Sunday, February 22, 2026
Sunday, February 22, 2026
Home Blog Page 1658

ಪ್ರೊ.ಸಿ.ಎನ್.ಆರ್.ರಾವ್ ಅವರಿಗೆ ಎನಿ ಎನರ್ಜಿ ಅಂತಾ ರಾಷ್ಟ್ರೀಯ ಪ್ರಶಸ್ತಿ

0

ನವೀಕರಿಸಬಹುದಾದ ಇಂಧನ ಮೂಲಗಳ ಸಂಶೋಧನಾ ಕ್ಷೇತ್ರದಲ್ಲಿ ನಡೆಸುವ ಮಹತ್ತ್ವದ ಸಂಶೋಧನೆಯನ್ನು ಪರಿಗಣಿಸಿ ಇಟಲಿ ದೇಶವು ಭಾರತ ರತ್ನ ಸಿ.ಎನ್.ಆರ್.ರಾವ್ ಅವರಿಗೆ ನೀಡಿರುವ ಪ್ರತಿಷ್ಠಿತ ಸ್ವರ್ಣ ಪದಕಸಹಿತ ಎನಿ ಎನರ್ಜಿ ಫ್ರಾಂಟಿಯರ್ ಅಂತಾರಾಷ್ಟ್ರೀಯ ಪ್ರಶಸ್ತಿ’ಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ವಿಜ್ಞಾನ ಹಾಗೂ ತಂತ್ರಜ್ಞಾನ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರು ಇಲ್ಲಿ ಪ್ರದಾನ ಮಾಡಿದರು.

ರಾವ್ ಅವರು ಈ ಪ್ರಶಸ್ತಿಗೆ ಪಾತ್ರರಾದ ಏಷ್ಯಾದ ಮೊಟ್ಟಮೊದಲ ವಿಜ್ಞಾನಿಯಾಗಿದ್ದಾರೆ.
1.87 ಕೋಟಿ ರೂ.ಗಳಿಗೂ ಹೆಚ್ಚು ನಗದುಳ್ಳ ಈ ಪ್ರಶಸ್ತಿಯನ್ನು 2021ರ ಸಾಲಿಗೆ ಅನ್ವಯವಾಗುವಂತೆ ಹೋದ ವರ್ಷವೇ ಇಟಲಿಯ ಮಿಲಾನ್ ನಗರದ `ಎನಿ ಎನ್ರಿಕೋ ಫೌಂಡೇಶನ್’ ಘೋಷಿಸಿತ್ತು.

ಆದರೆ, ಹೋದ ವರ್ಷದ ಅಕ್ಟೋಬರ್ ತಿಂಗಳಲ್ಲಿ ಇಟಲಿಯ ಅಧ್ಯಕ್ಷೀಯ ಅರಮನೆಯಲ್ಲಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ, ಕೋವಿಡ್ ಹಿನ್ನೆಲೆಯಲ್ಲಿ ರಾವ್ ಅವರು ಖುದ್ದಾಗಿ ಹೋಗಲು ಸಾಧ್ಯವಾಗಿರಲಿಲ್ಲ. ಹೀಗಾಗಿ, ಪದಕ ಪುರಸ್ಕಾರವನ್ನು ಆ ಪ್ರತಿಷ್ಠಾನವು ಬೆಂಗಳೂರಿಗೆ ಕಳಿಸಿಕೊಟ್ಟಿತ್ತು. ಈ ಹಿನ್ನೆಲೆಯಲ್ಲಿ ಜವಾಹರಲಾಲ್ ನೆಹರು ಉನ್ನತ ವೈಜ್ಞಾನಿಕ ಸಂಶೋಧನಾ ಕೇಂದ್ರದಲ್ಲಿಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಸ್ವರ್ಣ ಪದಕವನ್ನು ಹಸ್ತಾಂತರಿಸಿ ಮಾತನಾಡಿದ ಬಸವರಾಜ ಬೊಮ್ಮಾಯಿ ಅವರು, ವಿಜ್ಞಾನ ಸಂಶೋಧನೆಗೆ ಜೀವನವನ್ನೇ ಮುಡಿಪಾಗಿಟ್ಟಿರುವ ರಾವ್ ಅವರು ಮನುಕುಲದ ದಿಕ್ಕುದೆಸೆಗಳನ್ನೇ ಬದಲಿಸುವಂತಹ ಆವಿಷ್ಕಾರಗಳನ್ನು ಮಾಡಿದ್ದಾರೆ. ಅದರಲ್ಲೂ ಇತ್ತೀಚಿನ ವರ್ಷಗಳಲ್ಲಿ ಅವರು ನ್ಯಾನೋ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರಗಳಲ್ಲಿ ತಮ್ಮ ಮಾರ್ಗದರ್ಶನದಿಂದ ಕರ್ನಾಟಕವನ್ನು ಸಮರ್ಥವಾಗಿ ಮುನ್ನಡೆಸುತ್ತಿದ್ದಾರೆ’ ಎಂದು ಬಣ್ಣಿಸಿದರು.

ವಿಜ್ಞಾನ ಮತ್ತು ತಂತ್ರಜ್ಞಾನಗಳಿಲ್ಲದೆ ಆಧುನಿಕ ಬದುಕನ್ನು ಕಲ್ಪಿಸಿಕೊಳ್ಳುವುದೂ ಸಾಧ್ಯವಿಲ್ಲ. ರಾವ್ ಅವರು 60 ವರ್ಷಗಳಿಗೂ ಹೆಚ್ಚು ಕಾಲದ ತಮ್ಮ ಬದುಕನ್ನು ಸಂಶೋಧನೆಯಲ್ಲೇ ಕಳೆದಿದ್ದಾರೆ. ಇಂತಹ ಸಾಮಾಜಿಕ ಕಳಕಳಿಯುಳ್ಳ ವಿಜ್ಞಾನಿಗಳಿಂದಾಗಿ ಮನುಷ್ಯನ ಬದುಕು ಔನ್ನತ್ಯಕ್ಕೇರಿದೆ’ ಎಂದರು.

ಇದೇ ಸಂದರ್ಭದಲ್ಲಿ ಮಾತನಾಡಿದ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ, ಸಿ.ಎನ್.ಆರ್.ರಾವ್ ನೇತೃತ್ವದಲ್ಲಿ ರಾಜ್ಯ ಸರಕಾರವು ನ್ಯಾನೋ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ದಾಪುಗಾಲಿಡುತ್ತಿದೆ.

ಇತ್ತೀಚೆಗಷ್ಟೇ 12ನೇ ನ್ಯಾನೋ ಬೆಂಗಳೂರು ಸಮಾವೇಶವನ್ನು ಯಶಸ್ವಿಯಾಗಿ ನಡೆಸಲಾಗಿದೆ. ಮುಂದಿನ ದಿನಗಳಲ್ಲಿ ರಾಜ್ಯವು ನ್ಯಾನೋ ತಂತ್ರಜ್ಞಾನದ ರಾಜಧಾನಿಯಾಗಿ ಬೆಳೆಯಲಿದೆ’ ಎಂದರು.

21ನೇ ಶತಮಾನವು ವಿಜ್ಞಾನ ಮತ್ತು ತಂತ್ರಜ್ಞಾನಗಳ ಯುಗವಾಗಿದೆ. ಜತೆಗೆ ಜಗತ್ತಿನಾದ್ಯಂತ ನವೀಕರಿಸಬಹುದಾದ ಮತ್ತು ಪರ್ಯಾಯ ಇಂಧನಮೂಲಗಳಿಗೆ ಬೇಡಿಕೆ ಹೆಚ್ಚುತ್ತಿದೆ. ಇಂತಹ ಕ್ಷೇತ್ರದಲ್ಲಿ ಸಂಶೋಧನೆ ನಡೆಸಿ, ದೈತ್ಯ ಹೆಜ್ಜೆಗಳನ್ನು ಇಟ್ಟಿರುವ ರಾವ್ ಅವರು ನಮ್ಮ ಕಣ್ಣ ಮುಂದಿನ ಜೀವಂತ ದಂತಕತೆಯಾಗಿದ್ದಾರೆ. ಅವರ ಒತ್ತಾಸೆಯಂತೆ, ರಾಜ್ಯದಲ್ಲೂ ಸಂಶೋಧನೆ ಮತ್ತು ನಾವೀನ್ಯತೆಗಳಿಗೆ ಆದ್ಯತೆ ಕೊಡಲಾಗುತ್ತಿದ್ದು, ತಕ್ಕ ನೀತಿಗಳನ್ನು ರೂಪಿಸಲಾಗಿದೆ ಎಂದು ಅವರು ವಿವರಿಸಿದರು.

ಕಾರ್ಯಕ್ರಮದಲ್ಲಿ ಡಾ.ಇಂದುಮತಿ ರಾವ್, ಜೆ.ಎನ್.ಸಿ.ಎ.ಎಸ್.ಆರ್.ನ ಮುಖ್ಯಸ್ಥ ಪ್ರೊ.ಜಿ.ಯು.ಕುಲಕರ್ಣಿ ಸೇರಿದಂತೆ ನೂರಾರು ವಿಜ್ಞಾನಿಗಳು ಉಪಸ್ಥಿತರಿದ್ದರು.

ಕೃಷಿ ಯಂತ್ರೋಪಕರಣ ಸಬ್ಸಿಡಿ ನಿಲ್ಲಿಸಿಲ್ಲ- ಬಿ ಸಿ ಪಾಟೀಲ್

0

ಯಾವುದೇ ಕೃಷಿ ಯಂತ್ರೋಪಕರಣ ಸಬ್ಸಿಡಿ ದರದಲ್ಲಿ ಕೊಡುವುದು ನಿಲ್ಲಿಸಿಲ್ಲ. ಕೊರತೆಯಾಗಿಲ್ಲ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ವಿಧಾನಸಭೆಯಲ್ಲಿ ಸ್ಪಷ್ಪಪಡಿಸಿದರು.

ಶಾಸಕ ಎಚ್. ಡಿ.ರೇವಣ್ಣ ಪ್ರಶ್ನೆ ಗೆ ಉತ್ತರಿದ ಬಿ.ಸಿ.ಪಾಟೀಲ್ ಅವರು, 2018-19 ರಲ್ಲಿ 2001ಕೋಟಿ ಕೇಂದ್ರ ಸರ್ಕಾರ ಹಾಗೂ 199 ಕೋಟಿ ರಾಜ್ಯ ಸರ್ಕಾರದ ಪಾಲು ಸಂಪೂರ್ಣ ಬಿಡುಗಡೆಯಾಗಿದೆ.

2019-20 ರಲ್ಲಿ 412.7, 2020-21 ಕ್ಕೆ 393 ಕೋಟಿ 2021-22, ನೇ ಸಾಲಿನಲ್ಲಿ 404 ಕೋಟಿ ರೂ. ಬಿಡುಗಡೆ ಮಾಡಿದ್ದೇವೆ ಎಂದರು.

ಕೃಷಿ ಹೊಂಡಗಳನ್ನು ಮಿಷನ್ ಮೋಡ್ ಯೋಜನೆ ಅಡಿಯಲ್ಲಿ ನಿರ್ಮಾಣ ಮಾಡುತ್ತಿದ್ದು, 2020 ರಿಂದ ಸ್ಥಗಿತಗೊಳಿಸಲಾಗಿದೆ. ಪ್ರಸ್ತುತ ಕೃಷಿ ಹೊಂಡಾಗಳನ್ನು ನರೆಗಾ ಯೋಜನೆ ಅಡಿಯಲ್ಲಿ ಜಾರಿಗೊಳಿಸಲಾಗುತ್ತಿದೆ.

ದೇಶದಲ್ಲಿ ರಾಜಸ್ತಾನ ಬಿಟ್ಟರೆ ಹೆಚ್ಚು ಒಣಭೂಮಿ ಇರುವ ರಾಜ್ಯ ಈ ವರ್ಷ ಕರ್ನಾಟಕ. ಈ ವರ್ಷ ರಿವಾರ್ಡ್ ನಲ್ಲಿ 640 ಕೋಟಿ ರೂ.ಜಲಾನಯನಕ್ಕೆ ಅನುದಾನ ಬಂದಿದೆ ಎಂದರು.

ಕೃಷಿ ಇಲಾಖೆಯಲ್ಲಿ 9017 ಮಂಜೂರಾದ ಹುದ್ದೆಗಳಿದ್ದು, ಅದರಲ್ಲಿ 4053 ಹುದ್ದೆ ಭರ್ತಿಯಾಗಿವೆ. 4954 ಹುದ್ದೆಗಳು ಖಾಲಿ ಇವೆ. ಖಾಲಿ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲು ಆರ್ಥಿಕ ಇಲಾಖೆಗೆ ಪತ್ರ ಬರೆಯಲಾಗಿದೆ ಎಂದರು.

ಆರ್ಥಿಕ ಇಲಾಖೆಯಿಂದ ಅನುಮತಿ ದೊರೆತ ನಂತರ ನೇಮಕ ಪ್ರಕ್ರಿಯೆ
ಕೈಗೊಳ್ಳಲಾಗುವುದು ಎಂದು ಬಿ.ಸಿ.ಪಾಟೀಲ್ ಉತ್ತರಿಸಿದರು.

ರಷ್ಯ ದಾಳಿಗೆ ಉಕ್ರೇನ್ ರೈಲು ನಿಲ್ದಾಣ ಧ್ವಂಸ

0

ರಷ್ಯಾದ ಪಡೆಗಳು ಮಧ್ಯ ಉಕ್ರೇನ್‌ ನ ದ್ನಿಪ್ರೊಪೆಟ್ರೋವ್ಸ್ಕ್ ಪ್ರದೇಶದಲ್ಲಿನ ರೈಲು ನಿಲ್ದಾಣವನ್ನು ಧ್ವಂಸಗೊಳಿಸಿದೆ. ಒಬ್ಬರು ಸಾವನ್ನಪ್ಪಿದ್ದು, ಮೂವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ನೆಡೆದಿದೆ ಎನ್ನಲಾಗಿದೆ.

ಅಷ್ಟೇ ಅಲ್ಲದೇ, ದಾಳಿಯಲ್ಲಿ ಒಟ್ಟು 15 ಸರಕು ಸಾಗಣೆ ಕಾರ್ಗೋ ಗಳಿಗೆ ಹಾನಿಯಾಗಿದೆ ಎಂದು ಡ್ನಿಪ್ರೊಪೆಟ್ರೋವ್ಸ್ಕ್ ಒಬ್ಲಾಸ್ಟ್ ಗವರ್ನರ್ ವ್ಯಾಲೆಂಟಿನ್ ರೆಜ್ನಿಚೆಂಕೊ ಹಂಚಿಕೊಂಡಿದ್ದಾರೆ ಎಂದು ಉಕ್ರೇನ್‌ನ ಸ್ಥಳೀಯ ಮಾಧ್ಯಮವೊಂದು ವರದಿ ಮಾಡಿದೆ.

ಇದಲ್ಲದೆ, ರಷ್ಯಾದ ಪ್ರಾಕ್ಸಿಗಳು ಮಾರಿಯುಪೋಲ್‌ನಿಂದ ಮಂಗುಶ್ ಪಟ್ಟಣದ ಸಮೀಪವಿರುವ ಸಮ್ಮತಿಸಿದ ಮಾರ್ಗದಲ್ಲಿ ಸ್ಥಳಾಂತರಿಸುವ ಬೆಂಗಾವಲು ಪಡೆಯನ್ನು ವಶಪಡಿಸಿಕೊಂಡಿದ್ದಾರೆ.

ಉತ್ತರ ಕೈವ್‌ನಲ್ಲಿ ಮಾರ್ಚ್ 22 ರಂದು ಮಧ್ಯಾಹ್ನ 1 ಗಂಟೆಗೆ ರಷ್ಯಾದ ಶೆಲ್ ದಾಳಿ ಸಂಭವಿಸಿದೆ. ದಾಳಿಯಲ್ಲಿ ಎರಡು ಕಟ್ಟಡಗಳು ಮತ್ತು ವಾಹನಕ್ಕೆ ಹಾನಿಯಾಗಿದೆ. ಈ ವೇಳೆ ಒಬ್ಬರು ಸಾವನ್ನಪ್ಪಿದ್ದು, ಮೂವರು ಗಾಯಗೊಂಡಿದ್ದಾರೆ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Start‘ to this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಕೋವಿಡ್ ನಿರ್ಬಂಧ ಸಡಿಲಿಕೆ ಎಂದಿನಂತೆ ವಿಮಾನ ಸಂಚಾರ

0

ಕೋವಿಡ್‌ ನಿಯಮಾವಳಿಗಳನ್ನು ನಾಗರಿಕ ವಿಮಾನಯಾನ ಸಚಿವಾಲಯವು ಸಡಿಲಿಸಿದೆ.

ವಿಮಾನಗಳ ಕ್ಯಾಬಿನ್ ಸಿಬ್ಬಂದಿ ಪಿಪಿಇ ಕಿಟ್ ಧರಿಸುವ ಅಗತ್ಯವಿಲ್ಲ. ವೈದ್ಯಕೀಯ ತುರ್ತು ಪರಿಸ್ಥಿತಿಗಾಗಿ ಅಂತರಾಷ್ಟ್ರೀಯ ವಿಮಾನಗಳಲ್ಲಿ ವಿಮಾನಯಾನ ಸಂಸ್ಥೆಗಳು ಮೂರು ಆಸನಗಳನ್ನು ಖಾಲಿ ಇಡಬೇಕಾಗಿಲ್ಲ ಎಂದು ತಿಳಿಸಿದೆ.

ವಿಮಾನಗಳ ಸಂಚಾರ ಕಾರ್ಯಾಚರಣೆಯನ್ನು ಸುಗಮವಾಗಿ ನಡೆಸಲು ಅನುಕೂಲವಾಗುವಂತೆ ಈ ಸಡಿಲಿಕೆಯನ್ನು ಮಾಡಲಾಗಿದೆ ಎಂದು ನಾಗರಿಕ ವಿಮಾನಯಾನ ಸಚಿವಾಲಯ ಮಾರ್ಚ್ 21 ರಂದು ಹೊರಡಿಸಿರುವ ಆದೇಶದಲ್ಲಿ ತಿಳಿಸಿದೆ.

ವಿಮಾನ ನಿಲ್ದಾಣಗಳಲ್ಲಿನ ಭದ್ರತಾ ಸಿಬ್ಬಂದಿ ಪ್ರಯಾಣಿಕರ ತಪಾಸಣೆಯನ್ನು ಪುನರಾರಂಭಿಸಬಹುದು ಎಂದು ಹೇಳಿದೆ.
ಜನವರಿ ನಂತರ ಭಾರತದಲ್ಲಿ ವಿಮಾನಯಾನ ಮಾರುಕಟ್ಟೆಯಲ್ಲಿ ಚೇತರಿಕೆ ಕಂಡುಬಂದಿದೆ.

ಫೆಬ್ರವರಿಯಲ್ಲಿ ದೇಶದಲ್ಲಿ ಸುಮಾರು 76.96 ಲಕ್ಷ ಪ್ರಯಾಣಿಕರು ವಿಮಾನದಲ್ಲಿ ಪ್ರಯಾಣಿಸಿದ್ದಾರೆ. ಜನವರಿಗಿಂತ ಶೇ 20 ರಷ್ಟು ಹೆಚ್ಚು ಮಂದಿ ಪ್ರಯಾಣಿಸಿದ್ದಾರೆ.
ಪ್ರಯಾಣಿಕರಿಗೆ ಹಾಗೂ ಸಿಬ್ಬಂದಿಗೆ ಉಸಿರಾಟದ ಸಮಸ್ಯೆ ಉಂಟಾದಾಗ ಬಳಸಲು ವಿಮಾನಯಾನ ಸಂಸ್ಥೆಗಳು ಕೆಲವು ಹೆಚ್ಚುವರಿ ಪಿಪಿಇ ಕಿಟ್‌ಗಳು, ಸ್ಯಾನಿಟೈಸರ್ ಮತ್ತು N-95 ಮುಖಗವಸುಗಳನ್ನು ಹೊಂದಿರಬೇಕು ಎಂದು ಸಚಿವಾಲಯ ತಿಳಿಸಿದೆ.

2021ರ ಅಕ್ಟೋಬರ್‌ 18 ರಿಂದಲೇ ದೇಶದಲ್ಲಿ ವಿಮಾನ ಸಂಚಾರ ಆರಂಭಗೊಂಡಿದೆ. 2022ರ ಮಾರ್ಚ್‌ 27 ರಿಂದ ಅಂತರರಾಷ್ಟ್ರೀಯ ವಿಮಾನ ಸಂಚಾರ ಪುನರ್‌ ಆರಂಭವಾಗಲಿದೆ ಎನ್ಞಲಾಗಿದೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Start‘ to this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಗಮನಿಸಿ ಮಾರ್ಚ್ ಕೊನೆದಿನಗಳು ಬ್ಯಾಂಕ್ ಬಂದ್ ವ್ಯವಹಾರ ಸ್ಥಗಿತ

0

ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ, ಬ್ಯಾಂಕ್ ನೌಕರರ ಒಕ್ಕೂಟದಿಂದ ಮಾರ್ಚ್ 28 ಮತ್ತು 29ರಂದು ರಾಷ್ಟ್ರವ್ಯಾಪಿ ಬ್ಯಾಂಕ್ ಮುಷ್ಕರಕ್ಕೆ ಕರೆ ನೀಡಲಾಗಿದೆ.

ಈ ಹಿನ್ನಲೆಯಲ್ಲಿ ಮಾರ್ಚ್ 28ರ ಸೋಮವಾರ ಮತ್ತು ಮಾರ್ಚ್ 29ರ ಮಂಗಳವಾರದಂದು ಬ್ಯಾಂಕ್ ವ್ಯವಹಾರದಲ್ಲಿ ಗ್ರಾಹಕರಿಗೆ ವ್ಯತ್ಯಯ ಉಂಟಾಗಲಿದೆ.

ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವಂತ ಭಾರತೀಯ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ದೇಶದ ವಿವಿಧ ಬ್ಯಾಂಕ್ ನೌಕರರ ಸಂಘಟನೆಗಳಿಂದ ಮಾರ್ಚ್ 28, 29ರಂದು ಮುಷ್ಕರಕ್ಕೆ ಕರೆ ನೀಡಲಾಗಿದೆ. ಹೀಗಾಗಿ ಸತತ ನಾಲ್ಕು ದಿನಗಳು ಬ್ಯಾಂಕ್ ವ್ಯವಹಾರದಲ್ಲಿ ವ್ಯತ್ಯಯ ಉಂಟಾಗಲಿದೆ ಎಂದಿದೆ.

ಅಂದಹಾಗೇ ಮಾರ್ಚ್ ಕೊನೆಯ ವಾರದಲ್ಲಿ ಸತತ ನಾಲ್ಕು ದಿನಗಳ ಕಾಲ, ಬ್ಯಾಂಕ್ ನೌಕರರ ಮುಷ್ಕರದಿಂದಾಗಿ ಬ್ಯಾಂಕ್ ಗಳು ಮುಚ್ಚಲ್ಪಡಲಿವೆ.

ವಾರಾಂತ್ಯ ಶನಿವಾರ, ಭಾನುವಾರದ ರಜೆಯಿಂದಾಗಿ ಎರಡು ದಿನ ಬ್ಯಾಂಕ್ ಮುಚ್ಚಿದ್ದರೇ, ಮಾರ್ಚ್ 28, 29ರಂದು ಸೋಮವಾರ ಹಾಗೂ ಮಂಗಳವಾರ ನೌಕರರ ಮುಷ್ಕರದಿಂದಾಗಿ ಬ್ಯಾಂಕ್ ಮುಚ್ಚಿರಲಿವೆ. ಈ ಮೂಲಕ ನಾಲ್ಕು ದಿನ ರಜೆ ಇರಲಿದೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Start‘ to this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಮೇಕೆದಾಟು ಬಗ್ಗೆ ತಮಿಳ್ನಾಡು ಎಷ್ಟೇ ಕ್ಯಾತೆ ಮಾಡಲಿ ನಾವು ಜಾರಿಮಾಡುತ್ತೇವೆ

0

ಮೇಕೆದಾಟು ಯೋಜನೆ ಕುರಿತು ನಮ್ಮ ನಿಲುವು ಬಹಳ ಸ್ಪಷ್ಟವಾಗಿದೆ‌. ಮೇಕೆದಾಟು ಯೋಜನೆಯ ಬಗ್ಗೆ ತಮಿಳುನಾಡು ಎಷ್ಟೇ ಕ್ಯಾತೆ ತೆಗೆದರೂ, ಯೋಜನೆಯನ್ನು ಶೇಕಡಾ ನೂರಕ್ಕೆ ನೂರರಷ್ಟು ಜಾರಿಗೊಳಿಸಲು ನಮ್ಮ ಸರ್ಕಾರ ಸಿದ್ದವಿದೆ. ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ತಿಳಿಸಿದ್ದಾರೆ.
ಕಾಲಕಾಲಕ್ಕೆ ಮಳೆಯಾಗದೇ ಕಾಫಿ ಬೆಳಗಾರರಿಗೆ ಕೂಡ ಪಂಪ್ ಸೆಟ್ ನ ಅವಶ್ಯಕತೆ ಇದ್ದು ವಿದ್ಯುತ್ ವೆಚ್ಚ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಅವರ ಬಹುದಿನದ ಬೇಡಿಕೆಯಂತೆ ಹತ್ತು ಹೆಚ್.ಪಿ ಪಂಪ್ ಸೆಟ್ ಗಳಿಗೆ ಸಬ್ಸಿಡಿ ನೀಡಲಾಗುವುದು ಎಂದು
ವಿಧಾನಸಭೆಯ ಅಧಿವೇಶನದಲ್ಲಿ ಮಾತನಾಡುತ್ತಾ ಈ ವಿಷಯ ಪ್ರಸ್ತಾಪಿಸಿದರು.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Start‘ to this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಜಡ್ಜ್ ಬಗ್ಗೆ ಆಗಿರುವ ಬೆದರಿಕೆ ಇಲ್ಲಿಗೆ ಕೊನೆಯಾಗಬೇಕು- ಜ್ಞಾನೇಂದ್ರ

0

ಹಿಜಾಬ್ ತೀರ್ಪು ನೀಡಿದ್ದ ನ್ಯಾಯಮೂರ್ತಿಗಳಿಗೆ ಬೆದರಿಕೆ ಪ್ರಕರಣಕ್ಕೆ ಸಂಬಂಧಿಸಿ ಬೆಂಗಳೂರಿನಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಸುದ್ದಿಗೋಷ್ಠಿ ನಡೆಸಿದ್ದಾರೆ.

ಈ ವೇಳೆ ಮಾತನಾಡಿರುವ ಅವರು ಹಿಜಾಬ್ ತೀರ್ಪು ನೀಡಿದ್ದ ನ್ಯಾಯಮೂರ್ತಿಗಳಿಗೆ ಬೆದರಿಕೆ ಹಾಕಿದ ಪ್ರಕರಣದಲ್ಲಿ ಕರ್ನಾಟಕದ ಪೊಲೀಸರು ಆರೋಪಿಯನ್ನು ಕರೆತಂದಿದ್ದಾರೆ. ಬಾಡಿ ವಾರೆಂಟ್ ಮೂಲಕ ರಹಮತ್ ಉಲ್ಲಾನನ್ನು ಕರೆತಂದಿದ್ದಾರೆ ಎಂದು ತಿಳಿಸಿದ್ದಾರೆ.

ತಮಿಳುನಾಡು ಪೊಲೀಸರು ಇದಕ್ಕೆ ಸಹಕಾರ ನೀಡಿದ್ದಾರೆ. ಆರೋಪಿಯನ್ನ ನ್ಯಾಯಾಲಯ 8 ದಿನಗಳ ಕಾಲ ಪೊಲೀಸರ ವಶಕ್ಕೆ ನೀಡಿದೆ. ಜಡ್ಜ್ ಬಗ್ಗೆ ಆಗಿರುವ ಬೆದರಿಕೆ ಇಲ್ಲಿಗೆ ಕೊನೆಯಾಗಬೇಕು. ಹಾಗಾಗಿ ಪೊಲೀಸರು ವಿಶೇಷವಾಗಿ ಗಮನಿಸುತ್ತಿದ್ದಾರೆ.

ಬೆಂಗಳೂರು ಕಮಿಷನರ್ ನೇತೃತ್ವದಲ್ಲಿ ವಿಚಾರಣೆ ಆಗ್ತಿದೆ. ನ್ಯಾಯಾಂಗದ ಗೌರವ ಹಾಳು ಮಾಡುವ ಪ್ರಯತ್ನ ಇದು ಎಂದಿದ್ದಾರೆ. ರಹಮತ್ ಉಲ್ಲಾ ಎಂಬ ಓರ್ವನನ್ನು ಕರೆತರಲಾಗಿದೆ ಎಂದರು.

ದೇಶದಲ್ಲಿ ಏನು ಬೇಕಾದರೂ ಮಾಡಬಹುದು ಎಂಬ ಭಾವನೆ ಹೋಗಬೇಕು. ಮತೀಯ ಸಂಘಟನೆ ಭೇದಿಸುವ ಪ್ರಯತ್ನ ಪೊಲೀಸರು ಮಾಡುತ್ತಿದ್ದಾರೆ. ಬೆಂಗಳೂರಿಗೆ ಆರೋಪಿ ಕರೆತಂದ ಪೊಲೀಸರು 37 ನೇ ಎಸಿಎಂಎಂ ಕೋರ್ಟ್ ನ್ಯಾಯಾಧೀಶರ ಮುಂದೆ ಹಾಜರುಪಡಿಸಿ 8 ದಿನ ಪೊಲೀಸ್ ವಶಕ್ಕೆ ಪಡೆದಿದ್ದಾರೆ.

ತಮಿಳುನಾಡು ತಾಬೇದ್ ಜಮಾತ್ ಸಂಘಟನೆಗೆ ಸೇರಿದ್ದ ಆರೋಪಿ ರೆಹಮತ್ ಉಲ್ಲಾ ತಮಿಳುನಾಡಿನ ತಿರುಪತ್ತೂರ್ ಜೈಲಿನಲ್ಲಿದ್ದ. ಕಳೆದ ಗುರುವಾರ ಮಧುರೈನಲ್ಲಿ ನಡೆದ ಭಾಷಣದಲ್ಲಿ ಹಿಜಾಬ್ ತೀರ್ಪು ನೀಡಿದ್ದ ನ್ಯಾಯಮೂರ್ತಿಗಳಿಗೆ ಬೆದರಿಕೆ ಹಾಕಿದ್ದ. ಸದ್ಯ ಬಾಡಿ ವಾರಂಟ್ ಪಡೆದು ಬೆಂಗಳೂರು ಪೊಲೀಸರು ತಮಿಳುನಾಡಿಗೆ ಹೋಗಿ ಆರೋಪಿ ಕರೆತಂದಿದ್ದಾರೆ ಎಂದರು.

ಇನ್ನು ಕಬ್ಬನ್ ಪಾರ್ಕ್ ಎಸಿಪಿ ನೇತೃತ್ವದಲ್ಲಿ ತನಿಖೆ ನಡೆಯುತ್ತಿದೆ. ಆರೋಪಿ ರೆಹಮತ್ ಉಲ್ಲಾ ವಿಚಾರಣೆ ನಡೆಸಲಿದ್ದಾರೆ. ವಕೀಲೆ ಸುಧಾಕಾಟ್ವಾ ನೀಡಿದ್ದ ದೂರಿನ‌ ಅಡಿ ಪೊಲೀಸರು ತನಿಖೆ ನಡೆಸಲಿದ್ದಾರೆ. ತಮಿಳು ಭಾಷೆ ಬಳಸಿ ಅವಾಚ್ಯ ಶಬ್ಧಗಳಿಂದ ನಿಂದಿಸಿರುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ ದೂರು ನೀಡಲಾಗಿತ್ತು. ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎನ್ನಲಾಗಿದೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Start‘ to this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಪಾಕ್ ಪ್ರಧಾನಿ ಇಮ್ರಾನ್ ಗೆ ರಾಜಿನಾಮೆ ಸಲ್ಲಿಸಲು ಸೇನಾಡಳಿತ ಸೂಚನೆ

0

ಪಾಕಿಸ್ತಾನದ ರಾಜಕೀಯ ಅಸ್ಥಿರತೆ ಈಗಾಗಲೇ ಮಾಧ್ಯಮಗಳ ಮೂಲಕ ಜಗತ್ತಿಗೆ ಗೊತ್ತಾಗಿದೆ.
ಈ ಹಿಂದೆ ಪ್ರಧಾನಿ ಇಮ್ರಾನ್ ಖಾನ್ ಅವರ ವಿರುದ್ಧ ಅವಿಶ್ವಾಸ ಗೊತ್ತುವಳಿ ಮಂಡನೆ ಬಗ್ಗೆ ಬಂದ ವರದಿಗಳನ್ನ ಸ್ಮರಿಸಹುದಾಗಿದೆ.
ಈಗ ತಾಜಾ ಸುದ್ದಿ ಹೊರಬಿದ್ದಿದೆ.
ಪಾಕಿಸ್ತಾನದ ಸೇನಾಡಳಿತವು ಪ್ರಧಾನಿ ಇಮ್ರಾನ್ ಅವರಿಗೆ ರಾಜಿನಾಮೆ ನೀಡಲು ಸೂಚನೆ ಕೊಟ್ಟಿದೆ ಎಂಬ ಮಾಹಿತಿ ಈಗ ಮಾಧ್ಯಮಗಳಲ್ಲಿ ಹರಿದು ಬರುತ್ತಿದೆ.

ಈಗಾಗಲೇ ಮಾರ್ಚ್ 8 ರಂದು ಪಿಪಿಪಿಯ ಒಂದು ನೂರು ಶಾಸಕರು ಇಮ್ರಾನ್ ಸರ್ಕಾರದ ವಿರುದ್ಧ
ಅವಿಶ್ವಾಸ ಗೊತ್ತುವಳಿ
ಮಂಡಿಸಿದ್ದರು.
ಇದಕ್ಕೆ ಬೆಂಬಲವಾಗಿ ಇಮ್ರಾನ್ ಅವರ ಪಕ್ಷದ ( ತೆಹ್ರಿಕ್- ಎ- ಇನ್ಸಾಫ್) ಸಂಸ್ಥಾಪಕ
ನಜೀಬ್ ಹರೂನ್ ಪ್ರಧಾನಿಗಳಿಗೆ ರಾಜಿನಾಮೆ ಸಲ್ಲಿಕೆ
ಸೂಕ್ತ ಎಂದೂ ಹೇಳಿದ್ದರು.
ಪಾಕಿಸ್ತಾನದ ಮಾಧ್ಯಮಗಳ ಪೈಕಿ ಕ್ಯಾಪಿಟಲ್ ಟೀವಿ ವರದಿಯ ಪ್ರಕಾರ ಈ ಸಮಾಚಾರ ಜಗತ್ತಿಗೆ
ದೊರಕಿದೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Start‘ to this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಕೋವಿಡ್ ಪರಿಹಾರ ಕೋರಿಕೆಗೆಗಡುವು ಸಾಲದು- ಸುಪ್ರೀಂ ಅನಿಸಿಕೆ

0

ಕೋವಿಡ್ ನಿಂದ ಮೃತಪಟ್ಟವರ ಕುಟುಂಬಸ್ಥರಿಗೆ ಪರಿಹಾರಧನ ನೀಡಲು ಸರ್ಕಾರದ ಯೋಜನೆಯಿದೆ. ಈ ಪರಿಹಾರ ಧನ ಪಡೆಯಲು ನಾಲ್ಕುವಾರಗಳ ಗಡುವನ್ನ ವಿಧಿಸಲಾಗಿದೆ.

ಈಗಾಗಲೇ ಜಾರಿಯಲ್ಲಿರುವಂತೆ
ಎಕ್ಸ್ ಗ್ರೇಷಿಯ ಪರಿಹಾರಕ್ಕಾಗಿ
ಅರ್ಹವ್ಯಕ್ತಿಗಳಿಗೆ ಅರವತ್ತು ದಿನ ಅವಧಿ ನೀಡಲಾಗುತ್ತಿದೆ.ಕುಟುಂಬದ ವಾರದುದಾರರಿಗೆ ತೊಂಭತ್ತು ದಿನಗಳ ಕಾಲಾವಕಾಶ ಇದೆ.ಆದ್ದರಿಂದ ಕೋವಿಡ್ ನಿಂದ ಮೃತಪಟ್ಟವರ ಕುಟುಂಬದವರಿಗೆ
ಈಗ ನೀಡಿರುವ ನಾಲ್ಕುವಾರಗಳು
ಸಮಂಜಸವೆನಿಸದು. ಏಕೆಂದರೆ
ಕುಟುಂಬದ ಸದಸ್ಯರ ಅಗಲಿಕೆಯ ದುಃಖದಲ್ಲಿರುವವರಿಗೆ ಈ ನಾಲ್ಕು ವಾರ ಗಡುವು ಸಾಲದು ಎಂದು
ಸುಪ್ರೀಂ ಕೋರ್ಟ್ ನ ನ್ಯಾಯಮೂರ್ತಿಗಳಾದ ಎಂ.ಆರ್.ಶಾ ಮತ್ತು ಬಿ.ವಿ.ನಾಗರತ್ನಾ ಅವರಿದ್ದ ಪೀಠವು ಈ ಅಭಿಪ್ರಾಯ ನೀಡಿದೆ.
ಈ ಸೌಲಭ್ಯವನ್ನು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರವು
ವಿಪತ್ತು ನಿರ್ವಹಣಾ ಕಾಯಿದೆ2005
ಅಡಿ ನೀಡಲು‌ ಅಧಿಕಾರವಿದೆ ಎಂದು ಸುಪ್ರೀಂ ಕೋರ್ಟ್ ಪೀಠವು
ಅಧಿಕಾರಿಗಳಿಗೆ ಸೂಚನೆ ನೀಡಿದೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

Latest News on WhatsApp

Send a Whatsapp message Start‘ to this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

ಕಾಶ್ಮೀರ್ ಫೈಲ್ಸ್ ಬಗ್ಗೆ ಫರೂಕ್ ಮತ್ತು ಒಮರ್ ಪ್ರತಿಕ್ರಿಯೆ

0

ದಿ ಕಾಶ್ಮೀರ್​ ಫೈಲ್ಸ್ʼ​ ಸಿನಿಮಾದ ಬಳಿಕ ಅನೇಕರ ಕೆಂಗಣ್ಣಿಗೆ ಗುರಿಯಾಗಿರುವ ಮಾಜಿ ಸಿಎಂ ಫಾರೂಕ್​ ಅಬ್ದುಲ್ಲಾ ತಮ್ಮ ಮೇಲೆ ಇರುವ ಆರೋಪಗಳ ಕುರಿತಂತೆ ಮೌನ ಮುರಿದಿದ್ದಾರೆ.

1990ರ ದಶಕದಲ್ಲಿ ಕಾಶ್ಮೀರಿ ಪಂಡಿತರ ಪಲಾಯನದ ವಿಚಾರದಲ್ಲಿ ಕೇಂದ್ರ ಸರ್ಕಾರ ಆಯೋಗ ರಚಿಸಬೇಕೆಂದು ಆಗ್ರಹಿಸಿದ್ದಾರೆ.

ಕಾಶ್ಮೀರಿ ಪಂಡಿತರ ವಿಚಾರದಲ್ಲಿ ಸತ್ಯಾಂಶ ತಿಳಿದುಕೊಳ್ಳಬೇಕು ಎಂದಿದ್ದರೆ ನೀವು ಆಯೋಗವನ್ನು ರಚಿಸಿ. ಆಯೋಗದ ಮೂಲಕ ತನಿಖೆ ನಡೆಸಿ ನಿಜವಾದ ತಪ್ಪಿತಸ್ಥರು ಯಾರೆಂದು ತಿಳಿದುಕೊಳ್ಳಿ. ನೀವು ಸತ್ಯವನ್ನು ತಿಳಿದುಕೊಳ್ಳಲು ಬಯಸುವವರೇ ಆಗಿದ್ದರೆ ನೀವು ಆಯೋಗವನ್ನು ರಚಿಸಲೇಬೇಕು ಎಂದಿದ್ದಾರೆ.

ಕಾಶ್ಮೀರಿ ಪಂಡಿತರ ಪಲಾಯನಕ್ಕೆ ನನ್ನ ತಂದೆ ಹಾಗೂ ಜಮ್ಮು ಕಾಶ್ಮೀರದ ಮಾಜಿ ಸಿಎಂ ಫಾರೂಕ್​ ಅಬ್ದುಲ್ಲಾ ಕಾರಣರಲ್ಲ ಎಂದು ಹೇಳಿರುವ ಜಮ್ಮು ಕಾಶ್ಮೀರದ ಮಾಜಿ ಸಿಎಂ ಒಮರ್​ ಅಬ್ದುಲ್ಲಾ ಹೇಳಿಕೆಯ ವಿರುದ್ಧ ಬಿಜೆಪಿ ಐಟಿ ಸೆಲ್​ ಮುಖ್ಯಸ್ಥ ಅಮಿತ್​ ಮಾಳವಿಯಾ ನಿನ್ನೆ ಪ್ರತಿಭಟಿಸಿದ್ದಾರೆ.