏಳು ವಿಕೆಟ್ ನಷ್ಟಕ್ಕೆ 229 ರನ್ ಗಳಿಸಿದರೆ, ಬಾಂಗ್ಲಾ ವನಿತೆಯರ ತಂಡ ಕೇವಲ 119 ರನ್ ಗೆ ತನ್ನೆಲ್ಲಾ ವಿಕೆಟ್ ಕಳೆದುಕೊಂಡಿತು.

ಭಾರತ ತಂಡ ಈ ಗೆಲುವಿನೊಂದಿಗೆ ಸೆಮಿ ಫೈನಲ್ ಗೆ ಲಗ್ಗೆ ಇಟ್ಟಿದೆ. ಭಾರತಕ್ಕೆ ಸ್ಮೃತಿ ಮಂಧನಾ ಮತ್ತು ಶಫಾಲಿ ವರ್ಮಾ ಉತ್ತಮ ಆರಂಭ ಒದಗಿಸಿದರು.

ಮಂಧನಾ 32 ರನ್ ಗಳಿಸಿದರೆ, ಶಫಾಲಿ 42 ರನ್ ಬಾರಿಸಿದರು. ಉತ್ತಮ ಫಾರ್ಮ್ ಮುಂದುವರಿಸಿದ ಯಾಸ್ತಿಕಾ ಭಾಟಿಯಾ ಪಂದ್ಯದ ಏಕೈಕ ಅರ್ಧಶತಕ ಬಾರಿಸಿದರು.

ಕೊನೆಯಲ್ಲಿರಿಚಾ ಘೋಷ್ 26, ಪೂಜಾ ವಸ್ತ್ರಾಕರ್ 30, ಸ್ನೇಹ್ ರಾಣ 27 ಮತ್ತು ರನ್ ಗಳಿಸಿದರು.
ಗುರಿ ಬೆನ್ನತ್ತಿದ ಬಾಂಗ್ಲಾಕ್ಕೆ ಸ್ನೇಹ್ ರಾಣ ಬೌಲಿಂಗ್ ನಲ್ಲಿ ಕಾಡಿದರು.

ಸತತ ವಿಕೆಟ್ ಕಳೆದುಕೊಂಡ ಬಾಂಗ್ಲಾ ರನ್ ಗಳಿಸಲು ಪರದಾಡಿತು.
ಜೂಲನ್ ಗೋಸ್ವಾಮಿ ಮತ್ತು ಪೂಜಾ ವಸ್ತ್ರಾಕರ್ ತಲಾ ಎರಡು ವಿಕೆಟ್ ಪಡೆದರು.

32 ರನ್ ಗಳಿಸಿದ ಸಲ್ಮಾ ಖತುನ್ ರದ್ದೇ ಹೆಚ್ಚಿನ ಗಳಿಕೆ. ಸ್ನೇಹ್ ರಾಣ ನಾಲ್ಕು ವಿಕೆಟ್ ಕಿತ್ತರು.
ಬಾಂಗ್ಲಾದೇಶ ವಿರುದ್ಧದ ಪಂದ್ಯ ಗೆದ್ದ ಭಾರತ ಅಂಕಪಟ್ಟಿಯಲ್ಲಿ ಆರು ಅಂಕಗಳೊಂದಿಗೆ ಮೂರನೇ ಸ್ಥಾನಕ್ಕೇರಿದೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Start‘ to this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಖೋ ಖೋ ಪಂದ್ಯಾವಳಿಕುವೆಂಪು ವಿವಿ ತಂಡಕ್ಕೆ ಕಂಚಿನ ಪದಕ

0

ಇತ್ತೀಚೆಗೆ ಬೆಂಗಳೂರು ಉತ್ತರ ವಿಶ್ವವಿದ್ಯಾಲಯದಲ್ಲಿ ನಡೆದ ದಕ್ಷಿಣ ವಲಯ ಅಂತರ್ ವಿಶ್ವವಿದ್ಯಾಲಯಗಳ ಖೋ ಖೋ ಪಂದ್ಯಾವಳಿಯಲ್ಲಿ ಕಂಚಿನ ಪದಕ ಗಳಿಸಿದ ಕುವೆಂಪು ವಿಶ್ವವಿದ್ಯಾಲಯದ ಪುರುಷರ ತಂಡದ‌ ಆಟಗಾರರನ್ನು ಕುಲಪತಿ ಪ್ರೊ.ಬಿ.ಪಿ.ವೀರಭದ್ರಪ್ಪ ಸನ್ಮಾಸಿದರು.

ಈ ಸಂದರ್ಭದಲ್ಲಿ ಕುಲಸಚಿವೆ ಜಿ. ಅನುರಾಧ, ಕುಲಸಚಿವ (ಪರೀಕ್ಷಾಂಗ) ಪ್ರೊ.ಎಸ್.ಕೆ.ನವೀನ್ ಕುಮಾರ್, ಹಣಕಾಸು ಅಧಿಕಾರಿ ಎಸ್. ರಾಮಕೃಷ್ಣ, ಡಾ. ಎನ್ ಡಿ ವಿರೂಪಾಕ್ಷ, ಡಾ.ರವೀಂದ್ರ ಗೌಡ ಮತ್ತಿತರರು ಉಪಸ್ಥಿತರಿದ್ದರು.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Start‘ to this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಯುದ್ಧದಲ್ಲಿ ಉಕ್ರೇನ್ ಗೆ ಆದ ನಷ್ಟದ ಬಗ್ಗೆ ರಷ್ಯನ್ ವೆಬ್ ಸೈಟ್ ಮಾಹಿತಿ

0

ಉಕ್ರೇನ್‌ ಮೇಲೆ ದಾಳಿ ನಡೆಸಿ ರಷ್ಯಾ ಇದುವರೆಗೆ 9,861 ಸೈನಿಕರನ್ನು ಕಳೆದುಕೊಂಡಿದೆ ಮತ್ತು 16 ಸಾವಿರಕ್ಕಿಂತಲೂ ಅಧಿಕ ಮಂದಿಗೆ ಗಾಯಗಳಾಗಿವೆ. ರಷ್ಯಾ ಸರಕಾರ‌ದ ಪರವಾಗಿರುವ ವೆಬ್‌ಸೈಟ್‌ ಒಂದರಲ್ಲಿ ಈ ಮಾಹಿತಿಯನ್ನು ಅಪ್‌ಲೋಡ್‌ ಮಾಡಲಾಗಿದೆ ಎಂದು ತಿಳಿದುಬಂದಿದೆ.

ಜಗತ್ತಿನಾದ್ಯಂತ ಈ ಅಂಶ ಪ್ರಚಾರ ಪಡೆದುಕೊಳ್ಳುತ್ತಲೇ ಅದನ್ನು ವಾಪಸ್‌ ಪಡೆಯಲಾಗಿದೆ.

ಅಫ್ಘಾನಿಸ್ಥಾನದಲ್ಲಿ ರಷ್ಯಾ 1979ರಿಂದ 10 ವರ್ಷ ಗಳ ಕಾಲ ನಡೆಸಿದ್ದ ಸಂಘರ್ಷದಲ್ಲಿ 15 ಸಾವಿರ ಮಂದಿ ಸೈನಿಕರು ಸಾವಿಗೀಡಾಗಿದ್ದರು ಎನ್ನಲಾಗಿದೆ.

ಈ ನಡುವೆ 2,389 ಮಂದಿ ಮಕ್ಕಳನ್ನು ಲುಗಾನ್ಸ್ಕ್ ಮತ್ತು ಡಾನೆಸ್ಕ್ ನಿಂದ ರಷ್ಯಾ ಅಪಹರಿಸಿದೆ ಎಂದು ಅಮೆರಿಕ ಸರಕಾರ‌ ಆರೋಪಿಸಿದೆ. ಇದೇ ವೇಳೆ, ಉಕ್ರೇನ್‌ ಮೇಲೆ ರಷ್ಯಾ ದಾಳಿ ಮುಂದುವರಿಸಿದೆ. ಇನ್ನೊಂದೆಡೆ, ಕೀವ್‌ ನಗರದ ಹೊರವಲಯವನ್ನು ಉಕ್ರೇನ್‌ ಸೇನೆ ಮರುವಶ ಮಾಡಿಕೊಂಡಿದೆ.

ಉಕ್ರೇನ್‌ ವಿರುದ್ಧ ರಷ್ಯಾ ಪ್ರಹಾರ ನಡೆಸಲಾರಂಭಿಸಿದ ಬಳಿಕದಿಂದ ಇದುವರೆಗೆ 3.5 ಕೋಟಿ ಮಂದಿ (35 ಮಿಲಿಯ) ಆ ದೇಶವನ್ನು ತೊರೆದಿದ್ದಾರೆ ಎಂದು ತಿಳಿದುಬಂದಿದೆ.

ಎರಡನೇ ವಿಶ್ವ ಮಹಾಯುದ್ಧದ ಬಳಿಕ ಐರೋಪ್ಯ ಒಕ್ಕೂಟ ಕಂಡ ಅತ್ಯಂತ ದೊಡ್ಡ ಜನರ ವಲಸೆ ಇದು ಎಂದು ಸ್ವಿಜರ್ಲೆಂಡ್‌ನ‌ ಜಿನೇವಾದಲ್ಲಿರುವ ವಿಶ್ವಸಂಸ್ಥೆಯ ನಿರಾಶ್ರಿತರ ಆಯುಕ್ತರ ಕಚೇರಿ (ಯುಎನ್‌ಎಚ್‌ಸಿಆರ್‌) ಪ್ರಕಟಿಸಿದೆ.

ಪೋಲೆಂಡ್‌ಗೆ 2. 1 ಮಿಲಿಯ (21 ಲಕ್ಷ ) ಮಂದಿ ಪ್ರವೇಶಿಸಿದ್ದಾರೆ. ರೊಮೇನಿಯಾಕ್ಕೆ 5.40 ಲಕ್ಷ, ಮಾಲ್ಡೋವಾಕ್ಕೆ 3.67 ಲಕ್ಷಕ್ಕಿಂತ ಅಧಿಕ ಮಂದಿ ಉಕ್ರೇನಿಯನ್ನರು ನಿರಾಶ್ರಿತರಾಗಿ ಪ್ರವೇಶಿಸಿದ್ದಾರೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Start‘ to this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಪುನೀತ್ ಎಂಬ ಪ್ರಕಾಶ

0

ಪುನೀತ್ ..ಓರ್ವ ಕಲಾವಿದ ,ನಟ.
ಸಮಾಜಸೇವಕ, ಜನಾಭಿಮಾನಿ
ಒಬ್ಬ ಜಂಟಲ್ ಮನ್ ಹೀಗೆ ಅಪ್ಪಟ
ಮನುಷ್ಯನ ಬಗ್ಗೆ ಹೇಳಬಹುದಾದ ಎಲ್ಲ ಉಪಾಧಿಗಳನ್ನ ಮೀರಿದ
ಹೃದಯ ಶ್ರೀಮಂತ ವ್ಯಕ್ತಿ.
ತನ್ನಂತೇ ಪರರ ಬಗೆವೊಡೆ ಬಿನ್ನಾಣವಕ್ಕು
ಪದವಕ್ಕು ಕೈಲಾಸ ಎಂಬಂತೆ
ಸಾವಿನ ನಂತರ ತನ್ನೆರಡೂ ಕಣ್ಣುಗಳನ್ನ ದಾನ‌ಮಾಡಿದ
ದೃಷ್ಟಿದಾನ ಶೂರ. ದೊಡ್ಡಗುಣವಂತ.
ಈ ಬಾಳೊಂದು ಮೂರೇ ದಿನ
ಮೆರೀ ಬೇಡ ಕಾಣಣ್ಣಾ..ಅಂದಂತೆ
ಮೂರೇದಿನದಲ್ಲಿ ನೂರು ವರ್ಷದ
ಸಾರ್ಥಕ ಬದುಕಿನ ಸಾಧನೆಗೈದ ಹುಡುಗ…ಈ ದೊಡ್ಮನೆ ಹುಡುಗ.
ಕಣ್ಮರೆಯಾಗುವ ವಯಸ್ಸಲ್ಲ.
ಆದರೂ ಆಯುಃ ಪ್ರಮಾಣದ ದೃಷ್ಟಿಯಿಂದ ಯುವರತ್ನ ನಿಗೆ
ಮಿಂಚಲು ಸಾಕಷ್ಟು ಕಾಲಾವಕಾಶವನ್ನ ಭಗವಂತ ಕೊಡಬೇಕಿತ್ತು. ಆದರೆ ಸುಜೀವಿಗಳಿಗೆ
ಅವರ ಸಾಧನೆ ನೋಡುತ್ತಿದ್ದಂತೆಯೇ
ಪರಮಾತ್ಮನೇ ತೃಪ್ತಿಗೊಂಡಿರಬಹುದು.
ಆದರೂ ಇರಬೇಕಿತ್ತು.ಅಪ್ಪು.
ನಿಮ್ಮಿಂದ ಸ್ಥಾಪನೆಗೊಂಡ
ಪಿ ಆರ್ ಕೆ ಸಂಸ್ಥೆಯ ಧ್ಯೇಯದ ಬಗ್ಗೆ
ಶ್ರೀಮತಿ ಅಶ್ವಿನಿ ಪುನೀತ್ ಅವರು
ಮಾತಾಡಿದ್ದಾರೆ.

ಹೊಸ ಕಲಾವಿದರಿಗೆ ಪ್ರತಿಭಾವಂತರಿಗೆ ಚಲನಚಿತ್ರ ಕ್ಷೇತ್ರದಲ್ಲಿ ಮಿನುಗಲು ಪಿಆರ್ ಕೆ ಸಂಸ್ಥೆ ಅವಕಾಶ ಮತ್ತು ವೇದಿಕೆಯಾಗಲಿದೆ. ನಿಜಕ್ಕೂ ನಿಮ್ಮ ಈ ಧ್ಯೇಯ ಮೆಚ್ಚುವಂಥದ್ದು.

ಮೈಸೂರು ವಿವಿ ವೀರಕನ್ನಡಿಗನಿಗೆ
ಗೌರವ ಡಾಕ್ಟರೇಟ್ ನೀಡಿದೆ.
ಕೆರೆಯ ನೀರನು ಕೆರೆಗೆ ಚೆಲ್ಲಿ ಎಂಬಂತೆ ಆ ಗೌರವದ ಸಂಗಡ ವಿದ್ಯಾರ್ಥಿಗಳಿಗೆ ಸಮ್ಮಾನ ಅರ್ಪಿಸಿದ್ದಾರೆ. ಅದೆಂದರೆ
ಈಗ ರಾಘವೇಂದ್ರ ರಾಜ್ ಕುಮಾರ್
ಅವರು ನೀಡಿದ ಇನ್ನೊಂದು ಸಿಹಿಸುದ್ದಿ.
ಮೈಸೂರು ವಿವಿ ಲಲಿತಕಲಾ
ವಿಭಾಗದಲ್ಲಿ ಮತ್ತು ಬಿಸಿನೆಸ್ ಮ್ಯಾನೇಜ್ ಮೆಂಟ್ ವಿಭಾಗದಲ್ಲಿ
ಪುನೀತ್ ರಾಜ್ ಕುಮಾರ್ ಹೆಸರಿನಲ್ಲಿ ಚಿನ್ನದ ಪದಕ ನೀಡಲು ತೀರ್ಮಾನಿಸಿದ್ದಾರೆ.

ರಾಜಣ್ಣನವರ ಇಡೀ ಕುಟುಂಬ
ಸಮಾಜದ ಏಳಿಗಗೆ ತನ್ನದೇ ಸೇವೆ ಮಾಡುತ್ತಿದೆ. ಶಕ್ತಿಧಾಮ ಅಂಥದ್ದಕ್ಕೆ
ಒಂದು ಮಾದರಿ.
ನಾವೀಗ ಕಳಕಳಿಯಿಂದ ಕೇಳುವುದಿಷ್ಟೆ…
ಪುನೀತ್ ನೀವು ಮತ್ತೊಮ್ಮೆ
ಹುಟ್ಟಿ ಬನ್ನಿ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Start‘ to this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಪೋಲೆಂಡ್ ನ ಕರೋಲಿನಾಗೆವಿಶ್ವ ಸುಂದರಿ ಕಿರೀಟ

0

ಸುಂದರಿಯರ ಜಗತ್ತಿನ ಪ್ರತಿಷ್ಠಿತ ಮಿಸ್ ವರ್ಲ್ಡ್ 2021 ರ ಕಿರೀಟ ಪೋಲೆಂಡ್ ನ ಕರೋಲಿನಾ ಬಿಲಾವ್ಸ್ಕಾ ಅವರ ಮುಡಿಗೇರಿದೆ.

ಪೋರ್ಟೊರಿಕೊದ ಸ್ಯಾನ್ ಸುವಾನ್ ನಲ್ಲಿ ನಡೆದ 70ನೇ ಆವೃತ್ತಿಯ ಮಿಸ್ ವರ್ಲ್ಡ್ ಕಿರೀಟಕ್ಕಾಗಿ ಭಾರೀ ಪೈಪೋಟಿ ನಡೆದಿತ್ತು. ಅಂತಿಮವಾಗಿ ಕರೋಲಿನಾ ಆಯ್ಕೆಯಾಗಿ 2021ರ ವಿಶ್ವ ಸುಂದರಿಯಾಗಿ ಹೊರಹೊಮ್ಮಿದ್ದಾರೆ.

ಕರೋಲಿನಾ ಎದುರು ಉತ್ತರ ಯುಎಸ್‍ಎ, ಇಂಡೋನೇಷ್ಯಾ, ಐರ್ಲೆಂಡ್ ಸೇರಿದಂತೆ ಹಲವು ರಾಷ್ಟ್ರಗಳ ಸುಂದರಿಯರು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.

ಇವರೆಲ್ಲರನ್ನೂ ಸೋಲಿಸಿ ವಿಶ್ವ ಸುಂದರಿಯ ಕಿರೀಟವನ್ನು ಧರಿಸಿದ್ದಾರೆ ಪೊಲೆಂಡ್ ಸುಂದರಿ ಕರೋಲಿನಾ.

2019ರ ವಿಶ್ವಸುಂದರಿ ಜುಮೈಕಾದ ಟೋನಿ ಆನ್ ಸಿಂಗ್ ಫೈನಲ್ ನಲ್ಲಿ ವಿಜೇತೆ ಕರೋಲಿನಾಗೆ ಕಿರೀಟ ತೊಡಿಸಿದರು.
ಅವರು ಆ ಕಿರೀಟವನ್ನು ತಾನೇ ತೊಟ್ಟಿಕೊಂಡಿದ್ದೇನಾ ಎನ್ನುವಂತೆ ಹಲವು ಬಾರಿ ಅದನ್ನು ಸ್ಪರ್ಶಿಸಿ ಖಚಿತ ಪಡಿಸಿಕೊಂಡಿದ್ದು ವಿಶೇಷವಾಗಿತ್ತು.

ಮೊದಲ ರನ್ನರ್ ಅಪ್ ಆಗಿ ಭಾರತೀಯ ಮೂಲದ ಶ್ರೀಸೈನಿ ಆಯ್ಕೆಯಾದರು. ಎರಡನೇ ರನ್ನರ್ ಅಪ್ ಆಗಿ ಕೋಟ್ ಡಿ ಐವೋರನ್ನ ಒಲಿವಿಯಾ ಯಾಸೆ ಸ್ಥಾನ ಪಡೆದಿದ್ದಾರೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Start‘ to this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ವಿಶ್ವ ಜಲ ದಿನ ಹನಿ ಹನಿ ಉಳಿಸೋಣ

0

ಮನುಷ್ಯರು ಪ್ರೀತಿ ಇಲ್ಲದೆ ಬದುಕಬಹುದು. ಕುಡಿಯುವ ನೀರಿಲ್ಲದೆ ಒಬ್ಬನೂ ಜೀವಿಸಲಾರ ಎಂಬ ಮಾತು ಸುಮ್ಮನೆ ಅಲ್ಲ. ನೀರೇ ಈ ಭೂಮಿಯ ಜೀವಾತ್ಮ.
ಪೃಥ್ವಿಯ ಸಕಲ ಜೀವಗಳ ಅಸ್ತಿತ್ವಕ್ಕೆ ನೀರೇ ಕಾರಣ.
ಇಂದು ಮಾರ್ಚ್ 22. ಇಂದಿನ ದಿನವನ್ನು ವಿಶ್ವ ಜಲ ದಿನವನ್ನಾಗಿ ಆಚರಿಸಲಾಗುತ್ತದೆ. ಇದು ಭೂಮಿಯ ಅತ್ಯಂತ ಪ್ರಮುಖ ಸಂಪನ್ಮೂಲ.
ಪ್ರಸ್ತುತ ಇರುವ ಬೇಸಿಗೆ ಮತ್ತು ಕೊರೊನಾ ವೈರಸ್ ಸಾಂಕ್ರಾಮಿಕವು ಶುದ್ಧ ನೀರು ಎಷ್ಟು ಮುಖ್ಯ ಎಂಬುದನ್ನು ಇಡೀ ಜಗತ್ತಿಗೆ ತೋರಿಸಿಕೊಟ್ಟಿದೆ. ಪ್ರತಿ ನೀರಿನ ಒಂದು ಹನಿಯು ಎಷ್ಟು ಮುಖ್ಯ ಎನ್ನುವುದನ್ನು ತಿಳಿದುಕೊಳ್ಳಲು ಈ ದಿನವನ್ನು ಪ್ರಪಂಚದಾದ್ಯಂತ ಆಚರಿಸಲಾಗುತ್ತದೆ.

ಶುದ್ಧವಾದ ನೀರಿಲ್ಲದೇ ವಾಸಿಸುತ್ತಿರುವ 2.2. ಶತಕೋಟಿ ಜನರ ಕುರಿತು ಜಾಗೃತಿ ಮೂಡಿಸಲು ಈ ದಿನವನ್ನು ಮೀಸಲಿಡಲಾಗಿದೆ.

ಪ್ರತಿವರ್ಷ ಮಾರ್ಚ್ 22ರಂದು ವರ್ಲ್ಡ್ ವಾಟರ್ ಡೇ ಇಂದು ಘೋಷಿಸಲಾಗಿದೆ. ಪ್ರತಿಯೊಬ್ಬರೂ ನೀರಿನ ಪ್ರಾಮುಖ್ಯತೆಯನ್ನು ಅರಿಯಬೇಕಾಗಿದೆ.

ನೀರಿನ ಬಳಕೆ, ಉಳಿಕೆ ಮತ್ತು ಮಹತ್ವದ ಬಗ್ಗೆ ಪ್ರತಿಯೊಬ್ಬ ಮನುಷ್ಯನಿಗೂ ಅರಿವಿರಬೇಕು.

ಜಲಮೂಲಗಳು ಅಪಾಯದ ಅಂಚಿನಲ್ಲಿರುವುದು ಗೊತ್ತಿರುವ ಸಂಗತಿ. ಜಲಸಂರಕ್ಷಣೆಗೆ ವಾಟರ್‌ ವಾರಿಯರ್ಸ್‌’ಗಳನ್ನು ಸ್ಮರಿಸದೇ ಹೋದರೆ ಈ ದಿನಾಚರಣೆ ಮಾಡಿಯೂ ವ್ಯರ್ಥವಾಗುತ್ತದೆ.

ಪ್ರಕೃತಿಯನ್ನು ಉಳಿಸಿ ನೀರನ್ನು ಸಂರಕ್ಷಿಸಬೇಕಾಗಿದೆ. ಏಕೆಂದರೆ ವಿಶ್ವದ ಸಕಲ ಜೀವರಾಶಿಗಳಿಗೆ ನೀರು ಜೀವನಾಧಾರ. ಜಲವೇ ಸಂಜೀವಿನಿ.
ನಮ್ಮ ಭಾರತದಲ್ಲಿ ನೀರಿಗೆ ದೈವೀ ಸ್ವರೂಪ ಎನ್ನಲಾಗುತ್ತದೆ. ಸಂಶೋಧನೆಗಳ ಪ್ರಕಾರ ಭೂಮಿ ಮಾತ್ರ ಮಾನವ ಯೋಗ್ಯ ತಾಣ ಮತ್ತು ಶುದ್ಧ ಸಿಹಿ ನೀರು ಸಿಗುವ ಏಕೈಕ ಗ್ರಹ. ಭೂಮಿಯಲ್ಲಿ ಉಪಯೋಗಿಸಬಹುದಾದ ಸಿಹಿ ನೀರಿನ ಅಂಶ ಬಹಳ ಕಡಿಮೆ ಇದೆ.
ಹಾಗಾಗಿ ನೀರನ್ನು ಪೋಲು ಮಾಡದೇ, ಅವಶ್ಯಕತೆಗೆ ತಕ್ಕಷ್ಟೇ ಮಿತವಾಗಿ ನೀರನ್ನು ಬಳಸುವುದು ನಮ್ಮೆಲ್ಲರ ಕರ್ತವ್ಯ.

ಇಂದಿಗೂ ಶತಕೋಟಿ ಜನರು ಸುರಕ್ಷಿತ ಕುಡಿಯುವ ನೀರಿನ ವ್ಯವಸ್ಥೆ ಇಲ್ಲದೆ ತಮ್ಮ ಜೀವನವನ್ನು ನಡೆಸುತ್ತಿದ್ದಾರೆ. ಮೂಲಭೂತ ಮಾನವ ಹಕ್ಕಾಗಿ, ನಮ್ಮಲ್ಲಿರುವ ನೀರನ್ನು ಸಂರಕ್ಷಿಸುವುದು ಮತ್ತು ಅಗತ್ಯವಿರುವವರಿಗೆ ದೊರಕಿಸಿಕೊಡುವುದು ಕೂಡ ನಮ್ಮ ಜವಾಬ್ದಾರಿಯಾಗಿದೆ.

ಜಾಗತಿಕ ತಾಪಮಾನ, ಪರಿಸರ ಮಾಲಿನ್ಯ, ಕೈಗಾರಿಕರಣ, ಅರಣ್ಯನಾಶ, ಹಾಗೂ ಬೆಳೆಯುತ್ತಿರುವ ಜನಸಂಖ್ಯೆಯ ಕಾರಣದಿಂದಾಗಿ ಅಂತರ್ಜಲ ಮಟ್ಟ ದಿನೇದಿನೇ ಕುಸಿಯುತ್ತಿದೆ. ಬೇಸಿಗೆ ಶುರುವಾಗುವ ಮುಂಚೆಯೇ ನೀರಿನ ಕೊರತೆ ಕಂಡುಬರುತ್ತಿದೆ. ಜನಸಾಮಾನ್ಯರಿಗೆ ಇಷ್ಟೊಂದು ತೊಂದರೆ ಎದುರಾಗುತ್ತಿರುವಾಗ, ಪಕ್ಷಿ ಪ್ರಾಣಿಗಳು ನೀರಿಗಾಗಿ ಪರದಾಡುವ ಪಾಡು ಕೇಳುವವರಾರು?

ನಮ್ಮ ಭಾರತದಲ್ಲಿ ಎಷ್ಟು ಗ್ರಾಮಗಳಲ್ಲಿ ಇಂದಿಗೂ ನೀರಿನ ಕೊರತೆಯ ತೀವ್ರ ಸಮಸ್ಯೆ ಇದೆ. ನೀರನ್ನು ಅನಾವಶ್ಯಕವಾಗಿ ಪೋಲು ಮಾಡದೆ ಹನಿ ಹನಿ ನೀರನ್ನು ಸಂರಕ್ಷಿಸುವುದು, ಮುಂದಿನ ಪೀಳಿಗೆಗೆ ಉಳಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ.

ವಿಶ್ವ ಸಂಸ್ಥೆಯ ಪ್ರಕಾರ, ಈ ವರ್ಷದ ವಿಶ್ವ ಜಲ ದಿನಾಚರಣೆಯ ವಿಷಯವೆಂದರೆ ನೀರನ್ನು ಮೌಲ್ಯಮಾಪನ ಮಾಡುವುದು ಮತ್ತು ಈ ಪ್ರಮುಖ ಸಂಪನ್ಮೂಲವನ್ನು ನಾವು ಹೇಗೆ ಉತ್ತಮವಾಗಿ ರಕ್ಷಿಸಬಹುದು ಎಂಬುದಾಗಿದೆ.

ನೀರಿನ ಮೌಲ್ಯವು ಅದರ ಬೆಲೆ ಕಿಂತ ಹೆಚ್ಚಿನದಾಗಿದೆ. ಈ ಸಾರ್ವತ್ರಿಕ ದ್ರಾವಕವು ನಮ್ಮ ಮನೆ, ಆರೋಗ್ಯ, ಸಂಸ್ಕೃತಿ, ಶಿಕ್ಷಣ, ಅರ್ಥಶಾಸ್ತ್ರ ಮತ್ತು ನಮ್ಮ ನೈಸರ್ಗಿಕ ಪರಿಸರದ ಸಮಗ್ರತೆಗೆ ಅಘಾದ ಮತ್ತು ಸಂಕೀರ್ಣ ಮೌಲ್ಯವನ್ನು ಹೊಂದಿದೆ.
ಯಾವುದೇ ಮೌಲ್ಯಗಳನ್ನು ನಾವು ಕಡೆಗಣಿಸದೆ, ಈ ಸೀಮಿತ ಭರಿಸಲಾಗದ ಸಂಪನ್ಮೂಲವನ್ನು ನಾವು ತಪ್ಪಾಗಿ ಬಳಸಿಕೊಳ್ಳುವ ಸಾಧ್ಯತೆಯಿದೆ. ಆದ್ದರಿಂದ ನಾವು ಈ ಸಂಪನ್ಮೂಲವನ್ನು ಉಳಿಸಿಕೊಳ್ಳುವ ಪ್ರಯತ್ನ ಮಾಡಬೇಕಾಗಿದೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Start‘ to this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಚೀನಾದ ಬೋಯಿಂಗ್ ವಿಮಾನ ಪತನ.44 ಪ್ರಯಾಣಿಕರ ಸಾವು?

0

133 ಪ್ರಯಾಣಿಕರು ಪ್ರಯಾಣಿಸುತ್ತಿದ್ದ ಬೋಯಿಂಗ್ 737 ವಿಮಾನ ಚೀನಾದಲ್ಲಿ ಪತನಗೊಂಡಿರುವ ಘಟನೆ ಸಂಭವಿಸಿರುವುದಾಗಿ ಚೀನಾದ ಸ್ಥಳೀಯ ಮಾಧ್ಯಮಗಳ ವರದಿ ತಿಳಿಸಿದೆ.

ಚೀನಾದ ಈಸ್ಟರ್ನ್ ಏರ್ ಲೈನ್ಸ್ ಗೆ ಸೇರಿದ ಬೋಯಿಂಗ್ 737 ವಿಮಾನವು ಗುವಾಂಕ್ಸಿ ಪ್ರಾಂತ್ಯದ ವುಝೌ ನ ಟೆಂಗ್ ಕೌಂಟಿಯಲ್ಲಿ ಪತನಗೊಂಡಿದೆ. ಇದರ ಪರಿಣಾಮ ಪರ್ವತ ಪ್ರದೇಶದಲ್ಲಿ ಬೆಂಕಿ ಹೊತ್ತಿಕೊಂಡಿರುವುದಾಗಿ ವರದಿ ವಿವರಿಸಿದೆ.

ಪರ್ವತ ಪ್ರದೇಶದಲ್ಲಿ ಪತನಗೊಂಡಿರುವ ವಿಮಾನದಲ್ಲಿ ಎಷ್ಟು ಮಂದಿ ಪ್ರಯಾಣಿಕರು ಸಾವನ್ನಪ್ಪಿದ್ದಾರೆ ಎಂಬುದು ಇನ್ನಷ್ಟೇ ತಿಳಿದು ಬರಬೇಕಾಗಿದೆ ಎಂದು ಮಾಧ್ಯಮದ ವರದಿ ತಿಳಿಸಿದೆ. ಘಟನಾ ಸ್ಥಳಕ್ಕೆ ರಕ್ಷಣಾ ತಂಡವನ್ನು ಕಳುಹಿಸಲಾಗಿದೆ.

ಏವಿಯೇಷನ್ ಸೇಫ್ಟಿ ನೆಟ್ ವರ್ಕ್ ಪ್ರಕಾರ, ಚೀನಾದಲ್ಲಿ 2010ರಲ್ಲಿ ಹೆನಾನ್ ಏರ್ ಲೈನ್ಸ್ ನ ಎಂಬ್ರೇರ್ ಇ -190 ಪ್ರಾದೇಶಿಕ ಜೆಟ್ ಹವಾಮಾನ ವೈಪರೀತ್ಯದಿಂದಾಗಿ ಯಿಚುವಾನ್ ವಿಮಾನ ನಿಲ್ದಾಣ ಸಮೀಪಿಸುತ್ತಿರುವಾಗಲೇ ದುರಂತಕ್ಕೀಡಾಗಿದ್ದು, 96 ಮಂದಿ ಪ್ರಯಾಣಿಕರಲ್ಲಿ 44 ಮಂದಿ ಸಾವನ್ನಪ್ಪಿರುವ ಘಟನೆ ನಡೆದಿತ್ತು.