Sunday, August 9, 2026
Sunday, August 9, 2026
Home Blog Page 165

Klive Special Article ಪರೀಕ್ಷೆಯ ಸಮಯ ಪೋಷಕರು ಮತ್ತು ವಿದ್ಯಾರ್ಥಿಗಳಿಗೆ ಒಂದಿಷ್ಟು ಮಾಹಿತಿ- ತಾಜುದ್ದೀನ್ ಖಾನ್

0

Klive Special Article ಇನ್ನೇನು ಕೆಲವೇ ದಿನಗಳಲ್ಲಿ SSLC ಪರೀಕ್ಷೆಗಳು ಆರಂಭವಾಗಲಿವೆ. ಪ್ರತಿಯೊಬ್ಬ ವಿದ್ಯಾರ್ಥಿಯ ವಿದ್ಯಾಭ್ಯಾಸದ ಪ್ರಯಾಣದಲ್ಲಿ SSLC ಪರೀಕ್ಷೆ ಒಂದು ಮಹತ್ವದ ಹಂತವಾಗಿದೆ. ಇದು ಕೇವಲ ಜ್ಞಾನವನ್ನು ಪರೀಕ್ಷಿಸುವುದಷ್ಟೇ ಅಲ್ಲ, ಆತ್ಮವಿಶ್ವಾಸ, ತಯಾರಿ ಮತ್ತು ದೃಢನಿಶ್ಚಯವನ್ನು ಪರೀಕ್ಷಿಸುವ ಪ್ರಮುಖ ಅವಕಾಶವೂ ಆಗಿದೆ.

ಪರೀಕ್ಷೆ ಹತ್ತಿರವಾಗುತ್ತಿದ್ದಂತೆ ವಿದ್ಯಾರ್ಥಿಗಳ ಜೊತೆಗೆ ಪೋಷಕರಲ್ಲಿಯೂ ಆತಂಕ ಹೆಚ್ಚಾಗುವುದು ಸಹಜ. ಒಂದು ವರ್ಷದ ಕಾಲ ನಿರಂತರವಾಗಿ ಪರಿಶ್ರಮ ಪಟ್ಟಿರುವ ತಮ್ಮ ಮಕ್ಕಳಿಗೆ ಉತ್ತಮ ಫಲಿತಾಂಶ ಬರಬೇಕು ಎಂಬ ಆಶೆಯು ಪ್ರತಿಯೊಬ್ಬ ಪೋಷಕರಲ್ಲಿಯೂ ಇರುತ್ತದೆ. ವಿದ್ಯಾರ್ಥಿಗಳಿಗೂ ಕೂಡ ಎಲ್ಲವನ್ನೂ ಓದಿದ್ದೇನೆ ಎಂಬ ನಂಬಿಕೆ ಇದ್ದರೂ, ಪರೀಕ್ಷೆಯ ಸಂದರ್ಭದಲ್ಲಿ ಮರೆತುಹೋಗಬಹುದೇ ಎಂಬ ಭಯ ಉಂಟಾಗುವುದು ಸಹಜ. ಆದ್ದರಿಂದ ಈ ಸಮಯದಲ್ಲಿ ಸರಿಯಾದ ತಯಾರಿ ಮತ್ತು ಆತ್ಮಸ್ಥೈರ್ಯ ಬಹಳ ಮುಖ್ಯ.

ಪರೀಕ್ಷೆಗೆ ತಯಾರಾಗುವ ಕೆಲವು ಮುಖ್ಯ ಸಲಹೆಗಳು

ಪರೀಕ್ಷೆಗೆ ಇನ್ನು ಕೆಲವೇ ದಿನಗಳು ಉಳಿದಿರುವ ಕಾರಣ ವಿದ್ಯಾರ್ಥಿಗಳು ತಮ್ಮ ತಯಾರಿಯನ್ನು ಸರಿಯಾದ ರೀತಿಯಲ್ಲಿ ಮುಂದುವರಿಸಬೇಕು.

  1. ಸರಿಯಾದ ಯೋಜನೆ:
    ವಿದ್ಯಾರ್ಥಿಗಳು ಓದಿನ ಕುರಿತು ಸ್ಪಷ್ಟವಾದ ಯೋಜನೆಯನ್ನು ರೂಪಿಸಬೇಕು. ಯಾವ ವಿಷಯದಲ್ಲಿ ಅಂಕಗಳು ಕಡಿಮೆ ಬರುತ್ತಿವೆ ಎಂಬುದನ್ನು ಗಮನಿಸಿ ಆ ವಿಷಯಕ್ಕೆ ಹೆಚ್ಚು ಸಮಯ ಮೀಸಲಿಡಬೇಕು.
  2. ವಿಷಯವಾರು ಸಮಯ ನಿರ್ಧಾರ:
    ಪ್ರತಿ ವಿಷಯಕ್ಕೂ ನಿರ್ದಿಷ್ಟ ಸಮಯವನ್ನು ನಿಗದಿಪಡಿಸಿ ನಿಯಮಿತವಾಗಿ ಅಧ್ಯಯನ ಮಾಡುವುದು ಉತ್ತಮ.
  3. ಮೊಬೈಲ್ ಮತ್ತು ಸೋಶಿಯಲ್ ಮೀಡಿಯಾ ಬಳಕೆ ಕಡಿಮೆ:
    ಪರೀಕ್ಷೆ ಸಮಯದಲ್ಲಿ ಮೊಬೈಲ್, ವಾಟ್ಸಾಪ್, ಇನ್ಸ್ಟಾಗ್ರಾಮ್, ಫೇಸ್ಬುಕ್, ಯೂಟ್ಯೂಬ್ ಮುಂತಾದ ಸೋಶಿಯಲ್ ಮೀಡಿಯಾ ಬಳಕೆಯನ್ನು ಸಾಧ್ಯವಾದಷ್ಟು ಕಡಿಮೆ ಮಾಡಬೇಕು. ಅನಗತ್ಯ ಸಮಯ ವ್ಯರ್ಥವಾಗುವುದನ್ನು ತಪ್ಪಿಸಬೇಕು.
  4. ಧ್ಯಾನ ಮತ್ತು ಮನಶಾಂತಿ:
    ನಿರಂತರ ಅಧ್ಯಯನದಿಂದ ಮಾನಸಿಕ ಒತ್ತಡ ಹೆಚ್ಚಾಗಬಹುದು. ಆದ್ದರಿಂದ ಪ್ರತಿದಿನ ಸ್ವಲ್ಪ ಸಮಯ ಧ್ಯಾನ ಅಥವಾ ಪ್ರಾಣಾಯಾಮ ಮಾಡುವುದರಿಂದ ಏಕಾಗ್ರತೆ ಹೆಚ್ಚುತ್ತದೆ.
  5. ಕೀ ನೋಟ್ಸ್ ತಯಾರಿ:
    ಪ್ರತಿ ವಿಷಯದಲ್ಲಿರುವ ಪ್ರಮುಖ ಅಂಶಗಳು, ಸೂತ್ರಗಳು, ಹೆಸರುಗಳು ಮತ್ತು ದಿನಾಂಕಗಳನ್ನು ಕೀ ನೋಟ್ಸ್ ರೂಪದಲ್ಲಿ ಬರೆಯುವುದರಿಂದ ಅವುಗಳನ್ನು ಸುಲಭವಾಗಿ ನೆನಪಿನಲ್ಲಿ ಇಟ್ಟುಕೊಳ್ಳಬಹುದು.
  6. ಕಥೆಯ ರೂಪದಲ್ಲಿ ಮನನ:
    ಓದಿದ ವಿಷಯಗಳನ್ನು ಕಥೆಯ ರೂಪದಲ್ಲಿ ಮನಸ್ಸಿನಲ್ಲಿ ಮನನ ಮಾಡುವುದರಿಂದ ನೆನಪಿನಲ್ಲಿ ಉಳಿಯಲು ಸಹಾಯವಾಗುತ್ತದೆ.
  7. ಅಧ್ಯಯನಕ್ಕೆ ಸೂಕ್ತ ಸ್ಥಳ:
    ಮನೆಯಲ್ಲಿ ಶಾಂತವಾದ ಸ್ಥಳವನ್ನು ಆಯ್ಕೆ ಮಾಡಿಕೊಂಡು ಅಧ್ಯಯನ ಮಾಡಬೇಕು. ಟಿವಿ, ಮೊಬೈಲ್ ಮತ್ತು ಇತರೆ ಮನೋರಂಜನಾ ಸಾಧನಗಳಿಂದ ದೂರವಿರಬೇಕು.
  8. ನಿರಂತರ ಪುನರಾವರ್ತನೆ:
    ಪ್ರತಿ ದಿನ ಓದಿದ ವಿಷಯಗಳನ್ನು ಪುನರಾವರ್ತನೆ ಮಾಡುವುದರಿಂದ ವಿಷಯ ಸ್ಪಷ್ಟವಾಗುತ್ತದೆ.
  9. ಮಧ್ಯೆ ಚಿಕ್ಕ ವಿಶ್ರಾಂತಿ:
    ಒಂದು ಗಂಟೆ ಓದಿದ ನಂತರ ಕೆಲವು ನಿಮಿಷಗಳ ವಿರಾಮ ತೆಗೆದುಕೊಳ್ಳುವುದು ಉತ್ತಮ. ಸ್ವಲ್ಪ ನಡಿಗೆ ಮಾಡಿದರೆ ಮನಸ್ಸು ಚೈತನ್ಯವಾಗುತ್ತದೆ.
  10. ಹಿಂದಿನ ಪ್ರಶ್ನೆಪತ್ರಿಕೆ ಅಭ್ಯಾಸ:
    ಹಿಂದಿನ 5 ರಿಂದ 10 ವರ್ಷಗಳ ಪ್ರಶ್ನೆಪತ್ರಿಕೆಗಳನ್ನು ಅಭ್ಯಾಸ ಮಾಡುವುದರಿಂದ ಆತ್ಮವಿಶ್ವಾಸ ಹೆಚ್ಚುತ್ತದೆ.
  11. ಸಮರ್ಪಕ ನಿದ್ರೆ:
    ಪರೀಕ್ಷೆ ಸಮಯದಲ್ಲಿ ಅನೇಕ ವಿದ್ಯಾರ್ಥಿಗಳು ಕಡಿಮೆ ನಿದ್ರೆ ಮಾಡುತ್ತಾರೆ. ಆದರೆ ಪ್ರತಿದಿನ ಕನಿಷ್ಠ 6 ರಿಂದ 8 ಗಂಟೆಗಳ ನಿದ್ರೆ ಅಗತ್ಯ.
  12. ಆರೋಗ್ಯಕರ ಆಹಾರ:
    ಹೊರಗಿನ ಜಂಕ್ ಫುಡ್ ತಿನ್ನುವುದನ್ನು ತಪ್ಪಿಸಿ ಮನೆಯಲ್ಲೇ ಸಿದ್ಧಪಡಿಸಿದ ಆರೋಗ್ಯಕರ ಆಹಾರವನ್ನು ಸೇವಿಸಬೇಕು.
  13. ಏಕಾಗ್ರತೆ ಅತ್ಯಂತ ಮುಖ್ಯ:
    ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಪಡೆಯಲು ಮನಸ್ಸಿನ ಏಕಾಗ್ರತೆ ಬಹಳ ಮುಖ್ಯ.

ಪರೀಕ್ಷೆ ದಿನದ ತಯಾರಿ

ಪರೀಕ್ಷೆ ದಿನ ವಿದ್ಯಾರ್ಥಿಗಳು ಮುಂಚಿತವಾಗಿ ಹಾಲ್ ಟಿಕೆಟ್, ಪೆನ್ನುಗಳು, ನೀರಿನ ಬಾಟಲ್ ಹಾಗೂ ಅಗತ್ಯ ವಸ್ತುಗಳನ್ನು ಸಿದ್ಧಪಡಿಸಿಕೊಳ್ಳಬೇಕು. ಇದರಿಂದ ಅನಗತ್ಯ ಆತಂಕ ತಪ್ಪುತ್ತದೆ.

ಪರೀಕ್ಷೆ ಸಂದರ್ಭದಲ್ಲಿ ಇತರ ವಿದ್ಯಾರ್ಥಿಗಳೊಂದಿಗೆ ಹೋಲಿಕೆ ಮಾಡಿಕೊಳ್ಳುವುದು ಸರಿಯಲ್ಲ. ಪ್ರತಿಯೊಬ್ಬ ವಿದ್ಯಾರ್ಥಿಯ ಸಾಮರ್ಥ್ಯ ವಿಭಿನ್ನವಾಗಿರುತ್ತದೆ. ತಾವು ಓದಿದ ವಿಷಯಗಳನ್ನು ಆತ್ಮವಿಶ್ವಾಸದಿಂದ ಬರೆಯುವುದೇ ಮುಖ್ಯ.

ಒಂದು ವಿಷಯದ ಪರೀಕ್ಷೆ ಮುಗಿದ ನಂತರ ಅದರ ಬಗ್ಗೆ ಹೆಚ್ಚು ಚರ್ಚೆ ಮಾಡುವುದಕ್ಕಿಂತ ಮುಂದಿನ ಪರೀಕ್ಷೆಗೆ ತಯಾರಿ ನಡೆಸುವುದು ಉತ್ತಮ.

ಪೋಷಕರ ಪಾತ್ರ

Klive Special Article ಪರೀಕ್ಷೆಯ ಸಮಯದಲ್ಲಿ ಪೋಷಕರ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಮಕ್ಕಳು ಒತ್ತಡಕ್ಕೆ ಒಳಗಾಗದಂತೆ ಅವರಿಗೆ ಧೈರ್ಯ ಮತ್ತು ಪ್ರೋತ್ಸಾಹ ನೀಡಬೇಕು. ಮನೆಯಲ್ಲಿ ಶಾಂತವಾದ ವಾತಾವರಣವನ್ನು ನಿರ್ಮಿಸಿ ಮಕ್ಕಳ ಅಧ್ಯಯನಕ್ಕೆ ಸಹಕಾರ ನೀಡಬೇಕು.

ಮಕ್ಕಳ ಮೇಲೆ ಅನಗತ್ಯ ಒತ್ತಡ ಹಾಕದೆ, ಅವರು ಓದಿದ ವಿಷಯಗಳನ್ನು ಧೈರ್ಯದಿಂದ ಬರೆಯಲು ಉತ್ತೇಜಿಸುವುದು ಅತ್ಯಂತ ಮುಖ್ಯ.

ಪರೀಕ್ಷೆಯನ್ನು ಭಯದಿಂದ ನೋಡುವುದಕ್ಕಿಂತ ತಮ್ಮ ಪರಿಶ್ರಮವನ್ನು ತೋರಿಸಲು ಸಿಕ್ಕಿರುವ ಅವಕಾಶ ಎಂದು ನೋಡಬೇಕು. ಆತ್ಮವಿಶ್ವಾಸ ಮತ್ತು ನಿರಂತರ ಪರಿಶ್ರಮ ಇದ್ದರೆ ಪ್ರತಿಯೊಬ್ಬ ವಿದ್ಯಾರ್ಥಿಯೂ ಉತ್ತಮ ಫಲಿತಾಂಶ ಪಡೆದು ಉಜ್ವಲ ಭವಿಷ್ಯದತ್ತ ಸಾಗಬಹುದು.

ಪರೀಕ್ಷೆ ಬರೆಯುತ್ತಿರುವ ಎಲ್ಲಾ ವಿದ್ಯಾರ್ಥಿಗಳಿಗೆ ಹಾರ್ದಿಕ ಶುಭಾಶಯಗಳು.

ತಾಜುದ್ದೀನ್ ಖಾನ್
ಅಧ್ಯಕ್ಷರು
ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ(ನ್ಯಾಯಪೀಠ)
ಶಿವಮೊಗ್ಗ ಜಿಲ್ಲೆ
9538832526

S. Madhu Bangarappa ಜಿಲ್ಲಾ ಉಸ್ತುವಾರಿ ಸಚಿವರ ಪ್ರವಾಸ ಮಾಹಿತಿ

0

S. Madhu Bangarappa ಶಿವಮೊಗ್ಗ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಮಧು ಬಂಗಾರಪ್ಪ ಇವರು ಮಾ.14 ಮತ್ತು 15 ರಂದು ಎರಡು ದಿನಗಳ ಕಾಲ ಜಿಲ್ಲಾ ಪ್ರವಾಸ ಕೈಗೊಳ್ಳಲಿದ್ದಾರೆ.

ಮಾ.14 ರ ಶನಿವಾರ ಬೆಳಿಗ್ಗೆ 9.30 ಗಂಟೆಗೆ ಜಿಲ್ಲೆಯ ಹೊಳೆಹೊನ್ನೂರು ತಾಲ್ಲೂಕಿನಲ್ಲಿ ಇಂದಿರಾ ಕ್ಯಾಂಟಿನ್ ಉದ್ಘಾಟನೆ ನೆರವೇರಿಸುವರು. ಬೆ 11.30 ಕ್ಕೆ ಜಿಲ್ಲೆಯ ಮಹಾನಗರಪಾಲಿಕೆ ವ್ಯಾಪ್ತಿಯ ಆಲ್ಕೋಳ ವೃತ್ತದಿಂದ ಡಿ.ವಿ.ಜಿ ವೃತ್ತದವರೆಗೆ 100 ಅಡಿ ದ್ವಿಪಥ ರಸ್ತೆಗೆ ಮಾಜಿ ಮುಖ್ಯಮಂತ್ರಿ ಶ್ರೀ ಎಸ್. ಬಂಗಾರಪ್ಪ ರಸ್ತೆ ಎಂಬ ನಾಮ ಫಲಕ ಉದ್ಘಾಟನೆ ಮತ್ತು ಗೋಪಾಲಗೌಡ ಬಡಾವಣೆಯಲ್ಲಿ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಯಿಂದ 290 ಮನೆಗಳಿಗೆ ಹಕ್ಕುಪತ್ರ ವಿತರಣೆ ಮತ್ತು ಆಶ್ರಯ ಯೋಜನೆ ಅಡಿಯಲ್ಲಿ ಆಯ್ಕೆಯಾಗಿರುವ ಫಲಾನುಭವಿಗಳಿಗೆ ಮನೆಗಳ ಕೀ ಹಸ್ತಾಂತರ ಕಾರ್ಯಕ್ರಮ ಕೈಗೊಂಡು ಮಧ್ಯಾಹ್ನ 1.30 ಕ್ಕೆ ಬೊಮ್ಮನಕಟ್ಟೆಯಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಮೆಟ್ರಿಕ್ ನಂತರದ ಬಾಲಕರ ಮತ್ತು ಬಾಲಕಿಯರ ವಿದ್ಯಾರ್ಥಿ ನಿಲಯ ಉದ್ಘಾಟನೆ ಮಾಡಲಿದ್ದಾರೆ ಮತ್ತು ಸಂಜೆ 4.00 ಗಂಟೆಗೆ ಸುವರ್ಣ ಸಂಸ್ಕೃತಿ ಭವನ ಆವರಣ, ರಂಗಾಯಣ ಇಲ್ಲಿ ನೂತನವಾಗಿ ನಿರ್ಮಾಣವಾಗಿರುವ ‘ಪಿ.ಲಂಕೇಶ್’ ಬಯಲು ರಂಗಮಂದಿರ ಉದ್ಘಾಟನೆ ಹಾಗೂ ಸಂಜೆ 5.00 ಗಂಟೆಗೆ ಚಾಲುಕ್ಯನಗರದ ಸಾಹಿತ್ಯಗ್ರಾಮದಲ್ಲಿ ಜಿಲ್ಲೆಯ ಇಪ್ಪತ್ತನೇ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಳ್ಳುವರು.

ಮಾರ್ಚ್15 ರ ಭಾನುವಾರದಂದು ಬೆಳಗ್ಗೆ 9.30 ಕ್ಕೆ ಸೊರಬ ತಾಲ್ಲೂಕಿನ ಆನವಟ್ಟಿ ಇಲ್ಲಿ ಇಂದಿರಾ ಕ್ಯಾಂಟಿನ್ ಉದ್ಘಾಟನೆ ನೆರವೇರಿಸುವರು. ಬೆಳಿಗ್ಗೆ 10.30 ಕ್ಕೆ ಸೊರಬ ತಾಲ್ಲೂಕಿನ ಚಿತ್ರಟ್ಟೆಹಳ್ಳಿಯಲ್ಲಿ ಕರ್ನಾಟಕ ರಾಜ್ಯ ಖನಿಜಗಳ ನಿಯಮಿತದ ಸಿ.ಎಸ್.ಆರ್ ಅನುದಾನದ ಅಡಿಯಲ್ಲಿ ನೂತನವಾಗಿ ನಿರ್ಮಿಸಲಾಗುತ್ತಿರುವ ಗ್ರಾಮೀಣ ಬಸ್ ನಿಲ್ದಾಣ ಕಾಮಗಾರಿಯ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.

S. Madhu Bangarappa ಬೆಳಿಗ್ಗೆ 11.00 ಕ್ಕೆ ಸೊರಬದ ಡಾ.ಬಿ.ಆರ್.ಅಂಬೇಡ್ಕರ್ ಮೆಟ್ರಿಕ್ ಪೂರ್ವ ಬಾಲಕಿಯರ ವಿದ್ಯಾರ್ಥಿನಿಲಯದ ಕಟ್ಟಡ ಗುದ್ದಲಿ ಪೂಜೆ ಹಾಗೂ ಅಕ್ಷರದಾಸೋಹ ನಿವೃತ್ತ ಅಡುಗೆ ಸಿಬ್ಬಂದಿಗಳಿಗೆ ಸನ್ಮಾನ ಮತ್ತು ಅಭಿನಂದನಾ ಕಾರ್ಯಕ್ರಮ ಸಮಾರಂಭ ಹಾಗೂ 2025-26ನೇ ಸಾಲಿನ ಮೀನುಗಾರಿಕೆ ಇಲಾಖೆಯ 30 ಫಲಾನುಭವಿಗಳಿಗೆ ಮೀನುಗಾರಿಕೆ ಕಿಟ್ ವಿತರಣೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು.

ಮಧ್ಯಾಹ್ನ 12 ಗಂಟೆಗೆ ಶಿಕಾರಿಪುರದಲ್ಲಿ ಇಂದಿರಾ ಕ್ಯಾಂಟಿನ್ ಉದ್ಘಾಟನೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು.

ಎಲ್ಲಾ ಯುವಜನರೂ ಸ್ವಪ್ರೇರಣೆಯಿಂದ ರಕ್ತನೀಡಿ, ಪವಿತ್ರ ರಕ್ತದಾನಿಗಳಾಗಿ- ಡಿ.ಆರ್.ಸಂದೀಪ್.

0

ರಕ್ತದಾನ ಶ್ರೇಷ್ಠದಾನ ರಕ್ತದಾನ ಪವಿತ್ರದಾನ ರಕ್ತದಾನಕ್ಕಿಂತ ಬೇರೆ ದಾನ ಮತ್ತೊಂದಿಲ್ಲ ಎಂದು ಶಂಕರ್ ನಾರಾಯಣ ಕನ್ಸ್ಟ್ರಕ್ಷನ್ ಪ್ರೈವೇಟ್ ಲಿಮಿಟೆಡ್ ನ ಅಭಿಯಂತರರಾದ ಸಂದೀಪ್ ಡಿಆರ್ ನುಡಿದರು. ಅವರು ಜೋಗದ ಶಂಕರ್ ನಾರಾಯಣ ಕನ್ಸ್ಟ್ರಕ್ಷನ್ ಪ್ರವೇಟ್ ಲಿಮಿಟೆಡ್ ಶಿವಮೊಗ್ಗ ರೆಡ್ ರಕ್ತ ಕೇಂದ್ರದ ಸಹಯೋಗದಲ್ಲಿ ಆಯೋಜಿಸಲಾಗಿದ್ದ ರಕ್ತದಾನ ಶಿಬಿರದಲ್ಲಿ ಚಾಲನೆ ನೀಡಿ ಮಾತನಾಡಿದರು. ಇಂದು ಸಕಾಲದಲ್ಲಿ ರಕ್ತ ಸಿಗದೇ ಸಾಕಷ್ಟು ಜನ ಪ್ರಾಣವನ್ನು ಕಳೆದುಕೊಳ್ಳುತ್ತಿದ್ದಾರೆ. ಈ ನಿಟ್ಟಿನಲ್ಲಿ ಎಲ್ಲಾ ಯುವ ಯುವತಿಯರು ಮುಂದೆ ಬಂದು ರಕ್ತದಾನ ಮಾಡಿ ಪವಿತ್ರ ರಕ್ತದಾನಿಗಳಾಗಬೇಕೆಂದು ಕರೆ ನೀಡಿದರು 120 ಬಾರಿ ರಕ್ತದಾನ ಮಾಡಿ ರಾಜ್ಯ ಪ್ರಶಸ್ತಿ ಪುರಸ್ಕೃತರಾದ ಧರಣೇಂದ್ರ ದಿನಕರ್ ಅವರು ರಕ್ತದಾನದಿಂದ ದೀರ್ಘಾಯುಷ್ಯವುಳ್ಳವರಾಗಬಹುದು ಹಾಗೂ ಸದಾ ಆರೋಗ್ಯವಂತರಾಗಿ ಬದುಕಬಹುದು ಹಾಗೆ ಪ್ರತಿನಿತ್ಯ ನಾವು ಲವಲವಿಕೆಯಿಂದ ಇರಲು ಸಾಧ್ಯ ಎಂದು ತಿಳಿಸಿದರು. ಇದೇ ಸಂದರ್ಭದಲ್ಲಿ ಕಾರ್ಯ ನಿರ್ವಾಹಕ ಅಭಿಯಂತರರಾದ ಉಮಾಪತಿ ಅವರು ಮಾತನಾಡುತ್ತಾ ಇಂದು ಮೂಢನಂಬಿಕೆಯಿಂದ ಸಾಕಷ್ಟು ಜನ ರಕ್ತದಾನ ಮಾಡಲು ಹಿಂಜರಿಯುತ್ತಿದ್ದಾರೆ ರಕ್ತದಾನ ಮಾಡುವುದರಿಂದ ಲಾಭವೇ ಹೆಚ್ಚು ಹೊರೆತು ನಮಗೆ ಯಾರಿಗೂ ನಷ್ಟವಾಗುವುದಿಲ್ಲ ನಮ್ಮ ದೇಹ ಮನಸ್ಸು ಸದಾ ಸದೃಢವಾಗಿರುತ್ತದೆ ಎಂದು ಕರೆ ನೀಡಿದರು. ಮತ್ತೊಬ್ಬ ಮುಖ್ಯ ಅತಿಥಿಗಳಾದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರಾದ ಜಗದೀಶ್ ಅವರು ಮಾತನಾಡುತ್ತಾ ಈ ದಿನ ಸಾಕಷ್ಟು ಜನ ಹೊರ ರಾಜ್ಯದ ಕಾರ್ಮಿಕರು ರಕ್ತದಾನ ಮಾಡುವುದರ ಮುಖಾಂತರ ಮಾನವೀಯತೆಯನ್ನು ಮೆರೆದಿದ್ದಾರೆ ಸದೃಢವಾದ ಆರೋಗ್ಯವಂತ ಸಮಾಜ ನಿರ್ಮಾಣ ಮಾಡಲು ರಕ್ತದಾನ ಒಂದು ಶ್ರೇಷ್ಠ ಕಾರ್ಯವಾಗಿದೆ ಎಂದು ಕರೆ ನೀಡಿದರು. ಕಾರ್ಯಕ್ರಮದಲ್ಲಿ ಮ್ಯಾನೇಜರ್ ಸುರೇಶ್. ಶೃತಿ ಎಸ್ ಕೆ. ಶಿವಮೊಗ್ಗ ರೆಡ್ ಕ್ರಾಸ್ ಸಂಜೀವಿನಿ ಬ್ಲಡ್ ಬ್ಯಾಂಕಿನ ಪದಾಧಿಕಾರಿಗಳು. ರಕ್ತದಾನಿಗಳು ಉಪಸ್ಥಿತರಿದ್ದು 60ಕ್ಕೂ ಹೆಚ್ಚು ಯೂನಿಟ್ ರಕ್ತವನ್ನು ಸಂಗ್ರಹಿಸಲಾಯಿತು. ದಾನಿಗಳಿಗೆ ಪ್ರಮಾಣ ಪತ್ರ ಹಾಗೂ ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು

S. Kumar Bangarappa ರಾಜ್ಯದಲ್ಲಿ ಬ್ಯಾಡ್ಮಿಂಟನ್ ಕ್ಷೇತ್ರ ಇನ್ನಷ್ಟು ಎತ್ತರಕ್ಕೇರಲಿ : ಎಸ್. ಕುಮಾರ್ ಬಂಗಾರಪ್ಪ

0

S. Kumar Bangarappa ಗ್ರಾಮೀಣ ಪ್ರದೇಶಗಳಲ್ಲಿ ರಾಜ್ಯ, ರಾಷ್ಟ್ರ, ಅಂತರಾಷ್ಟ್ರೀಯ ಮಟ್ಟ ಮಾತ್ರವಲ್ಲದೆ ಒಲಂಪಿಕ್ ಕ್ರೀಡೆಯಲ್ಲಿ ಪ್ರತಿನಿಧಿಸುವಂತಹ ಪ್ರತಿಭೆಗಳಿದ್ದಾರೆ. ರಾಜ್ಯದಲ್ಲಿ ಬ್ಯಾಡ್ಮಿಂಟನ್ ಕ್ಷೇತ್ರ ಇನ್ನಷ್ಟು ಎತ್ತರಕ್ಕೇರಲಿ ಎಂಬ ಉದ್ದೇಶ ಹೊಂದಲಾಗಿದೆ ಎಂದು ಕರ್ನಾಟಕ ಬ್ಯಾಡ್ಮಿಂಟನ್ ಅಸೋಸಿಯೇಷನ್ ಅಧ್ಯಕ್ಷ ಎಸ್. ಕುಮಾರ್ ಬಂಗಾರಪ್ಪ ಹೇಳಿದರು.

ಪಟ್ಟಣದ ಖಾಸಿಗಿ ಬಸ್ ನಿಲ್ದಾಣ ಸಮೀಪದ ಬಿಜೆಪಿ ಕಚೇರಿಯಲ್ಲಿ ಸೊರಬ ಬ್ಯಾಡ್ಮಿಂಟನ್ ಅಸೋಸಿಯೇಷನ್ ವತಿಯಿಂದ ಅಭಿನಂದನೆ ಸ್ವೀಕರಿಸಿ ಅವರು ಮಾತನಾಡಿದರು.

ಕ್ರೀಡಾ ಕ್ಷೇತ್ರಕ್ಕೆ, ವಿಶೇಷವಾಗಿ ಬ್ಯಾಡ್ಮಿಂಟನ್ ಕ್ರೀಡೆಯ ಅಭಿವೃದ್ಧಿಗೆ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ. ಕರ್ನಾಟಕ ಬ್ಯಾಡ್ಮಿಂಟನ್ ಅಸೋಸಿಯೇಷನ್ ಕಳೆದ ಏಳು ದಶಕಗಳಿಂದ ಸಾವಿರಾರು ಪ್ರತಿಭಾವಂತ ಆಟಗಾರರನ್ನು ರೂಪಿಸಿದೆ. ಪದ್ಮಶ್ರೀ ಪ್ರಕಾಶ್ ಪಡುಕೋಣೆ, ಲಕ್ಷ್ಯ ಸೇನ್ ಸೇರಿದಂತೆ ಅನೇಕ ಶ್ರೇಷ್ಠ ಆಟಗಾರರು ಇದಕ್ಕೆ ಸಾಕ್ಷಿಯಾಗಿದ್ದಾರೆ ಎಂದರು.

S. Kumar Bangarappa ಯುವ ಆಟಗಾರರು ಅಂತರರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಲು ಅತ್ಯಾಧುನಿಕ ಮೂಲಸೌಕರ್ಯ, ವೈಜ್ಞಾನಿಕ ತರಬೇತಿ ಮತ್ತು ಸಮಗ್ರ ಬೆಂಬಲ ಅಗತ್ಯವಾಗಿದೆ. ತರಬೇತಿ ಕೇಂದ್ರಗಳ ಸ್ಥಾಪನೆ, ಜೊತೆಗೆ ಜಿಲ್ಲೆ ಮತ್ತು ಗ್ರಾಮೀಣ ಪ್ರದೇಶಗಳ ಪ್ರತಿಭೆಗಳ ಉತ್ತೇಜನಕ್ಕೆ ಸರ್ಕಾರದ ಸಹಕಾರವನ್ನು ನೀಡಬೇಕು. ಪಟ್ಟಣದ ಖಾಸಗಿ ಬಸ್ ನಿಲ್ದಾಣ ಮೇಲ್ಬಾಗದಲ್ಲಿ ಕ್ರೀಡಾಂಗಣ ನಿರ್ಮಿಸಲಾಗಿತ್ತು. ಅದಕ್ಕೆ ನೆಲ ಹಾಸು ಮಾಡಬೇಕಿದೆ. ಈ ಬಗ್ಗೆ ಸರ್ಕಾರ ಗಮನ ನೀಡಬೇಕು. ತಾಲೂಕಿನ ಬ್ಯಾಡ್ಮಿಂಟನ್ ಆಟಗಾರರು ಸಂಸ್ಥೆಯನ್ನು ನೋಂದಣಿ ಮಾಡಬೇಕು ಎಂದು ತಿಳಿಸಿದರು.

ಸೊರಬ ಬ್ಯಾಡ್ಮಿಂಟನ್ ಅಸೋಸಿಯೇಷನ್ ಅಧ್ಯಕ್ಷ ಸೈಯದ್ ಅಕಿಲ್, ಕಾರ್ಯದರ್ಶಿ ಎಂ.ಪಿ. ರಾಘವೇಂದ್ರ, ಮುಹಮ್ಮದ್ ಯಾಸೀನ್, ಮುಹಮ್ಮದ್ ಸಫಾನ್, ಮುಹಮ್ಮದ್ ಆಸೀಫ್, ಅಬ್ದುಲ್ ಗಫಾರ್, ಸೈಯದ್ ಶಫೀರ್ ಸೇರಿದಂತೆ ಇತರರಿದ್ದರು.

ಬಿಜೆಪಿ ಯುವ ಮೋರ್ಚಾ ಜಿಲ್ಲಾ ತಂಡದಿಂದ ಮನವಿ

0

ಶಿವಮೊಗ್ಗ ನಗರದ ಗೋಪೀ ಸರ್ಕಲ್‌ನಲ್ಲಿ ಯುವ ಕಾಂಗ್ರೆಸ್ ವತಿಯಿಂದ ನಡೆದ ಪ್ರತಿಭಟನೆ ಕಾರ್ಯಕ್ರಮದಲ್ಲಿ, ಮಾನ್ಯ ಭಾರತದ ಪ್ರಧಾನಮಂತ್ರಿಗಳಿಗೆ ಅವಮಾನವಾಗುವ ರೀತಿಯಲ್ಲಿ ಅಣಕು ಪ್ರದರ್ಶನ ಮಾಡಲಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗಿದೆ. ದೇಶದ ಪ್ರಧಾನಮಂತ್ರಿ ಎನ್ನುವುದು ದೇಶದ ಗೌರವದ ಸ್ಥಾನವಾಗಿದ್ದು, ಆ ಸ್ಥಾನದಲ್ಲಿರುವ ವ್ಯಕ್ತಿಗೆ ಇಂತಹ ರೀತಿಯಲ್ಲಿ ಅಗೌರವ ತೋರಿಸುವುದು ಸರಿಯಾದ ಸಂಸ್ಕೃತಿ ಅಲ್ಲ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

ಈ ಕುರಿತು ಸ್ವಯಂಪ್ರೇರಿತವಾಗಿ (ಸೂಮೊಟೋ) ಪ್ರಕರಣ ದಾಖಲಿಸಲಾಗುತ್ತದೆ ಎಂದು ನಿರೀಕ್ಷಿಸಿದ್ದರೂ ಇದುವರೆಗೂ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ. ಆದ್ದರಿಂದ ಇವತ್ತಿನ ದಿನ ಜಿಲ್ಲಾ ಪೊಲೀಸ್ ಅಧೀಕ್ಷಕರನ್ನು ಭೇಟಿ ಮಾಡಿ ಈ ಘಟನೆ ಕುರಿತು ಪ್ರಕರಣ ದಾಖಲಿಸುವಂತೆ ಬಿಜೆಪಿ ಯುವ ಮೋರ್ಚಾ ವತಿಯಿಂದ ಮನವಿ ಹಾಗೂ ದೂರು ಸಲ್ಲಿಸಲಾಯಿತು. ಜೊತೆಗೆ ಎಸ್‌ಪಿ ಅವರ ಮುಖಾಂತರ ದೊಡ್ಡಪೇಟೆ ಪೊಲೀಸ್ ಠಾಣೆಗೆ ಅಗತ್ಯವಾದ ಸೂಚನೆ ನೀಡುವಂತೆ ವಿನಂತಿಸಲಾಯಿತು. ಇದೇ ವೇಳೆ ದೊಡ್ಡಪೇಟೆ ಸರ್ಕಲ್ ಇನ್ಸ್‌ಪೆಕ್ಟರ್ ಅವರಿಗೂ ಮನವಿ ಸಲ್ಲಿಸಿ ಎಫ್‌ಐಆರ್ ದಾಖಲಿಸುವಂತೆ ಒತ್ತಾಯಿಸಲಾಯಿತು.

ಬಿಜೆಪಿ ಯುವ ಮೋರ್ಚಾ ಜಿಲ್ಲಾ ಅಧ್ಯಕ್ಷರಾದ ಪ್ರಶಾಂತ್ ಕುಕ್ಕೆ ಅವರ ನೇತೃತ್ವದಲ್ಲಿ ಯುವ ಮೋರ್ಚಾ ತಂಡದಿಂದ ಮನವಿ ಹಾಗೂ ದೂರು ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಕಾರ್ಯದರ್ಶಿಗಳು ಹಾಗೂ ಯುವ ಮೋರ್ಚಾ ಜಿಲ್ಲಾ ಸಹ ಪ್ರಭಾರಿಗಳಾದ ಸಂತೋಷ್ ಹೊಳಲೂರು, ಜಿಲ್ಲಾ ಯುವ ಮೋರ್ಚಾ ಉಪಾಧ್ಯಕ್ಷರಾದ ಸತೀಶ್ ರಾಮನಕೊಪ್ಪ, ಜಿಲ್ಲಾ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ದರ್ಶನ್ ಆರ್ ವಿ ಹಾಗೂ ಅರುಣ್ ಕುಗ್ವೆ , ಶಿವಮೊಗ್ಗ ಗ್ರಾಮಾಂತರ ಯುವ ಮೋರ್ಚಾ ಅಧ್ಯಕ್ಷರಾದ ಅನಿಲ್ ಲೋಕಿನಕೊಪ್ಪ
ಜಿಲ್ಲಾ ಯುವ ಮೋರ್ಚಾ ಕಾರ್ಯದರ್ಶಿ ಯುವರಾಜ್ ಎನ್.ವಿ. ಮತ್ತು ಹರೀಶ್ ನಾಯ್ಕ್ , ಜಿಲ್ಲಾ ಖಜಾಂಚಿಗಳಾದ ವಿವೇಕ್ ಹೆಬ್ಬಾರ್, ಜಿಲ್ಲಾ ಪದಾಧಿಕಾರಿಗಳಾದ ಕುಮಾರ್ ಆಯನೂರು, ಅಜಯ್ ಬೊಮ್ಮನಕಟ್ಟೆ, ಪವನ್, ಗಣೇಶ್ ಗುಂಡಗದ್ದೆ, ಅಮಿತ್ ಹೆಗ್ಗಾರ್ , ಶಶಿ , ಸತೀಶ್ ಸೇರಿದಂತೆ ಯುವ ಮೋರ್ಚಾದ ಪ್ರಮುಖ ಕಾರ್ಯಕರ್ತರು ಉಪಸ್ಥಿತರಿದ್ದರು.

DC Shivamogga ಮಾ.18 ರಿಂದ ಎಸ್‌ಎಸ್‌ಎಲ್ ಪರೀಕ್ಷೆ-ಸಕಲ ಸಿದ್ದತೆಗೆ ಸೂಚನೆ : ಪ್ರಭುಲಿಂಗ ಕವಳಿಕಟ್ಟಿ

0

DC Shivamogga ವಿದ್ಯಾರ್ಥಿಗಳ ಜೀವನದ ದಿಸೆಯನ್ನು ನಿರ್ಧರಿಸುವ ಮುಖ್ಯ ಘಟ್ಟವಾದ ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳನ್ನು ಶಾಂತಿಯುತವಾಗಿ ಮತ್ತು ಪಾರದರ್ಶಕವಾಗಿ ನಡೆಸಬೇಕೆಂದು ಪರೀಕ್ಷಾ ನಿಯೋಜಿತ ಅಧಿಕಾರಿಗಳಿಗೆ ಜಿಲ್ಲಾಧಿಕಾರಿಗಳಾದ ಪ್ರಭುಲಿಂಗ ಕವಳಿಕಟ್ಟಿಯವರು ತಿಳಿಸಿದರು.

ಶುಕ್ರವಾರ ನಗರದ ಕುವೆಂಪು ರಂಗಮಂದಿರದಲ್ಲಿ ಮಾರ್ಚ್/ಏಪ್ರಿಲ್ ಮಾಹೆಯಲ್ಲಿ ನಡೆಯುತ್ತಿರುವ ಎಸ್‌ಎಸ್‌ಎಲ್ ಸಿ ಪರೀಕ್ಷೆಯ ಪೂರ್ವಸಿದ್ದತೆ ಕುರಿತು ಚರ್ಚಿಸಲು ಕರೆಯಲಾಗಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಮಾರ್ಚ್ 18 ರಿಂದ ಏಪ್ರಿಲ್ 04 ರವರೆಗೆ ಜಿಲ್ಲೆಯ ಒಟ್ಟು 79 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆಯುತ್ತದೆ. ಭದ್ರಾವತಿ 15, ಹೊಸನಗರ 07, ಸಾಗರ 09, ಶಿಕಾರಿಪುರ 11, ಶಿವಮೊಗ್ಗ 20, ಸೊರಬ 10 ಮತ್ತು ತೀರ್ಥಹಳ್ಳಿ 07 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆಗಳು ನಡೆಯಲಿವೆ.
ಎಲ್ಲಾ ಪರೀಕ್ಷಾ ಕೇಂದ್ರಗಳಲ್ಲಿ ವಿದ್ಯಾರ್ಥಿಗಳಿಗೆ ಕುಡಿಯುವ ನೀರು, ಸೂಕ್ತ ಆಸನ ವ್ಯವಸ್ಥೆ ಮಾಡಬೇಕು. ಹಾಗೂ ಒತ್ತಡ ರಹಿತ ವಾತಾವರಣವನ್ನು ನಿರ್ಮಿಸಬೇಕು. ಎಲ್ಲಾ ಕೇಂದ್ರಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಸಲಾಗಿದೆ. ವೆಬ್ ಕಾಸ್ಟಿಂಗ್ ಪ್ರಕ್ರಿಯೆ ಸಮರ್ಪಕವಾಗಿ ನಡೆಯಲು ಪೂರ್ವಭಾವಿಯಾಗಿ ಡ್ರೆöÊರನ್ ನಡೆಸಲಾಗಿದ್ದು, ಮತ್ತೊಮ್ಮೆ ಇಂಟರ್‌ನೆಟ್ ವ್ಯವಸ್ಥೆ, ಯುಪಿಎಸ್ ಬಗ್ಗೆ ಖಾತ್ರಿಪಡಿಸಿಕೊಳ್ಳಬೇಕೆಂದು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.

31 ಮಾರ್ಗ ರಚಿಸಲಾಗಿದ್ದು, ಈ ಮಾರ್ಗಗಳಿಗೆ ಮಾರ್ಗಾಧಿಕಾರಿಗಳನ್ನು ನೇಮಿಸಲಾಗಿದೆ. 79 ಸ್ಥಾನಿಕ ಜಾಗೃತ ದಳದ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ. ವಿದ್ಯಾರ್ಥಿಗಳು ಸುಸೂತ್ರವಾಗಿ ಪರೀಕ್ಷಾ ಕೇಂದ್ರಗಳಿಗೆ ಹಾಜರಾಗಲು ಸಾರಿಗೆ ವ್ಯವಸ್ಥೆ ಮಾಡಲಾಗಿದೆ.
ಪರೀಕ್ಷಾ ಕೇಂದ್ರಗಳಿಗೆ ನಿರಂತರ ವಿದ್ಯುತ್ ಸಂಪರ್ಕವನ್ನು ಮೆಸ್ಕಾಂ ನವರು ಒದಗಿಸುವಂತೆ ಹಾಗೂ ಪರೀಕ್ಷಾ ಕೇಂದ್ರಗಳಿಗೆ ಅಗತ್ಯವಾದ ಪೊಲೀಸ್ ಬಂದೋಬಸ್ತ್ ಗೆ ಮನವಿ ಮಾಡಲಾಗಿದ್ದು, ಕೇಂದ್ರಗಳ ಸುತ್ತ 200 ಮೀಟರ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿ, ಪರೀಕ್ಷಾ ಕೇಂದ್ರಗಳ ಸುತ್ತಮುತ್ತ ಸೈಬರ್ ಮತ್ತು ಜೆರಾಕ್ಸ್ ಅಂಗಡಿಗಳು ಕಾರ್ಯ ನಿರ್ವಹಿಸದಂತೆ ಆದೇಶಿಸಲಾಗಿದೆ.
ವಿದ್ಯಾರ್ಥಿಗಳು ಯಾವುದೇ ರೀತಿಯ ಎಲೆಕ್ಟಾçನಿಕ್ ವಸ್ತುಗಳನ್ನು ಪರೀಕ್ಷಾ ಕೇಂದ್ರಗಳಿಗೆ ತರುವಂತಿಲ್ಲ. ಈ ಬಗ್ಗೆ ಸೂಕ್ತವಾಗಿ ಪರಿಶೀಲನೆ ನಡೆಸಲಾಗುವುದು ಎಂದ ಅವರು ಪರೀಕ್ಷಾ ಕೇಂದ್ರಗಳಲ್ಲಿ ಯಾವುದೇ ರೀತಿಯ ಅವ್ಯವಹಾರ ಆಗದಂತೆ ಪಾರದರ್ಶಕವಾಗಿ ಪರೀಕ್ಷೆಗಳು ನಡೆಯುವಂತೆ ಎಲ್ಲ ಅಧಿಕಾರಿಗಳು ನೋಡಿಕೊಳ್ಳಬೇಕೆಂದು ಸೂಚನೆ ನೀಡಿದರು.

ಪರೀಕ್ಷಾ ನಿಯೋಜಿತ ಅಧಿಕಾರಿಗಳು ಪರೀಕ್ಷೆಗೆ ಸಂಬಂಧಿಸಿದಂತೆ ಸುಳ್ಳುವದಂತಿ ಹಬ್ಬಿಸುವ ಸುದ್ದಿಗಳಿಗೆ ಕಿವಿಗೊಡದೆ ಹಾಗೂ ಕರ್ತವ್ಯವದಲ್ಲಿ ಯಾವುದೇ ರೀತಿಯ ನಿರ್ಲಕ್ಷ್ಯ ತೋರದೆ, ಜಿಲ್ಲೆಗೆ ಒಳ್ಳೆಯ ಹೆಸರು ತರುವ ರೀತಿಯಲ್ಲಿ ಕಾರ್ಯ ನಿರ್ವಹಣೆ ಮಾಡಬೇಕೆಂದು ತಿಳಿಸಿದರು.

ಜಿಲ್ಲಾ ಪಂಚಾಯತ್ ಸಿಇಓ ಹೇಮಂತ್ ಎನ್ ಮಾತನಾಡಿ, ಪರೀಕ್ಷೆ ಸಮಯದಲ್ಲಿ ವಿದ್ಯಾರ್ಥಿಗಳು ತಮ್ಮ ಆರೋಗ್ಯದ ಬಗ್ಗೆ ಗಮನ ಹರಿಸಬೇಕು. ಹಬ್ಬದ ಈ ದಿನಗಳಲ್ಲಿ ಸೂಕ್ತ ಆಹಾರ ತೆಗೆದುಕೊಳ್ಳಬೇಕು. ವಿದ್ಯಾರ್ಥಿಗಳು ನಿದ್ರೆಗೆಡದೆ, ಸಾಕಷ್ಟು ನಿದ್ರೆ ಮಾಡಬೇಕು. ಯಾವುದೇ ರೀತಿಯ ಆತಂಕ, ಭಯಕ್ಕೆ ಒಳಗಾಗದೇ ಪರೀಕ್ಷೆಗೆ ಸಿದ್ದತೆ ಮಾಡಿಕೊಳ್ಳಬೇಕೆಂದು ಕಿವಿ ಮಾತು ಹೇಳಿದರು.

ಪ್ರತಿ ಪರೀಕ್ಷಾ ಕೇಂದ್ರಗಳಲ್ಲಿ ಸಿಸಿ ಟಿವಿ ಅಳವಡಿಸಿದ್ದು, ಡ್ರೈಂರನ್ ನಡೆಸಿ ಖಾತ್ರಿಪಡಿಸಿಕೊಂಡು, ಯುಪಿಎಸ್, ಇಂಟರ್‌ನೆಟ್ ಇತರೆ ವ್ಯವಸ್ಥೆ ಇರುವಂತೆ ನೋಡಿಕೊಳ್ಳಬೇಕು. ಪರೀಕ್ಷಾ ಕೇಂದ್ರಗಳಿಂದ ದೂರ ಇರುವ ವಿದ್ಯಾರ್ಥಿಗಳಿಗೆ ಬಸ್ಸಿನ ವ್ಯವಸ್ಥೆ ಮಾಡಲಾಗಿದೆ. ತಾಲ್ಲೂಕು ಮಟ್ಟದಿಂದ ಹಿಡಿದು ಎಲ್ಲ ಪರೀಕ್ಷಾ ನಿಯೋಜಿತ ಅಧಿಕಾರಿಗಳು ನಿಗದಿತ ಅವಧಿಯೊಳಗೆ ಹಾಜರಿದ್ದು, ಪರೀಕ್ಷೆಗಳು ಶಾಂತಿಯುತವಾಗಿ ಮತ್ತು ಪಾರದರ್ಶಕವಾಗಿ ನಡೆಯುವಂತೆ ಸಹಕರಿಸಬೇಕು ಎಂದು ತಿಳಿಸಿದರು.

DC Shivamogga ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ನಿಖಿಲ್ ಬಿ ಮಾತನಾಡಿ, ಪರೀಕ್ಷೆಯ ಬಂದೋಬಸ್ತ್ ಗೆ ಅಗತ್ಯವಾದ ಪೊಲೀಸ್ ಸಿಬ್ಬಂದಿಗಳನ್ನು ನಿಯೋಜಿಸಲಾಗುವುದು. ಪರೀಕ್ಷೆಗಳನ್ನು ಎಲ್ಲ ಅಧಿಕಾರಿ/ಸಿಬ್ಬಂದಿಗಳು ಸೇರಿ ಪಾರದರ್ಶಕವಾಗಿ ನಡೆಸಿಕೊಡಬೇಕು. ಯಾವುದೇ ರೀತಿಯ ತೊಂದರೆಗಳು ಉಂಟಾದಲ್ಲಿ ಶೀಘ್ರವೇ ತಮ್ಮ ಗಮನಕ್ಕೆ ತರಬೇಕು. ಯಾವುದೇ ಆತಂಕವಿಲ್ಲದಂತೆ ಪರೀಕ್ಷೆ ನಡೆಯುವ ವಾತಾವರಣ ಕಲ್ಪಿಸಲಾಗುವುದು ಎಂದರು.

ದ್ವಿಚಕ್ರ ವಾಹನ ಓಡಿಸುವ ಪ್ರತಿಯೊಬ್ಬ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಲೇಬೇಕು. ಅರ್ಧ ಹೆಲ್ಮೆಟ್ ಬಳಸದೇ, ಪೂರ್ತಿ ಮತ್ತು ಸುರಕ್ಷಿತವಾದ ಹೆಲ್ಮೆಟ್ ಧರಿಸಬೇಕು. ಇದರಿಂದ ಅಪಘಾತದಲ್ಲಿ ಸಂಭವಿಸಬಹುದಾದ ಪ್ರಾಣಹಾನಿಯನ್ನು ತಡೆಯಬಹುದು. ಹಾಗೂ ಯಾವುದೇ ಕಾರಣಕ್ಕೂ ಮನೆಯಲ್ಲಿ ಲೈಸೆನ್ಸ್ ಇಲ್ಲದ ಮಕ್ಕಳಿಗೆ ವಾಹನವನ್ನು ಕೊಡಬಾರದು. ವಾಹನ ಓಡಿಸುವಾಗ ಅಪ್ಪಿತಪ್ಪಿಯೂ ಮೊಬೈಲ್ ನಲ್ಲಿ ಮಾತನಾಡಬಾರದು. ರಸ್ತೆ ಸುರಕ್ಷತಾ ನಿಯಮಗಳನ್ನು ಪಾಲಿಸಿ ನಾವೇ ಎಚ್ಚರಿಕೆಯಿಂದ ಇರಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗಳಾದ
-ನಿಖಿಲ್ ಬಿ ಅವರು ತಿಳಿಸಿದರು.

ಸಭೆಯಲ್ಲಿ ಜಿಲ್ಲಾ ಖಜಾನಾಧಿಕಾರಿ ಸಾವಿತ್ರಿ, ಡಯಟ್ ಪ್ರಾಂಶುಪಾಲರಾದ ಕೃಷ್ಣಮೂರ್ತಿ, ಡಿಡಿಪಿಐ ಮಂಜುನಾಥ್, ಪರೀಕ್ಷೆಗೆ ನಿಯೋಜಿಸಲಾದ ಅಧಿಕಾರಿಗಳು ಹಾಜರಿದ್ದರು.

ಶಿವಮೊಗ್ಗದ ರಾಯಲ್ ಆರ್ಕಿಡ್ ನಲ್ಲಿ ಅವಿರ ಉಡುಪು ಸಂಸ್ಥೆಯ ಯುಗಾದಿ ಸೀರೆ ಹಬ್ಬ

0

ಶಿವಮೊಗ್ಗದ ರಾಯಲ್ ಆರ್ಕಿಡ್ ನಲ್ಲಿ ಚಿತ್ರನಟಿ ಕಾರುಣ್ಯ ಗೌಡರ ಅವಿರ ಉಡುಪು ಸಂಸ್ಥೆಯ ಶಿವಮೊಗ್ಗ ಯುಗಾದಿ ಸೀರೆ ಹಬ್ಬ ಇಂದಿನಿಂದ ಮಾ.15 ರ ವರೆಗೆ ಆರಂಭವಾಗಿದ್ದು, ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಕಾರುಣ್ಯ ಗೌಡ, ಸಮನ್ವಯ ಕಾಶಿ ಸೇರಿದಂತೆ ಹಲವರಿದ್ದರು.

Klive Special Article ಶಿಸ್ತು ಬದುಕಿನ ನಿತ್ಯ ರೂಢಿಯಾಗಲಿ ಲೇ: ಪುಟ್ಟಮ್ಮ ಶಿವಾನಿ ಶಿವಮೊಗ್ಗ

0

Klive Special Article ಗಿರೀಶ್‌ ಕಾರ್ನಾಡರ ತಲೆದಂಡ ನಾಟಕದಲ್ಲಿ ಒಂದು ಪ್ರಸಂಗ ಬರುತ್ತದೆ. ಬಿಜ್ಜಳ ಮಹಾರಾಜರು ವಿಜಯ ಯಾತ್ರೆಗೆ ಹೋಗಿರುತ್ತಾರೆ. ಆ ಸಂದರ್ಭದಲ್ಲಿ ಅವರ ಮಗ ಸೋವಿದೇವ ಭಂಡಾರದಲ್ಲಿನ ರೊಕ್ಕ ವ್ಯತ್ಯಾಸವಾಗಿದೆಯೆಂದು ಹಣಕಾಸು ಮಂತ್ರಿಯಾಗಿದ್ದ ಬಸವಣ್ಣನವರು ಊರಲ್ಲಿ ಇಲ್ಲದ ವೇಳೆ ಅವರ ವಿರುದ್ದ ವಿಚಾರಣೆ ಆರಂಭಿಸುತ್ತಾನೆ. ನಂತರ ಬಸವಣ್ಣನವರು ಊರಿಗೆ ಬರುತ್ತಾರೆ, ಬಂದವರೆ ವಿಷಯ ತಿಳಿದು ಅಲ್ಲಿ ನೆರೆದಿದ್ದ 15 ಸಾವಿರ ಮಂದಿಯ ಕಣ್ಣೆದುರು ಸೋವಿದೇವನನ್ನು ಕೈ ಹಿಡಿದು ಭಂಡಾರದೊಳಗೆ ಕರೆದೊಯ್ದು ಕುಳ್ಳಿರಿಸಿ ಲೆಕ್ಕ ಪರಿಶೀಲನೆ ಮಾಡಲು ಕೇಳಿಕೊಳ್ಳುತಾರೆ.
ಸೋವಿದೇವ ಅಲ್ಲಿಯೇ 10 ದಿನ ಕುಳಿತು ಲೆಕ್ಕ ಪರಿಶೀಲಿಸುತ್ತಾನೆ. ಅಷ್ಟರಲ್ಲಿ ಭಿಜ್ಜಳಮಹಾರಾಜರು ವಿಜಯ ಯಾತ್ರೆಯಿಂದ ಅರಮನೆಗೆ ಹಿಂತಿರುಗುತ್ತಾರೆ. ಹಿಂತಿರುಗಿದ ನಂತರ ವಿಷಯ ತಿಳಿದು ತನ್ನ ಮಗನನ್ನು ಕರೆಸಿ ವಿಚಾರಣೆ ಮಾಡುತ್ತಾರೆ. ಮತ್ತು ಅವನನ್ನು ಕೇಳುತ್ತಾರೆ: ಒಂದು ಒಡಕು ಕವಡಿ ಹೆಚ್ಚು ಕಮ್ಮಿ ಆಗಿತ್ತಾ? ಒಂದು ದುಗ್ಗಾಣಿ ಏರು ಪೇರು ಆಗಿತ್ತಾ? ಅದು ಬಸವಣ್ಣನ ಲೆಕ್ಕ!; ಬ್ರಹ್ಮಲಿಖಿತ! ಒಮ್ಮೆ ಬರೆದರೆ ಒಂದಂಕಿ ಅಳಗ್ಯಾಡೂದಿಲ್ಲ! ಎನ್ನುತ್ತಾರೆ.
ಇದನ್ನು ಗಮನಿಸಿದರೆ, ಬಸವಣ್ಣನವರು ಸಾರ್ವಜನಿಕ ಸೇವೆಯಲ್ಲಿ ಎಂಥಹಾ ಶಿಸ್ತು ಪಾಲಿಸುತ್ತಿದ್ದರು ಎಂಬುದು ಸ್ಪಷ್ಟವಾಗುತ್ತದೆ.
ಭಾರತ ರತ್ನ ಸರ್‌ ಮೋಕ್ಷಗುಂಡಂ ವಿಶ್ವೇಶ್ವರಯ್ಯನವರ ಶಿಸ್ತು ವಿಶ್ವವಿಖ್ಯಾತ! ಒಂದು ಮೇಣದಬತ್ತಿ ಹಚ್ಚಿಕೊಂಡು ಸರ್ಕಾರಿ ಕೆಲಸ ನಿರ್ವಹಿಸಿದ ನಂತರ ಅದನ್ನು ನಂದಿಸಿ ಬೇರೊಂದು ಮೇಣದಬತ್ತಿ ಹಚ್ಚಿಕೊಂಡು ತನ್ನ ಸ್ವಂತ ಕೆಲಸ ನಿರ್ವಹಿಸುತ್ತಿದ್ದ ವಿಶ್ವೇಶ್ವರಯ್ಯನವರು ಶಿಸ್ತಿನ ದಂತಕಥೆಯಾಗಿದ್ದರು! ತನ್ನ ವಯಕ್ತಿಕ ಜೀವನದಲ್ಲಿ, ಸಾರ್ವಜನಿಕ ಸೇವೆಯಲ್ಲಿ ಎಲ್ಲದರಲ್ಲೂ ಅವರದು ಬಹಳ ಶಿಸ್ತು! ಅವರು ಮೈಸೂರು ಸಂಸ್ಥಾನದ ಮುಖ್ಯ ಇಂಜಿನಿಯರ್‌ ಆಗಿದ್ದಾಗ ಕಚೇರಿಯಲ್ಲಿ ಲಕೋಟೆಗೆ ಪತ್ರ ಹಾಕಿ ಹೇಗೆ ಗಮ್‌ ಅಂಟಿಸಬೇಕು ಮತ್ತು ಸ್ಟಾಂಪನ್ನು ಹೇಗೆ ಅಂಟಿಸಬೇಕು ಎಂಬುದನ್ನು ರವಾನೆ ಗುಮಾಸ್ತ ರನ್ನು ತನ್ನ ಟೇಬಲ್‌ಗೆ ಕರೆಸಿ, ಗಮ್‌ ಮತ್ತು ಸ್ಟಾಂಪ್‌ ತರಿಸಿ ಅಂಟಿಸಿ ತೋರಿಸಿದ್ದರಂತೆ!. ಕಛೇರಿಯ ಎಲ್ಲಾ ನೌಕರರೂ ಸಮಯಕ್ಕೆ ಸರಿಯಾಗಿ ಕಛೆರಿಗೆ ಹಾಜರಾಗಬೇಕೆಂಬುದು ಶಿಸ್ತು! ಅದಲ್ಲದೆ ಎಲ್ಲರೂ ಶುಚಿಯಾದ ಬಟ್ಟೆ ಧರಿಸಿಯೇ ಕಛೆರಿಗೆ ಬರಬೇಕು, ತಲೆಕೂದಲನ್ನು ಬಾಚಿಕೊಂಡು ಬರಬೇಕು ….. ಇತ್ಯಾದಿ ಶಿಸ್ತೂ ಸಹ ಅವರ ಕಛೇರಿಯಲ್ಲಿದ್ದವು. ಒಂದು ದಿನ ಅವರ ಕಛೇರಿಯ ಒಬ್ಬ ನೌಕರ ಬೂಟುಗಳಿಗೆ ಪಾಲೀಶ್ ಇಲ್ಲದೆ ಕಛೇರಿಗೆ ಬಂದಿದ್ದರಂತೆ! . ವಿಶ್ವೇಶ್ವರಯ್ಯನವರು ಇದನ್ನು ಗಮನಿಸಿ ಆ ನೌಕರನಿಗೆ ½ ದಿನದ ರಜೆ ಕೊಟ್ಟು ಬೂಟು ಪಾಲೀಶ್‌ ಮಾಡಿಕೊಂಡು ತೊಟ್ಟು ನಾಳೆ ಕಛೆರಿಗೆ ಬರುವಂತೆ ತಿಳಿಸಿದರಂತೆ!
Klive Special Article ಈ ಕಾಲದಲ್ಲಿಯೂ ವಿಶ್ವೇಶ್ವರಯ್ಯನವರಷ್ಟಲ್ಲದಿದ್ದರೂ ಸ್ವಲ್ಪ ಕಡಿಮೆಯಾದರೂ ಸಾರ್ವಜನಿಕ ಸೇವೆಯಲ್ಲಿ ಸಾರ್ವಜನಿಕ ಬದುಕಿನಲ್ಲಿ ಶಿಸ್ತು ಇರುವವರು ಕೆಲವರನ್ನು ನಾವು ಕಾಣುತ್ತೇವೆ. ವೇಳೆಗೆ ಸರಿಯಾಗಿ ಕಛೇರಿಗೆ/ ಸಭೆ ಸಮಾರಂಭಗಳಿಗೆ ಹಾಜರಾಗುವುದು, ಸಮಯದ ಮಿತಿಯೊಳಗೇ ಕೆಲಸ ಮಾಡುವುದು, ಸಂಬಳ/ ಸಂಭಾವನೆಯ ಹೊರತು ಬೇರೇನನ್ನೂ ಅಪೇಕ್ಷಿಸದಿರುವುದು…… ಇತ್ಯಾದಿ ಶಿಸ್ತು ಅಳವಡಿಸಿಕೊಂಡಿರುವವರನ್ನು ನಾವು ನೋಡುತ್ತೇವೆ. ಆದರೆ ಅಂಥವರ ಸಂಖ್ಯೆ ತೀರಾ ಕಡಿಮೆ ಎನ್ನಬಹುದು.
ವಯಕ್ತಿಕ ಜೀವನದಲ್ಲಿ ಹಾಗೆಯೇ ಸಾರ್ವಜನಿಕ ಬದುಕಲ್ಲಿ ಶಿಸ್ತು ಎಲ್ಲರಿಗೂ ಬೇಕು. ಚಿಕ್ಕ ಉದಾಹರಣೆ ಕೊಡಬೇಕೆಂದರೆ ಯಾವ ವಸ್ತುವನ್ನು ತಾನು ಎಲ್ಲಿಂದ ತೆಗೆದುಕೊಂಡಿದ್ದೆನೋ ಕೆಲಸವಾದ ನಂತರ ಅಲ್ಲಿಯೇ ಇಡಬೇಕೆಂಬ ಶಿಸ್ತನ್ನು ಅಳವಡಿಸಿಕೊಂಡರೆ ಆ ವಸ್ತುವನ್ನು ಹುಡುಕಲು ಅನಾವಶ್ಯಕವಾಗಿ ಸಮಯ ಹಾಳು ಮಾಡುವುದು ತಪ್ಪುತ್ತದೆ. ಆರ್ಥಿಕ ಶಿಸ್ತು ಇಲ್ಲದೆ, ಯೋಜನೆ ಇಲ್ಲದೆ ದುಂದು ಮಾಡಿದರೆ ಅವಶ್ಯಕತೆ ಇದ್ದಾಗ ಹಣವಿಲ್ಲದೇ ವ್ಯಥೆಪಡುವುದನ್ನು ತಪ್ಪಿಸಬಹುದು. ಹಾಗೆಯೇ ಮಾನವೀಯ ಸಂಬಂಧಗಳಲ್ಲಿ ಶಿಸ್ತು ಅಳವಡಿಸಿಕೊಂಡರೆ ಜೀವನ ಹಸನಾಗುತ್ತದೆ.
ಸಾರ್ವಜನಿಕ ಜೀವನದಲ್ಲಿ ಶಿಸ್ತಿನಿಂದ ನಡೆದುಕೊಳ್ಳುವುದು ಅತ್ಯಗತ್ಯ. ಸರ್ಕಾರಿ ಹಾಗೂ ಸಾರ್ವಜನಿಕ ಸೇವೆಯಲ್ಲಿ ನಿಯೋಜಿತರಾಗಿರುವವರ ಶಿಸ್ತನ್ನು ಪಾಲಿಸಲೇಬೇಕು. ಶಿಸ್ತು ಪಾಲಿಸದಿದ್ದಲ್ಲಿ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ನಾಗರೀಕ ಸೇವಾನಿಯಮದಲ್ಲೇನೋ ಇದೆ. ಇಂದಿನ ನಾಗರೀಕಸೇವಾ ಸ್ಥಳಗಳಲ್ಲಿ ಅಪೇಕ್ಷಣೀಯ ಶಿಸ್ತು ಪಾಲನೆಯಾಗುತ್ತಿದೆಯೇ ಎಂದು ನೋಡಿದರೆ ವಿಷಾದವೆನ್ನಿಸುತ್ತದೆ. ಯಾವ ಕೆಲಸಕ್ಕೆ ಹೋದರೂ ನಾಳೆ ಬನ್ನಿ, ವಾರಬಿಟ್ಟು ಬನ್ನಿ, ನಮಗೆ ತುಂಬಾ ಕೆಲಸವಿದೆ, ಇದು ಹಾಗಲ್ಲ, ಇದು ಆಗುವುದಿಲ್ಲ, ಇದು ಇಲ್ಲಲ್ಲ, ನೀವು ಅಲ್ಲಿ ಅರ್ಜಿ ಕೊಡಿ ಎಂದು ಅಲೆದಾಡಿಸುವುದು ಸರ್ವೆ ಸಾಮಾನ್ಯವಾಗಿದೆ. ಇದು ಆಗಬಾರದೆಂದು ಸಕಾಲ, ಮಾಹಿತಿ ಹಕ್ಕು ಅಧಿನಿಯಮ ಮುಂತಾದ ಕಾನೂನುಗಳು ಬಂದಿದ್ದರೂ ಜನ ಸಾಮಾನ್ಯರ ಅಲೆದಾಟ ಮಾತ್ರ ತಪ್ಪಿಲ್ಲ. ನಮ್ಮ ಕೆಲಸದ ಕೋರಿಕೆಯ ಅರ್ಜಿ ಕೊಟ್ಟ ಬಳಿಕ ಅರ್ಜಿದಾರ ಮತ್ತೇಕೆ ಬರಬೇಕು? ಕಛೇರಿ ನಿಯಮಾವಳಿ ಪ್ರಕಾರ ನಿಶ್ಚಿತ ಸಮಯದೊಳಗೆ ಕೆಲಸ ಮಾಡಬೇಕು. ಇಲ್ಲವೇ ಹಿಂಬರಹ ನೀಡಬೇಕು. ವಾರ ಬಿಟ್ಟು ಬಂದರೆ ಕೆಲಸ ಆಗಿರುತ್ತದೆಯೇ? ಅನುಮಾನ!. ಬೇಸತ್ತು ಕಛೇರಿ ಮುಖ್ಯಸ್ತರಿಗೆ ತಿಳಿಸಿದರೆ ಆಗಲಾದರೂ ಕೆಲಸವಾಗುವುದೇ? ಆನೇಕ ವೇಳೆ ಅದು ಗೋಜಲಾಗುವುದೇ ಹೆಚ್ಚು! ಕೆಲಸವಾದರೆ ಅಮ್ಮ ಅದೃಷ್ಟ!. ಸಮಯದೊಳಗೆ ನಮ್ಮ ಕೆಲಸವಾಗಬೇಕೆಂದರೆ ರಾಜಕಾರಣಿಗಳ ಮೂಲಕ ಹೇಳಿಸುವುದು ಅಥವಾ ಬೇರೆಯದೇ ಕಸರತ್ತು ಮಾಡಬೇಕಾದ್ದು ಈಗೀಗ ಅನಿವಾರ್ಯವಾಗಿದೆ. ಇಂಥಾ ಮುಂದುವರಿದ ಕಾಲದಲ್ಲೂ ಸಾರ್ವಜನಿಕ ಸೇವೆಯಲ್ಲಿ ಪಾರದರ್ಶಕತೆ ಇಲ್ಲದಿರುವುದು ಶೋಚನೀಯ! ಇಂಥಾ ಅಧಿಕಾರಿಯಿಂದ ನಮ್ಮ ಕೆಲಸ ಸಲೀಸಾಗಿ ಆಯಿತು ಎಂದು ಕೇಳಿದ ಉಧಾಹರಣೆಗಳು ಕಡಿಮೆ!. ಈ ಎಲ್ಲಾ ಮಾತುಗಳೂ ಯಾರೊಬ್ಬರನ್ನೋ ದೂರುವುದಕ್ಕಲ್ಲ ಬದಲಾಗಿ ಇಂದಿನ ವಸ್ತುಸ್ಥಿತಿಯೇ ಹಾಗಿದೆ. ಪ್ರತಿಯೊಬ್ಬರಿಗೂ ತನ್ನ ಬದುಕಿನ ಮೌಲ್ಯಗಳ ಬಗ್ಗೆ ಗಮನವಿರಬೇಕು. ಬದುಕಿನ ಅರ್ಥ ಗುರಿ, ಉದ್ದೇಶ ಸಾಧನೆಗಳ ಅರಿವಿರಬೇಕು. ನನಗೆ ದೊರೆತಿರುವ ಈ ಪವಿತ್ರ ನೌಕರಿಯಿಂದ ನಾನು ನನ್ನ ಬದುಕು ಮತ್ತು ಜೀವನವನ್ನು ಎಷ್ಟು ಚೆನ್ನಾಗಿ ನಡೆಸಿಕೊಂಡು ಹೋಗಬಲ್ಲೆ; ಸಮಾಜಕ್ಕೆ ಎಷ್ಟು ಸಹಾಯ ಮಾಡಬಲ್ಲೆ ಎಂದು ಯೋಚಿಸಬೇಕು. ಯಾವ ವಿಶಿಷ್ಟ ಕೆಲಸವನ್ನು ನಿಯಮಾನುಸಾರ ಕಾಲಮಿತಿಯೊಳಗೆ ಸರಿಯಾಗಿ ಮಾಡಲು ಯಾವರೀತಿಯ ಶಿಸ್ತು ಅಳವಡಿಸಿಕೊಳ್ಳಬೇಕು ಎಂಬುದು ಅನುಭದಿಂದ; ಇತರರ ಅನುಭವದಿಂದ; ಮಹನೀಯರ ಜೀವನಕ್ರಮದ ಅದ್ಯಯನದಿಂದ;ಸ್ನೇಹಿತರ/ಸಂಬಂಧಿಗಳ/ಹಿತೈಶಿಗಳ/ವೃತ್ತಿಬಾಂಧವರ/ ಮೇಲಾಧಿಕಾರಿಗಳ ಸಲಹೆ, ಸೂಚನೆ, ಸಹಕಾರದಿಂದಲೂ ಅರಿಯಬಹುದು.
ಶಿಸ್ತು ನಮ್ಮ ಜೀವನವನ್ನು ಸುಂದರವಾಗಿ ರೂಪಿಸಿಕೊಳ್ಳಲು ಸಹಕಾರಿ!. ಆದರೆ ಅತಿಯಾದ, ಹಾಗೂ ಅನಾವಶ್ಯಕವಾದ ಶಿಸ್ತಿನಿಂದ ಇತರರ ಜೀವನವನ್ನು ಗೋಳು ಹೊಯ್ದುಕೊಳ್ಳುವುದನ್ನು ನಾವು ನೋಡಿದ್ದೇವೆ. ಅಷ್ಟಲ್ಲದೇ ಅತಿಯಾದ ಶಿಸ್ತಿನಿಂದ ಅನೇಕರು ತಮ್ಮ ಜೀವನವನ್ನೇ ಹಾಳು ಮಾಡಿಕೊಂಡಿದ್ದಾರೆ. ಅದು ಸರಿಯಲ್ಲ. ಶಿಸ್ತು ನಮ್ಮ ಜೀವನವನ್ನು ಅಚ್ಚುಕಟ್ಟು ಮಾಡಬೇಕೇ ವಿನ: ಇಕ್ಕಟ್ಟು ಮಾಡಬಾರದು.

ಪುಟ್ಟಮ್ಮ ಶಿವಾನಿ
ನಂ 80 ಶಿವಾನಿ 
 ಲಾಲ್‌ ಬಹದ್ದೂರ್‌ ಶಾಸ್ತ್ರೀ ನಗರ 2 ನೇ ಮೆಯಿನ್
ಸೌಳಂಗ ರಸ್ತೆ,  ಶಿವಮೊಗ್ಗ 577204
 E mail: puttammat415@gmail.com

“ನೈಸರ್ಗಿಕ ಮತ್ತು ಸಾವಯವ ಕೃಷಿ” ಕುರಿತಾದ ಪ್ರಾದೇಶಿಕ ವಿಚಾರಸಂಕಿರಣ’ಯಶಸ್ವಿ

0

Regional Organic and Natural Farming Center ಪ್ರಾದೇಶಿಕ ಸಾವಯವ ಮತ್ತು ಪ್ರಾಕೃತಿಕ ಕೃಷಿ ಕೇಂದ್ರ (RCNOF), ಬೆಂಗಳೂರು, ತೋಟಗಾರಿಕೆ ಇಲಾಖೆ. ಕರ್ನಾಟಕ ಸರ್ಕಾರ ಹಾಗೂ ರೈತ ಉತ್ಪಾದಕ ಸಂಸ್ಥೆಗಳ ಉತ್ಕೃಷ್ಟ ಕೇಂದ್ರ (COE-FPO), ಬೆಂಗಳೂರು ಇವರ ಆಶ್ರಯದಲ್ಲಿ “ನೈಸರ್ಗಿಕ ಮತ್ತು ಸಾವಯವ ಕೃಷಿ” ಕುರಿತಾದ ಪ್ರಾದೇಶಿಕ ವಿಚಾರಸಂಕಿರಣ’ವು ಮಾರ್ಚ್ 12 2026, ಗುರುವಾರದಂದು ಬೆಂಗಳೂರಿನ ರೈತ ಉತ್ಪಾದಕ ಸಂಸ್ಥೆಗಳ ಉತ್ಕೃಷ್ಟ ಕೇಂದ್ರದ ಸಭಾಂಗಣದಲ್ಲಿ ಯಶಸ್ವಿಯಾಗಿ ನಡೆಯಿತು.

ಕಾರ್ಯಕ್ರಮವನ್ನು ತೋಟಗಾರಿಕೆ ಇಲಾಖೆಯ ಸರ್ಕಾರದ ಕಾರ್ಯದರ್ಶಿಗಳಾದ ಶ್ರೀ ಗಿರೀಶ್ ಆರ್., ಭಾ.ಆ.ಸೇ ಮುಖ್ಯ ಅತಿಥಿಯಾಗಿ ಆಗಮಿಸಿ ಈ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಕರ್ನಾಟಕದಲ್ಲಿ ನೈಸರ್ಗಿಕ ಮತ್ತು ಸಾವಯವ ಕೃಷಿಯ ಮಹತ್ವವನ್ನು ವಿವರಿಸಿದರು. ಪರಿಸರ ಸ್ನೇಹಿ ಕೃಷಿ ಪದ್ಧತಿಗಳನ್ನು ಅಳವಡಿಸಿಕೊಂಡರೆ ರೈತರ ಆದಾಯ ಹೆಚ್ಚುವ ಜೊತೆಗೆ ಮಣ್ಣಿನ ಆರೋಗ್ಯವೂ ಕಾಪಾಡಬಹುದು ಎಂದು ಅವರು ತಿಳಿಸಿದರು.

ಕಾರ್ಯಕ್ರಮದ ಆರಂಭದಲ್ಲಿ ರೈತ ಉತ್ಪಾದಕ ಸಂಸ್ಥೆಗಳ ಉತ್ಕೃಷ್ಟ ಕೇಂದ್ರದ ಉಪನಿರ್ದೇಶಕರಾದ ಡಾ. ಸದಾನಂದ ಜಿ.ಕೆ. ಅವರು ಗಣ್ಯರನ್ನು ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳನ್ನು ಹೇಳಿದರು.

ಈ ಸಂದರ್ಭದಲ್ಲಿ ತೋಟಗಾರಿಕೆ ಅಪರ ನಿರ್ದೇಶಕರಾದ ಶ್ರೀ ಪಿ.ಎಂ. ಸೊಬರದ್, ಲಾಲ್‌ಬಾಗ್, ಪ್ರಾದೇಶಿಕ ನಿರ್ದೇಶಕರಾದ ಡಾ. ವಿ.ಕೆ. ವರ್ಮಾ (RCNOF) ಹಾಗೂ ತೋಟಗಾರಿಕೆ ಜಂಟಿ ನಿರ್ದೇಶಕರಾದ ಶ್ರೀಮತಿ ಹೇಮ ಹೆಚ್.ಎನ್. ಅವರು ನೈಸರ್ಗಿಕ ಕೃಷಿಯ ಪ್ರಚಾರ ಮತ್ತು ರೈತರಿಗೆ ಇದರ ಅಗತ್ಯತೆಯ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು.

Regional Organic and Natural Farming Center ಈ ಕಾರ್ಯಕ್ರಮದಲ್ಲಿ ನೈಸರ್ಗಿಕ ಕೃಷಿ ಪದ್ಧತಿಯನ್ನು ಯಶಸ್ವಿಯಾಗಿ ಅನುಸರಿಸುತ್ತಿರುವ ಹತ್ತು ಪ್ರಗತಿಪರ ರೈತರನ್ನು RCNOF ಮತ್ತು COE-FPO ತಂಡದ ವತಿಯಿಂದ ಸನ್ಮಾನಿಸಲಾಯಿತು.

DC Shivamogga ವಾಣಿಜ್ಯ ಸಿಲಿಂಡರ್‌ಗಳ ನಿಯಮಿತ ಸರಬರಾಜು ಮಾಡಲು ಮನವಿ

0

DC Shivamogga ಹೋಟೆಲ್ ಮತ್ತು ಉಪಹಾರ ಗೃಹಗಳಿಗೆ ವಾಣಿಜ್ಯ ಎಲ್‌ಪಿಜಿ ಗ್ಯಾಸ್ ಸಿಲಿಂಡರ್‌ಅನ್ನು ನಿಯಮಿತವಾಗಿ ಸರಬರಾಜು ಮಾಡಲು ಕ್ರಮ ಕೈಗೊಳ್ಳುವಂತೆ ಹೋಟೆಲ್ ಮಾಲೀಕರ ಸಂಘದ ವತಿಯಿಂದ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಅವರಿಗೆ ಮನವಿ ಸಲ್ಲಿಸಲಾಯಿತು.

ಇತ್ತೀಚಿನ ದಿನಗಳಲ್ಲಿ ವಾಣಿಜ್ಯ ಬಳಕೆಯ ಎಲ್‌ಪಿಜಿ ಗ್ಯಾಸ್ ಸಿಲಿಂಡರ್‌ಗಳ ಕೊರತೆ ಉಂಟಾಗಿದ್ದು, ಗ್ಯಾಸ್ ಡೀಲರ್‌ಗಳು ಸಿಲಿಂಡರ್ ಸರಬರಾಜು ನಿಲ್ಲಿಸುವ ಸಾಧ್ಯತೆ ಇರುವುದರಿಂದ ಹೋಟೆಲ್ ಮತ್ತು ಉಪಹಾರ ಗೃಹಗಳ ಕಾರ್ಯಾಚರಣೆಗೆ ಅಡಚಣೆಯಾಗಲಿದೆ. ಆದ್ದರಿಂದ ಸರಬರಾಜಿಗೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.

ರೋಗಿಗಳು, ಅವರ ಕುಟುಂಬದವರು ಹಾಗೂ ಆರೋಗ್ಯ ಸಿಬ್ಬಂದಿಗೆ ಆಸ್ಪತ್ರೆಗಳ ಸಮೀಪದ ಹೋಟೆಲ್‌ಗಳು ಆಹಾರ ಒದಗಿಸುತ್ತಿರುವುದರಿಂದ ಗ್ಯಾಸ್ ಸರಬರಾಜು ನಿಂತರೆ ತೊಂದರೆ ಆಗುತ್ತದೆ. ಹೋಟೆಲ್‌ಗಳಲ್ಲಿ ಕೆಲಸ ಮಾಡುವ ಸಾವಿರಾರು ಕಾರ್ಮಿಕರ ಜೀವನಕ್ಕೆ ತೊಂದರೆ ಆಗುತ್ತದೆ. ವಿದ್ಯಾರ್ಥಿಗಳು, ಪ್ರಯಾಣಿಕರು, ಜನರಿಗೆ ಆಹಾರ ಪೂರೈಕೆ ಸಮಸ್ಯೆಯಾಗುತ್ತದೆ ಎಂದರು.

DC Shivamogga ಶಿವಮೊಗ್ಗ ಜಿಲ್ಲೆಯಲ್ಲಿ ವಾಣಿಜ್ಯ ಎಲ್‌ಪಿಜಿ ಗ್ಯಾಸ್ ಸಿಲಿಂಡರ್ ಸರಬರಾಜನ್ನು ನಿಯಮಿತವಾಗಿ ಮಾಡಬೇಕು. ಹೋಟೆಲ್ ಮತ್ತು ಉಪಹಾರ ಗೃಹಗಳಿಗೆ ತಾತ್ಕಾಲಿಕವಾಗಿ ಸಿಲಿಂಡರ್‌ಗಳನ್ನು ಆದ್ಯತೆ ಮೇಲೆ ಹಂಚಿಕೆ ಮಾಡಬೇಕು. ವಿಶೇಷವಾಗಿ ಆಸ್ಪತ್ರೆಗಳ ಸಮೀಪ ಇರುವ ಹೋಟೆಲ್‌ಗಳಿಗೆ ತುರ್ತು ವ್ಯವಸ್ಥೆ ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು. ಜಿಲ್ಲಾಧಿಕಾರಿ ಮನವಿ ಸ್ವೀಕರಿಸಿ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.

ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಶಂಕರನಾರಾಯಣ ಹೊಳ್ಳ, ಕಾರ್ಯದರ್ಶಿ ಎನ್.ಗೋಪಿನಾಥ್ ಇದ್ದರು.